Oppanna.com

ಮೂಸುತ್ತ ಮೂಸೆ ಮೋಸದ ಬಲೆ ಬೀಸಿತ್ತಡ..!!

ಬರದೋರು :   ಒಪ್ಪಣ್ಣ    on   29/10/2010    21 ಒಪ್ಪಂಗೊ

ಕಾನಾವು ಕೆರೆಯ ಹತ್ತರೆ ಬತ್ತ ಗೌರಿ ಹೊಳೆ – ಮುಂದೆ ಸರ್ವೆಯ ಹತ್ತರೆ ಕುಮಾರಧಾರೆಗೆ ಸೇರಿಗೊಳ್ತು.
ಕುಮಾರಪರ್ವತಲ್ಲಿ ಹುಟ್ಟಿ, ಹತ್ತಾರು-ನೂರಾರು- ಉಪನದಿಗಳ ಸೇರುಸಿಗೊಂಡು ಉಪ್ರಂಗಡಿಲಿ ನೇತ್ರಾವತಿಯ ಕೂಡಿ, ಸಮುದ್ರಲ್ಲಿ ಸೇರಿ ಕೃತಾರ್ಥ ಆವುತ್ತು ಕುಮಾರಧಾರೆ!
ಕುಮಾರಧಾರೆಯ ಉದ್ದಕ್ಕೂ ಸುಮಾರು ದೇವಸ್ಥಾನಂಗೊ ಇದ್ದು – ಕುಕ್ಕೆಂದ ತೊಡಗಿ ಉಪ್ರಂಗಡಿಯ ಸಹಸ್ರಲಿಂಗೇಶ್ವರ ಒರೆಂಗೆ.
ಎಲ್ಲಾ ದೇವಸ್ಥಾನಕ್ಕೂ ಕುಮಾರನ ಹೊಳೆಯ ನೀರೇ ವಿಶೇಷ!

ಹಾಂಗೇ ಕಾನಾವಿನ ಹತ್ತರೆ ಶಾಂತಿಪ್ಪಳ್ಳ ಹೇಳ್ತ ಹೆಸರಿನ ಒಂದು ಜಾಗೆ ಇದ್ದಡ. ಅಲ್ಲಿಯೂ ಒಂದು ಸುಬ್ರಮಣ್ಯ ದೇವಸ್ಥಾನ ಇದ್ದಡ, ಶ್ರೀಅಕ್ಕ° ಅಂದೇ ಹೇಳಿತ್ತಿದ್ದವು. ಹಳೆಕಾಲದ ದೇವಸ್ಥಾನ – ಅದರೆದುರು ನಿತ್ಯ ನೀರಿನ ಕುಮಾರಧಾರಾ – ರಜ ಮೇಗಂತಾಗಿ ಇಪ್ಪ ಬಲಮುರಿ – ಬಲತ್ತಿಂಗೆ ನದಿಯ ತಿರುಗಾಸು, ದೇವಸ್ಥಾನಂದ ಕೆಳ ಇರ್ತ ಒಂದು ದೊಡಾ ಸುಳಿಯ ತಿರುಗಾಸು – ಅದರ್ಲಿ ಒಂದು ಗಯ – ಎಷ್ಟು ಗುಂಡಿಯೋ – ಉಮ್ಮ! ಕಂಡವ° ಆರು – ಆ ಗಯಕ್ಕೆ ಬಿದ್ದವ ’ಗಯಾ’ ಹೇಳಿ ಹಿಂದಿ ಅರಡಿವ ಶರ್ಮಪ್ಪಚ್ಚಿ ನೆಗೆಮಾಡುಗು..!
ಶಾಂತವಾದ ನೀರು ಅದರ್ಲಿ ಯೇವತ್ತೂ ಇರ್ತದಕ್ಕೋ ಏನೋ – ಅದಕ್ಕೆ ಶಾಂತಿಪ್ಪಳ್ಳ ಹೇಳಿ ಹೆಸರಾದ್ದು!

ಬಲಮುರಿಂದಾಗಿ ಬಪ್ಪ ನೀರಿನ ಚೆಂಬಿನ ಕೊಡಪ್ಪಾನಲ್ಲಿ ತುಂಬುಸಿಗೊಂಡು, ಹೊಳೆಂದಲೇ ಇಪ್ಪ ಹಳೆಕಾಲದ ಕಲ್ಲಿನ ಮೆಟ್ಳುಗಳಲ್ಲಿ ನೆಡಕ್ಕೊಂಡು, ಆ ದೇವಸ್ಥಾನದ ಬಟ್ಟಮಾವ° ಸುಬ್ರಮಣ್ಯದೇವರ ತಲಗೆ ಅಭಿಶೇಕ ಮಾಡುದು.
ಯೇವ ಮಳೆಗಾಲ ಆದರೂ ನಿತ್ಯ ಕುಮಾರಧಾರೆಯ ಅಭಿಷೇಕ ಆಗದ್ದರೆ ‘ಊರುಗು ಬರೆಗ್ಗಾಲ ಬರು’‘ ಹೇಳಿಗೊಂಡು ತುಳು ಮಾತಾಡ್ತ ಅಲ್ಯಾಣ ಮೋಗ್ತೇಸರ° ಹೇಳುಗು.

ಅಭಿಶೇಕಮಾಡಿದ ನೀರು ದೇವಸ್ಥಾನದ ಸೋಮಸೂತ್ರಲ್ಲೆ ಹೆರಬಂದು, ದೇವಸ್ಥಾನದ ಕರೆಲಿ ಕೆಳಂತಾಗಿ ಹರುದು ಹೋಗಿ ಮೆಟ್ಳಿಂದ ಹತ್ತು ಕೋಲು ಕೆಳಾಂತಾಗಿ ಹೊಳಗೆ ಸೇರುತ್ತು – ಗಯದ ಬಾಯಿಗೆ.
ಹಾಂಗಾಗಿ, ಗಯದ ನೀರು ಸುಬ್ರಮಣ್ಯದೇವರ ತೀರ್ತ ಹೇಳಿಯೂ ನಂಬಿಕೆ ಇದ್ದು, ಅಲ್ಯಾಣ ಜೆನಂಗಳದ್ದು!
~

ಅದೇ ಗಯಂದ ಕೆಳ ಊರೇ ಬದಲಿತ್ತು.
ಅಲ್ಲಿಗೆ ಹೆಸರು ಪೂರವೋ-ಕೂರವೋ; ಆರಿಂಗೆ ನೆಂಪಿದ್ದು!! ಪುನಾ ಕೇಳುಲೆ ಶ್ರೀಅಕ್ಕ ಕೈಗೇ ಸಿಕ್ಕಿರಲ್ಲದೋ! 😉
ಸುಮಾರು ಒರಿಶಂದ ಅಲ್ಲಿ ಒಂದು ಸಣ್ಣ ಪಳ್ಳಿ ಇತ್ತು.
ಹಂಚುಹಾಕಿ, ನಮ್ಮೋರ ಆಚಾರಿಗೊ ಕಟ್ಟಿದ ಪಚ್ಚೆಪೈಂಟಿನ ಗೋಡೆಯ ಮರದ ಕಟ್ಟೋಣ!
ಹೊಳೆಕ್ಕರೆಲಿ ಅದರ ಬೆನ್ನು ಕಾಂಗು, ಆಚ ಹೊಡೆಲಿ ನೆಡಕ್ಕೊಂಡು ಬಪ್ಪಲೆ ದಾರಿ ಇತ್ತು, ಆ ಊರಿನ ಮಾಪ್ಳೆಗೊಕ್ಕೆ.
ಒಂದು ಪಚ್ಚೆಬಣ್ಣದ ಮೈಕ್ಕವ ಕರೆಲಿ ಊರಿದ ಒಂದು ಮರದ ತೂಣಕ್ಕೆ ಕಟ್ಟಿಗೊಂಡಿತ್ತು – ನಿತ್ಯದ ಬಾಂಗು ಕೇಳುಲೆ.
ಹೊತ್ತಪ್ಪಗ ಮೂರೂಮುಕ್ಕಾಲು, ಆರೂಕಾಲು ಗಂಟೆ ಆದರೆ ಊರವಕ್ಕೆ ಗುರ್ತಕ್ಕೆ ಈ ಮೈಕ್ಕದ ಬೊಬ್ಬೆಯೇ ಲೆಕ್ಕ!
~
ಈಗ ಸುಮಾರು ಒರಿಶ ಆತು, ಶಾಂತಿಪಳ್ಳದ ದೇವಸ್ಥಾನಕ್ಕೆ ಸರಿಯಾದ ಮಾರ್ಗದ ವೆವಸ್ತೆ ಆಯೇಕು ಹೇಳಿ ಊರವು ಬೊಬ್ಬೆ ಹೊಡವದು!
ಎಂತರ ಮಾಡುತ್ಸು, ಮೇಗೆ ಕೂದವಕ್ಕೆ ಕೇಳೆಕೆ!
ಹಾಂಗೆ ನೋಡಿರೆ, ಆ ದೇವಸ್ಥಾನಕ್ಕೆ ಮಾರ್ಗದ ಬಳಕ್ಕೆ ಕಮ್ಮಿಯೇ.
ಒರಿಶಕ್ಕೊಂದರಿ ಸ್ರಷ್ಟಿ (ಷಷ್ಠಿ) ಜಾತ್ರಗೆ ಐನೂರು- ಸಾವಿರ ಜೆನ ಸೇರುದಲ್ಲದ್ದರೆ ಅಲ್ಲಿಗೆ ನಿತ್ಯಕ್ಕೆ ನಾಕೈದು ಬಲಿವಾಡುಗೊ ಇಕ್ಕಷ್ಟೇ.
ದೊಡ್ಡ ಸಂಕೆಯ ಓಟು ಇಲ್ಲದ್ದರೆ ಯೇವ ಮಾರ್ಗವೂ ಸಿಕ್ಕ, ಯೇವ ಸಂಕವೂ ಸಿಕ್ಕ ಹೇಳಿ ಗುಣಾಜೆಮಾಣಿ ಅಂಬಗಂಬಗ ಹೇಳುಗು!
ಅಂತೂ ಇಂತೂ, ಊರವರ ಪರಿಶ್ರಮಂದ ಒಂದು ಜಲ್ಲಿ ಹಾಕಿದ ಮಾರ್ಗದ ಮಟ್ಟಿಂಗೆ ಆತು.
~

ಸುಬ್ರಮಣ್ಯ ದೇವರಿಂಗೆ ಕುಮಾರ ಧಾರೆ ಧಾರೆ ಅಭಿಷೇಕ..

ಪೂರಲ್ಲಿ ಪೂರ ಒಂದೇ ಶುದ್ದಿ!
ಒಂದು ಹೊಸ ಮುಕ್ರಿ ಬಯಿಂದಡ ಅಲ್ಲಿಗೆ. ಅದು ಬಂದ ಮೇಗೆ ಆ ಪಳ್ಳಿ ತುಂಬ ಅಭಿವುರ್ದಿ ಆಯಿದಡ, ಆವುತ್ತಾ ಇದ್ದಡ.
ಹಳೆಕಾಲದ ಕುಂಬು ಪಳ್ಳಿಯ ಬದಲು ಪೂರ್ತಿ ಸಿಮೆಂಟಿನ, ನೈಸು ನೆಲಕ್ಕದ ಪಳಪಳ ಹೊಳೆತ್ತ ಪಳ್ಳಿ ಆತಡ.
ನಲಮಾಳಿಗೆಯೂ ಇದ್ದಡ, ಅಪ್ಪೋ – ಉಮ್ಮಪ್ಪ, ನಾವು ನೋಡಿದ್ದಿಲ್ಲೆ, ಇಪ್ಪಲೂ ಸಾಕು!
ಊರವರಿಂದ ಒಂದು ಪೈಸೆ ತೆಕ್ಕೊಂಡಿದಿಲ್ಲೆಡ, ದೂರಲ್ಲಿಪ್ಪ ದೊಡ್ಡೋರ ಪೈಸೆಲೇ ಕಟ್ಟಿ ಊರವಕ್ಕೆ ಕೊಶಿ ಕೊಟ್ಟತ್ತಡ.
ಯೇವದೇ ಪ್ರತಿಫಲ ಅಪೇಕ್ಷೆ ಇಲ್ಲದ್ದೆ, ಅವರ ಊರಿನ ಧರ್ಮಕೇಂದ್ರವ ಅಭಿವುರ್ದಿ ಮಾಡಿದ ಆ ಮುಕ್ರಿಯ ಎಷ್ಟು ಹೊಗಳಿರೂ ಕಮ್ಮಿಯೇ ಅಲ್ಲದೋ!
ಆ ಮುಕ್ರಿಗೆ ಊರ ಎಲ್ಲೋರುದೇ ಅಭಿಮಾನ, ಗವುರವ ತೋರುಸುತ್ತವಡ.

ಪ್ರತಿ ಶುಕ್ರವಾರ ಇನ್ನೂರು-ಮುನ್ನೂರು ಜೆನ ಸೇರುತ್ತವಡ, ಎಲ್ಲ ಆ ಮುಕ್ರಿಯ ಪ್ರಭಾವ ಅಡ – ಅರ್ಚಕಸ್ಯ ಪ್ರಭಾವೇನ – ಹೇಳ್ತದು ಚವುಕ್ಕಾರುಮಾವನ ಒಂದು ಶ್ಲೋಕ!
ಅದಿರಳಿ, ಜೆನ ಜಾಸ್ತಿ ಆದ ಹಾಂಗೇ, ಅಲ್ಲಿಗೆ ಹೋವುತ್ತ ಮಾರ್ಗದ ವೆವಸ್ತೆಯೂ ಸುಧಾರಣೆ ಆತಿದಾ!
ಈಗ ಕಳುದೊರಿಶ ಅಲ್ಲಿಗೆ ಪಂಚಾಯಿತು ಲೆಕ್ಕಲ್ಲಿ ಡಾಮರು ಮಾರ್ಗ ಆಗಿ, ದಾರಿಕರೆಂಗೆ ಪಚ್ಚೆಬಣ್ಣದ ಟ್ಯೂಬುಲೈಟುದೇ ಆಯಿದಡ!
ಈಗೀಗ ಅಲ್ಲಿ ಜೆನವಸತಿಯುದೇ ಜಾಸ್ತಿ ಆಗಿ, ಅಲ್ಲಿ ಒಂದು ಸಣ್ಣ ಪೇಟೆಯೇ ಆಗಿ ಬಿಟ್ಟಿದಡ.
~
ಈ ಮುಕ್ರಿಯ ಚೆಂಙಾಯಿ ಒಂದಿದ್ದಡ, ಅತಿಮಾನುಷ ವೆಗ್ತಿ.
ಒಂದೊಂದರಿ, ಆರಿಂಗೂ ಹೇಳದ್ದೆ ಪಕ್ಕನೆ ಈ ಪಳ್ಳಿಗೆ ಬಂದು ಕೂರ್ತಡ.
ಆ ಜೆನ ಬೇರೆ ಆರಿಂಗೂ ಕಾಂಬಲೆ ಸಿಕ್ಕುತ್ತಿಲ್ಲೆಡ – ಇಲ್ಲಿಗೆ ಬಂದರೆ ಮುಕ್ರಿಯ ಒಟ್ಟಿಂಗೆ ಇರ್ತಡ, ಅಷ್ಟೇ!

ಒಂದರಿ ಬಂದರೆ ಎರಡು-ಮೂರು ದಿನ ಇಪ್ಪಲೂ ಸಾಕು, ಅಲ್ಲದ್ದರೆ ಅರ್ದ ಗಂಟೆಲಿ ಹೋಪಲೂ ಸಾಕು!
ಬಪ್ಪಲೂ ಹೊತ್ತುಗೊತ್ತು ಎಂತೂ ಇಲ್ಲೆಡ ಅದಕ್ಕೆ, ನೆಡಿರುಳು ಬಪ್ಪಲೂ ಸಾಕು, ಮಟಮದ್ಯಾನ್ನ ಬಪ್ಪಲೂ ಸಾಕು – ಸಾಧನೆ ಇಪ್ಪ, ನಿಷ್ಟೆ ಇಪ್ಪ ವೆಗ್ತಿ ಅಲ್ಲದೋ – ಹೇಂಗಾದರೂ ನೆಡೆತ್ತು.

ಜೆನಂಗೊ ಆರಾರು ಅವರ ಬೇಜಾರವ ಹೇಳಿಗೊಂಡು ಬಂದರೆ, ಒಂದು ಕುಪ್ಪಿ ನೀರಿನ ಒಂದರಿ ಮೂಸಿ, ಒಂದರಿ ಊಪಿ ಕುಪ್ಪಿಗೆ ಮುಚ್ಚಲು ಹಾಕಿ ಕೊಡ್ತಡ!
ಆ ನೀರಿನ ತೀರ್ತ ಹೇಳಿಗೊಂಡು ಸ್ವೀಕಾರ ಮಾಡಿರೆ ನಮ್ಮ ಎಲ್ಲಾ ದೋಷಂಗಳೂ ನಿವಾರಣೆ ಆವುತ್ತಡ!!
ಇದೊಂದು ದೊಡ್ಡ ಪ್ರಮಾಣದ ನಂಬಿಕೆ.
ನಮ್ಮೋರು ಮಾಡ್ತ ಕಂದಾಚಾರಂಗಳ ನೆಗೆಮಾಡಿಗೊಂಡೇ ಆಚವು ಇದರ ಆಚರಣೆ ಮಾಡಿಗೊಂಡು ಇದ್ದವು, ನಮ್ಮ ಎದುರೆದುರೇ!
ಆ ಜೆನ ಬಂದ ಶುದ್ದಿ ಊರಿಡೀಕ ಹರಡುವದೇ, ಸಾವಿರ ಜೆನಂಗೊ ಬಂದು ಕ್ಯೂ ನಿಲ್ಲುತ್ತವಡ.
ಎಲ್ಲೋರುದೇ ಒಂದು ಕುಪ್ಪಿ ನೀರಿನ ತೆಕ್ಕೊಂಡೂ ಹೋಯೆಕ್ಕಡ, ಅದರ ಭೇಟಿಗೆ ಹೋಪಗ.
ಇವರ ಪ್ರಾರ್ಥನೆಯ ಸಂಪೂರ್ಣವಾಗಿ ಕೇಳಿ ಆದಮತ್ತೆ, ಒಂದರಿ ಮೂಸಿ-ಊಪಿ ಕೊಡ್ತಡ ಆ ಜೆನ.

ಅದು ಎಲ್ಯಾಣದ್ದು, ಅದರ ಹೆಸರೆಂತರ ಹೇಳ್ತದರ ಬಗ್ಗೆ ಊರೋರಿಂಗೆ ಕುತೂಹಲ ಬಂದದೇ ರಜಸಮೆಯ ಕಳುದು.
ಕೆಲವು ಜೆನ ಬಲ್ಲೋರು ಹೇಳುಲೆ ಸುರುಮಾಡಿದವು, ಅದು ಕಾಸ್ರೋಡುಹೊಡೆಂದ ಬಪ್ಪದು, ಮೂಸೆ ಹೇಳಿ ಹೆಸರು, ತೆಂಕ್ಲಾಗಿ ಅದರ ಮೂಲ – ಇತ್ಯಾದಿ ಇತ್ಯಾದಿ!
ಎಂತ ಹೇಳಿರೂ ನಂಬುದೇ! ಊರೋರ ಎಷ್ಟೋ ಜೆನರ ಗುಣಕ್ಕೆ ಮದ್ದು ಕೊಟ್ಟಿದಿಲ್ಲೆಯೋ!
ಅದರ ಮದ್ದಿಲಿ ಕಮ್ಮಿಯೂ ಆಯಿದಡ, ಕಂಡೋರು ಇದ್ದವಡ ಇದಾ! 😉
ಎಲ್ಲೋರುದೇ ಹೇಳುವಗ ನಂಬದ್ದೆ ಎಂತ ಮಾಡುದು!!

ನಂಬದ್ದೋರು ಒಂದರಿ ಆ ಜೆನಂಗಳ ಸಾಲು ನೋಡಲಿ.
ಅಲ್ಲಿ ಗೂಡಂಗಡಿಯೋರಿಂಗೆ ಪ್ಲೇಷ್ಟಿಗು ಕುಪ್ಪಿ ಕೊಟ್ಟೇ ಸಾಕಾವುತ್ತು.
ತಂದು ಮಡಗಲೆ ಪುರುಸೊತ್ತಿಲ್ಲೆ, ಕಟ್ಟ ಕಟ್ಟ ಕುಪ್ಪಿಗೊ ಕಾಲಿ ಆವುತ್ತಡ.
ಪ್ರಾರ್ತನೆಗ ಬಂದೋರು ಈ ಕುಪ್ಪಿಯ ತೆಕ್ಕೊಂಡು, ಹೊಳೆನೀರಿನ – ಗಯಂದ ಬತ್ತ ಅಭಿಶೇಕದ ತೀರ್ತವ – ತುಂಬುಸಿಗೊಂಡು ಆ ಮೊಸೆಯ ಕೈಲಿ ಮೂಸುಸುದಡ!
ಎಲ್ಲಾ ತೊಂದರೆಗಳೂ ಪರಿಹಾರ ಆವುತ್ತಡ.

ಈಗೀಗ ಸಮಾಜದ ದೊಡ್ಡದೊಡ್ಡೋರುದೇ ಬತ್ತವಡ.
ರಾಜಕಾರಣಿಗೊ,ಸಮಾಜಸೇವಕರುಗೊ, ಪಂಡಿತರುಗೊ, ಡಾಗುಟ್ರಕೈಲಿ ಆಗದ್ದ ರೋಗಿಗೊ, ಅಪುರೂಪಲ್ಲೆ ಎಂಬುಲೆನ್ಸುಗೊ – ಎಲ್ಲವುದೇ!
ಸುಬ್ರಮಣ್ಯನ ತೀರ್ತದ ಶೆಗ್ತಿಯೋ, ಮೂಸೆ ಮೂಸಿದ್ದರ ಶೆಗ್ತಿಯೋ – ಅಂತೂ ನಂಬುತ್ತೋರ ಶಕ್ತಿ ಅಂತೂ ಎದ್ದು ಕಾಣ್ತು!
~

ದೇವಸ್ತಾನದ ಮುಖ್ಯದ್ವಾರ, ಜೆನವೇ ಇಲ್ಲದ್ದೆ ಕಾಲಿಕಾಲಿ!!

ಗುಣಾಜೆಮಾಣಿಗೆ ಮೊನ್ನೆಂದಲೇ ಪಿಸುರು ಏರಿದ್ದು, ಇಳುದ್ದೇ ಇಲ್ಲೆ! 🙁
ಅವರ ಊರಿಲಿ ಕೇನೆತ್ತಡ್ಕ ಹೇಳ್ತ ಹೆಸರಿನ ಒಂದು ಕಾಡು ಇದ್ದಡ.
ಕಾಡು ಹೇಳಿರೆ – ಜೆನವಸತಿ ಕಮ್ಮಿ ಇದ್ದುಗೊಂಡು, ಮರಂಗೊ ಜಾಸ್ತಿ ಇಪ್ಪ ಒಂದು ಊರು. ಕೇರಳಲ್ಲಿ ಕಾಡು ಒಳುದ್ದು ಅಪುರೂಪವೇ ಇದಾ!
ಆ ಕಾಡಕರೆಲಿಯೂ ಒಂದು ಪಳ್ಳಿ ಇದ್ದಡ.
ಸಾದಾರ್ಣ ಪಳ್ಳಿ ಅಲ್ಲ, ಗವುಜಿ, ಗದ್ದಲ ಇಪ್ಪಂತಾ, ಒಂದು ಭಯಂಕರ ಪಳ್ಳಿ!
ಕಾಸ್ರೋಡು ಪೇಟೆನೆಡುಕೆ ಇರ್ತ ನಮುನೆದೇ ಒಂದು ಪಳ್ಳಿಯ ಹಾಂಗೆ ಕಾಣ್ತು ದೂರಕ್ಕೆ.
ನಮ್ಮ ದೇಶದ ಪೈಸೆ ಆದರೆ ಅವಕ್ಕೆ ಹೀಂಗೆ ಕಟ್ಳೆ ಎಡಿಗಾಗ – ಹೇಳಿ ಗುಣಾಜೆಮಾಣಿಯ ಅನಿಸಿಕೆ.
ಅದಿರಳಿ, ಗವುಜಿ ಪಳ್ಳಿಗೆ ಉಶಾರಿ ಮುಕ್ರಿ ಬೇಡದೋ – ಒಂದರ ತೆಕ್ಕೊಂಡೂ ಬಂದವು.
ಮುಕ್ರಿಗೆ ಒಂದಕ್ಕೇ ಉರು ಅಪ್ಪದಕ್ಕೆ, ಧಾರ್ಮಿಕ ವಿಚಾರಂಗಳ ಚಿಂತನೆ ಮಾಡ್ಳೆ ಇನ್ನೊಂದು ಜೆನ ಬಂತಡ.
ಅದಕ್ಕೆ ದೊಡ್ಡದೊಡ್ಡವರ ಸಂಪರ್ಕ ಇದ್ದ ಕಾರಣ ಬೇಕಾದಷ್ಟು ಪೈಸೆ ಇನ್ನುದೇ ಬತ್ತಡ – ಹೇಳ್ತ° ಮಾಣಿ!
~

ಮೊನ್ನೆ ಒಂದು ದಿನ ಅಮಾಸೆ ದಿನ ನೆಡಿರುಳು ಒಂದು ಜೀಪು ಬಂತಡ, ಕೇನೆತ್ತಡ್ಕ ಪಳ್ಳಿ ಎದುರಂಗೆ.
ಕರ್ನಾಟಕ ಪೋಲೀಸರು ಬಂದು ಆ ಧರ್ಮಪಂಡಿತನ ಕಟ್ಟಿ ತೆಕ್ಕೊಂಡು ಹೋಗಿಯೇ ಬಿಟ್ಟವಡ.
ಆ ಜೆನವ ಊರಿಂದ ಎಳಕ್ಕೊಂಡು ತೆಕ್ಕೊಂಡು ಹೋಯಿದವು ಹೇಳಿ ನಮ್ಮ ಬೈಲಿಂಗೆ ಗೊಂತಪ್ಪಗ ಉದಿ ಆಗಿತ್ತು, ಈ ಜೆನವ ಎತ್ತೆಕ್ಕಾದಲ್ಲಿಗೆ ಎತ್ತುಸಿ ಆಯಿದಡ.
ನಮ್ಮದೇ ಊರಿಲಿ ಇದ್ದಂಡು ನಮ್ಮದೇ ಅಶನ-ಗಾಳಿ-ನೀರು ತೆಕ್ಕೊಂಡು, ನವಗೇ ಬತ್ತಿ ಮಡಗುತ್ತ ಕಾರ್ಯವ ಆ ಜೆನ ಮಾಡಿಗೊಂಡು ಇತ್ತಡ.
ಗುಣಾಜೆಮಾಣಿಗೆ ಅಂತೇ ಅಲ್ಲ ಕೋಪ ಬಂದದು!
~
ಹ್ಮ್, ಅಪ್ಪು!
ಬೆಂಗುಳೂರಿಲಿ ಕಳುದೊರಿಶ ಬೋಂಬು ಹೊಟ್ಟಿತ್ತಡ ಅಲ್ಲದೋ – ಆ ಬೋಂಬಿನ ಈ ಜೆನ ತಯಾರು ಮಾಡಿದ್ದಡ.
ಇದುವೇ ತೆಯಾರು ಮಾಡಿದ್ದೋ – ಅಲ್ಲ ತೆಯಾರು ಮಾಡ್ಳೆ ಸಕಾಯ ಮಾಡಿದ್ದೋ – ನವಗರಡಿಯ!
ಅಂತೂ ಇಂತೂ, ಕೇನೆತ್ತಡ್ಕದ ಪಂಡಿತ ಊರಿಲಿಲ್ಲೆ!
~
ಇದರೆಡಕ್ಕಿಲಿ ಪೂರದ ಪಳ್ಳಿಗೆ ಆ ಅತಿಮಾನುಷ ವೆಗ್ತಿ ಬತ್ತಿಲ್ಲೆಡ!
ಊರಿಲಿ ಎಲ್ಲೋರುದೇ ಕಾಯಿತ್ತಾ ಇದ್ದವು.
ಪೂರದ ಗೂಡಂಗುಡಿಯ ಪ್ಲೇಷ್ಟಿಕುಗೊಕ್ಕೆ ಪೂರ ದೂಳು ಹಿಡುದ್ದು.
ಗಯಂದ ನೀರು ಸುಳಿಸುಳಿಯಾಗಿ ಹರುದು ಹೋವುತ್ತಾ ಇದ್ದು..
ಮೂಸುತ್ತಮೂಸೆಯನ್ನೇ ಮೊನ್ನೆ ತೆಕ್ಕೊಂಡು ಹೋದ್ದದು –  ಹೇಳಿ ಕಾನಾವಜ್ಜಿಯ ಮನೆಕೆಲಸಕ್ಕೆ ಬತ್ತ ಚೋಮ ಹೆದರಿಗೊಂಡು ಹೇಳಿತ್ತಡ!

ಊರಿಂಗೆ ಎಂತಾರು ಆಪತ್ತು ಬಯಿಂದೋ – ಹೇಳಿ ಪಳ್ಳಿಮುಕ್ತೇಸರಂಗೊ ಎಲ್ಲೋರುದೇ ಆಲೋಚನೆ ಮಾಡಿಗೊಂಡಿದ್ದವಡ.
ಬೆಂಗುಳೂರಿಲಿ ಕಬ್ಬಿಣಕಿಟುಕಿ ಎದುರು ಕೂದ ಜೆನ ಪೂರದ ಪಳ್ಳಿಗೆ ಎತ್ತುದು ಹೇಂಗೆ? – ಹೇಳಿ ಕೆಲಾವು ಜವ್ವನಿಗರು ನೆಗೆ ಮಾಡ್ತವಡ.
~
ಇಂದು ಬಕ್ಕೋ?  ನಾಳೆ ಬಕ್ಕೋ?
ಗುಣಾಜೆಮಾಣಿಗೂ ಅದೇ ತಲೆಬೆಶಿ, ಈ ನಮುನೆ ಜೆನಂಗಳ ಎಲ್ಲ ವಿಚಾರಣೆ ಮಾಡಿ ಒಳಹಾಕುತ್ತವು.
ಆದರೆ ಆರಾರ ಇಂಪ್ಲೆನ್ಸು ಮಾಡಿಗೊಂಡು ಅಂತವು ಕೂಡ್ಳೆ ಹೆರಬತ್ತವು!!
ಯೇವದೇ ಮರಿಯಾದಿ ಕಳೆಯದ್ದೆ ಆರಾಮಲ್ಲಿ ಬದುಕ್ಕುತ್ತವು! ಮಾರಿಗೊ..!!
~

ನೋಡಿ ನಮ್ಮ ಸಮಾಜದ ದುರವಸ್ಥೆ!
ಕೆಲವೇ ಕೆಲವು ದೂರಲ್ಲಿ ಇನ್ನೊಂದು ಮುಖವಾಡ ಹಾಕಿರೂ ನಾವು ನಂಬಿಯೇ ಬಿಡ್ತು!
ರಜ ಲಟಪಟ ಮಾಡಿರೆ ಅದೊಂದು ದೊಡ್ಡ ಸಾಧು – ಸಾಧಕ ಹೇಳಿ ಗವುರವ ಕೊಡ್ತು.
ಅದರ ಪೂರ್ವಾಪರ ತಿಳ್ಕೊಳದ್ದೆ ಮರಿಯಾದಿ ಮಾಡ್ಳೆ ಹೆರಟ್ರೆ ಮತ್ತೆ ನವಗೇ ಆಪತ್ತು!
ಗೋಮುಖವ್ಯಾಘ್ರಂಗೊ  ಎಲ್ಲಿ ಹೋದರೂ ಸಿಕ್ಕುಗು – ನಾವು ಎಚ್ಚರಿಗೆಲಿ ಇರೆಕ್ಕು – ಹೇಳ್ತದು ಗುಣಾಜೆಮಾಣಿಯ ಅಭಿಪ್ರಾಯ!

ಒಂದೊಪ್ಪ: ದೇಶದ್ರೋಹಿಗೊಕ್ಕೆ ಹುಗ್ಗಿಕೂಪಲೆ ಧರ್ಮಕೇಂದ್ರಂಗೊ ಸಕಾಯ ಮಾಡ್ತರೆ, ಆ ಧರ್ಮ ಇದ್ದರೆ ದೇಶ ಒಳಿವಲಿದ್ದೋ?!

21 thoughts on “ಮೂಸುತ್ತ ಮೂಸೆ ಮೋಸದ ಬಲೆ ಬೀಸಿತ್ತಡ..!!

  1. ಅಲ್ಲದ್ದೇ ಮಾರಿಗೊ ತು೦ಬುತ್ತವು..!! ಹೀ೦ಗೆ ಆದರೆ, ಇನ್ನು 10-20 ವರ್ಷಲ್ಲಿ ಎ೦ತ ಅಕ್ಕು ಹೇಳ್ಲೆ ಬತ್ತಿಲ್ಲೆ…

  2. Egana kalada byarigala nambale ediya.Hale talemarina olle byarigalu iddavu.Engalallige kelasakke batta Mammadege hindu samskritiya bagge olle abhimana iddu.O monne ayodhye teerpu bandappaga koshi ayidu adakke.Adu heltu,Makkalliyu olana bagilu hakinde ippa roomilli kallina moorthi iddu heli.Adara artha alliyoo kooda Devasthanava murudu palli kattiddadu heli allado?Adu heltu,votina samayalli araringe vote hakeku heli shukravara helugada.Heenge ida avu vote bank addadu.

  3. ಒಪ್ಪಣ್ಣ, ಒಂದೊಪ್ಪಲ್ಲಿ ನೀನು ಹೇಳಿದ ಹಾಂಗೆ, { ದೇಶದ್ರೋಹಿಗೊಕ್ಕೆ ಹುಗ್ಗಿಕೂಪಲೆ ಧರ್ಮಕೇಂದ್ರಂಗೊ ಸಕಾಯ ಮಾಡ್ತರೆ, ಆ ಧರ್ಮ ಇದ್ದರೆ ದೇಶ ಒಳಿವಲಿದ್ದೋ?!}
    ಇದು ಸರಿಯೇ ಅಲ್ಲದಾ?
    ಭೂಮಿ, ಪ್ರಕೃತಿಯ ನಾವು ಪೂಜೆ ಮಾಡ್ತು, ಗೌರವಿಸುತ್ತು. ಯಾವ ಮಾಪ್ಳೇಗಳ ಹಬ್ಬ ಪ್ರಕೃತಿಯ ಪೂಜೆ ಮಾಡೆಕ್ಕು ಹೇಳ್ತು..? ಪ್ರಾಣಿ ಬಲಿ ಮಾಡಿ, ಅದರ ತಿನ್ನಿ ಹೇಳುದಲ್ಲದಾ?ನಮ್ಮ ಸಾಂಕಮ್ಮ ಆದ ಗೋಮಾತೆಯ ಬಿಡ್ತವಾ ಇವು ಬದುಕ್ಕುಲೆ?
    ಜಿಹಾದ್ ಮಾಡುದಡ್ಡ ಹೇಳಿದರೆ ಧರ್ಮ ಯುದ್ಧ ಅದುದೆ ನಮ್ಮ ಮೇಲೆ!!!!
    ಮನುಷ್ಯರಾದ ನಮ್ಮಂದ ಮೇಲೆ ಆಯೆಕ್ಕು ಹೇಳಿ ಇದ್ದು… ಅದು ಬೇರೆ ರೀತಿಲಿ ಅಪ್ಪಲೆ ಎಡಿತ್ತಿಲ್ಲೇ.. ಎಂತಕ್ಕೆ ಹೇಳಿದರೆ ನಮ್ಮ ಸಂಸ್ಕೃತಿಯ ಬೇರು ಅಷ್ಟು ಆಳಲ್ಲಿದ್ದು.. ಅದರ ತಾಯಿ ಬೇರಿನ ಹತ್ತರಂಗೆ ಅವು ಬರೆಕ್ಕಾದರೆ ಅಷ್ಟು ಸುಲಾಬ ಇಲ್ಲೆ.. ಅದಕ್ಕಿಪ್ಪ ಉಪಾಯ ಅವರ ಸಂಖ್ಯೆ ವೃದ್ಧಿಸುದು….. ಹೀಂಗೇ ಮಾಡಿ ನಮ್ಮಂದ ಮೇಲೆ ಅಕ್ಕು ಹೇಳ್ತ ಯೋಚನೆ ಆದಿಕ್ಕು ಅವರದ್ದು…. ಆದರೆ ಅವು ಒಂದು ಮರೆತ್ತವು.., ಎಂತ ಹೇಳಿದರೆ, ನಮ್ಮ ಮೇಲೆ ಧರ್ಮ ಯುದ್ಧ ಮಾಡಿ ಅವು ಮಾಡ್ತಾ ಇಪ್ಪ ಅನ್ಯಾಯ ಈ ಭೂಮಿಗೆ, ಪ್ರಕೃತಿಗೆ!!!! ಅವರ ಎಲ್ಲಾ ತತ್ವಂಗಳೂ ಪ್ರಕೃತಿ ವಿರುದ್ಧವೇ ಅಲ್ಲದಾ? ಈ ರೀತಿ ಮಾಡಿ ಅವು ಆರ ಮೇಲೆ ವಿಜಯ ಸಾಧಿಸುದು? ಇದಕ್ಕೂ ಒಂದು ಕೊನೆ ಇಕ್ಕಲ್ಲದಾ?

    ಈ ವಾರದ ಶುದ್ದಿ ಎಂಗೊ ನಿತ್ಯ ಕಾಂಬ ಶುದ್ದಿ.. ಜನಂಗಳ ಅಜ್ಞಾನಕ್ಕೆ ಎಂತ ಹೇಳೆಕ್ಕು ಹೇಳಿ ಗೊಂತಾಗದ್ದ ಹಾಂಗೆ ಆಗಿಯೊಂಡಿತ್ತು…:-(
    ನೀರು ಊದಿ ಕೊಡ್ತದು ಸುರುವಿಂಗೆ ಪ್ರತ್ಯಕ್ಷ ಆದಪ್ಪಗ, ಅದರ ಅವರ ಪೈಕಿಯವ್ವೇ ಪ್ರಚಾರ ಮಾಡಿದವು.. ಅದು ಈ ಇಂದ್ರಜಾಲ ಮಾಡುವಾಗ ನಮ್ಮ ಕಣ್ ಕಟ್ಟ್ ಮಾಡ್ಲೆ ಅವರ ತಂಡದವ್ವು ಗಿಮಿಕ್ ಮಾಡ್ತಾವಲ್ಲದಾ ಹಾಂಗೆ!!!
    ಎಲ್ಲಾ ಪಳ್ಳಿಗೊಕ್ಕೆ ಪ್ರಚಾರ ಕೊಟ್ಟವು… ಮೂಲೆ ಮೂಲೆಂದ ಜನ ಬಪ್ಪಲೆ ಸುರು ಮಾಡಿದವು… ಅಂಬಗ ನಮ್ಮವಕ್ಕೆ ಆತು.., ಅಷ್ಟು ದೂರಂದ ಬಂದು ಅವಕ್ಕೆಲ್ಲಾ ಗುಣ ಆವುತ್ತಡ್ಡ ನಾವೇಕೆ ಹೊಪಲಾಗ ಹೇಳಿ… ಅವರೊಟ್ಟಿನ್ಗೆ ನಮ್ಮವುದೇ ಕ್ಯೂ ನಿಂದವದಾ!!! ಹೇಳ್ಲೇ ಬೇಜಾರಾವುತ್ತು… ದೊಡ್ಡ ದೊಡ್ಡ ಮನುಷ್ಯರೂ ಇದರಲ್ಲಿ ಸೇರಿದ್ದವು.. ಅದೇ, ಒಪ್ಪಣ್ಣ ಹೇಳಿದ ಹಾಂಗೆ, ಆ ಗಯದ ನೀರಿನನ್ನೇ ತೆಕ್ಕೊಂಡು ಬಂದು, ದೇವರ ಎದುರು ಮಡುಗಿ ಶ್ರದ್ಧೆಲಿ ತೆಕ್ಕೊಂಡಿದ್ದರೆ ಹೀಂಗಿಪ್ಪ ಮೂಸೆಗೊಕ್ಕೆ ಮೋಸ ಹೊಯೇಕ್ಕಾತಿಲ್ಲೇ!!! ಅದರ ಕಾಲ ಬುಡಲ್ಲಿ ಸೊರುಗಿದ ಪೈಸಲ್ಲಿ ನಮ್ಮ ದೇವಸ್ಥಾನ ಉದ್ಧಾರ ಆವುತ್ತಿತ್ತು!!!! 🙁
    ಇನ್ನೊದು ವಿಷಯ ಇದ್ದು…. ಹೊಳೆಯ ಎರಡೂ ಕಡೆ ದೇವಸ್ಥಾನ ಇಪ್ಪದು… ನಡುಗೆ ಬೇಸಗೆಲಿ ಮಾತ್ರ ಹೊಪಲಪ್ಪ ಹಾಂಗೆ ಮಾರ್ಗ ಹೊಳೇಲಿ.. ಹೊಳೆ ದಾಂಟಿ ರಜ್ಜ ದೂರಲ್ಲಿ ಇನ್ನೊಂದು ಪ್ರಸಿದ್ಧ ಪಳ್ಳಿ ಇದ್ದು.
    ಏನೋ ಅವರ ತಲೆಗೆ ಯೋಚನೆ ಬಂದಿರ… . ಹೊಳೆಗೆ ಸಂಕ ಆಯೆಕ್ಕಷ್ಟೆ!!! ಎಲ್ಲಿಯಾದರೂ ಆದರೆ ಈ ಎರಡು ಪಳ್ಳಿ ಒಂದಕ್ಕಾ ಕಾಣ್ತು… ನಮ್ಮ ದೇವಸ್ಥಾನಂಗಳ ಮೆಟ್ಟಿ ಅವು ಮೇಲೆ ಬಕ್ಕು ಖಂಡಿತಾ!!!

    ಈ ರೀತಿ ಜನಂಗಳ ಮರುಳು ಮಾಡುದು ಅವರದ್ದು ಒಂದು ತಂತ್ರ ಅಲ್ಲದಾ? ಆ ಮೂಸೆ ಎಲ್ಲಿಯಾದರೂ ನಾಳೆ ಸಿಕ್ಕಿ ಬೀಳ್ತು ಹೇಳಿ ಅಪ್ಪಗ ಅವು ಈ ಜನಂಗಳ ಎದುರು ನಿಲ್ಸಿ ಮೂಸೆಯ ಬಚಾವ್ ಮಾಡ್ಳಕ್ಕು ಹೇಳಿ ಗ್ರೆಶಿಕ್ಕು…
    ಅತಿಮಾನುಷ ವ್ಯಕ್ತಿ ಹೇಳುವ ನೆಲೆಲಿ..!!! ಅದರ ಕೊಂಡು ಹೋಪಗ ಜನಂಗ ಗಲಾಟೆ ಮಾಡವಾ? ನಮ್ಮ ಪೋಲೀಸರ ಮೆಚ್ಚೆಕ್ಕು…
    ಇರುಳು ಉದಿ ಆಯೆಕ್ಕಾದರೆ ಎತ್ತಂಗಡಿ ಮಾಡಿ, ಮರುದಿನದ ಬಾಂಗಿಂಗೆ ಬೆಂಗಳೂರು ಎತ್ತುಸಿದ್ದವು ಅಲ್ಲದಾ?
    ಶುದ್ದಿಲಿ ಒಪ್ಪಣ್ಣ ಹೇಳಿದ ಹಾಂಗೆ ಇದು ನಮ್ಮ ಸಮಾಜದ ದುರವಸ್ಥೆ!! ಒಬ್ಬ ಮೋಸ ಹೋದವ° ಹೇಳಿದ ಮಾತಿಂಗೆ ಬಲಿ ಆಗಿ ನಾವುದೇ ಮೋಸ ಹೋವುತ್ತು…
    ನಮ್ಮ ಸುತ್ತ ಅಪ್ಪದರ ಬಗ್ಗೆ ಜಾಗ್ರತೆ ವಹಿಸಿ, ಆದಷ್ಟೂ ಹೀಂಗಿಪ್ಪೋರ ನಾವು ಬೆಳೆಶುಲೆ ಹೋಪಲಾಗ ಅಲ್ಲದಾ ಒಪ್ಪಣ್ಣ?

  4. ನಮ್ಮ ಹಳೆಕಾಲದ ದೇವಸ್ಥಾನಂಗಳಲ್ಲಿ ನಂಬಿಕೆ ಇದ್ದರೂ ಜೆನಂಗೊ ಸೇರುವದು ಕಮ್ಮಿ ಹೇಳುವದರ ವ್ಯಕ್ತ ಪಡಿಸಿದ ಸಾಲುಗೊ:
    [ಗಯದ ನೀರು ಸುಬ್ರಮಣ್ಯದೇವರ ತೀರ್ತ ಹೇಳಿಯೂ ನಂಬಿಕೆ ಇದ್ದು,
    ಒರಿಶಕ್ಕೊಂದರಿ ಸ್ರಷ್ಟಿ (ಷಷ್ಠಿ) ಜಾತ್ರಗೆ ಐನೂರು- ಸಾವಿರ ಜೆನ ಸೇರುದಲ್ಲದ್ದರೆ ಅಲ್ಲಿಗೆ ನಿತ್ಯಕ್ಕೆ ನಾಕೈದು ಬಲಿವಾಡುಗೊ ಇಕ್ಕಷ್ಟೇ.]

    [ದೊಡ್ಡ ಸಂಕೆಯ ಓಟು ಇಲ್ಲದ್ದರೆ ಯೇವ ಮಾರ್ಗವೂ ಸಿಕ್ಕ, ಯೇವ ಸಂಕವೂ ಸಿಕ್ಕ ಹೇಳಿ ಗುಣಾಜೆಮಾಣಿ ಅಂಬಗಂಬಗ ಹೇಳುಗು!]- ಓಟ್ ಹಾಕಿರೂ, ಗಲಾಟೆ ಮಾಡದ್ದರೆ ನವಗೆ ಎಂತದೂ ಸಿಕ್ಕ. ನಮ್ಮ ದೇವಸ್ಥಾನಂಗಳಲ್ಲಿ ಸಂಗ್ರಹ ಆದ ಪೈಸೆಯ ಮೆಕ್ಕಾ ಮದೀನಾಕ್ಕೆ ಹೋವ್ತವಕ್ಕೆ ಧಾರಾಳ ಕೊಡ್ತವಿಲ್ಲೆಯಾ?. ಕಾಶಿ ರಾಮೇಶ್ವರಕ್ಕೆ ಹೋವ್ತವಕ್ಕೆ ಕೊಡ್ತವಾ ಅಲ್ಲ ಸಮಾಜ ಸೇವೆಗೆ ಉಪಯೋಗ ಮಾಡ್ತವಾ?

    [ಪಚ್ಚೆಪೈಂಟಿನ ಗೋಡೆಯ ಮರದ ಕಟ್ಟೋಣ!
    ಪಚ್ಚೆಬಣ್ಣದ ಮೈಕ್ಕವ ಕರೆಲಿ ಊರಿದ ಒಂದು ಮರದ ತೂಣಕ್ಕೆ ಕಟ್ಟಿಗೊಂಡಿತ್ತು]
    ಪಚ್ಚೆ ಬಣ್ಣ ಅಭಿವೃದ್ಧಿಯ ಸಂಕೇತ ನವಗೆ, ಆದರೆ ಬ್ಯಾರಿಗೊ ಪಚ್ಚೆ ಬಣ್ಣ ಹೊಡದು ಮಾಡುವದು ಉಲ್ಟಾ.

    [ಯೇವದೇ ಪ್ರತಿಫಲ ಅಪೇಕ್ಷೆ ಇಲ್ಲದ್ದೆ, ಅವರ ಊರಿನ ಧರ್ಮಕೇಂದ್ರವ ಅಭಿವುರ್ದಿ ಮಾಡಿದ ಆ ಮುಕ್ರಿಯ ಎಷ್ಟು ಹೊಗಳಿರೂ ಕಮ್ಮಿಯೇ ಅಲ್ಲದೋ!
    ಪ್ರತಿ ಶುಕ್ರವಾರ ಇನ್ನೂರು-ಮುನ್ನೂರು ಜೆನ ಸೇರುತ್ತವಡ,] – ಪ್ರತಿಫಲ ಅಪೇಕ್ಷೆ ಇಲ್ಲದ್ದೆ ಮಾಡುವದು ಹೇಳಿ ಜೆನಂಗಳ ಲಾಯಿಕಲಿ ನಂಬುಸುದು ಮಾತ ಅಲ್ಲದ?. ಜೆನಂಗಳ ನಂಬಿಕೆಯ ದುರುಪಯೋಗ ಮಾಡುವದು ಗೊಂತಪ್ಪಗ ಲೇಟ್ ಆಗಿರ್ತು. [“ಗೊತ್ತಾನಗ ಪೊರ್ತಾಂಡು” ಹೇಳ್ತ ಧಾರಾವಾಹಿ ನೆಂಪು ಅಪ್ಪಲೂ ಸಾಕು]

    [ಗೋಮುಖವ್ಯಾಘ್ರಂಗೊ ಎಲ್ಲಿ ಹೋದರೂ ಸಿಕ್ಕುಗು – ನಾವು ಎಚ್ಚರಿಗೆಲಿ ಇರೆಕ್ಕು ] ಸತ್ಯ.

    ಹೆರಾಣವು ಬಂದು ಎಂತದೋ ಮಾಡಿ ಅಪ್ಪಗ ನಾವು ಹೇಂಗೆ ನಂಬುತ್ತು ಹೇಳುವದರ ತಿಳಿಸಿದ ಸಾಲುಗೊ:
    [ಆ ನೀರಿನ ತೀರ್ತ ಹೇಳಿಗೊಂಡು ಸ್ವೀಕಾರ ಮಾಡಿರೆ ನಮ್ಮ ಎಲ್ಲಾ ದೋಷಂಗಳೂ ನಿವಾರಣೆ ಆವುತ್ತಡ!!
    ಇದೊಂದು ದೊಡ್ಡ ಪ್ರಮಾಣದ ನಂಬಿಕೆ.
    ನಮ್ಮೋರು ಮಾಡ್ತ ಕಂದಾಚಾರಂಗಳ ನೆಗೆಮಾಡಿಗೊಂಡೇ ಆಚವು ಇದರ ಆಚರಣೆ ಮಾಡಿಗೊಂಡು ಇದ್ದವು, ನಮ್ಮ ಎದುರೆದುರೇ.
    ಪ್ರಾರ್ತನೆಗ ಬಂದೋರು ಈ ಕುಪ್ಪಿಯ ತೆಕ್ಕೊಂಡು, ಹೊಳೆನೀರಿನ – ಗಯಂದ ಬತ್ತ ಅಭಿಶೇಕದ ತೀರ್ತವ – ತುಂಬುಸಿಗೊಂಡು ಆ ಮೊಸೆಯ ಕೈಲಿ ಮೂಸುಸುದಡ!
    ಎಲ್ಲಾ ತೊಂದರೆಗಳೂ ಪರಿಹಾರ ಆವುತ್ತಡ].
    ಇಲ್ಲದ್ದರೆ ಸುಬ್ರಹ್ಮಣ್ಯ ತೀರ್ಥವ ಕುಪ್ಪಿಲಿ ಹಾಕಿ ಬ್ಯಾರಿ ಮೂಸಿ ನೋಡಿದ ಮತ್ತೆಯೇ ಕುಡಿಯೆಕ್ಕೋ?

    ಜೆನಂಗಳ ಎಷ್ಟು ಲಾಯಿಕಲಿ ಮರುಳು ಮಾಡಿದ್ದು ಹೇಳಿ ತಿಳುಸುವ ಸಾಲುಗೊ:
    [ಅಲ್ಲಿ ಗೂಡಂಗಡಿಯೋರಿಂಗೆ ಪ್ಲೇಷ್ಟಿಗು ಕುಪ್ಪಿ ಕೊಟ್ಟೇ ಸಾಕಾವುತ್ತು.
    ತಂದು ಮಡಗಲೆ ಪುರುಸೊತ್ತಿಲ್ಲೆ, ಕಟ್ಟ ಕಟ್ಟ ಕುಪ್ಪಿಗೊ ಕಾಲಿ ಆವುತ್ತಡ].

    [ಆ ಜೆನವ ಊರಿಂದ ಎಳಕ್ಕೊಂಡು ತೆಕ್ಕೊಂಡು ಹೋಯಿದವು ಹೇಳಿ ನಮ್ಮ ಬೈಲಿಂಗೆ ಗೊಂತಪ್ಪಗ ಉದಿ ಆಗಿತ್ತು]- ಎನಗೆ ಗೊಂತಿಪ್ಪ ಹಾಂಗೆ, ಮರುದಿನ ಉದಿಯಪ್ಪಗ ಬಾಂಗ್ ಕೇಳದ್ದಿಪ್ಪಗಳೇ ಊರ ಮಾಪಿಳ್ಳೆಗೊಕ್ಕೆ ಪಳ್ಳಿಲಿ ಮುಕ್ರಿ ಇಲ್ಲೆ ಹೇಳಿ ಸಂಶಯ ಬಂದದು
    [ಊರಿಂಗೆ ಎಂತಾರು ಆಪತ್ತು ಬಯಿಂದೋ – ಹೇಳಿ ಪಳ್ಳಿಮುಕ್ತೇಸರಂಗೊ ಎಲ್ಲೋರುದೇ ಆಲೋಚನೆ ಮಾಡಿಗೊಂಡಿದ್ದವಡ.]- ಆಪತ್ತು ಬಂದಿತ್ತಿದ್ದದು ನಿಜವೇ. ಇನ್ನು ರೆಜ ಸಮಯ ಹೋಗಿದ್ದರೆ ಬೇರೆ ಎಂತ ಸುದ್ದಿ ಕೇಳೆಕ್ಕಾವ್ತಿತ್ತೋ ಏನೋ.

    ಒಂದೊಪ್ಪ ಲಾಯಿಕ ಆಯಿದು:
    [ದೇಶದ್ರೋಹಿಗೊಕ್ಕೆ ಹುಗ್ಗಿಕೂಪಲೆ ಧರ್ಮಕೇಂದ್ರಂಗೊ ಸಕಾಯ ಮಾಡ್ತರೆ, ಆ ಧರ್ಮ ಇದ್ದರೆ ದೇಶ ಒಳಿವಲಿದ್ದೋ?] ಖಂಡಿತಾ ಇಲ್ಲೆ.

    ಶ್ರೀಶಣ್ಣ

  5. ಮೋಸ ಹೋವುತ್ತಷ್ಟು ದಿನ ಮೂಸಿ, ಮೂಸಿ ಮೋಸ ಮಾಡುವ ಮೂಸೆ ಸಂತಾನ ಇದ್ದೇ ಇರ್ತು. ಬೇರೆ ಬೇರೆ ಅವತಾರಲ್ಲಿ ಬಂದು ಜೆನಂಗಳ ಮೋಸ ಮಾಡಿಯೇ ಮಾಡ್ತವು. ಗಯಾದ ತೀರ್ಥ ನಾವು ಕುಡಿವಾಗ ನೆಗೆ ಮಾಡಿದವು, ಅದನ್ನೇ ಮೂಸೆ ಮೂಸಿ ಹಾಳು ಮಾಡಿದ ಮತ್ತೆ ಕುಡುದರೆ ರೋಗ ಪರಿಹಾರ ಆವುತ್ತು ಹೇಳಿ ತಿಳಿತ್ತವನ್ನೇ!!!
    [ಎಲ್ಲೋರುದೇ ಒಂದು ಕುಪ್ಪಿ ನೀರಿನ ತೆಕ್ಕೊಂಡೂ ಹೋಯೆಕ್ಕಡ, ಅದರ ಭೇಟಿಗೆ ಹೋಪಗ.]. ಅದರ “ಭೇಟಿಗೆ” ಹೋಪ ಬದಲು “ಬೇಟೆಗೆ” ಹೋಯೆಕ್ಕಾದ್ದು ಹೇಳಿ ನಮ್ಮವಕ್ಕೂ ಗೊಂತಾಗದ್ದ ಹಾಂಗೆ ಎಷ್ಟು ಲಾಯಿಕಲ್ಲಿ ಮೋಸ ಮಾಡಿತ್ತು ನೋಡಿ.
    ದೇಶ ದ್ರೋಹಿಗಳ ಹಿಡಿವಲೆ ಕೇರಳ ಸರ್ಕಾರ ಯಾವ ರೀತಿಲಿ ಸಕಾಯ ಕೊಡ್ತು ಹೇಳುವದು ಮದನಿಯ ಹಿಡಿವಾಗ ಗೊಂತಾಯಿದು. ಈ ಮೂಸೆಯ ಕರ್ನಾಟಕದ ಪೋಲೀಸರು ಹಿಡುದ್ದಕ್ಕೆ ಅವರ ನಾವು ಅಭಿನಂದಿಸೆಕ್ಕು.

  6. ನಮ್ಮ ದೇಶಲ್ಲಿ ಮೂಢ ನಂಬಿಕೆಗಳ ನಿರ್ಮೂಲನೆ ಆಯೆಕ್ಕಾರೆ ಹೀಂಗಿಪ್ಪ ಮೂಸುತ್ತ ಮೂಸೆಯ ಒಳ ಹಾಕೆಕ್ಕಷ್ಟೇ. ಈ ಶಾಂತಿಪ್ಪಳ್ಳ ಹೇಳುವ ಜಾಗೆ ಶಾಂತಿಮೊಗೆರು ಒಂದೆಯ?ನಿಂಗ ಹೇಳುವ ಎಲ್ಲಾ ಹೋಲಿಕೆ ಅಲ್ಲಿ ಕಾಣ್ತು.ಈ ಜಾಗೆಗೆ ಆನು ಒಂದರಿ ಹೋಯಿದೆ.ಅಲ್ಲಿಗೆ ಇಳಿವ ಬಸ್ಸು ಷ್ಟೋಪಿನ ಹೆಸರು ಕೂರ.
    ಈ ಅತಿಮಾನುಷ ಮೂಸೆ ಅದುವೇ ಅಲ್ದೋ?ನವಗೆ ಗೊಂತೆ ಆಯಿದಿಲ್ಲೆ. ದುಗ್ಗಲಡ್ಕ ಪಳ್ಳಿಲಿ ಹೀಂಗಿಪ್ಪ ಎಂತ್ಸೋ ನೀರು ಮಂತರ್ಸುದು ಇದ್ದಡ!! ಅಲ್ಲಿಯಾಣ ಅಂಗಡಿಲಿ ದಿನಕ್ಕೆ ಸುಮಾರು ೨೦೦ ಪ್ಲೇಷ್ಟಿಕು ಕ್ಯಾನ್ ಸೇಲ್ ಆವುತ್ತಡ..
    ಇನ್ನು ಅಲ್ಲಿ ಏವ ಮೂಸೆ ಇದ್ದೋ?

  7. ಮೂಸುತ್ತ ಬ್ಯಾರಿ, ಮೂಸೆ ಬ್ಯಾರಿ ಇವ್ವೆಲ್ಲ ಸೇರಿ ನಮ್ಮ ದೇಶ ಒಟ್ಟಾರೆ ಲಗಾಡಿ ಹೋತು. ಅದಕ್ಕೆ ಸಪೋರ್ಟ್ ಮಾಡಲೆ ನಮ್ಮ ದೇಶಲ್ಲಿ ಬೇಕಾದಷ್ಟು ಜೆನಂಗಳೂ ಇದ್ದವು.

  8. ಈ ಕಳ್ಳಂಗೊ ಊರಿನ ಹೆಸರನ್ನೂ ಹಾಳು ಮಾಡಿದವನ್ನೇ? ಈಗ ಗುಣಾಜೆ ಹೇಳಿದರೆ ಎಲ್ಲರ ಕೆಮಿ ಕುತ್ತ ಅಪ್ಪಲೆ ಶುರು ಆಯಿದು. ಛೆ ಛೆ … ಎಂತ ಅವಸ್ಥೆ ?

    1. ಮಹೇಶ,ನಮ್ಮ(ನಿನ್ನ?) ಗುಣಾಜೆ ನಿಜವಾಗಿಯೂ ಈಗ ಫೇಮಸ್,ಮೊನ್ನೆ ಇಲ್ಲಿ ಎನ್ನ ಹುಟ್ಟಿದ ಊರು ಹೇಳುವಗ-ಪಾಂಡೇಲು ಹೇಳಿದರೆ ಇಂದು ಪೇಪರಿಲ್ಲಿ ಬಂದ ಗುಣಾಜೆ ಯ ಹತ್ತರೆ ಹೇಳಿಯೇ ಪರಿಚಯ ಹೇಳಕಾತು,ಅಂಬಗ ಕೇಳಿದವಕ್ಕೆ ಎಲ್ಲಾಂಗೆ ಹೇಳಿ ಅರ್ಥ ಆತು! ಇರ್ಲಿ, ಗುಣಾಜೆ ಹೇಳಿದರೆ ನಮ್ಮ ಮಹೇಶನ ಊರು ಹೇಳಿ ಹೇಳುವ ಹಾಂಗೆ ಆಗಲಿ ಹೇಳಿ ಹಾರೈಸುತ್ತೆ!!

      1. ಹಾ ಅಪ್ಪಚ್ಚಿ… ನಿಂಗಳ ಹಾರೈಕೆ ಇದ್ದರೆ ಮತ್ತೆ ಗುರು ಹಿರಿಯರ ಆಶೀರ್ವಾದ ಇದ್ದರೆ ಹಾಂಗೆ ಅಕ್ಕು.

  9. ನಾವು ಎಚ್ಚರಿಗೆಲಿ ಇರೆಕ್ಕು ಹೇಳ್ತ ಗುಣಾಜೆ ಮಾಣಿಯ ಅಭಿಪ್ರಾಯ ನೂರಕ್ಕೆ ನೂರು ಸರಿ! ನಮ್ಮ ಸುತ್ತಮುತ್ತ ಎಂತಾ ಜೆನಂಗೊ ಬಂದು ಸೇರುತ್ತವು ಹೇಳಿ ನವಗೇ ಗೊಂತಾವುತ್ತಿಲ್ಲೆ. ಗುಣಾಜೆ ಹತ್ತರಾಣ ಪಳ್ಳಿಂದ ಮುಕ್ರಿಯ ಪೋಲೀಸಿನವು ಹಿಡುದು ತೆಕ್ಕೊಂಡು ಹೋಪಲ್ಲಿ ವರೇಂಗೆ ಊರಿಲ್ಲಿ ಆರಿಂಗೂ ಆ ವೆಗ್ತಿಯ ಬಗ್ಗೆ ಸಂಶಯ ಬಯಿಂದಿಲ್ಲೆನ್ನೆ!!
    ಅಂತೂ ಒಪ್ಪಣ್ಣಂಗೆ ವಾರಕ್ಕೊಂದು ಶುದ್ದಿ ಸಿಕ್ಕಿಯೇ ಸಿಕ್ಕುತ್ತು ಬೈಲಿಂಗೆ ಹೇಳ್ಳೆ! ಬಪ್ಪ ವಾರದ ಶುದ್ದಿಗೆ ಕಾಯ್ತೆ!

  10. ಒಪ್ಪಣ್ಣೊ ರಜ ವರ್ಷ ಮದಲೆ ಉಪ್ಪಳಲ್ಲಿ ಈ ಮುಸುತ್ತ ಬ್ಯಾರಿ ಬ೦ದು ನೀರು ಕೊಡ್ಲೆ ಪುರುಸೊತ್ತು ಆಗದ್ದೆ ನೀರಿನ ಪೈಪಿ೦ಗೆ ಮೂಸಿ ಅದರಿ೦ದ ನೀರು ತೆಕ್ಕೊ೦ಬಲ ಹೇಳಿತ್ತು ಮೂರುದಿನ ಅಪ್ಪಗ ರಾತ್ರೋ ರಾತ್ರಿ ಊರು ಬಿಟ್ಟಿಕ್ಕಿ ಹೋತು ಊರವು ಮರದಿನ ಅದರ ಹೊಡಿ ಮಾಡ್ಲೆ ಅ೦ದಾಜು ಮಾಡಿದ್ದು ಗೊ೦ತಾಗಿ ಜಾರಿದ್ದು.ಇನ್ನು ಭಯೋತ್ಪಾದಕ೦ಗೊ ಕಾಸ್ರೋಡಿ೦ಗೆ ಬಪ್ಪದಲ್ಲ ಕಸ್ರೋಡೇ ಭಾಯೋತ್ಪಾದಕ೦ಗಳ ಒ೦ದು ಉತ್ಪಾದನಾ ಕೇ೦ದ್ರ.ಎ೦ಗಳ ಪಟ್ಲದ ಹಾ೦ಗಿಪ್ಪಲ್ಲಿ ಇ೦ದು ಒ೦ದೇ ಒ೦ದು ಹಿ೦ದುಗೋಕ್ಕೆ ಪ್ರವೇಷ ಇಲ್ಲೆ.ಹೋಪ ಧೆರ್ಯವೂ ಇಲ್ಲೆ.ಒ೦ದು ಕಾಲಲ್ಲಿ ಮದೂರಿಲ್ಲಿ ಮೂಡಪ್ಪ ಸೇವಗೆ ಗ೦ಟೆ ಜಾಕಟೆ ಶ೦ಖ ಸಮೇತ ಇದೇ ಪಟ್ಲ ಮುಖಾ೦ತರ ಉಲ್ಪೆ ಹೋಗಿತ್ತಿದ್ದಿಯೊ೦ ಹೇಳಿರೆ ಇ೦ದು ಆರೂ ನ೦ಬವು.(ಅದು ಬಹುಶಹ ೧೯೬೨).ಇರಲಿ ಒಪ್ಪ೦ಗಳೊಟ್ಟಿ೦ಗೆ ಮುಗುಶುವೊ೦.ಒಪ್ಪಣ್ಣಗೆ ಒ೦ದು ಸ್ಪೆಷಲ್ ಒಪ್ಪ ಈ ಲೇಖನಕ್ಕೆ.

  11. Kasrugodu matthe Dakshina kanndada byarigokke Bhayothpadakara ottinge nikata samparka iddu.

    Dakshina kannda udupili namm kesari padago ippa karana avra ondu mattinge control li madugule yedigaydu. Kasargodina avasthe heli prayojana ille.

    Ninne manage phone madiyapa helidavu, Monne vard election aathu. Ishtravarage BJP geddugondu itthu, ee sarthi ondu byarthi adda. Allige kathe mugutthu.

    Ivakkella Modi hangippa jena CM aagi barekku. Suumane vicharane gicharane heli koopalaga. Encounter madi idukkekku.

    1. Election illi byarthi geddadu vishesha all anna. Adu entha heli gontayekare ondu sanna comparison maadire saaku – byarigala manegalalli eshtu makko irthavu nammavaralli eshtu irthavu heli. Avaralli varushakke ondu, kelavu sarti 2 {Februari ili 29 batha hange ;)} avutha iruthu. Iduve avara nijavada jihad -bhooloka poora byarigalanne thumbusuva lakhsya.

      Nammavare kathe ellaringu gothiddanne. Koosugo ille, iddadaralli kalavu bere dharmadavara ottinge hovtavu, oorilli ippa maaniyangoke maduve avuthille. Mathe ulidavaralli hechinavu oorilli ille (election inge iruthaville). Iddavu byarigalannu kempinavarannu (Kerala lli) hedari badukkuthavu. Innu ondu hathu varshalli havyakara population eega ippadara 70-75% ikku ashte. 2050 appaga 40-50% akko heli kanutthu.

  12. moosa ಬ್ಯಾರಿಯ ಮೋಸ ವೃತ್ತಾಂತವ ಕೇಳುವಗ ಹೆದರಿಕೆ ಆತು. ನಮ್ಮ ಊರಿನ ಒಳದಿಕ್ಕೇ ನಮ್ಮ ಎಡೆಲಿ ಹೀಂಗ್ರುತ್ತ ದೇಶದ್ರೋಹಿಗೊ ಇಕ್ಕೋ ಹೇಳ್ತ ಸಂಶಯ ಬತ್ತಾ ಇದ್ದು. ನೆಗೆ ಮಾಡ್ಯೊಂಡು ಕೊರಳನ್ನೇ ಕೊಯಿಗು ಇವು. ಅಬ್ಬಬ್ಬಾ. ಜಾಗ್ರತೆ ಬೇಕಪ್ಪಾ. ಓ, ಈ ಬ್ಯಾರಿ ಮೂಸಿ ಮದ್ದಿನ ನೀರು ಕೊಡುತ್ತ ವಿಷಯ ಎನಗೆ ಗೊಂತಿತ್ತಿಲ್ಲೆ. ಹೊಸ ವಿಷಯ. ಕುರ್ಚಿಲಿ ಬಡುದು ಗುಣ ಮಾಡ್ತ ಮಾಪಳೆ, ಗಾಯವ/ಹುಣ್ಣಿನ ನಕ್ಕಿ ಗುಣ ಮಾಡುತ್ತ ಮಾಪಳೆ, ತುಪ್ಪಿ ಮದ್ದು ಕೊಡುವ ಮಾಪಳೆ (ಎಲ್ಲ ಮಾಪಳೆಗಳು ತುಪ್ಪೆಂಡೆ ಇರುತ್ತವು !) ಎಲ್ಲ ಕೇಳಿದ್ದೆ.

    ಏ ಒಪ್ಪಣ್ಣ, ಶಾಂತಿಪಳ್ಳ , ನಮ್ಮ ಕುಂಬ್ಳೆ ಹತ್ರೆ ಒಂದಿದ್ದು. ಅದರಲ್ಲಿ ನೀರು ಇರುತ್ತದು ಮಳೆಕಾಲಲ್ಲಿ ಮಾಂತ್ರ. ಅಂಬಗ ಅದು ಗೋಣಂಗಳ ಸ್ವಿಮ್ಮಿಂಗ್ ಪೂಲು. ಇದು ಬೇರೆ ಶಾಂತಿಪಳ್ಳ ಅಲ್ದೊ ?

  13. ಈ ಶುದ್ದಿಯ ವಾರ್ತೆಲಿ ನೋಡಿದ ದಿನ೦ದ ಗ್ರೇಶುತ್ತಾ ಇತ್ತಿದ್ದೆ. ನಮ್ಮ ಒಪ್ಪಣ್ಣ.comಲ್ಲಿ ಯಾವಗ ಲೇಖನ ಬತ್ತು ಹೇಳಿ.. ಈಗ ಬ೦ತದಾ….

  14. dharmada dari tappidare heengavutthu.nishpakshapathanda krama tekkondare sari akku.

  15. ಒಪ್ಪಣ್ಣ,
    ದೇಶದ್ರೋಹಿಗೊ ಪಳ್ಳಿಯ ಒಳವೂ ಇದ್ದವು, ಹೆರವೂ ಇದ್ದವು. ಈ ವಿಷಯ ಒಂದು ವಾಸ್ತವ ಹೇಳಿ ಇನ್ನೂ ನಮ್ಮಲ್ಲಿ ಹೆಚ್ಚಿನವಕ್ಕೆ ಗೊಂತಾಯಿದಿಲ್ಲೆ. ಒಬ್ಬ ಬುದ್ಧಿಜೀವಿ, ಇನ್ನೊಬ್ಬ ಭಾವಜೀವಿ, ಮತ್ತೊಬ್ಬ ಎರಡೂ ಇಲ್ಲದ್ದ ಜೀವಿ.
    ಗುಣಾಜೆ ಮಾಣಿಗೆ ಸುಮ್ಮನೆ ಅಲ್ಲ ಕೋಪ ಬಂದದು. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×