ರೂಪತ್ತೆ ಕಾರು ಕಲ್ತ ಶುದ್ದಿ..!!

February 19, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಿವರಾತ್ರಿ ಮುಗಾತು!
ಶಿವಶಿವಾ ಹೇಳಿಗೊಂಡು ಚಳಿಯೇ ದೂರ ಹೋತು!!
ಊರಿನ ದಪ್ಪ ಕಂಬುಳಿಗೊ ಎಲ್ಲ ಅಟ್ಟಕ್ಕೆ ಹೋಗಿ ಆತು!
ಇನ್ನು ಎಲ್ಲೊರಿಂಗೂ ಪುರುಸೊತ್ತು ಕಮ್ಮಿ. ದೊಡ್ಡಬಾವಂಗೆ ದೊಡ್ಡದೊಡ್ಡ ಜಾತ್ರೆಗಳ ಚೊರಿ!
ಅಜ್ಜಕಾನಬಾವಂಗೆ ಗೋಕರ್ಣ-ಬೈಲು ತಿರುಗುದೇ ಆತು, ಎಡಪ್ಪಾಡಿ ಬಾವ° ಹೊಸನಗರಕ್ಕೆ ಹೋಯಿದನಡ, ಡಾಗುಟ್ರುಬಾವ ಒರಗಿದ್ದವು, ಒಂದು ವಾರ ಆತು – ಬೈಲಿಲಿ ಕಾಂಬಲಿಲ್ಲೆ!
ಅದರ ಮೇಗಂದ, ಮುಜುಂಗರೆಲಿ ಗುರುಗೊ ಬತ್ತ ಗೌಜಿ – ಊರಿನೋರು ಪೂರ ಅಲ್ಲೇ ಇದ್ದವು. ಇಡೀ ಕುಂಬ್ಳೆಸೀಮೆಯೇ ಸಡಗರಲ್ಲಿ ಇದ್ದು.
ವಿಟ್ಳಹೊಡೆಂಗೆ ಹೋದರೆ ಅಜಕ್ಕಳ ಬಾವ ಡೆಲ್ಲಿಗೆ ಹೆರಟೊಂಡು ಇದ್ದವು, ನೀರ್ಕಜೆ – ಚೆಂಬರುಪು ಹೊಡೆಲಿ ಎಲ್ಲ ಪುರುಸೊತ್ತೇ ಇಲ್ಲೆ..
ಪುತ್ತೂರು ಹೊಡೆಂಗೆ ಬಂದರೆ ರಾಮಜ್ಜನ ಕೋಲೇಜಿಲಿ ಎಂತದೋ ಗೌಜಿ ಅಡ, ಎಲ್ಲೊರುದೇ ಅಲ್ಲಿಗೆ ಹೋಯಿದವು.
ಶುದ್ದಿ ಹೇಳುವೊ° ಹೇಳಿರೆ ಕೇಳುಲಾರೂ ಆರಿದ್ದವು ಬೇಕೇ!

ಮೆಲ್ಲಂಗೆ ಪಂಜ ಹೊಡೆಂಗೆ ನೋಡುವಗ – ರೂಪತ್ತೆಯ ನೆಂಪಾತು!
ಅವರ ಅಪ್ಪನ ಮನೆ ಪಂಜಸೀಮೆ ಅಲ್ಲದ್ರೂ, ಇಪ್ಪದು ಪಂಜಸೀಮೆಲಿಯೇ ಅಲ್ಲದೋ – ಹಾಂಗಾಗಿ ಈಚ ಹೊಡೆಣ ಬೆಶಿ ಅಲ್ಲಿಗೆ ತಟ್ಟಿದ್ದಿಲ್ಲೆ!!
~

ರೂಪತ್ತೆಯ ಮನೆಲಿ ಎಲಿ ಉಪದ್ರ ಕಂಡಾಬಟ್ಟೆ ಆಗಿ ಊರಿಡೀ ಗೊಂತಾದ ಶುದ್ದಿ ನಾವು ಮಾತಾಡಿದ್ದು, ಅಲ್ಲದೋ?
(ಆ ಶುದ್ದಿ ಗೊಂತಿಲ್ಲದ್ರೆ ಮೊದಾಲು ಅದರ ಓದಿಕ್ಕಿ! – ಇಲ್ಲಿದ್ದು).
ಅದೇ ರೂಪತ್ತೆಯ ಇನ್ನೊಂದು ಶುದ್ದಿ ಈಗ ಮಾತಾಡುವೊ°!
~

ಅಂದು, ರೂಪತ್ತೆಯ ದೊಡ್ಡಮಗ° ಸುರುವಾಣ ಸರ್ತಿ ಆಷ್ಟ್ರೇಲಿಯಕ್ಕೆ ಹೆರಡುವ ಮೊದಲೇ – ಕೇಳಿದ್ದ°, ‘ನಿನಗೆ ಕಾರು ತೆಗವನಾ ಅಮ್ಮ…?’ ಹೇಳಿ.
ಪಕ್ಕನೆ ಗ್ರೇಶದ್ದೆ ಕೇಳಿ ಅಪ್ಪಗ ರೂಪತ್ತೆಗೆ ಜೋರು ನಾಚಿಗೆ ಆಗಿ ‘ಎನಗಾ! ಬೇಡಪ್ಪ!!’ ಹೇಳಿತ್ತಿದ್ದು ಒಂದೇ ಮಾತಿಲಿ – ಕಡ್ಡಿ ತುಂಡಾದ ಹಾಂಗೆ!
‘ಬೇಡದ್ರೆ ಬೇಡ ಅಂಬಗ, ಅಮ್ಮಂಗೆ ಮನಸ್ಸಿಲ್ಲೆ ಆಯಿಕ್ಕು’ ಹೇಳಿಗೊಂಡು ಮಗ ಸೀತ ಆಷ್ಟ್ರೇಲಿಯಕ್ಕೆ ಹಾರಿದ°.
ಒತ್ತಾಯ ಮಾಡ್ತನೋ ಗ್ರೇಶಿದ ರೂಪತ್ತೆ ಕಾದೇ ಬಾಕಿ!
~

ಅವ° ಸಿಡ್ನಿಲಿ ಇದ್ದದಡ – ಎಂತದೋ ಆಪೀಸಿಲಿ.
ಆಪೀಸಿನವೇ ಮನೆ ಕೊಟ್ಟಿದವಡ. ಆದರೆ ಹತ್ತು-ಹನ್ನೆರಡು ಮೈಲು ದೂರಲ್ಲಿ.
ನಮ್ಮ ಊರಿಲಿ ಆದರೆ ಕೃಷ್ಣಬಸ್ಸಿಂಗೆ ಅರ್ಧ ಗಂಟೆ, ಅಲ್ಲಿ ಹಾಂಗಲ್ಲನ್ನೆ! ಹೋಗಿ ಬಪ್ಪಲೆ ಎಂತಾರು ವೆವಸ್ಥೆ ಆಯೆಕ್ಕಾತು – ಹಾಂಗೆ ಕಾರು ತೆಗದ°.
ಆಪೀಸಿಂದ ಮನಗೆ ಹೋಪಗ ರೂಪತ್ತೆಮೊಬೈಲಿಂಗೆ ಪೋನು ಮಾಡಿಗೊಂಡು ಇತ್ತಿದ್ದ° ಅಲ್ದಾ, ಅಷ್ಟಪ್ಪಗ ‘ಕಾರು ತೆಗವನಾ.. ಅಮ್ಮಾ..’ ಕೇಳಿದ್ದು ಅಜನೆ ಆಯ್ಕೊಂಡು ಇತ್ತು ರೂಪತ್ತೆಗೆ!

ಊರೊಳಾಣ ಪರಿಷತ್ತಿನ ಮೀಟಿಂಗು ತಿಂಗಳಿಂಗೊ- ಎರಡು ತಿಂಗಳಿಂಗೊ ಮಣ್ಣ ಒಂದು ಸರ್ತಿ ಇಪ್ಪದು!
ಅದಕ್ಕೆ ಹೇಂಗೂ ಹೊಸಸೀರೆ ಸುತ್ತುಲಿದ್ದನ್ನೇ – ಮದ್ಯಾಂತಿರುಗಿ ನೆಡಕ್ಕೊಂಡು ಹೋಪಗ ಅದರ ನೆರಿಗೆ ಪೂರ ಹೊಡಿ ಆಗಿರ್ತು, ‘ಸೀರೆ ಹೊಸತ್ತು’ ಹೇಳಿರೆ ಆರುದೇ ನಂಬುತ್ತವಿಲ್ಲೆ. ಕಾರು ಇದ್ದಿದ್ದರೆ ಆ ಪ್ರಮೇಯವೇ ಇತ್ತಿಲ್ಲೆನ್ನೆ! ಹೇಳಿ ಕಾಣ್ತು ಈಗೀಗ.
ನೋಡೊ°, ಬಪ್ಪ ಜೂನಿಲಿ ಬತ್ತ°ನ್ನೆ – ಅಷ್ಟಪ್ಪಗ ಕಾರಿನ ಸುದ್ದಿ ತೆಗವ°. ಕಾರು ತೆಗವನ ಕೇಳಿರೆ ಬೇಡ ಹೇಳದ್ರಾತು! – ಹೇಳಿ ಮನಸ್ಸಿಲೇ ಗ್ರೇಶಿಗೊಂಡು ಇತ್ತು.
~

ಜೂನಿಲಿ ಮಗ° ಬಯಿಂದಯಿಲ್ಲೆ, ಆದರೆ ಮಳೆ ಬಂತು.
ಪರಿಶತ್ತಿನ ಮೀಟಿಂಗಿಂಗೆ ಚೆಂಡಿಸೀರೆಲೇ ಹೋತು.
ಹೊಸಾ ಸೀರೆ ನೀರು ಹೀರ್ತಿಲ್ಲೆ, ಹಾಂಗೆ ಆನು ರಜಾ ಹೊತ್ತು ಇಲ್ಲೇ ಕೂರ್ತೆ!’ ಎಲ್ಲೋರಿಂಗೂ ಕೇಳ್ತ ಹಾಂಗೆ ಹೇಳಿ ಮೀಟಿಂಗಿನ ಕರೇಲಿ ಕುರ್ಶಿಲಿ ಕೂದು ಸುದಾರುಸಿತ್ತು!
~

ಜೂನಿಲಿ ಬರೆಕ್ಕಾದ ಮಗ ಜುಲಾಯಿಲಿ ಬಂದ.
ಅದೆಂತದೋ ಆಪೀಸಿನ ಕೆಲಸ ಜೋರು ಇದ್ದರೆ ಊರಿಂಗೆ ಹೋಪದು ತಡವು ಮಾಡ್ತವಡ! ಉಮ್ಮ – ಅಪ್ಪಾಯಿಕ್ಕು, ನವಗರಡಿಯ!
“ಜುಲಾಯಿ – ಜೋರು ಮಳೆ ಅಲ್ದ ಮಗಾ°, ಈಗ ಬಸ್ಸಿಲಿ ಎಲ್ಲಿಗೂ ಆನು ಹೋಪಲಿಲ್ಲೆ, ಚೆಂಡಿ ಆದರೆ ಮತ್ತೆ ಜ್ವರ ಸುರು ಆವುತ್ತು..” -ಹೇಳಿತ್ತು ರೂಪತ್ತೆ – ಒಂದರಿ ಸಮಯ ನೋಡಿ. ಮಗ° ಕಲಿವಲೆ ಎಷ್ಟೇ ಉಶಾರಿಮಾಣಿ ಆದರೂ, ಹೀಂಗಿರ್ತ ವಿಶಯಲ್ಲಿ ಅವನ ಅಪ್ಪನ ಹಾಂಗೆಯೇ!
ಹೀಂಗಿರ್ತದೆಲ್ಲ ಬೇಗ ಅರ್ತ ಆಯೆಕ್ಕಾರೆ ಮಗಳೇ ಆಯೆಕ್ಕಷ್ಟೆ.
ರೂಪತ್ತೆ ಎಂತಕೆ ಆ ಮಾತು ಹೇಳಿದ್ದು ಹೇಳಿ ಇವಂಗೆ ತಲಗೇ ಹೋಯಿದಿಲ್ಲೆ. ಚೆ!

ಎರಡು ಮೂರು ಸರ್ತಿ – ಬೇರೆಬೇರೆ ಸಮೆಯನೋಡಿ ಹೇಳುವಗ ಕೇಳಿದ°, ‘ಕಾರು ತೆಗವನಾ ಅಮ್ಮಾ?’ ಹೇಳಿಗೊಂಡು!
ಅಬ್ಬ, ಸಿಕ್ಕಿದ್ದು ಭಾಗ್ಯ ಗ್ರೇಶಿಗೊಂಡು ‘ತೆಗವ° ಮಗ ತೆಗವ°..’ ರಪಕ್ಕ ಹೇಳಿತ್ತು ರೂಪತ್ತೆ.
ನೀಲಿ ಬಣ್ಣದ ಹೊಸಕಾರಿಲಿ ಗೆನಾಸೀರೆಯ ನೆರಿಗೆ ಹಾಳಾಗದ್ದ ಹಾಂಗೆ ಕೂದಂಡು, ತಲಗೆ ಕಂದುಕನ್ನಡ್ಕ ಸಿಕ್ಕುಸಿಗೊಂಡು, ವೈಪರಿಲಿ ರಪ-ರಪ-ರಪ ಮಳೆನೀರಿನ ರಟ್ಟುಸಿಗೊಂಡು, ತಿರುಗಾಸಿಲಿ ಹೋರುನು ಹಾಕಿಯೊಂಡು ಹೋಪದು ಅನಿಸಿಹೋತು ರೂಪತ್ತೆಗೆ!

‘ಅಮ್ಮಂಗೆ ಕಾರು ಲೈಸೆನ್ಸು ಆಯೆಕ್ಕಷ್ಟೆ ಅಲ್ದಾ?’ ಮಗ° ಕೇಳಿದ°. ಬುಗ್ಗಗೆ ಪಿನ್ನು ಕುತ್ತಿದ ಹಾಂಗಾದ್ದು ಅಷ್ಟಪ್ಪಗಳೇ!
ಮರಾದಿನವೇ ನೀಲಿಕಾರು ಬಂದು ಜಾಲಕೊಡಿಲಿ ನಿಲ್ಲುತ್ತು ಹೇಳಿ ಗ್ರೇಶಿದ ರೂಪತ್ತೆಗೆ ಒಂದರಿಯೇ ಬೇಜಾರಾತು!
ಚೆ, ಅಂತೇ ತಡವಾವುತ್ತಾ ಇದ್ದು ಹೇಳಿ ರೂಪತ್ತೆಗೆ ಆದರೂ, ‘ಮಗ° ಕಾರುತೆಗೆತ್ತದರ ಬಗ್ಗೆ ಗಂಬೀರವಾಗಿ ಯೋಚನೆಮಾಡ್ತಾ ಇದ್ದ°’ ಹೇಳುದು ಸ್ಪಷ್ಟವಾಗಿ ಕುಶಿಕುಶಿ ಆಗಿತ್ತು.
‘ಪಂಜಲ್ಲಿ ಎಲ್ಯಾರು ಕಾರು ಕಲಿಶುತ್ತವು ಇದ್ದರೆ ಕಲ್ತುಗೊ ಅಮ್ಮ. ಇನ್ನಾಣ ಸರ್ತಿ ಬಂದಿಪ್ಪಗ ಕಾರು ತೆಗವ°’ – ಹೇಳಿಕ್ಕಿ ಪುನಾ ಆಷ್ಟ್ರೇಲಿಯಕ್ಕೆ ಹಾರಿದ°.
‘ನಿಜವಾಗಿ ಅವಂಗೆ ಕಾರು ತೆಗವ ಆಸಕ್ತಿಲಿ ಹೇಳಿದ್ದೋ, ಅಲ್ಲ ಹೆಂಡತ್ತಿ ಬಂದಮತ್ತೆ ಅಮ್ಮನ ಮೇಲೆ ಪ್ರೀತಿ ಕಮ್ಮಿ ಆಯಿಕ್ಕೋ..
– ಇಲ್ಲೆಪ್ಪ ಹಾಂಗೆ ಮಾಡ° ಅವ°!’
ಆ ಸಮೆಯಲ್ಲಿ ಅಂತೂ – ಎಲ್ಲ ಅಮ್ಮಂದ್ರ ಹಾಂಗೆಯೇ, ಮಗ° ಬೇಗ ಬರಳಿ ಹೇಳಿ ಅನಿಸಿಗೊಂಡಿತ್ತು ರೂಪತ್ತೆಗೆ, ದಿನಾಗುಳುದೇ!
~

‘ಮಗ° ಬಪ್ಪ ಮೊದಲು ಕಾರು ಬಿಡ್ಳೆ ಕಲ್ತುಗೊಂಬ°’ ಹೇಳಿಯೂ ಯೋಚನೆ ಬಂತು.
ಹಾಂಗೆ ನೋಡಿರೆ ರೂಪತ್ತೆಯ ತಮ್ಮನತ್ರೆ ಕಾರಿದ್ದು, ಬಾವನತ್ರೆ ಜೀಪು ಇದ್ದು – ಕಲಿಶು ಹೇಳಿರೆ ಎಡಿತ್ತಿಲ್ಲೆ ಹೇಳವು ಇಬ್ರುದೇ.
ಆದರೆ ಜೀಪು ಬಿಟ್ಟೊಂಡು ದೊಡ್ಡಮಾರ್ಗಲ್ಲಿ ಹೋಪದಾರೂ ಹೇಂಗೆ! ತಮ್ಮ ಒಯಿವಾಟಿಲಿ ಯೇವತ್ತೊ ಅಂಬೆರ್ಪು – ಕಾರು ಹಿಡ್ಕೊಂಡು!
ಚೆ, ಅದರಿಂದ ಪೈಸೆ ಕೊಟ್ಟೇ ಕಲಿಯೆಕ್ಕು – ಹೇಳಿ ಆತು!
~

ಪಂಜಲ್ಲೇ ಒಂದು ಕಾರು ಕಲಿಶುತ್ತ ಶಾಲೆ ಇದ್ದು. ಆದರೆ ಅಲ್ಲಿಗೆ ಹೋಗಿ, ದಿನಾಗುಳೂ ಕಲಿಯೆಕ್ಕಾರೆ ಈ ಮಳೆಗಾಲ ಕಷ್ಟ.
ಮತ್ತೆ ಬಪ್ಪ ಚಳಿಗಾಲವೂ ಕಷ್ಟವೇ, ಆದರೂ ಗೆನಾಸೀರೆಗೊ ಚೆಂಡಿ ಆವುತ್ತ ಕಷ್ಟ ಇಲ್ಲೆ ಹೇಳಿ ನೆಂಪಾಗಿ ಸಮಾದಾನ ಮಾಡಿಗೊಂಡತ್ತು.
ಅಲ್ಲಿಂದ ಮುಂದಾಣ ಪ್ರತಿ ಮಳೆಯುದೇ ಮಳೆಗಾಲವ ಉದ್ದಮಾಡ್ತ ತನ್ನ ವೈರಿಯ ಹಾಂಗೆ ಕಾಂಬಲೆ ಸುರು ಆತು!
‘ಮಗಳ ಅಪ್ಪನೇ ಇದರ ಬರುಸುದೋ..!’ ಹೇಳಿ ಗ್ರೇಶಿ ರೂಪತ್ತೆಗೆ ತನ್ನಷ್ಟಕ್ಕೇ ಪಿಸುರು ಬಕ್ಕು ಒಂದೊಂದರಿ!
ಪಾಪ, ರೂಪತ್ತೆಗೆಂಡಂಗೆ ಇದರ ತಲೆಬೆಶಿಯೇ ಇಲ್ಲೆ!
ನಿನ್ನೆಯುದೇ ಅದೇ ಷ್ಟೌ, ಇಂದುದೇ ಅದುವೇ ಷ್ಟೌ
, ನಾಳಂಗೂ ಅದೇ! ಗೇಸಿನ ಅಂಡೆ ಮುಗುದರೆ ಮಾಂತ್ರ ತಲೆಬೆಶಿ – ಅಷ್ಟೇ!!

ಇದರೆಡಕ್ಕಿಲಿ, ಮಳೆಗಾಲ ಅರ್ದಂಬರ್ದ ಬಿಟ್ಟೋಂಡಿಪ್ಪಗಳೇ ಕಾರಿನ ಶಾಲಗೆ ಹೋಗಿ ಕೇಳಿಕ್ಕಿ ಬಂತು. ಎಷ್ಟಾವುತ್ತು, ಹೇಂಗೆ, ಏನು, ತಾನು – ಹೇಳ್ತ ವಿವರಂಗಳ.
ಪಂಜಲ್ಲಿ ದೇವಸ್ತಾನಕ್ಕೆ ತಿರುಗುತ್ತಲ್ಲೆ ಈ ಶಾಲೆ ಇಪ್ಪದಡ. ಜಾಸ್ತಿ ಹುಡುಕ್ಕಲೆ ರೂಪತ್ತೆಗೆ ವೆವಧಾನ ಬೇಕೇ!
ಒಳ್ಳೆತ ಜೆನ ಹೋವುತ್ತವಡ ಅಲ್ಲಿಗೆ, ಕಲುಶುತ್ತ ಜೆನ ಒಳ್ಳೆ ಸಬ್ಯನ ಹಾಂಗೆ ಕಂಡತ್ತು, ಸಭ್ಯ ಆದರೇ ಜೆನ ಹೋಪದಲ್ದಾ!
ಚೆಂದಕೆ ಒಳ ದಿನಿಗೆಳಿ, ತಿರುಗುತ್ತ ಕುರ್ಶಿಲಿ ಕೂರುಸಿ ಮಾತಾಡುಸಿತ್ತು. ಅಟ್ಟಿಂದ ಒಂದು ಹಾಳೆಕುಂಟಿನಷ್ಟಕೆಯ ವಿಸಿಟಿಂಗುಕಾರ್ಡು ತೆಗದು ಕೊಟ್ಟತ್ತು.
ಅದರ್ಲಿ ನಮುನೆ ನಮುನೆ ಕಾರಿನ ಪಟಂಗಳ ನೆಡುಕೆ “ಉಮಾ ಡ್ರೈವಿಂಗ್ ಸ್ಕೂಲ್” ಹೇಳಿ ಬರಕ್ಕೊಂಡು ಇತ್ತು.
ಉಮೇಶ ಹೇಳಿ ಆ ಜೆನರ ಹೆಸರಡ, ಅಲ್ಲೇ ಕರೆಲಿ ಬರಕ್ಕೊಂಡು ಇತ್ತು!
ದಿನಕ್ಕೆ ಅರ್ದ ಗಂಟೆಯ ಹಾಂಗೆ, ಹದಿನೈದು ದಿನಲ್ಲಿ ಕಾರು ಕಲಿಶಿ ಆವುತ್ತಡ!
ಎರಡುಸಾವಿರದಯಿನ್ನೂರು ರುಪಾಯಿಗೆ ಕಾರು ಕಲುಶಿ, ಲೈಸೆನ್ಸು ಕೈಲಿ ಮಡುಗುತ್ತಡ ಆ ಜೆನ.
2500!! – ಒಂದರಿ ತಲೆಬೆಶಿ ಮಾಡಿಗೊಂಡು ಮೋರೆತಿರುಗುಸಿ ಅಪ್ಪಗ ಇಡೀ ಆಪೀಸು ಕಂಡತ್ತು.
ಹಳೇ ಜೀಪಿನ ತುಂಡಿನ ಕರೆಲಿ ನಮುನೆ ನಮುನೆ ಮಾರ್ಗಸೂಚಿಗೊ ನೇಲುಸಿಗೊಂಡು ಇತ್ತು. ಬೆಳಿಸ್ಲೇಟಿಲಿ ಕೆಂಪು ಉರುಟಿನ ನೆಡುಕೆ ಕಪ್ಪು ಕಪ್ಪು ಸೂಚನೆಗೊ!, ಎಡತ್ತಿಂಗೆ ಗುಂಡಿ ಇದ್ದು, ಬಲತ್ತಿಂಗೆ ತಿರ್ಗಾಸು ಇದ್ದು, ಮುಂದೆ ಹೋಟ್ಳು ಇದ್ದು – ಹೇಳ್ತ ನಮುನೆದು.
ದೊಡಾಮಾರ್ಗದ ನೆಡುಕೆ ಕಾರು ಬಿಟ್ಟೋಂಡು ಹೋಪಗ – ಇನ್ನು ಬರೇ ಹದಿನೈದು ದಿನಲ್ಲಿ – ಇದೆಲ್ಲ ಕಂಡ ಹಾಂಗೆ ಅನಿಸಿ ಹೋತು ರೂಪತ್ತೆಗೆ!
ಬರೇ ಅಷ್ಟೇ ಪೈಸೆಯಾ – ಹೇಳಿ ಕಂಡತ್ತು. ‘ಅಕ್ಕು, ಮಳೆ ಬಿಟ್ಟಕೂಡ್ಳೆ ಕಲಿವಲೆ ಸುರು ಮಾಡುದು’ ಹೇಳಿ ನಿಜ ಮಾಡಿತ್ತು.
~

ಚಳಿಗಾಲ ಸುರು. ಆದರೂ ಎಡೆಡೆಲಿ ಒಂದೊಂದು ಮಳೆ! ತೊಂದರಿಲ್ಲೆ.
ಕಾರಿನ ಶಾಲೆಯ ಎದುರಂದ ಹೆರಟ್ರೆ, ಅರ್ದ ಗಂಟೆಲಿ ಎಷ್ಟಾವುತ್ತೋ – ಅಷ್ಟು ಕಲಿವದು.
ಉದಿಯಪ್ಪಗ 10 ಗಂಟೆಗೆ ಕಾರಿನ ಶಾಲಗೆ ಎತ್ತಿರೆ, ಹತ್ತೂವರೆ ಹನ್ನೊಂದಕ್ಕೆ ಹೆರಡ್ಳಾವುತ್ತು.
ಉಮೇಶ° ಹೇಳಿದ್ದು ಅದೇ ಹೊತ್ತು, ದಾರವಾಹಿಗೊ ಇಲ್ಲದ್ದುದೇ ಅದೇ ಹೊತ್ತು!
ಒಳ್ಳೆ ಏಕಾಗ್ರತೆಲಿ ಕಲಿವಲಕ್ಕಿದಾ! ಕೊಶೀ ಆತು ರೂಪತ್ತೆಗೆ!!
ಹದಿನೈದು ದಿನದ ಒಳ ಎಲ್ಲ ಕಲ್ತಾವುತ್ತಡ, ಉಮೇಶ ಹೇಳಿತ್ತಿದ್ದು!
ರೂಪತ್ತೆ ಮನೆಂದ ಪಂಜಕ್ಕೆ – ತುಂಬ ದೂರ ಏನಿಲ್ಲೆ, ಬರೇ 4 ಮೈಲು. ಕಾರು ಕಲಿವದು ಪಂಜಲ್ಲಿ ಆದ ಕಾರಣ ಪೇಟೆಒರೆಂಗೆ ಬಸ್ಸಿಲೇ ಹೋಪದು.
ಒಳ್ಳೆ ದಿನ ನೋಡಿ ಕ್ಲಾಸು ಸುರು ಆತು.
~

ಸುರೂವಾಣ ದಿನ ಬಂತು.
ಕಾರಿನ ಶಾಲೆಯ ಹಾಜರಿ ಪುಸ್ತಕಲ್ಲಿ ರೂಪ.ಎಸ್.ಭಟ್ ಹೇಳಿ ಬರದ ಗೆರೆಯ ಈಚ ಕೊಡೀಲಿ ದಸ್ಕತ್ತು ಮಾಡ್ಳೆ ಹೇಳಿತ್ತು – ಕ್ಲಾಸಿಂಗೆ ಬಯಿಂದು ಹೇಳಿ ಗುರ್ತಕ್ಕೆಡ!
ಮೊಬೈಲು ತೆಗದು ದೀಪಕ್ಕಂಗೆ ಒಂದು ಪೋನು ಮಾಡಿತ್ತಡ, ‘ದೀಪ°, ಈಗ ಕಾರು ಕಲಿವಲೆ ಹೋವುತ್ತಾ ಇದ್ದೆ, ಬಿಸಿ ಇದ್ದೆ. ಮತ್ತೆ ಕಾಂಬ, ಮಡುಗುತ್ತೆ’ ಹೇಳಿಗೊಂಡು!
‘ಬನ್ನಿ ಅಕ್ಕ, ಹೋಗುವ’ ಹೇಳಿ ಕಾರಿನ ಹತ್ತರಂಗೆ ಕರಕ್ಕೊಂಡು ಹೋತು, ಟ್ರೈನರು ಉಮೇಶ°.
ಆಪೀಸಿಂದ ಕಾರು ಮಡುಗುತ್ತಲ್ಲಿಗೆ ಒಂದು ನಿಮಿಶ ನಡವ ದೂರ. ನೆಡವಗ ರೂಪತ್ತೆಗೆ ಗುಡುಗುಡು ಅದರದ್ದೇ ಎದೆಬಡಿತದ ಶಬ್ದ ಕೇಳುಲೆ ಸುರು ಆತು!
ಸಣ್ಣ ಇಪ್ಪಗ ಕಲ್ತ ಶ್ಳೋಕಂಗೊ, ಗೀತೆಗೊ, ದೇವರುಗಳ ಚಿತ್ರಂಗೊ, ಅಪ್ಪ-ಅಮ್ಮನ ಮಾತುಗೊ, ಸಾಯಿಭಜನೆಯ ಹಾಡುಗೊ – ಒಂದರ ಮೇಲೆ ಒಂದು ಎಲ್ಲವುದೇ ನೆಂಪಿಂಗೆ ಬಂದುಗೊಂಡು ಇತ್ತು, ಪೂರ್ತಿ ಅಲ್ಲ – ಅರ್ದಂಬರ್ಧ.

ಕಾರಿನ ಹತ್ತರೆ ಎತ್ತುವಗ ‘ಕೂತ್ಕೊಳಿ ಅಕ್ಕ’ ಹೇಳಿತ್ತು ಉಮೇಶ°.

ಕಾರು ಕಲಿವಲಿಪ್ಪ ಕೆಂಪು ಬೋರ್ಡು
ಕಾರು ಕಲಿವಗ ಇಪ್ಪ ಕೆಂಪು ಬೋರ್ಡು

ಶ್ಳೋಕ ಅರ್ದಲ್ಲೇ ಬಾಕಿ, ಎದುರು ನೋಡ್ತು – ಬೂದು ಬಣ್ಣದ ಕಾರಿನ ತಲೆ ಮೇಗಂಗೆ,ಕೆಂಪಕ್ಷರಲ್ಲಿ “ಯಲ್ಲು” (L) ಹೇಳಿ ಬರಕ್ಕೊಂಡು ಇದ್ದ ಒಂದು ಬೋರ್ಡು ಸಿಕ್ಕುಸಿದ್ದು
( L – ಇಂಗ್ಳೀಶಿಲಿ “Learning” – ಕಲಿತ್ತ ಜೆನ ಬಿಡ್ತಾ ಇಪ್ಪದು ಹೇಳಿ ಅರ್ತ ಅಡ). ರೂಪತ್ತೆ ಗ್ರೇಶಿದ ನೀಲಿ ಕಾರಿನ ಹಾಂಗೆ ಹೊಸತ್ತರ ಪಳಪಳ ಎಂತೂ ಇಲ್ಲೆ, ಮಣ್ಣು ಹಿಡ್ಕಟೆ ಆಗಿ, ಕನ್ನಟಿಲಿ ಎಲ್ಲ ದೂಳು ಕೂದಂಡಿದು…
ಕೂಪಲೆ ಹೇಳಿದ್ದಲ್ದ, ಸೀತ ಹಿಂದಾಣ ಬಾಗಿಲು ತೆಗದತ್ತು ರೂಪತ್ತೆ. “ಅಲ್ಲಿ ಅಲ್ಲ ಅಕ್ಕ, ಇಲ್ಲಿ, ಎದುರಲ್ಲಿ” ಡ್ರೈವರನ ಸೀಟಿನ ತೋರುಸಿಗೊಂಡು ಹೇಳಿತ್ತಡ.
ಈ ಟೆನ್‌ಷನು ಸುರು ಆದರೆ ರೂಪತ್ತೆಗೆ ಎಂತ ಮಾಡ್ತು ಹೇಳಿ ಅಂದಾಜು ಆವುತ್ತಿಲ್ಲೆ.
[ಅದಕ್ಕೇ ಮನೆಯ ತಲೆಬೆಶಿ ಎಂತ ಇದ್ದರೂ ಮಾವಂಗೇ ಕೊಡುದು. 😉 ]
ತಮ್ಮನ ಕಾರಿಲಿ ಕೂದು ಕೂದು ಅದೇ ಅಬ್ಯಾಸ ಇದಾ..! ನೆಗೆಮಾಡಿಗೊಂಡು ಡ್ರೈವರನಬಾಗಿಲು ತೆಗದು ಕೂದತ್ತಡ, ವೇನಿಟಿಬೇಗಿನ ಮಾಂತ್ರ ಹಿಂದಾಣ ಸೀಟಿಲೇ ಮಡಗಿತ್ತಡ ರೂಪತ್ತೆ!
~
ಸುರೂವಾಣ ಸರ್ತಿ ಡ್ರೈವರ್ತಿ ಸೀಟಿಲಿ ಕೂದಂಡತ್ತು ಈ ರೂಪತ್ತೆ!
ಬಾಕಿದ್ದ ಸೀಟುಗಳ ಹಾಂಗೆ ಆರಾಮಲ್ಲಿ ಕೂಪಲೆ ಎಡಿತ್ತಿಲ್ಲೆ.ಬೇಕಾದ ಹಾಂಗೆ ಹಂದುಲೆ ಎಡಿಯ, ಮುಸುಡಿನ ಒರೆಂಗೆ ಸೇಮಗೆಮುಟ್ಟು ಶ್ಟೇರಿಂಗು.
ಕಾಲಿನ ಹಂದುಸುತ್ತೆ ಹೇಳಿರೆ ಮೂರು ಸಣ್ಣ ಸಣ್ಣ ಅಳಂಬುಗೊ!ಕೈ ಹಂದುಸುಲೆ ಮೊದಲೇ ಗೊಂತಿಲ್ಲೆ, ಗೇರುಕುಟ್ಟಿ ತಳ್ಪುತ್ತು.
ತಮ್ಮನ ಕಾರಿಲಿ ಕೂದಂಡು ದಾರಾಳ ಹೋಯಿದು ರೂಪತ್ತೆ, ಆದರೆ ಈ ಡ್ರೈವರ್ತಿಯ ಸೀಟಿಲಿ ಸುರೂ ಕೂಪದಿದಾ.
ಉಳುದ ಸೀಟುಗಳೇ ಆರಾಮವೋ ಹೇಳಿ ಅನಿಸಿತ್ತು!
~

ಬಂಙಲ್ಲಿ ಕೂದಂಡು ಸುತ್ತುಮುತ್ತ ನೋಡಿತ್ತು!
ರೂಪತ್ತೆಗೆ ಟ್ರೈನಿಂಗು ಕೊಡ್ತ ಉಮೇಶ°, ಡ್ರೈವರಿನ ಒತ್ತಕ್ಕೆ ಇರ್ತ ಮುಂದಾಣ ಸೀಟಿಲಿ ಕೂದುಗೊಂಡತ್ತು,
“ಅಕ್ಕ, ನಿಮ್ಮ ಎರಡೂ ಕೈಯಲ್ಲಿ ಶ್ಟೇರಿಂಗು ಹಿಡ್ಕೊಳಿ ಒಮ್ಮೆ! ಈಗ ಶ್ಟೇರಿಂಗು ಸರ್ತ ಉಂಟಲ್ಲ, ಈಗ ಚಕ್ರ ಸ ಸರ್ತ ಉಂಟು” – ಹೇಳಿತ್ತು ಉಮೇಶ°.
ಎರಡನ್ನುದೇ ಒಟ್ಟಿಂಗೆ ನೋಡ್ಳೆಡಿತ್ತಿಲ್ಲೆ ಇದಾ – ಒಂದರ ನೋಡಿರೆ ಇನ್ನೊಂದರ ನಂಬೆಕ್ಕಷ್ಟೆ, ಅಮ್ಮನ ನೋಡಿ ದೇವರ ನಂಬಿದ ಹಾಂಗೆ!
ಕಾರು ಬಿಡುವವ್ವು ದೇವರ ಹೇಂಗೂ ನಂಬುತ್ತವನ್ನೆ! 😉
ಸುರೂವಾಣ ದಿನ ಅಲ್ಲದೋ – ಕಾರಿನ ಒಳದಿಕಾಣದ್ದರ ವಿವರುಸುಲೆ ಸುರುಮಾಡಿತ್ತು ಉಮೇಶ°.
ಶ್ಟೇರಿಂಗಿನ ಆಚೊಡೆಲಿ ಸುಮಾರು ಮೀಟ್ರುಗೊ, ಮುಳ್ಳುಗೊ. ಸ್ಪೀಡಿಂಗೆ ಒಂದು, ಪೆಟ್ರೋಲಿಂಗೆ ಒಂದು, ಬೆಶಿ ತೋರುಸುಲೆ ಇನ್ನೊಂದು, – ಹಾಂಗೆ ನಮುನೆ ನಮುನೆದು!
ಇಲ್ಲಿಯ ಒರೆಂಗೆ ಎಷ್ಟು ಕಿಲೋಮೀಟ್ರಾಯಿದು ಹೇಳಿ ತೋರುಸುಲೆ ಒಂದು ಚೌಕುಳುಚೌಕುಳಿ ಸಂಖ್ಯೆಗೊ. ಐದುವರೆಸಾವಿರವೋ, ಐವತ್ತೈದು ಸಾವಿರವೋ – ಗೊಂತಿಲ್ಲೆ! ಹಳೇ ಕಾರು ಆದ ಕಾರಣ ಐವತ್ತೈದು ಆಯಿಕ್ಕು.
ಎಡತ್ತಿಂಗೆ ಕೇಸೆಟ್ಟು ಹಾಕುತ್ತ ಟೇಪ್ರೆಕಾರ್ಡು- ಅಲ್ಲಲ್ಲ ಸೀಡಿ ಪ್ಲೇಯರು. ಕೆಳ ಮೊಬೈಲು ಮಡಗಲೆ ಎರಡು ಸಣ್ಣ ಪೆಟ್ಟಿಗೆಗೊ, ರೂಪತ್ತೆ ಮೊಬೈಲು ವೇನಿಟಿ ಬೇಗಿಲಿ ಇದ್ದನ್ನೆ! ತೆಗದು ಇಲ್ಲಿ ಮಡಗುದು ಬೇಡ ಹೇಳಿ ಕಂಡತ್ತು.
ಮಾಡಿಲಿ ಒಂದು ಕನ್ನಾಟಿ ಸಿಕ್ಕುಸಿಗೊಂಡು – ಹಿಂದಂದ ಎಂತಾರು ಬತ್ತೋ ನೋಡ್ಳಡ, ಅಲ್ಲ ಹಿಂದೆ ಕೂದೋರ ನೋಡ್ಳೋ – ಉಮ್ಮ!
ಒಂದು ಸಣ್ಣ ಬೊಂಬೆ ಆ ಕನ್ನಟಿಗೆ ಸಿಕ್ಕುಸಿತ್ತಿದ್ದು. ಚೆಂದ ಇದ್ದದು – ಚೂರಿಬೈಲುದೀಪಕ್ಕ° ಮನೆಲಿ ಮಾಡ್ತ ನಮುನೆದು.
ತಲೆಮೇಲ್ಕಟೆ ಒಂದು ರೇಕು, ಹಳೇ ಕಾಗತ ಎಲ್ಲ ಮಡಗುತ್ತದು, ತಿರುಗುಸಿಗೊಂಡ್ರೆ ಬೆಶಿಲಿಂಗುದೇ ಆವುತ್ತಿದಾ!
ಟೇಪ್ರೆಕಾರ್ಡಿನ ಹತ್ರೆ ಎರಡು ಒಟ್ಟೆ ಇದ್ದು, ತಂಪುಗಾಳಿ ಬಪ್ಪಲೆಡ. ತಮ್ಮನ ಕಾರಿಲಿ ಗಾಳಿಬತ್ತು- ಇದರ್ಲಿ ಎಂತದೂ ಇಲ್ಲೆ – ದೂಳು ಹಿಡ್ಕೊಂಡು ಇದ್ದು, ಗಾಳಿ ಬಂದರೆ ಶೀತ ಸುರು ಅಕ್ಕು ರೂಪತ್ತೆಗೆ!
ಎದುರಾಣ ಹೊಡೆಲಿ ಕನ್ನಟಿ, ಎರಡು ಒಯಿಪರು(ವೈಪರ್) ಕೋಲು ಕುತ್ತಿಗೊಂಡು ಇತ್ತು.
ಗಂಟೆ ಹತ್ತಾದರೂ, ಕಾರು ಮಡಗಿದಲ್ಲಿಗೆ ಸಮಗಟ್ಟು ಬೆಶಿಲು ಬೀಳದ್ದೆ ಕನ್ನಟಿಲಿ ಮೈಂದಿನ ಹನಿ ಹಾಂಗೇ ಇತ್ತು! ಮೂಡ್ಳಾಗಿ ಹಾಂಗೇ ಅಲ್ಲದೋ!
ಎಡತ್ತಿಂಗೆ ಹೆರಾಂತಾಗಿ ಒಂದು ಕನ್ನಟಿ – ಬಾಗಿಲಿಂಗೆ ಸಿಕ್ಕುಸಿಗೊಂಡು, ನಮ್ಮ ಹಿಂದೆ ಹಾಕಿಯೊಂಡು ಯೇವದಾರು ಹೋವುತ್ತೋ ನೋಡ್ಳೆಡ.
– ರೂಪತ್ತೆ ಬಾರೀ ಚುರ್ಕು. ಇಷ್ಟೆಲ್ಲ ತಿಳ್ಕೊಂಬಲೆ ಹೆಚ್ಚಿರೆ ಐದು ನಿಮಿಶ ತೆಕ್ಕೊಂಡಿದು.
~

ನಿಮ್ಮ ಕಾಲಿನ ಹತ್ರ ಮೂರು ಐಟಮು ಉಂಟು, ಬಲಬದಿಯಲ್ಲಿ ಎಕ್ಸುಲೇಟ್ರು, ಮತ್ತೆ ಬ್ರೇಕು. ಎಡದಕಾಲು ಇರುವಲ್ಲಿ ಕ್ಲಚ್ಚು! – ಹೇಳಿತ್ತು ಉಮೇಶ°.
ಬಲದ ಕಾಲಿಂಗೆ ಎರಡು ಕಂಟ್ರೋಲು ಮಾಡ್ತ ಕೆಲಸ – ಒಂದು ಎಕ್ಸುಲೇಟ್ರು, ಪೆಟ್ರೋಲುತೂಂಬು ಹೆಚ್ಚುಕಮ್ಮಿ ಮಾಡ್ಳೆ, ಇನ್ನೊಂದು ಬ್ರೇಕು – ತಿರುಗುತ್ತ ಚಕ್ರವ ಹಿಡುದು ನಿಲ್ಲುಸುಲೆ.
ಒಂದೇ ಕಾಲಿಂಗೆ ಎರಡೆರಡು ಕೊಟ್ರೆ ಹೇಂಗಪ್ಪಾ – ಹೇಳಿ ಅನಿಸಿದರೂ, “ಅಪ್ಪನ್ನೇ! ಒಂದು ಬೇಕಪ್ಪಗ – ಇನ್ನೊಂದು ಬೇಕಾವುತ್ತಿಲ್ಲೆ!” ಹೇಳಿ ರೂಪತ್ತೆಗೆ ಪಕ್ಕನೆ ತಲಗೆಹೋತು! ದೀಪಂಗೆ ಆದರೆ ಇದು ಅಂದಾಜಿ ಆವುತಿತಿಲ್ಲೆ ಹೇಳಿ ಗ್ರೇಶಿ ರೂಪತ್ತೆಗೆ ಹೆಮ್ಮೆ ಅನಿಸಿತ್ತು.
ಎಡದ ಕಾಲಿಂಗೆ ಇಪ್ಪದು ಕ್ಲಚ್ಚು ಅಡ. ಗೇರುಬದಲುಸುವಗ ಒಳಾಣ ಚಕ್ರಂಗೊ ಒಂದಕ್ಕೊಂದು ಕಚ್ಚಿದ್ದರ ಬಿಡುಸುಲೆ ಇರ್ತದಡ ಈ ಕ್ಲಚ್ಚು!
ಪೆಟ್ರೋಲು ತೂಂಬು ದೊಡ್ಡಮಾಡಿದ ಹಾಂಗೆ ಇಂಜಿನು ಜೋರು ತಿರುಗುತ್ತಡ. ಆ ಇಂಜಿನಿನ ಚಕ್ರವ ಕಾರಿನ ಚಕ್ರಕ್ಕೆ ಸಿಕ್ಕುಸುದು ಈ ಕ್ಲಚ್ಚು ಅಡ.
ಕ್ಲಚ್ಚು ಪೂರ್ತಿ ತೊಳುದರೆ ಎಷ್ಟೇ ಎಕ್ಸುಲೇಟ್ರು ಒತ್ತಿರೂ ಕಾರು ಮುಂದೆ ಹೋಗ ಅಡ, ಎಂತಕೇಳಿರೆ ಇಂಜಿನು ತಿರುಗಿದ್ದು ಚಕ್ರಕ್ಕೆ ಎತ್ತುತ್ತಿಲ್ಲೆನ್ನೆ!
ಉಮೇಶ° ಒಳ್ಳೆ ಅರ್ತ ಅಪ್ಪ ಹಾಂಗೆ ಹೇಳಿಕೊಡ್ತು! 2500 ಕೊಟ್ಟದು ಮೋಸ ಇಲ್ಲೆ!

‘ಇದು ಗೇರು’ ಹೇಳಿತ್ತು, ಗೇರುಕುಟ್ಟಿಯ ತೋರುಸಿಗೊಂಡು. ಎಡದ ಕೈ ಅದರ ಮೇಲೆ ಮಡುಗಲೆ ಹೇಳಿತ್ತು.
ಗೇರಿನ ನೋಡುವಗ ಉಮೇಶನ ಕಾಲಿನ ಹತ್ರಾಣ ಎರಡು ಕುಟ್ಟಿ ಕಂಡತ್ತು. ಒಂದು ಸಣ್ಣ ಕಬ್ಬಿಣದ ಕೋಲಿಲಿ ರೂಪತ್ತೆ ಕಾಲಡಿಲಿ ಇರ್ತ ಐಟಮಿಂಗೆ ಸಿಕ್ಕುಸಿದ್ದು.
ಒಂದು ಕ್ಲಚ್ಚು, ಒಂದು ಬ್ರೇಕು ಹೇಳುದು ಕೂಡ್ಳೆ ಧೃಢಮಾಡಿಗೊಂಡತ್ತು.
ಕೆಳನೋಡಿಗೊಂಡು ಕೂದ ರೂಪತ್ತೆ ಗೇರಿನ ಮೇಲೆ ಕೈ ಮಡುಗದ್ದರ ಕಂಡು ಉಮೇಶ ಹೇಳಿತ್ತು ‘ಹ್ಮ್, ಬೇಗ ಕೈ ಇಡಿ ಅಕ್ಕ’ ಹೇಳಿ.
ಉಮೇಶ ಚೆಂದಹೇಳಿಕೊಡ್ತರೂ, ರಜ ಪಿಸುಂಟನೋ ಹೇಳಿ ಕನುಪ್ಯೂಸು ಬಂತು ರೂಪತ್ತೆಗೆ!
ಅದೇನೇ ಇರಳಿ, ಬೇಗ ಕಲ್ತುಗೊಳದ್ರೆ ಅರ್ದ ಗಂಟೆ ಮುಗಿವದು ಅದರದ್ದೇ – ಹೇಳಿ ಆತು.!
~

ಐದು ಗೇರಡ.
ಪಷ್ಟು,ಸೆಕೆಂಡು, ಥಾರ್ಡು, ಪೋರ್ತು, ಟೋಪು -ಹೇಳಿಗೊಂಡು. ಉಮೇಶಂಗೆ ಕಲಿವಿಕೆ ತುಂಬ ಆಯಿದಿಲ್ಲೆ ಹೇಳಿ ರೂಪತ್ತೆಗೆ ಅಂದಾಜಿ ಆತು.
ಸರಿಯಾದ ಇಂಗ್ಳೀಶು ಶಬ್ದ ರೂಪತ್ತೆಗೆ ಬತ್ತಕಾರಣ ಅದೆಂತರ ಹೇಳಿ ಗೊಂತಾತು.
ಪಷ್ಟುಗೇರಿಂಗೆ ಒಳ್ಳೆತ ಶಕ್ತಿ ಇದ್ದಡ, ಆದರೆ ಸ್ಪೀಡು ಇಲ್ಲೆ, ರೂಪತ್ತೆಯ ಮಗಳಅಪ್ಪನ ಹಾಂಗೆ – ಹೇಳಿ ಗ್ರೇಶಿಗೊಂಡತ್ತು.!
ಸೆಕೆಂಡು ಗೇರಿಂಗೆ ಪಷ್ಟುಗೇರಿನಷ್ಟು ಶಕ್ತಿ ಇಲ್ಲೆಡ, ಆದರೆ ಸ್ಪೀಡು ಹೋಪಲಕ್ಕಡ,
ಥಾರ್ಡುಗೇರಿಂಗೆ ಮೊದಲೆರಡ್ರಷ್ಟೂ ಶಕ್ತಿ ಇಲ್ಲೆ, ಆದರೆ ಮತ್ತಾಣ ಗೇರು ಹಾಕಲೆ ನೆಡುಕಾಣ ಸಂಕೊಲೆಯ ಹಾಂಗೆಡ, ನಾಲ್ಕನೇ ಗೇರಿಂಗೆ ಅಷ್ಟೆಂತ ಶಕ್ತಿ ಇಲ್ಲೆಡ, ಒಳ್ಳೆತ ಬೇಗ ಹೋಕು, ಐದನೇದಕ್ಕೆ ರಜ್ಜವುದೇ ಶಕ್ತಿ ಇಲ್ಲೆ, ಆದರೆ ಬಯಂಕರ ಬೇಗ ಹೋವುತ್ತಡ – ರೂಪತ್ತೆಯ ಹಾಂಗೆ!
ಮತ್ತೊಂದು ರಿವರ್ಸು, ಪೆದಂಬು ಹೋಪಲೆ ಇಪ್ಪದು. ಇದೆಲ್ಲದಕ್ಕೆ ಹೊರತಾಗಿ ಒಂದು ನ್ಯೂಟ್ರಲು ಅಡ, ತಟಸ್ಥವಾಗಿ ಕಾರಿನ ಮಾಡ್ತದು.
ಯಬ, ಒಂದು ಇಷ್ಟು ಸಣ್ಣ ಕೊದಂಟಿಲಿ ಇಡೀ ಕಾರು ಹೇಳಿದಂಗೆ ಕೇಳುದು – ಬಯಂಕರ ಹೇಳಿ ಅನುಸಿತ್ತು ರೂಪತ್ತೆಗೆ!
ಅಂತೂ ಮತ್ತೆ ಯೇವದೇ ಶಕ್ತಿ ಇಲ್ಲದ ನ್ಯೂಟ್ರಲುಗೇರು ಹಾಕಿ ಆತು, ಷ್ಟಾರ್ಟು ಮಾಡ್ಳೆ ಹೇಳಿತ್ತು.
~

ತಮ್ಮ ಕಾರಿನ ಸ್ಟಾರ್ಟು ಮಾಡ್ತದರ ಈ ರೂಪತ್ತೆಗೆ ಗೊಂತಿದ್ದು.
ಷ್ಟಯರಿಂಗಿನ ಕರೇಲಿ ಕೀ ಸಿಕ್ಕುಸಿಗೊಂಡು ಇತ್ತಲ್ದ, ಅದರ ತಿರುಗುಸಿದರೆ ಮುಗಾತು. ಹಾಂಗೇ ಮಾಡಿತ್ತು,
ಕಾರುದೇ, ಹೆದರಿಕೆದೇ – ಒಟ್ಟಿಂಗೆ ಶ್ಟಾರ್ಟಾತು!
ನ್ಯೂಟ್ರಲು ಹೇಳ್ತ ಬಲ್ಬು ಹೊತ್ತಿಗೊಂಡಿದ್ದದರ ತೋರುಸಿಗೊಂಡು, ನ್ಯೂಟ್ರಲಿಲಿ ಯೇವ ಗಾಡಿಯೂ ಹಂದುತ್ತಿಲ್ಲೆ. ಸೈಕ್ಕಲಿನ ಹಾಂಗೆ ಆಗಿರ್ತು. ಗೇರು ಹಾಕಿರೆ ಮಾಂತ್ರ ಇಂಜಿನಿನ ಕೆಲಸ ಉಪಯೋಗಕ್ಕೆ ಬಪ್ಪದು -ಹೇಳಿ ಮತ್ತೊಂದರಿ ವಿವರವಾಗಿ ಹೇಳಿಕೊಟ್ಟತ್ತು ಉಮೇಶ.
ಅಷ್ಟುಮಾಂತ್ರ ಅಲ್ಲದ್ದೆ – ಗೇರು ಬದಲುಸುವಗ ಕ್ಲಚ್ಚು ಹಿಡಿಯೇಕು, ಕ್ಲಚ್ಚು ಬಿಡುವಗ ಪೆಟ್ರೋಲುದೇ ಬಿಡೆಕು, ಪೆಟ್ರೋಲು ಬಿಡೆಕಾರೆ ಎಕ್ಸುಲೇಟ್ರು ಒತ್ತೆಕ್ಕು – ಹೇಳಿಯೂ ಹೇಳಿಕೊಟ್ಟತ್ತಡ. ಅಂತೂ ಕೈಲಿಪ್ಪ ಕಾರು ಹಂದುಸುವ ಮೊದಲೇ ಅದು ಹೇಂಗೆ ಕೆಲಸ ಮಾಡ್ತು ಹೇಳುದು ಗೊಂತಾಗಿತ್ತು.
ಉಮೇಶ° ಚೆಂದಕೆ ಹೇಳಿಕೊಡ್ತಪ್ಪ!
~

ಕ್ಲಚ್ಚು ಮೆಟ್ಟುಲೆ ಹೇಳಿದ್ದಲ್ದ, ಹಾಂಗೆ ಬಲಹಾಕಿ ಮೆಟ್ಟಿತ್ತು ರೂಪತ್ತೆ. ಕಾರೇ ಜಗ್ಗಿತ್ತೋ ಗ್ರೇಶುತ್ತಷ್ಟು ಗಟ್ಟಿಗೆ!
‘ಹ್ಮ್, ಈಗ ನ್ಯೂಟ್ರಲಿನಲ್ಲಿ ಉಂಟು, ಪಷ್ಟು ಗೇರು ಹಾಕುವ ಅಕ್ಕ’ ಹೇಳಿತ್ತು ಉಮೇಶ°, ಗೇರಿನ ಮೇಲೆ ಪುನಾ ಕೈ ಮಡಗಲೆ ಹೇಳಿತ್ತು.
ಸಣ್ಣ ಮಕ್ಕೊಗೆ ಅಕ್ಷರಾಭ್ಯಾಸ ಮಾಡುಸಿದ ಹಾಂಗೆ ಉಮೇಶ° ಗೇರು ಹಾಕುಲೆ ಹೇಳಿಕೊಟ್ಟತ್ತು. ಗೇರುಕುಟ್ಟಿ ಸಣ್ಣ ಒಂದು ಚಡಿಗೆ ಬಿದ್ದು, ಮತ್ತೆ ಪಷ್ಟು ಗೇರಿಂಗೆ ಬಿದ್ದದು ರೂಪತ್ತೆಗೆ ಅಂದಾಜಿ ಆತು. ಈಗ ಕ್ಲಚ್ಚು ಬಿಡೆಕ್ಕಲ್ದೋ?
ಒತ್ತಿ ಹಿಡುದ ಕಾಲಿನ ಮೇಗೆ ಮಾಡಿರೆ ಮುಗಾತು, ಹೊಲಿಗೆ ಮಿಶನಿಂದ ತೆಗದ ಹಾಂಗೆ!
ಮುಂದೆ ಹಿಂದೆ ಆರುದೇ ಬಂದೋಂಡಿತ್ತಿದ್ದವಿಲ್ಲೆ – ಕ್ಲಚ್ಚಿನ ಮೆಟ್ಟಿ ಹಿಡುದ ಪಾದವ ಮೇಲೆ ಎಳದತ್ತು, ಒಂದರಿಯೇ..!!

ಬೀಸಕ್ಕೆ ತಿರುಗಿಯೊಂಡು ಇದ್ದ ಇಂಜಿನಿನ ಚಕ್ರ ರಪಕ್ಕನೆ ಕಾರಿನ ಚಕ್ರಕ್ಕೆ ಸಂಪರ್ಕ ಆಗಿ, ಒಂದರಿಯೇ ಹಂದಿದ ಹಾಂಗಾತಿದಾ – ಇಡೀ ಕಾರಿನ ಆರೋ ಒಂದರಿಯೇ ಹಿಂದಂತಾಗಿ ಎಳದ ಹಾಂಗಾತು!
ಉಮೇಶಂಗೆ ಇದರ ಅಂದಾಜಿ ಇತ್ತೋ ಏನೋ- ಅದರ ಕಾಲಬುಡಲ್ಲಿ ಇದ್ದ ಕುಟ್ಟಿಯ ಒತ್ತಿ ಹಿಡುದತ್ತು, ಕಾರು ನಿಂದತ್ತು.
ಕಾರು ನಿಂದತ್ತು, ತಲೆಹತ್ರಾಣ ಕನ್ನಾಟಿಗೆ ನೇಲುಸಿದ ಗೊಂಬೆ ಶಬ್ದ ನಿಂದಿದಿಲ್ಲೆ. ಮುಟ್ಟಿರೆ ‘ಕೊಯಿಂಕ್’ ಹೇಳ್ತ ನಮುನೆ ಗೊಂಬೆ ಇದಾ!
‘ಕಾರು ಸೀತ ಮುಂದೆ ಹೋಗಿಯೇ ಬಿಟ್ಟತ್ತು’ ಗ್ರೇಶಿದ ರೂಪತ್ತೆಗೆ ದೊಡ್ಡ ನಿರಾಸೆ!
ಹಾಂಗೆ ಒಂದರಿಯೇ ಕ್ಲಚ್ಚು ಬಿಡ್ಳಾಗ, ನಿದಾನಕ್ಕೆ ರಜ ರಜವೇ ಸಂಪರ್ಕ ಅಪ್ಪ ಹಾಂಗೆ ಬಿಡೆಕ್ಕು ಹೇಳಿ ವಿವರುಸಿ ಹೇಳಿದ ಮತ್ತೆ ಮಾಡಿದ ತಪ್ಪೆಂತರ ಹೇಳಿ ಗೊಂತಾತು.
~
ಪುನಾ ಷ್ಟಾರ್ಟು ಮಾಡಿತ್ತು, ಕ್ಲಚ್ಚು ಮೆಟ್ಟಿತ್ತು, ಗೇರು ಹಾಕಿತ್ತು, ಮೆಲ್ಲಂಗೆ ಬಿಟ್ಟತ್ತು.
ಕಾರಿನ ಎದುರು, ಹಿಂದೆ ಆರುದೇ ಬತ್ತಾ ಇಲ್ಲೆ, ಕಾರು ರಜ್ಜ ಗಡಗಡ ಹೇಳಿ ಮೆಲ್ಲಂಗೆ ಹಂದಿತ್ತು.
ಕಾರು ರಜರಜ ಮುಂದೆ ಹೋಗಿಯೋಂಡು ಇದ್ದು. ಷ್ಟಯರಿಂಗು ಸರ್ತ ಇದ್ದು, ಉಮೇಶಂದೇ ಹಿಡ್ಕೊಂಡಿದು!
ಕ್ಲಚ್ಚುದೇ ರಜ ಮೆಟ್ಟಿದ್ದೋ ಸಂಶಯ- ಅದರ ಹತ್ರುದೇ ಇದ್ದನ್ನೆ.

ಅದಕ್ಕೆ ಎಕ್ಕದ್ದು ಎಕ್ಸುಲೇಟ್ರು ಮಾಂತ್ರ!
’ಹ್ಮ್, ಈಗ ಎಕ್ಸುಲೇಟ್ರು ನಿದಾನಕ್ಕೆ ಒತ್ತಿ’ – ಹೇಳಿತ್ತು ಉಮೇಶ.
ಎಕ್ಸುಲೇಟ್ರು – ಬಲದ ಕರೇಣದ್ದು, ಇಂಜಿನಿಂಗೆ ಹೋವುತ್ತ ಪೆಟ್ರೋಲು ಕಂಟ್ರೋಲು – ಅದರ ಒತ್ತೆಕ್ಕಡ, ಹೇಳಿ ಗ್ರೇಶಿಯೊಂಡೇ ಕಾಲು ಅದರ ಮೇಲೆ ಮಡಗಿತ್ತು ರೂಪತ್ತೆ.
ಮೊನ್ನೆ ಪುತ್ತೂರಿಂಗೆ ಹೋದಿಪ್ಪಗ ಬಷ್ಟೇಂಡುಹತ್ರಾಣ ಮಾಪಳೆ ಅಂಗುಡಿಂದ ತೆಗದ ದಪ್ಪದಚೆರ್ಪು (ಚಪ್ಪಲಿ), ಎಷ್ಟು ದಪ್ಪ ಇದ್ದು ಹೇಳಿ ಅಂದಾಜಿ ಆವುತ್ತಿಲ್ಲೆ ಇದಾ, ಪಕ್ಕನೆ ಸಮಕ್ಕೆ ಮೆಟ್ಟಿ ಹೋತು ಎಕ್ಸುಲೇಟ್ರಿನ…!
ಇಡೀ ಕಾರಿನ ಒಂದರಿ ಗುಂಡಿಗೆ ನೂಕಿಹಾಕಿದ ಹಾಂಗೆ ಮುಂದಂಗೆ ಹೋತು!
ಚೆ, ಕಾರು ನಿಂದತ್ತು – ಎರಡ್ಣೇ ಸರ್ತಿ!
~
ಕೂಗುಲೇ ಬಂತು ಈ ರೂಪತ್ತೆಗೆ.
ತಮ್ಮ ಕಾರು ಬಿಡುವಗ ಒಳ್ಳೆ -ಬೆಣ್ಣೆ ಜಾರಿದ ಹಾಂಗೆ ಮುಂದೆ ಹೋವುತ್ತು, ಈಗ ಎಂತಕೆ ಹೀಂಗೆ ಆವುತ್ತಾ ಇದ್ದು ಹೇಳಿಯೇ ಅಂದಾಜಿ ಆಗ!!
ಪೆಟ್ರೋಲುತೂಂಬು ಒಂದರಿಯೇ ಬಿಟ್ಟದಲ್ದೋ – ಉಮೇಶಂಗೆ ಇದರದ್ದುದೇ ಅಂದಾಜಿ ಇತ್ತೋ ಹೇಳಿ ಕಾಣ್ತು, – ಎಲ್ಲೊರುದೇ ಆ ತಪ್ಪು ಮಾಡ್ತವೋ ಏನೋ, ದೀಪ° ಆದರೂ ಹೀಂಗೇ ಮಾಡ್ತಿತಷ್ಟೇ ಗ್ರೇಶಿತ್ತು. ಅದರ ಹತ್ರೆ ಇದ್ದ ಕ್ಲಚ್ಚನ್ನೋ – ಬ್ರೇಕನ್ನೋ ಎಂತದೋ ಒತ್ತಿ ಕಾರಿನ ನಿಲ್ಲುಸಿತ್ತು.
ಜೋಡು ಹಾಕಿದ ಕಾರಣ ಗೊಂತಾಯಿದಿಲ್ಲೆ ಹೇಳ್ತದು ಇದರ ಪಿರಿ! ಗೊಂತಾತು ರೂಪತ್ತೆಗೆ – ರಪಕ್ಕ ತೆಗದು ಕರೆಲಿ ಮಡಗಿತ್ತು ಆ ಹೊಸಾ ಜೋಡಿನ!
~

ಇನ್ನೊಂದರಿ ಹಾಂಗೇ ವೆವಸ್ಥೆ ಮಾಡುಸಿತ್ತು ಉಮೇಶ.
ಷ್ಟಾರ್ಟು, ಕ್ಲಚ್ಚು, ಪಷ್ಟುಗೇರು, ಕ್ಲಚ್ಚು ಬಿಡ್ತದು, ಮತ್ತೆ ಮುಂದೆ ಹೋದ ಮತ್ತೆ ಎಕ್ಸುಲೇಟ್ರು!!
ವಾವ್… ಈ ಸರ್ತಿ ಸರೀ ಆತು…!
ಅದಾ.. ಮುಂದೆ ಮುಂದೆ ಹೋವುತ್ತಾ ಇದ್ದು ಕಾರು.
ದೊಡಾ ಕಡವಕಲ್ಲು ಹಂದುಸಿದಷ್ಟು ಕುಶಿ ಆತು ರೂಪತ್ತೆಗೆ!
~

ಈ ಸರ್ತಿ ಬರಿಕಾಲಿಲಿ ಆದ ಕಾರಣ ಎಕ್ಸುಲೇಟ್ರಿನ ನಿದಾನಕ್ಕೆ ಒತ್ತುಲೆ ಗೊಂತಾತು. ಕ್ಲಚ್ಚನ್ನುದೇ ಅದೇ ನಮುನೆಲಿ ಒತ್ತಿತ್ತು.
ಒಂದೆರಡು ಸರ್ತಿ ಗೇರು ಹಾಕುಸಿತ್ತು, ನ್ಯೂಟ್ರಲಿಂದ ಒಂದು, ಒಂದರಿಂದ ನ್ಯೂಟ್ರಲು!
ಅಲ್ಲಿಂದ ಮತ್ತೆ ಯೇವತ್ತುದೇ ಆ ತಪ್ಪು ಮಾಡಿದ್ದಿಲ್ಲೆ ರೂಪತ್ತೆ. ಮನಸು ಮಡೂಗಿ ಕಲ್ತರೆ ಬೇಗ ಸರಿ ಬತ್ತು, ಅಲ್ದಾ?

ಕಾರು ಮುಂದೆ ಹೋಗಿಯೇ ಹೋತು.
ಸುಮಾರು ದೂರ ಹೋಗಿ ತಿರುಗುಸಿಕ್ಕಿ ಒಪಾಸು ಕಾರಿನ ನಿಲ್ಲುಸಿದಲ್ಲಿಗೆ ಬಂತು. ಬ್ರೇಕು ಒತ್ತಿ ನಿಲ್ಲುಸಿತ್ತು!
ಅಲ್ಲಿಗೆ ಅಂದ್ರಾಣ ಕ್ಲಾಸು ಮುಗಾತು!
ಆ ದಿನ ಸುಮಾರೆಲ್ಲ ಕಲ್ತತ್ತು.
~

ಕುಶೀಲಿ ಅಲ್ಲಿಂದ ಹೆರಟತ್ತು. ಕಾರು ಕಲ್ತು ಆತು. ಇನ್ನೆಂತ ಇದ್ದು?
ಷ್ಟಯರಿಂಗು ಹಿಡಿವದು ಗೊಂತಾತು. ಕ್ಲಚ್ಚು ಒತ್ತುದು ಗೊಂತಾತು. ಬ್ರೇಕು ಒತ್ತುಲುದೇ ಗೊಂತಾತು.
ರಜ ಅಭ್ಯಾಸ ಆದರೆ ಆತು, ಅಷ್ಟೇ ಅಲ್ದೋ, ದೊಡ್ಡ ಸಂಗತಿಯೇ ಅಲ್ಲ!
ಇಂದು ಮಗ ಪೋನು ಮಾಡಿಪ್ಪಗ ಹೇಳೆಕ್ಕು, ಇಷ್ಟು ಕಾರು ಬಿಟ್ಟೆ ಮಗಾ° – ಹೇಳಿ.
ದೀಪಂಗೂ ಪೋನು ಮಾಡೆಕ್ಕು. ಮಾಲತ್ತಿಗೆಗೆ ಈಗ ಬೇಡ,ರಜ ಕಳಿಯಲಿ.
ಅಲ್ಲದ್ರೆ ಅದುದೇ ಬಂದು ಸೇರುಗು. ಎನ್ನ ಕ್ಲಾಸು ಮುಗುದ ಕೂಡ್ಳೆ ಮಗಳಿಂಗೂ ಕಲಿಶೆಕ್ಕು – ಮತ್ತೆ ಬೇಕಾರೆ ಮಾಲತ್ತಿಗೆ ಕಲಿಯಲಿ – ಎಂತೆಂತದೋ ಯೋಚನೆಗೊ!!

ಇಂದು ಪಷ್ಟುಗೇರು ಕಲ್ತಾತು.
ನಾಳೆ ಸೆಕೆಂಡು ಗೇರು, ನಾಳ್ತು ಮೂರ್ನೇದು, ಆಚನಾಳ್ತು ನಾಲ್ಕನೇದು.
ಮತ್ತೊಂದು ದಿನಲ್ಲಿ ಐದನೇದುದೇ ಅಬ್ಯಾಸ ಅಕ್ಕಲ್ದ!
ಐದೇ ದಿನಲ್ಲಿ ಕಲ್ತರೆ ಎಷ್ಟೊಳ್ಳೆದು – ಮಾಲಂಗೆ ಎಡಿಯ ಅಷ್ಟು ಪಕ್ಕ ಕಲಿವಲೆ!
ಮನೆಯ ಹೊಡೆಂಗೆ ಹೋವುತ್ತ ಬಸ್ಸು ಸಿಕ್ಕಿತ್ತು, ಹತ್ತಿ ಕೂದತ್ತು. ಬಷ್ಟೇಂಡಿನೊಳಂದ ಬಸ್ಸು ಹಿಂದಂತಾಗಿ ತಿರುಗುಸಿಕ್ಕಿ ಹೆರಡುದಲ್ದ, ಅಷ್ಟಪ್ಪಗ ನೆಂಪಾತು – ಓಹ್, ಐದಲ್ಲ, ಆರು ದಿನ ಬೇಕಕ್ಕು, ರಿವರ್ಸು ಗೇರು ಒಂದು ನೆಂಪೇ ಆಯಿದಿಲ್ಲೆ ಆಗ! ಹೇಳಿಗೊಂಡು!!
~

ಮರದಿನವೂ ಬಂತು, ಕಾರಿಲಿ ಕೂದತ್ತು, ನಿನ್ನೇಣಷ್ಟು ಹೆದರಿಕೆ ಇಲ್ಲೆ.

ರೂಪತ್ತೆಗೆ ಮಗ ತೆಗದುಕೊಟ್ಟ ಕಾರು...!
ರೂಪತ್ತೆಗೆ ಮಗ ತೆಗದುಕೊಟ್ಟ ಕಾರು - ಆಚಕರೆಮಾಣಿಯ ಕೆಮರಲ್ಲಿ ಒಳಾಂದ ಪಟತೆಗದ್ದು!

ಶ್ಟಾರ್ಟು ಮಾಡಿತ್ತು, ಉಮೇಶನೂ ಹಿಡ್ಕೋಂಡು ಗೇರು ಹಾಕಿ ಮುಂದೆ ತೆಕ್ಕೊಂಡು ಹೋತು!
ಇನ್ನು ಸೆಕೆಂಡು ಗೇರು ಹಾಕುದು ಹೇಳಿ ಗ್ರೇಶಿಗೊಂಡು ಇತ್ತು – ಏಯ್, ಇಲ್ಲೆ!
ಕ್ಲಾಸಿಡೀ ಪಷ್ಟು ಗೇರೇ ಇದ್ದದು – ಬದಲುಸಿದ್ದೇ ಇಲ್ಲೆ.
ಇಳಿವಲಪ್ಪಗ, ವೇನಿಟಿಬೇಗಿಂದ ಮೊಬೈಲು ಹುಡ್ಕಿಯೋಂಡು ಕೇಳಿತ್ತಡ ರೂಪತ್ತೆ – ಇವತ್ತು ಏನು ಸೆಕೆಂಡು ಗೇರು ಹಾಕ್ಲಿಲ್ಲ! – ಹೇಳಿ.
ಪಷ್ಟುಗೇರಿಲಿ ಸರೀ ಅಬ್ಯಾಸ ಆದ ಮತ್ತೆ ಅಡ, ಮುಂದಾಣದ್ದು ಹಾಕುದು!
ಓ! ಹದಿನೈದು ದಿನ ಬೇಕಾವುತ್ತು ಹೀಂಗೇ ಕಲ್ತರೆ- ಹೇಳಿಗೊಂಡು ಅಷ್ಟಪ್ಪಗ ಗೊಂತಾತಡ.
~

ಮುಂದಾಣ ಒಂದೆರಡು ದಿನಲ್ಲಿ ರೂಪತ್ತಗೇ ಕಾರಿನ ಷ್ಟಾರ್ಟುಮಾಡಿ ಮುಂದೆ ತೆಕ್ಕೊಂಡು ಹೋಪಷ್ಟು ಗೊಂತಾತು.
ಮತ್ತೆರಡು ದಿನಲ್ಲಿ ಮೆಲ್ಲಂಗೆ ತಿರುಗುಸುತ್ತದು ಅರಡಿಗಾತು, ಸೊಂತಲ್ಲೇ. ಮೆಲ್ಲಂಗೆ ಎರಡು, ಮೂರ್ನೇ ಗೇರು ಹಾಕಲೂ ಗೊಂತಾತು.
ಕ್ಲಾಸು ಸಾಗಿಯೋಂಡೇ ಇತ್ತು.
ಪ್ರತಿದಿನ ಉದಿಯಪ್ಪಗ ತಟ್ ಅಂತ ಹೇಳಿ ನೋಡಿಕ್ಕಿ ಪಂಜಕ್ಕೆ ಹೋಪದು, ಕ್ಲಾಸು ಮುಗುಶಿಕ್ಕಿ ಮನೆಗೆ ಬಪ್ಪದು, ಬಂದಿಕ್ಕಿ ಗೆಳತಿ ನೋಡುದು. ಮತ್ತೆ ಉಂಡಿಕ್ಕಿ ಒರಗುದು.
ಇದು ರೂಪತ್ತೆಯ ಹಗಲೊತ್ತಿನ ದಿನಚರಿ ಆಗಿ ಬಿಟ್ಟತ್ತು.
ಇರುಳು ಅಂತೂ ಆ ದಿನ ಆದ ಶುದ್ದಿಯ ದೀಪಕ್ಕಂಗುದೇ, ಮಗಂಗುದೇ ಹೇಳುಲಿದ್ದನ್ನೆ!
~
ಕೊನೆಕೊನೆಯ ಹಂತ ಬಂತು.
ಮುಂದೆ ಹೋಪದು, ಎಡತ್ತಿಂಗೆ ತಿರುಗುಸುದು, ಚಡವಿಲಿ ನಿಲ್ಲುಸುದು, ಜರ್ಕಿಲಿ ಶ್ಟಾರ್ಟು ಮಾಡುದು, ಡೀಕ್ಲಚ್ಚು ಮಾಡದು – ಸಾಮಾನ್ಯದ್ದು ಎಲ್ಲವನ್ನುದೇ ಕಲ್ತುಗೊಂಡಿದು ನಮ್ಮ ರೂಪತ್ತೆ. ಹನ್ನೆರೆಡು ದಿನಲ್ಲಿ ಇಷ್ಟೆಲ್ಲ ಕಲ್ತ ಅತ್ತೆಗೆ, ಹದಿಮೂರ್ನೇ ದಿನಲ್ಲಿ ರಿವರ್ಸು ಗೇರು ಕಲಿತ್ತ ಭಾಗ್ಯ.

ಸೀಟಿಲೇ ಕೂದಂಡು, ಎದುರಂತಾಗಿ ಕೂದಂಡು, ಹಿಂದೆ ಮೋರೆ ಹಾಕಿ, ಕಾರು ಹೇಂಗೆ ಹೋವುತ್ತು ಹೇಳಿ ಗೋಷ್ಟಿ ಮಾಡಿಗೊಂಡು ತಿರುಗುಸುದು ಒಳ್ಳೆ ಅನುಬವ ಕೊಟ್ಟತ್ತು ರೂಪತ್ತೆಗೆ. ರಿವರ್ಸಿಂಗೆ ಕಾರು ಯೇವತ್ತಿನ ಹಾಂಗೆ ಅಲ್ಲ, ಷ್ಟಯರಿಂಗಿನ ಎಡತ್ತಿಂಗೆ ತಿರುಗುಸಿರೆ ಕಾರು ಬಲತ್ತಿಂಗೆ ತಿರುಗುತ್ತು – ಅದು ಎಂತಕೆ ಹಾಂಗೆ ಹೇಳಿ ಉಮೇಶ ಬಿಡುಸಿ ಹೇಳಿದ ಮತ್ತೆ ಅರ್ತ ಆತು.
~

ಕಾರು ಕಲಿಯೆಕ್ಕು ಹೇಳ್ತ ಆಶೆ ನಿಜವಾಗಿಯೂ ಇದ್ದ ಕಾರಣ ಮನಸ್ಸು ಮಡಗಿ ಕಲ್ತಿದು ಈ ರೂಪತ್ತೆ.
ಕಲ್ತುಗೊಂಡು ಹೋದ ಹಾಂಗೇ ಕಲಿವಲೆ ಇನ್ನೂ ತುಂಬ ಇದ್ದು ಹೇಳಿ ಅನುಸುಲೆ ಸುರು ಆತು.
ದೊಡ್ಡಮಾರ್ಗಲ್ಲಿ ಹೋವುತ್ತ ಎಷ್ಟೋ ವಾಹನಂಗಳಲ್ಲಿ ಸಣ್ಣ ಜಂತು ತನ್ನ ಕಾರು ಹೇಳಿಯೂ ಮನನ ಅಪ್ಪಲೆ ಸುರು ಆತು.
ತನ್ನಂದ ಮದಲೇ ಕಾರು ಕಲ್ತವು ಸುಮಾರು ಜೆನ ಇದ್ದವಲ್ದ, ಅವರ ಪ್ರತಿಭೆ ಎಂತರ ಹೇಳಿ ಈಗ ಅರ್ತ ಅಪ್ಪಲೆ ಸುರು ಆತು.
ಬಸ್ಸಿನ ಡ್ರೈವರ°, ಕಾರಿನ ಡ್ರವರಕ್ಕೊ ಎಲ್ಲವುದೇ ರೂಪತ್ತೆಗೆ ತುಂಬ ಹಿರಿಯರ ಹಾಂಗೆ ಕಾಂಬಲೆ ಸುರು ಆತು.
ಕುಂಞಿಹಿತ್ಲು ಅಜ್ಜ ಮದಲಿಂಗೇ ಕಾರು ಬಿಟ್ಟುಗೊಂಡು ಇತ್ತಿದ್ದವಡ, ಅವೆಷ್ಟು ಹಿರಿಯರಾಗಿರೆಡ ಅಂಬಗ – ಹೇಳಿ ಅನಿಸಿತ್ತು ಈ ರೂಪತ್ತಗೆ!
~

ಈಗ ರೂಪತ್ತೆಗೆ ಸರೀ ಕಾರು ಅಬ್ಯಾಸ ಆತು.
ಒಂದು ದಿನ ಕಾರಿಲೇ ಸುಳ್ಯಕ್ಕೆ ಹೋಗಿ, ಆ ಆಪೀಸರನ ಮುಂದೆ ಷ್ಟಾರ್ಟು ಮಾಡಿ ತೋರುಸಿತ್ತು.
ಉಮೇಶ ಕೂರ್ತ ಜಾಗೆಲಿ ಆಪೀಸರ ಕೂದಂಡತ್ತು. “ಹ್ಮ್, ಗೇರು ಹೊಡೀರಿ ಅಮ್ಮ” – ಹೇಳಿತ್ತು ದರ್ಪಲ್ಲಿ.

ಪಂಜಂದ ಒಳಾಣ ಸರ್ತ ಮಾರ್ಗ - ರೂಪತ್ತೆ ಸರಾಗ ಬಿಟ್ಟೊಂಡು ಹೋವುತ್ತು..!
ಪಂಜಂದ ಒಳಾಣ ಮಾರ್ಗಂಗಳಲ್ಲಿ ರೂಪತ್ತೆ ಸರಾಗ ಬಿಟ್ಟೋಂಡು ಹೋವುತ್ತು ಈಗ!

ರೂಪತ್ತೆಗೆ ಹೆದರಿ ಕ್ಲಚ್ಚು ಯೇವದು, ಷ್ಟೇರಿಂಗು ಯೇವದು ಹೇಲಿ ಕನುಪ್ಯೂಸು ಬಂದು ಕಾರು ನಿಂದತ್ತು.
ಉಮೇಶ ಹಿಂದಾಣ ಸೀಟಿಲಿ ಕೂದಂಡು ಸಮಾದಾನ ಮಾಡಿದ್ದರಿಂದ ಕಾರು ಮೆಲ್ಲಂಗೆ ಹಂದಿತ್ತು.
ಒಂದು – ಎರಡು – ಮೂರು – ನಾಕು ಗೇರುಗಳುದೇ ಹಾಕುಸಿಕ್ಕಿ, ಮೆಲ್ಲಂಗೆ ನಿಲ್ಲುಸಿಕ್ಕಿ ರಿವರ್ಸು ಗೇರು ಹಾಕಿಕ್ಕಿ ಒಂದು ಕರೇಲಿ ನಿಲ್ಲುಸಿತ್ತು.
ರೂಪತ್ತೆಗೆ ಡೀಯಲ್ಲು (ಲೈಸೆನ್ಸು) ಸಿಕ್ಕಿಯೇ ಬಿಟ್ಟತ್ತು. ಎಲ್ಲೊರ ಹಾಂಗೆ ಅದುದೇ ಕಾರು ಬಿಡ್ಳಕ್ಕು ಇನ್ನು . ಪಂಜದ ಒರಿಂಕಿಗಳಲ್ಲಿ ಮಾಂತ್ರ ಅಲ್ಲ, ದೊಡ್ಡಮಾರ್ಗಂಗಳಲ್ಲಿದೇ.
ಈಗೀಗ ರೂಪತ್ತೆ ಬಿಡುವಗಳೂ ಬೆಣ್ಣೆ ಜಾರಿದ ಹಾಂಗೆ ಆವುತ್ತು – ಓ ಮೊನ್ನೆ ಒಂದರಿ ಮಾಂತ್ರ ಬರಣಿ ಜಾರಿದ ಹಾಂಗೆ ಆದ್ದಷ್ಟೆ!

ಆಷ್ಟ್ರೇಲಿಯಲ್ಲಿ ಕಾರುಬಿಡ್ತ ಮಗನ ಅಮ್ಮ ಆಗಿ ಹುಟ್ಟಿದ್ದು ಸಾರ್ಥಕ ಹೇಳಿ ಅನುಸಿ ಹೋತು ರೂಪತ್ತೆಗೆ.
ಪ್ರತೀ ದಿನ ಕಲ್ತದರ ದೀಪಕ್ಕಂಗೆ ತಿಳುಸಿ ತಿಳುಸಿ, ದೀಪಕ್ಕಂಗೆ ಮನೆಲೇ ಕೂದಂಡು ಕಾರು ಕಲ್ತ ಗುಣ ಆಯಿದಡ, ಅಜ್ಜಕಾನ ಬಾವ° ನೆಗೆಮಾಡುಗು ಒಂದೊಂದರಿ.
ರೂಪತ್ತೆ ಕಲ್ತಾದ ಮತ್ತೆ ಅದರ ಮಗಳು ಕಲ್ತತ್ತು. ಇನ್ನು ಬೇಕಾರೆ ಮಾಲಚಿಕ್ಕಮ್ಮಂಗೆ ಗೊಂತಾಗಲಿ ಹೇಳಿಗೊಂಡು – ಕಳುದ ಪರಿಶತ್ತಿನ ಮೀಟಿಂಗಿಲಿ ಹೇಳಿಯೂ ಆತು.
~
ಓ ಮೊನ್ನೆ ರೂಪತ್ತೆಯ ಮಗ° ಬಂದಿತ್ತಿದ್ದ°.
ರೂಪತ್ತೆಗೆ ಬೇಕಾದ ಮೋಡೆಲು, ಬಣ್ಣ – ಎಲ್ಲ ಹುಡ್ಕಿ ಒಂದು ಕಾರು ತೆಗದು ಕೊಟ್ಟಿಕ್ಕಿ ಅವ° ಹೋದ°.

ಈಗ ಅತ್ತೆ ಒಂದೇ ಪಂಜಕ್ಕೆ ಹೋಗಿ ಬತ್ತು, ಒಬ್ಬನೇ ಪುತ್ತೂರಿಂಗೂ ಹೋವುತ್ತು.
ಮೊನ್ನೆ ಸುಬ್ರಮಣ್ಯದ ಷಷ್ಠಿಗೂ ಇದೇ ರೂಪತ್ತೆಯ ಕಾರಿಲಿ ಹೋದ್ದಡ.
ಒಟ್ಟಿಂಗೆ ಬಂದ ಗೆಂಡ° – ರೂಪತ್ತೆ ಕಾರು ಬಿಡುದರ ನೋಡದ್ದೆ, ಹಿಂದೆ ಕೂದಂಡು ಒರಗಿದ್ದಕ್ಕೆ ಸಮಾ ಬೈದ್ದಡ – ಸುಬ್ರಮಣ್ಯದ ಸ್ಕಂದದ ಎದುರು, ಅಜ್ಜಕಾನ ಬಾವ ಹೇಳಿದ್ದು.

ಅಜ್ಜಕಾನ ಬಾವಂಗೆ ಈ ರೂಪತ್ತೆ ಸಿಕ್ಕಿಪ್ಪಗ ಹೇಳಿದ್ದಡ ಕೆಲವೆಲ್ಲ ಕಾರು ಕಲ್ತ ವಿಶಯಂಗೊ.
ಒಪ್ಪಣ್ಣಂಗೆ ಇಷ್ಟೂ ವಿವವಾಗಿ ಅವ° ಹೇಳಿಯೇ ಗೊಂತು.
ಅವಂಗೆ ಅಂತೂ ಈ ಶುದ್ದಿ ಪೂರ್ತಿ ಬಾಯಿಪಾಟ ಬತ್ತೋ ಕಾಣ್ತು!

ಒಂದೊಪ್ಪ: ರೂಪತ್ತೆ ಕಲ್ತ ಕಾರಿಂಗೆ ಬ್ರೇಕು ಇತ್ತು. ಆದರೆ ರೂಪತ್ತೆಯ ಶುದ್ದಿಗೆ ಬ್ರೇಕೇ ಇಲ್ಲೆ!!

ಸೂ: ಕಳುದ ಸುಮಾರು ವಾರಂದ ಎಂತಾರು ಗಟ್ಟಿಗಟ್ಟಿ ಶುದ್ದಿ ಹೇಳಿದ್ದಕ್ಕೆ ಕಳಾಯಿ ಅತ್ತೆ ಹೇಳಿತ್ತು, ‘ಯಬೋ ಹೀಂಗಿರ್ತ ಶುದ್ದಿ ಕೇಳುಲೆ ಉದಾಸ್ನ ಆವುತ್ತು ರೂಪತ್ತೆಯ ಶುದ್ದಿ ಹೇಳು – ಕೇಳ್ತೆ’, ಹೇಳಿಗೊಂಡು. ಕಳಾಯಿ ಅತ್ತೆಯ ಹಾಂಗಿರ್ತವಕ್ಕೆ – ಈ ವಾರ ಕೇವಲ ನೆಗೆಗಾಗಿ ಈ ರೂಪತ್ತೆಯ ಶುದ್ದಿ!

ವಿ.ಸೂ: ನಿಜ ಜೀವನದ ರೂಪತ್ತೆಯೂ, ಒಪ್ಪಣ್ಣನ ಬೈಲಿನ ರೂಪತ್ತೆಯೂ ಬೇರೆ ಬೇರೆ. ಅವಕ್ಕೆ ಇಬ್ರಿಂಗೆ ಯೇವ ಸಂಬಂಧವೂ ಇಲ್ಲೆ!! 😉

ರೂಪತ್ತೆ ಕಾರು ಕಲ್ತ ಶುದ್ದಿ..!!, 5.0 out of 10 based on 22 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವಜಯಶ್ರೀ ನೀರಮೂಲೆಜಯಗೌರಿ ಅಕ್ಕ°ಪವನಜಮಾವಚುಬ್ಬಣ್ಣಮಾಲಕ್ಕ°ಒಪ್ಪಕ್ಕಕಜೆವಸಂತ°ಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಶರ್ಮಪ್ಪಚ್ಚಿವಸಂತರಾಜ್ ಹಳೆಮನೆಅಜ್ಜಕಾನ ಭಾವಕಾವಿನಮೂಲೆ ಮಾಣಿಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ವಿದ್ವಾನಣ್ಣಬೋಸ ಬಾವಕೇಜಿಮಾವ°ಪುತ್ತೂರುಬಾವಪೆಂಗಣ್ಣ°ಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ