Oppanna.com

ಸಲಾಂ ಹೊಡವ ಕಲಾಂ, ಏಕೂ ಬೇಡದ್ದ ಯಾಕೂಬ್!

ಬರದೋರು :   ಒಪ್ಪಣ್ಣ    on   31/07/2015    3 ಒಪ್ಪಂಗೊ

ಗುರುಪೂರ್ಣಿಮೆ ಬಂದರೆ ಗುರುಗೊ ಚಾತುರ್ಮಾಸ್ಯಕ್ಕೆ ಕೂರ್ತವು ಹೇಳ್ತದು ಅವಿಚ್ಛಿನ್ನ ಸತ್ಯ. ಹಾಂಗಾಗಿ ನಾವುದೇ ಒಂದು ಗಳಿಗೆ ಹೋಪೊ° ಹೇದರೆ ಕಾರ್ಯಕ್ರಮ ಇಪ್ಪದು ಬೆಂಗ್ಳೂರಿಲಿ. ಎಡೆಮಾಡಿಗೊಂಡು ಹೋಯೇಕು; ಅದಕ್ಕೆ ಅಡಕ್ಕೆ ತೆಗೆತ್ತ ಬಾಬು, ಕೆಲಸಕ್ಕೆ ಬತ್ತ ಸುಕುಮಾರ°, ಗೊಬ್ಬರ ತೆಗವ ಸಂಕು, ಬೇಲಿ ಹಾಕುವ ಬಟ್ಯ – ಎಲ್ಲೋರ ಅನುಗ್ರಹ ಆಯೇಕಟ್ಟೆ. ನೋಡೊ°, ಈ ವಾರ ಎಡಿಯದ್ರೂ ಬಪ್ಪವಾರ ಬೆಂಗ್ಳೂರಿಂಗೆ ಹೋಯೇಕು. ಹೋಗಿ ಅಲ್ಲಿಪ್ಪ ನಮ್ಮ ಬೈಲಿನೋರ ಒಂದರಿ ಕಾಣೇಕು. ಪೆರ್ಲದಣ್ಣನಿಂದ ಹಿಡುದು ಶುಬತ್ತೆಯ ಒರೆಂಗೆ ಬೆಂಗ್ಳೂರಿಲಿ ಒಂದು ಗಳಿಗೆ ಚಾಯಕುಡುದಿಕ್ಕಿ ಬಪ್ಪಲೆ ಸುಮಾರು ಮನೆಗೊ ಇದ್ದಿದಾ.
ಅದಿರಳಿ.

~

ಈ ವಾರ ಎರಡು ವಿಶೇಷ ಘಟನೆಗೆ ಸಾಕ್ಷಿ ಆತು.
ಆ ಘಟನೆಗೊ ಒಂದಕ್ಕೊಂದು ಸಾಮ್ಯತೆಯೂ ಇದ್ದು; ತದ್ವಿರುದ್ಧ ಚಿಂತನೆಗಳೂ ಇದ್ದು.
ಒಂದೇ ದಿನ ಭಾರತಲ್ಲಿ ನೆಡದ ಎರಡು ಮುಖ್ಯ ಅಂತ್ಯಸಂಸ್ಕಾರಂಗೊ!
ಹಾಂಗಿಪ್ಪ ನಭೂತೋ ಹೇಳ್ತ ಸಂಗತಿಗೊ ಅದು! ಹಿಂದೆಂದೂ ಹಾಂಗೆ ಆದ್ಸು ಕಂಡಿದಿಲ್ಲೆ, ಮುಂದೆ ಆಗಲೂ ಆಗ ಹೇಳ್ತ ಸಾಮ್ಯತೆ.

ಸಾಮ್ಯತೆ ಎಂತರ?

ಇಬ್ರುದೇ ಒಂದೇ ಮತದವು.
ಇಬ್ರುದೇ ಒಂದೇ ಧರ್ಮದವು.
ಇಬ್ರುದೇ ಅದೇ ಖುರಾನಿನ ಓದಿದ್ದು.
ಇಬ್ರುದೇ ಬೋಂಬು ಹೊಟ್ಟುಸಿದವು.
ಇಬ್ರುದೇ ಅದೇ ಅಲ್ಲಾಹುವಿಂಗೆ ನಮಸ್ಕಾರ ಮಾಡಿದ್ದದು.
ಇಬ್ರುದೇ ಒಂದೇ ದೇವರಿಂದ ಪ್ರೇರೇಪಿತರಾದ್ದದು.

ಅವರಲ್ಲಿದ್ದ ವಿರೋಧಾಂಶಂಗೊ ಎಂತರ?

ಒಂದು ಉತ್ತರದ ಮಹಾರಾಷ್ಟ್ರಲ್ಲಿ, ಇನ್ನೊಂದು ದಕ್ಷಿಣದ ತೆಮುಳುನಾಡಿಲಿ.
ಒಂದು ದೇಶಪ್ರೇಮಿ ಮುಸಲ್ಮಾನ, ಇನ್ನೊಂದು ದೇಶದ್ರೋಹಿ ಮುಸಲ್ಮಾನ.
ಒಂದು ದೇಶದ ಹಿತಚಿಂತಕ, ಇನ್ನೊಂದು ದೇಶಕ್ಕೆ ರಾಕ್ಷಸ.
ಒಂದು ಧರ್ಮಸಹಿಷ್ಣು, ಇನ್ನೊಂದು ಧರ್ಮಾಂಧ.
ಒಂದು ದೇಶದ ಭದ್ರತೆಯ ಕೆಲಸ ಮಾಡಿದ್ದು; ಇನ್ನೊಂದು ದೇಶವ ಒಡವ ಕೆಲಸ ಮಾಡಿದ್ದು.
ಒಂದು ದೇಶಕ್ಕಾಗಿ ಅಣುಬೋಂಬು ಹೊಟ್ಟುಸಿದ್ದು, ಇನ್ನೊಂದು ಜೆನರ ಕೊಲ್ಲಲೆ ಬೋಂಬು ಹೊಟ್ಟುಸಿದ್ದು.

ಒಂದು “ಬಿಟ್ಟುಹೋದಿರೋ?” ಹೇದು ಜೆನಂಗೊ ಬೇಜಾರ ಮಾಡುವ ವೆಗ್ತಿತ್ವ; ಇನ್ನೊಂದು “ಪೀಡೆ ತೊಲಗಿತ್ತು!” ಹೇದು ನಿಟ್ಟುಸಿರು ಬಿಡ್ತ ಕಾಟು.
ಒಂದು “ಇನ್ನೊಂದರಿ ಹುಟ್ಟಿ ಬನ್ನೀ” ಹೇದು ತಿಳಿವ ವೆಗ್ತಿತ್ವ; ಮತ್ತೊಂದರಿ “ಮತ್ತೆ ಬಂದರೆ ಜಾಗ್ರತೆ” – ಹೇದು ಅಟ್ಟೆಕ್ಕಾದ ವೆಗ್ತಿ.
ಒಂದಕ್ಕೆ ಕೊರಳಿಂಗೆ ಹೂಗಿನ ಮಾಲೆ, ಇನ್ನೊಂದರ ಕೊರಳಿಂಗೆ ನೇಣು ಬಳ್ಳಿಯ ಮಾಲೆ.
ಒಂದು ಸಂತ; ಇನ್ನೊಂದು ಸಂತೆಯ ಕಜ್ಜುನಾಯಿ!

~
ಡಾ.ಅಬ್ದುಲ್ ಕಲಾಂ – ಹೇದರೆ ಇಡೀ ದೇಶಕ್ಕೆ ದೇಶವೇ ಕೈಮುಗಿವ ವೆಗ್ತಿತ್ವ. ಭಾರತದ ರಕ್ಷಣಾ ವಿಭಾಗಲ್ಲಿ ಇಂಜಿನಿಯರು ಆಗಿದ್ದುಗೊಂಡು ಕ್ಷಿಪಣಿ, ರೋಕೆಟ್ಟು, ಅಣುಶೆಗ್ತಿ ಎಲ್ಲ ಕೆಲಸ ಮಾಡಿ ಭಾರತವ ಸುಧೃಡ ಮಾಡಿದ ಮಹಾನ್ ವೆಗ್ತಿ ಈ ಅಬ್ದುಲ್ ಕಲಾಂ. ಅಂದೊಂದರಿ ಅಣ್ವಸ್ತ್ರ ಮಾಡಿದ ಸಂಗತಿ ಮಾಡಿದ ಸಂಗತಿಲಿ ಇವರ ಸಂಗತಿ ಹೇಳಿದ್ದು.
ಮುಂದೆ ಓಜುಪೇಯಿ ಅಜ್ಜ° ಪ್ರಧಾನಿ ಆಗಿಪ್ಪ ಸಮೆಯಲ್ಲಿ ಈ ಜೆನವ “ರಾಷ್ಟ್ರಪತಿ” ಮಾಡಿದವಾಡ. ಹಾಂಗೆ ಈ ಕಲಾಂ ಅಜ್ಜ° ದೇಶದ ಹನ್ನೊಂದನೇ ರಾಷ್ಟ್ರಪತಿಯಾಗಿ ಸ್ಥಾನಾಲಂಕರುಸಿದ್ದತ್ತಡ.

~

ಯಾಕುಬ್ ಮೆಮನ್ – ಹೇದರೆ ಮಹಾನ್ ಕ್ರೂರಿ ದೇಶದ್ರೋಹಿ.
ಅಂದು, ಇಪ್ಪತ್ತೊರಿಶ ಮೊದಲು ಬೊಂಬಾಯಿಲಿ ಬೋಂಬು ಹೊಟ್ಟಿತ್ತಲ್ಲದೋ? ಸಾವಿರಾರು ಜೆನಕ್ಕೆ ಉಪದ್ರ ಆತು; ನೂರಾರು ಜೆನ ಸತ್ತವು; ಹತ್ತಾರು ಜೆನ ಈ ಕುಕೃತ್ಯಲ್ಲಿ ಸಿಕ್ಕಿಬಿದ್ದವಾಡ; ಅದರ್ಲಿ ಒಂದು ಈ ಯಾಕೂಬ್.
ಅದೊಂದು ಏಕೂಬೇಡದ್ದ ಯಾಕೂಬ್.

~
ಮೊನ್ನೆ ಮೇಘಾಲಯಕ್ಕೆ ಕಲಾಂ ಮಾಷ್ಟ್ರು ಪಾಠ ಮಾಡ್ಳೆ ಹೋಗಿಪ್ಪಾಗ ಹೃದಯ ಸ್ತಂಭನ ಆತಾಡ. ದೇಶಕ್ಕೆ ದೇಶವೇ ಕಣ್ಣೀರು ಹಾಕಿ ಬೇಜಾರು ಮಾಡಿಗೊಂಡತ್ತು. ಮೇಘಾಲಯಂದ ದೆಹಲಿಗೆ ತಂದು, ಅಲ್ಲಿಂದ ಚೆನ್ನೈಗೆ ತಂದು ನಿನ್ನೆ ರಾಮೇಶ್ವರಲ್ಲಿ ಮಣ್ಣುಮಾಡಿದವಾಡ. ಲಕ್ಷ ಸಂಖ್ಯೆಲಿ ಕಲಾಂ ಮಾಷ್ಟ್ರ ನೋಡಿ ನಮಸ್ಕಾರ ಮಾಡ್ಳೆ ಸಾಲಿಲಿ ನಿಂದಿತ್ತಿದ್ದವಾಡ. ಸೇನೆಯ ಉನ್ನತ ಅಧಿಕಾರಿಂದ ಹಿಡುದು ಶಾಲೆಯ ಸಣ್ಣ ಮಕ್ಕಳವರೆಗೆ ಎಲ್ಲೊರೂ ಕಣ್ಣೀರು ಹಾಕಿದವಡ. ಅವರ ಮನೆಯವ್ವೇ ತೀರಿ ಹೋದ ದುಕ್ಕ ಅನುಭವಿಸಿದವಡ.

~

ಏಕೂಬೇಡದ್ದ ಏಕೂಬಿನ ಫಾಶಿಗೆ ಕೊಡೆಕ್ಕು – ಹೇದು ಕೋರ್ಟು ಹೇಳಿತ್ತಾಡ. ಆ ಪ್ರಕಾರ ಮೊನ್ನೆಂದಲೇ ಪ್ರಕ್ರಿಯೆ ಸುರು ಆಗಿತ್ತಾಡ. ಆದರೆ, ಎನಗೆ ಫಾಶಿಂದ ಮುಕ್ತಿ ಕೊಡೇಕು – ಹೇದು ರಾಷ್ಟ್ರಪತಿಗೆ ಪತ್ರ ಬರದತ್ತಾಡ.
ಮೊನ್ನೆ ನೆಡಿರುಳು ಕೋರ್ಟಿಲಿ ಕೂದು ಜಡ್ಜ “ಇಲ್ಲೆ, ಆತೇ ಇಲ್ಲೆ. ಇದಕ್ಕೆ ಸಾವೇ ಮುಕ್ತಿ” – ಹೇದು ತೀರ್ಪು ಕೊಟ್ಟತ್ತಾಡ.
ಹಾಂಗಾಗಿ, ನಿನ್ನೆ ಉದಿಉದಿಯಪ್ಪಗಳೇ ಅದರ ಬಳ್ಳಿಕೊಟ್ಟು ನೇಲುಸಿದವು. ಕ್ರಿಮಿಯ ಕತೆ ಮುಗುಶಿದವು.

~
ಭಾರತಮಾತೆಯ ಇಬ್ರು ಮಕ್ಕೊ – ಒಂದು ಅತ್ಯಂತ ಮೇಲ್ಮಟ್ಟದ ದಾರಿ ಹಿಡುದು ಆದರ್ಶ ಆತು. ಮತ್ತೊಂದು ಅತೀ ಕೆಟ್ಟದಾರಿ ಹಿಡುದು ಕುಖ್ಯಾತ ಆತು.
ನಮ್ಮ ಕಣ್ಣೆದುರೇ ಇದ್ದು – ಎರಡೂ ಉದಾಹರಣೆ. ಆರು ನವಗೆ ಆದರ್ಶ ಹೇದು ತೆಕ್ಕೊಂಬದು ನಮ್ಮ ವಿವೇಚನೆಗೆ ಬಿಟ್ಟದು.
ಎಂತ ಹೇಳ್ತಿ?
~

ಒಂದೊಪ್ಪ: ಪ್ರಖ್ಯಾತ ಸಂತನೂ, ಕುಖ್ಯಾತ ಸಂತೆ ನಾಯಿಯೂ ಒಂದೇ ದಿನ ಅಬ್ಬೆಮಣ್ಣಿಲಿ ಮಣ್ಣಾದವು. ಆರು ಮನಸ್ಸಿನ ದ್ರವಿಸಿ ಹೋದ್ದು? ಆರು ಶಪಿಸಿ ಹೋದ್ದು? ಆರ ಜೀವನ ಸಾರ್ಥಕ?

3 thoughts on “ಸಲಾಂ ಹೊಡವ ಕಲಾಂ, ಏಕೂ ಬೇಡದ್ದ ಯಾಕೂಬ್!

  1. ಕಲಾಂ ಅಜ್ಜನ ಒಟ್ಟಿಂಗೆ ಯಾಕೂಬ್ ನ ಹೋಲುಸಿದರೆ ಪರಿಮಳದ ಹೂಗಿನ ಹೇಸಿಗೆಯ ಒಟ್ಟಿಂಗೆ ಹೋಲಿಸಿದ ಹಾಂಗೆ ಆಗದೋ ?
    ಗೋಪಾಲಣ್ಣನ ಅಭಿಪ್ರಾಯ ಸರಿಯೇ ಹೇದು ಕಾಣುತ್ತು

  2. olle ಲೇಖನ. ಆದರೆ ಎನಗೆ ಒಂದು ದೊಡ್ಡ ಆಕ್ಷೇಪ ಇಪ್ಪದು ಒಂದೇ ದಿನ ಸಮಾಧಿ ಮಾಡಿದ್ದಕ್ಕೆ ಕಲಾಂ ಮತ್ತೆ ಯಾಕೂಬ್ ಬಗ್ಗೆ ತುಂಬಾ ಜನ ಬರೆದ್ದು. ಒಂದೇ ದಿನ ಸಾವಿರ ಘಟನೆಗೋ ಆದಿಕ್ಕು . ಆದರೆ ಕಲಾಮ್ ನ ಜತೆ ಹೆಸರು ತೆಗೆವ ಯೋಗ್ಯತೆಯೂ ಆ ಮತ್ತೊಂದು ಮನುಷ್ಯಂಗೆ ಇಲ್ಲೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×