ಒಂಭತ್ತು ಒರಿಶ ಕಾದು ದೇಶಸೇವೆಗೆ ಪುನಾ ಹೆರಟ ಪುರೋಹಿತರು..!!

ಶುದ್ದಿ ಹೇಳ್ತನೋ ಹೇಳ್ತನೋ ಹೇದು ರಂಗಮಾವ° ಕೆಲವು ದಿನ ಕಾದವಡ. ನಿನ್ನೆ ಸಿಕ್ಕಿ ಹೇಳಿದವು.
ರಂಗಮಾವ° ಮಾಂತ್ರ ಅಲ್ಲ, ಕಾನಾವು ಡಾಗುಟ್ರುದೇ, ಮಗುಮಾವಂದೇ ಕಾದವು. ಈಚಮನೆ ಪುಟ್ಟಂದೇ ಕಾದುಗೊಂಡಿತ್ತಿದ್ದ°.
ಸುಬ್ರಮಣ್ಯದ ಅಣ್ಣಂದ ಕಾದವಡ. ಇವೆಲ್ಲ ಕಾದವು – ಹೇದು ಗ್ರೇಶುವಗಳೇ ಮನಸ್ಸು ತುಂಬಿತ್ತು.

ಕಾಯದ್ದೆ ಬಳುಸಿರೆ ರುಚಿ ಇರ್ತಿಲ್ಲೆ– ಹೇದು ಆಚಮನೆ ದೊಡ್ಡಪ್ಪ° ಹೇಳಿಗೊಂಡು ಇತ್ತಿದ್ದವು. ಕಾದು ಬೇವನ್ನಾರ ಕಾವ.
~
ಬೈಲಿಲಿ ನೆಂಟ್ರುಗೊ ಕಾದ್ದು ಸಣ್ಣ ಅವಧಿ..
ಆಚ ಹೊಡೆಲಿ ಲೆಫ್ಟಿನೆಂಟ್ ಪುರೋಹಿತ್ ಜೈಲಿಲಿ ನ್ಯಾಯಕ್ಕಾಗಿ ಕಾದ್ದು ಎಷ್ಟೊರಿಶ ಗೊಂತಿದ್ದೋ?
ಬರೋಬ್ಬರಿ ಒಂಭತ್ತು ಒರಿಶ!!

ಒಂಭತ್ತು ಒರಿಶ ಹೇದರೆ ಎಷ್ಟಾತು ಗೊಂತಿದ್ದೋ?
ಕೇಚಣ್ಣಜ್ಜನ ದೊಡ್ಡಪುಳ್ಳಿಗೆ ಮದುವೆ ಆಗಿ, ಪುಳ್ಳಿಕೂಸು ಹುಟ್ಟಿ, ಈಗ ಎರಡ್ಣೇ ಕ್ಲಾಸಿಂಗೆ ಹೋವುತ್ತಾ ಇದ್ದು.
ಮಗುಮಾವ° ತಲಗೆ ಕಪ್ಪುಬಣ್ಣ ಹಾಕುದು ನಿಲ್ಲುಸಿ, ಈಗ ಬೆಳಿಬೆಳಿ ತಲೆಯ ಕಂಡ್ರೆ ಗುರ್ತವೇ ಸಿಕ್ಕ.
ಮಗುಮಾವನ ಪುಳ್ಳಿ ವಿನು ಬಾಲವಾಡಿಂದ ಪುಸ್ತಕ ಓದುವ ಶಾಲಗೆ ಬಯಿಂದ°.
ಸಾರಡಿ ತೋಡಿನ ಕರೆಯ ಗೆದ್ದೆಲಿ ಮಡುಗಿದ ಅಡಕ್ಕೆ ಸೆಸಿಲಿ ಅಡಕ್ಕೆ ಮಂಗಳ ಮಂಗಳ ಕಾಣ್ತು.
ಬಾಬು ಅಡಕ್ಕೆ ಕೊಯಿವದು ನಿಲ್ಲುಸಿ, ಅದರ ಮಗ ಸುರು ಮಾಡಿದ್ದು!
ಮುಕಾರಿ ಗೆದ್ದೆಗೆ ಹೋವುತ್ತಲ್ಲಿ ಕಾಡು ಅರ್ಧಕ್ಕರ್ಧ ಕಡಮ್ಮೆ ಆಯಿದು.
ಬೈಲಿಲಿ ಮಳೆ ಅರ್ಧಕ್ಕರ್ಧ ಕಮ್ಮಿ ಆಯಿದು. ಅದಿರಳಿ.

ಒಟ್ಟಿಲಿ, ಒಂಭತ್ತೊರಿಶಲ್ಲಿ ತುಂಬ ಬದಲಾವಣೆ ಆಯಿದು.
~
ಮಲೆಗಾಂವ್ ಹೇಳ್ತಲ್ಲಿ ಒಂದು ರೈಲಿಲಿ ಬಡೋ ಹೇಳಿ ಬೋಂಬು ಹೊಟ್ಟಿತ್ತಡ. ಹೊಟ್ಟಿದ್ದು ಬೋಂಬುವೋ, ಅಲ್ಲ ಗರ್ನಾಲೋ, ಅಲ್ಲ ದುರ್ಸುವೋ – ಹೇದು ಅರಡಿವ ಮೊದಲೇ ಕೇಂದ್ರ ಸರಕಾರದ ದುರ್ಸುಗೊ ಇದರ ‘ಹಿಂದೂ ಭಯೋತ್ಪಾದನೆ‘ – ಹೇದು ಹೆಸರು ಮಡಗಿದವು.
ಅಷ್ಟು ಮಾಂತ್ರ ಅಲ್ಲ, ಸ್ವಾಮಿ ಅಸೀಮಾನಂದ, ಸಾಧ್ವೀ ಪ್ರಜ್ಞಾ ಸಿಂಘ್ – ಹೀಂಗಿರ್ತ ಸಂತರ ಹಿಡುದು ಹಿಡುದು ಒಳ ಹಾಕಿದವು.
ಅದಷ್ಟೇ ಅಲ್ಲ, ಬೋಂಬು ಹೊಟ್ಟುಲೆ ಸುಡುಮದ್ದು ತಂದದು ಮಿಲಿಟ್ರಿಂದ ಹೇದು ಕಾಣ್ತು – ಹೇಳ್ತ ಅಂದಾಜಿಗೆ ಲೆ.ಕ.ಪ್ರಸಾದ್ ಪುರೋಹಿತ್ – ಹೇಳ್ತ ದಕ್ಷ ಸೈನ್ಯಾಧಿಕಾರಿಯ ತಂದವು.

ಸೈನ್ಯಾಧಿಕಾರಿ – ಆನು ಬೆಡಿಮದ್ದು ತಯಿಂದಿಲ್ಲೆ ಹೇಳಿದ್ಸಕ್ಕೆ ಎಂತೂ ಬೆಲೆ ಸಿಕ್ಕಿತ್ತಿಲ್ಲೆ.
ಅಷ್ಟು ಮಾಂತ್ರ ಅಲ್ಲ, ಸೇನೆಯ ಎಪ್ಪತ್ತು ಅಧಿಕಾರಿಗೊ, ಸೈನಿಕರು ಆದಿಯಾಗಿ ಎಲ್ಲೋರುದೇ ಹೇಳಿದವಾಡ, ಇದು ಸೈನ್ಯದ ಬೆಡಿಮದ್ದು ಅಲ್ಲಾ – ಹೇದು.
ಆದರೆ ಕೇಳೆಕ್ಕನ್ನೆ. ಪೋಲೀಸರು ಕೇಳಿದ್ದವಿಲ್ಲೆ, ಅದರಿಂದಲೂ ಹೆಚ್ಚು, ಅವರತ್ರೆ ಅದರ ಕೇಳದ್ದ ಹಾಂಗೆ ಬಾಯಮ್ಮ ಸರಕಾರ ಹೇಳಿತ್ತಿದ್ದು.
~
ಅಂತೂ ಎಲ್ಲ ವೈರುಧ್ಯದ ಎಡೆಲಿ ಪುರೋಹಿತರ ಜೈಲಿಂಗೆ ಹಾಕಿದವು.
ಸರಿಯಾದ ಪುರಾವೆ, ಸಾಕ್ಷಿಗೊ ಕೇಳದ್ದೆ, ನೋಡದ್ದೆ ಜೈಲಿನೊಳ ಹಾಕಿದ್ದದೇ.
ದಿನಗಟ್ಳೆ ಅಲ್ಲ, ವಾರಗಳೇ ಅಲ್ಲ, ತಿಂಗಳುಗಟ್ಳೆ ಅಲ್ಲ – ಒರಿಶಗಟ್ಳೆ ಜೈಲಿನೊಳ.
ಒಂಭತ್ತು ಒರಿಶ. ಸಂಸಾರ ನೆರೆಹೊರೆ ಬಂಧುಗೊ – ಎಲ್ಲವನ್ನೂ ಬಿಟ್ಟು ಜೈಲಿನೊಳ.
ಅಷ್ಟೇ ಅಲ್ಲ, ದೇಶಸೇವೆಯ ಬಿಟ್ಟು ಜೈಲಿನೊಳ.
ದೇಶಕ್ಕಾಗಿ ಸೇವೆ ಮಾಡ್ತ ಒಬ್ಬ ಸೈನಿಕನ ಒಂಭತ್ತು ಒರಿಶ ಒಳ ಮಡಗಿದ್ದು ನಮ್ಮ ಸರಕಾರ. ಅದೂ ಸರಿಯಾದ ಪುರಾವೆ ಇಲ್ಲದ್ದೆ ಇಪ್ಪಗ.
~
ಎಲ್ಲ ಆತು, ಮೊನ್ನೆ ಮಾನ್ಯ ಸುಪ್ರೀಂ ಕೋರ್ಟು ಇದರ ವಿಚಾರಣೆ ಮಾಡಿಕ್ಕಿ – “ಜಾಮೀನು” ಕೊಡ್ಳಕ್ಕು – ಹೇದು ತೀರ್ಪು ಬರದತ್ತಾಡ.
ಇಡೀ ದೇಶಕ್ಕೇ ಜಾಮೂನು ಮಾಡಿ ತಿಂಬಷ್ಟು ಕೊಶಿ.

ತೀರ್ಪಿನ ಮರದಿನ ಬಿಡುಗಡೆ ಆತು.
ಮನೆಗೆ ಬಂದವು ಈ ಪುರೋಹಿತರು.
ಮರದಿನ ಯುನಿಫಾರ್ಮು ಹಾಕಿಂಡು ಹೆರಟದೇ – ಎಲ್ಲಿಗೆ? ದೇಶಸೇವೆಗೆ!
ಪುರೋಹಿತರು ದೇಶಸೇವೆಯ ಅಧ್ವರ್ಯು ಆದವು.
ಯಬ್ಬಾ, ಅಂಥಾ ಶಿಸ್ತು, ನಿಯತ್ತಿನ ಸೈನಿಕರ ಸೇವೆಯ ನಾವು ಒಂಭತ್ತು ಒರಿಶ ಕಳಕ್ಕೊಂಡದು ನವಗೆ ನಷ್ಟವೋ,
ಅಲ್ಲ ಅವಕ್ಕೆ ಸೇವೆ ಮಾಡ್ಳೆ ಸಿಕ್ಕದ್ದದು ಅವಕ್ಕೆ ನಷ್ಟವೋ?
~
ಒಂಭತ್ತು ಜೆನ ಅನ್ಯಾಯಗಾರರಿಂಗೆ ಶಿಕ್ಷೆ ಆಗದ್ದರೂ ಚಿಂತೆ ಇಲ್ಲೆ, ಒಬ್ಬನೇ ಒಬ್ಬ ಪಾಪದೋನಿಂಗೆ ಶಿಕ್ಷೆ ಅಪ್ಪಲಾಗ – ಹೇಳ್ತವು.
ಇಲ್ಲಿ ಹಾಂಗೇ ಅತಲ್ದೋ?
ಒಂಭತ್ತೊರಿಶ ಜೈಲಿಲಿ ಕಳವ ಹಾಂಗಾತನ್ನೆ!
ನಮ್ಮ ದೇಶದ ವ್ಯವಸ್ಥೆ ನಿಜವಾಗಿಯೂ ಸುಧಾರಣೆ ಆಯೇಕು – ಹೇಳ್ತದು ರಂಗಮಾವನ ಅಭಿಪ್ರಾಯ.

ವಿಚಾರಣೆ ಸರಿಯಾಗಿಯೂ ಆಯೇಕು, ವೇಗವಾಗಿಯೂ ಆಯೇಕು.
ಅದೆರಡರಲ್ಲಿ ಒಂದು ತಪ್ಪಿರೂ ಸಮಾಜಕ್ಕೆ ಅನ್ಯಾಯ.
ಎಂತ ಹೇಳ್ತಿ?
~
ಒಂದೊಪ್ಪ: ನಿರಪರಾಧಿಗೆ ಶಿಕ್ಷೆ ಕೊಟ್ರೆ ಅದು ಒಬ್ಬಂಗೇ ಅಲ್ಲ, ಸಮಾಜಕ್ಕೇ ಇಪ್ಪದು.

ಒಪ್ಪಣ್ಣ

   

You may also like...

8 Responses

 1. ದೊಡ್ಡಭಾವ says:

  ಕಾದು ಕಾದು ಇಂದು ಒಳ್ಳೆಯ ಶುದ್ದಿ ಓದಲೆ ಎಡಿಗಾತು. ಒಪ್ಪಣ್ಣನ ಬರವಣಿಗೆ ಶೈಲಿ ಶುದ್ದಿಗಳ ಓದುಸಿಗೊಂಡು ಹೋವ್ತು. ಕೊಶಿ ಆತು…

 2. pattaje shivarama bhat says:

  ಬಾಯಮ್ಮನ ದರ್ಬಾರು ಕೇಳುಗ ನೆತ್ತರು ಕೊದಿತ್ತು

 3. ಅಂತೂ ಕಾದುಕೂದರೂ ಒಳ್ಳೆಯ ಮೃಷ್ಟಾನ್ನ!. ಈ ಒಪ್ಪಣ್ಣನ ಶುದ್ದಿಗೆ ಮಾಂತ್ರ ಅಲ್ಲ!. ಇಂದೊಂದು ಪಾಚದ ಊಟಕ್ಕೆ ಹೋದಲ್ಲಿ ಕಾದು,ಕಾದು, ಹೊಟ್ಟೆ ಹುಳು ಕರಂಚಿದಾಂಗಾತು.ಅಲ್ಲಾ..ಮದಲೇ ೨-೩೦, ೩ ಗಂಟೆವರೆಗೆತ್ತಿರೂ ಹಶು ತಡಕ್ಕೊಂಬಲೆಡಿಗಾಗೆಂಡಿತ್ತು. ಈಗೇಕೆ ಎಡಿತ್ತಿಲ್ಲೆ….?!. ಮಜ್ಜಾನ್ನ ೨-೩೦ ಆತು. ಸುಮಾರು ಕ್ರಿಯೆಂಗೊ ಇತ್ತು. ಒಂದನೇ ಹಂತಿಗೆ ಎನ್ನ ಕೂಬ್ಬಲೆ ಹೇಳುಗ “ಬೇಡಪ್ಪ, ಎರಡ್ನೇ ಹಂತಿಗೆ ಕೂಬ್ಬೆ ಹೇಳಿದೆ ನಾಮೋಸಿಂದ . ಅಲ್ಲ ನಿಂಗೊ ಕೂರಿ ಉಂಬಲೆ ಹೇಳಿತ್ತೊಂದು ಒಪ್ಪಕ್ಕ!. ಉಳ್ಳಂತರ್ಯಲ್ಲಿ ನವಗೆ ಬೇಕಾದ್ದೂ ಅದುವೇ. . ಒಳ್ಳೆ ಊಟ. ಇದುದೇ ಒಳ್ಳೆ ಶುದ್ದಿ !!!.

 4. ಶುದ್ದಿಗೆ ಒಪ್ಪ ವ್ಯವಸ್ಥೆಗೆ ದುಃಖ

 5. ಬೊಳುಂಬು ಗೋಪಾಲ says:

  ಸತ್ಯಕ್ಕೆ ಏವತ್ತುದೆ ಜಯ ಇದ್ದು. ಆದರೆ ಒಂಭತ್ತು ವರ್ಷ ಕಾಯೆಕಾತು. ಕಡೇಣ ಒಂದೊಪ್ಪ ನಿಜವಾಗಿಯು ಅಪ್ಪು.
  ಶುದ್ದಿಯ ಸುರುವಿಂಗೆ ಒಂಭತ್ತು ವರ್ಷಲ್ಲಿ ಎಷ್ಟೆಲ್ಲ ಬದಲಾವಣೆ ಆತು ಹೇಳುವದು ರಸವತ್ತಾಗಿದ್ದು. ಒಪ್ಪಣ್ಣ, ಶುಕ್ರವಾರ ಎಂಗೊ ಎಲ್ಲೋರು ಕಾಯ್ತಾ ಇರ್ತೆಯೊ ನೆಂಪಿರಳಿ.

 6. kashipathi alse a s says:

  howdu

 7. ರವಿಕುಮಾರ ಕಡುಮನೆ says:

  ಈ ಪುರೋಹಿತಣ್ಣನ ಪೇಪರಿನೊರು ಕೇಳ್ಯಪ್ಪಗ ದೇಶವ ಪ್ರೀತಿಸಿ ಹೇಳಿದ°ನಡ.ಆ ಮಾಪ್ಳೆ ಅನ್ಸಾರಿ ಮುಕ್ಕಾಲಾಯುಷ್ಯ ಜೆನಂಗಳ ಪೈಸೆಲಿ ಗಡದ್ದು ಉಂಡು ತಿರುಗಿಕ್ಕಿ.. ಇಲ್ಲಿ ಹೆದರಿಕೆ ಆವ್ತು ಹೇಳಿತ್ತಡ…

 8. Adithya says:

  ಒಪ್ಪಣ್ಣ ನಿಂಗ ಬರದ್ದು ಎಲ್ಲ ಸರಿ ಇದ್ದು. ಒಬ್ಬ ಸೈನಿಕ ಆಗಿ ಎನಗೆ ತುಂಬಾ ಖುಷಿ ಆತು. ನಮ್ಮ ಬಗ್ಗೆ ನಿಂಗೋಗೆ ಎಷ್ಟು ಅಭಿಮಾನ ಇದ್ದು ಹೇಳಿ. ಆದರೆ ಒಂದು ಸಣ್ಣ ತಪ್ಪು ಇದ್ದು. ಒಬ್ಬ ಸೈನಿಕಂಗೆ ಹೆಸರಿನ ಮುಂದೆ ಅವಂಗೆ ಅವನ ಹುದ್ದೆ ಬರವ ಹಕ್ಕು ಇರ್ತ್ತು. ಅದೇ ರೀತಿ ನಿಂಗ ಲೇಖನಲ್ಲಿ ಲೆಫ್ಟಿನೆಂಟ್ ಪುರೋಹಿತ್ ಹೇಳಿ ಬರದ್ದಿ. ಅಲ್ಲಿ ಸಣ್ಣ ತಿದ್ದುಪಡಿ ಆಯಕ್ಕು. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಹೇಳಿ ಆಯಕ್ಕಿತ್ತು. ಲೆಫ್ಟಿನೆಂಟ್ ಹೇಳಿರೆ ಆಫೀಸರ್ ಲೆವೆಲ್ ಲಿ ಮೊದಲನೇ ಹುದ್ದೆ.
  ಲೆಫ್ಟಿನೆಂಟ್
  ಕ್ಯಾಪ್ಟನ್
  ಮೇಜರ್
  ಲೆಫ್ಟಿನೆಂಟ್ ಕರ್ನಲ್
  ಕರ್ನಲ್… ಹೀಂಗೆ ಮುಂದೆ ಹೌತ್ತು. ಅದರ ಕಾರಣ ನಿಂದ ಒಂದು ಸಣ್ಣ ಬದಲಾವಣೆ ಮಾಡಿರೆ ಲೇಖನದ ರುಚಿ ಇನ್ನು ಹೆಚ್ಚು ಇರ್ತ್ತು.
  ಎಂತಕ್ಕೆ ಹೇಳಿದರೆ ಒಬ್ಬ ರಾಜಕಾರಣಿ, ಐಎಎಸ್,ಐಪಿಎಸ್, ಭಾರತ ರತ್ನ ಅಥವಾ ಇನ್ಯಾವುದೇ ಪ್ರಶಸ್ತಿ ಸಿಕ್ಕಲಿ ಅವಕ್ಕೆ ಅವರ ಹುದ್ದೆ ಅಥವಾ ಆ ಪ್ರಶಸ್ತಿ ಹೆಸರು ಅವರ ಹೆಸರಿನ ಮುಂದೆ ಹಾಕುವ ಅವಕಾಶ ಸಿಕ್ಕುತ್ತಿಲ್ಲೇ. ಖಾಲಿ ಡಾಕ್ಟರೇಟ್ ತೆಕ್ಕೊಂಡವಕ್ಕೆ ಮಾಂತ್ರ ಇಪ್ಪದು(ವೈದ್ಯಕೀಯ ವಿಭಾಗ ಮಾಂತ್ರ, ಪಿಎಚ್ಡಿ ಅಥವಾ ಗೌರವ ಅವ್ತ್ತಿಲ್ಲೇ). ಅವರ ಬಿಟ್ಟರೆ ಇನ್ನೊಂದು ಹಕ್ಕು ಇಪ್ಪದು ಮಿಲಿಟರಿ ಅವಕ್ಕೆ. ಆದುದರಿಂದ ಹೇಳಿದೆ ಅಷ್ಟೇ. ಇದರ ಬಗ್ಗೆ ಸರಿಯಾದ ವಿವರಣೆ ಬೇಕು ಹೇಳಿ ಆದರೆ ವೀಕೆಂಡ್ ವಿಥ್ ರಮೇಶ್ ಲಿ ನಮ್ಮ ಸಂತೋಷ್ ಹೆಗ್ಡೆ ಅವ್ವ್ ಇದರ ಬಗ್ಗೆ ೫ ನಿಮಿಷ ಭಾಷಣ ಕೊಟ್ತಿದವ್.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *