ಪರವೂರಿನ ಬೆಡಿಯ ಅವಘಡ ಬೆಡಿಯನ್ನೇ ತಡದತ್ತೋ!?

ಒಂದರಿ ಬೆಶಿಹಾಲು ಕುಡುದ ಪುಚ್ಚೆ ಮತ್ತೆ ತಂಪು ಹಾಲನ್ನೂ ಕುಡಿತ್ತಿಲ್ಲೆಡ. ಇದು ಏನೂ ಅರಾಡಿಯದ್ದ ಪುಚೆಯ ಕತೆ ಆತು, ಆದರೆ ಎಲ್ಲವೂ ಅರಡಿಯೆಕ್ಕಾದ ಸರಕಾರವೇ ಹಾಂಗೆ ಮಾಡಿರೆ ಹೇಂಗೆ – ಹೇದು ಗುಣಾಜೆಮಾಣಿ ಮೊನ್ನೆ ಕೇಳಿದ. ಅಪ್ಪು, ಅವ ಆ ನಮುನೆ ಕೇಳುಲೂ ಒಂದು ಕಾರಣ ಇದ್ದು.
ಅದುವೇ – ಪರವೂರು ದೇವಸ್ತಾನದ ಸಂಗತಿ.
~

ಕಳುದ ಹತ್ತನೇ ತಾರೀಕಿಂಗೆ ಪರವೂರು ಪುಟ್ಟಂಗಲ್ಲು ದೇವಿ ದೇವಸ್ತಾನಲ್ಲಿ ಒರಿಶಾವದಿ ಜಾತ್ರೆ ಆಡ.
ಊರು ಪರವೂರು ಆದರೂ, ಆಚರಣೆ ಪರವೂರಿಂದು ಅಲ್ಲ, ನಮ್ಮದೇ.
ನಮ್ಮ ಅಡೂರು, ಮದೂರು ಕಾವು ಕಣ್ಯಾರಲ್ಲಿ ಇಪ್ಪ ಹಾಂಗೇ – ಆ ಪರವೂರು ದೇವಸ್ತಾನಲ್ಲಿಯೂ ಬೆಡಿ ಇದ್ದು ಜಾತ್ರಗೆ.
ಪ್ರತಿ ಒರಿಶದಂತೆ ಈ ಸರ್ತಿಯೂ ಬೆಡಿ ಇದ್ದತ್ತು.
ಆದರೆ ಎಂತ ಸೀಂತ್ರಿಯೋ, ರಾಜಕೀಯವೋ ಕುತಂತ್ರವೋ ಗೊಂತಿಲ್ಲೆ, ಈ ಸರ್ತಿ ಬೆಡಿಗೆ ಅನುಮತಿ ಇಲ್ಲೆ – ಹೇಯಿದವಾಡ ಆ ಊರಿನ ಸ್ಥಳೀಯಾಡಳ್ತೆ.
ಸರ್ಕಾರ ಹೇಳಿತ್ತು ಹೇದು ದೇವಿಗೆ ಇಲ್ಲದ್ದೆ ಮಾಡ್ಳಾವುತ್ತೋ?
ದೇವಿ ಮೊದಲು ಬಂದದೋ, ಸರ್ಕಾರ ಮೊದಲು ಬಂದದೋ? ದೇವಿ ಅನ್ನೆ.
ದೇವಿ ಬಿಡಿ, ಬೆಡಿ ಮೊದಲು ಬಂದದೋ, ಸರ್ಕಾರ ಮೊದಲು ಬಂದದೋ? ಅಲ್ಲಿಯೂ ಸರ್ಕಾರ ಮೊದಲಲ್ಲ.
ಮೊನ್ನೆ ಮೊನ್ನೆ ಬಂದ ಈ ಆಧುನಿಕ ವೆವಸ್ತೆಯ ಸರ್ಕಾರ “ದೇವರಿಂಗೆ ಬೆಡಿ ಸೇವೆ ಬೇಡ” – ಹೇದರೆ ಹೇಂಗಕ್ಕು?
~
ಅಷ್ಟಕ್ಕೂ ಬೆಡಿ ಸೇವೆ – ಹೇದರೆ ಅದು ಜೆನಂಗೊ ಮಾಡುಸ್ಸು.
ತನ್ನ ಜೀವನದ ಕಷ್ಟಂಗಳ ನಂಬಿಗೊಂಡ ಜೆನಂಗೊ ಬೆಡಿ ಹರಕ್ಕೆ ಹೇಳುಸ್ಸು ಆ ಊರಿನ ಸಂಪ್ರದಾಯ.
ಈ ಸರ್ತಿ ತಾನು ಗ್ರೇಶಿದ ಹಾಂಗೆ ಆದರೆ ಇಂತಾ ದೇವರ ಜಾತ್ರೆಗೆ ಬೆಡಿ ಹೊಟ್ಟುಸುತ್ತೆ – ಹೇದು.
ಆ ಪ್ರಕಾರ ಒಂದು ಗರ್ನಾಲೋ, ಕದಿನವೋ ಎಂತಾರು ರಶೀದಿ ಮಾಡುಸಿ, ಅದರ್ಲಿ ಅವರ ಹೆಸರೋ, ತಾಪತ್ರಯವೋ ಬರದು – ಹೊಟ್ಟುಸುತ್ತೋರಿಂಗೆ ಕೊಡುಸ್ಸು.
ಅದು ದೇವರ ಎದುರು ಹೊಟ್ಟುವಗ, ಅವರ ಕಷ್ಟಂಗಳೂ ಹೊಟ್ಟಿ ಬೂದಿ ಆಗಿ ದೂರ ಆವುತ್ತು, ಜೀವನಲ್ಲಿ ಸುಖ ಸಿಕ್ಕುತ್ತು – ಹೇದು ಅವರ ನಂಬಿಕೆ.

ಜಾತ್ರೆಯ ಬೆಡಿಯ ಹಿಂದೆ ಆ ನಂಬಿಕೆಯೂ ಇರ್ತಿದಾ, ಹಾಂಗಾಗಿ ಹೇಳಿದ ಕೂಡ್ಳೇ ಅದರ ನಿಲ್ಲುಸುಲ ಬತ್ತಿಲ್ಲೆ.
~
ಹಾಂಗೆ, ಈ ಸರ್ತಿ ನಿಂದಿದೂ ಇಲ್ಲೆ.
ಆದರೆ, ಎಂತದೋ ಪರಮೋಶಲ್ಲಿ ಅತವಾ ಪರ-ಮೋಸಲ್ಲಿ ಈ ಸರ್ತಿ ಹಾನಿ ಆತು.
ಪಟಾಕಿ ಬಾನಲ್ಲಿ ಸ್ಫೋಟ ಆಯೇಕಾದ್ಸು ನೆಲಕ್ಕಲ್ಲೇ ಆತಾಡ.
ಇದರಿಂದಾಗಿ ಸೇರಿದ ಹಲವೂ ಭಕ್ತರಿಂಗೆ ತೀವ್ರ ಪೆಟ್ಟಾತು. ಕೆಲವು ಜೆನಕ್ಕೆ ಮಾರಣಾಂತಿಕ ಪೆಟ್ಟಾತು.
ಈಗ ಕೆಲವು ಜೆನ ಆಸ್ಪತ್ರೆಲಿ ಇದ್ದರೆ, ನೂರಾರು ಜೆನ ತೀರಿಗೊಂಡವು.
ಅಷ್ಟೂ ಜೆನ ಸಾಯೇಕಾರೆ ಅದು ಬೆಡಿ ಆಗಿರ, ಕದಿನ ಆಗಿರ – ಬೋಂಬು ಆಗಿಕ್ಕು ಹೇಳ್ತವು ಕೆಲವು ಜೆನ; ಅಲ್ಲಪ್ಪ – ಬೆಡಿ ಹೊಟ್ಟುವಗ ಹಾರಿದ ಕಿಚ್ಚಿನ ಕಿಡಿ ಪಟಾಕಿಯ ರಾಶಿಗೆ ಬಿದ್ದತ್ತು – ಹೇಳ್ತವು ಇನ್ನೂ ಕೆಲವು ಜೆನ.
ಉಮ್ಮಪ್ಪ, ಯೇವದರ ಎಷ್ಟರ ಮಟ್ಟಿಂಗೆ ನಂಬೇಕು – ಬಿಡೇಕು ಹೇದು ಗೊಂತಾವುತ್ತಿಲ್ಲೆ. ಅಂತೂ – ಆ ದೇವಿಅಮ್ಮನೇ ಹೇಳೇಕಷ್ಟೆ.
ದೊಡ್ಡ ಮಟ್ಟಿನ ಹಾನಿ ಒಂದಾತು, ಅಷ್ಟೂ ಜೆನ ಸತ್ತವು. ಜಾತ್ರೆ ಅವಘಡಲ್ಲಿ ಕೊನೆಯಾತು.

ಆದರೆ, ಮತ್ತಾಣ ಘಟನೆಗೊ ನೋಡಿರೆ ನಿಜಕ್ಕೂ ವಿಚಿತ್ರ ಅನುಸುತ್ತು.

ರಾಜ್ಯದ ಮಂತ್ರಿಗೊ ಮಾಗಧಂಗೊ ಇಂಗು ತಿಂದ ಮಂಗನ ಹಾಂಗೆ ಆಯೆಕ್ಕಾತು, ಆದರೆ ಕಳ್ಳು ಕುಡುದ ಮಂಗನ ಹಾಂಗೆ ಮಾಡ್ತಾ ಇದ್ದವು.
ಈ ದುರ್ಘಟನೆಲಿಯೂ ಎಂತ ರಾಜಕೀಯ ಲಾಭ ಇದ್ದು – ಹೇದು ನೋಡ್ತಾ ಇದ್ದವು.
ತಪ್ಪು ಎಂಗಳದ್ದಲ್ಲ, ಅವರದ್ದು, ಅವರದ್ದಲ್ಲ ಇವರದ್ದು, ಆಚಪಾರ್ಟಿದಲ್ಲ ಈ ಪಾರ್ಟಿದು – ಇತ್ಯಾದಿ ಮಾತುಗೊ.
ನಿಜವಾಗಿ ಅಲ್ಲಿ ಆಸ್ಪತ್ರೆಲಿ ಬಂಙ ಬಪ್ಪವರ ಗ್ರಾಚಾರ ಆರಿಂಗೂ ಬೇಡ.

ಪ್ರಧಾನ ಮಂತ್ರಿ ಬಪ್ಪಗ ಒಂದಷ್ಟು ಜೆನ ವೈದ್ಯಕೀಯ ವೆವಸ್ತೆ ಮಾಡಿಗೊಂಡೇ ಬಂದ ಕಾರಣ ಚಾನ್ಸು – ಹೇಯಿದ ಗುಣಾಜೆಮಾಣಿ.
~

ಇನ್ನೂ ದುರದೃಷ್ಟಕರ ಸಂಗತಿ ಹೇದರೆ – ರಾಜ್ಯದ ಎಲ್ಲಾ ದೇವಸ್ತಾನಲ್ಲಿ ಇರುಳು ಶಬ್ದ ಮಾಡ್ತ ಬೆಡಿಯ ನಿಷೇಧ ಮಾಡೆಕ್ಕು – ಹೇದು ಅಲ್ಯಾಣ ಈಗಾಣ ಒತ್ತಾಯ ಅಡ ರಾಜ್ಯಲ್ಲಿ.
ಮೊದಲ್ನೇದಾಗಿ, ದುರ್ಘಟನೆ ಆದ್ಸು ಕಿಚ್ಚಿಂದ – ಶಬ್ದಂದ ಅಲ್ಲ.
ಕಿಚ್ಚಿನ ಬೇನು ಮಾಡೇಕಾತು – ಆದರೆ ಗುರಿ ಮಡಗಿದ್ದು ಬೇರೆಲ್ಲಿಗೋ.
ಒಟ್ಟಿಲಿ ಅವಕ್ಕೆ ಹಾಂಗಾರೆ ಬೆಡಿಯನ್ನೇ ಬೇನು ಮಾಡೇಕಾತೋ?
ಅದರ ಬದಲು, ಸರಿಯಾದ ವೆವಸ್ತೆ ಮಾಡಿಕ್ಕಿಯೇ ಬೆಡಿ ಸೇವೆ ಮಾಡೇಕು – ಹೇದು ಕಡ್ಡಾಯ ಮಾಡಿದ್ದರೆ ಒಳ್ಳೆದಿತ್ತಿಲ್ಲೆಯೋ!?
ಇದು ಹೀಂಗೆ ಬೇನು ಆದರೆ ನಮ್ಮ ಕುಂಬ್ಳೆ ಬೆಡಿ, ಮಧೂರು ಬೆಡಿಯ ಗೆತಿ ಎಂತರ!?
ಇನ್ನು ಅದು ಇತಿಹಾಸ ಪುಸ್ತಕಲ್ಲಿ ಮಾಂತ್ರವೋ ಹಾಂಗಾರೆ?
~
ಹಿಂದೂ ಆಚರಣೆಗಳ ನಿಷೇಧ ಮಾಡ್ಳೆ, ಕಂಟ್ರೋಲು ಮಾಡ್ಳೆ ಎಂತಕೆ ಈ ಸರಕಾರಂಗೊಕ್ಕೆ ಇಷ್ಟು ಆಸಕ್ತಿ – ಹೇದು ಗುಣಾಜೆಮಾಣಿಗೆ ಪಿಸುರು ಸಹಿತ ಸಂಶಯ ಬಪ್ಪದು ಈಗೀಗ.

ಇರಲಿ.
ನಮ್ಮ ನಮ್ಮ ದೇವರಿಂಗೆ ಬೆಡಿ ಬೇಕು – ಹೇದು ಆದರೆ, ಜೆನಂಗೊ ಬೆಡಿ ಸೇವೆ ಕೊಡ್ಳಕ್ಕು ಹೇದು ಆದರೆ ಆ ನಿಷೇಧ ಹಿಂದೆ ಹೋಕು.
ಮತ್ತೆ ಎಂದಿನಂತೆ ನಮ್ಮ ಊರಿನ ದೇವಸ್ಥಾನಂಗಳಲ್ಲಿ ಬೆಡಿ ಸುರು ಅಕ್ಕು.

ಆದರೆ, ಎಲ್ಲೋರುದೇ – ಎಚ್ಚರಲ್ಲಿ ಇರೆಕ್ಕು. ಕಿಚ್ಚಿನ ಒಟ್ಟಿಂಗೆ ಆಟ ಆಡುವಾಗ ಜಾಗ್ರತೆ ಬೇಕು.
ಬೆಡಿ ಅಪ್ಪಗ ಜಾತ್ರೆ ಗೆದ್ದೆಗೆ ಹೋವುತ್ತಾರೆ ನಾವು ಜಾಗ್ರತೆಲಿ ಬೇಕು – ಹೇಳ್ತದು ಈ ಪರವೂರಿನ ದುರ್ಘಟನೆಲಿ ನಾವು ಕಲಿಯೆಕ್ಕಾದ ಎಚ್ಚರಿಗೆ ಪಾಟ.

ಒಂದೊಪ್ಪ: ಪರವೂರಿನ ದುರ್ಘಟನೆ ನಮ್ಮ ಊರಿಲಿ ಆಗದ್ದೆ ಇರೆಕ್ಕಾರೆ, ಪರವೂರಿನ ತಪ್ಪುಗಳ ಮಾಡ್ಳಾಗ.

ಒಪ್ಪಣ್ಣ

   

You may also like...

2 Responses

  1. S.K.Gopalakrishna Bhat says:

    ಬೆಡಿ ಹೊಟ್ಟುಸುದು ನಷ್ಟ ಹೇಳಿ ಒಂದು ವಾದ. ಹಾಂಗೆ ನೋಡಿರೆ ಇಷ್ಟೆಲ್ಲಾ ಗೌಜಿ ಬೇರೆ ಬೇರೆ ಕಡೆ [ಪ್ರತಿಮೆ ಮಾಡುದು, ಶ್ರದ್ಧಾಂಜಲಿ ಸಲ್ಲಿಸುದು , ಮೆರವಣಿಗೆ ಮಾಡುದು ] ಮಾಡುದು ನಿರರ್ಥಕ ವೆಚ್ಚವೇ ಅಲ್ಲದೋ? ಅಪಘಾತ ಆವುತ್ತು ಹೇಳಿ ಆರೂ ವಾಹನಲ್ಲಿ ಹೋಪದು ನಿಲ್ಲಿಸವು.ಆರೋಗ್ಯ ಹಾಳಾವುತ್ತು ಹೇಳಿ ಧೂಮಪಾನ ನಿಷೇಧ ಮಾಡುತ್ತವಿಲ್ಲೆ .[ಪಾನನಿಷೇಧ ನಾಲ್ಕು ರಾಜ್ಯಂಗೊ ಮಾಡಿದ್ದವಷ್ಟೇ.] ಬೆಡಿ ನಿಷೇಧ ಬೇಡ , ನಿಯಂತ್ರಣ ಇರಲಿ. ಸರಿಯಾದ ಜಾಗೆಲಿ ,ಸರಿಯಾದ ಸಮಯಕ್ಕೆ, ಸಂಪ್ರದಾಯಕ್ಕೆ ತಕ್ಕಷ್ಟು ಹೊಟ್ಟುಸಲಿ. ಜಾಗ್ರತೆಗೆ ವ್ಯವಸ್ಥೆ ಸರಿ ಬೇಕು. ದೊಡ್ಡಸ್ತಿಕೆ ಮೆರೆಸಲೆ ಅಷ್ಟು ಲಕ್ಷ,ಇಷ್ಟು ಲಕ್ಷ ಹೇಳುವ ಪೈಪೋಟಿ ಬೇಡ.

  2. ಬೊಳುಂಬು ಗೋಪಾಲ says:

    ಬೆಡಿ ಬೇಕು ಖಂಡಿತ. ಆದರೆ ಅದು ವಿಪರೀತ ಹೆಚ್ಚಪ್ಪಲಾಗ. ಗೋಪಾಲಣ್ಣ ಹೇಳಿದ ಹಾಂಗೆ ನಿಯಂತ್ರಣ, ಅದಕ್ಕೆ ಬೇಕಾದ ಸರಿಯಾದ ವ್ಯವಸ್ಥೆ ಬೇಕು. ಅದರಲ್ಲಿ ಸ್ಪರ್ಧೆ ಸುರುವಾದರೆ ಮತ್ತೆ ಎದುರಾಣವನ ಮೈಗೇ ದುರುಸು ಬಿಡ್ಳೆ ಸುರುಮಾಡುಗು, ಈ ಜೆನಂಗೊ !

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *