ಹೊಡವಲೆ ತಂದ ಬೆಡಿ ಮಡಗಿದಲ್ಲೇ ಹೊಟ್ಟಿತ್ತಡ..!!

ಜೋಗಿಬೈಲು ಮಾವಂಗೆ ಕೃಷಿಲಿ ತುಂಬಾ ಆಸಕ್ತಿ, ಅನುಭವ. ಕೋಲೇಜು ಕಲಿವಿಕೆ ರಾಮಜ್ಜನ ಕೋಲೇಜಿಲಿ – ಆ ಕಾಲಕ್ಕೇ ಆದರೂ, ಎಲ್ಲೋರ ಹಾಂಗೆ ಪೇಂಟಂಗಿ ಹಾಕುತ್ತ ಚಾಕ್ರಿ ನೋಡಿದ್ದವಿಲ್ಲೆ, ಬದಲಾಗಿ ಹೆರಿಯೋರು ಮಾಡಿ ಬೆಳಗಿದ ಆಸ್ತಿಯ ಹಸುರು ಮಾಡ್ತ ಲೆಕ್ಕಲ್ಲಿ ಮನೆಲೇ ಇತ್ತಿದ್ದವು.
ಅವರ ಶ್ರಮ ವ್ಯರ್ಥ ಅಂತೂ ಆಯಿದಿಲ್ಲೆ, ಇಂದಿಂಗೆ ತಿರುಗಿ ನೋಡಿರೆ, ಇಡೀ ಜಾಗೆಯ ತೋಟಲ್ಲಿ ಅವರ ಕೈಯಾರೆ ನೆಡುಸಿ ಬೆಳದ ಗೆಡುಗಳೇ ಹೆಚ್ಚು ಇಪ್ಪದು. ಪ್ರತಿ ತೋಟದ ಪ್ರತಿ ಮರದ ಪ್ರತಿ ಗೊನೆಲಿ ಎಷ್ಟೆಷ್ಟು ಅಡಕ್ಕೆ ಸಿಕ್ಕಿದ್ದು ಹೇದು ಅವಕ್ಕೆ ಬಾಯಿಪಾಟ ಇದ್ದು. ಅವರ ಆಸಗ್ತಿ, ತನ್ಮಯತೆ ಅದರ್ಲಿ ಗೊಂತಾವುತ್ತು. ಅಲ್ಲದೋ?!
ಅದಿರಳಿ.
~
ಅವರ ತೋಟಕ್ಕೆ ಒಂದು ಕಾಲಲ್ಲಿ ವಿಪರೀತ ಕಳ್ಳಂಗಳ ಉಪದ್ರ ಇದ್ದತ್ತಡ. ಅಡಕ್ಕೆ ಕಳ್ಳುವ ಕಳ್ಳಂಗೊ ಆರು? ಬೇರೆ ಆರಾರು ಎಂತಕೆ ಬತ್ತವು; ಅವರ ಜಾಗೆಯ ಕರೆಲಿ ಇಪ್ಪ ಜೆನಂಗಳೇ ಇದಾ!
ಹಗಲೊತ್ತು ಅದೇ ಜಾಗೆಲಿ ಕೆಲಸ ಮಾಡುದು; ಇರುಳು ಬಂದು ಕಳ್ಳುದು. ಗಂಧದ ಗೆಡು, ಅಡಕ್ಕೆ, ತೆಂಗಿನ ಕಾಯಿ, ಎಂತದೂ ಅಕ್ಕು ಅವಕ್ಕೆ- ಒಟ್ಟು ಕಳ್ಳೆಕ್ಕು.
ಹೆರಾಣ ಕಳ್ಳಂಗಳ ಹಿಡಿವಲಕ್ಕು, ಆದರೆ ಒಳಾಣ ಕಳ್ಳಂಗಳ ಹಿಡಿವಲೇ ಕಷ್ಟ ಅಪ್ಪೋ! ಅವರ ಶಕ್ತಿಲಿ ಹಿಡಿವಲೆ ಎಡಿಯ; ಉಪಾಯಲ್ಲೇ ಹಿಡಿಯೇಕಷ್ಟೆ ಅಪ್ಪೋ!
ಹಾಂಗಾಗಿ, ಈ ಒಳಾಣ ಕಳ್ಳಂಗಳ ಹಿಡಿವಲೆ ಒಂದು ಉಪಾಯ ಮಾಡಿದವು. ಅದೆಂತರ? ಅದುವೇ ’ಬೆಡಿ’!
ಅಪ್ಪು – ಸೀತ ಬೆಳಿವಸ್ತ್ರ ಸುತ್ತಿಗೊಂಡು ಕೊಡೆಯಾಲಕ್ಕೆ ಹೆರಟವು ಒಂದು ದಿನ.
ಕೊಡೆಯಾಲಕ್ಕೆ ಹೋಗಿ ಒಂದು ತೋಟೆಬೆಡಿ ಹಿಡ್ಕೊಂಡು ಬಂದವು. ಅದಕ್ಕೆ ಬೇಕಾದ ಲೈಸೆನ್ಸು ಎಲ್ಲ ಸರಿಯಾಗಿ ಮಾಡಿಗೊಂಡಿದವು ಹೇದು ಬೇರೆ ಹೇಳೆಡನ್ನೇ.
ಬೀಟಿ ಮರದ ಹಿಡಿ, ಅದಕ್ಕೊಂದು ಇಷ್ಟುದ್ದದ ಕರಿ ನಳಿಗೆ. ಕಪ್ಪು ಕಪ್ಪು – ಒಳ್ಳೆ ಕರಿ ನಾಗರನ ಹಾಂಗೆ ಗಾಂಭೀರ್ಯ.
ಬೆಡಿ ತಂದು ಸೀತ ಮನೆ ಒಳ ಮಡಗಿದ್ದವಿಲ್ಲೆ; ಊರಿಡೀ ಪ್ರಚಾರ ಅಪ್ಪ ಹಾಂಗೆ ಮಾಡಿದವು.
ಎಲ್ಲೋರಿಂಗೂ ಗೊಂತಾತು; ಮೇಗಾಣ ಮನೆ ದೊಡ್ಡಜ್ಜಂಗೂ ಗೊಂತಾತು, ಕೆಳಾಣ ಮನೆ ಕುಂಞಜ್ಜಂಗೂ ಗೊಂತಾತು, ಆಚಮನೆ ಬಾರತಿ ಅತ್ತೆಗೂ ಗೊಂತಾತು; ಅಷ್ಟು ಮಾಂತ್ರ ಅಲ್ಲ ’ಅಣ್ಣೇರ್ ಬೆಡಿ ಕೊಣತ್ತೆರ್ ಗೆ’ – ಹೇದು ನಿಜವಾದ ಕಳ್ಳಂಗೊಕ್ಕೂ ಗೊಂತಾತು.
ಪ್ರಚಾರ ಮಾಡಿದ್ದು ಮಾಂತ್ರವೋ – ಅಲ್ಲ; ಕೆಲಸದೋರು ಎಲ್ಲೋರು ಇಪ್ಪಗ ಆ ಬೆಡಿಯ ಒಂದರಿ ಎಣ್ಣೆ ಉದ್ದಿ ಪೋಚಕಾನ ಮಾಡಿ ಒಪಾಸು ಕೈಸಾಲೆಯ ಗಿಳಿಕೊಕ್ಕಿನ ಹಾಂಗಿರ್ತ ಕೊಳಿಕ್ಕೆಗೆ ಸಿಕ್ಕುಸಿ ಮಡಗುಸ್ಸು;
ಕೆಲಸದವು ಇಪ್ಪಾಗ ಒಂದೊಂದರಿ ಅದರ ಕುದುರೆ ಎಳದು ತೋರ್ಸುದು; ಅದಕ್ಕೆ ತೋಟೆ ಹಾಕಿ ತೋರ್ಸುದು; ಒಂದೊಂದರಿ ಓ ಆ ಬಾಳೆ ಎಲೆಗೆ ಬಡಕ್ಕನೆ ಬೆಡಿ ಬಿಡುದು. ಬೆಡಿಂದ ರಟ್ಟಿದ ಚಿಲ್ಲು ಹೋಗಿ ಆ ಬಾಳೆ ಎಲೆಗೆ ಪೂರ ಬಡುದು, ಹುಳು ಹಿಡುದ ಹಾಂಗೆ ಆಗಿಬಿಡ್ತು ಒಂದರಿಯೇ.
ಹಸೂರು ಬಣ್ಣದ ಬಾಳೆ ಹುಳು ಹಿಡುದ ಹಾಂಗೆ ಒಟ್ಟೊಟ್ಟೆ ಅಪ್ಪದರ ಕಂಡ ಕೆಲಸದೋರಿಂಗೆ – ಅವರ ತೆಗಲೆಗೇ ಬೆಡಿ ಬಿದ್ದ ಹಾಂಗೆ ಆವುತ್ತೋ ಏನೊ, ಪಾಪ!
ಅಷ್ಟೇ ಅಲ್ಲದ್ದೆ, ನಾಕು ದಿನ ಗೌಜಿಲಿ ಆ ಬೆಡಿಯ ಹೆಗಲಿಂಗೆ ಹಾಕಿಂಡು ತೋಟ ಇಡೀ ಸುತ್ತಿದವು.
ತೋಟಲ್ಲಿ ಕೆಲಸ ಮಾಡುವ ಆಳುಗಳತ್ರೆ ಮಾತಾಡುವಾಗ ಹೆಗಲಿಲಿ ಕರಿನಾಗರ ಜೆಡೆ ತೆಗಕ್ಕೊಂಡೇ ಇದ್ದತ್ತು.
ನಾಕು ತೋಟೆ ಮುಗುತ್ತು; ನಾಕು ಬಾಳೆಲೆ ಒಟ್ಟೆ ಆತು. ಆದರೆ? ಕಳ್ಳಂಗೊ ಸುದ್ದಿಲ್ಲದ್ದೆ ಮಾಯಕ ಆದವು!
ಅದಿರಳಿ.
~
ಆದರೆ, ಈ ಮಾವ ಬೆಡಿಯ ಶುದ್ದಿ ಬಂದಪ್ಪಗ ಯೇವತ್ತೂ ಒಂದು ವಿಶಯ ಹೇಳುಲಿದ್ದು –
“ಬೆಡಿಯ ವಿಶಯ ಜಾಗ್ರತೆಲಿ ಇರೆಕ್ಕು ಒಪ್ಪಣ್ಣೋ ನಾವು; ಅದು ಹೆಗಲಿಲಿ ಮಡಗಿದ ಕಿಚ್ಚಿನ ಹಾಂಗೆ. ಯೇವತ್ತೂ ಅದರ ಹಿಡಿವಗ, ಮುಟ್ಟುವಗ, ಅಷ್ಟೇ ಅಲ್ಲ – ಮಡಗಿದಲ್ಲಿಗೂ ಜಾಗ್ರತೆ ಇರೆಕ್ಕಾವುತ್ತು.
ಕಳ್ಳಂಗೆ ಹೊಡವಲೆ ತಂದ ಬೆಡಿ ಮಡಗಿದಲ್ಲಿಗೇ ಏನಾರು ಹೊಡದತ್ತು ಹೇದು ಆದರೆ, ಮತ್ತೆ ಗತಿ ಗೋವಿಂದ ಅಕ್ಕಲ್ಲದೋ!!”
– ಇದು ಜೋಗಿಬೈಲು ಮಾವನ ಅಭಿಪ್ರಾಯ.
ಅಪ್ಪು, ಹೊಡವಲೆ ತಂದ ಬೆಡಿ ಮಡಗಿದಲ್ಲಿಗೇ ಹೊಟ್ಟಿರೆ ಹೇಂಗಕ್ಕು! ಬೆಡಿ ತಂದವ ಈ ವಿಶಯಲ್ಲಿಯೂ ಜಾಗ್ರತೆ ಮಾಡೆಕ್ಕಾವುತ್ತು. ಅಲ್ದೋ?
ಎಂತ ಹೇಳ್ತಿ?
ಅದಿರಳಿ.
~
ಇದೆಲ್ಲ ವಿಶಯ ಈಗ ಎಂತಕೆ ನೆಂಪಾತು ಹೇದರೆ –
ಓ ಮನ್ನೆ ಪಾತಕಿಸ್ಥಾನಲ್ಲಿ ಒಂದು ಮಾರಣಾಂತಿಕ ಹತ್ಯಾಕಾಂಡದ ನೆಡದತ್ತಲ್ಲದೋ – ಅದರ ಪೇಪರಿಲಿ ಓದುವಾಗ ಜೋಗಿಬೈಲು ಮಾವ° ಹೇಳಿದ್ಸು ನೆಂಪಾತು ಒಪ್ಪಣ್ಣಂಗೆ.
~
ತಾಳಿ ಮರದ ಕಳ್ಳು ಕುಡುದ ಹಾಂಗೆ ಮರುಳಾಟ ಮಾಡ್ತೋರು ತಾಳೀ-ಬಾನಿನವು – ಹೇದು ಗುಣಾಜೆ ಕುಂಞಿ ನೆಗೆಮಾಡ್ಳಿದ್ದು ಒಂದೊಂದರಿ.
ಇಡೀ ಭೂಮಿಲಿ ಬ್ಯಾರಿ ಧರ್ಮ ಮಾಂತ್ರ ಇರೇಕು, ಬೇರೆ ಎಲ್ಲೋರುದೇ ನಾಸ್ತಿಕರು, ಅವರ ಕೊಲ್ಲೇಕು – ಹೇಳ್ತ ಏಕೈಕ ಉದ್ದೇಶಂದ ಹುಟ್ಟಿದ ಒಂದು ಸಂಸ್ಥೆ. ಬೆರಳು ಚೀಪುತ್ತ ಮಕ್ಕಳ ತಲಗೇ ಈ ವಿಶಯ ತುಂಬುಸಿ, ಅವರ ಕೈಗೆ ಬೆಡಿ ಕೊಡ್ತವು – ಆ ತಾಳೀಬಾನಿನೋರು. ಜೋಗಿಬೈಲು ಮಾವ° ಎಷ್ಟು ಜಾಗ್ರತೆಲಿ ಪೋಚಕಾನ ಮಾಡಿಗೊಂಡು ಇತ್ತವೋ – ಅದರ ಒಂದಂಶವೂ ಜೆಬಾದಾರಿಕೆ ಇಲ್ಲದ್ದ ಜೆನಂಗೊ ಅವು.
ಬೆಡಿ ಹಿಡುದು ಬೆಳದ ಮಕ್ಕೊಗೆ ಬ್ಯಾರಿ ಧರ್ಮ ಮಾಂತ್ರ ಕಾಂಬದು. ಮಾನವೀಯ ಧರ್ಮ ಕಂಡಿರ್ತಿಲ್ಲೆ. ಅವ್ವೇ ರಜ್ಜ ದೊಡ್ಡ ಆಗಿ, ಮೋರೆಲಿ ಮೀಸೆ ಬಪ್ಪಗ ಮತ್ತೆ ದೇಶವೇ ಕಾಣ – ಬರೇ ಧರ್ಮ ಮಾಂತ್ರ ಕಾಂಬದು.
ನಮ್ಮ ಮಹಾಭಾರತ ಕಾಲದ ಗಾಂಧಾರ ದೇಶಲ್ಲಿ ಹುಟ್ಟಿದ್ದು ಈ ಪ್ರಯೋಗ. ಅಲ್ಲಿ ಬೆಳದು ಇಡೀ ದೇಶವ ತಾಲೀಬಾನು ದೇಷ ಮಾಡಿ ಹಾಕಿತ್ತು. ಈಗ ಅಲ್ಲಿ ಅಮೇರಿಕದ ದೊಡ್ಡಣ್ಣ ಹೋಗಿ ಸರಿ ಮಾಡಿದ ಕಾರಣ ಅಲ್ಯಾಣ ಮುಕ್ರಿಗೊ ಕುಯ್ಯೋ ಮುರ್ರೋ ಹೇದು ಅಲ್ಲಿಂದ ಓಡಿ – ಬದ್ಕಿರೆ ಬೇಡಿ ತಿಂಬೆ – ಹೇದು ಪಾತಕಿಸ್ಥಾನಕ್ಕೆ ಬಂದವು.
ಪಾತಕಿ ಸ್ಥಾನ ಹೆಸರೇ ಹೇಳ್ತ ಹಾಂಗೆ – ಪಾತಕಿಗೊಕ್ಕೆ ಸ್ವರ್ಗ. ಬಿನ್ ಲಾಡೆನ್ನು, ದಾವೂದು ಇಬ್ರಾಹಿಂ – ಹೀಂಗಿರ್ತ ಪರಮ ಪಾಪಿಗೊ ಸರಕಾರೀ ಸೌಕರ್ಯಲ್ಲಿ ಬದ್ಕೇಕಾರೆ ಪ್ರಪಂಚದ ಬೇರೆ ಯೇವ ದೇಶಲ್ಲಿಯೂ ಎಡಿಯ! ಹಾಂಗಿಪ್ಪ ಸ್ವರ್ಗಲ್ಲಿ ತಾಲೀಬಾನಿನ ಮರುಳಂಗೊ ಬಂದು ಹುಗ್ಗಿದವು.
ಕ್ರಮೇಣ ಎಷ್ಟು ಪ್ರಬಲ ಆದವು ಹೇದರೆ – ಸೈನ್ಯಕ್ಕೆ ಪರ್ಯಾಯವಾಗಿ ಪಾತಕಿಸ್ಥಾನಲ್ಲಿ ಪ್ರಬಲ ಆದವು.
ಕೆಲವು ಊರುಗಳಲ್ಲಿ ಅವರದ್ದೇ ಕಾರ್ಬಾರು. ಕೆಲವು ಹಳ್ಳಿಲಿ ಅವರದ್ದೇ ಸಾಮ್ರಾಜ್ಯ.
ಬೆಡಿಯೇ ಆಯುಧ, ಪಳ್ಳಿಯೇ ಶಾಲೆ.
ಸಾವಿರ ಒರಿಷ ಮದಲೇ ಬಂದ ಮಮ್ಮದೆ ಪೈಗಂಬರ್ ಕೊಟ್ಟ ಸಂವಿಧಾನವನ್ನೇ ಪುನಾ ಅಳವಡುಸಲೆ ಇಪ್ಪ ಎಲ್ಲ ಪ್ರಯತ್ನ ಮಾಡ್ತಾ ಇದ್ದವಡ.
ಅಂಬಗಾಣ ಕಾಲದ ಹಾಂಗೇ – ಗೆಡ್ಡ, ವೇಶ, ಟೊಪ್ಪಿ. ಅಂಬಗ ಇದ್ದ ಹಾಂಗೇ – ಹೆಣ್ಮಕ್ಕೊಗೆ ದಿಗ್ಬಂಧನ, ಅಂಬಗಾಣ ಕಾಲದ ಹಾಂಗೇ – ಸಂಪ್ರದಾಯಂಗೊ.
ಈಗ ಕಾಲ ಇಷ್ಟು ಮುಂದುವರುದರೂ, ಅದರ ಆಧುನೀಕರಣ ಮಾಡ್ಳೆ ಅವ್ವು ತಯಾರಿಲ್ಲೆ.
ತಾಲೀಬಾನಿಲಿ ಇದು ಇದ್ದತ್ತು; ಅಲ್ಲಿಂದ ಸರ್ವನಾಶ ಮಾಡಿ ಅಲ್ಲಿ ಈಗಾಣ ಆಧುನಿಕ ರಾಜ್ಯ ಸ್ಥಾಪನೆ ಮಾಡಿದವು.
ಅದು ಪಾತಕಿಸ್ಥಾನಕ್ಕೆ ಬಂತು. ಬಂದೋರ ಸ್ವಾಗತ ಮಾಡಿದವು.
ಹಾಂಗಿಪ್ಪ ಮುಕ್ರಿಗೊಕ್ಕೆ ಪೈಶೆ ಕೊಟ್ಟವು, ಸರಕಾರದ ಸವಲತ್ತುಗೊ ಕೊಡುಸಿದವು, ಓಟು ಅಪ್ಪಗ ಅವರ ಮೂಲಕ ಕೆಲಸ ಮಾಡುಸಿದವು – ಎಲ್ಲವೂ ಆಗಿ ಅವು ಬಲವಾಗಿ ಬೇರು ಊರಿದವು.
ಪಾತಕಿಸ್ಥಾನಲ್ಲಿ ಅದರ ಸಾಂಕಿದವು.
ಎಂತಗೆ?
ಅವಕ್ಕೆ ಭಾರತದ ಮೇಲೆ ಪ್ರತೀಕಾರ ತೀರ್ಸೆಕ್ಕು.
ಪಾತಕಿಗಳ ಸೈನ್ಯಕ್ಕೆ ಎದುರು ಬಂದು ಹೋರಾಡ್ಳೆ ಬೆಟ್ರಿ ಇಲ್ಲೆ, ಅವಕ್ಕೆ ಹೀಂಗಿರ್ತ ’ಧರ್ಮಕ್ಕೇ ಸಿಕ್ಕಿದ’ ಧರ್ಮ ಯುದ್ಧ ಮಾಡುವ ಸೇನಾನಿಗೊ ಧರ್ಮಕ್ಕೆ ಬೇಕು. ಹಾಂಗೆ ಇವರ ಸಾಂಕಿದವು.
ಸಮಾ ತೋಟೆ-ಬೆಡಿ ತರುಸಿ ತರುಸಿ ಕೊಟ್ಟವು. ದೇಶದ ಸೈನ್ಯದ ಆಹಾರ, ಊಟೋಪಚಾರ ತೋರ್ಸಿ ಕೊಟ್ಟವು. ಎಲ್ಲವೂ ತಿಂದು ಧರ್ಮಕ್ಕೇ ಬದುಕ್ಕಿದವು.
ಭಾರತಕ್ಕೆ ಬೆಡಿ ಬಿಡ್ಳೆ ಮೂರ್ತ ಮಾಡಿಗೊಂಡು ಇತ್ತಿದ್ದವು.
ಅಷ್ಟಪ್ಪಗ ಎಂತಾತು?

ಭಾರತಲ್ಲಿ ರಾಜಕೀಯ ಕ್ರಾಂತಿ ಆತು. ಮೊದಲಾಣ ಹಾಂಗೆ ಸುಲಾಬಲ್ಲಿ ಹೊಕ್ಕಿ ಕಾಷ್ಮೀರ ಮಾತೆಯ ಹೊಟ್ಟೆಯ ಬಗವಲೆ ಎಡಿತ್ತಿಲ್ಲೆ.
ಈಗ ಒಂದು ಬಡುದರೆ ಹತ್ತು ಸಿಕ್ಕುತ್ತು ಒಪಾಸು!
ಹಾಂಗಾಗಿ, ಎಲ್ಲ ಟ್ರೈನಿಂಗು ಆದ ತಾಲೀಬಾನಿಗೊಕ್ಕೆ ಭಾರತ ಮಾತೆಯ ಮನೆಯೊಳ ಹೊಕ್ಕಲೆ ಎಡಿತ್ತಿಲ್ಲೆ.
ಮತ್ತೆಂತ ಮಾಡುಸ್ಸು? – ಎಲ್ಲಿ ಇದ್ದವೋ ಅಲ್ಲೇ ಉಪದ್ರ ಮಾಡ್ತದು ಅಲ್ಲದೋ ಇಪ್ಪ ಕಾರ್ಯ.
ಹಾಂಗೇ ಆತು.
ಅವಕ್ಕೇ ಊಟ, ಉಪಚಾರ ಕೊಟ್ಟು ಸಾಂಕಿದ ಪಾತಕಿಸ್ಥಾನಕ್ಕೇ ಬತ್ತಿ ಮಡಗಿದವು. ಆ ಊರಿಲೇ ಅವರ ಉಪದ್ರ ಸುರು ಮಾಡಿದವು.
ಅಷ್ಟಪ್ಪಗ ಅಲ್ಯಾಣ ಸೈನ್ಯಕ್ಕೂ ಇವರ ಮುಖ್ಹಂಡರಿಂಗೂ ಜಗಳ ಸುರು ಆತಾಡ.
ಆ ಜಗಳ ಎಷ್ಟು ದೂರ ಎತ್ತಿತ್ತು ಹೇದರೆ, ಸೈನ್ಯದ ಮುಖಂಡ ಒಬ್ಬನ ಕೊಲ್ಲುವಷ್ಟರ ಮಟ್ಟಕ್ಕೆ!!!
ತನ್ನ ಮುಖಂಡರ ಕೊಂದದಕ್ಕೆ ತಾಲೀಬಾನಿಗಳೂ ಎದ್ದು ನಿಂದದು.
ಅವು ಇವರ ಕೊಲ್ಲುದು, ಇವು ಅವರ ಕೊಲ್ಲುದು.
ಮೊನ್ನೆಯ ದಿನ ಈ ಘಟನೆ ತುಂಬಾ ವಿಕಾರ ಹಂತಕ್ಕೆ ಎತ್ತಿತ್ತು.
ಪಾಪದ ಮಕ್ಕೊ, ಜಗತ್ತಿನ ಕಲ್ಮಷ ಅರಡಿಯದ್ದೆ ಅವರಷ್ಟಕ್ಕೇ  ಪಾಠ ಕೇಳಿ ಪರೀಕ್ಷೆ ಬರೆತ್ತಾ ಇದ್ದಿದ್ದ ಮಕ್ಕಳ – ದೇಶದ ಮುಂದಾಣ ಪ್ರಜೆಗೊ ಬೆಳವ ದೇವಸ್ಥಾನ – ಶಾಲೆಗೇ ಬಂದು ಹೊಡದು ಹೊಡದು ಹೊಡದು ಕೊಂದವಡ.
ಬಂದೋರು ಅಂತೂ – ಅತ್ಯಂತ ಶಾಂತವಾಗಿ ಕ್ಲಾಸಿಂದ ಕ್ಲಾಸಿಂಗೆ ಹೋಗಿ ಒಂದೊಂದೇ ಕ್ಲಾಸಿನ ಮಕ್ಕಳ ಮುಗಿಶಿಂಡು ಬಂದವಾಡ.
ಈ ಕೆಲಸ ಮಾಡುವಾಗ ಪವಿತ್ರ ಕುರ್-ಆನ್ ನ ಓದಲೆ ಹೇಳಿ, ತಾನೂ ಪಠಣ ಮಾಡಿಗೊಂಡವಾಡ.
ಛೇ!!
~
ತಲೆಲಿ ಬೇರೆಂತೂ ಇಲ್ಲದ್ದೆ ಧರ್ಮ ಮಾಂತ್ರ ಇದ್ದರೆ – ಆ ಜೀವನವೇ ವ್ಯರ್ಥ ಅಲ್ದೋ! ಹೀಂಗಿರ್ತೋರ ಸಾಂಕಿದ್ದು ಪಾತಕಿಸ್ಥಾನವೇ.
ಇನ್ನೊಬ್ಬಂಗೆ ಬೆಡಿ ಬಿಡ್ಳೆ ಹೇದು ತೋಟೆ ಹಾಕಿ ಮಡಗಿರೆ, ಅದು ಒಂದು ದಿನ ನಮ್ಮ ಬಗಲಿಲಿಯೇ ಹೊಟ್ಟಿರೆ ಎಂತಕ್ಕು – ಹೇದು ಯೇಚನೆ ಬೇಕು ನವಗೆ.
ಭಾರತಕ್ಕೆ ಲೂಟಿ ಮಾಡ್ಳೆ ಹೇದು ತೆಯಾರು ಮಾಡಿದ ಆ ಪಡೆ ಈಗ ಪಾತಕಿಸ್ಥಾನಕ್ಕೇ ಕಚ್ಚಿಗೊಂಡು ಇದ್ದು.

ಎಲ್ಲ ದಿಕ್ಕಂಗೂ ಈ ಕತೆ ಅನ್ವಯಿಸುತ್ತು.
ಒಂದು ಮಠಕ್ಕೆ ಲೂಟಿ ಮಾಡ್ಳೆ ಹೇದು ಕೆಲವು ಕ್ಷುದ್ರ ಶಕ್ತಿಗಳ ಇನ್ನೊಂದು ಮಠ ತಯಾರು ಮಾಡಿರೆ, ಒಂದು ದಿನ ಒಪಾಸು ಆ ಮಠಕ್ಕೇ ಲೂಟಿ ಮಾಡ್ತು. ಅಪ್ಪೋ!
~

ಒಂದೊಪ್ಪ: ಭವಿಷ್ಯದ ಮಕ್ಕಳ ಧರ್ಮಕ್ಕೇ ಕೊಂದ ಧರ್ಮಕ್ಕೆ ಭವಿಷ್ಯವೇ ಸ್ಪಷ್ಟ ಇಲ್ಲೆ!

ಒಪ್ಪಣ್ಣ

   

You may also like...

1 Response

  1. shyamaraj.d.k says:

    ಶುದ್ಧಿ ಲಾಯಕ ಆಯಿದು ಒಪ್ಪಣ್ಣ…..ಧನ್ಯವಾದಂಗೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *