Category: ಒಪ್ಪಂಗೊ

’ಶ್ರೀ’ರಾಗವಂ, ಶ್ರೀ ‘ರಾಘವಂ’…! 30

’ಶ್ರೀ’ರಾಗವಂ, ಶ್ರೀ ‘ರಾಘವಂ’…!

ಶ್ರೀರಾಗದ ಹಾಂಗಿರ್ತ ಸುಂದರ ರಾಗದ ಕಂಪನ್ನೂ, ಶ್ರೀರಾಘವನ ಹಾಂಗಿರ್ತ ಸುಂದರ ಮೂರ್ತಿಯ ನೆಂಪನ್ನೂ ಚಿರಕಾಲ ಒಳಿವ ಹಾಂಗೆ ಮಾಡಿದ ಸಂಗೀತ ಬ್ರಹ್ಮನ ನಾವು ಯೇವತ್ತಿಂಗೂ ಮರವಲಾಗ – ಹೇಳ್ತದು ಕುಡ್ಪಲ್ತಡ್ಕ ಭಾವನ ಅಭಿಪ್ರಾಯ.

ಭಾವನೆ ಇದ್ದರೆ ಸಂಭಾವನೆಯೇ ಬೇಕಾಗ…! 28

ಭಾವನೆ ಇದ್ದರೆ ಸಂಭಾವನೆಯೇ ಬೇಕಾಗ…!

ಬೈಲಿಲಿ ನಿತ್ಯವೂ ಹೊಸ ಹೊಸ ಶುದ್ದಿಗೊ, ಹೊಸ ಹೊಸ ಒಪ್ಪಂಗೊ.
ಒಂದೊಂದು ಶುದ್ದಿಲಿ ಒಂದೊಂದು ಸತ್ವ ಇರ್ತು, ಜೀವನಾನುಭವ ಇರ್ತು, ತೂಕ ಇರ್ತು. ಒಂದೊಂದು ಒಪ್ಪಲ್ಲಿ ಆ ವೆಗ್ತಿಗೆ ಅದು ಅರ್ತ ಆದ ಭಾವನೆಗೊ ಇರ್ತು.
ನಿತ್ಯವೂ ಓದಲೆ ಹೊಸತ್ತಿದ್ದೇ ಇರ್ತು; ನಿತ್ಯವೂ ಬೈಲಿಲಿ ಗಲಗಲ!
ಎಲ್ಲೋರಿಂಗೂ ಇದೊಂದು ನಿತ್ಯ ಮನೆಜೆಂಬ್ರ ಅಲ್ಲದೋ!

ನೂರ್ಕಾಲ ಹರಸುವ ‘ತ್ರಿಕಾಲ ಪೂಜೆ’… 43

ನೂರ್ಕಾಲ ಹರಸುವ ‘ತ್ರಿಕಾಲ ಪೂಜೆ’…

ಕಷ್ಟನಷ್ಟಂಗೊ ಸಂಪೂರ್ಣ ದೂರ ಆಗಿ, ಕೃಷಿ, ವ್ಯವಹಾರ, ಆಯುರಾರೋಗ್ಯ, ಐಶ್ವರ್ಯ ನೂರ್ಕಾಲ ಬೆಳಗಲಿ ಹೇಳ್ತ ಪ್ರಾರ್ಥನೆಗೇ ಈ ತ್ರಿಕಾಲ ಪೂಜೆ ಮಾಡುದಡ.
ಬಾಲಾತ್ರಿಪುರಸುಂದರಿ, ವನದುರ್ಗೆ, ಸ್ವಯಂವರ ಪಾರ್ವತಿ – ಇವು ಮೂರು ಶೆಗ್ತಿಗೊ ಒಂದಾಗಿ ವಿದ್ಯೆ, ಅಭಯ, ಸಂಸಾರಂಗಳ ಎಲ್ಲ ತೊಂದರೆಗಳ ದೂರಮಾಡಿ ಕುಟುಂಬಕ್ಕೆ ಉತ್ತರೋತ್ತರ ಶ್ರೀರಕ್ಷೆ ಸಿಕ್ಕಲಿ – ಹೇಳಿ ಬೇಡಿಗೊಂಬದು ಹೇಳಿ ಆಚಮನೆ ದೊಡ್ಡಣ್ಣ ವಿವರಣೆ ಮುಗುಶಿದ.

ಮಾಷ್ಟ್ರುಮಾವನ ಮಗಳು ಸಣ್ಣ ಇಪ್ಪಾಗ ‘ಚೆಸ್ ಆಡಿದ’ ಶುದ್ದಿ..! 49

ಮಾಷ್ಟ್ರುಮಾವನ ಮಗಳು ಸಣ್ಣ ಇಪ್ಪಾಗ ‘ಚೆಸ್ ಆಡಿದ’ ಶುದ್ದಿ..!

ಎದುರಾ ಎದುರು ಮೋರೆ ಹಾಕಿಂಡು, ಮವುನಲ್ಲಿ ಕೂದಂಡು ಏಕಾಗ್ರಚಿತ್ತಲ್ಲಿ ಕರಿಬೆಳಿ ಬೋರ್ಡಿಲಿ – ಇರ್ತ ಕಾಲಾಳುರಥಮಂತ್ರಿಗಳನ್ನೇ ಚಿಂತನೆ ಮಾಡ್ತ ಮನಸ್ಸಿನ ಆಟವೇ ಚದುರಂಗ ಅಲ್ಲದೋ.

ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ! 32

ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ!

ಅಜ್ಜ ಮತ್ತೊಂದರಿ ನಮ್ಮ ಊರಿಲೇ ಹುಟ್ಟಿಬಪ್ಪ ಹಾಂಗೆ ಆಗಲಿ.
ಮಹಾಜನತೆಗೆ ಕೊಟ್ಟ ಅಪಾರ ಕೊಡುಗೆ ಇನ್ನೂ ವೃದ್ಧಿ ಆಗಲಿ.
ನಮ್ಮೆಲ್ಲರನ್ನೂ ಮತ್ತೊಂದರಿ ಮುನ್ನಡೆಶಲಿ – ಹೇಳ್ತದು ಬೈಲ ಸಮಸ್ತರ ಪರವಾಗಿ ನಮ್ಮೆಲ್ಲರ ಆಶಯ..

ಪೇಟೆಕೂಸು ನೂಡುಲ್ಸು ಬಿಟ್ಟು ಸೇಮಗೆ ತಿಂಬಲೆ ಸುರುಮಾಡಿತ್ತಡ! 48

ಪೇಟೆಕೂಸು ನೂಡುಲ್ಸು ಬಿಟ್ಟು ಸೇಮಗೆ ತಿಂಬಲೆ ಸುರುಮಾಡಿತ್ತಡ!

ಎಷ್ಟೇ ದೂರಿದರೂ, ಎಷ್ಟೇ ಬೈದರೂ – ನಮ್ಮ ಸಮಾಜ ಇಂದಿಂಗೂ ಪೂರ್ತಿ ಹಾಳಾಯಿದಿಲ್ಲೆ.
ಪಾತಿಅತ್ತೆಯ ಹಾಂಗೆ ಸಂಸಾರರಥವ ಹೊಂದುಸಿ ನೆಡೆತ್ತ ಮನಸ್ಥಿತಿಯ ಹೆಮ್ಮಕ್ಕೊ / ಕೂಸುಗೊ ಇದ್ದೇ ಇದ್ದವು.
ಹಾಂಗಿಪ್ಪ ಸುಮಾರು ಜೆನರ ಹತ್ತರಂದ ಕಂಡೂ ಗೊಂತಿದ್ದು ಒಪ್ಪಣ್ಣಂಗೆ.
ಆ ಪಟ್ಟಿಲಿ ಈ ಪ್ರಶಾಂತನ ಹೆಂಡತ್ತಿಯೂ ಸೇರಿತ್ತು. ಆ ಲೆಕ್ಕಲ್ಲಿ ಕೊಶೀ ಆತು.

ಕಮ್ಮಿನಿಷ್ಟೆಯ ಪ್ರಚಾರಪ್ರಿಯನ ದೇವಸ್ಥಾನ ಎದುರೇ ಹಣ್ಣುಕಾಯಿ ಮಾಡಿದವಡ..! 49

ಕಮ್ಮಿನಿಷ್ಟೆಯ ಪ್ರಚಾರಪ್ರಿಯನ ದೇವಸ್ಥಾನ ಎದುರೇ ಹಣ್ಣುಕಾಯಿ ಮಾಡಿದವಡ..!

– ಹಾಂಗೆ ನೋಡ್ಳೆ ಹೆರಟ್ರೆ, ಒಂದಕ್ಕೊಂದು ಪಿರಿ ಬಿಚ್ಚಿಗೊಂಡೇ ಹೋವುತ್ತು. ಪಿರಿಗೊ ಎಲ್ಲವೂ ಗಟ್ಟಿ ಕಾದಿದ್ದರೇ, ಬಳ್ಳಿ ಗಟ್ಟಿ ಇಪ್ಪದು.
ಆ ಬಳ್ಳಿಯೇ ಗಟ್ಟಿ ಇಲ್ಲದ್ದರೆ ಸಂಸಾರ ರಥ ಎಳವದು ಹೇಂಗೆ?!
ನಂಬಿದ್ದರ ಮೇಗೆ ಸಂಶಯ ಮಾಡ್ಳಾಗ. ನಂಬಾಣಿಕೆಗಳ ರಥಲ್ಲೇ ಅಲ್ಲದೋ, ಬಾಳಿನ ಷಷ್ಠಿಜಾತ್ರೆ ನೆಡೆತ್ತದು!

ಕಸವಿಂದ ಕಡೆ ಕಸಬುಗೆ ಕಬಾಬು ಕೊಟ್ಟು ಸಾಂಕುತ್ತವು! 26

ಕಸವಿಂದ ಕಡೆ ಕಸಬುಗೆ ಕಬಾಬು ಕೊಟ್ಟು ಸಾಂಕುತ್ತವು!

ಕಸವು ಕಸಬ್ಬುವ ಎಷ್ಟು ಸಮಯ ಮಡಿಕ್ಕೊಂಡರೂ, ಕೆಸವಿನ ಕಟ್ಟಿಗೊಂಡ ಹಾಂಗೆ ಅಕ್ಕಷ್ಟೆ. ಎಂತ ಹೇಳ್ತಿ?

ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..! 15

ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..!

ಮೊನ್ನೆ ಕೊಳಚ್ಚಿಪ್ಪು ಭಾವನ ಮದುವೆ ಕಳಾತೋ – ಅದೇ ದಿನ ಕುಕ್ಕುಜೆಲಿ ಸಟ್ಟುಮುಡಿ. ನವಗೆಲ್ಲ ಎರಡೆರಡರನ್ನೇ ಒಟ್ಟೊಟ್ಟಿಂಗೆ ಸುದರ್ಸಿಕ್ಕಲೆ ಎಡಿತ್ತಿಲ್ಲೆ, ಈ ಮಾಪ್ಳೆಗೊ ನಾಕರ ಹೇಂಗೆ ಸುದಾರುಸುತ್ತವಪ್ಪಾ – ಹೇಳಿ ಸುಭಗಣ್ಣ ಮೀಸೆಡೆಲಿ ನೆಗೆಮಾಡಿದ್ದು ಸತ್ಯ! ಕೊಳಚ್ಚಿಪ್ಪು ಮದುವೆಗೆ ಬಂದ ಅಡ್ಕತ್ತಿಮಾರುಮಾವ,...

ಹೊಟ್ಟೆತುಂಬಿದ ಹೋಟ್ಳಜ್ಜ ಬೋಳುಗುಡ್ಡೆಲಿ ದನನೆಟ್ಟವಡ..! 23

ಹೊಟ್ಟೆತುಂಬಿದ ಹೋಟ್ಳಜ್ಜ ಬೋಳುಗುಡ್ಡೆಲಿ ದನನೆಟ್ಟವಡ..!

ದನ ನೆಟ್ಟರೆ ಹಾಲು ಸಿಕ್ಕುತ್ತು; ರಬ್ಬರು ನೆಟ್ರೂ ಹಾಲು ಸಿಕ್ಕುತ್ತು. ಆದರೆ, ಕುಡುದರೆ?

ಭೂತ ಬಿರಿವ ಐದು ನಿಮಿಷ… 14

ಭೂತ ಬಿರಿವ ಐದು ನಿಮಿಷ…

ಬೂತ ಕಟ್ಟುವಗ ಸಮಾಜದ ಉತ್ತುಂಗಲ್ಲಿ ಇರ್ತವು; ಬಿರುದ ಕೂಡ್ಳೇ ಆ ಸ್ಥಾನವ ಮತ್ತೆ ಆ ಮಹಾಶೆಗ್ತಿಗೇ ಕೊಟ್ಟು, ಯೇವತ್ರಾಣಂತೆ ಮನೆಗೆ ಹೋವುತ್ತವು.
ಅನಾದಿ ಕಾಲಂದಲೂ ಹೀಂಗಿಪ್ಪ ಮಹತ್ಕಾರ್ಯ ಮಾಡ್ತಾ ಬಪ್ಪ ಎಷ್ಟೋ ಕೋಟಿಗೊಕ್ಕೆ ಒಪ್ಪಣ್ಣನ ಕೋಟಿ ಕೋಟಿ ನಮಸ್ಕಾರಂಗೊ.

ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ.. 19

ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ..

ಹಬ್ಬ, ಪಟಾಕಿ, ಬೆಡಿ – ಈ ಅಂಬೆರ್ಪಿಲಿ ಊರೊಳದಿಕ್ಕೇ ಇದ್ದವು ಮಾತಾಡ್ಳೆ ಸಿಕ್ಕುತ್ತವಿಲ್ಲೆ ಇದಾ! ಸುಮಾರು ಸಮೆಯ ಕಳುದ ಮತ್ತೆ ನಿನ್ನೆ ಮಾಷ್ಟ್ರುಮಾವನ ಹತ್ತರೆ ಮಾತಾಡ್ಳೆ ಸಿಕ್ಕಿತ್ತು. ಗೋಪೂಜೆ ಏರ್ಪಾಡಿಲಿ ಅತ್ತೆ ಅಂಬೆರ್ಪಿಲಿ ಇದ್ದರೂ, ಮಾಷ್ಟ್ರುಮಾವ ಎಲೆತಟ್ಟೆ ಬುಡಲ್ಲಿ ಪುರುಸೋತಿಲೇ ಇದ್ದಿದ್ದವು....

ಮೇಷಂದ ಮೀನ ಒರೆಂಗೆ ಕಲಿಯಲೆ ಮೀನಾಮೇಷ ಎಂತಕೆ? 27

ಮೇಷಂದ ಮೀನ ಒರೆಂಗೆ ಕಲಿಯಲೆ ಮೀನಾಮೇಷ ಎಂತಕೆ?

ಬೈಲಿಲಿ ರಜ ಗವುಜಿ ಸುರು ಆಯಿದಪ್ಪೋ.ನೆಗೆಮಾಣಿಯ ಪದ್ಯ ಬಂದದೇ ಬಂದದು, ರೂಪತ್ತೆ ನೆಗೆಮಾಡಿ ಬರಣಿ-ಮಂಡಗೆ ಪೂರ ಒಡದ್ದು! ಅದಿರಳಿ, ಮೊನ್ನೆ ಪಾಡಿಲಿ ಪೂಜೆ ಕಳುತ್ತು ಸಣ್ಣಕೆ; ಬೈಲಿಂಗೆ ಮಾಂತ್ರ ಹೇಳಿಕೆ ಇದ್ದದು. ದಿನಾಗುಳೂ ಮೋರೆ ನೋಡ್ತ ನವಗೆ ಇದ್ದತ್ತು – ಹೇದು...

ಮಗನ ತಪ್ಪು ಕಂಡಪ್ಪಗ ಅಪ್ಪನ ಆದರ್ಶ ನೆಂಪಾತಡ! 45

ಮಗನ ತಪ್ಪು ಕಂಡಪ್ಪಗ ಅಪ್ಪನ ಆದರ್ಶ ನೆಂಪಾತಡ!

ಎರಡೆರಡು ಗೆರೆಯ ಶುದ್ದಿ ಕೇಳಿದಿರೋ? ಎರಡು ತಟ್ಟುವೊ° – ಹೇದು ಕಂಡಿದಿಲ್ಲೇನೆ?
ಅಂಗಿಚಡ್ಡಿಂದ ಹಿಡುದು ಶುದ್ದಿ ಒರೆಂಗೆ ಎಲ್ಲವೂ ಸಣ್ಣ ಆತು – ಹೇಳಿಗೊಂಡು ಬೊಳುಂಬುಮಾವನ ಅಜ್ಜ° ಬೇಜಾರುಮಾಡಿಗೊಂಡದೇ ಬಂತು. ಬೈಲಿಲಿ ಶುದ್ದಿ ಹೇಳಿಯೂ, ಕೇಳಿಯೂ ಕಳಾತು!

ಎಲ್ಲವೂ ಸಣ್ಣ ಆವುತ್ತಾ ಇದ್ದು.
ನಮ್ಮ ಆಚಾರ-ವಿಚಾರ-ಚಿಂತನೆಗಳುದೇ. ನಮ್ಮ ಹಳೆ ಕ್ರಮಂಗಳುದೇ.
ಈ ಬಗೆಲಿ ಹೆಚ್ಚಿನ ಶುದ್ದಿಗಳನ್ನೂ ಮಾತಾಡಿಗೊಂಡಿದು ಬೈಲಿಲಿ.
ಅಂಬಗ ಇನ್ನು ಮಾತಾಡ್ಳೇ ಶುದ್ದಿ ಇಲ್ಲೆಯೋ – ಹೇದು ಪೆಂಗಣ್ಣ ತಲಗೆ ಕೈ ಮಡಿಕ್ಕೊಂಡು ಕೇಳುಗು.
ಎಬೆ, ಹಾಂಗೆಂತ ಇಲ್ಲೇಪ. ಹೊತ್ತುಗೊತ್ತಿಂಗೆ ಹೊಟ್ಟಗೆ ಬೇಕಾದ ಉಂಬತಿಂಬ ಶುದ್ದಿಯನ್ನಾದರೂ ಮಾತಾಡ್ಳಕ್ಕು ನವಗೆ!

ಎರಡೆರಡು ಗೆರೆಯ ಇಪ್ಪತ್ತೆರಡು ಶುದ್ದಿಗೊ…! 28

ಎರಡೆರಡು ಗೆರೆಯ ಇಪ್ಪತ್ತೆರಡು ಶುದ್ದಿಗೊ…!

ಒಂದೊಪ್ಪ: ಮಾತು ಸಣ್ಣ ಆಯೇಕು.
ಆದರೆ, ಮನಸ್ಸು ಸಣ್ಣ ಅಪ್ಪಲಾಗ. 🙂