Oppanna.com

ಸಂಸ್ಕೃತಿ ಒಳಿಶುವ ಸಂಸ್ಕೃತದ ಬದಲು ಜನ್ಮಕ್ಕೂ ಬೇಡದ್ದ ಜರ್ಮನಿ ಕಲಿಶುತ್ತವಾಡ. . .

ಬರದೋರು :   ಒಪ್ಪಣ್ಣ    on   21/11/2014    9 ಒಪ್ಪಂಗೊ

ಬೈಲಿಂಗೂ ಸಂಸ್ಕೃತಕ್ಕೂ ಅವಿನಾಭಾವ ಸಂಬಂಧ ಇದ್ದು. ಸಂಸ್ಕೃತ ವಿದ್ವಾಂಸರಾದ ವಿದ್ವಾನಣ್ಣ, ಕೂಳಕ್ಕೂಡ್ಳಣ್ಣ, ಕಾಂತಣ್ಣ ಸ್ವತಃ ಇಪ್ಪದಲ್ಲದ್ದೇ, ಚೆನ್ನೈಭಾವನ ಹಾಂಗಿರ್ತ ಅವಿರತ ಸೇವಕರೂ ಸಂಸ್ಕೃತದ ಬೆಳವಣಿಗೆಲಿ ಕೆಲಸಮಾಡ್ತಾ ಇದ್ದವು.
ಇದು ಹೆಮ್ಮೆಯಷ್ಟೇ ಅಲ್ಲ, ಕರ್ತವ್ಯವೂ ಅಪ್ಪು.
ಅಷ್ಟಕ್ಕೂ, ನಮ್ಮೆಲ್ಲರ ಮೂಲ ಸಂಸ್ಕೃತಲ್ಲೇ ಇಪ್ಪದಲ್ಲದೋ? ಸಂಸ್ಕೃತ ಇಲ್ಲದ್ದರೆ ನಮ್ಮ ಯೇವ ಭಾಷೆಯೂ ಇಲ್ಲೆ, ನಮ್ಮ ವೇದ ವೇದಾಂತ ಪುರಾಣಂಗಳೇ ಇಲ್ಲೆ, ಸನಾತನ ಧರ್ಮವೇ ಇಲ್ಲೆ. ಎಲ್ಲದಕ್ಕೂ ಪಾಯ ಸಂಸ್ಕೃತವೇ.

ಸಂಸ್ಕೃತವೇ – ಹೇದು ಎಂಗೊನಿಂಗೊ ಹೇಳಿಗೊಳ್ತು. ಆದರೆ ಬಾಕಿದ್ದೋರು?
~
ಸಂಸ್ಕೃತ-ಸಂಸ್ಕೃತಿ ಇದು ಎರಡೂ ಒಂದೇ ನಾಣ್ಯದ ಎರಡು ಮೋರೆಗ ಇಪ್ಪ ಹಾಂಗೆ. ಒಂದರ ಬಿಟ್ಟು ಇನ್ನೊಂದು ಇಲ್ಲೆ.
ನವಗೆ ಸಂಸ್ಕೃತ ಹತ್ತರೆ ಆಗಿಕ್ಕು, ಆದರೆ ಎಲ್ಲೋರಿಂಗೂ ಹಾಂಗಲ್ಲನ್ನೇ.
ಸಂಸ್ಕೃತ-ಸಂಸ್ಕೃತಿ ಬೇಕು ಹೇಳುವ ಜೆನಗುಂಪು ಹೇಂಗೆ ಸಕ್ರಿಯವಾಗಿ ಇದ್ದೋ, ಅದೇ ನಮುನೆ ಇದೇವದೂ ಬೇಡ – ಹೇದು ತಿಳಿವ ಗುಂಪುದೇ ಇದ್ದು. ಅವಕ್ಕೆ ನಮ್ಮ ಇತಿಹಾಸ ಬೇಡ, ನಮ್ಮ ಸನಾತನತೆ ಬೇಡ, ನಮ್ಮ ವೇದ-ಪುರಾಣ ಬೇಡ, ನಮ್ಮ ಸಂಸ್ಕಾರ ಬೇಡ, ನಮ್ಮ ಸಂಸ್ಕೃತಿ ಬೇಡ – ಇದೇವದೂ ಬೇಡ. ಅದರೊಟ್ಟಿಂಗೆ ನಮ್ಮದೇ ಆದ ಸಂಸ್ಕೃತವೂ ಬೇಡ!
ಬೇಡ ಹೇಳುದರಿಂದಲೂ ಜಾಸ್ತಿ – ಎಲ್ಲ ಬಿಡುವೊ° ಹೇದು.
ಆ ’ಬೇಡ’ದ್ದ ಗುಂಪು, ಆ ಬಿಟ್ಟೋರ ಗುಂಪು – ಸರಕಾರದ ಮುಖ್ಯಮುಖ್ಯ ಜಾಗೆಲಿ ಹೋಗಿ ಸೇರಿಗೊಂಡದು ನಮ್ಮ ದೇಶದ ದೌರ್ಭಾಗ್ಯ.

ಸರ್ಕಾರದ ಮೂಲಕ ನಮ್ಮ ಸಂಸ್ಕಾರದ ದಮನಕ್ಕೆ ಪ್ರಯತ್ನ ಅಪ್ಪದು ಇಂದಿಂದ ಅಲ್ಲ – ಮೊಘಲರ ಕಾಲಂದಲೇ ಆವುತ್ತಾ ಇದ್ದು. ಮುಂದೆ ಬ್ರಿಟಿಷರ ಆಡಳ್ತೆಲಿಯೂ ಮುಂದುವರುದತ್ತು. ಇತಿಹಾಸವ ತಿರ್ಗಾಮುರ್ಗಾ ಮಾಡಿ ಬರೆಸ್ಸು, ಲೊಟ್ಟೆಕತೆಗಳನ್ನೇ ಇತಿಹಾಸ ಹೇದು ನಂಬುಸುಸ್ಸು, ಮಹಾನ್ ಪುರುಷರ ಕಳ್ಳಂಗೊ ಹೇದು ನಂಬುಸುಸ್ಸು – ಇದೆಲ್ಲ ನಮ್ಮ ದೇಶಲ್ಲಿ ಧಾರಾಳ ನೆಡಕ್ಕೊಂಡು ಬಂದ ಸಂಗತಿಯೇ.

ದುರದೃಷ್ಟ ಎಂತರ ಹೇದರೆ, ಸ್ವಾತಂತ್ರ್ಯ ಬಂದಮತ್ತೆ ನಮ್ಮದೇ ಆದ ಸರ್ಕಾರ ಬಂದ ಮತ್ತುದೇ – ಹೀಂಗಿರ್ತ “ಎಲ್ಲವನ್ನೂ ಬಿಟ್ಟ”ವರ ಗುಂಪು ಧಾರಾಳ ಇದ್ದತ್ತು. ಶಾಲೆಯ ಪುಸ್ತಕಂಗಳನ್ನೇ ತಿದ್ದಿ ಆತು. ಬೋಸರ ಬೋಚಬಾವ° ಮಾಡಿದವು, ಭಗತ್ ಸಿಂಗನ ಕಳ್ಳ° ಹೇದವು, ತುಘಲಕ್ಕನ ಮಹಾನ್ ಸಾಮ್ರಾಟ್ ಮಾಡಿದವು, ಟಿಪ್ಪುವಿನ ಕನಸುಗಾರ ಮಾಡಿದವು. ಮಕ್ಕೊ ಅದರ ಉರುಹಾಕಿದವು, ಪರೀಕ್ಷೆಲಿ ಬರದವು, ಮಾರ್ಕು ತೆಗದವು. ತರವಾಡುಮನೆ ವಿನುವಿಂಗೆ ನೆಹರುವಿನ ಬಗ್ಗೆ ಹೇಳಿರೆ – ಮಕ್ಕಳ ಬಾರೀ ಪ್ರೀತಿ ಅವಕ್ಕೆ, ಹಾಂಗಾಗಿ ಅವರ ಹುಟ್ಟುಹಬ್ಬ ನವೆಂಬರ್ ಹದಿನಾಲ್ಕು – ಮಕ್ಕಳ ದಿನಾಚರಣೆ – ಹೇಳ್ತ°. ಏಕೇದರೆ, ನಮ್ಮ ಪಾಠಪುಸ್ತಕಂಗೊ ಅದನ್ನೇ ಹೇಳ್ತು. ದೇಶದ ಈಗಾಣ ಪ್ರಜಾಸಂತತಿ ಅದನ್ನೇ ನಂಬಿ ಆಚರಣೆ ಮಾಡ್ತಾ ಇದ್ದು – ಎಂತಗೆ? ತರವಾಡುಮನೆ ವಿನುವಿನ ಹಾಂಗೆ ನಾವೆಲ್ಲೋರುದೇ ಅದರ ಓದಿದ್ದು. ಆ ದಿನ ಕಿಸೆಲಿ ಗುಲಾಬಿ ಮಡಿಕ್ಕೊಂಡು ವೇದಿಕೆ ಮೇಗೆ ಬಾಯ್ಪಾಟದ ಭಾಷಣ ಮಾಡಿದ್ದು.

ದೇಶದ ಜೆನಂಗೊ ಪೇಪರು ಓದುತ್ತವೋ, ಕಂಪ್ಲೀಟ್ರು ಓದುತ್ತವೋ ಅದು ಬೇರೆ ಸಂಗತಿ, ಆದರೆ ಪಾಠಪುಸ್ತಕ ಅಂತೂ ಓದಿಯೇ ಓದುತ್ತವು. ಅಲ್ಲದ್ದರೆ ಪಾಸು ಆಯೇಕನ್ನೇ! ಪಾಸು ಆಗದ್ದರೆ ಮಾಷ್ಟ್ರುಮಾವನ ಕೈಂದ ಪೆಟ್ಟು ತಿನ್ನೇಕನ್ನೇ – ಆ ಹೆದರಿಕೆಗೆ ಆದರೂ ಓದುಗು. ಪಾಠಪುಸ್ತಕಲ್ಲಿ ಇಪ್ಪದೆಲ್ಲವೂ ಸತ್ಯವೇ – ಹೇದು ನಂಬುತ್ತ ಪ್ರಾಯವೂ ಅದು.

~

ನಮ್ಮ ದೇಶಲ್ಲಿ ಕೇಂದ್ರಸರಕಾರಂದಲೇ ನೆಡೆತ್ತ ಶಾಲೆಗೊ ಇದ್ದಾಡ. ಅದಕ್ಕೆ ಕೇಂದ್ರೀಯ ವಿದ್ಯಾಲಯ ಹೇಳುಸ್ಸು. ಅದರ್ಲಿ ಕಲಿತ್ತ ಮಕ್ಕೊಗೆ ದೇಶದ ಕೊಡೀಂದ ಕೊಡೀಂಗೆ ಒಂದೇ ನಮುನೆ ಪಾಠಂಗೊ. ಇಂಥಾ ವಾರಕ್ಕೆ ಇಂಥಾ ಪಾಟ ಆಯೇಕು ಹೇಳುಸ್ಸು ಪೂರ್ವನಿರ್ಧಾರಿತ. ಕೇಂದ್ರಸರಕಾರಲ್ಲಿ ಉದ್ಯೋಗಕ್ಕೆ ಇದ್ದುಗೊಂಡು, ಅಂಬಗಂಬಗ ಊರೂರು ಬದಲಿ ಟ್ರಾನ್ಸುವಾರು ಆವುತ್ತ ಜೆನಂಗೊಕ್ಕೆ ಅವರ ಮಕ್ಕಳ ಕಳುಸುಲೆ ಈ ನಮುನೆ ಶಾಲೆಗೊ ತುಂಬ ಉಪಕಾರಿ ಆಡ. ಅವಷ್ಟೇ ಅಲ್ಲದ್ದೆ, ಊರಿನ ಬಾಕಿದ್ದೋರಿಂಗೂ ಈ ಶಾಲೆ ಗುಣ ಆವುತ್ತಾಡ.

~

ಈ ಶಾಲೆಗಳಲ್ಲಿ ಶಿಕ್ಷಣ ವೆವಸ್ತೆಲಿ ಸಮಾಜ, ವಿಜ್ಞಾನ, ಗಣಿತ ಮಾಂತ್ರ ಅಲ್ಲದ್ದೆ – ಭಾಷಾ ವಿಷಯಂಗಳನ್ನೂ ಕಲಿಯೆಕ್ಕಾದ್ಸು ಇದ್ದು.  ಕಲಿತ್ತ ಮಾಧ್ಯಮ ಇಂಗ್ಳೀಶು ಭಾಷೆಲಿ ಇದ್ದರೆ, ಮತ್ತೊಂದು ಆ ಊರ ಭಾಷೆಯೋ, ಅವರ ಆಸಕ್ತಿಯ ಹಿಂದಿಯೋ ಎಂತಾರು ಕಲಿಯಲಕ್ಕು. ಅದೂ ಅಲ್ಲದ್ದೆ ತೃತೀಯ ಭಾಷೆಯಾಗಿ ಇನ್ನೊಂದು ಕಲಿಯಲೇ ಬೇಕಡ. ಈ ತೃತೀಯ ಭಾಷೆ ಯೇವದು?

ಯೇವದಕ್ಕು? ನಿಂಗಳೇ ಆಲೋಚನೆ ಮಾಡಿ?!

ದೇಶದ ಕೊಡಿಂದ ಕೊಡಿಂಗೆ ಆಧಾರ ಆಗಿಪ್ಪ ಸಂಸ್ಕೃತ ಒಳ್ಳೆದೋ?
ಅಲ್ಲ, ನಮ್ಮ ಊರಿಂದೇ ಅಲ್ಲದ್ದ ಪರಕೀಯ ಭಾಷೆ ಆದ ಜರ್ಮನ್ ಒಳ್ಳೆದೋ?

ಯೇವ ಬೋಚಬಾವಂದೇ ಹೇಳುಗು, ಸಂಸ್ಕೃತ ಕಲಿತ್ತೆ ಹೇದು. ಆದರೆ ನಮ್ಮ ಸರ್ಕಾರಕ್ಕೆ ಮಾಂತ್ರ “ಜರ್ಮನ್” ಒಳ್ಳೆದು ಹೇದು ಅನುಸಿದ್ದತ್ತು. ಇದು ಇಂದು ನಿನ್ನೇಣ ಕತೆ ಅಲ್ಲ, ಹಳೇ ಕತೆ. ಅಂದಿಂದಲೂ ಹಾಂಗೇ ಇದ್ದತ್ತು.
ಅಷ್ಟಕ್ಕೂ ಈ ಜರ್ಮನ್ ಭಾಷೆ ಕಲಿಸ್ಸು ಎಂತಕೆ?
ನಮ್ಮ ದೇಶಲ್ಲಿ ಯೇವ ರಾಜ್ಯಲ್ಲಿ, ಊರಿಲಿ ಯೇವ ಭಾಷೆ ಮಾತಾಡಿದರೂ ನೆಡೆತ್ತು ಹೇದು ಜರ್ಮನ್ ಲಿ ಹಾಂಗೊ?
ಅಲ್ಲಿ ಹೋಯೆಕ್ಕಾದರೆ ಅಲ್ಲಿಯಾಣ ಜರ್ಮನ್ ಭಾಷೆ ಗೊಂತು ಬೇಕಡ!
ಹೆರದೇಶಕ್ಕೆ ಹೋಯೆಕ್ಕಾದರೆ ಅಲ್ಲಿಯಾಣ ಭಾಷೆ ಗೊಂತು ಬೇಕು. ನಮ್ಮಲ್ಲಿ?
ನಮ್ಮದೇ ಮೂಲ ಸ್ವರ, ದೇವಭಾಷೆ ಸಂಸ್ಕೃತ ನವಗೆ ಬೇಡ. ಇದು ಸಮವಾ?
ಇದರ  ಬದಲುಸುಲೆ ಯೇವ ಸರ್ಕಾರಕ್ಕೂ ಧೈರ್ಯ ಬಂದಿತ್ತಿಲ್ಲೆ ಕಾಣ್ತು. ಎಲ್ಯಾರು ಬದಲುಸಿರೆ ಈ “ಎಲ್ಲವನ್ನೂ ಬಿಟ್ಟ” ಪಂಗಡ ಇದ್ದಲ್ಲದೋ – ಅದರ ಬೊಬ್ಬೆಲಿ ಕೂಪಲೆಡಿಯ ಹೇಳ್ತ ಹೆದರಿಕೆ.

~

ಹಾಂಗಿಪ್ಪ ಹೆದರಿಕೆ ದಿನಂಗೊ ಎಲ್ಲ ಹೋತು. ಈಗ ಬಂದದು ಧೈರ್ಯವಂತ ಮೋದಿ ಅಜ್ಜ° ಆದ ಕಾರಣ ಹೀಂಗಿರ್ತ ದಿಟ್ಟ ನಿರ್ಧಾರಕ್ಕೆ ಹೆದರಿಕೆ ಇಲ್ಲೆ. ಇನ್ನು ಮುಂದೆ ಜರ್ಮನ್ ಕಲಿತ್ತ ಬದಲು ಸಂಸ್ಕೃತ ಕಲಿಯೇಕು – ಹೇದು ಮಾನವ ಸಂಪನ್ಮೂಲ ಇಲಾಖೆಯ ಮೂಲಕ ಆಜ್ಞೆ ಬಂತಾಡ. ಅದು ಜಾರಿ ಆಗಿಯೇ ಹೋದರೆ ಜರ್ಮನ್ ಭಾಷೆಯ ಬದಲು ನಮ್ಮ ಮಕ್ಕೊ ಸಂಸ್ಕೃತ ಕಲಿಗು.  ಆಹಾ!!

~

ಅಷ್ಟಕ್ಕೂ ಜರ್ಮನ್ ಭಾಷೆಯೂ ಸುಮಾರಷ್ಟು ಸಂಸ್ಕೃತದ ಹಾಂಗೇ ಇದ್ದಾಡ. ನಮ್ಮ ಹಿಂದಿಯ ಹಾಂಗೇ ಜರ್ಮನ್ ದೇ ಸಂಸ್ಕೃತ ಮೂಲಂದಲೇ ಬಂದದು ಹೇದು ಅರ್ತೋರು ಹೇಳುಗು. ಅಷ್ಟು ಬಂಙಲ್ಲಿ ಜರ್ಮನ್ ಕಲಿವಾಗ, ನಮ್ಮದೇ ಆದ ಸಂಸ್ಕೃತ ಕಲಿಯಲಾಗದೋ?

ದೇಶದ ಮಣ್ಣಿನ ಸಂಸ್ಕೃತಿಯ ಮೂಲ, ಈ ಮಣ್ಣಿನ ಭಾಷೆ ಆದ ಸಂಸ್ಕೃತವ ನಾವು ದೂರ ಮಾಡಿದ್ದತ್ತು.
ಯೇವದೋ ಪರ್ದೇಸಿ, ಬೇರೆ ಭಾಷೆ ಕಲಿಸ್ಸು ಎಂತಗೆ?

~

ವಿದ್ವಾನಣ್ಣ ಹೇಳಿದ ಒಂದು ಸಂಗತಿ ನೆಂಪಾವುತ್ತಾ ಇದ್ದು ಒಪ್ಪಣ್ಣಂಗೆ.

ಲೋಕದ ನಾನಾ ಭಾಗಲ್ಲಿ ಇಪ್ಪ ಎಲ್ಲಾ ಯೆಹೂದಿ ಪಂಥದ ಜೆನಂಗಳ ಬರುಸಿ, ಇಪ್ಪಲೆ ಮಾಡಿ ಇಸ್ರೇಲ್ – ಹೇಳ್ತ ಹೊಸ ದೇಶ ಮಾಡಿದವಾಡ ಎರಡು ತಲೆಮಾರು ಹಿಂದೆ. ಈ ಇಸ್ರೇಲಿಂಗೆ ಬಂದ ಜೆನಂಗೊ ಒಂದೊಂದು ಊರಿನೋರು ಆದ ಕಾರಣ ಒಬ್ಬೊಬ್ಬ° ಒಂದೊಂದು ಭಾಷೆ ಮಾತಾಡಿಗೊಂಡು ಇತ್ತಿದ್ದವಾಡ. ಒಟ್ಟಿಲಿ ಎಲ್ಲಾ ನಮುನೆಯ ಭಾಷೆಯ ಅವಿಲಿನ ಹಾಂಗಾಗಿತ್ತು ಇಸ್ರೇಲು. ನಮ್ಮ ಭಾರತದ ಹಾಂಗೇ ಭಾಷಾ ವೈವಿಧ್ಯ.

ಆದರೆ, ಅದರ ಸರಿಮಾಡಿದ್ದು ಹೇಂಗೆ?
ನವಗೆ ಸಂಸ್ಕೃತ ಇಪ್ಪ ಹಾಂಗೆ ಅವರದ್ದೇ ಆದ “ಹೀಬ್ರೂ” ಹೇಳ್ತ ಭಾಷೆ ಇದ್ದು. ಆ ಬಾಷೆಯ ಎಲ್ಲೋರುದೇ ಕಲ್ತು, ಅದರನ್ನೇ ಅಧಿಕೃತ ಮಾಧ್ಯಮವಾಗಿ ಮಾಡಿದವಾಡ. ಒಂದು ತಲೆಮಾರು ರಜಾ ಕಷ್ಟ ಆತು. ಆದರೆ ಈಗ ಎಲ್ಲವೂ ಸುಸೂತ್ರವಾಗಿ ನೆಡತು, ಆ ಭಾಷೆ ಅಮರ ಆಗಿ ಹೋತು. ಆ ದೇಶದ ಅಧಿಕೃತ ಭಾಷೆಯೇ ಅದು ಆದ ಕಾರಣ ಆ ದೇಶ ಇಪ್ಪನ್ನಾರವೂ ಆ ಭಾಷೆ ಚಾಲ್ತಿಲಿ ಇಕ್ಕು. ನಾಗರೀಕತೆಯ ಅಂತಃಸತ್ವ ಭಾಷೆ ಆದ ಕಾರಣ, ಭಾಷೆಯ ಮರುಹುಟ್ಟು ನಾಗರೀಕತೆಯ ಮರುಹುಟ್ಟಿಂಗೆ ಕಾರಣ ಆತು.

~

ನಮ್ಮಲ್ಲಿಯೂ ಹೊಸ ಉದಯ ಆಗಲಿ. ನಮ್ಮದೇ ಆದ ಸಂಸ್ಕೃತ ಬೆಳಗಲಿ.
ಎಲ್ಲ ದಿಕ್ಕುದೇ ಸಂಸ್ಕೃತದ ಧ್ವನಿ ಕೇಳಲಿ.
ಮಕ್ಕೊಗೆ ಕಲಿಶಿಗೊಂಬ°. ಅದರೊಟ್ಟಿಂಗೇ ನಾವುದೇ ಕಲ್ತುಗೊಂಬೊ°.
ಶಾಲೆಗಳಲ್ಲಿ ಸಂಸ್ಕೃತವ ತೊಡಗುಸಿಗೊಂಬ ಸರ್ಕಾರದ ದಿಟ್ಟ ನಿರ್ಧಾರಕ್ಕೆ ಬೈಲಿಂದ ಕೃತಜ್ಞತೆಗೊ.

ಒಂದೊಪ್ಪ: ಪಾಶ್ಚಾತ್ಯ ಭಾಷೆ ಹತ್ತರೆ ಅಪ್ಪ ಕಾರಣವೇ ಪಾಶ್ಚಾತ್ಯ ಸಂಸ್ಕೃತಿ ಹತ್ತರೆ ಆದ್ಸು.

9 thoughts on “ಸಂಸ್ಕೃತಿ ಒಳಿಶುವ ಸಂಸ್ಕೃತದ ಬದಲು ಜನ್ಮಕ್ಕೂ ಬೇಡದ್ದ ಜರ್ಮನಿ ಕಲಿಶುತ್ತವಾಡ. . .

  1. ಮೊನ್ನೆ ಮೊನ್ನೆ ಭಟ್ಟ ಮಾವ ಹೋಮ ಮಾಡ್ಸುವಾಗ ಮಂತ್ರದ ನಡೂವಿಲಿ ” ಜರ್ಮನಿ ಜರ್ಮನಿ ” ಹೇಳಿ ಹೇಳಿದ್ದು ಕೇಳಿತ್ತು. ಅಂಬಗ ಸಂಸ್ಕೃತಕ್ಕೂ ಜರ್ಮನಿಗೂ ಸಂಬಂದ ಇದ್ದೋ?

    1. ಹ ಹಾ! ಇದು ಲಾಯಕಾಯಿದು.
      “ಜನ್ಮನಿ ಜನ್ಮನಿ” ಹೇಳಿದ್ದದು `ಜರ್ಮನಿ ಜರ್ಮನಿ’ ಹೇಳಿ ಕೇಳಿದ್ದದಾಯಿಕ್ಕು!
      ಅಥವಾ ನಿಂಗಗೆ ಬೇಕಾದ ಹಾಂಗೇ ಕೇಳಿದ್ದೊ?!!
      ಅಥವಾ ಇನ್ನು ಜರ್ಮನಿಗೆ ಹೋಯೆಕಷ್ಟೇ ಇದೆಲ್ಲ ಬೇಕಾರೆ ಹೇಳಿ ಹೇಳಿದ್ದದೊ??
      (ಜನ್ಮನಿ ಜನ್ಮನಿ = ಪ್ರತಿ ಜನ್ಮಲ್ಲಿಯೂ )

  2. ಲೇಖನ ಚೆಂದಕೆ ಬರದ್ದೆ ಒಪ್ಪಣ್ಣ . ಸಂಸ್ಕೃತ ಬೆಳಗಿ ಬಾಳಲಿ. ನಮ್ಮ ಮಕ್ಕೊ ಸಂಸ್ಕೃತಿ ಸಂಸ್ಕಾರ ಬೆಳೆಶಿಗೊಳ್ಳಲಿ ಹೇಳಿ ಹಾರೈಸುತ್ತೆ. ವಿಜಯತ್ತೆ ಹೇಳಿದ ಹಂಗೆ ನೀರ್ಚಾಲಿನ ಸಂಸ್ಕೃತ ಕಾಲೇಜು, ಮುಜುಂಗಾವಿನ ಸಂಸ್ಕೃತ ಕಾಲೇಜು ಎಲ್ಲ ಮತ್ತೆ ಚಿಗುರಿ ನಳ ನಳಿಸಲಿ.

  3. ಚೆ, ಹೀಂಗುದೆ ಇದ್ದೊ ? ಸಂಸ್ಕೃತಿ ಒಳಿಯಕಾದರೆ ಸಂಸ್ಕೃತ ಬೇಕೇ ಬೇಕು. ಮಹೇಶಣ್ಣನ ಮೊದಲ ಒಪ್ಪ ಪೂರಕ ಮಾಹಿತಿ ಕೊಟ್ಟತ್ತು. ನಮ್ಮ ಮಕ್ಕೊಗೆ ಸಂಸ್ಕೃತ ಕಲುಶುವ, ನಾವುದೆ ಕಲಿವೊ. ಸರಿಯಾದ ಮಾತು.

  4. ಹರೇರಾಮ, ಒಳ್ಳೆ ಶುದ್ದಿ. ಸಂಸ್ಕೃತ ಭಾಷೆಯ ಹೆಸರಿಲ್ಲೇ ಸಂಸ್ಕೃತಿ! ಈ ಭಾಷೆ ಬೆಳವಣಿಗೆಲಿ ಸಂಸ್ಕಾರ ಬೆಳವಲೂ ಸಾಧ್ಯ.ಇದರ ಓದುವಗ ನಮ್ಮ ನೀರ್ಚಾಲು ಶಾಲೆ ನೆಂಪಾವುತ್ತು.ಸಂಸ್ಕೃತಕ್ಕೆ ಆದ್ಯತೆ ಕಮ್ಮಿಯಾಗಿಯೇ ಸಂಸ್ಕೃತ ಕಾಲೇಜು ವಿಭಾಗ ಮುಚ್ಚಿದ್ದು!. ಆದರೂ ಆ ಹೆಸರು [ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ನೀರ್ಚಾಲು ] ಈಗಲೂ ಇದ್ದು!. ಹಾಂಗೆ ನಮ್ಮ ಶ್ರೀಗುರುಗೊ ಹುಟ್ಟು ಹಾಕಿದ ; ಸಂಸ್ಕೃತ ಕಾಲೇಜು , ಮುಜುಂಗಾವು. ಇದುದೆ ಈ ವರ್ಷಂದ ಕಲಿತ್ತ ಮಕ್ಕೊ ಇಲ್ಲದ್ದೆ ತರಗತಿ ಇಲ್ಲೆ ಹೇಳ್ತ ಬೇಜಾರು!. ಹೀಂಗಿದ್ದು ಬೇರೆಯೂ ಇಕ್ಕು. ಅದೆಲ್ಲ ಮತ್ತೆ ಚಿಗುರಿ ನಳನಳಿಸಲಿ . ಸಂಸ್ಕೃತಕ್ಕೆ ಪ್ರಥಮಾಧ್ಯತೆ ಬರಲಿ ಹೇಳಿ ನಾವೆಲ್ಲರೂ ಪ್ರಾರ್ಥಿಸುವೊಂ. ಎಂತ ಹೇಳ್ತಿ?

  5. ಹರೇರಾಮ. ಸಂಸ್ಕೃತದ ಬಗ್ಗೆ ಬರ್ದದ್ದು ಚೆಂದಾಜು, ಒಪ್ಪಣ್ಣ.
    ಯಾವ ಭಾಷೆ ಎಲ್ಲಾ ಭಾಷೆಗಳ ತಾಯಿಯೋ, ಯಾವ ಭಾಷೆಯಿಂದ ನೂರಾರು ಭಾಷೆಗಳು ತಮ್ಮ ಅಸ್ತಿತ್ವ ಕಾದುಕೊಂಡಿದ್ವೋ, ಅಂಥ ಸಂಸ್ಕೃತ ಭಾಷೆಯನ್ನು ಅಧಿಕೃತ ಅಧ್ಯಯನ ಭಾಷೆಯಾಗಿ ಮಾಡ ಹೊರಟ ಮೋದಿಯವರಿಗೆ ನಿಜಕ್ಕೂ ನಂಗೊ ಎಲ್ಲರೂ ಕೃತಜ್ಞರಾಗಿರೊ. ಎಂತಕ್ಕೆ ಅಂದ್ರೆ ಇದುವರೆಗೆ ದೇಶ, ಭಾಷೆ, ಗಡಿ, ನುಡಿ ಹೇಳಿ ಎಲ್ಲರೂ ಪರಸ್ಪರರನ್ನು ಕೆಸರ ಕೂಪಕ್ಕೆ ತಳ್ತಾ ಇದ್ದಿದ್ದೊ ಬಿಟ್ರೆ ಉದ್ಧರಿಸುವ ಮಾತೇ ಇದ್ದಿತ್ತಿಲ್ಲೆ.
    ‘ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಜನಕ್ಕೊಂದು ಬರಿಯ ಭಾಷೆಯಾಗಿರದೇ, ಜನರ ಬದುಕು-ಭಾವವಾಗಿ, ಜೀವನಧರ್ಮವೇ ಆಗಿದ್ದ ಸಂಸ್ಕೃತ ವಿನಾಶದ ಅಂಚಿನತ್ತ ಹೋಗ್ತಾ ಇದ್ದನೋ ಎಂಬ ಹೆದರಿಕೆ ಹುಟ್ಟಿದಂಥ ಸಂಕ್ರಮಣ ಕಾಲದಲ್ಲಿ ಆಗತ್ನಿದ್ದ ಈ ಬೆಳವಣಿಗೆ ನಿಜಕ್ಕೂ ಶ್ಲಾಘನೀಯ.
    ಮನೆ ಮಕ್ಕೊ ಎಲ್ಲಾ “ಅಮ್ಮ ಹಿಂದಿ ತೆಕತ್ತೆ ನಾಳೆಗೆ ಹೆಲ್ಪ್ ಆಗ್ತು” ಹೇಳಿ ನಮಗೇ ಬುದ್ಧಿ ಹೇಳುವಾಗ, ” ಸಂಸ್ಕೃತ ಸ್ಕೋರಿಂಗ್ ಸಬ್ಜೆಕ್ಟು ಮಗಾ, ಅದ್ಕಾಗಿ ಆದ್ರೂ ಸಂಸ್ಕೃತ ತೆಕೊ” ಹೇಳಿ ಮಕ್ಳ ಮನವೊಲಿಸುವ ಸಂದರ್ಭ ತಾಯಕ್ಕೊಗೆ ಬಂದಿತ್ತು. ಮಹಾಭಾರತವ ಕೊಂಡಾಡ್ತಾ “ಯದಿಹಾಸ್ತಿ ತದನ್ಯತ್ರ, ಯನ್ನೇಹಾಸ್ತಿ ನ ತತ್ ಕ್ವಚಿತ್” ಹೇಳು ಹಾಂಗೆ ಎಲ್ಲಾ ಭಾಷೆಗೂ ತಾಯಿಯಾದ ಸಂಸ್ಕೃತದಲ್ಲಿ ಏನಿದ್ದೋ ಅದು ಎಲ್ಲೆಡೆಯೂ ಇದ್ದು, ಯಾವುದು ಸಂಸ್ಕೃತದಲ್ಲಿ ಇಲ್ಯೋ ಅದು ಜಗತ್ತಿನ ಬೇರೆಡೆ ಎಲ್ಲೂ ಇಲ್ಲೆ ಹೇಳುದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಕೊನೆಯಪಕ್ಷ ನಮ್ಮ ಮೊಮ್ಮಕ್ಕಳ ಕಾಲದಲ್ಲಾದ್ರೂ ಸಂಸ್ಕೃತ ಪುನರುಜ್ಜೀವನ ಹೊಂದಿ ಬೆಳಗಿ ಬಾಳಲಿ.
    ಕೊನೆಯಲ್ಲಿ ಒಂದು ಸಂದೇಹ–ಜನ್ಮಾಂತರಗಳು ಇದ್ದದ್ದು ಹೌದು ಹೇಳಾದ್ರೆ ” ನಮ್ಮ ಗುರುಗಳು ಮತ್ತೆ ಮೋದಿಯವರು ಹಿಂದಿನ ಜನ್ಮದಲ್ಲಿ ಅಣ್ಣ-ತಮ್ಮ ಆಗಿದ್ವೋ ಹೇಂಗೆ ? ಇಬ್ಬರದೂ ಅದೇ ಭಾವ, ಅದೇ ವೇಗ, ಅದೇ ಸಮಯಸ್ಫೂರ್ತಿ, ಅದೇ ಯೋಚನಾಲಹರಿ, ಅದೇ ಸ್ಪಂದನೆ, ಅದೇ ಕಾಳಜಿ,ಅದೇ ಗಾಂಭೀರ್ಯ…ಎಲ್ಲವ್ದೂ ಅದೇ ಅದೇ..ವ್ಯತ್ಯಾಸ ಹೇಳೊ ಅಂದ್ರೆ ನಂಗ್ಳ ಗುರುಗಳು ಪೂರ್ಣ ಪ್ರೇಮಮಯಿ, ವಾತ್ಸಲ್ಯದ ಮೊತ್ತ. ಮೋದಿಯಲ್ಲಿ “ಶಠಂ ಪ್ರತಿ ಶಾಠ್ಯಮ್” ಗುಣ ಇದ್ದು. ನಮ್ಮದು ಧರ್ಮಪೀಠ, ಅವರದ್ದು ರಾಜಕೀಯ ಪೀಠ…ಇನ್ನೊಂದು ಚೆಂದಿ ವ್ಯತ್ಯಾಸ ಹೇಳ್ಲಾ? ಮೋದಿ ಅಂದ್ಕಂಡಿದ್ದನ್ನ ತಕ್ಷಣ ಸಮರ್ಥವಾಗಿ ಜಾರಿಯಲ್ಲಿ ತಪ್ಪುಲೆ ಯೋಗ್ಯ ಜನ ಇದ್ದೊ. ನಮ್ಮ ಗುರುಗಳ ವೇಗಕ್ಕೆ ಸ್ಪಂದಿಸುವ ಸಾಮರ್ಥ್ಯ ಇಪ್ಪೊರು ರಾಶಿ ಕಡ್ಮೆ..ಬದಲಿಗೆ ತೊಂದ್ರೆ ಕೊಡುವ ಪ್ರೇತಾತ್ಮಗಳೂ ಇದ್ದೊ…ಅಲ್ದಾ ಒಪ್ಪಣ್ಣ ?
    …ಹರೇರಾಮ

  6. ಒಪ್ಪಣ್ಣ ಭಾವನ ಒಪ್ಪ ಶುದ್ದಿಗೆ ಡಾ|| ಮಹೇಶಣ್ಣನ ಒಪ್ಪ ಮತ್ತೂ ಒಪ್ಪ ಆತು. ನಮ್ಮ ಸಂಸ್ಕಾರ ಸಂಸ್ಕೃತಿಯ ಪ್ರತೀಕವಾಗಿಪ್ಪ ಸಂಸ್ಕೃತವ ಬಿಡ್ಳಾಗ. ಭಾರತಲ್ಲಿ ಮಾಂತ್ರ ಅಲ್ಲದ್ದೆ ವಿಶ್ವಲ್ಲೇ ಸಂಸ್ಕೃತ ಅರಳೆಕು. ಅಂದರಷ್ಟೇ ನಮ್ಮ ಸಂಸ್ಕೃತಿಯೂ ಒಳಿಗು. ಹರೇ ರಾಮ

  7. ಸಮಯೋಚಿತ ಸುದ್ದಿ !

    ಶಿಕ್ಷಣ ನಿಯಮದ ಪ್ರಕಾರ `ತ್ರಿ ಭಾಷಾ ಸೂತ್ರ’ ದ ಅನುಗುಣವಾಗಿ “ಹಿಂದಿ, ಇಂಗ್ಲಿಷ್ ಮತ್ತು ಇನ್ನೊಂದು ಭಾರತೀಯ ಭಾಷೆ” ಕಲಿಸೇಕು ಹೇಳಿ ನಿಯಮ. ಕೇಂದ್ರೀಯ ವಿದ್ಯಾಲಯಲ್ಲಿ ಮೂರನೆ ಭಾಷೆಯಾಗಿ ಸಂಸ್ಕೃತ ವ ಕಲಿವ ವಿದ್ಯಾರ್ಥಿಗೊ ತುಂಬಾ ಇದ್ದಿದ್ದವು.
    ಹಳೆ ಸರಕಾರ ಎಂತ ಮಾಡಿತ್ತು? ಮೂರನೆ ಭಾಷೆಯಾಗಿ “ಜರ್ಮನ್/ಫ್ರೆಂಚ್/ಫೋರಿನ್ ಭಾಷೆ/ಸಂಸ್ಕೃತ” ಹೇಳಿ ಆಯ್ಕೆ ಮಾಡ್ಲಕ್ಕು ಹೇಳಿ ಹೇಳಿತ್ತು. ಜರ್ಮನ್ ಕಲಿಸಲೇ ಕೇಂದ್ರೀಯ ವಿದ್ಯಾಲಯ ಮ್ಯಾಕ್ಸ್ ಮುಲ್ಲರ್ ಇನ್ಸ್ಟಿಟ್ಯೂಟ್ ನೊಟ್ಟಿಂಗೆ ಒಪ್ಪಂದ ಮಾಡಿತ್ತು. ಜರ್ಮನ್ ಕಲಿಸಲೇ ಬೇಕಾದ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಿತ್ತು. ಸಂಸ್ಕೃತಕ್ಕೆ ಯಾವ ಸಹಾಯವೂ ಇಲ್ಲೇ. ವಿದೇಶಿ ಭಾಷೆಯ ಆಧುನಿಕ ಉಪಕರಣಗಳ ಆಕರ್ಷಣೆಯ ಮುಂದೆ ಸಂಸ್ಕೃತಕ್ಕೆ ಹೋರಾಡ್ಲೆ ಬೇಕಾದ ವ್ಯವಸ್ಥೆಯೇ ಇಲ್ಲೇ!

    ಬೇರೆ ಪ್ರೈವೇಟ್ ಸ್ಕೂಲ್ ಗಳೂ ಇದೇ ರೀತಿ ಮಾಡಿದವು. ಇಪ್ಪ ಸಂಸ್ಕೃತ ಮಾಷ್ತ್ರತ್ರೆ ಹೇಳಿದವಡ `ನಿನ್ನ ಉದ್ಯೋಗ ಉಳುಶೆಕಾರೆ ಜರ್ಮನ್ / ಫ್ರೆಂಚ್ ಕಲ್ತು ಪಾಠ ಮಾಡು’ ಹೇಳಿ !!
    ಸಂಸ್ಕೃತಕ್ಕೆ (ಭಾರತೀಯರಿಂಗೆ) ಆದ ಅನ್ಯಾಯ ಆರಿಂಗೂ ಗೊಂತಾಯಿದೆ ಇಲ್ಲೇ. ಇನ್ನೊಂದು ಆರು ತಿಂಗಳು ಹಿಂಗೆ ಹೋಗಿದ್ದರೆ !!

    ಈಗಾಣ ಸರಕಾರ ಭಾರತೀಯ ಭಾಷೆಯ, ಸಂಸ್ಕೃತವ ಈ ರೀತಿ ನಿರ್ಲಕ್ಷ್ಯ ಮಾಡುವದು ಸರಿ ಅಲ್ಲ ಹೇಳಿ `ತ್ರಿಭಾಷಾ ನೀತಿ’ ಯನ್ನೇ ಪುನಃ ಅಳವಡಿಸಿಕೊಳ್ಳೆಕು ಹೇಳಿ ಹೇಳಿತ್ತು. ಜರ್ಮನ್ ಕಲಿವಲೂ ಅವಕಾಶ ಇರಲಿ. ಆದರೆ hobby language ಆಗಿ ಅವಕಾಶ ಕೊಡ್ಲಕ್ಕು ಹೇಳಿ ಹೇಳಿತ್ತು.

    ಅದಾ! ಜರ್ಮನ್ ಚಾನ್ಸಲರ್ ಮೋದಿಯತ್ರೆ ಚರ್ಚೆ ಮಾಡಿದ್ದಡ (ಜರ್ಮನಿಂಗೆ ಅನ್ಯಾಯ ಮಾಡೆಡಿ ಹೇಳಿ). ಅವರ ಭಾಷೆಗೆ ಬೇಕಾರೆ ಎಷ್ಟು ಬೇಗ ಕಾರ್ಯಪ್ರವೃತ್ತರು ಆವ್ತವು! ಆ ದೇಶಕ್ಕೆ ಜರ್ಮನೂ ಬೇಕಡ, ಸಂಸ್ಕೃತವೂ ಬೇಕಡ. ಅಂಬಗ ನವಗೆ?
    ಈಗ ಜರ್ಮನ್ ಕಲ್ತು ಎಂಗಳ ದೇಶಕ್ಕೆ ಬನ್ನಿ ಹೇಳ್ತವು. ಮುಂದೆ ಸಂಸ್ಕೃತ ಕಲಿವಲೂ ಜರ್ಮನಿಂಗೆ ಬನ್ನಿ ಹೇಳುಗು!
    (ಇದು ಅತ್ಯುಕ್ತಿ ಅಲ್ಲ, ಇಂದು `ಇಂಡಿಯನ್ ಮೆಥಮೆಟಿಕ್ಸ್’ ನ ಬಗ್ಗೆ `ಡೇವಿಡ್ ಪಿಂಗ್ರೀ’ ಹೇಳಿ ಅಮೇರಿಕಾದ ವಿದ್ವಾಂಸನೂ ಅದರ ಶಿಷ್ಯರು ಹೇಳಿದ್ದೆ ಸರಿ.)

    ಕೆಲವು ಕೆಟ್ಟ ನಿರ್ಣಯ ಬದಲುಸೆಕಾರೆ ದಿಟ್ಟ ನಿರ್ಧಾರವೇ ಬೇಕು!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×