ಹದಿನಾರು ದೂರ ನಡವ ಹತ್ತೂರ ಒಡೆಯನ ಶುದ್ದಿ

ಕಳುದ ವಾರ ಬೆಡಿ ಹೊಟ್ಟಿದ ಪರವೂರಿನ ಶುದ್ದಿ ಆದರೆ ಈ ವಾರ ಬೆಡಿ ಗಮ್ಮತ್ತು ಕಳುದ ಜಾತ್ರೆ ಮುಗುದ ನಮ್ಮೂರಿನ ಶುದ್ದಿ.
ಅದೇ – ಪುತ್ತೂರು ಜಾತ್ರೆ ಬಗ್ಗೆ.

ಪುತ್ತೂರಿಲಿ ವಿಶುವಿನ ಸಮೆಯಲ್ಲಿ ಜಾತ್ರೆ ಬಂದು, ಏಳುದಿನದ ಕಾಲ ಪೇಟೆ ದರ್ಶನ ಇಡೀ ಮಾಡಿಗೊಂಡು, ಕೆರೆ ಮೀಯಾಣ ಆಗಿ, ರಥೋತ್ಸವ, ಬೆಡಿಯ ಗೌಜಿ ನೋಡಿಕ್ಕಿ ಮತ್ತೆ ಓ ಅಲ್ಲಿ ವೀರ ಮಂಗಲಲ್ಲಿ ಕುಮಾರಧಾರಾ ಹೊಳೆಯ ಮೀಯಾಣ ಮಾಡ್ತ ಪರಿವಾಡಿ ಮಹಾಲಿಂಗೇಶ್ವರನದ್ದು.
ಇದು ಇಂದು ನಿನ್ನೇಣದ್ದಲ್ಲ, ಎಷ್ಟೋ ಸಮೆಯಂದ ನೆಡದು ಬತ್ತಾ ಇದ್ದು.
ಈ ಸರ್ತಿಯೂ ನೆಡದ್ದು, ಮುಂದೆಯೂ ನೆಡೆತ್ತು.

ಎಲ್ಲ ಜಾತ್ರೆಂದಲೂ ಪುತ್ತೂರು ಜಾತ್ರೆದು ವೈಶಿಷ್ಟ್ಯಪೂರ್ಣ ಸಂಗತಿ – ಊರ ಸವಾರಿ.
ಜಾತ್ರೆಯ ಪ್ರತಿ ದಿನವೂ ಒಂದೊಂದು ದಿಕ್ಕೆಗೆ ಸವಾರಿ ಹೋಪದಲ್ಲದ್ದೆ, ಕೊನೆಗೆ ಅವಭೃತ ಹೇದು ಮೀವಲೆ ದೂರದ ಕುಮಾರ ಧಾರಾ ನದಿಗೆ ಬಪ್ಪದು ಇನ್ನೊನ್ದು ಗೌಜಿ.
~

ಪುತ್ತೂರಿನ ದೇವರು ಸರ್ವತಂತ್ರ ಸ್ವತಂತ್ರ.
ಸ್ಮಶಾನ ವಾಸಿ ಆದರೂ – ಊರಿಡೀ ಹಿಡಿತ ಇದ್ದು.
ಜಾತ್ರೆ ಆರಂಭ ಆಗಿ ಪ್ರತೀ ದಿನವೂ ದೇವರ ಸವಾರಿ ಪೇಟೆಲಿ ಹೋವುತ್ತು.
ಹೇದರೆ, ಉತ್ಸವ ಮೂರ್ತಿ ದೇವಸ್ಥಾನಂದ ಹೆರಟು ಒಂದೊಂದು ಹೊಡೆಂಗೆ ಸವಾರಿ.
ಹೋಪ ದಾರಿಲಿ ಅಲ್ಲಲ್ಲಿ ಕಟ್ಟೆಪೂಜೆಗೊ.
ಆ ಕಟ್ಟೆಪೂಜೆಯ ಪರಿಸರಲ್ಲಿ ಗೌಜಿ ಗೊ, ಸಾಂಸ್ಕೃತಿಕ ಕಾರ್ಯಕ್ರಮಂಗೊ.
ಅಂತೂ – ಇಡೀ ಪುತ್ತೂರಿಂಗೆ ಪುತ್ತೂರೇ ಗೌಜಿ!
ಕೆಲವೆಲ್ಲ ಕಟ್ಟೆಗೊ ಎಷ್ಟು ಹಳತ್ತು ಹೇದು ನೋಡಿರೆ ಈ ಪುತ್ತೂರು ಪೇಟೆ ಸವಾರಿ ವ್ಯವಸ್ಥೆ ಎಷ್ಟು ಹಳತ್ತು ಹೇದು ಗೊಂತಾವುತ್ತು.
~

ಎಲ್ಲದಕ್ಕೂ ಕಳಶಪ್ರಾಯ – ಕೊನೆಯ ಅವಭೃತ ವ್ಯವಸ್ಥೆ.
ಪುತ್ತೂರಿಂದ ಹತ್ತು ಹದಿನಾರು ಕಿಲೋಮೀಟ್ರು ದೂರದ ವೀರಮಂಗಲ ಹೇಳ್ತಲ್ಲಿ – ಕುಮಾರಧಾರಾ ನದಿ ಬತ್ತು.
ಕುಮಾರ ಹೇದರೆ ಈಶ್ವರನ ಮಗನೇ ಅಪ್ಪು.
ಆ ಕುಮಾರಧಾರೆಯ ನೀರಿಲಿ ಮಿಂದರೇ ಶಿವಂಗೆ ಸಂತ್ರುಪ್ತಿ.
ಹಾಂಗಾಗಿ ಜಾತ್ರೆಯ ಕೊನೆಯ ದಿನ ಇರುಳು ಪುತ್ತೂರಿಂದ ಹೆರಡುದು,
ಹದಿನಾರು ಕಿಲೋಮೀಟ್ರು ದೂರದ ವೀರಮಂಗಲಕ್ಕೆ ಸಾಲಂಕೃತ ಬಲಿಮೂರ್ತಿ ಬಪ್ಪದು,
ಹೆರಡುವಗ ಸಾವಿರಾರು ಭಕ್ತರ ಒಟ್ಟಿಂಗೆ ಕರಕ್ಕೊಂಡೇ ನೆಡವದು,
ವೀರಮಂಗಲಕ್ಕೆ ಎತ್ತುವನ್ನಾರವೂ ಅಲ್ಲಲ್ಲಿ ಕಟ್ಟೆಪೂಜೆ ಸ್ವೀಕಾರ ಮಾಡಿಗೊಂಡೇ ಬಪ್ಪದು,
ಹೊತ್ತೋಪಗ ಹೆರಟ ದೇವರು ಹದಿನಾರು ಕಿಲೋಮೀಟ್ರು ನೆಡವಲೆ ತೆಕ್ಕೊಂಬ ಸಮಯ ಭರ್ತಿ ಅರ್ಧ ದಿನ!
ಅಲ್ಲಲ್ಲಿ ನಿಂಬ ಕಾರಣ ದೇವರ ಹೊರುವ ಅಣ್ಣಂಗೂ ಕೊರಳು ಆಡುಸಲೆ ಪುರುಸೊತ್ತು ಇದ್ದು.
ಹೊತ್ತೋಪಗ ಆರಂಬ ಅಪ್ಪ ಸವಾರಿಗೆ – ಹಗಲಿಡೀ ಸುಟ್ಟ ಮಾರ್ಗದ ಬೆಶಿಲು ತಾಗುಸ್ಸು ಬೇಡ ಹೇದು ಭಕ್ತರು ನೀರು ಚೇಪುದು ಅಲ್ಲಲ್ಲಿ ಕಾಣುತ್ತು.

ಇರುಳು ಅಲ್ಲಿಗೆ ಎತ್ತಿ ಅಲ್ಲಿಯಾಣ ಕಟ್ಟೆಪೂಜೆ ತೆಕ್ಕೊಂಬದು.
ಕಟ್ಟೆಪೂಜೆ ಆಗಿ, ಹೆಚ್ಚುಕಮ್ಮಿ ಸೂರ್ಯೋದಯ ಅಪ್ಪಗ ಅವಭೃತ.
ಕುಮಾರಧಾರೆಲಿ ಮುಳುಗಿ ಮಿಂದು ಶುಭ್ರ ಅಪ್ಪದು.
ಕಳುದ ಒಂದು ವಾರಂದ ಇದ್ದಿದ್ದ ಗೌಜಿ ಆಡಂಬರ ಅಲಂಕಾರ ಪೂರ ಕಳದು ತನ್ನ ಮೂಲ ಸ್ವರೂಪದ ಲೋಹ ಮೂರ್ತಿ ಅಪ್ಪದು.
ಮಿಂದಾಗಿ, ಒಪಾಸು ಅಲ್ಲಿಂದ ಹೆರಡುದು, ಸಾವಿರಾರು ಭಕ್ತರ ಒಟ್ಟಿಂಗೇ.
ಅಲ್ಲಿಂದ ಹೆರಟು ಒಪಾಸು ಬಪ್ಪಗ ಸೀತ ಬಪ್ಪದು, ಮುನ್ನಾಣ ದಿನದ ಹಾಂಗೆ ಕಟ್ಟೆಪೂಜೆಯೂ ಇಲ್ಲೆ, ತಲೆಮೇಲೆ ಅಟ್ಟೆ-ಅಲಂಕಾರವೂ ಇಲ್ಲೆ.

ಮಿಂದಿಕ್ಕಿ ಬಂದು ದೇವಸ್ಥಾನಕ್ಕೆ ಎತ್ತಿಕ್ಕಿ, ಧ್ವಜಾವತರಣ, ಒಂದು ಮಹಾಪೂಜೆ.
ಅಲ್ಲಿಗೆ ಆ ಒರಿಶದ ಜಾತ್ರೆ ಮುಗಾತು.
ಒಟ್ಟಾರೆಲಿ ಇದೊಂದು ಅದ್ಭುತ ಕಲ್ಪನೆ.
~
ಜೆನರ ಕಷ್ಟ ನಷ್ಟ ನೋಡಿ ಗೊಂತಾಯೇಕಾರೆ ಜೆನಂಗಳ ನೆಡುಕೆ ಹೋಗಿ ತಿಳಿಯೇಕಡ.
ಇದು ಎಲ್ಲಾ ರಾಜ ಮಹಾರಾಜರೂ ನಂಬಿಗೊಂಡಿದವು,ಎಲ್ಲೋರುದೇ ಒಪ್ಪುತ್ತವು.
ಮಹಾಲಿಂಗೇಶ್ವರ ಈ ಮಾತಿನ ನಿಜ ಮಾಡ್ತ.
ಊರವರ ಕಷ್ಟಕ್ಕೆ ಸ್ವತಃ ಕಣ್ಣಾವುತ್ತ. ಪೇಟೆಯವರ ಹೆಚ್ಚಿನವರನ್ನೂ ಸ್ವತಃ ಕಾಣ್ತ.
ಇದರಿಂದಾಗಿ ಅವನ ಕಾಂಬಲೆ ಬಪ್ಪ ಮಕ್ಕೊಗೆ ಹೆಚ್ಚು ಆಶೀರ್ವಾದಾನುಗ್ರಹ ಆವುತ್ತು.
ಗುಂಡದ ಒಳವೇ ಇಪ್ಪದಲ್ಲ, ಹೆರ ಬಂದೂ ನೋಡುತ್ತೆ – ಹೇದು ಅವ ಹೇಳಿದ ಹಾಂಗೆ ಭಾಸ ಆವುತ್ತು.

ಮಹಾಲಿಂಗೇಶ್ವರನ ಹತ್ತೂರ ಒಡೆಯ ಹೇಳುಸ್ಸು ಅಂತೇ ಅಲ್ಲ.
ಸೀಮೆ ದೇವರು ತನ್ನ ಸೀಮೆಲಿ ಇಡೀ ಸಂಚಾರ ಇದ್ದು – ಹೇದು ತೋರ್ಸುತ್ತ ಕ್ರಮ ನಿಜಕ್ಕೂ ಚೆಂದ.
ಹತ್ತು ಊರು ನೋಡಿಗೊಂಡು ಬಪ್ಪ ಆ ಅಧಿಕಾರವೂ ಇದ್ದು ಮಹಾಲಿಂಗೇಶ್ವರಂಗೆ.
ಅಲ್ಲದೋ?

ಒಂದೊಪ್ಪ: ಊರು ಬೆಳದ ಹಾಂಗೆ ಅಲ್ಯಾಣ ಒಡೆಯನ ಪ್ರಭೆಯೂ ಬೆಳೆತ್ತಾ ಇರ್ತು.

ಒಪ್ಪಣ್ಣ

   

You may also like...

2 Responses

  1. S.K.Gopalakrishna Bhat says:

    ಒಳ್ಳೆ ಬರಹ

  2. ಬೊಳುಂಬು ಗೋಪಾಲ says:

    ಹದಿನಾರು ಕಿಲೋ ಮೀಟರು ದೂರಲ್ಲಿ ಅವಭೃತ ಮೀಯಾಣ. ಹಿಂದಾಣ ಕಾಲಂದಲೆ ನೆಡಕ್ಕೊಂಡು ಬಂದ ಕೆಲವು ಪದ್ಧತಿಗೊ ಎಷ್ಟು ಚೆಂದ. . ಊರಿನವಕ್ಕೆಲ್ಲ ಪುತ್ತೂರೊಡೆಯನ ಕಾಂಬಲೆ ಸುಸಂದರ್ಭ. ಒಳ್ಳೆ ಶುದ್ದಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *