ಸೌಕರ್ಯ ಹೆಚ್ಚಾದ ಹಾಂಗೆ ಉದಾಸಿನವೂ ಹೆಚ್ಚಾವುತ್ತೋ..!

July 6, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಷ್ಟಾವಧಾನದ ಶುದ್ದಿ ನಾವು ಮಾತಾಡಿಂಡಿದ್ದ ಹಾಂಗೇ, ಸಮದಾನಿ-ಅವಧಾನಿ ದೊಡ್ಡಜ್ಜನ ಮನೆ ಜೆಂಬ್ರ ಕಳಾತು.

ಅದೇ ದಿನ ತಲೆಂಗಳ ಜೆಂಬ್ರವೂ ಇದ್ದ ಕಾರಣ ದೊಡ್ಡಬಾವಂಗೆ ಎರಡೆರಡು ದಿಕ್ಕೆ ಊಟ ಸುದಾರ್ಸಲೆ ಇದ್ದತ್ತು. ಊಟದೊಟ್ಟಿಂಗೆ ಊಟದಕ್ಷಿಣೆಯೂ.
ಅದಿರಳಿ; ದೊಡ್ಡಜ್ಜನ ಮನೆ ಜೆಂಬ್ರಂದ ಮತ್ತಾಣ ವಾರ ಎಂತದು?
ಮದಲೇ ನಿಗಂಟು ಮಾಡಿದ ಹಾಂಗೆ ಬೈಲಕರೆ ಗಣೇಶಮಾವನ ಮನೆಲಿ ಮದುವೆ ಗೌಜಿ.

ಆರಾಮವೇ ಜೀವನ ಆದರೆ ರಾಮನೇ ಗೆತಿಯೋ!?

ಜೆಂಬ್ರ ಎಳಗುಸುದು ಹೇದರೆ ಸುಲಬವೋ?
ಸ್ವತಃ ಗಣೇಶಮಾವನಿಂದ ಹಿಡುದು, ಕೆಲಸದ ಬಾಲೆಯ ವರೆಗೆ ಎಲ್ಲೋರಿಂಗೂ ಗೌಜಿಯ ಬೆಶಿ ಮುಟ್ಟಿದ್ದು.
ವಾಹನ ವೆವಸ್ತೆ, ಅಡಿಗೆ ವೆವಸ್ತೆ, ಹೇಳಿಕೆ ವೆವಸ್ತೆ, ಕಾರ್ಯಕ್ರಮದ ಸಮಸ್ತ ವೆವಸ್ತೆ, ಹೋ..ಹು!
ನಾಕು ದಿನಂದ ಗಣೇಶಮಾವ ಹಾಸಿಗೆ ಹೊಡೆಂಗೇ ತಲೆ ಹಾಕಿ ಮನುಗಿದ್ದವಿಲ್ಲೆ, ಅಷ್ಟೂ ಕೆಲಸಂಗೊ.
ಮದುವೆ ದಿನ ಹತ್ತರತ್ತರೆ ಬಂದ ಹಾಂಗೆ ತಲೆಬೆಶಿಯೂ ಏರುದೇ ವಿನಾ ಇಳಿತ್ತಿಲ್ಲೆ.
ಅವರವರ ಅಂಬೆರ್ಪು ಅವಕ್ಕವಕ್ಕೆ. ಪಾಪ!! ಅದಿರಳಿ.

~

ಮದುವೆ ಮುನ್ನಾಣದಿನ ನೆರೆಕರೆಯೋರಿಂಗೆ ಗೊಂತಾಯೇಕಾದ ಸಂಗತಿ; ದಿಬ್ಬಾಣ ಎಷ್ಟೊತ್ತಿಂಗೆ ಹೆರಡುಸ್ಸು ಹೇದು.
“ಬೈಲಕರೆ ಮದುವೆ ದಿಬ್ಬಾಣ ನಾಳೆ ಉದೆಕಾಲ ಐದು ಗಂಟೆಗೆ ಅಡ” – ಹೇದು ಆಚಮನೆ ಕುಂಞಣ್ಣ ಬಂದು ಹೇಳಿದ°.
ಶಾಂತಿಕಟ್ಟೆಯ ಹತ್ತರಂಗೆ ಐದೂಕಾಲಕ್ಕೆ ವೇನು ಬತ್ತು – ಮಾಷ್ಟ್ರುಮಾವಂಗೂ, ಪಾರೆ ಮಗುಮಾವಂಗೂ, ಆಚಕರೆ ತರವಾಡುಮನೆ ರಂಗಮಾವಂಗೂ, ನೆರೆಕರೆಲಿ ಬತ್ತೋರಿಂಗೂ – ತಿಳುಶಿಕ್ಕಲೆ ಗಣೇಶಮಾವ ಹೇಳಿದವಡ.
ಆಚಮನೆ ಕುಂಞಣ್ಣ ಅದರ ಹೇಳುಲೇ ಬಂದದು; ಒಪ್ಪಣ್ಣಂಗೂ ಆ ಶುದ್ದಿ ಗೊಂತಾತು.

ಕುಂಞಣ್ಣಂಗೆ ಮನೆಕೆಲಸ, ತೋಟ ಹಟ್ಟಿ ಕೆಲಸಂಗಳ ಎಡಕ್ಕಿಲಿ ಮನೆಬಿಟ್ಟು ಹೆರಡ್ಳೆ ಪುರ್ಸೊತ್ತೇ ಅಪ್ಪಲಿಲ್ಲೆ. ಹೀಂಗೆಂತಾರು ತುರ್ತು ಶುದ್ದಿ ಮುಟ್ಟುಸೇಕಾರೆ ಮಾಂತ್ರ ಬಕ್ಕಷ್ಟೆ. ಹಾಂಗೆ, ಅಪುರೂಪಲ್ಲಿ ಕುಂಞಣ್ಣ ಬಂದಿಪ್ಪಾಗ ಮನೆ ಒಳ ಬಾರದ್ದೆ ಇಕ್ಕೋ!

ದಿಬ್ಬಣ “ಐದು ಗಂಟಗೆ” ಹೇಳಿ ಅಪ್ಪದ್ದೇ, ಒಪ್ಪಣ್ಣಂಗೆ ಮದುವೆ ಚೆಪ್ಪರವೇ ತಲೆಮೇಗೆ ಬಿದ್ದ ಹಾಂಗಾತು.
“ಹ್ಹಾ! ಎಲ್ರಾಮು ಮಡಗಿ ನಾಕು ಗಂಟಗೇ ಏಳೇಕಷ್ಟೆ; ಅಲ್ಲದ್ದರೆ ಹೆರಟಾಗ ಇದಾ” – ಹೇಳಿಗೊಂಡೆ.
ನಿಂಗೊಗೆ ನಾಕುಗಂಟೆ ಹೇದರೆ ಉದೆಕಾಲವೇ ಆಗಿಕ್ಕು; ಆದರೆ ಒಪ್ಪಣ್ಣಂಗೆ ಅದು ಇನ್ನೂ ನೆಡು ಇರುಳೇ. ಪಾಪ!

~

“ಎಲ್ರಾಮು ಮಡುಗೆಕ್ಕಾವುತ್ತೋ? ಅಲ್ಲದ್ದರೆ ಎಚ್ಚರಿಗೆ ಆವುತ್ತಿಲ್ಲೆಯೋ ನಿನಗೆ” – ಕುಂಞಣ್ಣ ಕೇಳಿದ ಸಹಜ ಕುತೂಹಲಲ್ಲಿ.
ಅದಪ್ಪು; ನವಗೆ ಎಚ್ಚರಿಗೆ ಆಯೇಕಾರೆ ಆರಾರೊಬ್ಬ ಏಳ್ಸೇಕು. ಎಲ್ರಾಮು ಗಂಟೆಯೇ ಆಗಿಕ್ಕು; ಮೊಬೈಲೇ ಆಗಿಕ್ಕು; ಅತವಾ ಅಪ್ಪಮ್ಮನೋ- ಆರೂ ಅಕ್ಕು.
ಆರೂ ಏಳುಸದ್ದರೆ ಮದುವೆ ಮೂರ್ತ ಕಳುದು ತಾಳಿ ಕಟ್ಟಿ ಅಕ್ಕು; ಅದರಿನ್ನ ಮದಲೇ ಎಚ್ಚರಿಗೆ ಆಗ ಇದಾ.

ಆದರೆ ಆಚಮನೆ ಕುಂಞಣ್ಣಂಗೆ ಹಾಂಗಲ್ಲಡ.
ಮನುಗುವಾಗಳೇ “ನಾಳೆ ಇಷ್ಟು ಗಂಟೆಗೆ ಏಳೇಕು” ಹೇದು ಗ್ರೇಶಿಂಡು ಮನುಗಿರೆ, ಒರಕ್ಕು ಬಿರುದು ಎಚ್ಚರಿಗೆ ಅಪ್ಪಗ ಗಂಟೆ ನೋಡಿರೆ ಸರೀ ಇರ್ತಾಡ! ಯೋ..ಪ!!

ಕುಂಞಣ್ಣಂಗೆ ಇದು ಇಂದು ನಿನ್ನೇಣ ಪರಿಪಾಠ ಅಲ್ಲ; ಸಣ್ಣ ಇಪ್ಪಾಗಂದಲೇ – ವಿದ್ಯಾಭ್ಯಾಸ ಲಾಗಾಯಿತೂ ಹಾಂಗೇಡ.
ಪ್ರಾಯ ಏರಿದ ಹಾಂಗೇ ಉದಾಸಿನವೂ ಏರ್ತು; ಕುಂಞಣ್ಣಂಗೆ ಹಾಂಗಾಯಿದಿಲ್ಲೆ. ಕಲಿತ್ತದೆಲ್ಲ ಕಲ್ತಾಗಿ, ಮತ್ತೆ ಕೃಷಿಕಾರ್ಯ ಆರಂಭ ಆದ ಮತ್ತುದೇ, ಅದರ ಎಡಕ್ಕಿಲಿ ಜ್ಯೋತಿಷ್ಯಾಧ್ಯಯನ ಮಾಡುವಗಳೂ – ಯೇವಗಳೂ ಎಲ್ರಾಮು ಬೇಕಾಯಿದಿಲ್ಲೆ.
ಕುಂಞಣ್ಣ ಇದರ ಹೇಳುವಗ ಒಪ್ಪಣ್ಣಂಗೆ ಪೀಸಾದ ಮಾಲುಗೋಪುರಂದಲೂ ಹೆಚ್ಚಿನ ಅದ್ಭುತ – ಹೇದು ತಲೆ ಮಾಲಿತ್ತು!
ಅಂತೂ – ದಿಬ್ಬಾಣದ, ಮದುವೆ ಏರ್ಪಾಡಿನ ರಜ ಹೊತ್ತು ಮಾತಾಡಿಕ್ಕಿ ಕುಂಞಣ್ಣ ಹೆರಟ. ಆಸರಿಂಗೆ ಬೇಡಡ.
~
ನಿಂಗೊಗೆ ಗೊಂತಿಕ್ಕೋ ಏನೋ,
ಎಲ್ಲ ಆಧುನಿಕ ಸೌಕರ್ಯದ ಎಡಕ್ಕಿಲಿಯೂ ಆಚಮನೆ ಕುಂಞಣ್ಣ ಒಂದು ಲೆಕ್ಕಲ್ಲಿ ವಿರಾಗಿಯೇ.
ಪೇಂಟೂ ಇಲ್ಲೆ, ಸೆಂಟೂ ಇಲ್ಲೆ – ಟೀವಿಯೂ ಬೇಡ, ರಿಮೋಟೂ ಬೇಡ. ಬೈಕ್ಕು-ಕಾರು ಯೇವದೂ ಆಗ.
ಕಳುದ ತಿಂಗಳು ಅಡಕ್ಕೆ ಕೊಟ್ಟ ಮತ್ತೆ ಮನೆಯವರ, ನೆರೆಕರೆಯೋರ ಒತ್ತಾಯಕ್ಕೆ ಮೊಬೈಲು ತೆಗದ್ದೇ ವಿನಾ, ಸ್ವಂತಕ್ಕಾಗಿ ಎಂತದೂ ಹಂಬಲುಸಿದ್ದನಿಲ್ಲೆ.
ಒಳಾಣ ಅಡಿಗೆ ಒಯಿವಾಟಿಂದ ಹಿಡುದು, ಹಟ್ಟಿ – ತೋಟ ಎಲ್ಲವನ್ನುದೇ ನಿಭಾಯಿಸೆಂಡು ಹೋಪ ಶ್ರಮಜೀವಿ. ಪ್ರಾಯ ಏರ್ತಾ ಇದ್ದು; ಮದುವೆ ಆಯೇಕಾತು ಹೇಳ್ತದು ಹೆತ್ತೋರ ಒಂದೇ ಬೇಜಾರು.
~

ಆ ಕಾಲಲ್ಲಿ ಹೆಚ್ಚಿನವಕ್ಕೆ ಇದ್ದ ಹಾಂಗೆ, ಕಲಿವಿಕೆ ಸಮೆಯಲ್ಲಿ ತುಂಬ ಕಷ್ಟದ ದಿನಂಗೊ ಅಡ ಕುಂಞಣ್ಣಂಗೆ.
ಹಾಂಗಾಗಿ, ರೂಪತ್ತೆ ಮಗಂಗೆ ಈಗ ಸಿಕ್ಕಿದ ಹಾಂಗೆ ಅನುಕ್ಕೂಲಂಗೊ ಇದ್ದತ್ತಿಲ್ಲೆ!
ಕಲಿವಕಾಲಲ್ಲಿ ಉದಿಯಪ್ಪಗ ಎದ್ದು ಮನೆಕೆಲಸಂಗೊ ಮಾಡಿಕ್ಕಿ, ಉಂಡಿಕ್ಕಿಯೇ ಶಾಲಗೆ ಹೋಗಿಂಡಿದ್ದದು;
ಶಾಲೆಲಿ ಮಧ್ಯಾನಕ್ಕೆ ತಣ್ಣೀರು ಮಾಂತ್ರ; ಹೊತ್ತೋಪಗ ಮನಗೆ ಬಂದ ಮತ್ತೆ ಎಂತಾರು ಆಹಾರ.
ಮತ್ತೆ ಮನೆಕೆಲಸಂಗೊ; ಇರುಳಾಣ ಮೀಯಾಣ ಆಗಿ ಊಟ. ಚಿಮ್ಣಿದೀಪಲ್ಲಿ ಓದಿ ಬರದು ಮಾಡಿ ಒರಗುದು, ಮರದಿನ ಎದ್ದು ಪುನಾ ಶಾಲೆ.

ಇಷ್ಟೆಲ್ಲ ಹೇಳುದು ಕೇಳುವಗ ಸುಲಾಭ ಆವುತ್ತು. ಆದರೆ, ಅಂಬಗಾಣ ಸೌಕರ್ಯಂಗೊ?
ಈಗಂಗೆ ಹೋಲುಸಿರೆ ಎಂತದೂ ಇದ್ದತ್ತಿಲ್ಲೆ ಇದಾ! ಉದಿಯಪ್ಪಗ ಎದ್ದು ಕೆಲಸ ಕಾರ್ಯಂಗೊ ಮಾಡೇಕು.
ದನಗೊಕ್ಕೆ ಅಕ್ಕಚ್ಚು ಕೊಡ್ಸು, ಹಾಲು ಕರವದು ಇತ್ಯಾದಿಗೊ. ಯೇವದಕ್ಕೂ ಮಿಶನು ಇಲ್ಲೆ ಇದಾ; ಎಲ್ಲವುದೇ ದುಡಿಮೆಲೇ ಆಯೇಕು.
ಅಕ್ಕಚ್ಚು ಕೊಡೆಕ್ಕಾರೆ ನೀರು ಬೇಡದೋ – ಗುಂಡಿಬಾವಿಂದ ನೀರೆಳದು- ಹೊರೆಕ್ಕಷ್ಟೆ.
ಅಕ್ಕಚ್ಚು ಕೊಡ್ಳೆ ಎಷ್ಟು ನೀರು ಬೇಕಾವುತ್ತು? ಹೇಳುಲೆಡಿಯ; ಹಂಡೆ ತುಂಬುಸಿದ ಹಾಂಗಲ್ಲ, ಹೊಟ್ಟೆ ತುಂಬುಸುದು.

ಅದಾಗಿ ಮತ್ತೆ ಹಾಲು ಕರೆತ್ತದು. ಡೈರಿಗೆ ಹಾಕುತ್ತಷ್ಟು ಹಾಲು ಸಿಕ್ಕ, ಅದೆಲ್ಲ ಈಗಾಣ ಜರ್ಸಿ ದನಗೊಕ್ಕೆ.
ನಾಕು ಊರದನಗಳ ಕರದರೆ ಮನೆಕರ್ಚಿಂಗೆ ತಕ್ಕ ಸಿಕ್ಕುಗಷ್ಟೆ.

ಒಂದರಿಯಾಣ ಬಂಙದ ಕೆಲಸ ಆಗಿ ಮೀಯೇಕು.
ಮೀವಲುದೇ ಹಾಂಗೆ, ಈಗಾಣ ಹಾಂಗೆ ಗೇಸು ಗೀಸರು, ಕರೆಂಟಿನ ಸುಚ್ಚು ಇಲ್ಲೆ; ಸೌದಿ ಒಲಗೆ ಕಿಚ್ಚಾಕುದು.
ಮಳೆಗಾಲ ಚೆಂಡಿಕಾಯಿಸೊಪ್ಪೋ ಎಂತಾರು ಆದರೆ ಕಿಚ್ಚು ಹಿಡಿಶಲೆ ಪ್ರಾಣಕ್ಕೆ ಬತ್ತು.
ಅಂತೂ ಕಿಚ್ಚು ಹಿಡುದು ನಿಧಾನಕ್ಕೆ ಮೀತೆ ಹೇದರೆ ಶಾಲಗೆ ತಡವಾವುತ್ತು, ತಣ್ಣೀರಿಲೇ ಮೀಯಾಣ.

ಮಿಂದಿಕ್ಕಿ ಶುದ್ಧಲ್ಲಿ ಒಂದು ಕೊಡಪ್ಪಾನ ನೀರು ತರೆಕ್ಕು; ಪೂಜಗಿಪ್ಪದು.
ಅದಾಗಿ ಜೆಪ.
ಅಡಿಗೆಗುದೇ ಕೆಲವು ಸರ್ತಿ ನೀರು ತರೆಕ್ಕಾವುತ್ತು; ಒಳಾಣ ವೆವಸ್ತೆ ನಿಧಾನಲ್ಲಿದ್ದರೆ.
ಈಗಾಣ ಹಾಂಗೆ ಟೇಪುದೇ ಇಲ್ಲೆ, ಪಂಪುದೇ ಇಲ್ಲೆ.

ಇಷ್ಟೆಲ್ಲ ಆಗಿ, ಉದಿಯಪ್ಪಗಾಣ ಊಟ ಉಂಡಿಕ್ಕಿ ಶಾಲಗೆ ಹೋಪದೇ.
ಹೇಂಗೆ? ಈಗಾಣ ಹಾಂಗೆ ಬೈಕ್ಕಿಲಿ ಕೂದು ರೊಯ್ಯನೆ ಪೀಂಟುಲೆ ಅವಕಾಶ ಇದ್ದತ್ತಿಲ್ಲೆ.
ಹತ್ತಾರು ಮೈಲು ನೆಡಕ್ಕೊಂಡೇ ಹೋಪದು.

ಶಾಲೆಲಿ ಮಧ್ಯಾನ್ನ ಉಪವಾಸ. ಒಂದೊಂದು ದಿನ ಇದ್ದರೆ ಬುತ್ತಿ ಊಟ / ಪಲಾರ.
ಈಗಾಣ ಹಾಂಗೆ ಹೋಟ್ಳೂ ಇಲ್ಲೆ, ಎಡೆ ಹೊತ್ತಿಂಗೆ ಮುರ್ಕು ಕರುಕುರು ತಿಂಡಿಯೂ ಇಲ್ಲೆ.

ಹೊತ್ತಪ್ಪಗ ಶಾಲೆ ಬಿಟ್ಟು ಪುನಾ ನೆಡಕ್ಕೊಂಡೇ ಮನಗೆ ಬಪ್ಪದು. ಬಂದಿಕ್ಕಿ ಕೈಕ್ಕಾಲು ತೊಳದ ಮತ್ತೆಯೇ ಹೊಟ್ಟಗೇನಾರು ಸಿಕ್ಕುಗಷ್ಟೆ ಇದಾ.
ಮನೆಗೆ ಎತ್ತಿದ ಮತ್ತುದೇ ದೊಡ್ಡ ಪುರ್ಸೊತ್ತು ಹೇದು ಏನಿಲ್ಲೆ, ಈಗಾಣ ಹಾಂಗೆ ಮೋರೆಪುಟ, ಓರುಕುಟ್ಟುಸ್ಸು – ಎಂತದೂ ಇಲ್ಲೆ.
ನೀರೆಳವದು, ತೋಟಕ್ಕೆ ಹೋಪದು, ಇತ್ಯಾದಿ ಕೆಲಸಂಗೊ ಇದ್ದತ್ತು.
ಮೀಯಾಣ ಆಗಿ ಇರುಳಾಣ ಉಂಡಿಕ್ಕಿಯೇ ರಜ ಕಾಲುನೀಡ್ಳೆ ಪುರ್ಸೊತ್ತು.
ಓದಿ ಬರದು ಮಾಡಿಕ್ಕಿ ಒರಗುವಗ ಸರೀ ಆವುತ್ತು ಇದಾ.

~

ಅಂಬಗಾಣ ಜೀವನಕ್ಕೆ ಹೊಂದಿಗೊಂಡ ಕುಂಞಣ್ಣಂಗೆ ಈಗ ಹತ್ತಿಪ್ಪತ್ತು ಒರಿಶಲ್ಲಿ ಆದ ಬದಲಾವಣೆಗೊಕ್ಕೆ ಹೊಂದಿಗೊಂಬಲೆ ಪುರ್ಸೊತ್ತೇ ಸಿಕ್ಕಿದ್ದಿಲ್ಲೆ; ಈ ತೋಟದ ಕೆಲಸಂಗಳಲ್ಲಿ.
ಈಗಳೂ ಹಾಂಗೆ, ಎಡೆಹೊತ್ತಿಲಿ ಕಾಟಂಕೋಟಿ ತಿಂಬ ಕ್ರಮ ಇಲ್ಲೆ; ಹೆಜ್ಜೆ ಊಟವೇ ಹೆಚ್ಚು ಕೊಶಿ.
ಕರೆಂಟು ಲೈಟು ಸದ್ಯ ಅಭ್ಯಾಸ ಅಪ್ಪನ್ನಾರವೂ ಕೈಲಿ ಚಿಮುಣಿ ದೀಪ ಹಿಡ್ಕೊಂಡೇ ಓಡಾಟ.
~

ಕುಂಞಣ್ಣ ಸಣ್ಣ ಇಪ್ಪಾಗ ಎಲ್ರಾಮು ಮಡಗಲೆ ಎಂತದೂ ಇದ್ದತ್ತಿಲ್ಲೆ. ಅವಂಗೆ ಕೋಲೇಜು ಎತ್ತುವನ್ನಾರವೂ ಹಾಂಗೇ.
ಮತ್ತೆ ಆಚಮನೆ ದೊಡ್ಡಣ್ಣ ಒಂದು ಸಣ್ಣ ಮೇಜುಗಡಿಯಾರ “ಟೈಂಪೀಸು” ತಂದು ಕೊಟ್ಟನಡ. ಅಷ್ಟಪ್ಪಗ ಅದಾಗಲೇ ಕುಂಞಣ್ಣನ ಮನಸ್ಸು ಸ್ವಾಭಾವಿಕತೆಗೆ ಒಗ್ಗಿ ಹೋದ ಕಾರಣ ಆ ಗಡಿಯಾರ ದೊಡ್ಡ ಉಪಕಾರ ಆಯಿದಿಲ್ಲೇಡ.
ಆಗ ಕುಂಞಣ್ಣ ಎಲ್ರಾಮಿನ ಶುದ್ದಿ ಹೇಳುವಗ ಪುನಾ ನೆಂಪಾತು.

~
ನಮ್ಮ ದೇಹಕ್ಕಿಪ್ಪ ಜೈವಿಕ ಗಡಿಯಾರವ ಸಂಪೂರ್ಣವಾಗಿ ನಾವು ಹಾಳು ಮಾಡಿಗೊಂಡಿದು.
ನೆಡು ಇರುಳು ಒರೆಂಗೆ ಟೀವಿನೋಡಿ ಮನುಗಿದ್ದರ್ಲಿ, ಐದು ಗಂಟೆ ಆದರೂ ಗೊಂತಾಗ, ಹತ್ತು ಗಂಟೆ ಆದ್ದದೂ ಗೊಂತಾಗ.
ಮತ್ತೆ ಏಳುಲೆ ಕೃತಕ ಗಡಿಯಾರವೇ ಬೇಕು, ಅಲ್ದೋ?
ಹಾಂಗೆ ನೋಡಿರೆ, ಈಗಾಣ ಆಧುನಿಕ ಸಲಕರಣೆಗೊ ಬಂದ ಮತ್ತೆ ನಾವು ಎಷ್ಟು ಸೋಮಾರಿ ಆಯಿದು; ಅಲ್ದೋ?

ಕರೆಂಟು ಲೈಟು ಬಂದ ಮೇಗೆ ಇರುಳು ಮನುಷ್ಯರಿಂಗೆ ಕಾಂಬ ಶೆಗ್ತಿಯೂ ಕಮ್ಮಿ ಆಯಿದು – ಹೇಳ್ತದು ಆಚಮನೆ ದೊಡ್ಡಪ್ಪನ ಅಭಿಪ್ರಾಯ. ಮದಲಿಂಗೆ ಒಂದು ಸೂಟೆ ಇದ್ದರೆ ಯೇವ ಕಾರ್ಗಾಣ ಕಸ್ತಲೆಯ ಕಾಡು ದಾರಿ ಆದರೂ ನೆಡಕ್ಕೊಂಡು ಹೋಪಲೆ ಎಡಿಗಾಗಿಂಡಿದ್ದತ್ತು. ಈಗ ರೂಪತ್ತೆಗೆ ಕಾರಿಲಿ ಹಾಲೋಜೆನು ಬಲ್ಬು ಮಡಗಿರೂ ಸಾಲದ್ದೆ ಡಿಮ್ಮು ಇಪ್ಪದರ ಡಿಪ್ಪು ಮಾಡೇಕಾವುತ್ತಡ ಕೆಲವು ದಿಕ್ಕೆ!

ರೂಪತ್ತೆ ಮನೆಲಿ ಮಿಕ್ಸಿ ಇದ್ದು, ಎಲಿ ಉಪದ್ರದ ಸಮೆಯಲ್ಲೇ ಎಲ್ಲೋರಿಂಗೂ ಗೊಂತಾಯಿದು. ಅಲ್ದೋ?
ಆ ಸಾಮಾನು ಎಂತೆಲ್ಲ ಕೆಲಸ ಮಾಡ್ತು? ಅದರ್ಲಿ ಹೊಡಿ ಮಾಡ್ಲೆ ಎಡಿತ್ತು, ಕಡವಲೆ ಎಡಿತ್ತು, ಮೊಸರು ಕಡವಲೆಡಿತ್ತು, ಕಷಾಯದ ಹೊಡಿ ಮಾಡ್ಳೆಡಿತ್ತು, ಜ್ಯೂಸು ಮಾಡ್ಳೆಡಿತ್ತು – ಒಂದರಿ ಕರೆಂಟಿನ ಪ್ಲಗ್ಗು ಸಿಕ್ಕುಸಿ ಸುಚ್ಚು ಒತ್ತಿರೆ ಎಲ್ಲಾ ಕೆಲಸವನ್ನೂ ಮಾಡ್ತು ಅದು.
ಆದರೆ, ಮದಲಿಂಗೆ? ಕಡವಕಲ್ಲು, ಒನಕ್ಕೆ, ಬೀಸುವ ಕಲ್ಲು, ಕೊದಂಟಿ – ಎಲ್ಲವುದೇ ಇದ್ದತ್ತು. ಅದರ್ಲಿ ಕೆಲಸ ಮಾಡುವಗ ಮನುಷ್ಯರ ವ್ಯಾಯಾಮ ಆಗಿ ಆರೋಗ್ಯವೂ ಚೆಂದಲ್ಲಿ ಇದ್ದತ್ತು.

ಮತ್ತೊಂದು ಗೇಸಿನ ಒಲೆ.
ಒಂದು ಕಿಟಿಕ್ಕನೆ ಮಾಡಿದ್ದರ್ಲಿ ಕಿಚ್ಚು ಆತು. ಒಲೆ ಮೇಗೆ ಕುಕ್ಕರು ಮಡಗಿರೆ ಯೇವ ಬೇಯದ್ದ ಅಕ್ಕಿಯುದೇ ಅರ್ದ ಗಂಟೆಲಿ ಬೆಂದು ನೀರಾವುತ್ತು. ಮದಲಿಂಗೆ ಪಾಪ – ಒಲೆಲಿ ನೀರು ಮಡಗಿ, ಅದರ ಕೊದಿಶಿ, ಮತ್ತೆ ಅಕ್ಕಿ ಹಾಕಿ, ಅದು ಬೇವನ್ನಾರ ಕಿಚ್ಚು ನೋಡಿಂಡು, ನೀರು ಕಮ್ಮಿ ಆದರೆ ಎರಕ್ಕೊಂಡು.
ಸೌದಿ ಒಲಗೆ ಸೌದಿಯೂ ತೆಯಾರಾಯೇಕು; ಹೆಜ್ಜೆಗೆ ಎಸರು ಮಡಗಲೆ ನೀರುದೇ ಆಯೇಕು.
ಎಷ್ಟು ಬಂಙ! ಅಪ್ಪೋ!?

~
ಮೊದಲೆಲ್ಲ ವಾಹನಂಗೊ ಕಮ್ಮಿ. ಹೋಪಲಿದ್ದರೆ ಹೆಚ್ಚಿನ ದೂರವೂ ನೆಡಕ್ಕೊಂಡೇ ಹೋವುತ್ತದು. ಅಪುರೂಪಕ್ಕೆ, ದೂರಕ್ಕೆ ಹೋವುತ್ತರೆ ಮಾಂತ್ರ ಮೋಟ್ರು (ಬಸ್ಸು) ಇದ್ದತ್ತು ಅಷ್ಟೆ. ಈಗ ಊರೊಳದಿಕ್ಕೆ, ಬಿಡಿ ಬೈಲಿನ ಒಳದಿಕ್ಕೆಯೇ ಹೋವುತ್ತರೂ – ಬೈಕ್ಕು ಬೇಕು ಅಪ್ಪೊ!
ಮದಲಿಂಗೆ ಸಿಕ್ಕಿಂಡಿದ್ದ ವ್ಯಾಯಾಮಂಗೊ ಈಗ ಕಮ್ಮಿ ಕಮ್ಮಿಯೇ ಆಯಿದು.

~

ಈಗಾಣ ಕಾಲದ ಮತ್ತೊಂದು ಸವುಕರ್ಯ ಮೊಬೈಲು. ಎಲ್ಲದಕ್ಕೂ ಅದುವೇ.
ಪೋನು ಮಾಡ್ಳೆ ಹೇಂಗೂ ಬೇಕೇ, ಅದಲ್ಲದ್ದೆ – ಎಂತದನ್ನೂ ನೆಂಪು ಮಡಿಕ್ಕೊಂಬಲೆ ಮನಸ್ಸಿನ ಅವಲಂಬನೆ ಇಲ್ಲೆ, ಮೊಬಯಿಲಿಲಿ ಬರಕ್ಕೊಂಡತ್ತು.
ಮದಲೆಲ್ಲ ನೆಂಟ್ರುಗೊಕ್ಕೆ ಕಾಗತ ಬರಕ್ಕೊಂಡಿಪ್ಪಗ ಎಲ್ಲೊರ ಎಡ್ರಾಸುದೇ ಅರಡಿಗೊಂಡಿದ್ದತ್ತು. ಈಗ ಎಡ್ರಾಸು ಬಿಡಿ ಪೋನ್ನಂಬ್ರವುದೇ ಗೊಂತಿರ್ತಿಲ್ಲೆ. ಮೊಬೈಲು ಕೋಂಟೇಕ್ಟಿಸಿಲಿ ನೋಡಿಯೇ ಆಯೆಕಟ್ಟೆ.
ಎರಡೆರಡ್ಳಿ ಎಷ್ಟು – ಕೇಳಿರೂ ಮೊಬೈಲಿಲಿ ಲೆಕ್ಕಾಚಾರ ಹಾಕಿಯೇ ಹೇಳುಸ್ಸು.
ಅಂಬಗ, ಮನಸ್ಸಿಂಗೂ ಅಪ್ಪ ರಜ ವ್ಯಾಯಾಮ ಇಲ್ಲದ್ದೆ ಆತಿದಾ.
~

ಆಚಮನೆ ಕುಂಞಣ್ಣನ ಕ್ಲಾಸಿಲಿ ಇದ್ದಿದ್ದ ಶಂಕ್ರಣ್ಣ ಈಗ ಕೊಡೆಯಾಲಲ್ಲಿ ಇಪ್ಪದು. ಬೇಂಕಿಲಿ.
ಮೊನ್ನೆ ಊರಿಂಗೆ ಬಂದಿಪ್ಪಾಗ ಹೀಂಗೇ ಮಾತಾಡುವಗ ಸುದ್ದಿ ಬಂತಾಡ – ಶಂಕರಣ್ಣಂಗೆ ರಜಾ ಷುಗರುದೇ, ರಜಾ ಬೀಪಿಯುದೇ ಇದ್ದಾಡ. ಸಣ್ಣ ಇಪ್ಪಗಂದಲೇ ಆರಾಮಲ್ಲಿ ಬೆಳದು, ಮತ್ತುದೇ ಸೌಕರ್ಯದ ಪೇಟೆಬಿಡಾರಲ್ಲಿ ಇದ್ದುಗೊಂಡು, ಬೇಂಕು ಇತ್ಯಾದಿಗಳ ಪುರ್ಸೋತಿನ ಕೆಲಸ ಮಾಡುವಗ, ವ್ಯಾಯಾಮಂಗೊ ಕಾಂಬಲೇ ಇಲ್ಲೆ.
ಹಾಂಗೆ, ರಜ ತೋರವುದೇ ಬೆಳದು, ತಿಗಲೆ ಬೇನೆಯೂ ಎಳಗಿ ಮೊನ್ನೆ ಟೆಷ್ಟು ಮಾಡುವಗ ಈ ಸಂಗತಿಗೊ ಗೊಂತಾಯಿದಾಡ.

ಆಚಮನೆ ಕುಂಞಣ್ಣನ ಹಾಂಗೆ ನೈಸರ್ಗಿಕ ಜೀವನ ಅಳವಡುಸೆಂಡರೆ ಎಷ್ಟು ಸುಸ್ಥಿರ ಜೀವನ, ಅಪ್ಪೋ!
ಅಭಾವಲ್ಲಿ ಸುರುವಾದ ಕಷ್ಟದ ಜೀವನ ಈಗ ಸೌಕರ್ಯಂಗೊ ಆದ ಮತ್ತುದೇ ಮುಂದುವರುಸಿದ ಕುಂಞಣ್ಣ ನಮ್ಮೆಲ್ಲರಿಂದ ಆರೋಗ್ಯಲ್ಲಿ ಇಪ್ಪದು ಕಂಡ್ರೆ ಕೊಶೀ ಆವುತ್ತು. ನಾವುದೇ, ಅಪುರೂಪಕ್ಕಾದರೂ ಇಪ್ಪ ಸೌಕರ್ಯಂಗಳ ಒಂದೊಂದರಿ ಆದರೂ ಬಿಟ್ಟು, ನೈಸರ್ಗಿಕವಾಗಿಪ್ಪಲೆ ಪ್ರಯತ್ನಪಟ್ರೆ ಹೇಂಗೆ? ಅಪುರೂಪಕ್ಕೊಂದರಿ ಆದರೂ – ದೇಹ, ಮನಸ್ಸಿಂಗೆ ವ್ಯಾಯಾಮ ಸಿಕ್ಕಲಿ.

ಎಂತ ಹೇಳ್ತಿ?
~

ಎಷ್ಟೇ ಆಲೋಚನೆ ಮಾಡಿ ಒರಗಿರೂ, ಒರಕ್ಕು ತಡವಾತಷ್ಟೇ ವಿನಃ, ಬೈಲಕರೆ ಮದುವೆಗೆ ಬೇಗ ಏಳುಲೆ ಎಲ್ರಾಮೇ ಬೇಕಾಯಿದು ಒಪ್ಪಣ್ಣಂಗೆ. ಪೋ!

ಒಂದೊಪ್ಪ: ಉದಾಸಿನ ಬಿಟ್ರೇ ಸೌಕರ್ಯ ಹೆಚ್ಚಕ್ಕಷ್ಟೆ. ಅಲ್ಲದೋ?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪೇಟೆಲಿ ಧಾವಂತದ ಜೀವನ. ಯಾವುದಕ್ಕೂ ಪುರುಸೊತ್ತು ಇಲ್ಲೆ. ಸೌಕರ್ಯ ಮಾಡಿಂಡು ಹೋದ ಹಾಂಗೆ ಬಾಕಿಪ್ಪ ಕೆಲಸಕ್ಕೆ ಸಮಯ ಸಿಕ್ಕುತ್ತು ಹೇಳ್ತ ಯೋಚನೆ ಒಂದು. ಇದರಿಂದಾಗಿ ಇಂದು ಬದುಕು ಯಾಂತ್ರಿಕ ಆಯಿದು.ಶರೀರಕ್ಕೆ ವ್ಯಾಯಾಮ ಇಲ್ಲೆ. ಅದರಿಂದಾಗಿ ಬಪ್ಪ ತೊಂದರೆಗೊ ಹಲವಾರು.
  ಹಳ್ಳಿಯ ಎಷ್ಟೋ ಕೆಲಸಂಗಳ ಬಗ್ಗೆ ಪೇಟೆ ಮಕ್ಕೊಗೆ ಅಂದಾಜಿಯೇ ಆಗ (ಕಲ್ಲಿಲ್ಲಿ ಕಡವದು, ವಸ್ತ್ರ ಒಗವದು, ಹಾಲು ಕರವದು, ದನಗಳ ಚಾಕ್ರಿ, ನೀರು ಎತ್ತುವದು, ನೆಲಕ್ಕಲ್ಲಿ ಕೂದೊಂಡು ಉಂಬದು ಇತ್ಯಾದಿ). ಹೀಂಗೆ ಮುಂದೆ ಹೋದರೆ ಒಂದು ದಿನ ಇದರೆಲ್ಲಾ ಪಟಂಗಳಲ್ಲಿ ತೋರುಸೆಕ್ಕಕ್ಕು.
  ಸೌಕರ್ಯ ಬೇಕು. ಅದರ ಸರಿಯಾಗಿ ಉಪಯೋಗುಸುವ, ಸಮತೋಲನಲ್ಲಿ ಜೀವನ ನೆಡೆಶುವ ಬುದ್ಧಿವಂತಿಕೆಯೂ ಬೇಕು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  “ಆರಾಮ್ ಹರಾಮ್ ಹೈ” ಹೇಳುವ ಮಾತು ನಿಜವಾಗಿಯು ಅಪ್ಪು. ಹೊಸ ಹೊಸ ಆವಿಷ್ಕಾರಂಗೊ ಆಗಿ ಸೌಕರ್ಯಂಗೊ ಹೆಚ್ಚು ಆವ್ತಾ ಇದ್ದ ಹಾಂಗೆ, ಮನುಷ್ಯನ ಸೋಮಾರಿತನ ಹೆಚ್ಚು ಆಯಿದು. ಒಪ್ಪಣ್ಣನ ಲೇಖನ ಎಲ್ಲೋರ ಕಣ್ಣು ತೆರಶುತ್ತ್ತ ಹಾಂಗಿದ್ದು.
  ಪೇಟೆಯ ಜೀವನ ಹೇಳಿರೆ ಎಲ್ಲಾ ಸೌಕರ್ಯಂಗ ಇಪ್ಪ ಜೀವನ ಹೇಳ್ತ ನೆಲೆಲಿ ಈಗಾಣ ಮಕ್ಕೊಗೆ ಹಳ್ಳಿಂದ ಪೇಟೆಯೇ ಇಷ್ಟ ಆವ್ತಾ ಇದ್ದು. ವಾರಕ್ಕೆ ಒಂದು ದಿನ ಆದರುದೆ ಹೀಂಗಿಪ್ಪ ಸೌಕರ್ಯದ ಸಲಕರಣೆಗಳ ಉಪಯೋಗಿಸದ್ದೆ, “e-ಉಪವಾಸ” ಹೇಳಿ ಮಾಡಿರೆ ನಮ್ಮ ಆರೋಗ್ಯಲ್ಲಿ ರಜಾ ಗುಣ ಸಿಕ್ಕುಗು ಹೇಳಿ ಎನ್ನ ಭಾವನೆ.

  [Reply]

  VA:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  ತುಂಬಾ ಚೆಂದದ ಸುದ್ದಿ ಒಪ್ಪಣ್ಣ!

  ಬೌದ್ಧಿಕ ಶ್ರಮಕ್ಕೆ ಅವಕಾಶ ಇಲ್ಲದ್ದ ಹಾಂಗೆ ಮಾಡುವ ಶಾರೀರಿಕ ಶ್ರಮಂಗಳ ಕಮ್ಮಿ ಮಾಡ್ಳೆ ಸೌಕರ್ಯಂಗಳ ಆವಶ್ಯಕತೆ ಇದ್ದು.
  ನಿತ್ಯ ಜೀವನ ಶಾರೀರಿಕಶ್ರಮಂಗಳಲ್ಲೇ ಕಳದು ಹೋದರೆ ಬೌದ್ಧಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವಿಕೆ ಇಲ್ಲದ್ದೆ ಆಗಿ ಹೋವುತ್ತು. ಆರೋಗ್ಯಕ್ಕೆ ಪೂರಕವಾದ ಶಾರೀರಿಕ ಶ್ರಮ ಮಾಂತ್ರ ಇರೆಕು. ಹಾಂಗೆಯೇ ಕ್ರಿಯಾಶೀಲತೆಯ ನಾಶ ಮಾಡುವ ಸೌಕರ್ಯವೂ ಇಪ್ಪಲಾಗ.

  [Reply]

  VN:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಚುಬ್ಬಣ್ಣ

  ಸೌಕರ್ಯಾ…!! ಎಷ್ಟು ಇದ್ದರೂ ಸಾಲ ಹೇಳಿ ಕಾನ್ತು ಅಪ್ಪೋ??… ಮತ್ತೆ ಈಗ ಎಲ್ಲ ಸೌಕರ್ಯಾ ಇಪ್ಪವ್ವೇ… !!?
  ಒ೦ದು ಊರಿ೦ಗೆ ಹೋಯೆಕಾರೆ ನೆಡಕ್ಕೊ೦ಡು ಹೋಪ ಕಾಲ ಇದ್ದತ್ತು, ಇ೦ದು A.C ಸ್ಲೀಪರೇ ಆಯೆಕಡ ನಮ್ಮ ಓ ಆಚಕರೆ ಮಾಲಿ೦ಗ ಭಟ್ರಿ೦ಗೆ…
  ಓ ಈಚಕರೆ, ಅಮೇರಿಕ ರಿಟರ್ನುಡು ಮಾವ೦ಗೆ ಊರಿಲ್ಲಿ AC ಇಲ್ಲದ್ದೆ ಆಗ..!! ಮದಲಿ೦ಗೆ ಫೇನು ಸಾಕಿತ್ತು…?!! ಸಣ್ಣದಿಪ್ಪಗ ಬೀಸಣಿಗೆ ಅಲ್ಲದ್ರೆ ಅದೂ ಬೇಡ ಇತ್ತು..
  ಹತ್ತು ರೂಪಯಿ ಸಾಮಾನು ಬೇಕಾರೆ ಜೀಪಿ೦ಗೆ ಇಪ್ಪತ್ತು ರೂಪಾಯಿ ಡೀಸಲು ಹಾಗಿ ಪೇಟೆ೦ದಲೇ ತರೆ ಕಷ್ಟೆ….. !!
  ತರಕಾರಿ ಮನೆಲಿ ಬೆಳದು ಗೊ೦ತಿಲ್ಲೆ.. ಸ೦ತೆ೦ದ, ಅಲ್ಲದ್ರೆ ಮೋನಪ್ಪನ ಅ೦ಗಡಿ೦ದ ತ೦ದು ಗೊ೦ತ್ತು…
  ಈ ಪೇಟೆ ಮಕ್ಕೊಗೆ ಕೈ-ಕಾಲು ಮಣ್ಣು ಅಪ್ಪಲೆಡಿಯ??, ಆದರೆ ಕೂಡ್ಲೆ dettol , Lifebuoy ಸೋಪಿಲ್ಲಿ ತೊಳದಾತು,…. ಹೀ೦ಗಿಪ್ಪಗ ಮು೦ದೆ ಮಕ್ಕೊ ಮಣ್ಣು ಕಾ೦ಬಲೆ ಇದ್ದೋ.. ಎಪಾರ್ಟ್ ಮೆಣ್ಟಿನ ನಾಲ್ಕು ಗೋಡೆಯಳ ಬಾಕಿ.. :( ಎ೦ತಾ?? ಎಲ್ಲದಕ್ಕೂ ಸೌಕರ್ಯಾ.. ಮೆಟ್ಲು ಹತ್ತೆಡಾ.. ಲೆಪ್ಟು ಇದ್ದು ಭಾವ… 😉 ಒತ್ತಿರೆ ಆತು ಮೇಲೆ ಹೋವುತ್ತು…!! :(

  ಹಾಲುಕರವದು ಇರಲಿ, ದನಕ್ಕೆ ಹುಲ್ಲುಹಾಕಲೂ ಅರಡ್ಯ..!! ಬರೀ ನ೦ದಿನಿಯೋ – ಮಿಲ್ಮವೋ ಪೇಕೇಟು ಎರಷಿ ಗೊ೦ತು .. 😉
  ಇ೦ದ್ರಾಣ ಪುಳ್ಳರುಗೋಕ್ಕೆ ಎರಡು ಮೈಲಿ ಹೋಯೆಕಾರೆ ಬೈಕು ಬೇಕು…!! ಅಲ್ಲದ್ರೆ ರಿಕ್ಷಮಾಡುವೊ ಭಾವ ಹೇಳುಗು.. :(
  ಶಾಲೆಗೆ ಮಕ್ಕೊಗೆ ನೆಡದು ಗೊ೦ತಿಲ್ಲೆ.. ಒ೦ದೋ ಕಾರಿಲ್ಲಿ ಬಿಡೆಕು, ಅಲ್ಲದ್ರೆ ಬಸ್ಸು ಬರೆಕು.. ಮತ್ತೆ೦ತ ಮಾಡೆಕು ಸೌಕರ್ಯಾ ಇದ್ದನ್ನೇ..!!

  ಇದರೆಲ್ಲದರ ಪರಿಣಾಮ ನಮ್ಮ ಆರೋಗ್ಯಕ್ಕೆ ಅಲ್ಲದೋ ಒಪ್ಪಣ್ಣ??

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶುದ್ದಿಕ್ಕಾರ°ಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°vreddhiದೊಡ್ಡಮಾವ°ವೆಂಕಟ್ ಕೋಟೂರುಸುಭಗವಿದ್ವಾನಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಅಡ್ಕತ್ತಿಮಾರುಮಾವ°ಕಜೆವಸಂತ°ವೇಣಿಯಕ್ಕ°ಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿಪೆಂಗಣ್ಣ°ಶ್ಯಾಮಣ್ಣಚುಬ್ಬಣ್ಣದೊಡ್ಡಭಾವಶರ್ಮಪ್ಪಚ್ಚಿಪವನಜಮಾವಬೋಸ ಬಾವಡಾಮಹೇಶಣ್ಣಗಣೇಶ ಮಾವ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ