ಅಲ್ಲಾ, ರಾಮ ಲಲ್ಲಾ – ನಾವು ನಿರ್ಧಾರ ಮಾಡುದಲ್ಲಾ..!

December 5, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಳೆಮನೆ ತಂಗೆಯ ಮದುವೆ ಗೌಜಿ ನಾಳ್ತಿಂಗೆ ಮುಗಿತ್ತಷ್ಟೇ. ಆ ಲೆಕ್ಕಲ್ಲಿ ಕಳುದ ಒಂದೆರಡು ತಿಂಗಳಿಂದ ಶರ್ಮಪ್ಪಚ್ಚಿಯ ಎಲ್ಲಿಯೂ ಕಾಂಬಲಿಲ್ಲೆ ಹೇದು ಬೊಳುಂಬು ಮಾವ° ಹೇಳಿಗೊಂಡಿತ್ತಿದ್ದವು. ಅಪ್ಪಡ, ಉದೆಕಾಲಕ್ಕೆ ಟ್ರಾನ್ಸುವಾರು ಪೆಟ್ಟಿಗೆ ಹತ್ತರೆ ಹೋಪಗಳೂ ಕಾಂಬಲಿಲ್ಲೆ, ಮಜ್ಜಾನಕ್ಕೆ ಹೋಟ್ಳಿಲಿ ಚಪ್ಪಾತಿ ತಿಂಬಗಳೂ ಕಾಂಬಲಿಲ್ಲೆ, ಹೊತ್ತೋಪಗ ಗೋಧಿಹೊಡಿ ತೆಕ್ಕೊಂಬ ಮಿಲ್ಲಿಲಿಯೂ ಕಾಂಬಲಿಲ್ಲೆ, ಎಲ್ಲಿಯೂ ಕಾಂಬಲಿಲ್ಲೆ. ಏಕೇದರೆ, ಮಗಳ ಮದುವೆಯ ಗೌಜಿ!

ಒಂದು ದಿನ ಬದಿಯೆಡ್ಕ, ಮರದಿನ ಕಿಳಿಂಗಾರು, ಮತ್ತಾಣ ದಿನ ಕಾಸ್ರೋಡು, ಅದರ ಮತ್ತಾಣ ದಿನ ಕೊಡೆಯಾಲ, ಅದರಿಂದ ಮತ್ತೆ ಮೈಸೂರು – ಪುರೋಹಿತರು, ಅಡಿಗೆಯೋರು, ನೆಂಟ್ರು – ಎಲ್ಲೋರಿಂಗೂ ಹೇಳಿಕೆ ಹೇಳೆಡದೋ? ಎಲ್ಲವೂ ಆಗೆಡದೋ!! ಅಂತೂ ಇಂತೂ ಚೆಂದಲ್ಲಿ ಜೆಂಬ್ರ ಕಳಾತು ಹೇದು ಎಲ್ಲೋರುದೇ ಹೇಳ್ತವು. ಉಡುಪಮೂಲೆ ಅಪ್ಪಚ್ಚಿ ಚೆಂದದ ಮದುಮ್ಮಾಯನ ಚೆಂದದ ಆಯೆತ ಕುಷಿ ಆಯಿದು ಹೇದರೆ, ಮದಿಮ್ಮಾಳಾಯೆತ ಚೆಂದ ಆಯಿದು ಹೇದು ಶ್ರೀಅಕ್ಕ° ಹೇಳುಗು.
ಮಾಷ್ಟ್ರುಮಾವನ ಎಲೆತೊಟ್ಟೆಯ ಕುಣಿಯ ಹೊಗೆಸೊಪ್ಪು ಲಾಯ್ಕು ಹೇಳುಗು ಸುಭಗಣ್ಣ; ಅಲ್ಲ, ನೇಂದ್ರ ಪ್ರಥಮ ಇನ್ನೂ ಲಾಯ್ಕಾಯಿದು ಹೇದು ಮುಳಿಯ ಭಾವ° ಹೇಳಿರೆ, ಹೆಂಡತ್ತಿ ಹತ್ತರೆ ಕೂದು  ಸಮ್ಮಾನ ಉಂಡುಗೊಂಡದು ಇನ್ನೂ ರುಚಿ ಆಯಿದು ಹೇಳ್ತದು ಡೈಮಂಡು ಭಾವನ ಅಂಬೋಣ.
ಅದೇನೇ ಇರಳಿ, ಬೈಲಿನ ಎಲ್ಲೋರುದೇ ಸೇರಿ ಕೊಶೀಲಿ ಒಂದೂಟ ಉಂಡುಗೊಂಡವು. ಅನ್ನದಾತಃ! ಸುಖೀಭವ, ದೀರ್ಘ ಸುಮಂಗಲೀ ಭವ – ಹೇದು ಬೈಲಿನ ಎಲ್ಲೋರುದೇ ಆಶೀರ್ವಾದ ಮಾಡಿದ್ದು ಹಳೆಮನೆ ತಂಗೆಗೆ ಕೇಳಿದ್ದಾಡ.
ಹೆರಡ್ಳಪ್ಪಗ ಸೀತಾ ರಾಮರ ಹಾಂಗೆ ಒಬ್ಬಂಗೊಬ್ಬ ಅನುರೂಪರಾಗಿ ಸಂಸಾರ ನೆಡೆಶಲಿ, ಲವಕುಶರು ಬಂದು ಸಾಮ್ರಾಜ್ಯ ವಿಸ್ತಾರ ಮಾಡಲಿ – ಹೇದು ಟೀಕೆಮಾವ° ಟೀಕೆಮಾಡಿದವು. ಅದಿರಳಿ.

~

ಆರಾಧ್ಯ ದೈವ, ಮರ್ಯಾದಾ ಪುರುಷೋತ್ತಮ, ದಶಾವತಾರಿಯ ಅವತಾರ ಎಲ್ಲವೂ ಆಗಿಪ್ಪ, ಆದರ್ಶ ಪುರುಷ ಶ್ರೀ ರಾಮನ ಸ್ಮರಣೆ ನಮ್ಮೆಲ್ಲರ ಬಾಯಿಲಿ ಯೇವತ್ತೂ ಇರೆಕ್ಕು.
ರಾಮಾ ರಾಮಾ..! – ಹಿಂದುಗೊ ಆದೋರ ಬಾಯಿಲಿ ಏವತ್ತೂ, ಸದಾ ಬಪ್ಪ ಮಹದುದ್ಗಾರ ಇದು.
ಈಗೀಗ ಹವ್ಯಕರ ವಲಯಂಗಳಲ್ಲಿ ರಜ ಬೇಜಾರಲ್ಲಿಯೂ ಈ ಉದ್ಗಾರ ಬತ್ತು ಹೇಳ್ತದು ದುರದೃಷ್ಟಕರ!
ರಾಮನ ಬಗ್ಗೆ ನಾವು ಬೈಲಿಲಿ ಸುಮಾರು ಸರ್ತಿ ಶುದ್ದಿ ಮಾತಾಡಿದ್ದು, ಬೇರೆಬೇರೆ ಕಾರಣಕ್ಕೆ ಮಾತಾಡಿದ್ದು. ಅಲ್ಲದೋ!
ಇಂದು ಪುನಾ ಒಂದರಿ ಮಾತಡುವ°.
ರಾಮನ ಬಗ್ಗೆ ಎಷ್ಟು ಮಾತಾಡಿರೂ ಹೆಚ್ಚಾಗ – ಹೇದು ಅಜ್ಜಕಾನ ಅತ್ತೆಯೇ ಒಂದೊಂದರಿ ಹೇಳುಲಿದ್ದು. :-)
~

ಇತಿಹಾಸವೂ, ಪುರಾಣವೂ ನಮ್ಮ ದೇಶದ ಎರಡು ಮೂಲ ಆಧಾರಂಗೊ. ಎರಡ್ರಲ್ಲಿಯೂ ನವಗೆ ನಮ್ಮ ದೇಶ, ಜೀವನ ಹೇಂಗಿತ್ತು – ಹೇಳ್ತ ಸಂಗತಿ ಅರಡಿತ್ತು. ಪರಸ್ಪರ ಎರಡ್ರಲ್ಲಿಯೂ ಪೂರಕ ಮಾಹಿತಿಗೊ ಕೆಲವು ಸರ್ತಿ ಕಾಂಗು. ಕೆಲವು ಸರ್ತಿ ವಿರೋದಾಭಾಸ ಬಪ್ಪ ಹಾಂಗಿಪ್ಪ ಮಾಹಿತಿಗಳೂ ಸಿಕ್ಕುಗು. ಒಟ್ಟಿಲಿ, ಅದೆರಡೂ ಒಟ್ಟಾಗಿ ನವಗೆ ಮಾಹಿತಿ ಕೊಡ್ಸು – ಹೇಳ್ತರ ನಾವು ನಂಬೇಕು.
ಇತಿಹಾಸ ಹೇದರೆ ಯೇವದು? ಶಾಲೆಲಿ ಪಾಠ ಮಾಡ್ತ ನಮುನೆದು ಅಲ್ಲಡ್ಡ – ಅದರ್ಲಿ ಸುಮಾರು ವಿಶಯಂಗೊ ಕಲಂಕಿದ್ದಡ – ಮಾಷ್ಟ್ರುಮಾವ° ಅಂದೇ ಹೇಳಿತ್ತಿದ್ದವು.
ನಮ್ಮದೇ ಆದ ಇತಿಹಾಸ, ನೈಜ ಇತಿಹಾಸವ ಹುಡ್ಕಿಂಡು ಹೋದರೆ, ಭಾರತದ ನಿಜಾವದ ಚಿತ್ರಣ ಸಿಕ್ಕುತ್ತಾಡ.
~

ಪುರಾಣಲ್ಲಿ ರಾಮನ ಕತೆ ಹೇಂಗಿದ್ದು?
ಕಲಿಯುಗ ಬಂದ ಮತ್ತೆ ಲೋಕಲ್ಲಿ ಅಸತ್ಯ ತುಂಬಿದ್ದು ಹೇಳ್ತ ಹುಳಿಸತ್ಯ ಕೃತ, ತ್ರೇತಾಯುಗದ ಕತೆಗಳ ಓದಿರೆ ನವಗೇ ಗೊಂತಾವುತ್ತು. ರಾಮನ ಬಗ್ಗೆ ಮಾತಾಡುವಾಗ ಈ ವಿಚಾರ ಇನ್ನೂ ನಿಜವಾಗಿ ತೋರ್ತು.
ಅಯೋಧ್ಯಾಪುರದ ಸೂರ್ಯವಂಶದ ವೈಭವ, ಅಲ್ಯಾಣ ದಶರಥನ ಆಸ್ಥಾನದ ವೈಭವ, ಮುಂದೆ ರಾಮರಾಜ್ಯ ಆಗಿ ಬೆಳದಪ್ಪಗ ಆದ ಸುಖ-ಸಮೃದ್ಧಿ – ಎಲ್ಲವುದೇ ನವಗೆ ಪುರಾಣಂಗಳಲ್ಲಿ ಕಾಣ್ತು. ಆದರೆ, ಇತಿಹಾಸಲ್ಲಿ ನೋಡಿರೆ ಎಂತಾವುತ್ತು? ನವಗೇ ಆಘಾತ ಅಪ್ಪ ಹಾಂಗಾಗಿರ್ತು.
ಈಗಾಣ ವರ್ತಮಾನ ನೋಡಿರೆ ಹೇಂಗಾವುತ್ತು? ಎದೆಗೆ ತೋಟ್ರನಪೀಶಕತ್ತಿ ಹಾಕಿದ ಹಾಂಗಾವುತ್ತು!
~
ಇತಿಹಾಸಲ್ಲಿ ರಾಮನ ಜಾಗೆಗೆ ಎಂತಾತು?
ಹಿಂದೂ ದೇಶ ಭಾರತಕ್ಕೆ ಅರೇಬಿಯಾ ಹೊಡೆಂದ ಮ್ಲೇಚ್ಛ ರಾಜರ ಧಾಳಿ ಆವರಣ ಆತು.
ಇದರಿಂದಾಗಿ ಇಡೀ ಹಲ್ಲುಸಾಲಿಲಿ ಒಂದೊಂದೇ ಹಲ್ಲು ಹೋದ ಹಾಂಗೆ, ಒಂದೊಂದೇ ಹಿಂದೂ ರಾಜರ ಅವನತಿ ಉಂಟಾತು. ಕ್ರಮೇಣ ಸಿಂಧೂ ದೇಶ, ಗುರ್ಜರ ದೇಶ ಎಲ್ಲ ದಾಂಟಿ ಮೂಲ ಅಯೋಧ್ಯೆಗೇ ಎತ್ತಿತ್ತು ಮ್ಲೇಚ್ಛ ರಾಜ್ಯ.
ಅಯೋಧ್ಯೆಯ ಹತ್ತರಾಣ ದೆಹಲಿಲಿ ಭದ್ರವಾಗಿ ಬೇರೂರಿತ್ತು ಈ ಸಾಮ್ರಾಜ್ಯ. ಇದುವೇ ಮೊಘಲ್ ಸಾಮ್ರಾಜ್ಯ.
ಅಂಬಗ ಬಂದ ಬ್ಯಾರಿಯ ಹೆಸರು ಬಾಬರ್ ಹೇದು. ಅದರ ಸಂತಾನ ಮುಂದಾಣ ಎಂಟುನೂರು ಒರಿಶ ಆಳತನ ಮಾಡಿದ್ದು ಹೇದರೆ ನಂಬುವಿರೋ ನಿಂಗೊ! ಎಂಟುನೂರು ಒರಿಶ!!
ಮೊದಲಾಣ ಹಿಂದೂರಾಜರು ಇಪ್ಪಗ ನಮ್ಮ ದೇಶ ಹೇಂಗಿತ್ತೋ – ಅದರ ತದ್ವಿರುದ್ಧದ ಪರಿಸ್ಥಿತಿ. ಹಿಂದೂ ರಾಜರು ಇಪ್ಪಗ – ಪ್ರಜೆಗೆ ಅವಕ್ಕವಕ್ಕೆ ಬೇಕಾದ ಧರ್ಮವ ಅನುಸರಿಸಲೆ ಅಕ್ಕು. ಆದರೆ ಈ ಮೊಘಲ್ ರಾಜ್ಯಲ್ಲಿ ಬೇರೆ ಧರ್ಮಕ್ಕೆ ಅವಕಾಶ ಇಲ್ಲೆ.
ಏನಿದ್ದರೂ ಮ್ಲೇಚ್ಛಧರ್ಮ ಮಾಂತ್ರ. ಸಾವಿರಾರರು ಜೆನರ ಹಿಡುದು ಬಲುಗಿ ಮಡಗಿ ಧರ್ಮಾಂತರ ಮಾಡಿದವು, ಆ ಸಾವಿರಾರು ಜೆನಕ್ಕೆ ಬಿದ್ದ ಪೆಟ್ಟಿನ ನೋಡಿ ಇನ್ನೂ ಲಕ್ಷಾಂತರ ಜೆನ ಅವ್ವಾಗಿಯೇ ಧರ್ಮಾಂತರ ಆದವು.  ಇದಕ್ಕೆಲ್ಲ ಹೆದರದ್ದ ಧೈರ್ಯವಾಗಿ ಎದ್ದು ನಿಂದೋರ ಮೇಗೆ ಬಲಪ್ರಹಾರ –  ಅತ್ಯಾಚಾರ ಮಾಡಿದವು, ಅಂತೂ ಇಂತೂ – ಎಂಟುನೂರು ಒರಿಶದ ಸಾಮ್ರಾಜ್ಯಲ್ಲಿ ಕೋಟ್ಯಂತರ ಸನಾತನಿಗಳ ಕಗ್ಗೊಲೆ ಆತು, ಕೋಟ್ಯಂತರ ಸನಾತನಿಗಳ ಧರ್ಮಾಂತರ ಆತು.
ಇದಕ್ಕೆಲ್ಲ ಕಾರಣ ಒಂದೇ – ಮ್ಲೇಚ್ಛ ಧರ್ಮ.

ಇವು ಧರ್ಮಾಂತರ ಮಾಡ್ಳೆ ಕಂಡುಗೊಂಡ ಹಂತಂಗೊ ಎಂತೆಲ್ಲ ಕೇಳಿರೆ, ಮದಾಲು ಬಂದು ಒಂದು ದೇವಸ್ಥಾನವ ಹೊಡಿ ಮಾಡುಸ್ಸು. ಅಲ್ಲಿ ಇದ್ದ ಚಿನ್ನಾಭರಣವ ಬಲುಗಿಂಡು ಓಡುಸ್ಸು, ಅಲ್ಲಿಪ್ಪ ಮೂರ್ತಿಗಳ ತುಂಡುಸುಸ್ಸು, ಆ ಮೂರ್ತಿಗಳನ್ನೇ ಮೆಟ್ಳಾಗಿ ಮಾಡಿ ಅದೇ ಕಟ್ಟೋಣವ ಪಳ್ಳಿ ಮಾಡುಸ್ಸು!
ಗೋಪುರ, ಮುಖಮಂಟಪ, ಗರ್ಭಗುಡಿ ಎಲ್ಲವೂ ಇಪ್ಪ ಹಾಂಗೇ ಇರ್ತು, ಆದರೆ ಮೂರ್ತಿ ಇಲ್ಲೆ, ಮೂರ್ತಿಯ ಶಿಲೆ ಮೆಟ್ಳಾಯಿದು, ಇಡಿಯ ದೇವಸ್ಥಾನ ಪಳ್ಳಿ ಆಯಿದು. ಇದಕ್ಕೆ ಒಪ್ಪದ್ದವರ ಸಮಾಧಿ ಅದೇ ಕ್ಷಣಲ್ಲಿ.
ಪೆಟ್ಟಿಂಗೆ ಹೆದರಿ ಸಾವಿರಾರು ಜೆನ ಬಾಯಿಮುಚ್ಚಿ ಕೂದವು. ಮತ್ತೆ ಹಲವು ಜೆನ ಊರು ಬಿಟ್ಟು ಓಡಿದವು. ಮತ್ತೆ ಕೆಲವು ಜೆನ ಧರ್ಮ ಬಿಟ್ಟು ಮ್ಲೇಚ್ಛರಾದವು. ಅಂತೂ – ಇಂತೂ – ದೇವಸ್ಥಾನಂಗೊ ಮಾಯಕ ಆದವು. ದೇವರು ಇದೆಲ್ಲದರ ನೋಡಿಗೊಂಡೇ ಇತ್ತಿದ್ದವು.
ಅಯೋಧ್ಯಾ ಮಥುರಾ ಕಾಶೀ – ಹೀಂಗೆ ಶ್ಲೋಕಲ್ಲಿ ಹೇಳ್ತ ಮೋಕ್ಷದಾಯಕ ಕ್ಷೇತ್ರಂಗಳ ಒಂದೊಂದಾಗಿ ಹೊಡಿತೆಗವಲೆ ಸುರುಮಾಡಿದವಡ ಅವು. ಅಂತೂ ಅಯೋಧ್ಯೆಯ ರಾಮಜನ್ಮಭೂಮಿ, ಮ್ಲೇಚ್ಛರ ಪ್ರಾರ್ಥನಾ ಮಂದಿರ ಆತು. ರಾಮನ ದೇವಸ್ಥಾನದ ಗರ್ಭಗುಡಿ ಪಳ್ಳಿ ಆತು.
ನಮಸ್ಕಾರ ಮಂಟಪ, ನಮಾಜು ಮಂಟಪ ಆತು. ರಾಮಲಲ್ಲಾ ಹೋಗಿ ಅಲ್ಲಾ ಬಂತು.

ಕಾಶಿಲಿಯೂ ಹೀಂಗೇ ಆಯಿದಾಡ. ಜ್ಞಾನವಾಪಿ ಮಂದಿರ ಹೇಳ್ತ ಶಿವದೇವಸ್ಥಾನಂದ ಶಿವಲಿಂಗವ ತೆಗದು ಕರೆಲಿಪ್ಪ ಬಾವಿಗೆ ಇಡ್ಕಿ, ದೇವಸ್ಥಾನವ ಪಳ್ಳಿ ಮಾಡಿದವಾಡ.
ಅಲ್ಯಾಣ ನಂದಿ ಇಂದಿಂಗೂ ಪಳ್ಳಿ ನೋಡಿಗೊಂಡೇ ಇಪ್ಪದಾಡ – ಮೊನ್ನೆ ಮೊನ್ನೆ ಹೋಗಿಬಂದ ಕೈರಂಗಳ ದೊಡ್ಡಪ್ಪ° ಬೇಜಾರಲ್ಲಿ ಹೇಳಿತ್ತಿದ್ದವು ಒಪ್ಪಣ್ಣನ ಕೈಲಿ.
~
ಎಂಟುನೂರು ಒರಿಶದ ಕ್ರೂರ ಮೊಘಲ್ ಅಧ್ಯಾಯ ಮುಗಿವಲೆ ಕಾರಣ – ಬ್ರಿಟಿಷ್ ಆಡಳ್ತೆ ಆಡ. ಬ್ರಿಟಿಷರೂ ಕ್ರೂರಿಗಳೇ ಆಗಿದ್ದರೂ, ಧರ್ಮಾಂಧರಾಗಿ ಇತ್ತಿದ್ದವಿಲ್ಲೇಡ. ಹಾಂಗಾಗಿ, ಜೆನರಿಂಗೆ ಅವಕ್ಕವಕ್ಕೆ ಬೇಕಾದ ಧರ್ಮವ ಅನುಸರಿಸುವ ಅವಕಾಶ ಇದ್ದತ್ತು.
ಇದರಿಂದಾಗಿ ಸನಾತನತೆ ಮತ್ತೆ ಚಿಗುರುಲೆ ಅವಕಾಶ ಆದರೂ, ಮೊದಲಾಣ ಮಹಾನ್ ಪ್ರಹಾರದ ಹುಳಿನೆಂಪುಗೊ ಮಾಸಿದ್ದಿಲ್ಲೆ.  ಅಂದ್ರಾಣ ಭವ್ಯ ದೇವಾಲಯಂಗೊ ಹಾಳಾದ್ಸು ಮತ್ತೂ ಹಾಂಗೇ ಒಳುತ್ತು.
ಮುಂದೆ ಸ್ವತಂತ್ರ ಭಾರತ ಆದ ಮತ್ತೆ ಆದರೂ ಈ ದೇವಸ್ಥಾನಂಗೊ ಮತ್ತೆ ಸಿಕ್ಕುತ್ತೋ ಏನೋ – ಹೇದು ನಮ್ಮ ಹೆರಿಯೋರು ಹೋರಾಡಿದವು. ಅದರಂತೆ ಕೆಲವೆಲ್ಲ ಪ್ರಯತ್ನವೂ ಆತು.
ಪಶ್ಚಿಮದ ಕರೆಲಿಪ್ಪ ಸೋಮನಾಥ ಮಂದಿರ ಪುನರ್ರಚನೆ ಆದ್ಸು ಇದಕ್ಕೊಂದು ದೊಡ್ಡ ಪ್ರೂಪು. ಇದರ ಬಗ್ಗೆ ವಿವರವಾಗಿ ಮತ್ತೊಂದರಿ ಮಾತಾಡುವೊ°.
ಆದರೆ, ಈಗ ಮಾತಾಡ್ಳೆ ಹೆರಟದು ಅಯೋಧ್ಯೆಯ ಕತೆ.
~
ಅಯೋಧ್ಯೆಲಿಪ್ಪ ಶ್ರೀರಾಮಚಂದ್ರನ ಬಾಲ ರಾಮ ಅಥವಾ ರಾಮಲಲ್ಲಾ ಹೇಳಿಯೇ ಉತ್ತರಭಾರತದವು ಹೇಳುಸ್ಸು. ಹಾಂಗೆ, ರಾಮಲಲ್ಲನ ದೇವಸ್ಥಾನವ ಮೊಘಲರು ಮುರುದ್ದರ ಸ್ವತಂತ್ರ ಭಾರತ ಬಂದ ಮತ್ತೆ, ಇನ್ನಾದರೂ ಸರಿಮಾಡುವೊ° – ಹೇದು ಕೆಲವು ಜೆನ ಆಸ್ತಿಕ ಅಜ್ಜಂದ್ರು ಹೆರಟವಾಡ.
ಈಗಾಣ ಕಾಲಲ್ಲಿ ಏನಿದ್ದರೂ ಕೋರ್ಟುಕಛೇರಿಗಳೇ ಅಂತಿಮ ಅಲ್ಲದೋ? – ಹಾಂಗೆ ಕೋರ್ಟಿಂಗೆ ಹೋದವು. ಕೋರ್ಟಿಲಿ ವಾದಿ ಆಗಿ ಶ್ರೀರಾಮಚಂದ್ರನನ್ನೇ ಎದುರುನಿಲ್ಲುಸಿದವು. ಪ್ರತಿವಾದಿ ಆಗಿ ಮ್ಲೇಚ್ಛ ಕೂಟದ ಹಸಿನೆತ್ತರಿನ ಒಂದು ಜೆನ ಇದ್ದತ್ತು. ಕೇಸು ಮುಂದುವರುದತ್ತು.
ದೊಡ್ಡ ಮಟ್ಟಿನ ವಿಚಾರಣೆ ಆತು. ರಂಗಮಾವನ ತಂಗೆ ಮಾಲಚಿಕ್ಕಮ್ಮ ಹುಟ್ಟಿದ ಸಮೆಯಲ್ಲಿ ಸುರು ಆದ ವಿಚಾರಣೆ ಮೊನ್ನೆ ಮೊನ್ನೆ ವರೆಗೂ ಮುಂದುವರುದಿತ್ತು.

ಎಲ್ಲವೂ ಚೆಂದಲ್ಲಿ ನೆಡೆತ್ತಿತು, ಆದರೆ ಇದರ ಒಂದು ರಾಜಕೀಯ ಮಾಡ್ಳೆ ಹೆರಟು ಪೂರ ಹಾಳಾಗಿದ್ದತ್ತು. ರಾಮಂಗೆ ಅಯೋಧ್ಯೆಗೆ ಬಪ್ಪಲೆ ಬಿಡದ್ದರೆ ಇಡೀ ದೇಶದ ಮ್ಲೇಚ್ಛರು ಓಟು ಹಾಕುಗು – ಹೇಳ್ತ ಆಶೆಗೆ ಕೆಲವು ಜೆನಂಗೊ ಆ ಕಾರ್ಯವ ಸುಸೂತ್ರ ಅಪ್ಪಲೆ ಬಿಟ್ಟಿದವಿಲ್ಲೆ.
ಆ ರಾಜಕೀಯದವರ ತಾಳಕ್ಕೆ ಸರೀಯಾಗಿ ಕೆಲವು ಜೆನ ಆ ಊರಿನವು ಕೊಣುದ ಕಾರಣ ಒಟ್ಟಾರೆಯಾಗಿ ಆ ಸಮಗ್ರ ಕತೆ ಕೆಟ್ಟದಾಗಿ ಮುಂದುವರುದತ್ತು.
ಅಂತೂ – ಓ ಮೊನ್ನೆ ಇತ್ಲಾಗಿ ಆ ನ್ಯಾಯಾಲಯ ಆದೇಶ ಕೊಟ್ಟತ್ತು – “ಅಯೋಧ್ಯಾ ದೇವಸ್ಥಾನ ರಾಮ ಲಲ್ಲಂಗೆ ಸೇರಿದ್ದು”  ಹೇದು.
~

ಆದರೆ? ಎದುರಾಣ ಮ್ಲೇಚ್ಛ ಕೂಟ ಬಿಟ್ಟತ್ತೋ – ಇಲ್ಲೆ!
ಅಲ್ಲಿಂದ ಸುಪ್ರೀಮು ಕೋರ್ಟಿಂಗೆ ಹೋವುತ್ತೆ ಹೇದು ಹೆರಟತ್ತು. ಇನ್ನು ಮುಂದೆಯೂ ಮುಂದುವರುಸುವ ಕೆಲಸಕ್ಕೆ ಹೆರಟವು.
ಇಷ್ಟಪ್ಪಗ ಸುಪ್ರೀಮು ಕೋರ್ಟಿಂಗೆ ಹೋದ ಮ್ಲೇಚ್ಛಂಗೆ ಸತ್ಯಸಂಗತಿ ಗೊಂತಾತು – ಇದು ರಾಜಕೀಯದೋರು ಎನ್ನ ಉಪಯೋಗುಸಿಗೊಂಬದು; ರಾಮಂಗೆ ಮನೆ ಕಟ್ಟದ್ದಾಂಗೆ ಮಾಡಿರೆ ಎನಗೂ ಗುಣ ಇಲ್ಲೆ, ದೇಶಕ್ಕೂ ಗುಣ ಇಲ್ಲೆ.
ಗುಣ ಇಪ್ಪದು ಸಮಾಜವಾದೀ ಹೇಳಿಗೊಂಡು ತಿರುಗುತ್ತ ರಾಜಕೀಯ ಪುಂಡಂಗೊಕ್ಕೆ – ಹೇದು.
ಯೇವಾಗ ಆ ಮ್ಲೇಚ್ಛಂಗೆ ಸತ್ಯ ಗೊಂತಾತೋ, ಅದು “ಬಾಲರಾಮಂಗೆ ಸ್ವತಂತ್ರವಾಗಿ ಮನೆಕಟ್ಳೆ ಬಿಡ್ತೆ”  – ಹೇದು ಜೋರಾಗಿ ಹೇಳಿತ್ತಾಡ ಮೊನ್ನೆ.
ಇದರಿಂದಾಗಿ, ಸಮಗ್ರ ಸಂಗತಿಗೊ ತಿಳಿಯಪ್ಪ ಸೂಚನೆಯ ರಾಮನೇ ಕೊಟ್ಟಾಂಗಾತು – ಹೇದು ದೇಶದ ಜೆನಂಗೊ ನೆಮ್ಮದಿಯ ಉಸುಲು ಬಿಟ್ಟವು.

~
ಇಡೀ ದೇಶವೇ ರಾಮ ಮಹಿಮೆ. ರಾಮರಾಜ್ಯ ಬಪ್ಪ ಸೂಚನೆ ಬಂತು.
ಓ ಮೊನ್ನೆ೧೨ಕೋಟಿ ರಾಮಜೆಪವೂ ಆತು, ಅದರ ಬೆನ್ನಿಂಗೇ ರಾಮನ ಅಯೋಧ್ಯಾ ಗಲಾಟೆ ತಣಿವ ಹಂತಕ್ಕೆ ಬಂತು! ಸಂಕಲ್ಪವೇ ಲೋಕಕಲ್ಯಾಣದ್ದು ಆಗಿತ್ತನ್ನೆ?
ಇನ್ನಾದರೂ ರಾಮನ ಜನ್ಮಭೂಮಿಲಿ ಅವಂಗಿಪ್ಪ ದೇವಸ್ಥಾನದ ವೆವಸ್ಥೆ ಮಾಡ್ಳೆಡಿಗೋ?
ಅದರಿಂದಾಗಿ ನವಗೆ ನೆಮ್ಮದಿಲಿ ಇಪ್ಪಲೆಡಿಗೋ?
~

ಇಷ್ಟಕ್ಕೂ, ಆ ಜಾಗೆಲಿ ರಾಮಲಲ್ಲನ ಬಪ್ಪಲೆ ಬಿಡ್ತೆ ಹೇಳ್ತ ಆ ಮ್ಲೇಚ್ಛಂಗೆ ಒಂದು ವಿಷಯ ಗೊಂತಿಲ್ಲೆ – ರಾಮನ ಬಪ್ಪಲಕ್ಕೋ, ಆಗದೋ, ಅಥವಾ ಅಲ್ಲಿಗೆ ಅಲ್ಲ ಬರೆಕ್ಕೋ – ಬಪ್ಪಲಾಗದೋ – ಹೇದು ನಿಗಂಟು ಮಾಡ್ಸು ನಾವಲ್ಲ.
ಅದರ ಆ ಮೇಗಾಣವನೇ ನಿರ್ಧಾರ ಮಾಡಿ ಆಯಿದು. ರಾಮಂದೇ ಜಾಗೆ ಅದು, ಅಲ್ಲಿ ರಾಮಂಗೆ ಅಕ್ಕಾದೋರು ಸದಾ ಇದ್ದೇ ಇಕ್ಕು.
ನಾಳೆ ದಶಂಬ್ರ ಆರು. ವಿಜಯೋತ್ಸವ ದಿನ ಮತ್ತೆ ಮತ್ತೆ ನೆಂಪಾವುತ್ತು – ನಿತ್ಯವೂ ವಿಜಯೋತ್ಸವ ಅಪ್ಪ ಹಾಂಗಾಗಲಿ. ಅಲ್ಲದೋ?
~

ಒಂದೊಪ್ಪ: ರಾಮಂಗೆ ಉಪದ್ರ ಕೊಟ್ಟ ಜೆನಂಗೊಕ್ಕೆ ರಾಮನೇ ಒಳ್ಳೆಬುದ್ಧಿ ಕೊಡ್ತವು!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶ್ರೀಪ್ರಕಾಶ ಕುಕ್ಕಿಲ

  ರಾಮ ಜನ್ಮ ಭೂಮಿ ಹೇಳಿದ ಕೂಡ್ಲೇ ಎನಗೆ ನೆಮ್ಪಪ್ಪದು ಬಾಳಾ ಠಾಕ್ರೆಯನ್ನೇ…. ಆ ಪಳ್ಳಿಯ ಎಂಗಳ ಮಕ್ಕಳೇ ಬೀಳ್ಸಿದ್ದೂ ಹೇಳಿ ಸುರೂ ಹೇಳಿದೋನು ಅವ°… ಮತ್ತೇ ಎಲ್ಲೋರು ಹೇಳಿದ್ದವು.
  ಆ ಟೈಮಿಲ್ಲಿ ಅಲ್ಲಿಯೇ ಹತ್ತರೆ ಮಿಲಿಟ್ರಿಲಿ ಇದ್ದ ಎನಗೆ ಮರೆಯಲಾಗದ್ದ ಹಲವು ಅನುಭವಂಗೊ ಆಯಿದು.
  ಈಗ ಮರವಲೂ ಸುರು ಆಯಿದು ಪ್ರಾಯ ಆತಿದ!!
  ಈ ಹೇಳಿಕೆಯೂ ಇದಕ್ಕೆ ಸರಿಯಾದ ಬರಹವೂ ವಿಜಯೋತ್ಸವದ ದಿನವೂ ಸರೀ ಆಯಿದು
  ಟೈಮಿಂಗೆ ಸರೀ ಬರವದು ಒಪ್ಪಣ್ನನತ್ರೇ ಕಲಿಯೆಕ್ಕು
  ಹರೇ ರಾಮ

  [Reply]

  VN:F [1.9.22_1171]
  Rating: 0 (from 0 votes)
 2. ಯಮ್.ಕೆ.

  ಆದರೆ ಅ೦ದು ತಾಟಕಿ–ಮಾರೀಚ೦ಗೋ ದಾಶರಥಿಗೂ ಕೊಡದ್ದ ಕಾಟವ ,ಈಗ ಕಾಣುತ್ತು ?

  [Reply]

  VA:F [1.9.22_1171]
  Rating: 0 (from 0 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  ನಾವು ಹಿಂದುಗೋ ಬೋದಾಳಂಗ ಹೇಳಿ ಸುಮ್ಮನೆ ಹೇಳುದಲ್ಲ…. ಅಲ್ಲ ಮಾರಾಯನೇ ಆ ಬ್ಯಾರಿಗೆ ಪ್ರಾಯ ಆತು ಹೇಳಿ ಅದು ಹಿಂದೆ ತೆಕ್ಕೊಂಡದು… “ನೀನು ಮುಂದು ವರುಸು” ಹೇಳಿ ಅದು ಅದರ ಮಗಂಗೆ ಹೇಳೀದ್ದಡ… ಮತ್ತೆಂತರ ವಿಷಯ ತಿಳಿ ಅಪ್ಪದು?… ನಾವು ಇದರ ಹಿಂದೆ ಇಪ್ಪ ರಾಜಕೀಯ ತಿಳ್ಕೊಳ್ಳೆಕ್ಕು..

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  GOPALANNA

  ಒಳ್ಳೆ ಸಮಯೋಚಿತ ಲೇಖನ

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಗೋಪಾಲ

  ಶುದ್ದಿಯ ಓದಿದೆ ಒಪ್ಪಣ್ಣ. ದಶಂಬರ ಆರರ ನೆಂಪು ಮಾಡಿ ಒಳ್ಳೆ ಶುದ್ದಿ ಕೊಟ್ಟಿದೆ ಬೈಲಿಂಗೆ. ರಾಮ ಒಳ್ಳೆ ಬುದ್ದಿ ಕೊಡ್ಳಿ ಹೇಳುವದು ಸಮಯೋಚಿತ ಮಾತು. ಹಳೆಮನೆ ತಂಗೆಯ ಮದುವೆ ಶುದ್ದಿಯ ಪೀಠಿಕೆ ಲಾಯಕಿತ್ತು. ಶರ್ಮಪ್ಪಚ್ಚಿಯ ಗಡಿಬಿಡಿಯ ತಿಳುಸುವ ಎಡೆಲಿ ಬೊಳುಂಬು ಮಾವಂಗೆ ಚುರುಕ್ಕು ಮುಟ್ಟುಸಿದ್ದದು ಲಾಯಕಾತು. ಅಂತರ್ಜಾಲ ಸರಿಇಲ್ಲದ್ದೆ ಜಾಲಿಂಗೆ ಲಾಗ ಹಾಕಲಾಯಿದಿಲ್ಲೆ. ಕ್ಷಮೆ ಇರಳಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಪುಟ್ಟಬಾವ°ಶರ್ಮಪ್ಪಚ್ಚಿಚುಬ್ಬಣ್ಣಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಸಂಪಾದಕ°ರಾಜಣ್ಣಎರುಂಬು ಅಪ್ಪಚ್ಚಿvreddhiಶಾ...ರೀಯೇನಂಕೂಡ್ಳು ಅಣ್ಣವಿದ್ವಾನಣ್ಣಪುತ್ತೂರುಬಾವಪವನಜಮಾವಗಣೇಶ ಮಾವ°ಒಪ್ಪಕ್ಕಗೋಪಾಲಣ್ಣಕಳಾಯಿ ಗೀತತ್ತೆಅಜ್ಜಕಾನ ಭಾವಶಾಂತತ್ತೆಹಳೆಮನೆ ಅಣ್ಣಡೈಮಂಡು ಭಾವಬೊಳುಂಬು ಮಾವ°ಡಾಗುಟ್ರಕ್ಕ°ಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ