ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ

ಎಂತ ಮಾಡಿರೂ ವಿರೋಧ ತೋರ್ಸುವೋರು ನಮ್ಮ ಸಮಾಜಲ್ಲಿ ಇದ್ದವು. ಯೇವ ಒಳ್ಳೆ ಕೆಲಸ, ಕೆಟ್ಟ ಕೆಲಸ ಆಗಲಿ – ಅದಕ್ಕೊಂದು ವಿರೋಧ ಮಾಡದ್ರೆ ಒರಕ್ಕು ಬತ್ತಿಲ್ಲೆ – ಹೇಳ್ತ ನಮುನೆಯ ಜೆನಂಗೊ.
ಮಹಾ ಮಹಾ ಪುರುಷರಿಂಗೇ ವಿರೋಧಂಗೊ ಇದ್ದತ್ತಾಡ, ಇನ್ನು ನಾವು ಯೇವ ಲೆಕ್ಕ!?
~
ದನಗಳ ಕಟುಕರಿಂಗೆ ಮಾರ್ಲಾಗ – ಹೇಳ್ತ ಕಾನೂನಿನ ನಮ್ಮ ದೇಶದ ರಾಜಪತ್ರಲ್ಲಿ ಬರದ್ದವು ಈಗಾಣ ಸರಕಾರ. ಹಾಂಗಾಗಿ ಎಲ್ಲ ರಾಜ್ಯಂಗಳಲ್ಲಿ ಇದರ ಅನುವು ಮಾಡೆಕ್ಕಾವುತ್ತು. ಕೆಲವು ರಾಜ್ಯಂಗಳ ಅದರ ಸ್ವಾಗತುಸಿದರೆ, ಕೆಲವು ರಾಜ್ಯಂಗೊ ಈಗಾಗಲೇ ವಿರೋಧ ತೋರ್ಸಿದ್ದು.
ದೇಶದ ಮೂಲೆ ಮೂಲೆಲಿ ಈ ಕಾರ್ಯಕ್ಕೆ ಬೆಂಬಲ ಬಂದರೆ, ಕೆಲವು ದಿಕ್ಕೆ ಇದಕ್ಕೆ ವಿರೋಧವೂ ಬಯಿಂದು.

ಹಾಂಗೆ ಬಂದ ವಿರೋಧಲ್ಲಿ – ಗೋಮಾಂಸ ಉತ್ಸವವೂ ಒಂದು!
ಅಪ್ಪು, ಕೆಲವು ಕೆಂಪಣ್ಣಂಗೊ, ಪಚ್ಚೆ ಬಣ್ಣಂಗೊ ಸೇರಿಗೊಂಡು ಸರ್ಕಾರವ ವಿರೋಧ ಮಾಡ್ಳೆ ಬೇಕಾಗಿ ‘ಗೋಮಾಂಸ ಉತ್ಸವ’ ಮಾಡುವೊ ಹೇದು ನಿಜ ಮಾಡಿದವು. ಆ ಪ್ರಕಾರ ಮೊನ್ನೆ ಒಂದಿನ ಬೆಂಗ್ಳೂರಿಲಿ ದೊಡಾ ಆಯೋಜನೆಯೂ ಸುರು ಆತು.
ಆದರೆ, ನಮ್ಮ ಗುರುಗಳ, ಹಲವಾರು ಹಿತ ಚಿಂತಕರ, ರಾಷ್ಟ್ರವಾದಿಗಳ, ನಮ್ಮ ಹಾಂಗಿಪ್ಪ ಸಹಸ್ರಾರು ಗೋಭಕ್ತರ ಹೋರಾಟಲ್ಲಿ ಆ ಹಬ್ಬ ಹೆಸರೇ ಇಲ್ಲದ್ದೆ ನಿರ್ನಾಮ ಆತು, ಮುಗುದೇ ಹೋತು.
~
ಬೆಂಗ್ಳೂರಿಲಿ ಏರ್ಪಾಡು ಮಾಡಿದ ಗೋಮಾಂಸದ ಆಚರಣೆ ಪುಸ್ಕ ಆತು – ಹೇಳ್ತದು ಒಂದು ಕೊಶಿ ಆದರೆ,
ಹಾಂಗಿಪ್ಪ ಮನಸ್ಥಿತಿಯ ತಿದ್ದೇಕು, ಸಮಾಜಕ್ಕೆ ಒಳ್ಳೆದರ ತೋರ್ಸಿಕೊಡೇಕು – ಹೇಳ್ತ ಯೋಜನೆ ಇನ್ನೊಂದು.
ನಮ್ಮ ಮಠದ ಕಾಮದುಘಾ ತಂಡಕ್ಕೆ ಬಂದದು ಆ ಎರಡ್ಣೇ ಕಾಳಜಿ.

ದನ ಜೀವಂತ ಇಪ್ಪಗಾಣ ಉಪಯೋಗವ ಸಮಾಜಕ್ಕೆ ಹೇಳಿ ಕೊಟ್ರೆ ದನವ ಕಡುದು ತಿನ್ನೇಕು ಹೇಳ್ತ ಮನೋಭಾವ ಬದಲಕ್ಕೋ ಏನೋ!
ಆ ಉದ್ದೇಶಲ್ಲಿ ನಾಡ್ತು ಬೆಂಗ್ಳೂರಿಲಿ ಆಯೋಜನೆ ಆದ ಕಾರ್ಯಕ್ರಮವೇ “ಹಾಲು ಹಬ್ಬ”.
~

ಕುಂಞಿ ಬಾಬೆಗೆ ಅಬ್ಬೆ ಹಾಲು ಕೊಡ್ಸು ನಿಲ್ಲುಸಿದ ಕೂಡ್ಳೇ ಆ ಬಾಬೆ ಕುಡಿವದು ದನದ ಹಾಲು. ಸಾವನ್ನಾರವೂ ಮತ್ತೆ ಆ ಗೋಮಾತೆಯೇ ಅಬ್ಬೆ. ಹಾಂಗಾಗಿ, ಹಾಲು ಕೊಡುವ ಆ ಅಮ್ಮನ ಸ್ಮರಣೆಗೆ ಹಾಲು ಹಬ್ಬ;
ದನುವಿಂಗೆ ಕೃತಜ್ಞತೆ ತೋರ್ಸಲೆ ಹಾಲು ಹಬ್ಬ;
ವಾತ್ಸಲ್ಯದ ಅಮೃತ ಧಾರೆಯ ನವಗೆಲ್ಲೋರಿಂಗೂ ಕೊಡ್ತ ಅಬ್ಬೆಗೆ ನಮ್ಮ ಪ್ರೀತಿಯ ತೋರ್ಸುವ ಕಾರ್ಯಕ್ರಮವೇ ಹಾಲು ಹಬ್ಬ.

ಇದಿಷ್ಟೇ ಅಲ್ಲದ್ದೆ,
ಆ ದಿನ ಕಾರ್ಯಕ್ರಮಲ್ಲಿ ಮುಖ್ಯವಾಗಿ “ಗೋ ಪೂಜೆ” ಇದ್ದಾಡ.
ಇದಲ್ಲದ್ದೇ,
– ಅಟ್ಟುಂಬೊಳ ಉಂಬೆ ಜಾಯಿಂದ ಮಾಡುವ ಹಲವು ಚೀಪೆಗಳ ಪ್ರಾತ್ಯಕ್ಷಿಕೆ, ಮಾರಾಟ ಇದ್ದಾಡ;
– ಗವ್ಯ, ಸಾತ್ವಿಕ ಉತ್ಪನ್ನಂಗಳ ಪ್ರದರ್ಶನ ಽ ಮಾರಾಟ
– ಹಾಲು ಽ ದನ ಗಳ ದೊಡ್ಡತನವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಂಗೊ,
– ಹಾಲಿನ ಶ್ರೇಷ್ಟತೆ ಸಾರುವ ಸಾಹಿತ್ಯಂಗಳ ಲೋಕಾರ್ಪಣೆ,
– ಗವ್ಯ ಉತ್ಪನ್ನಂಗಳ ಮಹಿಮೆಯ ಅನಾವರಣ
– ಪ್ರಸ್ತುತಿ ಪ್ರದರ್ಶನಂಗೊ
ಇನ್ನೂ ಹಲವು ಕಾರ್ಯಕ್ರಮಂಗೊ ಇದ್ದಾಡ.

ಈ ಕಾರ್ಯಕ್ರಮಕ್ಕೆ ನೂರಾರು ಗೋವುಗೊ, ಸಂತರುಗೊ ಬತ್ತವು. ಸಾವಿರಾರು, ಲಕ್ಷಾಂತರ ಗೋ ಪ್ರೇಮಿಗೊ ನಾವುದೇ ಒಟ್ಟು ಸೇರುವನೋ?
~

ಹಾಂಗಾರೆ ಬನ್ನಿ, ಇದೇ ಜೂನ್ ೧೧ರ ಆದಿತ್ಯವಾರ ಬೆಂಗುಳೂರಿನ ವಿಜಯನಗರದ ಶ್ರೀ ಭಾರತೀ ಕೋಲೇಜು ಆವರಣಲ್ಲಿ, ಮಧ್ಯಾನ್ನ ತಿರುಗಿ ಮೂರು ಘಂಟೆಗೆ.

ಪೇಟೆಯ ಮಧ್ಯಲ್ಲಿ ಗೋಪ್ರೇಮದ ಕಾರ್ಯಕ್ರಮಂಗಳ ಕಾಂಬ ಯೋಗ ನವಗಾಗಲಿ.
ಧನಕ್ಕೆ ಹತ್ತರೆ ಅಪ್ಪಗಳೂ ದನಕ್ಕೆ ಹತ್ತರೆ ಇಪ್ಪೊ;
ಒಳ್ಳೆ ದೇಸೀ ಹಾಲು ಕುಡುದು ಆರೋಗ್ಯವಾಗಿಪ್ಪೊ.

ಅಲ್ಲದೋ?

~
ಒಂದೊಪ್ಪ: ದನ ಒಳುದರೆ ಹಾಲು ಒಳಿಗು,
ಹಾಲಿನ ಬಗ್ಗೆ ಜ್ಞಾನ ಮೂಡಿರೆ ದನ ಒಳಿಗು.

ಒಪ್ಪಣ್ಣ

   

You may also like...

3 Responses

  1. ಹರೇರಾಮ!
    ಒಪ್ಪ ವಿಷಯವ ಒಪ್ಪಕ್ಕೆ ಹೇಳಿದ್ದೆ ಒಪ್ಪಣ್ಣೋ! ಹಾಲು ಹಬ್ಬ ನಿಜಕ್ಕು ಅದ್ಭುತ ಪರಿಕಲ್ಪನೆ! ಗೋಮಾಂಸ ಹಬ್ಬ ಎಲ್ಲ ಬರೇ ರಾಜಕೀಯ ಪ್ರೇರಿತ, ನಾವು ಹಿಂದುಗೋ ಲೆಕ್ಕಂದ ಜಾಸ್ತಿ ಸಹಿಷ್ಣುಗೊ ಆದ ಫಲ ಅಷ್ಟೆ. ಆದರೆ ಅದು ಬಹಳಕಾಲ ನಿಂಬಂಥಾದ್ದಲ್ಲ ಹೇಳೂದರಲ್ಲಿ ಸಂಶಯ ಇಲ್ಲೆ. ಎಷ್ಟು ಸಮಯ ಜನಂಗಳ ಮಂಗ ಮಾಡ್ಲೆಡಿಗು? ಸರಕಾರ ಕಳ್ಸಿದ ಸುತ್ತೋಲೆಲಿ ಗೋಮಾಂಸ ನಿಷೇಧದ ಸಂಗತಿಯೇ ಇತ್ತಿಲ್ಲೆ ಹೇಳುವ ವಿಷಯ ಪ್ರಚಾರ ಅಪ್ಪದ್ದೆ, ಬಲವಾದ ವಿರೋಧ ನಮ್ಮ ಹೊಡೆಂದ ಬಂದಪ್ಪದ್ದೆ ಬೊಬ್ಬೆ ಹೊಡವವೆಲ್ಲ ನಾಪತ್ತೆ ಆದವಿಲ್ಲೆಯಾ? ಇಬ್ಬರ ಕಚ್ಚಿಸಿ ಹಾಕಿ ಎಡೆಲಿ ತಿಂಬ ಜಾತಿಯೋರಿಂದಲೇ ಇಷ್ಟೆಲ್ಲ ಅಪ್ಪದು. ಶ್ರೀಗುರುಗಳ ಹಾಗೂ ಕಾಮದುಘಾ ತಂಡದ ಈ ಹೊಸ ಪ್ರಯತ್ನ ಅಭೂತಪೂರ್ವ ಯಶಸ್ಸು ಕಾಣಲ್ಲಿ ಹೇಳಿ ಹಾರೈಸುತ್ತೆ!

  2. ಬೊಳುಂಬು ಗೋಪಾಲ says:

    ಒಳ್ಳೆ ಶುದ್ದಿ. ಒಳ್ಳೆ ಕಾರ್ಯಕ್ರಮ. ಗೋಮಾಂಸ ಪ್ರಿಯರ ಸದ್ದಡುಗಸಲೆ ಗೋಕ್ಷೀರಬಲ ಇನ್ನಷ್ಟು ಬೆಳೆಯಲಿ. ಎಲ್ಲೋರ ಸಹಕಾರಲ್ಲಿ
    ಈ ಉತ್ತಮ ಕಾರ್ಯಕ್ಕೆ ಯಶಸ್ಸು ಸಿಕ್ಕಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *