Oppanna.com

ಊರವೇ ಕಟ್ಟಿದ ದೇವಸ್ಥಾನಲ್ಲಿ ಊರ ಮದುವಗೆ ಜಾಗೆ ಇಲ್ಲೆಡ..!

ಬರದೋರು :   ಒಪ್ಪಣ್ಣ    on   11/06/2010    15 ಒಪ್ಪಂಗೊ

ಅಧಿಕಮಾಸವೋ, ಮೌಢ್ಯವೋ ಮತ್ತೊ ಇದ್ದರೆ ಸಮ, ನಮ್ಮೋರಿಂಗೆ ಪುರುಸೊತ್ತು.
ಎಂತಾರು, ಯೇವದಾರು ನೇರಂಪೋಕು ಶುದ್ದಿ ಮಾತಾಡಿಗೊಂಡು, ಬೈಲಿನೋರು ಹೊತ್ತುಕಳವದು ಇಪ್ಪದೇನ್ನೆ!
ಈಗಂತೂ ಲೊಟ್ಟೆಪಟ್ಟಾಂಗ ಮಾಡುವೊ ಹೇಳಿರೆ ಬೈಲಿನೋರು ಆರುದೇ ಕಾಂಬಲುದೇ ಸಿಕ್ಕವಿದಾ!
ಮೇಗಂದ ಮೇಗೆ ಜೆಂಬ್ರಂಗೊ, ಮೂರು ಹೊತ್ತುದೇ ಬೆಣ್ತಕ್ಕಿ ಅಶನ ಊಟ!
ಜಾಸ್ತಿ ತಿಂದರೆ ಆಗದ್ದೆ ಬತ್ತು ಕೆಲವು ಸರ್ತಿ!

ದೊಡ್ಡಬಾವನ ಅಜ್ಜನ ಮನೆಲಿ – ದೊಡ್ಡಜ್ಜನಮನೆಲಿ – ಬದ್ಧ ಅಡ್ಡ, ಹಾಂಗೆ ಅವನ – ಶಾಲೆಲಿಯೂ ಕಾಂಬಲೆ ಸಿಕ್ಕ,
ಒಪ್ಪಕ್ಕ, ಪುಟ್ಟಕ್ಕ, ಶ್ರೀ ಅಕ್ಕ, ದೀಪಕ್ಕ, ಪೆರ್ಲದಣ್ಣ, ಬೀಸ್ರೋಡು ಮಾಣಿ, ಸಾರಡಿಪುಳ್ಯಕ್ಕೊ – ಅವು ಇವು ಆರುದೇ ಶುದ್ದಿಯೇ ಇಲ್ಲೆ, ಉಣ್ತ ಗೌಜಿಲಿ!
ಡಾಗುಟ್ರಕ್ಕಂಗೆ ಕಷಾಯ ಮಾಡ್ತ ಪರೀಕ್ಷೆ ಅಡ್ಡ! ನೆಡಿರುಳು ಎದ್ದು ಓದುಲೂ ಇರ್ತು ಕೆಲವು ಸರ್ತಿ..
ಬಂಡಾಡಿ ಅಜ್ಜಿ ಕೊಡೆಯಾಲದ ರಾಣಿ ಮನೆಗೆ ಹೋಯಿದೋ ಏನೋ – ಒಂದು ವಾರ ಆತಪ್ಪಾ, ಕಾಣದ್ದೆ!
ಅಜ್ಜಕಾನಬಾವ ಬೆಂಗುಳೂರಿಂಗೆ ಹೋಯಿದ, ಎಂತದೋ ಒಯಿವಾಟಿಲಿ – ನವಗರಡಿಯ..
ಜೆಂಬ್ರದ ಎಡಕ್ಕಿಲಿ ಮಳೆಯೂ ಬಪ್ಪಲಿದ್ದು – ಉಪದ್ರಕ್ಕೆ. ಹೋಪಗ ಬಪ್ಪಗ ಎಲ್ಲ ಚೆಂಡಿ ಅಪ್ಪಲೆ ದಕ್ಕಿತ.
ಮಳಗೆ ಜೆಂಬ್ರ ಬಿಡ್ಳೆ ಗೊಂತಿದ್ದೋ? ಚೆಂಡಿಲೇ ಹೋಯೆಕ್ಕಷ್ಟೆ.
ರಜ್ಜ ಸಾಬೊನು ಹಾಕಿಯೊಳಿ ಮಾವ° – ಹೇಳಿ ಚೆಂಡಿದೊಡ್ಡಬಾವನ ನೆಗೆ ಮಾಡ್ಳಿದ್ದು ಸಾರಡಿಪುಳ್ಳಿ ಒಂದೊಂದರಿ.
ಹೊತ್ತೋಪಗಾಣ ಲೊಟ್ಟೆಪಟ್ಟಾಂಗಕ್ಕೆ ಒಪ್ಪಣ್ಣ ಒಬ್ಬನೇ ಆಗಿ ಹೋಪದಿದಾ, ಜೆಂಬ್ರದ ಸಮೆಯಲ್ಲಿ.. 😉
~

ಅಂತೂ, ಜೆಂಬ್ರದ ಸಮೆಯಲ್ಲಿ – ಜೆಂಬ್ರದ ಶುದ್ದಿ ಬಿಟ್ಟು ಬೇರೆ ಯೇವದು ಬಕ್ಕು ಬಟ್ಟಕ್ಕೊಗೆ!? ಅಲ್ಲದೋ..?
ಅಲ್ಲಿ ಹೇಂಗಾತು, ಇಲ್ಲಿ ಜೆನ ಎಷ್ಟಕ್ಕು, ಪ್ರುಟ್ಸಲಾಡು ಹೇಂಗಿತ್ತು, ಹೋಳಿಗೆ ಹೇಂಗಾಯಿದು, ಜಿಲೇಬಿ ಕರಂಚಿದ್ದೋ – ಇದೇ ಶುದ್ದಿಗೊ.
ಒಪ್ಪಣ್ಣಂಗೂ ಈ ಸರ್ತಿ ಒಂದು ಜೆಂಬ್ರದ್ದೇ ಶುದ್ದಿ!
ಕುಡ್ಪಲ್ತಡ್ಕ ಬಾವ ಹೇಳಿದ್ದು – ಅವರ ಪೈಕಿಲೇ ಆದ್ದದಿದಾ, ಹಾಂಗೆ ಕಣ್ಣಿಂಗೆ ಕಟ್ಟಿದಾಂಗೆ ಹೇಳಿದ!
ನಿಂಗೊಗೂ ಹಾಂಗೇ ಹೇಳ್ತೆ..
~

ಕುಡ್ಪಲ್ತಡ್ಕ ಬಾವನ ಪೈಕಿ ಆರೋ ವಿಷ್ಣುಮಾವ° ಹೇಳಿ ಒಬ್ಬರಿದ್ದವು  –
ಅವರ ಮನೆ ಹೆಸರು ಕೇಳುಲೆ ಹೋಯಿದಿಲ್ಲೆ – ನವಗೆ ಜೆನಆರು ಹೇಳುದರಿಂದಲೂ ವಿಶಯಎಂತರ ಹೇಳ್ತದು ಮುಖ್ಯ..! 😉
ಒಪ್ಪಣ್ಣಂಗೂ ಅವರ ದೂರಂದ ನೋಡಿ ಗೊಂತಿದ್ದು, ಅಷ್ಟೇ.
ದೊಡ್ಡ ದೈವಭಕ್ತರು! ಅದರೊಟ್ಟಿಂಗೆ ಸಮಾಜದ ಸಂಘಟಕರುದೇ ಆಗಿದ್ದವು.
ಈಗ ಹತ್ತರುವತ್ತು ಒರಿಶ ಅಪ್ಪಲಾತು – ತಲೆಕಸವು ಪೂರ ಬೆಳಿಆಗಿ ಎದುರಾಣ ಹಲ್ಲು ಪೂರ ಕಪ್ಪಾಯಿದು! – ಮಾಷ್ಟ್ರುಮಾವನ ಹಾಂಗೇ ಎಲೆ ತಿನ್ನೆಕು ಅವಕ್ಕೆ!
ಇಬ್ರು ಮಕ್ಕೊ, ಒಬ್ಬ ಮಾಣಿ – ಒಂದು ಕೂಸು, ಕೀರ್ತಿ, ಆರತಿ- ಎರಡಕ್ಕೂ ಒಂದೊಂದು – ವಜ್ರಾಂಗಿಭಾವ ಹೇಳಿದಾಂಗೆ.
ಕೂಸಿಂಗೆ – ಎಲ್ಲಿಯೋ – ಮೂಡ್ಳಾಗಿ ಕೊಟ್ಟದು- ಅಂದೇ ಮದುವೆ ಆಗಿ ದೊಡಾ ಹೆಮ್ಮಕ್ಕೊ ಆಯಿದೀಗ! ಈ ಮಾಣಿಯ ಚಿಕ್ಕಮ್ಮನಷ್ಟಕೆ ಕಾಣ್ತು!

ಈಗ ಆ ಮಾಣಿಗೆ ಮದುವೆ ಪ್ರಾಯ.
ವಿಷ್ಣುಮಾವ° ಮಗಂಗೆ ಕೂಸು ಹುಡ್ಕಿಯೇ ಹುಡ್ಕಿದವು. ಈ ಬರಗಾಲಲ್ಲಿ ಕೂಸು ಹುಡ್ಕಲೆ ಮಾಣಿಯೂ ಅಪ್ಪಂಗೆ ರಜ ಸಕಾಯ ಮಾಡಿದ°! 😉
ಅದಿರಳಿ. ಕೂಸಿನ ಮನೆಲಿ ಬದ್ಧಕಳುತ್ತು – ಮದುವೆ ನಿಗಂಟು ಆಗಿಯೇ ಆತು.

ಮದುವೆ ಯೇವಗಪ್ಪಾ – ಬೌಶ್ಷ ಮೊನ್ನೆ ಆರಕ್ಕೆ – ಒಂಬತ್ತೂ ಇಪ್ಪತ್ತರ ಮತ್ತಾಣ ಕರ್ಕಾಟಕಲಗ್ನಲ್ಲಿ!
ಒಳ್ಳೆ ಒಂಬುತ್ತು ಇಬ್ರಿಂಗೂ – ಹಾಂಗಾಗಿ ನಮ್ಮ ಬೈಲಕರೆ ಜೋಯಿಷಪ್ಪಚ್ಚಿ ಇದೇ ಮೂರ್ತವ ಗಟ್ಟಿಮಾಡಿಗೊಂಡವು.
ಮೂರ್ತ ನಿಗಂಟಪ್ಪಗ ಹೋಲುದೇ (Hall) ನಿಗಂಟಾಗೆಡದೋ – ಅದರ ಬಗ್ಗೆ ದೊಡ್ಡ ತಲೆಬೆಶಿ ಮಾಡಿದ್ದವಿಲ್ಲೆ ವಿಷ್ಣುಮಾವ°.
ಎಂತಕೆ?
~

ಅವರ ಊರಿಲೇ ಒಂದು ದೇವಸ್ತಾನ ಇದ್ದು ದೇವಿಯ ದೇವಸ್ತಾನ, ಕಾನಾವು ಹೊಡೆಲಿ ಇಪ್ಪ ಹಾಂಗೇ ಇಪ್ಪದು!
ನಿಂಗೊಗೆ ಗೊಂತಿಪ್ಪಲೂ ಸಾಕು – ಅಂಬಗಂಬಗ ಅಲ್ಲಿ ದೊಡ್ಡದೊಡ್ಡ ಕಾರ್ಯಕ್ರಮ ಆಯ್ಕೊಂಡಿದ್ದದು ಪೇಪರಿಲಿ ಬಂದುಗೊಂಡಿತ್ತು.
ಈಗಾಣೋರು ಪೇಪರೆಲ್ಲಿ ಓದುತ್ತವು ಬೇಕೆ – ಒಂದು ಜಾತಿ ಟೀವಿ – ಮಾಷ್ಟ್ರಮನೆ ಅತ್ತೆ ಪರಂಚುಗು!
ಈಗಾಣ ದೊಡಾ ದೇವಸ್ತಾನಲ್ಲಿ ಕಾರ್ಯಕ್ರಮಂಗೊ, ವೆವಸ್ತೆಗೊ, ಸೌಕರ್ಯಂಗೊ, ಸೌಲಭ್ಯಂಗೊ ಎಲ್ಲ ಆಯೆಕ್ಕಾರೆ ಈ ವಿಷ್ಣುಮಾವನ ಕೈ ಇದ್ದೇ ಇತ್ತು.
ಅವರತ್ರೆ ಕೇಳಿರೆ ’ಎಲ್ಲ ದೇವಿಯ ದಯೆ’ ಹೇಳುಗು ನೇರಾನೇರ.
ಆದರೆ ಆ ಊರವರ ಒಟ್ಟುಮಾಡಿಗೊಂಡು – ಅವರ ಸೇರುಸಿಗೊಂಡು, ಶ್ರಮದಾನ ಮಾಡುಸಿಗೊಂಡು – ಓ! ಎಷ್ಟು ಬಂಙ ಬಯಿಂದವು!!

ಹಳೆಕಾಲದ ದೇವಸ್ತಾನ - ಸಮಾಜಕ್ಕೆ ಸದಾ ಬಾಗಿಲು ತೆಗದಿತ್ತು!
ಹಳೆಕಾಲದ ದೇವಸ್ತಾನ – ಸಮಾಜಕ್ಕೆ ಸದಾ ಬಾಗಿಲು ತೆಗದಿತ್ತು!

ನೋಡಿ ನೆಂಪೊಳುದವು ಈಗಳೂ ಹೇಳುಗು.
ಮುಳಿ ಮಾಡಿಲಿ ಇದ್ದ ಆ ದೇವಸ್ತಾನವ ಈಗ ಹೇಂಗೆ ಮಾಡಿದ್ದವು!
ಕರ್ಗಲ್ಲಿನ ಗರ್ಭಗುಡಿ, ಒಂದು ನಮಸ್ಕಾರ ಮಂಟಪ, ಕಲ್ಲು ಹಾಸಿದ ಅಂಗಣ, ನಾಲ್ಕು ಸುತ್ತು ಗೋಪುರ, ಹೆರ ಒಂದು ಜಾಲು, ಅಡಿಗೆ ಕೋಣೆ, ಊಟದ ಕೋಣೆ, ಮತ್ತೆ ಈಗ ಸದ್ಯ – ಒಂದು ಮದುವೆ ಹೋಲು – ಇಷ್ಟೆಲ್ಲ ಆಯೆಕ್ಕಾರೆ ಅಂತೆ ಆವುತ್ತಾ ಬಾವ!
~
ಈಗ ಆ ದೇವಸ್ತಾನ ಹೇಂಗೇ ಇರಳಿ, ಮದಲು ಅದೊಂದು ಮುರ್ಕಟೆಯೇ ಆಗಿತ್ತು.
ವಿಷ್ಣುಮಾವನ ಮೂಲ ಮನೆಲಿ ಪಾಲಾಗಿ ಈ ಊರಿಂಗೆ ಬಪ್ಪಗ ಈ ದೇವಸ್ತಾನಲ್ಲಿ ಸಮಗಟ್ಟು ಪೂಜೆಯೂ ಆಯ್ಕೊಂಡಿತ್ತಿಲ್ಲೆ.
ದೇವಸ್ತಾನದ ಮುಗುಳಿ ಬಿದ್ದಿತ್ತಿದ್ದು – ಹಾಂಗಾಗಿ ಪೂಜೆಬಟ್ರು – ಅಲ್ಲೇ ನೆರೆಕರೆಯವು- ’ಆನು ಪೂಜೆ ಮಾಡೆ’ ಹೇಳಿಗೊಂಡು ಇತ್ತಿದ್ದವು; ಮುಗುಳಿ ಇಲ್ಲದ್ರೆ ಪೂಜೆ ಮಾಡ್ಳಾಗಡ – ನಮ್ಮ ಊರಿನ ಒಂದು ಕ್ರಮ ಅದು. ಈಗ ಬೆಂಗುಳೂರಿಲಿ ನೋಡಿರೆ ಪೂರಾ ಟಯರೀಸು ದೇವಸ್ತಾನಂಗೊ ಅಡ- ಪೆರ್ಲದಣ್ಣ ಪರಂಚುತ್ತ ಒಂದೊಂದರಿ – ಅದಿರಳಿ.

ಮಣ್ಣಗೋಡೆಯ ಗರ್ಬಗುಡಿಯ ಮೇಗೆ ಮುಳಿಮಾಡಿನ ಮುಚ್ಚಿಗೆ.
ದೇವರ ತಲಗೆ ಬಟ್ಟಮಾವ ಎರವದು ಮಾಂತ್ರ ಅಲ್ಲದ್ದೆ – ಮಳೆಗಾಲಲ್ಲಿಯೂ ಅಭಿಶೇಕ ಆಯ್ಕೊಂಡಿತ್ತು.
ಗರ್ಬಗುಡಿಯ ಒಳ ಶುದ್ಧ ಇಪ್ಪ ಕಾರಣವೋ ಏನೋ – ಹರೆತ್ತದು -ಒಳ್ಳೆದು ಎಲ್ಲ ಸೋರಿಗಂಡು ಇತ್ತಡ..
ನಿತ್ಯ ಮೂರೊತ್ತು ಪೂಜೆ. ಮದ್ಯಾನ್ನಕ್ಕೆ ಅರ್ದ ಸೇರು ನೈವೇದ್ಯ, ಇರುಳಿಂಗೆ ಹಣ್ಣುಕಾಯಿ – ಈಗಳೂ ಅದೇ ಕ್ರಮ ಮುಂದರುದ್ದು.
ನಿತ್ಯಕ್ಕೆ ಬಟ್ಟಮಾವ ಇಕ್ಕು, ಬೇರೆ ಜೆನ ಬಂದುಗಂಡಿದ್ದದು ಕಮ್ಮಿ, ವಿಷ್ಣುಮಾವ° ಬಪ್ಪನ್ನಾರವೂ..!
ಒರಿಶಕ್ಕೊಂದರಿ ಜಾತ್ರೆಗೆ ಹತ್ತು ನೂರಯಿವತ್ತು ಜೆನ ಸೇರುಗು. ಬೆದ್ರಾಳ ತಂತ್ರಿಗೊ ಬಂದರೂ ಬಕ್ಕು – ಬೇರೆಲ್ಲಿಯೂ ಅಂಬೆರ್ಪು ಇಲ್ಲದ್ರೆ!
ಬಟ್ರು ಪೂಜೆಯ ಶ್ರದ್ಧೆಲೇ ಮಾಡಿಗೊಂಡು ಇತ್ತಿದ್ದವು, ಅದರಿಂದಾಗಿ ಊರಿಂಗೆ ಏನೂ ತೊಂದರೆ ಆಯಿದಿಲ್ಲೆ ಹೇಳ್ತವು ಹಳಬ್ಬರು..

ವಿಷ್ಣುಮಾವ° ಬಂದಮೇಗೆಯೇ ಈ ದೇವಸ್ತಾನದ ಚರ್ಯೆ ಬದಲಾದ್ದು.
ಅವು ಬಂದು ಕೂದಕೂಡ್ಳೇ, ‘ಎನ್ನ ಮನೆ ಗಟ್ಟಿ ಅಪ್ಪ ಮೊದಲು ದೇವರ ಮನೆ ಚೆಂದ ಮಾಡ್ತೆ’ ಹೇಳಿಗೊಂಡು ಹೆರಟವು.
ಹಾಂಗೆ ಹೇಳಿಗೊಂಡು, ಸೀತ ಹೋಗಿ ದೇವಸ್ಥಾನ ಒಡವಲೆ ಕೈ ಹಾಕಿದ್ದವಿಲ್ಲೆ,
ಬದಲಾಗಿ ಅದರ ಮೂಲ – ಊರಸಂಘಟನೆ ಮಾಡಿದವು.
~

ಊರಿಲಿ ಎರಡು -ಮೂರು ದಿಕ್ಕೆ ನಿತ್ಯಶಾಕೆ ಮಾಡುಸಿ ಜೆನ ಸೇರಿಸಿದವು.
ಮನೆಲಿ ಅಂತೇ ಲೊಟ್ಟೆಪಟ್ಟಾಂಗ ಹಾಕುತ್ತ ಜವ್ವನಿಗರಿಂಗೆ ಯೋಗಾಸನ, ಸೂರ್ಯನಮಸ್ಕಾರ ಇತ್ಯಾದಿ ಹೇಳಿಕೊಟ್ಟು ಗಟ್ಟಿಮುಟ್ಟು ಮಾಡುಸಿದವು – ಬಡ್ಡು ಜಾರುಸಿದವು.
ಹೊಡಿಮಕ್ಕಳಿಂದ ಹಿಡುದು ಎಲ್ಲೊರುದೇ ಇವರ ಶಾಕೆಲಿ ಬಂದು ಸೇರ್ತದು ಸುರು ಆತು.
ಊರಿಲಿ ಒಂದು ಬದಲಾವಣೆಯೇ ಬಪ್ಪಲೆ ಸುರು ಆತು. ಕೆಲವು ಪುಳ್ಳರುಗಳೇ ಶಾಕೆಮಾಡ್ಳೆ ಸುರು ಮಾಡಿದವು, ಎರಡೇ ಶಾಕೆ ಇದ್ದದು ರಜ ಜಾಸ್ತಿ ಆತು – ಇವರ ಮಾರ್ಗದರ್ಶನಲ್ಲಿ..

ಕೆಲವು ಪುಳ್ಳರುಗಳ ಸೇರುಸಿಗೊಂಡು ‘ಭಜನೆ’ಗಳ ರಾಗವಾಗಿ ಹೇಳಿಕೊಡ್ಳೆ ಸುರುಮಾಡಿದವು.
ಸುಕ್ಲಂಬರಬರಂ – ಹೇಳಿಗೊಂಡಿದ್ದ ಆಳುಗಳ ಮಕ್ಕೊ ಎಲ್ಲ ಸ್ಪಷ್ಟ ಉಚ್ಛಾರ ಮಾಡಿ ಹೇಳುಲೆ ಸುರುಮಾಡಿದವು.
ಊರಿನ ಭಜನಾಮಂಡಲಿ ದೂರದೂರಕ್ಕೆ ಹೋಗಿ ಒಳ್ಳೆ ಹೆಸರು ತಪ್ಪಲೆ ಸುರುಮಾಡಿತ್ತು. best replica rolex watches ಕೆಲವು ಭಜನಾ ಸ್ಪರ್ದೆಗೊಕ್ಕೆ ಹೋಗಿ ಪ್ರೈಸುದೇ ಸಿಕ್ಕಿತ್ತಡ. ಆ ಸಮೆಯಲ್ಲಿ ಅವರ ಹುರುಪುಕಂಡ ಕೆಲವು ‘ಬಜನೆಬಟ್ರು’ ಹೇಳಿಯೇ ಇವರ ಗುರುತಿಸಿಗೊಂಡು ಇತ್ತಿದ್ದವು.
~

ಇವರ ಶ್ರಮ ಇಷ್ಟಕ್ಕೇ ನಿಂದಿದಿಲ್ಲೆ
ಇಡೀ ಊರಿನ ಮನೆಮನೆಗೆ ಸಂಘಟನೆ ಎತ್ತುಲೆ ಬೇಕಾಗಿ ‘ನಗರಭಜನೆ‘ ಹೇಳ್ತ ಪರಿಕಲ್ಪನೆ ಶುರುಮಾಡಿದವು.
– ಊರ ದೇವಸ್ಥಾನದ ದೇವಿಯ ಪಟವ ಒಂದು ಮರದ ಪೀಟಲ್ಲಿ ಹಾಕಿಯೊಂಡು, ಆ ಊರಿನ ಪ್ರತಿ ಹಿಂದುವಿನ ಮನೆಗೆ ತೆಕ್ಕೊಂಡೋಗಿ, ಅವರ ತೊಳಶಿಕಟ್ಟೆ ಬುಡಲ್ಲಿ ಮಡಗಿ, ಇದೇ ಈ ಭಜನೆ ಮಾಡ್ತ ಪುಳ್ಳರುಗಳ ಒಟ್ಟಿಂಗೆ ನಾಕು ಬಜನೆ, ಒಂದು ಮಂಗಳ ಹಾಡಿ – ಒಂದು ಮಂಗಳಾರತಿ ಮಾಡ್ತ ಕ್ರಮ.

ಮನೆಯವಕ್ಕೆ ಊರದೇವರೇ ಅವರ ಮನೆಗೆ ಬಂದ ಕೊಶಿ, ಇವಕ್ಕೆ ಅವುದೇ ಸಂಘಟನೆಲಿ ಸೇರಿದ ಕೊಶಿ!
ಆರಂಭಲ್ಲಿ ನಗರಭಜನೆಗಪ್ಪಗ ಕೆಲವು ಮನೆ ಅಸಡ್ಡೆ ತೋರುಸಿದರೂ, ಈಗ ಊರವೆಲ್ಲರೂ ಸೇರಿ ಚೆಂದಲ್ಲಿ ಕಳುಶಿಕೊಡ್ತವಡ.
ಇಂತಾದಿನ ನಿಂಗಳಲ್ಲಿಗೆ ನಗರಬಜನೆ ಬಪ್ಪದು ಹೇಳಿ, ಆ ದಿನಕ್ಕಪ್ಪಗ ತೊಳಶಿಕಟ್ಟೆ ಶುದ್ದಮಾಡಿ, ಹಣ್ಣುಕಾಯಿ, ಅವಲಕ್ಕಿ ಎಲ್ಲ ಮಾಡಿಮಡಗಿ – ದೇವಿಯ ಎದುರುಗೊಂಬಲೆ ಕಾದುಗೊಂಡಿರ್ತವಡ.. ನಗರಭಜನೆ ಸುರುವಾಗಿ ಹತ್ತಿಪ್ಪತ್ತು ಒರಿಶ ಕಳ್ತಡ,
ಅದೊಂದು ಆ ಊರಿನ ‘ಕ್ರಮಂಗಳಲ್ಲಿ’ ಒಂದಾಗಿ ಹೋಯಿದು – ಹೇಳಿದ ಕುಡ್ಪಲ್ತಡ್ಕ ಬಾವ!
~

ಒಂದರಿ ಸಂಘಟನೆ ಗಟ್ಟಿ ಆದಕೂಡ್ಳೇ ಯೇವದೇ ಸಾಮಾಜಿಕ ಕೆಲಸ ಮಾಡ್ಳೆ ಕಷ್ಟ ಆಗ.
ಹಳೆಕಾಲಲ್ಲಿ ದೇವಸ್ತಾನಕ್ಕೆ ಸಮ್ಮಂದಪಟ್ಟವರ ಸೇರುಸಿಗೊಂಡು ಒಂದು ಮೀಟಿಂಗು ಮಾಡಿದವಡ. ದೇವಸ್ಥಾನದ ಜೀರ್ಣೋದ್ಧಾರ ಮಾಡ್ತ ಲೆಕ್ಕಲ್ಲಿ.
ಶಾಕೆ – ನಗರಭಜನೆ ಅದು ಇದು ಎಲ್ಲ ನೆಡಕ್ಕೊಂಡು ಇದ್ದ ಹಾಂಗೆಯೇ, ದೇವಸ್ತಾನದ ಪುನರುಜ್ಜೀವನ ಸುರು ಆತು.
ಎಲ್ಲೊರಿಂಗೂ ಇವರದ್ದೇ ಮಾರ್ಗದರ್ಶನ. ಇವರತ್ರೆ ಇದ್ದ ಒಂದು ಜೀಪು ಬೌಶ್ಷ ದೇವಸ್ತಾನದ ಜೀಪೆಯೋ – ಹೇಳಿ ಸಂಶಯ ಬಪ್ಪಷ್ಟು ಬಳಕೆ ಆಯಿದು ಆ ಸಮೆಯಲ್ಲಿ.

ಒಂದು ಗಡ್ದಿಂಗೆ ಅಷ್ಟಮಂಗಲ ಮಡಗುಸಿದವು, ಚಟ್ಟಂಚಾಲು ಹೊಡೆಣ ಪುದುವಾಳಿನ ಕೈಲಿ. ಬೆದ್ರಾಳ ತಂತ್ರಿಗಳ ಮಾರ್ಗದರ್ಶನಲ್ಲಿ ಜೀರ್ಣೋದ್ಧಾರ ಸುರು ಆತು.
ಊರು-ಪರಊರಿಲಿ ತಂಡ ತಂಡ ಮಾಡಿ ತನು-ಮನ-ಧನ ಸಂಗ್ರಹಕ್ಕೆ ಹೆರಟವು. ಒಳ್ಳೆ ಸಂಗ್ರಹ ಆತು, ದೇವಸ್ತಾನ ಬೆಳಗುತ್ತದು ಧೃಡ ಆತು.

ಮುಳಿಮಾಡು, ಗರ್ಭಗುಡಿ ತೆಗದು ಒಂದು ಬಾಲಾಲಯ ಮಾಡಿದವು.
ಕಲ್ಲುಕುಟಿಕ ತಮಿಳಂಗೊ ಬಂದು ಚೆಂದದ ಗರ್ಬಗುಡಿ, ನಮಸ್ಕಾರ ಮಂಟಪ ಮಾಡಿದವು.
ಗರ್ಭಗುಡಿ ಆಯ್ಕೊಂಡು ಇದ್ದ ಹಾಂಗೇ ಊರ ಮೇಸ್ತ್ರಿಗಳದ್ದು ಗೋಪುರದ ಕೆಲಸ ಆಗಿಯಿಂಡು ಇತ್ತು.
ಹಾಂಗೇ ಆಚಾರಿಗಳ ಮರದ ಕೆಲಸ – ಆಚೊಡೆಲಿ ಹೊಸ ಬಾವಿ ಕೆಲಸ, ಓ ಅತ್ಲಾಗಿ ಸಣ್ಣಮಟ್ಟಿನ ಟೇಂಕಿ, ನಳ್ಳಿಯ ವೆವಸ್ತೆ, ಇತ್ಯಾದಿ ಪ್ರಾಥಮಿಕ ವೆವಸ್ತೆಗಳ ಶರವೇಗಲ್ಲಿ ಸ್ವತಃ ವಿಷ್ಣುಮಾವನೇ ಎದುರು ನಿಂದು ಮಾಡುಸಿದವು.
ಆ ಸಮೆಯಲ್ಲಿ ಎಷ್ಟೋ ಒರಕ್ಕು ಬಿಟ್ಟು ಕೂಯಿದವು.
– ವಿಷ್ಣುಅಣ್ಣೇರ್ ದೇವಸ್ತಾನೊಟ್ ತಿಕ್ಕುವೆರ್ – ಹೇಳಿ ಊರವರ ಬಾಯಿಲಿ ಹೇಳುವಷ್ಟುದೇ ಜನಜನಿತ ಆತು.
ಕೆಲವು ದಿನ ಅದೇ ಅರ್ದಂಬರ್ದ ಕೆಲಸ ಆದ ಗೋಪುರಲ್ಲಿ, ನಮಸ್ಕಾರ ಮಂಟಪಲ್ಲಿ, ಅಡ್ಡಹಾಕಿದ ಅದರ ಕಲ್ಲು ಕುಂದಂಗಳಲ್ಲಿ ಮನುಗಿ ಇರುಳುದಿ ಮಾಡಿದ್ದವಡ.

ನಿಧಿಸಂಗ್ರಹ ನಿಧಾನಗತಿಲಿ ಹೋಪಗ ಸ್ವತಃ ಅವ್ವೇ ಜೀಪು ತಿರುಗಿಸಿ ಹೆರಟವು.
ಊರವರ ಕೆಲವು ಜೆನರ ಕರಕ್ಕೊಂಡು ಕೆಲವು ಗಟ್ಟಿ ಮನೆಗೊಕ್ಕೆ ಹೋಗಿ ಕೇಳಿದವಡ. ಇವರ ನಿಸ್ವಾರ್ಥ ಸೇವೆಯ ಸಾಮಾನ್ಯ ಎಲ್ಲೊರಿಂಗೂ ನೋಡಿ ಗೊಂತಿದ್ದಿದಾ –
ಹಾಂಗಾಗಿ ದೊಡ್ಡ ಸಂಗತಿ ಆಯಿದಿಲ್ಲೆ.

ಚೆಂದದ ಒಂದು ದೇವಸ್ಥಾನ ನಿರ್ಮಾಣ ಆತು. ಸುಣ್ಣ-ಬಣ್ಣ ಎಲ್ಲ ಹೊಡದು ಬೆಳಿಬೆಳಿ ಆತು.
ದೇವರ ಹೊತ್ತೋಂಡು, ತಂತ್ರ ತೂಗಿಯಂಡು ಚೆಂದಕೆ ಒಂದು ಜಾತ್ರೆ ಆತು – ಕುಂಬ್ಳೆ ಜಾತ್ರೆಯಷ್ಟು ಗೌಜಿ ಅಲ್ಲ- ಸಣ್ಣ ಮಟ್ಟಿಂಗೆ, ಆ ಊರಿಂಗೆ ಸಾಕಪ್ಪಷ್ಟು ದೊಡ್ಡದು.
ಕೇರಳದ ಚೆಂಡೆ, ಬೇಂಡು, ಉರುಗುತ್ತದು ಎಲ್ಲ ಬಂದು ಚೆಂದಲ್ಲಿ ಜಾತ್ರೆಯುದೇ ಕಳುದತ್ತು.
ದೊಡ್ಡ ಜವಾಬ್ದಾರಿ ಮುಗುತ್ತು.
~
ಊರ ದೇವಸ್ತಾನದ ಕೆಲಸ ಮುಗುದಮತ್ತೆ ತನ್ನ ಮನೆಯ ಸರಿಮಾಡ್ಳೆ ಹೆರಟವು.
ಅಂದು ತಾತ್ಕಾಲಿಕವಾಗಿ ಕಟ್ಟಿದ ಒಂದು ಮುರ್ಕಟೆ ಇತ್ತಷ್ಟೆ.
ದೇವರ ಮನೆ ಸರಿ ಆದ ಮತ್ತೆಯೇ ಈಗ ಅವರದ್ದರ ಸರಿ ಮಾಡ್ಳೆ ಸುರು ಮಾಡಿದ್ದು.
ಚೆಂದ – ಎಪ್ಪತ್ತಮೂರು ಕೋಲಿನ ಧ್ವಜಾಯಕ್ಕೆ ಒಂದು ಆಯ ಬರದು ಕೊಟ್ಟವು, ಜೋಯಿಷಪ್ಪಚ್ಚಿ.
ಒಳ್ಳೆ ಪಂಚಾಂಗದ ಒಂದು ಟಯರೀಸು ಮನೆ ಎದ್ದು ನಿಂದತ್ತು. ಆ ಮನೆ ಒಕ್ಕಲಿಂಗಂತೂ ಊರಿಂಗೆ ಊರೇ ಸೇರಿದ್ದು!
~
ಇದೆಲ್ಲ ಆಗಿ ಹನ್ನೆರಡೊರಿಶ ಕಳಾತು. ಈಗ ವಿಷ್ಣುಮಾವ° ಮನೆಮಟ್ಟಿಂಗೇ.
ಮೊದಲಾಣ ಬೆಂಬಲ ಇಲ್ಲೆ, ಮೊದಲಾಣ ಹುರುಪು ಇಲ್ಲೆ, ಉತ್ಸಾಹವೂ ಕಮ್ಮಿ ಆಯಿದು!
ಊರಿಲಿ ಓಡಾಟ ಕಮ್ಮಿ ಆಯಿದು. ಭಜನೆ ಉಸ್ತುವಾರಿಯ ಒಂದು ಕಮಿಟಿ ಮಾಡಿ ಕೊಟ್ಟಿದವು.
ಜೀಪು ಕೊಟ್ಟಿದವು, ಅಗತ್ಯ ಕಂಡ್ರೆ ಬಸ್ಸಿಲಿ ಹೋಗಿ ಬತ್ತವು.

ಅಂಬೆರ್ಪು ಅಂಬೆರ್ಪಿಲಿ ಕಟ್ಟಿದ ಅಲಂಕಾರದ ಮಂಟಪ – ಊರೋರ ಒಗ್ಗಟ್ಟಿಂಗೆ ಸಾಕ್ಷಿ!

ಊರಿಲಿ ಸಮಗಟ್ಟು ಶಾಕೆ ಆವುತ್ತಿಲ್ಲೆ ಹೇಳ್ತದು ಒಂದು ಬಿಟ್ರೆ, ಬೇರೆ ಯೇವದೂ ತಲೆಬೆಶಿ ಇಲ್ಲೆ ಅವಕ್ಕೆ.
~
ಮತ್ತಾಣ ಹತ್ತನ್ನೆರಡು ಒರಿಶಲ್ಲಿ ಊರೇ ಕಾಣದ್ದಾಂಗಿಪ್ಪ ಬದಲಾವಣೆ ಆಯಿದು!
ಆ ಊರಿನ ಒಂದು ದೊಡ್ಡ ಮನಿಷ° ಬೆಂಗುಳೂರಿಲಿ ಇದ್ದಡ – ಬೆಂಗುಳೂರಿನ ಪೇಟೆನೆಡುಕೆ ಎಷ್ಟೋ ಎಕ್ರೆ ಜಾಗೆ ಇದ್ದಡ ಅದರ ಕೈಲಿ.
ಹೀಂಗಿರ್ತ ಎಷ್ಟೋ ದೇವಸ್ತಾನಂಗಳ ಕಟ್ಳೆಡಿಗು ಮನಸ್ಸು ಮಾಡಿರೆ.
ಅಂದು ಅದು ಯೇವದೋ ಒಂದು ಕೇಸಿಲಿ ಒಳಕೂದಿಪ್ಪಗ ಈ ಊರ ದೇವಸ್ಥಾನವ ನಂಬಿ ಹರಕ್ಕೆಹೇಳಿದ್ದಡ.
ಆ ಕೆಲಸ ಆದ ಕಾರಣ ಇಲ್ಲಿಗೆ ಎಂತಾರು ದೊಡ್ಡ ಸೇವೆ ಮಾಡುಸೆಕ್ಕು – ಹೇಳಿ ಗ್ರೇಶಿಗೊಂಡಿತ್ತಡ.
ತಂತ್ರಿಗಳತ್ರೆ ಇದನ್ನೇ ಹೇಳಿಅಪ್ಪಗ – ಹನ್ನೆರಡೊರಿಶ ಆತು, ಒಂದರಿ ಜೀರ್ಣೋದ್ಧಾರ ಮಾಡ್ಳಕ್ಕು – ಹೇಳಿದವಡ.

ಸರಿ, ಊರ ಕೆಲವು ಅದೇ ಜಾತಿ ಜೆನರ ಸೇರುಸಿಗೊಂಡು ಜೀರ್ಣೋದ್ಧಾರ ಕಾರ್ಯ ಸುರು ಆತು.
ಕಳುದ ಸರ್ತಿ ತನು-ಮನ-ಧನ ಬೇಕು ಹೇಳಿ ವಿಷ್ಣುಮಾವ° ಊರವರ ಎಲ್ಲ ಮುಟ್ಟಿದವು.. ಈ ಸರ್ತಿ ತನು-ಮನ ಸಹಕಾರ ಕೊಡ್ಳೆ ಊರೋರಿಂಗೆ ಕಾಗತ ಹೋತು.
ತೆಂಗಿನಮರದಷ್ಟಕೆ ದೊಡ್ಡಕೆ ಆ ದೊಡ್ಡಮನಿಷನ ಪಟ ಹಾಕಿದ್ದವು, ಮಾರ್ಗದ ಕರೆಲಿ.
ದೇವಸ್ತಾನ ನಿರ್ಮಾಣಗಾರ ಹೇಳ್ತ ಬಿರುದು ಕೊಟ್ಟು, ಮಾಲೆ ಹಾಕಿ ಮಾರ್ಗದ ಕರೆ ಇಡೀ ಪಟವೇ ಪಟ – ಮಾಷ್ಟ್ರುಮಾವಂಗೆ ಬಸ್ಸಿಲಿ ಕೂದಂಡು ಎಲೆ ತುಪ್ಪುಲೂ ಜಾಗೆ ಇಲ್ಲೆ!
~
ಬ್ರಹ್ಮಕಲಶ ಕಳಾತು, ಪುನಃಪ್ರತಿಷ್ಟೆ ಮಾಡಿ ದೇವರ ಚೆಂದಕೆ ಕೂರುಸಿದವು.
ಜಾತ್ರೆ ಆತು.ಕೆಲವು ಹೊಸಹೊಸ ನಿರ್ಣಯಂಗಳೂ ಆತು.
ಆ ಮನಿಶ ಒಂದು ಕಲ್ಯಾಣಮಂಟಪವನ್ನುದೇ ಕಟ್ಟುಸಿಕೊಟ್ಟತ್ತು – ಚೆಂದಕೆ ಬಯಿಂದಡ.
ಕಳುದ ಸರ್ತಿಯಾಣ ಕಮಿಟಿಯ ಬರ್ಕಾಸ್ತು ಮಾಡಿಯೂ ಮಾಡಿ ಆತು. ನೋಡಿನೋಡಿಯೋಂಡು ಇಪ್ಪ ಹಾಂಗೇ ಒಂದು ಕಮಿಟಿ ಬಂದು.
ಎಲ್ಲ ಬಂಟಕ್ಕಳದ್ದೇ – ಅವು ಇವು ಅಲ್ಯಾಣ ಗುತ್ತು, ಇಲ್ಯಾಣ ಗುತ್ತು – ಹಾಂಗೆ – ಹೀಂಗೆ ಹೇಳಿ.

ಮೊದಲು ದೇವಸ್ತಾನಕ್ಕೆ ಆರೆಲ್ಲ ಕೆಲಸ ಮಾಡಿದ್ದವೋ – ಅವರ ಸಂಪೂರ್ಣ ಬಿಟ್ಟು, ಹೊಸದಾದ ಒಂದು ’ಆ ಮನುಷ್ಯಂಗೆ’ ಆಪ್ತ ಆಗಿಪ್ಪ ಕೆಲವು ಜೆನರ ತಂಡವೇ ಕಾರ್ಯ ಮುಂದರುಸುತ್ತ ನಿರ್ಣಯ ಬಂದಾತು.
ದೇವಸ್ತಾನ ಮೊದಲಾಣ ಹಾಂಗೆ ಸಮಾಜದ ಸೊತ್ತು ಆಗಿ ಒಳುತ್ತಿಲ್ಲೆ –  ’ಕೆಲವು’ ಜೆನರ ಸೊತ್ತು ಆತು.
ಮೊದಲು ಹತ್ತು ರುಪಾಯಿಯ ಇಪ್ಪತ್ತು ನೋಟು ಕಾಣಿಕೆ ಬಿದ್ದುಗೊಂಡಿತ್ತು; ಈಗ ನೂರು ರುಪಾಯಿದು ಎರಡು ಬೀಳ್ತು, ಅಷ್ಟೆ – ಹೇಳಿದ ಕುಡ್ಪಲ್ತಡ್ಕ ಬಾವ.
~

ಅಂದಿಂದಲೇ ಆ ದೇವಸ್ತಾನಲ್ಲಿ ಮದುವೆಗೊ ಅಪ್ಪದು ಇಪ್ಪದೇ.
ದೇವಿ ದೇವಸ್ಥಾನ ಅಲ್ಲದೋ -ಅಲ್ಲಿ ಮದುವೆ ಆದರೆ ವಿಶೇಷ ಹೇಳ್ತ ಲೆಕ್ಕ ಇದ್ದು – ಹಾಂಗಾಗಿ, ಅಲ್ಲಿ ಮದುವೆ ಮಾಡ್ಳೆ ಊರೋರಿಂಗೂ ಕೊಶಿ.
ಈ ವಿಷ್ಣುಮಾವಂಗೂ ಅದೇ ಯೋಚನೆ ಬಂತು. ತನ್ನ ಮಗನ ಮದುವೆ ದೇವಸ್ಥಾನಲ್ಲೇ ಆಯೆಕ್ಕು – ಹೇಳ್ತ ನಮುನೆದು.
ಬದ್ಧಲ್ಲಿ ಹಾಂಗೇ ಒಪ್ಪಿಗೊಂಡು ಬಂದವು. ಊರಿಂಗೆ ಬಂದು ದೇವಸ್ಥಾನಲ್ಲಿ ಮಾತಾಡುವ ಹೇಳಿಗೊಂಡು.
ದೇವಸ್ತಾನಕ್ಕೆ ಬಂದು, ಬಟ್ರಕೈಲಿ ಪ್ರಸಾದ ತೆಕ್ಕೊಂಡು, ಪುಸ್ತಕಲ್ಲಿ ಬರೆಶಿದವಡ – ಇಂತಾ ದಿನ ಮದುವೆ – ಹೇಳಿಗೊಂಡು. ಕಾಗತ ಪ್ರಿಂಟು ಮಾಡಿಸಿದವು, ಹಂಚಿದವು.
~
ಮದುವೆಗೆ ಒಂದು ವಾರ ಇಪ್ಪಗ ದೇವಸ್ತಾನದ ಆಪೀಸಿಂದ ಪೋನು ಬಂತಡ, ಅಂಬೆರ್ಪು ಇದ್ದು – ಬನ್ನಿ – ಹೇಳಿಗೊಂಡು. ದೇವಸ್ತಾನಕ್ಕೆ ಹೋಗಿ ನೋಡುವಗ ಅವರ ಒಯಿವಾಟು ಬೇರೆಯೇ: “ಈಗ ದೇವಸ್ತಾನದ ಒಳ ಮದುವೆ ಮಾಡ್ಳಿಲ್ಲೆ, ಗೋಪುರಲ್ಲಿ ಉಂಬಲಿಲ್ಲೆ, ಗೋಪುರಲ್ಲಿ ಮನುಗುಲಿಲ್ಲೆ, ಹಾಂಗೆ, ಹೀಂಗೆ..” – ಸುಮಾರು ತಾಪತ್ರಯಂಗೊ – ಬ್ರಮ್ಮಕಲಶಲ್ಲಿ ನಿಗಂಟಾದ್ದದಡ.
ಈಗ ಮದುವೆ ಮಾಡ್ತದು ಎಲ್ಲವುದೇ ಹೋಲಿಲಿ – ಹೋಲು ಆ ದಿನಕ್ಕೆ ಕಾಲಿ ಇಲ್ಲೆ, ಬೆಂಗುಳೂರಿನ ಒಂದು ಮದುವೆ ನಿಘಂಟಾಯಿದು – ಹೇಳಿಗೊಂಡು.
~
ಆ ಬೆಂಗುಳೂರಿನ ಮನಿಶ ಇದ್ದಲ್ಲದೋ – ಅದರ ಪೈಕಿ ಒಂದು ಮದುವೆ, ಎರಡು ವಾರ ಹಿಂದೆ ನಿಗಂಟಾದ್ದದು- ಆ ಹೋಲಿಲಿ ಮಾಡ್ತದಡ.
ಅದುವೇ ಪೈಸೆ ಹಾಕಿದ್ದಪ್ಪಗ ಅದರತ್ರೆ ಇಲ್ಲೆ – ಹೇಳುಲೆ ಅದೇಂಗೆ ಆವುತ್ತು?
ಒಟ್ಟಾರೆ ವಿಷ್ಣುಮಾವ ಇಕ್ಕಟ್ಟಿಲಿ ಬಿದ್ದವು.
ಮದಲಿಂಗೆ ಎಷ್ಟೋ ಮದುವೆ ಇವ್ರ ಮುಂದಾಳತ್ವಲ್ಲೇ ದೇವಸ್ತಾನದ ಗೋಪುರಲ್ಲಿ ಆಯಿದು.
ಅದರ ಊಟವೂ ಅಲ್ಲಿಯೇ ಆಯಿದು. ಇದೊಂದು ಎಂತರ ಹೊಸತ್ತು – ಹೇಳಿ ಅನಿಸಿತ್ತು.
~
ಒಂದರಿ ರಜ ಗಾಬೆರಿ ಆದರೂ, ತುಂಬ ತಲೆಬೆಶಿ ಏನೂ ಮಾಡಿಗೊಂಡಿದವಿಲ್ಲೆ.
’ಮಗನ ಮದುವೆ ಮನೆಲೇ ಮಾಡುದು’ ಹೇಳಿ ಅಲ್ಲೇ ನಿಗಂಟು ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತು ಬಂದು, ದೇವರ ಅನುಗ್ರಹ ಕೇಳಿ ಮನೆಗೆ ಬಂದವು.
~
ಕಳುದವಾರ ಆ ಮದುವೆ ಕಳಾತಡ.
ಎಲ್ಲ ಚೆಂದಲ್ಲಿ – ಸುಸೂತ್ರವಾಗಿ ನೆಡತ್ತು ಹೇಳಿದ°.
ಇಡೀ ದೇವಸ್ತಾನದ ಬ್ರಮ್ಮಕಲಶದ ಉಸ್ತುವಾರಿ ತೆಕ್ಕೊಂಡವಂಗೆ ಮಗನ ಮದುವೆ ಒಯಿವಾಟು ಬಂಙ ಅಕ್ಕೋ?
ಎಡಿಗಾದಷ್ಟು ಜೆನಕ್ಕೆ ಪೋನಿಲಿ ತಿಳುಸಿದವು – ಮದುವೆ ಜಾಗೆ ಬದಲಿದ್ದು – ಮನೇಲಿ ಮಾಡ್ತದು ಹೇಳಿಗೊಂಡು.
ಒಂದು ಉಪಾಯ ಮಾಡಿದವು – ದೇವಸ್ತಾನದ ದಾರಿಂದ ಇವರ ಮನೆಗೆ ವಾಹನದ ವೆವಸ್ತೆ – ಹಾಂಗಾಗಿ ದೂರಂದ ಬತ್ತವಕ್ಕೆ ಏನೂ ತೊಂದರೆ ಆಯಿದಿಲ್ಲೆ.

ವಿಷ್ಣುಮಾವ° ಸೋಲುಲಾಗ ಹೇಳಿ ಮನಸ್ಸಿಪ್ಪೋರು ಕೈ ತಾಂಗಲೆ ಸುಮಾರು ಜೆನ ಸೇರಿದ್ದು!
ನಮ್ಮ ಬೈಲಿಂದಲೂ ಸುಮಾರು ಜೆನ ಹೋಯಿದವು! ಅಕ್ಷರದಣ್ಣ, ಗಣೇಶಮಾವ, ಅಜ್ಜಕಾನಬಾವ, ಅರ್ತ್ಯಡ್ಕಮಾಣಿ ಎಲ್ಲ ಮುನ್ನಾದಿನವೇ ಬೆಂದಿಗೆಕೊರವಲೆ ಸೇರಿಗೊಂಡಿದವು. ಮರದಿನ ಮದುವೆ ಕಳಿವನ್ನಾರವೂ ಸುದಾರಿಕೆ ಮಾಡಿ, ಬಂದ ನೆಂಟ್ರುಗಳ ಪೈಕಿ ಏನೂ ತೊಂದರೆ ಆಗದ್ದ ಹಾಂಗೆ ಸಹಕರಿಸಿಗೊಂಡಿದವು.
ಇಷ್ಟೆಲ್ಲ ಆದರೂ ವಿಷ್ಣುಮಾವ ಆರನ್ನೂ ಬಯಿದ್ದವಿಲ್ಲೆ, ಎಂತದೂ ಹೇಳಿದ್ದವಿಲ್ಲೆ.
ದೇವಸ್ತಾನದ ಎಲ್ಲಾ ಮುಕ್ತೇಸರಿಂಗೊ ಕಾಗತ ಕೊಟ್ಟವು. ಚೆಂದಲ್ಲಿ ಮದುವೆಗೆ ದಿನಿಗೆಳಿದವು.
ಕೆಲವು ಜೆನ ಬಯಿಂದ್ವುದೇ. ಕೆಲವು ಬಯಿಮ್ಡವಿಲ್ಲೆ – ಕೇಡು ಜೋರಿಪ್ಪವು..
~

ಮದಲಿಂಗೆ ಊರಿಂಗೊಂದು ದೇವಸ್ಥಾನ, ಅದಕ್ಕೊಂದು ಗೋಪುರ, ಊರಿಂದೂರಿಂಗೆ ನೆಡಕ್ಕೊಂಡು ಹೋಪೋರಿಂಗೆ ಮನಿಕ್ಕೊಂಬಲೂ ಆವುತ್ತು -ಹೇಳ್ತ ನಮುನೆದು.
ಈಗಾಣೋರಿಂಗೆ ಗೊಪುರಲ್ಲಿ ಮನುಗುಲಾಗ ಹೇಳ್ತ ನಿರ್ಣಯ ಮಾಂತ್ರ ಗೊಂತಿದಾ! – ಹೇಳಿ ಕುಡ್ಪಲ್ತಡ್ಕಬಾವಂಗೆ ಬೇಜಾರಾತು.

ಊರ ದೇವಸ್ತಾನಲ್ಲಿ ಮದುವೆ ಆಯೆಕ್ಕು – ಹೇಳ್ತದರ ಹಿಂದಾಣ ಉದ್ದೇಶ ಊರದೇವಸ್ತಾನವ ಪರಊರಿನೋರಿಂಗೆ ಗುರ್ತ ಮಾಡುದೂ ಆಗಿರ್ತು.
ಪರಸ್ಪರ ಪರಿಚಯ, ಗುರ್ತ, ನೆಂಪು ಒಳಿಯೇಕಾರೆ ಇಂತಾ ಕೆಲವು ಜೆಂಬ್ರಂಗೊ ಆಗಿರೇಕಾವುತ್ತು.
ಅಂತೂ ದೇವರ ಎದುರು ತಾಳಿ ಕಟ್ಟುಸುವ ಯೋಚನೆಯ ಬದಲು, ಸೊಸೆಯ ಮನೆಒಳಂಗೇ ತುಂಬುಸಿಗೊಂಬ – ಯೋಚನೆ ಅನುಸಿತ್ತು ವಿಷ್ಣುಮಾವಂಗೆ.
ವಿಷ್ಣುಮಾವ° ಈ ಪರಿಸ್ಥಿತಿಯ ತುಂಬ ಚೆಂದಕೆ ನಿಬಾಯಿಸಿದವು, ದೇವಸ್ತಾನಂದಲೂ ಲಾಯ್ಕ ವೆವಸ್ತೆ ಆಯಿದು – ಹೇಳಿದವು ಬಂದೋರೆಲ್ಲರೂ!
ಆದರೆ ಎಲ್ಲೊರಿಂಗೂ ಎಡಿಗೋ?

ಅನಗತ್ಯ ರಾಜಕೀಯಂದಾಗಿ, ಸ್ಥಾನಾಪೇಕ್ಷೆಂದಾಗಿ ಇಂತಾ ಕಾರ್ಯಂಗೊ ಊರೊಳದಿಕ್ಕೆ ನೆಡಕ್ಕೊಂಡಿರ್ತು.
ಅದರ ಎಲ್ಲ ಮೀರಿ, ಸಮಾಜಲ್ಲಿ ಒಂದಾಗಿ ಬೆಳವದೇ ’ಸಾಮಾಜಿಕ ಜೀವನ’.
ಅಲ್ಲದೋ?
ಊರವೇ ಕಟ್ಟಿದ ಆ ದೇವಸ್ಥಾನಲ್ಲಿ, ಆ ದೇವಸ್ತಾನ ಕಟ್ಳೇ ಕಾರಣ ಆದ ವಿಷ್ಣುಮಾವನ ಮನೆಜೆಂಬ್ರಕ್ಕಪ್ಪಗ ಜಾಗೆ ಇಲ್ಲೆ!
ಹೋಲು ಬೇರೆಯವಕ್ಕೆ; ಗೋಪುರ ಎಂಜಲಪ್ಪದಕ್ಕೆ!

ದೇವಸ್ಥಾನವನ್ನೇ ನಂಬುವೋರು ಒಳ ಜಗಳಂಗೊ ಮಾಡಿಗೊಂಡರೆ ನಾಳೆ ಹೆರಾಣೋರ ಒಟ್ಟಿಂಗೆ ಜಗಳ ಮಾಡುದು ಆರು? – ಕೇಳಿದ ನಮ್ಮ ಗುಣಾಜೆಮಾಣಿ!
ಏನೇ ಆದರೂ ಮದುವೆ ಚೆಂದಲ್ಲಿ ಕಳಾತು ಒಪ್ಪಣ್ಣಾ – ಹೇಳಿದ ನಮ್ಮ ಕುಡ್ಪಲ್ತಡ್ಕಬಾವ°.

ಒಂದೊಪ್ಪ: ಊರ ದೇವಸ್ತಾನದ ಕಮಿಟಿಯೋರು ಬಿಟ್ರೂ, ಊರ ದೇವಸ್ತಾನದ ದೇವರು ಕೈಬಿಟ್ಟಿದವಿಲ್ಲೆನ್ನೆ! – ಹೇಳಿ ವಿಷ್ಣುಮಾವ° ಕೊಶೀಲಿದ್ದವಡ ಈಗ!

ಸೂ: ದೇವಸ್ತಾನದ ಪಟವ ಬೀಸ್ರೋಡು ಮಾಣಿ ಕೊಟ್ಟದು. ಆರು ತೆಗದ್ದು ಹೇಳಿ ಅವಂಗೆ ಮರದ್ದು – ಉರಗೆ ಲೇಹ ತಪ್ಪಲೆ ಡಾಗುಟ್ರಕ್ಕನಲ್ಲಿಗೆ ಹೋಯಿದ°.

15 thoughts on “ಊರವೇ ಕಟ್ಟಿದ ದೇವಸ್ಥಾನಲ್ಲಿ ಊರ ಮದುವಗೆ ಜಾಗೆ ಇಲ್ಲೆಡ..!

  1. ಒಪ್ಪನ್ನನ ವಿವರಣೆ/ನಿರೂಪಣೆ ಮನಸ್ಸಿನ್ಗೆ ನಾಟುವ ಹಾಂಗೆ ಇದ್ದು. ಇದು ಒಂದು ಪ್ರತ್ಯಕ್ಷ ಸಾಕ್ಸಿ ದುಡ್ಡಿದ್ದವನೆ ದೊಡ್ಡಪ್ಪ ಹೇಳುದಕ್ಕೆ. ಮಾತ್ರವಲ್ಲ ಇದು ನಮ್ಮ ಶಿಕ್ಷಣ ವ್ಯವಸ್ಥೆಯ ವ್ಯಫಲ್ಯ ನವಗೆ ಅರಿನ್ಗೆ ಪ್ರಾಶಸ್ತ್ಯ ಕೊಡುದು ಹೇಳಿ ಗೊಂಥಿಲ್ಲೇ ದೇವರ ಇಚ್ಛೆ ಹೇಳುದು ನಾವು ಅನ್ತ್ಯಲ್ಲಿ ಕೊಡುವ Conclusion. ಶರ್ಮಪ್ಪಚಿ ಹೇಳಿದ ಹಾಂಗೆ ಸಂಘಟನೆ ಇದ್ರೆ ಸೋಲ ಹೇಳುದಕ್ಕೆ ಈ ಘಟನೆಯೇ ಸಾಕ್ಷಿ. ವಿಶ್ನುಮಾವನ ತಾಳ್ಮೆ ಬಗ್ಗೆ ಕೇಳಿ ಬಾರಿ ಸಂತೋಷ ಅತು.

  2. laikaidu oppanno… ”devaru kottaru poojari bida” heluva gadeya hange aidu nammoringe.
    nagara bhajaneli olle hesaru tanda vishnu mavange hange helida matte navella yava lekka allada oppanno.
    devastanada comitiyavakku artha appaga too late aagirthu.devaruvishnu mavana kai bittidaville.
    ettida jembra vishnu mavanalli chendakke kaludattu heli bhatta mava helidavu.
    avu hogi sudarike madi undikki baindavada hange helittiddavu.
    aduve ondu santhosha aste.
    god is great aste.. good luck oppanno.

    1. ಹ್ಮ್, ಅಪ್ಪದಾ!
      ಬಟ್ಟಮಾವ° ಈ ಜೆಂಬ್ರ ಕಳುದ ಮತ್ತೆ ಎನಗೆ ಕಾಂಬಲೇ ಸಿಕ್ಕಿದ್ದವಿಲ್ಲೆ!
      ಜೆಂಬ್ರಂಗೊ ಅಲ್ಲದೋ – ರಜಾ ಅಂಬೆರ್ಪಿಲಿದ್ದವೋ ಏನೋ!

  3. ಪೈಸೆಯ ಅಹಂಕಾರಲ್ಲಿ, ಹತ್ತಿದ ಏಣಿಯ ನೂಕಿರೆ, ಕೆಳ ಇಳಿವಲೆ ಎಡಿಯದ್ದೆ ಬೀಳೆಕ್ಕಕ್ಕು.
    ನಮ್ಮಲ್ಲಿ ಸಂಘಟನೆ ಇದ್ದರೆ ನಾವು ಯಾವಾಗಲೂ ಸೋಲ, ಏರಿಳಿತ ಇಕ್ಕಷ್ಟೆ.

    1. ಅಪ್ಪು ಶರ್ಮಪ್ಪಚ್ಚಿ!
      ಕೊಡೆಯಾಲಂದ ನೋಡಿರೆ ದೂರದ ಒಂದು ಚಿಮುಣಿ ದೀಪದ ಮಿಣ್ಣಿ ಏರಿಳಿತ ಅಪ್ಪದು ಕಾಣ್ತಿದಾ, ನಮ್ಮ ಜೀವನವೂ ಹಾಂಗೇ!
      ಅಲ್ಲದೋ?

  4. ವಿಷ್ಣುಮಾವನ ಆದರ್ಶ ಅನುಕರಣೀಯ. ಅದರ ಶುದ್ದಿ ಮಾಡಿ ತಿಳಿಶಿದ್ದಕ್ಕೆ ಧನ್ಯವಾದಂಗೊ. ಆರಿಂಗೆ ಗೊಂತು, ನಮ್ಮ ಊರಿಲೂ ಪೈಸೆ – ಪ್ರಖ್ಯಾತಿಗಳ ಮರ್ಲಿಪ್ಪವರ ಹಾಂಕಾರಲ್ಲಿ ಹೀಂಗೆ ಎಲೆಮರೆಯ ಕಾಯಿಯಾಗಿಯೇ ಒಳುದಿಪ್ಪ ಹಿರಿಯೋರು ಇಕ್ಕು.
    ಶುದ್ದಿ ಲಾಯ್ಕಾಯಿದು.

  5. ಯಾವುದೇ ಊರಿನ ಸಂಘಟನೆಯ ಬಗ್ಗೆ ಗೊಂತಾಯೆಕ್ಕಾದರೆ ಆ ಊರಿನ ದೇವಸ್ಥಾನ ನೋಡೆಕ್ಕಡ.. ಹೀಂಗೆ ಮಾಷ್ಟ್ರು ಮಾವ° ಹೇಳುಗು.. ದೇವಸ್ಥಾನ ಹಾಳಾಗಿ, ವೆವಸ್ತೆ ಸರಿ ಇಲ್ಲದ್ದೆ ದೇವರ ಪೂಜೆಗೆ ತೊಂದರೆ ಅಪ್ಪಗ ಅದರ ಜವಾಬ್ದಾರಿ ಆರೂ ತೆಕ್ಕೋಳ್ಳವು.. ಆದರೆ.., ಸಣ್ಣ ಮಟ್ಟಿಂದಲೇ ಜೆನಂಗಳ ಸೇರ್ಸುಲೇ ಸುರು ಮಾಡಿ, ಆ ಜೆನಂಗಳ ಸಂಖ್ಯೆ ಬೆಳದು ದೇವಸ್ಥಾನದ ಕೆಲಸ ಆಗಿ, ಪೂರ್ಣ ಪ್ರಮಾಣದ ದೇವಸ್ಥಾನ ತಲೆ ಎತ್ತಿ ನಿಂಬ ಹೊತ್ತಿಂಗೆ, ಈ ಉದ್ದೇಶವ ಸುರು ಮಾಡಿದ ಜೆನ ಸುಮಾರು ಅನುಭವಿಸೆಕ್ಕಾವುತ್ತು.. ಊರಿನ ಜೆನಂಗ ಸೇರಿದ ಕೂಡಲೇ, ನಮ್ಮೋರೇ..ಸುರುವಿಂಗೆ ವಿಘ್ನ ರಾಗ ಸುರು ಮಾಡುಗು.. ಅದು ರಜ್ಜ ಹೆರ ಸುತ್ತಿಂಗೆ ಗೊಂತಪ್ಪಗ ಅದಕ್ಕೆ ಹೆರಾಣೋರೂ ಸೇರುಗು.. ಆದರೂ ಕೆಲಸ ಸುರು ಮಾಡಿದ ವಿಷ್ಣು ಮಾವನ ಹಾಂಗಿಪ್ಪವು ಎಲ್ಲಾ ದೇವರಿಂಗೆ ಸಮರ್ಪಿತ ಹೇಳಿ ನಡಗು… ಒಪ್ಪಣ್ಣ ಹೇಳಿದ ಶುದ್ದಿಲಿ ಇಪ್ಪ ಹಾಂಗೆ ಮತ್ತಾಣ ಜೀರ್ಣೋದ್ಧಾರಕ್ಕೆ ಅಪ್ಪಗ ಸಿರಿವಂತ° ಆರಾರು ಬಕ್ಕು.. ಅವಕ್ಕೆ ಜೆನ ಸಂಘಟನೆ ಮಾಡುವ ಕೆಲಸ ಇಲ್ಲೆನ್ನೇ!! ಅದು ಹೆಂಗಾದರೂ ನಡೆತ್ತಾ ಬತ್ತಾ ಇದ್ದು.. ಮೊದಲು ಮಾಡಿದ ಅನುಭವಸ್ತರೂ ಇಕ್ಕು ಕೆಲವು ಜೆನಂಗ .. ಮತ್ತೆ ಪಟ್ಟೆ ಶಾಲಿನೋರದ್ದೆ ಕಾರುಬಾರು .. ಆರಿಂಗೂ ಮತಾಡಿಕ್ಕುಲೇ ಎಡಿಯ.. ಆದರೂ ದೇವಸ್ಥಾನ ಎಲ್ಲೋರಿಂಗೂ ಇಪ್ಪದನ್ನೇ ಹೇಳಿ ವಿಷ್ಣು ಮಾವ° ಹೋಪದು ಬಿಟ್ಟಿರವಿದಾ.. ಆದರೆ ದೇವಸ್ಥಾನದ ಒಳ ಇಪ್ಪ ದೇವರಿಂಗೂ, ದೇವರ ಹಾಂಗಿಪ್ಪವಕ್ಕೂ ಒಳ್ಳೆಯ ಮನುಷ್ಯರು, ಕೆಟ್ಟ ಮನುಷ್ಯರು ಎಲ್ಲಾ ಒಂದೇನ್ನೇ!!! ಅವಕ್ಕೆ ಆರನ್ನೂ ಬರೇಡ,ಹೋಗೇಡ ಹೇಳುಲೆ ಎಡಿಯ… ಆರು ಎಂತ ಕೊಟ್ಟರೂ ಸ್ವೀಕರಿಸೆಕ್ಕನ್ನೇ! ಈ ಮನುಷ್ಯರ ಅವಸ್ಥೆಯ ನೋಡಿ ಮನಸ್ಸಿಲೆ ನೆಗೆ ಮಾಡುಗೋ ಎಂತೋ..! ತನ್ನ ಮನೆಗೂ ಮೊದಲು ದೇವಸ್ಥಾನಕ್ಕೆ ಹೇಳಿ ಅಷ್ಟು ಸೇವೆ ಮಾಡಿದ ವಿಷ್ಣು ಮಾವ°.., ಇನ್ನು ಆರಾರ ನೆತ್ತರು ನುಂಗಿದ ಪೈಸೇಲಿ ಜೀರ್ಣೋದ್ಧಾರ ಆದ ದೇವಸ್ಥಾನಲ್ಲಿ ಮಗನ ಮದುವೆ ಮಾಡುದು ಬೇಡಾ ಹೇಳಿ ದೇವರೇ ಮನೆಲಿ ಮಾಡುವ ಹಾಂಗೆ ಮಾಡಿದ್ದಾದಿಕ್ಕು.. ದೇವರಿಂಗೆ ಅಲ್ಲಿಂದ ಹೋಪಲೆ ಎಡಿಯಾನ್ನೆ.. ಆಗಲಿ ವಿಷ್ಣು ಮಾವ° ಅಷ್ಟು ಜನ ಸಂಘಟನೆ ಮಾಡಿದ್ದು ಅವರ ಮನೆ ಜೆಂಬರಕ್ಕೆ ಎತ್ತಿತ್ತು… ಗುಣಾಜೆ ಮಾಣಿ ಲಾಯಕ ಮಾತು ಹೇಳಿದಪ್ಪಾ… ನಾವೇ ಒಬ್ಬಕ್ಕೊಬ್ಬನ ಕಾಲೆಳದರೆ ನಮ್ಮ ಕಾಲುಗಳ, ಒಟ್ಟಿನ್ಗೆ ಎಳದು ನೆಲಕ್ಕೆ ಹಾಕಿ, ಹೆರಾಣವು ನಮ್ಮ ಮೆಟ್ಟಿ ನಿಂಗು…!!!!

  6. ವಿಷ್ಣು ಮಾವನ ಜೀವನ,ಶ್ರಮ,ದೇವರ ಮೇಲಾಣ ಭಕ್ತಿ… ಇತ್ಯಾದಿಗಳ ಮೇಲೆ ಬೆಳಕು ಚೆಲ್ಲಿದ ಈ ಲೇಖನ ಬಹಳ ಒಪ್ಪ ಆಯಿದು…
    ಒಂದು ವಾರಲ್ಲಿ ಅವು ತಮ್ಮ ಮನೆಲಿ ಮದುವೆಗೆ ತಯಾರು ಮಾಡಿದ್ದು ಅದ್ಫುತವೇ….
    ಎನಗೆ ಆ ಕುಡ್ಪಲ್ತಡ್ಕ ಭಾವನ ರಜ ಕೇಳಿ ಗೊಂತಿದ್ದು… ಅವು ತಮ್ಮ ಊರಿಂಗೆ ಆ ಹೆಸರು ತರೆಕ್ಕರೆ ಬಹಳ ಬಂಙ ಬಯಿಂದವಡಾ….
    ಮೊದಲು ಎಂತದೊ ಬೇರೆ ಇತ್ತಡ… ಎಂತದೊ…ಎನಗರಡಿಯ…

  7. ವಿಷ್ಣು ಮಾವನ ಶ್ರಮ, ಅವರ ಸಮಾಜ ಸೇವೆಯ ಎಷ್ಟು ಹೊಗಳಿದರೂ ಸಾಲ. ಕಡೇಂಗೆ ಬಂಟಕ್ಕಳ ಕಿತಾಪತಿ ಕೇಳಿ ಬೇಜಾರ ಆತು. ಮದುವೆ ಚೆಂದಕೆ ಕಳಾತಾನೆ. ಮದುವೆಗೆ ಸಹಕರಿಸಿದ ಊರವರ ಮೆಚ್ಚಲೇ ಬೇಕು. ಒಳ್ಳೆವರ ಕೈ ಬಿಡವು ದೇವರು.

  8. Appu, chandalli maduve karyakrama muguddu, male matra rajja upadra madiddu.

      1. ಅಪ್ಪು, ಆದರೆ ಎನಗೆ ಗಣೇಶಮಾವನ ಗುರ್ತಐದಿಲ್ಲೇ. ನಿಂಗ ಹೇಳಿದ ವಿಶ್ನುಮಾವ ಹೇಳಿದರೆ ಎನ್ನ ಅಜ್ಜ.

  9. Doddabhavana ajjana maneli ara badhavo??? Nijavagiyoo Devaru Vishnu mavana kai bittidaville.Devaringe avara magana maduve manele nadeyali heli ittidayikku allada.

    1. ಯೇ ಶಾಂಬಾವ, ಇದೆಂತ ನಿಂಗೊ ಹೀಂಗೆ ಕೇಳಿದಿ..!
      ಅವ° ಉದೆಕಾಲಕ್ಕೆ ಸೆಕೆಗೆರದ್ದರ ತಿಂದು ಹೋದ್ದರ ನೋಡಿದ್ದು ನಾವು.
      ಹೆರಟು ಹೋಪಗ “ಎಲ್ಲಿಗೆ” ಹೇಳಿ ಕೇಳ್ತವಾ? – ಇಲ್ಲೆ.
      ಹಾಂಗಾಗಿ, ಅದೆಲ್ಲಿ, ಆರದ್ದು – ಹೇಳ್ತದು ಒಪ್ಪಣ್ಣಂಗರಡಿಯ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×