ಮಾಣಿಮಠಲ್ಲಿ ಮಾಣಿಯಂಗೊ ಸೇರಿರೆ “ಒಪ್ಪಣ್ಣ” ಅಕ್ಕು!

September 13, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಣಿ ಮಠಲ್ಲಿ ಚಾತುರ್ಮಾಸ್ಯ ಚೆಂದಲ್ಲಿ ನೆಡೆತ್ತಾ ಇಪ್ಪದು ಎಲ್ಲೋರಿಂಗೂ ಗೊಂತಿಪ್ಪದೇ.
ಅನುಭವಿಗಳ ಅದ್ಭುತ ವೆವಸ್ತೆಲಿ ಅತಿಚೆಂದಕೆ ನೆಡೆತ್ತಾ ಇಪ್ಪ ವಿಜಯ ಚಾತುರ್ಮಾಸ್ಯ ವಿಜಯ ಆದ್ಸರಲ್ಲಿ ಏನೇನೂ ಆಶ್ಚರ್ಯ ಇಲ್ಲೆ.

ಹೊತ್ತಿಂದ ಹೊತ್ತಿಂಗೆ ಸೇವೆ ಮಾಡ್ಳೆ ಬಂದ ಜೆನಂಗೊ,
ದಿನಂದ ದಿನಕ್ಕೆ ಪಾದಪೂಜೆ – ಭಿಕ್ಷಾಸೇವೆ ಕೊಡ್ಳೆ ಬಂದ ಜೆನಂಗೊ,
ಸರ್ತಿಂದ ಸರ್ತಿಗೆ ರಾಮಕತೆಯ ಕೇಳುಲೆ ಸೇರಿದ ರಾಮಭಕ್ತರ ಸಾಲು

– ಎಲ್ಲವುದೇ ಏರಿಂಡೇ ಹೋದ್ಸು.

ಗುರುಗಳ ಸ್ವಾಧ್ಯಾಯದ ಸಮೆಯಲ್ಲಿ, ಗುರುಗೊ ಕೊಡುವ ಅಮೃತವಾಣಿಗೊ ನಮ್ಮ ಮನೆಮನಸ್ಸು ಮುಟ್ಟಿತ್ತು-ತಟ್ಟಿತ್ತು ಹೇಳಿ ಆದರೆ ಚಾತುರ್ಮಾಸ್ಯ ಪರಿಪೂರ್ಣ ಆತು ಹೇಳಿ ಲೆಕ್ಕ.

~

ಹೇಳಿದಾಂಗೆ, ಮಾಣಿಮಠದ ಚಾತುರ್ಮಾಸ್ಯಲ್ಲಿ ಹಲವು ಪ್ರಥಮಂಗೊ, ವಿಶೇಷತೆಗೊ, ಕುತೂಹಲಂಗೊ, ಆಶ್ಚರ್ಯಂಗೊ ಇದ್ದು.
ಇದೆಲ್ಲದಕ್ಕೂ ಆ ಶ್ರೀರಾಮನೂ, ಸ್ಥಳಲ್ಲಿ ಸಂಚಾರಲ್ಲಿ ಇಪ್ಪ ಹನುಮಂತನೂ ಕಾರಣ ಆದರೂ, ಪ್ರತ್ಯಕ್ಷ ಕಾರಣೀಭೂತರು ಶ್ರೀರಾಮ ಪೂಜಕರಾದ ಶಂಕರಾಚಾರ್ಯರು.
ಮೊದಲ್ನೇದಾಗಿ, ಏಳೆಂಟು ತಿಂಗಳ್ಳಿ ಆ ಭವ್ಯ ಜನಭವನ ಎದ್ದು ನಿಂದದೇ ಒಂದು ವಿಶೇಷ.
ಬೆಂಗ್ಳೂರಿನ ಹಾಂಗಿರ್ತ ಮಹಾನಗರ ಬಿಡಿ, ಕೊಡೆಯಾಲದಾಂಗಿದ್ದ ನಗರ ಬಿಡಿ, ಪುತ್ತೂರಿನ ಹಾಂಗಿರ್ತ ಪೇಟೆ ಬಿಡಿ – ಅಷ್ಟು ಒಳಾಣ ಆ ಮಾಣಿ ಹೇಳ್ತ ಊರಿಂಗೆ ಜೆನ ಬಕ್ಕೋ ಬಾರವೋ ಹೇದು ಒಂದು ಸಂಶಯ ಇದ್ದೋರಿಂಗೆ, ಆ ಜೆನಸಾಗರವ ಕಾಂಬಲೆ ಇದ್ದದೇ ಇನ್ನೊಂದು ವಿಶೇಷ.
ಚೊಕ್ಕಚೂಕ್ಕಕ್ಕೆ ಬೇಕುಬೇಕಾದ ವೆವಸ್ತೆಯ ಬೇಕಾದ ಹಾಂಗೆ ನೆಡೆಶಿದ್ದೇ ಇನ್ನೊಂದು ವಿಶೇಷ,
ಎಲ್ಲಾ ಜೆಬಾದಾರಿಕೆಯ ಚೆಂದಲ್ಲಿ ಹಂಚಿಗೊಂಡು ಮುಂದುವರಿಶುತ್ತ ಎಲ್ಲೋರ ಆ ತಾಳ್ಮೆಯೇ ಇನ್ನೊಂದು ವಿಶೇಷ.
ಎಲ್ಲದಕ್ಕೂ ಮೇಗಂದ, ಇಡೀ ಚಾತುರ್ಮಾಸ್ಯದ ಕೇಂದ್ರಸ್ಥಾನಲ್ಲಿದ್ದುಗೊಂಡು ಎಲ್ಲವನ್ನೂ, ಎಲ್ಲೋರನ್ನೂ ನೆಗೆನೆಗೆಲಿ ಚೆಂದಕೆ ತೆಕ್ಕೊಂಡು ಹೋವುತ್ತ ಗುರುಗಳ ಆ ಸಾಮರ್ತಿಗೆಯೇ ವಿಶೇಷ!
~
ಗುರುಗಳ ದೂರದರ್ಶಿತ್ವ, ಕಾರ್ಯಕ್ರಮದ ಯೋಜನಾ ಸ್ಪಷ್ಟತೆ, ಭವಿಷ್ಯದ ಬಗ್ಗೆ ಚಿಂತನೆಗೊ – ಇದೆಲ್ಲವೂ ನಿಜಕ್ಕೂ ಅಭಿವಂದನೀಯ.
ಯೇವದೇ ಕಾರ್ಯವ ಆಲೋಚನೆ ಮಾಡಲಿ, ಅನುಷ್ಠಾನಕ್ಕೆ ಆಜ್ಞೆ ಮಾಡಲಿ, ಅದರ ಹಿಂದೆ-ಮುಂದೆ ತಲೆಮಾರುಗೊಕ್ಕೇ ಉಪಯೋಗ ಆವುತ್ತ ಸತ್ವ ಇರ್ತು.
ಮುಷ್ಟಿಭಿಕ್ಷೆ ಹೇಳ್ತ ಸಣ್ಣ ಕಾರ್ಯವನ್ನೇ ತೆಕ್ಕೊಳಿ ಬೇಕಾರೆ – ಪ್ರತಿ ಮನೆಲಿ ಹೆಮ್ಮಕ್ಕೊ ಅಶನ ಮಡಗುವಾಗ ಒಂದು ಮುಷ್ಟಿ ಅಕ್ಕಿಯ ತೆಗದು ಮಡಗುತ್ತದು.
ಅಂತೇ ಮಡಗುದಲ್ಲ, ಮನಸ್ಸಿಲಿ ಒಂದರಿ ಶ್ರೀರಾಮನ, ಶ್ರೀಪೀಠವ ಗ್ರೇಶಿ ಮಡಗುತ್ತದು.
ಸಂಸ್ಕಾರಮೂರ್ತಿ ಶ್ರೀರಾಮನ ಮಾಂತ್ರ ಅಲ್ಲ, ಅವನ ಧರ್ಮ-ಕರ್ಮಂಗಳ ಗ್ರೇಶಿ ಮಡಗುತ್ತದು.
ನಮ್ಮ ಧರ್ಮವ ಮಾಂತ್ರ ಅಲ್ಲ, ನಮ್ಮ ಸಮಾಜವ ಗ್ರೇಶಿ ಮಡಗುತ್ತದು.
ಆ ಮುಷ್ಠಿ ಅಕ್ಕಿ ಆರಿಂಗಿಪ್ಪದು? ಗುರುಗೊಕ್ಕೋ? ಮಠಕ್ಕೋ? ಅಲ್ಲ.
ಅದು ನವಗೇ ಇಪ್ಪದು. ನಮ್ಮ ಊರೊಳವೇ ಒಬ್ಬಂಗೆ ಸಿಕ್ಕುತ್ತು.
ಆ ಮುಷ್ಟಿಯಷ್ಟು ಅಕ್ಕಿಯನ್ನೂ ಸಂಪಾಲುಸಲೆ ಆರು ಅಶಕ್ತನೋ – ಆ ವೆಗ್ತಿಗೆ ಸಿಕ್ಕುತ್ತದು.
ನವಗೆ ಬರೇ ಒಂದು ಮುಷ್ಟಿ ಹೇದು ಕಂಡರೂ- ಮೂವತ್ತು ಜೆನ ಮಡಗಿ ಅಪ್ಪಗ ಆ ವೆಗ್ತಿಗೆ ನೆಮ್ಮದಿಲಿ ಉಣ್ತಷ್ಟು ಆತಿಲ್ಲೆಯೋ.
ಇದೇ ನಮುನೆದು ಬಿಂದು-ಸಿಂಧು. ದಿನಕ್ಕೆ ಒಂದು ರುಪಾಯಿ ಸಂಧ್ಯಾವಂದನೆ ಮಾಡಿದ ಹೊತ್ತಿಲಿ ಶ್ರೀರಾಮನ, ಶ್ರೀಗುರುಗಳ ಮನಸ್ಸಿಲಿ ಧೇನಿಸಿ ಮಡುಗುದು.
ಆ ಸಂಧ್ಯಾಕಾಲಲ್ಲಿ ಕೂಡ್ಸಿ ಮಡಗಿದ ಪೈಸ ಆರದ್ದೋ ಮನೆಯ ಕೂಡ್ಸುಗು.
ದೀಪ ಹೊತ್ತುಸುವ ಸಮೆಯಲ್ಲಿ ಶ್ರೀದೇವರುಗಳ ಮನಸ್ಸಿಲಿ ನೆನೆಸಿ ಮಡಗಿದ ಆ ಒಂದು ಬಿಂದು ನಾಣ್ಯ, ನಿತ್ಯಲ್ಲಿ ಸೇರಿ ಸಿಂಧು ಆಗಿ ನಮ್ಮ ಸಮಾಜದ ಆರದ್ದೋ ಮನೆಬೆಳಗುಗು.
ಊರೊಳವೇ ಸ್ವಾವಲಂಬನೆ ಹೇದರೆ ಇದುವೇ ಅಲ್ಲದೋ?
ಇದೊಂದು ಹೇದು ಏನಲ್ಲ, ಹೀಂಗಿರ್ಸ ಅನೇಕ ಕಾರ್ಯಂಗೊ ಇದ್ದು.
ಎಲ್ಲವುದೇ ಸಂಘಟನೆ, ಸಂಸ್ಕಾರ, ಸಮೃದ್ಧಿಗಳ ಚಿಂತನೆ ಮಡಿಕ್ಕೊಂಡು ಮಾಡಿದ್ದದು.

~


ಏನು ಸಾರ್ಥಕ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ
– ಹೇದು ದೊಡ್ಡಮಾವ° ಒಂದು ಪ್ರಶ್ನೆ ಕೇಳುಗು ಒಂದೊಂದರಿ.
ನಮ್ಮ ದೇಶಲ್ಲಿ ಅದಿದ್ದು, ಇದಿದ್ದು, ಬೈಲಿಲಿ ಆ ಸೊತ್ತು ಇದ್ದು, ಈ ಸೊತ್ತಿದ್ದು, ನಮ್ಮ ಧರ್ಮಲ್ಲಿ ಸ್ವಾತಂತ್ರ್ಯ ಇದ್ದು, ಜ್ಞಾನ ಇದ್ದು – ಹೇಳಿ ನಾವು ಹೇಳ್ತಲ್ಲದ್ದೆ, ಅದರ ಅನುಭವಿಸಲೆ ಆಗಲೀ, ಆಚರಣೆ ಮಾಡ್ಳೆ ಆಗಲೀ ನಾವು ತೆಯಾರಿಲ್ಲದ್ದರೆ, ನವಗೆ ಮನಸ್ಸಿಲ್ಲದ್ದರೆ ಸಾರ್ಥಕ್ಯ ಎಂತ ಇದ್ದು?
ಮನೆಯ ಮಕ್ಕಳೇ ಗುಡಿಹೆಟ್ಟಿ ಮನುಗಿದ್ದವು ಹೇದು ಆದರೆ, ಅಪ್ಪಮ್ಮ ತೋಟಲ್ಲಿ ದುಡುದು ಬೆಳೆಸ್ಸು ಆರಿಂಗೆ? ಬೆಳದ ತೋಟ ಆರಿಂಗೆ? ಮುಂದಾಣ ವಿಸ್ತಾರ ಆರಿಂಗೆ!?
ಇಂದು ಹೆರಾಣ ಉದ್ಯೋಗ ಹೊಟ್ಟೆ-ಬಟ್ಟೆಗೆ ತಂಪು ಕೊಡುಗು, ಆದರೆ ಪ್ರಾಕಿಂದ ಹೆರಿಯೋರು ಜೋಪಾನ ಮಾಡಿದ ಜಾಗೆ ನಮ್ಮ ಕೈತಪ್ಪಿದರೆ ನಾಳೆ ನಮ್ಮ ಮಕ್ಕೊಗೆ ನೆಲೆ ಎಲ್ಲಿ?
ಏನಿದ್ದರೂ – ಮನೆಮಕ್ಕೊಗೆ ಆಸಕ್ತಿ ಇದ್ದರೇ ಸಂಪತ್ತಿಂಗೆ ಬೆಲೆ.
ಹಾಂಗೇ ಆಯಿದು ನಮ್ಮ ಭಾರತಲ್ಲಿಯೂ.
ಸಂಸ್ಕಾರ ಇದ್ದು, ಸನಾತನ ಜ್ಞಾನ ಇದ್ದು, ವೇದ-ಪುರಾಣ ಇತಿಹಾಸಂಗೊ ಇದ್ದು.
ಎಲ್ಲವೂ ಇದ್ದು, ಸರಿ; ಆರಿಂಗೆ? ಒರಿಶಾನುಗಟ್ಳೆ ಕೂದು ಅದರ ಕಲಿತ್ತ ಒಪ್ಪಣ್ಣಂಗೊ ಎಲ್ಲಿದ್ದವು?
ಹಳೆ ತಲೆಮಾರು ಹೋದ ಕೂಡ್ಳೇ ಎಲ್ಲವೂ ಮಾಯ ಅಕ್ಕೋದು!
ಈಗಾಣ ಕಾಲಘಟ್ಟವೂ ಇದಕ್ಕೆ ಕಾರಣ ಅಲ್ಲದ್ದಲ್ಲ.
ಸ್ಪರ್ಧಾತ್ಮಕ ಜಗತ್ತಿಲಿ ಮೀಸಲೆ ಎಡಿಯದ್ದರೆ ಮಾಣಿ ಬಾಕಿಯೇ ಆಗಿ ಹೋಕಿದಾ!
ಹಾಂಗಾಗಿ ಈಗಾಣ ಕಾಲಲ್ಲಿ ಬದ್ಕಲೆ ಬೇಕಾದ ವಿದ್ಯೆಯನ್ನೇ ಕಲಿತ್ತ ಒಪ್ಪಣ್ಣಂಗೊ ಆದವೆಲ್ಲೋರುದೇ.
ಹಳತ್ತರ ಕಲಿತ್ತರೂ ಒಪ್ಪಣ್ಣನೇ, ಹೊಸತ್ತರ ಕಲಿತ್ತರೂ ಒಪ್ಪಣ್ಣನೇ.
ಭಾರತಲ್ಲಿದ್ದರೂ ಒಪ್ಪಣ್ಣನೇ, ವಿದೇಶಲ್ಲಿದ್ದರೂ ಒಪ್ಪಣ್ಣನೇ.
ನಮ್ಮತನವ ಒಳಿಶಲೆ ಮಾನಸಿಕವಾಗಿ ಸಿದ್ಧ ಇದ್ದರೆ ಅವ° ಒಪ್ಪಣ್ಣನೇ.
ಕಾಲಕಾಲಕ್ಕೆ ಒಪ್ಪಣ್ಣಂದ್ರ ಒಂದಿಕ್ಕೆ ಕೂರ್ಸಿ ದಾರಿತೋರ್ಸೇಕಾದ ಅಗತ್ಯ ಕಂಡದು ನಮ್ಮ ಗುರುಪೀಠಕ್ಕೆ.
ಅಂದಿಂದಲೇ ಆ ಕಾರ್ಯ ಮಾಡ್ತಾ ಇದ್ದು, ಆಚೊರಿಶವೂ ಮಾಡಿದ್ದು, ಕಳುದೊರಿಶವೂ ಮಾಡಿದ್ದು, ಬಪ್ಪೊರಿಶವೂ ಮಾಡ್ತು.
ಈ ಒರಿಶವೂ ಮಾಡ್ತಲ್ಲದೋ – ಅದುವೇ ಇಂದ್ರಾಣ ಶುದ್ದಿ.
~

ಗುರುಗಳೇ.., ಕೈಹಿಡುದು ನೆಡೆಶಿ ಮಾರ್ಗದರ್ಶನ ಮಾಡ್ಸಿ ಹೇಳ್ತ ಒಪ್ಪಣ್ಣಂಗೊ..
ಗುರುಗಳೇ.., ಕೈಹಿಡುದು ನೆಡೆಶಿ ಮಾರ್ಗದರ್ಶನ ಮಾಡ್ಸಿ ಹೇಳ್ತ ಒಪ್ಪಣ್ಣಂಗೊ..
ಈ ಒರಿಶದ ಯುವ ಸಮಾವೇಶಕ್ಕೆ ನಮ್ಮ ಗುರುಗೊ “ಒಪ್ಪಣ್ಣ” ಸಮಾವೇಶ ಹೇದು ಹೆಸರು ಮಡಗಿದ್ದವು.
ಬೈಲಿನ ಬಗ್ಗೆ ಪ್ರೀತಿಯೂ ಇದ್ದು, ಯುವಕರ ಬಗ್ಗೆ ಭರವಸೆಯೂ ಇದ್ದು.
ಎಲ್ಲ ಯುವಕರುದೇ ಒಪ್ಪಣ್ಣಂದ್ರಾಯೇಕು ಹೇಳ್ತ ಉದ್ದೇಶಲ್ಲಿ ಯುವ ಸಮಾವೇಶಕ್ಕೆ ಒಪ್ಪಣ್ಣ ಸಮಾವೇಶ ಹೇದು ಹೆಸರು ಮಡಗಿದವು.
ಈ ಸರ್ತಿ ವಿಜಯ ಚಾತುರ್ಮಾಸ್ಯದ ಸಮೆಯ ಸಮಾವೇಶಂಗಳದ್ದೇ ಗವುಜಿ!
ಬಟ್ಟಮಾವಂದ್ರ ‘ವೈದಿಕ ಸಮಾವೇಶ’, ಗುರಿಕ್ಕಾರಕ್ಕಳ ‘ಗುರಿಕ್ಕಾರ ಸಮಾವೇಶ‘, ಅಬ್ಬೆಕ್ಕಳ ‘ಮಾತೃ ಸಮಾವೇಶ‘ ಅದಾಗಿ ‘ಕನ್ಯಾ ಸಮಾವೇಶ’ ಈಗ ‘ಒಪ್ಪಣ್ಣ ಸಮಾವೇಶ’ ಆಗಿ ಅಕೇರಿಗೆ ‘ಕಾರ್ಯಕರ್ತರ ಸಮಾವೇಶ‘ ನೆಡವಲಿದ್ದಡ!
ಓ ಮನ್ನೆ – ಅದಾ ಅಡಿಗೆ ಸತ್ಯಣ್ಣ ರಮ್ಯನ ಕರಕ್ಕೊಂಡು ಹೋದ ದಿನ  ಒಂದು ಗವುಜಿ ನೆಡದಿತ್ತಿದಾ – ಅದಕ್ಕೆ “ಒಪ್ಪಕ್ಕ ಸಮಾವೇಶ” ಹೇಳಿದ್ದವಾಡ.
ಆ ದಿನ ಸಭಾ ನಿರ್ವಹಣೆ ಮಾಡಿದ ಶ್ರೀಅಕ್ಕ° ಮರದಿನ ಕೈರಂಗಳಲ್ಲಿ ಸಿಕ್ಕಿಪ್ಪಗ ಹೇಳಿದವು – ಅದೊಂದು ದ್ವಿಮುಖ ಸಂವಹನ ಕಾರ್ಯಕ್ರಮ – ಹೇದು.~ಈ ಕಾಲದ ಯುವಪೀಳಿಗೆಗೆ ಬೇಕಾದ ಧಾರ್ಮಿಕ ಮಾರ್ಗದರ್ಶನ, ತಿಳಿವಳಿಕೆ – ಗುರುಪೀಠ ಕೊಡ್ತು.
ಈಗಾಣ ಕಾಲಲ್ಲಿಪ್ಪ ಸಾಮಾಜಿಕ ಜೀವನಲ್ಲಿಪ್ಪ ಕಷ್ಟನಷ್ಟಂಗಳ ಗುರುಪೀಠಕ್ಕೆ ನಾವು ತಿಳಿಶಿಕೊಡ್ತು. ತೊಂದರೆಗಳ ಹೇಂಗೆ ಎದುರುಸಲಕ್ಕು – ಹೇಳ್ತ ಸಲಹೆಗಳ ನಮ್ಮ ಗುರುಪೀಠ ಅನುಗ್ರಹಿಸುದಾಡ.
ಸುಮಾರು ಜೆನ ಒಪ್ಪಕ್ಕಂದ್ರು ಅವರವರ ಮನಸ್ಸಿಲಿದ್ದ ಪ್ರಶ್ನೆಗಳ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳ, ಸಂಶಯಂಗಳ ಗುರುಪೀಠಕ್ಕೆ ತಂದು ಪರಿಹಾರಂಗಳ ಕಂಡುಗೊಂಡಿದವಾಡ.
ಅದೊಂದು ಯಶಸ್ವಿ ಕಾರ್ಯಕ್ರಮ ಆಯಿದಾಡ.
ಆ ಕಾರ್ಯಕ್ರಮ ಯಶಸ್ವಿ ಆದ ಹಾಂಗೆ ಒಪ್ಪಣ್ಣಂದ್ರ ಕಾರ್ಯಕ್ರಮ ಕೂಡಾ ಹೊಡಿ ಹಾರ್ಸೆಕ್ಕು ಹೇದು ಸಂಘಟಕರಿಂಗೆ ಇದ್ದಾಡ.

~
ಹಾಂಗೇ,  ಈ ಸರ್ತಿಯಾಣ “ಒಪ್ಪಣ್ಣ ಸಮಾವೇಶ”, ನಾಳ್ತು ನೆಡವಲಿದ್ದು, ನಮ್ಮ ಬೈಲಿನ ಮಿಲನದ ಮರದಿನ.
ಆ ದಿನ ಉದೆಕಾಲಕ್ಕೆ ಮಾಣಿ ಮಠಕ್ಕೆ ನಮ್ಮ ಒಪ್ಪಣ್ಣಂದ್ರು ಬಂದು ಸೇರೆಕ್ಕಡ.
ಉದಿಯಪ್ಪಗಾಣ ರಾಮಪೂಜೆಯ ಎದೂರಂದ ನೋಡುವ ಅವಕಾಶ ಆ ದಿನ ಬೇಗ ಹೋದವಕ್ಕೆ ಸಿಕ್ಕುತ್ತಾಡ.
ಮತ್ತೆ ಇಡೀ ದಿನವ ಮೂರು ಘಟ್ಟಂಗ ಆಗಿ ತೆಕ್ಕೊಂಡು ಶ್ರೀಗುರುಗಳ ದಿವ್ಯ ಉಪಸ್ಥಿತಿ-ಮಾರ್ಗದರ್ಶನಲ್ಲಿ ಹಲವು ಕಾರ್ಯಕ್ರಮಂಗ ನೆರವೇರುಲೆ ಇದ್ದಾಡ.
ಅಕೇರಿಗೆ ನೆಡವ ಸಂವಾದಲ್ಲಿ ಒಪ್ಪಣ್ಣಂದ್ರಿಂಗೆ ಶ್ರೀಪೀಠದ ಎದುರು ನಿಂದು ಪ್ರಶ್ನೆಗಳ ಕೇಳಿ ಉತ್ತರ ಪಡಕ್ಕೊಂಬ ಅವಕಾಶ ಇದ್ದಾಡ.
ಈಗಾಗಲೇ ಹಲವು ಜೆನಂಗ ನೋಂದಣಿ ಮಾಡಿ ಸೀಟು ಘಟ್ಟಿ ಮಾಡಿದ್ದವಡ. ನಿಂಗಳೂ ಮಾಡಿದಿರೋ?
~
ಶೆನಿವಾರ ನೆಡೆತ್ತ ಬೈಲಭೇಟಿಗೂ, ಮರದಿನ ಆಯಿತ್ಯವಾರದ ಒಪ್ಪಣ್ಣ ಸಮಾವೇಶಕ್ಕೂ – ಎಲ್ಲೋರುದೇ ಬಂದು ಯಶಸ್ವಿಮಾಡಿಕೊಡೇಕು ಹೇದು ಒತ್ತಾಯದ ಹೇಳಿಕೆ.
ಊರ-ಪರವೂರ ಎಲ್ಲಾ ಯುವಕರುದೇ ಆ ದಿನ ಬಂದು, ಕಾರ್ಯಕ್ರಮಲ್ಲಿ ಸೇರಿ, ಚೆಂದಗಾಣುಸಿ ಕೊಡೇಕು – ಹೇದು ಯೇತಡ್ಕ ಮಾವ° ಮೊನ್ನೆ ಹೇಳಿಗೊಂಡಿತ್ತಿದ್ದವು.
ಒಪ್ಪಣ್ಣ ಸಮಾವೇಶ ಯಶಸ್ವಿಯಾಗಲಿ.
ಈಗಾಣ ಕಾಲದ ಒಪ್ಪಣ್ಣಂದ್ರಿಂಗೆ ಧರ್ಮ – ಕರ್ಮಂಗಳ ಸರಿಯಾಗಿ ನೆಡೆಶಿಗೊಂಡು ಹೋಪಲೆ ಬೇಕಾದ ಮಾರ್ಗದರ್ಶನ ಗುರುಪೀಠಂದ ಸಿಕ್ಕಲಿ.
ಹರೇರಾಮ
ಒಂದೊಪ್ಪ: ನಮ್ಮತನವ ಒಪ್ಪಿದವನೇ ನಿಜವಾದ ಒಪ್ಪಣ್ಣ.
~
ಸೂ:
ಒಪ್ಪಣ್ಣ ಸಮಾವೇಶದ ದಿನ ಗುರುಗಳ ಒಟ್ಟಿಂಗೆ ಸಂವಾದ ನೆಡೆತ್ತು. ಧಾರ್ಮಿಕ-ಸಾಂಸ್ಕೃತಿಕ -ಸಾಹಿತ್ಯಿಕ-ಶೈಕ್ಷಣಿಕ ವಿಷಯಂಗಳ ಬಗ್ಗೆ ನಮ್ಮ ಮನಸ್ಸಿನ ಪ್ರಶ್ನೆಗೊಕ್ಕೆ ಉತ್ತರ ಕಂಡುಗೊಂಬಲಕ್ಕಾಡ.
ಈ ಬಗ್ಗೆ ಒಂದು ಮಾಹಿತಿ ವಿಶ್ವಮಾವ° ಕಳುಗಿ ಕೊಟ್ಟದು ಇಲ್ಲಿದ್ದು.
ನಿಂಗೊಗೆ ಸಂಶಯಂಗ ಇದ್ದರೆ ಮಾತಾಡ್ಲೆ ಅವರ ಪೋನ್ನಂಬ್ರ ಕೊಟ್ಟಿದವು. ಉಂಡೆಮನೆ ವಿಶ್ವಮಾವ° – 9449282939

ಆ ದಿನ ಬಪ್ಪಲೆಡಿಯದ್ರೆ ಪ್ರಶ್ನೆಗಳ info@oppanna.org ಗೆ ಕಳುಸಿರೂ ಆವುತ್ತು.

ಪಟ ಸಹಕಾರಃ ಶ್ರೀಪರಿವಾರದ ಗೌತಮಣ್ಣ

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ತುಂಬಾ ಲಾಯಿಕದ ಶುಧ್ಧಿ. ಎಲ್ಲೋರಿಂಗೂ ಎಲ್ಲವೂ ಒಳಿತಾಗಲಿ.
  ಹರೇ ರಾಮ…

  [Reply]

  VA:F [1.9.22_1171]
  Rating: 0 (from 0 votes)
 2. ಮಾಲಕ್ಕ°

  ಹರೇ ರಾಮ,

  ಶ್ರೀ ಗುರುಗಳ ಅನುಗ್ರಹಂದ ನಮ್ಮ ಯುವ ಪೀಳಿಗೆ, ನಮ್ಮ ಸಂಸ್ಕಾರ, ಸಂಸ್ಕೃತಿಯ ಒಳಿಶಿಗೊಂಡು ಬರಲಿ ಹೇಳಿ ಮನದುಂಬಿ ಹಾರೈಸುತ್ತೆ.

  [Reply]

  VN:F [1.9.22_1171]
  Rating: +1 (from 1 vote)
 3. ಮಾಯಾ ಅತ್ರಿಜಾಲು

  thumbaa chandake bareddi,,

  oppakkandra samaavesha thumbaa chendake ayidu,
  sumaaru oppakkandru seriddavu

  prashnego kelidavu,,

  hange

  oppannangalannu sersuthavada,,

  thumbaa ollede ,,

  idu varushakke ondari appadallada?

  hechu sarthi madire,,

  athava allalli maadire ,, henge?

  mathe ella seriyondu ondari doddake samaaveshaali maadire

  olledallada,,,,,

  [Reply]

  VA:F [1.9.22_1171]
  Rating: 0 (from 0 votes)
 4. Aravinda Bhat

  Oppanna baraddu oppa aaidu… aanu bareulidde. Eega bangaloreinda herate:) somovara Shabarimalege hovtaidde. Haange indu uringe. Bandadarli Oppanna samavesha da sadupayogavde madillekku.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಒಪ್ಪ ಶುದ್ದಿ. ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು. ಮಾಣಿಲಿ ಮೀಟುವ ವೀಣೆಯ ದನಿ ಮಾಣಿಂಗೊಕ್ಕೆ ಜೀವನ ಪೂರ್ತಿ ಅನುರಣಿಸಿ,ದಾರಿ ತೋರುವ ಹಾಂಗೆ ಆಗಲಿ.

  [Reply]

  VA:F [1.9.22_1171]
  Rating: +1 (from 1 vote)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಬದಲಾವ್ತ ಕಾಲಘಟ್ಟಲ್ಲಿ, ಮಾಣಿಯಂಗೊಕ್ಕೆ, ಜವ್ವನಿಗರಿಂಗೆ ಶ್ರೀ ಗುರುಗಳ ಮಾರ್ಗದರ್ಶನ ಸಿಕ್ಕುವದು ಅತ್ಯಂತ ಸಂತೋಷದ ಸಂಗತಿ.
  ಇಂದಿನ ಮಕ್ಕಳೆ ಮುಂದಿನ ಜನಾಂಗ ಹೇಳಿ ಭಾಷಣಲ್ಲಿ ಹೇಳುವವು ಅದೆಷ್ಟೋ ಜೆನಂಗೊ, ಆದರೆ ಆ ಜನಾಂಗಕ್ಕೆ ಸರಿಯಾದ ದಾರಿ ತೋರಿಸಿ ಕೈ ಹಿಡುದು ನಡೆಶುವ ಗುರುಗೊ ನವಗೆ ಸಿಕ್ಕಿದ್ದು ನಮ್ಮ ಸೌಭಾಗ್ಯವೇ ಸರಿ.
  ಒಂದೊಪ್ಪಲ್ಲಿ ಹೇಳಿದ ಹಾಂಗೆ ನಮ್ಮತನವ ಒಪ್ಪಿ, ಒಳುಶಿ ಬೆಳೆಶುವ ಸಮಾಜ ನಿರ್ಮಾಣ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವದೇವಸ್ಯ ಮಾಣಿಮಾಷ್ಟ್ರುಮಾವ°ವೇಣಿಯಕ್ಕ°ಶೇಡಿಗುಮ್ಮೆ ಪುಳ್ಳಿಚೆನ್ನೈ ಬಾವ°ಡಾಮಹೇಶಣ್ಣಶಾಂತತ್ತೆಜಯಶ್ರೀ ನೀರಮೂಲೆವಿದ್ವಾನಣ್ಣಅಜ್ಜಕಾನ ಭಾವರಾಜಣ್ಣಅನುಶ್ರೀ ಬಂಡಾಡಿvreddhiಬಂಡಾಡಿ ಅಜ್ಜಿಸುವರ್ಣಿನೀ ಕೊಣಲೆಬಟ್ಟಮಾವ°ನೆಗೆಗಾರ°ಸಂಪಾದಕ°ಸರ್ಪಮಲೆ ಮಾವ°ಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಶಾ...ರೀಪುತ್ತೂರುಬಾವಕೇಜಿಮಾವ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ