ಮೂರ್ತಿಭಂಜಕ ಧರ್ಮಾಂಧರಿಂಗೆ ಪಲ್ಮೇರ ಒಳಿಶುತ್ತ ತಾಳ್ಮೆ ಇರ..!

May 29, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣ ಸಣ್ಣಾಗಿಪ್ಪಗ ಇದ್ದದು ಮುಳಿಮನೆ.
ಮಣ್ಣಗೋಡೆಯ ಮೇಗೆ ಮಡಗಿದ ಬೆದುರು ಪಕ್ಕಾಸುಗೊಕ್ಕೆ ಮುಳಿಕಂಜಿಗಳ ಹರಗಿ ಮಾಡಿದ ಮಾಡು. ಒರಿಶಂದ ಒರಿಶಕ್ಕೆ ಮುಳಿ ಉದ್ದಿ ಮಾಡು ಹೊಸತ್ತು ಮಾಡ್ತದು ಒಂದು ಕೆಲಸ. ಈಗೀಗ ಇದರ ಕಾಂಬಲೇ ಇರ ಅಪ್ಪೋ! ಇದ್ದರೂ ಬಹು ವಿರಳ; ಹಳೆಮನೆ ಅಣ್ಣ ಪಟತೆಗದು ಮಡಗುತ್ತಷ್ಟೂ ಅಪುರೊಪ.
ಮುಂದೆ ಹಂಚಿನ ಮನೆಯ ಕಾಲ ಬಂತು. ಹೊಸ ಮನೆ ಕಟ್ಟಿ ಒಕ್ಕಲಾದ ಮತ್ತೆಯೂ ಸುಮಾರು ಸಮೆಯ ಹಗಲಿಡೀ ಆ ಮನೆಯ ಸುತ್ತವೇ ಹೋಗಿ ತಿರುಗಿಂಡು ಇದ್ದದು ಒಪ್ಪಣ್ಣ. ಒಪ್ಪಣ್ಣ ಎಲ್ಲಿದ್ದ – ಹೇದು ಆರಾರು ಕೇಳಿರೆ, ಹಳೆಮನೆ ಹತ್ತರೆ ಇದ್ದ – ಹೇಳುಗು ಒಪ್ಪಕ್ಕ. ಚಳಿಗಾಲ ಕಳುದು ಮಳೆಗಾಲ ಬಪ್ಪಲಪ್ಪಗ ಮಾಡು ಕುಂಬಾಗಿ ಇನ್ನು ಮಾಡು ಉದುರಿಕ್ಕುದು ಬೇಡ ಹೇದು ಅದರ ಸಾಬೀತಿಲಿ ಮುರಿಯಲೆ ವೆವಸ್ತೆ ಮಾಡಿದವು ಮನೆ ಹೆರಿಯೋರು.  ಒಂದಿನ ಬಾಬು-ಬಟ್ಯನವು ಸೇರಿ ಕುಂಬಟೆ ಮಾಡಿನ ಮುರುದು ತೆಗದವು, ಒಪ್ಪಣ್ಣನ ಬೇಜಾರದ ಎಡಕ್ಕಿಲಿಯೂ. ಒಂದು ತಲೆಮಾರಿನ ಕತೆಯ ತುಂಬಿಗೊಂಡಿದ್ದ ಒಂದು ಮನೆ ಅಲ್ಲೇ ಬೆರ್ತೋಳು ಮುರುದು ಬಿದ್ದತ್ತು. ಆ ಮನೆಲಿ ಹುಟ್ಟಿ ಬೆಳದ ಎಲ್ಲೋರಿಂಗೂ ಅದರ ಮೇಗೆ ವಿಶೇಷ ಪ್ರೀತಿ ಇದ್ದತ್ತು, ಮನೆ ಮುರುದ ಮತ್ತೆಯೂ ಆ ಜಾಗೆ ಎಲ್ಲೋರನ್ನೂ ಎಳಕ್ಕೊಂಡಿದ್ದತ್ತು. ಹೊಸಮನೆಯ ಮನಸ್ಸಿಂಗೆ ತೆಕ್ಕೊಂಬಲೆ ಸುಮಾರು ಸಮೆಯ ಹಿಡುದ್ದು ಕಾಣ್ತು.

ಅದಿರಳಿ.

~

ಒಪ್ಪಣ್ಣ ರಜಾ ದೊಡ್ಡ ಆಗಿ ಶಾಲಗೆ ಹೋವುತ್ತ ಕಾಲಲ್ಲಿ – ದೊಡ್ಡಣ್ಣ ದೊಡ್ಡ ಶಾಲಗೆ ಹೋಗಿಂಡು ಇತ್ತಿದ್ದ. ದೊಡ್ಡಣ್ಣಂಗೆ ಅಂಬಗಳೇ ಪೇಪರು ಓದುತ್ತ ಮರುಳು ಇದ್ದಿದ್ದ ಕಾರಣ, ದೇಶ ವಿದೇಶದ ಹಲವು ವಿಷಯಂಗೊ ಗೊಂತಾಗಿಂಡು ಇದ್ದತ್ತು. ಅವ ಓದಿದ್ದರಲ್ಲಿ ತುಂಬಾ ವಿಶೇಷದ ಸಂಗತಿ ಇದ್ದರೆ ಇರುಳು ಕೂದಂಡು ಉಂಬಗ ಮಾತಾಡುಗು. ಗೊಂತಿಪ್ಪ ವಿಷಯವ ಅಪ್ಪನೂ ಸೇರ್ಸುಗು.

ಆ ಸಮೆಯಲ್ಲೇ ಅದಾ – ಗಾಂಧಾರ ದೇಶಲ್ಲಿ ಧರ್ಮಾಂಧರ ಕಾರ್ಯಭಾರ ಸುರು ಆದ್ಸು. ಮೊದಲು ತುಂಬಾ ಬೆಳದಿದ್ದ ಆ ದೇಶ ಒಂದೇ ಸರ್ತಿಲಿ “ಖುರ್ ಆನ್ ಹೇಳಿದ ಹಾಂಗೆ ನೆಡೇಕು” – ಹೇದು ನಿಘಂಟು ಮಾಡಿತ್ತಾಡ. ಇದಕ್ಕೆ ವಿರೋಧ ಮಾಡಿದೋರ ಪೂರ್ತ ಕೊಂದವಾಡ. ಆಟ ಇಲ್ಲೆ, ಪಾಠ ಇಲ್ಲೆ, ಮನೋರಂಜನೆ ಇಲ್ಲೆ – ಎಂತ ಇದ್ದರೂ ಖುರಾನು ಮಾಂತ್ರ. ಎಲ್ಲಾ ದಿಕ್ಕೆಯೂ ಅದನ್ನೇ ಅನ್ವಯಿಸಿದವು. ಆಧುನಿಕವಾಗಿ ಬೆಳಕ್ಕೊಂಡಿದ್ದ ಇಡೀ ದೇಶ ಒಂದೆ ಸರ್ತಿ ಕುರಾನಿನ ಕಾಲಕ್ಕೆ ಹೋತಾಡ. ಧರ್ಮಾಂಧರ ಉಗ್ರತ್ವ, ಉಗ್ರವಾದ ಎಷ್ಟು ಮುಂದುವರುದತ್ತು ಹೇದರೆ, ಕುರಾನಿಲಿಪ್ಪ ಒಳ್ಳೆ ಅಂಶವ ಬಿಟ್ಟು, ಅದರ ಕೆಟ್ಟ ರೀತಿಲಿ ಅರ್ಥ ಮಾಡಿಗೊಂಡು ಸಮಾಜಕ್ಕೆ ಹಾನಿಕಾರಕ ವಿಷಯಂಗಳ ಅನ್ವಯ ಮಾಡ್ಳೆ ಸುರುಮಾಡಿದವಾಡ. ಶಾಂಭಾವ ಹುಟ್ಟುವ ಕಾಲಲ್ಲಿ ಅಲ್ಯಾಣ ವಿಮಾನಯಾನಲ್ಲಿ ಗಗನಸಖಿಯರು ಇದ್ದಿದ್ದೋರು, ಶಾಂಭಾವನ ಮದುವೆಗಪ್ಪಾಗ ಅವೆಲ್ಲ ಕರಿಗುಡಿ ಹಾಕಿ ಮನೆ ಒಳ ಕೂರ್ತ ಹಾಂಗಾತಾಡ. ಆ ಊರಿನ ಆಟದ ಮೈದಾನಂಗೊ ಪೂರ ನೇಣುಕಂಬದ ಮೈದಾನ ಆತಾಡ, ಹೆಮ್ಮಕ್ಕೊ, ಕೂಸುಗೊ ಎಲ್ಲ ಅಗ್ಗದ ವಸ್ತುಗೊ ಆಗಿ ಮಾರಾಟ ಅಪ್ಪಲೆ ಸುರು ಆದವಾಡ. ಉಂಬಲೆ ಅಶನ ಸಿಕ್ಕದ್ದರೂ, ಆ ಕಳ್ಳಂಗಳ ಒಟ್ಟಿಂಗೆ ಸೇರ್ತರೆ ಬೆಡಿ ಸಿಕ್ಕುಗು – ಹೇಳ್ತ ಪರಿಸ್ಥಿತಿ ಬಪ್ಪಲೆ ಸುರು ಆತಾಡ.

~

ಮುಂದೆ?

ಒಂದರಿ ಸಾಮಾಜಿಕವಾಗಿ ಹಿಡಿತ ಸಿಕ್ಕಿದ ಮತ್ತೆ ಧಾರ್ಮಿಕವಾಗಿ ಹಿಡಿತಸಾಧನೆಗೆ ಹೆರಟವಾಡ. ಇದೇ ಕೊನೆಗೆ ಅತ್ಯಂತ ವಿದ್ರಾವಕ ಹೀನಾಯ ಸಂದರ್ಭಂಗಳ ತಂದು ಕೊಟ್ಟತ್ತಾಡ ಅವಕ್ಕೆ. ಅದೆಂತರ?
ಗಾಂಧಾರ ದೇಶಲ್ಲಿ ಒಂದು ಊರು ಇದ್ದಾಡ – ವರ್ಮಯಾನ ಹೇಳಿ. ಸಂಸ್ಕೃತದ ಹೆಸರು ಅದು. ಋಷಿಮುನಿಗೊ ತಪಸ್ಸು ಮಾಡಿದ ಹಲವಾರು ಗುಹೆಗೊ ಅಲ್ಲಿದ್ದು. ಕ್ರಮೇಣ ಬೌದ್ಧ ಮತದ ಪ್ರಾಬಲ್ಯ ಬಪ್ಪಗ ಅದೇ ಗುಹೆಗಳಲ್ಲಿ ಬುದ್ಧದೇವನ ತಪಸ್ಸು ಮಾಡಿದವು. ಅಷ್ಟೇ ಅಲ್ಲ, ಇಡೀ ಗುಡ್ಡೆಯನ್ನೇ ಬರೆ ಮಾಡಿ ಅದರ್ಲಿ ಬುದ್ಧನ ಮೂರ್ತಿಗಳ ಕೆತ್ತಿ ಮಡಗಿತ್ತಿದ್ದವು.  ಅಲ್ಯಾಣ ಈಗಾಣೋರ ಬಾಯಿಲಿ ಬಾಮಿಯಾನ್ ಹೇಳಿ ಆಯಿದಾಡ. ಈ ಬಾಮಿಯಾನಲ್ಲಿ ಇದ್ದ ಮೂರ್ತಿ ಶಾಂತಸ್ವರೂಪ ಬುದ್ಧಂದು. ದೂರ-ಲ್ಲಿಪ್ಪ ಬಾಮಿಯಾನ ಪೇಟೆಯ ಜೆನಂಗಳ ನೋಡಿಗೊಂಡು, ಮಂದಸ್ಮಿತ- ಮುಗೂಳು ನೆಗೆ ಮಾಡಿಂಡು ಕುತ್ತ ನಿಂದ ಬುದ್ಧ. ಎಷ್ಟೋ ಸಾವಿರ ಒರಿಶಂಗಳಿಂದ ಹಾಂಗೇ ನಿಂದಿತ್ತಿದ್ದ, ಶಾಂತವಾಗಿ. ಆ ಮೂರ್ತಿಯ ಕಾಲೆಡಕ್ಕಿಲಿ, ಕರೆಲಿ ಎಲ್ಲ ಕಲ್ಲಕೋರೆಯ ಮಾಟೆಗೊ ಇದ್ದತ್ತಲ್ಲದೋ  – ಅಲ್ಲಿ ಹಲವೂ ಬೌದ್ಧ ಬಿಕ್ಕುಗೊ ತಪಸ್ಸು ಮಾದಿ ಆತ್ಮಜ್ಞಾನವ ಕಂಡಿದವು. ಅದೆಷ್ಟು ಸಾವಿರ ಒರಿಶ ಎಷ್ಟು ಜೆನಕ್ಕೆ ನೆಮ್ಮದಿಗೆ ಕಾರಣ ಆಗಿತ್ತೋ ಏನೋ! ಉಮ್ಮಪ್ಪ.

ಅಂತೂ ಒಂದಿನ – ಈ ತಾಲೀಬಾನು ಧರ್ಮಾಂಧರು ಆ “ವಿಗ್ರಹವ ಒಡೇಕು” – ಹೇದು ನಿಜಮಾಡಿದವಾಡ. ಎಂತಕೆ? ಕುರಾನಿಲಿ ಹೇಳಿದ್ದವಾಡ, ಮೂರ್ತಿಪೂಜೆ ಮಾಡ್ಳಾಗ, ಮೂರ್ತಿಗಳ ಕಂಡ ಕೂಡ್ಳೇ ಒಡದು ಹಾಕಿ – ನಿಂಗೊಗೆ ದೇವರು ಪುಣ್ಯ ಕೊಡ್ತವು – ಹೇದು. ಎಲ್ಲೋರಿಂಗೂ ಅವರವರ ಧರ್ಮರಕ್ಷಣೆ, ಧರ್ಮಾವಲಂಬನೆ ಯ ಹಕ್ಕು ಇದ್ದೇ ಇದ್ದು. ಇನ್ನೊಬ್ಬನ ಅಶನತೆಗೆ ಹೇಳುಲೆ ಯೇವ ಧರ್ಮಕ್ಕೆ ಅಧಿಕಾರ ಇದ್ದು? ಒಂದು ವೇಳೆ ಆ ಕಾಲಕ್ಕೆ ಅದು ಸರಿ ಇಪ್ಪಲೂ ಸಾಕು; ಆದರೆ ಈಗಂಗೆ ಅದು ಸರಿ ಅಲ್ಲನ್ನೇ!

ಊರವರ ವಿರೋಧ, ದೇಶ ವಿದೇಶದ ಸಮಗ್ರ ವಿರೋಧದ ಎಡಕ್ಕಿಲಿಯೂ ಅವು ನಿಂದಿದವಿಲ್ಲೆ, ಸಾವಿರಾರು ಒರಿಶಂದ ಆರ ಉಪದ್ರಕ್ಕೂ ಬಾರದ್ದೆ ನಿಂದಿದ್ದ ಬುದ್ಧನ ವಿಗ್ರಹವ – ಬೆಡಿ ಮಡಗಿ ಒಡದವಾದ. ಕೆಲವೇ ಗಂಟೆಲಿ ನಿರ್ನಾಮ ನಾಶ ಆಗಿ ಹೋತು. ಕಲ್ಲ ಮೂರ್ತಿ, ಅದರ ಹತ್ತರೆ ಇದ್ದಿದ್ದ ಕಲ್ಲ ಗುಹೆಗೊ, ಅದರೊಳ ಇದ್ದಿದ್ದ ಸಾವಿರಾರು ಒರಿಶ ಹಿಂದಾಣ ಬಣ್ಣದ ಚಿತ್ರಂಗೊ – ಎಲ್ಲವುದೇ ತಾಲಿಬಾನದೋರ ಮೂರ್ಖತನಕ್ಕೆ ಹಾಳಾಗಿ ಹೋತು. ತನ್ನದೇ ದೇಶದ ಸೊತ್ತಿನ ಧರ್ಮದ ಹೆಸರಿಲಿ ಧರ್ಮಕ್ಕೇ ಕಳಕ್ಕೊಂಡವು.

~

ಪೂರ್ವದ ದೇಶಂಗಳಿಂದ ಪಶ್ಚಿಮದ ಯುರೋಪು ದೇಶಂಗೊಕ್ಕೆ ಹಲವೂ ವಸ್ತುಗಳ ಮಾರಾಟ ಮಾಡ್ಳೆ ಸಂಪರ್ಕ ಕೊಡ್ತ ದೊಡಾ ಮಾರ್ಗ ಇದ್ದತ್ತಾಡ ಒಂದು ಕಾಲಲ್ಲಿ. ಇದರ “ಸಿಲ್ಕು ರೂಟು” – ಹೇಳ್ತವಾಡ, ರೇಷ್ಮೆವಸ್ತ್ರಂಗೊ ಹೋವುತ್ತ ಮಾರ್ಗ ಹೇಳ್ತ ಅರ್ಥಲ್ಲಿ. ಚೀನಾ ದೇಶಲ್ಲಿ ಉತ್ಪಾದನೆ ಅಪ್ಪ ರೇಷ್ಮೆ ವಸ್ತ್ರಂಗೊ ಯುರೋಪಿನೋರಿಂಗೆ ಬೇಕು. ನಮ್ಮ ದೇಶದ ಕೊತ್ತಂಬರಿ ಜೀರಕ್ಕಿ ಮೆಣಸು ಬೇಕು, ಅವರ ಊರಿನ ಕಳ್ಳು ನಮ್ಮ ಊರೋರಿಂಗೆ ಬೇಕು – ಹೀಂಗೆ ಅತ್ತಿತ್ತೆ ಕೊಟ್ಟು ಪಡಕ್ಕೊಂಬ ದೊಡ್ಡಾ ಒಯಿವಾಟುದಾರಂಗಳ ಮಾರ್ಗ ಅದು. ಆ ಮಾರ್ಗ ಹೆಮ್ಮರದ ಹಾಂಗೆ ಮಧ್ಯಲ್ಲಿ ಹೋವುತ್ತರೂ, ಕರೆಕರೆಂದ ಹಲವಾರು ಮಾರ್ಗಂಗೊ ಬಂದು ಸೇರಿಗೊಂಡು ಇದ್ದತ್ತು.

ಆ ದೊಡ್ಡ ಮಾರ್ಗದ ಒಂದು ಊರು ಈ ಬಾಮಿಯಾನ್ ಆಗಿದ್ದತ್ತಾಡ ಒಂದು ಕಾಲಲ್ಲಿ. ಹಾಂಗಾಗಿ ದಾರಿಹೋವುತ್ತೋರು ಎಲ್ಲೋರುದೇ ಆ ಊರಿಲಿ ನಿಂದು, ವಿಶ್ರಾಂತಿ ತೆಕ್ಕೊಂಡು ಮುಂದೆ / ಯಾ  / ಹಿಂದೆ ಹೋಗಿಂಡು ಇತ್ತಿದ್ದವು.
ಈಗ ಆ ಊರು ಬರೇ ನೆಂಪು ಮಾಂತ್ರ. ಧರ್ಮಾಂಧರು ಅದರ ಲಗಾಡಿ ಕೊಟ್ಟವು.
ಈಗ ಆ ಧರ್ಮಾಂಧರ ಸರಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ, ಮೊದಲಾಣದ್ದರ ಮಾಡ್ಳೆಡಿಗೊ?

ಬಾಮಿಯಾನ ಬುದ್ಧನ ನಾಶ ಮಾಡಿದ್ದು!:-(
ಬಾಮಿಯಾನ ಬುದ್ಧನ ನಾಶ ಮಾಡಿದ್ದು!:-(

~
ಅದೇ ನಮುನೆ – ಅದೇ ಸಿಲ್ಕು ರೂಟಿನ ಇನ್ನೊಂದು ಊರು ಸದ್ಯಲ್ಲೇ ಒಡವಲಿದ್ದು – ಹೇದು ಮೊನ್ನೆ ದೊಡ್ಡಣ್ಣ ಹೇಳಿದ. ಅಷ್ಟಪ್ಪಗ ಈ ಸಣ್ಣಾಗಿಪ್ಪಗಾಣ ಕತೆಗೊ ಎಲ್ಲ ನೆಂಪಾತು.

~
ತಾಲೀಬಾನು ಹೇಳ್ತ ಸಂಘಟನೆ ಹೊತ್ತಿ ಮುಗುದತ್ತು; ಇರಾಕಿಲಿ ಇದ್ದಿದ್ದ ಸದ್ದಾಮುದೇ ಶುದ್ದಿಲ್ಲದ್ದೆ ಹೋತು. ಎಲ್ಲ ಸರಿ ಆತು ಹೇದು ಗ್ರೇಶಿಂಡಿಪ್ಪಾಗಳೇ – ಐಸಿಸ್ ಹೇಳ್ತ ಮಾರಿ ಬಂತು. ಅಂದೊಂದರಿ ಇದರ ಬಗ್ಗೆ ನಾವು ಮಾತಾಡಿದ್ದು. ಅಲ್ಲದೋ?

ಈ ಐಸಿಸ್ ಕಾರ್ಬಾರ ಮಾಡುವಕೆಲವು ಜಾಗೆಗಳೂ ಇದೇ “ಸಿಲ್ಕು ರೂಟಿಲಿ” ಬತ್ತಾಡ. ಹಾಂಗಾಗಿ,ಈ ಬಾಮಿಯಾನದಷ್ಟೇ – ಅಥವಾ ಅದರಿಂದಲೂ ಹಳತ್ತಾದ ಕೆಲವು ನಾಗರೀಕತೆಯ ಬಿಂದುಗೊ ಅವರ ಕೈಲಿ ಇದ್ದಾಡ.

ಕಳುದ ವಾರವಷ್ಟೇ – ಹೀಂಗಿಪ್ಪ ಅಮೂಲ್ಯ ಜಾಗೆಯ ಹಿಡುದ್ದವಾಡ. ಅದೇ “ಪಲ್ಮೇರಾ” – ಹೇಳ್ತ ಜಾಗೆ.
~

ಗ್ರೀಕರ ಸಾಮ್ರಾಜ್ಯಲ್ಲಿ ಒಂದು ರಾಜ್ಯವಾಗಿದ್ದು, ಮತ್ತೆ ಸ್ವತಂತ್ರವಾಗಿ ಬೆಳದ ಊರು ಇದು ಪಲ್ಮೇರಾ. ಗ್ರೀಕ್ ಮಾದರಿಯ ಊರ ವೆವಸ್ತೆಗೊ, ಗ್ರೀಕರ ಶೈಲಿಯ ಕಟ್ಟೋಣಂಗೊ, ಸಭಾಮಂಟಪಂಗೊ, ಕಂಬಂಗೊ, ಗ್ರೀಕ್ ದೇವ-ದೇವತೆಗಳ ದೇವಸ್ಥಾನಂಗೊ – ಎಲ್ಲವೂ ಇದ್ದಿದ್ದ ಗೌಜಿಯ ಊರಾಗಿತ್ತು ಅದು. ಈಗ ಮೊದಲಾಣ ಗೌಜಿಯ ಭವ್ಯತೆ ಇಲ್ಲದ್ದರೂ, ಆ ಊರಿನ ಹಿರಿಮೆಯ ಆ ಕಂಬಂಗಳೇ ಹೇಳ್ತು. ಹತ್ತು ಜೆನ ನಿಂದರೂ ಪತ್ತಕ್ಕೆ ಸಿಕ್ಕದ್ದ ನಮುನೆ ದೊಡ್ಡ ದೊಡ್ಡ ಕಂಬಂಗೊ. ಅದರ್ಲಿ ಕೆತ್ತಿ ಮಾಡಿದ ಕೆತ್ತನೆಗೊ, ಅದರಲ್ಲಿ ಬರದ ಅಮೂಲ್ಯ ಬರಹಂಗೊ, ಶಾಸನಂಗೊ – ಆ ಕಾಲದ ಇತಿಹಾಸವ ಹೇಳುವ ಹಾಂಗಿದತ್ತು. ಮುಂದಾಣ ಕಾಲಕ್ಕೆ ಹಿಂದಾಣ ಕಾಲದೋರು ನೆಡದ ದಾರಿ ಯೇವದು ಹೇದು ಗೊಂತಿರೆಕಡ. ಅದಕ್ಕೆ ಹೀಂಗಿರ್ಸ ವಸ್ತುಗೊ ಅತ್ಯಮೂಲ್ಯ ಆಗಿರ್ತು.

~

ಆದರೆ?
ಐಸಿಸ್ ನ ಉಗ್ರ ಧರ್ಮಾಂಧರು ಆ ಇಡೀ ಊರಿನ ಅವರ ಕೈಗೆ ತೆಕ್ಕೊಂಡಿದವು.
ಕಳುದ ವಾರವರೆಗೂ ಹೋರಾಡಿದ ಅಲ್ಯಾಣ ಸೈನಿಕರು ಮೊನ್ನೆ ಶರಣಾಗಿ ಇಡೀ ಊರನ್ನೇ ಅವರ ಕೈಗೆ ಕೊಟ್ಟುಬಿಟ್ಟವು. ಇನ್ನು ಏನಿದ್ದರೂ ಆ ಧರ್ಮಾಂಧರ ಕಾರ್ಬಾರು.
ತಾಲಿಬಾನಿಗೊ ಬಾಮಿಯಾನದ ಬುದ್ಧನ ಮೂರ್ತಿ ಒಡದ ಹಾಂಗೇ – ಐಸಿಸ್ ನವು ಪಲ್ಮೇರಾಲ್ಲಿಪ್ಪ ಗ್ರೀಕ್ ಮೂರ್ತಿಗಳ ಒಡವಲೆ ಸುರುಮಾಡಿದ್ದವು.

ಅದಕ್ಕಿಂದಲೂ ಮುಖ್ಯವಾಗಿ – ಸಿಕ್ಕ ಸಿಕ್ಕಿದ ಅಮೂಲ್ಯ ವಸ್ತುಗಳ ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡಿ, ಅದರಿಂದ ಪೈಶೆ ಮಾಡ್ತಾ ಇದ್ದವು. ಹಾಂಗೆ ಸಿಕ್ಕಿದ ಪೈಶೆಲಿ ಮತ್ತಷ್ಟು ಬೆಡಿ ಗುಂಡು ತೆಕ್ಕೊಳ್ತಾ ಇದ್ದವು.

ಒಟ್ಟಾರೆ ಹೇಳ್ತರೆ – ಇಡೀ ಆ ಊರಿಂಗೆ ಊರೇ ವಿನಾಶಲ್ಲಿದ್ದು. ಧರ್ಮಾಂಧತೆಯ ಪರಿಮಿತಿ ಮೀರಿ ಜಗಳಕಾವ ಪೆದಂಬಂಗೊ ಇಡೀ ಊರನ್ನೇ ನಾಶಮಾಡ್ಳೆ ಹೆರಟಿದವು.

ಎಲ್ಲವನ್ನೂ ದೇವರೇ ನೋಡೆಕ್ಕಷ್ಟೆ. ದೇವರ ಮೂರ್ತಿಗೊ ಬೇಕಾರೆ ದೇವರೇ ಒಳಿಶಿಗೊಳ್ಳೆಕ್ಕಷ್ಟೆ.
ಒಪ್ಪಣ್ಣ ಸಣ್ಣಾಗಿಪ್ಪಗ ಇನ್ನೆಂತಕೂ ಆಗದ್ದ ಕುಂಬು ಮನೆ ಮುರಿವಗಳೇ ಅಷ್ಟು ಬೇಜಾರಾಯಿದು.
ಒಂದು ಭವ್ಯ ಊರಿಂಗೇ ಆ ಗೆತಿ ಬಂದಿಪ್ಪಗ ಬೇಜಾರಗದ್ದೆ ಇಕ್ಕೋ?
ನಿಂಗಳೇ ಹೇಳಿ.

~

ಒಂದೊಪ್ಪ: ಒಂದು ಕಾಲದ ಅತ್ಯಂತ ವೈಭವದ ಮೆರದ ಪಲ್ಮೇರಾ, ಈಗ ಅದರ ಮೇಗೆ ಅಲ್ಯಾಣ ಆರಿಂಗೂ ಒಲ್ಮೆ ಇರ!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಲೇಖನ . ನಮಗೆ ನಂಬಿಕೆ ಇಲ್ಲದಿದ್ದರೂ ಆ ಹಳೆ ಸೊತ್ತುಗಳ ಉಳಿಸಿ ಕಾಪಾಡುವೋ ಹೇಳುವ ಬುದ್ಧಿಯ ಅವಕ್ಕೆ ಅವರ ದೇವರು ಕೊಡೆಕ್ಕಷ್ಟೇ .

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇ ರಾಮ…ರಾಮಾ…..! ’ಕಟ್ಟುವದು ಕಷ್ಟ,ಮೆಟ್ಟುವದು ಸುಲಭ’. ’ಕುಂಬಾರಗೆ ವರುಷ ದೊಣ್ಣೆಗೆ ನಿಮಿಷ’. ಹೀಂಗಿದ್ದ ಗಾದಗೊ ನೆಂಪಾಗಿ; ಸ್ವತಃ ಕಟ್ಟಿದ್ದರ ಬೇರೆವು ಹಾಳು ಮಾಡೀರೆ, ಕುಂಬಾರಂಗೆ ತಾನು ಮಾಡಿದ ಅಳಗೆಯ ದುಷ್ಟರು ಒಡದಪ್ಪಗ ಆವುತ್ತ ಅನುಭವ ಆತು. ಒಂದೊಳ್ಳೆ ಮನೆ ಕಟ್ಟಿಕ್ಕಿ ಅದರ ಚೆಂದ ನೋಡಿಂಡಿಪ್ಪಗ; ವಿರೋಧಿ ಬಂದು ಅದರ ಕಿಚ್ಚುಕೊಟ್ಟು ಧ್ವಂಸ ಮಾಡೀರೆ ಹೇಂಗಕ್ಕು!? ಹೇಳ್ತ ಆಲೋಚನೆ ಬಂತಿದ. ಅಂತೂ ಹೀಂಗಿದ್ದ ಶುದ್ದಿಗೊ ನವ ಗೊಂತಾಯೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಧರ್ಮದ ಹೆಸರಿಲ್ಲಿ ಏನೆಲ್ಲಾ ಅಧರ್ಮ ಮಾಡ್ತವು. ಇದಕ್ಕೆಲ್ಲಾ ಅಂತ್ಯ ಹೇಂಗೆ ?
  ಆ ದೇವರೇ ಕಾಪಾಡೆಕ್ಕಷ್ಟೆ

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹುಂ. ಹೇಳಿ ನಾವು ಹೇಳೆಕಷ್ಟೆ. ಮತ್ತೆಂತ ಮಾಡ್ಳೆಡಿಗು ನವಗೆ ? ಶುದ್ದಿ ಒಳ್ಳೆದಿತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆವಿದ್ವಾನಣ್ಣವೇಣೂರಣ್ಣಮಾಲಕ್ಕ°ಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಡಾಗುಟ್ರಕ್ಕ°ವಾಣಿ ಚಿಕ್ಕಮ್ಮಮಾಷ್ಟ್ರುಮಾವ°ಪೆರ್ಲದಣ್ಣಶ್ಯಾಮಣ್ಣಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕಮುಳಿಯ ಭಾವಅಡ್ಕತ್ತಿಮಾರುಮಾವ°ಉಡುಪುಮೂಲೆ ಅಪ್ಪಚ್ಚಿದೊಡ್ಡಭಾವಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿvreddhiದೀಪಿಕಾಅನುಶ್ರೀ ಬಂಡಾಡಿಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ