Oppanna.com

ಸಾವಿರದ ಸಂತರ ರಕ್ಷಣೆಗೆ ಸಂತರದ್ದೇ ಸಮ್ಮೇಳನ..!!!

ಬರದೋರು :   ಒಪ್ಪಣ್ಣ    on   05/02/2016    2 ಒಪ್ಪಂಗೊ

ಇದು ಹೀಂಗೇ ಇರ – ಹೇದು ನಮ್ಮ ಹಿಂದಾಣೋರು ಸದಾ ಹೇಳ್ತವಡ.
ಸಂತೋಷಲ್ಲಿಯೂ, ಬೇಜಾರಲ್ಲಿಯೂ – ಮನಸ್ಸು ಮುದ ಆಗಿಪ್ಪಗಳೂ, ಅಮುದ ಆಗಿಪ್ಪಗಳೂ – ಹೇಳುವಂತಾ ಮಾತು “ಇದು ಹೀಂಗೇ ಇರ”.
ಯೇವದೂ ಶಾಶ್ವತ ಅಲ್ಲ – ಹೇಳ್ತದು ಅದರ ತಾತ್ಪರ್ಯ.
ನಮ್ಮ ಕುಶಿಗಳೂ ಶಾಶ್ವತ ಅಲ್ಲ, ಬೇಜಾರಂಗಳೂ ಶಾಶ್ವತ ಅಲ್ಲ.
~
ಇತಿಹಾಸಲ್ಲಿ ಎಷ್ಟೋ ದೇಶಂಗೊ ಕಾಣ್ತು, ಎಷ್ಟೋ ಚಕ್ರವರ್ತಿಗಳ ಕಾಣ್ತು, ಎಷ್ಟೋ ರಾಜಧಾನಿಗೊ ಕಾಣ್ತು – ಬಂದು ಬೆಳಗಿ ಬಾಳಿ ಹೋಯಿದವು.
ಆದರೆ ಇಂದು ನೋಡಿರೆ – ಅವು ಕಟ್ಟಿದ ರಾಜ್ಯಂಗಳೂ ಒಳುದ್ದಿಲ್ಲೆ, ಅವು ಬೆಳದು ಬಾಳಿದ ಧರ್ಮಂಗಳೂ ಒಳುದ್ದಿಲ್ಲೆ.
ಗ್ರೀಕು, ರೋಮು, ಈಜಿಪ್ಟು, ಮೆಸಪಟೋಮಿಯಾ ಇತ್ಯಾದಿ ಮಹಾನ್ ಸಾಮ್ರಾಜ್ಯಂಗಳೇ ಇದಕ್ಕೆ ಸಾಕ್ಷಿ.
ಈ ಸಾಮ್ರಾಜ್ಯಂಗೊ ನಾಶ ಅಪ್ಪಲೆ ಅಲ್ಯಾಣ ರಾಜಕೀಯ ಪರಿಸ್ಥಿತಿ ಕಾರಣ ಹೇಳ್ತದು ಒಂದು ಅಂಶ ಅಷ್ಟೇ.
~

ಹಾಂಗೆ ನೋಡಿರೆ – ವೇದಕಾಲದ ಹಿಂದೂ ಸಂಸ್ಕಾರ ಸಂಸ್ಕೃತಿಗೊ ಭಾರತಲ್ಲಿ ಒಳುದ್ದು. ಅದು ಹೇಂಗೆ?
ಒಳುದ ಸಾಮ್ರಾಜ್ಯಂಗೊ ನಾಮಾವಶೇಷ ಆದರೂ, ಧರ್ಮವೇ ಬದಲಾಗಿ ಹೋದರೂ, ನಶಿಸಿ ಹೋದರೂ – ನಮ್ಮ ದೇಶಲ್ಲಿ ಇಂದುದೇ ಅದೇ ಗಂಗಾನದಿ ಇದ್ದು, ಅದೇ ನಮುನೆ ಗುರುಕುಲಂಗೊ ಇದ್ದು, ಅದೇ ನಮುನೆ ಪೂಜೆ ಪುನಸ್ಕಾರಂಗಳೂ ದೇವಸ್ಥಾನಂಗಳೂ ಇದ್ದು.
ಒಳುದ ದೇಶಂಗೊಕ್ಕೆ ಬಂದ ಹಾಂಗಿಪ್ಪ ರಾಜಕೀಯ ಸ್ಥಿತ್ಯಂತರ, ಧಾರ್ಮಿಕ ಸ್ಥಿತ್ಯಂತರಂಗೊ ನಮ್ಮ ದೇಶಲ್ಲಿಯೂ ಬಯಿಂದು.

ಚಕ್ರವರ್ತಿಯೊಬ್ಬ ಧರ್ಮ ಬದಲುಸಿದ ಕೂಡ್ಳೇ ಆ ಇಡೀ ರಾಜ್ಯ ಧರ್ಮಾಂತರ ಆದ ಉದಾಹರಣೆಗೊ ಬೇರೆ ದೇಶಂಗಳಲ್ಲಿ ಕಾಣ್ತು.
ಆದರೆ, ನಮ್ಮ ದೇಶಲ್ಲಿಯೂ – ಚಕ್ರವರ್ತಿಗೊ ಧರ್ಮ ಬದಲುಸಿದ್ದವು; ಆದರೆ ಜೆನಂಗೊ ಎಂತದೂ ಬದಲಾಯಿದವಿಲ್ಲೆ.

ಒಳುದ ದೇಶದ ಹಾಂಗೇ – ಆಘಾತಂಗೊ ಇಲ್ಲಿಯೂ ಆಯಿದು.
ಇರುಳು ಉದಿ ಆಯೆಕ್ಕಾರೆ ಎಷ್ಟೋ ದೇವಸ್ಥಾನಂಗಳ ಧ್ವಂಸ ಮಾಡಿ ಜೆನರ ಕೊಂದು ಧರ್ಮ ಬದಲುಸಿದ ಉದಾಹರಣೆ ಬೇರೆ ದಿಕ್ಕೆ ಕಾಣ್ತು.
ಆದರೆ ನಮ್ಮಲ್ಲಿ- ಅದೇ ನಮುನೆ ಆಕ್ರಮಣಂಗೊ, ದೇವಸ್ಥಾನಂಗಳ ನಾಶ – ಇತ್ಯಾದಿ ನೆಡದರೂ, ಜೆನಂಗೊ ಮಾಂತ್ರ ಬದಲಾಯಿದವಿಲ್ಲೆ.
ಇದಕ್ಕೆಲ್ಲ ಕಾರಣ ಎಂತರ?
“ಸಂತರು”
~
ರಾಜಂಗೆ ರಾಜಕೀಯ ಅರಡಿಗಷ್ಟೆ. ಆದರೆ ಧರ್ಮ ಅರಡಿಯೆಕ್ಕಾರೆ ಸಂತರೇ ಆಯೆಕ್ಕು.
ರಾಜಕೀಯ ತಾತ್ಕಾಲಿಕ; ಧರ್ಮ ಶಾಶ್ವತ.
ರಾಜಕೀಯಲ್ಲಿ ತಾನು ಮುಖ್ಯ; ಧರ್ಮಲ್ಲಿ ಸರ್ವ ಹಿತ.
ರಾಜಕೀಯಲ್ಲಿ ಇನ್ನೊಬ್ಬರ ವಿರೋಧ; ಧರ್ಮಲ್ಲಿ ಸರ್ವರ ಏಳಿಗೆ.
ರಾಜಕೀಯಂದಾಗಿ ಸಾಮ್ರಾಜ್ಯ ಏಳುತ್ತು; ಧರ್ಮಂದಾಗಿ ನಾಗರೀಕತೆ ಏಳುತ್ತು.
ಬೇರೆ ಎಲ್ಲಿಯೂ ಇಲ್ಲದ್ದ ಒಂದು ಅಪೂರ್ವ ಶಕ್ತಿ ನಮ್ಮ ದೇಶಂಗಳಲ್ಲಿ ಇದ್ದತ್ತು – ಅದುವೇ “ಸಂತ ಶಕ್ತಿ”.
~
ರಾಜ ರಾಜ್ಯದ ರಾಜಕೀಯಲ್ಲಿ ನಿರತರಾಗಿದ್ದ ಸಮಯಲ್ಲಿ, ಸಂತರು ರಾಜ್ಯದ ಧರ್ಮಕರ್ಮಂಗಳ ಬಗ್ಗೆ ಜನರಲ್ಲಿ ತಿಳುಸಿಗೊಂಡು ಇತ್ತಿದ್ದವು.
ರಾಜ ನಾಶ ಆದಿಕ್ಕು, ಆದರೆ ಈ ಸಂತಂಗೊ ನಾಶ ಆಯಿದವಿಲ್ಲೆ.
ಏಕೇದರೆ – ಸಂತ ಹೇದರೆ ಅದು ಒಬ್ಬ ವೆಗ್ತಿ ಅಲ್ಲ, ಅದೊಂದು ಶೆಗ್ತಿ.

ಸಂತರು ಮಠಲ್ಲೇ ಇರೆಕ್ಕು ಹೇಳಿ ಇಲ್ಲೆ, ಜೆನಂಗಳ ಮಧ್ಯಲ್ಲಿ ಜೆನರೊಟ್ಟಿಂಗೆ ಒಂದಾಗಿ ಸಾಧುಗಳ ವೇಶಲ್ಲಿ, ಫಕೀರಂಗಳ ರೂಪಲ್ಲಿ, ಭಜನೆಗಾರರ ರೂಪಲ್ಲಿ, ಹರಿಕತೆ ದಾಸಂಗಳ ರೀತಿಲಿ ಇಕ್ಕು.
ರಾಮಾಯಣ ಮಹಾಭಾರತದ ಕತೆಗಳ ಹೇಳಿಗೊಂಡು, ಜೆನರಲ್ಲಿ ಧರ್ಮಾ ಮಾರ್ಗವ ರೂಪುಸಿಗೊಂಡು ಇದ್ದಿದ್ದ ಎಷ್ಟೋ ಸಾವಿರಾರು ಜೆನಂಗೊ ನಮ್ಮ ಧರ್ಮವ ಒಳಿಶಲೆ ಕೈ ಜೋಡುಸಿದ್ದವು.

ರಾಜ್ಯಾಡಳಿತಲ್ಲಿ ಆಕ್ರಮಣ ಅಪ್ಪದು ಅಧಿಕಾರ ಕೇಂದ್ರ ಆದ ರಾಜಧಾನಿಗೂ, ಶ್ರದ್ಧಾಕೇಂದ್ರ ಆದ ದೇವಸ್ಥಾನಕ್ಕೂ.
ಆದರೆ, ನಿಜವಾದ ರಾಯಭಾರಿಗೊ, ರೂವಾರಿಗೊ ಇದ್ದದು ಜೆನರ ಎಡೆಲಿ ಆದ ಕಾರಣ – ಯೇವ ಆಕ್ರಮಣಕಾರರಿಂಗೂ ಅವರ ನಾಶ ಮಾಡ್ಳೆ ಎಡಿಗಾಯಿದಿಲ್ಲೆ.
~

ಗಂಗಾನದೀ ತೀರಲ್ಲಿ ಮೊಘಲರು ಹ್ಯೇಯ ದಬ್ಬಾಳಿಕೆ, ಮಾರಣ ಹೋಮ ಮಾಡಿ ಧರ್ಮಾಂತರ ಮಾಡಿಗೊಂಡಿದ್ದಿದ್ದರೂ – ನಾಗಾ ಸಾಧುಗಳ ನಾಶ ಮಾಡ್ಳೆ ಎಡಿಗಾಯಿದಿಲ್ಲೆ. ಆ ಮೂಲಕ ನಮ್ಮ ಧಾರ್ಮಿಕ ರಾಯಭಾರಿಗೊ ಶಾಶ್ವತ ಇತ್ತಿದ್ದವು.
ಇದುವೇ ಆ ಪ್ರದೇಶಂಗಳಲ್ಲಿ ಧರ್ಮ ಇಂದಿಂಗೂ ನೆಲೆ ಆಗಿಪ್ಪಲೆ ಕಾರಣ ಆಗಿಕ್ಕು.

ದೇವಸ್ಥಾನ ಒಡದರೆ ಒಡೆಯಲಿ, ನಾವು ಜೀವ ಮೊದಾಲು ರಕ್ಷಿಸಿಗೊಳೆಕ್ಕು. ಮತ್ತೆ ಆಕ್ರಮಣ ಮಾಡಿರೆ ಪುನಾ ದೇವಸ್ಥಾನ ಕಟ್ಟಿಗೊಂಬಲಕ್ಕು – ಹೇಳ್ತದು ಎಷ್ಟೋ ಜೆನ ಸಂತಸೇನಾನಿಗೊ ಹೇಳಿ, ಜೆನಂಗಳ ಹುರಿದುಂಬಿಸಿ ಸಮಾಜವ ಒಳಿಶಿದ್ದವು.
~
ಇಂದಿಂಗೂ ಈ ಕೆಲಸಂಗೊ ನೆಡೆತ್ತಾ ಇದ್ದು ನಮ್ಮ ದೇಶಲ್ಲಿ. ಹಾಂಗಾಗಿ ಅಂದ್ರಾಣ ಧರ್ಮ ಹಾಂಗೇ ಒಳುದು ನಿಂದಿದು.
ರಾಜಕೀಯ ಹೇಂಗೇ ಇದ್ದರೂ, ವರ್ತಮಾನ ಹೇಂಗೇ ಇದ್ದರೂ – ಸಂತ ಸಮಾಜ ನಿತ್ಯವೂ ಧಾರ್ಮಿಕವಾಗಿ ಮಾರ್ಗದರ್ಶನ ಮಾಡಿಗೊಂಡು ಇದ್ದವು.
ಹಾಂಗಾಗಿ ನಮ್ಮ ದೇಶಲ್ಲಿ ಭಾರತೀಯತೆ ಒಳಿವಲೆ ಕಾರಣ ಆತು.
~

ಆದರೆ, ಈಚಿನ ದಿನಂಗಳಲ್ಲಿ ಎಂತ ಆವುತ್ತಾ ಇದ್ದು?
ಸಂತರ ಮೇಲೆ ಆಕ್ರಮಣ.
ಕಂಚಿ ಸ್ವಾಮಿಗಳ ಮೇಲೆ ಕೊಲೆಯ ಆರೋಪ; ಇರುಳು ಉದಿಯಾಯೆಕ್ಕಾರೆ ಜೈಲಿಂಗೆ ಹಾಕಿ, ಸಾಮಾನ್ಯ ಕೈದಿಯ ಹಾಂಗೆ ನೋಡಿಗೊಂಡು, ಅನಾಚಾರ ಮಾಡಿದವು.
ಎಲ್ಲಾ ಮಾಧ್ಯಮಲ್ಲಿಯೂ ಅದೇ ವಿಶಯ.
ಕೊನೆಗೂ ಸತ್ಯ ಹೆರ ಬಂತು; ಶ್ರೀಗಳದ್ದು ಎಂತದೂ ಪಾತ್ರ ಇಲ್ಲೆ – ಹೇದು ಸಾಬೀತಾತು.
ಮಾಧ್ಯಮ ಈ ಬಗ್ಗೆ ಒಂದಕ್ಷರವೂ ಹೇಳಿದ್ದಿಲ್ಲೆ.

ಬಾಬಾ ರಾಮದೇವರ ಮಹಾನ್ ಆಶ್ರಮ – ಅದರ್ಲಿ ನೆಡೆತ್ತ ಭಾರತೀಯ ಉದ್ಯಮ. ಆ ಉದ್ಯಮಲ್ಲಿ ತಯಾರಪ್ಪ ವಸ್ತುಗಳಲ್ಲಿ ಅದಿದ್ದು – ಇದಿದ್ದು ಹೇದು ಅದರ ಮುಚ್ಚುಲೆ ಹೆರಟವು. ಕೊನೆಗೂ ಜೆನರ ವಿಶ್ವಾಸವೇ ಗೆದ್ದತ್ತು. ಎಂತದೂ ಸಾಧಿಸುಲೆ ಎಡಿಗಾಯಿದಿಲ್ಲೆ.

ಈಗ ಈ ಸಮಸ್ಯೆ ನಮ್ಮ ಕಾಲಬುಡಕ್ಕೆ ಬಯಿಂದು.
ನಮ್ಮ ಗುರುಗೊಕ್ಕೆ ಆಪಾದನೆಯ ಸಂಕಟ ಬಂತು. ಇದರ ವಿರುದ್ಧ ಹೋರಾಡೆಕ್ಕಾದ ನಾವು ಮಾಧ್ಯಮ ವರದಿಗಳ ಕಂಡು ಬುದ್ಧಿಜೀವಿಗಳ ಹಾಂಗೆ ಮಾತಾಡಿಗೊಂಡು ಇದ್ದು.
ಇದಕ್ಕೆಲ್ಲ ಕಾರಣ ದೊಡ್ಡ ಮಟ್ಟಿಂದು – ಇದರ ಹಿಂದೆ ಇಪ್ಪ ವ್ಯವಸ್ಥಿತ ಷಡ್ಯಂತ್ರ – ಹೇದು ಗೊಂತಪ್ಪಗ, ನಾವು ಎಲ್ಲಿಗೆತ್ತಿರ್ತು?
ಇದರೆಲ್ಲದರ ವಿರುದ್ಧ ಹೋರಾಡೆಕ್ಕಾರೆ ಸಂತರು ಒಗ್ಗಟ್ಟಾಯೆಕ್ಕು.
~

ಸಂತರು ಒಗ್ಗಟ್ಟಪ್ಪ ಕಾಲ ಬಂತು.
ಬೆಂಗ್ಳೂರಿಲಿ ಒಂದಿಕ್ಕೆ ಒಂದು ಸಾವಿರ ಸಂತರು ಸೇರುವ ಮಹಾನ್ ಕಾರ್ಯಕ್ರಮ ಆಯೋಜನೆ ಆಯಿದು.
ಬೇರೆಬೇರೆ ಊರಿನ, ಬೇರೆಬೇರೆ ನೀರಿನ, ಬೇರೆಬೇರೆ ಸಂಸ್ಕಾರದ ಸಾವಿರಾರು ಸಂತರು ಬಂದು ಒಂದು ಸಮ್ಮೇಳನ ಸೇರ್ತವು.
ಪ್ರಸಕ್ತ ದಿನಂಗಳಲ್ಲಿ ಭಾರತೀಯ ಸಂಪ್ರದಾಯಕ್ಕೆ, ಸಮಾಜಕ್ಕೆ ಅಪ್ಪ ಬೇನೆಗಳ ಬಗ್ಗೆ ವಿಮರ್ಶಿಸಿ ಅದರ ವಿರುದ್ಧ ಒಗ್ಗಟ್ಟಾಗಿ ಹೋರಾಡ್ಳೆ ಟೊಂಕಕಟ್ಟಿ ನಿಲ್ಲುತ್ತ ಕೆಲಸ ಮಾಡ್ತವು.
ಆ ಪ್ರಕಾರಲ್ಲಿ, ಇಂದು ಬೆಂಗ್ಳೂರಿಲಿ ನೆಡವ ಸಹಸ್ರ ಸಂತ ಸಂಗಮ ಕಾರ್ಯಕ್ರಮದ ಶುದ್ದಿ ಗೊಂತಾಗಿ, ಬೈಲ ನೆಂಟ್ರುಗೊಕ್ಕೆ ಶುದ್ದಿ ಹೇಳುವೊ° ಹೇದು ಇಲ್ಲಿ ಮಾತಾಡಿದ್ದು.

ಬೈಲಿಂದ ಆರೆಲ್ಲ ಹೋವುತ್ತಿ?
ಪುರುಸೊತ್ತಾದರೆ, ಪುರುಸೊತ್ತು ಮಾಡಿಗೊಂಡು ಎಲ್ಲೋರುದೇ ಬಂದು ಸೇರುವೊ°.
ಸಂತರ ರಕ್ಷಣೆಗಾಗಿ ಸಂತರೇ ಒಗ್ಗಟ್ಟಪ್ಪದು ವಿಶೇಷವೇ. ಆ ವೈಶಿಷ್ಠ್ಯಪೂರ್ಣ ಕಾರ್ಯಕ್ರಮವ ಸವಿಯಲೆ ನಾವೆಲ್ಲೋರುದೇ ಸೇರುವೊ°.
~

ಒಂದೊಪ್ಪ: ಸಂತರ ಎದುರು ಹಾಕಿಗೊಂಡ್ರೆ ಸಂತಾನವೇ ಮುತ್ತುಗು.

2 thoughts on “ಸಾವಿರದ ಸಂತರ ರಕ್ಷಣೆಗೆ ಸಂತರದ್ದೇ ಸಮ್ಮೇಳನ..!!!

  1. ಸಂತ ಆಯೇಕ್ಕಾರೆ ಸಾಧನಾ ಶಕ್ತಿಯೂ ಇರೆಕು , ಸಂತನಲ್ಲಿ ಆ ಸಾಧನಾ ಶಕ್ತಿಯೂ ಇರ್ತು. ಒಪ್ಪ ಶುದ್ದಿ. ಹರೇ ರಾಮ.

  2. ಹರೇರಾಮ , ನಮ್ಮ ಅನೂಚಾನ ಸಂಸ್ಕೃತಿ-ಸಂಸ್ಕಾರ – ಸಂಪ್ರದಾಯ ಒಳಿಷಿ -ಬೆಳೆಸುತ್ತ ಸಮಾಜ ಹಿತ ಕಾಪಾಡುತ್ತಾ ಬಪ್ಪ ಸಂತರಿಂಗೆ ಬಂದ ಕಂಟಕ ದೂರಾಗಲಿ .ಎಲ್ಲೋರೂ ನೆಮ್ಮದಿಂದ ಬದುಕುತ್ತ ಹಂಗಾಗಲಿ. ಲೋಕಾ ಸಮಸ್ತಾ ಸುಖಿನೋ ಭವಂತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×