Oppanna.com

ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ!

ಬರದೋರು :   ಒಪ್ಪಣ್ಣ    on   02/09/2011    19 ಒಪ್ಪಂಗೊ

ಬೈಲಿಲಿಡೀ ಚವುತಿದೇ ಗವುಜಿ.

ಪ್ರತಿ ಮನೆಗಳಲ್ಲಿಯೂ ಕನಿಷ್ಠ ಚವುತಿ ದಿನ ಆದರೂ ಗೆಣಪ್ಪಣ್ಣನ ನೆಂಪುಮಾಡಿಗೊಂಗು.
ಒಂದೋ ಗೆಣವತಿ  ಹೋಮ ಮಡಗ್ಗು, ಅಲ್ಲದ್ದರೆ ನಿತ್ಯಪೂಜೆ ದಿನ ಗೆಣವತಿಗೆ ಎರಡು ಕರಿಕ್ಕೆ ಹಾಕುಗು, ಅದೂ ಅಲ್ಲದ್ದರೆ ಹತ್ತರಾಣ ದಿಕ್ಕೆ ಗೆಣವತಿಯ ಕೂರುಸಿದಲ್ಲಿಗೆ ಹೋಗಿ ಹಣ್ಣುಕಾಯಿ ಮಾಡಿಗೊಂಡು ಬಕ್ಕು. ಅಲ್ಲದೋ?
ಚವುತಿ ದಿನ ಚವುತಿದಲ್ಲದ್ದೇ ಬೇರೆಂತರ ಗವುಜಿ ಇದ್ದು – ಕೇಳುವಿ ನಿಂಗೊ.
ಬೇರೆಯೂ ಇದ್ದು. ಅದೆಂತರ?
~

ನಮ್ಮ ಗುರುಗೊ ಹದ್ನೆಂಟನೇ ಒರಿಶದ ಚಾತುರ್ಮಾಸ್ಯ ವ್ರತ ಕೂದ್ದದು ಅರಡಿಗಲ್ಲದೋ.
ಕಳುದೊರಿಶದ ಹಾಂಗೆ ಈ ಒರಿಶವೂ ಅಶೋಕೆಲೇ ಚಾತುರ್ಮಾಸ್ಯ ನೆಡೆತ್ತಾ ಇದ್ದು.
ಒರಿಶದ ಇಡೀ ದಿನ ದೇಶದ ಸಾವಿರಾರು ಶಿಷ್ಯವೃಂದಕ್ಕೆ ಆಶೀರ್ವಾದ ಮಾಡಿಗೊಂಡು ಸಂಚಾರಲ್ಲಿಪ್ಪ ಶ್ರೀಗುರುಗೊ, ನಾಲ್ಕು ಪಕ್ಷದ ಕಾಲ ಒಂದೇ ದಿಕ್ಕೆ ಕೂದುಗೊಂಡು ಕಟ್ಟುನಿಟ್ಟಾದ ವ್ರತ ಮಾಡ್ತದು.
ಅಧ್ಯಯನ, ಅನುಷ್ಠಾನ, ಪ್ರವಚನ, ಮಂಥನಂಗಳಲ್ಲಿ ಸಮಯವ ಸದ್ವಿನಿಯೋಗ ಮಾಡಿಗೊಂಡು, ಆಸ್ತಿಕ ಭಗ್ತರು ಕೊಡ್ತ ಭಿಕ್ಷಾ ಸ್ವೀಕಾರ ಮಾಡಿಗೊಂಡು ಆಹಾರ ನಿಯಂತ್ರಣಲ್ಲಿ ಇರ್ತದು ಚಾತುರ್ಮಾಸ್ಯದ ವಿಶೇಷ.

ಶಿಷ್ಯರೂ ಹಾಂಗೇ – ಒಂದೊಂದಿನ ಒಂದೊಂದು ದಿಕ್ಕಾಣ ಶಿಷ್ಯರ ಭಿಕ್ಷೆಗೊ.
– ಹಾಂಗಾಗಿ, ಪ್ರತಿದಿನವೂ ಅಶೋಕೆಲಿ ಗಿಜಿಗಿಜಿ. ಪ್ರತಿ ದಿನವೂ ಹೊಸ ಮೋರೆಗೊ. ಎಲ್ಲೋರ ಮೋರೆಲಿಯೂ ಹೊಸ ಉತ್ಸಾಹಂಗೊ. ಅದರ ಕಂಡರೆ ಗುರುಗೊಕ್ಕೂ ನಿತ್ಯವೂ ಹೊಸ ಉತ್ಸಾಹ.
ದಿನಾಗುಳೂ ಭಿಕ್ಷಾ ಸ್ವೀಕಾರ ಆಗಿ ಹೊಸ ಹೊಸ ವಿಚಾರಲ್ಲಿ ಆಶೀರ್ವಚನ. ಹೊಸ ಸಂಗತಿಗಳ ಜ್ಞಾನೋದಯ.
ಅದೇ ಒಂದು ಗವುಜಿ ಅಲ್ಲದೋ?
~

ಚಾತುರ್ಮಾಸ್ಯದ ಎರಡು ತಿಂಗಳು ಅಧ್ಯಯನ, ಅನುಷ್ಠಾನಲ್ಲಿ ಪೀಠಾಧಿಪತಿಗೊ ತಲ್ಲೀನರಾಗಿರ್ತವು – ಹೇಳ್ತದು ಲೋಕವಿದಿತ.
ಅಧ್ಯಯನ ಮಾಂತ್ರ ಅಲ್ಲ, ಅದರೊಟ್ಟಿಂಗೆ ಅಧ್ಯಾಪನವೂ ಮಾಡ್ತದು ಗುರುಪೀಠದ ಲಕ್ಷಣ.

ಹಾಂಗಾಗಿ, ನಮ್ಮ ಗುರುಗೊ ಚಾತುರ್ಮಾಸ್ಯಲ್ಲಿ ವಾಲ್ಮೀಕಿಯ ರಾಮಾಯಣವೋ, ಶಂಕರಾಚಾರ್ಯರ ಅದ್ವೈತ ತತ್ವವೋ – ಹೀಂಗೆಂತಾರು ಅಧ್ಯಯನ ಮಾಡ್ತದರ ಒಟ್ಟೊಟ್ಟಿಂಗೆ ಗುರುಪೀಠಲ್ಲಿ ಕೂದುಗೊಂಡು ಅಧ್ಯಾಪನವನ್ನೂ ಮಾಡ್ತವು.
ಕ್ಲಿಷ್ಟಕರ ವಸ್ತುಗಳ ಮೂಲರೂಪಲ್ಲಿ ಅಧ್ಯಯನ ಮಾಡಿ, ಅಲ್ಲಿಪ್ಪ ಕಠಿಣ ವಸ್ತುಗಳ ಮೆಸ್ತಂಗೆ ಮಾಡಿ ಈಗಾಣ ಸಮಾಜಕ್ಕೆ ಬೇಕಾದ ನಮುನೆ ಹೇಳುವ ಚಾತುರ್ಯ ಪೀಠಕ್ಕೆ ಇದ್ದು.
ಹಾಂಗಾಗಿಯೇ – ಹಲವಾರು ಪ್ರವಚನಂಗೊ ಹರುದು ಬಪ್ಪದು, ಆ ಎಲ್ಲ ಪ್ರವಚನಂಗಳೂ ಜೆನರಿಂಗೆ ಮುಟ್ಟುತ್ತದು.
ಜೆನರಿಂಗೆ ಮುಟ್ಟಿದ ಪ್ರವಚನಂಗಳ ಮೆಚ್ಚಿ – ಆನಂದುಸುತ್ತದು.

ಚಾತುರ್ಮಾಸ್ಯಲ್ಲಿ ಪ್ರವಚನ – ಕಳುದೊರಿಶದ ಚಾತುರ್ಮಾಸ್ಯಲ್ಲೂ ಇದ್ದತ್ತು.
ನಿಂಗೊಗೆ ನೆಂಪಿದ್ದೋ ಏನೋ – ಶಂಕರಾಚಾರ್ಯ ವಿರಚಿತ “ಆನಂದ ಲಹರೀ” ಹೇಳ್ತ ಮಹಾಕಾವ್ಯದ ಬಗ್ಗೆ ಸರಳ-ಸುಂದರ ರೀತಿಲಿ ಕಳುದೊರಿಶ ಪ್ರವಚನ ಮಾಡಿದ್ದರ ಬಗ್ಗೆ ಬೈಲಿಲಿ ಮಾತಾಡಿದ್ದತ್ತು ನಾವು. (ಸಂಕೊಲೆ)
ಅಲ್ಲಿ ಕಂಡ ವಿಶಯಂಗಳ ‘ಇದ್ದದರ ಇದ್ದ ಹಾಂಗೆ’ ಹೇಳಿದ ಈ ಶುದ್ದಿ ನೆಂಪಾದರೆ ಒಂದೊಂದರಿ ಗುರುಗಳೂ ನೆಗೆಮಾಡ್ಳಿದ್ದಾಡ – ವಿದ್ವಾನಣ್ಣ ಹೇಳಿತ್ತಿದ್ದವು.
~
ಕಳುದೊರಿಶ  ಪ್ರವಚನ ಮಾಂತ್ರ ಇದ್ದದು, ಅಲ್ಲದೋ
ಆದರೆ, ಈ ಸರ್ತಿ ಹಾಂಗಲ್ಲ – ಅದರಿಂದಲೂ ಗವುಜಿದು ಇದ್ದು. ಅದೆಂತರ?
ಅದುವೇ “ರಾಮಕಥೆ”.

~

ಈ ಸರ್ತಿ ಚಾತುರ್ಮಾಸ್ಯ ಸುರು ಅಪ್ಪ ಮೊದಲೇ ಹಾಂಗೊಂದು ಇದ್ದು-ಹೇಳ್ತದು ಗೊಂತಾಯಿದು.
ಆದರೆ ಅದೆಂತರ ಹೇಳಿಗೊಂಡು ಪ್ರತ್ಯಕ್ಷ ನೋಡ್ಳೆ ನವಗೆ ಎತ್ತಿದ್ದಿಲ್ಲೆ. ಆರಾರು ಹೋದೋರ ಕೈಲಿ ಕೇಳಿಕ್ಕುವೊ° – ಹೇಳಿಗೊಂಡು ಯೋಚನೆ ಬಂತು. ಹೇಂಗೂ ಗಣೇಶಮಾವ° ನಿನ್ನೆ ಗೋಕರ್ಣಂದ ಎತ್ತಿದ್ದಷ್ಟೇ.
ಬಂದವು ಹೇಳ್ತದು ಗೊಂತಾಗಿ ಕಾಂಬಲೆ ಹೋದೆ.
ಇನ್ನೂ ಸಮಗಟ್ಟು ಒರಕ್ಕು ಬಿಟ್ಟಿದಿಲ್ಲೆ – ಮನೆಲೇ ಇತ್ತಿದ್ದವು. “ಇದೆಂತ ಮಾವ°, ಒರಕ್ಕು ಬಿಟ್ಟಿದಿಲ್ಲೆಯೋ?” – ಕೇಳಿದ್ದಕ್ಕೆ;
“ಒರಕ್ಕು ಬಿಟ್ಟಿದು, ಆದರೆ ತಲೆಲಿ ಇನ್ನೂ ರಾಮಕಥೆಯೇ ತಿರುಗುತ್ತಾ ಇದ್ದು…” – ಹೇಳಿದವು.
ರಾಮಕಥೆಯ ಬಗ್ಗೆಯೇ ತಿಳ್ಕೊಳೇಕಾದ ನವಗೆ ಪಕ್ಕನೆ ಕೇಳಿ ಹೋತು – ಎಂತರ ಅಂಬಗ ಅಷ್ಟೂ ಆಸಗ್ತಿಯ ವಿಶಯ ರಾಮಕಥೆಲಿ – ರಜ್ಜ ವಿವರುಸುವಿರೋ – ಹೇಳಿಗೊಂಡು. ಒರಕ್ಕು ತೂಗುತ್ತರೂ ಸಮಾದಾನಲ್ಲಿ ವಿವರುಸಿಗೊಂಡು ಹೋದವು.

~

ರಾಮಕಥೆ:
ಹೆಸರೇ ಹೇಳ್ತ ಹಾಂಗೆ, ಇದು “ರಾಮಾಯಣದ ಒಂದು ರೂಪ”. ವಾಲ್ಮೀಕಿ ಬರದ ಮೂಲ ರಾಮಾಯಣದ ಬಗ್ಗೆ ಪ್ರವಚನ.
ಆದರೆ, ಅಷ್ಟು ಮಾಂತ್ರ ಅಲ್ಲ – ಅದರೊಟ್ಟಿಂಗೆ ಸುಮಾರೆಲ್ಲ ಇದ್ದು.
ಆಸ್ತಿಕ ಭಕ್ತರಿಂಗೆ ಭಜನೆ ಹೇಳಿರೆ ಕೊಶಿಯೇ ಅಲ್ಲದೋ? ಎಲ್ಲೋರೂ ಕೂದು ರಾಗಲ್ಲಿ ಹೇಳಿಗೊಂಡು, ಅದಕ್ಕೆ ಮಿತವಾದ ಹಿನ್ನೆಲಿ ಸಂಗೀತ ಇದ್ದುಗೊಂಡು ಭಕ್ತಿಭಾವ ಹರಿತ್ತ ಒಂದು ಸುಂದರ ಸಮ್ಮಿಲನ.
ಸಂಗೀತ ಹೇಳಿರೆ ಮತ್ತೂ ಕೊಶಿ.
ಶಾಸ್ತ್ರೀಯವಾಗಿ ನಿರ್ದಿಷ್ಟ ಸ್ವರಂಗಳ ಆರೋಹಣ ಅವರೋಹಣಲ್ಲಿ ಮನಸ್ಸಿನ ಭಾವವ ವ್ಯಕ್ತಮಾಡುವ ಶಾಸ್ತ್ರೀಯ ಸಂಗೀತಂಗಳ ಕೇಳಿರೆ ನಿಜವಾಗಿಯೂ ಮೈದೂಗುತ್ತು.
ನೃತ್ಯ – ಹೇಳಿತ್ತುಕಂಡ್ರೆ ನೋಡ್ಳೆ ತುಂಬಾ ಆಸಕ್ತಿಯ ವಿಶಯ ಅಲ್ಲದೋ?
ಸಂಗೀತದ ಭಾವಾಭಿವ್ಯಕ್ತಿಯ ನಟನಟಿಯರು ಸಭೆಲಿ ಆಡಿ ತೋರುಸುತ್ತದು. ಕತೆ ಬೇಗ ಮನನ ಆವುತ್ತು.
ನೃತವೇ ತುಂಬಿದ ನೃತ್ಯ ರೂಪಕಂಗಳ ನೋಡ್ಳೆ ಎಷ್ಟು ಕೊಶಿ!!
ನೃತ್ಯದ ತಾಳಂಗೊ-ಹೆಜ್ಜೆಗೊ, ಅದರೊಟ್ಟಿಂಗೆ ಪರಸ್ಪರ ಮಾತುಕತೆಯ ನಾಟಕದ ತುಂಡುಗೊ. ಭಾವ-ರಾಗ-ತಾಳ –ನಟನೆ – ಎಲ್ಲವೂ ಇಪ್ಪ ಪ್ರಾಕಾರ.
ನಾಟಕವೋ – ಅದು ಇನ್ನೂ ಚೆಂದ.
ರಜ ನೆಗೆ, ರಜ ಬೇಜಾರ, ರಜ ಸಂಗೀತ – ಎಲ್ಲವನ್ನೂ ಸೇರಿಗೊಂಡ ಅವಿಲು! ನಾಟಕವ ಇಷ್ಟಪಡದ್ದವ ನಿಜಜೀವನಲ್ಲೂ ಆಸಕ್ತಿ ಕಳಕ್ಕೊಂಗು! – ಗಣೇಶಮಾವ° ಚೆಂದಕೆ ಹೇಳಿದವು.
ಇದಿಷ್ಟೂ – ಒಂದೇ ವೇದಿಕೆಲಿ, ಒಟ್ಟಿಂಗೇ ಇದ್ದರೆ?
– ಇದೆಲ್ಲದರ ಒಟ್ಟೊಟ್ಟಿಂಗೆ ಗುರುಗಳೇ ಮಾಡ್ತ ಪ್ರವಚನಂಗೊ ಇದ್ದರೆ..?
ನಾಟಕ, ಚಿತ್ರಕಲೆ, ಮರಳಿನ ಚಿತ್ರ, ಸಂಗೀತ, ಭಜನೆ, ನಾಟ್ಯ, ನಾಟಕ – ಎಲ್ಲವುದೇ ಒಂದೇ ವೇದಿಕೆಲಿ, ಒಟ್ಟೊಟ್ಟಿಂಗೇ ಮೇಳೈಸಿ, ಅದರೊಟ್ಟಿಂಗೆ ಗುರುಗೊ ಪ್ರವಚನ ಕೊಡ್ತದು!!
ಎಲ್ಲವೂ ಒಂದು ನಿರ್ದಿಷ್ಟ ಕತೆಯ ಹಂದರಂಗಳ ಬಿಡುಸಿಗೊಂಡು ಹೋವುತ್ತು. ಯೇವದು ಆ ಕಥೆ?
ಅದುವೇ “ರಾಮಕಥೆ”.
ಅದು ಆನಂದ, ಪರಮಾನಂದದ ವಿಷಯ. ಅಶೋಕೆಲಿ ಈಗ ನೆಡೆತ್ತಾ ಇಪ್ಪದೂ ಅದುವೇ.  – ಹೇಳಿದವು.
~
ನೆಡೆತ್ತ ಕ್ರಮ:
ಹತ್ತಾರು ಸಾಹಿತ್ಯ ಪ್ರಾಕಾರವ ಒಂದೇ ತಕ್ಕಡಿಲಿ, ಒಂದೇ ವೇದಿಕೆಲಿ… ಇದೆಲ್ಲವನ್ನೂ ಸಂಯೋಜನೆ ಮಾಡ್ತದು ಹೇಂಗಪ್ಪಾ ಹೇಳಿ ಅನುಸಿತ್ತು. ಅದರಿಂದಲೂ ಮುಖ್ಯವಾಗಿ, ಚಾತುರ್ಮಾಸ್ಯದ ಎಲ್ಲಾ ದಿನವೂ ರಾಮಕಥೆ ಇರ್ತೋ – ಕೇಳಿದೆ.
ಅಶೋಕೆಗೆ ಯೇವಗ ಹೋಪದು ಹೇಳ್ತ ಅಂದಾಜಿಂಗೆ ಕೇಳಿದ್ದಾಗಿತ್ತು.
ಇಲ್ಲೆ, ಕೆಲವು ನಿರ್ದಿಷ್ಟ ದಿನ ಮಾಂತ್ರ – ಹೇಳಿದವು ಗಣೇಶಮಾವ°.
ಯೇವಗ ಎಲ್ಲ? ಹೇಂಗೆ ನೆಡೆತ್ತದು? ಎಲ್ಲವನ್ನೂ ತೂಗಿಗೊಂಡು ಹೋವುತ್ತದು ಹೇಂಗೆ-  ಇದರ ಬಗ್ಗೆ ರಜ್ಜ ಹೇಳಿ ಮಾವ°- ಹೇಳಿದೆ.
ಗಣೇಶಮಾವ° ಒಂದೊಂದೇ ವಿವರುಸುಲೆ ಸುರುಮಾಡಿದವು.
~
ಚಾತುರ್ಮಾಸ್ಯದ ಎರಡು ಚಾಂದ್ರಮಾನ ತಿಂಗಳಿಲಿ – ನಾಕು ಪಕ್ಷ ಸಿಕ್ಕುತ್ತು. ಅಲ್ಲದೋ?
ಪ್ರತಿ ಪಕ್ಷಕ್ಕೂ ಒಂದೊಂದು ಹೆಸರಿದ್ದು – ಈಗಾಣ ರಾಜಕೀಯಲ್ಲಿ ಇರ್ತ ನಮುನೆ! 😉
ಆಷಾಡ ಪರ್ವ, ಶ್ರಾವಣ ಪರ್ವ, ಕೃಷ್ಣ ಪರ್ವ, ಭಾದ್ರಪದ ಪರ್ವ – ಹೇಳಿಗೊಂಡು ನಾಕು ಪಕ್ಷಂಗೊ.
ಪ್ರತಿ ಪಕ್ಷಲ್ಲಿಯೂ ಎರಡ್ಣೇ ತಿಥಿ ಬಿದಿಗೆಂದ – ಒಂಬತ್ತನೇ ತಿಥಿ ನವಮಿ ಒರೆಂಗೆ ಏಳು ದಿನದ ಕಾಲಾವಧಿಲಿಯೇ – ಈ ರಾಮಕಥೆ ನೆಡೆತ್ತದು.
ರಾಮಕಥೆಯೊ ಹಾಂಗೇ, ಪರ್ವ ಪರ್ವವಾಗಿಯೇ ಮುಂದುವರಿತ್ತದು – ಹೇಳಿದವು.

ಪರ್ವ:
ರಾಮಕಥೆಯ ಪರ್ವ ಹೇಳಿತ್ತುಕಂಡ್ರೆ, ಒಂದು ಪಕ್ಷದ ಬಿದಿಗೆ ದಿನ ಆರಂಭ ಆಗಿ, ನವಮಿ ದಿನ ಒರೇಂಗೆ ಇರ್ತು.
ಪ್ರತಿಯೊಂದು ಪರ್ವದ ಆರಂಬಲ್ಲಿಯೂ ಒಂದು ವಿಶೇಷ ಕಾರ್ಯ ಅಪ್ಪಲಿದ್ದು. ಅದೆಂತರ?

ಅದೊಂದು ಮೆರವಣಿಗೆ.
ಶ್ರೀಗುರುಗೊ ವಸತಿ ಇಪ್ಪ ಜಾಗೆಂದ, ರಾಮಕಥೆ ಅಪ್ಪ ಸಭಾಸದನ ಒರೆಂಗೆ ಆ ಮೆರವಣಿಗೆ.
ಗುರುಗೊ ಆ ಮೆರವಣಿಗೆಲೇ ಹೋಪದು.
ಗುರುಗಳ ಒಟ್ಟಿಂಗೇ ಇನ್ನೆರಡು ಅಪೂರ್ವ ವಸ್ತುಗೊ ಹೋವುತ್ತು. ಅದೆಂತರ?
– ವಾಲ್ಮೀಕೀ ರಾಮಾಯಣದ ಪುಸ್ತಕ.
ಗುರುಗಳ ಅತ್ಯಂತ ಗೌರವಾನ್ವಿತ ಶಿಷ್ಯರೊಬ್ಬರು ಈ ಶ್ರೇಷ್ಠ ವಾಲ್ಮೀಕಿ ರಾಮಾಯಣವ ತಲೆಲಿ ಮಡಗಿಂಡು ಹೋವುತ್ತದು.
ಅದರೊಟ್ಟಿಂಗೇ, ಮರಲ್ಲಿ ಮಾಡಿದ ಶ್ರೀರಾಮನ ವಿಗ್ರಹವನ್ನುದೇ ಒಬ್ಬ° ಹೊತ್ತುಗೊಂಡು ಹೋಪದಡ.

ಹೋಗಿ, ವೇದಿಕೆಲಿ ಶ್ರೀರಾಮನ ಪಟದ ಹತ್ತರೆಯೇ ಆ ಮೂರ್ತಿಯ ಮಡಗುತ್ತದು.
ಅದರ ಸಮೀಪಲ್ಲೇ ರಾಮಾಯಣ ಪುಸ್ತಕವ ಮಡಗುತ್ಸು.
– ಮೆರವಣಿಗೆಲಿ ಅಲ್ಲಿಗೆ ಎತ್ತಿದ ಕೂಡ್ಳೇ ಶ್ರೀ ಗುರುಗೋ ಶ್ರೀರಾಮನ ದೊಡ್ಡ ಪಟಕ್ಕೆ ಪುಷ್ಪಾರ್ಚನೆ ಮಾಡ್ತವು.
ರಾಮ ಇಪ್ಪಲ್ಲಿ ಹನುಮ ಇದ್ದೆ ಇರ್ತ ಅಲ್ಲದಾ? ಹಾಂಗೆ ಹನುಮ ಸಾನ್ನಿಧ್ಯವ ಕಲ್ಪಿಸಿಗೊಂಡು ಅಲ್ಲಿಗೂ ಪುಷ್ಪಾರ್ಚನೆಮಾಡಿ ಗುರುಗೊ ಪುಸ್ತಕಕ್ಕೆ ಪೂಜೆ ಮಾಡ್ತವಡ.
ಮಾಡಿದ ಮತ್ತೆ ರಾಮಕಥೆ ಅಧಿಕೃತವಾಗಿ ಸುರು.
ಏಳುದಿನದ ರಾಮಕಥೆ ಪರ್ವ ಮುಗುದಮತ್ತೆ ಪುನಾ ಅದೇ ರೀತಿ ಮೆರವಣಿಗೆಲಿ ವಸತಿಯ ಜಾಗೆಗೆ ತಪ್ಪದು.
ರಾಮಾಯಣದ ಗೌರವ ಎಲ್ಲಿಂದ ಆರಂಭ ಆವುತ್ತು –ಹೇಳ್ತದರ ಕಂಡು ಮನಸ್ಸು ತುಂಬಿ ಬಂತು.

~
ಪ್ರತಿದಿನವೂ, ಪುಸ್ತಕಕ್ಕೆ ಸಲ್ಲುತ್ತ ಗೌರವ ಸಲ್ಲಿದ ಮತ್ತೆ, ಆ ದಿನದ ರಾಮಕಥೆ ಸುರು.
ಲತಕ್ಕ ಸಂಗಡಿಗರ ಸುಶ್ರಾವ್ಯ ಭಜನೆ!
ವಾಲ್ಮೀಕಿ ವೇದ ವಂದ್ಯಾ – ಹೇಳಿಗೊಂಡು ಲತಕ್ಕ ಭಜನೆ ಮಾಡ್ಳೆ ಸುರುಮಾಡಿರೆ ಇಡೀ ಸಭೆಯೇ ತಲೆತೂಗುತ್ತು; ಚಕ್ರಕೋಡಿ ಶಾಸ್ತ್ರಿಗಳನ್ನೂ ಸೇರಿ! 😉
ರಜ್ಜ ಹೊತ್ತು ರಾಮನ ಬಗ್ಗೆ ಭಜನೆ ಮಾಡಿದ ಮತ್ತೆ ಕಥೆಯ ಒಳಂಗೆ ಹೋಪದು.
ಕಥೆ – ಯೇವ ಕಥೆ?
ಬರೇ ರಾಮ ಕಾಡಿಂಗೆ ಹೋದ ಕಥೆಯೋ? ರಾವಣನ ಸಂಹಾರ ಮಾಡಿದ ಕಥೆಯೋ? ಲವಕುಶರು ಹೋರಾಡಿದ ಕಥೆಯೋ? ಅಲ್ಲ, ಅಷ್ಟು ಮಾಂತ್ರ ಅಲ್ಲ!
ಮೂಲ ರಾಮಾಯಣಲ್ಲಿ, ವಾಲ್ಮೀಕಿಗೆ ಕಂಡ ಕಥೆಗೊ. ಲಕ್ಷಗಟ್ಳೆ ಶ್ಲೋಕಲ್ಲಿ ವಿವರುಸುಲೆ ಹೆರಟ ತ್ರೇತಾಯುಗದ ಶುದ್ದಿಗೊ!
ನಾವು ಹುಟ್ಟಿದ ಮತ್ತೆ ಕೇಳಿ ಅರಡಿಯದ್ದ ಕಥೆಗೊ.
ಪ್ರತಿಯೊಂದು ಕತೆಲಿಯೂ ಹತ್ತಾರು ಉಪಮೆಗೊ, ಉಪಕಥೆಗೊ, ಉದಾಹರಣೆಗೊ!
ಎಲ್ಲವನ್ನುದೇ ಜೆನರಿಂಗೆ ಮನದಟ್ಟು ಮಾಡುಸಿಗೊಂಡು, ಹಂತ ಹಂತವಾಗಿ ಬತ್ತ ಸುಂದರ ಕಥೆಗೊ – ಹೇಳಿದವು ಗಣೇಶಮಾವ°.
~

ಉದಾಹರಣೆಗೆ,
ಓಂಕಾರ, ಬ್ರಹ್ಮಾಂಡದ ಸೃಷ್ಟಿ – ಅದು ಹೇಂಗಾತು? ಯುಗಾಂತಂಗಳ ಬಗ್ಗೆ ಎಂತಾತು?
ಸೃಷ್ಟಿ ಎಂತಕೆ ಆತು? ರಾವಣನ ಹುಟ್ಟು, ಅವನ ಬಾಲ್ಯ, ಅವನ ಬೆಳವು, ಅವ° ಎಲ್ಲೆಲ್ಲಿಗೆ ಹೋವುತ್ತ°? ಆರಾರ ನಾಶ ಮಾಡ್ತ°? ಹೇಂಗೆ ಧರ್ಮಂದ ದೂರ ಹೋವುತ್ತ°?
ಶಬಲೆ ಹೇಳಿರೆ ಆರು? ಕಾಮಧೇನುವಿನ ಶುದ್ದಿ ಎಂತರ ?. . .
ರಾಮನ ಹುಟ್ಟು ಅಪ್ಪ ಮದಲಾಣ – ಅಷ್ಟಾಗಿ ಚಾಲ್ತಿಲಿ ಇಲ್ಲದ್ದ ಸುಂದರ ಕಥೆಗೊ.
ಗುರುಗಳ ಪ್ರವಚನ ಹೇಳಿರೆ ಮತ್ತೆ ಕೇಳೇಕೋ  – ಎಲ್ಲವನ್ನುದೇ ಎಳೆ ಎಳೆಯಾಗಿ ವಿವರುಸುತ್ತ ಶುದ್ದಿಗೊ.
ಬೇಕಾದಲ್ಲಿ ಉಪಕಥೆಗೊ, ನೆಗೆಗೊ, ಉಪಮೆಗೊ –ಆರಿಂಗೂ ಒರಕ್ಕು ತೂಗುಲೆ ಇಲ್ಲೆ!

ಪ್ರತಿ ಕತೆಗಳೂ ಒಂದು ಹಂತಕ್ಕೆ ಬಂದು ನಿಂದಪ್ಪಾಗ – ಅದಾ, ಒಂದು ಹಿನ್ನೆಲೆ ಸಂಗೀತ, ಅದಕ್ಕೆ ಸರಿಯಾಗಿ ಚೆಂದದ ನಾಟ್ಯ.
ಸಣ್ಣದೊಂದು ನೃತ್ಯ ರೂಪಕ, ಅಲ್ಲದ್ದರೆ ಯಕ್ಷಗಾನದ ಒಂದು ರಾಕ್ಷಸ / ದೇವ ವೇಷ.

ಅಲ್ಲದ್ದರೆ, ಒಂದು ಬೆಳಿಕಾಗತಲ್ಲಿ ಚಿತ್ರ ಬಿಡುಸುತ್ತದು.
ಅದೂ ಅಲ್ಲದ್ದರೆ, ತಡ್ಪೆಯಷ್ಟಕ್ಕೆ ಇಪ್ಪ ಒಂದು ಕನ್ನಟಿಲಿ ಹೊಯಿಗೆ ಹರಡಿ ಆಯಾ ಸಂದರ್ಭಕ್ಕೆ ಸರಿಯಾಗಿ ಬೆರಳುಗಳ ಓಡುಸಿಗೊಂದು ಚಿತ್ರ ಮಾಡ್ತಾ ಹೋಪದು.
ಒಬ್ಬ ಕಲಾವಿದನ ಕಲಾನೈಪುಣ್ಯ ಹೆರ ಬಪ್ಪಲೆ ಇಪ್ಪ ಅಪೂರ್ವ ಅವಕಾಶ.

ಇದೇವದೂ ಅಲ್ಲದ್ದರೆ ಬಜನೆ. – ಹೀಂಗೆ, ಎಲ್ಲಿ ಬೇಕೋ –ಅಲ್ಲಲ್ಲಿ ಕಥೆಗೆ ಪೂರಕವಾದ ಸಾಹಿತ್ಯ ಪ್ರಾಕಾರಂಗೊ.
~
ಆ ದಿನದ ಕಥೆ ಮುಗುದ ಮತ್ತೆ ಒಂದರಿ ಭಜನೆ ಇದ್ದಾಡ.
ಅದು ಹೇಂಗೆ? –
ಕೂದಲ್ಲೇ ಭಜನೆ ಮಾಡ್ತದಲ್ಲಾಡ; ನಿಂದೊಂಡು!!
ನಿಂದೊಂಡೋ – ಅಪ್ಪು. ಆ ಗವುಜಿಗೆ ನವಗೇ ಗೊಂತಿಲ್ಲದ್ದೆ ಎಲ್ಲೋರುದೇ ನಿಂದು ಹೋವುತ್ತಾಡ.
ಸಮೂಹ ಭಕ್ತಿರಸ ಹರಿತ್ತದು.
ಶ್ರೀ ಶಂಕರನ, ಶ್ರೀರಾಮನ ಸಂಪೂರ್ಣ ಆಶೀರ್ವಾದಕ್ಕೆ ಬಯಸುತ್ತದು!
ರಾಮನ ಉಗಮ ಆತು – ಹೇಳ್ತ ಕೊಶಿ ಬಪ್ಪಾಗ ದೊಡಾ ಗವುಜಿ ಮಾಡಿಗೊಂಡು ಎಲ್ಲೋರುದೇ ಹೆಜ್ಜೆ ಹಾಕಿದ್ದರ ಕಂಡ್ರೆ ಸ್ವತಃ ರಾಮನ ಅಮ್ಮ ಕೌಸಲ್ಯೆಗೇ ಮನಸ್ಸು ತುಂಬಿ ಬಪ್ಪ ಹಾಂಗಾಯಿದಾಡ!
ಗಣೇಶಮಾವ° ವಿವರುಸಿಗೊಂಡೇ ಹೋದವು.

~

ಎಷ್ಟೊಂದು ವೈವಿಧ್ಯತೆ. ಎಷ್ಟೊಂದು ಅದ್ವಿತೀಯತೆ. ಎಂತಹಾ ಏಕತೆ!! ಅಲ್ಲದೋ?
ರಾಮಾಯಣಂಗಳದ್ದೇ ರಾಮಾಯಣ ಆಯಿದು ಈಗ ನಮ್ಮ ಸಮಾಜಲ್ಲಿ. ಅದರೆಡಕ್ಕಿಲಿ ಮೂಲ ವಾಲ್ಮೀಕಿ ಬರದ ರಾಮಾಯಣವನ್ನೇ ಸಮಾಜಕ್ಕೆ ತಿಳುಸಿ, ಅದರೊಟ್ಟಿಂಗೆ ಹೀಂಗಿರ್ತ ಸಂಗೀತ-ಸಾಹಿತ್ಯ-ಕಲೆಗಳ ಸೇರುಸಿ ಭಕ್ತರನ್ನೂ ಸೇರುಸಿಗೊಂಡು ಮುಂದುವರಿತ್ತದು ಎಷ್ಟೊಂದು ಚೆಂದ, ಅಲ್ಲದೋ?
ಇದು ಕೇವಲ ಪ್ರವಚನ ಅಲ್ಲ,ಕೇವಲ ರೂಪಕ ಅಲ್ಲ, ಕೇವಲ ಭಜನೆ ಅಲ್ಲ-  ಇದು ನಿರೂಪಕ!!
ಸಮಾಜದ ಎಲ್ಲಾ ನಮುನೆಯ ಸಾಹಿತ್ಯಾಸಕ್ತರಿಂಗೂ ಒಂದೊಂದು ಅವಕಾಶ ಇದ್ದು!

ಗಣೇಶ ಮಾವ° ವಿವರುಸುದರ ಕೇಳಿಯಪ್ಪಗ ನವಗೂ ಒಂದರಿ ನೋಡಿಕ್ಕುವೊ° ಹೇಳಿ ಆಗದ್ದೆ ಇರ.
ನಾಳ್ತು ನವಮಿಯ ಒರೇಂಗೆ ಇದ್ದದ. ಹೋಗದ್ದೇ ಇಪ್ಪವು ಹೋಗಿ ಆ ರಾಮಕಥೆಯ ವೈಭವವ ಕಂಡಿಕ್ಕಿ ಬಪ್ಪನೋ?
~

ಜೆನಂಗಳ ಮನಸ್ಸಿಂದ ಮರೆಯಾಗಿ ಹೋವುತ್ತ ಎಷ್ಟೋ ಕಥೆಗೊ, ಉಪಕಥೆಗೊ ಈಗ ಅಶೋಕೆಲಿ ನೆಂಪಕ್ಕು.
ಒಂದರಿ ನೆಂಪಾದರೆ ಮತ್ತೆ ಎಂದಿಂಗೂ ಮರದು ಹೋಗದ್ದ ನಮುನೆಲಿ ಮನಸ್ಸಿಲಿ ಗಟ್ಟಿ ಆಗಿ ನಿಂಗು.
ವಾಲ್ಮೀಕಿ ರಾಮಾಯಣದ ಒಳ ಇಪ್ಪ ರಾಮನ ಕಥೆ; ರಾಮನ ಕಥೆಯ ಒಟ್ಟೊಟ್ಟಿಂಗೆ ಅನೇಕಾನೇಕ ಉಪಕಥೆಗೊ; ಅದೆಲ್ಲದರ್ಲಿಯೂ ಬತ್ತ ತತ್ವಂಗಳ ಒಂದೊಂದೇ ಆಗಿ ನಾವು ಮನಸ್ಸಿಂಗೆ ತೆಕ್ಕೊಳೇಕು.
ಅಷ್ಟಪ್ಪಗ ಅಲ್ಲಿಪ್ಪ ಪಾತ್ರಂಗಳಲ್ಲಿ ನಮ್ಮನ್ನೇ ಹೋಲುಸಿ ಹೋವುತ್ತು.

ಅಪ್ಪಲೆ ಅದು ರಾಮನ ಕಥೆಯೇ ಆದರೂ, ಪರೋಕ್ಷವಾಗಿ ನಾವು ನಮ್ಮನ್ನೇ ಸರಿಮಾಡಿಗೊಂಬಲೆ ಬಳಸುಲಕ್ಕಾದ “ನಮ್ಮ ಕಥೆ”ಯೇ ಆಗಿ ಇರ್ತು – ಹೇಳ್ತದು ಅಭಿಪ್ರಾಯ.

~

ಇದೇ ಕಾರಣಲ್ಲಿ ಮಹಾಪುರುಷರ ಕಥೆಗಳ ಕೇಳಿಗೊಂಡು / ಹೇಳಿಗೊಂಡು ಇದ್ದದಲ್ಲದೋ – ಮದಲಿಂಗೆ.
ಈಗಾಣ ಟೀವಿಲಿ ಆದರೆ ಹೇರಿ ಪೋಟ್ರು, ಪುಚ್ಚೆಯೂ-ಎಲಿಯೂ ಎಲಿಪುಚ್ಚೆ ಮಾಡಿಗೊಂಬದು ಬಕ್ಕು, ಮದಲಿಂಗೆ ಆದರೆ ಅಜ್ಯಕ್ಕೊ ಕಥೆ ಹೇಳಿಯೇ ಆಯೇಕಟ್ಟೆ. ಅಲ್ಲದೋ?!

ಅದಪ್ಪು, ಮದಲಾದರೆ, ರಾಮಾಯಣದ ಕಥೆ-ಉಪಕಥೆಗಳ ಅಜ್ಜಿಯಕ್ಕೊ ಹೇಳಿಕೊಟ್ಟುಗೊಂಡು ಇತ್ತಿದ್ದವು. ಇನ್ನಾಣ ತಲೆಮಾರಿನ ಅಜ್ಜಿಯಕ್ಕೊಗೆ ಅದೆಲ್ಲ ಬಕ್ಕು – ಹೇಳ್ತದು ನಿಘಂಟಿಲ್ಲೆ!
ಹಾಂಗಾಗಿ, ಇದು ಎಂದಿಂಗೂ ಆರಿ ಹೋಪಲಾಗ ಹೇಳ್ತ ಉದ್ದೇಶ ಹೊತುಗೊಂಡು ಇಪ್ಪ ನಮ್ಮ ಗುರುಗೊ ಮಾಡ್ತ ಈ ಪಾಠ ನಮ್ಮ ಎಲ್ಲೋರಿಂಗೂ ಇರ್ತದು.
ಅಧ್ಯಾಪನ ಮಾಡುವಗ ಇಡೀ ಸಮಾಜವೇ ಕಲ್ತುಗೊಂಡು, ಮುಂದಾಣೋರಿಂಗೆ ತಿಳಿಶೇಕು – ಹೇಳ್ತ ಅಂಶವೂ ಇದರ್ಲಿ ಇದ್ದು – ಹೇಳಿದವು ಗಣೇಶಮಾವ°.

ಒಂದೊಪ್ಪ: ರಾಮನ ಕಥೆ ಕೇಳಿರೆ ನಮ್ಮ ವೆಗ್ತಿತ್ವವೂ ರಾಮನ ಹಾಂಗೇ ಅಕ್ಕು; ಎಲಿಪುಚ್ಚೆಯ ಕಾರ್ಟೂನು ಕಥೆ ಕೇಳಿರೆ ನಮ್ಮದೂ ಹಾಂಗೇ ಆಗದೋ?!

ಸೂ:

19 thoughts on “ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ!

  1. ಚಾತುರ್ಮಾಸ್ಯದ ಫೋಟೋ ನೋಡ್ಲೆ ಭೇಟಿ ಕೊಡಿ…..Hare rama.in>photo gallary>chathurmasya 2011

  2. ಹರೇ ರಾಮ
    ತು೦ಬಾ ಚೆ೦ದ ಆಯ್ದು ವಿವರಣೆ..

  3. vav olle shuddi laiku baradde.
    nera gurugalindale kelida hangathu shuddi odi appaga.
    elloringu ramana jeevana aadarsha agali.
    rama rajya alla, rama desha agali allada oppanno.
    manasinge muttuva hange baradde.
    ondoppa sooper.
    olledagali olithagali nammellarannu harasi aasheervadisali.
    good luck..

  4. ಒಪ್ಪಣ್ಣೋ…..,
    ಹುಣ್ಣಿಮೆಯ ಚಂದ್ರನ ಹಾಂಗೆ ಬೆಳಗಿದ ಸೂರ್ಯ ವಂಶದ ದಶರಥ ತನಯ ಶ್ರೀ ರಾಮಚಂದ್ರನ ಜೀವನಗಾಥೆಯ, ಅದ್ವೈತ ಪೀಠಾಧಿಪತಿ ಶ್ರೀ ಗುರುಗಳ ಶ್ರೀವಾಣಿಲಿ ಕೇಳಿ ಬದುಕಿನ ದಾರಿಯ ಅರ್ಥೈಸಿಗೊಂಬಲೆ ಇಪ್ಪ ಅಪೂರ್ವ ಅವಕಾಶ. ಇದರಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದವ° ಪುಣ್ಯವಂತನೇ!! ಕಾರಣಾಂತರಂಗಳಿಂದ ತಪ್ಪಿದವಕ್ಕೆ ಮುಂದೆ ಸಿಕ್ಕುವ ಅವಕಾಶಂಗಳ ಸದುಪಯೋಗ ಮಾಡುಲೆ ಅಕ್ಕು. ಅಶೋಕೆಯ ಪುಣ್ಯ ಭೂಮಿಲಿಯೇ ನಾನಾ ರೂಪಲ್ಲಿ ರಾಮಕಥೆಯ ಪ್ರಸ್ತುತಿ ಆದ್ದದು ವಿಶೇಷವೇ!! ಎಲ್ಲವೂ ಎಷ್ಟು ಅಚ್ಚುಕಟ್ಟು.
    ರಾಮಾಯಣವ ನಾವು ಹಲವಾರು ಸರ್ತಿ ಕೇಳ್ತು. ಆದರೆ, ಅದರ ಪ್ರತಿ ಸನ್ನಿವೇಶವನ್ನೂ ನೆನಪ್ಪಿಲಿ ಮಡಗುತ್ತ ಹಾಂಗೆ ಇಪ್ಪ ಪದ್ಯಂಗಳೂ, ಚಿತ್ರಂಗಳೂ, ನೃತ್ಯಂಗಳೂ, ಎಲ್ಲವೂ ನಮ್ಮ ಮುಂದೆ ಆ ಕಾಲವನ್ನೇ ತಂದು ನಿಲ್ಸುತ್ತು. ಈ ಸರ್ತಿ ಹೊಯಿಗೆಲಿ ಚಿತ್ರಮಾಲಿಕೆ ಮಾಡಿದ್ದವು. ವೇದಿಕೆಲಿ ನಡೆತ್ತಾ ಇಪ್ಪದಕ್ಕೆ ಕೂಡ್ಲೇ ಸ್ಪಂದಿಸುವ ಹಾಂಗೆ ಕಲಾವಿದ° ಅವನ ಮನಸ್ಸಿನ ಏಕಾಗ್ರಗೊಳಿಸಿ, ಆಯಾ ಭಾವನೆಗೆ, ಆಯಾ ಸನ್ನಿವೇಶಕ್ಕೆ ತಕ್ಕ ಹಾಂಗೆ ಕೂಡ್ಲೇ ಚಿತ್ರ ಬರವಲೆ, ಎಷ್ಟು ಕೈಚಳಕ ಹೊಂದಿರೆಕ್ಕು!!!

    ಒಪ್ಪಣ್ಣ, ನೀನು ಹೇಳಿದ ಹಾಂಗೆ ಎಷ್ಟೊಂದು ವೈವಿಧ್ಯತೆ.. ಆದರೂ ಭಾವನೆಲಿ ಏಕತೆ. ಪ್ರಸ್ತುತ ಪಡಿಸುವವರ ಭಾವನೆ, ಕೇಳುಗರ, ನೋಡುಗರ ಭಾವನೆ ಎಲ್ಲ ಏಕರೂಪ ಅಪ್ಪದರ ಕಾಂಬಗ ಆ ಕ್ಷಣ ಧನ್ಯತಾ ಭಾವ ಬಪ್ಪದು. ಇಷ್ಟು ದಿನ ಅದಕ್ಕಾಗಿ ತಯಾರು ಮಾಡಿ, ಪ್ರಸ್ತುತಿ ಮಾಡಿದ ಎಲ್ಲರಿಂಗೂ ಧನ್ಯವಾದ ಹೇಳಲೇ ಬೇಕು. ಪ್ರತಿಯೊಬ್ಬನ ಶ್ರಮವೂ ಎದ್ದು ಕಾಂಬ ಹಾಂಗೆ ಇದ್ದು. ಅದು ಹೂಗು ಬಿಡುಸಿ ತಂದು ಮಡುಗುದಿಕ್ಕು, ಮಾಲೆ ಮಾಡುದಿಕ್ಕು, ವೇದಿಕೆಯ ಅಲಂಕಾರ ಇಕ್ಕು, ಹೂಗಿನ ರಂಗೋಲಿ, ರಂಗೋಲಿಗ ಹಾಕುದು ಎಲ್ಲವೂ. ಎಲ್ಲೋರ ಭಕ್ತಿ ಒಂದು ಸೇರಿ ಆದ ಮಹೋತ್ಸವ ಈ ಚಾತುರ್ಮಾಸ್ಯದ ರಾಮಕಥೆ. ಹರೇರಾಮಲ್ಲಿ ಪಟರೂಪಲ್ಲಿ ಎಲ್ಲಾ ಘಟನೆಗಳ ಸೆರೆ ಹಿಡುದ ಗೌತಮಂಗೆ ವಿಶೇಷ ಅಭಿನಂದನೆ ಸಲ್ಲೆಕ್ಕು. ಅಪೂರ್ವ ಕ್ಷಣಂಗಳ ಸೆರೆ ಹಿಡುದ್ದ°.

    ಲೋಕಗುರು ಶ್ರೀ ರಾಮನ ಜೀವನವೇ ಒಂದು ಮಾದರಿ ಎಲ್ಲರಿಂಗೂ. ಅದರ ಎಳೆ ಎಳೆಯ ಬಿಡುಸಿ ಹೇಳಿ, ನಮ್ಮ ಬದುಕಿಂಗೆ ಕನ್ನಟಿ ಹಿಡಿತ್ತಾ ಇಪ್ಪ ನಮ್ಮ ಪೀಠದ ಗುರುಗೋ ಹೇಳಿದ ತತ್ತ್ವಂಗಳ ನಮ್ಮ ಜೀವನಲ್ಲಿ ಅಳವಡಿಸಿದರೆ ನಮ್ಮ ಬದುಕೂ ಸಾರ್ಥಕ ಅಕ್ಕು. ನಮ್ಮೊಳ ಇಪ್ಪ ರಾಮನ ತತ್ತ್ವವ ಬೆಳಗಿಸಿದರೆ ಸಾತ್ವಿಕತೆ ನಮ್ಮಲ್ಲಿಕ್ಕು. ಅದಲ್ಲದ್ದರೆ ಎಂತೆಲ್ಲ ಆವುತ್ತು ಹೇಳುದರ ವಿಧ ವಿಧಲ್ಲಿ ವಿವರ್ಸಿದ್ದವು. ಗುರು ತೋರುವ ದಾರಿಲಿ ನಡದು ನಮ್ಮ ಈ ಲೋಕದ ದಾರಿ ಸುಗಮ ಮಾಡಿ ಪರ ಲೋಕದ್ದಕ್ಕೂ ಸುಲಾಬ ಮಾಡಿಗೊಂಬ° ಅಲ್ಲದಾ ಒಪ್ಪಣ್ಣ?
    ಒಂದೊಪ್ಪ ಲಾಯ್ಕಾಯಿದು.

  5. ಕೆಲವು ವಿಷಯಂಗಳ ನೋಡಿ ಅನುಭವಿಸಿದರೂ ಅದರ ಶುದ್ದಿಲಿ ಬರವಲೆ ಎಡಿತ್ತಿಲ್ಲೆ .ಮನಸ್ಸು ಮಾತು ಎರಡುದೇ ಮೂಕ ಆವ್ತು.ಆ ರೀತಿ ಮನಸ್ಸಿಲಿ ಹೊಕ್ಕು ಕೂರ್ತು ರಾಮಕಥೆ.ಅದರ ಹೆರ ತಂದು ಶುದ್ಧಿಯ ರೂಪಲ್ಲಿ ಎಲ್ಲೋರಿಂಗೂ ಅಂತರ್ಜಾಲದ ಮೂಲಕ ಒಪ್ಪಣ್ಣ ಶುದ್ಧಿ ಹೇಳ್ತಾ ಇದ್ದ.ಈ ಮೂಲಕ ಗುರುಗಳ ಮತ್ತೆ ರಾಮನ ಅನುಗ್ರಹ ಹೃದಯಂದ ಹೃದಯಕ್ಕೆ ತಲುಪುಸುವ ಕೆಲಸ ಎಂಗಳ ಒಪ್ಪಣ್ಣ ಮಾಡ್ತಾ ಇದ್ದ.ಈ ಕೆಲಸಕ್ಕೆ ಅನಂತ ಧನ್ಯವಾದಂಗೋ. ಶುದ್ಧಿ ಓದಿ ಮನಸ್ಸು ಅಶೋಕೆಯ ಪರಿಸರಲ್ಲಿ ತಿರುಗಿ ಬಂತು.ಇಂತಹ ಸದಾವಕಾಶವ ಆರೂದೇ ತಪ್ಪುಸಲೆ ಆಗ.ಇನ್ನು ರಜ್ಜವೇ ದಿನ ಇದ್ದು ಈ ಅವಕಾಶ.ಇಷ್ಟರವರೆಗೆ ಹೋಪಲೆ ಎಡಿಗಾಗದ್ದವು ಈ ಸರ್ತಿ ಒಂದು ಪ್ರಯತ್ನ ಮಾಡಿ ನೋಡಿ. ಗುರುಗಳ ಮತ್ತೆ ಶ್ರೀ ರಾಮನ ಅನುಗ್ರಹ ಏಕ ಕಾಲಲ್ಲಿ ಅಪ್ಪ ಸಮಯ ಹೇಳಿರೆ ಅದು ರಾಮಕಥೆ.ಒಳ್ಳೆಯ ಶುದ್ಧಿಯ ಹೇಳಿದ್ದಕ್ಕೆ ಒಪ್ಪಣ್ಣಾ,ನಿನಗೆ ಎನ್ನ ಮನ:ಪೂರ್ವಕ ಧನ್ಯವಾದಂಗೋ.ನಿನ್ನ ಸಾಧನೆಗೋ ಹೀಂಗೆ ಮುಂದುವರಿಯಲಿ.ಒಳ್ಳೆಯದಾಗಲಿ.ಹರೇರಾಮ………

  6. ಒಪ್ಪಣ್ಣನ ಶುದ್ಧಿ ಮೂಲಕ “ರಾಮಕಥೆ”ಯ ಸವಿಯ ಅನುಭವಿಸುಲೆ ಸಾಧ್ಯ ಆತು. ಧನ್ಯವಾದಂಗೊ ಒಪ್ಪಣ್ಣ.
    ಗುರುಗಳ ಈ ಅದ್ಭುತ ಕಾರ್ಯಕ್ರಮ ತುಂಬಾ ಚಂದ ಇಕ್ಕು ಖಂಡಿತವಾಗಿದೆ.
    ~ಸುಮನಕ್ಕ

  7. ಹರೇ ರಾಮ ।
    ಎಲ್ಲಾ ದಿನ ಭಾಗವಹಿಸಿದವು ಅತ್ಯಂತ ಅದೃಷ್ಥ ಶಾಲಿಗಳೇ !
    ಕೆಲವಾರು ದಿನ ಭಾಗವಹಿಸಿದವು ಭಾಗಶಃ ಭಾಗ್ಯ ಶಾಲಿಗೋ !
    ಒಂದು ದಿನಕ್ಕಾದರೂ ಭಾಗವಹಿಸಿದವು ರುಚಿ ನೋಡಿದ ಪುಣ್ಯ ಶಾಲಿಗೋ !
    ಅದಕ್ಕೂ ಪುರುಸೊತ್ತಾಗದ್ದವು ಕೇವಲ ನದೃಷ್ಥರು…ಹತಭಾಗ್ಯರು ॥

  8. ಹರೇರಾಮ. ಈ ಸರ್ತಿ ಒಂದು ದಿನ ರಾಮಕಥೆ ನೋಡುವ ಅವಕಾಶ ಎನಗೂ ಸಿಕ್ಕಿತ್ತು. ಎನ್ನ ಯೋಗವೋ ಪುಣ್ಯವೋ ಗೊಂತಿಲ್ಲೆ ಮೊನ್ನೆ ರಾಮಕಥೆ ನೋಡಿದೆ. ಅಶೋಕೆಲಿ ರಾಮರಾಜ್ಯ ಪ್ರವೇಶದ ಅನುಭವ ಆತು.ಅಲ್ಲಿ ನಾವೆಲ್ಲಿದ್ದು ಹೇಳಿಯೇ ಗೊಂತಾವುತ್ತಿಲ್ಲೆ.ಒಟ್ಟಿಲಿ ಅಶೋಕೆಲಿ ಎನಗೆ ಶೋಕ ಕಳೆದ ಅನುಭವ ಆತು.ಈ ಅನುಭವವ ವರ್ಣಿಸುಲೆ ಎಡಿತ್ತಿಲ್ಲೆ. ಅದ್ಭುತ ಅದ್ಭುತ ಅದ್ಭುತ!!! ಅದಲ್ಲ್ದದೆ ಗುರುಗಳ ಒಟ್ಟಿಂಗೆ ೩ಗಂಟೆ ಕಳವಲೆ ಇದು ಒಳ್ಲೆ ಅವಕಾಶ. ಜೀವನಲ್ಲಿ ಒಂದರಿಯಾದರೂ ಈ ರಾಮಕಥೆಯ ಸವಿಯೆಕ್ಕು. ಶ್ರೀ ರಾಮ ಜಯ ರಾಮ ಜಯ ಜಯ ರಾಮ.

  9. ಒಪ್ಪಣ್ಣಾ,
    ಈ ಸರ್ತಿ ಒಂದು ದಿನ ಇದರ ಅನುಭವಿಸುವ ಸೌಭಾಗ್ಯ ಎನಗೆ ಸಿಕ್ಕಿತ್ತು. ತುಂಬಾ ಕೊಶೀ ಆದ ಒಂದು ಸಂದರ್ಭ. ವರ್ಣನೆಗೆ ಸಿಕ್ಕದ್ದ ಅನುಭವ.
    ವಿರಾಟ್ ಪೂಜೆ ಸಮಯಲ್ಲಿ ಹೋದವು, ಇದರ ವರ್ಣನೆ ಮಾಡಿತ್ತಿದ್ದವು. ಅಂಬಗಳೇ ಒಂದರಿ ಈ ಅನುಭವ ಪಡಕ್ಕೊಳೆಕ್ಕು ಹೇಳಿ ನಿಶ್ಚಯ ಮಾಡಿತ್ತಿದ್ದೆ.
    “ಒಳಿತು ಕೆಡುಕಿಗೆ ಪ್ರೀತಿ ಕೊಟ್ತಿತು, ಕೆಡುಕು ಒಳಿತಿಗೆ ಭೀತಿ ಕೊಟ್ಟಿತು” ಹೇಳಿ ಸುರು ಮಾಡಿದ ಅಂದಿನ ಕಾರ್ಯಕ್ರಮ ತುಂಬಾ ಚೆಂದಕೆ ಬಂತು. ನೋಡಲೇ ಬೇಕಾದ, ಗಾಯನ ನೃತ್ಯ, ಕಲೆಯ ಅದ್ಭುತ ಸಂಗಮದೊಟ್ಟಿಂಗೆ ಶ್ರೀ ಗುರುಗಳ ವಚನಾಮೃತ.

  10. ರಾಮನ ಕಥೆ ಕೇಳಿರೆ ನಮ್ಮ ವೆಗ್ತಿತ್ವವೂ ರಾಮನ ಹಾಂಗೇ ಅಕ್ಕು; ಎಲಿಪುಚ್ಚೆಯ ಕಾರ್ಟೂನು ಕಥೆ ಕೇಳಿರೆ ನಮ್ಮದೂ ಹಾಂಗೇ ಆಗದೋ?!

  11. ಅಪ್ಪು ಒಪ್ಪಣ್ಣ…ಒಳ್ಳೇದೆ ಕೇಳ್ತಾ ಇದ್ದರೆ ಒಳ್ಳೇದೆ ಮೈಗೂಡಿಸಿ ಬತ್ತು ..

  12. ತುಂಬಾ ಚೆಂದಕ್ಕೆ ಬರದ್ದಿ. ಧನ್ಯವಾದಂಗೊ. ವಿರಾಠ ಪೂಜೆ ಸಮಯಲ್ಲಿ ಎನಗುದೆ ಎರಡು ದಿನ ಹೀಂಗೆ ನೋಡ್ಲೆ ಎಡಿಗಾಯಿದು. ಬಹಳ ಧನ್ಯ ಭಾವನೆ ಬಂದಿತ್ತು.

  13. ಅಶೋಕೆಯ “ರಾಮಕಥೆ”ಯ ವೈಭವದ ಕಥೆಯ ಚೆಂದಕೆ ವಿವರುಸಿದ್ದ ಒಪ್ಪಣ್ಣ. ಗುರುಗಳ ಈ ಹೊಸ ಪರಿಕಲ್ಪನೆಗೆ ಗೌರವಪೂರ್ವಕ ನಮನ. ಒಂದು ದಿನದ ರಾಮಕಥೆಯ ಅನುಭವವ ಅನುಭವಿಸಿದವರಲ್ಲಿ ಆನೂ ಒಬ್ಬ. ಸಂಗೀತ, ನೃತ್ಯ ನಾಟಕ, ಚಿತ್ರ ಕಲೆಗಳ ಮೇಳೈಸಿ ಅದರೊಟ್ಟಿಂಗೆ ಪ್ರೀತಿಯ ಗುರುಗಳ ಪ್ರವಚನವ ಕೇಳುವ ಸೌಭಾಗ್ಯ ಅಂದು ಎಂಗಳದ್ದಾಗಿತ್ತು. ನಿಜವಾಗಿಯೂ ಉತ್ತಮ ಒಂದು ಅನುಭವ. ಕೊನೆಗೆ ಮಂಗಳ ಪದ್ಯದ ಸಮೆಯಲ್ಲಿ ಎಲ್ಲೋರು ಸೇರಿಯೊಂಡು “ಜೈ ಶ್ರೀ ರಾಮ ಕಥಾ…..” ಹೇಳ್ಯೊಂಡು ಕೊಣಿವಗ ಆವ್ತ ಆನಂದ ಬೇರೆಲ್ಲಿಯೂ ಸಿಕ್ಕ. ಅಶೋಕೆಲಿ ಇಷ್ಟೊಂದು ಚೆಂದದ ರಾಮಕಥೆ ನೆಡೆತ್ತಾ ಇದ್ದು. ಎನಗೆ ಅನಿಸಿತ್ತು, ಅಷ್ಟು ಒಳ್ಳೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಲಿ ಸಭಿಕರು ಇರೇಕಾಗಿತ್ತು ಹೇಳಿ. ಒಪ್ಪಣ್ಣನದ್ದು ಉತ್ತಮ ನಿರೂಪಣೆ. ಅಜ್ಜಿಯಕ್ಕಳ ಕಥೆಯ ಎದುರು ಟಿವಿಯ ಕಾರ್ಟೂನುಗೊ ಎಂದೂ ಬಾರ. ಮಕ್ಕೊಗೆ ಕಥೆಗಳ ಹೇಳ್ಲೆ ನಾವೇ ಪ್ರಯತ್ನ ಮಾಡೆಕಷ್ಟೆ. ಧನ್ಯವಾದಂಗೊ.

  14. ಒಪ್ಪಣ್ಣ,
    ವಿವರಣೆ ಭಾರೀ ಲಾಯಿಕ್ಕಾಯಿದು.

  15. ಲಾಯಿಕಾಯಿದು ಒಪ್ಪಣ್ಣೋ ಹೇಳಿ ಒಂದೊಪ್ಪ……….
    (ಮೊದಲಾದರೆ ಕಥೆಗಳ ಅಜ್ಜಿಯಕ್ಕೊ ಹೇಳಿಕೊಟ್ಟುಗೊಂಡು ಇತ್ತಿದ್ದವು ಇನ್ನಾಣ ತಲೆಮಾರಿನ ಅಜ್ಜಿಯಕ್ಕೊಗೆ ಅದೆಲ್ಲ ಬಕ್ಕು ಹೇಳ್ತದು ನಿಘಂಟಿಲ್ಲೆ ) ಅಜ್ಜಿಯಕ್ಕೊಗೆ ಬಾರದ್ರೆ ಎಂತಾತು ಅದೇ ಅಜ್ಜಿಯಕ್ಕಳ ಕಥೆಯ ಕೆಲವು ಅಜ್ಜಂದ್ರು ಕಥೆ ಹೇಳುಲೆ ಸುರು ಮಾಡಿದ್ದವಿದಾ ಇದು ಮುಂದಾಣ ಕಥೆ ಪುಸ್ತಕಕ್ಕೆ ಮುನ್ನುಡಿ ಬರದ ಹಾಂಗೆ ಅಲ್ಲದೋ…… ಶಕ್ತಿ ನಿತ್ಯತೆಯ ನಿಯನಮದ ಹಾಂಗೆಯೇ ಅಲ್ಲದೋ ಈ ಕಥೆಗಳುದೇ , ಅದರ ಬದಲುಸಿ ನವಗೆ ಬೇಕಾದ ಹಾಂಗೆ ಹೇಳುಲಕ್ಕು ಆದರೆ ಅದರ ನಾಶ ಮಾಡುಲೆ ಎಡಿಯ ಅಲ್ಲದೋ…

  16. ಎಲ್ಲರ ಹೃದಯದೊಳಗಿಪ್ಪ ನಿತ್ಯರಾಮಂಗೆ ನಮೋ….[ಕುವೆಂಪು ಹೇಳಿದ ಹಾಂಗೆ]
    ಲಾಯ್ಕ ಆಯಿದು.

  17. [ಎಲ್ಲಿ ಬೇಕೋ –ಅಲ್ಲಲ್ಲಿ ಕಥೆಗೆ ಪೂರಕವಾದ ಸಾಹಿತ್ಯ ಪ್ರಾಕಾರಂಗೊ] – ಒಪ್ಪಣ್ಣನ ವಿವರಣೆಯೂ ಅಷ್ಟೇ ಲಾಯಕ್ಕ ಆಯ್ದು. ಶುದ್ದಿ ಓದಿ ಮನಸ್ಸು ಹಗುರ ಆತು ಹೇಳಿ ಒಪ್ಪ ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×