ರೂಪತ್ತೆಗೆ ತುಂ…ಬಾ ಬೇಜಾರಾಯಿದಡ.. ;-(

ಅಪ್ಪು, ಬೈಲಿಲಿ ಸುಮಾರು ಸಮಯ ಆತು, ಕುಶಿಯ ಶುದ್ದಿಯನ್ನೇ ಮಾತಾಡ್ತದು.
ನಾವು ಮಾತಾಡಿರೂ, ಎಲ್ಲೋರುದೇ ಕೊಶಿಲಿದ್ದವು ಹೇಳಿ ಲೆಕ್ಕ ಅಲ್ಲ; ಪ್ರಪಂಚಲ್ಲಿ ಬೇರೆಬೇರೆ ನಮುನೆ ಮನಸ್ಥಿತಿಯೋರು ಇದ್ದವಿದಾ.
ಭಗವದ್ಗೀತೆಲಿ ಹೇಳಿದ ನಮುನೆ – ವೀತ ರಾಗ ಭಯ ಕ್ರೋಧ  ಬಿಟ್ಟು ಸ್ಥಿತಪ್ರಜ್ಞ° ಆಗಿಪ್ಪಲೆ – ಎಲ್ಲರಿಂದಲೂ ಎಡಿಗೋ? 🙂
ಒಬ್ಬ° ಕೊಶಿಲಿದ್ದರೆ ಇನ್ನೊಬ್ಬ° ಬೇಜಾರಲ್ಲಿಕ್ಕು, ಮತ್ತೊಬ್ಬ ಹಾಂಕಾರಲ್ಲಿಕ್ಕು.
ಉದಾಹರಣೆಗೆ, ಚೆನ್ನೈಭಾವ ಬಟಾಟೆಸೋಂಟೆಮಾಡಿ ಹೊಟ್ಟೆತುಂಬ ತಿಂದು ‘ಇದೆಂತರ’ ಕೇಳಿಗೊಂಡಿದ್ದರೆ, ಹಜಾರೆಅಣ್ಣ ಉಪವಾಸ ಮಾಡಿ ಹಶುಹೊಟ್ಟೆಲಿ ‘ಇನ್ನೆಂತರ’ ಕೇಳಿಗೊಂಡಿಕ್ಕು!!
ವಿದ್ವಾನಣ್ಣನ ಕೈಲಿ ಕೇಳಿರೆ, ಲೋಕೋ ಭಿನ್ನರುಚಿಃ – ಹೇಳುಗು.
ಅದಿರಳಿ.
~

ಸುಮಾರು ಸಮೆಯ ಆತು ರೂಪತ್ತೆಯ ಶುದ್ದಿ ಸಮಗಟ್ಟು ಮಾತಾಡದ್ದೆ; ಬೈಲಿನ ಕೆಲವು ಜೆನಕ್ಕೆ ಅದರ ಮರದೇ ಹೋಯಿದೋ ಏನೋ!
ಮೂಲ ಪುತ್ತೂರು ಇದ್ದೊಂಡು ಸದ್ಯ ಪಂಜಲ್ಲಿ ಇದ್ದವು. ದೊಡಾ ಜಾಗೆ, ದೊಡ್ಡ ಮನೆ.
ಜಾಗೆ ಕೆಲಸಕ್ಕೆ ಧಾರಾಳ ಆಳುಗೊ ಇದ್ದವು; ಮನೆಗೆಲಸ ಅವರ ಗೆಂಡನೇ ಮಾಡ್ತ ಕಾರಣ – ಟೀವಿನೋಡಿಗೊಂಡು, ಮೊಬೈಲು ಮಾತಾಡಿಗೊಂಡು ಆರಾಮಲ್ಲಿ ಇರ್ತವು.
ತರವಾಡುಮನೆ ರಂಗಮಾವನ ತಂಗೆ ಮಾಲಚಿಕ್ಕಮ್ಮನ ಮೂಡ್ಳಾಗಿ ಕೊಟ್ಟದಿದಾ – ಪಂಜಚಿಕ್ಕಯ್ಯಂಗೆ; ಅವರ ನೆರೆಲೇ ರೂಪತ್ತೆ ಇಪ್ಪ ಕಾರಣ ಧಾರಾಳ ಶುದ್ದಿಗೊ ಬೈಲಿಂಗೆ ಸಿಕ್ಕುತ್ತು!

ಅವರ ಬಗ್ಗೆ ನಾವು ಅದಾಗಲೇ ಕೆಲವು ಸರ್ತಿ ಮಾತಾಡಿದ್ದು ಅಲ್ಲದಾ?
ಸುರೂವಿಂಗೆ ರೂಪತ್ತೆಯ ಮನೆಲಿ ಎಲಿ ಉಪದ್ರ ಕೊಟ್ಟು – ಮಾ ರಗಳೆ ಆದ್ದರ ಬಗ್ಗೆ ಶುದ್ದಿ ಮಾತಾಡಿತ್ತಿದ್ದು.  (ಸಂಕೊಲೆ)
ರೂಪತ್ತೆ ಬಗ್ಗೆ ವಿವರವಾಗಿ ಗುರ್ತ ಗೊಂತಾದ್ದು ಈ ಶುದ್ದಿಲೇ.
ಬಂಡಾಡಿಪುಳ್ಳಿ ಈ ಶುದ್ದಿಯ ಕೇಳಿ – ಮರದಿನ ಕ್ಳಾಸಿಲಿ ನೆಂಪಾಗಿ ಪಸಕ್ಕನೆ ತನ್ನಷ್ಟಕ್ಕೇ ನೆಗೆಮಾಡಿ, ಮಾಷ್ಟ್ರನಕೈಲಿ ಸಿಕ್ಕಿಬಿದ್ದದು ಬೇರೆಯೇ ಶುದ್ದಿ! 😉
ಅದು ಒಪ್ಪಣ್ಣಂಗೆ ಲಗಾವು ಇಲ್ಲೆ. 😉
ಅದಿರಳಿ

ಮನೆಲಿ ಕೆಲಸಕ್ಕೆ ಹೇಂಗೂ ಮಾವ° ಇಪ್ಪಗ, ಅಂತೇ ಕೂದು ಧಾರಾವಾಹಿಗಳ ನೋಡ್ತರ ಎಡಕ್ಕಿಲಿ – ಪಂಜದ ಉಮಾ ಡ್ರೈವಿಂಗು ಸ್ಕೂಲಿಂಗೆ ಹೋದ್ದು ನೆಂಪಿದ್ದೋ?
ಅದರಿಂದ ಮತ್ತೆ ಎರಡುವಾರ ರೂಪತ್ತೆ ಕಾರು ಕಲ್ತ ಶುದ್ದಿಯನ್ನೇ ಒಂದು ವಾರ ಮಾತಾಡಿದ್ದು. ನೆಗೆಮಾಣಿ ಅಂತೂ ಅದರ ಓದಿಯೇ ಕಾರು ಕಲ್ತಿದ! (ಸಂಕೊಲೆ)
ಬೊಳುಂಬುಮಾವ ಈಗಳೂ ರೂಪತ್ತೆಯ ಅದೇ ಶುದ್ದಿಲಿ ಗುರ್ತ ಹಿಡಿವದಿದಾ! 🙂

ಮುಂದಕ್ಕೆ, ಬೈಲಿಲಿ ಓಡಾಡ್ಳೆ ಕಷ್ಟ ಆವುತ್ತು ಹೇಳ್ತ ಕಾರಣಕ್ಕೆ – ಮಗ ಒಂದು ಕಾರು ತೆಗದು ಕೊಟ್ಟದು ಬೈಲಿಂಗೆ ಗೊಂತಿದ್ದು;
ರೂಪತ್ತೆಯೇ ಸ್ವತಃ ಅದರ ಬಿಟ್ಟುಗೊಂಡು ಹೋಪಗ, ದಾರಿಲಿ ಗಣೇಶಮಾವನ ಕಂಡುದೇ ಸೀತ ಹೋದ್ದು ಅರಡಿಗೋ?
ಅದಾ, ಅಂದೊಂದರಿ ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆ – ಹೇಳ್ತ ಶುದ್ದಿ ಮಾತಾಡಿದ್ದು. (ಸಂಕೊಲೆ)
ದೊಡ್ಡಜ್ಜಂಗೆ ಬೈಲು ಹೇಳಿರೆ ಪಕ್ಕನೆ ಇದೇ ಶುದ್ದಿ ನೆಂಪಪ್ಪದು!  😉
~

ಆಗಲಿ, ಹೋಗಲಿ.
ಅದೆಲ್ಲ ಆಗಿ, ಸುಮಾರು ಸಮೆಯ ಆತು – ರೂಪತ್ತೆಯ ಶುದ್ದಿಯೇ ಮಾತಾಡದ್ದೆ. ಅದರಷ್ಟಕೇ ಇತ್ತು. 😉
ಮೊನ್ನೆ ಒಂದಿನ ಕೆದಿಲಲ್ಲಿ ಉಪ್ನಾನ ಇತ್ತಲ್ಲದೋ? ಹೇಳಿಕೆ ಇತ್ತು, ಆದರೆ ನವಗೆ ಹೋಪಲಾಯಿದಿಲ್ಲೆ.
ಕಲ್ಮಡ್ಕ ಅನಂತ° ಹೋಗಿತ್ತಿದ್ದನಾಡ ಇದಾ.
ನಿನ್ನೆ ಅಜ್ಜಕಾನಬಾವಂಗೆ ಅನಂತ° ಸಿಕ್ಕಿ, ಬೈಲಿಂಗೆತ್ತಿದ ಕೆಲವು ಶುದ್ದಿಗಳಲ್ಲಿ ರೂಪತ್ತೆಯ ಶುದ್ದಿಯೂ ಇದ್ದತ್ತು!
ಈ ವಾರ ಅದನ್ನೇ ಮಾತಾಡುವನೋ?
(ನಿಂಗೊ ಮಾತಾಡುವೊ° ಹೇಳುವಿ, ಆದರೆ ಸರ್ಪಮಲೆಮಾವ ಕಣ್ಣುದೊಡ್ಡಮಾಡಿರೆ ಒಪ್ಪಣ್ಣ ಒಬ್ಬನೇ ಕೇಳಿಗೊಳೆಡದೋ? ;-( )
~
ಹೇಳಿದಾಂಗೆ, ಆ ಉಪ್ನಾನಕ್ಕೆ ರೂಪತ್ತೆಗೂ ಹೇಳಿಕೆ ಇದ್ದತ್ತು.
ಎಂತಾರು ಸಾಮಾನು ತಪ್ಪದೋ – ಮಣ್ಣ ಇದ್ದರೆ ಮಾವ° ಅಂಬೆರ್ಪಿಲಿ ಇರ್ತವು, ಅಲ್ಲದ್ದರೆ ಅವು ಮನೆಲೇ ಇರ್ತವು ಅಲ್ಲದೋ.
ಮಾವ ಮನೆಲೇ ಇದ್ದರೆ ರೂಪತ್ತೆಗೆ ಜೆಂಬ್ರಂಗೊಕ್ಕೆ ಹೋಪಲೆ ಅನುಕೂಲ ಅಪ್ಪದು; ಹಾಂಗೆ ಮಾವಂಗೆ ಪುರುಸೊತ್ತು ಮಾಡುಸಿ, ಮನೆಲೇ ನಿಲ್ಲುಸಿ- ಆ ದಿನ ರೂಪತ್ತೆ ಬಂದಿತ್ತಾಡ.

~
ಪಂಜಂದ ಕೆದಿಲಕ್ಕೆ ಸೀತ ಬಸ್ಸಿಲ್ಲೆ; ಎರಡು ಮೂರು ಪಗರುಸಿ ಬರೇಕಷ್ಟೆ – ಅಲ್ಲದೋ?
ಒಂದು ವೇಳೆ ಬಸ್ಸಿದ್ದರೂ ಜೆಂಬ್ರಕ್ಕೆ ಹೋಪಲೆ ಆಗ;
ಪಟ್ಟೆಸೀರೆ ಹೊಡಿ ಆಗಿ, ಸೀಟಿಂದ ಮಣ್ಣು ಹಿಡಿಗು, ಸೂಡಿದ ಮಲ್ಲಿಗೆಮಾಲೆ ಹೊಡಿಯಾಗಿ, ಬೆಗರಿಂಗೆ ಪವುಡರು ಹಾಳಾಗಿ, ಮೂಗಿಂಗೆ ಧೂಳು ಹೋಗಿ, ಶೀತ ಆಗಿ.. ಹೋ ಕಷ್ಟ ಕಷ್ಟ!
ಅದಲ್ಲದ್ದೇ, ಈಗಾಣ ಹೊಸ ಮೊಬೈಲುದೇ ಜಾಗ್ರತೆ ಮಾಡಿಗೊಳೆಕ್ಕಕ್ಕು, ಈ ನೂರೈವತ್ತು ನಮುನೆ ಜೆನಂಗೊ ಬಪ್ಪಗ  ಜಾಗ್ರತೆ ಮಾಡೇಕೋ- ಬೇಡದೋ?
ಮತ್ತೆ, ಬಸ್ಸಿಲೇ ಹೋಗಿ ಏನೂ ಆಯೇಕು ಹೇಳಿ ಇಲ್ಲೆ; ಕಾರಿದ್ದನ್ನೇ?!

ಹಾಂಗೆ, ಆ ದಿನ ಕಾರು ತೆಕ್ಕೊಂಡು ಹೆರಟೇ ಹೆರಟ ರೂಪತ್ತೆ – ಹನ್ನೊಂದುಗಂಟೆ ಹೊತ್ತಿಂಗೆ ಎತ್ತಿತ್ತಡ, ಉಪ್ನಾನ ಮನೆಗೆ.
ಜಾಲಿಂಗಡ್ಡದ ದಾರಿಲಿ ಓರಗೆ ಕಾರು ನಿಲ್ಲುಸಿತ್ತು.
ಮೋರೆಲಿದ್ದ ಷ್ಟಿಕ್ಕರಿನ ತೆಗದು ಕನ್ನಟಿಗಂಟುಸಿ, ಎರಡು ಸರ್ತಿ ತಲೆಬಾಚಿ, ನಾಕು ಸರ್ತಿ ಕನ್ನಾಟಿನೋಡಿ – ಮೋರೆ ಉದ್ದಿ, ಷ್ಟಿಕ್ಕರಿನ ಪುನಾ ಮೋರೆಗೆ ಅಂಟುಸಿಗೊಂಡು ಕಾರಿಂದ ಇಳುದತ್ತು.
ಬೀಗತಕೈಲಿ ಸುಚ್ಚು ಒತ್ತಿರೆ ಕಾರಿಂದ ಕೈಂಕ್ ಹೇಳಿ ಶಬ್ದ ಬತ್ತಲ್ಲದೋ – ಕಾರುಗೊಕ್ಕೆ ಶಬ್ದ ಇಲ್ಲೆ; ಕಾರು ಬಂದದು ನಾಕು ಜೆನಕ್ಕೆ ಗೊಂತಪ್ಪದು ಈ ಕೈಲೋಕು ಮಾಡುವಗಳೇ ಇದಾ!
ಬಾಗಿಲು ಹಾಕಿ ಕೈಂಕ್ ಶಬ್ದ ಮಾಡಿ ನೆಡಕ್ಕೊಂಡು ಬಂತು.
ಎಕ್ಸುಲೇಟ್ರು ತೊಳುದ್ದಕ್ಕೆ ಕಾಲುತೊಳೇಕು ಹೇಳಿ ಏನಿಲ್ಲೆ, ಹಾಂಗೆ, ಮನ್ನೆ ಬೆಂಗುಳೂರಿಂದ ತಂದ ಹೊಸಾ ಮೆಟ್ಟಿನ ಜೋಡಿನ – ಕಮ್ಮಿ ಕುರೆ ಇಪ್ಪಲ್ಲಿ, (ಎಲ್ಲೋರಿಂಗೂ ಕಾಣ್ತಲ್ಲಿ) – ಜಾಗೆನೋಡಿ ಮಡಗಿತ್ತಡ.
ಆರು ಎದುರು ಸಿಕ್ಕದ್ದರೂ ಒಳ್ಳೆದು ಒಳ್ಳೆದು ಹೇಳ್ತ ನಮುನೆಲಿ ನೆಗೆಮಾಡಿಗೊಂಡು ಒಳಬಂತು!
ಮೊಬೈಲು ಹಿಡುದ ಎಡದ ಕೈಲಿ ಪಟ್ಟೆಸೆರಗನ್ನೂ ಹಿಡ್ಕೊಂಡು, ಕರ್ಚೀಪು ಹಿಡ್ಕೊಂಡ ಇನ್ನೊಂದು ಕೈಲಿ ಬೆಗರಿಲ್ಲದ್ದ ಮೋರೆಯ ಪೌಡ್ರುಹಾಳಾಗದ್ದ ನಮುನೆಲಿ ಉದ್ದಿಗೊಂಡು – ಬಡಬಡನೆ ಬಂದು ಕೆಂಪುಕುರುಶಿಲಿ ಕೂದತ್ತಡ!

ಕಲ್ಮಡ್ಕ ಅನಂತನೂ ಅದೇ ಹೊತ್ತಿಂಗೆ ಎತ್ತಿದ ಕಾರಣ ಆಸರಿಂಗೆ ಕುಡುದ್ದು ಒಟ್ಟಿಂಗೇ ಅಡ.
ಅಪುರೂಪಲ್ಲಿ ಮಾತಾಡಿದ ಹಾಂಗಾತು – ಹೇಳಿಗೊಂಡು ರೂಪತ್ತೆಯ ಹತ್ತರೇ ಕೂದುಗೊಂಡನಡ.
ಉಪ್ನಾನಮಾಣಿಯ ಸೋದರತ್ತಿಗೆ – ಉದ್ದಲಂಗದ  ಕೂಚಕ್ಕ° – ಪುನರ್ಪುಳಿ ಶರ್ಬತ್ತಿನ ತಂದು ಕೊಟ್ಟತ್ತಡ.
ಅರ್ದ ಸಾಕಾತ – ಹೇಳಿ ಒಂದು ಗ್ಲಾಸು ತೆಗದು, ಒಳುದ ಗ್ಲಾಸುಗೊಕ್ಕೆ ಅರೆವಾಶಿ ಎರದು.. ಅದಾ! ಎರವಗ ಒಂದು ಬಿಂದು ಬಿದ್ದತ್ತಡ – ಪಟ್ಟೆಸೀರೆ ಮೇಗಂಗೆ!
ಶರ್ಬತ್ತಲ್ಲ, ಬೆಶೀ ಪಾದರಸ ಬಿದ್ದ ಹಾಂಗೆ ರಪಕ್ಕನೆ ಒಂದರಿಯೇ ಗಡಿಬಿಡಿಮಾಡಿಗೊಂಡತ್ತಡ!
ಕಳುದೊರಿಶ ಮಗಳ ಮದುವೆ ಕಳಾತಲ್ಲದೋ- ಅದರ ಮರುಮಂಗಲ ಸೀರೆಗೆ ಮೇಚಿಂಗು ಸೀರೆ ಅಡ ಇದು, ಚೆ – ಪುನರ್ಪುಳಿ ಕಲೆ ಬೇಗ ಹೋವುತ್ತೂಇಲ್ಲೆ! ಹೇಳಿ ಬೇಜಾರು ಮಾಡಿಗೊಂಡತ್ತಡ.
ತೊಂದರಿಲ್ಲೆ ಅತ್ತೆ, ತೊಳದರೆ ಹೋಕು – ಹೇಳಿದನಡ ಕಲ್ಮಡ್ಕನಂತ°!

ಅನಂತಂಗೆ ಹೇಳುಲೆ ಸುಲಾಬ, ಆದರೆ ಮಾವ ತೊಳೆತ್ತ ನಮುನೆ ತೊಳದರೆ ಕಲೆ ಅಲ್ಲ, ಗೊಂಡೆ – ಫಾಲುದೇ ಹೋಗದೋ? ಮಿಶನಿಂಗೆ ಹಾಕಿರೆ ಸೀರೆ ಒಳಿಗೋ? ಅದು ಇವಂಗೆ ಗೊಂತಿಲ್ಲೆ.
“ಇದು ಪಟ್ಟೆಸೀರೆ ಅಲ್ಲದೋ; ಡ್ರೈವಾಶೇ ಮಾಡುಸೆಕ್ಕಷ್ಟೆ ಅನಂತಾ” – ಬೇಜಾರದ ಎಡೆಲಿಯೂ ಸಮದಾನಮಾಡಿಗೊಂಡು ಹೇಳಿತ್ತಡ ರೂಪತ್ತೆ!
~

ಜೆಂಬ್ರದ ಮನೆಲಿ ಎಲ್ಲೋರುದೇ ಕೊಶಿಲಿದ್ದರೂ, ರೂಪತ್ತೆ ಮಾಂತ್ರ ಬೇಜಾರಲ್ಲೇ ಸುರುಮಾಡಿತ್ತು.
ಮದಲೇ ಮನಸ್ಸಿಂಗೆ ಬೇಜಾರಾದರೆ ಹೀಂಗೆಂತಾರು ಮತ್ತೊಂದು ಕಾರಣ ಸಿಕ್ಕಿಪ್ಪಗ ಉಮ್ಮಳುಸಿ ಬತ್ತು; ಅದು ಸಾಮಾನ್ಯವೇ.
ರೂಪತ್ತೆಗೂ ಹಾಂಗೇ ಆದ್ದು – ಅದು ಮದಲೇ ಬೇಜಾರಲ್ಲಿದ್ದತ್ತಡ; ಪೂರ್ವಾಪರ ಮತ್ತೆ ಕಲ್ಮಡ್ಕನಂತಂಗೆ ಗೊಂತಾತು!
~

ಮೊನ್ನೆ ಬೆಂಗುಳೂರಿಂಗೆ ಹೋದ ಮತ್ತೆ ಮಾತಾಡುವಗ ಎಲ್ಲೋರ ಹತ್ತರೆಯೂ –  ಒಂದಲ್ಲಒಂದು ವಿಷಯ ತೆಗದು ಬೆಂಗುಳೂರಿನ ಶುದ್ದಿ ಹೇಳುಗಡ.
ಅನಂತಂಗೆ ಅದು ಗೊಂತಿತ್ತಿಲ್ಲೆ, ಇಂದು ಮಾತಾಡುವನ್ನಾರ!

~
ಅಂತೂ, ಬೇಜಾರಪ್ಪಲೆ ಕಾರಣ ಎಂತರಪ್ಪ – ಅನಂತ ಕೇಳಿದ್ದಕ್ಕೆ ರೂಪತ್ತೆ ಸುಮಾರು ಶುದ್ದಿಮಾತಾಡಿ, ಕಾರಣ ಹೇಳಿತ್ತಡ.
ಆ…. ಆವಳಿಗೆ ತಡವಲೆ ಅನಂತಂಗೆ ಅರಡಿತ್ತು. ಕಲ್ಮಡ್ಕನಂತನ ಕೈಂದ ಶುದ್ದಿ ಕೇಳಿಗೊಂಡ ಅಜ್ಜಕಾನ ಬಾವಂಗೂ ಅರಡಿತ್ತು. ಆದರೆ  ನಿಂಗೊಗೆಡಿಗೋ? 😉
(ಆ…. ಆಹ್… ಆ………ವಳಿಗೆ ಬಂದರೆ ತಡಕ್ಕೊಳಿ ಆತಾ, ಶುದ್ದಿ ರಜ ಉದ್ದ ಇಕ್ಕು!)
~

ರೂಪತ್ತೆಯ ಮಗಳಿಂಗೆ ಕಳುದೊರಿಶ ಮದುವೆ ಆದ್ಸು ಬೈಲಿಂಗೇ ಅರಡಿಗು.
ಮದುವೆ ಆದ ಮತ್ತೆ ಮದಲಾಣ ಮಗಳೇ ಅಲ್ಲ ಅದು – ಹೇಳಿ ಅನುಸುದು ರೂಪತ್ತೆಗೆ. ದೂರ ಹೋಗಿ ಜೀವನ ಮಾಡುವಗ ಮನಗೆ ಪೋನುದೇ ಸಮಗಟ್ಟು ಮಾಡ್ತಿಲ್ಲೇಡ.
ಸುರು ರಜ್ಜ ಸಮೆಯ ಮಗಳ ಬಿಟ್ಟ ನಮುನೆಲಿ ಅಸಕ್ಕಾದರೂ, ಅದರ್ಲಿ ಬೇಜಾರ ಅಪ್ಪಲೆ ಎಂತೂ ಇಲ್ಲೆ!

ಮದುವೆ ಅಪ್ಪ ಸಮೆಯಲ್ಲಿ ಅಳಿಯಮಾಣಿ ಉತ್ತರಭಾರತಲ್ಲಿ ಇತ್ತಿದ್ದನಾಡ, ಮತ್ತೆ ಬೆಂಗುಳೂರಿಂಗೆ ಟ್ರಾನ್ಸುವರು ಆತಡ.
ಕಂಪೆನಿಯವಕ್ಕೆ ರೂಪತ್ತೆ ಅಳಿಯನ ಬಾರೀ ಕೊಶಿ ಅಡ! ಅವನ ಕೆಲಸ ಹೇಳಿರೆ ತುಂಬ ಲಾಯಿಕಡ. ಅವನ ಕೆಲಸ ಕೊಶಿ ಆಗಿ ಅವ್ವೇ ಜಾಸ್ತಿ ಸಂಬಳದ ವೆವಸ್ತೆ ಮಾಡಿದ್ದವಡ.
ಒಂದು ಕಂಪೆನಿಂದ ಇನ್ನೊಂದಕ್ಕೆ ಹಾರಿ ಬೆಂಗುಳೂರಿಂಗೆ ಎತ್ತಿದ್ದು –ಹೇಳ್ತದು ಅನಂತಂಗೆ ಬೇರೆಆರೋ ಹೇಳಿತ್ತಿದ್ದವು ಮದಲೇ!
ಆಪೀಸಿಲಿ ಕೆಲಸ ಜಾಸ್ತಿ ಮಾಡಿ ಅಳಿಯ ಮನಗೆ ಬಪ್ಪದೇ ತಡವಾವುತ್ತಡ. ಕೆಲಸದ ವಿಶಯಲ್ಲಿ ಅಂಬೆರ್ಪು ಇದ್ದರೆ ಬೇಜಾರ ಏನೂ ಮಾಡ್ಳಿಲ್ಲೆ ಇದಾ!

ರೂಪತ್ತೆಗೆ ಉತ್ತರಭಾರತ ಯಾತ್ರೆ ಹೋಯೇಕು ಹೇಳಿ ಇತ್ತು.
ಅಲ್ಲಿ ರಜ ತಿರುಗಿ, ಚೆಂದಕೆ ತಾಜುಮಹಲೋ – ಗಾಜುಮಹಲೋ – ಎಲ್ಲ ನೋಡ್ಳಾವುತ್ತಿತು; ಅದರಿಂದಲೂ ಹೆಚ್ಚು, ಅಲ್ಯಾಣ ಪಟ ತೆಗದು ಮಾಲಚಿಕ್ಕಮ್ಮಂಗೆಲ್ಲ ತೋರುಸುಲಾವುತಿತು.
ಆದರೆ?  ಆ ಸಮೆಯಲ್ಲೇ ಅಳಿಯನ ಟ್ರಾನ್ಸುವರು ಆದ ಕಾರಣ ಆಲೋಚನೆ ಕಂಜಿಹಾಕಿತ್ತು. ಪಾಪ!
ಅಲ್ಲ, ಕೆಲಸಲ್ಲಿ ಹಾಂಗೆಲ್ಲ ಇಪ್ಪದೇ, ಒಂದು ದಿಕ್ಕಂದ ಇನ್ನೊಂದು ದಿಕ್ಕಂಗೆ ಹೋವುತ್ತ ಬತ್ತ ಇರ್ತು – ಅದರ್ಲಿ ಏನೂ ಬೇಜಾರಿಲ್ಲೆ.

ಉತ್ತರ ಭಾರತಕ್ಕೆ ಹೋಪಲೆ ಎಡಿಗಾಗದ್ದಕ್ಕೆ ಮಗಳಪ್ಪಂಗೆ ಭಾರೀ ಕೊಶಿ ಆಯಿಕ್ಕು – ಹೇಳಿ ಗ್ರೇಶಿ ಮನಸ್ಸಿಲೇ ಪಿಸುರು ಎಳಗಿಂಡು ಇತ್ತಾಡ ರೂಪತ್ತೆಗೆ.
ಆದರೆ ಮಾವ ಈ ಶುದ್ದಿಗೆ ತಲೆಯೇ ಹಾಕಿದ್ದವಿಲ್ಲೇಡ, ಅವ್ವಾತು – ಅವರ ಮನೆಕೆಲಸ ಆತು, ಅಷ್ಟೇ!
ಆತಿನ್ನು; ಪುರುಸೋತಿಲಿ ಕೂದರಾಗ, ಬೆಂಗುಳೂರಿನ ಮಾಣಿ ಮತ್ತೆ ಕೊಡೆಯಾಲಕ್ಕೆ ಟ್ರಾನ್ಸ್ವರು ಆದರೆ ಅದೂ ಇರ – ಬೇಗ ಹೋಯೇಕು ಹೇಳಿ ಲೆಕ್ಕ ಹಾಕಿತ್ತಡ.
ಮಗಳು ಬೆಂಗುಳೂರಿಂಗೆ ಎತ್ತಿ ಮನೆವೆವಸ್ತೆ ಆದ ಕೂಡ್ಳೇ ಮಾವಂಗೆ ಪುರುಸೋತು ಮಾಡುಸಿ ಹೋಗಿಬಂತಡ!
ಒಬ್ಬನೇ ಹೋಗಿಬಪ್ಪದು ಹೇಳಿರೆ ಬೇಜಾರವೋ – ಚೆ ಚೆ, ಇಲ್ಲೆಪ್ಪಾ. ಅದರ್ಲಿ ಏನೂ ಬೇಜಾರಿಲ್ಲೆ.

ಹೋಗಿಬಂದು ಎರಡುವಾರ ಆತಷ್ಟೇ, ಪ್ರಯಾಣದ ಬಚ್ಚಲು ಇನ್ನುದೇ ಪೂರ್ತ ಹೋಯಿದಿಲ್ಲೇಡ!
ಹಾಂಗೆ ಬಚ್ಚಲಿದ್ದ ಕಾರಣ  ಕಳೀಯಬಾರದ್ದ ಜೆಂಬ್ರಂಗೊಕ್ಕೆ ಮಾಂತ್ರ ಹೋಪದಡ!
ಕೆದಿಲದ ಜೆಂಬ್ರ ಹೇಳಿರೂ ಹತ್ತರಾಣದ್ದೇ- ರೂಪತ್ತೆಯ ಗೆಂಡನ ತಂಗೆಯ ಮಾವನೋರ ಅಣ್ಣನ ಮಗನ ದೊಡ್ಡ ಮಗನ ಎರಡ್ಣೇ ಮಗಳ ಮೈದುನನ ಮಗಂಗೆ! 😉
ಹಾಂಗೆ – ಹತ್ತರಾಣದ್ದಾದ ಕಾರಣ ಹೆರಟದಷ್ಟೇ ಇಂದು!
ಮೊನ್ನೆ ಬೆಂಗುಳೂರಿನ ಬಚ್ಚಲಿಂದಾಗಿ ಎಲ್ಲ ಜೆಂಬ್ರಂಗೊಕ್ಕೆ ಹೋತಿಕ್ಕಲೆ ಅವಕಾಶ ಆವುತ್ತಿಲ್ಲೆ; ಬಿಡಿ, ಅದರ್ಲಿ ಏನೂ ಬೇಜಾರಿಲ್ಲೆ.

ಜೆಂಬ್ರಂಗೊಕ್ಕೆ ಕಾರಿಲೇ ಹೋವುತ್ತ ಕಾರಣ ಬಚ್ಚಲು ಹೆಚ್ಚಪ್ಪಲಿಲ್ಲೆಇದಾ! ಒಂದು ಸರ್ತಿ ಕೂದರೆ ಸೀದ ಹೋವುತ್ತು.
ಬೆಂಗುಳೂರಿನಷ್ಟು ದೂರ ಹೋಪಲೆ ಅಭ್ಯಾಸ ಆಯಿದಿಲ್ಲೆಡ, ಆದರೂ – ಊರೊಳ ಜೆಂಬ್ರಂಗೊಕ್ಕೆ, ಪುತ್ತೂರಿಂದ ಸುಳ್ಯಕ್ಕೆ – ಹೀಂಗೆ ಹೋಪಲೆ ಅಭ್ಯಾಸ ಆಯಿದು, ಅಷ್ಟೇ!
ಆದರೆ ಮಗಳ ಅಪ್ಪಂಗೆ ಅಷ್ಟೂ ಅರಡಿಯ ಅಲ್ಲದೋ – ಹೇಳಿಗೊಂಡತ್ತಡ. 😉
ಕಾರುಬಿಟ್ಟೊಂಡು ಹೋಯೆಕ್ಕಾದ್ದದು ಬೇಜಾರವೋ? ಅದರ್ಲಿ ಏನೂ ಬೇಜಾರಿಲ್ಲೆ!

ಊರಿಲಿ ಜೆಂಬ್ರಂಗೊ ಕಮ್ಮಿ ಇಪ್ಪ ಮೌಢ್ಯ ಸಮೆಯ ನೋಡಿಗೊಂಡು ಮೊನ್ನೆ ಬೆಂಗುಳೂರಿಂಗೆ ಹೋದ್ದದು.
ಕಾರಿಲೇ ಹೋಯೆಕ್ಕು ಗ್ರೇಶಿರೂ ರೂಪತ್ತೆ ತಮ್ಮ ಖಡಾಖಡಿ ‘ಬೇಡ’ ಹೇಳಿದ ಕಾರಣ ಮತ್ತೆ ಬಸ್ಸಿಲೇ ಹೋದ್ಸು.
ಮಗಳ ಅಪ್ಪ ಹೇಳಿದ್ದಿದ್ದರೆ ‘ಅವು ಕೇಡಿಲಿ ಆಯಿಕ್ಕು’ ಗ್ರೇಶುಲಕ್ಕು; ಆದರೆ ಕಾಸಾತಮ್ಮ ಹೇಳುದು ಅಕ್ಕನ ಒಳ್ಳೆದಕ್ಕೇ ಅಲ್ಲದೋ! 😉
ಹಾಂಗೆ ಕಾರಿಲಿ ಹೋಗದ್ದೆ ಬಸ್ಸಿಲೇ ಹೋದ್ಸು. ಆತು, ಅದರ್ಲಿ ಏನೂ ಬೇಜಾರಿಲ್ಲೆ.

ಬೆಂಗುಳೂರಿಂಗೆ ಹೋಪಲೆ ಯೇಸಿಬಸ್ಸು, ಓಳ್ವೋ – ಟಿಗೇಟು ತಮ್ಮನೆ ಮಾಡಿಕೊಟ್ಟಿದ.
ಆ ದಿನ ಇರುಳು ಬಸ್ಸಿಂಗೆಮುಟ್ಟ ಹೋಯೇಕಲ್ಲದೋ –  ತಮ್ಮಂಗೆ ಆ ದಿನ ಅಂಬೆರ್ಪು ಇದ್ದ ಕಾರಣ ಮತ್ತೆ ರಿಕ್ಷ ಮಾಡಿಗೊಂಡು ಹೋದ್ಸು; ಇನ್ನೂರೈವತ್ರುಪಾಯಿ!!
ತೊಂದರಿಲ್ಲೆ, ಹೋಗಿ ಬಪ್ಪಗ ರಜ ಆರಾಮ ಬೇಕು ಹೇಳಿ ಆದರೆ ಖರ್ಚು ಮಾಡೇಕಾವುತ್ತು. ಅದರ್ಲಿ ಏನೂ ಬೇಜಾರಿಲ್ಲೆ!!

ಬಸ್ಸಿಲಿಯುದೇ – ಹೆಮ್ಮಕ್ಕಳ ಸೀಟಿಲಿ ಕೂದು ಒಬ್ಬನೇ ಇರುಳಿಡೀ ಹೋಯೇಕು, ಮರದಿನ ಉದಿಯಪ್ಪಗ ಬೆಂಗುಳೂರು!
ಒಬ್ಬನೇ ಹೋಯೇಕು ಹೇಳ್ತದು ಬೇಜಾರವೋ? ಅದು ಬೇಜಾರವೋ; ಅಲ್ಲಪ್ಪ.
ಅಂತೇ ಕೂದರಾತು, ಒಂದು ಒರಗಿ ಏಳುವಗ ಎತ್ತೇಕಾದಲ್ಲಿ ಎತ್ತುತ್ತು.

ಮರದಿನ ಉದಿ ಆಯೇಕಾರೇ ಬೆಂಗುಳೂರಿಂಗೆ ಎತ್ತಿತ್ತಡ ಅಲ್ಲದೋ? ಗುರ್ತ ಇಲ್ಲದ್ದ ಊರು, ಗುರ್ತು ಪರಿಚಯ ಇಲ್ಲದ್ದ ಜೆನಂಗೊ – ಬಷ್ಟೇಂಡಿಲಿ.
ಅದರ್ಲಿ ಎಂತ ಬೇಜಾರಿದ್ದು? – ಅಳಿಯ ಕಾರು ತೆಕ್ಕೊಂಡು ಕರಕ್ಕೊಂಡು ಹೋಪಲೆ ಬಯಿಂದನಾಡ.
ಮಗಳು ಬೈಂದಿಲ್ಲೆ, ಉದಿಯಪ್ಪಗಾಣ ಕಾಪಿತಿಂಡಿ ಆಗೆಡದೋ? ಅದರ್ಲಿ ಎಂತದೂ ಬೇಜಾರಿಲ್ಲೆ.

ರೂಪತ್ತೆ ಬೆಂಗುಳೂರಿಂಗೆ ಎತ್ತಿದ ದಿನ ಪ್ರಯಾಣದ ಆಯಾಸ – ಹೇಳಿಗೊಂಡು ಮನುಗಿತ್ತಡ.
ಓಳ್ವೋದ ಯೇಸಿಗೆ ಬಸ್ಸಿಲಿ ತಣ್ಣಂಗೆ ಹೋದ್ದಾದರೂ, ಪ್ರಯಾಣ ಪ್ರಯಾಣವೇ ಅಲ್ಲದಾ?
ಹಾಂಗೆ ಮನುಗಿದ್ದರ್ಲಿ – ಮಗಳಿಂಗೆ ಅಡಿಗ್ಗೆ ಏನೂ ಸೇರ್ಲೆ ಎಡಿಗಾಯಿದಿಲ್ಲೆಡ.
ಅಡಿಗ್ಗೆ ಗೇಸಿನ ವೆವಸ್ತೆ ಇಪ್ಪದಿದಾ, ಊರಿಲಿಪ್ಪ ಹಾಂಗೆ ಸೌದಿ ಒಲೆ ಅಲ್ಲ. ಅಡಿಗೆಮಾಡ್ಳೆ ಚಿಕನು (ಕಿಚನು)ದೇ ಒಳ್ಳೆ ಲಾಯಿಕಿದ್ದಡ. ಎಲ್ಲ ವೆವಸ್ತೆಯೂ ಇದ್ದಡ.
ಉಪ್ಪುಮೆಣಸು ಬೇಕಾದಲ್ಲಿ ಸಿಕ್ಕುತ್ತಡ. ಮಗಳಿಂಗೆ ಅದು ಸರೀ ಅಭ್ಯಾಸ ಆಯಿದಡ.
ಹಾಂಗಾಗಿ, ಅಡಿಗ್ಗೆ ಸೇರ್ಲೆ ಎಡಿಯದ್ದರ್ಲಿ ಏನೂ ಬೇಜಾರಿಲ್ಲೆಡ!

ರೂಪತ್ತೆ ಬೆಂಗುಳೂರಿಂಗೆ ಎತ್ತಿದ ದಿನ ಲಾಲುಬಾಗಿನ ಹತ್ತುದಿನದ ’ಮಾವುಮೇಳದ’ ಕೊನೇ ದಿನ ಅಡ, ಶಪಿಂಡಿಯ ಹಾಂಗೇ!
ಲೋಕದ ಎಲ್ಲಾ ಬಗೆಯ ಮಾಯಿನಣ್ಣು ತಂದು ಕಮ್ಮಿ ಕ್ರಯಕ್ಕೆ ಮಾರ್ತವಡ – ಹೊತ್ತಪ್ಪಗ ಮಗಳು ವಿವರುಸಿತ್ತು.
ಕಮ್ಮಿ ಕ್ರಯ ಹೇಳಿ ಅಲ್ಲದ್ದರೂ, ಬೇರೆಬೇರೆ ಜಾತಿ ಹಣ್ಣು ತಿಂಬಲಾವುತಿತು – ಹೇಳಿ ಒಂದರಿ ಆಶೆ ಬಂತು.
ಹಗಲಿಡೀ ಒರಗಿದ ಕಾರಣ ಆ ಸಂಗತಿ ಗೊಂತೇ ಆಯಿದಿಲ್ಲೆ, ಅಲ್ಲದ್ದರೆ ಹೋತಿಕ್ಕಲಾವುತಿತು!
ಸಾರ ಇಲ್ಲೆ, ಅದರ್ಲಿಯೂ ಏನೂ ಬೇಜಾರಿಲ್ಲೆ; ಆಪೀಸಿಂದ ಅಳಿಯ ಬಪ್ಪಗ ನಾಕು ಕಿಲ ತಯಿಂದನಾಡ.

ರೂಪತ್ತೆಗೆ ಇಡೀ ಬೆಂಗುಳೂರಿಲಿ ಮದಾಲುಕಂಡದು ಆಕರ್ಷಕವಾಗಿ ಕಂಡದು ಎಂತರ?
– ಇವರ ಬಾಡಿಗೆಮನೆಂದಲೇ ಕೆಳ ಇಪ್ಪ ಮನೆಯೆಜಮಾನನ ಹೆಂಡತ್ತಿ ರೂಪತ್ತೆಕಾರಿಂದಲೂ ದೊಡ್ಡಕಾರಿನ ಬಿಡ್ತಡ!
ಅದೂ ಬೆಂಗುಳೂರಿನ ಅಂಬೆರ್ಪಿನ ಮಾರ್ಗಂಗಳಲ್ಲಿ. ಬಿಡಿ, ಅದರ್ಲಿಯೂ ಏನೂ ಬೇಜಾರಿಲ್ಲೆ!
ಅವರ ನಾಯಿ ಮತ್ತೂ ದೊಡ್ಡದಿದ್ದಾಯಿಕ್ಕು – ಹೇಳಿ ಸಮಾದಾನ ಮಾಡಿಗೊಂಡತ್ತು.

ಹನ್ನೊಂದೂವರೆಗೆ ಸುರುವಾದರೆ ಮೂರೂವರೆವರೆಗೂ ಟೀವಿಲಿ ಒಂದಲ್ಲ ಒಂದು ಕಾರ್ಯಕ್ರಮ ಬತ್ತು.
ವನಿತೆ, ಮಹಿಳೆ, ಸಖೀ – ಎಲ್ಲ ಮುಗುದು, ಮಂದಾರ,  ಒಂದು ಮನೆ – ಮೂರು ಬಾಗಿಲು, ಹೀಂಗ್ರುತ್ತ ನಾನಾನಮುನೆ ಕತೆಗೊ ದಾರಾವಾಹಿ ಆಗಿ ಬಂದುಗೊಂಡಿರ್ತು.
ಒಂದರ್ಲಿ ಸೊಸೆ ಮನೆ ಬಿಟ್ಟುಹೋಪ ಸಮೆಯ, ಇನ್ನೊಂದರ್ಲಿ ಹೀರೊಯಿನ್ನಿಂಗೆ ಮದುವೆ ಅಪ್ಪ ಸಮೆಯ, ಮತ್ತೊಂದರ್ಲಿ ಅಜ್ಜಿ ತೀರಿಹೋಪ ಸಮೆಯ, ಬೇರೆ ಒಂದರ್ಲಿ ಕುಂಞಿಬಾಬೆಗೆ ಹೆಸರು ಮಡುಗುವ ಸಮೆಯ! – ಎಂತ ಹೆಸರು ಮಡುಗುತ್ತವು ಹೇಳಿ ಇದಕ್ಕೆ ಕುತೂಹಲ!!  ಒಂದನ್ನೂ ಬಿಟ್ಟಿಕ್ಕಲೆ ಗೊಂತಿಲ್ಲೆ, ಎಲ್ಲವುದೇ ನೋಡಿಗೊಂಡಿದ್ದು ಅರ್ದಲ್ಲಿದ್ದು!
ಧಾರವಾಹಿ ಸಿಕ್ಕದ್ದೆ ಆವುತ್ತೋ ಹೇಳಿಒಂದು ಬೇಜಾರಿತ್ತು, ಇದು ಹೋಪ ಮುನ್ನಾಣ ದಿನವೇ ಅಲ್ಲಿಗೆ ಕೇಬುಲು ಬಂತಡ.
ಹಾಂಗಾಗಿ ಆ ಬಗ್ಗೆ ಏನೂ ಬೇಜಾರಿಲ್ಲೆ.

ಹೀಂಗಾಗಿ, ಹಗಲು ಇಡೀ ರೂಪತ್ತೆಗೆ ಪುರುಸೊತ್ತಿಲ್ಲೆ, ಮತ್ತೆ ಮಗಳಿಂಗೆ ಪುರುಸೊತ್ತಿಲ್ಲೆ; ಮನೆಕೆಲಸ ಇದ್ದು!
ಹಾಂಗಾಗಿ ಬೆಂಗುಳೂರಿಲಿ ಜಾಸ್ತಿ ಹೆರ ತಿರುಗಲೆ ಆಯಿದಿಲ್ಲೇಡ.
ಮುಖ್ಯವಾಗಿ ಒಂದು ಸೀರೆಯಂಗುಡಿಗೆ ಹೋಪದು ಗ್ರೇಶಿದ್ದು, ಮತ್ತೆ ಪುರುಸೊತ್ತು ಸಾಕಾಗದ್ದೆ ಬಾಕಿ ಆಗಿತ್ತಾಡ.
ತೊಂದರಿಲ್ಲೆ, ಇನ್ನೊಂದರಿ ಬೆಂಗುಳೂರಿಂಗೆ ಹೋಗಿಪ್ಪಗ ಪುರುಸೊತ್ತು ಮಾಡಿರೆ ಆತು,
ಅದರ್ಲಿ ಬೇಜಾರ ಎಂತೂ ಮಾಡ್ಳಿಲ್ಲೆ!

ಬೆಂಗುಳೂರಿಲಿ ನಾಕು ದಿನ ಇದ್ದದರ್ಲಿ ಒಂದುದಿನ ಪುರುಸೊತ್ತು ಮಾಡಿ ತಿರುಗಲೆ ಹೋದವಡ.
ಕಾರಿನ ಅಳಿಯ ಆಪೀಸಿಂಗೆ ತೆಕ್ಕೊಂಡು ಹೋದ ಕಾರಣ ಬಸ್ಸಿಲೇ ಹೋಯೇಕಷ್ಟೇ! ಅಲ್ಲ, ಕಾರಿನ ಮನೆಲೇ ಬಿಟ್ಟಿಕ್ಕಿ ಹೋಗಿದ್ದರೂ ಏನೂ ಮಾಡ್ಳೆಡಿತ್ತಿತಿಲ್ಲೆ. 🙁
ಈ ಬೆಂಗುಳೂರಿನ ಅಂಬೆರ್ಪಿಲಿ ಕಾರು ಬಿಡೇಕಾರೆ ಇನ್ನು ಮೂರುಸರ್ತಿ ಕಲ್ತು ಬರೇಕಷ್ಟೇ! 🙁
ಹ್ಹೆ, ಎನಗೇ ಎಡಿಯ, ಇನ್ನು ಮಗಳ ಅಪ್ಪಂಗೆ ಎಡಿಗೋ! ಒಂದು ನೆಗೆಯೂ ಬಂತತ್ಲಾಗಿ.
ಹಾಂಗಾಗಿ ಕಾರು ಮಡಗಿ ಹೋಗದ್ದಕ್ಕೆ ಏನೂ ಬೇಜಾರಿಲ್ಲೆಪ್ಪ.

ಮಂತ್ರಿಮಾಲು ಹೇಳಿ ಒಂದು ದೊಡಾ ಅಂಗುಡಿಗಳ ಅಂಗುಡಿ ಅಡ.
ಅಲ್ಲಿ ಎಲ್ಲ ಮಾಲುಗಳನ್ನೂ ಕೈಗೆ ತಾಂಟುತ್ತ ನಮುನೆಲಿ ಮಡಗಿರ್ತವಾಡ. ಬೇಕಾದೋರು ಬೇಕಾದ್ದರ ತೆಕ್ಕೊಳ್ತ ನಮುನೆಲಿ – ಅನಂತಂಗೆ ಗೊಂತಾಗದ್ದರೆ ಹೇಳಿ ತೂಷ್ಣಿಲಿ ವಿವರುಸಿತ್ತಾಡ.
ಕಾಸ್ರೋಡಿಲಿ ಆ ನಮುನೆ ಒಂದಿದ್ದಲ್ಲದೋ – ಆ ಜಾತಿದೇ ದೊಡ್ಡದಾಯಿಕ್ಕು ಗ್ರೇಶಿಗೊಂಡೆ, ಅಜ್ಜಕಾನಬಾವ ವಿವರುಸುವಗ.
ಆ ಮಂತ್ರಿಮಾಲಿಲಿ ಯೇವ ಮಾಲನ್ನೂ ಮುಟ್ಟಿಕ್ಕಲೆ ಗೊಂತಿಲ್ಲೆ! ಎಲ್ಲ ತಲೆಂದ ಮೇಗೆ ಕ್ರಯ ಅಡ.
ಹಾಂಗೆ ಅಲ್ಲಿ ಎರಡು ಸೀರೆ, ನಾಕು ಚೂಡಿದಾರ, ನಾಕು ಸೆಟ್ಟು “ಒಂದುಗ್ರಾಮುಚಿನ್ನದ” ಬಳೆ, ಎರಡು ವೇನಿಟಿಬೇಗುಗೊ – ಇಷ್ಟು ಬಿಟ್ರೆ ಬೇರೆಂತೂ ತೆಗವಲೆ ಪುರುಸೊತ್ತೇ ಇತ್ತಿಲ್ಲೆಡ.
ಅದಕ್ಕೆಂತರ ಬೇಜಾರಿದ್ದು, ಇನ್ನೊಂದರಿ ಬಪ್ಪೊ – ಹೇಳಿತ್ತಡ ಮಗಳು. ಹಾಂಗೆ ಅದರ್ಲಿ ಎಂತೂ ಬೇಜಾರಾಯಿದಿಲ್ಲೇಡ.

ಸೋಮವಾರ ಹೋಗಿ ಶುಕ್ರವಾರ ಒಪಾಸು ಬಂದದಲ್ಲದೋ ಊರಿಂಗೆ-  ಹೆರಡ್ಳಪ್ಪಗ ಮಗಳಿಂಗೆ ತುಂಬ ಬೇಜಾರಾಯಿದಡ.
ಬಂದು ತುಂಬ ದಿನ ಆತು ಮಗಳೇ, ಇನ್ನೊಂದರಿ ಬತ್ತೆ; ತುಂಬ ದಿನ ನಿಂಬಲೆ! – ಹೇಳಿ ಒಂದರಿ ತಲೆ ಉದ್ದಿತ್ತಡ; ಅಳಿಯ ಮಾಡುಸಿ ಕೊಟ್ಟ ಹೊಸ ಮಾಟಿ – ಅಯಿದು ಪವನಿಂದು – ಮಗಳ ಕೆಮಿಲಿತ್ತಡ!
ಎಲ್ಲಿಗೇ ಹೋದರೂ ಮನಗೇ ಒಪಾಸು ಬರೇಕು, ಅದರ್ಲಿ ಎಂತ್ಸೂ ಬೇಜಾರ ಮಾಡ್ಲಿಲ್ಲೆ.

ಬೆಂಗುಳೂರಿಂಗೆ ಹೋದಿಪ್ಪಗ ಮನೆಲಿ ಮಾವ ಒಬ್ಬನೇ ಇದಾ!
ಬೇಜಾರಾವುತ್ತೋ – ಇಲ್ಲಲೇ ಇಲ್ಲೆಪ್ಪ. ಅವಕ್ಕೆ ಒಬ್ಬನೆ ಇದ್ದು ಅಭ್ಯಾಸ ಇದ್ದು, ರೂಪತ್ತೆ ಮನೆಲೇ ಇದ್ದರೂ ಅವು ಒಬ್ಬನೇ! 🙁
ಅವ್ವಾತು, ಅಡಿಗೆ ಕೆಲಸ ಆತು – ಅವರಷ್ಟಕೇ ಇರ್ತವು, ನೆಡಕ್ಕೊಂಡು ಬಂದದೇ ಹಾಂಗೇ!! ಅದರ್ಲಿ ಬೇಜಾರು ಮಾಡ್ಳೆ ಎಂತ ವಿಶೇಷ ಇಲ್ಲೆ.

ಹಾಂಗೆ ಮನೆಗೆತ್ತಿ ಎರಡು ವಾರ ಆತು, ಆದರೂ ಬಚ್ಚಲು ಹೋಯಿದಿಲ್ಲೆ. ಕಳೀಯಬಾರದ್ದ ಜೆಂಬ್ರಂಗೊಕ್ಕೆ ಮಾಂತ್ರ ಹೋಪದು.
ಮನೆ ಉದ್ದಿಉಡುಗಲೆ ಬಾಕಿ ಇದ್ದು, ಪಾತ್ರತೊಳವಲೆ ಬಾಕಿ ಇದ್ದು, ಒಸ್ತ್ರ ಒಗವಲೆ ಬಾಕಿ ಇದ್ದು – ಹೇಳಿ ಎಂತಾರು ಬೇಜಾರ ಮಾಡ್ಲಿದ್ದೋ?
ಷೇ, ಇಲ್ಲೆಪ್ಪ. ಪಾತ್ರ ತೊಳೆತ್ತದು, ನೆಲ ಉದ್ದಿಉಡುಗಿ ಮಾಡ್ತದು ಮಾವಂಗೆ ಮದಲೆಲ್ಲ ಸರಿ ಅರಡಿಯದ್ರೂ – ಈಗ ಸರೀ ಅಭ್ಯಾಸ ಆಯಿದು!
ದೊಡ್ಡ ಒಸ್ತ್ರ ಒಗವಲೆ ಮಿಷನು ಇದ್ದು, ಒಳುದ್ದರ ಮಾವ ಕೈಲೇ ಒಗೆತ್ತವು. ಹಾಂಗಾಗಿ ಆ ಮಟ್ಟಿಂಗೆ ಬೇಜಾರ ಮಾಡ್ಳಿಲ್ಲೆ!

ಬೆಂಗುಳೂರಿಂಗೆ ಹೋಗಿಪ್ಪಗ ‘ತೋಟ ನೋಡಿಗೊಳದ್ದೆ ಬಾಕಿ ಆತು!’ ಹೇಳಿ ಬೇಜಾರವೋ?!
ಅಲ್ಲಪ್ಪ. ತೋಟದ ಕೆಲಸಕ್ಕೆ ಆಳುಗೊ ಇದ್ದವು – ಪುರುಸೊತ್ತಪ್ಪಗ ಮಾವಂದೇ ಹೋವುತ್ತವು ಎಡೇಡೆಲಿ.
‘ದೊಡ್ಡ ತೋಟ ಇದಾ, ನೋಡಿಗೊಂಬಲೆ ಕಷ್ಟ ಆವುತ್ತು ಅನಂತಾ’ – ಹೇಳಿತ್ತಾಡ! ಅಡಕ್ಕೆ ಅಪ್ಪದು ಆವುತ್ತು, ಎಷ್ಟಾತು ಹೇಳ್ತದು ಬಪ್ಪೊರಿಶ ಕೆಮ್ಕದವು ಹೇಳಿ ಅಪ್ಪಗ ಗೊಂತಾವುತ್ತು ರೂಪತ್ತಗೆ!
ಈಗ ಮಳೆಗಾಲ ಆದ ಕಾರಣ ತೋಟದ ವಿಶಯಲ್ಲಿ ಬೇಜಾರು ಏನೂ ಮಾಡ್ಳಿಲ್ಲೆ!

ಬೆಂಗುಳೂರಿಂಗೆ ಹೋದಿಪ್ಪಾಗ ನಿತ್ಯನೋಡ್ತ ಸುಮಾರು ದಾರವಾಹಿಗೊ ತಪ್ಪಿತ್ತೋ?
ಬೆಂಗುಳೂರಿಲಿಯೂ ಎಲ್ಲವನ್ನೂ ನೋಡ್ಳಾಯಿದು; ಅದೊಂದು ದಿನ ಬಿಟ್ಟು! ಆದರೆ ಅದರಿಂದ ಚೆಂದದ ಬೆಂಗುಳೂರಿನ ನಿಜದಾರಾವಾಹಿಯ ಕಂಡತ್ತಿಲ್ಲೆಯೋ?!
ಹಾಂಗಾಗಿ ಅದೆಂತೂ ಬೇಜಾರಪ್ಪಲಿಲ್ಲೆ!

ಆದರೆ ನಿಜವಾದ ಬೇಜಾರೆಂತ್ಸರ ಹೇಳಿತ್ತುಕಂಡ್ರೆ, ರೂಪತ್ತೆಯ ನಾಯಿಗೆ ಒಂದುವಾರ ರೂಪತ್ತೆ ಇಲ್ಲದ್ದೆ ಅಸಕ್ಕಾಯಿದಡ.
ರೂಪತ್ತೆಗೆ ನಾಯಿ ಹತ್ತರೆಯೋ, ನಾಯಿಗೆ ರೂಪತ್ತೆ ಹತ್ತರೆಯೋ – ಇಬ್ರಿಂಗೂ ಗೊಂತಿಲ್ಲೆ!
ನಾಯಿಗೆ ಗೊಂತಾದರೆ  ಒಟ್ಟಿಂಗೇ ಬತ್ತೆ ಹೇಳಿ ಹಟಮಾಡುಗು ಹೇಳಿಗೊಂಡು, ಹೆರಡುವಗ ಅದಕ್ಕೆ ಹೇಳದ್ದೆ ಹೋದ್ಸಡ.
ಹೋಗಿ ಮನೆಗೇಟುದಾಂಟಿ ಅಪ್ಪಗಳೇ ಪಾಪ, ನಾಯಿಯ ‘ಅವಸ್ಥೆಯ’ ಗ್ರೇಶಿ ರೂಪತ್ತೆಗೆ ಯೋಚನೆ ಸುರು ಆತಾಡ.
ಈ ಮಗಳ ಅಪ್ಪ ಹೇಂಗೆ ನೋಡಿಗೊಂಗು? ಮದಲೇ ಅವಕ್ಕೆ ನಾಯಿಗಳ ಕಂಡ್ರೆ ಅಷ್ಟಕ್ಕಷ್ಟೇ! ಸರಿ ಊಟಕಾಪಿ ಕೊಡುಗೋ, ಉಮ್ಮ!
ಬೆಂಗುಳೂರಿಲಿ ಎಷ್ಟೂ ಕೊಶಿಲಿದ್ದರೂ, ಮನೆಲಿದ್ದ ನಾಯಿಯ ಬಗ್ಗೆ ಯೋಚನೆ ಮಾಡಿಯೇ ಹೋಗಿಂಡಿತ್ತಾಡ!
ಒಪಾಸು ಮನಗೆ ಬಂದಮತ್ತೆ ಒಂದರಿ ನಾಯಿಯ ಮುಸುಡು ಕಣ್ತುಂಬ ನೋಡುವನ್ನಾರ ಕನಸಿಲಿದೇ ಇದನ್ನೇ ಕಂಡುಗೊಂಡಿತ್ತಾಡ.
~

ಬಂದು ನೋಡುವಗ!
ಮಾವಂದೇ ಇದಕ್ಕೆ ಸರೀಯಾಗಿ ತೊಂದರೆ ಮಾಡಿದವಾಡ!

ಅದಾ, ರೂಪತ್ತೆ ನೋಡುವಗ ನಾಯಿಯ ಸಂಕೊಲೆಲಿ ಕಟ್ಟಿದ್ದದು! ಪಾಪ!!

ಮನೆಒಳದಿಕ್ಕೆ ಸ್ವಚ್ಛಂದವಾಗಿ ತಿರುಗೆಂಡಿದ್ದ ನಾಯಿಯ ಹಿಡಿಸುಡಿಲಿ ಅಟ್ಟಿಅಟ್ಟಿ, ಹೆರಾಣ ಜೆಗಿಲಿಲಿ ಸಂಕೊಲೆಲಿ ಕಟ್ಟಿತ್ತಿದ್ದವಾಡ! 🙁
ಬರೇ ಹೆಜ್ಜೆಮಜ್ಜಿಗೆಯೂ, ಬೆಂದಿ ಅಶನವೂ ಮಾಂತ್ರ ಹಾಕಿ, ನಿತ್ಯವೂ ಹಾಲಿಲದ್ದಿದ ರಸ್ಕು, ಡೋಗುಫುಡ್ಡು, ಎಲುಬು, ಮೀನಿನತುಂಡು, ಮೊಟ್ಟೆ ತಿಂದು ಅಭ್ಯಾಸ ಆದ ನಾಯಿಗೆ ಅರೆಹೊಟ್ಟೆ ಮಾಡಿದ್ದವಡ. 🙁
ಇರುಳು ಮಣ್ಣಿ ಕೊಡ್ತ ಕ್ರಮವೇ ಇತ್ತಿಲ್ಲೇಡ ಅವಕ್ಕೆ!
ಉದಿಯಾದರೆ ಸಂಕೊಲೆಂದ ಬಿಟ್ಟುಬಿಟ್ಟೊಂಡಿತ್ತಿದ್ದವಾಡ, ಒಂದರಿ ಪ್ರೀತಿಲಿ ಗುಡ್ಡೆಗೆ ಕರಕ್ಕೊಂಡು ಹೋಯಿದವೇ ಇಲ್ಲೇಡ! 🙁
ಅಂತೂ ಮಾವ ಒಂದುವಾರ ಆ ಜಾತಿನಾಯಿಯ ನಾಯಿಜಾತಿ ಮಾಡಿಹಾಕಿದವು!

ರೂಪತ್ತೆ ಬೆಂಗುಳೂರಿಂದ ಬಂದದೇ, ಈ ನಾಯಿ ಇಡೀ ಬೇಜಾರ ಹೇಳಿಗೊಂಡತ್ತಡ.
ಬಪ್ಪಗ ಸುತ್ತಿದ ಪಟ್ಟೆಸೀರೆಗೇ ಹತ್ತಿ, ಮಾತಾಡಿತ್ತಡ.
ಸಂಕೊಲೆಲಿ ಕಟ್ಟಿಹಾಕಿದ್ದರ ಕಂಡು ಬೆಂಗುಳೂರಿನ ಅಷ್ಟೂ ಕೊಶಿ ಇಳುದು ಬೇಜಾರಾತಡ.

ಒಟ್ಟಾರೆ, ಬೆಂಗುಳೂರಿಂಗೆ ಬಿಟ್ಟಿಕ್ಕಿ ಹೋದ ಕಾರಣ ನಾಯಿಗೆ ಬೇಜಾರಾತಡ.
ನಾಯಿಯ ಕರಕ್ಕೊಂಡು ಹೋಪ ಕಾರು ಕೊಂಡೋಗದ್ದಕ್ಕೆ ರೂಪತ್ತೆಗೆ ಅದರ ಮೇಗೆಯೇ ಬೇಜಾರಾಗಿಂಡು ಇತ್ತಡ.

~
ನಾಯಿಗೆ ಹೆಚ್ಚು ಬೇಜಾರಾದ್ಸೋ, ಅತ್ತೆಗೋ, ಉಮ್ಮ!
ಎರಡು ವಾರ ಕಳುದರೂ ಬಚ್ಚಲು ಇಳುದ್ದಿಲ್ಲೆ, ಇನ್ನು ಬೇಜಾರ ಇಳಿವಲೆ ಎಷ್ಟು ದಿನ ಬೇಕಕ್ಕೋ – ಕಲ್ಮಡ್ಕನಂತಂಗೆ ಕನುಪ್ಯೂಸು ಬಂತಡ, ಅಜ್ಜಕಾನಬಾವನತ್ರೆ ಕೇಳಿದನಡ!

ರೂಪತ್ತೆಯ ನಾಯಿಗೆ ಬೇಜಾರಾದ್ದರ್ಲಿ, ರೂಪತ್ತೆಗೂ ಬೇಜಾರಾದ್ದರ್ಲಿ, ಕಲ್ಮಡ್ಕನಂತನೂ ಬೇಜಾರು ಮಾಡಿ ತೊರುಸಿದನಡ!
ಈ ಶುದ್ದಿ ಹೇಳುವಗ ರೂಪತ್ತೆಗೆ ತುಂಬ ಬೇಜಾರಾಗಿತ್ತಡ, ಕಲ್ಮಡ್ಕ ಅನಂತ ಹಾಂಗೇ ಬಂದು ಅಜ್ಜಕಾನ ಬಾವನ ಹತ್ತರೆ ಹೇಳಿದ°.
ಅಜ್ಜಕಾನ ಬಾವ ಒಪ್ಪಣ್ಣನ ಹತ್ತರೆ ಹೇಳಿದ°, ಒಪ್ಪಣ್ಣಂಗೂ ಬೇಜಾರಾತು.
ಒಪ್ಪಣ್ಣ ಈಗ ಬೈಲಿಂಗೆ ಹೇಳ್ತಾ ಇದ್ದೆ – ನಿಂಗೊಗೂ ಬೇಜಾರಾತಲ್ಲದೋ? ಫಾಫ!

ಇಪ್ಪ ವಿಶಯಕ್ಕೆ ರೂಪತ್ತೆಯೇ ರಜ ಸೇರುಸಿತ್ತೋ?
ಅಲ್ಲ; ಅನಂತ ರಜ ಸೇರುಸಿದನೋ?
ಅಲ್ಲ; ಇನ್ನು ನಮ್ಮ ಅಜ್ಜಕಾನ ಬಾವ ಲೊಟ್ಟೆ ಸೇರುಸಿದನೋ?
ಉಮ್ಮಪ್ಪ, ನವಗರಡಿಯ!
ನಾವಂತೂ ನವಗೆ ಕೇಳಿದ್ದರ ಹಾಂಗೇ ಬೈಲಿಂಗೆ ಹೇಳಿದ್ದು! ಒಪ್ಪಣ್ಣಂಗೆ ಲೊಟ್ಟೆ ಅರಡಿಯ ಇದಾ! 😉

ರೂಪತ್ತೆ ಹೇಂಗೋ ಜೆಂಬ್ರಲ್ಲಿ ಕಷ್ಟಪಟ್ಟು ಕೊಶಿ ತೋರುಸಿಗೊಂಡಿತ್ತಡ. ಜೆಂಬ್ರಲ್ಲಿ ರೂಪತ್ತೆ ಸುತ್ತಿದ – ಮಗಳ ಮರುವಾರಿ ಸೀರೆಯ ಮೇಚಿಂಗು – ಪಟ್ಟೆಸೀರೆಗೆ ಪುನರ್ಪುಳಿ ಕಲೆ ಬಿದ್ದದು ಹೊಸಾ ಬೇಜಾರು ಇದ್ದೇ ಇದ್ದನ್ನೇ!
ಅಂತೂ ಇಂತೂ ಇದರಿಂದಾಗಿ ಬೈಲಿಂಗೆ ಈ ವಾರಕ್ಕೆ ದಕ್ಕಿತ ಶುದ್ದಿ ಸಿಕ್ಕಿತ್ತು!
ಬೇಜಾರಂಗಳೆಡಕ್ಕಿಲಿಯೂ ಬೈಲಿಂಗೊಂದು ಅದೇ ಕೊಶಿ!  😉

ಒಂದೊಪ್ಪ: ಕಾಲ ಬಂದಪ್ಪಗ ಯೇವ ನಾಯಿಯೂ ಒಂದು ಶುದ್ದಿ ಅಕ್ಕು- ಹೇಳುಗು ಶಂಬಜ್ಜ ಮದಲಿಂಗೆ!

ಒಪ್ಪಣ್ಣ

   

You may also like...

65 Responses

 1. ಶರ್ಮಪ್ಪಚ್ಚಿ says:

  ಒಪ್ಪಣ್ಣಾ,
  ರೂಪತ್ತೆ ಕಾರಿನ ಒಳಾಂದ ಹೆರ ಬಪ್ಪನ್ನ ಮೊದಲೊಂದರಿ ಮೇಕಪ್ ಮಾಡುವದು, ಇಳುದ ಮತ್ತೆ ಕಾರಿನ ಶಭ್ದ ಬಪ್ಪ ಹಾಂಗೆ ಬೀಗ ಹಾಕುದು, ಮತ್ತೆ ಎಲ್ಲರಿಂಗೂ ಕಾಣುತ್ತ ಹಾಂಗೆ ಮೆಟ್ಟಿನ ಮಡುಗಿಕ್ಕಿ ಒಳ ಬಂದು ಶರ್ಬತ್ತು ಕುಡಿವಾಗ ಸೀರೆಗೆ ಬಿದ್ದಪ್ಪಗ ಬೇಜಾರು ಅಪ್ಪದು ಇದೆಲ್ಲಾ ವಿವರಣೆ ತುಂಬಾ ಸಹಜವಾಗಿ ಬಯಿಂದು. ಸರಿಯಾಗಿ ಗಮನಿಸಿರೆ, ಇದೆಲ್ಲಾ ಜೆಂಬಾರಂಗಳ ಮನೆಲಿ ಕಾಂಬ ವಿಚಾರಂಗಳೇ.
  ಯಾವ ವಿಚಾರಂಗಕ್ಕೂ ಬೇಜಾರು ಮಾಡದ್ದ ರೂಪತ್ತೆಗೆ ತನ್ನ ನಾಯಿಗೆ ಬೇಕಾದ ಹಾಂಗೆ ಅರೈಕೆ ಆಯಿದಿಲ್ಲೆ, ಕಾರಿಲ್ಲಿ ಅದನ್ನೂ (ಅವನನ್ನೂ) ಕರಕ್ಕೊಂಡು ಹೋಯೆಕ್ಕಾತು ಹೇಳಿ ಬೇಜಾರು ಆದ್ದು, ಅವರ ಪ್ರಾಣಿ ಪ್ರೀತಿಯೇ ಅದರೂ ಅಷ್ಟೇ ಪ್ರೀತಿ ಎಲ್ಲಾ ಪ್ರಾಣಿಗಳಲ್ಲಿಯೂ ತೋರಿಸಿದರೆ ಲಾಯಿಕ ಇತ್ತಿದ್ದು.
  ತಮಾಶೆ ಸೇರಿಸಿಂಡು ವಾಸ್ತವಕ್ಕೆ ಹತ್ರಾಣ ಸಂಗತಿಗಳ, ಒಪ್ಪಣ್ಣ ಈ ಲೇಖನಲ್ಲಿ ಬರದ್ದು ಎಲ್ಲರಿಂಗೂ ಕೊಶಿ ಕೊಟ್ಟತ್ತು ( ಬೌಶಃ ರೂಪತ್ತೆಗೆ ಬಿಟ್ಟು ಬಾಕಿ ಎಲ್ಲರಿಂಗೂ)
  ಮರತ್ತು ಹೋದ ಹಳೇ ಪ್ರಯೋಗ:
  [ಆಲೋಚನೆ ಕಂಜಿಹಾಕಿತ್ತು.]

  • ಅಪ್ಪಚ್ಚೀ..
   { ಅದನ್ನೂ (ಅವನನ್ನೂ) ಕರಕ್ಕೊಂಡು ಹೋಯೆಕ್ಕಾತು }
   ಓ, ಅವನನ್ನೂ ಹೇಳೇಕಾತಪ್ಪೋ – ಪುಣ್ಯ, ರೂಪತ್ತೆಯ ಕೈಲಿ ಮಾತಾಡುವ ಮದಲು ನಿಂಗೊ ನೆಂಪುಮಾಡಿದಿ. ಬಚಾವು!! 😉

   ನೆಗೆನೆಗೆ ಶುದ್ದಿಗೆ ನೆಗೆಯ ಒಪ್ಪ ಕೊಟ್ಟ ನಿಂಗೊಗೆ ಪ್ರೀತಿಗೊ.. 🙂

 2. ದೀಪಿಕಾ says:

  ವಾಹ್!! ಭಾರೀ ಲಾಯ್ಕಾಯ್ದು ವಿವರಣೆ..ಇದರ ಓದುವಾಗ ಆವಳಿಗೆ ಎಲ್ಲಾ ಓಡಿ ಹೋತು.
  ಪಾಪ ರೂಪತ್ತೆಗೆ ಅಷ್ಟು ಬಚ್ಚಲು ಇದ್ದರೂ ಹೋದವನ್ನೆ ಉಪ್ನಾನಕ್ಕೆ ಖುಶಿ ಆತು.ಅಷ್ತೂ ಹತ್ತರಾಣ ಜೆ೦ಬ್ರಕ್ಕೆ ಹೊಗದ್ದೆ ಮತ್ತೆ 😉
  ರೂಪತ್ತೆ ಕಾರಿ೦ದ ಇಳಿವ ವರ್ಣನೆ ಅ೦ತೂ ಸೂಪರ್…ಕಣ್ಣಿ೦ಗೆ ಕ೦ಡಾ೦ಗೇ ಆತು 🙂
  ಮತ್ತೆ ಬೆ೦ಗ್ಳೂರಿ೦ಗೆ ಹೋದಿಪ್ಪಗ ಮ೦ತ್ರಿಮಾಲಿಲಿ ಅ೦ತೆ “ಗಿಲುಬಾಗಿಲು ವ್ಯಾಪಾರ” ಮಾಡಿ ಬೈ೦ದವಿಲ್ಲೆನ್ನೆ ಎರಡು ಸೀರೆ, ನಾಕು ಚೂಡಿದಾರ, ನಾಕು ಸೆಟ್ಟು “ಒಂದುಗ್ರಾಮುಚಿನ್ನದ” ಬಳೆ, ಎರಡು ವೇನಿಟಿಬೇಗುಗೊ–ಇಷ್ಟಾದರು ತೆಕ್ಕೊ೦ಡವನ್ನೆ ಹೇಳಿ ಖುಶಿ ಆತು 😉
  ಅ೦ತೂ ರೂಪತ್ತೆಯ ಗ೦ಡನ ಗ್ರೇಶಿ ಬೆಜಾರಾತು 🙁
  “ಜಾತಿನಾಯಿಯ ನಾಯಿಜಾತಿ ಮಾಡಿಹಾಕಿದವು!”-ಇದರ ಓದಿ ಒ೦ದುಜಾತಿ ನೆಗೆ ಮಾಡುದೆ ಆಯಿದು 🙂
  ಒಟ್ಟಾರೆ ಇದ್ದದರ ಇದ್ದ ಹಾ೦ಗೆ ಬರದ ಒಪ್ಪಣ್ಣ೦ಗೆ ಧನ್ಯವಾದ..ಹೊಟ್ಟೆತು೦ಬ ನೆಗೆ ಮಾಡಿದೆ 🙂

  • { ಅ೦ತೂ ರೂಪತ್ತೆಯ ಗ೦ಡನ ಗ್ರೇಶಿ ಬೆಜಾರಾತು 🙁 }
   – ಅಬ್ಬ, ಇದೊಂದು ವಿಶಯಲ್ಲಿ ಆದರೂ ಬೇಜಾರಾತಲ್ಲದೋ? ಒಪ್ಪಣ್ಣಂಗೆ ಕೊಶೀ ಆತು.
   ಬೇರೆ ನೆಗೆಮಾಡಿದ್ದು ಒಪ್ಪಣ್ಣಂಗೆ ಬೇಜಾರಾತು. 😉

 3. ಚುಬ್ಬಣ್ಣ says:

  ಅದಾ..!! ಈ ರೂಪತ್ತೆಯ ದಿಸೆಲ್ಲಿ ಅಕ್ಕೋ?? ಚೇ..!! ಮನೆಲಿ ನಾಯಿ(..ಗಳ??) 😉 ಬಿಟ್ಟಿಕ್ಕಿ ಮಗಳಲ್ಲಿಗೆ ಹೋದ್ದು ಸಾಕನ್ನೆ?? 🙂
  ಬೇ೦ಗ್ಳೂರಿ೦ಗು ಪಾಪದ ನಾಯಿ…ಯ ಕರಕ್ಕೊ೦ಡು ಹೋಪಲಾವುತ್ತಿತ್ತು.. ಚೇ..!!
  ಅದು ಪಾಪ ರೂಪತ್ತೆಯ ಕಾಣದ್ದೆ – “ಉಕ್ಯೋ…!! ಉಕ್ಯೋ…” ಹೇಳಿ ಬೊಬ್ಬೆ ಹಾಕೆ೦ಡು ಇತೋ ಏನೋ..!!

  ಒಟ್ಟಾರೆ “ಮ೦ಕ್ರೀ” ಮಾಲು ನೋಡಿ,
  ಬೇ೦ಗ್ಳೂರು ಬಚ್ಚಿಲ್ಲಿ ತಿರುಗಿ..
  ಬಚ್ಚಲು ಹಿಡುದತ್ತು..!!
  ಪಾಪದ ರೂಪತ್ತೆಗೆ..

  • ಬೊಳುಂಬು ಮಾವ says:

   ಚುಬ್ಬಣ್ಣನ ಒಪ್ಪ ಕಾಣದ್ದೆ ತುಂಬಾ ಸಮಯ ಆತದ. ಒಪ್ಪ ಕಂಡು ಕೊಶಿ ಆತು. ಒಪ್ಪ ಕಾಂಬಗ ರಜಾ ಬೋಚಬಾವನ ಅನುಸರಿಸಿದ ಹಾಂಗೆ ಕಾಣ್ತಾನೆ ? ಒಪ್ಪವ, ಬೋಚಬಾವನ ಹತ್ರೆ ಹೇಳಿ ಹಾಕ್ಸಿದ್ದೊ ಎಂತ ?

   • ಚುಬ್ಬಣ್ಣ says:

    ಹೆ ಹೆ ಹೆ…!! ಅದಾ ಮಾವ..!! 🙂

    ನಮ್ಮ ಒಪ್ಪಕ್ಕೆ ನಿ೦ಗಳ ಒಪ್ಪ ಬರದ್ದು ಕ೦ಡು ಕೊಶಿಯಾತು.. ಹಾ ಮತ್ತೆ ನಾವು ಎಲ್ಲಾ ವಿಶಯ೦ಗಳನ್ನು ಓದುತ್ತೆ ಮಾವ.. ಒಪ್ಪ ಒ೦ದಲ್ಲಾ ಒ೦ದು ರೀತಿ ಬರೆತ್ತೆಪ್ಪಾ… 😉 , ನಮ್ಮ ಬೋಚನ ಅನುಯಾಯಿಗೊ ಅಲ್ಲದೋ? ಹಾ೦ಗೆ ನಾವು ಬರವ ಶೈಲಿಯೂ ಹಾ೦ಗೆ ತಿರುಗೊತ್ತೊ??? ಛೆ..!!! ಆಗಪ್ಪಾ ಆಗ ಈ ಬೋಚನ ದಿಸೆಲಿ !?
    ಅವನ ಒಪ್ಪ ಓದಿ ಓದಿ.. ಆನುದೆ ಬೋಚ ಆಗದ್ರೆ ಸಾಕು..!!

    • { ಆನುದೆ ಬೋಚ ಆಗದ್ರೆ ಸಾಕು..!! }
     ಯವ್ವಾ! ಚುಬ್ಬಣ್ಣ ಹೀಂಗೆ ಹೇಳಿದ್ದರ ಕೇಳಿರೆ ರೂಪತ್ತೆಗೆ ಮದಲಾಣ ಬೇಜಾರ ಪೂರ ಮರಗು (ಹೊಸ ಬೇಜಾರ ಮಾಂತ್ರ ಒಳಿಗಟ್ಟೇ! ) 😉

 4. ವ್ಹಾರೆ ವ್ಹಾ..! ರೂಪತ್ತೆಯ ಕಥೆ ಓದಿಯಪ್ಪಗ ಕಣ್ಣಿಲಿ ನೀರು ಬಂತು. (ನಗೆ ಮಾಡಿ ಮಾಡಿ, ಬೇಜಾರಾಗಿ ಅಲ್ಲ. 😉 )
  ಕಥೆ ತುಂಬಾ ಸೂ………ಪರು ಆಯಿದು. ಇಂತಹ ಕಥೆ ಹೇಳಿದ್ದಕ್ಕೆ ಒಪ್ಪಣ್ಣಂಗೆ ನಮೋ ನಮ:
  ಈ ಒಪ್ಪ ಓದಿಯಪ್ಪಗ ರೂಪತ್ತೆಗೆ ಬೇಜಾರಾದರೆ ಆನು ಜೆನ ಅಲ್ಲ 😉

  • ಪ್ರದೀಪಣ್ಣಂಗೆ ಬೇಜಾರಾದರೂ, ಕೊಶಿ ಆದರೂ, ಮುಣ್ಚಿತಿಂದರೂ – ಕಣ್ಣಿಲಿ ನೀರು ಬಂದೇ ಬತ್ತು,

   ಸೂ…..ಪರು ಆದ ಶುದ್ದಿಯ ಕೇಳಿ ಬೈಲಿಂಗೆ ಬೇ…ಜಾರು ಆದ್ದದು ಸೃಷ್ಟಿ ವೈಚಿತ್ರ್ಯ, ಅಲ್ಲದೋ? 🙂

 5. ಅಬ್ಬಾ ರೂಪತ್ತೆ….

 6. AnandaSubba says:

  ಲಾಯಿಕ್ಕಾಯಿದು…..
  ಬೇಜಾರು ಏನೂ ಇಲ್ಲೆ…. ಹೇಳಿ ….. ಅಲ್ಲಿ ಇಲ್ಲಿ ಸೇರ್ಸಿ …ಯಾವದಕ್ಕೂ ಬೇಜಾರ ಮಾದದ್ದ ಈ ರೂಪತ್ತೆಯ ಗುಣ ನಿಜವಾಗಿಯೂ ಮೆಚ್ಹೆಕ್ಕಾದ್ದೆ.

  • {ಯಾವದಕ್ಕೂ ಬೇಜಾರ ಮಾದದ್ದ ಈ ರೂಪತ್ತೆಯ ಗುಣ ನಿಜವಾಗಿಯೂ ಮೆಚ್ಹೆಕ್ಕಾದ್ದೆ}
   ಸುಬ್ಬಣ್ಣ, ರೂಪತ್ತೆಲಿಯೂ ಮೆಚ್ಚೇಕಾದ ವಿಶಯ ಹುಡ್ಕಿದ ನಿಂಗಳ ಕಂಡ್ರೆ ರೂಪತ್ತೆಗೆ ಆದ ಬೇಜಾರವೂ ಮರಗು! 😉

 7. Harish - Kevala says:

  Para oorili, orina nenapappaga, asakka appaga oppnnana nodudu, ooringe hogi bandange avtuu:)

 8. amma says:

  laikaidu oppanna.
  odi tumba negeyu maadi aatu. roopatteya hesaru bandare car,patte seere avara naayi ityadigala hesaru seradre adarli maja ille allada oppanno.
  ondari bailinavakke parichaya maadusekku aatha.
  oppannange purusottilladre gurikkarru sikkire avaratre helu oppanno.
  ondari mukatha beti aagali.
  pastaidu. tumba samayave aathu heengippa shuddi bareyadde.baretta iru .
  good luck…

  • ಒಪ್ಪಣ್ಣಂಗೆ ರೂಪತ್ತೆಯ ಪರಿಚಯ ಮಾಡುಸಿದ್ದು ನಿಂಗಳೇ ಅಲ್ಲದೋ – ಇನ್ನು ಬೈಲಿಂಗೆ ಒಪ್ಪಣ್ಣ ಪರಿಚಯ ಮಾಡ್ತದರ್ಲಿ ಎಂತರ ಕೊಶಿ ಇದ್ದು?
   – ನಿಂಗಳೇ ಮಾಡಿಕ್ಕಿ, ಆಗದೊ? 😉

   ಹ್ಮ್, ರೂಪತ್ತೆಯ ಹೆಸರಿನೊಟ್ಟಿಂಗೆ ಕಾರು, ಪಟ್ಟೆಸೀರೆ, ನಾಯಿ – ಎಲ್ಲ ಬಾರದ್ದರೆ ರೂಪತ್ತೆಗೂ ಪಾತಿಅತ್ತೆಗೂ ಎಂತ ವಿತ್ಯಾಸ ಇದ್ದು ಬೇಕೇ? 🙂

 9. Lana says:

  😀 ಎನಗೆ ಓದಿ ಓದಿ ಹೊಟ್ಟೆ ಬೇನೆ ಎದ್ದತ್ತು…(ನೆಗೆ ಮಾಡಿ ಮಾಡಿ)

  ಪುಣ್ಯಕ್ಕೆ ಎನ್ನ ಆಪೀಸಿಲಿ ಆರೂ ಇತ್ತಿದ್ದವಿಲ್ಲೆ ಇಲ್ಲದ್ರೆ ಇವಂಗೆಂತಾತಪ್ಪ ಗ್ರೇಷುತಿತ್ತವು ನೆಗೆ ಮಾಡುವ ಅವಸ್ಥೆ ನೋಡಿ…

  ಕೊನೆಗೊರೆಗೂ ಎಂತದೋ ಕುತೂಹಲ ಇತ್ತಿದ್ದು ಎಂತಕಪ್ಪಾ ಬೇಜಾರಾದ್ದು ಹೇಳಿ, ಮತ್ತೆ ಪೂರ್ತಿ ಓದಿ ಅಪ್ಪಗ ಮತ್ತೂ ನೆಗೆ ಬಂತು..

  ಪಾಪ ನಾಯಿ ಸುಮಾರು ಬಚ್ಚಿದಾಂಗೆ ಕಾಣ್ತನ್ನೆ…. 😛

  ಅಂಬಗ ನಾಯಿಗೆಂತ ತೈಂದವಿಲ್ಲೆಯ ಅತ್ತೆ ಬೆಂಗ್ಳೂರಿಂದ ? !!!!

 10. ಅಪ್ಪನ್ನೇ.. ಮತ್ತೆ ಬೇಜಾರಾಗದ್ದೆ ಇಕ್ಕೋ???

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *