Oppanna.com

ಸಂಗೀತ ಕಛೇರಿಲಿ ಕಂಡ ಸಂಸಾರ ಕಛೇರಿ…

ಬರದೋರು :   ಒಪ್ಪಣ್ಣ    on   06/02/2015    6 ಒಪ್ಪಂಗೊ

ಜಯಪ್ರಕಾಶ ವಲಯೋತ್ಸವ ಗೆದ್ದತ್ತು ಹೇಳುವಾಗ ಜೆಡ್ಡುಮಾವನ ಮೋರೆಲಿ ಜಯವೂ, ಪ್ರಕಾಶವೂ ಕಂಡುಗೊಂಡಿತ್ತು.
ಕಳುದ ಆಯಿತ್ಯವಾರ ಇದ್ದದಿದಾ – ಆ ಕಾರ್ಯಕ್ರಮ. ಅದರ ಉಸ್ತುವಾರಿಲಿ ದೊಡ್ಡ ಪಾಲು ಜೆಡ್ಡುಮಾವಂದೇ ಆದ ಕಾರಣ, ಅದರ ಪೂರ್ವಯೋಜನೆ ಲೆಕ್ಕಲ್ಲಿ ಒಂದು ವಾರಂದ ಒರಕ್ಕಿಲಿಯೂ ಇದೇ ಲೆಕ್ಕಾಚಾರಂಗೊ ಬಂದುಗೊಂಡಿತ್ತಾಡ, ಜೆಡ್ಡುಅತ್ತೆ ಹೇಳಿಗೊಂಡಿತ್ತಿದ್ದವು.
ಎಲ್ಲವೂ ಸುಸೂತ್ರವಾಗಿ ನೆಡದು, ಅಚ್ಚುಕಟ್ಟಾಗಿ ಆ ಕಾರ್ಯಕ್ರಮ ನೆರವೇರಿದ ನೆಮ್ಮದಿ ಅವರ ಮೋರೆಲಿ ಕಂಡುಗೊಂಡಿತ್ತು.
ಶ್ರೀಮಠದ ಆಡಳ್ತೆ ಉದ್ದೇಶಂದ ಸಮಾಜವ ಹಲವಾರು ಮಂಡಲ, ವಲಯ, ಘಟಕ – ಹೀಂಗೆ ಗುರ್ತ ಹಾಕಿದ್ದವು. ಕೊಡೆಯಾಲ, ಮುಳ್ಳೇರಿಯಾ, ಉಪ್ಪಿನಂಗಡಿ – ಹೀಂಗೆ ಹಲವು ಮಂಡಲಂಗೊ ಇದ್ದಲ್ಲದೋ..
ಬೈಲ ನೆಂಟ್ರುಗೊ ಎಲ್ಲ ಹತ್ತು ಹಲವಾರು ವಲಯವಾರು ಹರಡಿಗೊಂಡು ಇಪ್ಪದು ಗೊಂತಿಪ್ಪದೇ.
ಹಾಂಗೆ, ಜೆಡ್ಡುಮಾವನ ಮನೆ ಇಪ್ಪದು ಜಯಪ್ರಕಾಶ ವಲಯ.
ಒರಿಶಕ್ಕೊಂದರಿ ವಲಯಂಗಳಲ್ಲಿ ವಲಯೋತ್ಸವ ಹೇದು ಕಾರ್ಯಕ್ರಮ ಮಾಡಿ, ಅದರಲ್ಲಿ ಆ ಊರಿನ ಪ್ರತಿಭೆಗೊಕ್ಕೆ ಒಂದು ವೇದಿಕೆ ಒದಗುಸಿ, ಪರಸ್ಪರ ಪರಿಚಯ ಮಾಡಿಗೊಂಡು, ಊರೊಳ ನೆಡವ ಒರ್ತಮಾನಂಗಳ ಮಾತಾಡಿಗೊಂಬದು ವಲಯೋತ್ಸವದ ಮುಖ್ಯ ಕಾರ್ಯ. ಇದರೆಡಕ್ಕಿಲಿ ಚೆಂದದ ಊಟೋಪಚಾರವೂ ಇದ್ದು, ನಮ್ಮ ಸಂಸ್ಕಾರದಂತೇ.
ಇದೆಲ್ಲದಕ್ಕೆ ಕಿರೀಟಪ್ರಾಯವಾಗಿಪ್ಪದು, ನಮ್ಮ ಶ್ರೀಗುರುಗಳ ಆಗಮನ.
ಅಪ್ಪು, ವಲಯೋತ್ಸವ ಯಶಸ್ವಿ ಆಯೇಕಾರೆ ಅಲ್ಲಿಗೆ ಶ್ರೀಗುರುಗೊ ಬಂದೇ ಬರೆಕು. ಎಲ್ಲ ವಲಯೋತ್ಸವದ ಹಾಂಗೆ ಜಯಪ್ರಕಾಶ ವಲಯಕ್ಕೂ ವಲಯೋತ್ಸವಕ್ಕೆ ಗುರುಗೊ ಬಯಿಂದವಾಡ; ಜೆಡ್ಡುಮಾವನೇ ತೊಳಶಿಮಾಲೆ ಹಾಕಿ ಎದುರುಗೊಂಡದಾಡ.
ಅದೇ ದಿನ ‘ಮಠಲ್ಲಿ ಮೀಟಿಂಗು ಇದ್ದು, ಮನೆಪ್ಪಾರಕ್ಕೆ ಬಂದು ನಿಂಬೆಯೋ ಒಪ್ಪಣ್ಣಾ‘ – ಕೇಟವು ಗುರಿಕ್ಕಾರ್ರು. ಎಡಿಯ ಹೇಳುಲೆಡಿತ್ತೋ? ಹಾಂಗೆ ಗುರಿಕ್ಕಾರ್ರ ಮನೆಪಾರಕ್ಕೆ ನಿಂದ ಕಾರಣ ಎನಗೆ ಹೋಪಲಾತಿಲ್ಲೆ.
ಆದರೆಂತಾತು, ರಾಧಕ್ಕನ ಕೆಮರಲ್ಲಿ ವೀಡ್ಯರೆಕಾರ್ಡು ಆದ್ಸರ ನೋಡ್ಳೆಡಿಗಾವುತ್ತಿದಾ – ಆ ಧೈರ್ಯಲ್ಲಿ ಸಮದಾನ ಮಾಡಿಗೊಂಡೆ.
ನಿನ್ನೆಲ್ಲ ಮೊನ್ನೆ ರಾಧಕ್ಕನ ಮನೆಗೆ ಹೋಗಿಪ್ಪಾಗ ಚೆಂದಲ್ಲಿ ಕೂದು ಈ ಕಾರ್ಯಕ್ರಮದ ವೀಡ್ಯಂಗಳ ನೋಡಿಗೊಂಡೆ.
ಗುರುಗೊ ಬಪ್ಪ ಮೊದಲೇ ಒಂದು ಹಂತದ ಸಭಾಕಾರ್ಯಕ್ರಮ ನೆಡದ್ದು. ಮಹಾಮಂಡಲ, ಮಂಡಲದ ಹೆರಿಯೋರು, ಮಾವಂದ್ರು ಬಂದು ಹಲವಾರು ವಿಷಯದ ಬಗ್ಗೆ ಮಾತಾಡಿದವು. ಪ್ರಸ್ತುತ ವಿದ್ಯಮಾನಂಗಳ ಬಗ್ಗೆ ಒಂದೊಂದೇ ವಿವರಂಗೊ ತಿಳುಶಿದವು. ಆ ಕಾರ್ಯಕ್ರಮ ಚೆಂದಲ್ಲಿ ಕಳಾತು.  ಸಭೆ ಮುಗುದಪ್ಪದ್ದೇ – ಜೆಡ್ಡುಮಾವ° ಮೈಕ್ಕಲ್ಲಿ ಹೇಳಿದವು – ಗುರುಗೊ ಮಠಂದ ಹೆರಡ್ತವಷ್ಟೇ, ಎಲ್ಲೋರುದೇ ಸಾವಕಾಶ ಉಂಡುಗೊಳೇಕು – ಹೇದು.
ಹಾಂಗೆ ಬಂದ ನೆಂಟ್ರುಗೊ ಎಲ್ಲ ಪರಸ್ಪರ ಮಾತಾಡಿಗೊಂಡು ಉಂಡವು. ಚೆಂದಲ್ಲಿ ಮಾತಾಡಿಗೊಂಡವು.
ಎಲ್ಲೋರ ಸಾವ್ಕಾಶ ಆವುತ್ತಾ ಇಪ್ಪಾಗ, ಗುರುಗೊ ಬಂದವು.
ಗುರುಗಳ ಕಾರಿನ ಎದುರುಗೊಂಬಲೆ ಓ ಅಷ್ಟು ದೂರಕ್ಕೇ – ಮಿತ್ತೂರು ಶರ್ಮಣ್ಣ ಹೋಯಿದವಲ್ಲದೋ.
ಗುರುಗೊ ಬಂದ ಕೂಡ್ಳೇ ಜೆಡ್ಡುಮಾವ° ಒಯಿಜಯಂತೀ ಮಾಲಾರ್ಪಣೆ ಮಾಡಿದವು. ಎಲ್ಲೋರುದೇ ಒಕ್ಕೊರಲಿಂದ ಜೈಕಾರ ಹಾಕಿದವು.
ರಜನೀಶಣ್ಣನ ಸ್ವರ ದೊಡ್ಡವೋ, ಎಡಪ್ಪಾಡಿ ಭಾವನ ಸ್ವರ ದೊಡ್ಡವೋ – ಹೇದು ಸಣ್ಣಕೆ ಸಂಶಯ ಬಂತು ಒಂದರಿ, ಇಬ್ರ ಜೈಕಾರವೂ ಕೇಳಿ ಅಪ್ಪಾಗ.
ಮಂದಹಾಸಲ್ಲಿ ಎಲ್ಲ ಜೈಕಾರಂಗಳನ್ನೂ ಕೇಳಿಗೊಂಡು ಗುರುಗೊ ಮುಂದುವರುದವು.
ಗುರುಗೊ ಸಭೆಯ ಒಳ ಬಂದ ಹಾಂಗೇ, ಇಡೀ ಸಭೆಯೇ ಮಿಂಚು ಬಂದ ಹಾಂಗೆ ಎದ್ದು ನಿಂದತ್ತು! ರಾಧಕ್ಕನ ಕೆಮರಲ್ಲಿ ಬಂದ ವೀಡ್ಯಲ್ಲಿ ಕಾಣ್ತು ಆ ಗೌಜಿ!
ದೀಪಪ್ರಜ್ವಾಲನ ಆಗಿ, ರಜನೀಶಣ್ಣ ಪರಾಖೆ ಹೇಳಿ, ಶಂಖನಾದ ಆಗಿ ಸಭೆ ಸುರು ಆತು. ಸಭೆ ಎಂತರ? ಇಡೀ ಸಭೆಯೇ ಪಂಚರತ್ನ ಕೀರ್ತನೆ ಹಾಡಿದ್ದು!!!
~
ಅಪ್ಪು – ಈ ಜೆಡ್ಡುಮಾವಂಗೆ ಸಂಗೀತ ಹೇದರೆ ತುಂಬಾ ಪ್ರೀತಿ. ಅವಕ್ಕೆ ಮನಸು ಕಂಡ್ರೆ ಸಂಗೀತ ಹೇಳಿಂಡು ಕೂರುಗು, ಬೇರೆ ಯೇವದಕ್ಕೆ ಮನಸ್ಸಿಲ್ಲದ್ದರೂ ಸಂಗೀತ ಕೇಳಿಂಡು ಕೂರುಗು.
ಅವರ ಮನೆಯ ಗೋಡೆಲಿಪ್ಪ ದೊಡ್ಡ ಟೀವಿಲಿ ಭೈರವಿಯೋ, ಕಲ್ಯಾಣಿಯೋ, ಕೇದಾರಗೌಳವೋ ಎಂತಾರು ಸರಾಗ ಕೇಳಿಂಡು ಇರ್ತು ಅವರ ಮನೆಗೆ ಹೋದರೆ..! ಅಂತಾ ಆಸಕ್ತಿ!
ಅವರದ್ದೇಯೋ ಏನೋ ಈ ಆಲೋಚನೆ – ವಲಯೋತ್ಸವದ ದಿನ ಪಂಚರತ್ನ ಕೀರ್ತನೆ ಹಾಡುಸುತ್ತ ಬಗೆ!
ಗುರುಗೊ ಗುರುಪೀಠಲ್ಲಿ, ಶಿಷ್ಯರೆಲ್ಲರೂ ಸಭೆಲಿ.
ಶಿಷ್ಯರು ಒಟ್ಟಾಗಿ ಪಂಚರತ್ನ ಹಾಡುಲೆ ಸುರುಮಾಡಿದವು. ಜೆಡ್ಡುಮಾವಂಗೆ ಪಂಚರತ್ನಕೃತಿ ಹೇದರೆ ಮಹದಭಿಮಾನ. ಯೇವತ್ತೂ ಹೇಳುಗು ಅದರ ಬಗ್ಗೆ.
ನಾಟ ರಾಗದ “ಜಗದಾನಂದಕಾರಕಾ”, ಗೌಳ ರಾಗದ “ದುಡುಕುಗಲ”, ಆರಭಿ ರಾಗದ “ಸಾಧಿಂಚೆನೇ..”, ವರಾಳಿ ರಾಗದ “ಕನಕನ ರುಚಿರ”, ಶ್ರೀರಾಗದ ಜಗತ್ಪ್ರಸಿದ್ಧ “ಎಂದರೋ ಮಹಾನುಭಾವುಲು” – ಇದಿಷ್ಟೂ ಸಂಗೀತಸೌಧದ ಆಧಾರಸ್ತಂಭಂಗೊ ಆಡ. ಇದು ಅರಡಿಯದ್ದೋನು ಕರ್ನಾಟಕ ಸಂಗೀತಗಾರ ಹೇದು ಅಪ್ಪಲೆ ಸಾಧ್ಯವೇ ಇಲ್ಲೇಡ!!
ಗುರುಗೊ ಚೆಂದಲ್ಲಿ ಪದ ಕೇಳಿದವು, ನೂರಕ್ಕೆ ನೂರು ಮಾರ್ಕು ಕೊಟ್ಟವು.
ಆಶೀರ್ವಚನಲ್ಲಿ “ಜೆಡ್ಡು ಅಪ್ಪಚ್ಚಿ” ಹೇದು ಆತ್ಮೀಯವಾಗಿ ಅವರ ವಿಷಯವ ಕೊಂಡಾಡಿದವು,  ಸಂಗೀತಲ್ಲಿಪ್ಪ ಆನಂದವ, ತೃಪ್ತಿಯ ಹೇದು ಮನಸಾ ಆಶೀರ್ವಾದ ಮಾಡಿದವು.
~
ಇದು ಮೊನ್ನೇಣ ಸಂಗತಿ ಆತು.
ರಾಧಕ್ಕನಲ್ಲಿ ಈ ವೀಡ್ಯಂಗಳ ನೋಡಿ ಮನೆಗೆ ಬಂದೆ ಅಲ್ಲದೋ -ಟೀವಿ ತಿರುಗುಸಿರೆ ಅಲ್ಲಿ ಕಛೇರಿ ಬಂದುಗೊಂಡಿತ್ತು.
ತೆಮುಳುನಾಡಿನ ಆರೋ ದೊಡ್ಡ ವಿದ್ವಾಂಸರದ್ದು ಗಾಯನ.
ಒಂದು ಹೆಮ್ಮಕ್ಕಳದ್ದು ಪಿಟೀಲು ವಾದನದ ಸಹಕಾರ.
ದೊಡ್ಡನಾಮದ ಮಾವಂದು ಮೃದಂಗ,
ಒಬ್ಬರು ಆರೋ ಹೆರಿಯ ಅಜ್ಜಿದು ತಂಬೂರಿ ಶ್ರುತಿ!
ಚೆಂದದ ರಾಗ, ಚೆಂದದ ಪದ. ಕೇಳಿಂಡೇ ಕೇಳಿಂಡೇ ಅಲ್ಲಿಗೇ ಕುಷಿ ಏರಿತ್ತು.
ಅಷ್ಟಪ್ಪಗ ಒಂದು ಸಂಗತಿ ಒಪ್ಪಣ್ಣನ ತಲಗೆ ಬಂತು. ಅದೆಂತರ?
ಸಂಗೀತ ಕಛೇರಿ ಹೇದರೆ ಅದು ನಮ್ಮ ಸಂಸಾರದ ಬಿಂಬ ಅಲ್ಲದೋ? ಸಂಸಾರಲ್ಲಿ ನೆಡವದನ್ನೇ ಅಲ್ಲಿ ಮೂರ್ತರೂಪವಾಗಿ ತೋರ್ಸುತ್ತದು ಅಲ್ಲದೋ – ಹೇದು.
~
ನಮ್ಮ ತರವಾಡುಮನೆಯ ವ್ಯವಸ್ಥೆಯನ್ನೂ, ಆ ಸಂಗೀತ ಕಛೇರಿಯನ್ನೂ ಹೋಲುಸಿ ಹೋತು ಒಪ್ಪಣ್ಣಂಗೆ.

ಎಜಮಾನ ಸಂಗೀತಗಾರ.
ಯೇವದೋ ಒಂದು ಕೀರ್ತನೆಯ ಸ್ಪಷ್ಟವಾಗಿ ಹಾಡ್ತಾ ಇರ್ತ°. ಇಡೀ ಸಭೆಯ ಗಮನ ಅವನ ಮೇಗೆ ಇರ್ತು.
ಅವನ ರಾಗಾಲಾಪನೆಯ ಎಲ್ಲೋರುದೇ ಅನುಭವಿಸುತ್ತವು, ಕುಷಿಲಿ ತಲೆ ಕೊಣುಶುತ್ತವು.
ಅವ° ಹೇಳಿದಾಂಗೆಯೇ ಆ ಸಂಗೀತಕಛೇರಿ ನೆಡವದು! ಅವನ ಮನಸ್ಸಿಂಗೆ ಬಂದ ಕೀರ್ತನೆಯೇ ಇನ್ನು ಮುಂದೆ ಹಾಡುದು!!
ರಂಗಮಾವನ ಎಜಮಾನ್ತಿಕೆಯ ಲಕ್ಷಣವೂ ಹಾಂಗೇ ಅಲ್ಲದೋ!

ಎಜಮಾನ್ತಿಯ ಹಿಮ್ಮೇಳ.
ಎಜಮಾನನ ಸ್ವರಲ್ಲಿಪ್ಪ ಶ್ರುತಿಗೆ, ಅದೇ ಶ್ರುತಿಲಿ, ಅದೇ ಭಾವಲ್ಲಿ ಆ ತಾನವ ಪುನರಾವರ್ತನೆ ಮಾಡ್ತದು ಹಿಮ್ಮೇಳದ ಕಾರ್ಯ.
ಪಿಟೀಲು ಆದರೂ ಅದುವೇ, ಹಾರ್ಮಣಿ ಆದರೂ ಅದುವೇ.
ಸಂಗೀತಕಾರಂಗೆ ನಿಲ್ಲುಸೇಕಾದಲ್ಲಿ ಒಂದರಿಂಗೆ ಹೆಗಲುಕೊಟ್ಟು ಅದೇ ಭಾವವ ಮುಂದುವರುಸುತ್ತದು ಹಿಮ್ಮೇಳದ ಕೆಲಸ ಅಲ್ಲದೋ!
ಪಾತಿಅತ್ತೆಯ ಹಿಮ್ಮೇಳ ರಂಗಮಾವಂಗೆ ಅದ್ಭುತವಾಗಿ ಚೇರ್ಚೆ ಆವುತ್ತು.
ಒಂದೊಂದರಿ ರಂಗಮಾವನ ಜಾಗೆಯ ತುಂಬಿಗೊಂಡು, ಒಳುದ ಹೊತ್ತಿಲಿ ರಂಗಮಾವನ ಹೆಗಲುಕೊಟ್ಟುಗೊಂಡು – ಸಂಸಾರ ರಥ ಸಾಗುಸುತ್ತ ಮಹತ್ಕಾರ್ಯಲ್ಲಿ ಪಾತಿಅತ್ತೆಗೆ ನೆಮ್ಮದಿ ಇದ್ದು!

ಸಂಗೀತಗಾರರ ಆಧಾರ ಮೃದಂಗದ ತಾಳ!
ಸಂಗೀತಗಾರ ಭಾವವನ್ನೂ, ರಾಗವನ್ನೂ ತುಂಬುಗು. ಆದರೆ, ತಾಳದ ಅಧಿಪತಿ ಆ ಮೃದಂಗಗಾರ ಅಲ್ಲದೋ? ಸಂಗೀತಗಾರನ ಹಾಡುಗಾರಿಕೆಗೆ ನಿರೂಪ ನಿರ್ದೇಶನ ಮಾಡುದು, ಉತ್ಸಾಹದ ಊಕಿಲಿ ತಾಳತಪ್ಪಿ ಹೋಗದ್ದ ಹಾಂಗೆ ನೋಡಿಗೊಂಬದು ಮೃದಂಗಗಾರನ ಕರ್ತವ್ಯ. ಸಂಗೀತಗಾರನ ಆಲಾಪವ ಆಸ್ವಾದಿಸಿ “ಭಲೇ ಭಲೇ”, ಶಾಬ್ಬಾಸ್ – ಹೇದು ಪ್ರೋತ್ಸಾಹ ಕೊಡ್ತದೂ ಮೃದಂಗಕಾರನೇ ಅಲ್ಲದೋ?
ರಂಗಮಾವನ ಎಜಮಾನ್ತಿಗೆಯ ಶಂಬಜ್ಜ° ಪೂರ್ತವಾಗಿ ಒಪ್ಪಿಗೊಂಡಿತ್ತವು. ಆದರೆ ರಂಗಮಾವನ ಪ್ರತಿ ಹೆಜ್ಜೆಯೂ, ಶಂಬಜ್ಜ° ಹಾಕಿದ ತಾಳಲ್ಲೇ ಇದ್ದತ್ತು. ಅವು ಪರಸ್ಪರ ಒಬ್ಬರಿಂಗೊಬ್ಬರು ಭಲೇ ಭಲೇ ಹೇಳಿಗೊಂಡಿತ್ತಿದ್ದವು. ರಂಗಮಾವಂಗೆ ತಾಳ ತಪ್ಪುವ ಹಾಂಗೆ ಆದಲ್ಲಿ ಶಂಭಜ್ಜ° ಸ್ವತಃ ಇಳುದು ತಿದ್ದಿಗೊಂಡು ಇತ್ತಿದ್ದವು!

ಸಂಗೀತಕ್ಕೆ ಮೂಲಾಧಾರ ಶ್ರುತಿ!
ಸಂಗೀತಕ್ಕೆ ಹಿಮ್ಮೇಳ ಬೇಕು, ಮುಮ್ಮೇಳ ಬೇಕು, ಕೇಳುಗರು ಬೇಕು. ಆದರೆ, ಎಲ್ಲೋರಿಂಗೂ ಮೂಲಾಧಾರ ಎಂತರ? ತಂಬೂರಿಯ ತಂತಿಂದ ಹರುದು ಬಪ್ಪ ಶ್ರುತಿಸ್ವರ ಅಲ್ಲದೋ?
ಸಂಗೀತದೋನಿಂಗೆ, ಹಿಮ್ಮೇಳದೋರಿಂಗೆ, ಮೃದಂಗಕ್ಕೆ, ಅಥವಾ, ಇತರೇ ಆರಿಂಗೇ ಆದರೂ –  ಶ್ರುತಿ ಇಲ್ಲದ್ದೆ ಆಗ.
ಹಾಂಗಾದರೆ, ರಂಗಮಾವನ ಮನೆಲಿ ಈ ಸ್ಥಾನ ಆರಿಂಗೆ? ಈ ಸ್ಥಾನ ತುಂಬಿಗೊಂಡಿದ್ದದು ಸ್ವತಃ ಕಾಂಬು ಅಜ್ಜಿಯೇ.
ಕಾಂಬುಅಜ್ಜಿ ಹೋದ ಮೇಗೆ – ಅವು ಹಾಕಿಕೊಟ್ಟ ಸಂಸ್ಕಾರ, ಅವು ಬೆಳಗಿದ ದೇವರಕೋಣೆ, ಅಲ್ಲಿಪ್ಪ ದೇವರು – ಅದುವೇ ಆ ಮನೆಯ ಶ್ರುತಿಸ್ವರ.
ರಂಗಮಾವನ ಪ್ರತಿ ಹೆಜ್ಜೆಯೂ ಆ ಶ್ರುತಿಸ್ವರಲ್ಲೇ ಇದ್ದತ್ತು. ಅವರ ಎಲ್ಲ ಚಿಂತನೆಗಳೂ, ಅವರ ಕೆಲಸಕಾರ್ಯಂಗಳಲ್ಲೂ ಕಾಂಬುಅಜ್ಜಿಯ ಸಾಜ ಎದ್ದು ಕಂಡುಗೊಂಡಿತ್ತು.
ಕಾಂಬುಅಜ್ಜಿಯ ಇರುವಿಕೆ ಶಂಬಜ್ಜಂಗೂ ಬೇಕು, ಪಾತಿಅತ್ತೆಗೂ ಬೇಕು, ರಂಗಮಾವಂಗೂ ಬೇಕು.
ಎಲ್ಲೋರಿಂಗೂ ಬೇಕಾದ ಶ್ರುತಿ ನಿರ್ಧಾರಿ – ಮನೆಯ ಹೆರಿಯಜ್ಜಿ!!
~
ಶ್ರುತಿ ತಪ್ಪಿರೆ ಕಛೇರಿ ಹಾಳಾವುತ್ತು.
ತಾಳ ತಪ್ಪಿರೆ ಕಛೇರಿ ಹಾಳಾವುತ್ತು.
ಹಿಮ್ಮೇಳ ಸರಿ ಇಲ್ಲದ್ದರೆ ಕೇಳಲೆಡಿತ್ತಿಲ್ಲೆ.
ಹಾಡುಗಾರ ಅನುಭವಿ ಅಲ್ಲದ್ದರೆ ಕೇಳುಗರಿಂಗೆ ಮುದ ಕೊಡ್ತಿಲ್ಲೆ.
– ಇದೆಲ್ಲ ಒಂದು ಸಂಗೀತ ಕಛೇರಿಯ ಸ್ವಾಭಾವಿಕ ಅನಿಸಿಕೆಗೊ. ಸಂಸಾರಕ್ಕೂ ಇದೆಲ್ಲ ಚೇರ್ಚೆ ಆವುತ್ತು. ಅಲ್ಲದೋ?
~
ಅಪ್ಪನ್ನೇ!
ಸಂಗೀತ ಕಛೇರಿಲಿ ಒಂದು ಸಂಸಾರವನ್ನೇ ಕಾಂಬಲೆಡಿತ್ತು. ಅಲ್ಲಿಪ್ಪ ಎಲ್ಲವೂ ಇಲ್ಲಿದ್ದು, ಇಲ್ಲಿಪ್ಪ ಎಲ್ಲವೂ ಅಲ್ಲಿದ್ದು.
ಇಲ್ಯಾಣ ಮೂರ್ತರೂಪ, ಪ್ರತಿರೂಪವನ್ನೇ ಅಲ್ಲಿ ಕಾಂಬಲೆಡಿತ್ತು – ಅಪ್ಪನ್ನೇ’ದು ಅನುಸಿತ್ತು ಒಪ್ಪಣ್ಣಂಗೆ.
ಟೀವಿಲಿ ಬಂದುಗೊಂಡಿದ್ದ ಕಛೇರಿ ರೈಸಿತ್ತು. ನಮ್ಮ ಬೈಲಿಲಿಪ್ಪ ಸಂಸಾರಂಗಳಲ್ಲೂ ಕಛೇರಿ ರೈಸಲಿ.
ಮುಮ್ಮೇಳ, ಹಿಮ್ಮೇಳ, ತಾಳ, ಶ್ರುತಿ – ಎಲ್ಲವೂ ಸೇರಿ ಬರಲಿ.
ನೂರ್ಕಾಲ ಆ ಸಂಸ್ಕಾರ ಮುಂದುವರಿಯಲಿ – ಹೇಳ್ತದು ಒಪ್ಪಣ್ಣನ ಆಶಯ.

ಒಂದೊಪ್ಪ: ಕಛೇರಿಗೊ ಪ್ರೌಢವಾದಷ್ಟೂ, ಕೇಳುಗರೂ ಪ್ರೌಢರಾವುತ್ತವು.

6 thoughts on “ಸಂಗೀತ ಕಛೇರಿಲಿ ಕಂಡ ಸಂಸಾರ ಕಛೇರಿ…

  1. ಸಂಸಾರದ ಸರಿಗಮಲ್ಲಿ ಒಳ್ಳೆ ಸಾರ ಇತ್ತು, ಲಾಯಕಿತ್ತು.

  2. ಒಪ್ಪಣ್ಣೋ,
    ಒಳ್ಳೆ ಶುದ್ದಿ ಈ ವಾರದ್ದು. ಇಡೀ ಬದುಕ್ಕೇ ಸಂಗೀತದ ಏರಿಳಿತದ ಹಾಂಗೆ ಇಪ್ಪದು. ಸಂಗೀತದ ಲಯವೂ ಇದ್ದು. ಸೂಕ್ಷ್ಮ ಮನಸ್ಸಿಂದ ನೀನು ಗಮನಿಸಿದ ಹಾಂಗೆ ಗಮನಿಸಿದರೆ ಮಾಂತ್ರ ಅದರ ಕಾಂಬಲೆ ಎಡಿಗಷ್ಟೆ.
    ಒಪ್ಪಣ್ಣ,
    ನೀನು ಹೇಳಿದ ಹಾಂಗೆ ಸಂಗೀತ ಕಛೇರಿಲಿ ಒಬ್ಬ ಹಾಡುಗಾರ ಹಾಡುವಾಗ ಎಲ್ಲೋರೂ ಹೇಂಗೆ ಸಾಥ್ ಕೊಡ್ತವೋ ಮನೆಲಿಯೂ ಯೆಜಮಾನಂಗೆ ಬಾಕಿ ಒಳುದೋರ ಸಾಥ್ ಸಿಕ್ಕುತ್ತು. ಲಯಬದ್ಧವಾಗಿ ಸಾಗುತ್ತು. ಒಬ್ಬನ ಶೃತಿ ತಪ್ಪಿದರೆ ಕೂಡ್ಲೆ ಕರ್ಕಶ ಆವುತ್ತು. ಒಟ್ಟಿಂಗೆ ಹಾಡುತ್ತದು ಇಪ್ಪ ಹಾಂಗೇ ತನಿಆವರ್ತಲ್ಲಿ ಒಬ್ಬೊಬ್ಬಂಗೂ ಅವಕಾಶ ಇದ್ದನ್ನೆ ಸಂಗೀತಲ್ಲಿ. ಹಾಂಗೆ ಜೀವನಲ್ಲಿಯೂ ಕೂಡಾ ಒಂದೇ ಶೃತಿಲಿ ಜೀವನ ನೆಡೆಶುತ್ತಾ ಇದ್ದರೂ ಕೆಲವು ಸಂದರ್ಭಲ್ಲಿ ಆರಾದರೂ ಒಬ್ಬ ಕೆಲವು ಕೆಲಸಂಗಳ ನಿಭಾಯಿಸೆಕ್ಕು. ಇದು ಸಂಸಾರದ ಚೌಕಟ್ಟಿಲಿ ಇದ್ದು ಆಯೆಕ್ಕು. ಅವರವರ ಸಾಮರ್ಥ್ಯವ ತೋರ್ಪಡಿಸಿದರೂ ಅದು ಕುಟುಂಬದ ಗೆಲುವಿಂಗೆ ಸೇರಿ ಆಗಿರೆಕ್ಕು. ಅಂಬಗ ಕಛೇರಿ ಗೆದ್ದ ಹಾಂಗೇ ಜೀವನ ಗೆಲ್ಲುತ್ತು.

    ಜೆಡ್ಡು ಮಾವ ಹಾಡುದರ ಕೇಳುಲೆ ಲಾಯ್ಕ ಅಪ್ಪ ಹಾಂಗೇ ಒಪ್ಪಣ್ಣ ಶುದ್ದಿ ಹೇಳುದರ ಕೇಳುಲೂ ಒಪ್ಪ ಆವುತ್ತು. ಈ ವಾರದ ಶುದ್ದಿ ರಾಗಲ್ಲಿಯೇ ಬಂದದು ಮತ್ತೂ ಪಷ್ಟಾಯಿದು.

    [ಕಛೇರಿಗೊ ಪ್ರೌಢವಾದಷ್ಟೂ, ಕೇಳುಗರೂ ಪ್ರೌಢರಾವುತ್ತವು.]
    ಒಂದೊಪ್ಪ ಲಾಯ್ಕಾಯಿದು. ಇದು ಕಛೇರಿಗೂ, ಬದುಕ್ಕಿಂಗೂ ಎರಡಕ್ಕೂ ಅನ್ವಯಿಸುತ್ತು.

  3. ಸಂಸಾರದ ಸರಿಗಮ
    ತಪ್ಪಿದರೆ ಢಮ ಢಮ !
    ಸೇರಿದರೆ ಶ್ರುತಿ ಸಮ
    ಬದುಕು ಬಲು ಸುಗಮ !

  4. ಸಂಗೀತ- ಸಂಸ್ಕಾರ- ಸಂಸಾರ ತುಂಬಾ ಖುಷಿ ಕೊಟ್ಟತ್ತು ಒಪ್ಪಣ್ಣಾ. ಸಂಗೀತಕ್ಕೂ ಸಂಸಾರಕ್ಕೂ ಸಂಸ್ಕಾರ ಬೇಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×