Oppanna.com

ದನುವಿಂಗಾಗಿ ಒಪ್ಪತ್ತು ಮಾಡ್ಳೆ ಲೋಕವೇ ಒಪ್ಪುತ್ತು..!

ಬರದೋರು :   ಒಪ್ಪಣ್ಣ    on   28/04/2017    5 ಒಪ್ಪಂಗೊ

ನಮ್ಮ ಹಲವಾರು ಹಬ್ಬ ಹರಿದಿನದ ಆಚರಣೆಲಿ ಒಪ್ಪೊತ್ತುದೇ ಒಂದು ಅಂಗ. ಆತ್ಮೋದ್ಧಾರಕ್ಕಾಗಿ ಉಪವಾಸ ಇದ್ದುಗೊಂಡು; ಪೂರ್ತಿ ನಿರಾಹಾರದ ಉಪವಾಸವೂ ಅಲ್ಲ, ಪೂರ್ತಿ ಗೋಶುಬಾರಿಯ ಊಟವೂ ಅಲ್ಲ – ಹಾಂಗಿರ್ತ ಒಂದು ವಿಶೇಷ ವೆವಸ್ತೆಯ ನಮ್ಮ ಸಮಾಜ ಅನ್ವಯಿಸಿದ್ದು. ಅದುವೇ ಒಪ್ಪತ್ತು.
ಅಪ್ಪು, ಒಪ್ಪೊತ್ತು ಆಚರಣೆ ಮಾಡ್ಳುದೇ ಕ್ರಮ ಇದ್ದು; ಅದಕ್ಕುದೇ ಗೊಂತು ಬೇಕು.
ಅದಾ, ಕಾಂಬು ಅಜ್ಜಿ ಕಾರ್ತಿಕ ಸೋಮವಾರದ ಒಪ್ಪೊತ್ತು ಮಾಡ್ತ ಬಗ್ಗೆ ನಾವು ಅಂದು ಬೈಲಿಲಿ ಮಾತಾಡಿಗೊಂಡಿದು, ನೆಂಪಿದ್ದೋ? ಒಪ್ಪೊತ್ತಿನ ಕ್ರಮ ಹೇಂಗೆ, ಅದರ ಉದ್ದೇಶ – ಫಲಂಗೊ ಎಂತ್ಸರ ಹೇಳುಸ್ಸು ಎಲ್ಲ ಅಂದು ಮಾತಾಡಿಗೊಂಡಿದು.
(ಸಂಕೊಲೆ: ಕಾರ್ತಿಕ ಸೋಮವಾರ ಒಪ್ಪತ್ತು – ದೇಹವೇ ಮನಸಿಂಗೆ ಒಪ್ಪುತ್ತು …!)
ಈಗಳೂ ಪುನಾ ಒಂದರಿ ಒಪ್ಪೊತ್ತಿನ ಬಗ್ಗೆ ಮಾತಾಡ್ತ ಸಮೆಯ ಬಂತು. ಅದು ನಮ್ಮ ಉದ್ಧಾರಕ್ಕಾಗಿ ಅಲ್ಲ. ನಮ್ಮ ಒಳಿಶಿ ಬೆಳೆಶುವ ಗೋವುಗೊಕ್ಕೆ ಬೇಕಾಗಿ.
~
ಮಲೆಮಹದೇಶ್ವರ ಬೆಟ್ಟಲ್ಲಿ ದನಗಳ ಕತೆ ಕಂಗಾಲಾದ್ಸು ನವಗೆಲ್ಲ ಗೊಂತಿಪ್ಪದೇ.
ದನಗೊ ಮೇವ ಗುಡ್ಡೆಯ ಒಂದರಿಯೇ ಬೇಲಿ ಹಾಕಿ ಮುಚ್ಚಿದ್ಸರಲ್ಲಿ ದನಗೊ ಕಂಗಾಲಾಯಿದವು. ಎಷ್ಟು ಕಂಗಾಲಾಯಿದವು ಹೇದರೆ, ಕೆಲವು ದನುವಿನ ಎಲುಗು-ಚೋಲಿ ಕಾಣ್ತು ಹೇಳುಗು ಪಾತಿ ಅತ್ತೆ. ಅಪ್ಪಡ, ಕೆಲವು ದನಕ್ಕೆ ಏಳುಲೆ ಎಡಿತ್ತಿಲ್ಲೆ, ಎದ್ದರೆ ಹುಲ್ಲು ತಿಂಬಲೆಡಿತ್ತಿಲ್ಲೆ, ನೀರು ಕುಡಿವಲೂ ಶೆಗ್ತಿ ಇಲ್ಲೆ!
ಹೀಂಗೆಲ್ಲ ಇತ್ತು ಅಲ್ಯಾಣ ದನಗಳ ಕತೆಗೊ.
ಇನ್ನೂ ಒಂದು ಹತ್ತು ಹದಿನೈದು ದಿನ ಹೋಗಿದ್ದರೆ ಸಾವಿರಗಟ್ಳೆ ದನಗೊ ಸಾಯ್ತಿತವೋ ಏನೋ.
ಆ ಸಂದರ್ಭಲ್ಲಿ ಆಯಿದು ನಮ್ಮ ಮಠದ ತಂಡ ಅಲ್ಲಿಗೆತ್ತಿದ್ದು. ಗುರುಗಳ ನಿರ್ದೇಶನದ ‘ಗೋ_ಪ್ರಾಣ_ಭಿಕ್ಷಾ’ ಕಾರ್ಯಯೋಜನೆಲಿ ಈ ಕೆಲಸ.
~
ಹಳ್ಳಿಹಳ್ಳಿಂದ ಮೇವು ಸಂಗ್ರಹ ಮಾಡಿಗೊಂಡು ಬೆಟ್ಟಕ್ಕೆ ಎತ್ತುಸುವ ಏರ್ಪಾಡು ನಿಂಗೊಗೆ ಅರಡಿಗಲ್ದೋ? ಕಳುದ ವಾರಂಗಳಲ್ಲಿ ಬೈಲಿಲಿ ಆ ಶುದ್ದಿ ಮಾತಾಡಿದ್ದು. ಹಾಂಗೆ ಊರೂರಿಂದ ಸಂಗ್ರಹ ಮಾಡಿದ ಹಸಿ ಹುಲ್ಲು, ಬೆಳುಲು, ಕಬ್ಬಿನ ದಂಟು, ಹಾಳೆ ಕಡೆ, ಹಾಳೆ ಹೊಡಿ – ಇತ್ಯಾದಿಗಳ ಎಲ್ಲ ತೆಕ್ಕೊಂಡು ಹೋದ ಲೋರಿಗೊ ಲೋಡು ಲೋಡಿಲಿ ಬೆಟ್ಟದ ದನಗಳ ಸಮ್ಮುಖಲ್ಲಿ ಸೊರುಗಿತ್ತು.
ಇದರಿಂದಾಗಿ ಬೆಟ್ಟದ ಗೋವುಗಳ ದೊಡ್ಡ ಸಮಸ್ಯೆ ಆಗಿದ್ದ ಆಹಾರ – ಸಿಕ್ಕುಲೆ ಸುರು ಆತು.
ಅಡ್ಡತಲೆ ಹಾಕಿದ ದನಗೊ ಎದ್ದು ಕೂಪಲೆ ಸುರು ಮಾಡಿದವು, ಎದ್ದ ದನಗೊ ಓಡಾಡ್ಳೆ ಸುರು ಮಾಡಿದವು. ಓಡುವ ದನಗೊ ನೆಮ್ಮದಿಯ ನೆಗೆ ಮಾಡ್ಳೆ ಸುರುಮಾಡಿದವು.
ಇದರ ಹಿಂದೆ ಶ್ರಮ ಇಪ್ಪದು ಅವಿಶ್ರಾಂತವಾಗಿ ದುಡಿವ ಸಾವಿರಾರು ಕಾರ್ಯಕರ್ತರು. ಮನೆ ಮನೆಗಳಿಂದ ಹಾಳೆ ಸಂಗ್ರಹಿಸಿ, ಹೊಡಿ ಮಾಡ್ಳೆ ಬೇಕಾದ ಮಿಶನುಗಳ ಸಂಗ್ರಹಣೆ ಮಾಡಿ, ಹಾಳೆಯ ಹೊಡಿ ಮಾಡಿ, ಅದರ ತುಂಬುಸುಲೆ ಚೀಲಂಗೊ, ಅದರ ಲೋಡುಮಾಡ್ಳೆ ಲೋರಿ ವೆವಸ್ತೆ – ಹೀಂಗೆ ಹಲವಾರು ವೆವಸ್ತೆಗೊ ಬೇಕಾವುತ್ತು.
ಹಾಳೆ ಮಾಂತ್ರ ಅಲ್ಲ; ಹುಲ್ಲಿನ ಊರಿನ ಹುಲ್ಲು, ಕಬ್ಬಿನ ಊರಿನ ಕಬ್ಬು ಎಲ್ಲವೂ!!
ಕೊನೆಗೆ ಇದರ ಸಾಗಾಟಕ್ಕೆ ಇಪ್ಪ ವೆವಸ್ತೆ..!
ಇದೆಲ್ಲ ಕಾಂಬಗ ಮಠ ಮಾಡ್ತಾ ಇಪ್ಪದು ನಿಜವಾಗಿಯೂ “ಗೋ ಪ್ರಾಣಭಿಕ್ಷೆ” – ಹೇದು ನಿಜ ಅನುಸುತ್ತು.
~
ಇದರ ವೆವಸ್ತೆಯ ಖರ್ಚಿಂಗೆ ಪೈಶೆ ಬೇಡದೋ? ಬೇಕು.
ಅದಕ್ಕೆ ಬೇಕಾಗಿ ಓ ಮೊನ್ನೆ ಗುರುಗೊ ಹೇಳಿದವಾಡ – ಗೋ ಪ್ರಾಣ ಭಿಕ್ಷೆಯ ಲೆಕ್ಕಲ್ಲಿ ನಾವು ಎಲ್ಲೋರುದೇ ಒಪ್ಪೊತ್ತು ಮಾಡುವೊ° – ಹೇದು.
ವಾರಲ್ಲಿ ಒಂದಿನ, ಮುಂದಾಣ ಮೂರು ತಿಂಗಳು ಒಪ್ಪೊತ್ತು ಮಾಡುವ ಆದೇಶ ಅದು.
ಅದರ ಪ್ರಕಾರ ಪ್ರತಿ ಸೋಮವಾರ ಉದಿಯಪ್ಪಗ ಉಪಾಹಾರ ಆದ ಮತ್ತೆ, ಇರುಳಾಣ ಊಟವೇ.
ಮಧ್ಯಾಹ್ನ ಯಾವದೇ ಆಹಾರ ತೆಕ್ಕೊಂಬಲೆ ಇಲ್ಲೆ.
ಆ ಆಹಾರದ ಬಾಬ್ತು ಕಾಣಿಕೆಯ ಗೋ ಪ್ರಾಣಭಿಕ್ಷೆಯ ಸೇವೆಗೆ ಅರ್ಪಣೆ ಮಾಡುಸ್ಸು.

ಅದರ್ಲಿ ಎಷ್ಟಕ್ಕು ಕೇಳುವಿ ನಿಂಗೊ. ಆದರೆ, ಹನಿ ಹನಿ ಸೇರಿಯೇ ಹಳ್ಳ ಅಪ್ಪದು. ಒಬ್ಬನ ಒಂದು ಊಟಕ್ಕೆ ಎಷ್ಟಾತೋ, ಸಾವಿರಾರು ಜೆನ ಉಪವಾಸ ಮಾಡಿ ಒಳುದ ಮೌಲ್ಯ ದನಕ್ಕಪ್ಪಗ ದೊಡ್ಡ ಮೊತ್ತ ಅಕ್ಕು.

ಇದರ್ಲಿ ಇನ್ನೊಂದು ಸಂದೇಶ ಇದ್ದು.
ದನ ಉಪವಾಸಲ್ಲಿ ಇಪ್ಪಾಗ, ನಾವುದೇ ಕನಿಷ್ಠ ಒಂದು ಹೊತ್ತಾದರೂ ಉಪವಾಸ ಇದ್ದುಗೊಂಡು ಅದರ ಬೇನೆಯ ತಿಳ್ಕೊಳೇಕು – ಹೇದು.
ಆ ಪ್ರಕಾರಲ್ಲಿ, ವಾರಲ್ಲಿ ಒಂದು ದಿನ ಉಪವಾಸ ಮಾಡಿಗೊಂಡು, ಗೋವಿನ ಸೇವೆಗೆ ಕಾಣಿಕೆ ಎತ್ತುಸುವೊ° – ಹೇದು ಗುರಿಕ್ಕಾರ್ರು ಬೈಲಿಂಗೆ ಹೇಳುಲೆ ತಿಳುಶಿದವು.

ಹೇಳಿದಾಂಗೆ, ಒಪ್ಪೊತ್ತು ಮಾಡಿರೆ ದೇಹಕ್ಕೂ ಒಳ್ಳೆದಾಡ, ಗೊಂತಿದ್ದಲ್ದೋ?
~
ಒಂದೊಪ್ಪ: ನಾವು ಒಂದೊತ್ತು ಮಾಡ್ಳೆ ಕಷ್ಟ ಪಟ್ರೆ, ದನ ಮೂರೂ ಹೊತ್ತು ಉಪವಾಸ ಮಾಡೆಕ್ಕಾವುತ್ತು!

5 thoughts on “ದನುವಿಂಗಾಗಿ ಒಪ್ಪತ್ತು ಮಾಡ್ಳೆ ಲೋಕವೇ ಒಪ್ಪುತ್ತು..!

  1. ಹರೇ ರಾಮ.ಬರೇ ಒಪ್ಪೊತ್ತು ಮಾಡಿರೆ ಸಾಲ.ಅನಗತ್ಯ ಆಡಂಬರವನ್ನೂ ಕಮ್ಮಿ ಮಾಡಿ ಸರಳತೆಯ ಜೀವನಕ್ಕೆ ಆದ್ಯತೆ ಕೊಟ್ರೆ ಮತ್ತೂ ಒಳ್ಳೆದಲ್ಲದಾ?

  2. ಸ್ವಾಮಿ ಕಾರ್ಯವೂ ಆತು ಸ್ವಕಾರ್ಯವೂ ಆತು ಹೇಳ್ತ ಹಾಂಗೆ,
    ಒಪ್ಪೊತ್ತು ಮಾಡಿ ಆರೋಗ್ಯ ಕಾಪಾಡಿದ ಹಾಂಗೆಯೂ ಆತು, ದನುವಿಂಗೆ ದಾನಮಾಡಿದ ಹಾಂಗೆಯೂ ಆತು. ಪುಣ್ಯವೂ ಸಿಕ್ಕಿತ್ತು.
    ಒಳ್ಳೆ ಯೋಜನೆ. ಎಲ್ಲರೂ ಕೈಜೋಡಿಸಿದರೆ ಯೋಜನೆ ಅಭೂತಪೂರ್ವ ಯಶಸ್ಸು ಕಾಂಗು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×