ನ್ಯಾಯಾಧಿಕರಣಲ್ಲಿ ಜಡ್ಜನೇ ದೇವರು..

ಕಳುದವಾರ ಅಯೋಧ್ಯೆಯ ತೀರ್ಪು ಬರೆಕ್ಕಾದ್ಸು ಬಯಿಂದಿಲ್ಲೆ.
ಇನ್ನು ವಾಯಿದೆಮಾಡಿಗೊಂಡು ಕೂಪ ಹಾಂಗಿಲ್ಲೆ, ಎಲ್ಲೋರನ್ನೂ ಕಾವಕುದುಕ್ಕ° ಮಾಡ್ತ ಹಾಂಗಿಲ್ಲೆ.
ಕೊಡುದು ಕೊಡ್ಳೇಬೇಕು – ಕೊಡದ್ದೆ ಇಪ್ಪಲಾಗ ಹೇಳಿ ಸುಪ್ರೀಮುಕೋರ್ಟು ಹೇಳಿತ್ತಡ.
ಮೂರು ಜೆನ ಜಡ್ಜಿಗಳಲ್ಲಿ ಒಂದಕ್ಕೆ ರಿಠೇರ್ಡು ಆವುತ್ತಡ.
ಅದರಿಂದ ಮದಲೇ ತೀರ್ಪು ಆಯಿದಿಲ್ಲೇ ಹೇಳಿ ಆದರೆ, ಮತ್ತೆ ಇನ್ನಾಣ ಜೆನಕ್ಕ ವಿಶಯ ಅರ್ತ ಅಪ್ಪಲೇ ಹತ್ತೊರಿಶ ಬೇಕಕ್ಕು.
ಒಟ್ಟಾರೆ ಕಷ್ಟ! ಯೇವತ್ತು ಬತ್ತೋ – ಹೇಂಗೆ ಬತ್ತೋ…!
ತ್ರೇತಲ್ಲಿ ವನವಾಸ ಮಾಡಿದ ರಾಮಂಗೆ ಕಲಿಯುಗಲ್ಲಿ ಅಜ್ಞಾತವಾಸ – ಹೇಳಿ ರಘುಬಾವ° ಹೇಳುಗು.
ವನವಾಸ ಆದರೂ ಇಂತಿಷ್ಟು ಒರಿಶ ಹೇಳಿ ನಿಗಂಟಿತ್ತು, ಆದರೆ ಇದು ಹಾಂಗಲ್ಲ!
ಎಷ್ಟು ದಿನ ಅಜ್ಞಾತ ಅವಂಗೇ ಗೊಂತು.
~
ಇದರೆಡಕ್ಕಿಲಿ ಜೋಗಿಬೈಲು ಭಾವನಲ್ಲಿ ಗೆಣವತಿಹೋಮ.
ಬಾವನೇ ಹೇಳಿಕೆ ಮಾಡಿದ್ದ° – ಅವನ ಜನ್ಮನಕ್ಷತ್ರಕ್ಕೆ ಅನುಸಾರವಾಗಿ ಮಾಡ್ತದಡ, ಅವನೇ ಮಾಡುದು.
ಅಪ್ಪು- ಅವಂಗೆ ಮಂತ್ರವೂ ಅರಡಿಗು. ಅವ್ವವ್ವೇ ಮಾಡಿಗೊಂಡ್ರೆ ಎಷ್ಟು ಒಳ್ಳೆದು – ಅಲ್ಲದೋ?!

ನವಗೂ ಆ ದಿನಕ್ಕೆ ಬೇರೆ ಎಂತೂ ಕಡಕಟ್ಟು ಇತ್ತಿಲ್ಲೆ, ಹಾಂಗಾಗಿ ಅಲ್ಲಿಗೇ ಹೋಪದೋ ಗ್ರೇಶಿ ಹೆರಟಾತು.
ಉದೆಕಾಲ ಎದ್ದು ಶ್ರದ್ಧೇಲಿ ಹೂಗು ಕೊಯಿದು, ಮಂಡ್ಳ ಬರದು, ಹೋಮಕ್ಕಿಪ್ಪದರ ಜೋಡುಸಿಗೊಂಡು ಹತ್ತು ಗಂಟೆ ಹೊತ್ತಿಂಗೆ ಪಟ್ಟೆ ಸುತ್ತಿಗೊಂಡು ಇತ್ತಿದ್ದ°, ಬಾವ° – ಒಪ್ಪಣ್ಣ ಎತ್ತುವಗ.
ಆಸರಿಂಗೆ ಕೇಳಿದ°, ಕೂಡ್ಳೇ ಹೋಮ ಸುರುಮಾಡ್ಳೆ ಕೂದೊಂಡ°.
ಆ ದಿನ ಜೆನ ಇದ್ದೋರು ಕಮ್ಮಿಯೇ, ಮಾಷ್ಟ್ರುಮಾವ° ಇತ್ತಿದ್ದವು, ಹೋಮ ಸುರು ಅಪ್ಪ ಹೊತ್ತಿಂಗೆ ಮಾಟೆಡ್ಕಮಾವಂದೇ ಬಂದು ಸೇರಿಗೊಂಡವು.
~
ಬಾವಂಗೆ ಹೋಮ ಸುರುಮಾಡುದೇ ಕೆಲಸ, ಒಳುದೋರಿಂಗೆ? – ಶುದ್ದಿ ಮಾತಾಡುದೇ ಕೆಲಸ. 🙂
ಹಾಂಗೆ ಶುದ್ದಿ ಮಾತಾಡ್ಳೆ ಸುರು ಮಾಡಿ ಆತು.
ಒಪ್ಪಣ್ಣ ಎತ್ತುವಗಳೇ ಮಾಷ್ಟ್ರುಮಾವಂದೇ, ಜೋಗಿಬೈಲು ಮಾವಂದೇ ಮಾತುಕತೆ ಸುರು ಮಾಡಿತ್ತಿದ್ದವು.
ಮದ್ದುಬಿಡುದೋ, ಆಳುಗೊ ಇಲ್ಲದ್ದೆಅಪ್ಪದೋ, ಇದೆಲ್ಲ ಮಾತಾಡಿಗೊಂಡು ಇತ್ತವು – ಒಪ್ಪಣ್ಣ ಎತ್ತಿದ ಕೂಡ್ಳೇ ಒಂದರಿ ನಿಂದತ್ತು.
ಅಯೋಧ್ಯೆ ತೀರ್ಪು ಮುಂದೆ ಹೋದ ಲೆಕ್ಕಲ್ಲಿ ಎಂತದೋ ಮಾತುಕತೆ ಸುರು ಆಗಿತ್ತಷ್ಟೆ.
ಜೋಗಿಬಯಿಲುಮಾವ°, ಮಾಷ್ಟ್ರುಮಾವ° ಮಾತಾಡುವಗ ನಾವು ಸುಮ್ಮನೆ ಕೂದಂಡತ್ತು.
ಹೋಮದ ಆರಂಭದ ಪೂಜೆ ಆವುತ್ತಾ ಇತ್ತು.
ಆಸರಿಂಗೆ ಬಂತು. ಅತ್ತೆ ತಂದು ಕೊಟ್ಟದು.
ಅತ್ತೆ ಬಪ್ಪಗ ಮಾವ ಮಾತಾಡವು, ಮಾವ° ಮಾತು ನಿಲ್ಲುಸಿರೆ ಮಾಷ್ಟ್ರುಮಾವಂದೇ ಮಾತಾಡವು – ಹಾಂಗಾಗಿ ಒಂದರಿ ನಿಶ್ಶಬ್ದ.
ಅತ್ತೆಯಷ್ಟೇ ಕಡ್ಪಚಾಯ, ಏನುಒಳ್ಳೆದು ಕೇಳಿದವು.
~
ಚಾಯ ಕುಡಿವಲಪ್ಪಗ ಪುನಾ ಮಾತುಕತೆ ಸುರು ಆತು.

ಅಯೋಧ್ಯೆ ಗಲಾಟೆ ಅಂದು ಇದ್ದದು, ಅಲ್ಲಿ ರಾಮನ ಮೂರ್ತಿ ಮಡಗಿದ್ದು, ಅದರಿಂದ ಮತ್ತೆ ಜಗಳ ಜೋರಾದ್ದು, ಅದಕ್ಕೆ ಪೂರಕವಾಗಿ ಅಡ್ವಾಣಿಅಜ್ಜ° ರತಯಾತ್ರೆ ಮಾಡಿದ್ದು, ಅದರಿಂದಾಗಿ ಜೆನಂಗೊಕ್ಕೆ ನಂಬಿಕೆಬಂದದು, ತೊಂಬತ್ತೆರಡರಲ್ಲಿ ಪಳ್ಳಿ ಹೊಡಿಮಾಡಿದ್ದು – ಎಲ್ಲವುದೇ ಮಾತಾಡಿಗೊಂಡವು.
ತೊಂಬತ್ತೆರಡರ ಜಗಳಕ್ಕಪ್ಪಗ ಜೋಗಿಬೈಲು ಉಪ್ನಯನಕ್ಕೆ ಕಷ್ಟ ಆಯಿದಡ.
ಉಪ್ನಯನ ಎಲ್ಲ ನಿಗಂಟು ಮಾಡಿ ಆಯಿದು, ಜಗಳ ಸುರು ಆಯಿದು. ಬಟ್ಟಮಾವಂಗೂ, ಸೋದರಮಾವಂಗೂ ಬಾರದ್ದೆ ನಿವುರ್ತಿ ಇಲ್ಲೆ, ಅಡಿಗೆಯೋರತ್ತರೆ ಜೆನ ಅಂದಾಜಿ ಹೇಳುಲೆ ಪೋಕಿಲ್ಲೆ.
ಒಟ್ಟಾರೆ ಕಷ್ಟ ಆಗಿತ್ತು ಹೇಳಿಗೊಂಡು ಮಾವ° ನೆಗೆಮಾಡಿದವು.
ಅಂದು ಬೇಜಾರ ಆದ್ದರ ಗ್ರೇಶಿರೆ ಈಗ ನೆಗೆ ಬತ್ತಡ, ಈಗ ನೆಗೆಮಾಡಿದ್ದರ ಗ್ರೇಷಿರೆ ಮುಂದೆ ಬೇಜಾರಾವುತ್ತಡ, ಅಲ್ಲದೋ?
ಹಾಂಗೆ ಅಂದ್ರಾಣ ತಲೆಬೆಶಿ, ಬೇಜಾರಂಗಳ ಗ್ರೇಶಿ ಜೋಗಿಬೈಲು ಮಾವ° ನೆಗೆಮಾಡಿದವು.
ಮಾವಂಗೆ ನೆಗೆಬಂದದರ ನೋಡಿ ಹೋಮದ ಬುಡಲ್ಲಿ ಕೂದ ಬಾವಂಗೂ ನೆಗೆಬಂತಿದಾ!
ಉಪ್ನಯನದ ಮಾಣಿ ಹೋಮದಬುಡಲ್ಲಿ – ಆ ಮೂರ್ತ ಹಿಡುದ್ದು ಆ ಮಾಣಿಗೆ – ಹೇಳಿ ಅನುಸಿ ಹೋತು ಒಪ್ಪಣ್ಣಂಗೆ.
~
ಮಾಟೆಡ್ಕಮಾವ ಬಂದೇ ಬಿಟ್ಟವು.
ನೆಡುನೆತ್ತಿಯ ಒರೆಂಗೂ ಅವರ ಮೋರೆಯೇ! ಅಲ್ಲಿಂದ ಮತ್ತೆ ತಲೆಕಸವು ಸುರು.
ಬೆಗರಿರೆ ಉದ್ದುವಗಳೂ ಮೋರೆ ಇಡೀ ಉದ್ದುಗು – ನೆತ್ತಿ ಒರೆಂಗೆ – ಹಾಕಿದ ಗಂಧದ ಬೊಟ್ಟು ಹೋಗದ್ದ ಹಾಂಗೆ.
ಹಾಂಗೆ ಬೆಗರು ಉದ್ದಿಗೊಂಡೇ ಬಂದು ಕುರುಶಿಲಿ ಕೂದುಗೊಂಡವು.
ಒಂದರಿ ಉದಾಸ್ನ ಮಾಡಿದೆ ಆನು, ನೀನು ಉದಿಯಪ್ಪಗ ಪೋನುಮಾಡಿ ಅಪ್ಪಗ ಹೆರಟದಿದಾ – ಹೇಳಿದವು ಜೋಗಿಬೈಲುಮಾವನ ಹತ್ತರೆ!
ಹಳೇ ಕ್ರಮದ ಮಾತುಕತೆ. ಪ್ರಾಯ ಜಾಸ್ತಿ ಏನಾಗ – ಮಾಷ್ಟ್ರುಮಾವನಿಂದ ಅಯಿದೋ-ಹತ್ತೋ ಜಾಸ್ತಿ ಅಕ್ಕಟ್ಟೆ, ಹೆಚ್ಚಿರೆ.
ಎಂತಾ – ಎಂತಾ – ಹೇಳಿ ಮಾತಾಡುಸಿದವು, ಅವರಿಂದ ಮೊದಲು ಬಂದೋರ.
ಒಪ್ಪಣ್ಣನ ಪಕ್ಕಕ್ಕೆ ಗುರ್ತ ಸಿಕ್ಕದ್ದರೂ, ಏನೂ ಕೇಳಿದವು.
ಅವಕ್ಕೆ ಮನೆ ಹಿಂದಾಣ ಬರೆಕರೆಲಿ ನೆಡಕ್ಕೊಂಡು ಬಪ್ಪಗಳೇ ಇಲ್ಲಿ ಮಾತಾಡಿಗೊಂಡಿದ್ದ ಅಯೋಧ್ಯೆ ವಿಷಯ ಕೇಳಿಗೊಂಡು ಇತ್ತೋ ಕಾಣ್ತು. ಅಲ್ಲಿಯೇ ಅವರ ಮೂಡು ಅರ್ದ ಹಾಳಾಗಿತ್ತಿದಾ!
ಹಾಂಗೆ ಏನು ಕೇಳಿ ಆದ ಕೂಡ್ಳೇ ಅವ್ವೇ ಸುರು ಮಾಡಿದವು – ನ್ಯಾಯಾಧಿಕರಣ ಹೇಳುದು ಎಲ್ಲಿದ್ದು ನಮ್ಮ ದೇಶಲ್ಲೀ…..???’ ಹೇಳಿಗೊಂಡು.
ಪಕ್ಕನೆ ಒಂದರಿ ಎಂತಕಪ್ಪ ಅವು ಹೀಂಗೆ ಹೇಳ್ತವು ಅನುಸಿ ಹೋತು ಒಪ್ಪಣ್ಣಂಗೆ.
ಮತ್ತೆ ಅದಕ್ಕೆ ಪೂರಕವಾಗಿ ಅವ್ವೇ ಮಾತಾಡಿಗೊಂಡು ಹೋಪಗ ಗೊಂತಾತು, ಅಯೋಧ್ಯೆ ವಿಶಯಕ್ಕೇ ಅವು ಬೈವದು – ಹೇಳಿಗೊಂಡು.
~
ತೀರ್ಪು ಮುಂದೆ ಹೋದ್ದಕ್ಕೆ ಅವಕ್ಕೆ ಒಳ್ಳೆತ ಬೇಜಾರಾಯಿದು. ಪಿಸುರುದೇ ಬಯಿಂದು.
ಮೂಗಿನ ಒಟ್ಟೆ ಕೆಂಪುಕೆಂಪಾಗಿ ದೊಡ್ಡ ಆಗಿತ್ತು, ಹೆಚ್ಚು ಗಾಳಿ ಒಳ ಹೋಗಿ ಬೇಗ ತಂಪಪ್ಪಲೆ. ಆದರೂ ಬೇಗ ತಣುದ್ದಿಲ್ಲೆ ಪಿಸುರು.
ಅತ್ತೆ ಒಳಾಂದ ನೆಗೆನೆಗೆ ಮಾಡಿಗೊಂಡು ಕಡ್ಪಚಾಯ ಇನ್ನೊಂದು ಗ್ಳಾಸು ತಂದವು. ಕೈಲಿ ಹಿಡ್ಕೊಂಡು – ಏನೂ ಕೇಳಿದವು.
ಇನ್ನುದೇ ನ್ಯಾಯಾಧಿಕರಣ ಇಲ್ಲದ್ದ ಕೋಪಲ್ಲಿಯೇ ಇದ್ದ ಮಾಟೆಡ್ಕಮಾವ ಅದೇ ಪಿಸುರಿಲಿ “ಒಳ್ಳದು!” ಹೇಳಿದವು.
ಮೊದಲೇ ಅತ್ತೆ ಹೆರಬಂದರೆ ಮನೆ ಮವುನ, ಅದರ ಮೇಗಂದ ಮಾಟೆಡ್ಕಮಾವನ ಪಿಸುರಿನ ಉತ್ತರ!

ಹೋಮದ ಸ್ಥಳಶುದ್ಧಿ ಮಾಡಿಗೊಂಡಿದ್ದವಂಗೆ, ಪಕ್ಕನೆ ಒಂದರಿ ಮಂತ್ರ ನಿಲ್ಲುಸಿದ ಹಾಂಗೆ ಆಗಿ ಹೋತು.
ಸಣ್ಣ ಇಪ್ಪಗಳೇ ಅವಂಗೆ ಹೆದರಿಕೆ ಜಾಸ್ತಿ!

ನೆಗೆಮೋರೆಯ ಅತ್ತಗೆ ಗೊಂತಿದ್ದು – ಪಿಸುರು ಇಪ್ಪದು ಎನ್ನ ಮೇಲೆ ಆಲ್ಲ – ಹೇಳಿಗೊಂಡು.
ಆದರೂ, ಬೇರೆ ಎಂತೂ ಮಾತಾಡುಸಿದ್ದವಿಲ್ಲೆ, ಚೆಂದಕೆ ಆಸರಿಂಗೆ ಕೊಟ್ಟಿಕ್ಕಿ ಒಳ ಹೋದವು.
ಮದ್ಯಾನ್ನದ್ದು ಅವ್ವೇ ಮಾಡೆಡದೋ – ಸೊಸೆ ಒಂದು ಮನಗೆ ಎತ್ತಿಗೊಂಬನ್ನಾರ!!
~

ಬೆಶಿ ತಲಗೆ ಬೆಶಿ-ಕಡ್ಪದ ಚಾಯವೇ ಮದ್ದು.
ಮಾಟೆಡ್ಕಮಾವಂಗೆ ಪಿಸುರು ನಿಧಾನಕ್ಕೆ ತಣಿವಲೆ ಸುರು ಆತು.
ಪುನಾ ಅದೇ ನಮುನೆ ಅರ್ತ ಬಪ್ಪ ಮಾತು ಹೇಳಿದವು ’ನ್ಯಾಯಾಧಿಕರಣ ಹೇಳುದು ಸತ್ತಿದು ನಮ್ಮ ದೇಶಲ್ಲಿ!!’ ಹೇಳಿಗೊಂಡು.
ಅದಾಗಿ ನಮ್ಮ ದೇಶದ ಕಾನೂನು ಹೇಂಗೆ ಹಾಳಾತು, ಅದರ ಹೇಂಗೆ ಹಾಳುಮಾಡಿಗೊಂಡವು, ಜನಂಗೊ ಅದರಿಂದ ಎಂತ ತೊಂದರೆ ತೆಕ್ಕೊಂಡವು, ಎಂತರ ಲಾಬ ತೆಕ್ಕೊಂಡವು – ಎಲ್ಲವನ್ನುದೇ ಮಾತಾಡಿಗೊಂಡು ಹೋದವು.

ಮದಲಿಂಗೆ ರಾಜನಕಾಲ.
ಅಂಬಗಳೂ ಕೆಲವು ಸ್ಮೃತಿ – ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ – ಹೀಂಗಿರ್ತದು ಸಂವಿಧಾನ ಆಗಿ ನೆಡಕ್ಕೊಂಡು ಇತ್ತು.
ಅಂಬಗಾಣ ಸನಾತನ ಭಾರತ ಧರ್ಮ, ಶಾಂತಿಗೆ ಹೆಸರು ಹೋಗಿತ್ತು.
ಈಗ ಎಲ್ಲೋರಿಂಗೂ ಸ್ವಾತಂತ್ರ ಹೇಳಿ ಕೊಟ್ಟುಗೊಂಡು, ಪ್ರಜಾಪ್ರಭುತ್ವ ಹೇಳಿ ಮಾಡಿಗೊಂಡು, ಒಟ್ಟಾರೆ ನಮ್ಮ ನ್ಯಾಯಾಧಿಕರಣವ ಹಾಳುಮಾಡ್ತವು – ಹೇಳಿ ಮಾಟೆಡ್ಕಮಾವ° ತುಂಬ ಬೇಜಾರುಮಾಡಿಗೊಂಡವು.
~

ಅಯೋಧ್ಯೆ ತೀರ್ಪುದೇ ಮುಂದೆ ಹೋಪಲೆ ಹೀಂಗೇ ಇದ್ದ ನ್ಯಾಯಾಧಿಕರಣ ಕಾರಣ – ಹೇಳ್ತದು ಅವರ ಮೂಲ ವಾದ.
ಆಯಿಪ್ಪಲೂ ಸಾಕು, ನವಗರಡಿಯ.
ಮಾಷ್ಟ್ರುಮಾವ° ಎಂತದೂ ಮಾತಾಡಿದ್ದವಿಲ್ಲೆ, ಮವುನಲ್ಲಿ ಇತ್ತಿದ್ದವು. ಬಾಯಿಲಿ ಎಲೆಡಕ್ಕೆ ತುಂಬುಸಿಗೊಂಡು.

ಅಯೋಧ್ಯೆ ತೀರ್ಪಿಂಗೆ ಮೂರು ಜೆನ ಜಡ್ಜಂಗೊ ಅಡ.
ಅವು ಮೂರು ಜೆನ ಈ ಇಷ್ಟು ಒರಿಶ ಅಂತೇ ಕೂದುಗೊಂಡು, ವಿಚಾರಣೆ, ವಾಯಿದೆ, ಹಾಂಗೆ, ಹೀಂಗೆ – ಹೇಳಿ ಹೊತ್ತು ಕಳದು, ಅಂತೂ ಒಂದು ದಿನ ತೀರ್ಪು ಕೊಡ್ಳಪ್ಪಗ ಮುಂದೆ ಹಾಕಿದವು.
ಆ ಜಡ್ಜಂಗೊಕ್ಕೆ ಮನಸ್ಸಿದ್ದಿರೆ ಕೊಡ್ಳೆ – ಹೇಳಿ ಅಲ್ಲಿಂದಲೇ ಬೈವಲೆ ಸುರು ಮಾಡಿದವು.
ಒಂದು ವಾರ ಮುಂದೆ ಹಾಕಿ ಇಂದು ಮಾಡ್ತವಡ ತೀರ್ಪು! – ಹೇಳಿಗೊಂಡವು ಮಾವ°.
~
ಜಡ್ಜಂಗೊ ಹೇಳಿರೆ ನ್ಯಾಯಾಧೀಶರು, ವಕೀಲರು ಹೇಳಿರೆ ನ್ಯಾಯವಾದಿಗೊ.
ಜಡ್ಜಂಗೆ ನ್ಯಾಯ ಯೇವದು ಹೇಳಿ ತಿಳಿವಲೆ ಎಷ್ಟು ಸಮೆಯ ಬೇಕು, ಈಗ ಕೋರ್ಟಿಲಿ ಇಪ್ಪ ಕೇಸುಗಳ ಇತ್ಯರ್ಥ ಮಾಡ್ಳೆ ಎಷ್ಟು ಒರಿಶ ಬೇಕು – ಹೇಳಿ ಪಿಸುರು ಹೆರ ಹಾಕಿದವು.
ನ್ಯಾಯವಾದಿಗೊ ಹೇಳಿಗೊಂಡವು ಜೆನರ ನೆಡುಗೆ ಇಪ್ಪ ನ್ಯಾಯಂಗಳ(ವ್ಯಾಜ್ಯಂಗಳ) ಸರಿಮಾಡ್ಳೆ ನೋಡೆಕ್ಕೇ ವಿನಃ ಕೋರ್ಟಿನ ತಗಾದೆಯ ಉದ್ದ ಎಳವಲೆ ನೋಡ್ಳಾಗ.
ನ್ಯಾಯ ಒಂದೇ ಹೊಡೆಂಗೆ ಇಪ್ಪದು ಹೇಳಿ ಆದರೆ ಇಬ್ರು ನ್ಯಾಯವಾದಿಗೊ – ಎದುರಾ ಎದುರು ಇದ್ದವಲ್ಲದೋ – ಅದೆಂತಕೆ? – ಕೇಳಿದವು.
ಮಾಷ್ಟ್ರುಮಾವನತ್ತರೆ ಉತ್ತರ ಇಲ್ಲೆ!! 😉
ಒಪ್ಪಣ್ಣನ ಹೊಡೆಂಗೆ ತಿರುಗಿದವು, ಒಪ್ಪಣ್ಣನತ್ತರೂ ಉತ್ತರ ಇಲ್ಲೆ. 🙁
ಕೆದೂರೊಕೀಲ್ತಿಯ ಹತ್ತರೆ ಉತ್ತರ ಇದ್ದೋ – ಉಮ್ಮಪ್ಪ, ನವಗರಡಿಯ.
~

ಸ್ಥಲಶುದ್ಧಿ ಮಾಡಿದ ಮೇಗೆ ಅಗ್ನಿಪ್ರತಿಷ್ಟೆ.
ಕೆಂಡವ ಊಪಿ ಊಪಿ ಕಿಚ್ಚು ದೊಡ್ಡಮಾಡಿಗೊಂಡಿದ್ದ ಬಾವಯ್ಯ. ಆಜ್ಯಾಷ್ಟದ್ರವ್ಯ ಹೇಳಿ ಮಂತ್ರ ಸುರು ಮಾಡುದು ಕಂಡತ್ತು.
ಮಾಟೆಡ್ಕಮಾವ ಮಾತಾಡಿಯೇ ಮಾತಾಡಿದವು..ನಮ್ಮದೇ ಊರಿಲಿ ಆದ ಒಂದು ಸಂಗತಿಯ ಉದಾಹರಣೆಗೆ ತೆಕ್ಕೊಂಡವು.

ಇದೊಂದು ಉದಾಹರಣೆ ತೆಕ್ಕೊಂಬೊ – ಹೇಳಿ ಲೊಟ್ಟೆ ಪಂಚಾತಿಗೆಸುರು ಮಾಡಿದವು.
ಒಬ್ಬನ ಜೀಪಿನ ಇನ್ನೊಬ್ಬ ತೆಕ್ಕೊಂಡು ಹೋಗಿ ಮತ್ತೊಬ್ಬಂಗೆ ಗುದ್ದಿದ ಕೇಸು.
ತಪ್ಪು ಆರದ್ದು? ಒಬ್ಬಂದೋ, ಇನ್ನೊಬ್ಬಂದೋ, ಮತ್ತೊಬ್ಬಂದೋ?
ಪೋಲೀಸು ಬಂದು, ವಿಚಾರಣೆ ಆತು, ಕೋರ್ಟಿಂಗೆ ಹೋತು, ಮೂರೂ ಜೆನವುದೇ ಗೂಡು(ಕಟಕಟೆ) ಹತ್ತಿದವು.
ನೆಡದತ್ತು – ಒಕೀಲ ಬಾರೀ ಲಾಯಿಕಲ್ಲಿ ವಾದ ಮಾಡಿ ಆತು, ವಾದ ವಿವಾದ ಮುಗಾತು. ವಿಚಾರಣೆ ಚೆಂದಲ್ಲಿ ಆತು.

ಎಷ್ಟು ವಾದ ನೆಡದರೂ, ಒಂದರಿ ಜಡ್ಜಿಯ ಕಂಡಿಕ್ಕಿ ಬಪ್ಪೋ- ಹೇಳಿ ಒಕೀಲಂಗೆ ಆತಡ.
ಹಾಂಗೆ ಕಕ್ಷಿದಾರರ ಕರಕ್ಕೊಂಡು ಜಡ್ಜನ ಕಾಂಬಲೆ ಹೋಗಿಯೇ ಬಿಟ್ಟವು.
ಈಗ ಬರೆಡಿ, ತೀರ್ಪಿನ ಮುನ್ನಾಣದಿನ ಇರುಳು ಎಂಟುಗಂಟಗೆ ಬನ್ನಿ – ಹೇಳಿ ಜಡ್ಜಿ ಕಳುಸಿತ್ತಡ.
ಮರದಿನತೀರ್ಪು.
ಮುನ್ನಾಣ ದಿನ ಇಂದು, ಎಂಟುಗಂಟಗೆ ಜಡ್ಜಿಯ ಕಂಡಿಕ್ಕಿ ಬಪ್ಪಲೆ ಹೋದವಡ.
ಅಲ್ಲಿ ಅವಕ್ಕೆ ಕಂಡ ವಿಶಯವೇ ಬೇರೆ.

~

ನ್ಯಾಯದ ತಕ್ಕಡಿ - ಒಂದುಮೇಲೆ -ಒಂದು ಕೆಳ..?!

ಜಡ್ಜಿಯ ಕೈಲಿ ಹದಿನೈದು ಹದಿನೈದು ಪುಟದ ಎರಡು ಪ್ರತಿ ತೀರ್ಪು ಇತ್ತಡ.
ಒಂದರಲ್ಲಿ, ವಾದ ಮಾಡಿ ಅಪ್ಪಗ ಸಿಕ್ಕಿದ ಎಲ್ಲಾ ಪಿರಿಗಳ ಸೇರುಸಿ – ಇವರದ್ದೇ ತಪ್ಪು ಹೇಳ್ತಾಂಗೆ ಮಾಡಿ, ಆರು ತಿಂಗಳು ಒಳ ಕೂರೆಕ್ಕು ಹೇಳ್ತ ತೀರ್ಪು.
ಇನ್ನೊಂದು, ವಾದಮಾಡಿದ ಎಲ್ಲಾ ಒಳ್ಳೆ ಅಂಶಂಗಳ ತೆಕ್ಕೊಂಡು, ಇವರ ತಪ್ಪೇ ಅಲ್ಲ ಹೇಳ್ತ ತೀರ್ಪು.
ಎರಡನ್ನೂ ಇವಕ್ಕೆ ಕೊಟ್ಟತ್ತಡ.
ಇದರ್ಲಿ ನಾಳೆ ಯೇವದರ ಓದಿಹೇಳೆಕ್ಕು – ನಿಂಗಳೇ ನಿರ್ಧಾರ ಮಾಡಿ – ಹೇಳಿಗೊಂಡು.
~
ಒಳಕೂದು ಮರಿಯಾದಿ ಕಳವಲೆ ಆರಿಂಗಾರೂ ಮನಸ್ಸು ಬಕ್ಕೋ?
ಅದಕ್ಕೆ ಆಚ ತೀರ್ಪಿನ ನಿಜಮಾಡ್ಳೆ ಕೇಳಿಗೊಂಡವಡ.
ಈ ತೀರ್ಪಿನ ಓದೆಕ್ಕಾರೆ ಪೈಸೆ ಮಡಗೆಕ್ಕು – ಒಂದು ಲಕ್ಷ – ಹೇಳಿತ್ತಡ ಜಡ್ಜಿ.
~
ಆ ನೆಡು ಇರುಳು ಪೈಶೆ ಇರ್ತೋ – ಅದುದೇ ಅಷ್ಟು ಎಲ್ಲಿಂದ! – ಹೇಂಗೋ ಪೈಸೆ ಒಟ್ಟುಮಾಡಿ ಇರುಳಿಂದ ಇರುಳೇ ಕೊಟ್ಟು, ಹೆರ ಆದವಡ.
ಇವು ಲೆಂಚ ಕೊಟ್ಟದು ತಪ್ಪೇ ಆಯಿಕ್ಕು, ಆದರೆ ಮರಿಯಾದಿ ನೋಡಿರೆ ಅನಿವಾರ್ಯ.
ಆದರೆ ನ್ಯಾಯಾಧಿಕರಣಲ್ಲಿ ಕೂದುಗೊಂಡು ಹಾಂಗೆ ಮಾಡುದು ಸರಿಯೋ – ಹೇಳ್ತದು ಮಾಟೆಡ್ಕಮಾವನ ಪ್ರಶ್ನೆ.
ಇದಕ್ಕೇ ಮಾಟೆಡ್ಕ ಮಾವಂಗೆ ಪಿಸುರು ಬಂದದು! ಅಂತೇ ಅಂತೇ ಅಲ್ಲ.
ಇದು ಕೇವಲ ಉದಾಹರಣೆಯೇ ಆಗಿಕ್ಕು, ಆದರೆ ಇದಕ್ಕೆ ಹತ್ತರಾಣದ್ದರ ನಾವು ನಿತ್ಯ ನೋಡ್ತಿದಾ!
~

ಇಷ್ಟೆಲ್ಲ ವಿವರುಸುವಗ ಹೊತ್ತು ಹೋದ್ದದು ಗೊಂತೇ ಆಯಿದಿಲ್ಲೆ..
ಪೂರ್ಣಾಹುತಿಗೆ ಆತು – ಹೋಮದ ಬುಡಂದಲೇ ಹೇಳಿದ ಭಾವ.
ನಾಕುಕಾಯಿಯ ಗೆಣವತಿ ಹೋಮ ಇದಾ – ಅಷ್ಟದ್ರವ್ಯದ ಚಿಟಿಪಿಟಿ ಎಲ್ಲಾ ಕೇಳಿಗೊಂಡು ಇತ್ತು, ಜೋರು ಹೊಗೆಯೂ ಬಂದುಗೊಂಡಿತ್ತು.
ರಜಾ ಮದಲು ಮಾಟೆಡ್ಕಮಾವಂಗೆ ಅದರಿಂದಲೂ ಜೋರು ಹೊಗೆ ಬಂದುಗೊಂಡಿತ್ತು, ಆದರೆ ಈಗ ಅದೆಂತ ಕೋಪ ಇಲ್ಲೆ ಅವಕ್ಕೆ!
~
ಪೂರ್ಣಾಹುತಿ ಆತು, ಹೋದ್ದಕ್ಕೆ ದಕ್ಷಣೆಯೂ ಬಂತು!!
ಮಾಟೆಡ್ಕ ಮಾವ ಸಂತೋಷಲ್ಲಿ ಆಶೀರ್ವಾದ ಮಾಡಿದವು.
~
ಇನ್ನೆಂತರ? ಊಟ..!!
ಅತ್ತೆಯ ಕೈ ಅಡಿಗೆ, ಬೆಂಡೆ ತಾಳು – ಕಡ್ಪ ಇತ್ತಿದಾ..
ಪಾಯಿಸ – ಅದುದೇ ಕಡ್ಪ ಆಯಿದು.
ಗೆಣಪ್ಪಣ್ಣನ ಅಪ್ಪ – ಅದುದೇ ಲಾಯಿಕಾಯಿದು..
ಚೆಂದಕೆ ಹೊಡದಾತು.
ಬೆಶಿಲಿಂಗೆ ಮನುಗುತ್ತಿರೋ – ಕೇಳಿದವು. (ಶ್ರೀಶಣ್ಣಂದು ಒಂದು ನೆಗೆ ನೆಂಪಾತು ಒಪ್ಪಣ್ಣಂಗೆ!)
~
ಮನುಗಿ ಏಳುಲಪ್ಪಗ ಟೀವಿಲಿ ಜೋರು ಬೊಬ್ಬೆ ಸುರು ಆಯಿದು.
ಇಂದೇ ಅದರ ತೀರ್ಪಡ – ಎಲ್ಲ ಟೀವಿಲಿ ಮಾತಾಡ್ಳೆ ಸುರು ಮಾಡಿದವು – ಹೇಳಿದವು ಮಾವ.
ಒಂದು ಕನ್ನಡ, ಒಂದು ಹಿಂದಿ, ಒಂದು ಇಂಗ್ಳೀಶು ಚೇನೆಲು ನಡುಗೆ ಓಡಿಗೊಂಡೇ ಇತ್ತು ಟೀವಿ.
ಎಲ್ಲದರ್ಲಿಯೂ ಚರ್ಚೆ. ಯೇವದು ಬಕ್ಕು – ಯೇವದು ಬಂದರೆ ಹೇಂಗಕ್ಕು – ಹಾಂಗೆ, ಹೀಂಗೆ – ಹೇಳಿಗೊಂಡು.
ಅವರ ಟೀವಿಗೆ ಮಾಟೆಡ್ಕ ಮಾವ ಬಂದಿದ್ದರೆ ಇನ್ನೂ ಲಾಯಿಕಾವುತಿತು ಅನುಸಿತ್ತು ನವಗೊಂದರಿ.
~
ಹೆರಡ್ತ ಅಟ್ಟಣೆ ಆಯೆಕ್ಕಾತು, ಆದರೆ ಈ ತೀರ್ಪು ಎಂತ ಬತ್ತೋ ಕಾತರ!
ಹಾಂಗಾಗಿ ಕಾದೇ ಬಾಕಿ. ಹತ್ತಾರೊರಿಶದ ತಗಾದೆಯ ತೀರ್ಪು ಬತ್ತ ಕಾಲ ಅಲ್ಲದೋ!
ಕನ್ನಡಪ್ರಭದ ಮುಳಿಯಾಲಪ್ಪಚ್ಚಿಗೆ ಪುರಸೊತ್ತೇ ಇರ ಈಗ..
ಬೆಂಗುಳೂರಿಲಿ ಪೆರ್ಲದಣ್ಣ ಎಂತ ಹೇಳ್ತನೋ..
ಕೊಡೆಯಾಲಲ್ಲಿ ಮಾರ್ಗಂಗೊ ಹೇಂಗಿದ್ದೋ..
ಪುತ್ತೂರಿಲಿ ಅಂಗುಡಿಗೊ ಮುಚ್ಚಿದ್ದವೋ..
ಕಾಸ್ರೋಡಿಲಿ ಹರ್ತಾಳು ಇರದ್ದೆ ಇಕ್ಕೋ..
ಯೇವ ಹೊಡೆಂಗೆ ತೀರ್ಪು ಮಾಡಿರೂ ಆಚವಂಗೆ ಬೇಜಾರು ಇರದೋ..
ಎಲ್ಲ ಮಾತಾಡಿಗೊಂಡವು, ಎಲ್ಲೋರುದೇ ಸೇರಿಗೊಂಡು..
~
ತೀರ್ಪು ಬಂದೇ ಬಿಟ್ಟತ್ತು.
ಮೂರು ಜೆನ ಜಡ್ಜಿಗೊ ಮೂರು ತೀರ್ಪು ಬರದವಡ. ಒಬ್ಬೊಬ್ಬ ಒಂದೊಂದು ವಾದ ಹಿಡುದು.
ಒಂದೇ ನ್ಯಾಯ ಮೂರು ಜೆನಕ್ಕೆ ಮೂರು ನಮುನೆ ಕಾಂಬದು – ಅದೆಂತರ ಅಂಬಗ? ಕೇಳಿದವು ಮಾಟೆಡ್ಕ ಮಾವ°.
ಒಂದೇ ಭಗವದ್ಗೀತೆಯ ಮೂರು ಜೆನ ಆಚಾರ್ಯರು ಮೂರು ರೀತಿ ನೋಡಿದ ಹಾಂಗಾತು – ಹೇಳಿದವು ಮಾಷ್ಟ್ರುಮಾವ°.
ಈ ನಮುನೆ ಪರಿಸ್ತಿತಿಲಿ ಬಹುಮತದ ನಿರ್ಧಾರ ಮಾಡ್ತವಡ.
~
ಆ ಜಾಗೆಯ ಮೂರು ತುಂಡು ಮಾಡಿದವಡ. ಎಲ್ಲೋರಿಂಗುದೇ ಸಿಕ್ಕುತ್ತ ನಮುನೆಲಿ.
ರಾಮ ಇದ್ದ ಜಾಗೆಯ ರಾಮಂಗೇ ಕೊಟ್ಟವಡ. ಒಂದು ತುಂಡಿನ ಅಲ್ಯಾಣ ಸಾಧುಗೊಕ್ಕೆ ಕೊಡ್ತವಡ – ಅವುದೇ ನಮ್ಮವೇ ಇದಾ!
ಇನ್ನೊಂದು ತುಂಡಿನ ಆಚವಕ್ಕೆ ಕೊಡ್ತವಡ.
ಒಂದು ಲೆಕ್ಕಲ್ಲಿ ಒಳ್ಳೆ ತೀರ್ಪು ಇದು – ಹೇಳಿದವು ಮಾಷ್ಟ್ರುಮಾವ°.
~
ಆದರೆ, ಎಂಗೊಗೆ ಸಿಕ್ಕಿದ್ದು ಸಾಕಾಯಿದಿಲ್ಲೆ – ಹೇಳಿ ಆಚವು ಸುಪ್ರೀಮ್ಕೋರ್ಟಿಂಗೆ ಹೋವುತ್ತವಡ.
ಆಚವಕ್ಕೆ ಕೊಟ್ಟದೆಂತಕೆ – ಹೇಳಿ ಈಚವು ಸುಪ್ರೀಮು ಕೋರ್ಟಿಂಗೆ ಹೋವುತ್ತವಡ.
ಅಂತೂ ಇನ್ನೊಂದು ಹತ್ತಿಪ್ಪತ್ತೊರಿಶ ತೊಂದರೆ ಇಲ್ಲೆ, ಜಡ್ಜಿಗೊಕ್ಕೆ – ಹೇಳಿಗೊಂಡು ಮಾಟೆಡ್ಕಮಾವ ಹೆರಟವು.
~
ನ್ಯಾಯಾಧಿಕರಣದ ಒಳ್ಳೆದು ಕೆಟ್ಟದು ಜಡ್ಜಿಗಳ ಕೈಲಿ ಇಪ್ಪದು.
ಒಳ್ಳೆದೂ ಅಕ್ಕು, ಹೇಸಿಗೆಯೂ ಅಕ್ಕು.
ಮುಕ್ಕಾಲುವಾಶಿ ಕೋರ್ಟುಕೇಸುದೇ ಹಾಳೇ ಅಪ್ಪದು – ಹೇಳಿ ಮಾಟೆಡ್ಕಮಾವ° ಹೇಳಿದ್ದು ಮತ್ತೆ ಮತ್ತೆ ನೆಂಪಾಯ್ಕೊಂಡು ಇತ್ತು.
ಅಂತೂ ಇಂದ್ರಾಣ ಪರಿಸ್ಥಿತಿಗೆ ಹೋಲುಸುವಗ ಈ ಮಾವ ಹೇಳಿದ ಪ್ರಶ್ನೆ ತುಂಬಾ ಪ್ರಸ್ತುತ ಹೇಳಿ ಕಂಡು ಹೋತು ಒಪ್ಪಣ್ಣಂಗೆ
~
ಒಳ್ಳೆ ದೇಶ ಇರೆಕ್ಕಾರೆ ನ್ಯಾಯಾಂಗ ಒಳ್ಳೆದಿರೆಕು.
ಆರೋಗ್ಯ, ವಿದ್ಯಾಭ್ಯಾಸದಷ್ಟೇ ಅಗತ್ಯ ಅಂಶ – ನ್ಯಾಯ ಹೇಳ್ತದು.
ವಿದ್ಯಾಭಾಸ ಬೇಕಾರೆ ಶಾಲಗೆ ಹೋಯೆಕು. ಒಳ್ಳೆ ವಿದ್ಯಾಭಾಸ ಬೇಕಾರೆ ಪ್ರೈವೇಟಿಂಗೆ ಹೋಯೇಕು.
ಆರೋಗ್ಯ ಬೇಕಾರೆ ಆಸ್ಪತ್ರೆಗೆ ಹೋಯೆಕು. ಬೇಗ, ಒಳ್ಳೆ ಆರೋಗ್ಯ ಬೇಕಾರೆ ಪ್ರೈವೇಟಿಂಗೆ ಹೋಯೇಕು.
ಹಾಂಗಾರೆ ಬೇಗ ನ್ಯಾಯ ಸಿಕ್ಕೇಕಾರೆ ಪ್ರೈವೇಟು ಕೋರ್ಟು ಮಾಡ್ಳಾಗದೋ? – ಮಾಷ್ಟ್ರುಮಾವನ ಹತ್ತರೆ ಕೇಳುದೋ ಗ್ರೇಶಿದೆ.
ಎಂತ ಹೇಳ್ತಿ?

ಒಂದೊಪ್ಪ: ಜನ್ಮಸ್ಥಾನಕ್ಕೆ ರಾಮ ಬಂದರೂ, ರಾಜ್ಯಕ್ಕೆ ಧರ್ಮರಾಜ ಯೇವಗ ಬಕ್ಕೋ?!

ಒಪ್ಪಣ್ಣ

   

You may also like...

32 Responses

 1. ಶ್ರೀಶಣ್ಣ says:

  [ಅಂದು ಬೇಜಾರ ಆದ್ದರ ಗ್ರೇಶಿರೆ ಈಗ ನೆಗೆ ಬತ್ತಡ],
  ಅಪ್ಪು. ಎಷ್ಟೋ ಸರ್ತಿ ಅನುಭವಿಸುವಾಗ ಕಷ್ಟ, ಬೇಜಾರು ಎಲ್ಲಾ ಆವುತ್ತು. ಆದರೆ ಮುಂದೊಂದು ದಿನ ಅದರ ಜಾನ್ಸಿದರೆ “ಸವಿ ನೆನಪೇ” ಆಗಿರ್ತು.
  [ನ್ಯಾಯ ಒಂದೇ ಹೊಡೆಂಗೆ ಇಪ್ಪದು ಹೇಳಿ ಆದರೆ ಇಬ್ರು ನ್ಯಾಯವಾದಿಗೊ – ಎದುರಾ ಎದುರು ಇದ್ದವಲ್ಲದೋ – ಅದೆಂತಕೆ?]
  ಅವಕ್ಕವಕ್ಕೆ ಅವವು ಹೇಳಿದ್ದೇ ಸರಿ ಅದುವೇ ನ್ಯಾಯ ಹೇಳಿ ಕಾಂಬಗ ವ್ಯಾಜ್ಯ ಸುರು ಅಪ್ಪದು. ಇಬ್ರಿಂಗೂ ಒಂದನ್ನೇ ನ್ಯಾಯ ಹೇಳಿ ಕಂಡರೆ ಮತ್ತೆ ವ್ಯಾಜ್ಯ ಎಲ್ಲಿದ್ದು? ಅಲ್ಲದ
  [ಹಾಂಗಾರೆ ಬೇಗ ನ್ಯಾಯ ಸಿಕ್ಕೇಕಾರೆ ಪ್ರೈವೇಟು ಕೋರ್ಟು ಮಾಡ್ಳಾಗದೋ]
  ಖಂಡಿತಾ ಅಕ್ಕು. ಅಲ್ಲಿ ಕೂಡಾ ತೀರ್ಪು ಹೇಳುವವ “ಸಜ್ಜನ”ನೇ ಆಗಿರೆಕು. ಎರಡು ಕಡೆಯವಕ್ಕೂ ಒಪ್ಪಿಗೆ ಇಪ್ಪವನೇ ಅಗಿರೆಕು. ಶ್ರೀ ಗುರುಗೊ ಈ ನಿಟ್ಟಿಲ್ಲಿ ಒಂದು ಅಭಿಪ್ರಾಯ ಈಗಾಗಲೇ ಕೊಟ್ಟಿದವು. ರಾಜಿ ಪಂಚಾಯ್ತಿಗೆ ಜವಾಬ್ದಾರಿಯ ಮಂಡಲದ “ಪ್ರಸಾರ ಖಾತೆ”ಯವು ನೋಡಿಗೊಳೆಕ್ಕು ಹೇಳಿ.
  ಒಪ್ಪಣ್ಣ, ಒಂದೊಪ್ಪ ಲಾಯಿಕ್ ಆಯಿದು.
  ಇಲ್ಲರೂ ಸನಾತನ ಧರ್ಮ ಧರ್ಮ ಅರ್ಥ ಮಾಡಿಂಡು, ಅನುಸರಿಸಿಂಡು ಮುಂದಕ್ಕೆ ಹೋದರೆ, ದೇಶಕ್ಕೆ ಧರ್ಮ ರಾಜ ಬಂದ ಹಾಂಗೇ ಅಕ್ಕಲ್ಲದ.

 2. ಅಯೋಧ್ಯೆ ವಾದಲ್ಲಿ ರಾಮಜನ್ಮಭೂಮಿ ನ್ಯಾಸದ ಪರವಾಗಿ ವಾದ ಮಾಡಿದವು ಖಂಡಿಗ ದವು ಅಡ. ಶ್ರೀ ಕೆ ಎನ್ ಭಟ್ ಹೇಳಿ.
  ಹೆಚ್ಚು ವಿಷಯ ಗೊಂತಿಪ್ಪವು ತಿಳುಸಿ:
  http://www.kannadaprabha.com/NewsItems.asp?ID=KPH20101001001027&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=10/1/2010&Dist=0

 3. shedigumme bhava says:

  oppanna baraddu bhari laikaydu…..adikke sharma chikkayya kotta oppavu sariye….ellorannu samadhana madle heli kotta teermana innude ellarannu samadhana madiddille heludu maatra katora satyave…aadru navage hengu mukkalamsha sikkiddanne….innentake adrinda mele matte mele heli hoikkondu anthe paise kalavadu heli mataduvave jasthi heli kaantu…..samanya janamgo……aadre rajakaranigo haluva dodda/dadda/ baddu mandego avara karya sadhisikombale bekagi papadavara keralsuva kelsa madtha iddavu heli enna hange ningogu ansadde ira heli gresutte..
  helida hange innondu shuddi iddu…enta kelidre……..namma yakshaganada sheni ajja illeya avara dodda magana eradane maga balamuralikrishna heli idda engo avana murali anna heliye kariyudu…..ava samyukta karnatakalli kelasa madigondiddu matte kannada times li raja samaya (adu muchchuvavaregu) adralli kelasa madikomdittidda…eega ava swanthakke avana josthiya sersikondu BHAMINI heltha kannada MASIKA shuru madtha idda,,,,,,ide thingala 6 kke adara bidugade ada….hange bayalinvu ella suport madekalda namma manige…………

 4. shyamaraj.d.k says:

  Lekhana layaka ayidu.Innadaroo muslimaringe buddi bandu bhavya mandira katle sahakarisali.Prabhu sriramachandrana anugraha ellora mele irali.JAI SHRIRAM.

 5. ನ್ಯಾಯಾಲಯದ ತೀರ್ಪಿನ್ಗೆ ಗೌರವ ಕೊಡೆಕ್ಕಾದ್ದು ನಮ್ಮ ಕರ್ತವ್ಯ . ಆದರೆ ನಮ್ಮದೇ ಆದ ಸ್ವಂತ ಅಭಿಪ್ರಾಯ ವ್ಯಕ್ತ ಪಡಿಸುಲೇ ಕಾನೂನಿಲ್ಲಿ ಅವಕಾಶವೂ ಇದ್ದು . ಎನಗೆ ನಿಜವಾಗಿ ಈ ತೀರ್ಪಿಂದ ಸಮಾಧಾನ ಮಾತ್ರ ಆದ್ದೆ ವಿನಾ ಇಷ್ಟ ಆಯಿದಿಲ್ಲೇ . ಪೂರ್ತಿ ಜಾಗೆಯ ಹಿಂದುಗೊಕ್ಕೆ ಬಿಟ್ಟು ಕೊಟ್ಟು ಬೇರೆಯೇ ಸರ್ಕಾರಿ ಜಾಗೆಯ ಬ್ಯಾರಿಗೊಕ್ಕೆ ಕೊಡೆಕ್ಕಾತು . ನಮ್ಮ ದೇವರು ಹುಟ್ಟಿ ಓಡಾಡಿ ಬೆಳದ ಜಾಗೆಯ ನಮಗೆ ಕೊದೆಕ್ಕತು. ಸರ್ಕಾರಕ್ಕೆ ಆ ಬದ್ಧತೆ ಬೇಕಾತು. ಈಗ ಮಕ್ಕಾ ಅಥವಾ ಮದೀನಾಲ್ಲಿ ನಾವು ಆರಾರು ಹೋಗಿ ಒಂದು ತುಂಡು ಜಾಗೆ ಕೊಡಿ ಹೇಳಿರೆ ಕೊಡ್ಲೆ ಬ್ಯಾರಿಗೋ ಹೇಂಗೆ ತಯಾರಿಲ್ಲೆಯೋ , ವ್ಯಾಟಿಕನ್ ಸಿಟಿ ಲಿ ಐದು ಸೆಂಟ್ಸ್ ಜಾಗೆ ಎನ್ಗೊಗೆ ಕೊಡಿ ಹೇಳಿರೆ ಪೋರ್ಬುಗೋ ಹೇಂಗೆ ಕಣ್ಣು ಕೆಂಪು ಮಾಡ್ತವೋ ನಮ್ಮವಕ್ಕು ಅಯೋಧ್ಯೆ ಹೇಳಿರೆ ರಾಜಕೀಯ ಬಿಟ್ಟು ಪೂಜ್ಯ ಭಾವನೆ ಬೇಕಾತು. ಎಲ್ಲವನ್ನು ಹೀಂಗೆ ನಾವು ಬಾಯಿ ಮುಚ್ಚಿ ಒಪ್ಪುತ್ತು ಹೇಳಿದ ಕಾರಣವೇ ಅಲ್ಲದ ತುಂಡು ಮಾಡಿ ಮಂಗ ಬೆಣ್ಣೆ ಪಾಲು ಮಾಡಿದ ಹಾಂಗೆ ಮಾಡಿದ್ದು?
  ವಯಕ್ತಿಕವಾಗಿ ಎನಗೆ ಇದು ಏನೇನೂ ಇಷ್ಟ ಆಯಿದಿಲ್ಲೇ. ನಿಂಗೋ ಎಂತ ಹೇಳ್ತಿ ?

  • ಪಾಲು ಮಾಡಿದ್ದು ಇಷ್ಟ ಆಗದ್ದರೂ, ದೇಶದ ಏಕತೆಯ ದೃಷ್ಟಿಂದ ನೋಡಿರೆ ಪಾಲುಮಾಡಿದ್ದು ಸಮ ಹೇಳಿ ಕಾಣ್ತಡ ನಮ್ಮ ಪಾರೆ ಮಗುಮಾವಂಗೆ.
   ಆಯೆಕ್ಕಾದ ಮುಖ್ಯ ಗರ್ಭಗುಡಿ ಸಿಕ್ಕಿತ್ತನ್ನೆ, ಮತ್ತೆ ಒಳುದ ಮಂದಿರ ಎಲ್ಲಿದ್ದರೆಂತ – ಹೇಳಿ ಅವರ ಅಭಿಪ್ರಾಯ.
   ಅಲ್ಲದೋ?

 6. ಒಪ್ಪಣ್ಣ ಹೀಂಗಿಪ್ಪ ಬರಹಂಗಳ ನಮ್ಮದೇ ಹವ್ಯಕ ಪತ್ರಿಕೆಗೆ ಏಕೆ ಕಳುಸುಲಾಗ?

 7. ಸರ್ಪಮಲೆ ಮಾವ says:

  ಎನಗೆ ಖುಶಿ ಕೊಡುವದು ಒಪ್ಪಣ್ಣನ ಬರವಣಿಗೆಯ ಶೈಲಿ. ಅವ° ಬರದ್ದರ ಗಟ್ಟಿಯಾಗಿ ಓದಿ ನೋಡಿ. ಪ್ರತಿಯೊಂದು ಸಂದರ್ಭವನ್ನೂ ವಿವರಿಸಿದ ರೀತಿ ನೋಡಿ. ಮಾಟೆಡ್ಕ ಮಾವನ ಕಂಡ ಹಾಂಗೇ ಆತೆನಗೆ! ಬೆಶಿಲ್ಲಿ ನೆಡಕ್ಕೊಂಡು ಬಂದು, ಮೋರೆ ನೆತ್ತಿಯ ಒರೆಂಗೆ ಬೆಗರು ಉದ್ದಿಯೊಂಡು ಕೂಬಗ ಮಾತುಕತೆ ಕೇಳಿ, ಪಿಸುರಿಲ್ಲಿ “ನ್ಯಾಯಾಧಿಕರಣ ಹೇಳುದು ಎಲ್ಲಿದ್ದು ನಮ್ಮ ದೇಶಲ್ಲೀ?” ಹೇಳಿ ಕೇಳಿದ್ದು, ಏನು, ಏನು ಹೇಳಿ ಎಲ್ಲೋರನ್ನೂ ಮಾತಾಡಿಸಿದ್ದು, ಅತ್ತೆ ಏನು ಕೇಳಿದ್ದಕ್ಕೆ ಅದೇ ಮೂಡಿಲ್ಲಿ ಒಳ್ಳೆದು ಹೇಳಿದ್ದು, ಮಾತುಕತೆ ಕೇಳಿ ಹೋಮಕ್ಕೆ ಕೂದ ಬಾವಂಗೆ ನೆಗೆ ಬಂದದು, ಇದೆಲ್ಲ ಓದುವಾಗ ಎನಗೆ ಸ್ಪಷ್ಟವಾಗಿ ಎಲ್ಲವೂ ಎನ್ನ ಕಣ್ಣೆದುರೇ ಕಾಣ್ತು! ಈ ಬರವಣಿಗೆಲಿ ಎಂತ ವಿಶೇಷ ಇದ್ದು, ಇದು ನಾವು ಯಾವಾಗಲೂ ನೋಡುವ ಸಂಗತಿ ಅಲ್ಲದೋ ಹೇಳಿ ಹೇಳೆಡಿ. ಆ ರೀತಿ ಬರವಲೆ ಪ್ರಯತ್ನ ಮಾಡಿ ನೋಡಿ. ಅದು ಗ್ರೇಶಿದಷ್ಟು ಸುಲಭ ಅಲ್ಲ ಹೇಳಿ ಗೊಂತಕ್ಕು. ಒಪ್ಪಣ್ಣಂಗೆ ಬರವಣಿಗೆ ಸಿದ್ದಿಸಿದ್ದು! ಇದೇ ರೀತಿ ಮುಂದುವರಿಯಲಿ. ಅಭಿನಂದನೆ!

  • ಸರ್ಪಮಲೆ ಮಾವಾ°…
   ಅಪುರೂಪಲ್ಲಿ ಬೈಲಿಂಗೆ ಬಂದರೂ ಸರಿಯಾದ ವಿಮರುಶೆಯ ಒಪ್ಪ ಬರದಿ.

   ಒಪ್ಪಣ್ಣ ಲೇಖನ ಬರವದಲ್ಲ ಇದಾ – ಶುದ್ದಿ ಹೇಳುದು.
   ಒಪ್ಪಣ್ಣಂಗೆ ಲೊಟ್ಟೆ ಅರಡಿಯ, ಹಾಂಗಾಗಿ ಎಲ್ಲವೂ ಇಪ್ಪದರ (?) ಇಪ್ಪಹಾಂಗೇ (?) ಹೇಳುಲೆ ಎಡಿಗು! 😉

   ನಿಂಗಳ ಪ್ರೀತಿ ಕಂಡು ಕೊಶಿ ಆತು.

 8. ರಘುಮುಳಿಯ says:

  ಸರ್ಪಮಲೆ ಮಾವನ ಮಾತಿಂಗೆ ಎನ್ನ ಸಹಮತ,ಒಪ್ಪಣ್ಣನ ಶೈಲಿ ಅದ್ಭುತ.
  ನಮ್ಮ ದೇಶ ಸ್ವಾತಂತ್ರ್ಯ ಕಳಕ್ಕೊಂಬ ಮದಲು ಬಹುಷಃ ತುಂಡರಸರ, ಪಾಳೆಗಾರರ ಕೈಲಿ ಅರೆಜ್ಜೀವ ಆಗಿತ್ತು.ಸ್ವಾತಂತ್ರ್ಯ ಕಳಕ್ಕೊಂಡು ಬ್ರಿಟಿಷರ ಕೈಯ ಅಡಿಲಿ ಸ್ವಂತಿಕೆಯನ್ನೂ ಕಳಕ್ಕೊಂಡತ್ತು. ಸ್ವಾತಂತ್ರ್ಯ ಪುನರಪಿ ಸಿಕ್ಕಿದ ಮೇಲೆ ಎಂತಾತು?ಭಜಗೋವಿಂದಂ ನ ” ಪುನರಪಿ ಜನನಂ ಪುನರಪಿ ಮರಣಂ” ಸರ್ವಕಾಲಿಕ ಸತ್ಯ ಹೇಳೊದರ ತೋರುಸಿಕೊಡುತ್ತಾ ಇದ್ದು,ಲೋಕಕ್ಕೆ.
  ದೇಹದ ಮುಖ್ಯ ಅಂಗಂಗೋ ಮನಸ್ಸು ಮತ್ತೆ ದೇಹ ಅಲ್ಲದೋ?ಇದು ಎರಡೂ ಸರಿಕಟ್ಟು ಕೆಲಸ ಮಾಡಿಗೊಂಡಿದ್ದರೆ ಅಲ್ಲದೋ ಜೆನ ನೆರ್ಪ ಇದ್ದ°ಹೇಳಿ ಹೇಳುವೋದು.ಹಾಂಗೆ ದೇಶದ ವ್ಯವಸ್ಥೆಲಿಪ್ಪೋದು ಎರಡು ಮುಖ್ಯ ವಿಭಾಗಂಗೋ -ನ್ಯಾಯಾಂಗ ಮತ್ತೆ ಕಾರ್ಯಾಂಗ.ಎರಡನೆದರ ಬಗ್ಗೆ ಮಾತಾಡೋದೇ ಬೇಡ ಅಷ್ಟು ಹಳಸಿದ್ದು.ನ್ಯಾಯಾಂಗವೂ ಸಮ ಏನೂ ಇಲ್ಲೇ.ಕಾರಣನ್ಗೋ ಎಂತದು?
  ಒಂದನೆಯದು ಪೈಸೆ ಮಾಡುವ ಮರುಳು.ಇದು ವರ್ತಮಾನಕಾಲದ ವ್ಯವಸ್ಥೆಯ ತೊಂದರೆ.ಮನುಷ್ಯಂಗೆ ಪೈಸೆ ಬೇಕಾದದ್ದು ಬದುಕ್ಕುಲೆ(ಚೋಟುದ್ದ ಹೊಟ್ಟೆಗಾಗಿ ,ಗೇಣುದ್ದ ಬಟ್ಟೆಗಾಗಿ…) ಮತ್ತೆ ತನ್ನ ಸಂಸಾರಕ್ಕೆ ಬೇಕಾದ ಅಗತ್ಯಂಗಳ ಪೂರೈಸುಲೆ.ಕಾಲಕ್ರಮೇಣ ಜೀವನಕ್ರಮಲ್ಲಿ ಮಾರ್ಪಾಟು ಆವುತ್ತಾ …ಇಂದಿನ ಸ್ಥಿತಿ – ನಾವು ಈಗ ಪೈಸೆ ಮಾಡುಲೆ ಬದುಕ್ಕೊದು ಹೇಳಿ ಆಯಿದು.ಈ ಪೈಸೆ ಮಾಡಿ ಮುಗಿವಲೆ ಹೇಳಿ ಇದ್ದೋ? ನ್ಯಾಯಾಂಗ ವ್ಯವಸ್ಥೆಯೂ ಈ ದಾರಿ ಹಿಡುದ್ದದು ಸ್ವಾಭಾವಿಕ.ಸುತ್ತಲಿನ ಪರಿಸರಕ್ಕೆ ಹೊಂದಿಗೊಂಡು ಎಲ್ಲಾ ಜೀವಿಗ ಬದುಕ್ಕೊದು ಅಲ್ಲದೋ,ದಾರ್ವಿನನ ವಿಕಾಸವಾದದ ತತ್ವದ ಆಧಾರಲ್ಲಿ..ಹಾಂಗಾಗಿ ಆರನ್ನೂ ದೂರಿ ಫಲ ಎಂತರ? ಎಲ್ಲೋರಾ ಮನಸ್ಸು ಸರಿ ಆಯೆಕ್ಕಾದ್ದದು ಮುಖ್ಯ,ಅಪ್ಪ ಹೋಪ ಕಡಕಟ್ಟಲ್ಲ.
  ಎರಡನೆಯದು ಮೀಸಲಾತಿ.ಎಲ್ಲಾ ಸರಕಾರೀ ಉದ್ಯೋಗಂಗಳೂ ಲಗಾಡಿ ಹೋದದ್ದು ಮೀಸಲಾತಿಂದ ಹೇಳೋದು ಸತ್ಯ.ಇಂದು ವಿದ್ಯೆಗೆ,ಯೋಗ್ಯತೆಗೆ ಬೆಲೆ ಎಲ್ಲಿದ್ದು ನಮ್ಮ ದೇಶದ ಸರಕಾರಿ ವ್ಯವಸ್ಥೇಲಿ?ಪುಣ್ಯಕ್ಕೆ ಮೀಸಲಾತಿ ನಿಯಮವ ಪ್ರೈವೇಟ್ ಕಂಪೆನಿಗಳೂ ಪರಿಪಾಲಿಸೆಕ್ಕು ಹೇಳಿ ಆರಾದರೂ ತಲೆಹೋಕ° ನಿಯಮ ಮಾಡಿರೆ ಮತ್ತೆ ನಾವೆಲ್ಲಾ ಈ ದೇಶ ಬಿಟ್ಟು ಹೊಯೇಕ್ಕಷ್ಟೇ!! ಇಂದು ಕೋರ್ಟಿಲಿ ನ್ಯಾಯಾಧೀಶರು ತುಂಬಾ ಜೆನ ಮೀಸಲಾತಿಂದಾಗಿ ಮೇಲೆ ಬಂದು,ಯೋಗ್ಯತೆ ಇಪ್ಪ ಮುಂದುಳಿದ(??!!) ಜನಾಂಗದೋರ ಮೆಟ್ಟಿ ಮೇಲೆ ಬೈ೦ದವು.ಇವಕ್ಕೆ ತೀರ್ಪು ಬರವಲೆ ಕೂಡ ಸರಿ ಗೊಂತಿಲ್ಲೆ ಹೇಳಿ ಹೇಳ್ತವು,ಅನುಭವಿಗೋ.ಎನ್ನ ಮಾತಿಲಿ ತಪ್ಪಿದ್ದರೆ ಕ್ಷಮಿಸಿ ಮತ್ತೆ ಸರಿ ಮಾಡಿ.
  ವಿಮರ್ಶೆಗೆ ಅನುವು ಮಾಡಿಕೊಟ್ಟ ಒಪ್ಪಣ್ಣ೦ಗೆ ಮತ್ತೆ ನಮೋನ್ನಮಃ.

  • ಮುಳಿಯಬಾವಾ..
   ಆಮೂಲಾಗ್ರ ನಿಂಗಳ ’ಭೂತಕನ್ನಡಿ’ಲಿ ಜಾಲಾಡುಸಿ ಬಿಟ್ಟಿ!
   ಕೊಶಿ ಆತು ಒಪ್ಪ ನೋಡಿ.

   ಅಲ್ಲ ಭಾವಯ್ಯ, ನಿಂಗೊ ಆ ಭೂತಕನ್ನಡಿ ಎಲ್ಲಿಂದ ತೆಕ್ಕೊಂಡದು? ಯೇವ ಅಂಗುಡಿಂದ?
   ಎಂಗೊಗೆ ಏಕೆ ಹಾಂಗಿರ್ತದು ಕಾಣ್ತಿಲ್ಲೆ!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *