Oppanna.com

ಲಕ್ಷ್ಯಂದಲೂ ಮೇಗೆ, ಲಕ್ಷಂದಲೂ ಮೇಗೆ..!!

ಬರದೋರು :   ಒಪ್ಪಣ್ಣ    on   31/12/2010    58 ಒಪ್ಪಂಗೊ

ಬೈಲಿಂಗೆ ಮತ್ತೊಂದು ಕೊಶಿಯ ಸಂಗತಿ!

ಅಂದೊಂದರಿ ಒಪ್ಪಣ್ಣಂಗೆ ಕೊಶಿ ಆದ್ದದು ನಿಂಗೊಗೆ ನೆಂಪಿಕ್ಕು, ಅಲ್ಲದೋ?
ಬ್ಲೋಗು ಹೇಳ್ತದರ ಶುರುಮಾಡಿ, ಶುಕ್ರವಾರಕ್ಕೊಂದು ಶುದ್ದಿ ಹೇಳ್ತ ಕ್ರಮ ಬೈಲಿಲಿ ಅಂಬಗ ಸುರು ಆತು..!
ಅಲ್ಲಿಂದ ಮುಂದೆ ಇಂದಿನ ಒರೆಂಗೂ ಉಸುಲುಬಿಡದ್ದೇ ಹೇಳ್ತಹಾಂಗೆ ಪ್ರತಿವಾರವೂ ನೆಡಕ್ಕೊಂಡು ಬಂತು!
ಅಂಬಗ ಆ ಒರಿಶ ಇಪ್ಪತ್ತುಸಾವಿರ ಸರ್ತಿ ಶುದ್ದಿಪುಟವ ಓದಿದ್ದವು, ಒಂದೊರಿಶಲ್ಲಿ ಅಯಿವತ್ತು ಶುದ್ದಿ ಆತೂಳಿ – ಕೊಶಿಲಿ ಒಪ್ಪಣ್ಣ ಇಷ್ಟೆತ್ತರ ಹಾರಿತ್ತಿದ್ದ!!
(ನೆಂಪಿಲ್ಲದ್ದರೆ ಇಲ್ಲಿದ್ದು: ಓದಿಕ್ಕಿ https://oppanna.com/oppa/oppanna-one-year)

ಒಬ್ಬನೇ ಕೂದು ಶುದ್ದಿ ಹೇಳುದು ಎಷ್ಟು ಸಮೆಯ, ಹಾಂಗಾಗಿ ನೆರೆಕರೆಯ ಎಲ್ಲೋರುದೇ ಸೇರಿ ಶುದ್ದಿ ಹೇಳುದು ಒಳ್ಳೆದು – ಹೇಳ್ತ ಆಲೋಚನೆ ಬಂತು.
ಹಾಂಗಾಗಿ ಈ ಬೈಲು(ವೆಬುಸೈಟು) ಸುರು ಆತು!
ನಮ್ಮ ಗುರಗೊ ಒಂದು ಒಳ್ಳೆ ಆಶೀರ್ವಾದವೂ ಕೊಟ್ಟು, ಬೈಲು ಒಳ್ಳೆದಾಗಲಿ – ಹೇಳಿ ಹರಸಿದವು.
ಬೈಲಿನ ನೆರೆಕರೆಯೋರುದೇ ಅವರವರ ಅನುಕೂಲಲ್ಲಿ ಶುದ್ದಿ ಹೇಳ್ತ ವೆವಸ್ತೆಯ ಗುರಿಕ್ಕಾರ್ರು ಸ್ವತಃ ಎದುರುನಿಂದು ಮಾಡುಸಿಕೊಟ್ಟವು.

ಒಪ್ಪಣ್ಣನ ಬೈಲಿನ ನೆರೆಕರೆ ಬೆಳೆತ್ತಾ ಇದ್ದು, ನೆರೆಕರೆಯ ಶುದ್ದಿಗಳ ಓದುವವರ ಸಂಖೆಯೂ ಬೆಳೆತ್ತಾ ಇದ್ದು, ಶುದ್ದಿಗೊಕ್ಕೆ ಒಪ್ಪಕೊಡುವ ಬೈಲಿನವರ ಸಂಕೆಯೂ ಬೆಳೆತ್ತಾ ಇದ್ದು.
ಬೆಳೆತ್ತು, ಬೆಳೆತ್ತು, ಬೆಳದೇ ಬೆಳೆತ್ತು. ಪರಸ್ಪರ ಪ್ರೀತಿಯೂ ಬೆಳೆತ್ತು!
ಅದು ಗೊಂತಿಪ್ಪದೇ.
~

ಈಗ ಇನ್ನೊಂದು ಶುದ್ದಿ, ನಮ್ಮೆಲ್ಲೊರಿಂಗೂ ಕೊಶಿ ಇಪ್ಪದು!
ನಾಳೆಂದ ಜೆನವರಿ. ನಾಳೆ ಒಂದನೇ ತಾರೀಕು.
ಒಪ್ಪಣ್ಣ ಶುದ್ದಿ ಹೇಳುಲೆ ಸುರು ಮಾಡಿದ ದಿನವೇ! ಸರಿಯಾಗಿ ಎರಡೊರಿಶ ಆವುತ್ತು!!
ಬೈಲಿನ ಈ ವೆಬುಸೈಟು ಹುಟ್ಟಿದ ದಿನವೂ ಅಪ್ಪು. ಸರಿಯಾಗಿ ಒಂದೊರಿಶ ಆವುತ್ತು!!
ಕೊಶಿಯೇ ಅಲ್ಲದೋ?
~
ಎಲ್ಲಾ ಕೊಶಿಯ ಸಂದರ್ಭಲ್ಲಿಯೂ ಅದಕ್ಕೆ ಪ್ರೇರೇಪಣೆ ಆದ ಶೆಗ್ತಿಗೆ ಮೊದಲೊಂದನೆ ಮಾಡೆಕ್ಕಡ.
ಹಾಂಗೆ, ಇಂದು ಆರಂಭಲ್ಲಿ ಗುರುವಂದನೆ:

ಗುರುಗಳೇ,
ಸಮಾಜಕ್ಕೋಸ್ಕರ ನಿತ್ಯ-ಅನುದಿನ-ನಿರಂತರ ಯೋಚನರಾಗಿದ್ದೊಂಡು,
ತಪ್ಪಿದಲ್ಲಿ ತಿದ್ದಿ, ಜೀವನಕ್ಕೆ ನೀತಿ – ನಿಯಮ- ಧೈರ್ಯ – ಸ್ಥೈರ್ಯ- ತತ್ವಂಗಳ ತಿಳುಶಿಗೊಂಡು,
ಎಷ್ಟೋ ಕರ್ಗಲ್ಲುಗಳ ಚೆಂದ ಚೆಂದದ ಮೂರ್ತಿ ಮಾಡಿಗೊಂಡು,
ಶ್ರೀರಾಮನ ಆದರ್ಶ ವೆಗ್ತಿತ್ವವ ಜೀವನಲ್ಲಿ ಅಳವಡುಸುವ ಬಗ್ಗೆ ತಿಳುಶಿಗೊಂಡು,
ಎಂಗೊಗೂ ಕಲಿಶಿಗೊಂಡು,
ಬೈಲಿನ ಗೌರವದ ಗುರುಗೊ ಆಗೆಂಡು,
ಆಶೀರ್ವಾದ ಕೊಡ್ತ ಕರುಣಾಮೂರ್ತಿ ಆಗೆಂಡು,
ತರ್ಕಶಾಸ್ತ್ರದ ಯಾವದೋ ಸೂಕ್ಷ್ಮ ವಿಚಾರಂದ ಹಿಡುದು, ಅಂತರ್ಜಾಲದ ಸೂಕ್ಷ್ಮ ವಿಚಾರದವರೆಗ ಆಳ-ಅಗಲದ ವಿಷಯ ವ್ಯಾಪ್ತಿಯ ತಿಳ್ಕೊಂಡು,
ಒಪ್ಪಣ್ಣನ ಬೈಲಿನ ಶುದ್ದಿಗಳ ಓದಿ, ಆಶೀರ್ವದಿಸಿಗೊಂಡು,
ಕೊಶಿಯಾದ್ದಕ್ಕೆ ಪ್ರತಿಕ್ರಿಯೆಯನ್ನೂ ಕೊಟ್ಟೊಂಡು,
“ಗುರು”ತ್ವ ಶೆಗ್ತಿಲಿ ಇಡೀ ಬೈಲಿನ ಒಳಿಶಿ, ನಿಲ್ಲುಸಿದ
ನಿಂಗಳ ಪಾದಾರವಿಂದಕ್ಕೆ ಬೈಲಿನ ಎಲ್ಲೋರ ಪರವಾಗಿ ಇಲ್ಲಿಂದಲೇ
ಹೊಡಾಡ್ತೆ.
=====
ಕಳುದೊರಿಶದ ಇದೇ ಸಂದರ್ಭಲ್ಲಿ ನಮ್ಮ ಗುರುಗೊ ಬೈಲಿಂಗೆ ಕೊಟ್ಟ ಆಶೀರ್ವಾದ:

=====
~

ಈ ಒಂದೊರಿಶಲ್ಲಿ ಬೈಲಿಂಗೆ ಬಂದೋರು ಒಟ್ಟು ಎರಡು ಲಕ್ಷಂದಲೂ ಹೆಚ್ಚು ಸರ್ತಿ ಬೇರೆಬೇರೆ ಪುಟಂಗಳ ನೋಡಿದ್ದವಡ!
ನೋಡ್ತವರ ಸಂಕೆ ಏರಿಗೊಂಡೇ ಹೋವುತ್ತಾ ಇದ್ದು,

2010 ರಲ್ಲಿ ಬೈಲಿನ ನೋಡಿದ್ದರ ವಿವರಂಗೊ! ಸುಮಾರು ಎರಡೂವರೆ ಲಕ್ಷ!!

ಹೊಸಬ್ಬರ ಸಂಕೆಯುದೇ ಏರಿಗೊಂಡೇ ಇದ್ದು, ಅದುದೇ ಕೊಶಿಯ ವಿಚಾರ!! 🙂
– ಹೇಳಿ ನಮ್ಮ ಗುರಿಕ್ಕಾರ್ರು ಹೆಗಲಿನ ಶಾಲು ಸರಿಮಾಡಿಗೊಂಡು ಹೇಳುವಾಗ ಒಪ್ಪಣ್ಣಂಗೂ ಕೊಶೀ ಆತು.
~
ಒರಿಶದ ಅಕೇರಿಯಾಣ ವಾರ ಬೈಲಿನ ಬಗ್ಗೆಯೇ ಮಾತಾಡ್ತದು ಒಳ್ಳೆದು – ಹೇಳಿ ಗುರಿಕ್ಕಾರ್ರ ಅಭಿಪ್ರಾಯ.
ಕಳುದೊರಿಶವೂ ಹಾಂಗೇ ಮಾಡಿದ್ದಡ.
ಹಾಂಗಾಗಿ, ಈ ವಾರ ಬೈಲಿನ ಶುದ್ದಿಯನ್ನೇ ಮಾತಾಡುವೊ!
ಆಗದೋ? ಏ°?
~
ಇದು ಹಾಂಕಾರದ ಮಾತಲ್ಲ. ಕೊಶಿಯ ಮಾತು.
ಈ ಕೊಶಿಲೇ ಈಗ ಒಂದು ಸಿಂಹಾವಲೋಕನ ಮಾಡ್ತ ಕಾಲ ಬಂತಲ್ಲದೋ?

ಬೈಲು ಇಷ್ಟು ಮೇಗೆ ಹೋಪಲೆ ಕಾರಣ ಎಂತರ?!
ಈ ಬೈಲು ಒಂದು ವೆಗ್ತಿಯ ಮೇಗೆ ನಿಂದಿದಿಲ್ಲೆ. ಬೈಲಿಲಿ ಎಲ್ಲವುದೇ ಇದ್ದು, ಎಲ್ಲೋರುದೆ ಇದ್ದವು.
ಸಕಾರಿಯಕ್ಕೆ ಸದಾಕಾಲ ಆಶೀರ್ವಾದ ಮಾಡ್ತ ಗುರುಗೊ ಎಲ್ಲೋರಿಂದ ಮೇಗೆ ನಿಂದು ಶುಭಾಶೀರ್ವಾದ ಮಾಡ್ತವು.
ಗುರುಗಳ ಆಶೀರ್ವಾದವ ಜೆನಂಗೊಕ್ಕೆ ಎತ್ತುಸಲೆ ಗುರಿಕ್ಕಾರ್ರು ಇದ್ದವು,
ಮಂತ್ರಂಗಳ  ಭಟ್ಟಮಾವ°, ದೊಡ್ಡಮಾವ°, ಮಾಷ್ಟ್ರುಮಾವ°, ಬೊಳುಂಬು ಮಾವ°, ಮೋಂತಿಮಾರು ಮಾವ°, ಗಣೇಶ ಮಾವ°, ಅಡ್ಕತ್ತಿಮಾರು ಮಾವ°, ಕೇಜಿಮಾವ°, ಸರ್ಪಮಲೆ ಮಾವ°, ಪೆರ್ಲದಣ್ಣ, ಅಜ್ಜಕಾನ ಭಾವ°, ಕೆದೂರು ಡಾಕ್ಟ್ರುಭಾವ°, ಡಾಮಹೇಶಣ್ಣ, ಕಾವಿನಮೂಲೆ ಮಾಣಿ, ದೊಡ್ಡಭಾವ, ಬೀಸ್ರೋಡು ಮಾಣಿ, ಹಳೆಮನೆ ಅಣ್ಣ, ಯೇನಂಕೂಡ್ಳು ಅಣ್ಣ, ಅಜಕ್ಕಳ ಮಾಷ್ಟ್ರಣ್ಣ, ನೀರ್ಕಜೆ ಅಪ್ಪಚ್ಚಿ, ಶರ್ಮಪ್ಪಚ್ಚಿ, ಕೊಳಚ್ಚಿಪ್ಪು ಭಾವ°, ಕೆಪ್ಪಣ್ಣ, ಬಂಡಾಡಿ ಅಜ್ಜಿ, ಶಾಂತತ್ತೆ, ಒಪ್ಪಕ್ಕ, ಚೂರಿಬೈಲು ದೀಪಕ್ಕ°, ಕಳಾಯಿ ಗೀತತ್ತೆ, ಚೆನ್ನಬೆಟ್ಟಣ್ಣ, ಪುತ್ತೂರು ಭಾವ°, ಕಾಂತಣ್ಣ, ವೇಣೂರಣ್ಣ, ಸುವರ್ಣಿನಿ ಅಕ್ಕ, ಶ್ರೀ ಅಕ್ಕ°, ಡಾಗುಟ್ರಕ್ಕ°, ಪುಟ್ಟಭಾವ°, ಮುಳಿಯಭಾವ°, ಚುಬ್ಬಣ್ಣ, ಗೋಪಾಲಣ್ಣ, ಶುದ್ದಿಕ್ಕಾರ°, ನೆಗೆಗಾರ°, ಪೆಂಗಣ್ಣ – ಅಬ್ಬ ಎಷ್ಟು ಜನ!
ಎಲ್ಲಾ ನಮ್ಮೋರು, ನಮ್ಮೊಟ್ಟಿಂಗೇ ಬಂದೋರು, ಇನ್ನೂ ಬಪ್ಪೋರು, ಎಂದೆಂದಿಂಗೂ ನಮ್ಮೊಟ್ಟಿಂಗೇ ಇಪ್ಪೋರು!

ಎಲ್ಲೊರೂ ಅವರವರ ಯೋಚನೆಗಳ, ಅವಕ್ಕವಕ್ಕೆ ತಿಳುದ ವಿಷಯಂಗಳ ಚೆಂದಲ್ಲಿ ಬರಕ್ಕೊಂಡು ಬಂದು ಬೈಲಿನ ಸಾಹಿತ್ಯ ಕೃಷಿಲಿ ಒಳ್ಳೆ ಫಲಬಪ್ಪಾಂಗೆ ಮಾಡಿದ್ದವು.
ಕಳುದೊರಿಶದ ಸುರೂವಿಲಿ ಮಹೇಶಣ್ಣನ ಮಹತ್ವದ ಮಾತುಗಳಲ್ಲಿ ಬಂದಾಂಗೆ (https://oppanna.com/lekhana/mahatva/oppada-oppanda) ಸಹಜ ಸಾಹಿತ್ಯ ಕೃಷಿಗೆ ಎಲ್ಲೊರುದೇ ಸಹಕರುಸಿದ್ದವು.
ಇದರೊಟ್ಟಿಂಗೆ ನಾವು ತಪ್ಪಿಯಪ್ಪಾಗ ಒಪ್ಪಂಗಳ ಮೂಲಕ ತಿದ್ದಿ, ಸರಿದಾರಿ ತೋರುಸಿದ ಹಲವಾರು ಜನಂಗೊ ಇದ್ದವು. ಕೆಲವೊಂದು ಸರ್ತಿ ಶುದ್ದಿಂದಲೂ ಹೆಚ್ಚಿಗೆ ಒಪ್ಪಂಗಳಲ್ಲಿ ಚರ್ಚೆ ಆದ್ದದೂ ಇದ್ದು!

~

ಕಳುದೊರಿಶದ ದಶಂಬ್ರ ಮೂವತ್ತೊಂದರಿಂದ ಇಂದಿಂಗೊರೇಂಗೆ ಬೈಲು ಹೇಂಗೆಲ್ಲ ಬೆಳದ್ದು ಹೇಳ್ತದರ ಬಗ್ಗೆ ನಿಂಗೊಗೆ ಒಂದು ಸಣ್ಣ ಮಾಹಿತಿ:

1. ನೆರಕರೆ:
(https://oppanna.com/nerekare)
ಬೈಲಿನ ದೊಡ್ಡ ಶೆಗ್ತಿಯೇ ನೆರೆಕರೆ! ಅಪ್ಪು!
ಶುದ್ದಿ ಹೇಳುದು ಒಂದು ವಿಚಾರ ಇದ್ದರೆ, ಆರ ಎದುರು ಶುದ್ದಿ ಹೇಳ್ತದು – ಇದುದೇ ಮುಖ್ಯವೇ.
ನಾವು ಎಷ್ಟೇ ಒಳ್ಳೆದಿಕ್ಕು. ನಮ್ಮ ನೆರೆಕರೆ ಒಳ್ಳೆದು ಸಿಕ್ಕದ್ದರೆ ಗುಣ ಇದ್ದೋ?
ಒಪ್ಪಣ್ಣಂಗೆ ಅತ್ಯಂತ ಒಳ್ಳೆ ನೆರೆಕರೆ ಸಿಕ್ಕಿದ್ದು – ಹೇಳ್ತ ಕೊಶಿ ನಿತ್ಯವೂ ಅಪ್ಪಲಿದ್ದು.
ನಮ್ಮ ನೆರೆಕರೆಲಿ ಮಾವಂದ್ರು, ಭಾವಂದ್ರು, ಅತ್ತೆಕ್ಕೊ, ಅಣ್ಣಂದ್ರು, ಅಕ್ಕಂದ್ರು ಎಲ್ಲ ಒಟ್ಟಿಂಗೆ 45 ಜನ ಆಯಿದವು!

  • ಗುರಿಕ್ಕಾರ್ರ ಸೂಚನೆಗೊ ನೋಡಿಪ್ಪಿ ನಿಂಗೊ! ಅಂಬಗಂಬಗ ಎಲ್ಲಿಗೆ ಹೇಂಗೆ ಬೇಕೋ – ಹಾಂಗೆ ಮಾಡಿ ಕೊಟ್ಟು, ನೆರೆಕರೆ, ಬೈಲಿನೋರಿಂಗೆ ಅನುಕೂಲ ಮಾಡಿಕೊಟ್ಟು, ಗುರುಗಳ ಆಶೀರ್ವಾದವ ನೆರೆಕರೆಗೆ ಎತ್ತುಸುತ್ತ ಜೆವಾಬ್ದಾರಿಯ ಚೆಂದಲ್ಲಿ ಮಾಡಿಗೊಂಡಿದ್ದವು, ಅಲ್ಲದೋ?
  • ಪೆರ್ಲದಣ್ಣನ ಬೆಂಗುಳೂರಿನ ಶುದ್ದಿಗೊ ಬಂದುಗೊಂಡು ಇತ್ತು ಅಂಬಗಂಬಗ.

    ಹೊರೆ ಅಲ್ಲದ್ದ ನೆರೆಕರೆ - 2010!
  • ದೊಡ್ಡಮಾವನ ಹಳೆಕಾಲದ ಶುದ್ದಿಗೊ ರೈಸಿಗೊಂಡು ಇತ್ತು! ಅದರ್ಲಿಪ್ಪ ಹಳೆ ಹವ್ಯಕ, ಅಂಬಗಾಣ ಜೀವನ ಚಿತ್ರ – ಎಲ್ಲವುದೇ ಚೆಂದ ಚೆಂದ!
  • ಅಜ್ಜಕಾನಬಾವ ಶುದ್ದಿ ಬರದುಬರದು ಅಕೇರಿಗೆ ಶುದ್ದಿಗೇ ಅಭಾವ ಬಂದುಬಿಟ್ಟತ್ತು!
    ಅಜ್ಜಕಾನಬಾವ ಬಂಙ ಬಪ್ಪದು ನೋಡಿ ಪೆಂಗನೂ ನೆಗೆ ಮಾಡ್ತ ಒಂದೊದರಿ.
  • ಮಾಷ್ಟ್ರುಮಾವ ಪಾಟಮಾಡಿಗೊಂಡು ಇದ್ದೋರು – ಬಂಡಾಡಿಪುಳ್ಳಿ ಚೋಕು ಕದ್ದಮತ್ತೆ ರಜ ಕಮ್ಮಿ ಮಾಡಿದವು. ಪುನಾ ಬಕ್ಕು, ತೊಂದರೆ ಇಲ್ಲೆ.
  • ಬಂಡಾಡಿಅಜ್ಜಿಯ ಕೈಲಿ ಎಷ್ಟು ಹುಳಿ ಅಡ್ರು ಮುಗಾತೋ! ಉಮ್ಮ, ಅಂತೂ ಹೂಗು ಕಟ್ಟುತ್ತದು, ಅಡಿಗೆ ಮಾಡ್ತದು – ಎಲ್ಲ ಹೇಳಿಕೊಟ್ಟವು.
    ಅವರ ಉತ್ಸಾಹ ನೋಡಿರೆ ಎಂತ ಜವ್ವನಿಗರಿಂಗೂ ಬೆಗರು ಇಳಿಗು!
  • ಕೆದೂರುಡಾಗುಟ್ರುಬಾವ ಬೈಲಿಲಿ ಸಕ್ರಿಯರಾಗಿತ್ತಿದ್ದವು. ಎಡಕ್ಕಿಲಿ ಒಂದರಿ ಬೋದ ತಪ್ಪಿದ ಹಾಂಗಾತು.
    ಈಗ ಸರಿ ಆಯಿದವು, ಪುನಾ ಬತ್ತವು ಸದ್ಯಲ್ಲೇ!
  • ಕೇಮಹೇಶಣ್ಣ ಡಾಮಹೇಶಣ್ಣ ಆಗಿ ಕೂಳಕ್ಕೂಡ್ಳಿಂದ ಬೊಂಬಾಯಿ, ಬೊಂಬಾಯಿಂದ ಪ್ರಾನ್ಸು ಎಲ್ಲ ಹೋಯಿದವು. ಅಷ್ಟು ಅಂಬೆರ್ಪಿಲಿ ಇದ್ದರೂ ಶುದ್ದಿ ಬರವದರ ಬಿಡ್ತವಿಲ್ಲೆ.
    ಸೊಂತ ಶ್ಲೋಕ ರಚನೆಮಾಡ್ತ ಸಾಮರ್ಥ್ಯ ಇಪ್ಪ ಅವರ ಪಾಂಡಿತ್ಯಕ್ಕೆ ಬೈಲು ತಲೆದೂಗುತ್ತು!
  • ಬಟ್ಟಮಾವ ಎಡಕ್ಕೆಡಕ್ಕಿಲಿ ಮಂತ್ರಂಗಳ ಹೇಳಿಕೊಡುದು ಇದ್ದಾನೇ?! ಈಗ ಅಂಬೆರ್ಪಿಲಿ ಇದ್ದರೂ ಮೌಢ್ಯಲ್ಲಿ ಬಕ್ಕು!!
  • ಗಣೇಶಮಾವಂಗೆ ಅಂಬೆರ್ಪು ಜಾಸ್ತಿ. ಆದರೂ ಎಡಕ್ಕೆಡಕ್ಕಿಲಿ ಬಂದು ಪ್ರೀತಿಲಿ ಶುದ್ದಿ-ಒಪ್ಪ ಕೊಟ್ಟು ಬೈಲಿನ ಒಂದರಿ ಒರಕ್ಕಿಂದ ಏಳುಸುತ್ತವು.
  • ಕಾವಿನಮೂಲೆ ಮಾಣಿ ಅವರ ಚೊಕ್ಕಾಡಿಹವ್ಯಕಲ್ಲಿ ಕೆಲವು ಶುದ್ದಿ ಹೇಳಿದ°. ಅಷ್ಟಪ್ಪಗ ಡೆಲ್ಲಿಗೆ ಹೋಗಿ ಚಳಿಗೆ ಸಿಕ್ಕಿಬಿದ್ದ.
    ಈಗ ಮೈಂದ ಕಂಬುಳಿ ತೆಗದಿಕ್ಕಲೆ ಗೊಂತಿಲ್ಲೆ, ಕಂಬುಳಿ ತೆಗೆಯದ್ದೆ ಶುದ್ದಿ ಹೇಳುಲೆ ಗೊಂತಿಲ್ಲೆ! ನೋಡೊ – ಚಳಿ ಕಮ್ಮಿ ಆದ ಮೇಗೆ ಬೈಲಿಂಗೆ ಬಕ್ಕು.
  • ದೊಡ್ಡಬಾವನ ಶುದ್ದಿಗೊ ಬಂದರೆ ಅದರ್ಲಿ ಸತ್ವ, ಸಾರ ಅಡಕ ಆಗಿರ್ತು. ನೇರ-ನಿಷ್ಟುರ ಆಗಿಪ್ಪ ಶುದ್ದಿಗೊ! ಬೈಲಿಂಗೇ ಒಂದು ಚುರುಕ್ಕು ಮುಟ್ಟುಸುತ್ತವು ಒಂದೊಂದರಿ!
  • ಬೀಸ್ರೋಡುಮಾಣಿ ಅಂತೂ ತಂತ್ರ ತೂಗುಲೆ ಸುರುಮಾಡಿದ! ಒರಕ್ಕು ತೂಗಿಂಡು ಇದ್ದಿದ್ದ ಮಾಣಿ ಒಂದರಿಯೇ ತಂತ್ರ ತೂಗಲೆ ಸುರು ಮಾಡಿದ್ದು ಕಂಡು ಎಲ್ಲೋರಿಂಗೂ ಆಶ್ಚರ್ಯ.
  • ಚೂರಿಬೈಲು ದೀಪಕ್ಕನ ಮಲ್ಲಿಗೆ ಗೆಡುವಿಂಗೆ ಹುಳುಹಿಡುದ್ದು. ಅಲ್ಲದ್ದರೆ ಅವರ ಅಡಿಗೆಗಳೂ ಗೆನಾ ಮಲ್ಲಿಗೆಗೆಡುವಿನ ಹಾಂಗಿರ್ತು!
  • ಶಾಂತತ್ತೆ ಮಕ್ಕೊಗಿಪ್ಪದರ ಹೇಳಿರೆ ಎಲ್ಲೋರುದೇ ಕೊಶಿಲಿ ಒಪ್ಪ ಕೊಡುಗು!
  • ಬೊಳುಂಬುಮಾವನ ಶುದ್ದಿಲಿ ನೆಗೆ ದಾರಾಳ ಇಕ್ಕು. ಅವರ ಒಪ್ಪಂಗಳೂ ಹಾಂಗೆಯೇ!
    ಮೊನ್ನೆ ಒಂದರಿ ಮೀಸೆ ತೆಗದ್ದರ್ಲಿ ಬೈಲಿನೋರಿಂಗೇ ಗುರ್ತ ಸಿಕ್ಕಿದ್ದಿಲ್ಲೆ ಅವರ! 😉 ಹೀಂಗೇ ಏನಾರು ಕಣ್ಣುಕಟ್ಟು ಇದ್ದೇ ಇಕ್ಕು ಅವರದ್ದು!!
  • ಹಳೆಮನೆ ಅಣ್ಣ, ಹಳೆಮನೆ ತಮ್ಮ- ಇಬ್ರುದೇ ಪಟ ತೆಗೆತ್ತದು ಬೈಲಿಂಗೇ ಅರಡಿಗು. ಚೆಂದ ಚೆಂದದ ಪಟ ಹಾಕಿ ಬೈಲಿನೋರ ಕಣ್ಣು ತಂಪುಮಾಡ್ತದು ಕಂಡ್ರೆ ಬೈಲಿನೋರ ಒಪ್ಪ ಸಿಕ್ಕಿಯೇ ಸಿಕ್ಕುಗು ಅವಕ್ಕೆ.
  • ಅಜಕ್ಕಳ ಮಾಷ್ಟ್ರಣ್ಣ ಇದರೆಡಕ್ಕಿಲಿ ಪೇಪರು ತಿದ್ದುತ್ತರಲ್ಲಿ ಅಂಬೆರ್ಪು ಆದರೂ, ತುಂಬ ತೂಕದ ಶುದ್ದಿಗಳ ಹೇಳಿದ್ದವು. ನಮ್ಮ ಭಾಷೆಯ ಬಗ್ಗೆ ವಿಶೇಷ ಹಿಡಿತ, ಅಧ್ಯಯನ ಅವಕ್ಕಿದ್ದು.
    ಅವರ ಶುದ್ದಿಗೊ ಇನ್ನೂ ಹೆಚ್ಚು ಬರಳಿ ಹೇಳ್ತದು ಒಪ್ಪಣ್ಣನ ಆಶಯ.
  • ನೀರ್ಕಜೆ ಅಪ್ಪಚ್ಚಿ ಒಂದು ವಾದ ಮಾಡಿರೆ ಅದಕ್ಕೆ ಎಂತವನೂ ತಲೆತೂಗುಗು!
    ಹಳ್ಳಿ-ಪೇಟೆ ಜೆನಜೀವನದ ಚಿತ್ರಣವ ತುಂಬ ಚೆಂದಕೆ ಅವು ಹೊಂದಿದ್ದವು. ಒಂದೊಂದರಿ ನವಗೂ ತಿಳುಶುತ್ತವು. ಚಿಕ್ಕಮ್ಮ ಬಿಟ್ಟರೆ!
  • ಕೊಳಚ್ಚಿಪ್ಪುಭಾವ ಮಯಿಸೂರು -ಬೆಂಗ್ಳೂರು ಹೇಳಿ ತಿರುಗುದೇ ಆತು. ಜಾಲಿಲಿ ಅಡಕ್ಕೆ ಬೆಳ್ಳಕ್ಕೆ ಹೋದರೂ ಅರಡಿಯ.
    ಅದಿರಳಿ, ಎಂತಾರು ಮಾಹಿತಿ ಇಪ್ಪ ಶುದ್ದಿ ಹೇಳುದರ್ಲಿ ಇವಂದು ಎತ್ತಿದ ಕೈ.
  • ಯೇನಂಕೂಡ್ಳಣ್ಣ ಯೇವತ್ತೂ ಕೆಮರಲ್ಲಿ ಹೊಸತ್ತು ಹುಡ್ಕುತ್ತದು ನವಗೆ ಗೊಂತಿಪ್ಪದೇ.
    ಅವನ ಪಟಂಗಳಲ್ಲಿಪ್ಪ ಸೂಕ್ಷ್ಮಂಗಳ ಅನುಬವಿಸುದೇ ನಮ್ಮ ದೊಡ್ಡ ಆಸಗ್ತಿ.
  • ಶರ್ಮಪ್ಪಚ್ಚಿ ವೈಜ್ಞಾನಿಕ, ಆಧುನಿಕ ವಿಚಾರಂಗಳ ತೆಕ್ಕೊಂಡು, ಶುದ್ದಿ ಹೇಳುಲೆ ತೆಯಾರಿ ಮಾಡ್ಳೆ ಹೆರಟ್ರೆ ಒಂದು ತಿಂಗಳು ಅದೇ ಗುಂಗಿಲಿ ಇಕ್ಕು.
    ವಿಶಯ ಸರಿಯಾಗಿ ಮನನ ಆದ ಮೇಗೆ ಬೈಲಿಂಗೆ ಹಾಕುಗು, ಅಟ್ಟೆ!
    ಅವರ ಶುದ್ದಿಯ ಕೇಳಿದ ಬೈಲು ಮತ್ತೆ ಒಂದು ತಿಂಗಳು ಅದೇ ಗುಂಗಿಲಿರ್ತು!
  • ಕೆಪ್ಪಣ್ಣಂಗೆ ಪತ್ರಿಕೋದ್ಯಮ ಅರಡಿಗು! ಅದರ ಅಂಬೆರ್ಪಿನ ಎಡೆಲಿಯೂ ಬೈಲಿಂಗೆ ಬಂದು ಶುದ್ದಿ ಹೇಳಿದ್ದು ಕಂಡು ಎಲ್ಲೋರಿಂಗೂ ಕೊಶಿ ಅಪ್ಪದು.
  • ನಾವೆಲ್ಲ ಒಂದು ಗೆರೆಲಿ ಹೇಳ್ತದರ ಕಳಾಯಿ ಗೀತತ್ತೆ ಒಂದು ಶೆಬ್ದಲ್ಲಿ ಹೇಳುಗು. ಸೂಕ್ಷ್ಮವಾಗಿ, ಸೂಚ್ಯವಾಗಿ ಶುದ್ದಿ ಹೇಳ್ತದು ಕಳಾಯಿಗೀತತ್ತೆಯ ವಿಶೇಷತೆ..
  • ಮೋಂತಿಮಾರು ಮಾವಂಗೆ ಎರಡೇ ವಿಚಾರ ಕೊಶಿ ಕೊಡುದು. ಒಂದು ಗೋವಿನ ಬಗ್ಗೆ, ಇನ್ನೊಂದು ಗೋಮಾತೆಯ ಬಗ್ಗೆ.
    ಅವರ ಕಾಳಜಿ ನಮ್ಮ ಬೈಲಿಂಗೂ ಕೊಶಿ ಆಯಿದು, ಅವರ ಶುದ್ದಿಗೊಕ್ಕೆ ಒಳ್ಳೊಳ್ಳೆ ಒಪ್ಪ ಬಪ್ಪದು ಅವಕ್ಕೂ ಕೊಶಿ ಆಯಿದು.
  • ಚೆನ್ನಬೆಟ್ಟಣ್ಣನ ಶುದ್ದಿಗೊ ಸ್ವರ್ಗಂದ ಅಶರೀರವಾಣಿ ಆದ ಹಾಂಗೆ ಬಪ್ಪದು, ಅಪುರೂಪಕ್ಕೆ. ಆದರೆ ಬಂದ ಶುದ್ದಿಗೊ ಎಲ್ಲ ಕೊಶೀ ಇರ್ತು!
  • ಪುತ್ತೂರುಭಾವ ಈಗ ಇಪ್ಪದು ಅಮೇರಿಕಲ್ಲಿ. ಚಳಿ ಜಾಸ್ತಿ ಅಡ.
    ಚಳಿ ಬಿಟ್ಟ ಮೇಗೆ ಬೈಲಿಂಗೆ ಪುನಾ ಒಳ್ಳೊಳ್ಳೆ ಶುದ್ದಿಗೊ ತರಳಿ – ಹೇಳಿ ನಮ್ಮ ಆಶಯ.
  • ಕಾಂತಣ್ಣ ಹವ್ಯಕದ ಸಂಪಾದಕರು. ಪುರುಸೊತ್ತು ಕಮ್ಮಿ. ಪುರುಸೊತ್ತಿಪ್ಪಗ ಮಟಕ್ಕೆ ಹೋಕು.
    ಅದರ ಎಡಕ್ಕಿಲಿಯೂ ಅವಕಾಶ ಆದರೆ ನಮ್ಮ ಬೈಲಿಂಗೆ ಬಂದು ಶುದ್ದಿ ಹೇಳ್ತವು. ಇನ್ನೂ ಹೆಚ್ಚಿಗೆ ಬಪ್ಪ ಹಾಂಗಾಗಲಿ ಹೇಳಿ ನಮ್ಮ ಹಾರಯಿಕೆ.
  • ವೇಣೂರಣ್ಣನ ಭಲ್ಲಿರೇನಯ್ಯ ಕೇಳಿರೆ ಕೆಮಿ ತುಂಬಿ ಬಕ್ಕು! ಧರ್ಮಸ್ಥಳದ ಮಂಜುನಾಥನ ಸನ್ನಿಧಿಲಿ ವಿದ್ಯಾದಾನ ಮಾಡ್ತ ಪುಣ್ಯಸಂಪಾದನೆ ಮಾಡಿಗೊಂಡು ಇದ್ದವು.
    ಎಡಕ್ಕಿಲಿ ಪುರುಸೊತ್ತಪ್ಪಗ ಬೈಲಿಂಗೆ ಬಂದೇ ಬಕ್ಕು!
  • ಸುವರ್ಣಿನಿಅಕ್ಕಂದು ವಿಶೇಷದ ಶುದ್ದಿಗೊ. ಬೈಲಿಂಗೆ ಡಾಗುಟ್ರ ಸ್ಥಾನಲ್ಲಿ ನಿಂದು, ಅಪುರೂಪದ, ವಿಶೇಷದ ಶುದ್ದಿಗಳ ಹೇಳಿ ಜ್ಞಾನಾಗರವಾಗಿಪ್ಪ ವಿಚಾರಂಗಳ ತಿಳುಶುತ್ತ ಕಾರ್ಯ ಮಾಡಿಗೊಂಡು ಇದ್ದವು. ಅವರ ಶುದ್ದಿಗಳ ಆಸಗ್ತಿಲಿ ಓದುತ್ತದು ನಮ್ಮ ಒಂದು ಹವ್ಯಾಸ!
  • ಈಗ ಜೆಂಬಾರಂಗೊ, ಅಲ್ಲದೋ? ಅಡ್ಕತ್ತಿಮಾರುಮಾವಂಗೆ ಅಡಕ್ಕೆ ಹೆರ್ಕಲೇ ಪುರುಸೊತ್ತಿಲ್ಲೆ.
    ಎಷ್ಟೇ ಅಂಬೆರ್ಪು ಇರಳಿ, ಬೈಲಿಂಗೆ ಬಕ್ಕು ಅವು.
  • ಯೇವದಾರು ಒಂದು ಅಪುರೂಪದ ಶ್ಲೋಕವೋ ಮಣ್ಣ ಶ್ರೀಅಕ್ಕಂಗೆ ಸಿಕ್ಕಿರೆ, ಬೈಲಿಂಗೆ ತೋರುಸದ್ರೆ ಸಮಾದಾನವೇ ಆಗ!
    ಸದ್ಯಲ್ಲೇ ಶುದ್ದಿಗಳನ್ನೂ ಹೇಳುಲೆ ಸುರುಮಾಡ್ತವು. ಅವಕ್ಕೆ ಒಳ್ಳೆದಾಗಲಿ
  • ಡಾಗುಟ್ರಕ್ಕನಲ್ಲಿಂದ ಬೈಲಿಂಗೆ ಬತ್ತ ಸಂಕ ಹಾಳಾಗಿತ್ತಡ, ಇನ್ನೂ ಸರಿಮಾಡುಸದ್ದಕ್ಕೆ ಬಾವನತ್ರೆ ಮೊನ್ನೆ ಪರಂಚಿದ್ದವಡ.
    ಬೇಗ ಬೈಲಿಂಗೆ ಬಂದು ಒಳ್ಳೊಳ್ಳೆ ಶುದ್ದಿಗಳ ಹೇಳುವ ಹಾಂಗಾಗಲಿ!
  • ಪುಟ್ಟಭಾವನ ಪುಟ್ಟುಪುಟ್ಟ ಕತೆಗೊ ನಮ್ಮ ನಿಜಜೀವನಕ್ಕೆ ಹತ್ತರೆ ಇರ್ತು.
    ಅದರ್ಲಿಪ್ಪ ಸಾರವ ಬೈಲಿನೋರು ಪ್ರೀತಿಲಿ ಸ್ವೀಕರುಸುತ್ತವು..
  • ಮುಳಿಯಭಾವನ ಬಗ್ಗೆ ಹೇಳ್ತರೆ ಒಂದು ಕಥಾಮಂಜರಿ ಬರವಲಕ್ಕು, ಭಾಮಿನಿಲಿ!
    ಆಸಕ್ತಿ ಮಡುಗಿ, ಭಾಮಿನಿ ಕಲ್ತು, ಅದರ ಒಲುಶಿಗೊಂಡು, ಶುದ್ಧ ಭಾಮಿನೀ ಷಟ್ಪದಿಯ ಹವ್ಯಕಕ್ಕೆ ಹೊಂದುಸಿಗೊಂಡು, ಬೈಲಿನೋರಿಂಗೂ ಸಾಹಿತ್ಯದ ಮರುಳು ಹಿಡುಶಿದ ಭಾವಯ್ಯಂಗೆ,
    ಭಾಮಿನಿಯ ಹಾಂಗೇ ಅವಕ್ಕೆ ಜೀವನವೂ ಒಲಿಯಲಿ!
  • ಚುಬ್ಬಣ್ಣ ಸಿಂಗಾಪುರಂದ ಚೋಕುಲೇಟು ತಂದದೊಂದು ನೆಂಪಿದ್ದು, ಅದರ ಕಾಲಿಮಾಡಿದ್ದು ಪೂರ ಬೋಸನೇ!
    ಚುಬ್ಬಣ್ಣ ತೆಗದ ಚೆಂದದ ಪಟಂಗಳ ನೋಡಿ, ಒಪ್ಪ ಕೊಡುದು ಬೈಲಿಂಗೆ ಕೊಶಿ!
  • ಕೇಜಿಮಾವ ಸೂಜಿ ತೆಗದರೆ ಎಂತವನೂ ಒಂದರಿ ಹೆದರಿಕ್ಕುಗು!
    ಉದೆಕಾಲ – ಕೋಳಿ ಕೂಗುತ್ತದರಿಂದಲೂ ಮದಲೇ ಬೈಲಿಂಗೆ ಬಕ್ಕು ಅವು! ಒಳ್ಳೆ ಮಾಹಿತಿಗಳ ಶುದ್ದಿಲಿ / ಒಪ್ಪಲ್ಲಿ ಕೊಟ್ಟು ಬೈಲು ಆರೋಗ್ಯವಾಗಿಪ್ಪದರ ಗಮನುಸುತ್ತವು.
  • ಸರ್ಪಮಲೆ ಮಾವಂಗೆ ರಾಮಜ್ಜನ ಕೋಲೇಜಿಲಿ ಮೂರು ಮಾಳಿಗೆ ಹತ್ತಿ ಇಳಿಯೇಕು, ಪಾಪ.
    ಬಚ್ಚುತ್ತು, ಆದರೂ ಬೈಲಿಂಗೆ ಶುದ್ದಿ ಹೇಳ್ತವು. ಇನ್ನೂ ಹೆಚ್ಚು ಶುದ್ದಿ ಹೇಳಲಿ ಅವು!
  • ಸಾಹಿತಿ ಗೋಪಾಲಣ್ಣ ಸುಮಾರು ಕತೆಗಳ ಬೈಲಿಂಗೆ ಕಳುಶಿಕೊಟ್ಟಿದವು.
    ಅದರ ಒಂದೊಂದಾಗಿ ಬೈಲಿಂಗೆ ತಿಳುಶಿಕೊಡುದೇ ಗುರಿಕ್ಕಾರ್ರಿಂಗೆ ಒಂದು ಕೊಶಿ!
  • ಇವಿಷ್ಟೇ ಅಲ್ಲ, ಪೆಂಗಣ್ಣ, ಬೋಸಬಾವ, ನೆಗೆಮಾಣಿ, ಶುದ್ದಿಕ್ಕಾರ – ಎಲ್ಲೋರುದೇ ಬೈಲಿನ ಒಂದೊಂದು ಆಸ್ತಿಗಳೇ!

ಇನ್ನುದೇ ಬತ್ತಾ ಇದ್ದವು.

ಪೆಂಗಣ್ಣ ಬಂದು ಒಪ್ಪಣ್ಣಂಗೆ ಸಾವಿರ ಚೆಂಙಾಯಿಗೊ ಆದವು, ಮೋರೆಪುಟಲ್ಲಿ!

ಈ ಸಂಕೆ ನಿಂಬಲಿಲ್ಲೆ, ಬೆಳೆತ್ತಾ ಇರೇಕು.
ಇನ್ನು ವಿದ್ವಾನಣ್ಣ, ಅಕ್ಷರ, ಪ್ರಶಾಂತಣ್ಣ ಎಲ್ಲರುದೇ ಬೈಲಿಂಗೆ ಬತ್ತಾ ಇದ್ದವು, ಇಂದು ನಾಳೆಲಿ.

ಬಂದವು ಎಲ್ಲೋರುದೇ ಅವರವರ ಪುರುಸೋತಿಲಿ ಬೈಲಿಂಗೆ ಶುದ್ದಿ ಹೇಳ್ತವು.
ಒಳುದೋರು ಕೇಳ್ತವು. ಬೈಲಿನೋರು ಒಪ್ಪ ಕೊಡ್ತವು!
ಬೈಲಿನೋರು ಕಾದೊಂಡಿರಿ!
ಬೈಲು ಎಂದೆಂದಿಂಗೂ ಹೀಂಗೇ ಚೆಂದ ಇರಳಿ!
ಅಲ್ಲದೋ?!

~
2. ಶುದ್ದಿಗೊ:
(https://oppanna.com/category/lekhana)

ಬೈಲಿಲಿ ಶುದ್ದಿ ಹೇಳುದೇ ಒಂದು ಶುದ್ದಿ ಆಗಿ ಹೋಯಿದು ಈಗ!
ಅಷ್ಟು ಜೆನ ನೆರೆಕರೆಯೋರು ಇಪ್ಪಗ, – ಒಬ್ಬೊಬ್ಬಂದು ಒಂದೊಂದು ವಿಶಯಾಸಗ್ತಿ.
ಅದಕ್ಕೆ ಅನುಗುಣವಾಗಿ ಒಂದೊಂದು ರೀತಿಯ ಶುದ್ದಿಗೊ ಬೈಲಿಂಗೆ ಬತ್ತಾ ಹೋವುತ್ತು!

ಮಂತ್ರಂಗೊ, ಆರೋಗ್ಯ-ಜೀವನದ ಸಲಹೆಗೊ, ಅಡಿಗೆಗೊ, ಚೋದ್ಯಂಗೊ, ನೆಗೆಗೊ, ಮದ್ದುಗೊ, ಮಕ್ಕೊಗೆ ಬೇಕಾದ ಮಾಹಿತಿಗೊ, ನಮ್ಮ ಭಾಷೆ- ಸಂಸ್ಕೃತಿ-ಸಂಸ್ಕೃತ – ಆಚರಣೆಗೊ ಎಲ್ಲವನ್ನೂ ಬಿಂಬಿಸುವ ಹತ್ತು ಹಲವು ಲೇಖನಂಗೊ ಸೇರಿ ಒಟ್ಟು 530 ಶುದ್ದಿಗೊ ಇದುವರೆಗೆ ಬೈಲಿಲಿ ಬಯಿಂದು.
ಪ್ರತಿ ಶುದ್ದಿಯೂ ಒರಿಶಾನುಕಾಲ ಓದುತ್ತ ಹಾಂಗಿರ್ತದು.
ಮುಂದೆ ಒಂದು ದಿನಕ್ಕಪ್ಪಗ ಇದು ದೊಡ್ಡ ವಿಶ್ವಕೋಶ ಆಗಿ ಹೋಕು – ಹೇಳಿ ಗುರಿಕ್ಕಾರ್ರು ಕೊಶಿಲಿ ಇದ್ದವು.
ಇರಳಿ, ಎಲ್ಲಾ ಶುದ್ದಿಯ ಕೊಟ್ಟು ಬೈಲಿನ ಸಾಹಿತ್ಯ ಕೃಶಿ ಬೆಳಶಿದ ನೆರೆಕರೆಯೋರಿಂಗೆ ದೀರ್ಘದಂಡ!

3. ಒಪ್ಪಂಗೊ:

( https://oppanna.com/category/oppa)
ಬೈಲಿಲಿ ನೆರೆಕರೆಯೋರು ಶುದ್ದಿ ಹೇಳ್ತವು.
ಶುದ್ದಿ ಹೇಳಿಗೊಂಡು ಹೋದರೆ ಸಾಕೋ? ಬೈಲಿನೋರು ಅದರ ಸಂತೋಷಲ್ಲಿ ಸ್ವೀಕಾರ ಮಾಡಿದ್ದದು ಗೊಂತಾಗೆಡದೋ!?
ಪ್ರೀತಿಲಿ ಶುದ್ದಿಗೊಕ್ಕೆ ಒಪ್ಪ ಕೊಟ್ರೆ ಇದು ಗೊಂತಾವುತ್ತು!
ಹ್ಮ್, ಎಲ್ಲಾ ಶುದ್ದಿಗೊಕ್ಕೂ ಬೈಲಿನವು ಒಪ್ಪ ಕೊಟ್ಟು ಅವರ ಪ್ರೀತಿಯ ತೋರುಸಿದ್ದವು.

ಶುದ್ದಿಗಳ ಬರವವ್ವು ಹೆಚ್ಚಾದ ಹಾಂಗೆ ಅದರ ಓದಿ ಪ್ರೋತ್ಸಾಹ ಕೊಡುವವ್ವೂ ಹೆಚ್ಚಾದವು.
ಬೈಲು ಇಷ್ಟು ಬೆಳವಲೆ ಅವರೆಲ್ಲೊರ ಆ ಪ್ರೋತ್ಸಾಹ, ಆಶೀರ್ವಾದವೇ ಕಾರಣ. ಹಾಂಗೆ ಬಂದು ಒಪ್ಪ ಕೊಟ್ಟು ಹೋದವ್ವು ಎಷ್ಟು ಜನವೋ ಒಪ್ಪಣ್ಣಂಗರಡಿಯ.
ಎಲ್ಲ ಲೆಕ್ಕ ಹಾಕಿ ಕೂಡುಸಿ ಕಳದು ಒಟ್ಟಿಂಗೆ ‘7700 ಒಪ್ಪಂಗೊ ಬಯಿಂದು!’ ಹೇಳಿ ಲೆಕ್ಕ ಕೊಟ್ಟವು ಗುರಿಕ್ಕಾರ್ರು.


4. ವೆಬ್-ಸೈಟು ನೋಡಿದ್ದು

ಇದುಒರೆಂಗೆ ಎಲ್ಲೋರುದೇ ಪುಟಂಗಳ ನೋಡಿನೋಡಿ ಇಂದಿಂಗೆ ಅದು ಎರಡೂವರೆ ಲಕ್ಷಂದ ಮೇಗೆ ಆಯಿದಡ!!
ನೂರು ನೂರಯಿವತ್ತು ಅಲ್ಲ, ಎರಡೂವರೆ ಲಕ್ಷ!!
ನೆರೆಕರೆಯೋರೆಲ್ಲೊರ ಕೈಬೆರಳು ಕಾಲುಬೆರಳು ಸೇರುಸಿರೂ ಆ ಲೆಕ್ಕ ಸಿಕ್ಕ! 🙂

ಕೊಶೀ ಆವುತ್ತು ಬೈಲಿನೋರಿಂಗೆ.

ಕಳುದೊರಿಶ ಇಡೀ ಒಂದೊರಿಶಲ್ಲಿ ಇಪ್ಪತ್ತು ಸಾವಿರ ಹೇಳಿಗೊಂಡು ಒಪ್ಪಣ್ಣಂಗೆ ಕೊಶೀ ಆಯಿದು.
ಮತ್ತೆ ಅದರ ಅರ್ದ ಕಾಲಾವಧಿಲಿ ಐದು ಪಟ್ಟು ಜಾಸ್ತಿ ಆಗಿತ್ತು!! ಆರು ತಿಂಗಳಿಂಗೇ ಒಂದು ಲಕ್ಷ ಪುಟಂಗಳ ನೋಡಿತ್ತಿದ್ದವು!!
ಈಗಾಣ ಒಂದೊರಿಶಲ್ಲಿ ಅದರ ಹತ್ತುಪಟ್ಟು ಜಾಸ್ತಿ ಆಯಿದು.
ಕೊಶಿ ತಡವಲೆ ಎಡಿಯದ್ದೆ ಹಾರಿದ್ದು ಹೆಚ್ಚಾಗಿ ಮಾಷ್ಟ್ರಮನೆ ಅಟ್ಟ ಹೆಟ್ಟಿತ್ತು ತಲಗೆ! 😉 🙁

ಬೇರೆ ಕನ್ನಡವೋ – ಇಂಗ್ಳೀಶೋ ಮಣ್ಣ ಬಾಶೆಲಿ ಇದ್ದಿದ್ದರೆ ಈಗ ಇದರ ಎರಡು-ಮೂರು ಪಾಲು ಓದುಗರು ಬತ್ತಿತವು.
ಆದರೆ,  ತೀರಾ ಕಮ್ಮಿ ಓದುಗರು ಇಪ್ಪ ಹವ್ಯಕ ಭಾಷೆಲೇ ಇಷ್ಟು ಲಕ್ಷಗಟ್ಳೆ ಓದುಗರು ಇದ್ದವು ಹೇಳಿ ಆದರೆ, ಒಪ್ಪಣ್ಣಂಗೆ ಅದುವೇ ಕೊಶೀ ಕಾಂಬದು!
~
ಮುಂದಾಣ ಯೋಚನೆಗೊ:ಬೈಲು ಒಂದು ಹೊಳೆತ್ತ ಹೊಳೆಯ ನಮುನೆ.
ನಿರಂತರವಾಗಿ ಹೊಸ ಹರಿವು ಬತ್ತಾ ಇರೇಕು. ಹಳೆ ಶುದ್ದಿಗೊ ಒಂದು ದಿಕ್ಕೆ ಸೇರಿ ಆ ಶುದ್ದಿ ಸಮುದ್ರ ಓದುಗರಿಂಗೆ ಉಪಕಾರ ಆಯೇಕು!
ನಿತ್ಯ ನೂತನ ಯೋಚನೆಗೊ ಬೈಲಿನೋರ ಮನಸ್ಸಿಲಿ ಬತ್ತಾ ಇರೇಕು!
ಅಲ್ಲದೋ?
~

ನಮ್ಮ ಮುಂದಾಣ ಯೋಚನೆಗೊ:

ಬೈಲಿನ ಹೊಸ ದೃಶ್ಯ! ಸದ್ಯಲ್ಲೇ ನಿರೀಕ್ಷಿಸಿ!! 🙂

ಕಳುದೊರಿಶ ಬ್ಲೋಗಿಂದ ವೆಬ್-ಸೈಟು ಆತು. ತರವಾಡುಮನೆ ವಿದ್ಯಕ್ಕ ವಿನುವಿನ ಬರ್ತುಡೆಗೆ ಹೊಸ ಅಂಗಿ ತಪ್ಪಾಂಗೆ!

  • ಈ ಒರಿಷ ಬೈಲಿಂಗೊಂದು ಹೊಸ ರೂಪ ಕೊಟ್ರೆ ಹೇಂಗೆ?
  • ಹೆಚ್ಚು ಹೆಚ್ಚು ಶುದ್ದಿಗೊ ಬಂದ ಹಾಂಗೆ, ಬೈಲಿನೋರಿಂಗೆ ಓದುಲೆ ಸುಲಾಬ ಅಪ್ಪ ಹಾಂಗೆ ಕೆಲಾವು ಹೊಸ ಬದಲಾವಣೆಗೊ ಮಾಡಿರೆಂತ?!
    ಇನ್ನೂ ಚೆಂದ ಮಾಡಿರೆಂತ?
  • ಶುದ್ದಿಗೊ ಸುಲಾಬಲ್ಲಿ ಓದಲೆ ಸಿಕ್ಕುತ್ತ ನಮುನೆ ಮಾಡಿರೆಂತ?
  • ಓರುಕುಟ್ಟುತ್ತ ಪುಟ, ಮೋರೆಪುಟ ಇದ್ದ ಹಾಂಗೆಯೇ – ಬೈಲಿನೋರು ಎಲ್ಲೋರುದೇ ಸೇರಿ, ಹವ್ಯಕಲ್ಲೇ ಮಾತಾಡುಲೆ ಒಂದು ನೆರೆಕರೆಯ  ಜಾಗೆ ಇದ್ದರೆಂತ?
  • ಹೀಂಗೆಲ್ಲ ಯೋಚನೆ ಬಂದುಗೊಂಡಿದ್ದದರ ಗುರಿಕ್ಕಾರ್ರ ಹತ್ರೆ ಹೇಳಿದೆ.
    ನೆರೆಕರೆಯವರ ಒಟ್ಟಿಂಗೆ ಎಂತದೋ ಮಾತಾಡಿ ಮುಂದಾಣದ್ದರ ಮಾಡುವೊ ಹೇಳಿಗೊಂಡು ಯೋಚನೆಲಿ ಇದ್ದವು!

~
ಆಗಲಿ,

ಈ ಬೈಲು ಒಂದು ಕೂಡುಕುಟುಂಬದ ಹಾಂಗೆ ಇದ್ದು.
ಮುಂದೆಯೂ ಹೀಂಗೇ ಇರೆಕ್ಕು ಹೇಳುವ ಆಶಯ ಎಲ್ಲೋರದ್ದು.
ಬನ್ನಿ, ಸುಖ-ದುಃಖ ಎಲ್ಲವನ್ನೂ ಹಂಚಿಗೊಂಬೊ. ಗೊಂತಿದ್ದದರ ತಿಳಿಶುವೊ, ಗೊಂತಿಲ್ಲದ್ದದರ ತಿಳುಕ್ಕೊಂಬೊ.
ರಜ ರಜ ಅಭಿಪ್ರಾಯವಿತ್ಯಾಸ ಬಂದರೂ, ನಮ್ಮ ಜೀವಿತದ ಕಾಲಲ್ಲಿ ಎಷ್ಟು ಎಡಿತ್ತೋ – ಅಷ್ಟು ಸಾಧಿಸಿ ಮಡಗಿರೆ ನಮ್ಮಂದ ಮತ್ತಾಣೋರಿಂಗೆ ಅನುಕೂಲ ಅಕ್ಕು!
ಅದುವೇ ಅಲ್ಲದೋ ನಮ್ಮ ಜೀವನದ ಸಾರ್ಥಕತೆ.

ಬನ್ನಿ, ಬೈಲಿಂಗೆ ಹೊಸಬ್ಬರ ಸೇರುಸುವೊ°.
ಹೊಸ ಒರಿಷಲ್ಲಿ, ಹೊಸ ರೂಪಲ್ಲಿ, ಇನ್ನಷ್ಟು ಹೊಸ ಜನಂಗಳ, ಹೊಸ ಶುದ್ದಿಗಳ ನಿರೀಕ್ಷೆಲಿ…

ಒಂದೊಪ್ಪ: ಬೈಲು ಬೆಳದರೆ ವೆಗ್ತಿ ಬೆಳಗು, ವೆಗ್ತಿ ಬೆಳದರೆ ಬೈಲುದೇ ಬೆಳಗು!

ಸೂ:

  • ಜೆನವರಿ 1ನೇ ತಾರೀಕಿಂದ ಬೈಲು – ಹೊಸ ರೂಪಲ್ಲಿ ನಿಂಗಳ ಎದುರು!
  • ನಿಂಗಳ ಸಲಹೆ ಸೂಚನೆ ಇದ್ದರೆ ಖಂಡಿತವಾಗಿ ಹೇಳಿ, ನಿಧಾನಕ್ಕೆ ರೂಪುಸಿಗೊಂಬೊ°!

58 thoughts on “ಲಕ್ಷ್ಯಂದಲೂ ಮೇಗೆ, ಲಕ್ಷಂದಲೂ ಮೇಗೆ..!!

  1. ಒಪ್ಪಣ್ಣ, ಸಣ್ಣ ಬಾಬೆ ಹುಟ್ಟಿ ಬೆಳೆತ್ತಾ ಬಂದ ಹಾಂಗೆ ಅದರ ಬೆಳವಣಿಗೆಲಿ ವೆತ್ಯಾಸ ಕಾಂಬ ಹಾಂಗೆ ಒಪ್ಪಣ್ಣನ್ದೆ ಹಂತ ಹಂತವಾಗಿ ಬೆಳಕ್ಕೊಂಡು ಬಯಿಂದ°.
    ವರ್ಷ ವರ್ಷ ಬೆಳದ ಹಾಂಗೆ ಮನುಷ್ಯರ ಬೆಳವಣಿಗೆಯ ಸ್ವರೂಪ ಬದಲುವ ಹಾಂಗೆ, ಒಪ್ಪಣ್ಣನ ಸ್ವರೂಪವೂ ಚೆಂದಲ್ಲಿ ಬದಲಿದ್ದು.. ಒಳ್ಳೆದರಲ್ಲಿ, ಅರ್ಥವತ್ತಾಗಿ ಬದಲಿದ್ದು..
    ಸಾರಡಿ ತೋಡಿಲಿ ನೀರು ಯಾವಾಗಲೂ ಹರಿತ್ತಾ ಹೋಪ ಹಾಂಗೆ ಒಪ್ಪಣ್ಣನ ಬೈಲಿಲೂ ಶುದ್ದಿಗಳೂ, ಒಪ್ಪಂಗಳೂ, ನೆರೆಕರೆಯೋರು, ಬೈಲಿನೋರು ಎಲ್ಲೋರೂ ಸೇರಿ ಹೊಂದಿಗೊಂಡು, ಕಾಲೆಳಕ್ಕೊಂಡು, ಒಬ್ಬನ ಏಳಿಗೆಯ ಕೊಶಿ ಪಟ್ಟುಗೊಂಡು, ಕಷ್ಟಲ್ಲಿ ಇನ್ನೊಬ್ಬಂಗೆ ಒದಗಿ, ಒಂದು ಕೂಡು ಕುಟುಂಬದ ಹಾಂಗೆ ಮುಂದೆ ಸಾಗುತ್ತಾ ಇದ್ದು..
    ಇದಕ್ಕೆಲ್ಲ ಸೂತ್ರಧಾರ° ನೀನು.. ನಿನ್ನ ಸೂಕ್ಷ್ಮ ದೃಷ್ಟಿಂದ ತಪ್ಪುಸುಲೆ ಆರಿಂಗೂ ಎಡಿಯ.
    ಅದು ಒಬ್ಬನ ಹತ್ತರೆ ಇಪ್ಪ ಒಳ್ಳೆಯ ಗುಣಂಗಳ ಗುರುತಿಸುದು ಆದಿಕ್ಕು, ಅವರ ಬರವ ಶಕ್ತಿಯ ಗುರುತಿಸಿ, ಬೆಳೆಶುದು ಆದಿಕ್ಕು, ಒಪ್ಪ ಬರವೋರ ಗುರುತಿಸಿ, ಪ್ರೋತ್ಸಾಹಿಸಿ ಬೈಲ ಬಳಗಕ್ಕೆ ಸೇರ್ಸಿಗೊಂಬದಾದಿಕ್ಕು.., ಒಪ್ಪಣ್ಣ ನ ಬೈಲು ಕ್ರಮ ತಪ್ಪದ್ದೆ ಒಂದಾಗಿ ಒಂದು ಶುದ್ದಿಯ ಸರಪಳಿಲಿ ಬಪ್ಪ ಹಾಂಗೆ ಮಾಡುದು ಆದಿಕ್ಕು, ಇದೆಲ್ಲ ನಿನ್ನಂದ ಮಾತ್ರ ಸಾಧ್ಯ!!! ಎಲ್ಲೋರ ಸೇರ್ಸುವ ಒಂದು ಕೊಂಡಿ.. ನಿನ್ನ ಹಿಂದಂದ ಇಪ್ಪ ಎಲ್ಲಾ ಕೈಗಳಿಂಗೂ ಮೂಲ ನೀನು!!!
    ಬೈಲಿನ ಕರೇಲಿ ಹೋಯ್ಕೊಂಡಿದ್ದ ಎನ್ನ ಬೈಲಿಂಗೆ ಬಪ್ಪ ಹಾಂಗೆ ಮಾಡಿ, ಬರವಲೆ ಒಂದು ಜಾಗೆ ಕೊಟ್ಟು, ನೆರೆಕರೆಯೋರ, ಬೈಲಿನೋರ ಪ್ರೀತಿ ಸಿಕ್ಕುವ ಹಾಂಗೆ ಮಾಡಿದ್ದೆ.. ಯಾವ ರೀತಿಲಿ ಧನ್ಯವಾದ ಹೇಳುದು ನಿನಗೆ? ಧನ್ಯವಾದ ಒಪ್ಪಣ್ಣ ಇಷ್ಟು ಜನರ ಪ್ರೀತಿ ಕೊಡ್ಸಿದ್ದಕ್ಕೆ. ಬರವ ವೇದಿಕೆ ಕೊಟ್ಟದಕ್ಕೆ..
    ಒಪ್ಪಣ್ಣ…,
    ಸಂಸ್ಥಾನದ ಆಶೀರ್ವಾದ ನಿನ್ನ ಮೇಲೆ ಯಾವತ್ತೂ ಇರಲಿ.. ಸರಸ್ವತಿ ದೇವಿಯ ಅನುಗ್ರಹಲ್ಲಿ ಶುದ್ದಿಗೋ, ಎಂದಿಂಗೂ ಬತ್ತದ್ದೆ ಸರಾಗವಾಗಿ ಬೈಲಿಲಿ ಬತ್ತಾ ಇರಲಿ.., ಸಮಾಜಕ್ಕೆ ದಾರಿ ತೋರ್ಸಲಿ..
    ನಿನ್ನ ಬೈಲಿನ ನೆರೆಕರೆ, ಸಾರಡಿ ತೋಡಿನ ಹಾಂಗೆ ಇಪ್ಪದು, ಹೊಳೆ ಆಗಿ ಸಾಗರ ಆಗಲಿ..
    ಸಂಸ್ಥಾನ ಅನುಗ್ರಹ ಮಾಡಿದ ಹಾಂಗೆ ಬೈಲು, ನೆರೆಕರೆ ‘ಸಾವಿರದ’ ಸಾಗರ ಆಗಲಿ..

  2. ಹೊಸಾ ಬೈಲು ಸೂಪರ್ ಕಾಣ್ತು. ನೆರೆಕರೆಗೆ ಹೊಸ ಹೊಸಾ ನೆಂಟ್ರು ಬಂದು ಸೇರಿಗೊಂಡು ನಮ್ಮವೇ ಆವುತ್ತಾ ಇಪ್ಪದು ಇನ್ನೊಂದು ಕುಶಿಯ ಸಂಗತಿ. ಬೈಲಿನ ಸಾಧನೆ ಹೀಂಗೇ ಮುಂದುವರಿಯಲಿ.

  3. ಬೈಲು ಒಪ್ಪೊಪ್ಪ ಆಯಿದು ಒಪ್ಪಣ್ಣೊ… ಗುರುಗಳ ಹಾರಯಿಕೆಯೂ ಸಿಕ್ಕಿದ್ದು ಕುಶೀ ಆತು… ಒಳ್ಳೆದಾಗಲಿ…

  4. ಓ! ಇದು ನಮ್ಮ ಬೈಲೆಯೋ..
    ಆನು ಇದರೆಡಕ್ಕಿಲಿ ಒಂದೆರಡು ಸರ್ತಿ ಬಂದಿಕ್ಕಿ, ’ಯೇವದೋ ಬೇರೆ – ಸೋರಿ!’ ಹೇಳಿಕ್ಕಿ ಹೋದೆ.
    ಈಗ ನಮ್ಮದೇ ಹೇಳಿ ಗೊಂತಾತು..

    ಬೈಲು ತುಂಬಾ ಚೆಂದ ಆಯಿದಿದಾ, ಎನ್ನ ಹಾಂಗೆಯೇ! 😎
    ಕೊಶಿ ಆತು.

    1. ರಾಂಗು ನಂಬರು ಹೋತು ಗ್ರೇಶಿದೆಯೋ ಭಾವಾ>?? ಅದಕ್ಕೆ ಅದಾ ಒಪ್ಪಣ್ಣನ ಶುದ್ದಿಯ ಎಲ್ಲ ಪೂರ ಸರೀ ಓದಿಗೊಳೆಕ್ಕು ಹೇಳಿದ್ದು.. ಓದದ್ದೆ ಬಿಂಗಿ ಮಾಡ್ಯೊಂಡು ಕೂದ್ದೆಂತಕೆ>??? ಸದಾ ಕುಟ್ಟಿ ಬದನೆ, ಹಾಂಗೆ ಆಯೆಕ್ಕು! 😉

  5. ಹೊಸ ಮೋರೆ ಚೆಂದ ಇದ್ದು. ಗುಣದೋಷ ನಿಧಾನಕ್ಕೆ ಗೊಂತಕ್ಕು. ಎಲ್ಲೊರೂ ಇದಕ್ಕೆ ಸಹಾಯ ಮಾಡುವೊ°.

  6. ಬೈಲು ಭಾರೀ ಚಂದ ಆಯ್ದು…. ತೋರಣ ಎಲ್ಲ ಕಟ್ಟಿ ಒಪ್ಪ ಒಪ್ಪ ಆಯ್ದು.. 🙂
    ಹೀಂಗೆ ಬೈಲು ಎತ್ತರಕ್ಕೆ ಬೆಳೆಯಲಿ ಹೇಳಿ ಹಾರೈಕೆ….

  7. ಸಮಾಜ-ಸಂಸ್ಕೃತಿಸಂರಕ್ಷಣೆಯ ಸತ್ಕಾರ್ಯಲ್ಲಿ ನಿರತರಾಗಿಪ್ಪ ಒಪ್ಪಣ್ಣ ಹಾಂಗೆ ಅವನ ಬೈಲಿನೋರಿಂಗೆ ಗುರುಪೀಠದ ‘ಸಾವಿರದ’ ಆಶೀರ್ವದಂಗೊ..

    1. ಶ್ರೀಚರಣಗಳಿಂಗೆ ಹೃತ್ಪೂರ್ವಕ ಪ್ರಣಾಮಂಗೋ, ಬೈಲಿನ ಮೇಲೆ ನಿಂಗಳ ಆಶೀರ್ವಾದ ಹೀಂಗೆ ಸದಾ ಇರ್ಲಿ!
      [’ಸಾವಿರದ’ ಆಶೀರ್ವಾದ] ಸಾಲಿನ ನೋಡಿ ಕಣ್ಣು-ಮನಸು ತುಂಬಿತ್ತು!

    2. ಗುರುಗಳೇ,
      ಎಲ್ಲ ನಿಂಗಳ ಆಶೀರ್ವಾದಂದಾಗಿ.

      ಲಕ್ಷ ಓದುಗರಿಂಗೆ ಸಾವಿರದ ಆಶೀರ್ವಾದ ಕೊಟ್ಟು ಹರಸಿದ್ದರಿಂದಾಗಿ – ಮುಂದಕ್ಕೆ ಕೋಟಿಕೋಟಿಯಾಗಿ ಬರಳಿ ಹೇಳ್ತದು ಬೈಲಿನೋರ ಆಶಯ.

      ಹರೇರಾಮ..

    3. ಹರೇರಾಮ ಸಂಸ್ಥಾನ.
      ಒಪ್ಪಣ್ಣ ಹೇಳಿದ ಹಾಂಗೆ, ನಿಂಗಳ ‘ಸಾವಿರದ’ ಆಶೀರ್ವಾದ ಸಿಕ್ಕಿ, ಎಂಗೋ ಸಾವಿರ ಸಾವಿರ ಜನ ಸೇರಿ ಲಕ್ಷ ಆದ್ದದು ಮುಂದೆ ಕೋಟಿ ಆಗಿ ಸಮಾಜವ ಒಳಿಶಿ ಬೆಳೆಶುಲೆ ಎಂಗಳ ಪ್ರಯತ್ನ ಮಾಡ್ತೆಯಾ°..
      ಪೀಠದ, ಶ್ರೀ ಕರಾರ್ಚಿತ ದೇವರುಗಳ, ಶ್ರೀ ಗುರುಗಳ ಅನುಗ್ರಹ ಯಾವತ್ತೂ ಬೈಲಿಂಗೆ ಇರಲಿ….
      ಎಂಗಳ ಅಕ್ಷರ ರೂಪದ ಅರ್ಚನೆಯ ಯಾವಾಗಲೂ ಬೈಲಿಂಗೆ ಬಂದು ಸ್ವೀಕರಿಸಿ, ಎಂಗಳ ಎಲ್ಲೋರ ಹರಸಿ ಹೇಳಿ ಕೇಳಿಗೋಳ್ತೆ….
      ಧನ್ಯವಾದ ಸಂಸ್ಥಾನ. ಹರೇರಾಮ

  8. ಬೈಲು ಹೇಳಿಯಪ್ಪಗ ರಜಾ ಪಚ್ಚೆ ರಜಾ ಕೆಂಪು,ಅರಿಶಿನ ಇದ್ದರೆ ಒಳ್ಳೆದಲ್ಲದೋ?ಬೈಲಿಲ್ಲಿ ಬರೀ ಖಾಲಿ ಆದರೆ ಕೄಷಿ ಇಲ್ಲೆ ಹೇಳಿ ಹೇಳುಗು,ಹೊಸಬ್ಬರು.

  9. bhari chenda aidu baraddadu odi kushi aathu.
    gurikkarana bheti maadi matadikki baradda heli.ninna gurikkarana hudukkule hulimavinge bareko heli.
    shuddigo oppango ella nooru savira aagali,saavira laksha aagali.
    elloru odi kushi padali.
    elloringu namma gurugala aasheervada sada irali.
    hosa varusha shubhavagali
    good luck oppanno..

    1. ಅಮ್ಮನ ಒಪ್ಪ ಆಶೀರ್ವಾದ ಕಂಡು ಕೊಶಿ ಆತು .. 🙂
      ಬೈಲೂ ಬೆಳೆತ್ತು, ನೆರೆಕರೆಯೂ ಬೆಳೆತ್ತು.

      ಗುರುಗೊ ಊರಿಂಗೆ ಬತ್ತಾ ಇದ್ದವಲ್ಲದೋ – ಹಾಂಗೆ ಗುರಿಕ್ಕಾರ್ರು ರಜಾ ಅಂಬೆರ್ಪು, ಅಷ್ಟೇ! 🙂

  10. ಹಾ…ಬೈಲು ಈಗ ಭಾರೀ ಚೆಂದ ಆತು…

  11. ಬೈಲಿನ ಹೊಸ ರೂಪ ಕಂಡು ತುಂಬಾ ತುಂಬಾ ತುಂಬಾ ಕೊಶಿ ಆತು. ಹಾಂಗೆ ಒಪ್ಪಣ್ಣನ ಬೈಲು ಬೆಳೆದ ರೀತಿ ಕಂಡು ಅದ್ಭುತವೂ ಆತು…. ಬಪ್ಪ ವರುಶ ಬೈಲಿಂಗೆ ಬಂದವರ ಸಂಖ್ಯೆ 2 ಕೋಟಿ ದಾಂಟಲಿ ಹೇಳಿ ಹಾರೈಸುತ್ತೆ. ಮತ್ತೆ ಬೈಲಿನ ಓರುಕುಟ್ಟುತ್ತ ಪುಟ, ಮೋರೆಪುಟದ ರೀತಿ ಮಾಡಿದ್ದಕ್ಕೆ ಧನ್ಯವಾದಂಗೊ ಇದ್ದು. ಒಪ್ಪಣ್ಣನ ಬೈಲಿಲಿ ಇಪ್ಪವಕ್ಕೂ, ಬೈಲಿಂಗೆ ಬಂದವಕ್ಕೂ, ಇನ್ನು ಬಪ್ಪವಕ್ಕೂ, ಎಲ್ಲರಿಂಗುದೇ ಹೊಸ ವರಿಶದ ಶುಭಾಶಯಂಗೊ. ಹಾಂಗೆ, ಒಪ್ಪಣ್ಣನ ಬೈಲಿಂಗೆ ಹುಟ್ಟುಹಬ್ಬದ ಶುಭಾಶಯಂಗೊ…. 🙂

  12. ಬೈಲಿನ ಹೊಸರೂಪ ಚೆಂದ ಆಯಿದು..ನೆರೆಕರೆಯವರ ಬಗ್ಗೆ ಅವರವರ ವಿಶೇಷತೆಗಳ ವಿವರಣೆ ಹೊಸ ಶುದ್ಧಿಲಿ ಪುನಾ ಗುರ್ತ ಮಾಡ್ಸಿಗೊಂಡ ಹಾಂಗಾತು.

  13. ಬೈಲಿನ ಈ ರೂಪ ಲಾಯಕಿದ್ದು ಒಪ್ಪಣ್ಣ.. ವರುಷ ಆತು ಹೇಳಿ ಗೊಂತೆ ಆವುತ್ತಿಲ್ಲೆ. ಮೊನ್ನೆ ಮೊನ್ನೆ ನೋಡಿದ ಹಾಂಗೆ ಇದ್ದು…

  14. ತಿಳಿ ಆಕಾಶ ನೀಲ, ಹಚ್ಚ ಹಸುರಿನ ಸಸ್ಯ ಶಾಮಲೆ, ಬೈಲಿನ ಇಡಿ ಕುಟುಂಬ ಎಲ್ಲವನ್ನೂ ಒಟ್ಟು ಸೇರುಸಿದ ಹೊಸ ರೂಪದ ಬೈಲು ಕಣ್ಣಿಂಗೆ, ಮನಸ್ಸಿಂಗೆ ಸಂತೋಷ ಕೊಟ್ಟತ್ತು. ಚೆಂದ ಆಯದು. ಎನ್ನ ಒಂದು ಅನಿಸಿಕೆ ಹೇಳಿರೆ, ಪುಟದ ಎಡದ ಕರೆಲಿ, ಒಪ್ಪಣ್ಣನ ಒಪ್ಪಂಗೊ ಹೇಳಿ ಬರದ ತಲೆ ಬರಹದ ಹತ್ರಾಣ ಚಿತ್ರ ಪೇಟೆಯ ಒಪ್ಪಣ್ಣನ ಹಾಂಗೆ ಕಾಣುತ್ತು. ಅದರ ಬದಲಿಂಗೆ, ಹಳ್ಳಿಯ ಒಪ್ಪಣ್ಣ ಬಂದರೆ ಒಳ್ಳೆದೊ ಹೇಳಿ. ಮನಸ್ಸಿಂಗೆ ಬಂದ ವಿಚಾರ ಅಷ್ಟೆ.

    1. ಮಾವಾ
      ಅದು ಓ ಮೊನ್ನೆ ಒಪ್ಪಣ್ಣ ಪೆರ್ಲದಣ್ಣನ ಕಾಂಬಲೆ ಬೆಂಗ್ಲೂರಿಂಗೆ ಹೋಗಪ್ಪಗ ಅಲ್ಯಾನ ಸೆಲೂನಿಂಗೆ ಕರ್ಕೊಂಡು ಹೋಗಿ ತೆಗೆಶಿದ ಪಟ ಅಡಾ.. ಆರಿಂಗೂ ಹೇಳುಲಾಗ ಹೇಳಿದ್ದ.. ಗುಟ್ಟಿಲಿ ಇರಲಿ…

  15. ಬೈಲಿನ ಹೊಸ ರೂಪ ಭಾರೀ ಲಾಯಿಕ ಇದ್ದು.

  16. ನಮ್ಮದೇ ಇದು ನಮ್ಮದೇ
    ಜಾಲ ತಾಣವು ನಮ್ಮದೇ
    ಇನ್ನೂ ಹೆಚ್ಚಿಗೆ ಚೆಂದವಾಗಲಿ
    ಇನ್ನೂ ಹೆಚ್ಚಿಗೆ ಜೆನರು ಸೇರಲಿ
    ಎಲ್ಲ ಜೆನ ಕೊಂಡಾಟ ಮಾಡಲಿ
    ಎಲ್ಲ ಜೆನರೂ ಸೇರಿ ಬೆಳಶಲಿ

  17. ಹಚ್ಚ ಹಸಿರಿನ ವನದ ಬೆಡಗಿನ
    ಹೊಚ್ಚ ಹೊಸ ಮೈಸಿರಿಯ ಬೈಲಿನ
    ಎಚ್ಚರಿಕೆಲೆದ್ದಿದ್ದು ನೋಡಿದೆ ಇರುಳು ಒರಗದ್ದೇ
    ಅಚ್ಚುಬೆಲ್ಲದ ಹಸರ ಪಾಯಸ
    ಹೆಚ್ಚು ಸುರುದಾ೦ಗಾತು ಮನಸಿಗೆ
    ಮೆಚ್ಚಿತೆನಗೊಪ್ಪಣ್ಣ ಬಳುಸಿದ ರಸದ ಊಟವಿದಾ.

      1. ಅದಾ! ಕೇಜಿಮಾವಂದೆ ಪ್ರಾಸ ಸೇರ್ಸುಲೆ ಸುರು ಮಾಡಿದವದಾ! ಪದ್ಯವೂ ಬರ್ಲಿ ಮಾವ ನಿಂಗಳದ್ದುದೆ! ಸ್ಟ್ರೋಂಗು ಇಂಜೆಕ್ಷನ್ನಿನ ಹಾಂಗಿಪ್ಪದು!

  18. ಬೈಲಿನ ಎಲ್ಲೋರಿ೦ಗೂ ಹೊಸವರ್ಷದ (ಆ೦ಗ್ಲಕ್ರಮದ) ಶುಭಾಶಯ೦ಗೊ..

    ಸರ್ವೇ ಭವ೦ತು ಸುಖಿನಃ
    ಸರ್ವೇ ಸ೦ತು ನಿರಾಮಯಾಃ I
    ಸರ್ವೇ ಭದ್ರಾಣಿ ಪಶ್ಯ೦ತು
    ಮಾ ಕಶ್ಚಿದ್ ದುಃಖಭಾಗ್ ಭವೇತ್ II

    ದೇವರು ಎಲ್ಲೋರಿ೦ಗುದೆ ಒಳ್ಳೇದು ಮಾಡ್ಳಿ…

  19. ಬೈಲಿನ ಹೊಸ ರೂಪ ಪಷ್ಟಾಯಿದು ಒಪ್ಪಣ್ಣೋ! ಗುರಿಕ್ಕಾರರ ಲೆಕ್ಕಾಚಾರವುದೆ, ನಿನ್ನ ಆಲೋಚನೆಯುದೆ ಸೇರಿರೆ ಮತ್ತೆ ಕೇಳೆಕ್ಕಾ,, 🙂 ಈಗ ನಿಜಕ್ಕೂ ಬೈಲಿಲಿಯೇ ಇಪ್ಪ ಹಾಂಗಾವುತ್ತಾ ಇದ್ದಿದಾ!!
    ಒಪ್ಪಣ್ಣನ ಬಯಲಿಲಿ ಇಂದು ಗೌಜಿ ಇದ್ದು! 😉

  20. ಒಪ್ಪಣ್ಣೋ ಆನು ರಜ ತಡವಾಗಿ ಬಯಲಿ೦ಗೆ ಬ೦ದವ೦. ದೋಡ್ಡಮಾಣಿ ಮದುವೆ ಹೇಳಿಕೆ ಹೇಳ್ಲೆ ಬ೦ದ ಶ್ಯಾಮ ರಾಜ ಈ ವೆಬ್ಸೈಟಿನ ಬಗ್ಯೆ ಹೇಳಿದ್ದು(ಅವ೦ ಎನಗೆ ಅಣ್ಣನ ಮಗನೇ ಅವುತ್ತ೦ ಮರೆಲಿ)ಹಾ೦ಗಾಗಿ ಅವ೦ಗೆ ಒ೦ದು ಧನ್ಯವಾದ ಹೇಳದ್ರಾಗ ಇದ.ಈಗ ಎ೦ತಾಯಿದು ಹೇಳೀರೆ ಇದೊದು ಚಟ ಆಗಿ ಹೋಯಿದು(ಒಳ್ಳೆ ಚಟ ಹೇಳಿ ಆನು ತಿಳ್ಕೊ೦ಡಿದೆ)ಆದರೆ ಒ೦ದೊ೦ದಾರಿ ಊಟಕ್ಕೆ ದಿನಿಗೇಳಿಯಪ್ಪಗ ಹೋಗದ್ರೆ ಹೆ೦ಡತ್ತೀ ಬಯಿಗಳು ಕೇಳೇಕಾವುತ್ತದ ಅಲ್ಲ ಅದು ಕೊ೦ಡಾಟಲ್ಲೇ ಬಯ್ತದು ಹೇಳುವೊ೦. ಈಗ ರಘು ಭಾವ ಹೇಳಿದ ಹಾ೦ಗೆ ಹಳತ್ತಿ೦ಗೆ ಮಡಗಿದ್ದದರ ಪುರುಸೊತ್ತಿಪ್ಪಗ ಎಲ್ಲ ಸೊಲುದು ನೋಡುತ್ತೆ..ಅ೦ತೂ ಅದ್ಭುತ ಕೆಲಸ ಮಾಡಿದ ಒಪ್ಪಣ್ಣ೦ಗೆ ಗುರುಗಳ ಆಶೀರ್ವಾದದೊಟ್ಟಿ೦ಗೆ ಬಯಲಿನೋರ ಶುಭ ಹಾರಯಿಕೆಯೂ ಸಿಕ್ಕಿ ಇದೊ೦ದು ಮಾದರಿ ವೆಬ್ಸೈಟು ಹೇಳೀ ಹೇಳುಸಲಿ ಹೇಳಿ ಹಾರಯಿಸುತ್ತೆ.ಇದರಲ್ಲಿ ಬತ್ತ ಲೆಖನ೦ಗಳೂ, ಒಪ್ಪ೦ಗಳೂ ಕಾಳು ಹೆಚ್ಚಾಗಿ ಜಳ್ಳು ಕಮ್ಮಿಯಾಗಿ ಇದ್ದದಾಗಿರಳಿ ಹೇಳಿ ಕೂಡಾ ಎನ್ನ ಒ೦ದು ಹಾರಯಿಕೆ.ಒಪ್ಪ೦ಗಳೊಟ್ಟಿ೦ಗೆ..

  21. ಎಲ್ಲಕ್ಕಿಂತ ಮೊದಲು ಶ್ರೀಗುರುಗಳ ಚರಣಂಗಳಲ್ಲಿ ನಮಿಸುತ್ತಾ………
    ಶುದ್ದಿ ಓದಿ ಸಂತೋಷ ಆತು 🙂 ಬೈಲಿನ ಓದುವವರ ಸಂಖ್ಯೆ ಹೆಚ್ಚಾವ್ತಾ ಇಪ್ಪದು ನಿಜವಾಗಿಯೂ ತುಂಬಾ ಸಂತೋಷ ಕೊಡ್ತ ವಿಚಾರ. ಹೊರೆ ಆಗದ್ದ ನಮ್ಮ ನೆರೆಕರೆಯ ಬಗ್ಗೆ ಬರದ್ದು ಖುಷಿ ಆತು 🙂 ಪರಸ್ಪರ ಸ್ನೇಹಲ್ಲಿ ಹೊಂದಿಗೊಂಡು ಇಪ್ಪ ನೆರೆಕರೆ ಬೇರೆಲ್ಲಿಯೂ ಸಿಕ್ಕುವ ಸಾಧ್ಯತೆ ಕಮ್ಮಿ !
    2011ರಲ್ಲಿ ಇನ್ನೂ ಹೆಚ್ಚಿನ ಏಳಿಗೆ ನಮ್ಮ ಒಪ್ಪನ್ಣನ ಬೈಲಿಂಗೆ ಮತ್ತೆ ನೆರೆಕರೆಯೋರಿಂಗುದೇ ಸಿಕ್ಕಲಿ.
    ಸರ್ವೇ ಭವಂತು ಸುಖಿನಃ……..ಓಂ ಶಾಂತಿಃ ಶಾಂತಿಃ ಶಾಂತಿಃ

  22. ಶುದ್ದಿ ಲಾಯಿಕಾಯಿದು. ಹೊಸ ವರ್ಷಲ್ಲಿ ಹೊಸ ವಿನ್ಯಾಸಲ್ಲಿ ಬೈಲು ಇನ್ನುದೆ ಹೆಚ್ಚು ಬೆಳದು, ಬೈಲಿಂಗೆ ಬತ್ತವರ ಸಂಖ್ಯೆ ಲಕ್ಷ ಇಪ್ಪದು ಕೋಟಿ ಆಗಲಿ ಹೇಳಿ ಹಾರೈಸುತ್ತೆ.

  23. ಶುದ್ದಿ ಲಾಯಿಕಾಯಿದು. ಹೊಸ ವರ್ಷಲ್ಲಿ ಹೊಸ ವಿನ್ಯಾಸಲ್ಲಿ ಬೈಲು ಇನ್ನುದೆ ಹೆಚ್ಚು ಬೆಳದು, ಬೈಲಿಂಗೆ ಬಂದು ಹೋವುತ್ತವರ ಸಂಖ್ಯೆ ಲಕ್ಷ ಇಪ್ಪದು ಕೋಟಿ ಆಗಲಿ ಹೇಳಿ ಹಾರೈಸುತ್ತೆ.

  24. ಶುದ್ದಿ ಕೇಳಿ ಭಾರೀ ಕುಶಿ ಆತು ಒಪ್ಪಣ್ಣೊ… ಬೈಲು ಬೆಳವಲೆ ಕಾರಣ ಆದೋರೆಲ್ಲೊರ ನೆಂಪು ಮಾಡಿಗೊಂಡು ಶುದ್ದಿ ಬರದ್ದದು ಲಾಯಿಕಾಯಿದು… ಹೊಸ ನಮುನೆ ಬೈಲು ಇನ್ನುದೇ ಸುಲಬ ಇದ್ದಡ, ಗುರಿಕ್ಕಾರ ಹೇಳಿದ… ಅಜ್ಜಿಗೂ ಸುಲಬ ಅಪ್ಪಾಂಗಿದ್ದೋ..?
    ಆಗಲಿ.. ಒಳ್ಳೆದಾಗಲಿ… ಗುರುಗಳ ಆಶೀರ್ವಾದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ…

  25. Thumba koshi aathu.

    Idu havyakara anthrangada dwani aagali.

    Samskara samkruthi beleshuttha theru hinge sagali.

  26. ಒಪ್ಪಣ್ಣನ ಬಯಲು ಬರೆ ಒಂದು ವೆಬ್‍ಸೈಟಾಗಿ ಒಳುದ್ದಿಲ್ಲೆ ಈಗ,.. ಇದೊಂದು ವೇದಿಕೆ, ಇದೊಂದು ಕುಟುಂಬ, ಅದೆಷ್ಟೋ ಜೆನರ ಮಧ್ಯೆ ಬಾಂಧವ್ಯ ಬೆಳವಲೆ ಕಾರಣ ಆಯ್ದು ನಮ್ಮ ಬಯಲು.. ನಿಜವಾದ ನೆರೆಕರೆಲಿಯೂ ಇಷ್ಟು ಪ್ರೀತಿ, ನೆಗೆ ಇರ್ತೋ ಇಲ್ಲೆಯೋ! ಅಂತೂ ದೂರದೂರಿಲಿ ಕೆಲಸದ ಮಧ್ಯೆ ಮುಳುಗಿದ ಆಧುನಿಕ ಅತಿರಥ ಮಹಾರಥರಿಂಗೆ ನಮ್ಮ ಭಾಷೆ ಮರದು ಹೋಪ ಅಪಾಯ ತಪ್ಪಿದ್ದು ನಮ್ಮ ಒಪ್ಪಣ್ಣನ ಬಯಲಿಂದ ಹೇಳಿರೆ ತಪ್ಪಾಗ.. ಒಪ್ಪಣ್ಣನ ಬಯಲು ಇನ್ನೂ ಚೆಂದ ಆಗಲ್ಲಿ, ಇನ್ನೂ ಬೆಳೆಯಲ್ಲಿ ಲಕ್ಷಕ್ಕೇರಿದ್ದು ಕೋಟಿಗೆತ್ತಲ್ಲಿ ಹೇಳುದೇ ಆಶಯ! 🙂 ಗುರುಗಳ ಆಶೀರ್ವಾದ ಜಗತ್ತನ್ನೆ ಜಯಿಸುಗು.. ಸಂಶಯವೇ ಇಲ್ಲೆ!
    ಹರೇರಾಮ!

    1. ಕೋಟಿಯಾ?? ಅದಕ್ಕೆ ಎಷ್ಟು ಸೊನ್ನೆ ಬತ್ತು ಮಾಣಿ??
      ಎನಗೆ 1 ’ದ ರಿ೦ದ 100 ರವರೆಗೆ, ಲೆಕ್ಕ ಬತ್ತು… 😉

      1. ಅದು ನಿನ್ನ ಲೆಕ್ಕಲ್ಲಿ ಅಲ್ಲ ಹೇಳಿದ್ದು, ಎನ್ನ ಲೆಕ್ಕಲ್ಲಿ ಹೇಳಿದ್ದು 🙂 ನಿನಗೆ ಕೋಟಿಗಿಪ್ಪ ಸೊನ್ನೆ ಎಷ್ಟು ಹೇಳಿ ಕಲಿಶುಲೆ ಮೇಷ್ಟ್ರು ಮಾವ° ಬೆತ್ತ ಹಿಡುದು ನಿಂದಿದವು 🙂 ಬೇಗ ಹೋಗಿ ಕಲ್ತುಗೊಳೆಕ್ಕಡ,, 😉

  27. ಒಪ್ಪಣ್ಣೋ,, ಶುದ್ದಿ ಕೇಳಿ ಬಾರಿ ಕೊಶಿ ಆತಿದಾ,, ಎನಗೆ ಹರಿಪ್ರಸಾದಲ್ಲಿ ಗಡ್‍ಬಡ್ ಆಯೆಕ್ಕಿದಾ ಬಯಲಿನ ಬರ್ತುಡೆ ಲೆಕ್ಕಲ್ಲಿ.. ಇಲ್ಲದ್ರೆ ಆನು ಆರು ಹೇಳಿರೂ ಕೇಳೆ,ಎನಗೊಂತಿಲ್ಲೆ, ಶಾಂತತ್ತೆ ಹತ್ರೆ ಕಂಪ್ಲೇಂಟು ಮಾಡ್ಲಿದ್ದು.. 😉

    1. ಈ ಚಳಿಗೆ ಗಡ್‍ಬಡಾ??? ಒಪ್ಪಕುಂಞಿ, ನಿನಗೆ ಶೀತ ಅಪ್ಪದು ಬೇಗ.. ಹಾ 😛
      ಮತ್ತೆ ಗಡ್‍ಬಡ್ ತಿ೦ದು ಶೀತಕ್ಕು.. ಹಾ.. ಹೇಳಿದ್ದಿಲ್ಲೆ ಬೇಡ..! 😉

      1. ಏ, ಬೋಸಣ್ಣಾ, ನಿನಗೆಂತ ಹುಳ್ಕಪ್ಪದೂ? ನಿನಗೆ ಕೊಡೆ, ನೀ ಎಷ್ಟು ಹೆದರ್ಸಿರೂ ಆನು ಕೇಳೆ,, ಎನಗೆ ಗಡ್‍ಬಡ್ ಬೇಕೂಊಊಊಊಊಊಊಊಊಊಊಊಊಊಊಊಊ° 🙁

        1. ಇಲ್ಲೆಪ್ಪಾ.. ಎನಗೆ ಹಲ್ಲು ಹುಳ್ಕು ಎ೦ತ ಇಲ್ಲೆ.. 😉
          ಮಕ್ಕೊ ಗೆ೦ಟು ಮಾಡ್ಲಾಗ ಇದಾ.. ಮತ್ತೆ ಕೆಮಿ ತಿರ್ಪ್ಪುಗು… ಹಾ..

          1. ಹಲ್ಲಿದ್ದರಲ್ಲದೊ ಹುಳ್ಕು ಇಪ್ಪದು?

  28. ಒಪ್ಪಣ್ಣನ ಶುದ್ದಿ ಸುರುವಾಗಿ ಎರಡು ವರ್ಷ ಪೂರ್ಣ ಗೊಂಡ ಈ ಶುಭ ಸಂದರ್ಭಲ್ಲಿ, ಒಪ್ಪಣ್ಣಂಗೆ ಅಭಿನಂದನೆಗಳ ಕೊಡುತ್ತಾ ಇದ್ದೆ. ಒಳ್ಳೆ ಒಳ್ಳೆಯ ವಿಚಾರಂಗಳ ಮನಸ್ಸಿಂಗೆ ಕೊಶಿ ಕೊಡುತ್ತ ರೀತಿಲಿ ವಿವರುಸಿ ಬರದು ಬೈಲಿನ ಎಲ್ಲೋರನ್ನು ಪ್ರತಿ ಶುಕ್ರವಾರಕ್ಕೆ ಕಾಯಿಸುವ ಹಾಂಗೆ ಮಾಡುತ್ತ ಒಪ್ಪಣ್ಣ, ತಾನು ಬರೆತ್ತರ ಒಟ್ಟಿಂಗೆ ನೆರೆಕರೆಯ ಎಲ್ಲೋರಿಂಗು ಬರವಲೆ ಅವಕಾಶ ಮಾಡಿಕೊಟ್ಟು, ಬರೆತ್ತವರ, ತನ್ನ ಒಪ್ಪದ ಮೂಲಕ, ಗುರಿಕ್ಕಾರರ ಮೂಲಕ ಬೆನ್ನು ತಟ್ಟುಸಿ, ಮತ್ತೂ ಮತ್ತೂ ಬರೆತ್ತ ಹಾಂಗೆ ಮಾಡುತ್ತ ಒಟ್ಟಿಂಗೆ, ಬೈಲಿಲ್ಲಿ ಎಂತಾರು ವಿಷಯ ರೈಸಿ ಅಪ್ಪಗ ಆರಿಂಗು ಬೇಜಾರ ಆಗದ್ದ ಹಾಂಗೆ ಗುರಿಕ್ಕಾರನ ಸಮಾಧಾನ ಮಾಡುಸಿ, ನೆಗೆಗಾರನ ಮೂಲಕ ನೆಗೆಯ ಹೊಳೆಯನ್ನೆ ಹರುಸಿ, ಬೋಸನ ಮೂಲಕ ಬೋಸುತನದ ಪರಮಾವಧಿಯ ತೋರುಸುತ್ತಾ ತನ್ನ ಬುದ್ದಿವಂತಿಕೆ/ಮಾತುಗಾರಿಕೆಯ ಮೆರೆತ್ತ ಒಪ್ಪಣ್ಣಂಗೆ ಎಷ್ಟು ಅಭಿನಂದನೆಗಳ ಸಮರ್ಪಿಸಿದರೂ ಸಾಲ. ಬೈಲಿನ ಕಟ್ಟಿ ಬೆಳಸಲೆ ಅವನ, ಅವನ ಜೊತೆಗಾರರ ಪರಿಶ್ರಮವ ನಾವೆಲ್ಲರೂ ಮೆಚ್ಚೆಕು. ಅವನ ಏವತ್ರಾಣ ಕೆಲಸಂಗಳ ಒಟ್ಟಿಂಗೆ ಪ್ರತಿವಾರವೂ ಒಂದು ಹೊಚ್ಚ ಹೊಸ ಲೇಖನವ ಬೈಲಿನ ಎದುರ ಮಡೆಕಾದ ಅನಿವಾರ್ಯತೆ ಅವಂಗಿದ್ರು, ಅದೆಷ್ಟು ಲಾಯಕಿಲ್ಲಿ ಎರಡು ವರ್ಷ ನಿರಂತರವಾಗಿ ಅದರ ನೆಡಸೆಂಡು ಬಯಿಂದ. ಅವನ ಎಲ್ಲ ಲೇಖನಂಗೊ ಒಂದು ಪುಸ್ತಕ ರೂಪಲ್ಲಿ ಹೆರ ಬರಲಿ. ಒಪ್ಪಣ್ಣ, ಬೈಲಿನ ಅಭಿವೃದ್ಧಿ ಬಗ್ಗೆ, ಒಂದು ಚೆಂದದ “ಬ್ಯಾಲೆನ್ಸ್ ಶೀಟ್”ನ ಕೊಡುತ್ತರ ಒಟ್ಟಿಂಗೆ, ಬೈಲಿನವರ ಎಲ್ಲೋರನ್ನು ಹೊಗಳಿ, ಧನ್ಯವಾದಂಗಳ ಸಮರ್ಪಿಸಿ, ಅವರಲ್ಲಿ ಸ್ಪೂರ್ತಿ ಹುಟ್ಟುಸುವ ಕೆಲಸ ಮಾಡಿದ್ದೆ. ಬೈಲು ಇನ್ನೂ ಬೆಳೆಯಲಿ, ಬೆಳೆತ್ತ್ತಾ ಇರಲಿ. ಕಂಪ್ಯೂಟರ್ ಕುಟ್ಟುತ್ತ ನಮುನೆಯ, ಇಷ್ಟರವರೆಗೆ ಬೈಲಿಂಗೆ ಬಾರದ್ದ ಹಾಂಗಿಪ್ಪ ಎಲ್ಲ ನಮ್ಮ ಪೈಕಿಯವರ ಹತ್ರೆ, ನಮ್ಮ ಬೈಲಿನ ಬಗ್ಗೆ ತಿಳುಸುವೊ, ಬೈಲು ಇನ್ನೂ ಬೆಳೆತ್ತ ಹಾಂಗೆ ಮಾಡುವೊ. ಮುಳಿಯದ ಭಾವಯ್ಯ ಹೇಳಿದ ಹಾಂಗೆ, ಕಂಪ್ಯೂಟರ್ ನೋಡ್ಳೆ ಸಿಕ್ಕದ್ದ, ನಮ್ಮವಕ್ಕೆ, ಬೈಲಿಲ್ಲಿದ್ದ ಲೇಖನಂಗೊ, ಪುಸ್ತಕ ರೂಪಲ್ಲಿ ಆದರೂ ಪ್ರಕಟವಾಗಿ ಸಿಕ್ಕುವ ಹಾಂಗೆ ಆಗಲಿ. ಒಳ್ಳೆದಾಗಲಿ. ಎನ್ನ ಶುಭ ಹಾರೈಕೆಗೊ.

  29. ತುಂಬಾ ಖೊಷಿ ಆತು,ಎರಡು ಒರುಷ ಕಳುದು ಹಿಂದೆ ನೋಡುವಾಗ ಬೈಲಿನೋರ ಸಾಧನೆ ಎದ್ದು ಕಾಣ್ತು. ಒಪ್ಪಣ್ಣನ ಈ ಪ್ರಯತ್ನ ಹೀಂಗೆಯೇ ಮುಂದುವರಿಯಲಿ…

  30. ನಮಸ್ಕಾರ ……
    ಬೈಲಿನ ಇಷ್ಟು ಲಾಯ್ಕಿಲಿ ಪ್ರೀತಿಲಿ ಬೆಳೆಶಿ, ನೆರೆಕರೆಯ ಇನ್ನೂ ಹತ್ತರೆ ಅಪ್ಪಾಂಗೆ ಮಾಡಿದ್ದು ಭಾರೀ ಕೊಶಿಯ ವಿಷಯ…ನಮ್ಮ ಅಭಿಪ್ರಾಯಂಗಳ ಹಂಚಿಗೊಮ್ಬಲೇ ಒಂದು ಮಾಧ್ಯಮವ ಕೊಟ್ಟ ಕೀರ್ತಿ ಒಪ್ಪಣ್ಣನ್ಗೆ ಮತ್ತೆ ಗುರಿಕ್ಕರ್ರಿನ್ಗೆ ಸಲ್ಲುತ್ತು !! ಇದು ಹೀಂಗೆ ಬೆಳೆಯಲಿ!! 😀

  31. ಒಪ್ಪಣ್ಣಾ,ಬೈಲಿನ ಸಾರ್ವಭೌಮನ ಸಿ೦ಹಾವಲೊಕನ ಸಮಯೋಚಿತ,ಸಮಯೋಜಿತ.ಸಾಗರದ ಮಧ್ಯದ ಸಣ್ಣ ಹನಿಗೋ ಒಟ್ಟು ಸೇರಿ ತನ್ನದೇ ಲಹರಿಲಿ ಹರಿವ ಸುಧೆಯ ಹಾಂಗೆ ಇಂದು ಬೈಲು ಬೆಳೆಯೆಕ್ಕಾರೆ,ಆ ಹನಿಗಳ ಒಟ್ಟುಸೇರಿಸುವ ಅಯಸ್ಕಾಂತ ಶಗುತಿಯಾಗಿ ನೀನು ನಿಂದದು ಮೂಲ ಕಾರಣ.
    ಎಲ್ಲಿಯೋ ಉದ್ಯೋಗ ಹೇಳಿ ತಿರುಗಿಗೊಂಡು, ಸಾವನ್ನಾರ ಬದುಕ್ಕುವ ಸಾಮಾನ್ಯ ಆದ ಎನ್ನ ಜೀವನ ಇಂದು ಹೊಸದಾರಿಯ ಹಿಡಿವಲೆ ಕಾರಣ ಆತು ನಿನ್ನ ಬೈಲು.ಅಗಣಿತ ತಾರಕೆಗಳ ಮಧ್ಯಲ್ಲಿ ಒಬ್ಬ ಪೂರ್ಣಚಂದ್ರಮ ಇಪ್ಪ ಹಾಂಗೆ ಅಸಂಖ್ಯ ಬ್ಲಾಗುಗಳ ಮಧ್ಯಲ್ಲಿ ನಿನ್ನ ಒಪ್ಪಂಗಳ ಬೈಲು ಹೇಳಿರೆ ತಪ್ಪಾಗ.ಗುರುಗಳ ಆಶೀರ್ವಾದದ ಶಗುತಿಯ ಮಾರ್ಗದರುಶನಲ್ಲಿ, ತನ್ನೊಡನೆ ಒಳುದವ್ವೂ ಸೇರಿ ಸಮಷ್ಟಿಲಿ ಹವ್ಯಕ ಸಾಹಿತ ಆರಾಧನೆ ಮಾಡೆಕ್ಕು ಹೇಳುವ ನಿನ್ನ ಉನ್ನತ ಉದ್ದೇಶಕ್ಕೆ ಕೈ ಜೋಡುಸುಲೆ ಅವಕಾಶ ಸಿಕ್ಕಿದ್ದರಿಂದ ಎನ್ನ ಜೀವನ ಸಾರ್ಥಕ ಆತು.
    ಬೈಲು ಬೆಳೆಯಲಿ,ಹವ್ಯಕ ಭಾಷೆಲಿ ಉತ್ಕೃಷ್ಟ ಸಾಹಿತ್ಯ ಸೃಷ್ಟಿ ಸಾಧ್ಯ ಇದ್ದು ಹೇಳುವ ಮಾತಿನ ಲೋಕಮುಖಕ್ಕೆ ಕಾಂಬ ಹಾಂಗೆ ಸ್ಥಾಯಿ ಆಗಿ ನಿಲ್ಲಲಿ.ಅಮೂಲ್ಯ ಲೇಖನಂಗೋ ಪುಸ್ತಕ ರೂಪಲ್ಲಿ ಬರಳಿ.ಕಂಪ್ಯೂಟರು,ಮೆಯಿಲಿನ ಅನುಕೂಳತೆಯಿಲ್ಲದ್ದ ನಮ್ಮ ನೆ೦ಟ್ರಿ೦ಗೂ ಹವ್ಯಕ ಸಾಹಿತ್ಯ ಮುಟ್ಟಲಿ. ಕೋಟಿ ಸಂಖ್ಯೆಲಿ ನೆಂಟರಿಷ್ಟರು ಬೈಲಿಂಗೆ ಬರಳಿ.
    ವರುಷ ಮುಗುದತ್ತು,ತನು,ಮನ ತುಂಬಿತ್ತು. ಹೊಸ ವರುಷ ಸಕಲ ಬಂಧುಗಳಿ೦ಗೂ ಹೊಸ ಹರುಷವ ತರಳಿ.ಇದು ಎನ್ನ ಹಾರೈಕೆ.

  32. ಸದ್ವಿಚಾರವ ಶುದ್ದಿ ಮಾಡುವದರೊಡನೆ
    ಲಕ್ಷಪಡೆಯೊಟ್ಟಿ೦ಗೆ ಲಕ್ಷ್ಯವಾ ಪಡೆವಲ್ಲಿಗೆ….
    ಬಿಡುವಿರದೆ ಎಡೆಬಿಡದೆ ಬುದ್ಧಿಶುದ್ಧಿಯ ನಡಿಗೆ
    ಸತ್ತ್ವನಿರ್ಮಿತಿಯೊಡನೆ ಪುಣ್ಯ‘ಕೋಟಿ’ಯ ಕಡೆಗೆ…

    1. ಇದು ಭಾರೀ ಲಾಯ್ಕಾಯ್ದು!!
      😀

  33. ಇದರ ಓದಿಯಪ್ಪಗ ಭಾರೀ ಸ೦ತೋಷವೂ ಆತು, ಬೇಜಾರವೂ ಆತು..
    ಸ೦ತೋಷ ಆದ್ದು ಎ೦ತಕೆ ಹೇಳಿರೆ ಮೇಲೆ ಶುದ್ದಿಲಿ ಹೇಳಿದ ವಿಷಯ೦ಗಳ ಓದಿ..
    ಬೇಜಾರು ಆದ್ದದು ಎನಗೆ ಈ ಬೈಲಿನ ಬಗ್ಗೆ ಗೊ೦ತಪ್ಪಲೆ ಇಷ್ಟು ತಡವಾತಾನೆ ಹೇಳಿ.. 😉
    ಇದರ ಯಶಸ್ಸಿನ ಹಿ೦ದೆ ಇಪ್ಪ ಎಲ್ಲರಿ೦ಗುದೆ ಹೃತ್ಪೂರ್ವಕ ಅಭಿನ೦ದನೆಗೊ…

    1. ಬೇಜಾರು ಮಾಡೆದ ಭಾವ,
      ಚೋಲು -ಡಬ್ಬಲ್ ಚೋಲಿಂಗೆ ಮಡುಗಿದ್ದನ್ನೇ,ಪುರುಸೋತ್ತಪ್ಪಗ ಸೊಲುದರೆ ಆತು,ಸ೦ತೋಷಲ್ಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×