ಪ್ರಚಂಡ ಬೆಳವಣಿಗೆಯ ಪ್ರಪಂಚಕ್ಕೂ ಚಂಡಮಾರುತದ ಪರಿಣಾಮ!

December 16, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತೆಮುಳುನಾಡು ಸುದ್ದಿ ಮಾತಾಡಿ ಒಂದು ವಾರವೂ ಆಯಿದಿಲ್ಲೆ, ಪುನಾ ತೆಮುಳುನಾಡು ಶುದ್ದಿಯೇ ಮಾತಾಡುವ ಹಾಂಗಾತೋ!?
ಅಪ್ಪು! ಮೊನ್ನೆ ಒಂದು ದುರ್ಘಟನೆಯ ಬಗ್ಗೆ, ಇಂದು ಇನ್ನೊಂದು ದುರ್ಘಟನೆಯ ಬಗ್ಗೆ.
ನವಗೆ ಅಲ್ಲಿ ಚೆನ್ನೈಭಾವ° ಇದ್ದಿದ್ದ ಕಾರಣವೇ ಗೊಂತಾದ್ಸು, ಅದು ಬೇರೆ.
~
ಭೂಮಿ ಬೆಶಿ ಆಗಿ, ಗಾಳಿ ಮೇಗೆ ಹೋಗಿ ಉಂಟಪ್ಪ ನಿರ್ವಾತವ ತುಂಬುಸಲೆ ಸಮುದ್ರಲ್ಲಿಪ್ಪ ಗಾಳಿ ಒಳ ಬೀಸುತ್ತ ಪ್ರಕ್ರಿಯೆಯೇ – ಚಂಡಮಾರುತ. ಸೈಕ್ಲೋನು – ಹೇಳ್ತವು ಇದರ, ಇಂಗ್ಳೀಶು ಅರಡಿವೋರು. ಮೊನ್ನೆ ಸನ್ನೈ ಲಿಯೂ ಬಂದದು ಇದೇ ಸೈಕ್ಲೋನು.
ಬಂಗಾಳ ಕೊಲ್ಲಿಯ ಸಮುದ್ರಂದ ಸುರುಳಿ ಸುರುಳಿಯಾಗಿ ಬಂದ ಮಹಾಗಾಳಿ ತನ್ನೊಟ್ಟಿಂಗೆ ನೀರಿನ ಅಂಶವನ್ನೂ ತಂದು, ಭೂಮಿಯ ಮೇಗೆ ಮೋಡ ಉಂಟುಮಾಡುಸಿ, ಮಳೆ ಮಾಡಿಕ್ಕಿ ಹೋತು.
ಮಳೆಯ ಒಟ್ಟಿಂಗೇ ಊರು ತಂಪಿತ್ತು; ಭೂಮಿಲಿ ನೀರಾತು. ಕಾವೇರಿ ನೀರಿಂಗಾಗಿ ಅಂಬಗಂಬಗ ರಗಳೆ ತೆಗೆತ್ತ ಹೆಮ್ಮಕ್ಕೊ ಮೊನ್ನೆಷ್ಟೇ ಕಾವೇರಿಯ ಪಾದ ಸೇರಿತ್ತಪ್ಪೋ; ಅದು ಹೋದ ಗಳಿಗ್ಗೆಲಿ ಕಾವೇರಿ ಹರಿತ್ತ ಸುತ್ತು-ಮುತ್ತಲ ಜಾಗೆ ಪೂರ ಚೆಂಡಿ ಆತು.
ಎಲ್ಲ ಒಳ್ಳೆದೇ, ಈ ಚಂಡಮಾರುತಲ್ಲಿ. ಆದರೆ…
~
ಈ ಚಂಡಮಾರುತ ಮಳೆ ಮಾಂತ್ರ ಮಾಡಿದ್ದರೆ ತೊಂದರೆ ಇತ್ತಿಲ್ಲೆ, ಅದರ ತಂತ ಆ ಗಾಳಿ – ರಣ ಗಾಳಿ ಇದ್ದನ್ನೆ, ಅದು ವಿಪರೀತ ಹಾನಿ ಮಾಡಿತ್ತು. ಗಂಟೆಗೆ ನೂರು-ನೂರೈವತ್ತು ಕಿಲೋಮೀಟ್ರು ವೇಗಲ್ಲಿ ಬೀಸುವ ಗಾಳಿ ಅದು, ಆಚಕರೆ ಪುಟ್ಟನ ಬೈಕ್ಕಿನಷ್ಟು ಸ್ಪೀಡು!
ಮೊನ್ನೆ ಒಂದರಿ ಆ ಬೈಕ್ಕು ಮಾರ್ಗದ ಕರೆ ಸೋಜಂಗೆ ಒರಸಿದ್ದರ್ಲಿ, ಸೋಜ ನೆಲಕ್ಕೆ ಬಿದ್ದ ಹಾಂಗಾಗಿ ಕಡೆಹಲ್ಲು ರಟ್ಟಿದ್ದು. ಆ ನಮುನೆ ಶೆಗ್ತಿ. ಚಂಡ ಮಾರುತವೇ ಬೀಸಿರೆ ಇನ್ನು ಕೇಳೇಕೋ…
ಎಲ್ಲೋರ ಹಲ್ಲು ರಟ್ಟುದೇ!
ಚೆನ್ನೈ ಬಾವನ ಮನೆಲಿಯೂ ಹಾರಿದ್ದಡ; ಹಲ್ಲಲ್ಲ – ಕಿಟುಕಿ ಕನ್ನಾಟಿ.
~
ತರವಾಡುಮನೆ ಟೀವಿಲಿ ಮೊನ್ನೆಂದ ತೋರ್ಸುತ್ತಾ ಇದ್ದವು – ಪೂರ್ವ ಕರಾವಳಿಲಿ ವರ್ದಾ ಚಂಡಮಾರುತ ಬೀಸಿ ಜೆನಜೀವನ ಅಸ್ತವ್ಯಸ್ತ – ಹೇದು. ಅಷ್ಟಪ್ಪಗ ರಂಗಮಾವ° ಹೇದವು – ಪ್ರಪಂಚ ಎಷ್ಟೇ ಮುಂದುವರಿಯಲಿ, ಜೆನಂಗೊ ಎಷ್ಟೇ ಆಧುನಿಕರಾಗಲಿ – ಪ್ರಕೃತಿಯ ಒಂದು ಮುನಿಸಿನ ಎದುರು ಆರುದೇ ಇಲ್ಲೆ.
ಆ ಅಬ್ಬೆ ಹೇಳಿದ್ದರ ನಾವೆಲ್ಲೋರುದೇ ಕೇಳೇಕಷ್ಟೇ – ಹೇದು.
ಅಂಬಗ ಚೆನ್ನೈಲಿ ಮಾಂತ್ರವೇ ಒರಿಶಕ್ಕೂ ಬಪ್ಪದು ಎಂತಕೆ ಹೇದು ಕೇಳಿದರೆ ಒಪ್ಪಣ್ಣಂಗೆ ಉತ್ತರಕೊಡ್ಲೆಡಿಯ!
ಈಗ ಸೂಚನೆ ಕೊಡ್ತದಾಯಿಕ್ಕು. ಕಾಲಕಾಲಕ್ಕೆ ಮಾಡೆಕ್ಕಾದ್ದದರ ಮಾಡದ್ದೆ ಅನರ್ತ ಮಾಡ್ಲೆ ಹೋದರೆ ಅನರ್ತವೇ ಅಕ್ಕು ಹೇದು. ಬಾಕಿ ದಿಕ್ಕಂಗೂ ಬತ್ತು ನಿದಾನಕ್ಕೆ. ಅದರ ಮದಾಲು ಎಚ್ಚರಿಗೆ ಆದರೆ ಭೂಮಿಯೂ ಒಳಿಗು, ವಾತಾವರಣವೂ ಒಳಿಗು, ಮನುಷ್ಯರೂ ಒಳಿಗು. ಇಲ್ಲದ್ದರೆ ಎಲ್ಲ ಒಂದೇ ಆಪೋಶನಲ್ಲಿ ಮುಗಿಗು!
ಅಪ್ಪಲ್ದಾ ಕಂಡತ್ತು ಒಪ್ಪಣ್ಣಂಗೆ. ಎಲ್ಲರೂ ಅವರವರ ಏರ್ಪಾಡಿಲೇ ಇದ್ದಿಪ್ಪಾಗ, ಭೂಮಾತೆಗೆ ಒಂದು ಹಿಂಗಾರು, ಒಂದು ಚಂಡಮಾರುತ ಬಿಡೆಕ್ಕು ಹೇದು ಕಂಡತ್ತು. ಅದಾ – ಒಂದರಿ ಸುಯಿಂಪಿದ್ದಷ್ಟೇ – ಎಷ್ಟೋ ಜೆನರ ಮನೆ, ಮಠ, ವಾಹನ, ನೆಮ್ಮದಿ – ಎಲ್ಲವುದೇ ಗಾಳಿಗೆ ಹಾರಿ ಹೋಗಿತ್ತು. ಹಲವು ದಿಕ್ಕೆ ಇನ್ನು ಉಂಬಲೆ ಏರ್ಪಾಡು ಮಾಡಿ ಆಯೇಕಟ್ಟೆ – ಹೇಳುವ ಪರಿಸ್ಥಿತಿ.

ತನ್ನ ಸ್ವಾರ್ಥಕ್ಕಾಗಿ ಪ್ರಚಂಡ ಬೆಳವಣಿಗೆಯ ಈ ಪ್ರಪಂಚಲ್ಲಿ ಮಾಡ್ತಾ ಇದ್ದ° ಮನುಷ್ಯ°. ಆದರೂ ಪ್ರಕೃತಿಮಾತೆಯ ಕೆಲಸಂಗಳೇ ಅಂತಿಮ. ಭೂಕಂಪ, ಚಂಡಮಾರುತ, ಸುನಾಮಿ – ಹೇದರೆ ನಾವೆಲ್ಲ ನೋಡಿಗೊಂಡೇ ಬಾಕಿ ಆಯೇಕಟ್ಟೆ – ಹೇದವು ರಂಗಮಾವ°.
~

ಒಂದೊಪ್ಪ: ನಿಜವಾದ ಜಾತ್ಯತೀತ ಹೇದರೆ ಪ್ರಾಕೃತಿಕ ವಿಕೋಪಂಗಳೇ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಬೊಳುಂಬು ಗೋಪಾಲ

  ಕಡೇಣ ಒಪ್ಪ ನೋಡುವಗ ಅಪ್ಪು ಹೇಳಿ ಕಂಡತ್ತು. ಪ್ರಕೃತಿಗೆ ಕೋಪ ಬಂದರೆ ಆರುದೆ ಒಳಿಯವು. ಸಕಾಲಿಕ ಶುದ್ದಿ.
  ಚಂಡಮಾರುತ ಬಂತು ಹೇಳಿ ಬೇಗ ಬೇಗನೆ ಶುದ್ದಿಯ ಮುಗುಶಿದೆಯೊ ಒಪ್ಪಣ್ಣ್ಣ್ಣ?

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಈಗಾಣೋರು ಆರೂ ಕಂಡಿದವಿಲ್ಲೆಡಪ್ಪ ಹೀಂಗಿರ್ತ ಚಂಡಮಾರುತ ಇಲ್ಲಿಗೆ ಬಡುದ್ಸು. ಸುಮಾರು ಐವತ್ತೊರಿಶಂದ ಮದಲೊಂದರಿ ಹೀಂಗೆ ಆಗಿತ್ತಡಪ್ಪ!

  ತ್ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ … ಹೀಂಗಿದಾ ಏವುದಾರೊಂದು ಪ್ರತ್ಯೊರ್ಶವೂ ಇಲ್ಲಿಗೆ ಬತ್ಸು. ಇದುವೇ ಇಲ್ಲಿಯಾಣ ಮುಂಗಾರು. ಆದರೆ ಅದೆಂತ ಅರ್ಥವೇ ಆವುತ್ತಿಲ್ಲೆ ನಿರೀಕ್ಷೆಂದ ಮೀರಿಯೇ ಎಲ್ಲವೂ ಇಲ್ಲಿ ನಡವದು. ವಿಚಿತ್ರ ಹೇದರೆ ಕಳುದೊರಿಶಂದ ರಜಾ ಪಾಠ ಕಲ್ತಿದವೋದು! ಅಮ್ಮ ಹೆರಟಪ್ಪಗ ನಿರೀಕ್ಷಿತ ಅಗ್ನಿಕಾಂಡ ಕಿಂಚಿತ್ತೂ ಆಯಿದಿಲ್ಲೆ, ಚಂಡಮಾರುತ ಬಡುದಪ್ಪದ್ದೆ ಎಲ್ಲಿಲ್ಲದ್ದ ದುರಸ್ತಿಕಾರ್ಯವನ್ನು ಎಡಿಗಾಟ್ಟು ಜೆನ, ಸಾಮಾನು ಬರುಸಿ ಮಾಡಿದ್ದವು ಹೇಳ್ಸರ ಮೆಚ್ಚಲೇ ಬೇಕು. ಇಲ್ಲದ್ದರೋ… ಕಳುದೊರಿಶಾಣಾವಸ್ಥೆಯೇ ಆವುತ್ತಿತ್ತು! . ಕರೆಂಟು ಒಂದು ಮಟ್ಟು ಸಮ ಆಗ್ಯೊಂಡು ಬತ್ತಾ ಇದ್ದು ಆದರೆ ಠೀವಿದು, ನೆಟ್ಟಿಂದು ಹೇದು ಬಳ್ಳಿ ಎಳಕ್ಕೊಂಡು ಹೋದ್ಸು ಇದ್ದನ್ನೆ…… ಅದಿನ್ನು ಇಡೀ ಪೇಟಗೆ ಹೊಸತ್ತು ಬಲುಗಿ ಆಯೆಕ್ಕಟ್ಟೆ. ಅದೂ ಕರೆಂಟಿನವರ ಕೆಲಸ ಮುಗುದಲ್ಲಿ ಬೇಕು ಇವರದ್ದು ಬಲುಗಲೆ!

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಇಲ್ಲಿಯೂ ರಜಾ ಮಳೆ ಬಂದು ಹೋತು ಆ ಚಂಡಮಾರುತದ ಪ್ರಭಾವಲ್ಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಜಯಗೌರಿ ಅಕ್ಕ°ಸುವರ್ಣಿನೀ ಕೊಣಲೆಅಕ್ಷರ°ಪುಟ್ಟಬಾವ°ವೇಣೂರಣ್ಣಎರುಂಬು ಅಪ್ಪಚ್ಚಿನೆಗೆಗಾರ°ಪ್ರಕಾಶಪ್ಪಚ್ಚಿವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಶೀಲಾಲಕ್ಷ್ಮೀ ಕಾಸರಗೋಡುಮಾಷ್ಟ್ರುಮಾವ°ಕೇಜಿಮಾವ°ಶ್ಯಾಮಣ್ಣಡಾಗುಟ್ರಕ್ಕ°ಗೋಪಾಲಣ್ಣದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿಶಾಂತತ್ತೆಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಸುಭಗಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ