Oppanna.com

ನವರಾತ್ರಿಯ ಕೊರಗು ತಡೆಯದ್ದೆ ಪ್ರಾಣಬಿಟ್ಟ ಹೊನ್ನಪ್ಪುವಿನ ಸುದ್ದಿ..!

ಬರದೋರು :   ಒಪ್ಪಣ್ಣ    on   10/10/2014    3 ಒಪ್ಪಂಗೊ

ಶರನ್ನವರಾತ್ರಿಯ ದಶೆರೆಗೆ ಊರಿಡೀ ಮದುಮ್ಮಾಳಿನ ನಮುನೆ ಶುಭ್ರಶೃಂಗಾರ ಅಪ್ಪದು ನವಗೆ ಅರಡಿಗು.
ಕರ್ನಾಟಕ ಮಾಂತ್ರ ಅಲ್ಲದ್ದೆ, ಕಾಸ್ರೋಡಿಲಿಯೂ ’ನಾಡಹಬ್ಬ’ ಆಗಿ ಆಚರಣೆ ಮಾಡ್ತ ಸಂಪ್ರದಾಯ ಇದ್ದು.
ತುಳುವಿಲಿ ಮಾರ್ಣೆಮಿ ಆದ್ಸು ಇದೇ ಮಹಾನವಮಿ.
ಈಗ ಗಳಿಗ್ಗೆಗೆ ಒಂದು ಹಬ್ಬಂಗೊ ಬತ್ತರೂ, ಮದಲಿಂಗೆ ಊರಿಲಿ ಹಬ್ಬಂಗೊ ಕಮ್ಮಿಯೇ ಇದಾ. ಒಂದು ಪತ್ತನಾಜೆ, ಒಂದು ಆಟಿಪುಣ್ಣಮೆ, ಮತ್ತೊಂದು ಮಾರ್ಣೆಮಿ, ಇನ್ನೊಂದು ಪರ್ಬೊ – ದೀಪಾವಳಿ. ಮತ್ತೊಂದು ಎರಡೋ ಮೂರೋ ಹಬ್ಬಂಗೊ ಆಯಾ ಕುಟುಂಬಕ್ಕೆ ಒಳಪ್ಪಟ್ಟದು ಇದ್ದಿಕ್ಕು. ಹಾಂಗಾಗಿ ನವರಾತ್ರಿಯ ಗವುಜಿಗೆ ತುಂಬಾ ಪ್ರಾಮುಖ್ಯ ಬಂದದು.
~
ನವರಾತ್ರಿಲಿ ಪುಸ್ತಕಪೂಜೆ, ಆಯುಧಪೂಜೆ, ಶಾರದಾಪೂಜೆ ಇತ್ಯಾದಿ ಹಲವು ಪೂಜೆಗೊ ಇರ್ಸು – ಒಂಭತ್ತು ದಿನವೂ ಅಂಬೆರ್ಪು ಮಾಡಿ ಹಾಕುತ್ತು. ಬಟ್ಟಮಾವಂಗೆ ಪೂಜೆಗಳ ಬೆಶಿ ಆದರೆ, ಒಳುದೋರಿಂಗೆ ವೇಷಂಗಳ ಬೆಶಿ. ಹುಲಿವೇಷ, ಕರಡಿ ವೇಶ, ಬಣ್ಣದ ವೇಶ – ಹೀಂಗಿಪ್ಪ ಹಲವಾರು ವೇಷಂಗೊ, ಡಂಙಟಕ್ಕ ಬಡಿತಕ್ಕೆ ಕೊಣಿತ ಮಾಡಿಂಡು ಪೇಟೆ ಇಡೀಕ ಸುತ್ತಿ ನಾಕಾರು ರುಪಾಯಿ ಸಂಪಾದನೆ ಮಾಡುದೂ ಒಂದು ಸಂಪಾದನೆ.
ಅದಿರಳಿ.
~
ಈ ಎಲ್ಲಾ ವೇಷಂಗಳ ಎಡಕ್ಕಿಲಿ ಒಪ್ಪಣ್ಣಂಗೆ ನೆಂಪಪ್ಪದು “ಕೊರಗ್ಗನ” ವೇಷ.
ಕೊರಗ್ಗ ಕಾಂಬಲೆ ಹೇಂಗೆ? ಇಡೀ ಕಪ್ಪು.
ಎಷ್ಟು ಕಪ್ಪು?
ಮೈಗಿಡೀ ಕರಿಬಣ್ಣವ ಮೆತ್ತಿಗೊಂಡು – ಗುರ್ತವೇ ಸಿಕ್ಕದ್ದಷ್ಟು ಕಪ್ಪಾಗಿ,
ತಲಗೊಂದು ಕರಿಮುಟ್ಟಾಳೆಯ ಮಡಿಕ್ಕೊಂಡು – ಮುಟ್ಟಾಳೆಗೂ ಕರಿಬಣ್ಣವ ಉದ್ದುಸ್ಸು,
ಕರಿಬಣ್ಣದ ತುಂಡುವಸ್ತ್ರವ ಸುತ್ತಿಗೊಂಡು – ಕೊಡೆಹರ್ವೆ ಆದರೂ ಆತು,
ಕೈಲಿ ಒಂದು ಕರಿಕೊಳಲು ಹಿಡ್ಕೊಂಡು,
ಬೇಕಾರೆ ಹೆಗಲಿಂಗೊಂದು ಕಪ್ಪು ಚೀಲವ ಹಾಕಿಂಡು –
ಬರಿಕಾಲಿಲಿ ನೆಡಕ್ಕೊಂಡು ಹೋವುಸ್ಸು.
ಹೋವುಸ್ಸು ಎಲ್ಲಿಗೆ? ಮದಾಲು ಹೋಪದು ಊರ ದೇವಸ್ಥಾನಕ್ಕೆ.
ದೇವಸ್ಥಾನದ ಒಳ ಹೋಪಲಿಲ್ಲೆ. ಬಾಕಿ ದಿನ, ಅಂತೆ ಇಪ್ಪಗ ದೇವಸ್ಥಾನದ ಒಳ ಹೋವುತ್ತರೂ, ಕೊರಗ್ಗನ ವೇಷ ಹಾಕಿದ ದಿನ ಹೋಪಲಿಲ್ಲೆ.
ದೇವಸ್ಥಾನದ ಎದುರಾಣ ಮಣ್ಣಜಾಲಿಲಿ – ಅಲ್ಲೇ ಇಪ್ಪ ಪೊದೆಲಿಂದ ನಾಕು ಸೊಪ್ಪಿನ ಬರುಂಬಿ ತಂದು – ದೇವರಿಂಗೆ ಸಮರ್ಪಣೆ ಮಾಡಿದ ಹಾಂಗೆ ಹಾಕುಸ್ಸು. ಕಾಡಿಲೇ ಹುಟ್ಟಿ ಬೆಳದು, ಕಾಡಿಲೇ ಜೀವನ ಮಾಡ್ತ ಕೊರಗರಿಂಗೆ ಸೊಪ್ಪೇ ಪುಷ್ಪ, ಸೊಪ್ಪೇ ಸ್ತಂಭೈಶ್ಚ ಹೈಮೈಃ ಶುಭೈಃ – ಅಲ್ಲದೋ?
ಅದಾಗಿ ಕೊಳಳಿಲಿ ಎರಡುಗೆರೆ ಪದ್ಯ ನುಡುಸುದು.
ನುಡುಸುವಾಗ ಡೊಂಕ ಹಾಕಿದ ಹಾಂಗೆ, ಬೆನ್ನು ಬಗ್ಗುಸಿದ ಹಾಂಗೆ, ನೆಲಕ್ಕ ನೋಡಿದ ಹಾಂಗೆ, ಹಿಂದೆ-ಮುಂದೆ ಹಾರಿದ ಹಾಂಗೆ ನಾಲ್ಕು ಸರ್ತಿ ಡೇನ್ಸು ಮಾಡುದು. ಒಟ್ಟಿಂಗೆ ಸುತ್ತ ತಿರುಗೆಂಬದು. ಅದಾಗಿ ಮುಟ್ಟಾಳೆ ತೆಗದು ಕೈಲಿ ಹಿಡಿವದು – ಎಲ್ಲವುದೇ ಗ್ರಾಮ್ಯ, ತೀರಾ ಕಾಡುಜೀವನದ ಪ್ರತಿಬಿಂಬದ ಹಾಂಗೆ ದೇವರ ಎದುರು ಕೊಶಿ ತೋರ್ಸಿಗೊಂಬದು.
ಇದಾಗಿ, ಆ ಊರಿಲಿ ಮನೆಮನೆಗೆ ಹೋವುಸ್ಸು.
ಕೊಳಲಿಲಿ ಚೆಂದದ ಪದ್ಯದ ಒಂದೆರಡು ಗೆರೆಯ ಹಾಡಿ, ಪಿರ್ಕಿಸ್ವರಲ್ಲಿ ಒಂದೆರಡು ಸ್ವರ ಹೆರಡ್ಸಿ, ಮುಟ್ಟಾಳೆ ಒಡ್ಡುಗು. ಮನೆಯೋರು ಕೊಟ್ಟ ಪಾವೆಲಿಯ ಸಂತೋಷಲ್ಲಿ ಸ್ವೀಕಾರ ಮಾಡುಗು. ಹೆಗಲಿಲಿ ಇಪ್ಪ ಜೋಳಿಗೆಲಿ ಹಾಕಿಗೊಂಗು.
ಮಧ್ಯಾಹ್ನ ಆರಾರು ಕೊಟ್ರೆ ಉಂಡುಗೊಂಗು.
ಊಟ ಆಗಿಯೂ – ಮತ್ತೆ ಇದೇ ಕತೆ. ಮನೆ ಮನೆ ತಿರುಗಿ ನಲಿಕ್ಕೆ ಸೇವೆಯ ಸಮರ್ಪಿಸಿ, ಕೊಟ್ಟ ಕಾಣಿಕೆಯ ಸ್ವೀಕಾರ ಮಾಡುಸ್ಸು – ಕೊರಗ್ಗನ ಸೇವೆ.
ಮತ್ತೆಂತದು?
ಎಲ್ಲ ಆಗಿ, ಹೊತ್ತೋಪಗ ಪುನಾ ಆ ದೇವಸ್ಥಾನಕ್ಕೆ ಹೋವುಸ್ಸು.
ದೇವಸ್ಥಾನದ ಕರೆಲಿ ಮಿಂದು, ಶುಭ್ರ ಅಪ್ಪದು.
ಆ ದಿನಲ್ಲಿ ಸಿಕ್ಕಿದ ಇಡೀ ಕಾಣಿಕೆಗಳ ಹಾಂಗೇ ದೇವರಿಂಗೆ ಸಮರ್ಪಣೆ ಮಾಡ್ತದು.
ಅಲ್ಯಾಣ ಪೂಜೆಯೋರು / ಯಾ ಮೊಕ್ತೇಸರರು ಕೈಎತ್ತಿ ಕೊಟ್ಟ ಸಣ್ಣ ಸಂಭಾವನೆಯ ಸ್ವೀಕಾರ ಮಾಡಿಗೋಂಡು, ಪ್ರಸಾದ ತೆಕ್ಕೊಂಡು ಮನೆಗೆ ಬಪ್ಪದು.
ಅಲ್ಲಿಗೆ ಕೊರಗ್ಗ ವೇಷದ ಸೇವೆ ಮುಗಾತು.
~
ಗಮನುಸಿ, ಕೊರಗ್ಗನ ವೇಷ ಹೇದರೆ ಒಳುದ ಹುಲಿವೇಶ, ಕರಡಿವೇಷದ ಹಾಂಗೆ ಗಮ್ಮತ್ತಿಂಗೆ ಇಪ್ಪದಲ್ಲ.
ಸಿಕ್ಕಿದ ಪೈಶೆಲಿ ಕುಡಿವಲೆ ಇಪ್ಪ ಸಂಪಾದನೆ ಅಲ್ಲ.
ಇದು ಒಂದು ಹರಕ್ಕೆ. ಇದೊಂದು ಸೇವೆ. ಇದೊಂದು ಹರಕ್ಕೆ ಸೇವೆ. ಪೂಜೆ ಮಾಡಿದ ಹಾಂಗೇ, ಒಂದು ವ್ರತ.
ಕೈಬೇನೆಯೋ, ಕಾಲುಬೇನೆಯೋ, ಮಾನಸಿಕವೋ – ಎಂತಾರು ಹಿಡುದರೆ ನವರಾತ್ರಿಲಿ ಮಾಡುವ ದೇವಿಸೇವೆ.
ಇದರ್ಲಿ ಆರನ್ನೂ ನೆಗೆಮಾಡ್ತ ಪ್ರಶ್ನೆ ಇಲ್ಲೆ. ಜೆನಂಗೊ ಅವ್ವವ್ವೇ ಆಗಿ, ಸ್ವಯಂ ಆಸಕ್ತಿಲಿ ಹಾಕುವ ವೇಷ.
ಊರೊಳ ಇಪ್ಪ ದೇವಸ್ಥಾನಲ್ಲಿ ಆರಂಭ ಮಾಡಿ, ಊರಿಡೀ ದೇವನಾಮ ಸ್ಮರಣೆಲಿ ತಿರುಗಿ, ಪುನಾ ದೇವಸ್ಥಾನಲ್ಲಿ ಬಂದು ಸಮಾಪ್ತಿ ಮಾಡ್ತದು ಕೊರಗ್ಗವೇಷದ ಕ್ರಮ.
~
ಇದೆಲ್ಲ ಹಳೇ ಕತೆ. ಈಗ ಕೊರಗ್ಗ ವೇಷ ಹಾಕಿರೆ ದೊಡಾ ಅಪರಾಧ ಅಡ.
ಜಾತಿನಿಂದನೆ ಹೇದು ಕೇಸು ಹಾಕುತ್ತವಾಡ.
ಕೊರಗ್ಗ ಸಮುದಾಯವ ನೆಗೆಮಾಡಿದ ಹಾಂಗಾವುತ್ತಾಡ.
ಹಾಂಗಾಗಿ ಕೊರಗನ ವೇಷವನ್ನೇ ನಿಷೇಧ ಮಾಡಿದ್ದವಾಡ!
ಛೇ!
ಆರೋ, ಎಂತದೋ ದೂರು ಕೊಟ್ಟ ಲೆಕ್ಕಲ್ಲಿ ಅದರ ಹಿಂದೆಮುಂದೆ ನೋಡದ್ದೆ ಒಂದು ಸಂಪ್ರದಾಯವನ್ನೇ ನಿಲ್ಲುಸಿ ಬಿಡುದೋ ಸರ್ಕಾರ?
~
ಬೈಲಕರೆಲಿ ಹೊನ್ನಪ್ಪು ಹೇಳಿ ಒಂದು ಜೆನ ಇಪ್ಪದು ನಿಂಗೊಗೆ ಗೊಂತಿಕ್ಕು. ಸುಕುಮಾರನ ಅಪ್ಪ ಅದು.
ಮೂರು ಜೆನ ಮಕ್ಕಳಲ್ಲಿ ಇಬ್ರೂ ಮಗಳಕ್ಕೊಗೆ ಮದುವೆ ಆಯಿದು. ಈಗ ಒಂದು ಮಗ – ಆಣು ಇದ್ದು ಮದುವೆ ಅಪ್ಪಲೆ ಬಾಕಿ.
ಹೊನ್ನಪ್ಪುಗೆ ಮದಲಿಂಗೇ ಮನಸ್ಸು ಸರಿ ಸ್ಥಿಮಿತ ಇದ್ದತ್ತಿಲ್ಲೇದು ಊರೊಳ ಗೊಂತಿಪ್ಪದೇ.
ಆ ಲೆಕ್ಕಲ್ಲಿ ಹಲವು ಮದ್ದುಗೊ, ಸೇವೆಗೊ, ಪೂಜೆಗೊ ಎಲ್ಲ ಅವರ ಮನೆಲಿ ಆಗಿಂಡು ಇದ್ದತ್ತು.
ಬೇಸಗೆಲಿ ಮರುಳು ಎಳಗಿರೆ ಮಳೆಗಾಲ ಹಿಡಿವಾಗ ಜೋರು ಆಗಿಕ್ಕು. ಪೈಸೆ ಕಮ್ಮಿ ಆಗಿ ಟೈಟು ಅಪ್ಪಗ ಜೋರಪ್ಪದು ಹೇಳಿಯೂ ಕೆಲವು ಜೆನ ಹೇಳ್ತವು.
ಒಂದೊಂದು ಒರಿಶ ಅಂತೂ ಜೋರಕ್ಕು.
ಮನೆ ಒಳ ಇಪ್ಪ ಅಳಗೆಯ ಹೊತ್ತು ಹಾಕುದು, ಹೆಂಡತ್ತಿಗೆ ಬಡಿವದು, ಮಕ್ಕಳ ಮೇಗೆ ಕಲ್ಲಿಡ್ಕುದು, ಕಂಡೋರಿಂಗೆ ಬೈವದು – ಈ ನಮುನೆ. ಹಾಂಗೆ ಜೋರಾದ ಒರಿಶ “ಈ ಸರ್ತಿ ಮಾರ್ಣೆಮಿಗೆ ಕೊರಗ್ಗನ ವೇಷ ಹಾಕುಸುತ್ತೆ” – ಹೇದು ಅದರ ಹೆಂಡತ್ತಿ ನಂಬಿಗೊಂಬದಾಡ. ಹಾಂಗೆ ನಂಬಿಗೊಂಡ ಮರದಿನಂದಲೇ ಅದರ ಮರುಳು ಇಳ್ಕೊಂಡು ಇದ್ದತ್ತಾಡ.
ಅದಷ್ಟೇ ಅಲ್ಲ, ಒಂದೊಂದರಿ ಹೊನ್ನಪ್ಪು ಅದಾಗಿ ನಂಬಿಗೊಂಡು ಇದ್ದತ್ತಾಡ – ಮನಸ್ಸಿನ ಸಂತೋಷಕ್ಕಾಗಿ.
ಆಗ ಹೇಳಿದಾಂಗೆ ಅದುದೇ ಬೈಲಕರೆ ದೇವಸ್ಥಾನಲ್ಲಿ ದೇವರ ನೆಂಪುಮಾಡಿಕ್ಕಿ, ಇಡೀ ಊರಿಲಿ ಭಿಕ್ಷೆ ಬೇಡಿಗೊಂಡು ತಿರುಗ್ಗು. ಒಪ್ಪಣ್ಣನ ಮನೆಗೂ ಬಕ್ಕು ಕೊಳಲು ಊದಿಗೊಂಡು, ಒಪ್ಪಣ್ಣ ಸಣ್ಣ ಇಪ್ಪಾಗ. ಅದರ ಕೊಣಿಯಾಣ ಎಲ್ಲ ಆದ ಮತ್ತೆ ಅಮ್ಮ ಹೇಳುಗು – ಅದಾ ಒಪ್ಪಣ್ಣೋ, ಅದು ಹೊನ್ನಪ್ಪು ಬಂದದು, ಗೊಂತಾತಾ? – ಹೇದು.
ಒಪ್ಪಣ್ಣಂಗೆ ಗೊಂತಪ್ಪದು ಎಲ್ಲಿಂದ? ಯೇವತ್ತೂ ಮೀಸೆ ಮಾಂತ್ರ ಕಪ್ಪು, ಆ ದಿನ ಇಡೀ ಮೈ ಕಪ್ಪು!!
ಹೊನಪ್ಪು ಹೊತ್ತೋಪಗ ದೇವಸ್ಥಾನಕ್ಕೆ ಹೋಗಿ ಕಾಣಿಕೆ ತೆಕ್ಕೊಂಡು ಬಕ್ಕು.
ಮರದಿನಂದ ಮರುಳುಹೊನ್ನಪ್ಪು ಬರೇ “ಹೊನ್ನಪ್ಪು” ಆಗಿದ್ದುಗೊಂಡು ಇತ್ತು!
~
ಆದರೆ ಮುಂದೆ ಕೊರಗ್ಗನ ವೇಷವ ನಿಷೇಧ ಮಾಡಿದವೋ – ಹೊನ್ನಪ್ಪುಗೆ ಮರುಳು ಬಿಡ್ಳೆ ಬೇರೇವದೂ ದಾರಿ ಇದ್ದತ್ತಿಲ್ಲೆ!
ಪ್ರತಿ ಒರಿಶ ಮಾರ್ನೆಮಿ ಬಪ್ಪಗಳೂ ಮರುಳು ಜೋರಾಗಿಂಡೇ ಇದ್ದತ್ತು! ನಿಮುರ್ತಿ ಇಲ್ಲೆ.
ಕೊರಗ್ಗನ ವೇಷ ಹಾಕಲಾಗ ಇದಾ!!
ಒರಿಶಂದ ಒರಿಶಕ್ಕೆ ಮರುಳು ಜೋರಾತು. ಈ ಒರಿಶ ಅಂತೂ – ಮರುಳು ಜೋರಾಗಿ, ಮನೆಲಿ ಆರೂ ಇಲ್ಲದ್ದ ಹೊತ್ತು ನೋಡಿ “ವಿಷ ಕುಡುದು” ಸ್ವಹತ್ಯೆ ಮಾಡ್ಳೆ ಹೊಣದತ್ತು.
ಮಹಾನವಮಿಯ ದಿನ ಪ್ರಾಣ ಬಿಟ್ಟತ್ತು.
ಬಹುಷಃ ಕೊರಗ್ಗನ ವೇಷ ಹಾಕುಲೆ ಅವಕಾಶ ಇದ್ದಿದ್ದರೆ ಅದರ ಮರುಳು ಬಿಡ್ತಿತೋ ಏನೋ!!
ಕೊರಗ್ಗನ ವೇಷ ಇಲ್ಲದ್ದೆ ಕೊರಗಿಲೇ ಪ್ರಾಣ ಬಿಟ್ಟತ್ತು ಹೊನ್ನಪ್ಪು.
~

ಊರೊಳ ಇದ್ದಿದ್ದ ಒಂದು ಸಂಪ್ರದಾಯ, ಆಚರಣೆ ಆ ಕೊರಗ್ಗನ ವೇಷ.
ಯೇವದೋ ಕಾರಣಕ್ಕೆ ಅದರ ನಿಷೇಧ ಮಾಡಿದವು,
ಕೊರಗ್ಗನ ವೇಷ ಹೇದರೆ ಅಸ್ಪೃಶ್ಯತೆಯ ಹೇಳಿದ ಹಾಂಗಾವುತ್ತು – ಹೇದು ಆರೋ ನಂಬುಸಿದ್ದವು ದೊಡ್ಡವರ.
ಆದರೆ, ಕೊರಗ್ಗನ ವೇಷವ ಎಲ್ಲೋರುದೇ ಹಾಕುತ್ತವು, ಹಾಕಿ ದೇವಸೇವೆ ಮಾಡಿ ನೆಮ್ಮದಿ ಕಾಣ್ತವು – ಹೇಳುಸ್ಸು ಅವಕ್ಕೆ ಅರ್ಥ ಆವುತ್ತಿಲ್ಲೆ ಅಪ್ಪೊ!
ಒಂದು ಸಂಪ್ರದಾಯವ ಆಚರುಸಿಗೊಂಡು, ಅದರ್ಲೇ ಆತ್ಮಸಂತೋಷ ಅನುಭವಿಸಿಗೊಂಡ ಸಾವಿರಾರು ಜೆನಂಗೊಕ್ಕೆ – ಆ ಆಚರಣೆಯ ನಿಷೇಧಂದಾಗಿ ಎಷ್ಟು ಬೇಜಾರಾವುತ್ತು – ಹೇದು ಅರ್ಥ ಮಾಡಿಗೊಂಡಿದ್ದರೆ ಒಳ್ಳೆದಿದ್ದತ್ತು.
ಮಡೆಸ್ನಾನ ನಿಷೇಧವೂ ಇದೇ ನಮುನೆ ಒಂದು ಆಚರಣೆಯ ನಿಷೇಧ ಆಗಿಹೋಕೋ ಹೇದು ಒಪ್ಪಣ್ಣಂಗೆ ಅನುಸುಲೆ ಸುರು ಆತು!
ಅಲ್ಲದೋ?
~
ಒಂದೊಪ್ಪ: ಅಸ್ಪೃಶ್ಯ ನಿವಾರಣೆಗೆ ಅಸ್ಪೃಶ್ಯವ ನಿಷೇಧ ಮಾಡೇಕು, ಅದರ ವೇಷವ ಅಲ್ಲ.

3 thoughts on “ನವರಾತ್ರಿಯ ಕೊರಗು ತಡೆಯದ್ದೆ ಪ್ರಾಣಬಿಟ್ಟ ಹೊನ್ನಪ್ಪುವಿನ ಸುದ್ದಿ..!

  1. ಈ ವಿಚಾರಕ್ಕೆ ಎನ್ನ ಸಹಮತ ಇಲ್ಲೆ. ನಾವು ಆತ್ಮವಿಮರ್ಶೆ ಮಾಡಿ ನೋಡುವ. ಬ್ರಾಹ್ಮಣರ ವೇಷ ಹಾಕಿ ಬೇಡಿದರೆ, ಸಿನೆಮಾಂಗಳಲ್ಲಿ ಪೆದ್ದುಪೆದ್ದಾಗಿ ತೋರಿಸಿದರೆ ನಮಗೆ ಕೋಪ ಬತ್ತಿಲ್ಲೆಯೋ. ಈಗ ಕೊರಗರೂ ವಿದ್ಯೆ ಕಲಿತ್ತಿದವು. ಕೊರಗ ವೇಷ ಹಾಕಿ ಬೇಡುವುದರ ನೋಡಿ ಅವಕ್ಕೂ ಮನಸ್ಸಿಂಗೆ ಬೇಜಾರಾಗದೋ. ಬೇರೆ ಧರ್ಮದವು ಕೊರಗರನ್ನೂ ಹೊಲೆಯರನ್ನೂ ಅವರ (ಪುರ್ಬು, ಮಾಪ್ಳೆ ಧರ್ಮಕ್ಕೆ) ಸೇರುಸಲೆ, ಅವರ ಮನಸ್ಸು ತಿರುಗುಸಲೆ ಇದೆಲ್ಲ ದಾರಿ ಆವುತ್ತು. ನಾವು ಇಂದ್ರಾಣ ಕಾಲಕ್ಕೆ ಯಾವುದು ಸರಿ ಹೇಳಿ ಆಲೋಚಿಸಿ ಸಂಪ್ರದಾಯಂಗಳ ಸ್ವೀಕಾರಮಾಡೆಕು.

  2. ವೇಷ ಮಾಡುವವು ಭಕ್ತಿಲಿ ಮಾಡುತ್ತರೆ ಅವಕ್ಕೆ ಅವಕಾಶ ಇರೆಕು. ಮದ್ಯ ಪಾನ ಮಾಡಿ ಕೊಣಿವ ಜನಕ್ಕೆ ಅವಕಾಶ ಇಪ್ಪಲಾಗ. ಇಲ್ಲಿ ಕೊರಗ ಹೇಳುವ ಹೆಸರು ಉಪಯೋಗ ಆದ್ದರಿಂದ ಈ ವೇಷಕ್ಕೆ ಅಡ್ಡಿ ಬಂತು ತೋರುತ್ತು. ಕಾಲ ಕ್ರಮಲ್ಲಿ ಕೆಲವು ಹೆಸರು ಉಪಯೋಗಿಸಲೇ ಆಗ ಹೇಳಿ ಬಂತು-ಬೇರೆ ಬೇರೆ ರಂಗಲ್ಲಿ ನಾವು ಈ ರೀತಿಯ ಕಾಣುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×