Oppanna.com

ಪುಣ್ಯಕೋಟಿ ಸಮಾನ ಮಠಂದ ಕೋಟಿ ಕೋಟಿ ಲೂಟಿಯ ಸಂಚು..!!

ಬರದೋರು :   ಒಪ್ಪಣ್ಣ    on   04/04/2014    6 ಒಪ್ಪಂಗೊ

ಪಾರುಅತ್ತೆಗೆ ಉಪ್ಪಿನಕಾಯಿ ಹಾಕಿ ಆಯಿದಿಲ್ಲೆ, ಮುಳಿಯಭಾವಂಗೆ ಉಪ್ನಾನಕ್ಕೆ ವೆವಸ್ತೆಮಾಡಿ ಆಯಿದಿಲ್ಲೆ, ಗುಣಾಜೆಮಾಣಿಗೆ ಓಟುಹಾಕಿ ಆಯಿದಿಲ್ಲೆ, ಶಾಂಬಾವಂಗೆ ಅಡಕ್ಕೆಸೊಲುಶಿ ಆಯಿದಿಲ್ಲೆ, ಕುಂಟಾಂಗಿಲ ಭಾವಂಗೆ ತೆಂಗಿನೆಣ್ಣೆಮಾಡ್ಸಿ ಆಯಿದಿಲ್ಲೆ.
ಇದರೆಡಕ್ಕಿಲಿ ನವಗೆ, ಬೈಲಿಂಗೆ ಶುದ್ದಿ ಹೇಳಿಯೂ ಆಯಿದಿಲ್ಲೆ.
ಈ ವಾರ ಯೇವ ಶುದ್ದಿ ಹೇಳುದೂ–ದು ಆಲೋಚನೆ ಮಾಡಿಂಡಿಪ್ಪಾಗಳೇ, ಶರ್ಮಪ್ಪಚ್ಚಿ ಮನ್ನೆ ಹೇಳಿದ ಸಂಗತಿ ನೆಂಪಾತು.
ಬೈಲಿಲಿ ಅದನ್ನೇ ಮಾತಾಡಿರೆ ಹೇಂಗಕ್ಕು?

~

ಶರ್ಮಪ್ಪಚ್ಚಿಯೂ, ಅದೇ ಪ್ರಾಯದ ಹತ್ತುಹಲವು ಜವ್ವನಿಗರೂ ಸೇರಿಗೊಂಡು ರುದ್ರಾಭ್ಯಾಸ ಮಾಡ್ತ ಸಂಗತಿ ನವಗೆ ಗೊಂತಿಪ್ಪದೇ.
ನೆರೆಕರೆಯ ಮನೆಗಳಲ್ಲಿ ಚಕ್ಕನಕಟ್ಟಿ ಕೋದುಗೊಂಡು ಜ್ಯೇಷ್ಠಾಯಚ-ಕನಿಷ್ಠಾಯಚ ಹೇಳಿಗೊಂಡು, ಬೆಲ್ಲನೀರು ಕುಡ್ಕೊಂಡು, ರುದ್ರ ಕಲ್ತುಗೊಂಡು ಬಂದದು ಕೊಶಿಯೇ.

ಓ ಮನ್ನೆ ಶೇಡ್ಯಮ್ಮೆ ಗೋಪಾಲಣ್ಣನ ಮನೆಯ ನೆರೆಕರೆಲಿ ಶರ್ಮಪ್ಪಚ್ಚಿಯೂ, ಒಳುದ ಜೆತೆಕ್ಕಾರಂಗಳೂ ಸೇರಿ ರುದ್ರ ಹೇಳಿಗೊಂಡವಾಡ.
ಆ ದಿನದ ಪಾಠವ ಮುಕುಂದಭಟ್ರ ಕೈಲಿ ಒಪ್ಪುಸಿ, ಅವರವರ ಮನೆಗೆ ಹೆರಾಡೇಕು – ಹೇದು ಗ್ರೇಶುವಾಗಳೇ, ಬೆಂಗ್ಳೂರಿಂದ ಪೋನು ಬಂತಾಡ, ಶರ್ಮಪ್ಪಚ್ಚಿಗೆ.
ಅತ್ಲಾಗಿಂದ ಭಾವಯ್ಯ° ಪೋನಿಲಿ ಮಾತಾಡಿದ ವಿಷಯ ಕೇಳಿ ಶರ್ಮಪ್ಪಚ್ಚಿಗೆ ಆಶ್ಚರ್ಯವೂ, ಬೇಜಾರವೂ, ಕೋಪವೂ ಬಂತಾಡ; ಮರದಿನ ಗೇಣುಮೂಲೆಲಿ ಸಿಕ್ಕಿಪ್ಪಗ ವಿವರ್ಸಿದವು.
ಅಂಬಗ, ಅದೆಂತ ಶುದ್ದಿ ಶರ್ಮಪ್ಪಚ್ಚಿಯ ಕೆಮಿಗೆ ಬಿದ್ದದು?
ಅದೇ – ನಮ್ಮ ಮಠಕ್ಕೆ ಅಪಚಾರ ಆದ ಶುದ್ದಿ.

~

ಮಠಕ್ಕೆ ಬ್ಲೇಕುಮೇಲು ಮಾಡಿ ಪೈಶೆ ಪೀಂಕುಸುಲೆ ಹೆರಟೋರು, ಸಿಕ್ಕಿಬಿದ್ದವಾಡ – ಹೇದು ಮನ್ನೆ ರಂಗಮಾವ° ಹೇಳುವಗಳೇ ಒಪ್ಪಣ್ಣಂಗೆ ಶುದ್ದಿ ಕೆಮಿಗೆ ಬಿದ್ದಿದು.  ಆದರೆ ಶರ್ಮಪ್ಪಚ್ಚಿಗೆ ಇನ್ನೂ ಹೆಚ್ಚಿನ ವಿವರ ಗೊಂತಿಪ್ಪ ಕಾರಣ ಪುನಾ ಒಂದರಿ ಹೇಳುಸಿಗೊಂಡೆ. ಗೇಣುಮೂಲೆಗೆ ಬಂದಿದ್ದೋರು ಒಪ್ಪಣ್ಣಂಗೆ ಮಾತಾಡ್ಳೆಸಿಕ್ಕವೋ? ಸಿಕ್ಕಿದವು. ಈ ಶುದ್ದಿಯನ್ನೂ ಹೇಳಿದವು.

~

ನಮ್ಮ ಮಠಲ್ಲಿ ಶ್ರೀಗುರುಗಳ ಮಾರ್ಗದರ್ಶನಲ್ಲಿ ನೆಡೆತ್ತ ಹಲವಾರು ದತ್ತಿನಿಧಿಗೊ, ಪ್ರತಿಷ್ಠಾನಂಗೊ, ಸಂಸ್ಥೆಗೊ, ಸಂಘಂಗೊ ಇಪ್ಪದುನವಗೆ ಗೊಂತಿದ್ದನ್ನೇ? ಅವುಗಳಲ್ಲಿ ಒಂದು “ಧರ್ಮಚಕ್ರಟ್ರಷ್ಟು” – ಹೇದು. ಶ್ರೀಮಠದ ಮೂಲಸಂಸ್ಥೆ – ಹೇದರೂ ತಪ್ಪಲ್ಲ.
ದೊಡ್ಡಮಟ್ಟಿನ ಯೋಜನೆಗೊ ಈ ಸಂಸ್ಥೆಂದಾಗಿ ಆವುತ್ತು – ಹೇದು ಶರ್ಮಪ್ಪಚ್ಚಿ ವಿವರ್ಸಿದವು. ಮಠದ ಆಡಳಿತ ನಿರ್ವಹಣಾಧಿಕಾರಿಯಾಗಿಪ್ಪ ಅಧ್ಯಕ್ಷಮಾವಂಗೆ ಒಂದು ದಿನ ಇದ್ದಕ್ಕಿದ್ದ ಹಾಂಗೇ ಪೋನು ಬಂತಾಡ,  “ನಿಮ್ಮ ಮಠದಲ್ಲಿ ಹಣ ದುರುಪಯೋಗ ಆಗ್ತಾ ಉಂಟು, ಎಂಗೊ ಕೋರ್ಟಿಂಗೆ ಹೋವುತ್ತೆಯೊ. ಹೋದರೆ ನಿಂಗಳ ಗುರುಗೊ ಜೈಲಿಂಗೆ ಹೋಕು; ಹಾಂಗೆ-ಹೀಂಗೆ; ಹೋಪಲಾಗ ಹೇದು ಇದ್ದರೆ ಎಂಗೊಗೆ ಇಂತಿಷ್ಟು ಪೈಶೆ ಕೊಡೇಕು” – ಹೇದು.

ಇಂತಿಷ್ಟು – ಹೇದರೆ ಎಷ್ಟು? ಎಷ್ಟೋ ಕೋಟಿಗಟ್ಳೆ!
ಅದೇನೇ ಇರಳಿ.
ಮಠದ ಸಂಸ್ಥೆಲಿ ಎಂತರ ದುರುಪಯೋಗ ಆವುತ್ತಾ ಇಪ್ಪದು?
ಎಲ್ಲವೂ ಧರ್ಮದಾರಿಲೇ ನೆಡೆತ್ತಾ ಇದ್ದು, ಹಾಂಗಾಗಿ ನಾವು ಅನಗತ್ಯ ಹೆದರೇಕಾದ್ಸು ಎಂತೂ ಇಲ್ಲೆ – ಹೇದು ಅಧ್ಯಕ್ಷಮಾವ° ನಿಘಂಟು ಮಾಡಿ ನಿಂದವು.

ಮತ್ತೂ ಒಂದೆರಡುಸರ್ತಿ ಅದೇ ಪೋನು ಬಂತು; ಪುನಾ ಪುನಾ ಬಂತು.
ಮಠದೊಳ ಸಂಬಂಧಪಟ್ಟ ನಂಬಿಕಸ್ತ ಒಂದೆರಡು ಜೆನಕ್ಕೂ ಆ ಮಾವ° ಈ ವಿಷಯವ ಹೇಳಿದವು.
ಸಮಷ್ಟಿಯ ತೀರ್ಮಾನದಂತೆ ವಿಚಾರವ ಪೋಲೀಸು ಒರೆಂಗೂ ಎತ್ತುಸಿದವು.
ಮಠದ ಎಲ್ಲಾ ಗುಣನಡತೆಗೊ ಸರೀ ಇದ್ದುಗೊಂಡು, ಪಾರದರ್ಶಕವಾಗಿ ಇದ್ದ ಕಾರಣವೇ ಹೀಂಗಿದ್ದ ಒಂದು ಸಂಗತಿಯ ಪೋಲೀಸು ಒರೆಂಗೆ ಕೊಂಡೋಗಿ, ಸಮಾಜಕ್ಕೆ ಬಯಲು ಮಾಡ್ಳೆ ಎಡಿಗಾತು – ಹೇದು ಶರ್ಮಪ್ಪಚ್ಚಿ ಮಾತು ಒಂದರಿ ನಿಲ್ಲುಸಿದವು.

ಚಿಕ್ಕಮ್ಮನ ಪೋನು ಬಂದ ಕಾರಣ ಎಡಕ್ಕಿಲಿ ತೆಗೆಯದ್ದೆ ನಿಮುರ್ತಿ ಇಲ್ಲೆ ಇದಾ! ಬಪ್ಪಗ ಚಪ್ಪಾತಿ ಹೊಡಿತಪ್ಪಲೆ ಹೇಳಿದ್ದದೋ ತೋರ್ತು; ಹೂಂಕುಟ್ಟುದು ಕೇಳುವಾಗ ಅಂದಾಜಿ ಆದ್ಸು ಒಪ್ಪಣ್ಣಂಗೆ. 😉
ಪೋನು ಮುಗುದ ಕೂಡ್ಳೇ ಮತ್ತೆ ಸುರು ಮಾಡಿದವು.
ಅಧ್ಯಕ್ಷಮಾವ° ಪೋಲೀಸಿಂಗೆ ವಿಷಯ ಎತ್ತುಸಿದವು. ಅಲ್ಲಿಂದ ಇದ್ದಿದಾ ಹಬ್ಬ!
ಪೋಲೀಸುಗೊ ಹೇಯಿದವಾಡ – “ಅವು ಕೇಳುವಾಗ ಅಕ್ಕಕ್ಕು ಹೇಳಿ, ಮತ್ತಾಣದ್ದು ಎಂಗೊ ನೋಡಿಗೊಳ್ತೆಯೊ°” – ಹೇದು.
ಆ ಪ್ರಕಾರಲ್ಲಿ ಮತ್ತಾಣ ಸರ್ತಿ ಪೋನು ಬಂದಪ್ಪದ್ದೇ “ಅಕ್ಕಕ್ಕು, ಎಲ್ಲಿಗೆ ಎತ್ತುಸೇಕು? ಎಷ್ಟು ಕೊಡೇಕು” – ಕೇಳಿದವು ಆ ಮಾವ°; ಎಂತ್ಸೂ ಅರಾಡಿಯದ್ದೋರ ಹಾಂಗೆ!
ಇಂತಿಷ್ಟು ಕೋಟಿ ಸಿಕ್ಕೇಕು; ಆ ಬಾಬ್ತು ಸುರೂವಾಣ ಕಂತು ಇಂತಿಷ್ಟು ಲಕ್ಷ, ಇಂತಾ ದಿನ, ಇಂತಾ ಜಾಗೆಲಿ ಸಿಕ್ಕೇಕು – ಹೇದು ಆಜ್ಞೆ ಮಾಡಿದವಾಡ.
ಈ ಮಾವ° ಕೇಳಿಗೊಂಡವುದೇ. 😉

~

ಇಂತಾ ದಿನ, ಇಂತಾ ಹೊತ್ತಿಂಗೆ ಈ ಮಾವ° ಇಂತಿಷ್ಟು ಪೈಶೆ ಹಿಡ್ಕೊಂಡು ಇಂತಲ್ಲಿಗೆ ಬರೇಕು – ಹೇಳ್ತದು ಕರಾರು ಅಲ್ಲದೋ, ಹೋದವು.
ಅಧ್ಯಕ್ಷಮಾವ° – ಪೈಶೆಪೆಟ್ಟಿಗೆ ಹಿಡ್ಕೋಂಡು ಹೋಪಗ ಪೋಲೀಸುಗಳನ್ನೂ ಕರಕ್ಕೊಂಡೇ ಹೋಗಿತ್ತಿದ್ದವು.
ಆದರೆ, ಅವು ಪೋಲೀಸುಗೊ ಹೇದು ಗೊಂತಪ್ಪಲೆ ಯೇವದೇ ಕಾರಣ ಇದ್ದತ್ತಿಲ್ಲೆ ಇದಾ!
ಕಾಕಿ ಪೇಂಟಂಗಿ ಹಾಕದ್ದೆ, ಮಾಮೂಲು ಪೇಂಟಂಗಿ ಹಾಕಿತ್ತವು. ಅಧ್ಯಕ್ಷಮಾವ° ಕಾರಿನೊಳ, ಪೋಲೀಸುಗೊ ಕಾರಿನ ಹೆರ – ಅವರಷ್ಟಕೇ; ಒಬ್ಬ° ಬೀಡಿ ಎಳಕ್ಕೊಂಡು, ಮತ್ತೊಬ್ಬ° ಪೇಪರು ಓದಿಗೊಂಡು, ಇನ್ನೊಬ್ಬ° ಪೋನಿಲಿ ಮಾತಾಡಿಗೊಂಡು.

ರಜ ಹೊತ್ತಪ್ಪಗ ಆ ಕಳ್ಳಂಗೊ ಎತ್ತಿದವು.
ಬಂದಪ್ಪದ್ದೇ – ದುಡ್ಡು ಎಲ್ಲಿ ಉಂಟು ಭಟ್ರೇ – ಕೇಳಿದವು. ಇದಾ ಇಲ್ಲೀ – ಹೇದು ಅಧ್ಯಕ್ಷಮಾವ° ಪೆಟ್ಟಿಗೆ ಬಿಡುಸಿ ತೋರ್ಸುದೂ – ಈಚ ಹೊಡೆಂದ ಪೋಲೀಸುಗೊ ಬಂದು ಹಿಡಿವದೂ – ಎರಡೂ ಒಟ್ಟಿಂಗೇ ಆತು.
ಶ್ರೀರಾಮದೇವರ ಕೈಂದ ಪೈಶೆ ಪೀಂಕುಸಲೆ ಹೆರಟೋರು ಕೃಷ್ಣ ಜನ್ಮಸ್ಥಾನಲ್ಲಿ ಬಾಕಿ ಆದವು – ಹೇದು ಶರ್ಮಪ್ಪಚ್ಚಿ ನೆಗೆ ಮಾಡಿದವು.
ಶರ್ಮಪ್ಪಚ್ಚಿ ನೆಗೆ ಮಾಡ್ಸು ಸಾತ್ವಿಕ ಜೋಕುಳುಗೊ ಇದ್ದರೆ ಮಾಂತ್ರ!

~

ಮೇಲ್ನೋಟಕ್ಕೆ ಇದರ್ಲಿ ಇಪ್ಪದು ಇಷ್ಟೇ ವಿಷಯ ಆದರೂ, ಸಂಗತಿಗಳ ಕೆದಕ್ಕಿ ನೋಡಿರೆ ಆಘಾತಕಾರಿ ವಿಚಾರಂಗೊ ಗೊಂತಾವುತ್ತಾಡ.
ಯೇವತ್ತು ಗೋಕರ್ಣ ದೇವಸ್ಥಾನವ ಕರ್ನಾಟಕ ಸರ್ಕಾರ ಪುನಾ ನಮ್ಮ ಮಠಕ್ಕೆ ಕೊಟ್ಟತ್ತೋ, ಗುರುಗಳ ಕೆಲವು ಯೋಜನೆಂದಾಗಿ ಅಲ್ಲಿ ಹಗರಣ ಮಾಡ್ಳೆ ಎಡಿಗಾಗದ್ದ ಹಾಂಗೆ ಆಗಿ ಹೋತು.
ಇದರಿಂದಾಗಿ ಅಲ್ಲಿ “ಬಟ್ಟಕ್ಕೊ” ಹೇದು ತೋರ್ಸಿಗೊಂಬ ಗೋಕರ್ಣದ ಗೋಮುಖ ವ್ಯಾಘ್ರಂಗೊಕ್ಕೆ ಹಗಲು ದರೋಡೆ ಮಾಡ್ಳೆ ಎಡಿಗಾಗದ್ದೆ ಹೋತು.
ಎಂತ ಮಾಡುಸ್ಸು?
ಗೋಕರ್ಣವ ಪುನಾ ಲಗಾಡಿ ತೆಗವದರಿಂದ, ಮಠಕ್ಕೆ ಉಪದ್ರ ಕೊಡುಸ್ಸೇ ಸುಲಭ, ಅಲ್ಲದೋ?!

ಸುರು ಮಾಡಿದವು; ಹಲವು ವಿಧಲ್ಲಿ.
ಒಬ್ಬ° ಗುರುಗಳ ಹಾಂಗೇ ವೇಷ ಹಾಕಿ ಬೇಡಂಕಟ್ಟೆ ಮಾಡ್ತ°.
ಇನ್ನೊಂದು ಜೆನ ಗುರುಗಳ ಬಗ್ಗೆ ಏನೇನಾರು ಬರದು ಇಂಟರ್ನೆಟ್ಟಿಲಿ ಬಿಡ್ತ°,
ಮತ್ತೊಬ್ಬ° ಮಠದ ಬಗ್ಗೆ ಅಪಪ್ರಚಾರ ಮಾಡಿ ಮೋರೆಪುಟಲ್ಲಿ ಬಿಡ್ತ°,
ಇನ್ನೊಬ್ಬ° ಕೋರ್ಟು-ಕೇಸುಗಳಲ್ಲಿ ಮಠದ ವಿರುದ್ಧ ನಂಬ್ರಂಗೊ ಮಾಡ್ತ°
–ಅಂತೂ ಮಠದ ಮಾನವ ಎಲ್ಲೆಲ್ಲಿ ತೆಗವಲೆಡಿಗು – ಹೇದು ನೋಡ್ತದೇ ಅವರ ಪರಮಕಾರ್ಯ.
ಆದರೆ, ಸತ್ಯಕ್ಕೇ ಅಲ್ಲದೋ ಜಯ?

ಪೋಲೀಸುಗೊ ನಿಮಿತ್ತ ಮಾಂತ್ರ, ಸತ್ಯಮೇವ ಜಯತೇ – ಹೇಳ್ತ ಹಾಂಗೆ ಇಂದಲ್ಲ ನಾಳೆ ಈ ಖಂಡುಗೊ ಪುಂಚಂದ ಹೆರ ಬಂದೇ ಬತ್ತವು.
ಸಿಕ್ಕಿ ಬೀಳದ್ದೆ ಎಲ್ಲಿ ಹೋವುತ್ತವು?
ಮೊನ್ನೆ ಕೋಟಿ ಕೋಟಿ ಲೂಟಿ ಮಾಡ್ಳೆ ಹೆರಟೋರುದೇ ಅದೇ ಗೋಕರ್ಣದ ಗೋಮುಖ ವ್ಯಾಘ್ರಂಗೊ ಅಡ, ತನಿಖ್ಖೆ ಮಾಡಿ ಅಪ್ಪಾಗ ಗೊಂತಾತಾಡ; ಶರ್ಮಪ್ಪಚ್ಚಿ ಹೇಳಿದವು.

~

ಮಠದ ಮೇಗೆ ಹೀಂಗೆಲ್ಲ ಅಪಚಾರ ಮಾಡ್ತದರ ಕಂಡು ರಾಜ್ಯದ ಹಲವು ವಿದ್ಯಾವಂತರು, ಸುಶಿಕ್ಷಿತರು, ಮಠಸ್ಥರು – ಎಲ್ಲೋರುದೇ ಈ ಕಾರ್ಯವ ಖಂಡುಸಿದ್ದವಾಡ. ಎಲ್ಲೋರಿಂಗೂ ಈ ವಿಷಯಲ್ಲಿ ಬೇಜಾರಾಯಿದಾಡ.
ಹೇಯ ಕಾರ್ಯವ ಖಂಡನೆ ಮಾಡ್ಳೆ ನಾಳ್ತು ಯೇವತ್ತೋ ಗೋಕರ್ಣಲ್ಲಿ ಮೌನಮೆರವಣಿಗೆ ಮಾಡ್ಳೆ ಇದ್ದಾಡ – ಹೇದು ಶರ್ಮಪ್ಪಚ್ಚಿ ಹೇಳಿದವು.

~

ಆಗಲಿ, ಬೆಪ್ಪಂಗೊಕ್ಕೆ ಬುದ್ಧಿ ಬರಳಿ.
ಕೋಟಿಕೋಟಿ ಲೂಟಿ ಮಾಡ್ತ ಎಲ್ಲೋರಿಂಗೂ ಇದು ಪಾಠ ಆಗಲಿ.
ಕಳ್ಳ ರಾಜಕಾರಣಿಗೊಕ್ಕೆ ಲೂಟಿ ಮಾಡ್ತದಕ್ಕೂ, ಮಠದ ಹಾಂಗಿರ್ತ ಸತ್ಯ ದಾರಿಗೆ ಲೂಟಿ ಮಾಡ್ತದಕ್ಕೂ ವಿತ್ಯಾಸ ಇದ್ದು – ಹೇಳ್ತದು ಜೆನಂಗೊಕ್ಕೆ ಗೊಂತಾಗಲಿ.
ಅಲ್ಲದೋ?

ಇನ್ನು ಮುಂದೆ ಆದರೂ, ಅನಗತ್ಯ ದೂರ್ತೋರಿಂಗೆ, ಅನಗತ್ಯ ಪೀಡೆ ಕೊಡ್ತೋರಿಂಗೆ ಇದೊಂದು ಪಾಠ ಆಗಲಿ – ಹೇದು ಶರ್ಮಪ್ಪಚ್ಚಿ ರುದ್ರಾಕ್ಷಿ ಶಾಲಿಲಿ ಮೋರೆ ಉದ್ದಿಗೊಂಡವು.
ಸೆಖೆ ಜೋರಾದ ಕಾರಣ ಅವಕ್ಕೆ ಬೆಗರುದೂ ಜಾಸ್ತಿ.

~

ಒಂದೊಪ್ಪ: ಸೂರ್ಯನ ಮೇಗೆ ಸಗಣ ಇಡ್ಕಿರೆ ಸೂರ್ಯಂಗೆ ಎಂತೂ ಆವುತ್ತಿಲ್ಲೆ, ಇಡ್ಕಿದೋರ ಮೇಗೆಯೇ ಬೀಳುದು. ಅಲ್ಲದೋ?

6 thoughts on “ಪುಣ್ಯಕೋಟಿ ಸಮಾನ ಮಠಂದ ಕೋಟಿ ಕೋಟಿ ಲೂಟಿಯ ಸಂಚು..!!

  1. ಹರೇರಾಮ, ಸತ್ಯಮೇವ ಜಯತೇ। ಈ ಶುದ್ದಿ ಓದಿಯಪ್ಪಗ ಆದಿಶಂಕರಾಚಾರ್ಯರ ಜೀವನ ಕಥೆ ಒಂದು ನೆಂಪಾತು!. ಅವು ಶ್ರೀ ಶೈಲಲ್ಲಿಪ್ಪಗ ಒಂದು ದಿನ ಒಬ್ಬನೇ ಕೂದಂಡಿದ್ದ ಸಮಯ ನೋಡಿ ಕಾಪಾಲಿಕ ನಾಯಕ ಉಗ್ರಬೈರವ ಅವರತ್ರೆ “ಎನಗೆ ಮೋಕ್ಷ ಸಿಕ್ಕೆಕ್ಕಾರೆ ಒಬ್ಬ ಸನ್ಯಾಸಿಯ ಶಿರಸ್ಸಿನ ಉಗ್ರ ಬೈರವಂಗೆ ಒಪ್ಪುಸೆಕ್ಕು. ನಿಂಗೊ ಸನ್ಯಾಸಿಗೊ ಸರ್ವವನ್ನೂ ಬಿಟ್ಟವಲ್ಲೊ? ಎನಗೆ ಕೊಡಿ” ಕೇಳಿತ್ತಾಡ. “ಎನ್ನ ತಲೆ ಕೊಟ್ಟು ನಿನ ಮೋಕ್ಷ ಸಿಕ್ಕುತ್ತಾದರೆ ಎನ ಸಂತೋಷವೆ ಆದರೆ ಎನ್ನ ಶಿಷ್ಯವರ್ಗ ತುಂಬಾ ಇದ್ದು ಅವು ಅರ್ತರೆ ಬಿಡವು.” ಹೇಳಿದವಡ ಶಂಕರಾಚಾರ್ಯರು. ಅಷ್ಟಪ್ಪಗ ಕಾಪಾಲಿಕ ಆನು ನಿಂಗೊ ಒಬ್ಬನೇ ಇಪ್ಪಗ ಬತ್ತೆ” ಹೇಳಿತ್ತ್ಡಡ. ಸರಿ ಹೇಳಿದವಡ ಆಚಾರ್ಯರು. ಮಾರನೇದಿನ ಅವು ಒಬ್ಬನೇ ಧ್ಯಾನ ಮಾಡಿಗೊಂಡ್ಇಪ್ಪಗ ಬಂತಡ! ಇದೇ ಹೊತ್ತಿಂಗೆ ಹೊಳೆಲಿ ಆಚಾರ್ಯರ ಬಟ್ಟೆ-ಬರೆ ತೊಳಕ್ಕೊಂಡಿದ್ದ ಪದ್ಮ ಪಾದಾಚಾರ್ಯರಿಂಗೆ ಏನೋ ಒಂದು ದುರ್ಘಟನೆ ಗುರುಗೊಕ್ಕೆ ಬಯಿಂದು ಹೇಳ್ತ ಸುಳಿವು ಆತಾಡ! ಕೂಡ್ಲೆ ವಾಯು ವೇಗಲ್ಲಿ ಆಚಾರ್ಯರಿದ್ದಲಿಂಗೆ ಹೋಗಿ ನೋಡುವಗ ಕಂಡ ದೃಶ್ಯ! ಕೂಡ್ಲೆ ನರಸಿಂಹ ಸ್ವಾಮಿಯ ಆವೇಶ ಪದ್ಮ ಪಾದರಿಂಗೆ ಬಂತಾಡ! ಕಾ ಪಾಲಿಕನ ಕೈಂದ ಖಡ್ಗವ ಎಳದು ಅದೇ ಖಡ್ಗಲ್ಲಿ ಅದರ ತಲೆಯನ್ನೇ ಕಡುದು ಹಾಕಿದವಾಡ!! ಶಂಕರಾಚಾರ್ಯರು ಸಮಾಧಿ ಸ್ಥಿತಿಂದ ಎದ್ದು ನೋಡುವಗ ಕಾಪಾಲಿಕ ಸತ್ತು ಬಿದ್ದಿದು!!

  2. ಸಮಯೋಚಿತ ಶುದ್ದಿ. ಎರೆಪ್ಪುಗೊ ಎರೆಸ್ಟು ಆದ್ದದು ಸಂತೋಷದ ಸಂಗತಿ. ಅವಕ್ಕೆ ಸರಿಯಾದ ಶಿಕ್ಷೆಯಾಗಲಿ. ಸತ್ಯಕ್ಕೆ ಏವಗಲೂ ಬೆಲೆ ಇದ್ದು.
    ಶುದ್ದಿಯ ಎಡಕ್ಕಿಲ್ಲಿ, ಆ ಕಳುವಂಗಳ ಫೋನ್ ಪುನಾ ಪುನಾ ಬಪ್ಪ ವಿಷಯ ಹೇಳ್ತಾ ಇಪ್ಪಗ ಶರ್ಮಪ್ಪಚ್ಚಿಗೆ ಚಿಕ್ಕಮ್ಮ ಚಪಾತಿ ಹೊಡಿ ತಪ್ಪಲೆ ಹೇಳಿ ಮಾಡಿದ ಫೋನು ಕೇಳಿ ನೆಗೆ ಬಂತು. ಸೀರಿಯಸ್ಸಿನ ಎಡೆಲಿ ಕಾಮಿಡಿ – ಒಪ್ಪಣ್ಣನ ಶುದ್ದಿ ಲಾಯಕಿತ್ತು.

  3. ಇಷ್ಟು ದಿನ ಆ ಗೋಮುಖ ವ್ಯಾಘ್ರಂಗೊ ಗೋಕರ್ಣಲ್ಲಿ ಆರಾರದ್ದೋ ತಿಥಿ ಮಾಡಿಕೊಂಡಿತ್ತಿದ್ದವು. ಈಗ ನಾವು ಅವರ ತಿಥಿ ಮಾಡೆಕ್ಕು ಒಪ್ಪಣ್ಣ. ಒಗ್ಗಟ್ಟಿಂದ ಹೋರಾಡುವೊ.

  4. ಮಠಕ್ಕೆ ಅಪಚಾರ ಮಾಡಿದವಕ್ಕೆ ಶಿಕ್ಷೆ ಖಂಡಿತ.

  5. ಪೇಪರಿಲಿ ಗುರುಗಳ ಸಂದರ್ಶನ ಬಯಿಂದನ್ನೆ. ಈ ವಿಷಯವ ನ್ಯಾಯಾಲಯಲ್ಲಿ ಮುಂದುವರಿಸಿಕೊಂಡು ಹೋಪದೇ ಹೇಳಿ ತೀರ್ಮಾನಿಸಿದ್ದವು.ಎಲ್ಲವೂ ಸರಿಯಾಗಲಿ.ಅನ್ಯಾಯಗಾರರಿಂಗೆ ಶಿಕ್ಷೆ ಆಗಲಿ.

  6. ಸಮಯೋಚಿತ ಲೇಖನ. ಹಣಕ್ಕಾಗಿ ಜನ ಎನೆಲ್ಲಾ ಮಾಡತ್ತೋ!?
    ಆದರೆ ಈ ಕೆಲಸ ಬರೀ ಹಣಕ್ಕಾಗಿ ಅಲ್ಲ ಹೇಳಿ ಗುತ್ತಾಗ್ತು.
    ಹಾಂಗಾಗಿ ಮುಂದಿನ ತನಿಖೆ ಅಗತ್ಯ. ತಪ್ಪಿತಸ್ತರಿಗೆ ಶಿಕ್ಷೆ ಕೊಡುಲೆ ಆ ಭಗವಂತ ಇದ್ದ.
    ಪಾರದರ್ಷಕವಾಗಿ ನಡೆಸುತ್ತಿರುವ ಧನಾತ್ಮಕ ಚಟುವಟಿಕೆಗಳ ಬಗ್ಗೆ ಸಮಾಜದಲ್ಲಿ ಎಲ್ಲರಿಗುವೇ ತೆಳದ್ದು.
    ಆದರೇ ಸಂಯಮ, ಸಮರ್ಥನೆ ಮತ್ತು ರಕ್ಷಣೆ ಪ್ರಧಾನವಾದ ವ್ಯವಸ್ಥೆಯಲ್ಲಿ, ಸ್ವಲ್ಪ ಪ್ರತಿಭಟನೆ ಮತ್ತು ಪ್ರತಿತಂತ್ರ ಅಗತ್ಯ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×