ಲೋಕಕ್ಕೆ ಮಂಗಳ ಮಾಡುವ ಮಂಗಳ ಗೋ ಯಾತ್ರೆ

ಬ್ರಿಟಿಷರ ಆಳ್ವಿಕೆಯ ಕಾಲ.
ಬ್ರಿಟಿಷರ ಸೇನೆ ಹೇದರೂ, ಅದರ್ಲಿ ಇದ್ದದು ಭಾರತೀಯರೇ. ಸಂಬಳ ಕೊಟ್ಟುಗೊಂಡು ಇದ್ದದು ಅವ್ವು ಅಷ್ಟೇ. ಹಾಂಗೇದು, ಸಂಬಳ ತೆಕ್ಕೊಂಡ ತಕ್ಷಣ ಧರ್ಮ ಬಿಟ್ಟು ದೂರ ಆಯೇಕು ಹೇದು ಏನಿಲ್ಲೆನ್ನೆ. ಬೆಡಿ ಬಿಟ್ರಾತು, ಸಂಬಳ ಕೊಡ್ತವು – ಅಷ್ಟೇ.

ಬೆಡಿ ಹೇಳಿದ ಕೂಡ್ಳೆ – ಗುಂಡಿನ ವಿಷಯ ಬತ್ತು. ಗುಂಡುದೇ, ಅದರ ಮದ್ದುದೇ – ಬೆಡಿ ಬಿಡ್ತೋರಿಂಗೆ ಕೊಡೆಕ್ಕಪ್ಪೋ, ಬೇಕಪ್ಪಗ ಬೆಡಿಗೆ ತುಂಬುಸಲೆ.
ಮದ್ದು ಹೇದರೆ ಜಾಗ್ರತೆಲಿ, ಒಣಕ್ಕಟೆ ಇರೆಕ್ಕು. ನೀರು ಬಂದರೆ, ಪಸೆ ಬಂದರೆ ಮತ್ತೆ ಹೊಟ್ಟ ಅದು. ಹಾಂಗಾರೆ, ನೀರಪಸೆ ಬಾರದ್ದ ಹಾಂಗೆ ಬಂದುಸಿ ಮಡಗಲೆ – ಈಗಾಣ ಹಾಂಗೆ ಪ್ಲೇಷ್ಟಿಗು ಇದ್ದೋ, ಇಲ್ಲೆ.
ಒಂದುವೇಳೆ ನೀರು ಹೋಪಲಾಗ ಹೇದು ಲೋಹದ ಪೆಟ್ಟಿಗೆಲಿ ತುಂಬುಸಿರೆ, ಅಂಬೆರ್ಪಿಂಗೆ ತೆಗವಲೆ ಎಡಿಯೆಕ್ಕಲ್ಲದೋ!

ಹಾಂಗೆಲ್ಲ ಆದ ಕಾರಣ, ಬ್ರಿಟಿಷರು ಮದ್ದುಗುಂಡಿನ ಕಾಗತಲ್ಲೇ ಸುತ್ತಿಗೊಂಡು ಇದ್ದದು.
ಕಾಗತಲ್ಲಿ ಪಸೆ ಬಾರದ್ದ ಹಾಂಗೆ ಎಂತ ಮಾಡಿಒಂಡು ಇದ್ದಿದ್ದವು?
ಅದೇ ದೊಡ್ಡ ಕತೆ.
~
ಬೆಡಿಯ ಮದ್ದುಗಿಂಡಿನ ಸುತ್ತಿದ ಕಾಗತಕ್ಕೆ ದನದ ಕೊಬ್ಬಿನ ಉದ್ದಿಗೊಂಡು ಇತ್ತಿದ್ದವಡ. ಸಾವಿರಗಟ್ಳೆಲಿ ತಯಾರಪ್ಪ ಮದ್ದುಗುಂಡಿಂಗೆ ಉದ್ದಲೆ ಇವಕ್ಕೆ ತುಪ್ಪ ಸಿಕ್ಕುಗೋ? ಸಿಕ್ಕ. ಅದಕ್ಕೆ ದನಗಳನ್ನೇ ಕೊಂದು, ಅದರ ಮಾಂಸಲ್ಲಿ ಇದ್ದ ಕೊಬ್ಬಿನ ಕೊದಿಶಿ ತೆಗದು, ಆ ಕೊಬ್ಬಿನ ಬಳಸಿಗೊಂಡು ಇತ್ತಿದ್ದವಾಡ. ಕೊಬ್ಬು ಉದ್ದಿದ ಕಾಗದಲ್ಲಿ ಮದ್ದುಗುಂಡು ತುಂಬುಸಿಗೊಂಡು ಇತ್ತಿದ್ದವು.
ಹಾಂಗಾರೆ, ಈ ಕಾಗದವ ಬಿಡುಸಿ, ಗುಂಡಿನ ಬೆಡಿಗೆ ಹಾಕೆಕ್ಕಾವುತ್ತು.
ಅಂಬೆರ್ಪಿಂಗೆ ಇದರ ಬಾಯಿಲೇ ಕಚ್ಚಿ ಬಿಡುಸೆಕ್ಕಷ್ಟೆ.
ಬಾಯಿಲಿ ಕಚ್ಚುಲೆ ಒಂದು ವಿಶಯ ಅಡ್ಡ ಬತ್ತು – ನಮ್ಮ ಧರ್ಮ.
~
ಅಪ್ಪು, ನಮ್ಮ ಧರ್ಮಲ್ಲಿ – ದನ ಹೇದರೆ ಅಬ್ಬೆ. ದನವ ಕೊಂದು, ಅದರ ಮಾಂಸವ ಕಾಸಿ ಬಂದ ಚರ್ಬಿಯ ಬಾಯಿಂದ ಕಚ್ಚುದು ಎಲ್ಯಾರು ಸಾಧ್ಯ ಇದ್ದೋ? ಇಲ್ಲಲೇ ಇಲ್ಲೆ.
ಹಾಂಗಾಗಿ ಇದು ಸಾಧ್ಯ ಇಲ್ಲೆ – ಹೇಳ್ತ ಧರ್ಮಾಭಿಮಾನದ ಕಾರಣಕ್ಕೆ ಹಲವು ಸೈನಿಕರು ಗುಸುಗುಸು ಮುನಿಸು ತೋರುಸಿದವು. ಆದರೆ, ಈ ವಿಚಾರಲ್ಲಿ ಧೈರ್ಯಲ್ಲಿ ಎದುರುನಿಂದದು, ಮಹಾ ಧರ್ಮನಿಷ್ಠ ಮಂಗಲ್ ಪಾಂಡೇ ಹೇಳ್ತ ಸೈನಿಕ. ಸಿಪಾಯಿ ಆದ ಮಂಗಲ್ ಪಾಂಡೆ ಹೀಂಗೆ ಎದುರು ನಿಂದದಕ್ಕೆ ಇದರ ಸಿಪಾಯಿ ದಂಗೆ – ಹೇಳಿಯೂ ಹೇಳಿದವು ಬ್ರಿಟಿಷರು. ಎಂತದೇ ಆದರೂ, ಇದರಿಂದಾಗಿ ಸ್ಪೋಟ ಆದ ಕಿಚ್ಚು ಮತ್ತೆ ಮಹಾ ಸ್ವಾತಂತ್ರ ಸಂಗ್ರಾಮ – ಅಪ್ಪಲೆ ಕಾರಣ ಆತು.
~
ಗೋವಿನ ಕಾರಣಕ್ಕಾಗಿ ಸ್ವರ ಎತ್ತಿ, ಅಮರನಾದ ಸಿಪಾಯಿ ಮಂಗಲ್ ಪಾಂಡೆಯ ನಮ್ಮ ಗುರುಗೊಕ್ಕೆ ತುಂಬಾ ಅಭಿಮಾನ. ಅದೇ ವಿಚಾರಕ್ಕೆ, ನಮ್ಮ ಗುರುಗೊ ಮಂಗಲ್ ಪಾಂಡೆಯ ಸ್ಮರಣೆಲಿ- ಮಂಗಳ ಗೋ ಯಾತ್ರೆ ಹೇಳ್ತ ಅಮೋಘ ಕಾರ್ಯವ ಸಂಕಲ್ಪ ಮಾಡಿದ್ದವು, ನವಗೆ ಗೊಂತಿದ್ದು.

ಮೊನ್ನೆ ಗೋಪಾಷ್ಟಮೀ ದಿನ ಬೆಂಗ್ಳೂರು ಮಠಲ್ಲಿ ಗಣವತಿ ಹೋಮ, ಪೂಜೆಗೊ ಇತ್ಯಾದಿ ನೆರವೇರಿ, ಶ್ರೀಗುರುಗಳಿಂದ ರಥಕ್ಕೆ ಅಮೃತಹಸ್ತದ ಚಾಲನೆ ಸಿಕ್ಕಿತ್ತು.
ಮಂಗಲ ಗೋಯಾತ್ರೆಯ ಮಂಗಲ ಆರಂಭ.
ಕರ್ನಾಟಕವೂ ಸೇರಿ ಸುತ್ತಮುತ್ತಲಿನ ಒಟ್ಟು ಐದು ರಾಜ್ಯದ, ಸಹಸ್ರಾರು ಕಿಲೋಮೀಟ್ರು ದೂರ ಈ ಯಾತ್ರೆ ತಿರುಗುಲಿದ್ದು. ಪ್ರತಿ ಊರಿಲಿ ಒಂದೊಂದು ಸಭಾ ಕಾರ್ಯಕ್ರಮ, ಗೋವಿನ ಬಗ್ಗೆ ಅರಿವು, ವಿಚಾರ ಸಂಕಿರಣ – ಇತ್ಯಾದಿಗಳ ಎಚ್ಚರುಸಿ, ವಿಶೇಷವಾದ ಕ್ರಾಂತಿಯ ನೆಡೆಶುವ ಯೋಜನೆ.
~
ಹಾಂಗೆ, ಮೊನ್ನೆ ಗಿರಿನಗರಂದ ಹೆರಟ ಮಂಗಳ ಗೋಯಾತ್ರೆ ಸೀತ ಮೂಡಂತಾಗಿ ಮೋರೆ ಮಾಡಿತ್ತು.
ತುಮಕೂರು ಕಳುದು, ಗೌರೀಬಿದನೂರು, ಅಲ್ಲಿಂದ ಒಂದರಿ ಆಂದ್ರದ ಮದನಪಲ್ಲಿಗೆ ಹೊಕ್ಕುಹೆರಟು ಬಂತು. ಗೋವಿನ ಬಗ್ಗೆ ಪ್ರಜ್ಞ್ನೆ ಮೂಡುಸಿತ್ತು.
~
ಹೋದ ಪ್ರತೀ ಜಾಗೆಲಿಯೂ ಅದ್ಭುತ ಕಾರ್ಯಂಗೊ, ಕಾರ್ಯಕ್ರಮಂಗೊ. ಸಹಸ್ರಾರು ಜೆನಂಗೊ ಸಾಲು ನಿಂದು, ರಥಯಾತ್ರೆಯ ನೋಡ್ತವು. ಸಾವಿರಗಟ್ಳೆ ಜೆನ ಸೇರಿ ಸಭೆ ನಡೆತ್ತು. ಸಂತರು ಬಂದು ಸಂದೇಶ ಕೊಡ್ತವು. ಸಾಹಿತಿಗೊ, ಸಮಾಜ ಸೇವಕರು ಬಂದು ಹಾರೈಕೆ ತಿಳುಸುತ್ತವು.
ಇದೆಲ್ಲದರ ಮಧ್ಯೆ, ಊರಿನ ಹಳ್ಳಿ ಹಳ್ಳಿಗಳಲ್ಲಿಪ್ಪ ರೈತರಿಂಗೆ ಗೋವಿನ ಒಳಿಶೆಕ್ಕು ಹೇಲ್ತ ಚೆಂದದ ಸಂದೇಶವ ಕೊಡ್ತಾ ಇದ್ದು.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಮುಳುನಾಡು, ಗೋವಾ, ಕೇರಳ ಆಗಿ ಕೊನೆಗೆ ನಮ್ಮ ಕೊಡೆಯಾಲಲ್ಲಿ ಪರಿಸಮಾಪ್ತಿ ಆವುತ್ತು – ಹೇಳ್ತದು ಇನ್ನೂ ಅಭಿಮಾನದ ವಿಷಯ.

ಜೆನವರಿ ಇಪ್ಪೊಂಬತ್ತು – ಇದರ ಮಂಗಳ ಸಮಾರೋಪ.
ಇಡಿಯ ಯಾತ್ರೆಗೆ ಒಂದು ತೂಕ ಆದರೆ, ಅದರ ಸಮಾರೋಪದ್ದೇ ಇನ್ನೊಂದು ಗೌಜಿ. ಸಾವಿರಾರು ಸಂತರು, ಗೋಭಕ್ತರು ಸೇರುವ ಕಾರ್ಯಕ್ರಮ ಅದು.
ಎಲ್ಲ ಚೆಂದಕ್ಕೆ ಆಗಲಿ, ಪುರುಸೊತ್ತು ಮಾಡಿಗೊಂಡು ನಾವೂ ಸೇರಿಗೊಂಬ.
ಯಾತ್ರೆ ವಿಜ್ಯವಾಗಲಿ.
ಗೋವಿಂಗೆ ವಿಜಯವಾಗಲಿ.

ವಂದೇ ಗೋ ಮಾತರಮ್.
~
ಒಂದೊಪ್ಪ: ಸಿಪಾಯಿಯ ಹೆಸರಿಲಿ ಬೆಳಗುವ ಯಾತ್ರೆ ಸಿಪಾಯಿಗಳ ಸಿದ್ಧಮಾಡಲಿ.

ಒಪ್ಪಣ್ಣ

   

You may also like...

2 Responses

  1. ಒಳ್ಳೆ ಶುದ್ದಿ. ಗೋ ಹಂತಕರನ್ನೇ ನಿರ್ನಾಮ ಮಾಡುವ ಸಿಪಾಯಿಗೊ ಸಿದ್ದವಾಗಿ; ತಮ್ಮ ಭೂಮಿಲಿ ಓಡಾಡುವ ಸ್ವಾತಂತ್ರ್ಯ ನಮ್ಮ ದನಗೊಕ್ಕೆ ಸಿಕ್ಕಲಿ.

  2. S.K.Gopalakrishna Bhat says:

    OLLEDU

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *