ಪುಳ್ಳಿ ಮಾಡಿದ ಚಾಕ್ರಿ ಅಜ್ಜಿಗೂ ಸಿಕ್ಕಿದ್ದರೆ..?

July 5, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಶುದ್ದಿಯ ಎರಡು ಭಾಗ ಮಾಡಿರೆಂತ?
ಒಂತುಂಡು ಈ ವಾರಕ್ಕೆ; ಇನ್ನೊಂದು ಬಪ್ಪ ವಾರಕ್ಕೆ. ಆಗದೋ?
ಎರಡು ತುಂಡು ಆದರೂ – ಒಂದಕ್ಕೊಂದು ಸೇರಿಯೇ ಇಪ್ಪದಿದಾ!
ಒಂದೇ ಕತೆಲಿ ಎರಡು ಶುದ್ದಿ. ಒಂದೇ ಶುದ್ದಿಲಿ ಎರಡು ವಾರ!! :-) ಆಗದೋ?

ಪುಳ್ಳಿ ಮಾಡಿದ ಚಾಕ್ರಿ ಎಂತರ?

ಪಾರೆ ಮಗುಮಾವನ ಮಗಂಗೆ ಕೋಲೇಜಿನ ಬೆಶಿ ಪ್ರಾಯ.
ಕೋಲೇಜಿಂಗೆ ಹೋದರೆ ಸಾಕೋ – ಬೈಕ್ಕು ಬೇಡದೋ!? ಬೈಕ್ಕು ಇದ್ದರೆ ಸಾಕೋ – ಬಿಡ್ಳೆ ಅರಡಿಯೆಡದೋ?
ಹಾಂಗೆ ಹೊಸಾ ಬೈಕ್ಕಿನ ಬಿಡ್ಳೆ ಅಭ್ಯಾಸ ಮಾಡಿಗೊಂಡಿತ್ತಿದ್ದ° ಮಾಣಿ.
ಅವಂಗೆ ಈಗ ರೋಡಿಲಿ – ತೋಡಿಲಿ ಹೇಂಗಿರ್ಸಲ್ಲಿ ಬೇಕಾರೂ ಕೊಂಡೋಪಲೆ ಅರಡಿತ್ತು,  ಆದರೆ ಅಂಬಗ ಹಾಂಗಲ್ಲನ್ನೇ?
ಮಾರ್ಗ ಎಷ್ಟು ಅಗಲ ಇದ್ದರೂ ಕಮ್ಮಿಯೇ; ಎಡಕ್ಕಿಲಿ ದನಗಳ ಕಂಡ್ರೆ ದಾರಿ ಕೊಟ್ಟುಗೊಳೆಕ್ಕು, ಮನುಷ್ಯರ ಕಂಡ್ರೆ ಬ್ರೇಕು ಹಾಕಿಗೊಳ್ಳೆಕ್ಕು; ಬೇರೆ ಗಾಡಿಗೊ ಸಿಕ್ಕಿರೆ ಹೋರ್ನು ಹಾಕಿಗೊಳೆಕು – ಎಲ್ಲವುದೇ ಒಟ್ಟೊಟ್ಟಿಂಗೆ ಮಾಡ್ಳೆ ಇನ್ನೂ ಅಭ್ಯಾಸ ಆಗಿತ್ತಿಲ್ಲೆ.
ಇವಂಗೆ ಇದೆಲ್ಲ ಕೆಣಿಗೊ ಅಭ್ಯಾಸ ಅಪ್ಪ ಮೊದಲೇ ಅಣ್ಣಪ್ಪುವಿನ ಕರಿನಾಯಿಗೆ ಮಾರ್ಗ ದಾಂಟ್ಳೆ ಅಂಬೆರ್ಪು ಆತು. ಅದೂ ಎಲ್ಲಿ? – ಓ ಆ ಪಾರೆ ಅಜ್ಜಿಯ ಮನೆಮೇಲ್ಕಟೆ ಆಗಿ ಚರಳು ಮಾರ್ಗದ ಇಳಿಜಾರಿಲಿ!
ಇಳಿಜಾರಿಲಿ ಬೀಸವೇ ಹೋಕಷ್ಟೆ; ಚರಳಿಲಿ ಪಕ್ಕ ನಿಲ್ಲುಸಲೂ ಎಡಿಯ; ಅಂಬಗಳೆ ನಾಯಿಗೆ ಅದೆಂತ ಅಂಬೆರ್ಪು!?
ಎಲ್ಲೋರಿಂಗೂ ಅಂಬೆರ್ಪೇ, ನಾಯಿಗೆ ಆರು ಹೇಳುದು – ಹೇದು ನಾಯಿ ದಾಂಟಿದ ಜಾಗೆಲೆ ಬೈಕ್ಕು ಬಿಟ್ಟ°.
ಬೈಕ್ಕು ಹೇಂಗೆ ಬತ್ತಾ ಇದ್ದು ಹೇಳ್ತದು ನಾಯಿಗೆ ಅರಡಿಗಾತು, ಆದರೆ ನಾಯಿ ಹೇಂಗೆ ಹೋಕು ಹೇದು ಮಾಣಿಗೆ ಅರಡಿಗಾತಿಲ್ಲೆ :-(
ಅರ್ಧ ಧಾರಿ ಒರೆಂಗೆ ಬಂದ ನಾಯಿಗೆ ‘ಇತ್ತೆ ಬೋಡ್ಚಿ, ಬುಕ್ಕ ಪೋಪೆ’ – ಹೇದು ಒಪಾಸು ತಿರುಗಿ ಬಂತು.
ಈಗ ದಾಂಟಿ ಹೋಕು ಹೇದು ಗ್ರೇಶಿದ ಮಾಣಿಯ ಲೆಕ್ಕಾಚಾರ ತಪ್ಪಿತ್ತು; ಪಕ್ಕನೆ ಗಾಬೆರಿ, ಗಡಿಬಿಡಿ ಆದ್ಸರಲ್ಲಿ ಬ್ರೇಕು ಯೇವದು, ಚಕ್ರ ಏವದು ಹೇಳ್ತದೂ ಪಕ್ಕನೆ ತಲಗೆ ಹೋತಿಲ್ಲೆ ಮಾಣಿಗೆ.
ನೀಟ ಹೋದರೆ ನಾಯಿ ಪಡ್ಚ ಆಗಿ ಹೋಕು ಹೇದು ಗ್ರೇಶಿ ಬೈಕ್ಕಿನ ಅಡ್ಡವೇ ಹಾಕಿದ°! ಬೈಕ್ಕುಬಿದ್ದತ್ತು; ನಾಯಿ ಹೆದರಿ ಕೈಂಕ್ ಹೇಳಿ ಓಡಿತ್ತು.
ಬೈಕ್ಕು ಬಿದ್ದರೆ ಬೈಕ್ಕಿನ ಮೇಗೆ ಇದ್ದೋನೂ ಬಿದ್ದಿದ° ಹೇದು ಬಿಡುಸಿ ಹೇಳೇಕೋ?
ಮಾಣಿಯೂ ಬಿದ್ದ°!
ಎತ್ತಿ ನಿಲ್ಲುಸಲೆ ನಾಯಿ ಬಕ್ಕೋ? ಅದು ಹೋಗಿ ಎತ್ತಿದ್ದಿಲ್ಲೆಯೋ – ಅಣ್ಣಪ್ಪುವಿನ ಮನೆ ಜಾಲಿಂಗೆ!
~

ಕಾಲೆಡಕ್ಕಿಲಿದ್ದ ಬೈಕ್ಕಿಂದ ಬಿದ್ದೋನಿಂಗೆ ಎದ್ದು ನಿಂಬಲೇ ಎಡಿಯ; ಬೈಕ್ಕಿನ ಎಡಕ್ಕಿಂದ ಕಾಲು ಮೆಲ್ಲಂಗೆ ತೆಗದ°; ನಾಕು ಮೆಟ್ಟು ನೆಡಕ್ಕೊಂಡು ಹೋದ°.
ಕೈ ಮಣಿಕ್ಕಟ್ಟಿಂದ ದಿರಿದಿರಿನೆ ನೆತ್ತರು ಅರಿತ್ತಾ ಇದ್ದು. ದುರದೃಷ್ಟಕ್ಕೆ ಪಾರೆ ಗುಡ್ಡೆ; ಆದ ಕಾರಣ ಅಲ್ಲಿ ಮನೆಗಳೂ ಕಮ್ಮಿಯೇ.
ಅದೃಷ್ಟವಶಾತ್, ಆದರೆ ಪಂಚಾಯ್ತಿನ ಲೆಕ್ಕಲ್ಲಿ ಒಂದು ಬೋರುವೆಲ್ಲು ಹಾಕುಸಿತ್ತಿದ್ದವು.
ಆ ಬೋರುವೆಲ್ಲಿನ ಬುಡಲ್ಲಿ ಒಸ್ತ್ರ ಒಗವಲೋ, ನೀರು ಕೊಂಡೋಪಲೋ ಮಣ್ಣ ಕೆಲವು ಅಲ್ಲೇ ನೆರೆಕರೆಯ ಪಾಪದೋರು ಬಪ್ಪ ಕ್ರಮ ಇತ್ತು.
ಆ ದಿನವೂ ಹಾಂಗೇ ಆತು.

ಜಾಕುಅಜ್ಜಿ ಹೇದರೆ ಬಟ್ಯನ ತಂಗೆ, ಅದರ ಸೊಸೆ ವಸಂತಿ; ಆ ವಸಂತಿಯ ಮಗಳು ಜಾನಕಿ.
ಅವರ ಮನೆ ಇದೇ ಆಸುಪಾಸಿಲಿ ಇಪ್ಪದು. ಈ ಮಾಣಿಗೆ ಆ ಜಾನಕಿ ಶಾಲೆಗೆ ಹೋಪಗ ಕಂಡು ಗೊಂತಿತ್ತು; ಇವನಿಂದ ಹಲವು ಕ್ಲಾಸು ಕೆಳ ಇದ್ದ ನೆಂಪು, ಈಗ ಶಾಲಗೆ ಹೋವುತ್ತಿಲ್ಲೆ. ಮನೆಲೇ ಬೀಡಿಕಟ್ಟುದು.
ಬೀಡಿ ಕಟ್ಟದ್ದರೆ ಉಣ್ಣೆಡದೋ? ಅದರ ಅಪ್ಪ ಕುಡುದೇ ಮುಗುಶುಲಾತು.
ಹಾಂಗೆ, ಬೀಡಿಕಟ್ಟುತ್ತ ಎಡಕ್ಕಿಲಿ ರಜ ಒಸ್ತ್ರ ಒಗವಲೆ ಬಂದದೋ ತೋರ್ತು.
ಜಾನಕಿ ಬೋರುವೆಲ್ಲು ಬುಡಕ್ಕೆ ಎತ್ತಿದ್ದಷ್ಟೇ – ತೊಳವಲಿದ್ದ ಒಸ್ತ್ರಂಗೊ ಪೂರ ಅದರ ಬಾಲ್ದಿಲೇ ಇದ್ದತ್ತು.
ಬೋರುವೆಲ್ಲು ಆಡುಸಿ ಆಡುಸಿ – ನೀರು ಅಡಿಲಿ ಇದ್ದ ಕಾರಣ ತುಂಬ ಹೊತ್ತು ಆಡ್ಸೇಕಾವುತ್ತು ಅಲ್ಲಿ – ಒಂದು ಬಾಲ್ದಿ ನೀರು ಹೇಂಗೋ ತುಂಬಿತ್ತು.
ಅಷ್ಟಪ್ಪಗಳೇ ಅದಾ, ಬೈಕ್ಕು ದಡಾಲನೆ ಬಿದ್ದತ್ತು.
ನೋಡಿರೆ- ಪಾರೆ ಅಣ್ಣೆರ್!

ಬೈಕ್ಕಿನ ಹಂದುಸಿ ಮೆಲ್ಲಂಗೆ ಎದ್ದು ನೆಡಕ್ಕೊಂಡು ಬತ್ತಾ ಇದ್ದವು ಆ ಅಣ್ಣೆರ್. ಹತ್ತರೆ ಬಪ್ಪಗ ಕಂಡತ್ತು; ಬಿದ್ದ ಗಾಯಲ್ಲಿ ಕೈಲಿ ನೆತ್ತರು ಬತ್ತಾ ಇದ್ದು.
ಮಾಡುದೆಂತರ – ಇದರತ್ರೆ ತೊಳವಲೆ ತಂದ ಒಸ್ತ್ರಂಗೊ ಬಿಟ್ರೆ ಬೇರೆಂತದೂ ಇಲ್ಲೆ ಪಾಪ!
ಆ ಮಾಣಿಯ ಹತ್ತರೆ ಮೈಲಿಪ್ಪ ಪೇಂಟಂಗಿ ಬಿಟ್ರೆ ಬೇರೆಂತೂ ಇಲ್ಲೆ; ಅದು ಬೇರೆ!
ಮಾಣಿ ಸೀತ ಬಂದು ಬೋರುವೆಲ್ಲು ಬುಡಲ್ಲಿ ಕೂದ°.  ಹೋಗಿ ಅಣ್ಣೆರ್ನ ಮೈಲಿಪ್ಪ ಗಾಯವ ಮುಟ್ಟಿಕ್ಕಲೆ ಗೊಂತಿಲ್ಲೆ! ಆದರೆ ಗಾಯ ಜೋರಿದ್ದು.
ನೆತ್ತರು ಕಂಡು ಮಾಣಿಗೆ ದೊಂಡೆ ಪಸೆ ಆರಿದ್ದು!
ಜಾನಕಿ ತಡವು ಮಾಡಿದ್ದಿಲ್ಲೆ; ಆಗಷ್ಟೇ ತುಂಬಿದ ಬಾಳ್ದಿಂದ ನೀರಿನ ದಿರಿದಿರಿನೆ ಎರದತ್ತು ಆ ಮಾಣಿಯ ಕೈಗೆ.
ಗಾಯವ ರಜ ತೊಳಕ್ಕೊಂಡ°; ಅದರ್ಲಿ ನಿಂದ ಕಲ್ಲು ಮಣ್ಣೆಲ್ಲ ಹೋತು. ಮತ್ತೆ?
ನೀರು ಎರದಷ್ಟೂ ನೆತ್ತರು ಬತ್ತಾನೇ ಇದ್ದು. ಇನ್ನೆಂತ ಮಾಡುಸ್ಸು?
ಜಾನಕಿಯ ಇನ್ನೊಂದು ಬಾಲ್ದಿ ನೆಂಪಾತು – ತೊಳವಲೆ ತಂದ ಒಸ್ತ್ರಲ್ಲಿ ಮೇಗೆ ಇದ್ದಿದ್ದ ಒಂದರ ತೆಕ್ಕೊಂಡತ್ತು. ಅದರ ನೈಟಿ.
ಅಷ್ಟು ದೊಡ್ಡದರ ಎಂತ ಮಾಡುಸ್ಸು – ಪರಾನೆ ಹರುದತ್ತು. ಹಳೆ ಒಸ್ತ್ರವೇ ಆದ ಕಾರಣ ಹರಿಯಲೆ ಬಂಙ ಆಯಿದಿಲ್ಲೆ!
ಇವನ ಕೈ ಗಾಯವ ಕಟ್ಳೆ ಎಷ್ಟು ದೊಡ್ಡ ಬೇಕೋ – ಆ ನಮುನೆಗೆ ಹರುದು ಕೊಟ್ಟತ್ತು. ಪಾಪ!
ಇವಂಗೆ ಕಣ್ಣು ಕಸ್ತಲೆ ಬಪ್ಪ ಎಡಕ್ಕಿಲಿಯೂ ಆ ಒಸ್ತ್ರದ ತುಂಡಿನ ಕಟ್ಟಿಗೊಂಡ°.

ಅಣ್ಣಪ್ಪುವಿನ ಮನೆ ಜಾಲಿಂದ ಕಪ್ಪು ನಾಯಿ ನೋಡ್ತಾ ಇಪ್ಪದು ;-)
ಅಣ್ಣಪ್ಪುವಿನ ಮನೆ ಜಾಲಿಂದ ಕಪ್ಪು ನಾಯಿ ನೋಡ್ತಾ ಇಪ್ಪದು

~
ಮಾಣಿಗೆ ಅಲ್ಲೇ ದೊಡ್ಡ ಮಟ್ಟಿನ ಅಕಲು ಹೋದರೂ, ರಜ ಹೊತ್ತಿಲಿ ಪುರಂದರನ ರಿಕ್ಷ ಬಂದದು ಗೊಂತಾಯಿದು.
ಬೈಲಕರೆ ಬಬ್ಬುಮಾವನಲ್ಲಿಗೆ ಕರಕ್ಕೊಂಡು ಹೋಗಿ ಬೇಕಾದ ವೆವಸ್ಥೆಗಳ ಮಾಡಿತ್ತು.
ಬೀಡಿವಾಸನೆಯ ನೈಟಿ ತುಂಡಿನ ತೆಗದು ಗೆನಾ – ಬೆಳೀ ಬೇಂಡೇಜಿನ ಕಟ್ಟಿದವು ಡಾಗುಟ್ರುಮಾವ°.
ಮತ್ತೆ ಒಂತಿಂಗಳ ದೊಡ್ಡ ಬೇಂಡೇಜಿಲಿ ಗಾಯ ಗುಣ ಆತು.
ದೇವರ ಹಾಂಗೆ ಬಂದ ಆ ಜಾನಕಿಯ ಉಪಕಾರವ ಪುರುಸೋತಿಲಿ ನೆಂಪುಮಾಡಿಗೊಂಡ°.
ಇದ್ದ ಎರಡೇ ನೈಟಿಲಿ ಒಂದರ ಹರುದು ಕೊಟ್ಟೆ ಹೇದು ಬೇಜಾರವೂ ಆ ಜಾನಕಿಯ ಮೋರೆಲಿ ಇದ್ದತ್ತಿಲ್ಲೆ ಹೇದು ಗ್ರೇಶಿಗೊಂಡ°.
ಈಗಳೂ ಒಂದೊಂದರಿ ಆ ಮಾಣಿ ಪುರುಸೋತಿಲಿ ಸಿಕ್ಕಿರೆ ಮಾತಾಡ್ಳಿದ್ದು. ಈ ವಿಷಯ ಹೇಳುಲಿದ್ದು.
ಬೈಕ್ಕಿಂಗೆ ನಾಯಿ ಅಡ್ಡಬಂದದು, ಜಾರಿ ಬಿದ್ದದು, ಜಾನಕಿ ಬಂಙಲ್ಲಿ ಎಳದ ನೀರಿನ ಎರದು ಮುಗುಶಿದ್ದು, ಅದರ ಒಸ್ತ್ರವ ಹರುದು ಕೊಟ್ಟದು – ಎಲ್ಲವನ್ನೂ.
ಆ ದಿನ ಪುರಂದರಂಗೆ ವಿಷಯ ತಿಳುಶುಲೆ ಕಾರಣವೂ ಅದೇ ಜಾನಕಿ ಆಡ.
ಈಗ ಬೈಕ್ಕು ಸರೀ ಬಿಡ್ಳೆ ಬತ್ತು ಅವಂಗೆ. ಅದಿರಳಿ.
~
ಅದರ ಅಜ್ಜಿಗೆ ಎಂತಾತು?
ಬಪ್ಪ ವಾರ ಮಾತಾಡುವೊ° ಆಗದೋ? ಏ°?
~
ಒಂದೊಪ್ಪ: ತೊಂದರೆಗೆ ಅಪ್ಪೋನೇ ನಿಜವಾದ ಶ್ರೀಮಂತ°.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ತೊಂದರೆಲಿ ಸಹಾಯ ಮಾಡಿದವರು ನಿಜವಾದ ಬಂಧುಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಸಂದೇಶ

  ಜಾನಕಿಯ ಪರೋಪಕಾರ ಧಮ೯ ಮೆಚ್ಚೆಕಾದ್ದೆ. ಈ ಮಾಣಿಯ ಕತೆಲಿ ಆಗಪ್ಪಾ!

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಚರಳಿನ ಇಳಿಜ್ಜಾರು ಮಾರ್ಗಲ್ಲಿ ಮಾಣಿ ಬೈಕು ಬಿಟ್ಟ ಪ್ರಸಂಗದ ವಿವರಣೆ ತುಂಬಾ ಲಾಯಕಾಯಿದು. ಸದ್ಯ, ಬಿದ್ದ ಮಾಣಿಯ ಕಾಲಿಂಗೆ ನಾಯಿ ಬಾಯಿ ಹಾಕಿದ್ದಿಲ್ಲೇನೆ, ಕೆಲವೊಂದರಿ ಹಾಂಗೂ ಅಪ್ಪದಿದ್ದು. ಸಕಾಲಲ್ಲಿ ಅಣ್ಣೇರಿಂಗೆ ಸಕಾಯ ಮಾಡಿದ ಜಾನಕಿಯ ಮೆಚ್ಚೇಕಾದ್ದೆ. ಚೆ, ಈಗ ಅಜ್ಜಿಯ ಕಥೆ ಎಂತರಪ್ಪಾ, ಒಂದು ವಾರ ಕಾದು ಕೂರೆಕು. ಒಪ್ಪಣ್ಣನ ಶುದ್ದಿಯೂ ಧಾರಾವಾಹಿ ಆವ್ತಾ ಇಪ್ಪದು ಇದುವೇ ಸುರುವೋ ಹೇಳಿ.

  [Reply]

  VA:F [1.9.22_1171]
  Rating: +1 (from 1 vote)
 4. ಇಂದಿರತ್ತೆ
  ಇಂದಿರತ್ತೆ

  ಕನ್ನಡಸಿನೆಮಾದ ಡೈರೆಕ್ಟರುಗೊ ಈ ಶುದ್ದಿಯ ಓದಿದರೆ ಕೂಡ್ಲೆ ಒಂದು ಮರಸುತ್ತುವ ಹಾಡು ಬರದುಕೊಡ್ಲೆ ಜಯಂತಕಾಯ್ಕಿಣಿಯ ಹತ್ತರೆ ಹೇಳುಗೋ ?!

  [Reply]

  VA:F [1.9.22_1171]
  Rating: 0 (from 0 votes)
 5. ಕೆ. ವೆಂಕಟರಮಣ ಭಟ್ಟ

  ಜಾನಕಿಗೆ ಹೊಸ ನೈಟಿ ಕೊಡುಸಲೆ ಮಾಣಿ ಬೈಕಿಲ್ಲಿ ಕರಕ್ಕೊಂಡು ಹೋಕೋ ? ಕಾದು ನೋಡೆಕ್ಕು !!!

  [Reply]

  VA:F [1.9.22_1171]
  Rating: 0 (from 0 votes)
 6. Harish kevala

  uttama lekhana

  [Reply]

  VA:F [1.9.22_1171]
  Rating: 0 (from 0 votes)
 7. ಸುಮನ ಭಟ್ ಸಂಕಹಿತ್ಲು.

  ಕತೆ ಇನ್ನಾಣ ಕಂತಿಂಗೆ ಹೋಗಿ ಈಗ ಕಾಯ್ತಾ ಕೂಪ ಪರಿಸ್ಥಿತಿ ಅಯಿದನ್ನೆ???

  [Reply]

  VA:F [1.9.22_1171]
  Rating: 0 (from 0 votes)
 8. ಶ್ಯಾಮಣ್ಣ
  ಶ್ಯಾಮಣ್ಣ

  (ಒಂದೇ ಕತೆಲಿ ಎರಡು ಶುದ್ದಿ. ಒಂದೇ ಶುದ್ದಿಲಿ ಎರಡು ವಾರ!!)

  ಹೇಳಿರೆ ಒಟ್ಟು ನಾಕು ವಾರಕ್ಕೆ ಆತು ಅಲ್ಲದಾ? ಒಂದು ಶುದ್ದಿಗೆ ಎರಡು ವಾರದ ಹಾಂಗೆ ಎರಡು ಶುದ್ದಿಗೆ ನಾಕು ವಾರ!! ಲೆಕ್ಕ ಸರಿ ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಮಂಗ್ಳೂರ ಮಾಣಿಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ಪುತ್ತೂರುಬಾವಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆದೊಡ್ಡಭಾವಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಮುಳಿಯ ಭಾವಶರ್ಮಪ್ಪಚ್ಚಿವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕಕಜೆವಸಂತ°ದೊಡ್ಡಮಾವ°ಚೆನ್ನಬೆಟ್ಟಣ್ಣಸರ್ಪಮಲೆ ಮಾವ°ಶುದ್ದಿಕ್ಕಾರ°ಬೋಸ ಬಾವಶ್ರೀಅಕ್ಕ°ಚೆನ್ನೈ ಬಾವ°ಅಕ್ಷರದಣ್ಣವಿಜಯತ್ತೆಶಾಂತತ್ತೆಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ