ಜೀವನದ ಹಶು ಬಿಡುವ ಪ್ರಾಯೋಪವೇಶ…

ತಿಂದಷ್ಟೂ ಹಶು ಹೆಚ್ಚಪ್ಪದು – ಹೇದು ಒಂದೊಂದರಿ ರಂಗಮಾವ ಪರಂಚುಲಿದ್ದು. ಈಗಾಣ ರಾಜಕೀಯದವರ ಕಂಡ್ರೆ ಹೀಂಗಿರ್ಸ ಉದ್ಗಾರ ಬತ್ತು ಅವಕ್ಕೆ.
ಆರಿಂಗೇ ಆಗಲಿ, ರುಚಿ ಸಿಕ್ಕಿರೆ ತಿಂದು ಹೋವುತ್ತು, ಕೊದಿ ಹಿಡುದರೆ ಇನ್ನೂ ಇನ್ನೂ ಬೇಕು ಹೇದು ಮನಸ್ಸಾಗಿ, ಕೊನೆಗೆ ತಿಂದುಗೊಂಡೇ ಇಪ್ಪ ಹಂತಕ್ಕೆ ಎತ್ತುತ್ತು.
ಅದು ಜೀವ ಸಹಜ ಗುಣ. ಬರೇ ಮನುಶ್ಯರು ಮಾಂತ್ರ ಅಲ್ಲ, ಎಲ್ಲ ಜೀವಿಗೊಕ್ಕೂ ಈ ಕ್ರಮ ಇದ್ದು. ರುಚಿ ಹಿಡುದ ಹುಲಿ ಮನುಶ್ಯರನ್ನೇ ಕೊಲ್ಲುತ್ತಡ – ಹಾಂಗೆ.

ರುಚಿ ಹಿಡುದು ಬದ್ಕಿ, ರುಚಿರುಚಿಯಾಗಿ ತಿಂದುಂಡು ಮಾಡಿಕ್ಕಿ, ಒಳ್ಳೆತ ರುಚಿಲಿ ಇಪ್ಪಗಳೇ – ಜೀವನ ಸಾಕು – ಹೇದು ಉಂಬದರ ನಿಲ್ಲುಸಿರೆ ಹೇಂಗಕ್ಕು?
ತಿಂಬಲಿಲ್ಲದ್ದೆ ನಿಲ್ಲುಸುದು ಅಲ್ಲ, ಬದಲಾಗಿ – ಎನಗೆ ಇನ್ನು ಊಟ ಸಾಕು – ಹೇದು ಊಟ ನಿಲ್ಲುಸುದು!
ಅಬ್ಬಾ..!

ಬೋಚ ಬಾವಂಗೆ ಹತ್ತು ನಿಮಿಶವೂ ಉಣ್ಣದ್ದೆ ತಿನ್ನದ್ದೆ ಇಪ್ಪಲೆ ಎಡಿಯ. ಬಾಯಿಗೆ ಎಂತಾರು ಹೋಪಲೇ ಬೇಕು. ಹಲ್ಲೆಡಕ್ಕಿಲಿ ಎಂತಾರು ಅಗಿಯಲೇ ಬೇಕು.
ಅದೊಂದು ಕೊದಿ ಅವಂಗೆ – ಹೇದು ಪಾತಿ ಅತ್ತೆ ಕಂಡ್ರೆ ಪರಂಚುಗು.
ಉದಿಯಾಂದ ಮದ್ಯಾನ್ನ ಒರೆಂಗೆ ಹಶುಕಟ್ಟಿ ಕೂದು ಮದ್ಯಾನ್ನದ ಊಟ ಉಂಬದು – ತಡವಾವುತ್ತು ಹೇಳಿಯೇ ಅವ ಊಟಕ್ಕಪ್ಪಗ ಹೋವುಸ್ಸು.
ಹಾಂಗಿಪ್ಪಗ – ಊಟವನ್ನೇ ಬಿಟ್ಟು ಪೂರ್ಣವಾಗಿ ದೇವರನ್ನೇ ಧೇನುಸಿಗೊಂಡು ಇಪ್ಪದರ ಅವಂಗೆ ಗ್ರೇಶುಲೇ ಎಡಿತ್ತಿಲ್ಲೆ.
~

ನಮ್ಮ ಸನಾತನ ಆಚರಣೆಗಳಲ್ಲಿ ಕೆಲವು ಸುಲಾಬದ್ದೂ, ಕೆಲವು ಅತ್ಯಂತ ಕಠಿಣದ್ದರನ್ನೂ ಸೇರ್ಸಿ ಮಡಗಿದ್ದವು ಹಳಬ್ಬರು. ದೇವರಿಂಗೆ ನಮಸ್ಕಾರ ಮಾಡುವ ಸಂಸ್ಕಾರ ಸುಲಭದ್ದಾದರೆ, ಪ್ರಾಯೋಪವೇಶದ ಹಾಂಗಿಪ್ಪ ವ್ರತಂಗೊ ಅತ್ಯಂತ ಸಂಕೀರ್ಣವಾದ್ದು.
ಅದೆಂತ ಪ್ರಾಯೋಪವೇಶ ಹೇದರೆ ಹಾಂಗಾರೆ?

ಬಾಲ್ಯ – ಯೌವನ – ಗೃಹಸ್ಥ – ಮೂರು ಹಂತಂಗೊ ಮನುಶ್ಯಂಗೆ ಬಹಳ ಮುಖ್ಯವಾದ್ದು. ಮೂರೂ ಹಂತಂಗಳಲ್ಲಿ ಆಯಾ ಕಾಲಕ್ಕೆ ಮಾಡೆಕ್ಕಾದ ಹಲವು ಕರ್ತವ್ಯಂಗೊ ಇದ್ದು. ಬಾಲ್ಯಲ್ಲಿ ಉಪನಯನ ಸಂಸ್ಕಾರಂದ ತೊಡಗಿ ಸಂಧ್ಯೋಪಾಸನೆ ಸುರುಮಾಡಿರೆ, ಯೌವನಲ್ಲಿ ದೇವತಾರಾಧನೆ, ವಿದ್ಯಾಭ್ಯಾಸ ಇತ್ಯಾದಿಗಳ ಮಾಡೇಕು.
ಮುಂದೆ ಗೃಹಸ್ಥಾಶ್ರಮ ಸ್ವೀಕಾರ ಮಾಡಿ ಸಂತಾನರೇಖೆಯ ಮುಂದುವರುಸೆಕ್ಕು, ತನ್ಮೂಲಕ ಹೊಸ ತಲೆಮಾರಿಂಗೆ ಮಾಹಿತಿಗಳ ಹರುಶೆಕ್ಕು.
ಮತ್ತಾಣದ್ದು ವಾನಪ್ರಸ್ಥ. ಮನೆಯ ಜಂಜಡಂದ ನಿವೃತ್ತಿ ಹೊಂದಿ ನೆಮ್ಮದಿಯ ಜೀವನ ಮಾಡುಸ್ಸು.
ಸಂಸಾರ ಎಲ್ಲವುದೇ ಚೆಂದಕ್ಕೆ ಬೆಳಗಿ, ಮುಂದುವರಿತ್ತಾ ಇಪ್ಪಗ ಇನ್ನೇನೂ ತಾನು ಮಾಡ್ಳೆ ಬಾಕಿಲ್ಲೆ – ಹೇಳ್ತ ವಿಚಾರವ ಧೃಡ ಮಾಡಿಗೊಂಡು, ತನ್ನ ಜೀವನ ಪೂರ್ಣ ಆತು, ಇನ್ನು ಮೋಕ್ಷಕ್ಕೇ ಹೋವುಸ್ಸು – ವಾನಪ್ರಸ್ಥದ ಕೊನೆಯ ಹಂತ.
ಒಂದು ವೇಳೆ ಗೃಹಸ್ಥ ಆಗದ್ದೇ ಇದ್ದರೂ – ನೇರವಾಗಿ ವಾನಪ್ರಸ್ಥಕ್ಕೆ ಬಂದರೂ – ಕೊನೆಯದಾಗಿ ಹೀಂಗೆ ಅನುಸುಲೆ ಸಾಧ್ಯತೆ ಇದ್ದು.

ತಾನು ಮಾಡೆಕ್ಕಾದ ಕೆಲಸ ಸಂಪೂರ್ಣವಾಗಿ ಕೈಗೂಡಿತ್ತು. ಇನ್ನು ನೇರವಾಗಿ ಮೋಕ್ಷಕ್ಕೆ ಹೋಪದು – ಹೇಳ್ತ ಧೃಡ ಮನಸ್ಸು ಒಬ್ಬಂಗೆ ಬಂದರೆ,
ಅಷ್ಟುದಿನ ಅವನ ಪ್ರಾಣಜ್ಯೋತಿಗೆ ಎಣ್ಣೆಯ ಹಾಂಗೆ ಸಿಕ್ಕುತ್ತಾ ಇದ್ದಿದ್ದ ಆಹಾರವನ್ನೇ, ಅನ್ನವನ್ನೇ ಬಿಟ್ಟು – ಪೂರ್ಣಪ್ರಮಾಣಲ್ಲಿ ದೇವತಾಚಿಂತನೆಯ ಮಾಡಿಗೊಂಡು, ಭಗವತ್ಸಂಕೀರ್ತನೆ ಮಾಡಿಗೊಂಡು ಸಮಯ ದೂಡುವ ಮಹತ್ಕಾರ್ಯವೇ ಪ್ರಾಯೋಪವೇಶ.

ಇದೇ ಚಿಂತನೆ ಸನಾತನ ಧರ್ಮದ ಇತರೇ ರೂಪಂಗೊ ಆದ ಜೈನ ಬೌದ್ದ ಮತಂಗಳಲ್ಲಿಯೂ ಇದ್ದಾಡ.
ಸಂಕರಾಚಾರ್ಯ ಚರಿತ್ರೆ ಓದಿರೆ ಕುಮಾರಿಲ ಭಟ್ಟರ ಕತೆ ಗೊಂತಾವುತ್ತು. ಮಾಷ್ಟ್ರುಮಾವ ಆ ಕತೆಯ ಕಣ್ಣಿಂಗೆ ಕಟ್ಟುವ ಹಾಂಗೆ ಒಂದೊಂದರಿ ಹೇಳ್ತವು. ವಿವರವಾಗಿ ಮುಂದೆ ಒಂದರಿ ಮಾತಾಡುವೊ.
ಜೈನರಲ್ಲಿ ಇದನ್ನೇ ಸಲ್ಲೇಖನ ವ್ರತ – ಹೇಳಿಯೂ ಹೇಳ್ತವಾಡ.
~

ಜೀವನ ಸಾಕು – ಹೇಳಿ ಕಂಡ ಜೈನ ಮುನಿಗೊ ಅವರ ಕರ್ಮಂಗಳ ಶುದ್ಧ ಮಾಡಿ ಮೋಕ್ಷಕ್ಕೆ ಹೋಪ ದಾರಿಯೇ ಈ ಸಲ್ಲೇಖನ.
ಪ್ರಾಯೋಪವೇಶದ ಹಾಂಗೇ, ಅನ್ನಾಹಾರ ಬಿಟ್ಟು ಮರಣವ ಎದುರು ನೋಡುದು.
ತನ್ನದು ಎಲ್ಲವೂ ಪೂರ್ಣ ಆತು, ಇನ್ನು ಶಿಷ್ಯಂದ್ರು ಮುಂದುವರುಸಿಗೊಂಡು ಹೋಯೆಕ್ಕು – ಹೇಳುವ ಆಶೀರ್ವಾದದ ಒಟ್ಟಿಂಗೆ, ಊಟ ಬಿಟ್ಟು ಕೂಪದು.
ಧ್ಯಾನಲ್ಲಿ ಕೂಪದು.
ಕೂದು ಧ್ಯಾನ ಮಾಡುದು.
ರಜ್ಜ ಹೊತ್ತಪ್ಪಗ ಆಸರಾವುತ್ತು. ಸಹಜ.
ಅದಾಗಿ ರಜ್ಜ ಹೊತ್ತಿಂಗೆ ಹಶು ಆವುತ್ತು. ಸೃಷ್ಟಿ ಸಹಜ ಅದು.
ಅದಾಗಿ ರಜ್ಜ ಹೊತ್ತಿಂಗೆ ಒರಕ್ಕು ತೂಗುತ್ತು. ಅದುದೇ ಸಹಜವೇ.
ಶು ಆತು ಹೇದು ಒಪಾಸು ಉಂಬಲಿಲ್ಲೆ. ಆಸರಾತು ಹೇದು ಒಪಾಸು ನೀರು ಮುಟ್ಳಿಲ್ಲೆ.
ಇದೆಲ್ಲದರ ಮೀರ್ಸಿ, ಹಿಡುದು ನಿಂದು, ಒಂದೇ ಧ್ಯಾನಲ್ಲಿ ದೇವರ ಆಶ್ರಯಿಸಿ, ಕೊನೆಗೆ ದೇವರೊಟ್ಟಿಂಗೆ ಲೀನ ಅಪ್ಪದು – ಮುಕ್ತಿ ಹೊಂದುದು ಸಲ್ಲೇಖನ ಅಥವಾ ಪ್ರಾಯೋಪವೇಶದ ಕ್ರಮ.
~

ಆದರೆ, ಓ ಅಂದು ಆರೋ ಒಂದಿಬ್ರು ’ಇದು ಆತ್ಮಹತ್ಯೆ’- ಹೇದು ಕೋರ್ಟಿಲಿ ನಂಬ್ರ ಮಾಡಿದ್ದವಡ.
ಕೋರ್ಟುದೇ ಅದರ ವಿಚಾರಣೆ ಮಾಡಿ ’ಅಪ್ಪು’ – ಹೇಳಿದ್ದಾಡ.
ಆತ್ಮಹತ್ಯೆ ಮಾಡ್ಳಾಗ ಹೇದು ನಮ್ಮ ಸಂವಿಧಾನ ಹೇಳ್ತಲ್ಲದೋ -ಹಾಂಗಾಗಿ ಈ ವ್ರತವನ್ನೂ ರದ್ದು ಮಾಡಿದ್ದವಾಡ.
ಈ ವ್ರತ ಮಾಡ್ತದು ಗೊಂತಾದರೆ ಕೂಡ್ಳೇ ಅವಕ್ಕೆ ಬಲಾತ್ಕಾರವಾಗಿ ಊಟ ಮಾಡ್ಸುವ ಅಧಿಕಾರ ಸಂವಿಧಾನಕ್ಕೆ ಇದ್ದು.
ಆದರೆ, ಈ ವ್ರತ ಮಾಡ್ತದು ಎಂಗಳ ಧರ್ಮದ ಹಕ್ಕು – ಹೇದು ಜೈನ, ಸನಾತನಿಗೊ ಈಗ ಕೋರ್ಟಿನ ವಿರುದ್ಧ ಪ್ರತಿಭಟನೆ ಮಾಡ್ತಾ ಇದ್ದವು.

ಆತ್ಮ ಹತ್ಯೆ ಮಾಡ್ಳಾಗ. ಸಲ್ಲೇಖನವೂ ಒಂದು ಆತ್ಮಹತ್ಯೆ – ಹೇದು ಕೋರ್ಟಿನ ತಿಳಿವಳಿಕೆ.
ಹಶು ಆಸರು ಕಟ್ಟಿ, ಕಟ್ಟಿದ ಮೆಟ್ಳಿಲಿ ಮೋಕ್ಷಕ್ಕೆ ಹೋಪದು ಪ್ರಾಯೋಪವೇಶ / ಸಲ್ಲೇಖನ.
ಆತ್ಮಹತ್ಯೆ ಬೇರೆ, ಸಲ್ಲೇಖನ ಬೇರೆ. ಆತ್ಮ ಹತ್ಯೆ ಹೇದರೆ ಕಷ್ಟನಷ್ಟಂದ ಓಡುಲೆ ಇಪ್ಪ ದಾರಿ. ಸಲ್ಲೇಖನ ಹೇದರೆ ಬದ್ಕಿನ ಎಲ್ಲವುದೇ ತೀರಿ, ಸಂತೃಪ್ತಿಲಿ, ಸಂತೋಶಲ್ಲೇ ಮೋಕ್ಷಕ್ಕೆ ಹೋವುಸ್ಸು – ಹೇದು ಪ್ರತಿವಾದಿಗಳ ವಾದ.
ನಮ್ಮ ದೇಶದ ನಮ್ಮ ಭೂಮಿಲಿ ನವಗೆ ಬೇಕಾದ ಹಾಂಗೆ ಬದ್ಕುಲೆ ನಮ್ಮ ಸಂವಿಧಾನ ಅವಕಾಶ ಕೊಡೆಕ್ಕು – ಹೇದು ವಾದ ಮಾಡ್ತವು.

ಮೋಕ್ಷ, ಸಂಸ್ಕಾರ, ಪರಿಪೂರ್ಣತೆ – ಇದೆಲ್ಲ ಪಾಶ್ಚಾತ್ಯ ಸಂಸ್ಕೃತಿಲಿ ಬರದ ಸಂವಿಧಾನಕ್ಕೆ ಅರ್ತ ಆಗದ್ದರೂ, ಭಾರತೀಯ ಸಂವಿಧಾನ, ಹಳೆಯ ಸ್ಮೃತಿಗಳ ಅನುಸಾರ ಕಲ್ತು ನೆಡಕ್ಕೊಂಬವಕ್ಕೆ ಅರ್ತ ಆವುತ್ತು.

ಒಂದೊಪ್ಪ: ಆತ್ಮಹತ್ಯೆ ಮಾಡುವವ° ಹೇಡಿ, ಪ್ರಾಯೋಪವೇಶ ಮಾಡುವವ ಅಗಾಧ ಧೈರ್ಯಸ್ಥ°.

ಒಪ್ಪಣ್ಣ

   

You may also like...

4 Responses

 1. ತೆಕ್ಕುಂಜ ಕುಮಾರ ಮಾವ° says:

  ಒಪ್ಪ ಶುದ್ಧಿ ಒಪ್ಪಣ್ಣ. ಎಲ್ಲವನ್ನು ಅಕ್ಷರ ಅಕ್ಷರ ಓದಿ ಅರ್ಥೈಸಿಗೊಂಬವಕ್ಕೆ ಸಲ್ಲೇಖನವೂ ಆತ್ಮಹತ್ಯೆಯ ಹಾಂಗೆ ಕಾಂಗಷ್ಟೆ. ಧಾರ್ಮಿಕ ಪ್ರಜ್ಞೆಯೂ, ಬೌದ್ಧಿಕ ಶುದ್ಧತೆಯೂ ಇದ್ದರೆ ಸಲ್ಲೇಖನದ ಅರ್ಥವ ತಿಳ್ಕೊಂಬಲಕ್ಕು.

 2. ಸಂಸ್ಕೃತ ಸಂಸ್ಕೃತಿ ಬಗ್ಗೆ ಜ್ಞಾನ ಇಲ್ಲದ್ದೋರ ಕೂರ್ಸಿ ಸಂವಿಧಾನ ಬರೆ ಹೇದರೆ ಅವರ ದಸುಬುಸು ಬಾಷೆಲಿ ಇದೆಲ್ಲ ಎಲ್ಲಿಗೆ ಜೀರ್ಣ ಅಕ್ಕವಕ್ಕೆ ಅಪ್ಪೋ!! ಛೇ ಹೇದು ಕಾಣುತ್ತು ಕೆಲವೆಲ್ಲ ತೀರ್ಮಾನ ನೋಡಿರೆ

 3. ಒಪ್ಪಣ್ಣ,
  ನಮ್ಮ ಸನಾತನ ಸಂಸ್ಕಾರಲ್ಲಿ ಬಂದ ಕರ್ಮಂಗ ಎಲ್ಲವೂ ನಮ್ಮ ಈ ಜನ್ಮದ ದಾರಿಯ ಸುಗಮ ಮಾಡಿ ಮೋಕ್ಷಕ್ಕೆ ತೆಕ್ಕೊಂಡು ಹೋಪ ಹಾಂಗೆ ಇಪ್ಪದೇ! ಅದರಲ್ಲಿಯೂ ಜೀವ-ಜೀವನದ ಎಲ್ಲಾ ಮೋಹಂಗಳ ಬಿಟ್ಟು ಏಕಧ್ಯಾನಲ್ಲಿ ಭಗವಂತನ ರೂಪ ಧ್ಯಾನಿಸಿ ಅವನ ಸಾಯುಜ್ಯ ಪಡವ ಕಠಿಣ ದಾರಿಯ ನಮ್ಮ ಸನಾತನಿಗೊ ಆಯ್ಕೆ ಮಾಡ್ತವು.
  ಮನುಷ್ಯಂಗೆ ಆಯುಸ್ಸು ಇದ್ದಷ್ಟು ಆಸೆ ಹೆಚ್ಚಿಗೆ. ಅಷ್ಟಿಪ್ಪಲ್ಲಿ, ತನ್ನ ಈ ಲೋಕದ ಬಂಧ ಮುಗುದತ್ತು ಹೇಳಿ ಗ್ರೇಶಿ ದೇಹದ ಆಸೆ, ಮನಸ್ಸಿನ ವ್ಯಾಮೋಹ ಬಿಟ್ಟು ದೇಹವ ತ್ಯಾಗ ಮಾಡ್ಲೆ ಅಷ್ಟೇ ಮಾನಸಿಕ ಸ್ಥೈರ್ಯ ಬೇಕು. ಹಗಲು ಉಪವಾಸ ಮಾಡಿ ಇರುಳು ಇಡೀ ಹಗಲು ತಿನ್ನದ್ದದರ ಎರಡು ಪಾಲು ತಿಂಬವಕ್ಕೆ ಈ ದೇಹೋಪವಾಸ ಅರ್ಥ ಆಗ ಅಲ್ಲದಾ? ಜೀವನಲ್ಲಿ ಬಂದದರ ಎದುರುಸುಲೆ ಎಡಿಯದ್ದೆ ಸೋತು ಆತ್ಮಹತ್ಯೆ ಮಾಡಿಗೊಂಬದಕ್ಕೂ, ಲೋಕದ ಬಂಧವ ಬಿಡುವ ಈ ವ್ರತಕ್ಕೂ ಅಜಗಜಾಂತರ ವೆತ್ಯಾಸ ಇಲ್ಲೆಯೋ? ಅದು ಕಾನೂನಿಂಗೆ ಅರ್ಥ ಆಯೆಕ್ಕನ್ನೆ? ಅವರವರ ಧರ್ಮ ಪಾಲನೆ ಮಾಡ್ಲೆ ಬಿಡುವಲ್ಲಿ ಸಂಸ್ಕಾರಂದ ಬಂದ ಈ ಧರ್ಮವನ್ನೂ ಪಾಲನೆ ಮಾಡುವ ಸಂಪ್ರದಾಯವ ಒಳಿಶಿ ಕೊಡೆಕ್ಕು. ಆ ಸಮಯವೂ ಬಕ್ಕು.

 4. ಬೊಳುಂಬು ಗೋಪಾಲ says:

  ಮೋಕ್ಷ ಸಾಧನೆಗೆ ಉತ್ತಮ ದಾರಿ. ಕಾನೂನು ಎಂತಕೆ ಮಾಡೆಕೋ ಅದಕ್ಕೆ ಮಾಡಿಕ್ಕವು. ಬೇಡದ್ದಕ್ಕೆಲ್ಲಾ ಇವು ತಲೆ ಹಾಕುಗು. ಹಾಂ. ಒಪ್ಪಣ್ಣ,
  ಬೈಲಿನ ಶುದ್ದಿಗಳ ಪ್ರತಿದಿನ ಓದುತ್ತಾ ಇದ್ದೆ , ಆದರೆ ಒಪ್ಪ ಕೊಡ್ಳೆ ಆಫೀಸಿಲ್ಲಿ ಎಡಿತ್ತಿಲ್ಲೆ !!!. ಅದು ಮನೆಗೆ ಬಂದಪ್ಪಗಳೇ ಆಯೆಕಷ್ಟೆ ! ಹಾಂಗಾಗಿ ಒಪ್ಪ ಕೊಡ್ಳೆ ರಜ್ಜ ತಡ ಆವ್ತು ಒಪ್ಪಣ್ಣಾ. ಬೇಜಾರು ಮಾಡೆಡ ಆತೋ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *