Oppanna.com

ವಟುವಿನ ಬ್ರಹ್ಮ ಸೂತ್ರಕ್ಕೆ ತಪ್ಪ ‘ಸೂತ್ರ ಸಂಗಮ’

ಬರದೋರು :   ಒಪ್ಪಣ್ಣ    on   29/04/2016    2 ಒಪ್ಪಂಗೊ

ಜನ್ಮನಾ ಜಾಯತೇ ಜಂತುಃ ಕರ್ಮಣಾ ಜಾಯತೇ ದ್ವಿಜಃ
ವೇದಾಧ್ಯಯನತೋ ವಿಪ್ರಃ ಬ್ರಹ್ಮವಿದ್ ಬ್ರಾಹ್ಮಣ ಸ್ಮೃತಃ ||

ಹುಟ್ಟುವಗ ಹುಳುವಾಗಿ, ಕರ್ಮಂದ ದ್ವಿಜನಾಗಿ, ವೇದಾಧ್ಯಯನಂದ ವಿಪ್ರನಾಗಿ ಮುಂದೆ ಬ್ರಹ್ಮಜ್ಞಾನಂದ ಬ್ರಾಹ್ಮಣನಾವುತ್ತ° – ಹೇಳ್ತದು ವೇದಲ್ಲಿ ಒಬ್ಬ ವೆಗ್ತಿಯ ಸಂಸ್ಕಾರದ ಕುರಿತಾಗಿ ಹೇಳಿದ ಮಾತುಗೊ ಅಡ. ಬಟ್ಟಮಾವ° ಅಂದೊಂದರಿ ಹೇಳಿತ್ತಿದ್ದವು.
~

ಹದಿನಾರು ಸಂಸ್ಕಾರಲ್ಲಿ ಉಪನಯನ ಹೇಳ್ತದು ಅತ್ಯಂತ ಪ್ರಮುಖ ಘಟ್ಟ. ವೇದಾಧ್ಯಯನ ಮಾಡಿ ತಿಳಿವಳಿಕೆವಂತ ಅಪ್ಪಲೆ, ಗುರುಕುಲಕ್ಕೆ ಹೋಗಿ ಗುರುಸೇವೆ ಮಾಡಿ ಕಲ್ತುಗೊಂಬಲೆ ಇಪ್ಪ ಹೊಸ್ತಿಲು ಅದು. ಅಂತಾ ವಿಶೇಶ ಸಂದರ್ಭವೇ ಬ್ರಹ್ಮೋಪದೇಶ ಸಂಸ್ಕಾರ.
ಮಾಣಿಯೊಬ್ಬಂಗೆ ಯೋಗ, ಗುರು ಅನುಕೂಲ ಕೂಡಿ ಬಪ್ಪಗ ಮೂರ್ತ ನೋಡಿ ಉಪ್ನಾಯನ ನಿಘಂಟು ಮಾಡ್ತವು. ಕುಲಪುರೋಹಿತರ ಬರುಸಿ ಆ ದಿನದ ಮೂರ್ತಕ್ಕೆ ಸವಿತೃ ದೇವನ ಮಂತ್ರವಾದ ಗಾಯತ್ರೀ ಮಂತ್ರವ ಉಪದೇಶ ಮಾಡ್ತವು.
ಆರು ಮಾಡುದು? – ಅಪ್ಪ°.
ಅವಕ್ಕೆ ಆರು ಮಾಡಿದ್ದು? – ಅವರ ಅಪ್ಪ°.
ಆ ಅಜ್ಜಂಗೆ ಆರು ಗಾಯತ್ರಿ ಉಪದೇಶ ಮಾಡಿದ್ದು – ಅವರ ಅಪ್ಪ°..
ಹಾಂಗಾಗಿ ಈ ಗಾಯತ್ರೀ ಉಪದೇಶ ಹೇಳ್ತ ವೈಶಿಷ್ಠ್ಯ ನೇರವಾಗಿ ಆದಿಗುರುವಿಂದ ನವಗೆ ಅವಿಚ್ಛಿನ್ನವಾಗಿ ಇಳುದು ಬಂದ ಹೆಮ್ಮೆ. ಅಪ್ಪನಿಂದ ಮಗಂಗೆ, ಮಗನಿಂದ ಪುಳ್ಳಿಗೆ – ಹೀಂಗೆ ಹರುದು ಹೋವುತ್ತು ಗಾಯತ್ರಿಯ ಗುಪ್ತತೆ.
ಇದಕ್ಕೆ ಸಾಕ್ಷಿ ಅಪ್ಪದು ಸ್ವತಃ ನಮ್ಮ ಕುಲಗುರುಗೊ.
ಅಪ್ಪು, ಮೂರ್ತದ ಸಮಯಲ್ಲಿ ಯಜ್ಞೋಪವೀತಧಾರಣೆ ಮಾಡಿದ ಮತ್ತೆ ಗಾಯತ್ರಿ ಉಪದೇಶ ಇದ್ದಲ್ಲದೋ – ಅದರ ಅಪ್ಪನೇ ಮಾಡುದಾದರೂ – ಅಪ್ಪಂಗೆ ಸಾಂದರ್ಭಿಕವಾಗಿ ಸಾಂಕೇತಿಕವಾಗಿ ಮಾಡುಸ್ಸು ಕುಲಗುರುಗಳೇ.
ಆಯಾ ಕಾಲದ ತಲೆಮಾರಿನ ಕುಲಪುರೋಹಿತರು ಆಯಾ ತಲೆಮಾರಿನ ಉಪನಯನ ಸಂಸ್ಕಾರಕ್ಕೆ ಸಾಕ್ಷಿಯಾವುತ್ತವು.
~
ವಟುವೊಬ್ಬನ ಉಪನಯನಕ್ಕೆ ಕುಲಗುರುಗೊ ಸಾಕ್ಷಿಯಾಗಿರ್ತವು. ಅಪ್ಪ° ಉಪದೇಶ ಕೊಡ್ತವು.
ಕುಲಪುರೋಹಿತರು ಹೇದರೆ ಸ್ವತಃ ನಮ್ಮ ಕುಲಗರುಗಳ ಪ್ರತಿನಿಧಿಗೊ ಅಪ್ಪನ್ನೇ!
ಹಾಂಗಾರೆ, ಉಪನಯನಕ್ಕೆ ಸ್ವತಃ ನಮ್ಮ ಕುಲಗುರುಗಳೇ ಸಾಕ್ಷ್ಯವಾಗಿದ್ದರೆ!
ಎಂತಾ ಸೌಭಾಗ್ಯ, ಅಲ್ದೋ?
~
ಆ ಸೌಭಾಗ್ಯ ನಾಡ್ತು ಮಾಣಿಮಠಲ್ಲಿ ಕೆಲವು ವಟುಗೊಕ್ಕೆ ಸಿಕ್ಕುತ್ತಾ ಇದ್ದು.
ಅಪ್ಪು, ನಾಡ್ತು ನಾಲ್ಕನೇ ತಾರೀಕಿಂಗೆ ಮಾಣಿ ಮಠಲ್ಲಿ ಉಪನಯನ ಸಂಸ್ಕಾರ ಕಾರ್ಯಕ್ರಮ ಇದ್ದಾಡ.
ಅದಕ್ಕೆ ಸ್ವತಃ ಶ್ರೀಗುರುಗಳೇ ಉಪಸ್ಥಿತಿ ಕೊಡ್ತವಾಡ.
ವಟುಗೊಕ್ಕೆ ಶ್ರೀಗುರುಗಳೇ ಅನುಗ್ರಹಿಸುತ್ತವು.
ವಟುಗಳ ಕುಟುಂಬಕ್ಕ ಶ್ರೀಕರಾರ್ಚಿತ ಪ್ರಸಾದವ ಸಿಕ್ಕುತ್ತು.
ಎಶ್ಟು ಕೊಶಿಯ ಸಂಗತಿ ಅಲ್ಲದೋ!

ಅಪ್ಪು, ಉಪನಯನ ಹೇಳ್ತದ ವಟುವಿನ ತೇಜೋಭಿವೃದ್ಧಿಗೆ ಇಪ್ಪಂತಾದ್ದು.
ಅದರ ಗೌಜಿಗದ್ದಲ ಮಾಡೇಕಾದ ಸಂಗತಿ ಅಲ್ಲ.
ಮದುವ ಆದರೆ ಗೌಜಿ ಮಾಡಲಿ, ಅವರವರ ಮಿತ್ರವರ್ಗದ ಹೊಂದಿಗೊಂಡು, ಆದರೆ ಉಪನಯನ ಹೇಳ್ತದು ಕ್ರಮಪ್ರಕಾರ ಶ್ರದ್ಧೆಲಿ ಆಯೆಕಾದ ಕಾರ್ಯ.
ಯೇವದೋ ಎ.ಸಿ ಇಪ್ಪ ಓಲಿಲಿ ಮಾಡುದರಿಂದ, ಚೆಂದದ ಒಂದು ಗುರುಅನುಗ್ರಹದ ಜಾಗೆಲಿಯೋ, ಮನೆಲಿಯೋ – ಮಣ್ಣ ಮಾಡ್ತದು ಒಳ್ಳೆ ಕಲಸ.
ಆ ಸಂಸ್ಕಾರವ ಎಲ್ಲಿ ಕೊಡ್ತು ಹೇಳ್ತದೂ ಮುಖ್ಯವಾದ ಸಂಗತಿ.
ಹಾಂಗಾಗಿ – ಯೇವದಾರು ದೇವಸ್ಥಾನವೋ, ಶುದ್ಧದ ಜಾಗೆಯೋ – ಮಣ್ಣ ಹುಡ್ಕಿ ಚೆಂದಕೆ ಮಾಡೇಕಪ್ಪದು ಹೆಚ್ಚು ಮುಖ್ಯವಾಗಿರ್ತು.

ಮಠಕ್ಕಿಂತ ಹೆಚ್ಚಿನ ಗುರು-ಅನುಕೂಲದ ಜಾಗೆ ಯೇವದಿದ್ದು!?
ಕುಲಗುರುಗಳೇ ಸಾಕ್ಷಿಯಾಗಿದ್ದರೆ – ಅದರಿಂದ ಸೌಭಾಗ್ಯ ಯೇವದಿದ್ದು!?
~

ನಾಡ್ದು ಮಾಣಿಮಠಲ್ಲಿ ನೆಡವ ಕಾರ್ಯವೇ ಅದು.
ಗುರುಗಳ ಅನುಗ್ರಹಲ್ಲಿ, ಶ್ರೀ ಸೀತಾರಾಮಚಂದ್ರರ ಸನ್ನಿಧಿಲಿ, ಮಾಣಿ ಮಠಲ್ಲಿ ಸಮಾಜದ ಅತಿ ಸೌಭಾಗ್ಯಯುತ ಮಾಣಿಗೊ ದ್ವಿಜತ್ವ ಹೊಂದುತ್ತವು.
ಗುರುಗೊ ಈ ಕಾರ್ಯಕ್ರಮಕ್ಕೆ ‘ಸೂತ್ರ ಸಂಗಮ’ ಹೇದು ಹೆಸರು ಮಡಗಿದ್ದವಾಡ.
ಸೂತ್ರ ಹಿಡುದು ನೆಡವಲೆ ಅನುಗ್ರಹಿಸುವ ಬ್ರಹ್ಮಸೂತ್ರವಾದ ಯಜ್ಞೋಪವೀತವ ಅನುಗ್ರಹಿದುವ ದಿವ್ಯದಿನ ಅದು.
ಶುಭವಾಗಲಿ, ಗುರುಗಳ ಎದುರು ದ್ವಿಜರಾಗಿ ಜನ್ಮತಃ ಶಿಷ್ಯರಾಗಿದ್ದವು ವೇದಾಧ್ಯಯನ ಶಿಷ್ಯರಪ್ಪ ಸುಸಂದರ್ಭಲ್ಲಿ – ಎಲ್ಲ ವಟುಗೊಕ್ಕೆ ಬೈಲು ಶುಭಹರಸುತ್ತು.
ಹರೇರಾಮ.
~
ಒಂದೊಪ್ಪ: ಸೂತ್ರ ಗಟ್ಟಿಪ್ಪ ಗಾಳಿಪಟ ಎಷ್ಟೇ ಗಾಳಿ ಬೀಸಿರೂ ಶುದ್ಧವಾಗಿರ್ತು.

2 thoughts on “ವಟುವಿನ ಬ್ರಹ್ಮ ಸೂತ್ರಕ್ಕೆ ತಪ್ಪ ‘ಸೂತ್ರ ಸಂಗಮ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×