Oppanna.com

ಒಂದೊರಿಶ, ಐವತ್ತು ‘ಶುದ್ದಿ’ – ಈ ವಾರಕ್ಕೆ ಅದೇ ಶುದ್ದಿ..!

ಬರದೋರು :   ಒಪ್ಪಣ್ಣ    on   01/01/2010    9 ಒಪ್ಪಂಗೊ

ಅದಾ, ಒಪ್ಪಣ್ಣ ಶುದ್ದಿ ಹೇಳುದು ಒಂದೊರಿಷ ಆತು.
ಆದರೆ ಹಾಂಗೆ ಅನುಸುತ್ತೇ ಇಲ್ಲೆ. ಮೊನ್ನೆ ಮೊನ್ನೆ ಶುರು ಮಾಡಿದ್ದು ಹೇಳಿಯೇ ಆವುತ್ತು.

ಈ ಒಂದು ಒರಿಶಲ್ಲಿ ಐವತ್ತು ಶುದ್ದಿ ಹೇಳಿದ° ಒಪ್ಪಣ್ಣ.
ಅದೆಂತ ದೊಡ್ಡ ಕುಂಬ್ಳಕಾಯಿ ಏನಲ್ಲ!
ಮದಲಿಂಗೆ ನಮ್ಮ ಹಿರಿಯೋರು ದಿನಕ್ಕೇ ಐವತ್ತು ಶುದ್ದಿ ಮಾತಾಡುಗು, ಹಾಂಗಿದ್ದದರ್ಲಿ ಒಪ್ಪಣ್ಣ ’ಒರಿಶಲ್ಲಿ ಐವತ್ತು ಶುದ್ದಿ’ ಹೇಳಿದ° ಹೇಳಿ ಮೀಸೆ ಎಳವಲೆ ಎಂತ ಇದ್ದು ಬೇಕೇ?! ಅಲ್ಲದೋ?

ಹವ್ಯಕ ಭಾಶೆ ಮಾತಾಡ್ತ ಸಮುದಾಯಕ್ಕೆ ಆಧ್ಯಾತ್ಮಿಕ ಗುರುಗೊ ಆಗಿದ್ದುಗೊಂಡು, ಹವ್ಯಕ ಪೀಠಾಧಿಪತಿ ಆಗಿಪ್ಪ, ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗೊ – ನಮ್ಮ ಗುರುಗೊ – ಈ ಒಪ್ಪಣ್ಣನ ಬೈಲಿಂಗೆ ಬಂದು, ಶುದ್ದಿಗಳ ಕೆಲವರ ಕೇಳಿ – ಇನ್ನುದೇ ಹೇಳೆಕ್ಕು, ನಿಲ್ಲುಸುಲೆಡಿಯ – ಹೇಳ್ತ ಆದೇಶ ಕೊಟ್ಟಿಕ್ಕಿ ಆಶೀರ್ವಾದ ಮಾಡಿದ್ದವು.
ಅಂತೂ ಒಪ್ಪಣ್ಣನ ನೆರೆಕರೆಯ ಬೈಲು ಪರಿಪೂರ್ಣ ಮಾಡಿದವು.

ಅಷ್ಟಾಗಿಯೊಂಡಿಪ್ಪಗಳೇ ಎಡಪ್ಪಡಿ ಬಾವ ಈ ಶುದ್ದಿ ಹೇಳಿದ್ದು:
ಅವಕ್ಕೆ ಗುರುಗೊ ಓ ಮೊನ್ನೆ ಭೇಟಿಗೆ ಸಿಕ್ಕಿದ್ದಿಪ್ಪಗ – ಹೀಂಗೀಂಗೆ – ಹೇಳಿ ’ಒಪ್ಪಣ್ಣನ ಒಂದೊರಿಷ’ದ ವಿಶಯ ಹೇಳಿದವಡ!
ಸಂಗತಿ ಗುರುಗೊಕ್ಕೆ ಗೊಂತಾಗಿ, ’ಎಲ್ಲೊರಿಂಗೂ ಒಳ್ಳೆದಾಗಲಿ ಮಕ್ಕಳೇ!’ ಹೇಳಿದವಡ.
ಏಡಿನ ಕುಂಞಿಗೆ ಆನೆಬಲ ಬಪ್ಪದು – ಹೇಳಿ ಶಂಬಜ್ಜನ ಗಾದೆ ಇಲ್ಲಿ ನಿಜ ಆತು!

ಒಪ್ಪಣ್ಣಂಗೆ, ಮತ್ತೆ ನೆರೆಕರೆಗೆ ಎಲ್ಲೊರಿಂಗುದೇ ಒಟ್ಟಾಗಿ ಕೊಟ್ಟ ಶುಭಾಶೀರ್ವಾದ ಇಲ್ಲಿದ್ದು:

ಗುರುಗಳೇ,
’ಒಪ್ಪಣ್ಣ’ನ ಸಕ್ರಿಯ ಓದುಗರಾಗಿ, ವಿಮರ್ಶಕರಾಗಿ, ಪ್ರತಿಕ್ರಿಯೆ ಕೊಟ್ಟೋಂಡು – ನಮ್ಮ ನೆರೆಕರೆ ಒರೆಂಗೆ ಬಂದು, ಎಲ್ಲೊರಿಂಗೂ ಆಶೀರ್ವಾದ ಮಾಡಿದ ನಮ್ಮ ಗುರುಗೊಕ್ಕೆ ಶಿರಸಾಷ್ಟಾಂಗವಾಗಿ ಹೊಡಾಡ್ತೆಯೊ°.
ನಿಂಗಳ ಆತ್ಮಸ್ಥೈರ್ಯ, ಬಹುವಿಷಯಾಸಕ್ತಿ ನೋಡಿಯೇ ಒಪ್ಪಣ್ಣಂಗೆ ದೊಡ್ಡ ಮಟ್ಟಿನ ಸ್ಪೂರ್ತಿ ಬಂದದು.
ಎಂಗಳ ಅಹಂಭಾವವ ಕಳದು, ಜೀವಕಳೆ ತಪ್ಪಲೆ ಇಪ್ಪ ಆ ಗುರುಪೀಠ ಎಂಗಳ ಅನುಗ್ರಹಿಸೇಕು ಹೇಳಿಗೊಂಡು ಎಲ್ಲರ ಕೋರಿಕೆ.
ನಿಂಗಳ ಪ್ರತಿ ಪ್ರತಿಕ್ರಿಯೆಗೂ ನೆರೆಕರೆ ಸಂತೋಷಗೊಂಡಿದು, ಸ್ಪೂರ್ತಿಗೊಂಡಿದು.
ಎಷ್ಟೋ ಶಿಷ್ಯಂದ್ರಿಪ್ಪ ಈ ಇಂಟರ್ನೆಟ್ಟಿನ ’ನೆರೆಕರೆ’ಗೆ ಎಂದಿಂಗೂ ನಿಂಗಳ ಶುಭಾಶೀರ್ವಾದ ಬೇಕು..

ಕಳುದೊರಿಶ ಒಪ್ಪಣ್ಣ ಶುದ್ದಿ ಹೇಳುವ ಮೊದಲು ಊದ್ದದ ಪೀಟಿಕೆ ಹಾಕಿ ಸುರುಮಾಡೆಕ್ಕಾತೋ ಏನೋ, ಸೀತ ಸುರು ಮಾಡಿದ್ದು.!

ನೆರೆಕರೆ ಗುರ್ತ ಪರಿಚಯವೂ ಸಮಗಟ್ಟು ಇಲ್ಲದ್ದೆ.!
ತೊಂದರೆ ಆಯಿದಿಲ್ಲೆ, ನೆರೆಕರೆಯವಕ್ಕೆ ಎಲ್ಲರಿಂಗೂ ಒಪ್ಪಣ್ಣನ ಗುರ್ತ ಆಯಿದು, ಶುದ್ದಿಗಳ ಅರ್ತ ಆಯಿದು!

ಆದರೂ, ಈ ನೆರೆಕರೆಲಿ ಒಪ್ಪಣ್ಣ ಐವತ್ತು ಶುದ್ದಿ ಹೇಳಿದ್ದು ರಜ್ಜ ವಿಶೇಷದ ಸಂಗತಿಯೇ.
ಎಂತಕೆ ಹೇಳಿತ್ತು ಕಂಡ್ರೆ, ನೆರೆಕರೆಯ ಹೆಚ್ಚಿನವುದೇ ಅಂಬೆರ್ಪಿನವು.
ಒಪ್ಪಣ್ಣ ಹೇಳ್ತ ಅರ್ದರ್ದ ಗಂಟೆಯ ಶುದ್ದಿಯ ಕೇಳುಲೆ ಯೇವದಕ್ಕೆ ಪುರುಸೊತ್ತಿದ್ದು ಬೇಕೆ!
ಚೂರಿಬೈಲು ಡಾಕ್ಟ್ರುಬಾವಂಗೆ ಮದ್ದರವಲೆ ಇದ್ದು, ಕೆದೂರು ಡಾಕ್ಟ್ರುಬಾವಂಗೆ ಬೋದತಪ್ಪುಸಲೆ ಇದ್ದು, Replique Montres Pas Cher ದೊಡ್ಡಬಾವಂಗೆ ಶಾಲೆಯಬ್ಲೋಗು ಬರವಲೆ ಇದ್ದು, ಅಜ್ಜಕಾನಬಾವಂಗೆ ಕಂಪ್ಯೂಟರು ಗುರುಟುಲೆ ಇದ್ದು, ಆಚಕರೆ ಮಾಣಿಗೆ ಬಿಂಗಿ ಮಾಡ್ಳೆ ಇದ್ದು, ಪುಟ್ಟಕ್ಕಂಗೆ ಡೇನ್ಸು ಮಾಡ್ಳೆ ಇದ್ದು, ಒಪ್ಪಕ್ಕಂಗೆ ಪರೀಕ್ಷೆ ಇದ್ದು, ದೀಪಕ್ಕಂಗೆ ಮಲ್ಲಿಗೆ ಗೆಡು ತುಂಡುಸಲೆ ಇದ್ದು, ಬಂಡಾಡಿಅಜ್ಜಿಗೆ ಎಲೆತಿಂಬಲೆ ಇದ್ದು, ಬೇಂಕಿನ ಪ್ರಸಾದಂಗೆ ಪೈಸೆ ಎಣಿಶಲೆ ಇದ್ದು, ಎಡಪ್ಪಾಡಿ ಬಾವಂಗೆ ಈಮೈಲು ಮಾಡ್ಳೆ ಇದ್ದು, ಗುಣಾಜೆ ಮಾಣಿಗೆ ಕಾರು ಬಿಡ್ಳಿದ್ದು, ಪೆರ್ಲದಣ್ಣಂಗೆ ಇಂಟರೆನೆಟ್ಟಿದ್ದು, ಮಾಷ್ಟ್ರುಮಾವಂಗೆ ಬರವಲಿದ್ದು, ಮಾಷ್ಟ್ರಮನೆ ಅತ್ತಗೆ ಓರುಕುಟ್ಟುಲಿದ್ದು, ಪಂಜೆ ಚಿಕ್ಕಮ್ಮಂಗೆ ಪುಳ್ಳಿಕೂಸಿನ ಮೀಶಲೆ ಇದ್ದು, ಗಣೇಶಮಾವಂಗೆ ಕೈಲಾಸತೀರ್ಥ ಹಂಚಲೆ ಇದ್ದು – ಒಟ್ಟಿಲಿ ಎಲ್ಲೋರೀಂಗುದೇ ಏನಾರೊಂದು!

ಹಾಂಗಿದ್ದರೂ ಎಲ್ಲರುದೇ ಈ ಶುದ್ದಿಗಳ ಕೇಳಿ, ಅದಕ್ಕೆ ಒಪ್ಪ ಕೊಟ್ಟು, ಶುದ್ದಿಗಳ ಇನ್ನೂ ಇನ್ನೂ ಹೇಳುಲೆ ಒರ್ಮೈಸಿದ್ದು ಸಾದಾರ್ಣ ವಿಚಾರ ಅಲ್ಲ! ಅದೊಂದು ಪವಾಡವೇ ಸರಿ..!

ಒಪ್ಪಣ್ಣನ ಸುರುವಾಣ ಶುದ್ದಿ ನೋಡಿ, ಅದರ ಹೇಳುವಗ ಆರುದೇ ಕೇಳುವವು ಇತ್ತವಿಲ್ಲೆ.
ಒಬ್ಬನೇ ಕೂದಂಡು ಹೇಳಿದ್ದು. ಸಾರಡಿ ತೋಡಕರೆಲಿ ಮಾತಾಡಿದ ಹಾಂಗೆ!
ರಜ ಸಮಯಲ್ಲಿ ಒಪ್ಪಣ್ಣ ಶುದ್ದಿ ಹೇಳಿದ ಸಂಗತಿ ದೂರಲ್ಲಿ ಕೂದ ದೊಡ್ಡಣ್ಣಂಗೆ ಗೊಂತಾತು.
ಅವ ಅದರ ಒಪ್ಪಕ್ಕಂಗೆ ಹೇಳಿ, ಒಪ್ಪಕ್ಕ ಮಾಷ್ಟ್ರುಮನೆ ಅತ್ತೆಗೆ ಹೇಳಿ, ಅವು ಪುಟ್ಟಕ್ಕಂಗೆ ಹೇಳಿ, ಪುಟ್ಟಕ್ಕ ಆದೂರಣ್ಣಂಗೆ ಹೇಳಿ – ಅಂತೂ ಮುಂದೆ ಒಪ್ಪಣ್ಣ ಶುದ್ದಿ ಹೇಳ್ತ ಶುದ್ದಿ ನೆರೆಕರೆಯ ಬೈಲಿಂಗೆ ಇಡೀಕ ಗೊಂತಾತು.
ಆಚಕರೆ ಮಾಣಿ ಅಂತೂ ಎದುರಾಣ ಸಾಲಿಲೇ ಕೂದುಗೊಂಡು, ಎಡೆಡೆಲಿ ಅವಂದೇ ಶುದ್ದಿ ಹೇಳುಲೆ ಸುರು ಮಾಡಿದ.
ಅಜ್ಜಕಾನ ಬಾವಂಗೂ ಈ ಆಚಕರೆ ಮಾಣಿಗೂ ಜಟಾಪಟಿ ಆದ್ದದೂ ಇದ್ದು, ಶುದ್ದಿಯ ಭರಲ್ಲಿ!
ಮುಂದೆ ಕಾಲ ಹೋದ ಹಾಂಗೆ ನೆರೆಕರೆಯ ಎಲ್ಲೊರಿಂಗೂ ಗೊಂತಾಗಿ, ಅವು ಅವರ ಚೆಂಙಾಯಿಗೊಕ್ಕೆ ಹೇಳಿ, ಅದು ಅವರಿಂದ ಮುಂದೆ ಮುಂದೆ ಹೋಗಿ, ಈಗ ಈ ನೆರೆಕರೆಯೇ ಬೆಳೆತ್ತಾ ಇದ್ದು.
ಒಪ್ಪಣ್ಣಂಗೆ ಕೊಶಿಯೋ ಕೊಶಿ!

2009 ರಲ್ಲಿ ಒಪ್ಪಣ್ಣನ ಶುದ್ದಿಯ 21,000 ಜೆನಂಗೊ ಕೇಳಿದ್ದವು.
2009 ರಲ್ಲಿ ಒಪ್ಪಣ್ಣನ ಶುದ್ದಿಯ 21,000 ಜೆನಂಗೊ ಕೇಳಿದ್ದವು.

ಪ್ರತಿ ಶುಕ್ರವಾರ ಒಪ್ಪಣ್ಣನ ಶುದ್ದಿಯ ಕೇಳಿ, ಒಂದು ಒಪ್ಪಕೊಟ್ಟು, ದೊಡ್ಡಮಾವಂಗೂ ಕೇಳುಸುದು ನಮ್ಮ ದೊಡ್ಡಬಾವನ ಟೈಮುಟೇಬುಲು ಆಗಿಬಿಟ್ಟಿದು, ಶಾಲೆ ಟೈಮುಟೇಬುಲಿನ ಒತ್ತಕ್ಕೆ – ಒಪ್ಪಣ್ಣಂಗೆ ಅದು ತುಂಬ ಕೊಶಿ! ಈ ಒಪ್ಪಣ್ಣನ ಶುದ್ದಿಯ ಅವು ಕುಂಬ್ಳೆ‌ಅಜ್ಜಿಗೂ ಹೇಳಿ, ’ಚಿಕ್ಕಿನ ಶುದ್ದಿ ಇಡೀ ಬೈಲಿಂಗೇ ಗೊಂತಾಯಿದು ಅಜ್ಜೀ! ನಿಂಗಳ ಚಿಕ್ಕಿನ ಗೆಡು ಜಾಗ್ರತೆ!’ ಹೇಳಿ ಹೆದರಿಸಿದ್ದವಡ, ಹಾಂಗೊಂದು ಗಾಳಿಶುದ್ದಿ ಬಂತು – ಎಡಪ್ಪಾಡಿ ಬಾವನ ಹೊಡೆಂದ! ರೂಪತ್ತೆ ಶುದ್ದಿ ಹೇಳಿದ್ದಕ್ಕೆ ಅಜ್ಜಕಾನ ಬಾವಂಗೆ ಸಮಾದಾನ ಆಯಿದಿಲ್ಲೆ! ಶುಬತ್ತೆಶುದ್ದಿ ಸಾಗರದ ಸತ್ಯಮಾವಂಗೆ ಬಾರೀ ಕೊಶಿ ಆಯಿದು. ಮೋಹನ ರಾಗದ ಶುದ್ದಿ ಮೋಹನಣ್ಣಂಗೆ ಅರ್ತವೇ ಆಯಿದಿಲ್ಲೆ. ಬೀನು ಬೇಗಿನ ಶುದ್ದಿ ಪುಟ್ಟಕ್ಕಂಗೆ ಕೊಶೀ ಆಯಿದು – ಅದುದೇ ಒಂದು ಬೀನುಬೇಗಿನ ಹಾಂಗೆ ಆವುತ್ತಾ ಇಪ್ಪದಕ್ಕೋ ಏನೋ! ಓಜುಪೇಯಿ ಅಜ್ಜನ ಶುದ್ದಿ ಗುಣಾಜೆ ಮಾಣಿಗೆ ಬಾರೀ ಕೊಶಿ ಆಯಿದು – ಇಬ್ರುದೇ ಬ್ರಮ್ಮಚಾರಿ ಇದಾ, ಹಾಂಗೆ! ಮಾಣಿಪ್ಪಾಡಿಯ ಶುದ್ದಿ ಬಪ್ಪಗ ಅಂತೂ ಎಲ್ಲೋರಿಂಗೂ ಕಸಿವಿಸಿ. ’ಚೆ, ಒಪ್ಪಣ್ಣ ಎಂತ್ಸಕ್ಕೆ ಈ ಮಾತು ಹೇಳ್ತನಪ್ಪಾ’ ಹೇಳಿ. ಎಂತ ಮಾಡುತ್ಸು, ನಮ್ಮ ಊರಿಲೇ ಶುದ್ದಿಗೊ ಬೇಕಾದಷ್ಟು ಇದ್ದು. ಅಲ್ಲದೋ?

ನೆರೆಕರೆ ಶುದ್ದಿ ಕೇಳ್ತ ನೆರೆಕರೆಯವು ದಣಿಯ ಜೆನ ಆದವು, ಚೆಂಙಾಯಿಗಳೂ ಸೇರಿಗೊಂಡವು, ನೆಂಟ್ರುಗಳುದೇ ಬಂದು ಎತ್ತಿದವು.
ಕೊಶಿ ಇಷ್ಟಕ್ಕೇ ನಿಂದಿದಿಲ್ಲೆ! ನಿತ್ಯವೂ ಏರುತ್ತಾ ಇದ್ದು!!!
.

ಹಾಂಗೆ, ನಮ್ಮ ಊರಿನ ಶುದ್ದಿಗಳ ಹೇಳಿಗೊಂಡು, ಅದರ ಒಟ್ಟೊಟ್ಟಿಂಗೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆಧ್ಯಾತ್ಮಿಕ, ಆದಿಭೌತಿಕ – ಎಲ್ಲ ಶುದ್ದಿಗಳನ್ನುದೇ ಹೇಳಿಗೊಂಡು ಒಟ್ಟಿಲಿ ಚೆಂದಕ್ಕೆ ತೆಕ್ಕೊಂಡು ಹೋಪ ಹೇಳಿ ಒಪ್ಪಣ್ಣಂಗೆ ಅನಿಸಿ ಹೋತು.
ಹೇಂಗಕ್ಕು? ಹೇಂಗಾತು?
ಸಣ್ಣ ವಿಮರ್ಶೆ ಮಾಡ್ತ ಕಾಲ!

ಅಂತೂ ಒಂದೊರಿಶ ಕಳಾತು.
ಪದ್ಯ ಹೇಳ್ತ ಅಶ್ವತ್ ಹೋತು, ನಟನೆ ಮಾಡ್ತ ವಿಷ್ಣು ಹೋದ, ಊರಿಡೀ ಮಳೆ – ಅಕಾಲ ವೃಷ್ಟಿ, ಒಣಗಿದ ಅಡಕ್ಕೆ ಪೂರ ಚೆಂಡಿ ಆತು, ಅರೆವಾಶಿ ಬೆಳ್ಳಕ್ಕೇ ಹೋತು; ’ಪ್ರಳಯ ಬಕ್ಕೋ ಏನೋ!’ ಹೇಳಿಗೊಂಡು ತಲೆಬೆಶಿ ಮಾಡ್ತ ಕೆಲಸ ನಮ್ಮ ರಂಗಮಾವಂಗೆ.
ಆರು ಎಂತದೇ ತಲೆಬೆಶಿ ಮಾಡಿರೂ, ಬೇಳದ ರೋಸಮ್ಮಂಗೆ ಹೊಸ ಒರಿಶದ ಗಮ್ಮತ್ತು..! ಗುಣಾಜೆಮಾಣಿಗೆ ಅಟ್ಟಿನಳಗೆಯಷ್ಟಕೆ ಇಪ್ಪ ಕೇಕಿನ ಪೆಟ್ಟಿಗೆ ಕೊಟ್ಟಿದಡ, ಪಾಲಾರಣ್ಣಂಗೆ ಗೊಂತಾಯಿದು! ಪುರ್ಬುಗಳ ಗೌಜಿಯ ನಮ್ಮೋರೊಟ್ಟಿಂಗೂ ಹಂಚಿಗೊಂಬದು ಸಂತೋಷದ ಸಂಗತಿ.

ಅದೇನೇ ಇರಳಿ..
ಒಂದೊರಿಶ ಆತಲ್ದ, ಏನಾರು ಹೊಸತ್ತು ಮಾಡೆಕ್ಕಲ್ದಾ ಈ ಒರಿಷ? ಹೇಳಿ ಒಪ್ಪಣ್ಣ ಯೋಚನೆ ಮಾಡಿಗೊಂಡು ಕೂದ.
ಸೈಟು ಮಾಡುವ° – ಹೇಳಿ ಪೆರ್ಲದಣ್ಣ ಹೇದ.
ಕೈಲಿ ಮುಕ್ಕಾಲು ಇಲ್ಲೆ! ಈ ಅಡಕ್ಕೆಯ ನಂಬಿಗೊಂಡು ಜಾಗೆ ಮಾಡಿದ ಹಾಂಗೆಯೇ! ’ನಮ್ಮಂದಾಗಪ್ಪ!’ ಹೇಳಿದೆ.
’ಚೆ! ನೆಲಕ್ಕದ ಸೈಟು ಅಲ್ಲ, ವೆಬ್ ಸೈಟು’ – ಹೇಳಿದ°.
’ಅದೆಂತರ?’ ಕೇಳಿದೆ ಆನು.
ಒಂದರ್ದ ಗಂಟೆ ಹೇಳಿದ, ಎಷ್ಟು ಅರ್ತ ಆತೋ ಎಷ್ಟು ಬಿಟ್ಟತ್ತೋ – ಒಂದೂ ಅರಡಿಯ.
ಎರಡು ಮೂರು ದಿನ ನೆಡು ಇರುಳು ಒರೆಂಗೆ ಕೂದು ಒಂದು ಸೈಟು ತೆಯಾರು ಮಾಡಿದ°.
ಸಂಕೊಳಿಗೆ ಬಾಬಣ್ಣ ಚಿತ್ರ ಬಿಡುಸಿ ಕೊಟ್ಟದಡ, ಬೀಸ್ರೋಡುಮಾಣಿ ಅದರ ಕರೆ – ಗೆರೆ ಎಲ್ಲ ಸರಿ ಮಾಡಿದನಡ.
ಮಡಿಕೇರಿ ದೀಪು‌ಅಣ್ಣ ನೆರೆಕರೆಯ ಸರಿ ನೋಡಿಗೊಂಡನಡ. ಬೋವಿಕ್ಕಾನ ಕೂಸು ಪಟಂಗಳ ಎಲ್ಲ ಅಂಟುಸಿಗೊಂಡು ಇತ್ತಡ.

ಅಂತೂ, ಒಪ್ಪಣ್ಣನ ಹೊಸ ಜಾಗೆಯ ವಿವರ:
ಒಪ್ಪಣ್ಣ ಡೋಟುಕೋಮು ಸೈಟು ಎಡ್ರಾಸು: https://oppanna.com
ಪಟದ ಪುಟ: https://oppanna.com/gallery
ಒಪ್ಪಂಗೊ: https://oppanna.com/category/oppa
ಲೇಖನಂಗೊ : https://oppanna.com/category/lekhana

ಎಲ್ಲ ಚೆಂದಕೆ ಆಗಿ ಕಳಾತು – ಗುಣಾಜೆಮಾಣಿಗೆ ಪೂರ್ತಿ ಅಪ್ಪನ್ನಾರ ಗೊಂತೇ ಆಯಿದಿಲ್ಲೆ.
ಅವ° ಆರತ್ರಾರು ಮಾತಾಡ್ಳೆ ಕೂದರೆ ಲೋಕ ಅಡಿಮೇಲಾದರೂ ಗೊಂತಾಗ ಹೇಳಿ ಕಾಂಚೋಡಿಮಾಣಿ ಪರಂಚುಗು! ಕುಶಾಲಿಂಗೆ!!

ಹ್ಮ್, ಅಂತೂ ಒಪ್ಪಣ್ಣ ಜಾಗೆ ತೆಗದ°.
ಹುಟ್ಟುವಳಿ ಎಂತ ಇಲ್ಲದ್ರೂ ಜಾಗೆ ಹೇಳಿ ಒಂದಾದರೆ ಮುಂದಾಣೋರಿಂಗೆ ಆವುತ್ತನ್ನೆ – ಹೇಳಿ ಶಂಬಜ್ಜ ಹೇಳುಗಡ.
ಇನ್ನು ಈ ಜಾಗೆಲಿ ಕೃಷಿ ಮಾಡುದು ಇಪ್ಪದು.
ಹವ್ಯಕ ಭಾಶೆಯ ಸೊಗಡಿನ, ಸೊಬಗಿನ ಹಾಂಗೇ ಒಳಿಶಿಗೊಂಡು, ಮುಂದಕ್ಕೆ ತೆಕ್ಕೊಂಡು ಹೋಪ ಕಾರ್ಯ ನಾವು ಮಾಡುವ.
ನಮ್ಮ ತಲೆಮಾರುಗಳ ಎಡೆಲಿ ನೆಡಕ್ಕೊಂಡು ಬಂದ ನಮ್ಮ ಸಂಸ್ಕೃತಿಯ ಒಳಿಶಿ, ಅದರ ಬೆಳಶಿ, ನಮ್ಮ ಹಳೆ ಕಾಲದ ಆಚರಣೆಗೊ, ಪಳಮ್ಮೆಗೊ, ಮಂತ್ರಂಗೊ, ಶ್ಳೋಕಂಗೊ – ಹವ್ಯಕ ಅರ್ಥಂಗೊ, ಹವ್ಯಕ ಪದ್ಯಂಗೊ, ಹೀಂಗೇ ಎಲ್ಲ ಸಹಸಂಬಂಧೀ ವಿಚಾರಂಗಳ ಹಾಕಿ, ಒಪ್ಪಣ್ಣನ ಬೈಲಿನ ಅಕ್ಷರಸಂಪತ್ತು ಸಮೃದ್ಧಿಯಾಗಿ ಇಪ್ಪಲೆ ನೋಡಿಗೊಂಬ.
ಅದರ ಚೆಂದಕೆ ನೋಡಿಗೊಂಡು, ಎಲ್ಲ ನೆರೆಕರೆಯವಕ್ಕುದೇ ಪಸಲು, ಆಸರಿಂಗೆ, ಪಲಾರ ಸಿಕ್ಕುವ ಹಾಂಗೆ ನೋಡಿಗೊಂಡು, ಎಲ್ಲೋರನ್ನುದೇ ಕುಶಿಪಡುಸುವ ಕಾರ್ಯ ನಮ್ಮ ಬೈಲಿನ ಗುರಿಕ್ಕಾರಂಗೆ!

ಅಜ್ಜಕಾನಬಾವ° ಎರಡುವಾರ ಮೊದಲೇ ಹೇಳಿತ್ತಿದ್ದ°, ’ಒರಿಶದ ಅಕೇರಿಗೆ ಐವತ್ತು ಶುದ್ದಿ ಆವುತ್ತು. ಆ ಸರ್ತಿ ’ನೆರೆಕರೆಯವು’ ಎಲ್ಲೊರು ಒಟ್ಟಿಂಗೆ ಸಿಕ್ಕುವನಾ’ ಹೇಳಿ. ಅಂಬಗ ಅಕ್ಕಕ್ಕು ಹೇಳಿ ಯೋಚನೆ ಬಂದರೂ, ಬೇರೆ ಕೆಲಸದ ಎಡಕ್ಕಿಲಿ ಕಷ್ಟ ಆತು. ನಮ್ಮಾಂಗಿಪ್ಪ  ಕೃಷಿಕರಿಂಗೆ ಪುರುಸೊತ್ತಿದ್ದೋ, ನಿಂಗಳೇ ಹೇಳಿ! ನೋಡೊ°, ಬಪ್ಪೊರಿಷ ಎಡಿತ್ತೋ ಹೇಳಿಗೊಂಡು.
ಆಗದೋ? ಏ°?

ಒಂದೊರಿಶ ಒಪ್ಪಣ್ಣ ಶುದ್ದಿ ಹೇಳಿದ°, ನಿಂಗೊ ಒಪ್ಪ ಕೊಟ್ಟಿ.
ಇನ್ನು ಎಲ್ಲೊರುದೇ ಶುದ್ದಿ ಹೇಳುವ°, ಎಲ್ಲೊರುದೇ ಪ್ರತಿಕ್ರಿಯೆ ಕೊಡುವ°. ಆಗದೋ?
ಆಗದೋ?
ನಿಂಗಳ ಹವ್ಯಕ ಲೇಖನಂಗೊ, ಶುದ್ದಿಗೊ, ನೆರೆಕರೆ ಶುದ್ದಿಗೊ, ಪದ್ಯಂಗೊ, ಅಡಿಗೆಗೊ, ಪಟಂಗೊ ಎಲ್ಲವನ್ನುದೇ ಕೊಟ್ಟು ಕಳುಸಿ.
ಒಪ್ಪಣ್ಣ ನ ನೆರೆಕರೆಗೆ ಸೇರಿಗೊಳ್ಳಿ.

ಒಪ್ಪಣ್ಣನ ಹೊಸ ಜಾಗೆಯ ನೋಡಿ, ಪರಿಚಯ ಮಾಡಿಗೊಳ್ಳಿ.
ನಿಂಗಳ ಗುರ್ತದವಕ್ಕುದೇ ತಿಳಿಶಿ.! ಆತೋ? ಏ°?

ಎಲ್ಲೊರೂ ಒಪ್ಪಣ್ಣ – ಒಪ್ಪಕ್ಕಂದ್ರು ಆಗಿಪ್ಪ°!
ಎಲ್ಲೊರಿಂಗುದೇ ನಮಸ್ಕಾರ..!
ನಿಂಗಳ,
~
ಒಪ್ಪಣ್ಣ
Oppanna@Oppanna.com

ಒಂದೊಪ್ಪ: ಒಪ್ಪಣ್ಣನ ನೆರೆಕರೆ ಬದಲಾಯಿದು. ಒಳ್ಳೆ ನೆರೆಕರೆ ಎಲ್ಲಿದ್ದೋ, ಒಪ್ಪಣ್ಣನೂ ಅಲ್ಲೇ ಇದ್ದ°. ಅಲ್ಲದೋ..?!

9 thoughts on “ಒಂದೊರಿಶ, ಐವತ್ತು ‘ಶುದ್ದಿ’ – ಈ ವಾರಕ್ಕೆ ಅದೇ ಶುದ್ದಿ..!

  1. ಒಪ್ಪನ್ನೋ,
    ಗುರುಗಳ ಆಶೀರ್ವಚನ ಅದ್ಭುತ ಆಗಿ ಇದ್ದು.
    ಬರೆತ್ತಾ ಇರು, ಬರವಲೆ ಇದೇ ಸ್ಪೂರ್ತಿ ಕೊಡ್ಳಿ ಹೇಳಿ ಎಂಗಳ ಆಶಯ.


    ಕೆದಿಲ ಬಾವ

  2. ಒಪ್ಪಣ್ಣನ ಬೈಲಿಂಗೆ ಸೈಟು ಬಂದ ಶುದ್ದಿ ಕೇಳಿ , ನೋಡಿ ತುಂಬಾ ಕುಶಿ ಆತು. ಒಳ್ಳೆ ಯೋಚನೆ, ಯೋಜನೆ. ಗುರುಗಳ ಆಶೀರ್ವಚನ ಅಂತೂ ಅದ್ಭುತ!
    ನೆರೆಕರೆ ಬೆಳಕ್ಕೊಂಡಿರಲಿ. ಒಪ್ಪಣ್ಣನ ಶುದ್ದಿಗೊ ನಿರಂತರ ಬತ್ತಾ ಇರಳಿ.

  3. ಒಪ್ಪಣ್ಣ…..
    ವೆಬ್ ಸೈಟ್ ನೋಡಿ ತುಂಬಾ ಖುಷಿ ಆತು ….
    ಗುರುಗಳ ಆಶೀರ್ವಚನ ಅಂತೂ ಅದ್ಭುತ … 🙂
    ನೆರೆಕರೆ ಎಲ್ಲ ಭಾರೀ ಚೆಂದ ಇದ್ದು…
    ನೆರೆಕರೆಯವರ ಪಟ ನೋಡಿ ಖುಶೀ ಆತು…… 🙂

  4. entha oppanno neenu website suru maadidde heli kushi aatu. oduvaga namma gurugala aasheervachanavu kelide.adakke green signal sikkittanne mattu kushi
    aatu.tumba laiku barette. yava ade tade illadde nirvighnavagi mundariyali oppanno.
    good luck….

  5. ಒಪ್ಪಣ್ಣ ಡೊಟ್ ಕಾಮ್.. ಹೊಸ ರೂಪ.. ಹೊಸ ವೇಷ.. ಅದ್ಭುತ ಚಿತ್ತಾರ… ಬೇರೆಂತ ಹೇಳುಲಕ್ಕು.. ಎನಗರಡಿಯ…

    => ಒಪ್ಪಣ್ಣನ ಬರವಣಿಗೆ ಅನಂತ ಆಯೆಕ್ಕು… ಎಲ್ಲಾರು ಹೇಳಿದಾಂಗೆ ಒಪ್ಪಣ್ಣ ಬರೆವದು ನಿಲ್ಲುಲಾಗ… ನೆರೆಕರೆಯವು ಒಟ್ಟಿಂಗೆ ಇದ್ದೆಯಾ!!! ಒಟ್ಟಿಂಗೆ ಹೋಪ..

    ಎಂತ ಹೇಳುತ್ತೆ ಒಪ್ಪಣ್ಣಾ…!

  6. ಎಲ್ಲಾ ಐವತ್ತು ಲೇಖನಂಗಳ ಎನ್ನ ಕಂಪ್ಯೂಟರಿಲ್ಲಿ ಇಳಿಶಿ ಒಳಿಶಿಗೊಂಡಿದೆ. ಹಾಳೆ, ದನದ ಹಾಲು, ತುಪ್ಪಕೊಟ್ಟು, ಬೂತ ತೀರ್ಪುಕೊಟ್ಟದು, ಬಾಲ್ಯ ವಿವಾಹ ಇತ್ಯಾದಿಗಳ ಪ್ರಿಂಟ್ ತೆಗದು, ನೆಂಟರಿಷ್ಟರಿಂಗೆ ಓದಲೆ ಕೊಟ್ಟೆ. ಓದಿ ನೆಗೆ ಮಾಡಿ ಸಾಕಾತು. ಎಲ್ಲೋರು ಕೇಳೊದು ಈ ಒಪ್ಪಣ್ಣ ಆರು ಹೇಳಿ. “ಎನಗೂ ಗೊಂತಿಲ್ಲೆ, ಏಳ್ಯಡ್ಕ ಮಹೇಶ ಹೇಳಿ ಹೆಸರು. ಆದರೆ ಓದುವಾಗ ಕುಂಬ್ಳೆ ಸೀಮೆಯವ ಹೇಳಿ ಕಾಣ್ತು.” ಹೇಳಿದೆ. ಕೆಲವು ಜೆನಕ್ಕೆ ಬ್ಲಾಗಿನ ಎಡ್ರೆಸ್ ಕೊಟ್ಟು, ಸ್ಯಾಂಪ್ಲಿಂಗೆ ಒಂದು ಲೇಖನ ಇಮೈಲ್ ಮಾಡಿದೆ.
    ಒಂದು ಒರಿಷ ಇಡೀ ತಪ್ಪದ್ದೆ ವಾರ ವಾರವೂ ಹೊಸ ಹೊಸ ವಿಷಯವ ತೆಕ್ಕೊಂಡು ಮಾತಾಡುವ ಶೈಲಿಲಿ ಉದ್ದಕ್ಕೆ ಬರಕ್ಕೊಂಡು ಹೋದ್ದದು ದೊಡ್ಡ ಸಾಧನೆಯೆ!
    ಮಂಗಳೂರು ಕನ್ನಡದ ಬ್ಲಾಗ್ ಲಾಯಿಕಿದ್ದರೂ, ನಮ್ಮ ಹವ್ಯಕ ಬ್ಲಾಗಿನ ಮಟ್ಟಕ್ಕೆ ಬಾರ. ತುಳು ಬ್ಲಾಗಿನ ಕೈಬಿಟ್ಟದು ಒಳ್ಳೆದೇ ಆತು. ಎಲ್ಲವನ್ನೂ ಒಟ್ಟಿಂಗೆ ಬರಕ್ಕೊಂಡು ಹೋಪದು ಕಷ್ಟ. ಈಗ ವೆಬ್ ಸೈಟಿಲ್ಲಿ ಬೇರೆಯವರ ಬರಹಂಗಳ ಹಾಕುವಾಗ ಓದಿ ನೋಡಿಯೇ ಹಾಕೊದು ಒಳ್ಳೆದು. ಮಾಷ್ಟ್ರ ಮಾವಂಗೆ ಕಂಪ್ಯೂಟರಿಲ್ಲಿ, ಕನ್ನಡ ಅಕ್ಷರಲ್ಲಿ ಬರವದು ರಜ್ಜ ಕಷ್ಟ ಆದ ಹಾಂಗೆ ಕಾಣ್ತು.
    ಅಂತೂ ಭಾರೀ ಒಳ್ಳೆ ಕೆಲಸ ಮಾಡ್ತಾ ಇದ್ದೆ; ಶುಭವಾಗಲಿ!

  7. ಒಪ್ಪಣ್ಣ,
    ಕಳುದ ಐದಾರು ತಿಂಗಳಿಂದ ಬ್ಲಾಗಿನ ತಪ್ಪದ್ದೆ ಓದಿಗೊಂಡಿದ್ದೆ; ೫೦ ಬೇರೆ ಬೇರೆ ವಿಷಯಂಗಳ ಲೇಖನಂಗೊ ಕೊಟ್ಟ ಖುಶಿ, ಸಂತೋಷ, ತೃಪ್ತಿಗಳ ವಿವರುಸಲೆ ಕಷ್ಟ. ಈ ಎಲ್ಲ ಬರಹಂಗಳ ಪುಸ್ತಕ ರೂಪಲ್ಲಿ ಪ್ರಕಟಿಸಿದರೆ ಇನ್ನೂ ಹೆಚ್ಚು ಜೆನ ಓದುಗು.
    ಈಗ ಮಾಡಿದ ವೆಬ್ ಸೈಟಿನ ವಿನ್ಯಾಸ ಲಾಯಿಕಾಯಿದು. ವಿಷಯ ವೈವಿಧ್ಯ ಒಳ್ಳೆದಾಯಿದು. ಅದೇ ರೀತಿ ಜ್ಯೋತಿಷ್ಯ, ಕಂಪ್ಯೂಟರು, ಇಂಟರ್ನೆಟ್ಟುಗಳ ಬಗ್ಗೆಯೂ ಒಪ್ಪಣ್ಣನೇ ಪಾಠ ಬರವಲಕ್ಕು. ಒಪ್ಪಣ್ಣ ಒಳ್ಳೆ ಮಾಷ್ಟ್ರ. ಹವ್ಯಕ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಜೀವನಕ್ರಮ ಎಲ್ಲದರ ಬಗ್ಗೆಯೂ ಒಪ್ಪಣ್ಣ ಬರವ ಶೈಲಿ ಆಸಕ್ತಿ ಹುಟ್ಟುಸುವಂತಾದ್ದು, ಸುಲಭವಾಗಿ ಅರ್ಥ ಅಪ್ಪಂತಾದ್ದು. ನಮ್ಮ ಧಾರ್ಮಿಕ ಆಚಾರಂಗಳ ಬಗ್ಗೆ, ಹವ್ಯಕ ತಿಂಗಳುಗಳ (ಕಾಲಚಕ್ರ) ಬಗ್ಗೆ ಬರದ ಲೇಖನಂಗಳೇ ಇದಕ್ಕೆ ಸಾಕ್ಷಿ.
    ಒಪ್ಪಣ್ಣನ ಎಲ್ಲ ಬರವಣಿಗೆಲಿಯೂ ಬಪ್ಪ ಗುಣಾಜೆ ಮಾಣಿ, ಸೇಡಿಗುಮ್ಮೆ ಬಾವ, ಅಜ್ಜಕಾನ ಬಾವ, ಪೆರ್ಲದಣ್ಣ, ರೂಪತ್ತೆ ಈ ಎಲ್ಲ ವ್ಯಕ್ತಿಗಳೂ ನಾವು ಯಾವಾಗಲೂ ನೋಡುವ ವ್ಯಕ್ತಿಗಳೇ.
    ಒಪ್ಪಣ್ಣಾ, ಕಾಲ್ಪನಿಕ ಜೆನಂಗಳ ಪಟ ಹಾಕಿದ್ದು ಹೇಂಗೆ?
    ಇಷ್ಟರ ವರೆಂಗೆ ಪ್ರತಿಕ್ರಿಯೆ ಬರಕ್ಕೊಂಡಿದ್ದವೇ ಬರಕ್ಕೊಂಡಿದ್ದದು. ಇದು ಮಾಂತ್ರ ಹೊಸ ಜೆನದ ಪ್ರತಿಕ್ರಿಯೆ

  8. ಒಪ್ಪಣ್ಣನ ಹೊಸ ಏರ್ಪಾಡು ನೋಡಿ ಭಾರೀ ಖುಷಿ ಆತು. ಬದಲಾವಣೆ ಯಾವಗಲೂ ಒಳ್ಳೆದೇ ಹೇಳಿ ಗೀತೆಲಿಯೂ ಹೇಳಿದ್ದವಡ. ಅಲ್ಲದಾ… ಈಗ ಓದುಲೆ ಬೇಕಾದಷ್ಟು ಸಿಕ್ಕಿತ್ತು, ಅಲ್ಲದ್ರೆ ಶುಕ್ರವಾರ ಬಪ್ಪಲೆ ಕಾಯ್ಸೇ ಆತು. ಇನ್ನು ಆ ತೊಂದರೆ ಇಲ್ಲೆನ್ನೆ. ಒಳ್ಳೆದಾಗಲಿ, ಎಲ್ಲೋರಿಂಗೂ…

  9. ಒಪ್ಪಣ್ಣ ನ ಒಂದು ವರ್ಷದ ೫೦ ಬ್ಲೋಗು ಸಾರ್ಥಕ ಆಯಿದು.ಇನ್ನು ಮುಂದಾಣ ವೆಬ್ ಸೈಟಿಲಿ ಒಳ್ಳೆಯ ಕೃಷಿ ಮಾಡಿ ತುಂಬಾ ಹವ್ಯಕ ಪರಂಪರೆಯ ಸಂಪತ್ತಿನ ಬಿತ್ತರ ಮಾಡುವಂತಾಗಲಿ ……ಇದಕ್ಕೆ ಜವ್ವನಿಗರ ಸಪೋರ್ಟು ಇದ್ದು. ಅವರವರ ಕ್ಷೇತ್ರಲ್ಲಿ ರಜ್ಜ ಬುಸ್ಸಿ ಇದ್ದರೂ ಜವ್ವನಿಗರು ವಾರಲ್ಲಿ ಒಂದು ದಿನ ಆದರೂ ಒಪ್ಪಣ್ಣ ನ ಬ್ಲೋಗು ಓದಿ ಕಾಮೆಂಟ್ ಬರೆಯದ್ದೆ ಇರವು. ಐವತ್ತು! ನಂಬರು ಇಷ್ಟು ಭಾರ ಇಕ್ಕು ಹೇಳಿ ಒಪ್ಪಣ್ಣ ಗ್ರೆಶಿರ ಅಲ್ದಾ? . ಆರು ತಿಂಗಳಿನ ಹಿಂದೆ ಇನ್ನು ಬ್ಲೋಗಿನ್ಗೆ ಚಾಲನೆ ಕೊಡಕು ಹೇಳಿಕೊಂಡು ಹೆರತಪ್ಪಾಗ, ಏವ ಯೋಚನೆಯೂ ಇಕ್ಕು ಹೇಳಿಯೇ ಗೊಂತಾಗ . . ಚಕ್ರ ಕಟ್ಟಿಕೊಂಡ ಗಾಡಿ ತಿಂಗಳಿನ ತಿಂಗಳಿನ್ಗೆ ಐವತ್ತರ ಮೈಲಿಗಲ್ಲು ದಾನ್ಟಿದ್ದು… ಆ ಸವಿನೆನಪಿಲಿ ಎಲ್ಯಡ್ಕಲ್ಲಿ ಸಣ್ಣ ಸಂಭ್ರಮ. ಮಾಷ್ಟ್ರತ್ತೆ ಕೇಸರಿ ಭಾತು ಮಾಡಿದ್ದವದ.. ಇಂದು ಅತಿಥಿಯಾಗಿ ಬಂದವು , ಗೆಳೆಯರಾದವರು, ಒಪ್ಪಣ್ಣನ ಬೆನ್ನು ತಟ್ಟಿದವು , ಹಾಂಗಲ್ಲ ಹೀಂಗೆ ಹೇಳಿ ಹೇಳಿದವು , ಎಲ್ಲೋರ ನೆಂಪು ಮಾಡಿಗೊಂಬ ಸಂಭ್ರಮದ ದಿನ …ಹೊಸ ವರ್ಷಲ್ಲಿ ಗುರುಗಳ,ಹಿರಿಯರ ಆಶೀರ್ವಾದ ಬಲಂದ
    http://www.oppanna .com ಹೀಂಗೇ ಮುಂದುವರಿಯಲಿ … ನಮ್ಮೊಳಾನ ಹವ್ಯಕವೆಂಬ ಹಣತೆಗೆ ಎರಡೆರಡು ಹನಿ ಸುರಿಯುವ ಕೆಲಸ. ಆ ಮೂಲಕ ನಮ್ಮ ಪರಂಪರೆ ಬೆಳೆಯಲಿ..
    ಶುಭಾಶಯಗಳೊಂದಿಗೆ
    ಪಿ.ಗಣೇಶ್ ಭಟ್ ಮಾಡಾವು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×