ಮನಸ್ಸಿಂಗೆ ಮುದ ಕೊಡುವ ಸಂಸ್ಕೃತ ಸಮಸ್ಯೆಗೊ..!!

ಚೌಕ್ಕಾರು ಮಾವನಲ್ಲಿ ಓ ಮನ್ನೆ ತಿತಿ ಕಳಾತು. ಈ ಸರ್ತಿಯೂ ಗಣೇಶ ಮಾವನ ಒಟ್ಟಿಂಗೇ ಹೋದ್ಸು ನಾವು. ಅಂದೊಂದು ಜೆಂಬ್ರಕ್ಕೆ ಹೋಗಿ ಷಟ್ಪದಿಗಳ ಕಲ್ತುಗೊಂಡು ಬಂದ್ಸು ನಿಂಗೊಗೆ ಅರಡಿಗು ಅಲ್ದೋ? (ಸಂಕೊಲೆ: http://oppanna.com/oppa/shara-kusuma-bhoga-bhamini-shatpadi)
ತಿತಿ ಅಲ್ದೋ – ಹದಾಕೆ ಹೋದರೆ ಸಾಕೂದು ಗಣೇಶ ಮಾವ° ಒಂದರಿ ತೋಟದ ಕೊಡಿಯಂಗೆ ಒರೆಗೆ ಹೋಗಿ ಬಂದ್ಸು. ಮತ್ತೆ ಪುನಾ ಮಿಂದಿಕ್ಕಿ – ಈ ಸರ್ತಿ ಎತ್ತುವಗಳೇ ತಡವಾಗಿತ್ತು. ಹಾಂಗಾಗಿ ಉಂಬನ್ನಾರ ಎಂತೂ ಚೋದ್ಯ ಇದ್ದತ್ತಿಲ್ಲೆ.
ಉಂಡಿಕ್ಕಿ ಕೂದುಗೊಂಡು ಅಡಕ್ಕೋಳು ಅಗಿವಗ ಚೌಕ್ಕಾರು ಮಾವ° ಎಂತದೋ – ಸಮಸ್ಯೆ ಸಮಸ್ಯೆ – ಹೇಳುಸ್ಸು ಕೇಳಿತ್ತು.
ಬೆಶಿ ಬೆಶಿ ಚಾಯ ತಂಡು ಕೊಟ್ಟ ಚೌಕ್ಕಾರು ಅತ್ತೆಯ ಹತ್ರೆ ಕೇಳಿದೆ, ಎಂತರ ಸಮಸ್ಯೆ ಅಡ – ಮಾವ° ಎಂತ್ಸೋ ಹೇಳುಸ್ಸು ಕೇಟತ್ತು – ಹೇದು.

ಮಾವಂಗೆ ಸಮಸ್ಯೆ ನೆಂಪಾದಷ್ಟೂ ಕೊಶಿಯೇ – ಹೇಯಿದವು ಚೌಕ್ಕಾರು ಅತ್ತೆ.
ಎಲಾ, ಸಮಸ್ಯೆ ಬಂದರೆ ಎಲ್ಲೋರುದೇ ಮವುನ ಅಪ್ಪದು, ಅಲ್ಲದ್ದರೆ ಪಿಸುರಿಲಿ ಹಾರುಸ್ಸು, ಅಲ್ಲದ್ದರೆ ಬೇಜಾರಪ್ಪದು – ಈ ಚೌಕ್ಕಾರು ಮಾವ° ಮಾಂತ್ರ ಸಮಸ್ಯೆ ಬಂದಪ್ಪಗ ಕೊಶಿ ಆವುತ್ತವೋ? ಅದೆಂತ ಹಾಂಗೆ – ಹೇದು ಕಣ್ಣು ಬಿಟ್ಟುಗೊಂಡು ಕೂದೆ.
ಅಷ್ಟಪ್ಪಗ ಹತ್ತರೆ ಕೂದ ಗಣೇಶಮಾವ° ’ಅದು ಸಂಸ್ಕೃತ ಸಮಸ್ಯೆಗಳೋ°’ – ಹೇದು ಅರ್ತ ಮಾಡ್ಸಿದವು.

ಹೋ – ಒಗಟಿನ ಸಮಸ್ಯೆ, ಹೇದು ಒಪ್ಪಣ್ಣಂಗೆ ಅರ್ತ ಆತು.
~

ಸಂಸ್ಕೃತ ಹೇದರೆ – ಪರಿಷ್ಕರಿಸಿದ್ದು ಹೇದು ಅರ್ತ. ಅತ್ಯಂತ ಪರಿಷ್ಕರಿಸಲ್ಪಟ್ಟ ಭಾಶೆಯೇ ಸಂಸ್ಕೃತ .
ಒಳುದ ಎಲ್ಲಾ ಭಾಶೆಯೂ ಅದರಿಂದ ಹುಟ್ಟಿದ್ದದು. ಭಾಷಾ ರಚನೆ, ವ್ಯಾಕರಣ ಪದ್ಧತಿ, ಶಬ್ದ ವ್ಯುತ್ಪತ್ತಿ – ಎಲ್ಲದಕ್ಕೂ ಮೂಲ ಸಂಸ್ಕೃತವೇ.
ನಮ್ಮ ದೇಶದ – ಕಾಶ್ಮೀರಂದ ಕನ್ಯಾ ಕುಮಾರಿವರೆಗೆ ಎಲ್ಲಾ ವಿದ್ವಾಂಸರಿಂಗೂ ಇದ್ದ ಭಾಶೆ ಸಂಸ್ಕೃತವೇ.
ಎಲ್ಲರನ್ನೂ ಒಂದುಗೂಡುಸಿದ, ಭಾರತದ ಅವಿಭಾಜ್ಯತೆಯ ಕೊಟ್ಟ ಭಾಶೆ ಸಂಸ್ಕೃತ.

ಇದರ್ಲಿ ರಾಮಾಯಣ, ಮಹಾಭಾರತದ ಹಾಂಗಿಪ್ಪ ಮಹಾ ಕಾವ್ಯಂಗೊ ರಚನೆ ಆದ್ದು ಮಾಂತ್ರ ಅಲ್ಲ, ಲಕ್ಷಾಂತರ ಕಾವ್ಯ-ನಾಟಕ-ಗದ್ಯಂಗೊ ಉಂಟಾಯಿದು.
ಇತರ ಭಾಶೆಯ ಹಾಂಗೇ ಸಂಸ್ಕೃತಲ್ಲಿಯೂ ಹಾಸ್ಯಂಗೊ, ಗಾಂಭೀರ್ಯತೆಗೊ, ಒಗಟುಗಳೂ ಇದ್ದು.
ಸಂವಹನದ ಮಾಧ್ಯಮ ಆಗಿಪ್ಪಾಗ ಇದೆಲ್ಲ ಸಹಜವೇ ಇದಾ.

ಈಗ ಸಂಸ್ಕೃತ ಆಡುಭಾಶೆಯಾಗಿ ಒಳುದ್ದಿಲ್ಲೆ, ಒಳುದಿದ್ದರೂ ಕೆಲವು ಪ್ರಾದೇಶಿಕವಾಗಿ ಅಲ್ಲಲ್ಲಿ ಇಪ್ಪದು ಅಷ್ಟೆ, ಮತ್ತೂರಿನ ಹಾಂಗಿಪ್ಪಲ್ಲಿ.
ಆಡುಭಾಶೆಯ ಒಗಟುಗಳ ಆದರೆ ನಾವು ಅಂಬಗಂಬಗ ಹೇಳಿಗೊಳ್ತು, ಸಂಸ್ಕೃತ ಒಗಟುಗಳ, ಸಮಸ್ಯೆಗಳ ಹೇಳೇಕಾರೆ ಸಂಸ್ಕೃತ ಪಂಡಿತರೇ ಆಯೇಕಷ್ಟೆ.
ಹಾಂಗೆ, ಚೌಕ್ಕಾರು ಮಾವನ ಬಾಯಿಲಿಯೇ ಕೇಳಿದ್ದು ನಾವು ಕೆಲವೆಲ್ಲ.
ಬೈಲಿಲಿ ಇಪ್ಪ ಸಂಸ್ಕೃತ ಪಂಡಿತರಿಂಗೆ ಇದೆಲ್ಲ ಗೊಂತಿಪ್ಪಲೂ ಸಾಕು.
ಗೊಂತಿಲ್ಲದ್ದೋರಿಂಗೆ ನೆಂಪು ಮಾಡ್ಳೆ, ಗೊಂತಿಲ್ಲದ್ದೋರಿಂಗೆ ತಿಳಿಯಲೆ ಆತು ಹೇದು ನಾಕೈದು ಒಗಟಿನ ನೆಂಪು ಮಡಿಕ್ಕೊಂಡೆ, ಬೈಲಿಂಗೆ ಹೇಳುವೊ° ಹೇದು.
~

ವಿರಾಟ ನಗರೇ ರಮ್ಯೇ
ಕೀಚಕಾದುಪ ಕೀಚಕಮ್ |

ಅತ್ರ ಕ್ರಿಯಾ ಪದಂ ಗುಪ್ತಂ
ಮರ್ಯಾದಾ ದಶವಾರ್ಶಿಕಿ ||

ಎದುರಂಗೆ ಕಾಂಬ ಅರ್ತ: ರಮ್ಯವಾದ ವಿರಾಟ ನಗರಲ್ಲಿ ಕೀಚಕನೂ, ಉಪಕೀಚಕನೂ ಇತ್ತಿದ್ದವು – ಹೇದು. ಎಲ್ಲಿ? ಇಲ್ಲೆಪ್ಪ – ಹೇದು ಮಹಾಭಾರತ ಓದಿದ ಕನ್ನಡ ಪಂಡಿತರು ತಲೆಬೆಶಿ ಮಾಡಿಗೊಂಗು. ಅದಲ್ಲದ್ದೆ, ಇದರಲ್ಲಿ ಕ್ರಿಯಾಪದ ಯೇವದು ಹೇದು ಗೊಂತಾವುತ್ತೂ ಇಲ್ಲೆ.
ನಿಜಾರ್ತ ಹಾಂಗಲ್ಲ: ಕೀಚಕ ಹೇದರೆ ಬೆದುರು ಹೇದು ಅರ್ತ ಆಡ, ಉಪಕೀಚಕ ಹೇದರೆ ಕುಂಞಿ ಬೆದುರು ಹೇದು. ವಿಃ ಹೇದರೆ ಹಕ್ಕಿ, ವಿರಾಟ ಹೇದರೆ ಹಕ್ಕಿಯ ಆಟ ಹೇಳಿಯೂ ಆವುತ್ತು. ರಮ್ಯವಾದ ನಗರಲ್ಲಿ ಹಕ್ಕಿ ಒಂದು ಬೆದುರಿಂದ ಇನ್ನೊಂದು ಕುಂಞಿ ಬೆದುರಿಂಗೆ ಹಾರಿತ್ತು – ಹೇದು ಅಷ್ಟೆ. ಯೇವ ಉಪಕೀಚಕನೂ ಇಲ್ಲೆ, ಎಂತ ಮಣ್ಣೂ ಇಲ್ಲೆ.
~

ಮೃಗಾತ್ ಸಿಂಹಃ ಪಲಾಯತೇ
ಎದುರಂಗೆ ಕಾಂಬ ಅರ್ತ: ಜಿಂಕೆ ಸಿಂಹವ ಓಡುಸುತ್ತು.
ಪೂರ್ಣ ಶ್ಲೋಕ:
ಕಸ್ತೂರೀ ಜಾಯತೇ ಕಸ್ಮಾತ್? – ಕಸ್ತೂರಿ ಎಲ್ಲಿಂದ ಬತ್ತು?
ಕೋ ಹಂತಿ ಹರಿಣಾಂ ಕುಲಂ? – ಆನೆಯ ಕುಲವ ಕೊಲ್ಲುಸ್ಸು ಆರು?
ಕಿಂ ಕುರ್ಯಾತ್ ಕಾತರೋ ಯುದ್ಧೇ? – ಹೇಡಿ ಯುದ್ಧಲ್ಲಿ ಎಂತ ಮಾಡ್ತ?
ಈ ಮೂರು ಪ್ರಷ್ನೆಗೊ. ಇದಕ್ಕೆ ಉತ್ತರವಾಗಿ ಕೊನೇ ಗೆರೆ – ಮೃಗಾತ್ ಸಿಂಹಃ ಪಲಾಯತೇ ಹೇದು.
ಜಿಂಕೆಂದ, ಸಿಂಹವು, ಓಡುತ್ತು – ಹೇದು ಸಂಸ್ಕೃತಲ್ಲಿ ಅಪ್ಪಗ ಜಿಂಕೆ ಸಿಂಹವ ಓಡ್ಸುತ್ತು ಹೇದು ಅರ್ತ ಆವುತ್ತು.
~

ಸೀಮಂತಿನೀಶು ಕಾ ಶಾಂತಾ?
ರಾಜಾ ಕೋ ಭೂತ್ ಗುಣೋತ್ತಮಃ?
ವಿದ್ವದ್ಭಿಃ ಕಾ ಸದಾ ವಂದ್ಯಾ?
ತತ್ರೈವೋಕ್ತಂ ನ ವಿದ್ಯತೇ!?

ಪ್ರಶ್ನೆ: ಗೃಹಿಣಿಗಳಲ್ಲೇ ಅತ್ಯಂತ ಶಾಂತ ಸ್ವಭಾವದವು ಆರು? ಶಾಂತತ್ತೆ ಹೇಳುಗು ಮಾಷ್ಟ್ರುಮಾವ°, ಆದರೆ ಉತ್ತರ ಅದಲ್ಲ.
ರಾಜರಲ್ಲೇ ಅತ್ಯಂತ ಹೆಚ್ಚು ಗುಣವಂತ ಆರು? – ಎಂಗಳ ಲೀಡ್ರು ಹೇಳುಗು ರಾಜ್ಕೀಯ ಪಕ್ಷದವು. ಆದರೆ ಅದೂ ಉತ್ತರ ಅಲ್ಲ.
ವಿದ್ವಾಂಸರು ಸದಾ ಆರಿಂಗೆ ಶರಣಾವುತ್ತವು?
ಉತ್ತರ: ಈ ಎಲ್ಲ ಪ್ರಶ್ನೆಗೆ ಉತ್ತರ ಆಯಾ ಗೆರೆಲೇ ಇದ್ದಾಡ. ಆಯಾ ಗೆರೆಯ ಸುರೂವಾಣ, ಅಕೇರಿಯಾಣ ಅಕ್ಷರ ಸೇರ್ಸಿರೆ ಉತ್ತರ ಸಿಕ್ಕುತ್ತು. ಎಂತ್ಸರ? ಶಾಂತ ಸ್ವಭಾವದ “ಸೀತೆ”, ಗುಣೋತ್ತಮ ರಾಜ “ರಾಮ”, ವಿದ್ವಾಂಸರು ಶರಣಪ್ಪದು “ವಿದ್ಯೆ”ಗೆ – ಹೇಳ್ತು ಈ ಚೋದ್ಯ. ಅದಕ್ಕೇ – ಅಲ್ಲೇ ಉತ್ತರ ಇದ್ದು, ನಿನಗೆ ಅರಡಿಗಾಯಿದಿಲ್ಯೋ – ಹೇದು ನಾಲ್ಕನೇ ಗೆರೆ ಇಪ್ಪದು.
~

ಕೇಶವಂ ಪತಿತಂ ದೃಷ್ಟ್ವಾ –
ಪಾಂಡವಾಃ ಹರ್ಷ ನಿರ್ಭರಾಃ |
ಕೌರವಾಃ ರುದಿತಾಃ ಸರ್ವೇ
ಹಾಹಾ ಕೇಶವ ಕೇಶವಾ ||

ಎದುರಂಗೆ ಕಾಂಬ ಅರ್ತ: ಕೃಷ ಬಿದ್ದದರ ಕಂಡು ಪಾಂಡವರು ಎಲ್ಲೋರುದೇ ಕೊಶಿಗೊಂಡವು, ಆದರೆ ಕೌರವರು ಬೇಜಾರ ಮಾಡಿಗೊಂಡವು. ಛೇ – ಹೀಂಗೊಂದು ಇದ್ದೋ? ಎಂತಾ ವಿರೋಧಾಭಾಸ!!
ನಿಜಾರ್ತ: ಪಾಂಡು ಹೇದರೆ ಬೆಳಿ ಹೇದು ಅರ್ತ, ಪಾಂಡವ ಹೇದು ಕೊಕ್ಕರೆಗೂ ಹೇಳ್ತವಡ. ಕೌರವ ಹೇದರೆ ಕರಿ ಕಾಕೆಗೊ. ಕೇಃ ಹೇದರೆ ನೀರಿಲಿ. ಈಗ ಅರಡಿಗಾತೋ?
ನೀರಿಲಿ ಬಿದ್ದ ಶವವ ಕಂಡು ಕೊಕ್ಕರೆಗೊ ಕೊಶಿ ಪಟ್ಟವಡ, ತಿಂಬಲೆ ಸಿಕ್ಕಿತ್ತನ್ನೇ’ದು. ಆದರೆ ಕಾಕೆಗೊ? ಪಾಪ, ಅವಕ್ಕೆ ನೀರಿಲಿ ಹೋಪಲೆ ಎಡಿತ್ತೋ? ಇಲ್ಲೆ, ಹಾಂಗೆ ಬೇಜಾರು ಪಟ್ಟುಗೊಂಡವು – ಹೇದು.
ಅಷ್ಟೇ ಉಳ್ಳೊ.
~

ಪರ್ವತಾಗ್ರೇ ರಥೋಯಾತಿ
ಭೂಮೌ ತಿಷ್ಠತಿ ಸಾರಥಿಃ |
ಚಲತೇ ವಾಯುವೇಗೇನ
ಪದಮೇಕಂ ನ ಗಚ್ಛತಿ ||

ಎದುರಂಗೆ ಕಾಂಬ ಅರ್ತ: ಪರ್ವತದಷ್ಟು ಎತ್ತರಲ್ಲಿ ರಥ ಇದ್ದು, ಸಾರಥಿ ನೆಲಕ್ಕಲ್ಲಿದ್ದು. ವಾಯುವೇಗಲ್ಲಿ ಚಲಿಸುತ್ತಾ ಇದ್ದರೂ ಒಂದೇ ಒಂದು ಹೆಜ್ಜೆಯೂ ಮುಂದೆ ಹೋವುತ್ತಿಲ್ಲೆ.
ನಿಜಾರ್ತ: ಇದು ಅಡಕ್ಕೆ ಮರದ ಒಗಟು ಆಡ! ಪರ್ವತದಷ್ಟು ಎತ್ತರಲ್ಲಿ ರಥದ ಹಾಂಗೆ ಉರೂಟು ತಲೆ ಇದ್ದು, ನೆಲಕ್ಕಲ್ಲಿ ಬುಡ ಇದ್ದು. ಗಾಳಿ ಬಂದರೆ ಅತ್ಲಾಗಿತ್ಲಾಗಿ ಚಲನೆ ಆವುತ್ತು, ಆದರೂ ರಜವೂ ಹಂದುತ್ತಿಲ್ಲೇಡ. ಹಂದಿರೆ ತೋಟದ ಎಜಮಾನಂಗೆ ಗೆತಿಯೇ ಅಲ್ಲದೋ! 🙂
ಅಡಕ್ಕೆ ಮರದ ಬದಲು ಗಾಳಿಪಟ ಹೇದು ಉತ್ತರ ಹೇಳಿರೂ ಸರಿಯೇ, ಏಕೇದರೆ – ಅದುದೇ ಎಲ್ಲಾ ಲಕ್ಷಣವ ಒಳಗೊಂಡಿದು!

~

ಅಸ್ತಿ ಕುಕ್ಷಿ ಶಿರೋ ನಾಸ್ತಿ
ಬಾಹುರಸ್ತಿ ನಿರಂಗುಲಿಃ |
ಆಪದೋ ನರಭಕ್ಷೀ ಚ
ಯೋ ಜಾನಾತಿ ಸ ಪಂಡಿತಃ ||
ಪ್ರಶ್ನೆ: ಕೊರಳಿದ್ದು ತಲೆ ಇಲ್ಲೆ, ಕೈಗೊ ಇದ್ದು ಬೆರಳಿಲ್ಲೆ, ಮನಷ್ಯರನ್ನೇ ತಿಂತು – ಇದೆಂತ್ಸರ ಹೇದೋನು ಪಂಡಿತ.
ಉತ್ತರ: ಇದು “ಅಂಗಿ” ಆಡ! ಅಪ್ಪು – ಅದಕ್ಕೆ ದೇಹ ಇದ್ದು, ತಲೆ ಇಲ್ಲೆಪ್ಪೋ; ಕೈ ಇದ್ದು, ಬೆರಳಿದ್ದೋ? ಇಲ್ಲೆ. ಮನುಷ್ಯನನ್ನೇ ನುಂಗುತ್ತಿಲ್ಲೆಯೋ – ಗುಳುಂಕನೆ! ಹ್ಹೋ, ಹು!!

~

ಇನ್ನೂ ಹೇಳ್ತಿತವು ಚೌಕ್ಕಾರು ಮಾವ°, ಆದರೆ ಹೊತ್ತೋಪಗಾಣ ಹಾಲು ಕರವಲೆ ಗಣೇಶ ಮಾವಂಗೆ ಅಂಬೆರ್ಪು ಆತು. ಗಣೇಶಮಾವನ ಬೈಕ್ಕಿಂಗೆ ಅಂಬೆರ್ಪು ಅಪ್ಪಗ ನಾವುದೇ ಹೆರಡೆಕ್ಕಾತು.
ಹೀಂಗಿಂರ್ತ ಇನ್ನೂ ಹಲವು ನೂರುಗೊ ಇದ್ದು. ಕೇಳುಲೆ ವಿಚಿತ್ರ ಆದರೂ, ಉತ್ತರ ಗೊಂತಪ್ಪಗ ಗಮ್ಮತ್ತಾವುತ್ತು.
ನಿಂಗೊಗೆ ನೆಂಪಾದರೆ ಹೇಳಿ, ಆತೋ?

ಕೂಳಕ್ಕೋಡ್ಳು ಮಹೇಶಣ್ಣ, ಚೆನ್ನೈ ಬಾವಂಗೆ ಎಲ್ಲ ಅರಡಿಗಾದ್ಸರ ಬೈಲಿಂಗೆ ಹೇದರೆ ಭಾರೀ ಪಷ್ಟಕ್ಕು.
ಅಲ್ದೋ?
~

ಹೀಂಗಿರ್ಸರ ಕೇಳಿರೆ ಆಸಕ್ತಿ ಬತ್ತು, ಆಸಕ್ತಿ ಬಂದಪ್ಪಗ ತನ್ನಿಂತಾನೇ ಭಾಷಾಸಕ್ತಿ ಹೆಚ್ಚುತ್ತು. ಆಸಕ್ತಿಂದ ಜ್ಞಾನ ಹೆಚ್ಚುತ್ತು, ಜ್ಞಾನಂದ ಭಾಷಾಭಿಮಾನ ಹೆಚ್ಚುತ್ತು.
ಸಂಸ್ಕೃತ ಭಾಶೆ ಬೆಳವಲೆ ಹೀಂಗಿರ್ಸ ಚೋದ್ಯಂಗಳೂ ಪ್ರಮುಖ ಪಾತ್ರ ಹೊಂದುತ್ತು.
ಎಂತ ಹೇಳ್ತಿ?
~

ಒಂದೊಪ್ಪ: ಭಾಷೆಲಿಪ್ಪ ಚೋದ್ಯ ಸಮಸ್ಯೆಗಳ ಕಲಿಶುತ್ತರ ಮೂಲಕ ಭಾಷೆಗಿಪ್ಪ ಸಮಸ್ಯೆ ನಿವಾರಣೆ ಆಗಲಿ.

ಒಪ್ಪಣ್ಣ

   

You may also like...

8 Responses

 1. ಚೆನ್ನೈ ಭಾವ° says:

  ಇದಿದಾ ಶುದ್ದಿ ರೈಸಿದ್ದು. ಇದಕ್ಕೆ ಇನ್ನೊಂದೆರಡು ಸೇರಿಸಿಕ್ಕುವನೋ

  ತಾತೇನ ಕಥಿತಂ ಪುತ್ರ! ಲೇಖಂ ಲಿಖ ಮಮಾಜ್ಞಯಾ
  ನ ತೇನ ಲಿಖಿತೋ ಲೇಖಃ ಪಿತುರಾಜ್ಞಾ ನ ಲೋಪಿತಾ ||

  ಅಪ್ಪ ಮಗನತ್ತರೆ ಆನೇಳ್ತಾಂಗೆ ಒಂದು ಕಾಕದ ಬರೆ ಹೇದು ಹೇದನಡ. ನ ತೇನ ಲಿಖಿತಃ – ಅವನಿಂದ ಅದು ಬರೆಯಲ್ಪಟ್ಟಿದಿಲ್ಲೆ, ಪಿತುರಾಜ್ಞಾ ನ ಲೋಪಿತಾ – ಅಪ್ಪನ ಆಜ್ಞೆಯೂ ಮೀರಿದ್ದಿಲ್ಲೆ!!

  ಇಲ್ಲಿ ನ ತೇನ ಇಪ್ಪದರ ನತೇನ ಹೇದು ಮಾಡಿಯಪ್ಪಗ – ಶಿರಬಾಗಿ ಅವನಿಂದ ಪತ್ರವು ಬರೆಯಲ್ಪಟ್ಟಿತು ಹೇದು ಆವುತ್ತಡದಾ!!

  ಆಗತಃ ಪಾಂಡವಾಃ ಸರ್ವೇ ದುರ್ಯೋಧನಸಮೀಹಯಾ
  ತಸ್ಮೈ ಗಾಂ ಸುವರ್ಣಂ ಚ ರತ್ನಾನಿ ವಿವಿಧಾನಿ ಚ

  ಒಟ್ರಾಶಿ ನೋಡಿರೆ ಇದಕ್ಕೆ ಅರ್ಥವೇ ನೇರ್ಪಕ್ಕೆ ಇಲ್ಲೆ. ಎಂತಕೇದರೆ ಇಲ್ಲಿ ಕ್ರಿಯಾಪದವೇ ಇಲ್ಲೆ. ದುರ್ಯೋಧನನ ಬಯಸಿ ಎಲ್ಲ ಪಾಂಡವರೂ ಬಂದನು. ಅವಂಗೆ ದನ ಬಂಗಾರ ವಿವಿಧ ರತ್ನಂಗಳ….

  ಎಂತರ ?, ಉಮ್ಮ!

  ಇಲ್ಲಿ ಸರ್ವೇದುಃ (ಸರ್ವೇ ಅದುಃ) ಯೋ ಧನಸಮೀಹಯಾ ಹೇದು ಮಾಡ್ಯೊಂಡ್ರೆ ಸರ್ವೇ ಪಾಂಡವಾಃ ಅದುಃ – ಎಲ್ಲ ಪಾಂಡವರು ಕೊಟ್ಟವು ಹೇದು ಮಾಡಿಯಪ್ಪಗ ಯಾವಾತ° ಧನವ ಬಯಸಿ ಬಂದನೋ (ಅವಂಗೆ) ಎಲ್ಲ ಪಾಂಡವರು ಗೋ, ಸುವರ್ಣ, ರತ್ನಂಗಳ ಕೊಟ್ಟವು ಹೇದು ಆವುತ್ತಡ ಅದಾ!!

  ಏಕೋನಾ ವಿಂಶತಿಃ ಸ್ತ್ರೀಣಾಂ ಸ್ನಾನಾರ್ಥಂ ಸರಯೂ ಗತಾ
  ವಿಂಶತಿಃ ಪುನರಾಯಾತಾ ಏಕೋ ವ್ಯಾಘ್ರೇಣ ಭಕ್ಷಿತಃ

  ಒಟ್ರಾಶಿ ನೋಡಿರೆ ಹತ್ತೊಂಬತ್ತು ಹೆಮ್ಮಕ್ಕೊ ಮೀವಲೆ ಹೊಳೆಕರೆಂಗೆ ಹೋದವು, ಇಪ್ಪತ್ತು (ಹೆಮ್ಮಕ್ಕ) ಹಿಂತಿರಿಗಿದವು , ಒಬ್ಬನ ಹುಲಿತಿಂದತ್ತು !!

  ಇದರ ಏಕೋನಾ (ಏಕಃ ನಾ ) ವಿಂಶತಿಃ ಸ್ತ್ರೀಣಾಂ ಹೇದು ಮಾಡ್ಯೊಂಡ್ರೆ ಒಬ್ಬ ಗಂಡಸು (ನಾ) , ಇಪ್ಪತ್ತು ಹೆಮ್ಮಕ್ಕೊ ಹೇದಾವುತ್ತಡ! ಅದಾ ಈಗ ಲೆಕ್ಕ ಸಮ ತೂಗಿತ್ತು!!

  • ಶ್ಯಾಮಣ್ಣ says:

   ( ಒಬ್ಬ ಗಂಡಸು (ನಾ) , ಇಪ್ಪತ್ತು ಹೆಮ್ಮಕ್ಕೊ) ಹಾಂಗೇ ಅಯೆಕ್ಕು ಅವಂಗೆ… ಮತ್ತೆಂತಕೆ ಹೆಮ್ಮಕ್ಕ ಮೀವಲ್ಲಿಗೆ ಅವ ಹೋದ್ದು? ಸಮಾ ಆತು ಅವನ ಹುಲಿ ತಿಂದದು… 😉

 2. Jayalakshmi Kukkila says:

  ಸಮಸ್ಯೆಗಳೂ ಮನಸ್ಸಿಂಗೆ ಮುದಕೊಡುದಪ್ಪು…..ಪಷ್ಟಾಯಿದು ಸಂಸ್ಕೃತ ಸಮಸ್ಯೆಗೊ ….ಎನಗೆ ಸಂಸ್ಕೃತಲ್ಲಿ ಏನೂ ಜ್ಞಾನ ಇಲ್ಲೆ…ಆದರೂ ಕನ್ನಡಲ್ಲಿಯೂ ಇದರ ಅರ್ಥ ಓದಿ ಪುನಾ ಸಂಸ್ಕೃತ ಸಮಸ್ಯೆ ಓದಿ ಅಪ್ಪಗ ಕುತೂಹಲದೊಟ್ಟಿಂಗೆ ಮನಸ್ಸಿಂಗೆ ತುಂಬಾ ಮುದಕೊಟ್ಟದಪ್ಪು…

 3. ಬೊಳುಂಬು ಗೋಪಾಲ says:

  ಸಂಸ್ಕೃತ ಒಗಟುಗೊ ಲಾಯಕಿತ್ತು. ಅರ್ಥ ಹೇಳಿದ ಕಾರಣ ಸರಿಯಾಗಿ ಅರ್ಥ ಆತದ. ಹಿಂದಾಣ ಕಾಲದ ವಿದ್ವಾಂಸರ ಜ್ಞಾನವ, ಅವಕ್ಕಿಪ್ಪ ತಮಾಷೆ ಪ್ರಕೃತಿಯ ಎಲ್ಲವನ್ನೂ ತೋರುಸುತ್ತು ಹೀಂಗಿಪ್ಪ ಶೋಕಂಗೊ. ನೆಂಪು ಮಾಡುಸಿದ ಒಪ್ಪಣ್ಣಂಗೆ ಒಂದೊಪ್ಪ.

 4. ಒಳ್ಳೇ ಶುದ್ದಿ ಒಪ್ಪಣ್ಣ, ಸುರುವಾಣ ಒಗಟಿನ ಶ್ಲೋಕ[ವಿರಾಟ ನಗರೇ ರಮ್ಯೇ ] ಹಾಂಗೂ [ಅಸ್ತಿ ಕುಕ್ಷಿ ಶಿರೋ ನಾಸ್ತಿ ] ಇದರ ಎನ್ನಪ್ಪ ಹೇಳುದು ಕೇಳಿಂಡಿದ್ದಿದ್ದೆ.

 5. keshava prakash says:

  ಯಾನಿ ಕಾನಿ ಚ ಪಾಪಾನಿ ಜನ್ಮಾಮ್ಥರ ಕೃತಾನಿ ಚ|
  ತಾನಿ ತಾನಿ ವಿನಷ್ಯನ್ತಿ ಚಹಾ ಪಾನಂ ಪದೇ ಪದೇ ||
  – ಹಾoಗಾಗಿ ಅoಬಗoಬಗ ಚಹಾ ಕುಡುದರೆ ಒಳ್ಳೆದು ಹೇಳಿ ಕಾಣುತ್ತು ?

 6. S.K.Gopalakrishna Bhat says:

  ಭಾರೀ ಲಾಯಕ ಆಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *