Oppanna.com

ನೇರಳೆ ಭಾವ ಕತೆ ಹೇಳುವಾಗ ಗಮನ ಇದ್ದಷ್ಟೂ ಸಾಲ..

ಬರದೋರು :   ಒಪ್ಪಣ್ಣ    on   13/02/2015    9 ಒಪ್ಪಂಗೊ

ಕೆಲವು ಜೆನ ಶುದ್ದಿ ಹೇಳುದು ಹೇದರೆ ಅದೊಂದು ಚಾಕಚಕ್ಯತೆ. ಇಪ್ಪದರ, ಇಲ್ಲದ್ದರ, ಆದ್ದದರ, ಆಗದ್ದರ – ಎಲ್ಲವನ್ನೂ ಸೇರ್ಸಿ ಚೆಂದ ಮಾಡಿ ಹೇಳ್ತದು – ಮಾಷ್ಟ್ರುಮಾವ° ಪಾಠ ಮಾಡಿದ ಹಾಂಗೆ – ಅದೇ ಒಂದು ಕಲೆ. ಎಷ್ಟು ಸಮೆಯ ಕಳುದರೂ ಆ ಕತೆಗೊ ಮರವಲಿಲ್ಲೆ ಇದಾ.
ನಮ್ಮ ಬೈಲಿನ ನೇರಳೆಭಾವ° ಕತೆ ಹೇಳ್ತದೂ ಹಾಂಗೇ.

ನೇರಳೆಭಾವನೇ ಚೆಂದ. ಭಾವಯ್ಯನ ಮಾತು ಇನ್ನೂ ಚೆಂದ. ಕತೆ ಹೇಳ್ತದು ಮತ್ತೂ ಚೆಂದ! ಚೆಂದರೆ ಹೇದರೆ ಹೇಂಗೆ?
ಅದೇ – ಹೇಳ್ತೆ, ಹೇಳ್ತೆ.

~

ಸಾರಡಿಪುಳ್ಳಿಯ ಮದುವೆ ಕಳುಶಿಕ್ಕಿ ಮರದಿನ ಮಡಿಕ್ಕೇರಿಗೆ ದಿಬ್ಬಾಣ ಹೆರಟಿದ್ದತ್ತು. ದೊಡ್ಡಜ್ಜನ ಮನೆಯ ಹತ್ತು ಪುಳ್ಯಕ್ಕಳೇ ಎಷ್ಟಕ್ಕೂ ಸಾಕು, ಅವು ಸಾಲದ್ದರೆ ಹೇದು ಸಾರಡಿಯ ಮತ್ತೆ ಹನ್ನೆರಡು ಪುಳ್ಯಕ್ಕೊ ಇದಿದ್ದವು ಆ ವೇನಿಲಿ. ಹರಟೆ ಕೇಳುಲೆ ಎಡಿಯದ್ದ ಅಜ್ಜಂದ್ರು ಮೆಸ್ತಂಗೆ ಕಾರಿಲಿ ಎದುರೆ ಹೋವುತ್ತರೂ, ತುಂಡು ಜವ್ವನಿಗರು ಪೂರಾ ದಿಬ್ಬಾಣದ ವೇನಿಲಿ ಹೋದ್ಸಿದಾ. ಸಾರಡಿ ಕುಂಞಿಪುಳ್ಳಿಯೂ ಆ ವೇನಿಲೇ ಇದ್ದತ್ತು.
ಸುರುವಿಲಿ ಎಲ್ಲ ಅಕ್ಕ°-ಅತ್ತಿಗೆಕ್ಕಳ ಒಟ್ಟಿಂಗೆ ಕುಶೀಲಿ ಗೌಜಿಲಿ ಇದ್ದರೂ, ಕೊಟ್ಯಾಡಿ ಕಳುದು ಪಂಜಿಗೆದ್ದೆ ತಿರ್ಗಾಸುಗೊ ಬಪ್ಪದ್ದೇ ಕೂಸು – ಮೋಡ ಹಿಡುದ ಹಾಂಗೆ ಕೂದುಗೊಂಡತ್ತು. ಎಲ್ಲೋರುದೇ ನೆಗೆಮಾಡ್ತರೂ ಅದರ ನೆಗೆ ಇಲ್ಲೆ, ಎಲ್ಲೋರುದೇ ಬೊಬ್ಬೆ ಹೊಡೆತ್ತರೂ ಅದರ ಬೊಬ್ಬೆ ಇಲ್ಲೆ. ಎಲ್ಲೋರುದೇ ಡೇನ್ಸು ಮಾಡ್ತರೂ ಅದರ ಡೇನ್ಸು ಇಲ್ಲೆ!! ಹೊಟ್ಟೆತೊಳಸುಲೆ ಸುರು ಆತೋ, ಕಾರ್ಲೆ ಬಂದ ಹಾಂಗಾತೋ, ತಲೆ ತಿರುಗಿತ್ತೋ, ಒರಕ್ಕು ತೂಗಿತ್ತೋ – ಉಮ್ಮಪ್ಪ. ಮತ್ತೆ ಅದು ಪುನಾ ರೀಚಾರ್ಜು ಆದ್ಸು ನೇರಳೆಬಾವನ ಕತೆಗಪ್ಪಗಳೇ.

ಜಾಲ್ಸೂರು ತಿರ್ಗಾಸಿಲಿ ಜಾಲ್ಸೂರಿನ ಹತ್ತರಾಣ ಜೆನ ಒಬ್ಬರು ಬರೆಕ್ಕಷ್ಟೆ ಹೇದು ವೇನು ಹತ್ತು ನಿಮಿಷ ನಿಂದತ್ತು. ಆ ಮನೆಯೋರಿಂಗೆ ಹೆರಟು ದಾಸನವೋ, ಗುಲಾಬಿಯೋ ಎಲ್ಲ ಬೇಕಾದ ಹಾಂಗೆ ಸೂಡಿ, ತೋಡು ದಾಂಟಿ ಮಾರ್ಗಲ್ಲೆ ಆಗಿ ಬೈಕ್ಕಿಲಿ ಬಪ್ಪಗ ತಡವಾತಿದಾ. ಅಷ್ಟೊತ್ತು ವೇನಿಲಿದ್ದೋರು ಒಂದರಿ ಪ್ರಕೃತಿ ನೋಡಿಗೊಂಡು ಬಂದವು. ಮತ್ತೆ ವೇನಿನ ಚಕ್ರ ಸುಳ್ಯದ ಹೊಡೆಂಗೆ ತಿರುಗಿತ್ತು. ಎಂತದೇ ಆದರೂ – ಸಾರಡಿ ಕುಂಞಿಪುಳ್ಳಿಯ ಸ್ವರವೇ ಹಂದಿತ್ತಿಲ್ಲೆ.

ನೇರಳೆಭಾವ° ಕತೆ ಹೇಳೇಕು – ಹೇದು ಕೆಲವು ಜೆನ ಕೇಳಿಗೊಂಡವು, ಮದಲೇ ಕೇಳಿ ರುಚಿ ಗೊಂತಿಪ್ಪವು.
ನೇರಳೆ ಬಾವನ ಕತೆಗೊ ಸುರು ಆತು.
ಎಲ್ಲ ಕತೆಗಳ ಹಾಂಗೆ ಸುಮ್ಮನೆ ತಲೆ ಆಡುಸುಲಾಗ, ಪ್ರತೀ ವಾಕ್ಯಕ್ಕೊಂದರಿ ಹ್ಮೂ ಹೇಳೇಕು,
ಎಡಕ್ಕಿಲಿ ಕೇಳ್ತ ಪ್ರಶ್ನೆಗೊಕ್ಕೆ ಉತ್ತರ ಕೊಟ್ಟುಗೊಳೆಕ್ಕು – ಹೇದು ಸುರುವಿಂಗೇ ಹೇಳಿತ್ತಿದ್ದನಲ್ಲದೋ – ಹಾಂಗೆ ಮಕ್ಕೊ ಎಲ್ಲ ಸರ್ತಕೆ ಕೂದುಗೊಂಡವು.

~

ಒಂದೂರಿಲಿ ಒಬ್ಬ° ಇತ್ತಿದ್ದನಾಡ.
ಅವನ ಹತ್ತರೆ ಒಂದು ಹೆಲಿಕಾಪ್ಟರು ಇದ್ದತ್ತಾಡ.
ಆ ಹೆಲಿಕಾಪ್ಟರಿಲಿ ಎರಡು ಇಂಜಿನು ಇದ್ದತ್ತಾಡ.
ಒಂದರಿ ಅವ ಹೆಲಿಕಾಪ್ಟರಿಲಿ ಹೋಗಿಂಡಿತ್ತನಾಡ.
ಹಾಂಗೆ ಹೋಗಿಂಡು ಇಪ್ಪಗ ಒಂದು ಇಂಜಿನು ಹಾಳಾತಡ.

ಇಷ್ಟು ಹೊತ್ತು ಹೂಂ ಹೂಂ ಹೇಳಿಂಡಿದ್ದ ಮಕ್ಕೊಗೆ ಈಗ ಒಂದು ಪ್ರಶ್ನೆ ಅತ್ಲಾಗಿ –
ಈಗ ಎಂತ ಮಾಡಿಕ್ಕು ಆ ಜೆನ? – ಹೇದು.

ಉಶಾರಿ ಕೂಚಕ್ಕಂಗೊ ರಪಕ್ಕ ಉತ್ತರ ಹೇಳಿದವು ಇನ್ನೊಂದು ಇಂಜಿನು ಓನು ಮಾಡಿತ್ತು – ಹೇದು.
ಹಾಂ, ಗಟ್ಟಿಗೆತ್ತೀ, ಗಟ್ಟಿಗೆತ್ತೀ – ಹೇದು ಉತ್ತರ ಹೇಳಿದೋರ ಉಶಾರಿ ಮಾಡಿ ಬಾವ° ಕತೆ ಮುಂದುವರುಶಿದ°.

ಉತ್ತರ ಹೇಳಿ ಉಶಾರಿ ಆದೋರಿಂಗೂ, ಇನ್ನಾಣ ಸರ್ತಿ ಪ್ರಶ್ನೆ ಕೇಳಿರೆ ಉಶಾರಿ ಆಯೇಕು ಹೇದು ಅನುಸಿದೋರಿಂಗೂ – ಎಲ್ಲೋರಿಂಗೂ ಆಸಕ್ತಿ ಎಳಗಿತ್ತು.

~

ಹಾಂಗೆ, ಇನ್ನೊಂದು ಇಂಜಿನು ಓನು ಮಾಡಿತ್ತು.
ಆ ಇಂಜಿನಿಲಿ ಹೆಲಿಕಾಪ್ಟರು ಹಾರಿತ್ತು.
ಆದರೆ, ಆ ಹಳೆ ಇಂಜಿನಿನ ಅಂತೇ ಹೊರುದೆಂತಕೆ ಹೇದು – ಅದರ ಕಳಚ್ಚಿ ಕೆಳ ಹಾಕಿತ್ತು.
ಮಕ್ಕೊ ಹ್ಮ್ ಹ್ಮ್ – ಹೇಳಿಗೊಂಡೇ ಇತ್ತಿದ್ದವು.
ಇನ್ನು ಅದರತ್ರೆ ಎಷ್ಟು ಇಂಜಿನು ಇದ್ದೂ – ಕೇಟ, “ಒಂದೂ” ಹೇದವು ಮಕ್ಕೊ.

~

ಒಂದು ಕತೆ ಅಲ್ಲಿಗೆ ಮುಗಾತು. ಇನ್ನೊಂದು ಕುಂಞಿ ಕತೆ ಸುರು ಆತು. ಇದೂ ಹಾಂಗೇ, ಹ್ಮ್ ಹ್ಮ್ – ಹೇಳ್ತ ನಮುನೆದು.
ಒಂದು ಜೆನ ಮಾರ್ಗಲ್ಲೆ ಹೋಗಿಂಡಿತ್ತಾಡ.
ಒಂದು ಕಳ್ಳ° ಹಿಂದಂದ ಬಂದು ಕಳ್ಳುಲೆ ನೋಡಿತ್ತಾಡ.
ಇದರ ಕೈಲಿ ಇದ್ದ ಪೈಶೆಬೇಗಿನ ಎಳದತ್ತಡ.
ಎಳದಿಕ್ಕಿ ಓಡಿತ್ತಾಡ.
ಓಡ್ತ ಕಳ್ಳನ ಹಿಡಿಯಲೆ ಈ ಜೆನವೂ ಓಡಿತ್ತಾಡ.
ಅಲ್ಲೇ ಬಿದ್ದಿದ್ದ ಬಡಿಗೆ ಒಂದರ ಕೈಲಿ ಹಿಡ್ಕೊಂಡತ್ತಡ.
ಓಡುಸಿತ್ತಾಡ.
ಕಳ್ಳ° ಬಪ್ಪದು, ಬೇಗಿನ ಎಳವದು, ಓಡುದು, ಓಡುಸುದು – ಇದೆಲ್ಲವೂ ನಟನೆ ಮಾಡಿ ತೋರ್ಸಿರೆ ಮಕ್ಕೊಗೆ ಕುಷಿ ಆಗದ್ದೆ ಇಕ್ಕೋ? ಭಾರೀ ಗಮ್ಮತ್ತಿಲಿ ಹ್ಮ್ ಹ್ಮ್ ಹೇಳಿಗೊಂಡು ಕೂದವು.
ಕಳ್ಳನ ಓಡುಸಿತ್ತಾಡ.
ಈ ಜೆನ ಬಡಿಗೆ ಹಿಡ್ಕೊಂಡು ಓಡುದು.
ಕಳ್ಳ° ಎದುರಂದ ಬೇಗು ಹಿಡ್ಕೊಂಡು ಓಡುದು.
ಅದು ಓಡಿತ್ತು.
ಇದು ಓಡುಸಿತ್ತು.
ಓಡಿಂಡು ಹೋದ ಹಾಂಗೇ, ಒಂದು ರೈಲುಹಳಿ ಸಿಕ್ಕಿತ್ತು.
ಕಳ್ಳ° ಓಡಿಗೊಂಡು ಹೋದ ಹಾಂಗೇ – ರೈಲು ಬಪ್ಪದೂ ಕಂಡತ್ತು.
ರೈಲು ಕಳ್ಳಂಗೆ ಕಂಡ್ರೂ –ಅದು ಹಳಿ ದಾಂಟ್ಳೆ ಹಾರಿತ್ತು.
ರೈಲು ಎತ್ತುವಾಗ – ಅಪ್ಪೋ ಅಲ್ಲದೋ ಹೇಳಿ ಆಚ ಹೊಡೆಂಗೆ ಎತ್ತಿಗೊಂಡತ್ತು.
ಬೇಗು ಕದ್ದ ಕಳ್ಳ° ರೈಲಿನ ಆಚಹೊಡೆಲಿ.
ಬೇಗಿನ ವಾನರ ಈ ಜೆನ ರೈಲಿನ ಈಚ ಹೊಡೆಲಿ!

ಗಡ ಗಡ ಚುಕುಬುಕು ಚುಕುಬುಕು – ಇಬ್ರ ಮಧ್ಯೆ ಇಪ್ಪ ಹಳಿಲಿ ರೈಲು ದಾಂಟಿತ್ತು.
ರೈಲು ಹೋಪನ್ನಾರ ಈ ಜೆನಕ್ಕೆ ಹೋಪಲೆ ಗೊಂತಿಲ್ಲೆ.
ರೈಲು ಹೋದ ಮತ್ತೆ ಈ ಜೆನ ನೋಡಿತ್ತು – ಆಚ ಹೊಡೆಲಿ ಬೇಗು ಕದ್ದ ಕಳ್ಳ ಸತ್ತು ಬಿದ್ದಿದು!!

ಎರಡೂ ಕಣ್ಣು ದೊಡ್ಡಮಾಡಿ ನೇರಳೆಬಾವ° ಎಲ್ಲ ಪುಳ್ಯಕ್ಕಳನ್ನೂ ಒಂದರಿ ನೋಡಿದ°.
ಮತ್ತೆ ಪ್ರಶ್ನೆ ಕೇಳಿದ°,
ಈಗ ಹೇಳಿ – ಆ ಕಳ್ಳ ಸತ್ತದು ಹೇಂಗೆ ಆಗಿಕ್ಕು? –ಹೇದು.
ರೈಲಿಂಗೆ ತಾಗಿದ್ದು – ಹೇಳಿತ್ತು ಆಗ ಗಟ್ಟಿಗೆತ್ತಿ ಆದ ನೀಲಿಅಂಗಿಯ ಕೂಚಕ್ಕ°.
ರೈಲಿಂಗೆ ತಾಗಿದ್ದಿಲ್ಲೇ – ಆಚೊಡೆಂಗೆ ಹಾರಿ ದಾಂಟಿದ್ದು – ಹೇಳಿದ ನೇರಳೆ ಬಾವ°.
ಅಂಬಗ, ರೈಲಿಲಿ ಇದ್ದೋರು ಆರಾರು ಬಡುದಿಕ್ಕು – ಹೇಳಿತ್ತು ರಜಾ ದೊಡ್ಡ, ನೀಲಿಅಂಗಿ ಕೂಚಕ್ಕ°.
ಇಲ್ಲೆ, ಅದು ಗೂಡ್ಸು ರೈಲು, ಅದರೊಳ ಆರೂ ಇದ್ದಿದ್ದವಿಲ್ಲೆ – ಹೇಯಿದ ನೇರಳೆ ಭಾವ°.
ಅಂಬಗ, ಆಚೊಡೆಂದ ಎರಡ್ಣೇ ಹಳಿಲಿ ರೈಲು ಬಂದುಗೊಂಡಿತ್ತಾಯಿಕ್ಕು – ಹೇಳಿತ್ತು ಸಾರಡಿ ಸಣ್ಣಪುಳ್ಳಿ!!

ಅಪ್ಪು, ಆಗಂದ ಅದಕ್ಕೆ ತಲೆತಿರುಗುದು ಎಂತದೋ ಇತ್ತಲ್ಲದಾ, ಅದೆಲ್ಲ ಈ ನೇರಳೆಭಾವನ ಕತೆಲಿ ಹಾರಿದ್ದು. ಕತೆ ಕೇಳುಲೆ ಒಳ್ಳೆ ಆಸಕ್ತಿ ಬಂದು ಎಳಗಿತ್ತಿದ್ದು. ಹಾಂಗೆ – ಇವ ಕೇಳಿದ ಪ್ರಶ್ನೀ ತನ್ನಿಂತಾನಾಗಿಯೇ ಉತ್ತರ ಹೇಳಿತ್ತು ಜೋರಾಗಿ.

ಇಲ್ಲೆ, ಅಲ್ಲಿ ಒಂದೇ ಹಳಿ ಇದ್ದದು – ಹೇಳಿದ, ನೇರಳೆಭಾವ°.

ರೈಲು ಗೇಟಿನ ಪೋಲೀಸು ಜೆಪ್ಪಿತ್ತೋ ಅಂಬಗ? – ಕೇಟ ಕುಂಟಾಂಗಿಲ ಭಾವ°. ಅವಂಗೆ ಬೈಕ್ಕಿಲಿ ಹೋಗಿಹೋಗಿ ಪೋಲೀಸು ಜೆಪ್ಪುದೇ ಗೊಂತಿದಾ! ಪಾಪ.
ಅಲ್ಲ, ಅದೂ ಅಲ್ಲ –ಹೇದಾತು.

ಇಷ್ಟೆಲ್ಲ ಪ್ರಶ್ನೋತ್ತರ ಅಪ್ಪಾಗ ಸಂಪಾಜೆ ದಾಂಟಿ ಗಾಟಿ ಹತ್ತುಲೆ ಸುರು ಆಗಿತ್ತು.

ಆರಿಂಗೂ ಗೊಂತಿಲ್ಲೆಯಾ ಅಂಬಗ? ಉತ್ತರ ಆನೇ ಹೇಳೇಕೋ  – ಹೇದು ಮೂರುಮೂರು ಸರ್ತಿ ಕೇಳಿಕ್ಕಿ, ಮತ್ತೆ ಉತ್ತರ ಹೇಯಿದ° – “ಕಳ್ಳನ ತಲೆಮೇಗೆ ಆಗಾಣ ಹೆಲಿಕಾಪ್ಟರಿನ ಇಂಜಿನು ಬಿದ್ದದು” – ಹೇದು.
ಮಕ್ಕೊ, ದೊಡ್ಡಮಕ್ಕೊ, ಕುಂಞಿಮಕ್ಕೊ, ದೊಡ್ಡೋರಾದಿಯಾಗಿ ಎಲ್ಲೋರಿಂಗೂ ದೊಡಾ ನೆಗೆ ಬಂತು. ಎಲ್ಲೋರು ನೆಗೆ ಮಾಡಿದರ ನೇರಳೆಬಾವ° ನೋಡಿದ. ಮದಿಮ್ಮಾಳೂ ನೆಗೆಮಾಡಿತ್ತು. ಮದಿಮ್ಮಾಳ ನೆಗೆಯ ಮದುಮ್ಮಾಯ ಕದ್ದೇ ನೋಡಿದ°.
ಗಲಗಲಗಲ ಅಪ್ಪಾಗ ದಿಬ್ಬಣ ರೈಸಿತ್ತು.

~
ಕೆಲವು ಜೆನ ಕತೆ ಹೇಳುವಾಗ ಎಲ್ಲೆಲ್ಲಿಂದಲೋ ಎಲ್ಲಿಗೋ ಸಂಕೊಲೆಗೊ ಇರ್ತು.
ಕೆಲವು ಜೆನಕ್ಕೆ ಸಂಕೊಲೆ ಮಡಗಿ ಕತೆ ಹೇಳುಲೆ ಇಷ್ಟ. ಕೆಲವು ಜೆನಕ್ಕೆ ಸಂಕೊಲೆ ಬಿಡುಸಿ ಶುದ್ದಿ ಹೇಳುದು ಇಷ್ಟ.
ನಿಂಗೊ ಹೇಂಗೆ ಶುದ್ದಿ ಹೇಳುಸ್ಸು? ಬೈಲಿಂಗೆ ತಿಳುಶಿಕೊಡಿ.
ನೇರಳೆಭಾವನ ಹತ್ತರೆ ಹೀಂಗಿರ್ತ ಹಲವು ಶುದ್ದಿಗೊ ಇದ್ದೋ ಏನೋ, ಒಂದೊಂದಾಗಿ ಬೈಲಿಂಗೆ ಹೇಳುಗೋ ಏನೋ.
ಗೊಂತಿಲ್ಲೆ, ಇನ್ನಾಣ ಸರ್ತಿ ಸಿಕ್ಕಿಪ್ಪಗ ಕೇಳಿನೋಡ್ತೆ. ಆಗದೋ?

~
ಒಂದೊಪ್ಪ: ಆಸಕ್ತಿಯೂ, ಗಮನವೂ ಇದ್ದರೆ ಮಾಂತ್ರ ಕತೆ ಎಳಗ್ಗು. ಅಲ್ಲದೋ?

9 thoughts on “ನೇರಳೆ ಭಾವ ಕತೆ ಹೇಳುವಾಗ ಗಮನ ಇದ್ದಷ್ಟೂ ಸಾಲ..

  1. ಒಪ್ಪಣ್ಣ,
    ಒಂದೊಪ್ಪಲ್ಲಿ ಹೇಳಿದ ಹಾಂಗೆ ಆಸಕ್ತಿಯೂ, ಗಮನವೂ ಇದ್ದರೆ ಮಾಂತ್ರ ಕತೆ ಮನಸ್ಸಿಲಿ ಅಕ್ಕು. ನೇರಳೆ ಭಾವಂಗೆ ಮಕ್ಕೊಗೆ ಪಾಠ ಮಾಡಿ ಮಾಡಿ ಮಕ್ಕಳ ಮನಸ್ಸು ಎಳವಲೆ ಅರಡಿಗಾಗಿ ಕತೆ ಲಾಯ್ಕಲ್ಲಿ ಬಂತದಾ!!! ಶೋಕಾಯಿದು.
    ನೇರಳೆ ಭಾವ ಪುರುಸೋತ್ತು ಮಾಡಿ ಬೈಲಿಂಗೆ ಶುದ್ದಿ ಹೇಳಲಿ.

    ಒಪ್ಪಣ್ಣ,
    ಈ ವಾರದ ಶುದ್ದಿ ಬರೇ ನೇರಂಪೋಕ್ಕಿಂದು ಹೇಳಿ ಹೇಳಿ ಹಗುರ ಮಾಡ್ಲೆ ಎಡಿಯ. ನಮ್ಮ ಬದುಕ್ಕಿಲಿ ಇಪ್ಪದೇ ಹಾಂಗಲ್ಲದಾ?
    ಹೆಲಿಕಾಪ್ಟರಿನ ಇಂಜಿನು ಆಕಾಶಂದ ಯಾವಾಗ ಬೀಳುಲೆ ಸುರು ಆತು, ಅದು ಯಾವಾಗ ಎಲ್ಲಿ ಬಿದ್ದತ್ತು? ಹೇಳಿದ್ದು ಕತೆಯ ರೂಪಲ್ಲಿ ಆದರೂ, ಜೀವನಲ್ಲಿ ನೆಡವ ಘಟನೆಗಳ ನೋಡುವಾಗ ಯಾವಾಗಲೋ ನೆಡದ್ದದು ಕೆಲವು ಸರ್ತಿ ಎದುರು ಬಂದು ನಿಲ್ಲುತ್ತಿಲ್ಲೆಯಾ? ಅದು ಒಳ್ಳೆದು ಆದಿಕ್ಕು, ಕೆಟ್ಟದೂ ಆದಿಕ್ಕು. ನಾವು ಒಳ್ಳೆ ಕ್ಷಣಂಗಳಲ್ಲಿ ಇಪ್ಪಗ ಕೆಲವು ಸರ್ತಿ ಹಳೆ ಕೆಟ್ಟ ಘಟನೆಗ ನಮ್ಮ ಎದುರು ಬಂದು ನಿಂಗು. ಎಂತದೂ ಸರಿ ಆವುತ್ತಾ ಇಲ್ಲೆ ಹೇಳಿ ಕಾಂಬ ಹೊತ್ತಿಂಗೆ ಏನೋ ಆಗಿ ಒಂದರಿಯಂಗೆ ಎಲ್ಲ ಸರಿ ಅಪ್ಪದೂ ಇದ್ದು.
    ಕಷ್ಟ ಬಂದಪ್ಪಗ ನಿವೃತ್ತಿ ಅಪ್ಪದು ಎಷ್ಟು ಸುಖ ಕೊಡ್ತೋ, ಸುಖಲ್ಲಿದ್ದು ಹೇಳಿ ಗ್ರೇಶುವಾಗ ಒಂದರಿಯಂಗೇ ಅಹಿತ ವ್ಯಕ್ತಿಗೊ, ಅಹಿತಕರ ಮಾತುಗೊ, ಅಹಿತಕರ ವಾತಾವರಣ ಬಂದರೆ ಅಷ್ಟೇ ಹಿಂಸೆ ಆವುತ್ತು. ಕಳ್ಳನ ತಲೆಗೆ ಇಂಜಿನು ಬಿದ್ದು ಅದು ಸತ್ತದು ಗುಣ ಕೊಟ್ಟತ್ತು. ಹಾಂಗೆ ಜೀವನಲ್ಲಿಯೂ ಕೆಟ್ಟದು ಕಳದು ಹೋಪ ಹಾಂಗೇ ಆಗಲಿ ಎಲ್ಲೋರಿಂಗೂ ಹೇಳಿ ಹಾರಯಿಕೆ.

  2. ಇನ್ನು ದಿಬ್ಬಾಣ ಹೋಪ ಸಂದರ್ಭಲ್ಲಿ ನೇರಳೆ ಭಾವಂಗೊಂದು ಕತೆ ಹೇಳ್ತ ಸೀಟು ರಿಸರ್ವ್ ಮಾಡ್ಳೇ ಬೇಕು.

  3. ಶ್ಶೆಲ! ನೆರೆಳೆ ಬಾವನ ಕತೆಲಿ. ಎಡಕ್ಕಿಲಿ ಅತ್ಲಾಗಿ ಪ್ರಶ್ನೆ ಕೇಳ್ವಾಂಗೆ ಇಲ್ಲೆ ಎಲ್ಯೂ !! – ಅದೇ ಆಯಿಕ್ಕು ಕತೆ ಹೇಳ್ತ ಚೆಂದ ಹೇದರೆ ಅಲ್ಲದೋ!. ಭಲೇ! ಭಲೇ !!

  4. ನೇರಳೆ ಭಾವಂಗೆ ರಾಮಜ್ಜನ ಕೋಲೇಜಿಲ್ಲಿ ಕಂಪ್ಯೂಟರು ಗುರುಟುತ್ತ ಮಕ್ಕೊಗೆ ಪಾಠದೊಟ್ಟಿಂಗೆ ಕತೆ ಹೇಳಿ ಒಳ್ಳೆತ ಸರ್ವೀಸು ಇದ್ದಿದಾ.. ಹೀಂಗೆ ಕತೆಕಟ್ಟಿ ಹೇಳ್ಳೆ ಎಲ್ಲೋರಿಂಗು ಅರಡಿಯ.

    1. ಓ ಓ….. ಸುಭಗರು!!!! …. ಬೈಲಿಂಗೆ ಬಾರೀ ಅಪ್ರೂಪ… ಎಂತ ಕತೆ?

      1. ಓ ಶ್ಯಾಮಣ್ಣೋ.. ನಮಸ್ಕಾರ..!
        ನಾವು ಇಲ್ಲೇ ಹತ್ತರೆ ಸುಳುಕ್ಕೊಂಡು ಇತ್ತು ಇಷ್ಟು ದಿನ. ಒಳ ಬಪ್ಪಲೆ ರಜಾ ಸಮಸ್ಯೆ ಇತ್ತು. ಇನ್ನು ತೊಂದರೆ ಇಲ್ಲೆ; ನಾವು ಯೇವಗಳೂ ಇಲ್ಲೇ ಇರ್ತು!

  5. (ಕತೆ ಹೇಳುವಾಗ ಎಲ್ಲೆಲ್ಲಿಂದಲೋ ಎಲ್ಲಿಗೋ ಸಂಕೊಲೆಗೊ ಇರ್ತು)
    ಅದಕ್ಕೆ “ಚೈನು” ಹೇಳಿ ಹೆಸರು ಮಡಿಗಿರಾತು… ಅಲ್ಲದೋ? …. 🙂 🙂 🙂

    1. ಆ ಕಳ್ಳ ಸತ್ತಪ್ಪಗ ಇನ್ನು ಆ ಸಬ್ಬಿನಿಸ್ಪೇಟ ಮರಿಯಪ್ಪ ಫ಼ೋರ್ಟ್ವೆಂಟಿಯ ಕಳುಗಿ ಮಹಜರು ಎಲ್ಲ ಶುರು ಮಾಡಿಕ್ಕುಗೋ ಹೇಳಿ ಎನಗೆ ತಲೆಬೇಶಿ ಆತು ಶಾಮಣ್ಣ.

      1. ತೆಕ್ಕುಂಜ ಭಾವ… ಆ ಮರಿಯಪ್ಪ ಈಗ ಇಲ್ಲಿಲ್ಲೆ ಬಿಡಿ…. ಯಾವುದೋ ನೀರಿಲ್ಲದ್ದ ಜಾಗೆಗೆ ವರ್ಗ ಆದಿಕ್ಕು… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×