Oppanna.com

ಮೆಟ್ಟಾಟದ ಎಡೆಲಿ ಮುಟ್ಟಾಟ ಮರದತ್ತೋ?

ಬರದೋರು :   ಒಪ್ಪಣ್ಣ    on   09/07/2010    39 ಒಪ್ಪಂಗೊ

ಯೇ ಭಾವ! ಉಂಡೋಂಡೇ ಬಾಕಿ ಆದಿರೋ?

ಒಳ್ಳೆದಲ್ಲ, ರಜ ವ್ಯಾಯಾಮ ಬೇಕು ದೇಹಕ್ಕೆ! ಅಲ್ಲದ್ರೆ ಬೊಜ್ಜು ಬೆಳೆತ್ತಡ, ಮಾಷ್ಟ್ರಮನೆ ಅತ್ತೆ ಪರಂಚುಗು ಯೇವತ್ತೂ..

ದೇಹಲ್ಲಿಪ್ಪ ಕೊಬ್ಬಿನ ಬೆಗರಿನ ರೀತಿಲಿ ಕರಗುಸೆಕ್ಕಾದ ಒಯಿವಾಟಿಂಗೆ ವ್ಯಾಯಾಮ ಹೇಳ್ತವಡ.
ಕಷ್ಟದ ಕೆಲಸ ಮಾಡ್ಳಕ್ಕು, ವ್ಯಾಯಾಮಶಾಲಗೆ ಹೋಪಲಕ್ಕು, ಯೋಗಾಸನ ಮಾಡ್ಳಕ್ಕು, (ಯೋಗಾಸನ ಹೇಳಿದಕೂಡ್ಳೇ ನಮ್ಮ ಕೊಳಚ್ಚಿಪ್ಪುಭಾವಂಗೆ ಶವಾಸನ ಒಂದೇ ಗುರ್ತ ಸಿಕ್ಕುದು) ಹಾಂಗೆ, ವ್ಯಾಯಾಮಲ್ಲಿ ಸುಮಾರು ನಮುನೆ ಇದ್ದಡ..
ಬೊಬ್ಬೆ ಹೊಡದು ಶುದ್ದಿ ಮಾತಾಡಿರೆ ವ್ಯಾಯಾಮ ಆವುತ್ತಡ, ನಮ್ಮ ಅಜ್ಜಂದ್ರು ಮಾಡಿದಾಂಗೆ!
ಅದರೆ ಮಾತಾಡುದು ಆದರೂ ಆರೊಟ್ಟಿಂಗೆ?
ಎಲ್ಲೊರಿಂಗೂ ತೆರಕ್ಕು, ಅವರವರ ಒಯಿವಾಟಿಲಿ ಎಲ್ಲೊರಿಂಗೂ ಅಂಬೆರುಪು!

ಎಡಪ್ಪಾಡಿಭಾವಂಗೆ ದರ್ಮಸ್ತಳಕ್ಕೆ ಹೋಪಲಿತ್ತು.. ಎಲಿಕ್ಕಳಪುಟ್ಟಂಗೆ ಬೆಂಗುಳೂರಿಂಗೆ ಹೋಪಲಿತ್ತು.. ಪೆರುಮುಕಪ್ಪಚ್ಚಿಗೆ ಇಂಟರ್ನೆಟ್ಟು ಗುರುಟುಲಿದ್ದು.. ದೊಡ್ಡಬಾವಂಗೆ ಹೊಸತನದ ತವಕ ಇತ್ತು.. ಅಜ್ಜಕಾನಬಾವಂಗೆ ತೋಟಕ್ಕೆ ಮದ್ದುಬಿಡ್ಳಿದ್ದು.. ಪಾಲಾರಣ್ಣಂಗೆ ಕೊಡೆಯಾಲಕ್ಕೆ ಹೋಪಲಿದ್ದು, ಶರ್ಮಪ್ಪಚ್ಚಿಗೆ ಜೆಂಬ್ರದೂಟ ಇದ್ದು, ಬೊಳುಂಬುಮಾವಂಗೆ ಬೇಂಕಿಲಿ ಜೋರು ಕೆಲಸ ಇದ್ದು, ಒಪ್ಪಕ್ಕಂಗೆ ಚವಿಹಣ್ಣು ತಿಂಬಲಿದ್ದು, ದೀಪಕ್ಕಂಗೆ ಅಡಿಗೆಮಾಡ್ಳಿದ್ದು, ಡಾಗುಟ್ರಕ್ಕಂಗೆ ಪರೀಕ್ಶೆಗೆ ಓದಲಿದ್ದು, ಕಾನಾವಜ್ಜಿಗೆ ಮಳೆಬಪ್ಪಗಳೂ ಹೂಗಿನ ಸೆಸಿಗೊಕ್ಕೆ ನೀರು ಹಿಡಿವಲಿದ್ದು, ಬಂಡಾಡಿಅಜ್ಜಿಗೆ ಪಡಿಗೆಕುತ್ತಲಿದ್ದು, ಪುಟ್ಟಕ್ಕಂಗೆ ಕವಲು ಓದಲಿದ್ದು, ಕೂವೆತ್ತಿಲಪುಳ್ಳಿಗೆ ದೊಡ್ಡವರ ಬಾಯಿಗೆ ಕೋಲಾಕಲೆ ಇದ್ದು, ಸಾರಡಿಪುಳ್ಳಿಗೆ ನಿಟ್ಟೆಗೆ ಹೋಪಲಿದ್ದು – ಕೂವೆತ್ತಿಲ ಪುಳ್ಳಿಯ ಕಾಂಬಲೋ ಏನೋ! ಗಂಗಜ್ಜಿಯ ಪುಳ್ಳಿಗೆ ಸಮೋಸ ಕಳುಸಲೆ ಇದ್ದು, ಬಲ್ನಾಡುಮಾಣಿಗೆ ವೆಬ್‌ಸೈಟು ಮಾಡ್ಳೆ ಇದ್ದು..!
ಚೆ ಚೆ, ಎಂತಾ ಅಂಬೆರ್ಪು, ಮೊನ್ನೆ ಮೊನ್ನೆ ಜೆಂಬ್ರದೂಟದ ದಿನ ಎಲ್ಲೊರುದೇ ಪುರುಸೋತಿಲಿತ್ತಿದ್ದವು.
ಈಗ ಒಂದೇ ಸರ್ತಿಗೆ ಎಲ್ಲೊರಿಂಗೂ ಸುರು ಆತು, ಶುದ್ದಿ ಒಪ್ಪಣ್ಣನತ್ರೆ ಶುದ್ದಿಮಾತಾಡ್ಳೇ ಸಮೆಯ ಇಲ್ಲೆ.
ಅಲ್ಲದೋ? 🙁
~
ಸುಮಾರು ಒರಿಶದ ಮದಲು- ನಾವೆಲ್ಲ ತುಂಬ ಸಣ್ಣ ಇತ್ತು -ಅಂಬಗ..
ಕಾಂಬಲೂ ಸಣ್ಣ, ತಲೆಬೆಶಿಗಳೂ ಸಣ್ಣವೇ!
ಅಡಕ್ಕಗೆ ರೋಗಬಂದರೆ ನವಗೆಂತ? ಮೈಲುತೂತಿಂಗೆ ಎಷ್ಟುಕ್ರಯ ಆದರೆ ನವಗೆಂತ? ಪೆಟ್ರೋಲಿಂಗೆ ರೇಟುಜಾಸ್ತಿ ಆದರೆ ನವಗೆಂತ? ಉದ್ದಿನಬೇಳೆ ಸಿಕ್ಕದ್ರೆ ನವಗೆಂತ – ಎಂತ ಆದರೂ ನವಗೆ ಲೆಕ್ಕವೇ ಇಲ್ಲೆ!
ಆಡುದೊಂದೇ ಜೆಂಬಾರ. ಮೂರುಹೊತ್ತುದೇ ಆಟ.

ಇಡೀದಿನ ಬೇರೆಬೇರೆ ಆಡಿರೂ, ಹೊತ್ತಪ್ಪಗ ಒಂದೊಂದಾರಿ ಬೈಲಿನ ಮಕ್ಕೊ ಎಲ್ಲೊರುದೇ ಸೇರಿ ಒಟ್ಟಿಂಗೇ ಆಟ ಆಡುದು ಇತ್ತು.
ಬೈಲಿಲೇ ನೆಡಕ್ಕೊಂಡು, ಸಾರಡಿತೋಡು ದಾಂಟಿ, ಆಚಕರೆ ಮನೆಮೇಲ್ಕಟೆ ನೆಡಕ್ಕೊಂಡು ಹೋದರೆ ಆಚಕರೆತರವಾಡುಮನೆ ಜಾಲಿಂಗೆತ್ತುತ್ತು.
ಅದುವೇ ನಮ್ಮ ರಂಗಮಾವನ ಜಾಲು, ಅದುವೇ ಮಕ್ಕಳ ಆಟದ ರಂಗಸ್ಥಳ!
~

ಮೂರುಸಂದ್ಯೆಗೆ ಸುರು ಆದರೆ ಕಸ್ತಲೆಗಟ್ಟುವ ಒರೆಂಗೂ..
ಈಚಕರೆ, ಆಚಕರೆ, ಬೈಲಕರೆ, ಮೇಗಾಣಮನೆ, ಕೆಳಾಣಮನೆ, ಹೊಸಮನೆ, ಹಳೆಮನೆ, ಉಂಡೆಮನೆ, ದೋಸೆಮನೆ, ಬೆಣ್ಣೆಮನೆ – ಎಲ್ಲ ಪುಳ್ಳರುಗಳುದೇ ಅಲ್ಲಿಕ್ಕು.
ಗಲಗಲಗಲ – ಕೇ-ಕೂ ಹೇಳಿಗೊಂಡು ಕಾಕೆಗೊ ಮನೆಗೆ ಹೋಪದರಿಂದಲೂ ಹೆಚ್ಚಿಗೆ ಬೊಬ್ಬೆ..
ಬೊಬ್ಬೆ ಹೊಡೆಯದ್ರೆ ಆಟಲ್ಲಿ ಗೆಲ್ಲುದು ಹೇಂಗೆ ಬೇಕೆ! ಜೋರು ಬೊಬ್ಬೆ ಹೊಡದವ ಹೇಳಿದ್ದು ಸರಿ!
ತಪ್ಪುಸರಿ ಹೇಳುದು, ಆಟದ ನಿಯಮ ಹೇಳುದು ಎಲ್ಲ ಅವನೇ – ದೊಡ್ಡಸೊರದವ!!

ಆಟಲ್ಲಿ ಕುಶಾಲು ಹೇಳಿರೆ ಕುಶಾಲು! ಯೇವದೂ ಆಟ ಮುಗುದ ಮತ್ತೆ ನೆಂಪಿಲ್ಲೆ..
ಕುಶಾಲಿನ ಆಟ ಸುರು ಆಗಿ, ಕುಶಾಲಿಲೇ ಮುಂದುವರುದು, ಯೇವದೋ ಒಂದು ಗಳಿಗೆಲಿ ಆರಿಂಗೋ ಆರೋ ಬಿಗುದು, ಗಾತಿ ಅಪ್ಪದು.
ಅವರ ಅಮ್ಮ ಬೆತ್ತ ತೆಕ್ಕೊಂಡು ಬಪ್ಪನ್ನಾರ ಕುಶಾಲಿನ ಆಟ!
ಹುಳಿಅಡ್ರಿಲಿ ಆರದ್ದಾರು ಬೆನ್ನಿನ ಚೋಲಿ ಎದ್ದಪ್ಪಗಳೇ ಆ ದಿನದ ಆಟ ಮುಗಿವದು..

ಬೆರೇ°ನೆ ಕೂಗೆಂಡು ಮನಗೆ, ಅಬ್ಬೆ ಕೈಲಿ ಬಡಿಗೆ ಕಾಂಬಲ್ಲಿಗೊರೇಂಗೆ!
ಸೀತ ಹೋಗಿ ಕೈಕ್ಕಾಲು ಮೋರೆ ತೊಳದು ದೇವರ ಎದುರು ಚಕ್ಕನ ಕಟ್ಟಿ ಕೂದುಗೊಂಬದು, ಒಪ್ಪಣ್ಣಂದ್ರ ಹಾಂಗೆ! ದೇವರದ್ದರ ಓದಲೆ..
ಮತ್ತೆ ಉಂಡಿಕ್ಕಿ ಅಜ್ಜಿ-ಅಜ್ಜನತ್ತರೆ ಕತೆ ಹೇಳುಸಿಗೊಂಡು ಒರಗಿತ್ತು, ನೀಟಂಪ…
ಚೆ, ತಲೆಬೆಶಿ ಇದ್ದೋ..

~

ಮೊನ್ನೆ ರಜಾ ಮಳೆಬಿಟ್ಟದು ನೋಡಿ ಬೈಲಿಲೇ ಒಂದು ಸುತ್ತು ತಿರುಗಿ ಬಪ್ಪೊ ಹೇಳಿ ಹೆರಟದು..

ಮಳೆಬಿಡುವಗ ತಡವಾದಕಾರಣ ಮೂರುಸಂದ್ಯಕ್ಕೆ ಮನೆ ಬಿಟ್ಟದು, ಅಡಕ್ಕೆಸಲಕ್ಕೆಯ ಸೂಟೆ ಕೈಲಿ ಹಿಡ್ಕೊಂಡು.
ಬಪ್ಪಗ ಕಸ್ತಲೆ ಆದರೆ ಬೇಕನ್ನೆ!
ಕಿಚ್ಚಾದರೆ ಎಲ್ಲಿಯೂ ಸಿಕ್ಕುಗು, ಒಣಕ್ಕು ಸೂಟೆ ಈ ಮಳೆಗಾಲಲ್ಲಿ ಸಿಕ್ಕುದು ಕಷ್ಟ!

ಹೋದೆ ಹೋದೆ, ಕಲ್ಲುಗುಂಡಿಗಳ ತಪ್ಪುಸಿಗೊಂಡು..
ಆಚಕರೆ ತರವಾಡುಮನೆ ಎತ್ತಿತ್ತು!
ಅಜ್ಜಸುರಿಯ!! ಜಾಲಕೊಡಿಯ ಸಣ್ಣದೊಂದು ಗುಂಡಿ ಪಕ್ಕನೆಕಾಣದ್ದೆ ಮೆಟ್ಟಿಹೋತದಾ – ಕಾಲಡಿಮೊಗಚ್ಚಿದಾಂಗೆ ಆತು! 🙁
ಯಬಾ! ಬೇನೆ ಒಂದರಿ ತಲಗೇರಿತ್ತು! ನೆಡವಲೇ ಎಡಿಯ..
ಗುಂಡಿದಾರಿಲಿ ನೋಡೆಂಡು ಬಂದರೂ, ತಾಗಿದ್ದು ಜಾಲಿಲಿಯೇ ಅಪ್ಪೋ!

ಜಾಲಕೊಡಿಂದ ಹೇಂಗಾರು ಮೋಂಟುಸೆಂಡು ಪಂಚಾಂಗವರೆಗೆ ಹೋದೆ, ಮೆಲ್ಲಂಗೆ ಕೂದೊಂಡೆ.
ಜಾಲಕೊಡಿಲಿ ಅಡಕ್ಕೆ ಕೆರಸಿಗೊಂಡು ಇದ್ದ ರಂಗಮಾವಂಗೆ ಅಂದಾಜಾತು, ಬಂದು – ಬೇಕಾದ ಉಪಚಾರಕ್ಕೆ ಬಂಡಾಡಿಎಣ್ಣೆ ಕಿಟ್ಟಿದವು.
ಒಂದರಿ ನೆಟ್ಟಿ ತೆಗದವು – ಪಾದದ್ದು.. – ನಾರಾಯಣಾ – ನೀಲಿಕೆಂಪಿನ ಚೆಂದಚೆಂದ ನಕ್ಷತ್ರ ತಿರುಗುದು ಕಾಂಬಲೆ ಸುರು ಆತು! 😉
ಪಾತಿಅತ್ತೆಯತ್ರೆ ಒಂದರಿ ಬೆಶಿನೀರು ತಪ್ಪಲೆ ಹೇಳಿದವು! ಕೊದಿಪ್ಪಕೊದಿಪ್ಪ ಆಯೇಕಡ!
ಒಪ್ಪಣ್ಣಂಗೆ ಅದರ ಕೇಳಿ ಬೇನೆ ಪೂರ ಹಾರಿಹೋದಾಂಗಾತು! ಅಂತೂ ಹಿಡುದು ಮಡುಗಿ ಕೂರುಸಿ ಸಣ್ಣ ಒಂದು ಶೇಕ ಕೊಟ್ಟವು ರಂಗಮಾವ!
ಕಾಲು ಪೂರ್ತಿ ಗುಣ ಆತು – ಹೇಳಿದೆ! ಹೇಳದ್ರೆ ಇನ್ನೂ ಬೆಶಿಯ ನೀರು ಬತ್ತಿತು! 😉
~

ಓ ಮೊನ್ನೆ ಬೇಸಗೆಲಿ ತರವಾಡುಮನೆಲಿ ಒಂದು ಪೂಜೆ ಕಳಾತಲ್ಲದೋ – ಜಾಲಿಡೀಕ ಚೆಪ್ಪರಹಾಕಿ!
ಆ ಚೆಪ್ಪರದ ಅಡಕ್ಕೆ ಕಂಬಂಗೊ ರಜ ಸಮೆಯ ಹಾಂಗೇ ಇತ್ತು. ಮೊನ್ನೆ ಮಳೆ ಸುರು ಅಪ್ಪಲ್ಲಿಒರೆಂಗೂ..
ಮತ್ತೆ ಆಳುಗೊ ಸೀತ ಅಡಕ್ಕೆಸೋಗೆ ತಂದು ಜಾಲಿಲಿ ಹರಗುತ್ತ ಭರಲ್ಲಿ ಕಂಬದ ಗುಂಡಿ ಮುಚ್ಚಿದ್ದವೇ ಇಲ್ಲೆ ಇದಾ! ಅದುವೇ ಮೋಸ ಆದ್ದು.
ಒಪ್ಪಣ್ಣ ಸೀತ ಬಂದು ಅರಾಡಿಯದ್ದೆ ಆ ಗುಂಡಿಗೆ ಕಾಲು ಹಾಕಿ, ಅಡಿಮೊಗಚ್ಚಿ, ಪಂಚಾಂಗಲ್ಲಿ ಕೂದೇ ಬಾಕಿ! 🙁
ಅಂಬಗ ನೋಡ್ಳಾಗದ ಒಪ್ಪಣ್ಣ ನಿನಗೆ – ಹೇಳಿ ಪರಂಚಲೆ ಸುರುಮಾಡಿದ ರಂಗಮಾವ, ಆಳುಗಳದ್ದೇ ತಪ್ಪು ಹೇಳ್ತಲ್ಲಿಗೆ ನಿಲ್ಲುಸಿದವು..
~

ಅಂದು, ಇಪ್ಪತ್ತು-ಮೂವತ್ತೊರಿಶ ಮೊದಲೊರೆಂಗೂ ಈ ಜಾಲಿಲಿ ಮಕ್ಕೊ ನಲಿಪ್ಪಿಗೊಂಡು ಇತ್ತಿದ್ದವು.
ನೆರೆಕರೆಯ ಮಕ್ಕೊ ಪೂರ ಬಂದು ಆ ದಿನ ಹೊತ್ತಪ್ಪಗಾಣ ಆಟ ಎಲ್ಲ ಮುಗುಶಿಗೊಂಡು ಇರುಳಿರುಳು ಅಪ್ಪಗ ಹೋಪದು.
ಬೈಲಿನ ಯೇವದಾರು ಮನೆಗೆ ಕಸ್ತಲೆಆದರೂ ಮಕ್ಕೊ ಬಯಿಂದವಿಲ್ಲೆ ಹೇಳಿ ಆದರೆ ಸೀತ ಹುಡ್ಕಿಗೊಂಡು ತರವಾಡುಮನಗೆ ಬಕ್ಕು, ಕರಕ್ಕೊಂಡು ಹೋಕು – ಅಷ್ಟುದೇ ನಿಘಂಟು.

ಪಾತಿಅತ್ತೆಯತ್ರೆ ಒಂದು ಆಸರಿಂಗೆ ಮಾಡ್ಳೆ ಹೇಳಿದವು ರಂಗಮಾವ! ಹಟ್ಟಿಕೆಲಸದ ಎಡಕ್ಕಿಲಿ ಒಂದು ಆಸರಿಂಗೆ ಮಾಡ್ಳೆ ಹೋದವು ಪಾತಿಅತ್ತೆ. ಕಾಲುನೀಡಿ ಕೂಯಿದ° ಒಪ್ಪಣ್ಣ.
ಅಂಬಗಾಣ ಕಾಲಲ್ಲಿ ಎಷ್ಟು ಸರ್ತಿ ಹೀಂಗಿರ್ತ ಗುಂಡಿಗೆ ಬಿದ್ದಿದೋ – ಲೆಕ್ಕವೇ ಇಲ್ಲೆ.
ಎಷ್ಟು ಸರ್ತಿ ಕೈ ಕಾಲಿಂಗೆ ಗರ್ಪುಸಿಗೊಂಡಿದೋ – ಈಗ ಗೊಂತಿಲ್ಲದ್ದೆ ಆದ್ದು, ರಜಾ ಬೇನೆ ಆವುತ್ತಿದಾ..

ರಂಗಮಾವಂಗೆ ರಜಾ ಗೆಂಟುಬೇನೆ ಅಡ, ಕಳುದೊರಿಶ ಬಂದ ಆ ಜೊರ ಇದ್ದಲ್ಲದ, ಅದು ಮತ್ತೊಂದರಿ ಎಳಗಿತ್ತು! ಪಾಪ.
ಕೆಲಸದ ಕುಂಞ ಬಾರದ್ದೆ ವಾರ ಆತಡ, ಮದ್ದು ಬಿಡೆಕ್ಕಷ್ಟೆಡ, ಮಳೆಗಾಲಕ್ಕಿಪ್ಪ ಸಾಮಾನು ತರೆಕ್ಕಷ್ಟೆಡ, ಗಣೇಶಮಾವನೊಟ್ಟಿಂಗೆ ಓ ಮೊನ್ನೆ ಗೋಕರ್ಣಕ್ಕೆ ಹೋಗಿ ಬಂದವಡ – ಮರವಂತೆಲಿ ಅಂತೇ ಕಡಲುನೋಡಿ ಹೊತ್ತು ಕಳುದು ಕೊಡೆಯಾಲಲ್ಲಿ ಅಕೇರಿಯಾಣ ಬಸ್ಸು ತಪ್ಪಿದ್ದಡ – ಹೀಂಗೆ ನೇರಂಪೋಕು ಮಾತಾಡಿಗೊಂಡು ಇಪ್ಪಗ ಒಳಂದ ಪಾತಿಅತ್ತೆ ಸಣ್ಣ ಆಸರಿಂಗೆ ತಂದವು.
ಕೊತ್ತಂಬರಿಜೀರಕ್ಕಿ ಕಷಾಯ. ಡಾಗುಟ್ರಕ್ಕ ಮಾಡ್ತ ಹಾಂಗೆ ಕಾರ ಅಲ್ಲ, ಚೀಪೆ ಚೀಪೆ, ಒಪ್ಪಣ್ಣನ ಹಾಂಗೆ!
ಕಷಾಯ ಕೊಟ್ಟಿಕ್ಕಿ ಪಾತಿಅತ್ತೆ ಪುನಾ ಹಟ್ಟಿಹೊಡೆಂಗೆ ಹೋದವು.
~

ಮಾತಾಡಿಗೊಂಡೇ ಹೊತ್ತು ಹೋದ್ದು ಗೊಂತೇ ಇಲ್ಲೆ.
ಗಂಟೆ ಏಳೂವರೆ ಕಳಾತು. ಮನೆ ಒಳದಿಕಾಣ ಲೋಕವೇ ಬೇರೆ..
ಶಾಂಬಾವ° ಅಂಗುಡಿಂದ ಬರೆಕಷ್ಟೆ.
ವಿದ್ಯಕ್ಕ° ಕೋಣೆಯ ಒಳದಿಕೆ ಇತ್ತೋ ಏನೋ.. ಹೆರವೇ ಬಯಿಂದಿಲ್ಲೆ.
ವಿದ್ಯಕ್ಕನ ತಮ್ಮ ಬಯಿಂದ° – ರಾಜ°, ಬೆಂಗುಳೂರಿಲಿ ಇಂಜಿನಿಯರು ಕಲ್ತುಗೊಂಡು ಇಪ್ಪ ಮಾಣಿ!

ವಿನು ದೊಡ್ಡಸೊರಲ್ಲಿ ಟೀವಿಹಾಕೆಂಡು ಕೂಯಿದ°.

ಅವಂಗೆ ಆಟದ ಚಾನೆಲುಗಳಲ್ಲಿ ಆಸಕ್ತಿ ಸುರು ಆಯಿದಡ.
ಈಗ ವಳ್ಡು ಕಪ್ಪಿದ್ದಡ ಅಲ್ಲದೋ – ಅದರ ನೋಡ್ಳೆ ಹೀಂಗೆ ಟೀವಿ ಹಾಕಿದ್ದಡ – ರಂಗಮಾವ ಹೇಳಿದವು.
ಅದರ ಸುದ್ದಿ ಮಾತಾಡುವಗ ರಾಜ ಹೆರಬಂದು ಏನೂ ಕೇಳಿದ°, ಅವಂಗೆ ಒಪ್ಪಣ್ಣನ ಗುರ್ತ ಇದ್ದೋ ತೋರ್ತು!
~
ಬಣ್ಣಬಣ್ಣದ ಅಂಗಿ ಹಾಯ್ಕೊಂಡು ಒಬ್ಬನ ಒಬ್ಬ ನೂಕಿಯೊಂಡು – ಸುರೂವಿಂಗೆ ಮುಟ್ಟಾಟವೋ ಗ್ರೇಶಿದ ಒಪ್ಪಣ್ಣ, ಮತ್ತೆ ನೋಡಿರೆ ಅದಲ್ಲ..
ಚೆಂಡಿನ ಹೊಡೆಂಗೆ ಓಡಿಗೊಂಡು, ಚೆಂಡಿನ ತೊಳುದು ರಟ್ಟುಸಿಗೊಂಡು..

ಮೆಟ್ಟಾಟಲ್ಲಿ ಚೆಂಡಿಂಗೆ ಮೆಟ್ಟುತ್ತ ಗವುಜಿ..
ಮೆಟ್ಟಾಟಲ್ಲಿ ಚೆಂಡಿಂಗೆ ಮೆಟ್ಟುತ್ತ ಗವುಜಿ..

ಇದು ಪುಟ್ಟುಬೋಲಡ, ಪುಟ್ಟು ಚೆಂಡಿನ ಕುಟ್ಟಿಗೊಂಡಿಪ್ಪ ಕಾರಣ ನಮ್ಮ ಭಾಷೆಲಿ ಕುಟ್ಟುಬೋಲು ಹೇಳ್ತವೋ ಏನೋ!
ಪುಟ್ – ಹೇಳಿರೆ ಪಾದ ಹೇಳಿ ಲೆಕ್ಕಡ. ಹಾಂಗಾಗಿ ಈ ಹೆಸರು – ಹೇಳಿದ° ರಾಜ°.
ಈ ಪಂಪುಗೊಕ್ಕೆ ಇರ್ತಲ್ಲದಾ, ನೀರೆಳೆತ್ತಲ್ಲಿ, ಅದೆಂತರ ಅಂಬಗ? ಕೇಳಿದೆ, ಉಮ್ಮಪ್ಪ!
ಅದು ಅವಂಗರಡಿಯ, ಇದು ಒಪ್ಪಣ್ಣಂಗರಡಿಯ – ಎರಡೂ ಗೊಂತಾಯೆಕ್ಕಾರೆ ಮಾಷ್ಟ್ರುಮಾವನತ್ರೇ ಕೇಳೆಕ್ಕಷ್ಟೆ.
~
ಕುಂಬ್ಳೆ ಕಡಲಿನ ಆಚ ಹೊಡೆಲಿ, ದಕ್ಷಿಣ ಆಪ್ರೀಕಾಲ್ಲಿ ಆ ವಿಶ್ವಕಪ್ಪು ಅಪ್ಪದಡ. ಲೋಕದ ಎಲ್ಲಾ ದೇಶದ ತಂಡಂಗಳಿಂದ ಹೆರ್ಕಿಹೆರ್ಕಿ ಕೆಲವರ ಆಯ್ಕೆ ಮಾಡಿ, ಅವರೊಳದಿಕೆ ಗಟ್ಟಿಗ° ಆರು ಹೇಳಿ ನೋಡ್ತ ಗೌಜಿ ಅಡ.
ಇಡೀ ವಿಶ್ವವೇ ಆ ಹೊಡೆಂಗೆ ತಲೆ ಹಾಕಿದ್ದು, ಏನೂ ಅರಡಿಯದ್ದ ಒಪ್ಪಣ್ಣನ ಹಾಂಗಿರ್ತವರ ಬಿಟ್ಟು!
ನಾಲ್ಕೊರಿಶಕ್ಕೆ ಒಂದರಿ ಹೀಂಗಿರ್ತ ದೊಡ್ಡ ಜೆಂಬ್ರ ಆವುತ್ತಡ, ಸುಮಾರು ಸುಮಾರು ಎಂಬತ್ತೊರಿಶ ಆತಡ.
ಈಗ ಆವುತ್ತಾ ಇಪ್ಪದು ಹತ್ತೊಂಬತ್ತನೇದಡ.
– ವಿನುವಿಂಗೆ ಆಸಕ್ತಿ ಬಪ್ಪಲೆ ರಾಜನೇ ಕಾರಣ ಹೇಳಿ ಒಪ್ಪಣ್ಣಂಗೆ ಅನುಸಿ ಹೋತು.
ರಂಗಮಾವ ಎದುರಿದ್ದೊಂಡೇ ರಾಜನತ್ರೆ ಕೇಳಿದೆ, ಇದರ ಬಗ್ಗೆ ರಜಾ ವಿವರ ಹೇಳ್ತೆಯೋ – ಹೇಳಿಗೊಂಡು.
ಅವ ಹೇಳಿದ್ದರ ಸಾರ ಇಲ್ಲಿದ್ದು:
~
ಎರಡು ದೇಶದವು ಬೇರೆಬೇರೆ ಬಣ್ಣದ ಅಂಗಿ ಹಾಕಿಗೊಂಡು, ಎದುರಾಣವರ – ಕೃಷ್ಣಬಸ್ಸಿನಷ್ಟಕೆ ಇಪ್ಪ – ಗೋಲಿನ ಒಳಂಗೆ ಚೆಂಡಿನ ನೂಕುತ್ತದೇ ಒಂದು ಗವುಜಿ ಅಡ. ತೊಂಬತ್ತು ನಿಮಿಶದ ಈ ಆಟಲ್ಲಿ ಕ್ರಿಕೇಟಿಂದಲೂ ಕುತೂಹಲ ಬತ್ತಡ. ಯೇವ ನಿಮಿಶವೂ ಗೋಲು ಅಕ್ಕಲ್ಲದೋ – ಹಾಂಗಾಗಿ ನೋಡೆಂಡೇ ಬೇಕು – ಹೇಳ್ತ° ರಾಜ°.
ಆಟ ಸುರು ಅಪ್ಪದೇ ಚೆಂಡಿನ ಮೆಟ್ಟುದರಿಂದಡ.
ಎರಡೂ ಗುಂಪಿನ ಒಟ್ಟು ಇಪ್ಪತ್ತೆರಡು ಜೆನ ಒಂದು ಚೆಂಡಿಂಗಾಗಿ ಹೋರಾಡುದಡ, ಎನಗೆ ಎನಗೆ – ಹೇಳಿಗೊಂಡು.

ಮೆಟ್ಟಿಮೆಟ್ಟಿಯೇ ಚೆಂಡಿನ ಒಬ್ಬ° ಇನ್ನೊಬ್ಬಂಗೆ ಕೊಡುದಡ..
ಹಾಂಗಾಗಿ ಇದು ಮುಟ್ಟಾಟ ಅಲ್ಲ, ‘ಮೆಟ್ಟಾಟ’ ಆತಿದಾ… 😉

ಕೈಲೇ ಕೊಟ್ರೆ ಸುಲಬ ಅಲ್ಲದೋ ಅಣ್ಣೋ – ಕೇಳಿದೆ! ಅಲ್ಲ, ಕೈಲಿ ಮುಟ್ಟಿರೆ ತಪ್ಪಪ್ಪದು – ಹೇಳಿದ ಮಾಣಿ. ಕಾಲಿಂಗೆ ತಾಗಿದ್ದರ ಕೈಲಿ ಮುಟ್ಟಿನೋಡಿದ ಬುದ್ದಿವಂತರು ಬೈಲಿಲಿ ಇದ್ದವು. ಆದರೆ ಕೈಲಿ ಮುಟ್ಳಾಗದ್ದರ ಕಾಲಿಲಿ ಮುಟ್ಟುತ್ತದು ಆನು ಕಂಡಿದಿಲ್ಲೆಪ್ಪ!

ಹಾಂಗೆ ಪ್ರತಿ ನಿಮಿಶ ನಿಮಿಶವೂ ತಂಡ ಒಂದಲ್ಲ ಒಂದು ತಂತ್ರಗಾರಿಕೆ ಮಾಡಿ ಎದುರಾಣ ಗೋಲಿನ ಒಳದಿಕೆ ಗೋಲಚೆಂಡಿನ ಹಾಕಲೆ ನೋಡ್ತವಡ.
ಇಡಿ ಜಾಲಿಲಿ ಓಡ್ತ ಹತ್ತು ಜೆನ ಅಲ್ಲದ್ದೆ ಒಂದು ಜೆನ ಗೋಲಿನ ಎದುರೇ ಕಾದೊಂಡಿರ್ತಡ, ಚೆಂಡು ಒಳ ಹೋಗದ್ದ ಹಾಂಗೆ!

~

ಪ್ರತಿ ಕ್ಷಣವೂ ಕುತೂಹಲ! ತೊಂಬತ್ತು ನಿಮಿಶ ಪೂರ್ತಿ!!
ಅರೆವಾಶಿ ಹೊತ್ತು ಅಪ್ಪಗ – ಹೇಳಿತ್ತುಕಂಡ್ರೆ, ನಲುವತ್ತಯಿದು ನಿಮಿಶಕ್ಕಪ್ಪಗ – ಒಂದರಿ ನಿಲ್ಲುಸುದಡ.
ಒಂದರಿ ಕಾಪಿಕುಡುದು, ಬೆಗರು ಉದ್ದಿಕ್ಕಿ ಬಪ್ಪಲೆ.
ಮಾತಾಡಿಮಾತಾಡಿ ಕಾಲುಬೇನೆ ರಜಾ ಕಮ್ಮಿ ಆಯಿದು.
~
ಮತ್ತೆ ಪುನಾ ಸುರು.

ಯೇವ ಪಾರ್ಟಿ ಎದುರಾಣ ಗೋಲಿನ ಒಳದಿಕೆ ಹೆಚ್ಚು ಸರ್ತಿ ಚೆಂಡಿನ ಹಾಕುತ್ತೋ – ಗೋಲು ಮಾಡ್ತೋ – ಅದು ಉಶಾರಿ ಹೇಳಿ ಲೆಕ್ಕ ಅಡ.

ತೊಂಬತ್ತು ನಿಮಿಶಲ್ಲಿ ಆರು ಉಶಾರಿ ಹೇಳ್ತ ಉತ್ತರ ಬಂದೇ ಬರೆಕ್ಕು. ಒಂದೋ ಈ ತಂಡ, ಅಲ್ಲದ್ರೆ ಆ ತಂಡ.
ಒಂದು ವೇಳೆ ಬಾರದ್ದೆ ಹೋದರೆ ಮತ್ತೆ ಇಪ್ಪತ್ತು ನಿಮಿಶ ಕೊಡ್ತವಡ, ಆಟಾಡ್ಳೆ.

ಅದರ್ಲಿಯೂ ಬಾರದ್ರೆ ಮತ್ತೆ ಎಲ್ಲೊರೂ ಆಟಾಡ್ಳೆ ಇಲ್ಲೆಡ, ಒಬ್ಬ ಚೆಂಡಿನ ಮೆಟ್ಟುದು, ಇನ್ನೊಬ್ಬ -ಗೋಲುಕಾಯ್ತ ಗೋ(ಲು)ಪಾಲ° – ಹಿಡಿವದು. ಆರದ್ದು ಹೆಚ್ಚು ಮಿಷ್ಟಿಂಗು (Mistake) ಬಂತೋ, ಅವರ ಎದುರಾಣೋರು ಗೆಲ್ಲುದು ಹೇಳಿ ಲೆಕ್ಕಡ!

~
ಹಿಡುದ್ದಕ್ಕೆ ಅಲ್ಲೇ ಕೂದಂಡು ಒಂದಾಟ ನೋಡಿದೆ. ಯೇವದೋ ಒಂದು ಗೆದ್ದತ್ತು, ಇನ್ನೊಂದು ಸೋತತ್ತು.
ಆಟ ಭಾರೀ ಲಾಯಿಕಿತ್ತು ಮಾಂತ್ರ!
ಸರಿಯಾಗಿ ನೋಡ್ತ ಒಂದು ಜೆನ ’ಎಂತ ಆವುತ್ತಾ ಇದ್ದು’ ಹೇಳ್ತದರ ವಿವರುಸಿಗೊಂಡು,  ನೋಡ್ತ ಸಾವಿರಾರು ಜೆನ ಓಲಗ ಪೆರೇ°…ನೆ ಊದಿಗಂಡು,
ಎಲ್ಲ ಮುಗಿವಗ ಗಂಟೆನೋಡ್ತೆ, ಒಂಬತ್ತೂವರೆ!
~
ಯೋ ದೇವರೇ..
ಕೆಲಸ ಸುಮಾರಿದ್ದು ಬಾಕಿ! ಕಾಲು ಬೇರೆ ಬೇನೆ! ಷೆ ಷೆ!
ಒಬ್ಬನೇ ನೆಡದರೆ ಮನಗೇ ಎತ್ತುತ್ತೋ ಇಲ್ಲೆಯೋ, ಇನ್ನು ಕುಟ್ಟುಬೋಲು ಆಡ್ಳಂತೂ ಎಡಿಯಲೇ ಎಡಿಯ, ಹೇಳಿ ಕಂಡತ್ತು! 😉
ಅಂತೂ ಸೂಟಗೆ ಕಿಚ್ಚು ತೆಕ್ಕೊಂಡು ಮೆಲ್ಲಂಗೆ ಬೈಲಿಲೇ ಇಳುದು ಹೆರಟೆ..
~
ಬಪ್ಪಗ ಅಂತೂ ಸಣ್ಣ ಇಪ್ಪಗ ಆಡಿದ ಜಾಲು, ಮೆಟ್ಟುಕಲ್ಲು, ಗುಡ್ಡೆ, ಬಲ್ಲೆ, ಬರೆ – ಎಲ್ಲ ಕಂಡತ್ತು, ಸೂಟೆ ಬೆಣಚ್ಚಿಲಿ!
ಎಷ್ಟು ಜೆನ ಸೇರಿ ಆಟ ಆಡಿಗೊಂಡಿತ್ತಿದ್ದೆಯೊ – ಯೋ ರಾಮಾ!
ಎಂತಾರು ಆಟಂಗೊ..

ಕಲ್ಲಾಟ, ಕುಟ್ಟಿದೊಣ್ಣೆ, ಮುಟ್ಟಾಟ, ಕಳ್ಳಪೋಲೀಸು, ಕಾಕೆ-ಗಿಳಿ, ಲಗೋರಿ, ಹುಗ್ಗಾಟ ಎಲ್ಲವುದೇ..
ಅಜ್ಜಕಾನ ಬಾವಂಗೆ ಇದೆಲ್ಲ ನೆಂಪಾಗಿ ಮೊನ್ನೆ ಒಂದರಿ ಶುದ್ದಿ ಹೇಳಿದ್ದ°, ಅಲ್ಲದೋ?
ಹನ್ನೊಂದು- ಹನ್ನೆರಡೇ ಜೆನ ಆಯೆಕ್ಕು ಹೇಳಿ ಏನಿಲ್ಲೆ, ಹೆಚ್ಚಿಗೆ ಬಂದರೂ ಸೇರುಲಾವುತ್ತು! ಜೆನ ಕಮ್ಮಿ ಇದ್ದರೂ ಆಟ ನೆಡದೇ ನೆಡೆತ್ತು!

ಒಬ್ಬಗ್ಗೊಂಬ ಸೇರಿಗೊಂಡು ಆಡುದು, ಅದೊಂದು ಗವುಜಿಯೇ ಬೇರೆ!

ರಂಗಮಾವಂದೇ ಒಂದರಿ ಉದಾಕೆ ಬಂದು ಈ ಗವುಜಿಯ ಕಂಡು ಮೀಸೆಲೇ ನೆಗೆ ಮಾಡುಗು.
ಅದು ಇಲ್ಲದರೆ ಅವಕ್ಕುದೇ ಸಮಾದಾನ ಆಗಿಗೊಂಡಿತ್ತಿಲ್ಲೆಡ. ಪಾತಿ ಅತ್ತೆ ಎಂತಾರು ವಿಶೇಷ ತಿಂಡಿ ಮಾಡಿದ್ದದಿದ್ದರೆ ಆಟಕ್ಕೊಂದರಿ ಪುರುಸೊತ್ತು..
ಕೆಲವು ಜೆನ ಒಲೆಕ್ಕಟ್ಟೆಂದ ನಾಕು ಸಾಂತಾಣಿ ಕಿಸಿಗೆ ತುಂಬುಸಿಗೊಂಡು ಬಪ್ಪದು.  ಒಂದೊಂದರಿ ಅದಕ್ಕೂ ಜಗಳ!

ಮುಟ್ಟಾಟ ಸುರು ಆವುತ್ತ ಗವುಜಿ!
ಮುಟ್ಟಾಟ ಸುರು ಆವುತ್ತ ಗವುಜಿ!

ಬಿಡುಸಲೆ ಬಂದವಂಗೆ ಒಂದು ಸಾಂತಾಣಿ ಹೆಚ್ಚಿಗೆ!
ಒಟ್ಟಿಂಗೆ ಕಾರೆಕಾಯಿ, ಚೂರಿಹಣ್ಣು, ಶಾಂತಿಕಾಯಿ ಎಲ್ಲ ಇದ್ದದೇ! ಹೀಂಗೆಂತಾರು ತಿಂದುಗೊಂಡು ಗಮ್ಮತ್ತಿಲಿ ಆಟ ಸಾಗಿಯೊಂಡಿತ್ತು.

ಈಗಾಣ ಮೆಟ್ಟಾಟ, ಕ್ರಿಕೆಟಾಟಂಗಳ ಆಡ್ತವುದೇ ಅದೆಂತದೂ ಅಗಿತ್ತವು ಇಡೀ ದಿನ.
ಅಗಿತ್ತ ಗೋಂದು (ಚೂಯಿಂಗು ಗಮ್ಮು) ಅಡ – ವಿನು ಹೇಳ್ತ°.
ಅವನುದೇ ತಿಂತನಡ ಫ್ರೆಂಡುಗಳೊಟ್ಟಿಂಗೆ! ಉಮ್ಮಪ್ಪ ನವಗೆ ಮಾಷ್ಟ್ರುಮಾವನ ಮೇಜಿಲಿಪ್ಪ ಗೋಂದು ಅರಡಿಗು, ಅದು ಬಿಟ್ರೆ ಪ್ರಿಂಕ್ಲರು ಪೈಪಿಂಗೆ ಹಾಕುತ್ತ ಗಮ್ಮು ಅರಡಿಗು!

~

ವಿನುವಿನ ಗ್ರೇಶಿ ಮತ್ತೊಂದರಿ ಬೇಜಾರಾತು!
ಪಾಪ, ಈ ಯೇವ ಕೊಶಿಯೂ ಇಲ್ಲೆ,ಬರೇ ಟೀವಿಲಿ ಬತ್ತ ಆಟಂಗಳೇ ಅವಂಗೆ ಜೀವಾಳ!

ಜಾಲಿಂಗೆ ಇಳಿವಲೆ ಬಿಡ ಅವನಮ್ಮ – ಕೈಕ್ಕಾಲಿಂಗೆ ಮಣ್ಣಾವುತ್ತು ಹೇಳಿಗೊಂಡು.
ಪ್ರಕೃತಿಲಿ ಸಿಕ್ಕುವ ಶಾಂತಿಕಾಯಿ, ಚೂರಿಹಣ್ಣು ಇತ್ಯಾದಿ ಕಾಟಂಕೋಟಿಗೊ ಅಡ!
ಅದರ ಎಲ್ಲ ತಿಂದರೆ ಹೊಟ್ಟೆ ಹಾಳಕ್ಕಡ! ಪೇಟೆಂದ ತಂದ ಬಣ್ಣ ಬಣ್ಣದ ಪೆಕೇಟಿನ ಒಳದಿಕೆ ಇಪ್ಪ ಕುರೆ ಎಣ್ಣೆದರನ್ನೇ ತಿನ್ನೆಕಡ!

ಅಂತೇ ಚಿಪ್ಸು ತಿಂದೊಂಡು ನೋಡಿರೆ ದೇಹಕ್ಕೆ ವ್ಯಾಯಾಮ ಎಲ್ಲಿದ್ದು ಭಾವಾ?
ರಜ ಹಂದಿರಲ್ಲದೋ, ಮೈಮಂಡೆ ಗಟ್ಟಿ ಅಪ್ಪದು?

ನಮ್ಮ ಅಜ್ಜಂದ್ರು ಎಂಬತ್ತೊರಿಶ ಅಪ್ಪಗಳೂ ಮರಕ್ಕೆ ಹತ್ತಿಗೊಂಡಿತ್ತು, ನಾವು ಮೂವತ್ತಪ್ಪಗಳೇ ಕಾರಿಂಗೆ ಹತ್ತುತ್ತು, ನಮ್ಮಂದ ಮತ್ತಾಣವು ಎಷ್ಟೊರಿಶಲ್ಲಿ ಯೇವದಕ್ಕೆ ಹತ್ತುತ್ತವೋ ನೋಡೆಕು!
ಎಂತ ಹೇಳ್ತಿ?

ಒಂದೊಪ್ಪ: ರಾಜ° ಮಾತಾಡುವಗ ಹೇಳಿದ°, ದಿನಕ್ಕೆ ಅರ್ದಗಂಟೆ ಮೆಟ್ಟಾಟ ಆಡಿರೆ ಒಳ್ಳೆದಡ!
ಅರ್ದಗಂಟೆ ಮುಟ್ಟಾಟ ಆಡಿರೂ ಒಳ್ಳೆ ವ್ಯಾಯಾಮ ಆಗಿಯೊಂಡಿತ್ತು, ಅಲ್ಲದೋ?!

39 thoughts on “ಮೆಟ್ಟಾಟದ ಎಡೆಲಿ ಮುಟ್ಟಾಟ ಮರದತ್ತೋ?

  1. ಒಪ್ಪಣ್ಣೊ…. ’ವಾಕಾ ವಾಕಾ’ ಆತೋ…..ಲಾಯ್ಕಾ ಇದ್ದು. ತುಂಬಾ ಕೊಶಿ ಆತು ಬಾಲ್ಯದ ಮುಟ್ಟಾಟವ ನೆಂಪು ಮಾಡಿದ್ದಕ್ಕೆ..

  2. ಲೇಖನ ತುಂಬಾ ಲಾಯ್ಕಾಯ್ದು….
    ಸಣ್ಣಾದಿಪ್ಪಗ ಆಡಿದ ಆಟನ್ಗೋ ನೆಮ್ಪಾತು… ಅಮ್ಬಗ ನಾವು ಮಾಡಿದ್ದೆ ರೂಲ್ಸು…
    ಎಷ್ಟು ಆಡಿರೂ ಬಚ್ಚುದು ಹೇಳಿ ಇಲ್ಲೇ….

    ಈಗ ಕೆಲವು ಮಕ್ಕಳ ನೋಡುವಾಗ ಪಾಪನ್ನೇ ಕಾಣ್ತು…ಶಾಲೆ ,ಟ್ಯೂಶನ್ ಕ್ಲಾಸ್ ,ಟೀವಿ……. ಇಷ್ಟೇ ಅವರ ಪ್ರಪಂಚ…. 🙁
    ಹೀನ್ಗಿಪ್ಪ ಹಳ್ಳಿ ಆಟನ್ಗೋ ಯಾವದೂ ಗೊಂತಿಲ್ಲೇ…

  3. Namma makkosadhane maduvadu sakavuthille.Baree software engineer adare avu dodda sadhane madida hange heli greshutha iddavu.Eega kalivale modalana hange kashta ille.ella vyavasthe ella oorugalallu iddu.Hangagi namma makko spardatmakavagi irekku mathe sadhane madi hesaru galisekku.
    Vidya

  4. Anu heludu entha helidare, itheechege makko hera adudu kammi madiddavu.Ella ola seriyondu TV noduvadu jaasti madiddavu.Hangagi avara shareera mathe arogya ashtu olledirutille.Hange ootada kramavu kooda sari ille.Namma makkala havyasangala badalavane madule avara mana olisekku.
    Oppa Kunhi.

  5. ಲೇಖನ ಭಾರಿ ಲಾಯಿಕ ಆಯಿದು. ಮನಸ್ಸು ಎಂಗ ಸಣ್ಣಾದಿಪ್ಪಗ ಎಂಗಳದ್ದೇ ಮಕ್ಕಳ ಗೇಂಗು [Gang] ಆಡಿಗೋಂಡಿದ್ದ ಆಟಂಗಳಲ್ಲಿ ರಜಾ ಹೊತ್ತು ಮುಳುಗಿತ್ತು. ಮುಟ್ಟಾಟ, ಹುಗ್ಗಾಟ, ಲಗೋರಿ, ಕುಟ್ಟಿದೊಣ್ಣೆ, ಮರಕೋತಿ, ನೀರಾಟ ಇತ್ಯಾದಿ……………

  6. ಮುಟ್ಟಾಟ…ಮೆಟ್ಟಾಟ..!

    ‘ಮುಟ್ಟು’ ಎನ್ನುವ ಶಬ್ದದಲ್ಲಿರುವ ಮಾರ್ದವ-ಪ್ರೀತಿ..
    ಮೆಟ್ಟು ಎನ್ನುವ ಶಬ್ದದಲ್ಲಿರುವ ಕ್ರೌರ್ಯ-ದಬ್ಬಾಳಿಕೆ..

    ಎರಡು ಸಂಸ್ಕೃತಿಗಳ ನಡುವೆಯಿರುವ ಮಹದಂತರವಿದು…!

    1. ಹರೇ ರಾಮ ಸಂಸ್ಥಾನ.. ಬೈಲಿಲಿ ನಿಂಗಳ ಉಪಸ್ಥಿತಿಯ ಗೌರವಿಸುತ್ತೆಯಾ°…. ಬೈಲುದೆ ಸಂಸ್ಥಾನದ ಪರಿವಾರವೇ..!!!ಯಾವಾಗಲೂ ಬಂದು ಎಂಗೊಗೆ ದಾರಿ ತೋರ್ಸುತ್ತಾ ಇರಿ.. ಮುಟ್ಟಾಟ ಮೆಟ್ಟಾಟ ಈ ಎರಡು ಶಬ್ಧಲ್ಲಿ ಎರಡು ಸಂಸ್ಕೃತಿ, ಎರಡು ವ್ಯವಸ್ಥೆ, ಎರಡು ಜನಾಂಗದ ಎರಡೂ ವಿಪರೀತಂಗಳ ಅಂಗೈಲಿ ಬ್ರಹ್ಮಾಂಡ ತೋರ್ಸಿದ ಹಾಂಗೆ ತೋರ್ಸಿದ್ದಿ… ಇದರ ಬಗ್ಗೆ ಯೋಚಿಸಿ ಸರಿ, ತಪ್ಪುಗಳ ವಿಶ್ಲೇಷಿಸುದು ಎಂಗಳ ಜವಾಬ್ದಾರಿ… ಧನ್ಯವಾದಂಗ ಸಂಸ್ಥಾನ.. ಹರೇ ರಾಮ..

    2. ಮುಟ್ಟಾಟ ಮೆಟ್ಟಾಟ—— ಅದ್ಭುತವಾದ ವಿಶ್ಲೇಷಣೆ

      1. @Sri
        ಅಂತರಾತ್ಮದ ಪ್ರಣಾಮಗಳು. ನಾಲ್ಕಕ್ಷರಲ್ಲಿ ತುಂಬಾ ಮಹತ್ವದ ಮಾಹಿತಿ ಕೊಟ್ಟಿದಿ..

        1. ಹರೇರಾಮ ಗುರುಗಳೇ, ಹೊಡಾಡ್ತೆಯೊ°.

          ಒಪ್ಪಣ್ಣ ಎರಡು ಪುಟಲ್ಲಿ ಹೇಳುಲೆ ಹೆರಟದರ ನಿಂಗೊ ಎರಡು ಗೆರೆಲಿ ಹೇಳಿದಿ!
          ವಾಹ್!! ತುಂಬಾ ಕೊಶಿ ಆತು ಎಂಗೊಗೆ.

          ಬಂದೊಂಡಿರಿ, ಆಶೀರ್ವಾದ ಕೊಟ್ಟೊಂಡಿರಿ.
          || ಹರೇ ರಾಮ ||

          1. ಹರೇ ರಾಮ…
            ಗುರುಗಳಿಂಗೆ ಹೊಡಾಡ್ತಾ ಇದ್ದೆ…
            ಅದ್ಭುತ… ಹಾಂಗೆ ಪರಿಣಾಮಕಾರಿಯೂ ಅರ್ಥಗರ್ಬಿತವಾದ ವಿಶ್ಲೇಷಣೆ.. ಒಪ್ಪಣ್ಣ ಹೇಳಿದಾಂಗೆ, ಎರಡು ಪುಟ= ಎರಡು ಗೆರೆ!!!
            || ಹರೇ ರಾಮ ||

  7. ಬಾವ ಲಾಯ್ಕಾಯಿದು.. ಹಳೆ ಆಟಂಗಳ ಪುನಾ ನೆಂಪು ಮಾಡಿದೆ! ಹಳೆ ದಿನಗಳ ಕೂಡಾ ನಂಪು ಮಾಡಿದೆ…

    1. ಹಳೆ ಆಟಂಗಳಲ್ಲಿ ಈಗ ಕೆಲವು ಮಕ್ಕೊಗೆ ಚೆನ್ನೆಮಣೆ ಹೆಸರು ಕೇಳಿಯೇ ಗೊಂಥಿಲ್ಲೇ. ಆಡಿದೊರಿನ್ಗೆ ಅದರ ಉಲ್ಲಾಸ ಗೊಂಥಿಪ್ಪದು .ಚದುರಂಗ ಹೇಳಿ ಈಗ ಆದ್ಥವು .ಮೊದಲಾನ ಕ್ರಮವೇ ಬೇರೆ ಅಲ್ಲದ .

  8. ಒಪ್ಪಣ್ಣೋ.., ಮಾಷ್ಟ್ರು ಮನೆ ಅತ್ತೆ ಎಲ್ಲೋರನ್ನೂ ಪರಂಚಿದ್ದರೆ ಒಳ್ಳೇದಿತ್ತು ಬೈಲಿಂಗೆ ಬಂದು.. ಅಂತೆ ಬೊಜ್ಜು ಬೆಳೆಶೆಡಿ ಹೇಳಿ.. ಜೆಂಬ್ರ ಕಳುದ ಮೇಲೆ ಎಲ್ಲೋರೂ ಒಪ್ಪಣ್ಣನ ಹತ್ತರೆ ಮಾತಾಡದ್ದೆ ಕೂದ್ದದು ಇದ್ದಾ? ಪಾಪ ಒಪ್ಪಣ್ಣ ಎಷ್ಟು ಬೇಜಾರು ಮಾಡಿಗೊಂಡ°.. ಛೇ!! ಆದರೂ ಈ ಸರ್ತಿ ಶುದ್ದಿ ಲಾಯ್ಕದ್ದೆ ಹೇಳಿದ್ದ°… ಸಣ್ಣಾದಿಪ್ಪಗ ನವಗೆ ಏವ ಯೋಚನೆದೆ ಇತ್ತಿಲ್ಲೆ.. ಆಡುದೊಂದೇ..!!!! ಹೊತ್ತು ಗೊತ್ತು ಇಲ್ಲೆ.. ಈಗಾಣ ಮಕ್ಕೊಗೆ ಆಡಲೇ ಪುರುಸೊತ್ತಿಲ್ಲೇ.. ಜಾಗೆ ಇಲ್ಲೆ.. ಪುರುಸೊತ್ತು, ಜಾಗೆ ಇದ್ದವಕ್ಕೆ ಹೆರ ಆಡೇಡ… ಮನೆ ಒಳದಿಕ್ಕೆ ಕಂಪ್ಯೂಟರ್ ಲಿ ಆಡಿದರೆ ಸಾಕು ಹೇಳಿ.. ಅದರಲ್ಲಿ ಎಂತ ಸಿಕ್ಕುತ್ತೋ? ಕಣ್ಣು , ತಲೆ ಹಾಳಪ್ಪದು ಬಿಟ್ಟರೆ!!! ಒಂದೊಪ್ಪ ಲಾಯ್ಕಾಯಿದು.. ತಾರಣಿಯವು ಹಳೇ ಆಟಂಗಳ ಅಂಕಣ ಸುರು ಮಾಡುದು ಒಳ್ಳೇದಾತು.. ಇನ್ನಾದರೂ ಮಕ್ಕ ಆಟಂಗಳ ಕಲ್ತು ಆಡಿ ಒಪ್ಪಣ್ಣ ಹೇಳಿದ ಹಾಂಗೆ ಮೈಮಂಡೆ ಗಟ್ಟಿ ಮಾಡಿಗೊಳ್ಳಲಿ… ನಮ್ಮ ಮಕ್ಕಳೂ ನಮ್ಮ ಅಜ್ಜಂದ್ರ ಹಾಂಗೆ ಎಪ್ಪತ್ತು ಎಂಬತ್ತು ವರ್ಷ ಆರೋಗ್ಯಲ್ಲಿ ಬದುಕ್ಕಲಿ ಅಲ್ಲದಾ?

  9. Oppanna ‘METTATA’ helta sheershikeye sooper,lekhanavantoo innooo soooooper.

  10. ಸಣ್ಣ ಇಪ್ಪಗ ಆಡುತ್ತ ಆಟಂಗೊಕ್ಕೆ ಇಂತಿಷ್ಟೇ ಜೆನ ಬೇಕು ಹೇಳಿ ಎಂತ ಇಲ್ಲೆ. ಇಪ್ಪವೆಲ್ಲ ಸೇರಿ ಎಂತಾರೂ ಒಂದು ಆಟ. ಹೊತ್ತೋಪಗಾಣ ಬೆಶಿಲು ತಾಗಿರೆ ಒಳ್ಳೆದು ಹೇಳಿ ಡಾಕ್ಟ್ರಕ್ಕಳೂ ಹೇಳ್ತವು.
    ಮೈ ಕೈ ಎಲ್ಲಾ ಧೂಳಿಲ್ಲಿ ಮುಂಗಿಸಿಂಡು ಸೀದಾ ನೀರು ಕುಡಿವಲೆ ಮನೆ ಒಳಾಂಗೆ ಓಡುವದು, “ಕಾಲಿಲ್ಲಿ ಮೂರು ಗುಡ್ಡೆ ಮಣ್ಣು ಇದ್ದು, ಅದರ ಓಳಿಲಿ ಹೋಗಿ ತೊಳಕ್ಕೊಂಡಾರೂ ಒಳ ಬಪ್ಪ್ಲಾಗದೋ” ಹೇಳಿ ದೊಡ್ಡವರ ಗೌಜಿ, ಎಲ್ಲಾ ನೆಂಪು ಆವುತ್ತು.

  11. ಏ ರಾಮಜ್ಜ…. ಇಸ್ಪೀಟು ನಮ್ಮ ಮಕ್ಕಳ ಆಟವಾ??!!!

  12. appu oppanno. igaana makkoge namma aatangala nempe avuttille. enage espatu aadule joteye ille.

  13. ಇನ್ನೊಂದು ಸಕಾಲಿಕ ಶುದ್ದಿ. ಪೇಪರಿಲೆಲ್ಲ ಈ ಮೆಟ್ಟಾಟದ್ದೇ ಗೌಜಿ. ಅದಕ್ಕೇಳಿಯೇ ವಿಶೇಷ ಪುಟ ಮಡುಗುತ್ತವು. ನಮ್ಮ ಆಟಂಗಳ ಬಗ್ಗೆ ತಿಳಿಶುವ ಒಂದು ಸಣ್ಣ ಪ್ರಯತ್ನವೂ ಮಾಡ್ತವಿಲ್ಲೆ. ಬೈಲಿಲಿ ಈ ಬಗ್ಗೆ ಚರ್ಚೆ ಆವುತ್ತಾ ಇಪ್ಪದು ಕುಶಿಯ ಸಂಗತಿ. ಈ ಅಂತಾರಾಷ್ಟ್ರೀಯ ಆಟಂಗಳ ಎಡಕ್ಕಿಲಿ ನಮ್ಮ ಆಟಂಗೊ ಮರದೇ ಹೋವುತ್ತಾ ಇದ್ದು. ಸಣ್ಣದಿಪ್ಪಾಗ ಮೊಣಕಾಲಿಲಿಯೋ, ಮೊಣಕೈಲಿಯೋ ಒಂದು ಗಾಯ ಇಲ್ಲದ್ದೆ ಇರ. ಈಗಾಣ ಮಕ್ಕೊಗೆ ಸಣ್ಣಕ್ಕೆ ಕಲ್ಲುಡಂಕಿದರೂ ಬೇಂಡೇಡು ಹಾಕುತ್ತವು ಅಪ್ಪಾಮ್ಮಂದ್ರು. ಇನ್ನು ಹೆರ ಹೋಗಿ ಸೊಕ್ಕುಲೆ ಬಿಡುಗಾ? ಟೀವಿ ಮುಂದೆ ಕೂದುಗೊಂಡು ಯಾವುದೋ ಆಟವ ಆರೋ ಆಡುದರ ನೋಡಿ ಬೊಬ್ಬೆ ಹೊಡಕ್ಕೊಂಡಿರೆಕ್ಕಷ್ಟೆ. ಅವರ ಆಸಕ್ತಿಯೂ ಅಲ್ಲಿಗೇ ಸೀಮಿತ ಆವುತ್ತಾ ಇದ್ದು.

  14. “ಗರ್ಪುಸಿಗೊಂಬದು” 🙂 ಹೀಂಗಿಪ್ಪ ಶಬ್ದಂಗಳ ಕೇಳದ್ದೆ ಸುಮಾರು ಸಮಯ ಆತು!! ಇಂತಹ ಕೆಲವು ಶಬ್ದಂಗಳ ಸ್ವಾರಸ್ಯ ಸನ್ನಿವೇಶ ಸಹಿತವಾಗಿ ವಿವರುಸುವ ಒಪ್ಪಣ್ಣನ ಲೇಖನ ಓದಿರೇ ಸಿಕ್ಕುಗಷ್ಟೆ.

  15. laikaidu…ella bittu bailinge aatada bagge vivarane kodle herateyo henge…
    kutti donne aata,koothu mutta nittu mutta, chess daabelu heenge halavaaru aatango iddanne.munde idara bagge kaadu noduva.
    oppannana maneliyu kelavella aata aadigondu ittiddavu heli idara oduvaga nempu aatu.
    chenne aatalliyu sumaru namune aatango iddu.halli makkala aatalliyu maja iddu.
    makko biddu ga madigombadu kai kaalu ulukkudu makkoge ottinge jagala pettu ellavu iddu.
    adaradde aada santhoshavu iddu.
    anthu laikaidu oppanno
    good luck.

  16. ಒಪ್ಪಣ್ಣ,
    ಈ ಸರ್ತಿಯಾಣ ಲೇಖನ ಎನ್ನ ಬಾಲ್ಯವ ಮತ್ತೊಂದರಿ ನೆಂಪು ಮಾಡಿತ್ತು. ನಾವು ಸಣ್ಣಕ್ಕಿಪ್ಪಗ ಆಡಿದ ಆಟದ ನೆಂಪುಗ ಎಷ್ಟು ಚೆಂದ ಅಲ್ದಾ?ಹೆಚ್ಚಾಗಿ ನವಗೆ ನೆಮ್ಪಿಂಗೆ ಬಪ್ಪದು ಈ ಆಟಂಗಳ ನವಗೆ ಬೇಕಾದ ಹಾಂಗೆ customize ಮಾಡಿ ಆಡ್ತಾ ಇದ್ದದು.ಈಗಾಣ ಮಕ್ಕಳ ಹಾಂಗೆ ಟಿವಿ,ಕಂಪ್ಯೂಟರ್ ಗೇಮ್ಗ ನಮ್ಮ ಸ್ವಂತ imaginationನಿಂದ ಮೂಡಿ ಬಂದ ಆಟ ಅಲ್ದಾ?? ಹಳೆಯ ಆಟಂಗಳ ಹೆಚ್ಚಿನ ತಯಾರಿ ಇಲ್ಲದ್ದೆ ಆಡ್ಲೆ ಎಡಿಗು. ಇದಕ್ಕೆ ದೊಡ್ಡ ಮೈದಾನವಾಗಲೀ ,ವಿಶೇಷ ಯಾವುದೂ ಅಗತ್ಯ ಇಲ್ಲದ್ದೇ ನೈಸರ್ಗಿಕವಾಗಿ ಇಪ್ಪ ಸಾಮಾನುಗಳನ್ನೇ ಉಪಯೋಗಿಗೊಂಡು ನಾವು ಆಡಿಗೊಂಡಿತ್ತು..ಇಂದ್ರಾಣ ಟೇರಿಸಿನ ಒಳ ಆಟ ಆಡುವ ಸಾಮಾನುಗಕ್ಕೆ ಖರ್ಚು ಮಾಡುವದು ನೋಡಿದರೆ ನಮ್ಮ ಅಂದ್ರಾಣ ನಾಕು ಓಡಿನ ತುಂಡು ಮಡುಗಿ ಅಡ್ಕಲ್ಲಿ ಆಡುವ ಲಗೋರಿ ಆಟವೇ ಚೆಂದ ಹೇಳಿ ಅನಿಸುತ್ತು.

  17. ಇಂದ್ರಾಣ ಮಕ್ಕೊಗೆ ಆಟದ ಸಮಯ ಹೇಳಿ ಶಾಲೇಲಿ ಇಲ್ಲವೇ ಇಲ್ಲೆನ್ನೇ.ಮನಗೆ ಬಂದರೂ ಅಪ್ಪ ಅಮ್ಮ ಸುರು ಮಾಡ್ತವು-ಬರವಲೆ ಇಲ್ಲ್ಯೋ ಓದಲೆ ಇಲ್ಲ್ಯೋ ಹೇದು. ಓದಿ ಬರದು ಮಾಡೆಕ್ಕಾದ್ದು ಅಪ್ಪು.ಆದರೆ ಸಣ್ಣ ಪ್ರಾಯಲ್ಲಿ ರಜಾ ವ್ಯಾಯಾಮ ಸಿಕ್ಕದ್ದರೆ ದೊಡ್ಡಪ್ಪಗ ಮಕ್ಕೋ ನೆಡವದರನ್ನೇ ಮರಗು.ಆಟಕ್ಕೆ ಪೇಟೇಲಿ ಜಾಗೆಯೂ ಇಲ್ಲೆ.ಹಾಂಗಾಗಿ ಎಂಗೊಗೆ ಹಳ್ಳಿಲಿ ಆಡಿದ್ದು ನೆಂಪು ಮಾಂತ್ರ.

  18. ಗೌರಿ ಅಜ್ಜಿಗೆ ಧನ್ಯವಾದಂಗೊ.
    ರೆಜ ರೆಜ ಎಡಿಗಾದ ಹಾಂಗೆ ಶುದ್ದಿ ಹೇಳ್ಲೆ ಪ್ರಯತ್ನ ಮಾಡ್ತೆ.
    ಮತ್ತೆ ನಿಂಗಳ ಎಲ್ಲರ ಪ್ರೋತ್ಸಾಹ, ಆಶೀರ್ವಾದ, ಬೆನ್ನು ತಟ್ಟುವ ಒಪ್ಪಣ್ಣ ಇಪ್ಪಗ ಬರವಲೆ ಹೆಚ್ಚು ಧೈರ್ಯ ಬತ್ತು.

  19. ಒಪ್ಪಣ್ಣ, ಬರದ್ದು ಲಾಯಿಕು ಆಯಿದು.
    ಮೆಟ್ಟಾಟವೋ, ಮುಟ್ಟಾಟವೋ.. ಒಟ್ಟಾರೆ ಮಕ್ಕೊ ಎಂತಾರೂ ಆಟ ಆಡ್ಲೇ ಬೇಕು. ಆಟದ ಹೊತ್ತಿಲ್ಲಿ ಆಟ, ಪಾಠದ ಹೊತ್ತಿಲ್ಲಿ ಪಾಠ, ಊಟದ ಹೊತ್ತಿಲ್ಲಿ ಊಟ ಆದರೇ ಶರೀರವೂ ಗಟ್ಟಿ ಅಕ್ಕು, ಬುದ್ಧಿಯೂ ಗಟ್ಟಿ ಅಕ್ಕು.
    ಮಕ್ಕೊ ಆಟ ಆಡುವದರೊಟ್ಟಿಂಗೆ ಬೇರೆಯವರ ಒಟ್ಟಿಂಗೆ ಬೆರವಲೆ ಕಲಿತ್ತವು. ಗೆದ್ದಪ್ಪಗ ಸಂತೋಷ, ಸೋತಪ್ಪಗ ಬೇಜಾರು, ಅದರ ಒಟ್ಟಿಂಗೆ ಇನ್ನೊಂದು ಸರ್ತಿ ಗೆಲ್ಲೆಕ್ಕು ಹೇಳುವ ಛಲ ಎಲ್ಲಾ ಬತ್ತು. ತನಗೆ ಬೇಕಾದ್ದೆಲ್ಲ ತನ್ನಷ್ಟಕ್ಕೇ ಸಿಕ್ಕುತ್ತಿಲ್ಲೆ, ಪ್ರಯತ್ನ ಪಟ್ಟರೆ ಮಾತ್ರ ಸಿಕ್ಕುತ್ತಷ್ಟೆ ಹೇಳಿ ಗೊಂತಾವುತ್ತು.
    ಆಟಲ್ಲಿ ಎಷ್ಟೇ ಜಗಳ ಮಾಡಿಯೊಂಡರೂ ಮರುದಿನದ ಆಟಕ್ಕೆಅಪ್ಪಗ ಎಲ್ಲರೂ ಹಾಜರಿರುತ್ತವು. ಹಿಂದಾಣದ್ದರ ಎಲ್ಲ ಮರೆತಿರ್ತವು. ಪರಸ್ಪರ ಸೌಹಾರ್ದತೆ, ಸ್ನೇಹ ಬೆಳೆತ್ತು, ಆಟದ ತಂತ್ರಂಗಳ ಕಲಿವದರ ಒಟ್ಟೊಟ್ಟಿಂಗೆ ಜೀವನಲ್ಲಿ ಅಳವಡಿಸುವ ತಂತ್ರಂಗಳನ್ನೂ ತಿಳಿತ್ತವು.
    ಪೇಟೆ ಮಕ್ಕೊ TV ಎದುರು ಕೂದು ಆಟ ನೋಡುವವಕ್ಕೆ, ಈ ಅನುಭವಂಗೊ ಎಲ್ಲ ಇಲ್ಲೆ. ಅಪ್ಪ ಅಮ್ಮ ಬೇಕಾದ್ದರ ಒದಗಿಸಿ ಕೊಡ್ತವು. ಪ್ರಯತ್ನ ಪಡದ್ದೆ ಎಲ್ಲವೂ ಸಿಕ್ಕುತ್ತು ಹೇಳಿ ಧೈರ್ಯ.
    ಎಂತಾರೂ ಕಾಟಂಕೋಟಿ ತಿಂದೊಂಡು TV ನೋಡ್ಲೆ ಸುರು ಮಾಡಿರೆ, ಹೊಟ್ಟೆ ಬೆಳವದು ಮಾತ್ರ, ಅಲ್ಲದ್ದೆ ಬುದ್ಧಿ ಬೆಳೆಯ.
    ಅದಕ್ಕೆ ಸರಿಯಾಗಿ ಅದರಲ್ಲಿ ಬಪ್ಪ advertisement ಗೊ ಹಾಂಗಿಪ್ಪದರನ್ನೇ ತಿಂಬಲೆ ಪ್ರೋತ್ಸಾಹ ಕೊಡ್ತು.
    ಇಲ್ಲಿ ಒಂದು ಘಟನೆ ನೆಂಪು ಆವ್ತಾ ಇದ್ದು.
    ಒಂದು ಚಾಕಲೇಟಿನ advertisement ಬಪ್ಪದರ ಸಣ್ಣ ಕೂಸು ನೋಡಿಂಡು ಇತ್ತಿದ್ದು. ಅದರಲ್ಲಿ ಚಾಕಲೇಟಿನ ಕೆರೆಂದ (ಗೆದ್ದೆ) ಮಕ್ಕೊ ಮೇಗೆ ಬಂದು ರುಚಿ ನೋಡ್ತವು. ಕೂಸಿನ ಹತ್ರೆ ಆನು ಹೇಳಿದೆ ” ನೋಡು, ಆ ಗೆದ್ದೆ ಕೆಸರಿನ ಚಾಕಲೇಟ್ ಹೇಳಿ ನಿಂಗೊಗೆ ಪೇಕ್ ಮಾಡಿ ಕೊಡುವದದಾ. ಅದರ ನಿಂಗೊ ತಿಂಬದಾ” ಹೇಳಿ.
    ಸಣ್ಣ ಕೂಸು. ಅದಕ್ಕೆ ಅಪ್ಪು ಹೇಳಿ ಆತು. ನಂತರ ಆ advertisement ಬಪ್ಪಗ ಎಲ್ಲಾ ಎನ್ನ ಹತ್ರೆ ಹಾಂಗೇ ಹೇಳಲೆ ಸುರು ಮಾಡಿತ್ತು.
    ಇನ್ನೊಂದು ಸರ್ತಿ “ಕುರೆ ಕುರೆ” ಹೇಳಿ ಅವೇ ಹೆಳ್ತವು. ನಿಂಗೊ ಎಂತರ ಅದರ ತಿಂಬದು ಹೇಳಿ ಅಪ್ಪಗ ಅಪ್ಪೋ ಹೇಳಿ ಆತು ಅದಕ್ಕೆ.
    ಕೊಶಿ ಆದ ಸಾಲು:
    ಗುಂಡಿದಾರಿಲಿ ನೋಡೆಂಡು ಬಂದರೂ, ತಾಗಿದ್ದು ಜಾಲಿಲಿಯೇ ಅಪ್ಪೋ!
    ನವೆಗೆಲ್ಲರಿಂಗೂ ಹೆಚ್ಚಾಗಿ ಅಪ್ಪದು ಹಾಂಗೇ ಅಲ್ಲದೋ? “ಇರುಳು ಕಂಡ ಬಾವಿಲಿ ಹಗಲು ಬಿದ್ದ ಹಾಂಗೆ”

    1. ನಮಸ್ಕಾರ ಶ್ರೀಶಣ್ಣಂಗೆ..
      ಕಳುದ ಕೆಲವು ಸಮೆಯಂದ ಗಮನುಸಿಗೊಂಡು ಇದ್ದೆಯೊ°, ಎಂಗೊ!
      ಭಾರೀ ಲಾಯಿಕ ಒಪ್ಪ ಬರೆತ್ತಿ. ಒಳ್ಳೆ ವಿಶಯಂಗಳನ್ನೂ ಬರೆತ್ತಿ.
      ಬೈಲಿನ ಎಲ್ಲೊರಿಂಗೂ ಅದು ತುಂಬಾ ಕೊಶಿ ಆಯಿದು!
      ಇನ್ನೂ ಇನ್ನೂ ಒಪ್ಪ ಕೊಡಿ..

      ಎಡಿಗಾರೆ ಶುದ್ದಿಗಳನ್ನೂ ಹೇಳೆಕಡ, ಗೌರಿಅಜ್ಜಿ ಮೊನ್ನೆ ಸಿಕ್ಕಿಪ್ಪಗ ಹೇಳಿದವು.

  20. ಒಫ್ಫಣ್ಣನ ಲೇಖನ ಓದುವಾಗ ಒಂದರಿ ಎನ್ನ ಬಾಲ್ಯ ಎಲ್ಲ ನೆನಪಾತು… ಮುಟ್ಟಾಟ, ತುಂಟಾಟ, (ಎನ್ನ ಹಲ್ಲು ಮುರುದ್ದದುದೆ ಸೇರಿ ;P ) ಒಂದೊಂದೆ ಸಂಗತಿ ಸಿನೆಮಾಲ್ಲಿ ಅದೆಂತದೋ ಹೇಳ್ತವಲ್ಲ ಫ಼್ಲೇಶುಬೇಕು,,, ಹಾಂಗೆ ಕಣ್ಣ ಮುಂದೆ ಬಂತು.. ಈಗ ನೀ ಹೇಳಿದ ಹಾಂಗೆ ಬರೆ ವೆಬ್ ಸೈಟು, ಕೆಲಸ, ತಲೆಬೆಶಿ ಮಾತ್ರ ಒಳುದ್ದು (ಒಂದು ರಜ ಮಕ್ಕಳಾಟಿಗೆ ಈಗಳು ಇದ್ದಡ ಎನಗೆ,, ಮನೆಲಿ ಹೇಳ್ತವು 😉 ).. ಈಗಾಣ ನಮ್ಮ ಹೊಸ ಪೀಳಿಗೆ ಮಕ್ಕೊ ಎಲ್ಲ ಮುಟ್ಟಾಟ ಬಿಡಿ, ಮೆಟ್ಟಾಟವನ್ನುದೆ ಟೀವಿಲಿ ನೋಡ್ತದು ಮಾತ್ರ, ಆಡುವದೆಲ್ಲ ಕಂಪ್ಯೂಟರಿಲಿ.. ಎಂತ ವ್ಯಾಯಾಮ ಆವುತ್ತು ಕೇಳೆಡ,, 🙂 ಕಣ್ಣು ಬಚ್ಚುತ್ತು ಅಷ್ಟೆ. ಕಂಪ್ಯೂಟರ್ ಆಟಂಗಳಲ್ಲಿ ಒಳ್ಳೆ ಅಂಶಂಗ ಇದ್ದು,, ಆದರೆ ಅತಿಯಾದರೆ ಅಮೃತವು ವಿಷವೆ ಅನ್ನೆ! ಹತ್ತು ಜೆನ ಮಕ್ಕೋ ಸೇರಿ ಮಾಡುವ ಗೌಜಿ, ಅದರ ಮಜ ಇಂದ್ರಾಣ ಮಕ್ಕೋಗೆ ಮರೀಚಿಕೆಯ ಹಾಂಗೆ ಆಯಿದು.. 🙂 ಈಗ ಕೆಲವರಿಂಗಂತೂ ಗೌಜಿ ಆದರೆ ತಲೆಬೇನೆ ಬತ್ತು.. 😀 ಒಟ್ಟಿನಲ್ಲಿ ಒಂದು ಒಳ್ಳೆ ಲೇಖನ… ಅಭಿನಂದನೆಗೊ! 🙂

  21. ಒಪ್ಪಣ್ಣನ ಒಪ್ಪ ಒಪ್ಪ ಇದ್ದು.. ಮೆಟ್ಟಾಟ-ಮುಟ್ಟಾಟಲ್ಲಿ ಹೆಚ್ಚು ವ್ಯತ್ಯಾಸ ಇಲ್ಲೆನ್ನೇ… ಮೆಟ್ಟಾಟ ಆಡುವೋರು ಚೆಂಡಿನ ಕುಟ್ಟುಲೆ ಓಡ್ತವು ಅದೇ ಮುಟ್ಟಾಟ ಆಡುವೋರು ಮುಂದೆ ಓಡುವೋನ ಮುಟ್ಟುಲೆ ಓಡ್ತವು.. ಅಂತೂ ಇಂತೂ ಎಲ್ಲರೂ ತಪ್ಪುಸಿಗೊಂಡು ಓಡುವೋರೇ… 😉 ನಮ್ಮ ಒಪ್ಪಣ್ಣನ ಹಾಂಗೆ…. 😉
    ಮುಟ್ಟಾಟ ಆಗಲೀ ಮೆಟ್ಟಾಟ ಆಗಲೀ ಬೊಬ್ಬೆ ಹಾಕುದು ಸಾಮಾನ್ಯ.. ಹಾಂಗೆ ಬೊಬ್ಬೆ ಹಾಕಿ ಸ್ವರ ಬಿದ್ದಪ್ಪಗ ಡಾಗುಟ್ರಕ್ಕನ ಖಾರ ಕಶಾಯವೇ ಸಕಾಯಕ್ಕೆ ಬಪ್ಪದು,ಒಪ್ಪಣ್ಣನ ಹಾಂಗೆ ಚೀಪೆ ಚೀಪೆ ಕಶಾಯ ಆಗ.. 😉 ಅಲ್ಲದಾ ಒಪ್ಪಣ್ಣ??

  22. ಲೇಖನದ ತಲೆಬರಹ, ಮೆಟ್ಟಾಟ/ಮುಟ್ಟಾಟದ ವರ್ಣನೆ, ಕಡೇಂಗೆ ಕೊಟ್ಟ ಒಪ್ಪ, ಎಲ್ಲವೂ ಲಾಯಕಾಗಿದು.

    “ಬಪ್ಪಗ ಅಂತೂ ಸಣ್ಣ ಇಪ್ಪಗ ಆಡಿದ ಜಾಲು, ಮೆಟ್ಟುಕಲ್ಲು, ಗುಡ್ಡೆ, ಬಲ್ಲೆ, ಬರೆ – ಎಲ್ಲ ಕಂಡತ್ತು, ಸೂಟೆ ಬೆಣಚ್ಚಿಲಿ!”
    ಇಡೀ ಲೇಖನದ ಕಳಕಳಿ, ಈ ಒಂದು ವಾಕ್ಯಲ್ಲಿ ಕಂಡತ್ತು.
    ನಮ್ಮತನವ ನಾವು ಯಾವತ್ತೂ ಬಿಟ್ಟು ಕೊಡ್ಳೆ ಆಗ. ಮರವಲೆ ಆಗ.

  23. ಅಮ್ಮಂದ್ರು ಮಕ್ಕೊಗೆ ಬಿದ್ದು ತಾಗಿ ..ಕಲೆ ಮಾಡಿಗೊ೦ಬದು ಬೇಡ…ಜಾಗ್ರತೆ ಮಾಡಿರೆ ..ಮಕ್ಕೊ ದೊಡ್ಡ ಆದ ಮೇಲೆ ಬೈಕ್ ಲಿಯೋ ಎಂತದರಲ್ಲೋ ಹೋಗಿ ಸಮಕ್ಕೆ ದೊಡ್ಡ ಆದ ಮೇಲೆ ತಾಗ್ಸಿಗೊಂಡು ಬಪ್ಪದು .. ಹೇಳಿ ಆಯಿದು..ಕಾಲ..

    1. ಮಕ್ಕೊ ಬಿದ್ದು ಗಾಯ ಅಕ್ಕು ಹೇಳಿ ಸೈಕಲ್ ಇದ್ದರೂ ಅದರ ಮನೆಂದ ಹೆರ ತೆಕ್ಕೊಂಡು ಹೋಪಲೆ ಬಿಡ್ತವಿಲ್ಲೆ !! ಎನ್ನ ಪ್ರಶ್ನೆ ಎಂತ ಹೇಳಿರೆ….ಸಣ್ಣಾದಿಪ್ಪಗ ಬೀಳದ್ದೆ, ಕೈ ಕಾಲಿಲ್ಲಿ ನಾಲ್ಕು ಗಾಯದ ಕಲೆ ಇಲ್ಲದ್ರೆ…ದೊಡ್ಡ ಆದಪ್ಪಗ ನೆಂಪು ಮಾಡಿಗೊಂಬಲೆ ಎಂತ ಖುಷಿ ಇರ್ತು?!!!! ಒಂದರಿಯೂ ಬೀಳದ್ದೆ ಇದ್ದರೆ ಸೈಕಲ್ ಬಿಡುದರ ಅರ್ಥ ಎಂತರ? ಜೀವನ ಇಪ್ಪದೇ experiment ಮಾಡಿ ಕಲಿವಲೆ ಅಲ್ಲದಾ? ದೊಡ್ಡ ಅಪಾಯ ಆಗದ್ದ ಹಾಂಗೆ care ತೆಕ್ಕೊಳ್ಳೆಕಾದು ಅಗತ್ಯ, ಆದರೆ ಸಣ್ಣ ಗಾಯಕ್ಕೆ ಹೆದರಿ ಬಾಲ್ಯವೇ ಇಲ್ಲದ್ದ ಹಾಂಗೆ ಮಾಡುದು ತಪ್ಪಲ್ಲದಾ?

      1. ಆನು ಸಣ್ಣಾದಿಪ್ಪಗ ಮಾಡದ್ದ ಸರ್ಕಸ್ ಇಲ್ಲೆ!! ಹನುಮಂತನ ತಂಗೆ ಹೇಳಿ ಹೇಳಿಗೊಂಡಿತ್ತವು ಎನ್ನ !! ಹಾಂಗಾಗಿ ಈಗ ನೆಂಪು ಮಾಡಿಗೊಂಬಲೆ ಸಾವಿರ ಸವಿ ನೆನಪುಗೊ ಇದ್ದು 🙂 ಅಂದು ಬಿದ್ದಪ್ಪಗ ಬೇನೆ ಆಗಿ ಕೂಗಿಕ್ಕು, ಆದರೆ ಈಗ ನೆಗೆ ಬತ್ತು, ಅದೇ ವಿಷಯವ ನೆಂಪು ಮಾಡಿಗೊಂಬಲೆ ಒಂದು ರೀತಿ ಖುಷಿ!! ರಜೆಲಿ ಕಾಡು, ಗುಡ್ಡೆ ಹೇಳಿ ಬೆಶಿಲಿಂಗೆ ಒಣಗಿದ್ದು, ಕಾಡು ಹಣ್ಣುಗಳ ಹುಡುಕ್ಕಿ ತಿಂದದು !! ಬೇಸಗೆ ರಜೆಲಿ ಊರಿಂಗೆ ಬಂದರೆ ಆಡದ್ದ ಆತ ಇಲ್ಲೆ, ಮಾಡದ್ದ ಕಾರ್ಬಾರಿಲ್ಲೆ !! ಅಮ್ಮ, ದೊಡ್ಡಮ್ಮ ಈಗಳೂ ನೆಂಪು ಮಾಡಿಗೊಳ್ತವು. 🙂 i really miss those days……

        1. ನಿಂಗೊ ಹೇಳಿದ ಎಲ್ಲಾ ವಿಶಯ ಸರೀ ಇದ್ದು.

          ಆದರೆ ಒಂದು ಸಂಶಯ:
          { ಹನುಮಂತನ ತಂಗೆ ಹೇಳಿ ಹೇಳಿಗೊಂಡಿತ್ತವು ಎನ್ನ }
          ಅಪ್ಪೋ! ನೋಡಿರೆ ಹಾಂಗೆ ಕಾಣ್ತಿಲ್ಲೆನ್ನೆಪ್ಪಾ!!! 🙁

  24. ಲೇಖನ ಚನ್ನಾಗಿದೆ. “ಮೆಟ್ಟಾಟದ ಎಡೆಲಿ ಮುಟ್ಟಾಟ ಮರದತ್ತೋ?” ಶೀರ್ಷಿಕೆ ಇನ್ನೂ ಚನ್ನಾಗಿದೆ.

    ಕ್ರಿಡೆಯ ಬಗ್ಗೆ ನಾವುಗಳೇ ಆಳವಾಗಿ ಯೋಚಿಸಬೇಕು. ನಮ್ಮ ನಾಡಿನ ಕ್ರೀಡೆಗಳೆಂದಾಗ ಸ್ವಲ್ಪ ಆಸಕ್ತಿ ಇಲ್ಲದ ಹಾಗೆ ವರ್ತಿಸುತ್ತೇವೆ. ಉಧಾಹರಣೆಗೆ “ಕಳರಿ” ಎಂದಾಗ ಆಸಕ್ತಿ ತೋರದ ನಾವು ಶಾವೋಲಿನ್, ಕರಾಟೆ ಎಂದಾಗ ಧಾವಿಸುತ್ತೇವೆ. ಮಣಿಪುರದ ಗುಡ್ಡಗಾಡುಗಳಲ್ಲಿ ಪ್ರಾರಂಭವಾದ ಸಗೋಲ್ ಕಾಂಜೈ, ಚೀನಾ ದೇಶಕ್ಕೆ ಹೋಗಿ ಪೋಲೋ ಆದಾಗಲೇ ನಮಗೆ ಆ ಕ್ರೀಡೆಯ ಬಗ್ಗೆ ಆಸಕ್ತಿ ಬಂದಿದ್ದೇಕೆ? ಕತ್ತಿವರಸೆ – ಫೆನ್ಸಿಂಗ್, ಬಿಲ್ಲುಗಾರಿಕೆ-ಆರ್ಚರಿ ಆದಾಗಲೇ ನಮಗೆ ಆ ಕ್ರೀಡೆಯ ಬಗ್ಗೆ ಆಸಕ್ತಿ ಬರುವುದಕೆ? ಈ ದಿಕ್ಕಿತ್ತ ಸ್ವಲ್ಪ ನಾವು ಯೋಚಿಸುವ ಅಗತ್ಯವಿದೆ.

    ಹಾಗೆಯೇ ನಮ್ಮ ನೆಲದ ಆಟಗಳನ್ನು ಮರೆತು ಬಿಡುತ್ತಿದ್ದೇವೆ. ದೂರದರ್ಶನದಲ್ಲಿ ಕಾಣುವುದೆಲ್ಲ ಸರಿಯದದ್ದು ಅಂದು ಕೊಂಡು ಅವುಗಳನ್ನು ಅನುಕರಣೆ ಮಾಡುತ್ತೇವೆ. ಕ್ರಿಕೇಟ್ ಆಟವನ್ನೇ ತೆಗೆದುಕೊಳ್ಳೋಣಾ. ಯಾವ ರೀತಿ ಆ ಆಟವನ್ನು ಇಂಗ್ಲೆಂಡ್ ನೆಲಕ್ಕೆ ಅನುಗುಣವಾಗಿ ರೂಪಿಸಿದ ನಿಯಮಗಳನ್ನು ಕಣ್ಣು ಮುಚ್ಚಿ ನಾವು ಇಲ್ಲಿ ಒಪ್ಪಿಕೊಳ್ಳುತ್ತೆವೆ.

    ಇಂಗ್ಲೆಂಡ್ನಲ್ಲಿ ಆಟವನ್ನು ಹೊತ್ತು ಏರಿದಮೇಲೆ ಪ್ರಾರಂಭಿಸುತ್ತಾರೆ ಏಕೆಂದರೆ ಬೆಳಗ್ಗಿನ ಸಮಯದಲ್ಲಿ ಕೊರೆಯುವ ಚಳಿ, ಹಾಗಾಗಿ ಅವರು ಹೊತ್ತು ಏರಿದ ನಂತರ ಆಟ ಪ್ರಾರಂಭ ಮಾಡುತ್ತಾರೆ. ಈ ದೇಶದಲ್ಲೂ ಹಾಗೇ ಮುಂದುವರಿಯಿತು. ಹೊತ್ತು ಏರಿದ ನಂತರವೇ ಬಿಸಿಲಲ್ಲಿ ಆಟ ಪ್ರಾರಂಭ ಮಾಡುತ್ತೇವೆ. ಅದಷ್ಟೇ ಅಲ್ಲ, ಆಟಕ್ಕೆ ಬೇಕಾದ ಊಡುಗೆ ಕೂಡಾ, TEST CRICKET ನಲ್ಲಿ 70-85ರ ದಶಕಗಳಲ್ಲಿ ನಾವು ಗಮನಿಸಿರಬಹುದು. ನಮ್ಮ ದೇಶದಲ್ಲಿ ಆಗುವ ಪಂದ್ಯಗಳಿಗೂ ಸಹ ಉಣ್ಣೆಬಟ್ಟೆಗಳ ಬಳಕೆ ಮಾಡುತ್ತಿದ್ದರು. ಹೀಗೆ ಒಟ್ಟು ನಮ್ಮ ತನ ಮಾಯವಾಗುತ್ತಾ ಸಾಗುತ್ತಿದೆ. ಅನುಕರಣೆ ಸ್ವಭಾವ ಅತೀ ಅಗುತ್ತಿದೆ. ಅದು ನಿಲ್ಲಬೇಕು.

    ನಮ್ಮ ದೇಶೀ ಆಟಗಳು ಉಳಿಯಬೇಕು ಲೇಖನ ಶೀರ್ಷಿಕೆಯೆಂತೆ ನಮ್ಮತನವನ್ನು ಮರೆತು ಉತ್ತ್ಸಾಹ ತೋರಿಸುವುದು ಸರಿಯಾದದ್ದಲ್ಲ. ಜಗತ್ತಿನ ಎಲ್ಲ ಆಟಗಳನ್ನು ತಿಳಿಯೋಣ, ನಮ್ಮ ಆಟಗಳನ್ನು ಜಗತ್ತಿಗೆ ತೋರಿಸೋಣ. ತೋರಿಸುವ ಮೊದಲೂ ನಾವು ಆಡೋಣ.

    1. ತಾರಣಿಯವರೇ..
      ಸರಿಯಾಗಿ ಹೇಳಿದ್ದಿ. ತುಂಬಾ ಸಂತೋಷ.

      ಬೈಲಿನ ಎಲ್ಲೋರ ಮಾಹಿತಿಗಾಗಿ:
      ಸದ್ಯಲ್ಲೇ ನಮ್ಮ ಹಳೇ ಆಟಂಗಳ ಅಂಕಣ ಬತ್ತಾ ಇದ್ದು, ಇವ್ವೇ ಬರೆತ್ತಾ ಇದ್ದವು.
      ಎಲ್ಲ ಮಕ್ಕಳೂ ಮತ್ತೆ ನಮ್ಮ ಆಟಂಗಳ ಕಲಿಯಲಿ, ಗಟ್ಟಿಮುಟ್ಟು ಆಗಲಿ..

      ಹರೇರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×