ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..!

June 16, 2017 ರ 12:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಅರ್ತ್ಯಡ್ಕಲ್ಲಿ ತ್ರಿಕಾಲಪೂಜೆ ಕಳಾತು ಅಲ್ದೋ, ಅಲ್ಲಿ ತಂಟ್ಯ ಮಾವ° ಸಿಕ್ಕಿ ಮಾತಾಡಿದವು.
ಅವು ಮಾತಾಡಿರೆ ಕುಶಾಲು, ನೆಗೆ, ಗಾತಿ ಎಲ್ಲವುದೇ ಬೆರಕ್ಕೆ ಆಗಿಂಡೇ ಇಪ್ಪದು; ಅವರತ್ರೆ ಮಾತಾಡ್ಸು ಹೇದರೆ ಅದುವೇ ಒಂದು ಕೊಶಿಯ ನಮುನೆ!
ಹಾಂಗೆ, ಅರ್ತ್ಯಡ್ಕಲ್ಲಿಯೂ ಹಾಂಗೇ ಆತು. ಪ್ರಸಾದ ಭೋಜನಕ್ಕೆ ಒಟ್ಟಿಂಗೇ ಕೂದಲ್ಲಿಯೂ ಒಳ್ಳೆ ಪಂಚಾತಿಗೆ.
~
ನಾಳೆ ತಂಟ್ಯ ಮಾವನ ಮನೆಲಿ ಗವುಜಿ ಆಡ. ಅದೆಂತಾ?
ತಂಟ್ಯ ಭಾವನ ಹುಟ್ಟಿದ ದಿನ ಆಡ.

ಎಲ್ಲರದ್ದೂ ಒಂದೊಂದರಿ ಜನ್ಮದಿನ ಬಂದೇ ಬತ್ತು. ಅದರ್ಲಿ ಎಂತ ವಿಶೇಷ ಕೇಳಿದಿರೋ?
ವಿಶೇಷವೇ. ಜನ್ಮದಿನದ ಆಚರಣೆಯೇ ವಿಶೇಷ. ಅದೇ ತಂಟ್ಯ ಮಾವ° ಹೇಳಿದ ಶುದ್ದಿ.
~
ತಂಟ್ಯ ಮಾವಂಗೆ ಮರಂಗೊ ಹೇದರೆ ತುಂಬಾ ಪ್ರೀತಿ. ಪ್ರೀತಿ ಹೇದರೆ – ಇಬ್ರಾಯಿಯ ನಮುನೆ ಪ್ರೀತಿ ಅಲ್ಲ; ಇಬ್ರಾಯಿಗೆ ಮರವ ಕಡುದು ಮಾರುದು ಇಷ್ಟ, ತಂಟ್ಯ ಮಾವಂಗೆ ಕಡಿಯದ್ದೆ ಒಳಿಶುವ ಇಷ್ಟ.
ಈ ಪ್ರೀತಿಂದಾಗಿಯೇ ಅವರ ಜಾಗೆಲಿ ಧಾರಾಳ ಮರಂಗೊ.
ಹತ್ತೈವತ್ತು ಕಾಟುಮಾವಿನ ಮರಂಗಳ ಕಡಿಯದ್ದೆ ಮಡಗಿದ್ದವು ತಂಟ್ಯ ಮಾವ°. ಹಾಂಗಾಗಿ ಪ್ರತಿ ಒರಿಶವೂ ಮಾವಿನ ಮೆಡಿಗೆ, ಮಾಂಬುಳಕ್ಕೆ ತತ್ವಾರ ಇಲ್ಲೆ. ಬಗೆಬಗೆಯ ಹಲಸಿನ ಮರಂಗೊ ಇದ್ದು, ಹೊರಿವದು, ತಾಳಿಂದು, ಉಪ್ಪಿನ ಸೊಳೆದು, ತಿಂಬದು, ತುಳುವ° – ಹೀಂಗೆ ಹಲವಾರು.
ಪ್ರತಿಯೊಂದು ಮರಕ್ಕೂ ಅದರದರ ವೈಶಿಷ್ಟ್ಯ, ಅಷ್ಟು ಮಾಂತ್ರ ಅಲ್ಲ, ಅದೆಲ್ಲ ಗುರ್ತವೂ ಮಡಿಕ್ಕೊಂಡಿದವು ತಂಟ್ಯ ಮಾವ°.

ಒಂದೊಂದರಿ ಹೇಳ್ತವು – ಈ ಮರಂಗಳ ಇಬ್ರಾಯಿಗೆ ಕೊಟ್ಟು ಅಲ್ಲಿ ಅಡಕ್ಕೆ ಹಾಕಲಕ್ಕನ್ನೇ ಭಾವಾ -ಹೇದು ಹಲವಾರು ಜೆನಂಗೊ ಸಲಹೆ ಕೊಟ್ಟಿದವು; ಆದರೆ ಅದರಿಂದ ಹೆಚ್ಚಿನ ಪ್ರೀತಿ ನವಗೆ ಮರಲ್ಲೇ ಇದ್ದು. ಇದು ಕಾಟು ಮರಂಗೊ ಅಲ್ಲ, ನಮ್ಮ ಜಾಗೆಯ ಲಕ್ಷಣ! – ಹೇಳ್ತವು.
~
ಹಾಂಗಾಗಿಯೇ ಈ ಒರಿಶದ ಜನ್ಮದಿನದ ಆಚರಣೆಯೂ ವಿಶೇಷ ಆದ್ಸು. ಅದೆಂತರ?
ತಂಟ್ಯ ಬಾವನ ಈ ಒರಿಶದ ಜನ್ಮದಿನವ ಸೆಸಿ ನೆಡುವ ಮೂಲಕ ಆಚರಣೆ ಮಾಡ್ತವಡ.
ಅವರ ಮನೆ ಇಪ್ಪದು ಅವರ ಜಾಗೆ ಮಧ್ಯಲ್ಲಿ.
ಅವರ ಜಾಗೆ ಇಪ್ಪದು ದೊಡ್ಡ ಮಾರ್ಗಂದ ಒಂದು ಮೈಲು ದೂರಕ್ಕೆ.

ದೊಡ್ಡ ಮಾರ್ಗಂದ ಅವರ ಮನೆ ಒರೆಂಗೂ – ಅವರ ಮನೆಗೆ ಹೋವುತ್ತ ಮಾರ್ಗದ ಕರೆಲಿ ಇಡೀಕ ಈ ಸರ್ತಿ ಸೆಸಿ ನೆಡ್ತವಾಡ.
ಎಂತೆಲ್ಲ ಸೆಸಿಗೊ? ಹಲಸು, ಮಾವು, ಸಾಗುವಾನಿ ಇತ್ಯಾದಿ.
ಎಷ್ಟೂ ಸೆಸಿ? – ಕನಿಷ್ಟ ಒಂದು ಸಾವಿರ!!

ಅದಲ್ಲದ್ದೇ – ಮನೆಲಿ ಈ ಒರಿಶ ಸಿಕ್ಕಿಅ ಮಾವಿನ ಗೊರಟು, ಹಲಸಿನ ಬೇಳೆ – ಇತ್ಯಾದಿಗಳನ್ನೂ ಬಿಕ್ಕಿ, ಮುಂದೆ ಅದುದೇ ಸೆಸಿ ಆಗಿ ಮರ ಅಪ್ಪ ನಿರೀಕ್ಷೆಲಿ ಇದ್ದವು ತಂಟ್ಯ ಮಾವ°.
~
ಮಳೆ ಒಳಿಯೆಕ್ಕಾರೆ ಮರ ಒಳಿಯೆಕ್ಕು;
ಮರ ಒಳಿಯೆಕ್ಕಾರೆ ಮಳೆ ಒಳಿಯೆಕ್ಕು – ಅಲ್ದೋ ಒಪ್ಪಣ್ಣಾ – ಕೇಳಿದವು.
ಅಪ್ಪನ್ನೇ ಕಂಡತ್ತು.

~
ತುಂಬಾ ಕೊಶಿ ಆತು ಒಪ್ಪಣ್ಣಂಗೆ ಈ ಶುದ್ದಿ ಕೇಳಿ.
ತಂಟ್ಯ ಮಾವನ ಹತ್ರೆ ಮಾತಾಡಿ ಅರ್ತ್ಯಡ್ಕಂದ ಹೆರಡುವಗ, ಸಾಸಮೆಗೆ ಬಳುಸಿದ ಗೊರಟನ್ನೂ ಇಡ್ಕಲೆ ಮನಸ್ಸಾಯಿದಿಲ್ಲೆ; ಹಿಡ್ಕೊಂಡು ಬಂದು ಬಿತ್ತು ಹಾಕುವನೋ ಕಂಡತ್ತು. ಬೇಡ, ಹೇಂಗಾರೂ ಅರ್ತ್ಯಡ್ಕಲ್ಲೇ ಅದು ಮರ ಆವುತ್ತನ್ನೇ – ಹೇದು ಸಮಾದಾನ ಮಾಡಿಗೊಂಡೆ.
~
ತಂಟ್ಯ ಮಾವನ ಆಲೋಚನೆ ನವಗೆಲ್ಲರಿಂಗೂ ಬರಳಿ. ಜನ್ಮ ದಿನದಂದು ಸೆಸಿ ನೆಡುವೊ°.
ಸಾವಿರ ಸೆಸಿ ನೆಟ್ರಿ ತುಂಬಾ ವಿಶೇಷ. ಕನಿಷ್ಠ ಒಂದಾದರೂ ನೆಡುವೊ°.
ಪ್ರತಿ ಒರಿಶ ನೆಟ್ಟ ಮರ ‘ಇದು ಇಂತಿಷ್ಟನೇ ಬರ್ತುಡೇ ದಿನ ನೆಟ್ಟದು’ – ಹೇದು ಗುರ್ತ ಹೇಳುವ ಹೆಮ್ಮೆ;
ಹತ್ತರುವತ್ತು ಒರಿಶ ಅಪ್ಪಗ ನಮ್ಮದೇ ಜನ್ಮದಿನದ ಕಾಡಿನ ಕಾಂಬ ಹೆಮ್ಮೆ – ಎಷ್ಟು ಚೆಂದ ಅಲ್ಲದೋ – ಹೇದು ಕಂಡತ್ತು.

ತಿಮ್ಮಕ್ಕ ಮಾಂತ್ರ ಅಲ್ಲ, ನಾವೆಲ್ಲೋರುದೇ ಸಾಲುಮರವ ನೆಡುವ°.
ಅಲ್ಲದೋ?
~
ಒಂದೊಪ್ಪ: ಮರ ಒಳಿಶಿ, ಮಳೆ ಬೆಳೆಶುವ°, ಸಾವಿರ ಸೆಸಿ ಬೆಳೆಶಿ ಸಾವಿಲ್ಲದ್ದ ಹಾಂಗೆ ನೋಡಿಗೊಂಬ°..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ವಿಜಯತ್ತೆ

  ನಮ್ಮ ಶ್ರೀ ಸಂಸ್ಥಾನ ಅಂದಿಂದಲೇ ಹೇಳ್ತವಲ್ಲೋ ಒಪ್ಪಣ್ಣ!. “ನಿಮ್ಮ ನಿಮ್ಮ ಜನ್ಮ ದಿನಕ್ಕೆ ಒಂದೊಂದು ಗಿಡ ನೆಡಿ” ಹೇಳಿ ಮುಜುಂಗಾವು ಶಾಲಗೆ ಅಂದೆಲ್ಲ ವರ್ಷಲ್ಲಿ ಎರಡು ಸರ್ತಿ ಬಕ್ಕು. ಅಂಬಾಗೆಲ್ಲ ಹೇಳುದು ಆನು ಕೇಳಿದ್ದೆ. ಈಗ ಶ್ರೀ ಗುರುಗಳ ವರ್ತುಲ ವಿಸ್ತಾರ ಆದಕಾರಣ ಪೂರೈಸುತ್ತಿಲ್ಲೆ.

  [Reply]

  VN:F [1.9.22_1171]
  Rating: 0 (from 0 votes)
 2. ಅರ್ತ್ಯಡ್ಕಲ್ಲಿ ಮದಲು ಭರ್ಜರಿ ತ್ರಿಕಾಲ ಪೂಜೆ ಆಗಿಗೊಂಡು ಇದ್ದತ್ತು. ಆನು ಅರ್ತಿಕಜೆ ವೆಂಕಟ್ರಮಣ ಭಾವನೊಟ್ಟಿಂಗೆ ಹೋಯಿದೆ. ಅಲ್ಲಿ ಹರಿಯಪ್ಪ ಅಜ್ಜ ನ ನೋಡಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಲೇಖನ. ಇಂದು ಸುಮಾರು ದಿನ ಆತು ಒಪ್ಪಣ್ಣ ಬಯಲು ನೋಡದ್ದೆ. ಎಲ್ಲಾ ಓದಿದೆ. ಖುಷಿ ಆತು.

  [Reply]

  ವಿಜಯತ್ತೆ

  ವಿಜಯತ್ತೆ Reply:

  ಖುಷಿ ಆದ್ದು ಗೊಂತಾವುತ್ತು . ಇಂದೆಲ್ಲದಲ್ಲೂ ನಮ್ಮ ಸೇಡಿಯಮ್ಮೆ ಗೋಪಾಲಕೃಷ್ಣ ತುಂಬಿಬಂದು ಎನಗೂ ಖುಷಿ ಆತು .

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಗೋಪಾಲ

  ಒಳ್ಳೆ ಶುದ್ದಿ ಒಪ್ಪಣ್ಣಾ. ವನ ಮಹೋತ್ಸವ ಹೇಳಿ ಫೊಟೋ ತೆಗಶಿಕ್ಕಿ ಪೇಪರಿಲ್ಲಿ ಹಾಕಿ ಮತ್ತೆ ಒಣ ಮಹೋತ್ಸವ ಹೇಳಿಯೇ ಹೆಚ್ಚಾಗಿ ಅಪ್ಪದು.
  ಹೈವೇ ಕರೆಲಿ ಇದ್ದಿದ್ದ ಒಳ್ಳೊಳ್ಳೆ ಮರಂಗಳ ಕಡುದವು ಮತ್ತೆ ನೆಟ್ಟು ಬೆಳಸುತ್ತರ ಕಾಂಬಲೇ ಸಿಕ್ಕುತ್ತಿಲ್ಲೆ. ತಂಟ್ಯ ಮಾವನ ಆಲೋಚನೆ ಎಲ್ಲೋರಿಂಗೂ ಬಂದರೆ ಹಸಿರು ಒಳಿಗು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣವಸಂತರಾಜ್ ಹಳೆಮನೆತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವಬೋಸ ಬಾವಅನುಶ್ರೀ ಬಂಡಾಡಿಬಟ್ಟಮಾವ°ಮಾಷ್ಟ್ರುಮಾವ°ದೇವಸ್ಯ ಮಾಣಿದೊಡ್ಮನೆ ಭಾವರಾಜಣ್ಣಅಕ್ಷರ°ಪವನಜಮಾವಸಂಪಾದಕ°vreddhiಶೀಲಾಲಕ್ಷ್ಮೀ ಕಾಸರಗೋಡುಶಾಂತತ್ತೆಶ್ರೀಅಕ್ಕ°ಹಳೆಮನೆ ಅಣ್ಣಡಾಮಹೇಶಣ್ಣದೊಡ್ಡಮಾವ°ಬಂಡಾಡಿ ಅಜ್ಜಿಯೇನಂಕೂಡ್ಳು ಅಣ್ಣವಿದ್ವಾನಣ್ಣಚೆನ್ನಬೆಟ್ಟಣ್ಣಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ