Oppanna.com

ಒಂದೇ ಸಂಸಾರದ ಎರಡು ದೋಣಿಗೊ..

ಬರದೋರು :   ಒಪ್ಪಣ್ಣ    on   29/07/2016    2 ಒಪ್ಪಂಗೊ

ನೀರು ಯಥೇಷ್ಟ ಇಪ್ಪ ಜಾಗೆಗೆ ಕಂಪ – ಹೇಳ್ತವಾಡ ಮದಲಿಂಗೆ. ಸುಗ್ಗಿಗೆದ್ದೆಯ ನಮುನೆ, ಜೌಗು ಪ್ರದೇಶದ ನಮುನೆ ಇದ್ದ ಜಾಗೆಯ ನಮುನೆದಕ್ಕೆ ಕಂಪ – ಹೇಳುಗು. ಹಲವೂ ದಿಕ್ಕೆ ಈ ಹೆಸರಿನ ಊರುಗಳೇ ಇದ್ದು. ಆಚಮನೆ ಪುಟ್ಟಕ್ಕನ ಕೊಟ್ಟದು ಕಂಪಕ್ಕೆ ಇದಾ!
ಹಾಂಗೇ, ಮಾಷ್ಟ್ರುಮಾವನ ನೆರೆಕರೆಲಿಯೂ ಕಂಪ – ಹೇದು ಒಂದು ಊರಿದ್ದು.
ಅಲ್ಲಿ ರಾಮಣ್ಣು – ಹೇದು ಒಂದು ಸಜ್ಜನನ ಕುಟುಂಬವೂ ಇದ್ದು. ಅದರ ಮನೆಲಿ ಎರಡು ಆಣುಗೊ. ಒಪ್ಪಣ್ಣಂಗೆ ಸಣ್ಣಾಗಿಪ್ಪಾಗಳೇ ಚೆಂಜ್ಞಾಯಿಗೊ.
ಅವರ ಮನೆಯ ಸಣ್ಣ ಬೆಳವಣಿಗೆ ಒಪ್ಪಣ್ಣಂಗೆ ಈ ವಾರ ಇಡೀ ತಲೆಲಿ ತಿರುಗೆಂಡು ಇದ್ದತ್ತು.
~
ರಾಮಣ್ಣುವಿನ ದೊಡ್ಡ ಆಣುವಿನ ಹೆಸರು ಸತೀಸೆ- ಹೇದು.
ಇದು ಮಾಷ್ಟ್ರುಮಾವನ ದೊಡ್ಡಮಗನ ಕ್ಲಾಸು. ಕಲಿತ್ತರಲ್ಲಿಯೂ ಉಷಾರಿ – ಹೇದು ಲೆಕ್ಕ. ಅವರ ಮಟ್ಟಿಂಗೆ ಒಳ್ಳೆ ಮಾರ್ಕು ತೆಗಕ್ಕೊಂಡಿತ್ತು. ಒಂದುನೆ ಎರಡ್ಣೆ ಎಲ್ಲ ಕಳುದು – ಏಳುನೆ ದಾಂಟಿ – ಹತ್ತುನೆಯೂ ದಾಂಟಿದ ಮತ್ತೆ – ಕಾಸ್ರೋಡಿಲಿ ಡಿಪ್ಲೊಮ ಕಲ್ತಿಕ್ಕಿ ಬೆಂಗ್ಳೂರಿಂಗೆ ಹೋಯಿದು.
ಮಾಷ್ಟ್ರುಮಾವನ ಮಗ ಇಂಜಿನಿಯರು ಕಲಿವಲೆ ಹೋದಿಪ್ಪಾಗಳೇ – ಸತೀಶ್ ಬೆಂಗ್ಳೂರಿನಲ್ಲಿ ಇರೂದು – ಹೇದು ಸುದ್ದಿ ಊರಿಲಿ.
ಯೇವದೋ ಕಾರು ಮಾರ್ತ ಅಂಗುಡಿಲಿ ಕೆಲಸಕ್ಕೂ ಸೇರಿದ್ದತ್ತು.
ಅಪುರೂ…ಪಲ್ಲಿ ಊರಿಂಗೆ ಬಂದಿಪ್ಪಾಗ “ಒಪ್ಪಣ್ಣೇರೇ – ಹೇಗಿದ್ದೀರಿ” – ಹೇದು ಮಾತಾಡ್ಳೂ ಸಿಕ್ಕಿಗೊಂಡು ಇದ್ದತ್ತು.
ಬೆಂಗ್ಳೂರಿಂಗೆ ಹೋದ ಕೂಡ್ಳೆ ನಮ್ಮ ಊರಿನವಕ್ಕೆ ಕನ್ನಡ ಬದಲುಸುವ ಶೋಕಿ ಇರ್ತಿದಾ – ಹಾಂಗೇ ಈ ಜೆನರ ಕನ್ನಡವೂ ಗಟ್ಟ ಹತ್ತಿದ್ದತ್ತು – ಗೊಂತಾಗಿಂಡು ಇದ್ದತ್ತು.
~
ಸತೀಸಂಗೆ ಒಂದು ತಮ್ಮ.
ಗಿರಿಧರ – ಹೇದು ಹೆಸರು.
ಮೂರ್ನಾಕು ಒರಿಷ ಸಣ್ಣ ಆದ ಕಾರಣ ಅಣ್ಣಂಗೆ ಸಣ್ಣಸಾಲೆ ಮುಗುದ ಮತ್ತೆ ಇದು ಸೇರಿತ್ತು, ಇದು ದೊಡ್ಡ ಸಾಲೆಗೆ ಸೇರುವ ಹೊತ್ತಿಂಗೆ ಅಣ್ಣಂಗೆ ಆ ಸಾಲೆಂದಲೂ ಹೆರಟಾಯಿದು.
ಹಾಂಗಾಗಿ ಅದರ ಅಣ್ಣನ ಕೈಗೆ ಇದು ಸಿಕ್ಕಿದ್ದಿಲ್ಲೆ, ಅಲ್ಲದ್ದರೆ ಅಣ್ಣನೂ ಇದರ ಹಾಂಗೇ ಆವುತ್ತಿತೋ ಏನೊ!
ಎಂತಾಯಿದು?
ಅಪ್ಪು – ಗಿರಿದರೆ – ಸಾಲೆಗೆ ಹೋಪಾಗ ಕಾಲ ಬದಲಿಗೊಂಡು ಇದ್ದತ್ತು. ಅದರ ಅಣ್ಣನ ಕ್ಲಾಸಿನ ಹಾಂಗಿಪ್ಪ ಓದುವಿಕೆಯ ಪೂರಕ ವಾತಾವರಣ ಇದ್ದತ್ತಿಲ್ಲೆ.
ಹಾಂಗಾಗಿ, ಅಲ್ಲಲ್ಲಿ ಪಿರ್ಕಿಗಟ್ಟುದು, ಹಾರುದು, ಓಡುದು, ಬಲಿಪ್ಪುನೆ – ಪುರುಸೊತ್ತಪ್ಪಗ ಓದುದು.
ಅಣ್ಣನ ಮರಿಯಾದಿ ತೆಗಿಲಿಕ್ಕೆ ಹುಟ್ಟಿದ್ದೋ ನೀನೂ? – ಹೇದು ಅದರ ಅಣ್ಣಂಗೂ – ಅದಕ್ಕೂ ಮಗ್ಗಿ ಕೇಳಿದ ನಾಗೇಶ್ಮಾಷ್ಟ್ರು ಬೆತ್ತ ಹೊಡಿಮಾಡುವಾಗ ಕೇಳಿಗೊಂಡು ಇತ್ತಿದ್ದವು.
ನಿನಿಗೆ ತಲೆ ಉಂಟು, ಆದ್ರೆ ಕರ್ಚು ಮಾಡೂದಿಲ್ಲ – ಹೇದು ಪುಸುಲಾಯಿಸೆಂಡೂ ಇತ್ತಿದ್ದವು.
ಕರ್ಚು ಮಾಡಿ ಮುಗುಶುಸ್ಸು ಎಂತ್ಸಕೆ ಹೇದು ಕೂದ್ದೋ ಏನೋ, ಉಮ್ಮಪ್ಪ.
ಮೂರು ಒರಿಶದ ದೊಡ್ಡಸಾಳೆ ಮುಗುಶುಲೆ ನಾಲ್ಕು ಒರಿಶ ಹಿಡುದ್ದು ಗಿರಿಧರಂಗೆ.

ಎಳನೇ ಎತ್ತುವಾಗಲೇ – ಒಂದು ನಮೂನೆ ದಾರಿ ತಪ್ಪಿದ ಬಗೆ ಆಗಿಂಡು ಬಯಿಂದು.
ಇದರೆಡಕ್ಕಿಲಿ ಎಲ್ಲಿಯೋ ಹರುದುಬಿದ್ದು ಅದರ ಕೈ ಒಂದು ಮುರುದತ್ತತ್ತೆ. ಅಷ್ಟಪ್ಪಗ ಒಂದೂವರೆ ತಿಂಗಳು ಸಾಲೆಗ್ ರಜೆ.
ನಾಗರೀಕತೆಂದಲೇ ದೂರ ಆದ ಹಾಂಗೆ ಆಗಿದ್ದತ್ತು ಅದಕ್ಕೆ.
ಬೇಕಾಬಿಟ್ಟಿ ಆಗಿದ್ದತ್ತು. ಆರುದೇ ಹೇಳುವೋರೂ ಇಲ್ಲೆ, ಕೇಳುವೋರೂ ಇಲ್ಲೆ. ಮನೆಲಿ ಇದ್ದಿದ್ದ ಅಜ್ಜಿಯ ಮಂಞಣೆಮಾಡಿ ಮಾಡಿ ರಜ ರಜ ಎಸರು ತೆಕ್ಕೊಂಬಲೆ ಸುರುಮಾಡಿತ್ತಾಡ.

ದೊಡ್ಡ ಸಾಳೆಗೆ ಹೋಪಾಗ ಅಂತೂ – ಗಡಂಗಿಲಿ ಸಿಕ್ಕುತ್ತ ಮಜ್ಜಿಗೆನೀರು ಕುಡಿಸ್ಸು, ಕುಡುದಿಕ್ಕಿ ಬಚ್ಚಿ ಅಪ್ಪಾಗ ಮಾರ್ಗದ ಕರೆ ತಣಿಲಿ ಮನುಗಿ ಒರಗುಸ್ಸು – ಹೀಂಗಿರ್ಸ ಏರ್ಪಾಡುಗೊ ಸುರು ಆಗಿಂಡು ಇದ್ದತ್ತಾಡ. ಬೈದ್ದೇರ್ ನೇಮದ ಇರುಳು ಒಂದರಿ ಕುಡುದು ಬಿದ್ದುಗೊಂಡು ಇದ್ದತ್ತು ಹೇದು ಅದರ ಕಂಡ ಸುಮಾರು ಜೆನ ಹೇಳಿದ್ದು ಒಪ್ಪಣ್ಣನ ಕೆಮಿಗೂ ಬಿದ್ದಿದ್ದತ್ತು.
ಹತ್ತುನೆ ಆದ ಮತ್ತೆ ವಿಶೇಷ ಓದಲೆ ಎಂತೂ ಹೋಯಿದಿಲ್ಲೆ. ಮಾಷ್ಟ್ರಕ್ಕೊ ಕಲಿಶಿದ್ದು ಸಾಕು ಕಂಡತ್ತು. ಇನ್ನು ಏನಿದ್ದರೂ ಸ್ವಾಧ್ಯಾಯ ಮಾಡುವೊ° – ಹೇದು.
~
ಸತೀಶ ಅಂಬಗಂಬಗ ಊರಿಂಗೆ ಬಂದುಗೊಂಡು ಇತ್ತು.
ಕಾರಿನ ಅಂಗುಡಿಲಿ ಕೆಲಸ ಮಾಡಿ ಕಾರಿನ ಪಿಟ್ಟಿಂಗು ಮಾಂತ್ರ ಅಲ್ಲ, ಕಾರನ್ನೇ ಕಲ್ತತ್ತು. ಕ್ರಮೇಣ ಬೆಂಗುಳೂರಿಲಿ ಓಡುಸುಲೆ ಕಲ್ತತ್ತು. ಅಪುರೂಪಲ್ಲಿ ಊರಿಂಗೂ ತಪ್ಪಲೆ ಅಭ್ಯಾಸ ಆತು. ಸತೀಶಗು ಕಾರು ಉಂಡು ಇತ್ತೆ – ಹೇದು ಊರಿಲಿ ಗೌಜಿ. ರಾಮಣ್ಣುವಿನ ಜಾಲಿಲಿ ಕಾರು ನಿಂದಿದು ಹೇದರೆ – ರಾಮಣ್ಣಂಗೆ ಸಂಭ್ರಮ.
ತನ್ನ ಮಗನ ಬೆಳವಣಿಗೆ ಅದಕ್ಕೆ ರಜರಜವೇ ಊರಿಲಿ ಸ್ಥಾನಮಾನ ಗೌರವ ಕೊಡ್ತಾ ಇದ್ದು – ಹೇಳ್ತ ಒಂದು ಆತ್ಮಾಭಿಮಾನವೂ ಸೇರಿತ್ತು ಹೇಳುವೊ°.
~
ಗಿರಿದರೆ ಸಾಲೆ ಬಿಟ್ಟಮತ್ತೆ ವಿಶೇಷ ನೇರ್ಪ ಆಯಿದಿಲ್ಲೆ.
ಮದಲು ಶಾಲೆಂದ ಹೋಪಗಳೂ, ಬಪ್ಪಗಳೂ ಮಾಂತ್ರ ಕುಡಿವಲೆ ಸಮಯ ಆಗಿಂಡು ಇದ್ದದು, ಈಗ ಮೂರೊತ್ತೂ ತಲಗೆ ಎರಕ್ಕೊಂಬಲೆ ಸಮಯ ಸಿಕ್ಕುತ್ತು!
ಇಪ್ಪತ್ತನಾಕು ಗಂಟೆಯೂ ಅಮಲು ತೆಕ್ಕೊಳ್ತು, ನೆರಳಿಲಿ ಮನಿಕ್ಕೊಳ್ತು ಹಾಂಗಾಗಿ ಊರೋರಿಂಗೆ ಕಾಂಬಲೆ ಸಿಕ್ಕುತ್ತಿಲ್ಲೆ – ಹೇದೂ ಸುದ್ದಿ ಆತು.
ಇರಳಿ, ಅದರ ದಾರಿ ಅದಕ್ಕೆ, ನಮ್ಮ ದಾರಿ ನವಗೆ. ಈಗಾಣ ಸಂಕುಗೆ ಪ್ರಾಯ ಆತು; ಇನ್ನಾಣ ತಲೆಮಾರಿನೋರಿಂಗೆ ಒಂದು ಸಂಕು ಆಗೆಡದೋ- ಹೇದು ಊರೋರು ಗ್ರೇಶಿಂಡವು.
ಹೆಚ್ಚು ಕಮ್ಮಿ ಒಂದೊರಿಶ ಎಂತದೂ ಗೊತ್ತು ಗುರಿ ಇಲ್ಲದ್ದೆ
~
ಊರೋರು ಹಾಂಗೆ ಗ್ರೇಶಲಿ, ಆದರೆ ಅದರ ಅಣ್ಣ – ಹಾಂಗೆ ಗ್ರೇಶಿದ್ದಿಲ್ಲೆ.
ಅದಕ್ಕೆ ಈ ತಮ್ಮ ಹೀಂಗಾತಾನೇ – ಹೇದು ಭಾರೀ ಬೇಜಾರಾಗಿಂಡು ಇದ್ದತ್ತು. ಮನಸಿನ ಒಳವೇ.
ಆದರೂ ಎಂತ ಮಾಡುಸ್ಸು!
ಧರ್ಮಸ್ಥಳದೋರ ಶಿಬಿರಕ್ಕೆ ಮಾತಾಡಿದ್ದು, ಹದಿನೈದು ದಿನ ಗಿರಿದರನ ಅಲ್ಲಿ ಬಿಟ್ಟಿಕ್ಕಿ ಬಂತು.
ಆಶ್ಚರ್ಯ ರೀತಿಲಿ – ಜೆನ ಬದಲಿ ದಾರಿಗೆ ಬಂತು.
ಹಾಂಗೆ ಊರೋರು ಗ್ರೇಶಿಗೊಂಡವು.
~
ಒಪಾಸು ಊರಿಂಗೆ ಬಂದಪ್ಪಗ – ಪುನಾ ಅಂತೇ ಮನೆಲಿ ಕೂಬಲೆ ಬಿಟ್ರೆ ಹಾಳಕ್ಕು ಹೇದು – ಅದಕ್ಕೊಂದು ಕೆಲಸ ಆಯೇಕನ್ನೇ.
ಪಿಟ್ಟರ್ ವಿಶ್ವನಾಥನ ಹತ್ತರೆ ಬೆಂಗ್ಳೂರಿನ ಸತೀಶೆರ್ ಮಾತಾಡಿ – ಈ ಗಿರಿದರಂಗೆ ಒಂದು ಬೇಲೆ ತೆಗೆಶಿ ಕೊಟ್ಟತ್ತಾಡ.
ಪಿಟ್ಟರ್ ವಿಶ್ವನಾಥ ಹೇದರೆ ಮದಲಿಂಗೆ ಕುಡ್ಕೊಂಡು ಇದ್ದರೂ, ಈಗ ದೊಡಾ ದೈವಭಕ್ತ- ಅಯ್ಯಪ್ಪ ಗುರುಸಾಮಿ.
ಹಾಂಗೆ, ಅದರ ಒಟ್ಟಿಂಗೆ ಇದ್ದರೆ ರಜಾ ಸರಿ ಆಕ್ಕು – ಹೇದು ಅದರ ಮನೆಯೋರುದೇ ನೆಮ್ಮದಿಲಿ ಕೂದವು.
ಹಾಂಗೆ, ಗಿರಿದರ ಪಿಟ್ಟರ್ ಆಗಿ ಊರಿಲಿ ರಜಾ ಪರಿಚಿತ ಅಪ್ಪಲೆ ಸುರು ಆತು.

ಪಂಪು ಹಾಳಾಗಿದೆ, ಪೈಪು ತುಂಡಾಗಿದೆ, ಫೇನ್ ತಿರ್ಗೂದಿಲ್ಲ, ಕರೆಂಟ್ ಬರ್ಪುಜ್ಜಿ – ಎಲ್ಲದಕ್ಕೂ ಮದಲು ವಿಶ್ವನಾಥನೇ ಆಯೇಕು. ಈಗ ಗಿರಿಧರನೂ ಕೆಲಸ ಕಲ್ತುಗೊಂಡಿದು. ವಿಶ್ವನಾಥಂಗೆ ಪುರೇಸದ್ದಲ್ಲಿಗೆ ಗಿರಿಧರನೇ ಹೋಪದು.
ಅಂತೂ – ಎಲ್ಲೋರಿಂಗೂ ಗುರ್ತದ, ಎಲ್ಲೋರಿಂಗೂ ಬೇಕಾದ ಒಂದು ಗಿರಾಕಿ ಆತದು.
ಊರಿಲಿ ಫೋನು ಲೈನ್ ನೋಡ್ತ ಕಿಟ್ಟಣ್ಣಂದು, ಕರೆಂಟು ಲೈನ್ ನೋಡ್ತ ಸುಬ್ರಾಯಂದು ಆಗಿ ಪಿಟ್ಟರು ಗಿರಿದರನ ನಂಬರುದೇ ಎಲ್ಲೋರ ಹತ್ರೆ ಇಪ್ಪ ಹಾಂಗಾತು.
ರಾಮಣ್ಣುಗೆ ಸತೀಶನ ಬೆಂಗ್ಳೂರು ಫೇಮಸ್ಸಿಂದಲೂ – ಗಿರಿಧರನ ಊರಿನ ವಳ್ಡುಫೇಮಸ್ಸು ಹೆಚ್ಚು ಆಶ್ಚರ್ಯ ಆತು.
ಎಲ್ಲ ಸುಸೂತ್ರಲ್ಲಿ ಇದ್ದತ್ತು.
~
ಕಳುದೊರಿಶ ಸತೀಶಂಗೆ ಮದುವೆ ಆತು. ಬೆಂಗ್ಳೂರು ಕೂಸು.
ಅಷ್ಟೋ ಇಷ್ಟೋ ಪೈಶೆ ಕೂಡುಸಿದ್ದರ್ಲಿ ಒಂದು ಕಾರು ಬಂತು.
ಕಳುದ ತಿಂಗಳು ಒಂದು ಮನೆಯೂ ತೆಗದು ಒಕ್ಕಲಾತಾಡ.
ತುಂಬ ದೊಡ್ಡ ಸಾಧನೆ ಮಾಡಿದ ಹೆಮ್ಮೆ ಅದು.
ಮನೆ ಒಕ್ಕಲು ಕಳಿಶಿ ಊರಿಂಗೆ ಬಂದು ರಾಮಣ್ಣು
ರಾಮಣ್ಣು ಸಂಸಾರ ಇಡೀ ಹೋಗಿ ಗೌಜಿಲಿ ಮನೆಒಕ್ಕಲು ಕಣ್ಣು ತುಂಬುಸೆಂಡು ಬಂದವು.
~

ಇದರೆಡಕ್ಕಿಲಿ, ಗಿರಿಧರನ ಕೈಲಿ ರಜಾ ಪೈಶೆ ತಿರುಗಲೆ ಸುರು ಆಗಿತ್ತಲ್ಲದೋ – ಪುನಾ ಹಳೇ ಚಾಳಿ ಎಳಗಿತ್ತು.
ಬಾಲ್ಯಲ್ಲಿ ಸಣ್ಣ ಪೈಶೆಲಿ ಗಂಗಾಸರ ಕುಡ್ಕೊಂಡಿದ್ದದು, ಈಗ ದೊಡ್ಡ ಪೈಶೆಲಿ ಕುಪ್ಪಿ ಬಗ್ಗುಸಲೆ ಸುರು ಮಾಡಿತ್ತು.
ದಿನಾ ಹೊತ್ತೋಪಗ ಕರಿಮಾರ್ಗದ ಕರೆಲಿಪ್ಪ ಬಾರಿಂಗೆ ಹೋಗಿ ರಜಾ ಬಗ್ಗುಸಿ ಬಪ್ಪಲೆ ಸುರು ಮಾಡಿತ್ತಾಡ.

ಮನೆಲಿ ಸುದ್ದಿ ಗೊಂತಪ್ಪಲೆ ಸಮಯ ಬೇಕಾಯಿದಿಲ್ಲೆ. ರಜ ದಿನಲ್ಲೇ ಗೊಂತಾತು.
ಮನೆಲಿ ಹೇಳಿದವಾಡ – ಇದಾ, ಬೇಡ; ಧರ್ಮಸ್ಥಳದ ಹರಕ್ಕೆ ಇದ್ದು – ಕುಡಿಯೇಡ -ಹೇದು.
ಕುಡುದಿಪ್ಪಗಳೇ ಹಾಂಗೆ ಹೇದವೋ ಕಾಣ್ತು, ಹೇಳಿದೋರಿಂಗೆ ಎರಡೆರಡು ಕಾಸಿ ಮಡಗಿತ್ತಾಡ.

ಉದಿ ಉದಿಯಪ್ಪಗಳೇ ಕುಡುದು ಬೇಲೆ ಮಾಡ್ಳೆ ಬಂದುಗೊಂಡಿತ್ತಾಡ.
ಕ್ರಮೇಣ – ಊರಿಲಿ ಗಿರಿಧರನ ನಂಬ್ರ ಉದ್ದುಲೆ ಸುರು ಆತು. ಅದರ ಬಪ್ಪಲೆ ಮಾಡುದುದೇ ಕಡಮ್ಮೆ ಆತು.
ಪೈಶೆಯೂ ಕಡಮ್ಮೆ ಆತು.
ತಲೆಬೆಶಿ ಜಾಸ್ತಿ ಆತು.
ಕುಡಿತ್ತ ಜಾಸ್ತಿ ಆತು.
~
ಮೊನ್ನೆ ಅದರ ಅಣ್ಣನ ಮನೆ ಒಕ್ಕಲು ಕಳಿಶಿ ಬಂದ ಮತ್ತಾಣ ವಾರ – ಕೂದಲ್ಲೇ ಒಂದರಿ ತಲೆತಿರುಗಿ ಬಿದ್ದತ್ತಾಡ.
ಏನ ಮಾಡಿರೂ ಬೋಧ ಬಯಿಂದಿಲ್ಲೆ.
ಕೂಡ್ಳೇ ಕಾಸ್ರೋಡಿಂಗೆ ಕೊಂಡೋದವು. ಇಲ್ಲಿ ಆತೇ ಇಲ್ಲೆ – ಹೇಳಿದ್ಸಕ್ಕೆ ಕೊಡೆಯಾಲಕ್ಕೆ ಕೋಂಡೋದವು.
ಬ್ರೈನು ಹೇಮರೇಜೋ, ಲಿವರ್ ಡೇಮೇಜೋ – ಎಂತೆಲ್ಲ ದೊಡ್ಡ ದೊಡ್ಡದು ಹೇಳಿದವು ಡಾಗುಟ್ರು.
ಧರ್ಮಸ್ಥಳದ ಕೋಪ – ಹೇದು ರಾಮಣ್ಣು ತಿಳ್ಕೊಂಡತ್ತು.
ಕುಡುದು ಕುಡುದು ಕುಡುದು – ಕರುಳು ಕರಗಿದ್ದು – ಹೇದು ನಾಟಿಮದ್ದಿನ ಅಕ್ಕಮ್ಮ ಸುದ್ದಿ ಗೊಂತಪ್ಪಗ ಹೇಳಿತ್ತಾಡ.
ಕಾರಣ ಎಂತದೇ ಇರಳಿ, ಗಿರಿಧರನ ಜೀವ ಒಳುದ್ದಿಲ್ಲೆ.
ಒಂದೂವರೆ ವಾರ ಹೋರಾಡಿ, ಅಕೇರಿಗೂ ಆ ದೇಹಂದ ವಿಮುಕ್ತಿ ಆತು.
~

ರಾಮಣ್ಣುವಿನ ಇಬ್ರು ಮಕ್ಕೊ.
ಒಂದು ತುಂಬ ಒಳ್ಳೆ ಸಂಸ್ಕಾರಲ್ಲಿ ಬೆಳದು ಚೆಂದಕೆ ಓದಿ ಒಳ್ಳೆ ಕೆಲಸಲ್ಲಿ ಸೇರಿ, ಮದುವೆ ಮನೆ ಮಾಡಿ ಸಂತೊಷಲ್ಲಿ ಇದ್ದತ್ತು.
ಇನ್ನೊಂದು ಸಣ್ಣಾಗಿಪ್ಪಗಳೇ ದಾರಿ ತಪ್ಪಿ, ಚಟ ಹತ್ತುಸಿಗೊಂಡು, ಚಟಲ್ಲೇ ಚಟ್ಟ ಸೇರಿತ್ತು.
ಅದೇ ಮನೆ, ಅದೇ ಶಾಲೆ, ಅದೇ ಪರಿಸರ, ಪ್ರೋತ್ಸಾಹ – ಒಂದು ವಿನಿಯೋಗ ಮಾಡಿತ್ತು, ಇನ್ನೊಂದು ದುರ್ವಿನಿಯೋಗ ಮಾಡಿತ್ತು.

ಒಂದೇ ದಿಕ್ಕಂದ ಹೆರಟ ಒಂದೇ ನಮುನೆ ಎರಡು ದೋಣಿಗೊ, ಒಂದು ಮುಳುಗಿತ್ತು, ಇನ್ನೊಂದು ಗುರಿ ಸೇರ್ತಾ ಇದ್ದು.
ಸಣ್ಣ ಪ್ರಾಯಲ್ಲೇ ಬೆಂಗ್ಳೂರಿಲಿ ಮನೆ ತೆಕ್ಕೊಂಡು ಜೀವನಲ್ಲಿ ಹಂತಕ್ಕೆ ಬಂದ ದೊಡ್ಡಮಗನ ಬಗ್ಗೆ ಕುಷಿಪಡೆಕ್ಕೋ,
ತುಂಬ ಸಣ್ಣ ಪ್ರಾಯಲ್ಲೇ ಬೇಡದ್ದ ರೋಗವ ದೇಹಕ್ಕೆ ಬರುಸಿಗೊಂಡು ದುರ್ಮರಣ ಹೊಂದಿದ ಸಣ್ಣಮಗನ ಬಗ್ಗೆ ಬೇಜಾರು ಮಾಡೇಕೋ –
ರಾಮಣ್ಣುಗೆ ಅರ್ತ ಆಗಿಂಡಿಲ್ಲೆ.
~

ಒಂದೊಪ್ಪ: ಚಟಂಗೊ ಅಲ್ಪತೃಪ್ತಿ ಕೊಡುಗು, ಆದರೆ ಶ್ರಮಪಟ್ಟು ಮಾಡಿದ ಕೆಲಸ ಕೊಡುವ ತೃಪ್ತಿ ದೂರ, ಆದರೆ ಶಾಶ್ವತ.

~
ಸೂ: ರಾಮಣ್ಣು, ಗಿರಿದರ, ಸತೀಶ – ನಿಜಜೀವನಲ್ಲಿ ಇವರ ಹೆಸರುಗೊ ಹಾಂಗಲ್ಲ ಆತೋ. 🙂

2 thoughts on “ಒಂದೇ ಸಂಸಾರದ ಎರಡು ದೋಣಿಗೊ..

  1. ಚಟ ಹಿಡುದರೆ ಅದು ಚಟ್ಟ ಹತ್ತುಸದ್ದೆ ಬಿಡ. ಗಿರಿಧರನ ಜೀವನ ಸರಿಯಾತೋ ಹೇಳಿ ಗ್ರೇಶಿಅಪ್ಪಗ ನಾಯಿ ಬೀಲದ ಹಾಂಗೆ ಪುನ: ಸುರುಟಿತ್ತದ. ಒಳ್ಳೆ ಸಂದೇಶ ಕೊಟ್ಟ ನಿಜ ಕತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×