ಮನಸಿದ್ದರೆ ಕಲಿವಲೊಂದೇ ’ಗಳಿಗೆ’..!

May 28, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರೂಪತ್ತೆಯ ಮಗ° ಕಳುದ ವಾರ ಊರಿಂಗೆ ಬಂದ ಅಡ!
ಅಜ್ಜಕಾನಬಾವ ಓ ಮೊನ್ನೆ ಕಲ್ಮಡ್ಕ ಅನಂತನ ಮನೆಲಿ ಪೂಜಗೆ ಹೋದಿಪ್ಪಗ ಸಿಕ್ಕಿ ಮಾತಾಡಿದನಾಡ!
ಎಂಗಳತ್ರೆ ಅವ° ಹಾಂಗೇ ಬಂದು ಹೇಳಿ, ಎಂಗೊಗೆ ತಲೆ ಗಿರ್ಮಿಟ್ಟು ಮಾಡಿ ಹಾಕಿದ°:
ಕಳುದ ಟ್ಯೂಸ್-ಡೇ ಈವುನಿಂಗು ಸೆವೆನ್ ಪೀಯಮ್ಮಿಂಗೆ ಅಲ್ಲಿಂದ ವಿಮಾನ ಅಡ, ಎಯಿಟು ಅವರ್ ಜರ್ನಿ ಅಡ, ನಮ್ಮ ಫೋರ್ ಏಯಮ್ಮಿಂಗೆ ಬೆಂಗುಳೂರಿಂಗೆ ಎತ್ತಿದನಡ, ಏರುಪೋರ್ಟಿಂದ ಬಷ್ಟೇಂಡಿಂಗೆ ತರ್ಟಿ ಮಿನಟ್ಸು ಅಡ, ನೈನೋಕ್ಲೋಕು ಬಸ್ಸಡ ಊರಿಂಗೆ, ತ್ರೀತರ್ಟಿ ಪೀಯಮ್ಮಿಂಗೆ ಉಪ್ಪಿನಂಗಡಿಲಿ ಇಳುದನಡ!!
ಉಪ್ಪಿನಂಗಡಿಗೆ ರೂಪತ್ತೆಯ ಕಾರು ಹೋಯಿದನ್ನೇ! ಹಾಂಗೆ ಮನಗೆ ಬಂದನಡ!
ಊರಿಂಗೆ ಎತ್ತಿ ಮತ್ತೆಂತ ಮಾಡಿದನೋ ಒಪ್ಪಣ್ಣಂಗರಡಿಯ!
~
ಉಸ್ಸಪ್ಪ!
ಒಂದರಿಯಂಗೇ ಅರ್ತ ಆಗದ್ರೂ, ನಮ್ಮ ಶೇಡಿಗುಮ್ಮೆ ಬಾವ° ವಿವರುಸಿಅಪ್ಪಗ ಆತು!
ರೂಪತ್ತೆಮಗಂಗೆ ಅಲ್ಲಿಂದ ಇಲ್ಲಿಗೆ ಬಪ್ಪದರಿಂದಲೂ ಬಂಙ ಆ ಮಾತುಗೊ ಅರ್ತ ಅಪ್ಪಲೆ ಆತು!
ಅಂತೂ ತಲಗೆ ಹೋತು, ಬಚಾವ್! ಶೇಡಿಗುಮ್ಮೆಬಾವ ಆ ಲೆಕ್ಕಲ್ಲಿ ಉಶಾರಿಯೇ. ಆದರೆ ರೂಪತ್ತೆಮಗ ಮಾತಾಡಿದ್ದು ಹವ್ಯಕವೋ – ಇಂಗ್ಳೀಶೋ ಹೇಳ್ತಷ್ಟು ವಿತ್ಯಾಸ ಬಯಿಂದು!
~

ನಮ್ಮ ಅಜ್ಜಂದ್ರುದೇ ಸಮಯ ಲೆಕ್ಕ ಹಾಕಿಯೊಂಡು ಇತ್ತಿದ್ದವು, ಆದರೆ ಇಂಗ್ಳೀಶಿಲಿ ಅಲ್ಲ- ನಮ್ಮದೇ ವಿಧಾನಲ್ಲಿ!!!
ಅಜ್ಜಂದ್ರುದೇ ಸಮಯ ಲೆಕ್ಕ ಮಾಡಿಗೊಂಡು ಇತ್ತಿದ್ದವು, ಕಾಲನಿರ್ಣಯ ಮಾಡಿಗೊಂಡಿತ್ತಿದ್ದವು, ಪಂಚಾಂಗ ನೋಡಿ ಯೇವದೋ ದಿನದ ಯೇವದೋ ಹೊತ್ತಿಂಗೆ ಎಂತ ಆಯೆಕ್ಕಪ್ಪದು- ಹೇಳ್ತದರ ಧೃಡಮಾಡಿಗೊಂಡು ಇತ್ತಿದ್ದವು.
ನೋಡಿರೆ ಈ ಇಂಗ್ಳೀಶರು ಉಂಬಲೆ ಕಲಿವ ಮೊದಲೇ ನಮ್ಮಲ್ಲಿ ’ಒಂದು ಕ್ಷಣಂದ’ ಹಿಡುದು ’ಒಂದು ಯುಗ’ ವರೆಗುದೇ ಅಳತೆಮಾಡಿ ಮಡಗಿದ್ದವು. ಬೇಕಾದಲ್ಲಿ ಸರಿಯಾಗಿ ಉಪಯೋಗುಸಿಗೊಂಡುದೇ ಇದ್ದಿದ್ದವು.

ಇದೇ ವಿಚಾರ ಮನಸ್ಸಿಲಿ ಇಪ್ಪಗ ಆಚಮನೆಲಿ ಪೂಜೆ, ಒರಿಶಾವದಿ! ಅಲ್ಲಿಗೆ ಜೋಇಷಪ್ಪಚ್ಚಿ ಬಂದಿತ್ತಿದ್ದವು, ಬಂದೇ ಬತ್ತವು.
ಉದಿಯಪ್ಪಗಳೇ ಮಾಷ್ಟ್ರುಮಾವನಲ್ಲಿಗೆ ಬಂದು, ಒಂದು ಛಾಯ ಕುಡುದಿಕ್ಕಿ ಹೆರಟದು. ಛಾಯವ ಗ್ಳಾಸಿಂಗೆ ಬಗ್ಗುಸುವಗ ಅಲ್ಲಿ ಒಪ್ಪಣ್ಣಂದೇ ಹಾಜರು! 😉
ಮಾಷ್ಟ್ರುಮಾವ, ಜೋಯಿಶಪ್ಪಚ್ಚಿ – ಇಬ್ರುದೇ ಒಟ್ಟಿಂಗೆ ಸಿಕ್ಕಿದ್ದು ಪರಮ ಸಂತೋಷ, ಮೊನ್ನೆಂದ ಕೊರಕ್ಕೊಂಡಿದ್ದ ಕಾಲನಿರ್ಣಯದ ಶುದ್ದಿ ಇಂದು ಕೇಳುವ ಹೇಳಿ ಕಂಡತ್ತು.
ಇಬ್ರೂ ಒಟ್ಟಿಂಗೆ ಇಪ್ಪಗ ಇದರ ಕೇಳಿರೆ ಹೆಚ್ಚು ಗುಣ!, ಅಶನ, ಸಾರು, ಸಾಂಬಾರು, ಮೇಲಾರ, ಸೀವು – ಎಲ್ಲ ಸಿಕ್ಕಿದ ಗೌಜಿ ಊಟದ ಹಾಂಗೆ ಆವುತ್ತಿದಾ
ಜೋಯಿಶಪ್ಪಚ್ಚಿ ಜ್ಯೋತಿಷ್ಯ-ಪೌರಾಣಿಕದ್ದು ಹೇಳಿರೆ, ಮಾಷ್ಟ್ರ್ರುಮಾವ ಜ್ಯೋತಿಷ್ಯ-ವೈಜ್ಞಾನಿಕ ವಿಚಾರಂಗೊ ಹೇಳುಗು.
ಆ ದಿನ ಮಾತಾಡಿದ ಒಟ್ಟಾರೆ ಶುದ್ದಿ ಇಲ್ಲಿದ್ದಿದಾ:
~

ನಮ್ಮ ಹೆರಿಯೋರ ಕಾಲನಿರ್ಣಯವ ನಾವು ಕಲಿತ್ತರೆ, ಆರಂಭ ಮಾಡ್ಳಕ್ಕಾದ್ದು ’ದಿನಂದ’.
ಒಂದರಿ ಸೂರ್ಯ° ಮಾಡಕ್ಕೆ ಮೂಡಿ, ಮರದಿನ ಇರುವಾರ ಅದೇ ಜಾಗೆಲಿ ಮೂಡ್ತನ್ನಾರದ ಅವಧಿಗೆ ಒಂದು ದಿನ ಹೇಳಿ ಲೆಕ್ಕ.
ಹೇಳಿರೆ, ಸೂರ್ಯೋದಯಂದ ಸೂರ್ಯೋದಯಕ್ಕೆ – ಈಗಾಣ ಹಾಂಗೆ ನೆಡುಇರುಳು – ರಾಕ್ಷಸರು ಏಳುಲಪ್ಪಗ ದಿನ ಬದಲಪ್ಪದಲ್ಲ, ನಾವು ಏಳುಲಪ್ಪಗ ಪ್ರತಿದಿನ ಹೊಸದಿನ, ಹೊಸ ನಿರೀಕ್ಷೆ, ಹೊಸಜೀವನ!
ದಿನವೇ ಮನುಶ್ಯ ಗುರುತಿಸಿದ ಪ್ರತಮ ಕಾಲಾನುಸೂಚಿ!
ಮತ್ತೆ ಅದರ ಸಂಬಂಧಪಟ್ಟು ದೊಡ್ಡದು, ಸಣ್ಣದು ಕಾಲಂಗಳ ಗುರುತುಸುವ ಹಾಂಗೆ ಮುಂದುವರುದ°.

ದಿನಂದ ಸಣ್ಣದು:
ಈ ಒಂದು ದಿನದ ಅವಧಿಯ ಅರುವತ್ತು ತುಂಡು ಮಾಡಿಕ್ಕಿ, ಒಂದು ತುಂಡಿನ ಅವಧಿಗೆ ಒಂದು ಗಳಿಗೆ ಹೇಳ್ತದು.
ಉದಿಯಪ್ಪಗ ಸೂರ್ಯೋದಯಕ್ಕೆ ಸುರೂವಾಣ ಗಳಿಗೆ ಸುರು ಆದರೆ, ಮರದಿನ ಉದೆಕಾಲದ ಸೂರ್ಯೋದಯಕ್ಕಪ್ಪಗ ಆ ದಿನದ ಅರುವತ್ತನೇ ಗಳಿಗೆ ಮುಗಿವದು. ಒಂದು ಗಳಿಗೆಗೆ ಈಗಾಣ ಇಪ್ಪತ್ತನಾಲ್ಕು ನಿಮಿಶ ಬತ್ತು ಅಷ್ಟಪ್ಪಗ – ಹೇಳಿದವು ಜೋಯಿಷಪ್ಪಚ್ಚಿ.
ಇಂಗ್ಳೀಶರು ಅರುವತ್ತು ನಿಮಿಶದ ಇಪ್ಪತ್ನಾಲ್ಕು ತುಂಡು ಮಾಡಿದವು, ನಮ್ಮವು ಇಪ್ಪತ್ನಾಲ್ಕು ನಿಮಿಶದ ಅರುವತ್ತು ತುಂಡು ಮಾಡಿದವು! ಅಷ್ಟೇ! – ಹೇಳಿದವು ಮಾಷ್ಟ್ರುಮಾವ° ಪೂರಕವಾಗಿ.

ಘಳಿಗೆ ಗೆ ಘಟಿ ಹೇಳಿಯೂ ಹೇಳ್ತವಡ ಸಂಸ್ಕೃತಲ್ಲಿ. ಘಟ – ಹೇಳಿರೆ ಕೊಡಪ್ಪಾನ ಹೇಳಿ ಅರ್ತ ಅಲ್ಲದೋ – ಮದಲಿಂಗೆ ಒಂದು ಕೊಡಪ್ಪಾನ ಇಕ್ಕು, ಇದಕ್ಕೆ ಹೇಳಿಯೇ. ಅದರ್ಲಿ ಒಂದು ಒಟ್ಟೆ ಇಕ್ಕು, ತುಂಬುಸಿದ ನೀರು ಹೋಪಲೆ. ಬಾಯಿಪೂಜ ನೀರು ತುಂಬುಸಿರೆ, ಆ ಒಟ್ಟೆಲೆ ಆಗಿ ಹೋಪಲೆ ಸರಿಯಾಗಿ ಒಂದು ಗಳಿಗೆ ತೆಕ್ಕೊಂಗು – ಆ ನಮುನೆ ತೆಯಾರು ಮಾಡುಗಡ ಆ ಒಟ್ಟೆಯ – ಜೋಯಿಶಪ್ಪಚ್ಚಿ ಹೇಳಿದವು.
ಹತ್ತು ಗಳಿಗೆಯ ಲೆಕ್ಕ ಮಾಡೆಕ್ಕಾರೆ, ಸೂರ್ಯೋದಯ ಹೇಂಗೂ ಗೊಂತಾವುತ್ತನ್ನೆ, ಅಲ್ಲಿಂದ ಹತ್ತು ಸರ್ತಿ ಕೊಡಪ್ಪಾನ ತುಂಬುಸುದು.ಗಡಿಯಾರದ ಹಾಂಗೆ ಗೋಡಗೆ ನೇಲುಸಿ ಯೇವತ್ತೂ ನೆಡಕ್ಕೊಂಡು ಇರ್ತದಲ್ಲ, ಗಳಿಗೆಲೆಕ್ಕ ಮಾಡೆಕ್ಕಾದ ದಿನ ಅದರ ಉಪಯೋಗುಸಿಗೊಂಬದಿದಾ – ಹೇಳಿದವು ಮಾಷ್ಟ್ರುಮಾವ°.
ಹಾಂಗೆ, ಗಳಿಗೆಯ ಘಟಿ – ಹೇಳಿಯೂ ಹೇಳ್ತವು.

ಈ ಗಳಿಗೆಯ ಪುನಾ ಅರುವತ್ತು ತುಂಡು ಮಾಡಿದವಡ, ಅದಕ್ಕೆ ವಿಘಳಿಗೆ ಹೇಳಿದವಡ.
ಹೇಳಿತ್ತುಕಂಡ್ರೆ, ಈಗಾಣ ಇಪ್ಪತ್ತನಾಲ್ಕು ಸೆಕೆಂಡು ಆವುತ್ತದು.
ಜೋಯಿಶಪ್ಪಚ್ಚಿ ಜಾತಕದ ಗಣಿತಕ್ಕೆ ಇದರ ಬಳಸುತ್ತವಷ್ಟೇ ವಿನಃ, ನಿಜಜೀವನಲ್ಲಿ ಇದರ ಬಳಕೆ ಕಮ್ಮಿ ಇದ್ದದು.

ಆದರೆ, ಅಜ್ಜಂದ್ರು ಇನ್ನುದೇ ಕಮ್ಮಿಗೆ ಎತ್ತಿತ್ತಿದ್ದವಡ.

ಕೋನಾರ್ಕದ ಸೂರ್ಯದೇವಸ್ತಾನಲ್ಲಿರ್ತ ಹಳೆಕಾಲದ ಗಡಿಯಾರ!
ಕೋನಾರ್ಕದ ಸೂರ್ಯದೇವಸ್ತಾನಲ್ಲಿರ್ತ ಕಾಲನಿರ್ಣಯ ಗಡಿಯಾರ!

ನಿಮೇಷ, ತೃಟಿ, ಕ್ಷಣ, – ಇತ್ಯಾದಿಗೊ ಬಳಕೆಲಿತ್ತಡ. ಯುದ್ಧವಿಜ್ಞಾನಲ್ಲಿ, ಜ್ಯೋತಿರ್ಗಣಿತದ ಗ್ರಂಥಂಗಳಲ್ಲಿ – ಅತಿಸೂಕ್ಷ್ಮದ ಲೆಕ್ಕಾಚಾರಂಗಳಲ್ಲಿ ಇದರ ಬಳಕೆ ಇತ್ತಡ. ಜೋಯಿಷಪ್ಪಚ್ಚಿ ಹೇಳಿದವು. ಅದು ಹೇಂಗೆ ಹೇಳಿ ಬರದು ಮಡಗಿದ್ದೆ, ಮನಗೆ ಬಂದರೆ ತೋರುಸಲಕ್ಕು – ಹೇಳಿದವು ಜೋಯಿಶಪ್ಪಚ್ಚಿ.

ಎರಡು ಗಳಿಗೆಯ ಅಳತೆಗೆ ಒಂದು ಮುಹೂರ್ತ ಹೇಳುದಡ.
ಮದುವೆ ಕಾಗತಂಗಳಲ್ಲಿ ನಿಂಗೊ ನೋಡಿಪ್ಪಿ – ಒಂಬತ್ತು ಗಂಟೆಯ ಅನಂತರ ನಡೆಯುವ ಕರ್ಗಾಟಕ ಲಗ್ನ ಸುಮುಹೂರ್ತದಲ್ಲಿ – ಹೇಳಿಗೊಂಡು.
ಹೇಳಿತ್ತುಕಂಡ್ರೆ, ಒಂಬತ್ತುಗಂಟೆಂದ ಮತ್ತೆ ಇಪ್ಪ ಎರಡುಗಳಿಗೆಯ ಹೊತ್ತಿಲಿ (ನಲುವತ್ತೆಂಟು ನಿಮಿಶ ಕಾಲಾವಧಿಲಿ) ಮಂಗಲಕಾರ್ಯ ನೆಡೆತ್ತು – ಹೇಳಿ ಅರ್ತ!

ಎರಡೂವರೆ ಗಳಿಗೆಯ ಅವಧಿಯ ಒಂದು ’ಹೋರಾ’ ಹೇಳುದು. (ಶಂಬಜ್ಜ ’ಹೋರೆ ’ ಹೇಳುಗು).
ನೋಡಿನಿಂಗೊ, ಎರಡೂವರೆ ಗಳಿಗೆ ಹೇಳಿತ್ತುಕಂಡ್ರೆ ಅರುವತ್ತು ನಿಮಿಶ.
ಇಂಗ್ಳೀಶಿಲಿ ಇದರ ಅವರ್(hour) ಹೇಳುದು, ನಮ್ಮವು ಇದರ ಹೋರಾ(hora) ಹೇಳುದು – ಸ್ಪೆಲ್ಲಿಂಗಿಲಿ ಎಂತಾ ಸಾಮ್ಯತೆ ಅಲ್ದಾ?!  ಆಶ್ಚರ್ಯ ಆವುತ್ತಡ ಮಾಷ್ಟ್ರುಮಾವಂಗೆ!

ಹ್ಮ್, ಹೋರೆಂದ ದೊಡ್ಡದು ಜಾಮ / ಯಾಮ.
ಏಳೂವರೆ ಗಳಿಗೆಗೆ ಒಂದು ಜಾಮ. ಏಳೂವರೆ ಗಳಿಗೆ ಹೇಳಿರೆ ಮೂರು ಹೋರೆ (ಮೂರು ಗಂಟೆ),
ಸೂರ್ಯೋದಯಂದ ಮೂರುಗಂಟೆ – ಮುಂಜಾನೆ ಹೇಳ್ತವಿದಾ, ಅದು ಸುರೂವಾಣ ಜಾಮ..
ನಾಲ್ಕು ಜಾಮ ಹಗಲೂ, ನಾಲ್ಕು ಜಾಮ ಇರುಳೂ – ಹೀಂಗೇ ಒಂದು ದಿನಲ್ಲಿ ಒಟ್ಟು ಎಂಟು ಜಾಮಂಗೊ.
ಆದರೆ, ದಿನದ ಅಕೇರಿಯಾಣ ಜಾಮ – ಉದೆಕಾಲದ್ದು – ಅದರ ಮತ್ತಾಣ ದಿನಕ್ಕೆ ಸೇರುಸುತ್ತವು ಜೋಯಿಶಪ್ಪಚ್ಚಿ.
ಸೂತಕದ ಲೆಕ್ಕಾಚಾರಕ್ಕೆ ಇತ್ಯಾದಿಗೊಕ್ಕೆ ಅದು ’ಮರದಿನ’ ಹೇಳಿ ಲೆಕ್ಕ!

ಅದರಿಂದ ಮತ್ತಾಣದ್ದು ದಿನ/ರಾತ್ರಿ – ಸರಿಸುಮಾರು ಮೂವತ್ತು ಗಳಿಗೆ.
ಸೂರ್ಯೋದಯಂದ ಸೂರ್ಯಾಸ್ತವರೆಗೆ ದಿನಾಮಾನ (ಹಗಲು) ಹೇಳಿಯೂ, ಸೂರ್ಯಾಸ್ತಂದ ಮರದಿನದ ಸೂರ್ಯೋದಯ ಒರೆಂಗೆ ರಾತ್ರಿಮಾನ( ಇರುಳು) ಹೇಳಿಯೂ ಅರ್ತ.
ಒಟ್ಟು ದಿನಲ್ಲಿ ಅರುವತ್ತು ಗಳಿಗೆ ಇದ್ದರೂ, ಹಗಲು ಮತ್ತೆ ಇರುಳು ಸರಿಯಾಗಿ ಮೂವತ್ತು ಮೂವತ್ತು ಸಿಕ್ಕುದು ಒರಿಶಲ್ಲಿ ಒಂದೆರಡು ದಿನ, ಅಷ್ಟೇ ಅಡ.
ಸೂರ್ಯ ಸಮಭಾಜಕವೃತ್ತಲ್ಲಿಪ್ಪಗ ಮಾಂತ್ರ ದಿನಾಮಾನ ಮೂವತ್ತುಗಳಿಗೆ ಬಕ್ಕಷ್ಟೇ ಇದಾ – ಹೇಳಿದವು ಮಾಷ್ಟ್ರುಮಾವ°.

ದಿನಂದ ದೊಡ್ಡದು:
ಏಳು ದಿನದ ಕಾಲಾವಧಿಗೆ ಒಂದು ವಾರ ಹೇಳುದು, ಆಯಿತ್ಯ, ಸೋಮ, ಮಂಗಳ – ಹೇಳಿ ನಮ್ಮ ಜ್ಯೋತಿಷ್ಯದ ಗ್ರಹಂಗಳ ಹೆಸರಿಲಿ ಒಂದೊಂದು ವಾರ.
ರಾಹುಕೇತುಗಳ ಬಿಟ್ಟಿದು, ಹಾಂಗಾಗಿ ಏಳೇ ವಾರ ಆದ್ದದು. (ಪ್ರತಿ ಶುಕ್ರವಾರ ಇದಾ – ಒಪ್ಪಣ್ಣ ಶುದ್ದಿ ಹೇಳ್ತದು!)
ವಾರದ ಹೆಸರುಗೊ ಇಂಗ್ಳೀಶಿಲಿಯುದೇ ಸಾಮ್ಯತೆ ಇದ್ದಿದಾ – ನಮ್ಮದನ್ನೇ ಕದ್ದು ಉಪಯೋಗುಸುವಗ ಸಾಮ್ಯತೆ ಬಾರದ್ದೆ ಒಳಿಗೋ!

ಹದಿನೈದು ದಿನದ ಅವಧಿಗೆ ಒಂದು ಪಕ್ಷ – ಹೇಳುದು.
ಅದು ಹದಿನೈದೂ ಅಕ್ಕು, ಹದಿಮೂರೂ ಅಕ್ಕು – ಚಂದ್ರನ ಗತಿಯ ಮೇಲೆ ಅವಲಂಬಿತ, ಕಳುದ ಸರ್ತಿ ಈ ಶುದ್ದಿ ಮಾತಾಡುವಗ ನವಗೆ ಗೊಂತಾಯಿದು. ಸೀತ ಹೇಳ್ತರೆ ನಮ್ಮ ಗುಣಾಜೆಮಾಣಿ ಪೇಂಟಂಗಿ ಬದಲುಸುತ್ತ ಕಾಲಾವಧಿ!

ಎರಡು ಪಕ್ಷ, ಅತವಾ, ಮೂವತ್ತು ದಿನ, ಅತವಾ ನಾಲುಕ್ಕು ವಾರದ ಅಂದಾಜಿಂಗೆ ಒಂದು ಮಾಸ ಆವುತ್ತು.
ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಹೋಪ ಶೆಂಕ್ರಾಂತಿಗೆ ಸೌರಮಾನ ಮಾಸ ಸುರು. ಚಂದ್ರನ ಹುಣ್ಣಮೆಂದ ಹುಣ್ಣಮೆಗೆ ಚಾಂದ್ರಮಾನ ಮಾಸ ಲೆಕ್ಕ.
ನಮ್ಮಲ್ಲಿ ಎರಡುದೇ ಲೆಕ್ಕ ಇದ್ದಿದಾ!

ಎರಡು ಮಾಸದ ಗುಂಪಿಂಗೆ ಋತು ಹೇಳುದು. ಶಾಂತತ್ತೆ ಈ ಶುದ್ದಿ ಹೇಳಿದ್ದವು – ಮಕ್ಕೊಗಿಪ್ಪದರ್ಲಿ!

ಆರು ಋತುವಿಂಗೆ ಒಂದೊರಿಶ – ಹೇಳಿರೆ ಒಂದು ವತ್ಸರ.
ಅರುವತ್ತು ವತ್ಸರಕ್ಕೆ ಒಂದು ವತ್ಸರ ಚಕ್ರ. ಒಂದೊಂದು ಸಂವತ್ಸರಕ್ಕೂ ಒಂದೊಂದು ಹೆಸರಿದ್ದು – ಸಣ್ಣ ಇಪ್ಪಗ ಮಕ್ಕೊಗೆ ಹೇಳಿಕೊಡ್ತವು ಇದಾ!

ಅದಲ್ಲದ್ದೇ, ಊರೋರ ಬಾಯಿಲಿ ಮೂವತ್ತು ಒರಿಶಕ್ಕೆ ಒಂದು ತಲೆಮಾರು – ಹೇಳುದಡ.
ಇದೆಂತ ನಿಖರವಾಗಿ ಇಪ್ಪದಲ್ಲ, ಒಟ್ಟಾರೆ ಬಾಯಿಲೆಕ್ಕ!

ನೂರೊರಿಶಕ್ಕೆ ಒಂದು ಶತಮಾನ – ಹೇಳ್ತದು ಗೊಂತಿದ್ದನ್ನೆ?
ನೂರಿಪ್ಪತ್ತು ಒರಿಶಕ್ಕೆ ’ಪರಮಾಯುಷ್ಯ’ ಹೇಳುದಡ. ಜ್ಯೋತಿಷ್ಯಲ್ಲಿ ಎಲ್ಲ ದೆಶೆಗಳನ್ನೂ ಅನುಬವಿಸುಲೆ ನೂರಿಪ್ಪತ್ತೊರಿಶ ಬೇಕಾವುತ್ತಡ ಇದಾ..
ಪರಮಾಯುಷ್ಯ ಅನುಬವಿಸುವವ° ಪರಮ ಪುಣ್ಯವಂತ° ಹೇಳಿ ಲೆಕ್ಕ ಅಡ, ನೆರಿಯದೊಡ್ಡಪ್ಪ° ಮಾತಿಂಗೆ ಹೇಳುಗು ಯೇವತ್ತೂ..

ಸಾವಿರ ಒರಿಶಕ್ಕೆ ಸಹಸ್ರಮಾನ ಹೇಳುದು. ನಮ್ಮ ಈ ವೆವಸ್ತೆಗೊ ಬಂದು ಎಷ್ಟು ಸಹಸ್ರಮಾನ ಆತೋ – ಏನೋ!
ಅಲ್ಲದೋ?

ಅಲ್ಲಿಂದ ಮೇಗಾಣದ್ದು ಪುರಾಣಕ್ಕೆ ಸಂಬಂಧ ಪಟ್ಟದು.. ಹೇಳಿದವು ಜೋಯಿಶಪ್ಪಚ್ಚಿ.
ಅವರ ಪಟ್ಟಿಲಿ ಇದ್ದಡ, ಮನಗೆ ಬಂದಿಪ್ಪಗ ಕೊಡ್ತೆ – ಹೇಳಿದವು ಪುನಾ ಒಂದರಿ.
ಆಗ ಹೇಳಿದ್ದು ಮರದ್ದೋ ತೋರುತ್ತು ಅವಕ್ಕೆ.
ಈ ಜೋಯಿಶರಿಂಗೆ ಮರವದು, ಡಾಗುಟ್ರುಗೊಕ್ಕೆ ಲೆಕ್ಕ ತಪ್ಪುದು – ಇದೆಲ್ಲ ಬಯಂಕರ ಆಶ್ಚರ್ಯದ ಸಂಕೇತಂಗೊ – ಎಂತ ಹೇಳ್ತಿ? 😉
ಅದಿರಳಿ.
~

ಈಗಾಣ ಜೆನಜೀವನಲ್ಲಿ ದಿನನಿತ್ಯ ಅಳತೆಮಾಡ್ತ ಅಗತ್ಯತೆಗೆ ಇನ್ನೊಬ್ಬನ ಎಷ್ಟು ಅನುಸರುಸುತ್ತು, ಅಲ್ಲದಾ?
ರೂಪತ್ತೆ ಮಗ° ಹೇಳಿದ ಆ ನಾಲ್ಕು ಮಾತಿಲಿ ನಮ್ಮ ಬಾಶೆಂದ ಹೆಚ್ಚಿಗೆ ಇಂಗ್ಳೀಶೇ ತುಂಬಿ ಹೋಯಿದು. ಅವರ ಪದ್ಧತಿಗಳೇ ತುಂಬಿ ಹೋಯಿದು!
ಅಲ್ಲ, – ನಮ್ಮ ಸೊತ್ತುಗೊ ಇಲ್ಲದ್ದೇ ಹೋದ ಅನಿವಾರ್ಯಲ್ಲಿ ಬೇರೆವರದ್ದು ಉಪಯೋಗುಸುತ್ತದು ಚೋದ್ಯ ಅಲ್ಲ!
ಹಾಂಗಿರ್ತ ಸಂದರ್ಭಲ್ಲಿ ಚೋದ್ಯ ಇಲ್ಲೆ – ಆದರೆ ನಮ್ಮದೇ ಆದ್ದು ಒಂದು ಇಪ್ಪಗ ಇನ್ನೊಬ್ಬನ ಸೊತ್ತಿನ ಉಪಯೋಗುಸುತ್ತದು ಎಷ್ಟು ಸಮಂಜಸ?!
ರೂಪತ್ತೆಮಗನ ಮಾತು ಕೇಳಿ ಅಂತೂ, ಈ ಶುದ್ದಿ ಹೇಳುಲೇಬೇಕು ಹೇಳಿ ಕಂಡತ್ತು ಒಪ್ಪಣ್ಣಂಗೆ!!

ನಾವು ಹೊತ್ತು ಗೊತ್ತು ಹೇಳುಲೆ ಎಷ್ಟು ಕಷ್ಟಲ್ಲಿ ಹೆರಾಣ ವಿಧಾನವ ಅನುಸರುಸುತ್ತು, ಎಂತಕೆ ಹೇಳಿರೆ – ನಮ್ಮದು ಕಷ್ಟ, ಬೇಗ ಅರ್ತ ಆವುತ್ತಿಲ್ಲೆ ಹೇಳಿಗೊಂಡು.
ನಿಜವಾಗಿ ನೋಡಿರೆ ನಮ್ಮದೇ ಆದ ಹೊತ್ತು ವಿಧಾನಂಗೊ ನವಗೆ ಆಪ್ತವಾಗಿರ್ತು.

ಸುರುಮಾಡುದು ಕಷ್ಟ ಅನುಸಿರೂ, ಒಂದರಿ ಸುರು ಮಾಡಿರೆ ಮತ್ತೆ ಅಭ್ಯಾಸ ಆವುತ್ತು – ಎಲ್ಲದರ ಹಾಂಗೆಯೇ.!
ನಮ್ಮದೇ ಆದ ಸಮಯವ್ಯವಸ್ಥೆಯ ಅಭ್ಯಾಸ ಮಾಡಿಗೊಂಬ, ಎಲ್ಲೆಲ್ಲಿ ಸಾಧ್ಯ ಇದ್ದೋ – ಅಲ್ಲಲ್ಲಿ ಉಪಯೋಗಿಸಿಗೊಂಬ, ಆಗದೋ?

ಒಂದೊಪ್ಪ: ಮನಸ್ಸಿದ್ದರೆ ಇದರ ಕಲ್ತುಗೊಂಬಲೆ ಒಂದು ಗಳಿಗೆಯೂ ಬೇಡ! ಮನಸ್ಸೇ ಇಲ್ಲದ್ರೆ ಈ ಶುದ್ದಿ ಒಂದು ಯುಗ ಆದರೂ ಅರ್ತ ಆಗ.
ನಿಂಗೊಗೆ ಅರ್ತ ಆತೋ ಇಲ್ಲೆಯೋ?

ಸೂ: ಜೋಯಿಶಪ್ಪಚ್ಚಿ ಅವರ ಕಂದು ಬಣ್ಣದ ವಸ್ತ್ರದ ಕಟ್ಟಂದ ಕಂದು ಪುಸ್ತಕ ಒಂದರ ತೆಗದು ತೋರುಸಿದವು. ಅಲ್ಲಿಪ್ಪ ಮಾಹಿತಿಗಳ ಗೆರೆಪೆಟ್ಟಿಗೆಲಿ ತುಂಬುಸಿ ಮಡಗಿದ್ದು. ನಮ್ಮ ಹಳಬ್ಬರ ’ಕಾಲನಿರ್ಣಯ ವಿಧಾನ’ ಬರಕ್ಕೊಂಡಿದ್ದು, ಬೈಲಿನವರ ಮಾಹಿತಿಗಾಗಿ:

ಕಾಲಮಾನಂಗೊ
03 ಅಣು 1 ತ್ರಸರೇಣು
03 ತ್ರಸರೇಣುಗೊ 1 ತೃಟಿ
60 ತೃಟಿಗೊ 1 ತಲ್ಪರ
30 ತಲ್ಪರಂಗೊ 1 ನಿಮೇಷ;
[ದಿನದ 1/360,000ನೇ ಭಾಗ, 213 ಮಿಲಿಸೆಕೆಂಡುಗೊ]
15 ನಿಮೇಷಂಗೊ 1 ಕಶಿತ
15 ಕಶಿತಂಗೊ 2 ವಿಘಟಿ (ವಿಘಳಿಗೆ)
04 ವಿಘಟಿಗೊ (ವಿಘಳಿಗೆಗೊ) 1 ಕಾಲ
15 ಕಾಲ 1 ಘಟಿ (ಘಳಿಗೆ)     [60 ವಿಗತಿ = 1 ಗತಿ]
02 ಘಟಿಗೊ (ಘಳಿಗೆಗೊ) 1 ಮುಹೂರ್ತ
2.5 ಘಟಿಗೊ (ಘಳಿಗೆಗೊ) 1 ಹೋರಾ      [ Hora  = Hour ]
3 ಹೋರಾ 1 ಯಾಮ
24 ಹೋರಾ (8 ಯಾಮಂಗೊ) 1 ದಿನಮಾನ  [ ದಿನ = ಅಹೋರಾತ್ರ]
15 ಅಹೋರಾತ್ರಂಗೊ 1 ಪಕ್ಷ
2 ಪಕ್ಷಂಗೊ 1 ಮಾಸ
2 ಮಾಸಂಗೊ 1 ಋತು
3 ಋತುಗೊ 1 ಅಯನ
2 ಅಯನಂಗೊ 1 ಸಂವತ್ಸರ(1 ವರ್ಷ)
1 ಸಂವತ್ಸರ 1 ದೇವ ದಿನ
360 ದೇವದಿನಂಗೊ 1 ದೇವವರ್ಷ
1200 ದೇವವರ್ಷಂಗೊ 432,000 ಮನುಷ್ಯವರ್ಷಂಗೊ ಕಲಿಯುಗ
2400 ದೇವವರ್ಷಂಗೊ 8,64,000            -“- ದ್ವಾಪರಯುಗ
3600 ದೇವವರ್ಷಂಗೊ 12,96,000        -“- ತ್ರೇತಾಯುಗ
4800 ದೇವವರ್ಷಂಗೊ 17,28,000        -“- ಕೃತಯುಗ
1 ಚತುರ್ಯುಗ 12,000 ದೇವವರ್ಷಂಗೊ
1 ಮನ್ವಂತರ 71 ಚತುರ್ಯುಗಂಗೊ
1000 ಚತುರ್ಯುಗಂಗೊ 1 ಕಲ್ಪ
7 ಮನ್ವಂತರಂಗೊ 1 ಕಲ್ಪ
2 ಕಲ್ಪಂಗೊ 1 ಬ್ರಹ್ಮ ದಿನ 14 ಮನ್ವಂತರಂಗೊ
(ದಿನ *ತಿಂಗಳು *ವರ್ಷ)
60*12*120 ಕಲ್ಪಂಗೊ
1 ಬ್ರಹ್ಮನ ಜೀವಿತಾವಧಿ 1 ಮಹಾಕಲ್ಪ(ಮಹಾಪ್ರಳಯ)

ಇದೇ ನಮುನೆ ಮಾಹಿತಿ ಇಂಟರುನೆಟ್ಟಿಲಿ ಇದ್ದಡ, ಕೊಳಚಿಪ್ಪು ಬಾವ° ಹೇಳಿದ°: ಇಲ್ಲಿದ್ದು

ಮನಸಿದ್ದರೆ ಕಲಿವಲೊಂದೇ ’ಗಳಿಗೆ’..!, 5.0 out of 10 based on 11 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಒಂದು ಮುಹೂರ್ತ ಹೇಳಿರೆ ಎಷ್ಟು ಸಮಯ ಹೇಳಿ ಕೆಳಿಯೊಂಡಿತ್ತಿದ್ದ ಎನ್ನ ಭಾವ ಮೊನ್ನೆ. ಅವಂಗೆ ಇನ್ನು ಉತ್ತರ ಹೇಳೆಕ್ಕು. ಧನ್ಯವಾದಂಗೊ ಒಪ್ಪಣ್ಣಂಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಉದಯ ಮಾವ

  ಇದು ಕಾಲಚಕ್ರನ ಬಗ್ಗೆ ಒಪ್ಪಣ್ಣ ಬರದ ಎರಡನೇ ಲೇಖನ. ಒಪ್ಪಣ್ಣ ಯಾವದೇ ವಿಷಯವ ವಿವರಿಸಿ ಹೇಳುವ ರೀತಿ, ಆ ಬರವ ಶೈಲಿ ಓದಿಸಿಗೊಂಡು ಹೋಪಂತಾದ್ದು; ಎಲ್ಲೋರಿಂಗೂ ಅರ್ಥ ಅಪ್ಪಂತಾದ್ದು; ಓದುವಾಗ ಖುಷಿ ಕೊಡುವಂತಾದ್ದು. ಒಪ್ಪಣ್ಣ ಒಳ್ಳೆ ಮಾಷ್ಟ್ರು.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಮಾವ°,
  ನಿಂಗಳ ಪ್ರೋತ್ಸಾಹ ಕೊಶಿ ಆತು!
  ಬತ್ತಾ ಇರಿ, ಬೈಲಿನ ಎಲ್ಲಾ ಶುದ್ದಿಗೊಕ್ಕೆ ಒಪ್ಪಕೊಡಿ!

  [Reply]

  VA:F [1.9.22_1171]
  Rating: +1 (from 1 vote)
 3. ಶ್ಯಾಮಣ್ಣ
  Shyamanna

  ಇದರ ಮೇಲೆ ಆರದ್ರೂ ಒಂದು ಸಾಫ್ಟ್‌ವೇರ್ ಮಾಡಿ ಕಂಪ್ಯೂಟರಿಲಿ ಲೆಕ್ಕ ಹಾಕುವಾಂಗೆ ಮಾಡ್ಲೆ ಎಡಿಗಾ?

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಉಮ್ಮಪ್ಪ! ನವಗರಡಿಯ!!
  ಪೆರ್ಲದಣ್ಣನತ್ರೋ – ಬೀಸ್ರೋಡು ಮಾಣಿಯತ್ರೋ ಮಣ್ಣ ಕೇಳೆಕ್ಕಷ್ಟೆ.
  ಪೆರ್ಲದಣ್ಣ ಈ ನಮುನೆದು ಎಂತದೋ ಮಾಡ್ಳಿದ್ದಡ, ಅಜ್ಜಕಾನಬಾವ° ಹೇಳಿಗೊಂಡಿತ್ತಿದ್ದ°.

  ಕೇಳಿ ಹೇಳ್ತೆ ಬೇಕಾರೆ!

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  ಒಪ್ಪಣ್ಣಾ,
  ಒಂದು ಕಲ್ಪಕ್ಕೆ 14 ಮನ್ವಂತರ ಆಯೆಕೋ ಹೇಳಿ ಕಾಣ್ತು.

  [Reply]

  VA:F [1.9.22_1171]
  Rating: 0 (from 0 votes)
 5. ಸರ್ಪಮಲೆ ಮಾವ

  ಜೋಯಿಶಪ್ಪಚ್ಚಿಯತ್ತರೆ ಕೇಳಿ ಪಂಚಾಂಗ ಪುಸ್ತಕಲ್ಲಿ ತಿಥಿ, ಗಳಿಗೆ ಇತ್ಯಾದಿ ನೋಡುವ ಕ್ರಮವ ಒಪ್ಪಣ್ಣ ವಿವರಿಸಿ ಬರದರೆ ಗೊಂತಿಲ್ಲದ್ದವಕ್ಕೆ ಉಪಕಾರ ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಶಾ...ರೀಮಾಲಕ್ಕ°ಚೆನ್ನೈ ಬಾವ°ಚೂರಿಬೈಲು ದೀಪಕ್ಕಪಟಿಕಲ್ಲಪ್ಪಚ್ಚಿಕಜೆವಸಂತ°ಸುಭಗಪೆಂಗಣ್ಣ°ಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿದೀಪಿಕಾದೊಡ್ಡಭಾವವಿನಯ ಶಂಕರ, ಚೆಕ್ಕೆಮನೆಪುತ್ತೂರುಬಾವಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶಸಂಪಾದಕ°ಶ್ರೀಅಕ್ಕ°ಒಪ್ಪಕ್ಕಗೋಪಾಲಣ್ಣವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ