ನಂಬಿಕೆಗಳ ಅಂತಃಸತ್ವ ತಿಳಿಯದ್ದ ಮೂಢಂಗೆ ಎಲ್ಲವೂ ಮೂಢನಂಬಿಕೆಗಳೇ..!

November 8, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಂಬಿಕೆಗೂ, ಮೂಢನಂಬಿಕೆಗೂ ವಿತ್ಯಾಸ ಹುಡ್ಕುಸ್ಸು ಭಾರೀ ಕಷ್ಟ. ಅದೆಲ್ಲವೂ ನಾವು ತೆಕ್ಕೊಂಬ ರೀತಿಲಿ ಇದ್ದು.
ಕಳುದ ಸರ್ತಿ ನಾವು ಸೂತಕ ಆಚರಣೆ ಬಗ್ಗೆ ಮಾತಾಡಿದ್ದು ಅಲ್ಲದೋ; ಅದೇ ನಮುನೆಯ ಹಲವು ಆಚರಣೆಗಳ ಬಗ್ಗೆಯೂ ಮಾತಾಡಿದ್ದು – ಅಷ್ಟಪ್ಪಗಳೇ ಈ ಸಂಗತಿಯೂ ಮಾತಾಡಿಕ್ಕುವೊ° ಹೇದು ನೆಂಪಾತು – ಈಗ ಪುರುಸೊತ್ತುದೇ, ಸಂದರ್ಭವೂ ಬಂದಕಾರಣ ಈ ವಾರ ಮಾತಾಡಿಕ್ಕುವೊ° – ಆಗದೋ?

~

ಶಂಭಜ್ಜನ ಕಾಲಲ್ಲಿ ಮಳೆಬೆಳೆ ಎಲ್ಲವೂ ಸರಿಯಾಗಿ ನೆಡಕ್ಕೊಂಡಿತ್ತು. ಇದಕ್ಕೆ ಕಾರಣ ಎಂತರ – ಹೇದರೆ, ಶಂಬಜ್ಜನ ಪ್ರಕಾರ – ಧರ್ಮಕರ್ಮಂಗಳನ್ನೂ ಸರಿಯಾಗಿ ಆಚರಣೆ ಮಾಡಿಗೊಂಡು ಬಯಿಂದು. ಕಾಂಬುಅಜ್ಜಿಯೂ ಹಾಂಗೇ, ಷಷ್ಠಿ, ಕಾರ್ತಿಕ ಸೋಮವಾರ ಇತ್ಯಾದಿ ದಿನಂಗಳಲ್ಲಿ ಒಪ್ಪೊತ್ತು ಉಪವಾಸ ಆಚರಣೆಗೊ, ಸೋಣೆ ತಿಂಗಳಿಲಿ ಸೋಣೆ ಅಜ್ಜಿಗೆ ಆಚರಣೆಗೊ, ಮಡಿ ಮೈಲಿಗೆ ಶುದ್ಧ ಆಚರಣೆಗೊ, ಇದೆಲ್ಲವೂ ನೆಡೆಶಿಗೊಂಡು ಬಕ್ಕು.
ಶಂಬಜ್ಜಂದೇ – ನಿತ್ಯ ಸಂಧ್ಯಾವಂದನೆ, ಅಗ್ನಿಕಾರ್ಯ, ಪ್ರದೋಷ ಉಪವಾಸ, ದೇವತಾರಾಧನೆ, ಭೂತಕ್ಕೆ ಬೊಂಡ ಕೊಡಪ್ಪುಸ್ಸು – ಹೀಂಗೆಲ್ಲ ಹಲವು ಕಾರ್ಯಂಗಳ ಶ್ರದ್ಧೇಲಿ ನೆಡೆಶುಗು.
ಇದೆಲ್ಲ ಚೆಂದಕೆ ನೆಡದ ಕಾರಣವೇ ಆ ಮನೆ ಬೆಳಗಿತ್ತು – ಹೇಳ್ತದು ಶಂಬಜ್ಜನೇ ಕಂಡುಗೊಂಡ ಸತ್ಯ.

ಆ ಕಾರಣಕ್ಕೇ – ಮುಂದೆ ರಂಗಮಾವಂಗೂ ಇದೆಲ್ಲದರ ನೆಡೆಶಲೆ ಪ್ರೇರೇಪಣೆ, ಮಾರ್ಗದರ್ಶನವ ಕೊಟ್ಟವು. ಈಗ ರಂಗಮಾವನ ಕಾಲ – ಎಡಿಗಾರೂ ಎಡಿಯದ್ದರೂ ಶ್ರದ್ಧೇಲಿ ಎಲ್ಲವೂ ನೆಡಕ್ಕೊಂಡು ಬತ್ತು.
ತಕ್ಕಮಟ್ಟಿಂಗೆ ಚೆಂದಲ್ಲೇ ಇದ್ದವು ಅವು. ಯೇವ ಆಚರಣೆಗಳನ್ನೂ, ಯೇವ ನಂಬಿಕೆಗಳನ್ನೂ “ಫೋ, ಇದು ಮೂಢನಂಬಿಕೆ” ಹೇದು ಬಿಟ್ಟಿದವಿಲ್ಲೆ. ಎಂತಗೆ – ಹೇದರೆ, ಅದೆಲ್ಲದರ ಹಿಂದಾಣ “ಅಂತಃಸತ್ವ” ಅರಡಿಗು ಅವಕ್ಕೆ! ಆಚರಣೆಯ ಹಿಂದಾಣ ಭಾವನೆಗೊ ಅರಡಿಗು. ಮನಸ್ಸಿಂಗೆ ಇದೆಲ್ಲದರ ಬಗೆಗೆ ಪ್ರೀತಿ ಅರಡಿಗು.

~

ಯೇವದೇ ಆಚರಣೆಗೊ ಅದರಷ್ಟಕೇ ಬಂದು ಉದುರಿದ್ದಲ್ಲ. ಅಜ್ಜಂದ್ರು ಯೇವದೋ ಒಂದು ಪರಿಕಲ್ಪನೆ ಮಡಗಿಯೇ ಹಾಂಗಿರ್ಸ ಆಚರಣೆಗಳ ಆರಂಭ ಮಾಡಿದ್ದವು. ಹೆರಿಯೋರ ಬಗ್ಗೆ ಗೌರವವೂ, ಆಚರಣೆಗಳ ಧನಾತ್ಮಕವಾಗಿ ತೆಕ್ಕೊಂಬ ಪ್ರೀತಿಯೂ ಇದ್ದರೆ ಈ ಎಲ್ಲವನ್ನೂ ಮುಂದುವರುಸಲೆ ಮನಸ್ಸು ಬಕ್ಕು. ಅಲ್ಲದ್ದರೆ ಎಂತಕ್ಕು? ಈ ನಂಬಿಕೆಗೊ ಎಲ್ಲವೂ “ಮೂಢ ನಂಬಿಕೆ” ಹೇಳಿ ಆಗಿ ಹೋಕು! ಈಗ ಆವುತ್ತಾ ಇಪ್ಪದೂ ಅದುವೇ, ಓಯಿ!!

~

ಕರ್ನಾಟಕಲ್ಲಿ ಅದೆಂತದೋ ಕಾನೂನು ತತ್ತವಾಡ.
ಮೂಢನಂಬಿಕೆ, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಶಾಲಾ ಮಕ್ಕಳ ದೇವಸ್ಥಾನ ಪ್ರವಾಸ, ವ್ಯಕ್ತಿಪೂಜೆ, ಪಾದಪೂಜೆ, ಪಲ್ಲಕ್ಕಿ ಉತ್ಸವ – ಇದೆಲ್ಲವನ್ನೂ ಒಟ್ಟಾಗಿ “ಮೂಢ ನಂಬಿಕೆ” – ಹೇದು ಪರಿಗಣನೆ ಮಾಡಿ, ಎಲ್ಲವನ್ನೂ ನಿಷೇಧ ಮಾಡುವ ಕಾನೂನು!!
ದೇವರೇ – ಎಂತ ಬಂತು ಈ ಒಂದು ಮೂಢ ಬುದ್ಧಿ ಸರಕಾರಕ್ಕೆ!

ಈ ಆಚರಣೆಗೊ ಮೇಲ್ನೋಟಕ್ಕೆ ಮೂಢ ಹೇದು ಕಾಂಗು, ಆದರೆ ಅದರ ನಿಷೇಧ ಮಾಡ್ಳೆ ಸುಲಭವೋ?

~

ಜ್ಯೋತಿಷ್ಯ ಹೇದರೆಂತ್ಸು?
ಅಮೋಘವಾದ ಗಣಿತ ಶಾಸ್ತ್ರವೂ, ಅಸಾಧಾರಣವಾದ ಸಾಧ್ಯಾಸಾಧ್ಯತೆಯ ಕುರಿತಾದ ವಿಶ್ಲೇಷಣೆಯೂ ಇಪ್ಪ ವಿಜ್ಞಾನ. ಗಣಿತ ಭಾಗ, ಫಲಾ ಭಾಗ – ಹೇದು ಎರಡು ವರ್ಗ ಮಾಡುವೊ°.

ಇಂಥಾ ದಿನ ಇಂಥಾ ದಿಕ್ಕೆ ಮಂಗಳ ಗ್ರಹ ಬತ್ತು. ಅಥವಾ, ಇಂಥಾ ದಿನದ ಇಂಥಾ ಗಂಟೆಯ ಇಂಥಾ ಘಳಿಗೆಯ, ಇಂಥಾ ಸೆಕೆಂಡಿಂಗೆ ಚಂದ್ರನ ಮೇಗೆ ಸೂರ್ಯನ ಭೂಮಿಯ ನೆರಳು ಬಡಿತ್ತು – ಗ್ರಹಣ ಹಿಡಿತ್ತು, ಅಥವಾ ಅಮಾವಾಸ್ಯೆ ಬತ್ತು – ಹೀಂಗೆಲ್ಲ ನೂರಾರು ಒರಿಶ ಮದಲೇ ಲೆಖ್ಖ ಹಾಕಲೆ ಎಡಿತ್ತು – ಹೇದಾದರೆ, ಅದೊಂದು ಸುಂದರ ವಿಜ್ಞಾನವೇ ಅಲ್ಲದೋ?

ಭೂಮಿಯ ಆಧಾರ ಮಡಿಕ್ಕೊಂಡು, ಒಬ್ಬ ವೆಗ್ತಿ ಹುಟ್ಟುವಾಗ ಯೇವೆಲ್ಲ ಗ್ರಹ-ನಕ್ಷತ್ರಂಗೊ ಯೇವ ಯೇವ ಕೋನಲ್ಲಿ ಇತ್ತಿದ್ದವು – ಹೇಳ್ತರ ಲೆಕ್ಕಾಚಾರ ಹಾಕಿ ಜೋಯಿಷಪ್ಪಚ್ಚಿ ಬರದು ಕೊಡುವಾಗ, ಎಷ್ಟು ಗಣಿತ ಮಾಡ್ತವು ನಿಂಗೊಗೆ ಅರಡಿಗೋ?
ಮೂರು ತಾವುಕಾಗತ ಮುಗುಶುತ್ತವು; ಒಂದು ಜಾತಕ ಬರೆತ್ತವು.
ಶೆನಿ, ಶುಕ್ರ, ಅಂಗಾರಕ, ಚಂದ್ರ – ಇವೆಲ್ಲವೂ ಭೂಮಿಂದ ನೋಡುವಾಗ ಇಂಥಾ ಕೋನಲ್ಲಿ ಇತ್ತಿದ್ದವು – ಹೇಳ್ತರ ಡಿಗ್ರಿ ಅಲ್ಲ, ಅದರಿಂದಲೂ ಸಣ್ಣ ರಾಶಿ-ಭಾಗೆ-ಕಲೆ-ವಿಕಲೆ ಯ ಪ್ರಮಾಣಲ್ಲಿ ತಪ್ಪದ್ದೆ ಬರದು ಕೊಡ್ತವು.
ಇದು ನಮ್ಮ ಹೆರಿಯೋರ ಆಸ್ತಿ.

ಇಂಥಾ ಗ್ರಹಂಗೊ ಇಂಥಾ ದಿಕ್ಕೆ ಇದ್ದರೆ ಅದರ ಫಲ ಹೀಂಗಕ್ಕು ಹೇದು ಅಜ್ಜಂದ್ರು ಕಂಡುಗೊಂಡಿದವು. ಶೆನಿ ಸೂರ್ಯೋದಯ ಅಪ್ಪ ಜಾಗೆಲಿ ಇದ್ದರೆ ಇಂಥಾ ಸಮಸ್ಯೆಗೊ ಅಂದು ಬಯಿಂದು; ಶುಕ್ರ ಚಂದ್ರನ ಒಟ್ಟಿಂಗೇ ಇದ್ದರೆ ಪೈಶೆ ತುಂಬುಗು – ಹೀಂಗೇ ಸಾಧ್ಯಾಸಾಧ್ಯತೆಗಳ ಬಗ್ಗೆ ಹೇಳಿಗೊಂಡು ಹೋವುತ್ತವು. ಇದೆಲ್ಲವನ್ನೂ ನಿಂಗೊ ತೆಕ್ಕೊಳಿ, ಆಚರಣೆ ಮಾಡಿ ಹೇದು ಅವು ಬರದ್ದವೋ? ಜ್ಯೋತಿಷ್ಯ ಪೂರ್ತಿಯಾಗಿ ಕಲ್ತೋನು ಅದರ ಮೂಢನಂಬಿಕೆ ಹೇಳ°.
ಅಂಬಗ, ಜ್ಯೋತಿಷ್ಯವೂ ಮೂಢನಂಬಿಕೆ ಹೇಳಿ ಆದ್ಸೆಂತಗೆ? – ಬೌಶ್ಷ ಅರ್ಧಂಬರ್ಧ ಕಲ್ತು ಟೀವಿರೇಡ್ಯಂಗಳಲ್ಲಿ ಪರಿಹಾರ ಹೇಳುಲೆ ಸುರುಮಾಡಿದವಲ್ಲದೋ – ಅವರಿಂದಾಗಿ ಆಯಿಕ್ಕು.
ಇಡೀ ಜ್ಯೋತಿಃಶಾಸ್ತ್ರವನ್ನೇ ಮೂಢ ಹೇದಾರೆ ಹೇಳ್ತೋನೇ ಮೂಢ – ಹೇದು ಗೊಂತಕ್ಕು ನವಗೆ! ಪೋ!

~

ಕ್ರಿಕೇಟಿಲಿ ಸಚಿನು ಹೇದರೆ ದೇವರು.
ಅಪುರೂಪಲ್ಲಿ ಅದು ಒಂದು ಐವತ್ತು ರನ್ನು ಮಾಡಿರೆ ಸಾಕು, ನಾಕು ದಿನ ಅದರ ಪಟ ಪೇಪರುಗಳಲ್ಲಿ ಬತ್ತು.
ಅದು ಯೇವ ಚೆಂಡಿಂಗೆ ಹೇಂಗೆ ಬಡ್ತು, ಆರತ್ರೆ ಎಂತ ಹೇಳಿತ್ತು, ಯೇವ ಬಣ್ಣದ ಪೇಂಟಂಗಿ ಹಾಕಿತ್ತು, ಯೇವ ಜ್ಯೂಸು ಕುಡಿತ್ತು – ಎಲ್ಲವನ್ನೂ ಗಂಟೆಗಂಟೆಗೆ ತೋರ್ಸುಗು.
ಅಂಬಗ, ಇದು ವ್ಯಕ್ತಿಪೂಜೆಯೇ ಅಲ್ಲದೋ?

ಒಬ್ಬ ಮನುಷ್ಯ° ಇನ್ನೊಬ್ಬ ಮನುಷ್ಯನ ಪೂಜೆ ಮಾಡ್ಳಾಗ ಆಗಿಕ್ಕು; ಆದರೆ ಮಾಡ್ತೋರು ಅವರವರ ಕೊಶಿಲಿ ಮಾಡುದು.
ನೀನು ಎನ್ನ ಪೂಜೆ ಮಾಡು – ಹೇದು ಅವ° ಒತ್ತಾಯ ಮಾಡಿರೆ ಕತೆ ಬೇರೆ; ಇದು ಸಂಪೂರ್ಣವಾಗಿ ಅವರ ಕೊಶಿಲೇ ಮಾಡ್ತದು. ಅಲ್ಲದೋ?
ಕ್ರಿಗೇಟಿನ ಸಚಿನ್ನಿನ ಪೂಜೆ ಮಾಡಿರೆ ಸಂಕುಮಗ ರವಿಗೆ ಕೊಶಿ ಆವುತ್ತರೆ, ಕ್ರಿಕೇಟು ಗೆಲ್ಲುಸಿದ ಸಚಿನ್ನಿನ ಬಗ್ಗೆ ಗೌರವಾದರಗ ಇದ್ದರೆ, ರಾಮಕಥಾ, ಶಂಕರ ಕಥಾ ಇತ್ಯಾದಿಗಳ ಮೂಲಕ ಸಾವಿರಾರು ಜೆನಂಗೊಕ್ಕೆ ಮನದಾನಂದ ಕೊಟ್ಟ, ಮಾರ್ಗದರ್ಶನ ಕೊಟ್ಟವರ ಬಗ್ಗೆಯೂ ಕೊಶಿ ಅಕ್ಕು, ಗೌರವ ಬಕ್ಕು.

ಕ್ರಿಗೇಟಿಲಿ ನೂರು ರನ್ನು ಹೆಟ್ಟಿದ ಜೆನರ ಹೆಗಲ ಮೇಗೆ ಹೊತ್ತುಗೊಂಡು ಹೋವುತ್ತವು. ಮಾರ್ಗದರ್ಶನ ಕೊಡ್ತ ಗುರುಪೀಠವ ಪಲ್ಲಕ್ಕಿಲಿ ಕೂರುಸಿ ಮೆರವಣಿಗೆ ಮಾಡುಸುಲಾಗದೋ?

ಇಲ್ಲಿಯೂ ನಾವು ನೆಂಪು ಮಡಿಕ್ಕೊಳೇಕಾದ್ಸು – ಇದು ಜೆನಂಗೊ ಅವ್ವಾಗಿ ಮಾಡ್ತದು; ಅವರವರ ಕೊಶಿಲಿ ಮಾಡ್ತದು.
ಗುರುಗೊ ಆಗಲಿ, ಪಲ್ಲಕ್ಕಿಲಿ ಕೂರ್ತೋನು ಆಗಲೀ ಹೇಳಿದ್ದದಲ್ಲ.

~

ಓ ಆ ಸುಬ್ರಮಣ್ಯಲ್ಲಿ ಒಂದು ನಂಬಿಕೆ ಇದ್ದು.
ಷಷ್ಠಿ ದಿನ ಬ್ರಾಹ್ಮಣ ಭೋಜನ ಆದಲ್ಲಿ ಹಂತಿಯ ಮೇಗೆ ಉರುಳಿಂಡು ಹೋಗಿ ಕುಮಾರ ಧಾರೆಲಿ ಮಿಂದು, ದೇವರ ದರ್ಶನ ತೆಕ್ಕೊಂದರೆ ಮೈಕೈ ರೋಗಂಗೊ ಗುಣ ಆವುತ್ತು –ಹೇದು. ಇದು ಆ ಊರಿನ ನಂಬಿಕೆ. ಹೀಂಗೆ ಉರುಳುತ್ತೋರಲ್ಲಿ; ಬಟ್ರೂ ಇದ್ದವು; ಬಂಟ್ರೂ ಇದ್ದವು; ಮಲೆಕುಡಿಯರೂ ಇದ್ದವು. ಅವರ ಬೇರೆ ಆರೂ ಒತ್ತಾಯ ಮಾಡಿದ್ದಲ್ಲ; ಅವರವರ ಸ್ವ-ಇಚ್ಛೆಲಿ ಬಂದು ಆ ಕಾರ್ಯ ಮಾಡ್ತದು. ಅದೊಂದು ನಂಬಿಕೆ.

ಮದಲಿಂಗೆ ಹೀಂಗೆ ಮಾಡಿದ ಅವರ ಹೆರಿಯೋರಿಂಗೆ ಗುಣ ಆಯಿದು; ಹಾಂಗೆ ಈಗ ಅವುದೇ ಮಾಡ್ತವು. ಇದರ್ಲಿ ಬ್ರಾಹ್ಮಣರದ್ದು ಎಂತ ತಪ್ಪು!?
ಅಂತೇ ದೂರು ಹಾಕೆಕ್ಕು ಹೇದು ದೂರುಲಾಗ ಭಾವಾ!

~
ದೇವಸ್ಥಾನಂಗಳ ಕಂಡ್ರೆ ಆ ಊರಿನ ಕಂಡ ಹಾಂಗೇ. ಆ ಊರಿನ ಜೆನಜೀವನ, ಅಲ್ಯಾಣ ಸಂಪ್ರದಾಯಂಗಳ ಆ ಊರಿನ ದೇವಸ್ಥಾನಲ್ಲಿ ಕಾಂಗು. ಹಾಂಗಾಗಿಯೇ ಊರ ಪ್ರವಾಸ ಹೇದು ಮಾಡಿರೆ ಒಂದು ಗಳಿಗೆ ದೇವಸ್ಥಾನಕ್ಕೂ ಬಂದುಬಿಡುಗು.
ಬೇಲೂರು – ಹಳೆಬೀಡಿನ ಹಾಂಗಿರ್ಸ ದೇವಸ್ಥಾನಲ್ಲಿ ಅಮೋಘವಾದ ಶಿಲ್ಪಕಲೆಗೊ, ವಾಸ್ತು ಶಾಸ್ತ್ರಂಗೊ, ಕಲ್ಲಿನ ವಿಗ್ರಹಂಗೊ ಇದ್ದು. ಅಜಂತ ಎಲ್ಲೋರದ ಹಾಂಗಿರ್ಸ ದೇವಸ್ಥಾನಲ್ಲಿ ಸಾವಿರಾರು ಒರಿಶ ಮದಲೇ ಮಾಡಿದ ಬಣ್ಣದ ಚಿತ್ರಂಗೊ ಈಗಳೂ ಇದ್ದು.
ಇದೆಲ್ಲವನ್ನೂ ನಮ್ಮ ಇನ್ನಾಣ ಮಕ್ಕೊ ನೋಡೆಡದೋ? ಅವರ ಮಾಷ್ಟ್ರಕ್ಕೊ ನಮ್ಮ ಹೆರಿಯೋರ ಹಿರಿಮೆಯ ವಿವರ್ಸೆಡದೋ?
ಆದರೆ, ದೇವಸ್ಥಾನ ಪ್ರವಾಸಕ್ಕೂ ಈ ಮೂಢನಂಬಿಕೆಯ ಸ್ಥಾನ ಬಂದು ಬಿದ್ದತ್ತೋ?

~

ಅದಕ್ಕೇ ಮಾಷ್ಟ್ರುಮಾವ° ಹೇಳುದು- ನಂಬಿಕೆಯ ಅಂತಃಸತ್ವ ತಿಳಿಯಲೆಡಿಯದ್ದ ಮೂಢಂಗೆ ಎಲ್ಲವೂ ಮೂಢನಂಬಿಕೆಗಳೇ ಆಗಿರ್ತು. ಆನು ಮಾಡ್ತ ಆಚರಣೆಯ ಸತ್ವ ಆಚವಂಗೆ ಅರಡಿಯದ್ದರೆ ಇದು ಅವಂಗೆ ಮೂಢ ನಂಬಿಕೆ; ಆಚವಂದು ಎನಗೆ ಅರ್ಥ ಆಗದ್ದರೆ ಅದು ಮೂಢನಂಬಿಕೆ. ಆದರೆ, ನಮ್ಮ ಸಂಸ್ಕೃತಿಲಿ ಎಲ್ಲವುದೇ ಸ್ವಾಗತ. ಒಂದು ಕಾರ್ಯ ಮಾಡ್ಳಾಗ – ಹೇದು ನಿಲ್ಲುಸಲೆ ಇದು ಬ್ಯಾರಿಗಳ ದೇಶ ಅಲ್ಲ. ಇದು ಭಾರತ. “ಆನು ಮಾಡ್ತಿಲ್ಲೆ” ಹೇದು ಸುಮ್ಮನೆ ಕೂರ್ಲಿ, ಆದರೆ ಆಚವಂದೇ ಮಾಡುದು ಬೇಡ – ಹೇಳ್ತದು ಎಷ್ಟು ಸರಿ?
ನಿನ್ನ ಹೆಗಲ ಮೇಲೆ ಅವ° ಮಾಡುದಲ್ಲನ್ನೇ – ಹೇಳ್ತ ಉತ್ತರವೇ ಕೊಡೆಕ್ಕಾವುತ್ತು.

~

ನಮ್ಮ ಎಷ್ಟೋ ಆಚರಣೆಗೊ “ಮೂಢನಂಬಿಕೆ” ಹೇದು ಪರಿಗಣನೆ ಆಗಿ ಎಲ್ಲವೂ ನಿಷೇಧ ಆವುತ್ತಾ ಇದ್ದು.
ಶ್ರೀದೇವರ ಪಾದಪೂಜೆ ಮಾಡಿರೆ ಪೋಲೀಸು ಹಿಡಿವಲೂ ಸಾಕು; ಶ್ರೀಮಠಲ್ಲಿ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನೆಡೆಶಿರೆ ಜೈಲು ಸೇರೆಕ್ಕಾಗಿ ಬಪ್ಪಲೂ ಸಾಕು. ಇನ್ನಿನ್ನು – ಮನೆಲಿ ದೇವರ ಪೂಜೆ ಮಾಡಿರೂ ಪೋಲೀಸು ಬಕ್ಕೋ ಏನೋ.

ಇನ್ನೂ ಒಂದು ವಿಷಯ, ಇದರ್ಲಿ ಹಿಂದೂ ಆಚರಣೆಗೊ ಮಾಂತ್ರ ಮೂಢವೋ?
ಬಕ್ರೀದು ಈದು ಹೇದು ಲಕ್ಷಾಂತರ ಏಡುಗಳ ಕೊಲ್ಲುತ್ತವಲ್ಲದೋ – ಅದು ಮೂಢ ಅಲ್ಲದೋ?
ಕ್ರಿಸ್ಸುಮಸ್ಸು ಹೇದು ಬಾಯಮ್ಮನಲ್ಲಿ ಏಸುವಿನ ಗೊಂಬೆ ಮಡಗುತ್ತವಲ್ಲದೊ – ಅದು ಮೂಢನಂಬಿಕೆಯೇ ಅಲ್ಲದೋ?
ಬರ್ತುಡೇ ಹೇದು ಕೇಕು ನಕ್ಕುತ್ತವಲ್ಲದೋ – ಅದು ಮೂಢ ನಂಬಿಕೆ ಅಲ್ಲದೋ?
ಐದೊರಿಶಕ್ಕೊಂದರಿ ಓಟು ಹಾಕಿ ದೇಶ ಉದ್ಧಾರ ಆವುತ್ತು ಹೇದು ಗ್ರೇಶುತ್ತವಲ್ಲದೋ – ಅದುದೇ ಮೂಢ ನಂಬಿಕೆಯೇ ಅಲ್ಲದೋ?
ಮುಖ್ಯಮಂತ್ರಿ ಬಪ್ಪಗ ಎದ್ದು ನಿಂದು ಸೆಲ್ಯೂಟು ಹೊಡೆತ್ತವಲ್ಲದೋ – ಅದೂ ವ್ಯಕ್ತಿಪೂಜೆಯೇ ಅಲ್ಲದೋ?

ಮಾತಾಡ್ಳೆ ಹೆರಟ್ರೆ ಎಲ್ಲವೂ ಬರೆಕ್ಕು.
ಬರೇ – ಹಿಂದೂ ಸಮಾಜವ ಮಾಂತ್ರ ಹಂಗುಸುಲೆ ಆಗ. ನಮ್ಮವು ಮಾಡ್ತದು ಮಾಂತ್ರ ಮೂಢನಂಬಿಕೆ – ಹೇದು ನಿಷೇಧ ಹೇರ್ಲೆ ಆಗ. ಎಂತ ಹೇಳ್ತಿ?

~
ಒಂದೊಪ್ಪ: ರಾಜ್ಯಾಡಳಿತ ಮೂಢಂಗೊಕ್ಕೆ ಬಂದರೆ ದೇಶೋದ್ಧಾರವೇ ಒಂದು “ಮೂಢನಂಬಿಕೆ” ಆಗಿ ಹೋಕು.

~

ಸೂ: ಸದರಿ ಕಾಯಿದೆಯ ಬಗ್ಗೆ ಹೆಚ್ಚಿನ ಮಾಹಿತಿ (ಕೃಪೆ: ಅಂತರ್ಜಾಲ)

Superstition-bill
ಸಂಕೊಲೆ : ಇಲ್ಲಿದ್ದು

ನಂಬಿಕೆಗಳ ಅಂತಃಸತ್ವ ತಿಳಿಯದ್ದ ಮೂಢಂಗೆ ಎಲ್ಲವೂ ಮೂಢನಂಬಿಕೆಗಳೇ..!, 10.0 out of 10 based on 2 ratings

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಕರಡು ಮಸೂದೆಯ ಓದುವಾಗ ನಂಬಿಕೆ, ಭಕ್ತಿ,ಪ್ರೀತಿ,ಗೌರವ, ಭಕ್ತಿಗಳ ಖಂಡಿಸುವಂತದು ಏನು ಕಾಣುತ್ತಿಲ್ಲೆ. ಆನು ಓದುವುದರಲ್ಲಿ ತಪ್ಪಿದ್ದೆಯೊ

  [Reply]

  VA:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಮುಖ್ಯಮಂತ್ರಿಗೊ ಈಗ ಯಾವ ನಿರ್ಧಾರವೂ ತೆಕ್ಕೊಂಡಿದಿಲ್ಲೆ ಹೇಳಿದ ಕಾರಣ ಈ ವಿಷಯ ಇಲ್ಲಿಗೆ ಮುಗಿಗು ಹೇಳಿ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಗಣೇಶ ಮಾವ°ವಾಣಿ ಚಿಕ್ಕಮ್ಮಮುಳಿಯ ಭಾವಚೆನ್ನೈ ಬಾವ°ದೊಡ್ಡಭಾವಅಕ್ಷರದಣ್ಣವೇಣಿಯಕ್ಕ°ಚುಬ್ಬಣ್ಣಅನಿತಾ ನರೇಶ್, ಮಂಚಿಕಜೆವಸಂತ°ಶ್ಯಾಮಣ್ಣದೊಡ್ಮನೆ ಭಾವವಿದ್ವಾನಣ್ಣಅಕ್ಷರ°ವೇಣೂರಣ್ಣಜಯಗೌರಿ ಅಕ್ಕ°ಜಯಶ್ರೀ ನೀರಮೂಲೆಡಾಮಹೇಶಣ್ಣಹಳೆಮನೆ ಅಣ್ಣಮಾಷ್ಟ್ರುಮಾವ°vreddhiಒಪ್ಪಕ್ಕಮಂಗ್ಳೂರ ಮಾಣಿರಾಜಣ್ಣಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ