ಮೆಡಿ ಉಂಬಲೇ ಪುರುಸೊತ್ತಿಲ್ಲದ್ದರೆ, ಉಪ್ಪಿನಕಾಯಿ ಎಂತಕೆ..!?

March 14, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀಂಗೆ ಕೇಳಿದ್ದು ಆನಲ್ಲ; ಮಾಷ್ಟ್ರುಮಾವ° – ಆತೋ?

ಹೇಳಿರೆ ನಿಂಗೊ ನಂಬೆಯಿ; ಮಾಷ್ಟ್ರುಮಾವನೇ ಹೀಂಗೆ ಹೇಯಿದ್ಸು, ಕಳುದವಾರ.
ಎಂತಗೆ?
~
ಕಳುದವಾರ ಸರ್ಪಂಗಳ ಕೂಸಿನ ಬದ್ಧ, ಕಾರಿಂಜೆಲಿ.
ಶಿವಪೂಜೆಗೆ ಕರಡಿಯೂ, ಕಾರಿಂಜಕ್ಕೆ ದಡ್ಡನೂ ಆತು ಹೇಳಿಗೊಂಡು ನಾವೇ ಹೆರಟತ್ತು.
ದೊಡ್ಡಳಿಯ° ಮದಲೇ ಕಾರಿಲಿ ಹೋಗಿದ್ದ ಕಾರಣ ಚುಬ್ಬಣ್ಣನ ಬೈಕ್ಕಿಲಿ ಒಟ್ಟಿಂಗೆ ಹೋದ್ಸು!

ಹೋಪಗ ಬದ್ಧದ ಕಳ ಪೂರ ಬಿರುದು, ಊಟಕ್ಕೆ ತೆಯಾರಿ ಆಗಿಂಡಿದ್ದತ್ತು.
ಅಡಿಗೆ ಸತ್ಯಣ್ಣಂದೇ ಅಡಿಗೆ.
ತಾಳು-ಸಾರು-ಕೊದಿಲು-ಮೇಲಾರ ಮಾಂತ್ರ ಅಲ್ಲದ್ದೆ, ವಿಶೇಷವಾಗಿ ತಟ್ಟೆಲಿ ಅಟ್ಟಿಅಟ್ಟಿ ಮಡಗಿದ ಸುವರ್ಣವರ್ಣದ ಜಿಲುಬಿ!
ಬದ್ಧದ ಮದಿಮ್ಮಾಯಂಗೆ ಅಷ್ಟಾರೂ ಸಮ್ಮಾನ ಮಾಡದ್ದರೆ ಕೂಸಿಂಗೆ ಕೋಪ ಬಾರದೋ?! – ಹೇದು ದೊಡ್ಡಭಾವ° ನೆಗೆಮಾಡಿದವು.

ಹೋ, ವಿಷಯ ಹೇಳುದು ಬಿಟ್ಟು ಎಲ್ಲೆಲ್ಲಿಗೋ ಎತ್ತುತ್ತು ಒಂದೊಂದರಿ.
ಇರಳಿ.
~

ಹಾಂಗೆ, ಬದ್ಧದ ಊಟ ಉಂಡಿಕ್ಕಿ, ಮಾದೇವ ಹೇಳಿಕ್ಕಿ, ಕೈತೊಳದಿಕ್ಕಿ, ಒಪಾಸು ಚುಬ್ಬಣ್ಣನ ಒಟ್ಟಿಂಗೆ ಬೈಕ್ಕಿನತ್ರೆ ಹೆರಟನೋ – ಕುಂಟಾಂಗಿಲ ಭಾವ° ಅವನ ಹೊಸಾ ಪೋನಿಲಿ ಮಾತಾಡುದು ಕೇಳಿತ್ತು – “ಇದಾ – ಪಾತೇರಿಲಿ ಮೆಡಿ ಇದ್ದೂ, ಕೊಯಿವಲೆ ಜೆನ ಇಲ್ಲೆ; ಮಾಷ್ಟ್ರುಮಾವನಲ್ಲಿ ಮೆಡಿ ಇದ್ದು, ಕೊಯಿವಲೆ ಕೊಕ್ಕೆ ಇಲ್ಲೆ; ಬೊಳುಂಬುಮಾವನಲ್ಲಿ ಮರ ಇದ್ದು, ಮೆಡಿ ಇಲ್ಲೆ; ಸರ್ಪಮಲೆ ಮಾವನ ಮನೆಲಿ ಮೆಡಿ ಇದ್ದು, ಮರ ಇಲ್ಲೆ” – ಹೀಂಗೆ ಎಂತೆಂತದೋ ಒಯಿವಾಟುಗೊ.
ಹೋ, ಮಾವಿನಮೆಡಿಯ ಸಮೆಯಲ್ಲಿ ಎಲ್ಲೋರದ್ದೂ ಇದೇ ವೆವಸ್ಥೆ; ಇದೇ ಅವಸ್ಥೆ.
ಆರ ಮರಲ್ಲಿ ಮೆಡಿ ಇದ್ದು, ಆರ ಮನೆಗೆ ಮೆಡಿ ಬೇಕು – ಅತ್ಲಾಗಿತ್ಲಾಗಿ ನೆಂಟ್ರ ಒಳ ಮಾತಾಡ್ತದೇ ಈಗಾಣ ಕಾಲದ ಪರಮ ಸಂತೋಷ.

~

ಒಂದರಿಯಾಣ ಪೋನು ಮುಗುದ ಮತ್ತೆ ಮೆಲ್ಲಂಗೆ ’ “ಯೇ ಕುಂಟಾಂಗಿಲ ಭಾವೋ; ಎಂತ – ಮಾವಿನ ಮೆಡಿಯ ಒಯಿವಾಟೋ?’ – ಕೇಟೆ.
ಅಪ್ಪು ಒಪ್ಪಣ್ಣೋ, ಅಪ್ಪು. ಮಾವಿನಮೆಡಿ ಸಮೆಯಲ್ಲಿ ಮೆಡಿ ಸಂಪಾಲುಸದ್ರೆ ಅದೊಂದು ಮಹಾಪರಾಧ – ಹೇದು ನೆಗೆಮಾಡಿದ°.

ಅಪ್ಪಪ್ಪು, ಸಿಕ್ಕಿರೆ ಎನಗೂ ರಜ ಇರಳಿ – ಹೇದೆ, ನೆಗೆಮಾಡಿಂಡು.
ಚುಬ್ಬಣ್ಣನ ಬೈಕ್ಕು ಗುರುಗುರು ಹೇಳಿತ್ತು. “ಅಕ್ಕಂಬಗ ಬತ್ತೆಯೊ°” – ಹೇದು ಮೆಲ್ಲಂಗೆ ಕೈಕುಲ್ಕಲೆ ಹೆರಟೆ. ನೋಡಿರೆ, ಭಾವಯ್ಯನ ಕೈ ಪೂರಾ ಸೊನೆ ಹಿಡುದು ಕಪ್ಪಾಗಿತ್ತು!
ಯೇ ದೇವರೇ, ನಿನಗೆ ಮೆಡಿ ಸಿಕ್ಕಿದ್ದೋ ಹಾಂಗಾರೆ – ಕೇಟೆ. ಅಪ್ಪು ಎನಗೆ ನಿನ್ನೆ ಸಿಕ್ಕಿತ್ತು, ಎಯ್ಯೂರು ಭಾವನಲ್ಲಿಂದ.
ಅಂಬಗ ಈಗ ಪೋನು ಆರಿಂಗೆ?
“ಅದೂ – ಸುಭಗಭಾವಂಗೆ ಮೆಡಿ ಇನ್ನೂ ಸಿಕ್ಕಿದ್ದಿಲ್ಲೇಡ. ಹಾಂಗೆ ಪಾತೇರಿ ಅತ್ತೆಯಲ್ಲಿ ಸಿಕ್ಕುಗೋ ಕೇಳಿ ನೋಡಿದ್ದದು” – ಹೇಯಿದ°.

ಯೋಪ, ಇದು ಎನಗೆ ಅರ್ತಪ್ಪ ಬಗೆ ಅಲ್ಲ ಹೇದು “ನಾವು ಹೆರಡುವೊ° ಚುಬ್ಬಣ್ಣಾ” ಹೇದೆ.

ಚುಬ್ಬಣ್ಣನೊಟ್ಟಿಂಗೆ ಬೈಕ್ಕಿಲಿ ಬಪ್ಪಗ “ನಿಂಗೊಗೆ ಮೆಡಿ ಸಿಕ್ಕಿದ್ದೋ ಅಂಬಗ” ಕೇಟೆ. “ಹ್ಹೆ, ಇಲ್ಲೆ ಇಲ್ಲೆ. ಎರಡು ದಿನ ಬಿಟ್ಟು ಸುಭಗಭಾವನ ಹತ್ತರೆ ಕೇಳೇಕು” – ಹೇದ°, ಉಶಾರಿ.

~

ಚುಬ್ಬಣ್ಣನ ಬೈಕ್ಕಿಲಿ ಬೈಲ ಒರೆಂಗೆ ಬಪ್ಪಲೆಡಿಗು, ಮನೆ ಒಳಂಗೆ ಬಪ್ಪಲೆಡಿಗೋ? ಎಡಿಯ.
ಹೇಂಗೂ ಮನೆಜಾಲಿಂದ ನೆಡೇಕು, ಅದಕ್ಕೆ ಓ ಆಚಿಕೆ ಇಳುದರೆ ಮಾಷ್ಟ್ರುಮಾವನ ಮನೆಂದಲೇ ನೆಡವಲಕ್ಕನ್ನೇ-ದು, ಮಾಷ್ಟ್ರುಮಾವನ ಹಟ್ಟಿ ಕರೇಣ ಉರುವೆಲಿನ ಹತ್ತರೆ ಇಳುದು ಚುಬ್ಬಣ್ಣಂಗೆ ಟಾಟ ಮಾಡಿದೆ.
ಹರಿಯೊಲ್ಮೆ ಮದುವೆಯ ಬೆಂದಿಗೆ ಕೊರವಲ್ಲಿ ಕಾಂಬೊ° – ಹೇದು ಚುಬ್ಬಣ್ಣ ಹೆರಟ°.
~

ಮಾಷ್ಟ್ರುಮಾವನಲ್ಲಿ ಹಟ್ಟಿಕರೆಯ ಉರುವೆಲು ತೆಗದಪ್ಪಗಳೇ ಟಾಮಿಗೆ ಗೊಂತಕ್ಕು. “ವೌ, ಏಯ್, ಏರ್ಯಾವ್” ಹೇಳುಗು.
ಒಪ್ಪಣ್ಣನ ಕಂಡಪ್ಪದ್ದೆ ಟಾಮಿ ನಾಯಿ ದಾರಿಗಡ್ಡ ಮನುಗುಗು! ಅದರ ಮಾತಾಡ್ಸದ್ದೆ ಮುಂದೆ ಹೋತಿಕ್ಕಲೆಡಿಯ!
ಹಾಂ, ಆರೋ ಬಂದವು – ಎಲೆ ಮರಿಗೆಲಿ ಎಲ್ಲ ಸರಿ ಇದ್ದನ್ನೇ – ಹೇದು ಮಾಷ್ಟ್ರುಮಾವ° ಅಂಬಗಳೇ ಸಿದ್ಧಮಾಡುಗು. ಅದಿರಳಿ.
ಹಟ್ಟಿಕರೆ ಉರುವೆಲಿಂದ ಮನೆಗೆತ್ತೇಕಾರೆ ಮಾವಿನ ಮರದ ಅಡಿಲೆ ಹೋಯೇಕು. ಹಟ್ಟಿಯ ಈಟು ತಿಂದ ಮಾವಿನಮರಲ್ಲಿ ಈ ಸರ್ತಿ ಒಳ್ಳೆ ಮೆಡಿ ಹೋಯಿದಾಡ. ಹೋಯಿದಾಡ ಅಲ್ಲ, ಹೋಯಿದು. ಒಪ್ಪಣ್ಣಂಗೆ ಕಾಣ್ತಾ ಇದ್ದು ಇದಾ.
ಒರಿಶದ ಬಾಕಿ ಏವ ಸಮಯಲ್ಲಿಯೂ ಮಾವಿನಮರ ಹೇಂಗಿದ್ದು ನೋಡದ್ದವು, ಆ ಮಾವಿನ ಮೆಡಿ ಸಮೆಯಲ್ಲಿ ಮಾಂತ್ರ ಎಲ್ಲೋರುದೇ ಒಂದರಿ ನೋಡಿಕ್ಕುಗು.
ಹಾಂಗೆ ನಾವುದೇ ಒಂದರಿ ಮರ ನೋಡಿಕ್ಕಿ ಮನೆ ಒಳ ಹೊಕ್ಕದು.

ಮಾಷ್ಟ್ರುಮಾವನ ಬಾಯಿಲಿ ಎಲೆಡಕ್ಕೆ ಇದ್ದ ಕಾರಣ “ಏನೂ” ಕೇಳ್ತ ಬದಲು “ಹ್ಮ್..” ಹೇಳಿದವು, ಮಾಮೂಲಿನಂತೆ.
ಅಲ್ಲದ್ದರೂ ಅವು “ಏನು” ಕೇಳವು, ಒಪ್ಪಣ್ಣ ಮಾಮೂಲಿನೋನು ಆದ ಕಾರಣ.
ಸರ್ಪಂಗಳ ಬದ್ಧದ ಶುದ್ದಿ, ಬೆಟ್ಟುಕಜೆ ಮದುವೆ ಶುದ್ದಿ – ಹೀಂಗಿರ್ತ ಹಲವು ಶುದ್ದಿಗೊ ಮಾತಾಡುವಾಗಳೇ ಆಸರಿಂಗೆ ಬಂತು.
ಅದಾದ ಮತ್ತೆಯೇ ಮೆಡಿಯ ವಿಶ್ಯ ಬಂದದು.

ಹೇಂಗೆ, ಮೆಡಿ ಕೊಯ್ಯೆಕ್ಕಟ್ಟೆ ಅಲ್ಲದೋ? – ಕೇಳಿದೆ.
ಆಸರಿಂಗೆ ತಂದ ಮಾಷ್ಟ್ರಮನೆ ಅತ್ತೆಯೇ ಉತ್ತರ ಕೊಟ್ಟವು –“ ಕೊಯಿವಲೆ ಜೆನ ಇಲ್ಲದ್ದೆ ಪೂರಾ ಮರಲ್ಲೇ ಬಾಕಿ ಅದಾ – ನೋಡು. ಅಡಕ್ಕೆ ಕೊಯಿತ್ತ ಬಾಬು ಬರ್ತೇನೆ ಬರ್ತೇನೆ ಹೇಳ್ತು, ಬಪ್ಪದು ಕಾಣ್ತಿಲ್ಲೆ. ಈ ಸರ್ತಿ ಉಪ್ಪಿನಕಾಯಿ ಆಶೆಯನ್ನೇ ಬಿಡುದು. ಪ್ರತಿ ಸರ್ತಿ ಮೆಡಿ ಇಲ್ಲೆ ಹೇಳಿ ಆತು, ಈ ಸರ್ತಿ ಮೆಡಿ ಇದ್ದರೂ ಉಪ್ಪಿನಕಾಯಿ ಇಲ್ಲೆ. ಇನ್ನು ಹಣ್ಣಿನ ಸಮೆಯಲ್ಲಿ ಬೆಶಿಲಿದ್ದರೆ ಮಾಂಬಳ ಮಾಡುದು.” – ಹೇಳಿದವು.
ಒಪ್ಪಣ್ಣಂಗೆ ಮಾಂಬ್ಳ ಗ್ರೇಶಿ ಆಶೆ ಆದರೂ, ಈಗ ಮಾಷ್ಟ್ರಮನೆ ಅತ್ತೆಗೆ ಎಂತಾರು ಸಮದಾನ ಹೇಳೇಕಾನೆ.

ಎಂತ ಹೇಳುಸ್ಸಪ್ಪಾ ಹೇದು ಆಲೋಚನೆ ಮಾಡಿಂಡಿಪ್ಪಾಗಳೇ, ಮಾಷ್ಟ್ರುಮನೆ ಅತ್ತೆಯ ಈ ವೈರಾಗ್ಯ ಕಂಡು ಮಾಷ್ಟ್ರುಮಾವಂಗೆ ಎಂತ ಅನುಸಿತ್ತೋ –  “ಕಾಲ ಬದಲಾದ ಹಾಂಗೆ ನಾವುದೇ ಬದಲಪ್ಪದು. ಮೆಡಿ ಸಿಕ್ಕದ್ದರೆ ಹಾಕುಲಿಲ್ಲೆ. ಸಾವಿರಗಟ್ಳೆ ಮೆಡಿಯ ಉಪ್ಪಿನಕಾಯಿ ಮಾಡಿ ಬರಣಿಲಿ ತುಂಬುಸಿ ಮಡಗುತ್ತ ಕಾಲ ಹೋತು. ಇನ್ನು ಏನಿದ್ದರೂ ಆಯಾ ಕಾಲಕ್ಕೆ ಸಿಕ್ಕುತ್ತರ ತಂದು ಉಪ್ಪಿನಕಾಯಿ ಹಾಕುತ್ತದು ಒಳ್ಳೆದುಃ  – ಹೇಳಿದವು.

“ನಿಂಬೆಹುಳಿ ಕಾಲಲ್ಲಿ ಒಂದು ಕುಪ್ಪಿ ನಿಂಬೆಹುಳಿ ಉಪ್ಪಿನಕಾಯಿ,
ಅಂಬಟೆ ಮೆಡಿಯ ಕಾಲಲ್ಲಿ ಒಂದು ಕುಪ್ಪಿ ಅಂಬಟೆ ಉಪ್ಪಿನಕಾಯಿ,
ಕರಂಡೆಯ ಕಾಲಲ್ಲಿ ಒಂದು ಕುಪ್ಪಿ ಅದರದ್ದು,
ಭೀಂಪುಳಿ ಕಾಲಲ್ಲಿ ಅದರದ್ದು – ಹೀಂಗೆ ಆಯಾ ಕಾಲಕ್ಕೆ ಸಿಕ್ಕುತ್ತ ವಸ್ತುಗಳ ಅಂಬೆರ್ಪಿಂಗೆ ತಂದು ಉಪ್ಪಿನಕಾಯಿ ಹಾಕಿರೆ ಸಾಕು.
ಒಂದರಿ ಹಾಕಿದ ಒಂದು ಕುಪ್ಪಿ ಮುಗಿವಾಗ ಇನ್ನೊಂದು ಬಗೆ ಸಿಕ್ಕುತ್ತು, ಅದರ ಉಪ್ಪಿನಕಾಯಿ ಹಾಕಿತ್ತು – ಹೀಂಗೇ ಮಾಡಿರೇ ಎಡಿಗಷ್ಟೆ. ಅಲ್ಲದ್ದರೆ ಈಗಾಣ ವ್ಯವಸ್ಥೆಲಿ ಎಡಿಯ” – ಹೇದು ಅಭಿಪ್ರಾಯ ಮಾಡಿದವು.

ಈಗಾಣ ಕಾಲಲ್ಲಿ ಉಂಬಲೇ ಪುರುಸೊತ್ತಿಲ್ಲೆ.

ಎಂತಾರು ತಿಂದು ಹೊಟ್ಟೆ ತುಂಬುಸುದು. ಅಲ್ಲದ್ದರೆ ಹೋಟ್ಳಿಂಗೋಪದು.

ಅಲ್ಲಿ ಯೇವ ಉಪ್ಪಿನಕಾಯಿ ಇರ್ತು, ಯೇವ ಕೊದಿಲು ಇರ್ತು ಹೇದು ನೋಡ್ಳೂ ನವಗೆ ವ್ಯವಧಾನ ಇರ್ತಿಲ್ಲೆ. ಹಾಂಗಾಗಿ, ಉಪ್ಪಿನಕಾಯಿಯ ಅನುಭವಿಸಿ ತಿಂಬ, ಇಂತದ್ದೇ ಮೆಡಿಯ ಉಪ್ಪಿನಕಾಯಿ ಆಯೇಕು – ಹೇಳ್ತ ಆಶೆ ಎಲ್ಲ ಮಡಿಕ್ಕೊಂಬೋರು ಬೌಶ್ಶ ಹಳಬ್ಬರು ಮಾಂತ್ರ ಇಕ್ಕಷ್ಟೆ. ಈಗಾಣೋರಿಂಗೆ ಮೆಡಿ ಉಂಬಲೇ ಪುರುಸೊತ್ತಿಲ್ಲದ್ದರೆ, ಉಪ್ಪಿನಕಾಯಿ ಎಂತಗೆ? – ಹೇದವು.

ಸುಭಗಣ್ಣ ಪಾತೇರಿಲಿ ಮೆಡಿ ಕೊಯಿಶುದು!!
ಸುಭಗಣ್ಣ ಪಾತೇರಿಲಿ ಮೆಡಿ ಕೊಯಿಶುದು!!

~
ಒಪ್ಪಣ್ಣಂಗೂ ಅದು ಸಂಗತಿ ಅಪ್ಪಾದ್ದೇ ಹೇದು ಕಂಡತ್ತು.
ಮೆಡಿ ಕೊಯಿವಲೂ ಜೆನ ಸಿಕ್ಕುತ್ತಿಲ್ಲೆ, ಸಿಕ್ಕಿರೂ ಆ ಮೆಡಿ ಕೊಯಿತ್ತ ಮನಿಶ್ಶಂಗೆ ಸಾವಿರ-ಎರಡು ಸಾವಿರ ಕೊಡೇಕು.
ಅದಲ್ಲದ್ದೆ ಕೊಯಿದ್ದರಲ್ಲಿ ಎರಡು ಹೆಡಗೆ ಮೆಡಿಯುದೇ!!
ಒಟ್ಟು ಕೊಯಿವದೇ ಒಂದು -ಎರಡು ಸಾವಿರ ಮೆಡಿ ಆದರೆ, ಅದರ್ಲಿ ಇನ್ನು ಕೊಯಿದ ಮನುಷ್ಯಂಗೆ ಹಂಚಿಕ್ಕಿ, ಮನೆಗೆತ್ತುವಾಗ ಅಸಲು ಕಂಡಾಬಟ್ಟೆ ಆವುತ್ತು.

ಮೆಡಿ ಮನೆಗೆತ್ತಿರೆ ಸಾಕೋ, ಮೆಡಿ ಮುರಿಯೇಕು ಅದಕ್ಕೆ ಒಂದು ಹೊತ್ತಿನ ಕೆಲಸ ಇದ್ದು.
ಎಲ್ಲಾ ಮೆಡಿಯನ್ನೂ ಅದರ ಜೊಂಗೆಂದ ತೆಗದು, ಜಾಗ್ರತೆಲಿ ಹರಗಿ ಮಡಗುಸ್ಸು. ಸೊನೆ ಮೆಡಿ ಆದರೆ ಕೈಗಿಡೀ ಸೊನೆ ರಟ್ಟುಲೇ ಆತು,  ಮತ್ತೆ ನಾಕು ದಿನ ಗೊಬ್ಬರದ ಕೈಯ ಹಾಂಗಾವುತ್ತು – ಕುಂಟಾಂಗಿಲ ಭಾವನ ಕೈ ಹಾಂಗೇ ಆದ್ದಿದಾ.
ಮಾಷ್ಟ್ರುಮನೆ ಅತ್ತೆಗೆ ಈ ಒರಿಶ ಪುಳ್ಳಿ ಸಣ್ಣ ಬಾಬೆ ಹಾಂಗೆ  ಮೆಡಿ ಹಾಕಲಕ್ಕು ಸಮಾಧಾನಲ್ಲಿ, ಬಪ್ಪೊರಿಶಂದ ಪುಳ್ಳಿಯ ಕಣ್ಣು ತಪ್ಪುಸಿ ಹೇಂಗೆ ಉಪ್ಪಿನಕಾಯಿ ಹಾಕುತ್ಸು ಹೇದು ಯೋಚನೆ ಸುರು ಆಯಿದು! 😉
ಮೆಡಿ ಮುರುದ ಮತ್ತೆ ಉಪ್ಪಿಲಿ ಅದ್ದೇಕು. ಮನಾರ ಮೆಡಿಗಳ ಭರಣಿಗೆ ತುಂಬುಸಿ, ಒಟ್ಟೊಟ್ಟಿಂಗೆ ಉಪ್ಪನ್ನೂ ಹರಗುದು. ಎಲ್ಲಾ ಮೆಡಿಗಳೂ ಉಪ್ಪು ಎಳದು, ಅದರೊಳಾಣ ನೀರು ಪೂರ್ತ ಹೆರ ಬಂದು ಮೆಡಿ ಚಿರುಟೇಕು!

ಇಷ್ಟಪ್ಪಲೇ ಒಂದು ವಾರ ಹಿಡಿತ್ತು.
ಮತ್ತೆ ಪುನಾ ಒಂದರಿ ಎಲ್ಲಾ ಬರಣಿಗಳ ಬಾಯಿ ಬಿಡುಸಿ, ಆ ಮೆಡಿಗಳ ಕೆರಿಶಿಲಿ ಹರಗುಸ್ಸು.
ಗಾಯ ಆಗಿದ್ದಿದ್ದ ಮೆಡಿಗೊ ಇದ್ದರೆ ಈಗ ಗೊಂತಕ್ಕು; ಶಾಲಿಗ್ರಾಮದ ಹಾಂಗಾಗಿರ್ತು ಇದಾ. ಹಾಳಾದ ಮೆಡಿಗೊ ಇದ್ದರೆ ಅದರ ಬಲುಗಿ ಇಡ್ಕೇಕು, ಗೆನಾ ಮೆಡಿಗಳ ಮಾಂತ್ರ ಮುಂದುವರುಶಿ ಹಾಕೇಕು.

ಮೆಣಸು-ಸಾಸಮೆ-ಅರುಶಿ ಹೊಡಿಗಳ ಉಪ್ಪುನೀರಿಲಿ ಪಾಕಮಾಡಿ ಕೆರುಶಿಲಿ ಹರಗಿದ- ಉಪ್ಪಿಲಿ ಚಿರುಟಿದ ಮೆಡಿಯ – ಮಿಶ್ರ ಮಾಡಿ ಬರಣಿಲಿ ತುಂಬುಸೇಕು.
ಮೆಣಸಿನ ಖಾರವೂ – ಸಾಸಮೆಯ ಘಾಟೂ ಸೇರಿ ಅದೊಂದು ಕೈ ಹೊಗೆತ್ತದು ನೋಡಿರೆ ಉಪ್ಪಿನಕಾಯಿ ಮರುಳು ಎಂತವಂಗೂ ಬಿರಿಗು!!

ಹೀಂಗೆ ಮಾಡುವಗ ಒಂದು ದಿಕ್ಕೆಯೂ ನೀರಿನ ಪಸೆ ಮುಟ್ಟಿಕ್ಕಲೆ ಗೊಂತಿಲ್ಲೆ.
ಎಲ್ಯಾರು ನೀರಪಸೆ ಮುಟ್ಟಿರೆ ಹಾಳಕ್ಕು. ನೀರಪಸೆ ಮುಟ್ಟದ್ದೆ ಜಾಗ್ರತೆಲಿ ಮಾಡಿರೆ ಮಾಂತ್ರ ನಾಲ್ಕೊರಿಶ – ಐದೊರಿಶ ಬಕ್ಕಷ್ಟೆ! ಅಲ್ಲದ್ದರೆ ಐದೇ ದಿನಕ್ಕೆ ಅಕ್ಕು!! ಅಲ್ಲದೋ?
~

ಇಷ್ಟೆಲ್ಲ ಮಾಡಿ ಬಂಙ ಬಪ್ಪಲೆ ಪುರುಸೊತ್ತೆಲ್ಲಿದ್ದು ಈಗ?
ಬದಿಯೆಡ್ಕ ಮಹಿಳೋದಯಲ್ಲಿ ಕರಡಿಗೆಲಿ ತುಂಬುಸಿ ಮಡಗಿದ್ದವು ಕೋಳಿಕ್ಕಜೆ ಅತ್ತೆ.
ಸೀತ ಹೋಗಿ ಕರಡಿಗೆಯನ್ನೇ ತೆಕ್ಕೊಂಡು ಬಂದರೆ ಮೆಡಿ ಮುರಿವ ಕೆಲಸವೂ ಇಲ್ಲೆ, ಉಪ್ಪಿಲಿ ಅದ್ದುವ ಕೆಲಸವೂ ಇಲ್ಲೆ, ಮೆಣಸಿನ ಹೊಡಿಲಿ ಕೈ ಹೊಗೆಶುವ ಕೆಲಸವೂ ಇಲ್ಲೆ ಇದಾ!
ಜೀವನೋಪಾಯಕ್ಕಾಗಿ ಆರಾರು ಮೆಡಿ ಹಾಕಿರೆ, ಒಳುದೋರು ಅದರ ಕ್ರಯ ಕೊಟ್ಟು ತೆಕ್ಕೊಂಬದೇ ಇನ್ನಾಣ ಕಾಲದ ಸಂಗತಿ ಆಗಿಕ್ಕು – ಹೇದು ಕಂಡತ್ತು ಒಪ್ಪಣ್ಣಂಗೆ.

~

ಆದರೂ, ಮನೆಲಿ ಅಜ್ಜಿಯಕ್ಕೊ ಉಪ್ಪಿನಕಾಯಿ ಹಾಕಿಂಡು ಇದ್ದ ಗೌಜಿಗಳ ನಾವು ಮರವಲಿದ್ದೋ?
ಒಂದೊಂದು ಅಜ್ಜಿಯ ಉಪ್ಪಿನಕಾಯಿದು ಒಂದೊಂದು ಪಾಕ. ಒಬ್ಬೊಬ್ಬರ ಉಪ್ಪಿನಕಾಯಿಗೆ ಒಂದೊಂದು ಪರಿಮ್ಮಳ.
ಜೋಗಿಮೂಲೆ ಅಜ್ಜಿಯ ಉಪ್ಪಿನಕಾಯಿ, ನೆಟ್ಟಾರತ್ತೆಯ ಉಪ್ಪಿನಕಾಯಿ, ಚೂರಿಬೈಲಿನ ಉಪ್ಪಿನಕಾಯಿ, ದೊಡ್ಡಮಾಣಿ ಉಪ್ಪಿನಕಾಯಿ, ಕೈರಂಗಳ ಉಪ್ಪಿನಕಾಯಿ – ಹೇದು ಒಂದೊಂದೇ ಕುಪ್ಪಿ ವಸೂಲಿ ಮಾಡಿ ತಿಂದು ತೇಗುತ್ತ ಕೊಶಿಯೇ ಬೇರೆ.
ಮುಂದೆಯೂ ಇದು ಹೀಂಗೇ ಒಳಿಯೇಕು ಹೇದು ಆದರೆ, ಆ ಮನೆಯ ಗೆಂಡುಮಕ್ಕೊ ಮೆಡಿ ಸಂಪಾಲುಸಲೇ ಬೇಕು ಇದಾ.

ಅದಕ್ಕೇ ಈ ಮಾವಿನಮೆಡಿ ಸಮೆಯಲ್ಲಿ ಎಲ್ಲೋರುದೇ “ಮೆಡಿ ಸಿಕ್ಕಿತ್ತೋ? ವೆವಸ್ತೆ ಆತೋ”ದು ಕೇಳಿಗೊಂಬದು.
~

ಮರದಿನ ಮಾಷ್ಟ್ರುಮಾವನಲ್ಲಿಗೆ ಹೋಪಾಗ ಒರ್ತಮಾನ ಸಿಕ್ಕಿತ್ತು – ಮಾಷ್ಟ್ರುಮಾವನಲ್ಲಿಗೆ ಕೊಕ್ಕೆ ತೆಕ್ಕೊಂಡು ಜೆನ ಬತ್ತಾಡ ನಾಳೆ. ಕಾನಾವು ಡಾಗುಟ್ರ ಮನೆಕೆಲಸಕ್ಕೆ ಬತ್ತ ಗಂಗೆಯ ಪೈಕಿ ಆರೋ ಕೊಯಿವದಾಡ.
ಹಾಂಗಾಗಿ ಮಾಷ್ಟ್ರಮನೆ ಅತ್ತೆಯ ಮೋರೆಲಿ ರಜಾ ಗೆಲುವು ಕಂಡತ್ತು.
~

ಪಾತೇರಿ ಅತ್ತೆಯಲ್ಲಿಂದ ಸುಭಗಭಾವಂಗೆ ಕೊಯಿದಾತೋ ಏನೋ.
ಚುಬ್ಬಣ್ಣ ಅಲ್ಲಿಗೆ ಹೋಗಿ ಚೀಲಲ್ಲಿ ತುಂಬುಸೆಂಡು ಬಂದಾತೋ ಏನೋ.
ಕೈರಂಗಳ ದೊಡ್ಡಮ್ಮಂಗೆ ಈ ಸರ್ತಿ ಮೆಡಿ ಸಮಗಟ್ಟು ಸಿಕ್ಕಿದ್ದೋ ಏನೋ.
ಚೂರಿಬೈಲು ದೀಪಕ್ಕನ ವಳಚ್ಚಲಿನ ಸೊನೆಮೆಡಿಯ ಮರಲ್ಲಿ ಹೂಗು ಹೋಯಿದೋ ಏನೋ.
ಪೆರುಮುಖಪ್ಪಚ್ಚಿ ಈ ಸರ್ತಿಯೂ ಬದಿಯಡ್ಕ ಪೇಟೆಂದಲೇ ಮೆಡಿ ತಂದದೋ ಏನೋ.
ಎಯ್ಯೂರು ಭಾವಂಗೆ ಜೀರಕ್ಕಿ ಮೆಡಿ ಸಿಕ್ಕಿದ್ದೋ ಏನೋ.
ಬೊಳುಂಬು ಮಾವನಲ್ಲಿ ಈ ಸರ್ತಿ ಒಪ್ಪಣ್ಣಂಗಿಪ್ಪದೂ ಹಾಕಿದ್ದವೋ ಏನೋ.

ಉಮ್ಮಪ್ಪ, ಒಂದೂ ಗೊಂತಾಯಿದಿಲ್ಲೆ. ನಿಂಗೊಗೆ ಗೊಂತಾದರೆ ಹೇಳಿಕ್ಕಿ ಆತೋ?
ಮೆಡಿ ಉಂಬಲೆ ಪುರುಸೊತ್ತಿದ್ದರೆ ಹೊಟ್ಟೆತುಂಬ ಉಣ್ಣಿ. ಅಲ್ಲದ್ದರೆ ಇತ್ಲಾಗಿ ಒಪ್ಪಣ್ಣಂಗೆ ಕೊಟ್ಟಿಕ್ಕಿ! :-)

~

ಒಂದೊಪ್ಪ: ತೆಳಿ ಹೆಜ್ಜೆಯೂ – ಹುಳಿ ಮಜ್ಜಿಗೆಯೂ ಯೇವಗಳೂ ಮಾಡ್ಳಕ್ಕು. ಅದರ ಚೇರ್ಚೆಯ ಮೆಡಿ ಉಪ್ಪಿನಕಾಯಿ ಅದರ ಕಾಲಲ್ಲೇ ಮಾಡಿಗೊಳೇಕು. ಅಪ್ಪೋ!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಶ್ರೀಪ್ರಕಾಶ ಕುಕ್ಕಿಲ

  ಉಪ್ಪಿನಕಾಯಿ ಹೇಳ್ವಾಗಲೇ… ಬಾಯಿಲಿ ನೀರು ಬ೦ದಾತು..ಹ್ಹಹ್ಹ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ತುಪ್ಪಿಕ್ಕೆಡ… ಉಪ್ಪಿನ ಕಾಯಿಗೆ ನೀರು ಪಸೆ ತಾಗುಲಾಗ….

  [Reply]

  VN:F [1.9.22_1171]
  Rating: 0 (from 0 votes)
 2. ಮಾನೀರ್ ಮಾಣಿ
  ಮಾನೀರ್ ಮಾಣಿ

  ಮರ೦ದ ಭರಣಿಗೆ ಎತ್ತುವಾಗ ಇಷ್ಟೆಲ್ಲಾ ಕೆಲ್ಸ ಇದ್ದನ್ನೇ…. ತಿ೦ದ ಹಾ೦ಗಲ್ಲಾ… 😉
  ಶುದ್ದಿ ಉಪ್ಪ ಆಯ್ದು ಒಪ್ಪಣ್ಣಾ….

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಉಪ್ಪಿನ ಕಾಯಿಯ ಕತೆ ಲಾಯ್ಕ ಆಯಿದು.ಮೊದಲು ಒಣಕ್ಕು ಇಡಿ ಮೆಣಸಿನ ಮನೆಲೇ ಎಡುದು ಹೊಡಿ ಮಾಡಿ ಉಪ್ಪಿನಕಾಯಿ ಹಾಕಿಂಡು ಇತ್ತಿದ್ದವು.ಅದರ ಘಾಟು ಆ ಪರಿಸರಕ್ಕೆಲ್ಲಾ ಬಕ್ಕು!ಈಗ ಅಷ್ಟೆಲ್ಲಾ ಕಷ್ಟ ಆರೂ ಸಹಿಸವು.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶಿವಪೂಜೆಗೆ ಕರಡಿ ಬತ್ತಿಲ್ಲೆ. “ಶಿವಪೂಜೆಲಿ ಕರಡಿಗೆಯ ಬಿಟ್ಟ ಹಾಂಗೆ”, ಮುಖ್ಯವಾದ ವಸ್ತುವಿನ ಮರದ ಹಾಂಗೆ ಹೇಳಿ ಆ ಮಾತಿಂಗೆ ಅರ್ಥ. ಕರಡಿ ಬಂದು ಪೂಜೆ ಮಾಡುತ್ಸಲ್ಲ. ಹೇ°…?

  [Reply]

  VN:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಟಾಮಿ ಕೊರಪ್ಪಿದ್ದು ಪಷ್ಟಾಯಿದು. ಅಲ್ಲ,ಓ ಮನ್ನೆ ಮನ್ನೆ ವರೆಗೂ ಮಾಷ್ಟ್ರು ಮಾವನಲ್ಲಿಗೆ ಬಟ್ಯ ಬಂದುಗೊಂಡಿತ್ತಲ್ಲದ. ಈಗ ಇಲ್ಲೆಯೋ..? ಇದಾ ಎನಗೆ ಉಂಬಲೆ ಪುರುಸೊತ್ತಿಲ್ಲದ್ದರೂ ಮಜ್ಜಿಗೆ ನೀರಿಂಗೆ ಒಂದು ಮೆಡಿ ಹಾಕಿ ಕಲಸಿ ಕುಡುದಿಕ್ಕಿ ಕರ ಕರನೆ ಅಗುದು ತಿಂಬಲೆಡುಗು.

  [Reply]

  VN:F [1.9.22_1171]
  Rating: 0 (from 0 votes)
 6. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  * ಮಮ್ಮದೆಯ ಏಡು ಬ್ಯಾ..ಬ್ಯಾ ಬ್ಯೇ.. ಎಂಬ್ಯೇ…. ಮಂಬ್ಯೇ…ಮಮ್ಮದೇಏ…ಹೇಳುತ್ಸು ಹೇಳಿ ಶುದ್ದಿ, …ಮಾಷ್ಶ್ಟ್ರು ಮಾವನ ನಾಯಿಯ ಕತೆ …. ಲಾಯಕಿದ್ದು.
  * ಮೊನ್ನೆ ಅಡ್ಕದ ಮಾವ ಫೋನು ಮಾಡುವಾಗ ಫೋನಿಲೇ ಮಾವಿನ ಮೆಡಿ ಪರಿಮ್ಮಳ ಹೊಡದತ್ತದ ….
  * ಅಂದ್ರಾಣ ಅಜ್ಜಿಯಕ್ಕೊ ಮೆಡಿ ಕೆಲಸ ಮಾಡಿಂಡಿಪ್ಪಗ ಆರನ್ನುದೆ ಹತ್ತರೆ ಸುಳಿಯಲೆ ಬಿಡವು,ನೀರು ತಾಗಿರೆ ಹೇಳಿ ಜಾಗ್ರತೆಗೆ ..ದೂರ ಹೋಗಿ ಹೇಳುಗು
  *ಮೆಡಿ ಹಾಕಿಕ್ಕಿ ಹಾಳಾಗದ್ದೆ ಒಳಿಯೆಕ್ಕಾದರೆ ಮೆಡಿ ಭರಣಿಯ ಮೇಗೆ ಒಂದು ಗೇರು ಬೀಜದ ಓಡು ಒಡದು ಕವುಂಚಿ ಮಡುಗುತ್ತ ಕ್ರಮ ಇದ್ದು ..ಕೆಲವು ಹಳೇ ಅಜ್ಜಿಯಕ್ಕೊಗೆ ಈ ಕೆಣಿ ಗೊಂತಿತ್ತಿದ್ದು… (ಬೀಜದ ಬೊಂಡು ಹತ್ತರೆ ಇಪ್ಪ ಮಕ್ಕೊಗೆ ಕೊಡುಗು)
  * ಇನ್ನಾಣ ವರ್ಷಕ್ಕಿಪ್ಪ ಮೆಡಿ ಈಗಳೇ book ಮಾಡಿ ಮಡುಗುತ್ತ ಕ್ರಮ ಇದ್ದು .ಮರ ಬೇಕನ್ನೆ ! ಕಾಡು ಕಡಿತ್ತ ಗೌಜಿಲಿ ಮರಂಗೊ ಎಲ್ಲಾ ಬಕಾರಿಲಿ… ಇನ್ನು ಬಕ್ಕಾರು ಮಮ್ಮದೆಯತ್ರೇ ಕೇಳೆಕ್ಕಷ್ಟೆ…
  ಒೞೆ ಸಕಾಲಿಕ ಲೇಖನ ..

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಇದಾ ನವಗೆ ಬೇರೆ ಎಂತಕ್ಕುದೆ ಪುರುಸೊತ್ತು ಇಲ್ಲದ್ರುದೆ ಮೆಡಿ ಉಂಬಲೆ ಖಂಡಿತಾ ಪುರುಸೊತ್ತು ಇದ್ದಿದ ! ಒಪ್ಪಣ್ಣಾ, ನವಗೆ ಕೊಡೆಯಾಲದ ಅದ್ದುಲ್ಲನ ಹತ್ರಂದಲೇ ಮೆಡಿಯ ಕ್ರಯಕ್ಕೆ ತೆಕ್ಕೊಳೆಕಷ್ಟೆ. ಕಿಲೊಕ್ಕೆ ಎಂಭತ್ತು ರೂಪಾಯಿ. ಎರಡು ಕಿಲೊ ತಂದು ಕುಪ್ಪಿ ಬರಣಿಲಿ ಹಾಕಿ ಚಿರುಟಿಸಿ ಅರಪ್ಪು ಹಾಕಿ ಉಪ್ಪಿನಕಾಯಿ ಮಾಡಿ ಮಡಗಿದ್ದು ಯಜಮಾಂತಿ. ಒಪ್ಪಣ್ಣಾ, ಮನಗೆ ಬಂದರೆ ಒಟ್ಟಿಂಗೆ ಕೂದು ಉಂಬೊ. ಕಟ್ಟಿ ಕೊಡ್ಳೆ ತಕ್ಕಿತ ಇಲ್ಲೇನೆ. ಶುದ್ದಿ ಸಕಾಲಿಕವಾಗಿ ಚೊಕ್ಕ ಆಯಿದು.

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಸುಭಗ ಭಾವಯ್ಯನ ವೇಷ ಲಾಯಕಾಯಿದು. ಕೊಡೆಯಾಲಲ್ಲಿ “ಮಿಡಿ” ಹಾಕಿದ ಹಾಂಗಿದ್ದು !!

  [Reply]

  VA:F [1.9.22_1171]
  Rating: 0 (from 0 votes)
 8. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  “”ತೆಳಿ ಹೆಜ್ಜೆಯೂ – ಹುಳಿ ಮಜ್ಜಿಗೆಯೂ ಯೇವಗಳೂ ಮಾಡ್ಳಕ್ಕು. ಅದರ ಚೇರ್ಚೆಯ ಮೆಡಿ ಉಪ್ಪಿನಕಾಯಿ ಅದರ ಕಾಲಲ್ಲೇ ಮಾಡಿಗೊಳೇಕು. ಅಪ್ಪೋ!””..ಒಳ್ಳೆಯ ನುಡಿ ಮುತ್ತು..ನಮ್ಮಲ್ಲಿ ಮೆಡಿ ಇಲ್ಲದ್ರು ಇದ್ದಲ್ಲಿಮ್ದ ನವಗೆ ಒಂದು ಕೇನು ಮೆಡಿ ಸಿಕ್ಕಿದ್ದು..ಈ ವರುಶಕ್ಕೆ ಸಾಕು..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ವಿದ್ವಾನಣ್ಣದೊಡ್ಮನೆ ಭಾವಶ್ಯಾಮಣ್ಣಎರುಂಬು ಅಪ್ಪಚ್ಚಿಅನು ಉಡುಪುಮೂಲೆಚುಬ್ಬಣ್ಣಮಾಲಕ್ಕ°ವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ಅನಿತಾ ನರೇಶ್, ಮಂಚಿಜಯಗೌರಿ ಅಕ್ಕ°ವೇಣೂರಣ್ಣಅನುಶ್ರೀ ಬಂಡಾಡಿಮಂಗ್ಳೂರ ಮಾಣಿವಸಂತರಾಜ್ ಹಳೆಮನೆvreddhiಕೇಜಿಮಾವ°ವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಯೇನಂಕೂಡ್ಳು ಅಣ್ಣಪೆರ್ಲದಣ್ಣಗಣೇಶ ಮಾವ°ಡೈಮಂಡು ಭಾವಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ