ರಾಜಸ್ಥಾನದ ರಾಜಂಗೆ ಅವಮಾನ, ಕಾರು ಕಂಪೆನಿಯ ಮಾನವೂ…

ಇದು ತುಂಬ ಹಳೆ ಕತೆ. ರಾಮಾಯಣದಷ್ಟು ಹಳತ್ತಲ್ಲ, ಆದರೆ ರಾಮಭಕ್ತ ಗಾಂಧೀಜಿಯಷ್ಟು ಹಳತ್ತಪ್ಪು.

ಭಾರತವ ಬ್ರಿಟಿಷರು ಆಳಿಗೊಂಡು ಇದ್ದ ಸಮೆಯ.

ಅದೊಂದರಿ ರಾಜಸ್ತಾನದ ರಾಜ ಜಯಸಿಂಹ ಇಂಗ್ಲೆಂಡಿಗೆ ಹೋಗಿದ್ದ ಸಮೆಯ. ಇಂಗ್ಲೆಂಡಿಲಿ ಹೊತ್ತು ಕಳಕ್ಕೊಂಡು ಇದ್ದಿದ್ದ ಸಮೆಯಲ್ಲಿ, ಹೊತ್ತೋಪಗ ಒಂದು ವಾಕಿಂಗು – ಹೇದು ಈ ರಾಜ ಹೋಗಿಂಡು ಇಪ್ಪಾಗ, ಮಾರ್ಗದ ಕರೆಯ ಅಂಗುಡಿಗಳಲ್ಲಿ ಒಂದು – ರೋಲ್ಸ್ ರೋಯ್ಸು ಹೇಳ್ತ ಕಾರಿನ ಅಂಗುಡಿಯೂ ಇದ್ದತ್ತು.

ಆ ಕಾಲಕ್ಕೇ – ವಿಶ್ವದ ಅತ್ಯಂತ ದುಬಾರಿ ಕಾರು – ಹೇದು ಲೆಕ್ಕ ಆಡ ಅದು. ಆಧುನಿಕ ಸೌಕರ್ಯಂಗೊ, ಸಲಕರಣೆಗೊ ಎಲ್ಲವೂ ಇದ್ದ ಅತ್ಯಂತ ದುಬಾರಿ ಕಾರು.

ಆ ಅಂಗುಡಿಗೆ ಅಷ್ಟನ್ನಾರ ಬಂದುಗೊಂಡು ಇದ್ದೋರು ಎಲ್ಲೋರುದೇ – ಭರ್ಜರಿ ಕೋಟು, ಸೂಟು, ಬೂಟು ಹಾಕಿದ ಘಟಾನುಘಟಿಗೊ. ಪೈಶೆಲಿ ಶ್ರೀಮಂತಿಕೆ ಮಾಂತ್ರ ಅಲ್ಲ, ಕಾಂಬಲೂ ಶ್ರೀಮಂತಿಕೆ ತೋರುಸುತ್ತೋರು ಹೋಪಲ್ಲಿಗೆ, ಈ ಮಹಾರಾಜನೂ ಹೋದ.

ಆದರೆ ಮಹಾರಾಜ ಹೋಪಗ ತನ್ನ ಬಿರುದುಬಾವಲಿಗಳ ಹಿಡ್ಕೊಂಡು ಹೋಯಿದನಿಲ್ಲೆ, ಕೆಲಸಕ್ಕೆ ಬತ್ತ ಕೊಗ್ಗುವಿನ ಹಾಂಗೆ ಸಾದಾ ಸೀದಾ ದ್ರೆಸ್ಸಿಲಿ ಹೋದ್ಸು. ಅತೀ ದುಬಾರಿ ಕಾರಿನ ಅಂಗುಡಿಗೆ ಈ ’ಪಾಪದ’ ಭಾರತೀಯ ನುಗ್ಗಿ ಅಪ್ಪಾಗ, ಅಲ್ಯಾಣ ಅಂಗುಡಿಯೋರಿಂಗೆ ಪುಸ್ಕ ಆತಾಡ.

ಪುಸ್ಕ ಆದ್ಸು ಮಾಂತ್ರ ಅಲ್ಲ, ಪುಸ್ಕ ಮಾಡಿದವಾಡ.

ಈ ಕಾರಿಂಗೆ ಎಷ್ಟು, ಇದಕ್ಕೆಷ್ಟು – ಹೇಳುವಾಗ, ಪಿಸಕ್ಕನೆ ನೆಗೆಮಾಡಿ “ಇದು ನಿಮಿಗೆಲ್ಲ ಆಗ್ಲಿಕ್ಕಿಲ್ಲ ಭಾವಯ್ಯ” – ಹೇದು ನೆಗೆ ಮಾಡಿ ದಾಂಟುಸಿದವಾಡ. ಆರೋ ದಾರಿತಪ್ಪಿ ಬಂದದಾಯಿಕ್ಕು – ಹೇದು ಗ್ರೇಶಿತ್ತಿದ್ದವೋ ಏನೋ.

ವ್ಯಕ್ತಿತ್ವಂದಲೂ, ಇಲ್ಯಾಣ ಜೆನಂಗೊ ಪೈಸೆ-ಪೋಷಾಕನ್ನೇ ಗುರುತಿಸುದು – ಹೇಳ್ತದು ಗೊಂತಿದ್ದ ರಾಜಂಗೆ ಇದು ಅಭಿಮಾನಕ್ಕೆ ಭಯಂಕರ ಪೆಟ್ಟು ತಂತು. ಇವಕ್ಕೆ ಕಲಿಶುತ್ತೆ – ಹೇದು ಮನಸ್ಸಿಲೇ ಗ್ರೇಶಿಗೊಂಡು ಆ ಅವಮಾನವ ನುಂಗಿಂಡು ಸೀತ ಅವರ ವಸತಿಗೆ ಒಪಾಸು ಬಂದವಾಡ.

~

ಚೂರು ಹೊತ್ತಿಲಿ ’ಅಲ್ವಾರದ ಮಹಾರಾಜ ಜಯಸಿಂಹ ಬತ್ತಾ ಇದ್ದವು’ – ಹೇದು ಅವರ ಆಳುಗಳ ಮೂಲಕ ಸಂದೇಶ ಕಳುಸಿದವಾಡ. ಆ ಕಾರಿನ ಅಂಗುಡಿ ಕೂಡ್ಳೇ ಅವರ ಸ್ವಾಗತಕ್ಕೆ ಕೆಂಪು ಹಾಸು, ತೋರಣ ಎಲ್ಲ ಮಾಡಿ ಸಿದ್ಧಗೊಂಡತ್ತು. ರಾಜ ಪೋಷಾಕಿನ ಹಾಕಿಂಡು ಜಯಸಿಂಹ ರಜಾ ಹೊತ್ತಿಲಿ ಅದೇ ಕಾರಿನ ಅಂಗುಡಿಗೆ ಬಂದವು. ಪೂರ್ಣ ಕುಂಭ ಸ್ವಾಗತ ಮಾಡ್ಳೆ ಅಲ್ಯಾಣ ಜೆನಂಗೊ ಬಂದು ನೋಡ್ತವು – ಇದು ಅದೇ ಜೆನ!!!

ಆಗ ಆರ ನಾವು ಬಲುಗಿ ಓಡ್ಸಿದ್ದೋ, ಅದೇ ಜೆನ ಇದು!

ಇಂಗು ತಿಂದ ಮಂಗನ ಹಾಂಗಾತು ಅಲ್ಯಾಣ ಜೆನಂಗಳದ್ದು.

ಈ ರಾಜ ಅಷ್ಟಕ್ಕೇ ಬಿಡ್ತೋ – ನಿಂಗಳ ಈ ಅಂಗುಡಿಲಿ ಎಷ್ಟು ಕಾರು ಇದ್ದೋ – ಎಲ್ಲವೂ ಎನಗೆ ಬೇಕು – ಹೇದು ಕಾರಿಂಗೆ ಓರ್ಡ್ರು ಕೊಟ್ಟತ್ತಾಡ.

ಅಬ್ಬ, ಆಗ ನಾವು ಮರ್ಯಾದಿ ಕಳದರೂ ಒಯಿವಾಟಿಂಗೆ ತೊಂದರೆ ಆಯಿದಿಲ್ಲೆ – ಹೇದು ಆ ಅಂಗುಡಿಯ ಜೆನಂಗೊ ಸಮದಾನ ಮಾಡಿಗೊಂಡವು.

ಆದರೆ, ರಾಜ ಆ ಕಾರಿನ ಎಂತ್ಸಕ್ಕೆ ಕೇಳಿದ್ದು ಹೇದು ಅಂಗುಡಿಯೋರಿಂಗೆ ಅರಡಿಗಾಯಿದಿಲ್ಲೆ.

~

ರಾಜ ಓರ್ಡ್ರು ಮಾಡಿದ ಕಾರುಗೊ ಎಲ್ಲ ಅದರ ಊರಿಂಗೆ ಎತ್ತಿತ್ತು.

ಎತ್ತಿ ಪೆಕೆಟು ಬಿಚ್ಚಿ ಅಪ್ಪದ್ದೇ – “ಇಂದಿಂದ ಎಂಗಳ ಮಹಾನಗರದ ಕಸವು ತೆಗವಲೆ ಈ ಕಾರು” – ಹೇದು ಘಂಟಾಘೋಷ ಹೇಳಿತ್ತು.

ಅತಿ ಗಾಂಭೀರ್ಯದ, ವಿಶ್ವದ ಅತಿ ಶ್ರೀಮಂತರು ಅಂಬಗನ್ನಾರ ಬಳಸಿಗೊಂಡಿದ್ದ ಕಾರು “ಭಾರತದ ಯೇವದೋ ರಾಜನ ಆಡಳ್ತೆಲಿ ಕಸವು ತೆಗವಲೆ ಬಳಕೆ ಆವುತ್ತಾ ಇದ್ದು” – ಹೇದು ಲೋಕ ಇಡೀ ಸುದ್ದಿ ಅಪ್ಪಲೆ ಸಮೆಯ ಬೇಕಾಯಿದಿಲ್ಲೆ.

~

ಇದು ಆ ಕಾರು ಕಂಪೆನಿಯ ಮರ್ಮಾಘಾತದ ಹಾಂಗಾತು.

ಆ ಕಾರು ತೆಗವಲೆ ಆಲೋಚನೆ ಮಾಡಿಗೊಂಡಿದ್ದೋರುದೇ – ಎರಡೆರಡು ಸರ್ತಿ ಆಲೋಚನೆ ಮಾಡಿ, “ಬೇಡಪ್ಪ – ಬೇರೆ ಯೇವದಾರು ತೆಗವೊ” – ಹೇದು ಹಿಂದೆ ಬಿದ್ದವು. ಶ್ರೀಮಂತರ ಅಹಂಕಾರದ ಪ್ರತೀಕ ಆದ ಕಾರು, ಈಗ ಭಾರತದ ಕಕ್ಕಸು ಗುಂಡಿಯ ಕಸವು ತುಂಬುಸಿಗೊಂಡು ಹೋಗಿಂಡು ಇದ್ದತ್ತು – ಹೇದರೆ ಎಷ್ಟು ನಾಚಿಗೆ!

~

ಕಾರಿನ ಕಂಪ್ನೆನಿಗೆ ಈ ಸಂಗತಿ ಗೊಂತಾತು. ತನ್ನ ತಪ್ಪಿಂದಾಗಿ ಬೇಜಾರ ಆದ ಮಹಾರಾಜರು ಈ ಕ್ರಮ ತೆಕ್ಕೊಂಡಿದವು – ಹೇದು ಅವಕ್ಕೆ ಗೊಂತಾತು. ಕೂಡ್ಳೇ ಬಂದು ರಾಜನ ಹತ್ರೆ ಕ್ಷಮೆ ಕೇಳಿ, ದಯಮಾಡಿ ಆ ಕಾರಿಲಿ ಕಸವು ಸಾಗುಸೇಡಿ – ಹೇದು ದಮ್ಮಯ ದಕ್ಕಯ ಹಾಕಿದವಾಡ.

ಅವರ ತಪ್ಪಿನ ಒಪ್ಪಿಗೊಂಡು, ಬೇಡಿದ್ದಕ್ಕೆ ’ಆತಂಬಗ’ – ಹೇದು ಕಸವು ತೆಕ್ಕೊಂಡು ಹೋಪದಾರ ನಿಲ್ಲುಸಿತ್ತಾಡ.

ಆದರೂ, ತನಗೆ ಅಭಿಮಾನಕ್ಕೆ ಭಂಗ ತಂದ ಆ ರಾಜ ಕೊನೆ ವರೆಗೂ ಅವರ ಕಂಪೆನಿಯ ಕಾರಿಂಗೆ ಹತ್ತಿದ್ದಿಲ್ಲೇಡ.

~

ಇದರಲ್ಲಿ ಒಂದು ಜೀವನ ಪಾಠ ನಾವು ಕಲಿಯೆಕ್ಕಾದ್ಸು. ಆರೋ ಒಬ್ಬನ ನಾವು ಕಂಡು ಪುಸ್ಕ ಮಾಡ್ಳೂ ಸಾಕು ಕೆಲವು ಸಂದರ್ಭಂಗಳಲ್ಲಿ. ಆದರೆ, ಅದರ ಬೆಲೆ ಎಷ್ಟಿಕ್ಕು, ಎಷ್ಟಕ್ಕು ಹೇದು ನವಗೆ ಗೊಂತಪ್ಪಗ ತಡವಕ್ಕು.

ಹಾಂಗಾಗಿ, ನಾವು ಎಲ್ಲೋರನ್ನೂ, ಎಲ್ಲೋರತ್ರೂ ಜಾಗ್ರತೆಲಿ ಕೆಲಸ ವಹಿಸೆಕ್ಕಾದ್ಸು – ಹೇದು ನೀತಿ ಪಾಠ.

~

ಒಂದೊಪ್ಪ: ಕಸವಿಂದ ಕಡೆ ಕಂಡ ರಾಜ ತನ್ನ ಕಾರುಗಳಲ್ಲಿ ಕಸವು ಸಾಗುಸಿದ!

ಒಪ್ಪಣ್ಣ

   

You may also like...

5 Responses

 1. ಗೋಪಾಲ ಬೊಳುಂಬು says:

  ಓ, ಹೊಸಾ ಕಥೆ, ಆನು ಇಷ್ಟರವರಗೆ ಕೇಳಿತ್ತಿದ್ದಿಲ್ಲೆ. ತುಂಬಾ ಲಾಯಕಿತ್ತು. ಹಾಂಕಾರಕ್ಕೆ ಮದ್ದು ಕೊಟ್ಟದು ತುಂಬಾ ಇಷ್ಟ ಆತು.
  ಸುರುವಿಂಗೆ ರಾಜ ಕಾರಿನ ಅಂಗ್ಡಿಗೆ ಬಂದಪ್ಪಗ ಅದರ ಡ್ರೆಸ್ಸ್ ಎನಗೆ “ಬಂದರಿನ ಗುಜುರಿ ಅಂಗಡಿ”ಯ ಮಾಪಳಗಳ ನೆಂಪು ಮಾಡಿತ್ತು.
  ಒಂದು ಕುರೆ ವಸ್ತ್ರ ಅಂಗಿ ಹಾಕಿದರುದೆ, ಅವು ವಸ್ತ್ರ ನೆಗ್ಗಿ ಚಡ್ಡಿ ಗಿಸೆಂದ ಕಟ್ಟ ಕಟ್ಟ ಪೈಸೆ ತೆಗದು ಎಣುಸುತ್ತ ಸ್ಟೈಲಿನ ನೆಂಪಾತು.

 2. S.K.Gopalakrishna Bhat says:

  ಒಳ್ಳೆ ಕತೆ

 3. ಇದು ಒಪ್ಪಣ್ಣನ ವಿಶೇಷ ವಿನೂತನ ಆಕರ್ಶಣೀಯ ಕತೆ! ಹರೇರಾಮ

 4. Venugopal Kambaru says:

  ಈ ಕಥೆ ಎಲ್ಲಿಯೋ ಕೇಳಿದ್ದೆ . ಲಾಯಕ ಆಯಿದು.

 5. S.K.Gopalakrishna Bhat says:

  ಈ ವಾರ ಒಪ್ಪಣ್ಣ ಎಲ್ಲಿ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *