Oppanna.com

ಮತ “ದಾನ” ಅಲ್ಲ, ಹಕ್ಕು ಚಲಾವಣೆ. . .

ಬರದೋರು :   ಒಪ್ಪಣ್ಣ    on   03/05/2013    18 ಒಪ್ಪಂಗೊ

ಅಷ್ಟಾವಧಾನದ ಸಂಗತಿ ಎಲ್ಲ ಮುಗುದ ಮತ್ತೆ ಒಂದರಿ ಮಾಷ್ಟ್ರುಮಾವನ ಮನೆಗೆ ಹೋದೆ. ಕಾರ್ಯಕ್ರಮ ಹೇಂಗಾತು – ಎಂತಾತು ಇತ್ಯಾದಿ ನೇರಂಪೋಕು ಮಾತಾಡ್ಳೆ. ಮನಾರ ವೆವಸ್ತೆ, ಅಚ್ಚುಕಟ್ಟು ಕರುಶಿಗೊ, ತುಂಬಿದ ಜೆನಂಗೊ, ಕುಡಿಯಲೆ ಲಾವಂಚದ ನೀರು, ಗಾಳಿ ಹಾಕಲೆ ಬೀಸಾಳೆ, ಮನೆಗೆ ಕೊಂಡೋಪಲೆ ಅರುಶಿನ ಚೀಲ – ಇದೆಲ್ಲವನ್ನೂ ಮಾತಾಡಿ ಆತು.
ಅದಾದ ಮತ್ತೆ ಕೊಟ್ಟ ಆಸರಿಂಗೆಯೂ ಕುಡುದಾತು. ಮತ್ತೆ ಓಟಿನ ಶುದ್ದಿಯೂ ಬಂತು.
~
ಬೇಡ ಬೇಡ ಹೇದರೂ ಒರಿಶ ತಿರುಗುತ್ತು, ಯುಗಾದಿ ಬತ್ತು, ವಿಷು ಬತ್ತು; ಐದೊರಿಶಕ್ಕೊಂದರಿ ಈ ಓಟುದೇ ಬತ್ತು.
ಒಪ್ಪಣ್ಣಂಗೆ ರಾಜಕೀಯ ಅರಡಿಯ. ಅರಡಿಯದ್ದರ ಮಾತಾಡ್ಳೆ ಹೆರಟ್ರೆ ಸರ್ಪಮಲೆಮಾವಂಗೆ ಕೋಪವೂ ಬತ್ತು!
ಆದರೆಂತ ಮಾಡುದು, ಒಪ್ಪಣ್ಣನ ಹಾಂಗೇ ಕಮ್ಮಿ ಅರಡಿವ ಜೆನಂಗೊ ಈಗ ಎಲ್ಲವೂ ಅರಡಿವೋರ ಹಾಂಗೆ ಮಾತಾಡ್ತವನ್ನೇ, ಅದೆಲ್ಲದರ ಕಾಂಬಗ ಮಾತಾಡಿರೆಂತ – ಹೇದು ಒಪ್ಪಣ್ಣಂಗೂ ಕಾಂಬದು!
ಸರ್ಪಮಲೆಮಾವನಾಂಗಿರ್ತೋರ ಕ್ಷಮೆ ಕೋರಿ ಈ ಸರ್ತಿ ಅರಡಿಯದ್ಸರ ಬಗ್ಗೆಯೇ ಮಾತಾಡ್ತದು! 😉
~

ಎಲ್ಲೋರುದೇ ತಪ್ಪದ್ದೇ ಮತದಾನ ಮಾಡೇಕು - ಹೇಳುಲೆ ಅಕ್ಷರದಣ್ಣ ಬಿಡುಸಿದ ಚಿತ್ರ
ಎಲ್ಲೋರುದೇ ತಪ್ಪದ್ದೇ ಮತದಾನ ಮಾಡೇಕು – ಹೇಳುಲೆ ಅಕ್ಷರದಣ್ಣ ಬಿಡುಸಿದ ಚಿತ್ರ

ಮೊನ್ನೆ ಗುಣಾಜೆಮಾಣಿ ಬತ್ತೆ ಬತ್ತೆ ಹೇಳಿ ಬಯಿಂದನೇ ಇಲ್ಲೆ. ಎಲ್ಲಿಗೆ? ಅಷ್ಟಾವಧಾನಕ್ಕೆ.
ಗುಣಾಜೆಮಾಣಿ ಬಾರದ್ಸರ ಕಂಡು ಬಲ್ನಾಡುಮಾಣಿಯೂ ಬಯಿಂದನಿಲ್ಲೆ. ಅವ ಬಾರದ್ದಕ್ಕೆ ದೇವಸ್ಯಮಾಣಿಯೂ ಬಯಿಂದನಿಲ್ಲೆ – ಇವ್ವಾರೂ ಬಾರದ್ಸಕ್ಕೆ ಶಾಸಕರು, ಮುಖ್ಯಮಂತ್ರಿಗೊ, ನರೇಂದ್ರ ಮೋದಿ – ಆರೂ ಬಯಿಂದವಿಲ್ಲೆ.
ಇವೆಲ್ಲ ಬಾರದ್ದೇ ಅಷ್ಟಾವಧಾನ ಮಾಡಿದವು ಮತ್ತೆ ಅವಧಾನಿಗೊ. ಅದಿರಳಿ.
ಗುಣಾಜೆಮಾಣಿ ಬಂದಿದ್ದರೆ ಒಂದು ರಜ ಮಾತಾಡ್ಳಾವುತಿತು; ಲೋಕಲ್ಲಿ ಈಗ ಎಂತ ನೆಡೆತ್ತಾ ಇದ್ದು – ಹೇಳ್ತದರ ಬಗ್ಗೆ.
ಅವಂಗೆ ಮದಲೇ ಹಾಂಗೇ – ಊರಿಲಿ ಎಂತ ನೆಡೆತ್ತಾ ಇದ್ದು ಹೇಳ್ಸು ಸಮೋಸ, ಪೋನುಗಳ ಮೂಲಕ ಕೂಡ್ಳೇ ಕೂಡ್ಳೇ ಗೊಂತಾಗಿಂಡಿತ್ತು. ಈಗಂತೂ ಇಡೀ ಲೋಕದ್ದೇ ಗೊಂತಾವುತ್ತಾಡ. ಮೋದಿಯ ಭಾಷಣ ಇಂದೆಲ್ಲಿ ಇಪ್ಪದು, ಸೊನೆಗಾಂಧಿ ಇಂದೆಂತ ಹೇಳಿದ್ದು, ಮಣ್ಣಿನ ಪುಳ್ಳಿ ಎಂತ ಮಾಡ್ತು, ತೆಂಗಿನಕಾಯಿ ಎಲ್ಲೆಲ್ಲ ಒಡೆತ್ತು – ಎಲ್ಲವುದೇ ಒಂದರಿ ಬೆರಳಾಡುಸಿರೆ ಗೊಂತಾವುತ್ತಾಡ. ಮೂವತ್ತೈದು ಸಾವಿರದ ಮೊಬೈಲಿಲಿ ಇಂಟರುನೆಟ್ಟು ಇಪ್ಪದೇ ಇದಕ್ಕೆಲ್ಲ ಕಾರಣ.
ಅಷ್ಟಾವಧಾನಕ್ಕೆ ಬಾರದ್ದರೆ ಎಂತಾತು, ಎಯ್ಯೂರು ಮನೆಒಕ್ಕಲಿಂಗೆ ಬಾರದ್ದೆ ಒಳಿಯ° ಹೇದು ಗ್ರೇಶಿತ್ತಿದ್ದು ನಾವು. ಆದರೆ, ಅಲ್ಲಿಯೂ ಕಾಂಬಲಿಲ್ಲೆ. ಕಾನಾವು ಡಾಗುಟ್ರ ಆಸ್ಪತ್ರೆ ಉದ್ಘಾಟನೆಗೆ ಆದರೂ ಬಕ್ಕು ಗ್ರೇಶಿತ್ತು, ಏಯ್, ಅಲ್ಲಿಗೂ ಇಲ್ಲೆ. ಇಷ್ಟೂ ಅಂಬೆರ್ಪಿಲಿ ಇರೇಕಾರೆ ಓಟಿನ ಬೆಶಿಯೇ ಆಗಿಕ್ಕು – ಗ್ರೇಶಿದ್ದು ನಾವು. ಆರಾರು ಬೆಶಿಲಿಪ್ಪಗ ನಾವು ಮಾತಾಡ್ಸಲೆ ಹೆರಟ್ರೆ ಕೈ ಕರಂಚುಗು. ಹಾಂಗಾಗಿ, ಅವನ ಪುರ್ಸೋತಿಲೇ ಮಾತಾಡ್ಸುವೊ°.
~
ಗುಣಾಜೆಮಾಣಿಯ ಹತ್ತರೆ ಓಟಿನ ಬಗ್ಗೆ ಕೇಳಿರೆ ಸಿಕ್ಕುವ ಉತ್ತರವೇ ಬೇರೆ
– ಈಗಾಣ ಕರ್ನಾಟಕ ಓಟು, ಮುಂದಕ್ಕೆ ಬಪ್ಪ ಡೆಳ್ಳಿಯ ಓಟು, ಮತ್ತೆ ಬಪ್ಪ ಕೇರಳ ಓಟು – ಹೀಂಗಿರ್ಸರ ಬಗ್ಗೆಯೇ ಹೇಳುಗು. ಮಾಷ್ಟ್ರುಮಾವನ ಹತ್ತರೆ ಓಟಿನ ಬಗ್ಗೆ ಮಾತಾಡಿರೆ? ರಜ ಹಳೇ ಸಂಗತಿಗೊ ಬಕ್ಕು. ಗುಣಾಜೆ ಮಾಣಿ ’ಭವಿಷ್ಯ’ ಹೇಳ್ತರಲ್ಲಿ ಉಶಾರಿ ಮಾಷ್ಟ್ರುಮಾವ ’ಇತಿಹಾಸಲ್ಲಿ’ ಉಶಾರಿ,.
~
ಮದಲಿಂಗೆ ಭರತವರ್ಷ ಆಗಿದ್ದ ಕಾಲಲ್ಲಿ ನಮ್ಮಲ್ಲಿ ಈ ಓಟು ಹೇಳ್ತ ಪರಿಕಲ್ಪನೆ ಇದ್ದತ್ತಿಲ್ಲೇಡ. ಭರತ ರಾಜನಿಂದ ಮೊದಲುಗೊಂಡು ಮೊನ್ನೆ ಮೊನ್ನೆ ಒರೆಂಗೂ ರಾಜಂಗೊ ರಾಜಾಡಳ್ತೆ ಮಾಡಿಗೊಂಡು ಬಂದವಾಡ. ಜೆನಂಗೊ ಆಯ್ಕೆ ಮಾಡಿ ಪ್ರತಿನಿಧಿಯ ಆಡಳ್ತೆ ನೋಡ್ತ ಕ್ರಮ ಮದಲಿಂಗೆ ಗ್ರೀಕಿಲಿ ಇದ್ದತ್ತಾಡ. ಪ್ರಜಾ ಪ್ರತಿನಿಧಿಗೊ ಆಡಳ್ತೆಲಿ ಸೇರ್ಸಿಗೊಂಬ ಕ್ರಮ ಅಲ್ಲಿಂದಲೇ ಸುರು ಆದ್ಸಾಯಿಕ್ಕು – ಹೇದವು ಮಾಷ್ಟ್ರುಮಾವ°.
ಮುಂದೆ ಕಾಲ ಬೆಳದ ಹಾಂಗೇ ಆ ಭಾರತ ಇಂಡಿಯ ಆತು. ಅಷ್ಟಪ್ಪಗಳೇ ಭಾರತಲ್ಲಿ ಬಹುದೊಡ್ಡ ರಾಜಕೀಯ ಪಲ್ಲಟವೂ ಆದ್ಸು. ರಾಜಂಗೊ ಅರಮನೆಂದ ಮನೆಗೆ ಹೋದವು. ಜೆನರ ನೆಡುಗಂದ ನಾಯಕರು ಹುಟ್ಟಿ ಬಂದವು. ಮೊನ್ನೆ ಒರೆಂಗೆ ಆಡಳ್ತೆ ಮಾಡಿದ ಅನುಭವಿಗೊ ಶ್ರೀಸಾಮಾನ್ಯ ಆಗಿಹೋದ°, ಮೊನ್ನೆ ಹುಟ್ಟಿ ಬಾಷಣ ಮಾಡ್ಳೆ ಅರಡಿತ್ತೋನು ರಾಜ ಆಗಿ ಹೋದ°. ಇದು ಒಳ್ಳೆದು, ಅದು ಹಾಳು ಹೇದು ಮಾಷ್ಟ್ರುಮಾವ ಹೇಳಿದ್ದಲ್ಲ, ಎರಡ್ರಲ್ಲಿಯೂ ಒಳ್ಳೆದೂ ಇದ್ದು, ಹಾಳೂ ಇದ್ದು – ಹೇಳಿದವು.

ರಾಜಾಡಳ್ತೆಲಿ ಒಳ್ಳೆದು ಎಂತರ – ಕೇಟೆ.
ರಾಜಂಗೊ ಸಣ್ಣ ಇಪ್ಪಾಗಳೇ ಅವರ ಅಪ್ಪನ ಆಡಳ್ತೆ ಕಂಡಿರ್ತವು. ಒಂದು ರಾಜ್ಯದ ಗಡಿ ಎಲ್ಲಿ, ರಾಜ್ಯದ ಉದ್ಪತ್ತಿ ಎಂತ್ಸರ, ರಾಜಕೀಯ ವೆವಸ್ತೆ ಎಂತ್ಸರ – ಎಲ್ಲವನ್ನುದೇ ಸಣ್ಣ ಇಪ್ಪಾಗಂದಲೇ ತಿಳಿಯಲೆ ಎಡಿತ್ತು. ಈ ಅನುಭವ ಮುಂದಕ್ಕೆ ರಾಜ್ಯಭಾರ ಸುರುಮಾಡುವಾಗ ಉಪಕಾರಕ್ಕೆ ಬತ್ತು. ಅಪ್ಪನ ಆಡಳ್ತೆಲಿ ತಪ್ಪುಗೊ ಇದ್ದಿದ್ದದರ ತಿದ್ದಲೆ ಮಗಂಗೆ ಧಾರಾಳ ಅವಕಾಶ ಇದ್ದು – ಹೇಳಿದವು.
ಅಂಬಗ ರಾಜಾಡಳ್ತೆಲಿ ಚೋದ್ಯ ಎಂತ್ಸರ? – ವಿವರ್ಸಿಗೊಂಡು ಹೋದವು.
ನೂರ್ರಲ್ಲಿ ತೊಂಭತ್ತೊಂಭತ್ತು ರಾಜ ಒಳ್ಳೆಯ ರೀತಿಲೇ ಆಡಳ್ತೆ ಮಾಡಿರೂ, ಆ ಒಬ್ಬ ಇದ್ದನಲ್ಲದೋ – ಅವಂದು ಕೆಟ್ಟ ಆಡಳ್ತೆ ಇಪ್ಪ ಸಾಧ್ಯತೆ ಇದ್ದತ್ತು. ಸ್ವಂತ ಕೈಲಿ ಅಧಿಕಾರ ಇಪ್ಪ ಕಾರಣ ಹೇಳಿದ್ದೇ ಆಜ್ಞೆ, ಮಾಡಿದ್ದೇ ಕಾರ್ಬಾರು. ಮೊಗಲರ ಕಾರ್ಬಾರಿನ ಹಾಂಗೆ ತಲೆಬುಡ ಇಲ್ಲದ್ದ ಕಾನೂನುಗೊ, ಕಟ್ಟಳೆಗೊ ಮಾಡಿ ಹಾಕಿರೆ ಎಂತ ಮಾಡುಸ್ಸು – ಅಪುರೂಪಲ್ಲಿ ಅಂತೋರುದೇ ಒಂದೆರಡು ಬಂದು ಹೋಯಿದವು. ಇದರಿಂದಾಗಿ ತೊಂದರೆ ಆದ್ಸೂ ಇದ್ದು – ಹೇಳಿದವು.

ಅಂಬಗ, ಈಗಾಣ ಈ ಓಟಿನ ವೆವಸ್ತೆಯ ಬಗ್ಗೆ ಒಳ್ಳೆದೆಂತರಪ್ಪಾ..?
ಒಳ್ಳೆದೆಂತರ ಹೇದರೆ, ಜೆನಂಗೊ ಎಲ್ಲೋರುದೇ ಸೇರಿ ಅರ್ತು ಆರುಸಿ ಕಳುಸುತ್ತ ಕಾರಣ ಜೆನಂಗೊಕ್ಕೂ ಒಂದು ಬೆಲೆ ಬತ್ತು. ಎಲ್ಲಾ ಕಾನೂನುಗಳೂ ಈ ಜೆನಂಗಳಿಂದ ಹೆರ್ಕಿ ಕಳುಸಿದ ಜೆನಂಗೊ ಮಾಡ್ತ ಕಾರಣ ಎಲ್ಲಾ ಕಾನೂನುಗಳೂ ಜೆನಂಗಳ ನೇರ ಅಭಿಪ್ರಾಯವ ತಿಳ್ಕೊಂಡು ಮಾಡುಸ್ಸು ಹೇದು ಲೆಕ್ಕ. ಇಂದ್ರಾಣೋನು ಜೆನಕ್ಕೆ ಇಷ್ಟ ಆಗದ್ದರೆ, ಇನ್ನಾಣ ಸರ್ತಿ ಬದಲುಸಿ ಕಳುಸುಲಕ್ಕು- ಒಬ್ಬನ ಒಂದು ಸರ್ತಿಯಾಣ ಅವಧಿ ಐದೇ ಒರಿಶ ಇದಾ – ಹೇಳಿದವು.

ಅಂಬಗ ಇದರ್ಲಿ ಹುಳ್ಕು ಎಂತರ ಹೇದರೆ, ಜೆನರಿಂದ ಆಯ್ಕೆ ಆಗಿ ಹೋಪೋನು ಆ ಸ್ಥಾನಕ್ಕೆ ಯೋಗ್ಯನೋ?
ಅವಂಗೆ ಇಡೀ ಜೆನರ ನೋಡಿಗೊಂಬ ಶೆಗ್ತಿ ಇದ್ದೋ? ಆ ಯುಗ್ತಿ ಇದ್ದೋ? ಒಂದು ಊರಿನ ಪ್ರತಿನಿಧಿಸಲೆ ಅವ ಯೋಗ್ಯನೋ?
ಲಾಯ್ಕಕ್ಕೆ ಭಾಷಣ ಮಾಡ್ಳಿ ಎಡಿಗಾರೆ ಸರಿ, ಕೆಲವು ಜೆನ ನಂಬಿ ಅವಂಗೆ ಓಟು ಕೊಡ್ಳೂ ಸಾಕು. ಅತವಾ, ಕೆಲವು ಜೆನ ಕೆಲವು ಜಾತಿಯೋರಾದರೆ ಸಾಕು, ಅವಂಗೆ ಓಟು ಹಾಕಲೂ ಸಾಕು! ಆರೇ ನಿಂದರೂ – ಎಂತೋನೇ ನಿಂದರೂ ಓಟು ಜಾಸ್ತಿ ಸಿಕ್ಕಿರೆ ಮಾಂತ್ರ ಅವ ಗೆಲ್ಲುಸ್ಸು.
ಓಟು ಜಾಸ್ತಿ ಸಿಕ್ಕೇಕು ಹೇದರೆಂತ್ಸು? – ಎದುರು ನಿಂದೋನಿಂದ ಜಾಸ್ತಿ ಸಿಕ್ಕಿರೆ ಆತಲ್ಲದೋ! ಅಂದಾಜು ನೂರು ಜೆನ ಓಟು ಹಾಕುತ್ತಲ್ಲಿ ಐದು ಜೆನ ಓಟಿಂಗೆ ನಿಂದು, ಎಲ್ಲೋರಿಂಗೂ ಇಪ್ಪತ್ತಿಪ್ಪತ್ತೇ ಸಿಕ್ಕಿ, ಒಬ್ಬಂಗೆ ಇಪ್ಪತ್ತೊಂದು ಸಿಕ್ಕಿರೆ – ಅವನೇ ಗೆಲ್ಲುಸ್ಸು. ಅವಂಗೆ ಇಪ್ಪದು ಐದ್ರಲ್ಲಿ ಒಂದಂಶ ಮಾಂತ್ರ ಸಹಮತ ಆದರೂ- ಒಳುದೋರಿಂಗೂ ಅವನೇ ಪ್ರತಿನಿಧಿ. ಆ ಇಪ್ಪತ್ತೊಂದು ಜೆನರ ಮಾಂತ್ರ ’ಲಾಯ್ಕಲ್ಲಿ’ ನೋಡ್ಲೆ ಸುರುಮಾಡಿರೆ ಒಳುದ ಎಪ್ಪತ್ತೊಂಭತ್ತು-ಎಂಭತ್ತು ಜೆನ ಗೋವಿಂದ!?
ಈಗಳೂ ಅದೇ ಆಗಿಂಡಿಪ್ಪದು.

ಈ ಇಪ್ಪತ್ತು ಜೆನ ಒಂದು ನಿರ್ದಿಷ್ಟ ಜಾತಿ ಆಗಿಕ್ಕು, ಪಂಗಡ ಆಗಿಕ್ಕು, ಧರ್ಮ ಆಗಿಕ್ಕು – ಅವರಿಂದ ಚುನಾಯಿತ ಪ್ರತಿನಿಧಿ ಅವರ ಮಾಂತ್ರ ಓಲೈಸಿಗೊಂಡು ಕೂದು, ಒಳುದೋರ ಗುಂಡಿಗೆ ಹಾಕುತ್ತದೇ ಈಗ ಆವುತ್ತಾ ಇಪ್ಪದು – ಹೇದು ಮಾಷ್ಟ್ರುಮಾವ° ಬೇಜಾರು ಮಾಡಿಗೊಂಡವು.
ಇದೇ ಪರಿಸ್ಥಿತಿ ದೊಡ್ಡಕೆ ಬೆಳದು – ರಾಜಕೀಯ ಗುಂಪುಗೊ – ಪಕ್ಷಂಗೊ ಅಸ್ತಿತ್ವಕ್ಕೆ ಬಂದು, ಒಂದು ನಿರ್ದಿಷ್ಟ ಧ್ಯೇಯೋದ್ಧೇಶಂಗಳ ಮಡಿಕ್ಕೊಂಡು ಇಡೀ ದೇಶದ ಎಲ್ಲಾ ಮೂಲೆಗೂ ಅದೇ ಧ್ಯೇಯೋದ್ಧೇಶವ ಹಂಚಿಗೊಂಡು, ಅದರ ಪ್ರತಿನಿಧಿಯಾಗಿ ಒಂದೊಂದು ಊರುಗಳಲ್ಲಿ ಓಟಿಂಗೆ ನಿಲ್ಲುಸ್ಸು ಇನ್ನೊಂದು. ಆ ಪಕ್ಷಕ್ಕೆ ಎಲ್ಲಿ ಓಟುಸಿಕ್ಕುತ್ತೋ – ಅಲ್ಲಿ ಆ ಪಕ್ಷದ್ದೇ ಕಾರ್ಬಾರುಗೊ!
~

ಕೆಲವು ಜೆನ ಪಕ್ಷ ನೋಡಿ ಓಟು ಹಾಕುತ್ತವು, ಕೆಲವು ಜೆನ ಜೆನನೋಡಿ ಓಟುಹಾಕುತ್ತವು.
ಕೆಲವು ಜೆನ ಓಟು ಕೊಡ್ಳೆ ಬೇಕಾಗಿ ಪೈಶೆ ಕೊಡ್ತವು, ಕೆಲವು ಜೆನ ಪೈಶೆ ಸಿಕ್ಕಲೆ ಬೇಕಾಗಿ ಓಟು ಹಾಕುತ್ತವು.
ಪಕ್ಷ, ಜೆನ, ತತ್ವ, ಸಿದ್ಧಾಂತ, ಪೈಶೆ – ಎಲ್ಲವೂ ಸೇರಿ ಒಂದು ಅವಿಲಿನ ಪಾಕ ಆಗಿಂಡಿದ್ದು. ಹೇಂಗೋ – ನಮ್ಮ ರಾಜಕೀಯ ಚಕ್ರ ಭಾರತದ ಭವಿಷ್ಯತ್ತಿನ ನೋಡದ್ದೆ ಮುಂದೆ ಹೋವುತ್ತಾ ಇದ್ದು – ಹೇದು ಬೇಜಾರು ಮಾಡಿದವು.
ಎಲ್ಲಾ ಪಕ್ಷಂಗಳಲ್ಲಿಯೂ ಅಕ್ಕಿತಿಂಬೋನು-ಉಮಿ ತಿಂಬೋನು-ಧೂಳು ತಿಂಬೋನು ಇದ್ದೇ ಇದ್ದವು. ಎಷ್ಟೇ ಚುನಾಯಿತ ವೆಗ್ತಿಗೊ ಇದ್ದರೂ – ಕೆಲಸ ಅಪ್ಪದು ಓಪೀಸರಕ್ಕಳಿಂದಾಗಿಯೇ. ಸರ್ಕಾರೀ ಸಂಬಳ ತೆಕ್ಕೊಂಡು, ಅವು ದುಡುದರೆ ನವಗೆ ಕೆಲಸ ಆವುತ್ತು. ಚುನಾಯಿತ ಪ್ರತಿನಿಧಿಗೊ ಭಾಷಣ ಮಾಡಿಗೊಂಡೇ ಕೂದರೂ ಕೆಲಸ ಸಾಗದ್ದೆ ಇಲ್ಲೆ. ಆದರೆ ಚುನಾಯಿತ ಪ್ರತಿನಿಧಿಯೂ ಒಳ್ಳೆಯೋನು ಆದರೆ ಕೆಲಸ ಮಾಡ್ತೋರಿಂಗೆ ಕೆಲಸ ಮಾಡ್ಳೆ ಸುಲಭ ಆವುತ್ತು – ಹೇಳ್ತದು ವಿತ್ಯಾಸ.
ಒಬ್ಬ ವೆಗ್ತಿ ಆಗಿ ಹೇಂಗೆ – ಹೇದು ನೋಡುದರಿಂದಲೂ, ದೇಶದ ಭದ್ರತೆ, ಸುಭಿಕ್ಷೆ, ಭವಿಷ್ಯ – ಇತ್ಯಾದಿಗಳ ಬಗ್ಗೆ ಯೇವ ಪಕ್ಷ ಲಾಯಿಕಲ್ಲಿ ಆಲೋಚನೆ ಮಾಡ್ತೋ, ಯೇವ ಪಕ್ಷ ಚೆಂದಕೆ ನಿರ್ವಹಣೆ ಮಾಡಿದ್ದೋ – ಅಂತಾದ್ದರ ನೋಡಿ ಕೊಡ್ಸು ಒಳ್ಳೆದು – ಹೇಳುಸ್ಸು ಬೈಲಿನ ಅಭಿಪ್ರಾಯ.

~
ಹಾಂಗಾಗಿ, ಇದು ನಮ್ಮ ಮತವ ದಾನ ಹಿಡಿಸ್ಸಲ್ಲ. ಬದಲಾಗಿ, ನಮ್ಮ ಹಕ್ಕಿನ, ನಮ್ಮ ಅಧಿಕಾರವ ಚಲಾವಣೆ ಮಾಡುಸ್ಸು. ಯೇವತ್ತೂ ಹಾಂಗೇ – ಅಧಿಕಾರ ಚಲಾವಣೆ ಮಾಡುವಾಗ ಜಾಗ್ರತೆ ಇರೇಕು. ಏಕೇದರೆ, ನಮ್ಮ ಅಧಿಕಾರ – ಹೇದು ಬೇಕಾಬಿಟ್ಟಿ ಚಲಾಯಿಸಿರೆ, ನಾಳೆ ನಮ್ಮ ಕೊರಳಿಂಗೇ ಬಪ್ಪದು.
ಎಲ್ಲೋರುದೇ ನೆಂಪಿಲಿ ಓಟಿಂಗೆ ಹೋಪೊ, ಎಲ್ಲೊರುದೇ ಓಟು ಹಾಕುವೊ°. ದೇಶದ ಸುಭದ್ರತೆಯ ಬಗ್ಗೆ ಗಮನ ಮಡಿಕ್ಕೊಂಬೊ.

~
ಒಂದೊಪ್ಪ: ಓಟು ದಾನ ಅಲ್ಲ, ಅಧಿಕಾರ ಚಲಾವಣೆ. ಹಾಂಗಾಗಿ, ಜಾಗ್ರತೆ ಇರಳಿ.

ಸೂ:

  • ಚಿತ್ರಕೃಪೆ: News13

18 thoughts on “ಮತ “ದಾನ” ಅಲ್ಲ, ಹಕ್ಕು ಚಲಾವಣೆ. . .

  1. ಅಪ್ಪು ಒಪ್ಪಣ್ಣೋ ಸರಿಯಾಗಿ ಹೇಳಿದ್ದೆ 🙂

  2. ಭಾಗ್ಯಕ್ಕ: ಹೋ ಅಪ್ಪನ್ನೆ!! ೩ ಓಟು ಹಾಕೆಕು.

  3. ಆರಿಂಗೆ ಭಾವಾ ಓಟು ಹಾಕಿದ್ದು!?;-)

  4. ಭಾಗ್ಯಕ್ಕ: ಪ್ರಾಯ ಎಲ್ಲ ಆಯಿದನ್ನೇ.. ನವಗೆ ಕನಾ೯ಟಕ ಓಟು ಲಗಾವಿಲ್ಲೆ ಇದಾ! ನವಗೆ ಇನ್ನು ಎಮ್ಮೆಲ್ಲೆ ಓಟಿಂಗೆ 4 ಒರಿಶ ಕಾಯೆಕ್ಕಿದಾ. ನಮ್ಮದು ಕೇರಳಲ್ಲಿ ಓಟು. ಒಂದೊರಿಷ ಕಳುದಪ್ಪಗ ಒಂದೋಟು ಹಾಕೆಕ್ಕು. ಎಂಪಿಗಿಪ್ಪದು!!

    1. ಓ ಹಾ೦ಗೊ.. ಅ೦ಬಗಾ ೨ ವರಿಶಲ್ಲಿ ೩ ಓಟು ಪ೦ಚಾಯತಿನ್ದು ಹಾಕೆಡದೊ?

  5. ಆನು ಈ ಸತಿ೯ ಓಟು ಹಾಕಲೇ ಹಾಕೆ

    1. ಓಟು ಹಾಕುವ ಪ್ರಾಯ ಆಯಿದಿಲ್ಲದಿಕ್ಕು

  6. ಇತಿಹಾಸದ ಪ೦ಚಾ೦ಗದ ಮೇಲೆ ಭವಿಷ್ಯದ ಕಟ್ಟೋಣ ಕಟ್ಟುತ್ಸಲ್ಲದೋ,ಒಪ್ಪಣ್ಣಾ.
    ಈ ನು೦ಗಣ್ಣ೦ಗಳಿ೦ದ ಮು೦ದೆ ಬಿಡುಗಡೆ ಸಿಕ್ಕಿ ದೇಶಕ್ಕೆ ಸರಿ ಅರ್ಥದ ಸ್ವಾತ೦ತ್ರ್ಯವೂ ಸಿಕ್ಕುಗು ಹೇಳ್ತ ಅಶಾವಾದಲ್ಲಿ ಹೋಪ°,ಮತ ಚಲಾವಣೆ ಮಾಡುವ°.
    ಸಮಯೋಚಿತ ಶುದ್ದಿ.

  7. ”ಅಕ್ಕಿತಿಂಬೋನು-ಉಮಿ ತಿಂಬೋನು-ಧೂಳು ತಿಂಬೋನು ಇದ್ದೇ ಇದ್ದವು. ” — ಹೀನ್ಗಿಪ್ಪವೇ ಇಪ್ಪಗ “ಅಳಿದೂರಿಗೆ ಉಳಿದವನೇ ಗೌಡ” ಹೇಳುಲೆ ಆದರೂ ಒ೦ದು ಜನ ನವಗೆ ಬೇಕಾವ್ತು. ಅದಕ್ಕಾಗಿಯಾದರೂ ನಾವು ಮತವ ಚಲಾಯಿಸೆಕ್ಕೆ.ನವಗೆ ಬೇಕಾದ ಅಭ್ಯರ್ತಿ ಸೂತರೂ ,ಗೆದ್ದರೂ; ನಾವು ಮತ ಚಲಾವಣೆ ಮಾಡಿದರೆ, ನವಗೆ ನಮ್ಮ ಊರಿ೦ಗೆ ಬೇಕಾದ ಸೌಕರ್ಯನ್ಗಳ ಕೇಳುಲೆ ತನ್ನಷ್ಟಕ್ಕೆ ಅಧಿಕಾರ ಬತ್ತು.

  8. ವ್ಯವಸ್ಥೆಲಿ ಇದ್ದುಗೊಂಡೆ ರಿಪೇರಿಮಾಡ್ಲೆ ಪ್ರಯತ್ತ್ನ ಮಾಡೆಕ್ಕು. ಹೆರ ನಿಂದುಗೊಂಡು ಟೀಕೆ ಸಲ್ಲ. ಓಟು ಹಾಕುವ.

  9. ನಾವೆಲ್ಲಾ ಮತ ಚಲಾವಣೆ ಮಾಡೆಕ್ಕು ….. ಈ ಸಲ ೪೯-೦ ಮತದಾನದ ಯಂತ್ರಲ್ಲಿ ಅಳವಡುಸಿದ್ದವು ಹೇಳುದು ಕೇಳಿದ್ದೆ … ಹಾಂಗಾಗಿ ನಾವಗೆ ಯಾವ ಪಕ್ಷಕ್ಕೂ / ಯಾರಿಂಗೂ ಮತ ಹಾಕುಲೆ ಮನಸಿಲ್ಲೆ ಯಾ ಅಥವಾ ಅವು ಅರ್ಹರಲ್ಲ ಹೇಳಿ ಮನೆಲೇ ಕೂಪ ಬದಲು … ಮತದಾನ ಕೇಂದ್ರಕ್ಕೆ ಹೋಗಿ ಈ ೪೯-೦ ಮತ ಹಾಕಿ ಬಪ್ಪಲಕ್ಕದ …… !

  10. ನಾವೆಲ್ಲ ಮತ ಹಾಕಲೇ ಬೇಕು. ದಾನವೇ ಇರಲಿ,ಹಕ್ಕು ಚಲಾವಣೆಯೇ ಇರಲಿ-ಅದು ನಮ್ಮ ಕರ್ತವ್ಯ,ನಾಗರಿಕ ಹೇಳುವ ನೆಲೆಲಿ.
    ದಾನ ಹೇಳಿ ಗ್ರೇಶುವವು -ಇದಂ ನ ಮಮ-ಹೇಳಿ ಕೊಟ್ಟು ಬಿಡಿ!

  11. ಅಪ್ಪು… ಅವರ ಕಾರ್ಬಾರು ನೋಡಿರೆ ಓಟು ಹಾಕುಸ್ಸು ಬೇಡ ಬೇಡ ಹೇಳಿ ಗ್ರೇಶಿರೂ ಸಮಯಕ್ಕಪ್ಪಗ ಈ ಒಂದೊಪ್ಪ ಇದಾ ಹೋಗಿ ಒತ್ತಿಕ್ಕಿ ಬಾ ಹೇದು ದೂಡಿ ಬಿಡುಸ್ಸು.

    ಹಾಂಗಾಗಿ ಇಂದು ನಮ್ಮ ಅಧಿಕಾರ ಚಲಾವಣೆ ಮಾಡಿ ಮುಂದೆ ಐದು ವರ್ಷ ಅವರ ಅಧಿಕಾರ ಚಲಾವಣೆ ಮಾಡ್ಳೆ ಬಿಟ್ಟು ಬಿಡುಸ್ಸು.

    ಅಕೇರಿಗೆ ನವಗಂತೂ “ಶ್ರೀ ರಾಮ ಜಯ ರಾಮ ಜಯ ಜಯ ರಾಮ”. ಹರೇ ರಾಮ.

  12. ಶುಧ್ಧಿ ಲಾಯಿಕಾಯಿದು ಒಪ್ಪಣ್ಣಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×