Oppanna.com

ಮಡುವಿಂಗೆ ಮರದರೂ ಮರಕ್ಕೆ ಮರೆಯ…

ಬರದೋರು :   ಒಪ್ಪಣ್ಣ    on   07/01/2017    3 ಒಪ್ಪಂಗೊ

ಶಂಬಜ್ಜನ ಕಾಲದ ಪಳಮ್ಮೆಗಳ ಶುದ್ದಿ ಮೊದಲು ಮಾತಾಡಿದ್ದು ನಾವು ಬೈಲಿಲಿ. ಈಗ ಸದ್ಯ ಆ ಶುದ್ದಿ ಬಾರದ್ದೆ ರೆಜ ಸಮೆಯ ಆತಪ್ಪೋ. ಬೇರೆಬೇರೆ ನಮುನೆಯ ಶುದ್ದಿಗಳ ಮಾತಾಡುವಾಗ ಇದರ ಮಾತಾಡ್ಳೆ ಎಡೆ ಆವುತ್ತಿಲ್ಲೆ ಇದಾ.
~
ಮೊನ್ನೆ ಆಚಕರೆ ತರವಾಡುಮನೆಗೆ ಹೋಗಿತ್ತಿದ್ದೆ. ಅಪುರೂಪಕ್ಕೆ ರಂಗಮಾವನ ಹತ್ರೆ ಶುದ್ದಿ ಮಾತಾಡಿದ ಹಾಂಗೂ ಆತು, ಪಾತಿಅತ್ತೆ ಮಾಡಿದ ಉಂಡ್ಳಕಾಳು ತಿಂದಾಂಗೂ ಆತು – ಹೇದು ಒಪ್ಪಣ್ಣ ಲೆಕ್ಕ ಹಾಕಿ ಹೋದ್ಸು.
ಹೋದ್ಸಕ್ಕೆ ನಷ್ಟ ಆಯಿದಿಲ್ಲೆ. ಶುದ್ದಿಯೂ ಸಿಕ್ಕಿತ್ತು, ಉಂಡ್ಳಕಾಳೂ.
~
ಚಾಯ, ಉಂಡ್ಳಕಾಳು, ಹಳೆಕಾಲದ ಶುದ್ದಿಗೊ – ಎಲ್ಲ ಒಳ್ಳೆ ಚೇರ್ಚೆ. ಪಟ್ಟಾಂಗ ಮಾತಾಡಿಗೊಂಡು ಇಪ್ಪಾಗಳೇ ಅದಾ – ಬೆಳುಲು ಮೂಸೆ ಬಂದ್ಸು ಜಾಲಿಂಗೆ. ರಂಗಮಾವಂಗೆ ಕಂಡಪ್ಪದ್ದೇ – ಎಂದ ಮೂಸೇ – ಹೇದು ಒಂದರಿ ಏನು ಕೇಳಿದವು. ಮತ್ತೆ ಒಪ್ಪಣ್ಣನ ಹತ್ರೆ ಮಾತಾಡಿಗೊಂಡೇ ಇತ್ತಿದ್ದವು. ಸಾಮಾನ್ಯವಾಗಿ ರಂಗಮಾವ ಆತಿಥ್ಯಲ್ಲಿ ಬಲ. ಆದರೂ ಬೆಳುಲು ಮೂಸೆ ಎಷ್ಟು ಸರ್ತಿ ಮೂಸಿ ನೆಗೆ ಮಾಡಿರೂ – ಕೂದಲ್ಲಿಂದಲೇ ಮಾತಾಡ್ಸುದಷ್ಟೇ ವಿನಃ ವಿಶೇಷ ಆಸಕ್ತಿ ತೋರ್ಸಿದ್ದವಿಲ್ಲೆ.

ರಜ ಹೊತ್ತು ಕಾದಿಕ್ಕಿ ಮೂಸೆ ಒಯಿವಾಟು ಮಾತಾಡ್ಳೆ ಸುರು ಮಾಡಿತ್ತು.
ಹಾಂಗಾರೆ, ಈ ಸರ್ತಿ ಎಷ್ಟು ಕಂತೆ ಬೆಳುಲು ಹಾಕಲೀ – ಹೇದು ರಾಗ ಎಳದತ್ತು. ರಂಗಮಾವ ಖಡಾಖಂಡಿತ – ಈ ಸರ್ತಿ ಬೇಪಲೇ ಬೇಡ – ಹೇಲಿಕ್ಕಿ, ಒಂದು ಗ್ಲಾಸು ಮಜ್ಜಿಗೆ ನೀರು ಕೊಟ್ಟಿಕ್ಕಿ ಕಳುಸಿದವು.
ಅದು ಹೆರಟ ಮತ್ತೆ ಒಪ್ಪಣ್ಣನ ಹತ್ರೆ ಹೇಳಿದವು – ಮಡುವಿಂಗೆ ಮರದರೂ ಮರಕ್ಕೆ ಮರಗೋ ಒಪ್ಪಣ್ಣಾ… – ಹೇದು.
ಒಪ್ಪಣ್ಣಂಗೆ ಆ ಹಿನ್ನೆಲೆಯೂ ಅರಡಿಯ, ಪಳಮ್ಮೆಯೂ ಹೊಸತ್ತು.
ಎಂತಪ್ಪಾ – ಹೇಳುವಾಂಗೆ ಮೋರೆ ಮಾಡಿ ಕೂದೆ.
~
ಈ ಮೂಸೆ ಎರಡೊರಿಶ ಆತಾಡ, ರಂಗಮಾವನ ಹತ್ರೆ ಒಯಿವಾಟಿಂಗೆ ನೋಡಿ, ಮೋಸ ಮಾಡುದು.
ದೂರದೂರಿಂದ ಬೆಳುಲು ತಂದು, ಅದರ ಬೈಲಿಲಿ ಮಾರುವ ಕಾರಣ ಅದರ ಬೆಳುಲು ಮೂಸೆ ಹೇಳಿಯೂ ಹೇಳ್ತವು. ಆಚೊರಿಶ ಕಳುದೊರಿಶ ಇದು ಬಂದು ಒರೆಂಜಿದ್ದಕ್ಕೆ – ಅಕ್ಕಂಬಗ, ಐನ್ನೂರು ಕಂತೆ ಇರಳಿ – ಹೇದವಡ. ಸುರುವಾಣ ಒರಿಶ ಪೈಶೆ ತೆಕ್ಕೊಂದು ಹೋಗಿ, ಬೆಳುಲು ಬಾರದ್ದೇ ಬಾರದ್ದೇ, ಕಾದು ಕಾದು ಸಾಕಾಯಿದು. ಪಾತಿ ಅತ್ತೆ ’ಹಟ್ಟಿ ಅಟ್ಟಲ್ಲಿ ಬೆಳುಲು ಕಾಲಿ ಆಗಿಂಡು ಬಂತೂ…’ – ಹೇದು ಅಂಬಗಂಬಗ ಎಚ್ಚರಿಗೆ ಬೇರೆ! ಮತ್ತೆ ಆ ಮೂಸೆಯ ಪ್ರಾಣ ತಿಂದ ಕಾರಣ ಎಲ್ಲಿಗೂ ಬೇಡದ್ದ ಚಾಕು ಕುಂಬಟೆ ಬೆಳುಲು ತಂದು ಹಾಕಿದ್ದತ್ತು.
ಪೈಶೆ ತಿಂದರೆ ಹಾಳಾಗಿ ಹೋಗಲಿ ತೊಂದರೆ ಇಲ್ಲೆ, ಆದರೆ ದನಗೊಕ್ಕೆ ಎಂತಕೆ ಅನ್ಯಾಯ ಮಾಡುದು – ಹೇದು ಪಾತಿಅತ್ತೆಯ ವಾದ.
ತಪ್ಪಾತು ಸಾಮಿ, ಈ ಒರಿಶ ಸಮ ಅಕ್ಕು – ಹೇದು ಮತ್ತಾಣ ಒರಿಶ ಪುನಾ ಬಂದು ಕೇಳಿದ್ದಕ್ಕೆ – ಆತಂಬಗ ಹೇದು ಮನಸು ಕರಗಿ ಪುನಾ ಕೊಟ್ಟವು ಪೈಶೆ.
ಶಾಂಬಾವ ಅಷ್ಟಪ್ಪಗಳೇ ಹೇಳಿದ್ದ – ಎನಗೇಕೋ ನಂಬಿಕೆ ಇಲ್ಲೆ ಅಪ್ಪಾ – ಹೇದು. ಅಂದರೂ ಇರಳಿ ಹೇದು ಕೊಟ್ಟವು.
ಆದರೆ, ಮಾಡಿದ್ದೆಂತ್ಸು!?
ಗಟ್ಟ ಇಳಿವಗ ಲೋರಿ ಹೊತ್ತಿದ್ದು, ಹಾಂಗಾಗಿ ಬೆಳುಲು ಪೂರ ಹೊತ್ತಿ ಹೋಯಿದು – ಹೇದು ನಂಬುಸಿ ಐನ್ನೂರು ಹೇಳಿದೋರಿಂಗೆ ನೂರು ಕಂತೆ ಕೊಟ್ಟತ್ತು.
ಐನೂರರ ಪೈಶೆ ತೆಕ್ಕೊಂದು ನೂರೇ ಕೊಟ್ಟದು ಹೇದು ರಂಗಮಾವನ ಚಿಂತೆ ಆದರೆ, ನೂರಾದರೆ ನೂರು – ಬೆಳುಲು ಒಪ್ಪ ಇದ್ದು – ಹೇದು ಪಾತಿ ಅತ್ತೆ ಸಂತೋಷಪಟ್ಟವು. ಅದಿರಳಿ.
~
ಹಾಂಗೆ, ಈ ಸರ್ತಿ ಪುನಾ ಬಂದು ಬೆಳುಲು ತರುಸುತ್ತೆ ಹೇದರೆ ಆರಾರು ಕೇಳುಗೋ?
ರಂಗಮಾವ ಕಡ್ಡಿ ತುಂಡಾದ ಹಾಂಗೆ ಹೇಳಿಯೇ ಬಿಟ್ಟವು- ಆವುತ್ತಿಲ್ಲೇ’ದು.

ಅಂಬಗಳೇ ರಂಗಮಾವಂಗೆ ಬಂದ ಉದ್ಗಾರ – ಮಡುವಿಂಗೆ ಮರದರೂ ಮರಕ್ಕೆ ಮರಗೋ – ಹೇದು.
ಇಲ್ಲಿ ಮಡು ಹೇದರೆ ಗಾಯ ಮಾಡಿದ ವ್ಯಕ್ತಿ; ಮರ ಹೇದರೆ ಪೆಟ್ಟು ತಿಂದ ಜೆನ.
ಹಾನಿ ಮಾಡಿದ ಜೆನಕ್ಕೆ ಮರವಲೂ ಸಾಕು; ತನ್ನ ಸ್ವಾರ್ಥಕ್ಕಾಗಿ ಆರಿಂಗಾರು ತೊಂದರೆ ಕೊಟ್ಟಿಪ್ಪಲೂ ಸಾಕು, ಕೆಲಸ ಮುಗುದ ಕೂಡ್ಳೆ ತಾನು ತೊಂದರೆ ಕೊಟ್ಟದು ಮರೆತ್ತು.
ಆದರೆ, ಪೆಟ್ಟು ತಿಂದ ಜೆನ, ಬೇನೆ ತಿಂದ ಜೆನಕ್ಕೆ ಮರೆತ್ತೋ? ಇಲ್ಲೆ. ಆ ಜೆನ ಇಂತಾ ಬೇನೆ ಮಾಡಿದ್ದ – ಹೇದು ಅಖೇರಿ ಒರೆಂಗೂ ನೆಂಪಿರ್ತು.
ಅನ್ಯಾಯ ಮಾಡಿದವಂಗೆ ಬೇಗ ಮರಗು, ಆದರೆ ಅನ್ಯಾಯ ಆದೋನಿಂಗೆ ಅದರ ಬೇಗ ಮರವಲೆಡಿಯ – ಹೇಳುದಕ್ಕೆ ನಮ್ಮ ಅಜ್ಜಂದ್ರ ಕಾಲದ ಒಂದು ಒಪ್ಪ ಪಳಮ್ಮೆ ಇದು.
~
ರಂಗಮಾವನ ಮಾತಿಲಿ ಬಂದು, ಒಪ್ಪಣ್ಣಂಗೆ ಕೇಳಿದ ಕಾರಣ ಬೈಲಿಂಗೆ ಮಾತಾಡ್ಳೆ ಒಂದು ಶುದ್ದಿ ಆತಿದಾ.
~
ಒಂದೊಪ್ಪ: ಮರಂಗೊ ನಾವಾಯೆಕ್ಕು; ಆದರೆ ಮಡುಗಳ ಬಾಯಿ ಮಡುಸಿ ಬಿಡೆಕ್ಕು.

3 thoughts on “ಮಡುವಿಂಗೆ ಮರದರೂ ಮರಕ್ಕೆ ಮರೆಯ…

  1. ಒಪ್ಪಣ್ಣನ ಮೂಲಕ ರಂಗಮಾವನ ಪಳಮ್ಮೆ ಕೇಳಿ ಕೊಶಿಯಾತು. ಬೇನೆ ಮಾಡಿದವಂಗೆ ಮರದು ಹೋದರೂ ಬೇನೆ ಆದವಂಗೆ ಮರೆಯ. ಸರಿಯಾದ ಮಾತು. ಸಾಲ ತೆಕ್ಕೊಂಡವಂಗೆ ಮರದರೂ ಸಾಲ ಕೊಟ್ಟವಂಗೆ ಮರೆಯ ಎಂತ ಹೇಳ್ತಿ ?

  2. ಒಪ್ಪಣ್ಣನ ಈ ಶುದ್ದಿಲಿ ಏನ ಉಂಡ್ಲಕಾಳು , ಚಾಯ, ಚರ್ಚೆ,ಓದಿಯಪ್ಪಗ ಈ ಚಳಿ ಸಮೆಲಿ, ಉಂಡ್ಲಕಾಳು ತಿಂದು ಚಾಯ ಕುಡಿಯೆಕು ಹೇಳ್ತ ಇರಾದೆ ಒಟ್ಟಿಂಗೆ ಒಂದು ನುಡಿಗಟ್ಟು (ಪಳಮ್ಮೆ) ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×