ಪಿತ್ರಾರ್ಜಿತ ಆಸ್ತಿಯೂ, ಪೇಟೆ ಮನೆಯ ಆಸೆಯೂ…

ನೆಕ್ರಾಜೆ ಅಪ್ಪಚ್ಚಿಗೆ ಒಂದೊಂದರಿ ಕೋಪ ಬಪ್ಪದು ಅಂತೆ ಅಲ್ಲ – ಕಾರಣ ಇದ್ದೊಂಡೇ.
ಕೋಪ ಬಪ್ಪಲೆ ಪುರುಸೊತ್ತೆಲ್ಲಿರ್ತು ಕೇಳುವಿ ನಿಂಗೊ. ತೋಟದ ಕೆಲಸ, ಹಟ್ಟಿ ಕೆಲಸ, ಎಲ್ಲ ಅಪ್ಪಗ ಹೊತ್ತು ಪೂರಾ ಕಳಿತ್ತು. ಪುರುಸೊತ್ತಿದ್ದರೆ ಓದಲೂ ಇದ್ದು. ರಾಮಾಯಣ ಮಹಾಭಾರತ, ಚತುರ್ವೇದಂಗೊ – ಎಲ್ಲಾ ಸಂಪುಟಂಗೊ ಇದ್ದನ್ನೇ, ಮಕ್ಕಳಷ್ಟೇ ಪ್ರೀತಿಲಿ ನೋಡಿಗೊಂಡು ಬಂದದು. ಎಲ್ಲವನ್ನೂ ಓದೇಕಾರೆ ಒಂದು ಜೀವಮಾನವೇ ಬೇಕಕ್ಕು.
ಪುಸ್ತಕವ ಮಾತಾಡ್ಸುತ್ತಷ್ಟೇ ಪ್ರೀತಿಲಿ ಮನೆಯೋರ-ಮಕ್ಕಳ ಕಂಡಿದವು,
ಅಷ್ಟೇ ಪ್ರೀತಿಲಿ ದನಗಳ ಕಂಡಿದವು,
ಅಷ್ಟೇ ಪ್ರೀತಿಲಿ ಪ್ರತಿ ಅಡಕ್ಕೆ ಮರ-ತೆಂಗಿನ ಮರವ ಕಂಡಿದವು, ಅದೆಲ್ಲದರಿಂದಲೂ ಪ್ರೀತಿಲಿ ಆ ಜಾಗೆಯ ಕಂಡಿದವು.
ಧಾನ್ಯಲಕ್ಷ್ಮಿಯ ಕೊಡುವ ಗೆದ್ದೆಯ ಪ್ರೀತಿಲಿಯೇ ಕಂಡಿದವು, ಮನೆಯವ್ವು ಎಲ್ಲ ಒಪ್ಪಿದ್ದವು.
ನೆಕ್ರಾಜೆ ಮಣ್ಣು ಹೇದರೆ ನೆಕ್ಕರೆಯ ಗುಳಂದಲೂ ಲಾಯ್ಕಿದ್ದಾಡ, ಒಂದೊಂದರಿ ಅಭಿಮಾನಲ್ಲಿ ಹೇಳುದಿದ್ದು ಅವು.

ಹೆರಿಯೋರು ಕೊಟ್ಟ ಜಾಗೆಯ ಮೇಗೆ – ಹುಟ್ಟೇಕಾರೇ ಅಭಿಮಾನ ತುಂಬಿಗೊಂಡು ಬಯಿಂದವೋ – ಕಾಣ್ತು. ಆ ಕಾಲದ ಮಟ್ಟಿಂಗೆ ಒಳ್ಳೆಯ ವಿದ್ಯಾಭ್ಯಾಸವೇ ಆದರೂ, ಊರಿನ ಬಿಟ್ಟು ಬೇರೆ ಹೋದರಾಗ, ಅಪ್ಪಮ್ಮ ಮನುಗಿದ ಜಾಗೆಯ ಹಡ್ಳು ಬಿಡ್ಳಾಗ ಹೇದು ಪ್ರೀತಿಲಿ ಅಪ್ಪನ ಕೃಷಿ ಚಟುವಟಿಕೆಗಳ ಮುಂದುವರುಸಿಗೊಂಡು ಬಯಿಂದವು. ದೈವಭಕ್ತಿ, ಸಂಸ್ಕಾರ, ಜ್ಞಾನಾರ್ಜನೆ, ಕಲಾಸಕ್ತಿ – ಎಲ್ಲವನ್ನೂ ತುಂಬಿಗೊಂಡು, ಕೃಷಿಯನ್ನೂ ನೆಡೆಶಿಗೊಂಡು ಚೆಂದದ ಮನೆಲಿ ಚೆಂದದ ಸಂಸಾರದ ಒಟ್ಟಿಂಗೆ ಜೀವನ ಮಾಡ್ತಾ ಇದ್ದವು. ಮೂಡುಕಡಲಿನ ಬುಡಲ್ಲಿ ಒಂದು ಮಗಳು, ಪಡು ಕಡಲಿನ ಬುಡಲ್ಲಿ ಇನ್ನೊಂದು ಮಗಳು – ಇಬ್ರೂ ಸಂತೋಷಲ್ಲಿದ್ದವು.
ನೆಕ್ರಾಜೆ ಜಾಗೆಯ ಕರೆಲೇ ಹೋಪ ಗೌರಿ ಹೊಳೆಯ ಶುಭ್ರ ನೀರಿನಷ್ಟೇ ಶುದ್ಧ ವೆಗ್ತಿತ್ವ; ನೇರ ನಡೆ-ನುಡಿ.
ಎಷ್ಟು ದೂರ ಹೋಯೆಕ್ಕಾದರೂ ಆರನ್ನೂ ಕಾಯವು! ಈ ಪ್ರಾಯಲ್ಲಿಯೂ ನೆಡಕ್ಕೊಂಡೇ ಹೋಕು ಇಂದಿಂಗುದೇ! ಅದು ಅವಕ್ಕೆ ಕೊಶಿ ಕೊಡುವ ವಿಷಯವೇ.
ರೂಪತ್ತೆಯ ಗೆಂಡನ ಹಾಂಗೆ ಸಾಬೊನು-ಪೌಡ್ರು ಹಾಕಿ ನೈಸು ಮಾತಾಡಿ ಅರಡಿಯ; ಮನಸ್ಸಿಂಗೆ ಬಂದದರ, ಕಣ್ಣಿಂಗೆ ಕಂಡದರ ಹೇಳಿಯೇ ಬಿಡುದು; “ಕಣ್ಣಿಂಗೆ ಕೈ ಹಾಕಿದ ಹಾಂಗೆ” ಮಾತಾಡುದು – ಹೇದು ಭವ್ಯಕ್ಕ° ಹೇಳಿರೂ, ಇಪ್ಪದರ ಇಪ್ಪ ಹಾಂಗೇ ಹೇಳ್ತ ಕ್ರಮ ಒಪ್ಪಣ್ಣಂಗೆ ಕೊಶಿಯೇ ಅಪ್ಪದು.

ನೆಕ್ರಾಜೆ ಅಪ್ಪಚ್ಚಿಯ ವೆಗ್ತಿತ್ವದ ಬಗ್ಗೆ, ಅವರ ಗುಣಂಗಳ ಬಗ್ಗೆ ಗಣೇಶಮಾವಂಗೊ, ಆಚಮನೆ ದೊಡ್ಡಣ್ಣಂಗೋ – ಒಪ್ಪಣ್ಣನಿಂದಲೂ ಲಾಯಿಕ ಅರಡಿಗು; ನಾವು ಆ ಬಗ್ಗೆ ಮಾತಾಡುಸ್ಸು ಬೇಡ.
ಮತ್ತೆ? ಓ ಮೊನ್ನೆ ಅವರತ್ರೆ ಮಾತಾಡುವಗ ಬಂದ ಶುದ್ದಿಯ ಬಗ್ಗೆ ಮಾಂತ್ರ ಮಾತಾಡುವೊ°. ಆಗದೋ?

~

ಮೊನ್ನೆ ಎಡನ್ನೀರು ಆಟ ಕಳಾತಲ್ಲದೋ – ಹೋಗಿತ್ತಿದ್ದೆ.  ಹಲವಾರು ಹಳೆಮುಖಂಗೊ, ಹಲವಾರು ಹೊಸ ಮುಖಂಗೊ ಇದ್ದತ್ತು.
ಓ ಅದಾ, ಅವರ – ದೂರಂದ ನೋಡುವಾಗ ನೆಕ್ರಾಜೆ ಅಪ್ಪಚ್ಚಿಯ ಹಾಂಗೇ ಕಂಡತ್ತು, ಆದರೆ ಅಷ್ಟು ಪ್ರಾಯ ಆಯಿದಿಲ್ಲೆ.
ಹೋ, ನೆಕ್ರಾಜೆ ಅಪ್ಪಚ್ಚಿ ಅಲ್ಲ, ಅವರ ಹಾಂಗೇ ಕಾಂಬ ಅವರ ತಂಮ.
ಆಟಕ್ಕೆ ಗಣೇಶಮಾವನೂ ಮದುವೆಗೆ ಬಂದಿದ್ದ ಕಾರಣ ’ ಆ ಜೆನವೇ ಅಪ್ಪನ್ನೇ’ ಹೇದು ಮಾತಾಡಿಗೊಂಡೆಯೊ°.
ಅಪ್ಪಡ, ಅದೇ ಜೆನ.

ಈಗ ಅವು ನೆಕ್ರಾಜೆಲಿ ಇಲ್ಲೆ, ತನ್ನ ಪಾಲಿನ ಜಾಗೆಯ ಮಾರಿ ಕಾಸ್ರೋಡಿಲಿ ಇದ್ದವು.
ಆಟವೂ ಇದ್ದು, ಪುರುಸೊತ್ತೂ ಇದ್ದು – ಹಾಂಗೆ ಬಂದ್ಸು – ಹೇದು ಮಾತಾಡಿಗೊಂಡೆಯೊ°. ಇದೆಲ್ಲ ಆಗಿ ಒಂದು ವಾರ ಕಳಾತು.

~

ನೆಕ್ರಾಜೆ ಅಪ್ಪಚ್ಚಿ ಹೆರಂದ ಎಷ್ಟೇ ನೆಗೆನೆಗೆ ಮಾಡಿಗೊಂಡಿದ್ದರೂ, ಅವರ ಮನಸ್ಸಿನ ಒಳ ಈ ತಮ್ಮನ ಬಗ್ಗೆ ಒಂದು ಬೇಜಾರ ಇದ್ದೇಇದ್ದಾಡ.
ಗಣೇಶಮಾವನೇ ಹೇಳಿದ್ದ ಶುದ್ದಿ ಇದು; ಗಣೇಶಮಾವಂಗೆ ಅವರ ಹತ್ತರಂದ ಅರಡಿಗು ಅಲ್ಲದೋ!
ಮೊನ್ನೆ ಅವರ ತಮ್ಮನ ಕಾಂಬಗ ಅಂದು ಮಾತಾಡಿಗೊಂಡ ಸಂಗತಿ ಎಲ್ಲ ನೆಂಪಾತು. ನೆಕ್ರಾಜೆ ಅಪ್ಪಚ್ಚಿಯ ಅಭಿಪ್ರಾಯಂಗೊ ಎಲ್ಲವುದೇ ಗಣೇಶಮಾವ ಅಂದು ಹೇಳಿದ್ದದು ಕೆಮಿಯೊಳ ತಿರುಗಲೆ ಸುರು ಆತು.

ಅದೆಂತರ?

~
ನೆಕ್ರಾಜೆ ಅಪ್ಪಚ್ಚಿಗೆ ಪಿತ್ರಾರ್ಜಿತ ಆಸ್ತಿ, ನಿಂಗೊಗೆ ಗೊಂತಿದ್ದು.neerkaje gedde
ಗೌರೀಹೊಳೆಯ ಕರೇಲೇ ತೋಟ ಇಪ್ಪ ಕಾರಣ ಯೇವತ್ತೂ ಹಸುರೇ ಇಕ್ಕು. ಅಡಕ್ಕೆ ತೋಟ ಮಾಂತ್ರ ಹಸುರಿಪ್ಪದು ಗ್ರೇಶೆಡಿ, ಅದರಿಂದ ಮೇಗೆ ಇಪ್ಪ ಹಲಸು, ಮಾವಿನ ತೋಟಂಗೊ, ನಾಗ ಸಂಪಗೆ, ಗೋಸಂಪಗೆ ಇತ್ಯಾದಿ ಸಂಪಾಲುಸಿ ನೆಟ್ಟ ತೋಟಂಗೊ, ಅದರ ಮೇಗೆ ಇಪ್ಪ ದೊಡಾ ಕೆರೆ – ಎಲ್ಲವುದೇ. ತೋಟದ ಕರೆಲಿ ಹೊಳೆ ಇಪ್ಪ ಕಾರಣ ಆ ಹೊಡೆ ತಗ್ಗು ಇಪ್ಪಲೇ ಬೇಕು, ಅಪ್ಪೋ!
ಎತ್ತರದ ಹೊಡೆಲಿ ಗುಡ್ಡೆ, ತಗ್ಗಿನ ಹೊಡೆಲಿ ತೋಟವೂ, ಮನೆಯೂ. ಅವರ ಮನೆಗೆ ಕಂತಾಮುಟ್ಟೆ ಗುಡ್ಡೆ ಇಳ್ಕೋಂಡೇ ಹೋಯೇಕಪ್ಪದು.
ಬೈಕ್ಕು ಬಿಡ್ಳೆ ಕಲಿತ್ತೋನು ಒಂದರಿ ನೆಕ್ರಾಜೆಗೆ ಹೋಗಿ ಬರೆಕ್ಕಡ; ಒಂದರಿಯೂ ಬೀಳದ್ದೆ ಒಪಾಸು ಮನೆಗೆ ಬಂದರೆ ಕಲ್ತಾತು ಹೇದು ಅರ್ತ ಆಡ – ಚೆನ್ನೈಭಾವ° ಒಂದೊಂದರಿ ಹಲ್ಲೊಕ್ಕಿಗೊಂಡು ನೆಗೆಮಾಡುಗು. ಅದಿರಳಿ.
ಅಂತಾ ಕುತ್ತಕಂಡೆ ಜಾಗೆ; ಇದನ್ನೇ ವರ ಆಗಿ ಪರಿವರ್ತನೆ ಮಾಡಿಗೊಂಡ ನೆಕ್ರಾಜೆ ಅಪ್ಪಚ್ಚಿ ಓ ಅಲ್ಲಿ – ಗುಡ್ಡೆ ತಲೇಲಿ ಒಂದು ಕೆರೆ ಕಟ್ಟಿದವು.
ಮಳೆಗಾಲಲ್ಲಿ ತುಂಬಿದ ನೀರು ಚಳಿಗಾಲ ಮುಗಿವನ್ನಾರವೂ ಭೂಮಿಲಿಕ್ಕು. ಮೇಗೆ ಕೆರೆಯ ನೀರು, ಕೆಳ ಹೊಳೆಯ ನೀರು; ಸ್ವರ್ಗ ಹೇದು ಇದನ್ನೇ ಹೇಳುದಲ್ಲದೋ?

ಈ ಸ್ವರ್ಗ ಇಡೀ ಪಿತ್ರಾರ್ಜಿತವೋ? ಅಲ್ಲ; ಜಾಗೆ ಮಾಂತ್ರ ಪಿತ್ರಾರ್ಜಿತ – ಸ್ವರ್ಗವ ತಾನೇ ಕಟ್ಟಿಗೊಂಡದು.
ಒಬ್ಬನೆಯೋ? ಅಲ್ಲ, ನೆಕ್ರಾಜೆ ಅಪ್ಪಚ್ಚಿಯೂ, ಅವರ ಪ್ರೀತಿಯ ತಮ್ಮನೂ ಸೇರಿ ಕಟ್ಟಿದ್ದದು.
ಅಣ್ಣನ ಅನುಭವವೂ, ತಮ್ಮನ ಬುದ್ಧಿವಂತಿಕೆಯೂ – ಎರಡೂ ಸೇರಿ ಪರಿಪೂರ್ಣವಾದ ಸಾಮ್ರಾಜ್ಯ ಅದಾಗಿ ಬೆಳದ್ದು.
ಒಬ್ಬ° ತೋಟದ ಕೆಲಸ ವಹಿಸಿಗೊಂಡರೆ, ಮತ್ತೊಬ್ಬ° ಪೇಟೆ ಕೆಲಸ ವಹಿಸಿಗೊಂಡವು.
ಅಣ್ಣ ಅಡಕ್ಕೆ ಸೊಲುದು ಕಟ್ಟ ಕಟ್ಟಿ ತಯಾರು ಮಾಡಿ ಮಡಗಿರೆ, ತಮ್ಮ ಕೆಮ್ಕಕ್ಕೆ ಅಡಕ್ಕೆ ಕೊಟ್ಟು ಪೈಸೆ ತಪ್ಪಷ್ಟೂ – ಪರಸ್ಪರತೆ. ಅವರಿಬ್ರ ಅನ್ಯೋನ್ಯತೆಂದಾಗಿ ಆ ಖಾಲಿಜಾಗೆಲಿ ಬೆಳದ ಸಾಮ್ರಾಜ್ಯ ಎಷ್ಟಿತ್ತು ಹೇದರೆ – ಬಾಬುವಿಂಗೆ ಒಂದರಿ ಅಡಕ್ಕೆ ತೆಗವಲೆ ಹೆರಟ್ರೆ ವಾರಗಟ್ಳೆ ಬೇಕಪ್ಪಷ್ಟು – ಸಾಕೋಸಾಕು ಹೇದು ಅಪ್ಪಷ್ಟುದೇ!

ಆದರೆ ಈಗ? ಅದುವೇ ಶುದ್ದಿ!

~

ಅವರೊಳಾಣ ಕೆಲಸ ಹಂಚಿಕೆಂದಾಗಿ ತಮ್ಮಂಗೆ ಪೇಟೆ ಸಂಪರ್ಕ ಹೆಚ್ಚಾತು.
ವಾರಲ್ಲಿ ನಾಲ್ಕು ದಿನವುದೇ ಪೇಟಗೆ ಹೋಪ ನಮುನೆ ಆತು. ಉದಿಯಪ್ಪಗ ಪೇಂಟಂಗಿ ತುರ್ಕುಸಿಗೊಂಡರೆ ಸಮ, ಎಲ್ಲಿಗೆ-ಎತ್ಲಾಗಿ ಹೆರಡುದು ಹೇದು ಆರೂ ಕೇಳವು. ಪೈಸೆ ಎಲ್ಲಿ ಮುಗುತ್ತು, ಎಷ್ಟು ಮುಗುತ್ತು ಹೇದು – ಧರ್ಮರಾಯನ ಹಾಂಗಿರ್ತ ಅಣ್ಣ ಅಂತೂ ಕೇಳಲೇ ಕೇಳವು. ಎಂತಾರು ಒಯಿವಾಟು ಇದ್ದಾಯಿಕ್ಕು ಹೇದು ಎಲ್ಲೋರುದೇ ನಂಬಿಗೊಂಡಿದವು. ಪೇಟೆ ಸಂಪರ್ಕ – ಬರೇ ಸಂಪರ್ಕ ಮಾಂತ್ರ ಆಗಿ ಒಳಿವದಲ್ಲದ್ದೆ, ಅದೊಂದು ಚಟ ಆಗಿ ಬಿಟ್ಟತ್ತೋ? ಪೇಟಗೆ ಹೋವುಸ್ಸು; ಆನಂದ ಭವನಲ್ಲಿ ಕಾಪಿ ಕುಡಿಸ್ಸು; ಕೆಲಸ ಎಲ್ಲ ಮುಗುಶಿಗೊಂಡು ಮಹಾಲಕ್ಷ್ಮಿಲಿ ಮಸಾಲೆ ದೋಸೆ ತಿಂಸು – ಹೊತ್ತೋಪಗ ಮನೆಗೆ ಬಂದು ಪೇಂಟಂಗಿ ಬಿಡುಸಿ ಕೂದತ್ತು. ಮನೆಯೋರ ಎಲ್ಲೋರ ನಂಬಿಕೆಯ ಎಡಕ್ಕಿಲೇ ಸಣ್ಣ ಮಟ್ಟಿನ ಪೇಟೆರುಚಿ ಹಿಡುದತ್ತು ತಮ್ಮಂಗೆ.

~

ಮುಂದೆಂತಾತು? ಬಪ್ಪ ವಾರ ಮಾತಾಡುವನೋ ಅಂಬಗ?

~

ಒಂದೊಪ್ಪ: ಪೇಟೆಜೀವನದ ರುಚಿ ಹಿಡಿಶುದು ಸುಲಬ, ಬಿಡ್ಳೆ ಕಷ್ಟ.

ಒಪ್ಪಣ್ಣ

   

You may also like...

4 Responses

  1. ವಿಜಯತ್ತೆ says:

    ಹರೇರಾಮ, ಇದರ ಓದಿಪ್ಪಗ “ಅಕ್ಕಿ ಮೇಲೆ ಆಸೆ ಅಕ್ಕನ ಮೇಲೆ ಪ್ರೀತಿ” ಹೇಳ್ತ ಗಾದೆ ನೆಂಪಾವುತ್ತು. ಎಂತಕೂ ಮುಂದಾಣ ವಾರ ನೋಡುವೊ೦.

  2. ಬೊಳುಂಬು ಗೋಪಾಲ says:

    ಈ ಅಣ್ಣ ತಮ್ಮಂದಿರ ಕತೆಲಿ ಕಡೇಂಗಪ್ಪಗ ಕಣ್ಣಿಂದ ಎರಡು ಹನಿ ಬೀಳಲೆ ಇದ್ದೋ ಹೇಳಿ ಸಂಶಯ. ಲೋಕಲ್ಲಿ ನೆಡವ ಕಥೆಯೇ ಆದರೂ ಒಪ್ಪಣ್ಣನ ಕೈಗೆ ಬಂದಪ್ಪಗ ಅದರ ರುಚಿ ಬೇರೆಯೇ. ಇನ್ನಾಣ ಶುಕ್ರವಾರದ ವರಗೆ ಕಾಯದ್ದೆ ನಿಬೃತ್ತಿ ಇಲ್ಲೆ.

  3. “ಪೇಟೆಜೀವನದ ರುಚಿ ಹಿಡಿಶುದು ಸುಲಬ, ಬಿಡ್ಳೆ ಕಷ್ಟ” – ಹೌದು, ಒ೦ಥರಾ ಫೆವಿಕಾಲ್ ಮೇಲೆ ಕಾಲಿಟ್ಟ ಹಾ೦ಗೆ!

  4. ಎ ರಾಮಚಂದ್ರ ಭಟ್ says:

    ಕತೆ ಓದುವಾಗ ದುಃಖಾಂತವೊ ಎಂಬ ಗುಮಾನಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *