ಇಷ್ಟನ್ನಾರವೂ ಬೇರೆ ಧರ್ಮವ ಅನುಸರಿಸಿದವು; ಈಷ್ಟರುದೇ ಹಾಂಗೇ!

ಮೊನ್ನೆ ಪಾರೆಅಜ್ಜಿಯಲ್ಲಿ ಬ್ರಹ್ಮಕಲಶದ ಗೌಜಿ ಜೋರಿದ್ದತ್ತು. ಎಲ್ಲೋರುದೇ ಮಲ್ಲಿಗೆ ಕೊಯಿವಲೆ ಹೋದರೆ ಎಲ್ಲಿಂದ ಸಿಕ್ಕುದು! ಹಾಂಗಾಗಿ ಪೇಟೆಂದ – ಬಾಯಮ್ಮ ಕಟ್ಟಿಮಡಗಿದ ಮಾಲೆ – ತಪ್ಪೊ° ಹೇದು ಬೈಲಿಂದ ಹಲವೂ ಜೆನ ಹೋಗಿತ್ತಿದ್ದವು.
ಊರೊಳ ಆರಿಂಗೆ ಮಲ್ಲಿಗೆ ಸಿಕ್ಕದ್ದರೂ ಬಾಯಮ್ಮಂಗೆ ಸಿಕ್ಕುತ್ತು. ಏಕೇದರೆ, ಅದಕ್ಕೆ ಊರಿಂದ ಸಿಕ್ಕದ್ದ ದಿನ ಓ ಅಲ್ಲಿ ಉಡುಪ್ಪಿ ಹೊಡೆಂದ ಸಿಕ್ಕುತ್ತು. ಉಡುಪಿಂದ ಬಾರದ್ದ ದಿನ ಊರೊಳಂದ ಸಿಕ್ಕುತ್ತು. ಹಾಂಗೂ ಹೀಂಗೂ ಮಾಡಿ ಬಾಯಮ್ಮ ಅದಕ್ಕೆ ಖರ್ಚಾವುತ್ತಷ್ಟು ಹೂಗು ತಂದು ಮಡಗುತ್ತು.

ಆದರೆ, ಮೊನ್ನೆ ಅದಕ್ಕೇ ಬೇಕಾದಷ್ಟು ಸಿಕ್ಕಿದ್ದಿಲ್ಲೇಡ! ಏಕೆ – ಅದರ ಚರ್ಚಿಲಿ ಹಬ್ಬ ಬಂದು ಹೂಗಿನ ಖರ್ಚು ಜಾಸ್ತಿ ಆಯ್ದಾಡ. ಅದೆಂತರ ಹಬ್ಬ ಅದರದ್ದು ಈಗ – ಹೇದು ಬೋಚಬಾವ° ಕೇಳುಗು. ಆದರೆ ಬೈಲಿಂಗೆ ಹೇಳುಸ್ಸು ಕೇಳಿ ಅರಡಿಗು – “ಶುಭ ಶುಕ್ರವಾರ” ಹೇಳ್ತ ಹಬ್ಬ.

~

ಮಧ್ಯಕಾಲಲ್ಲಿ, ಮಧ್ಯಪ್ರಾಚ್ಯಲ್ಲಿ ಮದ್ಯದ ಅಮಲಿಲಿ ಮೈಮರದಿಪ್ಪಾಗ – ಪ್ರಪಂಚವ ಉದ್ದರುಸುಲೆ ಹೇದು ಒಬ್ಬ° ಸಂತ° ಬಂದನಾಡ. ಬಂದ° – ಹೇದರೆ ಬಪ್ಪನ್ನಾರ ಎಲ್ಲಿ ಇತ್ತಿದ್ದ° ಹೇದು ಆರಿಂಗೂ ಅರಡಿಯ. ಕೆಲವು ಜೆನ ಹೇಳ್ತವು ಭಾರತಕ್ಕೆ ಬಂದು ಕಾಶ್ಮೀರಲ್ಲಿ ಋಷಿಗಳ ಹತ್ತರಂದ ಜೀವನಾನುಭವ ಪಡಕ್ಕೊಂಡಿದ° ಹೇದು – ಅದರ ಕಂಡವ° ಇಲ್ಲೆ. ಆಯಿಪ್ಪಲೂ ಸಾಕು, ಆ ಕಾಲಲ್ಲಿ ಭಾರತ ಎಲ್ಲೋರ ಆಧ್ಯಾತ್ಮಿಕ ಕೇಂದ್ರ ಆಗಿದ್ದತ್ತು ಇದಾ!
ಅಂತೂ, ಒರಿಶ ಮೂವತ್ತು ಅಪ್ಪಾಗ ಈ ವೆಗ್ತಿ ಆ ಊರಿಲಿ ಸಂತನ ಹಾಂಗೆ ಕಂಡತ್ತಾಡ. ತಾನು ದೇವರ ಮಗ° ಹೇಳಿಯೂ, ಜೆನಂಗೊ ಪರಸ್ಪರ ಪ್ರೀತಿಸೇಕು ಹೇಳಿಯೂ, ಶಾಂತಿಯೇ ಸ್ವರ್ಗಲೋಕಲ್ಲಿಪ್ಪ ತನ್ನ ಅಪ್ಪನ ಕಾಂಬ ದಾರಿ – ಹೇಳಿಯೂ ಪ್ರವಚನ ಕೊಟ್ಟತ್ತಾಡ.
ಯಥೇಷ್ಟ ಸಂತಂಗಳೂ, ಅವರ ಪ್ರವಚನಂಗಳನ್ನೂ ಬೇಕಾಬಿಟ್ಟಿ ಕೇಳಿ, ಬೇಕಾದೋರು ಸ್ವೀಕರುಸುತ್ತ ಸ್ವಾತಂತ್ರ ಇರ್ಸು ನಮ್ಮ ಭಾರತಲ್ಲಿ ಮಾಂತ್ರ. ಹೋಗಿಹೋಗಿ ಆ ಯೆಹೂದಿಗಳ ಎಡಕ್ಕಿಲಿ ಹೀಂಗೆಲ್ಲ ಹೇದರೆ ಅವು ಬಿಡ್ತವೋ? – ಇದೇವದೋ ಪ್ರಾಂದು ಹೇದು ಅದರ ಬಲುಗಿ ಶಿಲುಬೆಗೆ ಕಟ್ಟಿದವು.
ಕೂಡಿಸು ಗುರ್ತದ ಆಕಾರದ ಮರದ ಶಿಲುಬೆಗೆ ಕೈಕ್ಕಾಲು ಕಟ್ಟಿ, ಆಣಿ ಬಡುದು ಸಾವನ್ನಾರ ನೇಲ್ಸಿದವು ಆ ಸಂತನ! ಸಾವ ಸಂದರ್ಭಲ್ಲಿಯೂ, ಆ ಬೇನೆಲಿಯೂ – “ಈ ಜೆನಂಗೊ ಎಂತ ಮಾಡ್ತವು ಹೇದು ಅವಕ್ಕೇ ಅರಡಿಯ. ಅವರ ಕ್ಷಮಿಸು” – ಹೇದು ಸ್ವರ್ಗಲ್ಲಿಪ್ಪ ಅದರಪ್ಪನತ್ರೆ ಹೇಳಿತ್ತಾಡ! ಶಾಂತಿದೂತಂಗೆ ದಾರುಣ ಅಂತ್ಯ; ಆ ಶಿಲುಬೆಲಿ ಅದು ಸತ್ತತ್ತು. ಆ ಸಂತನ ಅನುಯಾಯಿಗಳ ಧರ್ಮಕ್ಕೆ ಅತ್ಯಂತ ಬೇಜಾರದ ಘಟನೆ ನೆಡದ ಆ ದಿನವ “ಶುಭ ಶುಕ್ರವಾರ” ಹೇಳ್ತವು. ಎಂತಕೆ ಹೇದು ಒಪ್ಪಣ್ಣಂಗರಡಿಯ!

ಅದಿರಳಿ. ಆ ಸಂತ ಸತ್ತ ಮತ್ತೆ ಅಲ್ಲೇ ಹತ್ತರೆ ಒಂದು ಗುಹೆ ಒಳಾಂಗೆ ಕೊಂಡೋಗಿ, ಅಲ್ಲಿ ಸಮಾಧಿ ಮಾಡಿ, ಮಣ್ಣು ಮುಚ್ಚಿ, ಗುಹೆಯ ಹೆರಾಂದ ಕಲ್ಲಿನ ಬಾಗಿಲು ಭದ್ರ ಮಾಡಿಕ್ಕಿ ಆ ಊರೋರು ಹೋದವು. ಅದರ ಕತೆ ಮುಗುದೇ ಹೋತು – ಹೇದು ಗ್ರೇಶಿ ಪುನಾ ಮದ್ಯದ ಅಮಲಿಲಿ ತೂಗಿಂಡು ಇತ್ತಿದ್ದಾವು. ಶುಭ ಶುಕ್ರವಾರ ನೆಡದ ಆ ಘಟನೆಂದ ಮತ್ತೆ ಮೂರ್ನೇ ದಿನಕ್ಕೆ – ನಮ್ಮ ಭಟ್ಟಮಾವಂದ್ರು ಬೂದಿಕೂಡ್ತ ಹೊತ್ತಿಂಗೆ – ಹೇದರೆ, ಆಯಿತ್ಯವಾರದ ದಿನ – ಆ ಗುಹೆಯ ಬಾಗಿಲಿಂದ ಹೆರಾಂಗೆ ಅದೇ ಸಂತ ನಿಂದುಗೊಂಡು ಕಂಡತ್ತಾಡ; ತಲೆಯ ಹಿಂದೆ ಒಂದು ಪ್ರಭಾವಳಿಯ ಒಟ್ಟಿಂಗೆ.
ಆ ದಿನ ನೋಡಿದ ಎಲ್ಲೋರಿಂಗೂ ಆಶೀರ್ವಾದ ಮಾಡಿಕ್ಕಿ – ಚೆಂದಕಿರಿ – ಹೇದು ಸ್ವರ್ಗಲೋಕದ ಅಪ್ಪನಮನೆಗೆ ಹೋತಾಡ ಆ ಸಂತ. ಈ ಪುನರ್ಜನ್ಮದ ದಿನಕ್ಕೆ “ಪುನರುತ್ಥಾನದ” ದಿನ – ಹೇದು ಆಚರಣೆ ಮಾಡ್ತವಾಡ ಅದರ ಅನುಯಾಯಿಗೊ. ಪ್ರತಿ ಒರಿಶ ಮಾರ್ಚಿಲಿ ರಾತ್ರಿ-ಹಗಲಿನ ದಿನಾಮಾನ ಒಂದೇ ನಮುನೆ ಇರ್ತಲ್ಲದೋ – ಆ ದಿನದ ಮತ್ತಾಣ ಹುಣ್ಣಮೆ ಕಳುದ ಆಯಿತ್ಯವಾರ ಈ ದಿನದ ಆಚರಣೆ ಮಾಡ್ತವಾಡ.
ಆ ಸಂತ ಜೀವಂತ ಇಪ್ಪಾಗ ದೊಡ್ಡ ಪೊನ್ನಂಬ್ರ ಆಯಿದಿಲ್ಲೆ, ಆದರೆ ಅದು ಸತ್ತ ಮತ್ತೆ ಅದಕ್ಕೆ ಅನುಯಾಯಿಗೊ ಬೆಳದವಾದ! ಅದರ ಪುನರುತ್ಥಾನ ನೋಡಿದೋರು, ಮದಲು ಪ್ರವಚನಂಗಳ ಕೇಳಿದೋರು, ಅದರ ಮಾತುಗೊ ಅರ್ಥ ಆದೋರು – ಕ್ರಮೇಣ ಅದರ ಮಾತುಗಳ ಅನುಸರುಸಲೆ, ಅದು ನಿಜವಾದ ದೇವರ ಮಗನೇ – ಹೇದು ನಂಬಲೆ ಸುರು ಮಾಡಿದವಾಡ. ಕ್ರಮೇಣ ಆ ಸಂತನ ನೆಂಪಿಲಿ ಒಂದು ಧರ್ಮವೇ ಹುಟ್ಟಿತ್ತು. ಆ ಸಂತ ಯೇಸು; ಆ ಧರ್ಮ ಕಿರಿಸ್ತಾನದ ಪುರ್ಬುಧರ್ಮ.

ನೋಡಿಂಡಿದ್ದ ಹಾಂಗೆ ಆ ಊರ ಜೆನಂಗಳ ಪೈಕಿ ಪುರ್ಬುಧರ್ಮವ ಅನುಸರುಸುವೋರು ಹೆಚ್ಚಿದವಡ. ಆ ಊರಿನ ರಾಜಂಗೂ ಹಿತ ಆತು. ರಾಜನೇ ಒಂದು ಧರ್ಮವ ಅನುಸರುಸಿರೆ ಮತ್ತೆ ಪ್ರಜೆಗೊ ಬದಲುಲಿದ್ದೋ – ಎರಡು ಮಾತಿಲ್ಲೆ; ರಾಜನ ಧರ್ಮಕ್ಕೆ ಎಲ್ಲೋರುದೇ ಬದಲಿದವು. ನಮ್ಮ ಭಾರತಲ್ಲಿ ಆದರೆ ಪ್ರಜೆಗಳ ಧರ್ಮ ಅವರ ಇಷ್ಟದು, ರಾಜನ ಧರ್ಮ ಅದರ ಇಷ್ಟದ್ದು – ಸ್ವಾತಂತ್ರ್ಯ ಇದ್ದತ್ತು. ಅತ್ಲಾಗಿ ಅದಿತ್ತಿಲ್ಲೆ. ರಾಜ ಧರ್ಮ ಬದಲುಸಿದರೆ ಇಡೀ ದೇಶವೇ ಬದಲಿತ್ತು.

~

ಈ ಸಂತ ಬರೆಕ್ಕಾರೆ ಮೊದಲು ಗ್ರೀಕ್ ದೇಶಲ್ಲಿ ಒಂದು ಧರ್ಮ ಇದ್ದತ್ತು. ನಮ್ಮ ಹಾಂಗೇ ಅಗ್ನಿ, ಪ್ರಕೃತಿ, ದೇವತೋಪಾಸನೆ ಮಾಡಿಗೊಂಡು ಇತ್ತಿದ್ದವು. ಆ ಧರ್ಮಲ್ಲಿ ಇಷ್ತಾರ್ – ಹೇದು ಒಂದು ದೇವತೆ ಇದ್ದತ್ತಾಡ. ಸಂತಾನೋತ್ಪತ್ತಿಯ ದೇವತೆ ಅದು. ಪ್ರಕೃತಿಯ ಎಲ್ಲಾ ಜೀವಿಗೊ ನವಚೈತನ್ಯಲ್ಲಿ ಕಾಂಬ – ಆ ಊರಿನ ವಸಂತದ ಸಮೆಯಲ್ಲಿ ಆ ಇಷ್ತಾರ್ ದೇವತೆಯ ಜಾತ್ರೆ ಮಾಡಿಗೊಂಡು ಇತ್ತಿದ್ದವಾಡ. ಸಂತಾನೋತ್ಪತ್ತಿಯ ಪ್ರತೀಕ ಆದ ಮೊಟ್ಟೆಗಳ ಇಡೀ ಮನೆಲಿ ಮಡಗಿ, ಅಲಂಕಾರ ಮಾಡಿಗೊಂಡು ಗವುಜಿ ಮಾಡುಸ್ಸು ಆ ದಿನದ ವಿಶೇಷ.

ಕ್ರಮೇಣ ಗ್ರೀಕ್ ದೇಶಲ್ಲಿ ಕಿರಿಸ್ತಾನದ ಪುರ್ಬುಧರ್ಮ ಬಂತಲ್ಲದೋ – ಸುಮಾರು ಆಚಾರ ಸಂಕರ ನೆಡೆದತ್ತು. ಹಳೆಕಾಲದ ಇಷ್ತಾರು ಹಬ್ಬವೂ, ಹೊಸ ಧರ್ಮದ “ಪುನರುತ್ಥಾನ ದಿನ”ವೂ ಕಶಿಕಟ್ಟಿದ ಹಾಂಗಾಗಿ, ಒಂದು ನಮುನೆ ಬೆರಕ್ಕೆ ಆಚರಣೆ ಆತು ಆ ದಿನ!

ಆ ಆಯಿತ್ಯವಾರ ಯೇಸುವಿನ ಪುನರುತ್ಥಾನ ಆದ್ಸು. ಮೂರು ದಿನ ಹಿಂದಾಣ ಶುಕ್ರವಾರ ಶಿಲುಬೆಗೆ ಕುಟ್ಟಿ ನೇಲ್ಸಿದ್ದು. ಪುನರುತ್ಥಾನ ಆದ ದಿನ ಮೊಟ್ಟೆ ಮಡಗಿ ಅಲಂಕಾರ ಮಾಡೇಕು – ಹೇದು ರೂಢಿಲಿ ಬಂತು. ಮೂಲ ಗೊಂತಿಲ್ಲದ್ದ ಪುರ್ಬುಗೊ ಬಾಯಮ್ಮಂಗಳೂ ಅದನ್ನೇ ಆಚರಣೆ ಮಾಡಿಗೊಂಡು ಬಂದವು, ಇಂದಿನವರೆಗೂ.

~

ಪುರ್ಬೊಗೊ ಅನುಕರಣೆ ಮಾಡ್ಳೆ ಬಲ.
ನಮ್ಮ ದೇಶಕ್ಕೆ ಬಂದ ಮತ್ತೆ ನಮ್ಮ ನೂರಾರು ಸಾವಿರಾರು ಆಚರಣೆಗಳ ಕದ್ದಿದವು. ಬೈಲಕರೆ ಇಂಗ್ರೋಜಿಲಿ ಶುದ್ಧಕಲಶೋತ್ಸವ ಆಚರಣೆ ಮಾಡಿದ ಸಂಗತಿಯ ಬಗ್ಗೆ ನಾವು ಅಂದೊಂದರಿ ಮಾತಾಡಿದ್ದದು ನೆಂಪಿದ್ದಲ್ಲದೋ ನಿಂಗೊಗೆ?
ಈಗ ಆ ಇಂಗ್ರೋಜಿಲಿ ನವರಾತ್ರಿಗೆ ವಾಹನಪೂಜೆ, ದೀಪಾವಳಿಗೆ ಅಂಗುಡಿ ಪೂಜೆ – ಇತ್ಯಾದಿಗಳ ಮಾಡ್ತವಾಡ. ಕಾಣಿಕೆ ಡಬ್ಬಿ ಹತ್ತರೆ ನಿಂದುಗೊಂಡು ಪಾದ್ರಿ ವಿಭೂತಿ ಪ್ರಸಾದ ಕೊಡ್ತಾಡ. ಮಹಾಪೂಜೆ,ಬಲಿಪೂಜೆ, ರಂಗಪೂಜೆಗೊ, ಹೂಗಿನಪೂಜೆ – ಇತ್ಯಾದಿ ಹಲವು ಸೇವೆಗೊ ಸುರುಮಾಡಿದ್ದವಾಡ.
ತೆಂಕ್ಲಾಗಿ ಹೋದರೆ ತ್ರಿಶೂರು ಪೂರಂ ನ ಹಾಂಗೇ ಇಪ್ಪ ಪೂರಂಗಳ ಮಾಡ್ತವಾಡ ಇಂಗ್ರೋಜಿಲಿ. ಶಿಲುಬೆ ಹೊತ್ತ ಕೆಂಪುಕೊಡಿ ಏರ್ಸಿ, ಆನೆಗಳ ನಿಲ್ಲುಸಿ ಅದರ ಎದುರು ಚೆಂಡೆಪೆಟ್ಟು ಬಾರ್ಸಿ ಚೆಂಡೆ, ವಾದ್ಯ ವಾಲಗಂಗಳ ಸುತ್ತು ನೆಡೆಶಿ ಚೆಂದಕ್ಕೆ ಆಯನದ ಹಾಂಗೆ ಮಾಡ್ತವು. ಬಾಯಮ್ಮಂಗೊ ಎಲ್ಲ ನಮ್ಮೋರ ಹೆಮ್ಮಕ್ಕಳ ಹಾಂಗೆ ಸೀರೆ ಸುತ್ತಿ ರಂಗೋಲಿ ಹಾಕಿ, ಪೂಕಳ ತುಂಬುಸಿ ನಾಟ್ಯ ಮಾಡ್ತವಾಡ. ಅದರ ಮಧ್ಯಲ್ಲಿ ಹಿತ್ತಾಳಿಯ ಕಾಲುದೀಪ ಮಡಗಿ ಹೂಗು ಹಾಕುತ್ತವಾಡ.
ಶಿಲುಬೆ ಹತ್ತಿದ ಮೂಲ ಸಂತಂಗೆ ಇದೆಲ್ಲ ಅರಡಿಗಾಗಿತ್ತೋ?

ಒಂದು ಧರ್ಮದ ಆಚರಣೆಗಳ “ಅನಿಷ್ಟ” ಹೇದು ನೆಗೆಮಾಡ್ತರೆ, ಅದರನ್ನೇ ನೊಣ ಪ್ರತಿ ತೆಗದು ತನ್ನ ಧರ್ಮಲ್ಲಿ ಆಚರಣೆ ಮಾಡಿರೆ ಹೇಂಗೆ ಸರಿ ಅಪ್ಪದು?
ಗ್ರೀಕ್ ಧರ್ಮದ ಹಬ್ಬವ ಆಚರಣೆ ಮಾಡುವ ಮೊದಲು ಆ ಧರ್ಮವನ್ನೂ ಅನಿಷ್ಟ ಹೇದು ನೆಗೆಮಾಡಿಕ್ಕಲ್ಲದೋ? ನಮ್ಮ ಸನಾತನ ಧರ್ಮದ್ದನ್ನೂ ಮೂಡನಂಬಿಕೆಗೊ ಹೇಳಿಕ್ಕಿ ಈಗ ನಾವು ಮಾಡುವ ಆಚರಣೆಗಳನ್ನೇ ಅವರ ಆಚಾರಕ್ಕೆ ತಕ್ಕ ಹಾಂಗೆ ಮಾಡಿ ವೇಷ ಕಟ್ಟುದು ಎಂತಕೆ?
ಯಾವ ಧರ್ಮವೇ ಆಗಲಿ ಅದಕ್ಕೆ ಅದರದ್ದೇ ಸ್ವಂತಿಕೆ ಇರೆಕ್ಕು. ಇನ್ನೊಬ್ಬನ ಎಳಕ್ಕೊಂಬಲೆ ಬೇಕಾಗಿ ಅವರ ಧರ್ಮದ್ದರ ಆಚರಣೆ ಮಾಡಿ ಪರಂಪರೆಂದ ನೆಡಕ್ಕೊಂಡು ಬಂದದರ ಬೇಕಾಬಿಟ್ಟಿ ಮಾಡ್ಲಾಗ ಅಲ್ಲದೋ?
ಈಷ್ಟರೇ ಆಗಲಿ, ಆಯನವೇ ಆಗಲಿ – ಇನ್ನೊಂದು ಧರ್ಮದ್ದರ ಕದ್ದು ಆಚರಣೆ ಮಾಡ್ತ ಬದಲು ಆ ಧರ್ಮಕ್ಕೇ ಸೇರಿ ಬಿಡ್ಳಾಗದೋ? ಎಂತ ಹೇಳ್ತಿ?

~

ಒಂದೊಪ್ಪ: ಧರ್ಮವ ಅವಹೇಳನ ಮಾಡಿ ಮತ್ತೆ ಅದನ್ನೇ ಒಪ್ಪಿಗೊಂಬವಕ್ಕೆ ಆ ಧರ್ಮಕ್ಕೆ, ಆ ಧರ್ಮವ ಆಚರಣೆ ಮಾಡ್ತವಕ್ಕೆ ಮೊದಲೇ ಗವುರವ ಕೊಡ್ಲೆ ಎಡಿಯದಾ?

ಒಪ್ಪಣ್ಣ

   

You may also like...

5 Responses

 1. S.K.Gopalakrishna Bhat says:

  ಅವು ಎಂತ ಬೇಕಾದರೂ ಮಾಡಿಕೊಳ್ಳಲಿ. ನಮ್ಮದರ ಅನುಕರಣೆ ಮಾಡಿದರೆ ಒಳ್ಳೇದೆ . ಅವರಲ್ಲಿ ಅಂತಹ ನಮನೀಯತೆ [flexibility) ಇದ್ದು. ನಮ್ಮಲ್ಲೇ ಕೆಲವರಿಂಗೆ ಎಂತದೂ ಬೇಡ ಹೇಳಿ ಆಯಿದು. ನಾವಾಗಲಿ ,ಇನ್ನೊಬ್ಬರಾಗಲಿ ನಮ್ಮದರ ಅವಹೇಳನ ಮಾಡುಲಾಗ.

 2. ಸತ್ಯವಾದ ಮಾತು ಒಪ್ಪಣ್ಣ…

 3. ಬೊಳುಂಬು ಗೋಪಾಲ says:

  ಅವು ಜಾತಕ ನಂಬುತ್ತವು. ಕಟ್ಟಡ ಕಟ್ಟುವಗ ವಾಸ್ತುವಿನ ಬಗ್ಗೆ ನೋಡ್ತವು. ಇದೆಲ್ಲ ಅವಕ್ಕುದೆ “ಹೌದು ನಿಜ” ಹೇಳಿ ಕಾಣ್ತು. ಆದರೆ ನವಗೆ ನಮ್ಮ ಕ್ರಮಂಗಳ ಬಗ್ಗೆ ನಂಬಿಕೆ ಹೋವ್ತಾ ಇಪ್ಪದು ಬೇಜಾರಿನ ಸಂಗತಿ. ಭಗವಾನ್ ಹೇಳಿ ಹೆಸರು ಮಡಗೆಂಡು ಭಗವಂತನ ಮರೆತ್ತವು ಬುದ್ದಿವಂತ ಕೆಲವು ಜೆನಂಗೊ. ಹುಂ.

 4. ಚೆನ್ನೈ ಭಾವ° says:

  ಅವಕ್ಕೆ ಎಂತಾರು ಮಾಡೆಕು ಹೇದು ಇದ್ದು. ನಮ್ಮವಕ್ಕೆ ಮಾಡ್ತದರ ಬಿಡುಸುದು ಹೇಂಗೆ ಹೇದು ಆವ್ತಾ ಇದ್ದು. ಕಣ್ಣಿಂಗೆ ಕಾಂಬ ಸತ್ಯವ ಪರಾಂಬರಿಸಿಯೂ ನೋಡದ್ದೆ ಕಣ್ಣೀರಾಕಿ ಹೇದ್ದರ ಹೃದಯ ಕರಗಿ ನಂಬುತ್ತರ ನೋಡಿರೆ ನಮ್ಮತನವ ಬಿಟ್ಟು ಕೊಟ್ಟು ಏವುದೂ ಬೇಡದ ಗೋಸಾಯಿಗಳಾಂಗೆ ಅಪ್ಪಲೆ ಹೋಪದರೆ ನೋಡಿರೆ ಕಾಲಚಕ್ರ ತಿರುಗುತ್ತು ಹೇಳ್ತದಟ್ಟೇ ಉತ್ತರ ನಿಲ್ಲುತ್ತು. ಹರೇ ರಾಮ. ಒಂದೊಪ್ಪ ಚಿಂತನೆ ಲಾಯಕ ಆಯಿದು.

 5. ajakkala girisha bhat says:

  ಜಾತಿ ಗಣತಿಲಿ ಮಾತೃಭಾಷೆ ಯಾವದು ಬರೆಶೆಕ್ಕು ಹೇಳಿ ಈ ಬೈಲಿಲಿ ಚರ್ಚೆ ಆಯಿದೋ? ಆನು ಇತ್ತೀಚೆಗೆ ನೋಡಿದ್ದಿಲ್ಲೆ. ಕ್ಷಮಿಸೆಕ್ಕು. ಇಂದ್ರಾಣ ಉದಯವಾಣಿಲಿ ಕನ್ನಡ ಭಾಷೆ ಹೇಳಿ ಬರೆಶೆಕ್ಕು ಹೇಳಿ ಆರೋ ಹೇಳಿದ್ದ ಬಗ್ಗೆ ವರದಿ ಇದ್ದು. ಹವಿಕ ಅಲ್ಲದ್ರೆ ಹವ್ಯಕ ಹೇಳಿ ಬರೆಶುಲೆ ಅಕ್ಕನ್ನೆ. – ಅಜಕ್ಕಳ ಗಿರೀಶ ಭಟ್ಟ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *