Oppanna.com

ಸೋಣೆ ತಿಂಗಳ ಮಳೆಗಾಲಲ್ಲಿ ನೀರಿಂಗಿ’ಸೋಣ’..!

ಬರದೋರು :   ಒಪ್ಪಣ್ಣ    on   20/08/2010    52 ಒಪ್ಪಂಗೊ

ನೋಡುನೋಡುವಗಳೇ ಆಟಿ ಕಳಾತು!
ಮೊನ್ನೆ ಸೊತಂತ್ರದ ಮರದಿನ ಸೋಣೆ!

ಬೆಶ್ಚಂಗೆ ಕಂಬುಳಿಹೊದ್ದೊಂಡು ಮನೆ ಒಳ ಕೂದ ಅಣ್ಣಂದ್ರು, ಅಪ್ಪಚ್ಚಿಯಕ್ಕೊ ಎಲ್ಲ ಈಗ ಕಂಬುಳಿ ಮಡುಸಿ ಮಡಗಿ ತೋಟಕ್ಕೆ ಇಳುದ್ದವು.
ಇನ್ನುಅಲ್ಲಿ ತ್ರಿಕಾಲ ಪೂಜೆ, ಇಲ್ಲಿ ದುರ್ಗಾಪೂಜೆ, ಮದ್ದುಬಿಡ್ಳೆ ಕುಂಞ ಬಂತು, ಬಾಬು ಬತ್ತೆ ಹೇಳಿ ಬಯಿಂದಿಲ್ಲೆ – ಎಲ್ಲ ಕಾರಣಂಗಳ ಹೇಳಿಗೊಂಡು ಮನೆಹೆರಡುದೇ ಕೆಲಸ.ಆಟಿಲಿ ಆದರೆ ಮಳೆ ಇಳಿಯೇಕು ಹೇಳಿ ಒಂದು ನೆವ! ಅಷ್ಟೆ!!
ಆಟಿ ಕಳುದರೆ ಮಳೆ ಇದ್ದರೂ ಲೆಕ್ಕ ಇಲ್ಲೆ. ಹೇಳಿಕೆ ಹೇಳಿದ ಜೆಂಬ್ರಂಗೊಕ್ಕೆ ಹೋಯೇಕು, ಮನೆಗೆಲಸ ಇತ್ಯಾದಿ ಇದ್ದರೆ ಮಾಡೆಕು, ಎಂತಾರು ಕೃಷಿ ಇತ್ಯಾದಿ ಪರಿವಾಡಿ ಇದ್ದರೆ ನೋಡಿಗೊಳೆಕ್ಕು – ಎಲ್ಲದಕ್ಕೂ ಇದೇ ಸುಸಮಯ.

ಇದರೆಡಕ್ಕಿಲಿ ಮರದ ಎಡೇಡೇಲಿ ಹಲಸಿನ ಹಣ್ಣು ಇದ್ದರೆ ಅದನ್ನೂ ತಿಂದುಗೊಳೆಕು! ಪಕ್ಕನೆ ಬಿಟ್ಟಿಕ್ಕಲೆ ಗೊಂತಿಲ್ಲೆ.
ಯೇವದೇ ಆಗಲಿ – ಮುಗಿವಲಪ್ಪಗ ಅದರ ರುಚಿ ಗೊಂತಕ್ಕಿದ, ಹೇಳಿದ ದೊಡ್ಡಬಾವ°.
ಅವನ ಈ ಸರ್ತಿ ಬೈವಲಿಲ್ಲೆ ಹೇಳಿ ಮಾಡಿದ್ದೆಯೊ ಎಂಗೊ ಪುಳ್ಳರುಗೊ – ಎಂತ್ಸಕೇ ಹೇಳಿತ್ತುಕಂಡ್ರೆ, ಒಂದು ತಲೆಂಬಾಡಿ (ಜೇನಬರಿಕ್ಕನ ಹಾಂಗಿರ್ತದು) ಹಲಸಿನಹಣ್ಣಿನ ತುಂಡುಸಿ, ಪಾತ್ರಲ್ಲಿ ಹಾಕಿಂಡು, ಒಂದು ಕುಪ್ಪಿ ಜೇನವನ್ನುದೇ ಕೈಲಿ ಹಿಡ್ಕೊಂಡು ಬೈಲಿಂಗೆ ತಯಿಂದ ಓ ಮೊನ್ನೆ.
ಕೂದಂಡು ಲೊಟ್ಟೆಪಂಚಾತಿಗೆ ಹಾಕುವಗ ತಿಂದದು ಆ ದಿನ. ಬೈಲಿನ ಎಲ್ಲೋರಿಂಗೂ ಭಾರೀ ಕೊಶಿ ಆಯಿದು.
ಹಲಸಿನಹಣ್ಣು ಊರಿಲಿಲ್ಲದ್ದ ಕಾಲಲ್ಲಿ ಅದು ಸಿಕ್ಕಿದ್ದು ಭಾರೀ ಕೊಶಿ ಆತು. ಅಷ್ಟಲ್ಲದ್ದೆ ಆ ಹಲಸಿನಹಣ್ಣುದೇ ಭಾರೀ ರುಚಿ ಇತ್ತು!!
ಅವರ ಮನೆಲಿ ಇಪ್ಪ ವಿಶೇಷದ ಹಲಸಡ ಅದು. ಈ ಮಳೆಗಾಲ ಎರಡು ಬೇಳೆತಂದು ಅಗಳಕರೆಲಿ ಹಾಕೆಕ್ಕು ಹೇಳಿ ಇದ್ದು ನವಗೆ!
~

ಆ ದಿನ ದೊಡ್ಡಬಾವ° ರಜ ಅಂಬೆರ್ಪಿಲಿ ಇತ್ತಿದ್ದ°.
ಹೊತ್ತೋಪಗ ಅಂಬೆರ್ಪು ಜೋರಪ್ಪದಿದಾ – ಇರುಳು ಬೆಂಗ್ಳೂರು ಬಸ್ಸಿಂಗೆ ಹೋಪಲಿದ್ದರೆ.
ಅಪ್ಪಡ, ಅವ° ಬೆಂಗುಳೂರಿಂಗೆ ಹೋಪದಡ ಆ ದಿನ. ಅಪ್ಪಚ್ಚಿ ಮನೆಲಿ ಪೂಜೆ ಅಡ, ಹಾಂಗೆ ಪಾಚ ಉಂಬಲೆ.
ಪೆರ್ಲದಣ್ಣ ಸಿಕ್ಕುತ್ತನೋ ಏನೋ! ಉಮ್ಮ, ಇಬ್ರದ್ದೂ ಪುರುಸೊತ್ತು ನೋಡೆಕ್ಕಟ್ಟೆ. ಬೆಂಗುಳೂರು ಹೇಳಿರೆ ನಮ್ಮ ನೀರ್ಚಾಲಿನಷ್ಟಕೆ ಇಪ್ಪದಲ್ಲನ್ನೆ, ಊರಿಂಗೆ ಊರೇ ಅಲ್ಲಿದ್ದು!
ಅಂತೂ ಆ ದಿನ ಅಂಬೆರ್ಪಿಲೇ ಕಟ್ಟೆಪುರಾಣಲ್ಲಿ ದೊಡ್ಡಬಾವ° ಸೇರಿಗೊಂಡು, ಸುಮಾರು ಅಪುರೂಪದ ಸಕಾಲಿಕ ವಿಶಯಂಗಳ ಮಾತಾಡಿಗೊಂಡೆಯೊ°.

ಒಂದು ಬೆಳೀ ಬಣ್ಣದ ಬನಿಯಾನಂಗಿ ಹಾಕಿ ಹೆರಟಿತ್ತಿದ್ದ° ದೊಡ್ಡಬಾವ°.
ಈ ಮಳೆಗಾಲ ಬೆಳಿ ಬನಿಯಾನಂಗಿ ಹಾಕಿ ಹೆರಟದು ಸಾಕು, ಚೋರು ರಟ್ಟಲೆ!- ಅದಕ್ಕೇ ಹೇಳುದು, ಮನೆಂದ ಹೆರಡ್ಳಪ್ಪಗ ಹೆಂಡತ್ತಿ ಮನೆಲಿ ಇಲ್ಲದ್ರೆ ಹೀಂಗೆಲ್ಲ ಅಪ್ಪದೇ – ಹೇಳಿಗೊಂಡು..! ಅದಿರಳಿ,
ಅದರ್ಲಿ ಗಿಸೆ ಇತ್ತಿಲ್ಲೆ, ಗಿಸೆ ಇಪ್ಪ ಜಾಗೆಲಿ ನೀರು ಉಳಿಸಿ – ಹೇಳಿ ಎಂತದೋ ಹಸಿರುಬಣ್ಣಲ್ಲಿ ಬರಕ್ಕೊಂಡು ಇತ್ತಿದ್ದು.
~

ಮತ್ತೆಂತರ ಶುದ್ದಿ? ಆಟಿಲಿ ಪುರುಸೋತಿಲಿ ಮಾತಾಡಿಗೊಂಡು ಇತ್ತು ನಾವು. ಎಲ್ಲೋರಿಂಗೂ ಪುರುಸೊತ್ತಲ್ಲದ, ಹಾಂಗೆ.
ಈಗ ಎಂತರ ಪುರುಸೊತ್ತು – ಕೆಲಸಂಗೊ ಸುರು ಆತು.
ಅಗಳುತೆಗೆತ್ತ ಮುಂಡಂದೇ ಅದರ ನಾಕು ಜೆನ ಕೆಲಸದೋರುದೇ ತರವಾಡುಮನೆಗೆ ಬತ್ತವಡ ಇಂದು – ಹೇಳಿದ ದೊಡ್ಡಬಾವ°.
ಎಂತಪ್ಪ? ಇನ್ನೆಲ್ಲಿ ಅಗಳು ತೆಗವದು ಅಲ್ಲಿಗೆ? ಮಾರ್ಗಕ್ಕೇ ತೆಗೆತ್ತವೋ – ಕೇಳಿದ ಅಜ್ಜಕಾನ ಬಾವ°. ದೊಡ್ಡವು ಮಾತಾಡುವಗ ಪೆರಟ್ಟೇ ಮಾತಾಡುದು ಬಿಂಗಿ ಮಕ್ಕೊ!!
ಅಲ್ಲ, ನಂಬುಲೆಡಿಯ – ಈ ವಿದ್ಯಕ್ಕನ ಮಾತು ಕೇಳಿ ಶಾಂಬಾವ° ಹಾಂಗೆ ಮಾಡ್ಳೂ ಸಾಕು!
~

ಹಾಂಗೆನೋಡಿರೆ, ಮದಲಿಂಗೇ ಸೋಣೆತಿಂಗಳು ಹೇಳಿತ್ತುಕಂಡ್ರೆ ಮಣ್ಣುಗರ್ಪುತ್ತದಕ್ಕೆ ಸಕಾಲ. ದೈಬಾರೆತ ಬೇಲೆ ಸೋಣೊಟು – ಹೇಳಿ ಬಟ್ಯನ ಗಾದೆ ಒಂದಿದ್ದು. (ದೈ=ಅಡಕ್ಕೆ ಸೆಸಿ, ಬಾರೆ=ಬಾಳೆ)
ಎಂತ್ಸಾರು ಸೆಸಿಮಡಗುಲೋ, ಎಡೆಸೆಸಿಹಾಕಲೋ, ತೆಂಗಿನಗೆಡು ಮಡಗಲೋ ಮತ್ತೊ ಇದ್ದರೆ ಸೋಣ(ಸಿಂಹಮಾಸ)ಲ್ಲಿ ಗುಂಡಿತೆಗದು ಕನ್ನೆ(ಕನ್ಯಾ ಮಾಸ)ಯ ಒಳ ನೆಟ್ಟಕ್ಕು ಮದಲಿಂಗೆ.
ಈಗ ಮಳೆಯೇ ನಾವು ಹೇಳಿದ ಹಾಂಗೆ ಇಲ್ಲೆ, ಇನ್ನು ಯೇವ ಸೋಣ, ಯೇವ ಕನ್ನೆ. ಜೇಸೀಬಿಯುದೇ, ಸ್ಪ್ರಿಂಕ್ಲರುದೇ ಇದ್ದರೆ ಯೇವ ನೆಡುಬೇಸಗೆಲಿದೇ ಸೆಸಿಮಡಗಲೆಡಿಗು.
ಅದಿರಳಿ, ತರವಾಡುಮನೆಲಿ ಎಡೆಸೆಸಿ ಮಡಗುತ್ತವೋ ಅಂಬಗ – ಕೇಳಿದೆ. ಇಲ್ಲೆ ಹೇಳಿ ದೊಡ್ಡಬಾವ° ತಲೆ ಅಡ್ಡಡ್ಡ ಆಡುಸಿದ°.
ಅಷ್ಟಪ್ಪಗ ಗೊಂತಾತು, ಇದು ಎಂಗೊ ಗ್ರೇಶಿದ್ದು ಯೇವದೂ ಅಲ್ಲ, ಸಂಪೂರ್ಣ ಹೊಸದಾದ ಒಂದು ಕಾರ್ಯ ಹೇಳಿಗೊಂಡು.
ಎಂತರ ಅದು? ಅದುವೇ ಇಂಗುಗುಂಡಿ!!
~

ನಮ್ಮ ಭೂಮಿಲಿ ಪೃಥಿವ್ಯಾಪ್ ವಾಯುತೇಜೋರಾಕಾಶಃ – ಹೇಳ್ತ ಪಂಚಭೂತಂಗೊ ಇದ್ದಡ.
ಅದರ್ಲಿ ಆಪ್-ಹೇಳಿರೆ ನೀರು.
ಭೂಮಿಲಿ ನೀರು ಇಪ್ಪದು ಭೂಮಿ ಒಳದಿಕೆ, ಮಣ್ಣ ಎಡೆಲಿ. ಜೇನ ಎರಿಲಿ ಜೇನ ಇದ್ದ ಹಾಂಗೆ!
ಹಲಸಿನಹಣ್ಣು ಭಾರೀ ಸೀವಿದ್ದು, ಜೇನ ಇಲ್ಲದ್ದರೂ ತಿಂಬಲೆಡಿಗು! ಅಜ್ಜಕಾನಬಾವ ಬೇಗಬೇಗ ತಿಂತಾ ಇದ್ದ, ಕಳ್ಳ°!!
ಅದಿರಳಿ.. ಮಣ್ಣಿನ ಎಡೆಲಿ ನೀರಿಪ್ಪದು ಅದು ಮೇಗಂದ ಹೋದ ನೀರೇ!

ಸೂರ್ಯನ ಬೆಶಿಲಿಂಗೆ ಕುಂಬ್ಳೆಕಡಲು ಕಾಯಿತ್ತು ಅಲ್ಲದೋ – ಹಾಂಗೆ ಕಾದು ಆವಿ ಮೇಗೆ ಹೋಗಿ ಮೋಡ ಆವುತ್ತು.
ಮೋಡ ಮಳೆಯಾಗಿ ಇಳುದು ಭೂಮಿ ಚೆಂಡಿ ಆವುತ್ತು, ಒಣಗಲೆಮಡಗಿದ ಬಂಡಾಡಿಅಜ್ಜಿಯ ಹಪ್ಪಳವುದೇ..
ಮೋಹನಬಂಟನ ಗಂಡಿಲಿ ನೀರು ಎರ್ಕುತ್ತು, ಪಾಡಿಗೆದ್ದೆ ಸಮಲುತ್ತು, ಸಾರಡಿತೋಡು ಹರುದು ಹೋವುತ್ತು!! ಮತ್ತೆ ಆ ನೀರು ಕುಂಬ್ಳೆ ಕಡಲಿಂಗೆ ಸೇರುತ್ತು!
– ಇದು ನೀರಿನ ಚಕ್ರ.
ಹೀಂಗೆ ಹರುದು ಹೋಪಗ ರಜರಜ ನಮ್ಮ ಭೂಮಿ ಅಡಿಂಗುದೇ ಇಳಿತ್ತು. ಮಳಗೆ ಬಂಡಾಡಿಪುಳ್ಳಿಯ ಚೂಡಿದಾರು ಚೆಂಡಿ ಆದ ಹಾಂಗೆ.
ಹ್ಮ್, ಭೂಮಿಯ ಮೇಲಾಣ ಹೊಡೆ ನೆನದು ನೆನದು – ಅಡಿಯ ಒರೆಂಗೆ ಇಳಿತ್ತು.
ಭೂಮಿಯ ಅಂತರಾಳಲ್ಲಿಪ್ಪ ಈ ನೀರೇ ಅಂತರ್ಜಲ.
ಅಂತರ್ಜಲ ಹೆಚ್ಚಿದ್ದಷ್ಟೂ ನಮ್ಮ ಎಲ್ಲಾ ಕೃಷಿ ಕಾರ್ಯ ಅಬಿವುರ್ದಿ ಆವುತ್ತಡ.
~

ಭೂಮಿಯ ಒಳದಿಕೆ ಇಪ್ಪ ಕಾರಣ ಆ ನೀರಿಂಗೆ ಅಂತರ್ಜಲ ಹೇಳಿ ಹೇಳುತ್ಸು.
ಮೇಗಂತಾಗಿ ಹೊಳೆ, ನದಿಗೊ ಎಲ್ಲ ಹರಿವ ಹಾಂಗೆಯೇ, ಒಳಾಣ ಅಂತರ್ಜಲವುದೇ ಹರುಕ್ಕೊಂಡು ಹೋವುತ್ತಡ.
ಅದು ರಜ್ಜ ಮೇಗೆ ಇದ್ದರೆ ಒರತ್ತೆಯ ರೂಪಲ್ಲಿ ಹೆರ ಬತ್ತದ. ಅದು ಅಂತರ್ಜಲವೇ ಆದರೂ ನಮ್ಮ ಆಡುಭಾಷೆಲಿ ಒರತ್ತೆ ಹೇಳಿ ಹೇಳ್ತವು.

ಹೆರಾಣ ಮಣ್ಣಿನ ರಜ್ಜ ಗುಂಡಿಗೆ ಗರ್ಪಿರೆ ಒರತ್ತೆ ನೀರು ಸಿಕ್ಕುತ್ತು. ಆ ಮಣ್ಣಿನ ಒಂದು ಪದರು ಕಳುದರೆ ಗಟ್ಟಿ ಕಲ್ಲು ಸಿಕ್ಕುತ್ತಡ.
ಆ ಗಟ್ಟಿ ಕಲ್ಲು ಮತ್ತೆ ಎಷ್ಟೋ ಅಡಿಯಂಗೆ ಒರೆಗೆ ಇದ್ದಡ – ತಲೆಯ ಓಡಿನ ನಮುನೆಲಿ!

– ಅದು ಕಳುದು ಇರುವಾರ (ಪುನಾ) ನೀರು ಇದ್ದಡ!

ಬಾವಿಲಿ ಸಿಕ್ಕುತ್ತದು ಒರತ್ತೆ ನೀರು, ಆದರೆ ಬೋರುವೆಲ್ಲಿಂಗೆ ಸಿಕ್ಕುತ್ತದು ಈ ಕಲ್ಲಿನ ಅಡಿಯಾಣ ನೀರಡ.
ಮೇಗೆ ಇಪ್ಪ ನೀರಿಲಿ – ಮಣ್ಣಿಲಿಪ್ಪ ಸುಣ್ಣದಂಶ, ಕಬ್ಬಿಣದಂಶ (ಖನಿಜ, ಲವಣಂಗೊ) ಎಲ್ಲ ಕರಗಿರ್ತಡ ರಜರಜ. ಆದರೆ ಕಲ್ಲಿನ ಅಡಿಯಾಣ ನೀರಿಂಗೆ ಹಾಂಗಿರ್ತದು ಕಮ್ಮಿ ಅಡ!

ಅದಕ್ಕೇ ಬಾವಿನೀರು ಸೀವು, ಬೋರುವೆಲ್ಲು ನೀರು ಚಪ್ಪೆಡ – ಮಾಷ್ಟ್ರುಮಾವ° ಹೇಳಿದ ನೆಂಪು.
~ಕೊಳಕ್ಕೆಗೆದ್ದೆಗಳಲ್ಲಿ ನೀರು ಮೇಲೆ ಇರ್ತು. ಬರೇ ಒಂದೆರಡು ಕೋಲು ತೆಗದರೆ ಸಾಕು, ನೀರು ಸಿಕ್ಕುಗು.
ಅದೇ ಜಾಗೆಗಳಲ್ಲಿ ಬೋರುವೆಲ್ಲು ತೆಗದರಂತೂ ಅಂತರ್ಜಲ ಸಮಲುಗು.
ಬಂಡಾಡಿ ಅಜ್ಜಿಯಲ್ಲಿ ಸುರೂ ತೆಗದ ಬೋರುವೆಲ್ಲಿಲಿ ಹೆಜ್ಜೆ ಅಳಗೆಂದ ತೆಳಿ ಸಮಲಿದ ನಮುನೆಲಿ ಸಮಲಿಗೊಂಡು ಇತ್ತಡ ನೀರು.
ಕೆಲವು ಪಾತ್ರಂಗಳಲ್ಲಿ ಎಲ್ಲ ತುಂಬುಸಿ ಮಡಗಿತ್ತಡ ಅಜ್ಜಿ! ಮತ್ತೆ ಅದು ಬಂದುಗೊಂಡೇ ಇರ್ತು – ಹೇಳಿ ಗೊಂತಾದ ಮತ್ತೆ ಬೊಡುದು ನಿಲ್ಲುಸಿತ್ತಡ! (ಶ್ಶ್.. ಕೇಳಿಕ್ಕೆಡಿ ಇನ್ನು, ಆತೋ? ) 😉
ಅದಕ್ಕೆ ಹೆಸರು ಓವರುಪ್ಲೋ – ಹೇಳಿಗೊಂಡು ಅಡ!
ಮದಾಲಿಂಗೆ ತೆಗದ ಬೋರುವೆಲ್ಲುಗಳಲ್ಲಿ ಅದು ಆಗಿಯೊಂಡು ಇತ್ತಡ, ಈಗಾಣ ಯೇವ ಬೋರುವೆಲ್ಲುಗಳಲ್ಲೂ ಅದು ನೆಡೆತ್ತಿಲ್ಲೆ.
ಕಾರಣ?
~
ಕಾರಣ ಭೂಮಿಲಿ ನೀರು ಅಡಿಂಗೆ ಹೋಯಿದು. ಅಡಿಂಗೆ ಹೋದ್ದಲ್ಲ, ನಾವು ಎಳದು ಎಳದು ಮುಗುಶಿದ್ದು.
ಬೋರು ಕೊರದು, ಕರೆಂಟು ಪಂಪಿಲಿ ನೀರು ಎಳದು, ಅಡಕ್ಕೆ ತೋಟಕ್ಕೆ ಬಿಟ್ಟು, ಅಡಕ್ಕೆ ಕೊಬಳು ಕಪ್ಪುನಮುನೆ ಪಚ್ಚೆ ಅಪ್ಪಗಳೇ ನವಗೆ ಸಮಾದಾನ.
ಸುರುಸುರೂವಿಂಗೆ ಎಂತ್ಸೂ ತೊಂದರೆ ಅರ್ತ ಆಯಿದಿಲ್ಲೆ.
ಬೈಲಿಲಿ ಒಬ್ಬ° ಒಂದು ಬೋರು ಕೊರದ° ಹೇಳಿ ಆದರೆ, ಅದರ ನೋಡಿ ಆಚವಂದೇ ಕೊರದ.
ನೋಡುನೋಡುವಗಳೇ ಎಲ್ಲೊರಿಂಗೂ ಬೋರು ಆತು.
~

ಅಂತರ್ಜಲ ಹೇಳಿತ್ತುಕಂಡ್ರೆ ಒಂದು ದೊಡಾ ಟೇಂಕಿಯ ನಮುನೆ ಎರ್ಕಿ ನಿಂದ ನೀರಡ.
ಭೂಮಿಯ ಹೆರಮೈಲಿ ಇಪ್ಪ ಸಪೂರ ನರಂಗಳ ಹಾಂಗಿರ್ತ ಮಾಟೆಲೆ ಆಗಿ ನೀರು ಕೆಳ ಇಳುದು ರಜರಜವೇ ಎರ್ಕಿ ಸಾವಿರ ಸಾವಿರ ಒರಿಶದ ಸಂಗ್ರಹದ ನೀರಡ ಆ ಅಂತರ್ಜಲ.

ಮದಲಿಂಗೆ ಮಳೆನೀರಿನ ಐದನೇ ಒಂದಂಶ ನೀರು ಇಂಗಿಗೊಂಡು ಇದ್ದತ್ತಡ.
ಈಗ ರೂಪತ್ತೆಯ ಹಾಂಗಿಪ್ಪವು ಜಾಲಿಂಗೆಲ್ಲ ಕೋಂಗ್ರೇಟು ಹಾಕುತ್ತವಿದಾ – ಕಾರಿಂಗೆ, ಕಾಲಿಂಗೆ ಕೆಸರಪ್ಪಲಾಗ ಹೇಳಿಗೊಂಡು.
ಪ್ಲೇಷ್ಟಿಕುಗೊ, ಡಾಮರು ಮಾರ್ಗ ಇತ್ಯಾದಿಗಳುದೇ ಇದಕ್ಕೆ ಕಾರಣ ಆವುತ್ತಡ.
ಅದರಿಂದಾಗಿ ಆ ಒಂದಂಶ ನೀರುದೇ ಇಂಗುತ್ತಿಲ್ಲೆಡ ಈಗ!

ಕರ್ನಾಟಕ ಹೊಡೆಲಿ ಸುಮಾರು ದಿಕ್ಕೆ ಡಾಮರು ಮಾರ್ಗಲ್ಲೇ ಬೇಕಾದಷ್ಟು ಗುಂಡಿಗೊ ಇರ್ತು – ಅದು ಬೇರೆ.
ಅದರಲ್ಲಿ ನೀರು ಮಾಂತ್ರ ಅಲ್ಲ ನಾವುದೇ ಇಂಗುಗು ಜಾಗ್ರತೆ ತಪ್ಪಿರೆ! 😉 🙁
ಅದಿರಳಿ,
ಮದಲಾಣ ಕಾಲಲ್ಲಿ ಇಂಗಿದ್ದರ ಎಳದು ಎಳದು ಮುಗುಶಿದ್ದು ನಾವು, ಬೋರುವೆಲ್ಲು ಹೇಳಿಗೊಂಡು.

ಸಾವಿರಾರು ಒರಿಶಂದ ಸಂಗ್ರಹ ಆಗಿದ್ದ ನೀರು ಒಂದು ಶತಮಾನಲ್ಲಿ ಆಶ್ಚರ್ಯ ಅಪ್ಪಷ್ಟು ಕಾಲಿ ಆತಡ.
ಕೆಲವು ದಿಕ್ಕೆ ಬೋರುಗೊ ಬೋರು ಅಪ್ಪಷ್ಟೂ ಕಾಲಿ ಆತಡ.
ಹೆಮ್ಮಕ್ಕೊ ಮನೆಹಿಂದೆ ಪಾತ್ರ ತೊಳಕ್ಕೊಂಡು ಇದ್ದ ಹಾಂಗೇ ಸೊರಂಗಂದ ಬತ್ತ ನೀರು ನಿಂದತ್ತು!
ಬಟ್ಟಮಾವ ಮಿಂದುಗೊಂಡು ಇಪ್ಪಗಳೇ ದಂಬೆನೀರು ಕಾಣೆ ಆತು!
ಎಲ್ಲೊರೂ ಎಳದವು. ಎಡಿಗಾದಷ್ಟು ಎಳದವು. ಆದರೆ ಕ್ರಮೇಣ ಎಂತಾತು ಹೇಳಿರೆ – ಎಳದು ಎಳದು ಇಡೀ ಅಂತರ್ಜಲವೇ ಕೆಳ ಇಳುದತ್ತು.
~

ಗೆದ್ದೆಕರೆಯ ಉಜಿರುಕಣಿ. ಇದು ಸೀತ ಹೋಗಿ ತೋಡಿಂಗೆ ಸೇರುದು.

ಎಂತ ಹೀಂಗಾತು?

ಅಡಿಲಿ ತುಂಬಿದ ನೀರಿನ ಎಲ್ಲೊರೂ ಮುಗುಶಲೇ ನೋಡಿದವಷ್ಟೇ ವಿನಃ, ಅದರ ಪುನಾ ತುಂಬುಸಲೆ ಆರಿಂಗೂ ನೆಂಪಾಯಿದಿಲ್ಲೆಡ.

ತುಂಬುಸುದು ಆರು?
ಮದಲಿಂಗೆ ತುಂಬುಸೆಂಡು ಇದ್ದದಾರು?
– ಇದೇ ಪಳ್ಳಂಗೊ,ಗೆದ್ದೆಗೊ,ಕೆರೆಗೊ, ತೋಡುಗೊ, ಮರಂಗೊ ಇತ್ಯಾದಿ!
ಈಗ ಇದರಲ್ಲಿ ಯೇವದಿದ್ದು ಭಾವಾ?
~
ಪಳ್ಳಂಗೊ – ಹೇಳಿರೆ ಎಂತರ? ಶುಬತ್ತೆ ಮಗಂಗೆ ನೋಡಿಯೂ ಗೊಂತಿರ.
ಬೈಲಿನ ಎಡಕ್ಕಿಲೆ ಎಲ್ಯಾರು ಇಪ್ಪ ಸ್ವಾಭಾವಿಕ ತಗ್ಗುಪ್ರದೇಶಲ್ಲಿ ನೀರು ನಿಂಗು. ಅದಕ್ಕೆ ಪಳ್ಳ ಹೇಳ್ತದು.
ತರವಾಡುಮನೆ ಗೋಣಂಗೊ ಮೂರೊತ್ತುದೇ ಓ ಆ ಬೈಲಕರೆ ಪಳ್ಳಲ್ಲಿ ಬಿದ್ದುಗೊಂಡು ಇತ್ತಿದ್ದವು ಮೊನ್ನೆ ಮೊನ್ನೆ ಒರೆಂಗುದೇ, ಕಾಸ್ರೋಡು ಬಷ್ಟೇಂಡಿಲಿ ಬೆಳಿಟೊಪ್ಪಿಗೊ ಬಿದ್ದೊಂಡು ಇದ್ದ ನಮುನೆ.
ಬೇಸಗೆಲಿ ಅಂತೇ ಬಲ್ಲೆ ಬೆಳಕ್ಕೊಂಡು ಇದ್ದರೂ, ಮಳೆಗಾಲ ಸುರು ಅಪ್ಪಗಳೇ ಅದು ನೀರು ಹಿಡ್ಕೊಂಗು. ಚಳಿಗಾಲ ಬಪ್ಪನ್ನಾರವೂ ಅದರ್ಲಿ ನೀರು ನಿಂಗು.
ಈಗ ಪಳ್ಳಂಗಳೇ ಇಲ್ಲೆ. ಸುಮ್ಮನೆ ಜಾಗೆ ಹಾಳು ಮಾಡುದೆಂತಕೆ – ಹೇಳಿಗೊಂಡು ಅದರ ನಿಗುದು ನಾಕು ಅಡಕ್ಕೆಸೆಸಿ ಮಡಗಿದವು, ಅಡಕ್ಕೆಭಾವಯ್ಯಂದ್ರು!
~
ಗೆದ್ದೆಗೊ – ಭತ್ತದ ಗೆದ್ದೆಗೊ.
ಏಣಿಲು, ಸುಗ್ಗಿ, ಕೊಳಕ್ಕೆ – ಹೇಳಿ ಮೂರು ನಮುನೆ ಬೆಳೆ ಬೆಳಗು ಮದಲಿಂಗೆ.
ಒಂದೊಂದು ಬೆಳೆಯೂ ತೊಂಬತ್ತು ದಿನ.
ಅದರ್ಲಿ ಕನಿಷ್ಟ ಎಪ್ಪತ್ತು ದಿನ ನೀರು ಇಕ್ಕು ಗೆದ್ದೆಲಿ.
ನೋಡಿನಿಂಗೊ – ಎಪ್ಪತ್ತು ಎಪ್ಪತ್ತು ದಿನದ ಹಾಂಗೆ ಮೂರು ಸರ್ತಿ ಒರಿಶಲ್ಲಿ ನೀರು ನಿಂದುಗೊಂಡು ಇಪ್ಪಗ ಯೋಚನೆ ಮಾಡಿ, ಅದೆಷ್ಟು ನೀರು ಭೂಮಿಗೆ ಇಳುಕ್ಕೊಂಡಿದ್ದಿಕ್ಕು! ಅಲ್ಲದೋ?
~

ಕೆರೆಗೊ –

ಬೈಲಕರೆಲಿ ಇರ್ತ ಕೆರೆಲಿ ನೀರಿಪ್ಪದರ ನೋಡುದು.

ಗೆದ್ದೆ ಕರೆಲಿ ಒಂದಾರುದೇ ಕೆರೆ ಇಕ್ಕು. ಜೊಟ್ಟೆ ಮೊಗಚ್ಚಲೆ.
ಒಂದು ಎಂಟತ್ತು ಕೋಲು ಗುಂಡಿಯ ಒಂದು ಕೆರೆಯ ರಚನೆಲಿ ನೀರು ಇಕ್ಕು, ಒರಿಶಪೂರ್ತಿ.

ಮಳೆಗಾಲದ ಆಸುಪಾಸಿಲಿ ನೀರಿನ ಸೆಲೆಯೇ ಇದ್ದರೂ, ಬೇಸಗೆಲಿ ಅದಕ್ಕೆ ಒರತ್ತೆ ಬಂದು ಸೇರುಗು – ಅದುದೇ ಅಂತರ್ಜಲವೇ.
ಕೊಳಕ್ಕೆಗೆದ್ದಗೆ ನೀರೇ ಬೇಡ. ಆದರೆ ಬೆಟ್ಟುಗೆದ್ದೆ, ಮಜಲುಗೆದ್ದೆಗೊಕ್ಕೆ ಬೇಕಾದ ನೀರು ಈ ಕೆರೆಂದಲೇ ಹೋಕು.
ಮತ್ತೆ ಮಾಡ್ತ ಉದ್ದು-ಕುಡು- ಹೀಂಗಿರ್ತ ಬೆಳೆಗೊಕ್ಕುದೇ ಇದೇ ಕೆರೆ ಆಯೆಕ್ಕಟ್ಟೆ.
ಬಟ್ಟಮಾವ ಮಿಂದಿಕ್ಕಿ ಶುದ್ದಲ್ಲಿ ನೀರುತೆಕ್ಕೊಂಡೋಗಿ ಅರ್ಘ್ಯಬಿಡೆಕ್ಕಾರೆ ಇದೇ ಕೆರೆನೀರು ಆಯೆಕ್ಕಟ್ಟೆ.
ಒರಿಶಪೂರ್ತಿ ನೀರು ಹಿಡ್ಕೊಂಡು ನಿಂದ ಆ ಕೆರೆಯ ಕಾರ್ಯವ ನಾವು ಮೆಚ್ಚುಲೇ ಬೇಕು. ಎಷ್ಟು ನೀರಿನ ಅದು ಭೂಮಿಯ ಅಡಿಂಗೆ ಕಳುಸಿಗೊಂಡು ಇದ್ದಿಕ್ಕು, ಅಲ್ಲದೋ?
~
ತೋಡುಗೊ –
ಸಾರಡಿತೋಡಿನ ಹಾಂಗಿರ್ತ ಅಗಾಧ ಸಂಕೆಯ ತೋಡುಗೊ ನಮ್ಮಲ್ಲಿ ಇದ್ದು.
ಈಗ ಒರಿಶದ ಹೆಚ್ಚು ಕಾಲವೂ ಅದು ಕಾಲಿಯೇ ಇದ್ದರೂ, ಮದಲಿಂಗೆ ಶಿವರಾತ್ರಿ ಒರೆಂಗುದೇ ಅದರ್ಲಿ ಹರಿಪ್ಪು ಇದ್ದುಗೊಂಡು ಇತ್ತು.
ಹರಿಪ್ಪು ಇಪ್ಪಷ್ಟು ಕಾಲವೂ ಶುದ್ದ ನೀರು ಇದ್ದೇ ಇದ್ದೊಂಡಿತ್ತು.

ಎಷ್ಟೋ ಜೆನರ ಒಸ್ತ್ರ ಒಗವಲೋ, ಮೋರೆ ತೊಳವಲೋ, ಈಜುಲೋ, ದನಕ್ಕೆ ಹುಲ್ಲು ತೊಳವಲೋ, ಗೋಣಂಗಳ ಮೀಶುಲೋ, ಬಟ್ಯಂಗೆ ಗಾಳ ಹಾಕಲೋ, ಎಂತಕೆಲ್ಲ ಉಪಕಾರ ಆಯ್ಕೊಂಡಿತ್ತು.

ತೋಡಿನ ಉದ್ದಕೂ ಅದರ ಪಾತ್ರಲ್ಲಿ ಅದೆಷ್ಟು ನೀರು ಭೂಮಿಯ ಒಳ ಇಳ್ಕೊಂಡಿದ್ದಿಕ್ಕೋ ಏನೋ.
ಚೆ, ಈಗಾಣ ತೋಡುಗೊ ಮಳೆ ಬಿಟ್ಟಕೂಡ್ಳೇ ಕಾಲಿ ಆವುತ್ತು.
~
ಮರಂಗೊ..?!
ಮದಲಿಂಗೆ ಮರಂಗೊ ದಾರಾಳಡ.
ದೊಡ್ಡದೊಡ್ಡ ಮರಂಗೊ ಪತ್ತಕ್ಕೆ ಸಿಕ್ಕದ್ದ ನಮುನೆದು ನಮ್ಮ ಬೈಲಿಲಿ ಇತ್ತಡ. ಒಂದೊಂದು ಮರ ಒಂದೊಂದು ಮನೆ ಕಟ್ಟುಲೆ ಸಾಕಪ್ಪ ನಮುನೆ ಇತ್ತಡ. ಎಷ್ಟೋ ಉದ್ದಕೆ – ಹತ್ತು ಹದಿನೈದು ಕೋಲು ಉದ್ದಕೆ ನೂಲು ಹಿಡುದ ನಮುನೆಲಿ ಸರೂತಕೆ ಇತ್ತಡ. ಸಾರಡಿತೋಡಿನ ಕರೆಲಿ ಉದ್ದಕೂ ಬೆಣಚ್ಚೇ ಬೀಳದ್ದ ನಮುನೆ ಇತ್ತಡ!!
ಈಗ ಕಣ್ಣಿಂಗೆ ಕಾಂಬಲೂ ಸಿಕ್ಕ, ಅದೆಲ್ಲ ಎಲ್ಲಿ ಹೋತು ಹೇಳಿ ದೊಡ್ಡಮಾರ್ಗದಕರೆ ಮಿಲ್ಲಿನ ಇಬ್ರಾಯಿಯತ್ರೆ ಕೇಳೆಕ್ಕಷ್ಟೆ.ಹ್ಮ್, ಮರಂಗೊ ಇಪ್ಪಗ ಅದುವೇ ಈ ಅಂತರ್ಜಲವ ತುಂಬುವ ಹಾಂಗೆ ನೋಡಿಗೊಂಡು ಇತ್ತಡ.
ಮರಕ್ಕೆ ನಾಕು ಹನಿ ನೀರು ಬಿದ್ದರೆ ಅದರ ಬುಡಕ್ಕೆ ಹಾಕುತ್ತು. ಬರಾನೆ ಹರುದು ಹೋಪ ನೀರಿನ ಒಂದರಿ ರಜಾ ಹೊತ್ತು ನಿಂಬ ನಮುನೆ ಮಾಡಿ, ಅಲ್ಲೇ ಇಂಗುಸಿ ಬಿಡ್ತು. ಹಾಂಗಾಗಿ, ಒಂದು ಮರ ಇದ್ದರೆ ಸುಮಾರು ನೀರು ಇಂಗಿಯೇ ಹೋವುತ್ತಡ.

ಈಗ ಎಲ್ಲದಕ್ಕೂ ಮರವೇ ಆಯೆಕು. ಕೂಬಲೆ, ನಿಂಬಲೆ, ಮನುಗುಲೆ, ನೇಲುಲೆ – ಎಲ್ಲದಕ್ಕೂ ಮರವೇ.
ಮರಂಗೊ ನಾಶ ಆದ ಹಾಂಗೇ ಅಂತರ್ಜಲದ ಪ್ರಮಾಣ ಕೆಳ ಇಳುದತ್ತಡ..
~
ಅಂತರ್ಜಲವ ಪುನಾ ಜಾಸ್ತಿ ಮಾಡ್ಲೆ ಇಪ್ಪ ಚಳುವಳಿಯೇ ಈ ನೀರಿಂಗಿಸೋಣ..!!
ಅದು ಹೇಂಗೆ?
ಹಳೆಯ ನೀರಿನ ಆಶ್ರಯಂಗೊಕ್ಕೆ ಪುನಃ ಜೀವಕೊಡುವ ಮೂಲಕ,
ಹಳೆ ಕೆರೆಗಳ ತುಂಬುಸುವ ಮೂಲಕ,
ಹಳೆ ಕಟ್ಟಂಗಳ ಪುನಾ ಕಟ್ಟುವ ಮೂಲಕ,
ಹಳೇ ಗೆದ್ದೆಗಳ ಬೆಳೆಶುವ ಮೂಲಕ..
ದೊಡ್ಡಜಾತಿ ಮರದ ಸೆಸಿಗಳ ನೆಡುವ ಮೂಲಕ..
ಅದಲ್ಲದ್ದೇ, ಕೃತಕವಾಗಿ ಮಾಡಿದ ಇಂಗುಗುಂಡಿಗಳ ಮೂಲಕ!
~
ಇಂಗುಗುಂಡಿ:

ಕೆಂಪುನೀರು ಬಂದು ಗುಂಡಿಗೆ ಬಿದ್ದು ಎರ್ಕಿ ಭೂಮಿಗಿಳಿವ "ಇಂಗುಗುಂಡಿ"!

ಪಳ್ಳಂಗೊ,ಗೆದ್ದೆಗೊ,ಕೆರೆಗೊ, ತೋಡುಗೊ, ಮರಂಗೊ ಇತ್ಯಾದಿ ಎಲ್ಲವೂ ಕಮ್ಮಿ ಆದ ಕಾಲಲ್ಲಿ ಅಂತರ್ಜಲವ ತುಂಬುಸಲೆ ಹೊಸತ್ತೊಂದು ಆಶಾಕಿರಣ ಇದ್ದಡ – ಅದುವೇ ನಮ್ಮ “ಇಂಗುಗುಂಡಿ”.
ಪೋಡಿಗೆ ಇಂಗು ರಜಾ ಹಾಕಿರೆ ಲಾಯಿಕಪ್ಪದು – ಹೇಳಿದ ಅಜ್ಜಕಾನಬಾವ°.
ಹಲಸಿನಹಣ್ಣು ತಿಂದು ಮುಗಾತು… ಇನ್ನು ಪುನಾ ಪೆರಟ್ಟುಮಾತಾಡುದಕ್ಕೆ ತೊಂದರಿಲ್ಲೆ ಅವಂಗೆ!
~

ಹ್ಮ್, ಇಂಗುಗುಂಡಿ ಹೇಳಿರೆ – ಇದೇ ಮೊದಲಾಣ ಪಳ್ಳಂಗಳೋ – ತೋಡುಗಳೋ – ಮರಂಗಳೋ – ಮಾಡ್ತ ಕೆಲಸವ ಮಾಡ್ಲೆ ಇಪ್ಪ ಸಾದಾರಣ ಗುಂಡಿ.
ಇಷ್ಟೇ ದೊಡ್ಡ ಇರೆಕ್ಕು, ಇಂತಾ ಜಾಗೆಲೇ ಇರೆಕ್ಕು ಹೇಳಿ ಏನೂ ಇಲ್ಲೆಡ.
ಒಟ್ಟು ಭೂಮಿಗೆ ಬಿದ್ದ ನೀರು ಅಂತೇ ಹರ್ಕೊಂಡು ಸೀತ ಹೋಗಿ ಪುನಾ ಕಡಲು ಸೇರುವ ಮೊದಲು ಆ ನೀರಿನ ಭೂಮಿಗೆ ಇಂಗುಸೇಕು, ಎಡಿಗಾದಷ್ಟು ನೀರಿನ ತಗ್ಗುಸೇಕು ಹೇಳಿಗೊಂಡು ಇಪ್ಪ ಯೋಚನೆಯೇ ಈ ಇಂಗುಗುಂಡಿ.

ನೀರಿನ ಇಂಗುಸಿ ಇಂಗುಸಿ ಅಂತರ್ಜಲವ ದೊಡ್ಡಮಾಡುದರ್ಲಿ ಇದಲ್ಲದ್ದೆ ಸುಮಾರು ವಿಧಂಗೊ ಇದ್ದಡ.
ಈ ಎಲ್ಲ ವಿಷಯಂಗಳ ಬಗ್ಗೆ ಭಡ್ತಿರಾಧಣ್ಣ ಅಂದಿಂದಲೇ ಪೇಪರಿಲಿ ಬರೆತ್ತಾ ಇದ್ದವಡ. ‘ನೀರು-ನೆರಳು‘ ಹೇಳ್ತ ಹೆಸರಿಲಿ ಬತ್ತಡ ಅವರ ಈ ಶುದ್ದಿಗೊ. ಕೆಲವು ಶುದ್ದಿಗೊ ಪುಸ್ತಕವೂ ಆಯಿದಡ. ಸುಮಾರು ಜೆನ ತೆಗದು ಓದುತ್ತವಡ ಅದರ – ದೊಡ್ಡಭಾವ° ಹೇಳಿಗೋಂಡು ಹೋದ°…
~

ನಮ್ಮ ತರವಾಡುಮನೆ ರಂಗಮಾವಂಗೆ ಮೊನ್ನೆ ಬದಿಯಡ್ಕಲ್ಲಿ ಪಡ್ರೆಮಾವ° ಸಿಕ್ಕಿದ್ದವಡ.
ಹೀಂಗೇ ಮಾತಾಡುವಗ ಈ ವಿಚಾರಂಗೊ ಎಲ್ಲ ಗೊಂತಾಗಿ, ರಂಗಮಾವಂಗೆ ಕೊಶಿ ಕಂಡತ್ತಡ.

ಓಡಿಗೊಂಡು ಹೋಪ ನೀರಿನ ನೆಡಕ್ಕೊಂಡು ಹೋಗುಸಿ..
ನೆಡಕ್ಕೊಂಡು ಹೋವುತ್ತ ನೀರಿನ ನಿಂದುನಿಂದು ಹೋಗುಸಿ..
ನಿಂದುಗೊಂಡ ನೀರಿನ ಅಲ್ಲಿಗೇ ತಗ್ಗುಸಿ – ಹೇಳಿಕೊಟ್ಟವಡ ಪಡ್ರೆಮಾವ°.

ಅದಕ್ಕೆ ಸೀತ ಹೋಗಿ ಮುಂಡನತ್ರೆ ಗುಡ್ಡೆಲಿ, ತೋಟದ ಕರೆಲಿ ಅಲ್ಲಲ್ಲಿ ಕೆಲವು ಗುಂಡಿಗಳ ತೋಡ್ಳೆ ಹೇಳಿಕ್ಕಿ ಬಂದವಡ.

ಮಳೆಗಾಲ ಇದಾ, ಅವಕ್ಕೂ ಬೇರೆ ಕೆಲಸ ಇಲ್ಲೆ – ಹಾಂಗೆ ಕೂಡ್ಳೆ ಬಂದವಡ.
ಇಂದಿಂದ ತರವಾಡುಮನೆ ಜಾಗೆಲಿ ಅಲ್ಲಲ್ಲಿ ಇಂಗುಗುಂಡಿ ಕಾರ್ಯ ಸುರು ಆವುತ್ತಡ.
ಅಡಕ್ಕೆ ಕಳ್ಳುಲೆ ಬಂದ ಸಂಕಪ್ಪು ಯೇವದಾರು ಒಂದು ಗುಂಡಿಗೆ ಬೀಳ್ತದರ್ಲಿ ಸಂಶಯ ಇಲ್ಲೆ!ಪಡ್ರೆಮಾವನ ಒಟ್ಟಿಂಗೆ ನಮ್ಮ ದೊಡ್ಡಬಾವಂದೆ ಸುಮಾರು ದಿಕ್ಕಂಗೆ ಹೋಯಿದವಡ.
ಅವಿಬ್ರೂ ಅದೆಂತದೋ ಪೇಪರಿನ ಕೆಲಸಲ್ಲಿ ಎಲ್ಲ ಒಟ್ಟೀಂಗೆ ಇದ್ದಿದ್ದವಡ.
ನೀರಿನ ಒಳಿಶಿ ಬೆಳೆಶುವ ವಿಶಯಲ್ಲಿ ಸುಮಾರು ಚಿಂತನೆ ಮಾಡಿದ್ದವಡ. ಸುಮಾರು ತೋಡು, ಕಟ್ಟ, ಬಾವಿ, ಹೊಳೆ, ಅಣೆಕಟ್ಟು, ಗೋಣಿಕಟ್ಟುಗಳ ಮಾಡ್ತದರ ಪ್ರಾತ್ಯಕ್ಷಿಕೆ ಮಾಡಿದ್ದವಡ.
ಕಾನಾವು ಕೆರೆಯನ್ನೂ ಒಂದರಿ ನೋಡಿಕ್ಕಿಬಂದು, ಆ ಕೆರೆನೀರಿಲಿ ಮಾಡಿದ ಒಂದು ಗ್ಳಾಸು ಕಶಾಯ ಕುಡ್ಕೊಂಡು ಬಯಿಂದವಡ!
ಅದೇ ಸಮೆಯದ ಬನಿಯಾನಂಗಿ ಅಡ ಅವು ಹಾಕಿಂಡದು – ನೀರು ಉಳಿಸಿ ಹೇಳಿ ಬರಕ್ಕೊಂಡು ಇದ್ದದು ಅದನ್ನೇ ಅಡ!!
– ಹೆರಡ್ಳಪ್ಪಗ ದೊಡ್ಡಕ್ಕ ಎದುರಿಲ್ಲದ್ದು ಒಳ್ಳೆದಾತು. ಈ ಬನಿಯಾನಂಗಿ ಕಾಣದ್ದರೆ ಈ ಶುದ್ದಿಯೇ ಬತ್ತಿತಿಲ್ಲೆ! 😉
~
ಆಗಲಿ, ಊರಿಲಿ ರಜ ನೀರಿನ ವಿಚಾರಲ್ಲಿ ಪ್ರಗತಿ ಆವುತ್ತಾ ಇದ್ದು.
ಈಗಾಗಳೇ ಸುಮಾರು ಮಳೆ ಬಂದು ಬಿಟ್ಟತ್ತು. ಇನ್ನೂ ಬಪ್ಪದಿದ್ದು. ತಡವಾಯಿದಿಲ್ಲೆ.
ನವಗೆ ಆರಿಂಗೆಲ್ಲ ಅವಕಾಶ ಇದ್ದೋ – ಅವೆಲ್ಲೊರುದೇ ಒಂದೊಂದಾರೂ ಇಂಗುಗುಂಡಿ ತೆಗವ°,
ಎಡಿಗಾದಷ್ಟು ನೀರಿನ ಇಂಗುಸಿ, ನಮ್ಮಂದ ಮುಂದಾಣೋರಿಂಗೂ ಅಂತರ್ಜಲ ಒಳಿತ್ತ ಹಾಂಗೆ ನೋಡಿಗೊಂಬ° – ಹೇಳಿ ಮಾತಾಡಿಗೊಂಡು ಹಲಸಿನಹಣ್ಣು ತಂದದಕ್ಕೆ ಒಂದು ಕೊಶಿಯ ಕೊಟ್ಟಿಕ್ಕಿ ಅಲ್ಲಿಂದ ಹೆರಟೆಯೊ°…
~
ನಮ್ಮ ಅಜ್ಜಂದ್ರ ಕಾಲಲ್ಲಿ ಪ್ರಾಕೃತಿಕ ಇಂಗುಗುಂಡಿಗೊ ಬೇಕಾದಷ್ಟು ಇತ್ತು.
ಅದರ ಮುಚ್ಚಿ ಅಭಿವುರ್ದಿ ಮಾಡುಲೆ ಹೆರಟು ಈಗ ನಾವೇ ಗುಂಡಿ ಮಾಡೆಕ್ಕಾಯಿದು.
ಮೊದಲು ಇದ್ದದರ ಒಳುಶಿಗೊಂಡಿದ್ದರೆ ಈ ಬರಗಾಲ ಬತ್ತಿತೋ?

ಕೆರೆ, ಪಳ್ಳ ಎಲ್ಲ ಮುಚ್ಚಿ ತೋಟ ಮಡುಗಿದ್ದು ಸಾಕು. ಬರೇ ತೋಟವನ್ನೇ ಮಾಡಿರೆ ಅದಕ್ಕೆ ನೀರೆಲ್ಲಿಂದ ಭಾವ?
ಈಗಳೇ ನಾಕೈದು ಬೋರು ತೆಗದರೂ ನೀರು ಸಿಕ್ಕದ್ದಂತಾ ಪರಿಸ್ಥಿತಿ ಬಯಿಂದು. ಮುಂದೆ ಹೇಂಗಕ್ಕು?!
ಪೊಟ್ಟುಬೋರು ಇದ್ದರೆ ಅದಕ್ಕೆ ಅಟ್ಟಿನಳಗೆ ಮುಚ್ಚುವ ಬದಲು ಮಳೆನೀರು ತುಂಬುಸುವೊ°. ಡಾಗುಟ್ರಕ್ಕನ ಇಂಜೆಕ್ಷನಿನ ಹಾಂಗೆ ಸೀತ ನೆಲಕ್ಕದ ಅಡಿಯಂಗೆ ನೀರು ಹೋಗಲಿ.
ಒಳುದ ಕೆರೆಗಳ, ಪಳ್ಳಂಗಳ ಎಲ್ಲ ಹಾಂಗೇ ಬಿಡುವ° – ಭೂಮಿಯೊಳದಿಕೆ ನೀರು ಹೋಪಷ್ಟು ಹೋಗಲಿ.

ತೋಟ ಇಪ್ಪವರ ಹತ್ತರೆ ಸಾಮಾನ್ಯ ಆದರೂ ಗುಡ್ಡೆ ಇದ್ದೇ ಇಕ್ಕು. ಅಲ್ಲಿ ಇಂಗುಗುಂಡಿ ತೆಗವ° ಒಟ್ಟಿಂಗೆ ಮರಂಗಳನ್ನುದೇ ಬೆಳೆಶುವ.
ಮರದ ಇಬ್ರಾಯಿಯ ಕಿಸೆ ತುಂಬುಸಿ ಗುಡ್ಡೆ ಬೋಳುಸುದರ ಇನ್ನಾದರೂ ನಿಲ್ಲುಸಿರೆ ಒಳ್ಳೆದು! ಅಲ್ಲದೋ? ಏ°?

ಈ ಸೋಣೆಯ ಕಾಲಲ್ಲಿ ಒಂದು ಒಳ್ಳೆ ಕಾರ್ಯದ ಚಿಂತನೆ ಅಪ್ಪ ಹಾಂಗೆ ನೋಡಿಗೊಂಡ್ರೆ ಬೈಲು ಹಸಿರಾಗಿ ಇಕ್ಕು.
ಎಂತ ಹೇಳ್ತಿ?

ಒಂದೊಪ್ಪ: ಭೂಮಿಲಿ ನೀರು ಒಳುದರೆ, ನಾವು ಭೂಮಿಲಿ ಒಳಿಗು!

ಸೂ: ಚಿತ್ರಂಗೊ-ಪಟಂಗೊ ಇಂಟರುನೆಟ್ಟಿಂದ ಸಿಕ್ಕಿದ್ದಡ, ಪೆರ್ಲದಣ್ಣ ಹೇಳಿದ°.

52 thoughts on “ಸೋಣೆ ತಿಂಗಳ ಮಳೆಗಾಲಲ್ಲಿ ನೀರಿಂಗಿ’ಸೋಣ’..!

  1. ಬೈಲಿಂದ ಅಶೋಕೆ ಹೋತ್ಸು ನಾವು.. ಇತ್ತ ಸರಿ ಬಪ್ಪಲೆ ಆಯಿದಿಲ್ಲೆ.. ಬಂದರು ಒಪ್ಪ ಓದುವಷ್ಟು ಪುರುಸೋತ್ತು ಇತ್ತಿಲ್ಲ್ಲೆ.. ನೆಗೆ ಬಾವನ ಮಾತಾಡ್ಸಿ ಹೋಪಷ್ಟೆ ಇದ್ದದು.
    ನೀರಿಂಗಿಸುದು ಮಾಡದ್ರೆ ನೀರಿಲ್ಲೆ ಹೇಳ್ತ ಕಾಲ ಬಪ್ಪಾಂಗೆ ಕಾಣ್ತು ಬಾವ.. ಖಂಡಿತ ನೀರೊಳುದರೆ ಮಾಂತ್ರ ನಾವು ಒಳಿಗು..
    ಆ ಕಾರ್ಯವ ಎಲ್ಲೊರು ಸೇರಿ ಮಾಡುವಾ..

  2. ಒಪ್ಪಣ್ಣನ ಈ ವಾರದ ಶುದ್ದಿಯೂ ಸಕಾಲಿಕವೇ!! ಯಾವತ್ರಾಣ ಹಾಂಗೆ ಒಪ್ಪ ಒಪ್ಪವೇ!!!
    ನವಗೆ ಸಾಕ್ಷರತೆ ಇದ್ದು ಹೇಳಿ ಗ್ರೇಶಿದರೆ ಸಾಲ, ಯಾವುದರಲ್ಲೆಲ್ಲಾ ಸಾಕ್ಷರತೆ ಇದ್ದು ಹೇಳಿ ನೋಡಿಗೊಳ್ಳೆಕ್ಕು ಅಲ್ಲದಾ? ಅದರಲ್ಲಿ ಒಂದು ಜಲಸಾಕ್ಷರತೆದೆ.. ಈ ಶಿಕ್ಷಣವ ಯಾವುದೇ ಯುನಿವರ್ಸಿಟಿ ಕೊಡ್ತಿಲ್ಲೆ, ನಾವೇ ಅನುಭವಲ್ಲಿ ಪಡವಂಥದ್ದು ಆದರೆ ಇನ್ನೊಬ್ಬಂಗೂ ಹೇಳಿ ಕೊಡುವಂಥದ್ದು. ಅದರಲ್ಲೂ ನಮ್ಮ ಮಕ್ಕೊಗೆ ಅಗತ್ಯಲ್ಲಿ, ನೀರಿನ ಎಲ್ಲಾ ಮೂಲಂಗಳ ಬಗ್ಗೆಯುದೆ, ಅದರ ಉಪಯೋಗಿಸುವ ರೀತಿಯುದೆ, ಅದರ ಒಳಿಶುವ ಬಗೆಯುದೆ ಖಂಡಿತವಾಗಿ ಹೇಳೆಕ್ಕು. ನಾವು ಇಂದು ಉಪಯೋಗಿಸಿ ಪೂರಾ ಖಾಲಿ ಮಾಡಿದರೆ ನಾಳೆ ನಮ್ಮ ನಂತರದ ತಲೆಮಾರುಗೊಕ್ಕೆ ನೀರೆಲ್ಲಿಂದ? ಅವು ಜೀವನ ಮಾಡುದು ಹೇಂಗೆ?
    ಈಗ ಸರ್ಕಾರದ ಆದೇಶಲ್ಲಿ ಶಾಲೆಗಳಲ್ಲಿಯೂ ಮಳೆನೀರು ಕೊಯ್ಲು ಮಾಡೆಕ್ಕು ಹೇಳಿ ‘ಸುವರ್ಣ ಜಲ ಯೋಜನೆ’ ಮಾಡಿದ್ದವು. ಪಂಚಾಯತಿಂದ ಬಂದ ಜೆನಂಗ ಮಾಡಿಂಗೆ ಪೈಪು ಮಡುಗಿ, ಟಾಂಕಿ ಕಟ್ಟಿಕ್ಕಿ ಬಿಲ್ಲು ಮಾಡ್ಸಿಗೊಂಡು ಹೋವುತ್ತವು. ಮಳೆ ಬಪ್ಪಗ ಆ ನೀರು ಟಾಂಕಿಗೆ ಬೀಳುತ್ತಾ ಇಲ್ಲೆಯಾ, ಅದರ ಮಕ್ಕ ಉಪಯೋಗಿಸುತ್ತವಾ ಇಲ್ಲೆಯಾ ಹೇಳಿ ನೋಡ್ಲೆ ಆರೂ ಬತ್ತವಿಲ್ಲೆ. ಹೀಂಗಿಪ್ಪಲ್ಲಿ ನಾವು ಜವಾಬ್ದಾರಿ ಮಕ್ಕೊಗೆ ಹೇಳಿ ಕೊಡದ್ದರೆ ಮಕ್ಕೊಗೆ ಆ ಕಾಳಜಿ ಬೆಳೆಯ. ಮುಂದೆ ಅವು ಆ ಜಾಗ್ರತೆಯ ಅವರ ನಂತರದವಕ್ಕೆ ಹೇಳೆಕ್ಕಪ್ಪದು ಅಲ್ಲದಾ?
    ಎನ್ನ ಮಾವನೋರ ದೂರದೃಷ್ಟಿಲಿ ಕಟ್ಟಿದ ಕಾನಾವಿನ ಕೆರೆಂದಾಗಿ ಸುಮಾರು ಜೆನಕ್ಕೆ ಪ್ರಯೋಜನ ಆಯಿದು. ಅವು ಅಂದು ಹಾಕಿದ ಜಲನಿಧಿಯ ಮಾದರಿಂದಾಗಿ ಇಂದು ಎಂಗೊಗೆದೆ ಮುಂದಾಣವಕ್ಕೆ ನೀರು ಒಳಿಶೆಕ್ಕು ಹೇಳುವ ಸಂದೇಶ ಸಿಕ್ಕಿದ್ದು. ಎಂಗೊ ಇಪ್ಪಲ್ಲಿ ಎಂಗೊಗೆ ಎಡಿಗಾದಷ್ಟು ಮಾಡ್ತಾ ಇದ್ದೆಯಾ°. ಇದಕ್ಕೆ ಅಂತ್ಯ ಇಲ್ಲೆನ್ನೆ. ನಮ್ಮ ಮುಂದಾಣ ಪೀಳಿಗೆಗೆ ಪ್ರಾಕೃತಿಕ ಸಂಪತ್ತನ್ನೂ ಕಟ್ಟಿ ಮಡುಗುವ° ಅಲ್ಲದಾ?

    1. { ಎನ್ನ ಮಾವನೋರ ದೂರದೃಷ್ಟಿಲಿ ಕಟ್ಟಿದ ಕಾನಾವಿನ ಕೆರೆಂದಾಗಿ }
      – ನಿಜವಾಗಿಯೂ ಬೈಲಿನೋರೆಲ್ಲ ನೋಡೆಕ್ಕಾದ ಅದ್ಭುತ ಸೃಷ್ಟಿ ಅದು.

      ಅಕ್ಕಾ°, ಎಂಗಳ ಎಲ್ಲೋರ ಒಂದರಿ ಅಲ್ಲಿಗೆ ಕರಕ್ಕೊಂಡು ಹೋವುತ್ತಿರೋ? ಬಪ್ಪ ಉರಿಬೇಸಗೆಲಿ?
      ಮನಸ್ಸುತುಂಬ ಈಜಲೆ!

      1. ಖಂಡಿತ ಅಕ್ಕು ಒಪ್ಪಣ್ಣ. ಅಕ್ಕಂಗೆ ಇದು ಕೊಶಿಯ ವಿಷಯವೇ!!!
        ಎಲ್ಲೋರು ಯಾವಾಗ ಬತ್ತಿ ಹೇಳಿದರೆ ಆತು.. ಹೋಪೋ°

      2. ಅಪ್ಪು ಒಪ್ಪಣ್ಣ ಎಲ್ಲರೂ ಒಂದರಿ ನೋಡೆಕ್ಕಪ್ಪ ಕೆರೆ.. ಅದ್ಭುತ ಇದ್ದು.. 🙂

  3. sooper aidu..gurugala aashhervaadavu sikkittu mattu kushi aatu.
    ondoppa laikaidu.neeru ingusuva oppanna sesi neduva.
    abbe tampagiddare naavu aarogya nemmadili badukkule edigu.
    danavannu bhoomiyannu chendakke noduva.
    avara runa ellastadaru teerusekku naavu manujaraada kaarana chendakke poshane maaduva.
    matte ellavu ondonde kelasa odaguttu.naavu santhoshavagi badukkuva.
    aagada oppanno.good luck.

    1. { danavannu bhoomiyannu chendakke noduva.}
      ಅಪ್ಪು ಅಮ್ಮ..
      ದನವೂ, ಭೂಮಿಯೂ ಒಂದಕ್ಕೊಂದು ಅಂತಃಸಂಬಂಧಿ.
      ಎರಡುದೇ ಚೆಂದಕೆ ಇದ್ದರೆ ಮಾಂತ್ರ ನಾವು ಮರಿಯಾದಿಲಿ ಬದುಕ್ಕುಲೆಡಿಗು.
      ಅಲ್ಲದೋ?

  4. ಒಪ್ಪದೊಟ್ಟಿಂಗೆ ಟಿಪ್ಪಣಿ(ಕಠಿಣ ಪದಗಳ ಅರ್ಥ)ಯಿದ್ದರೆ ಒಳ್ಳೇದು ಒಪ್ಪಣ್ಣಾ…

    ಇಂದ್ರಾಣ ಕಾಲದ ಹಲವು ಜೆನಂಗೊಕ್ಕೆ ಶಂಬಜ್ಜನ ಕಾಲದ ಹಲವು ಶಬ್ದಂಗೊ ಅರಡಿಯ..!

    ಕ್ರಮೇಣ ಅದು ನಮ್ಮ ಭಾಷೆಯ ಶಬ್ದಕೋಶವೇ ಅಕ್ಕು..!

    ಅಕ್ಷಯಪದನಿಧಿಯಕ್ಕು..!

    1. { ಅಕ್ಷಯಪದನಿಧಿ }
      – ವಾಹ್!!
      ಶಬ್ದಕೋಶವೇ ಬೇಡದ್ದೆ ಅರ್ತ ಅಪ್ಪ ಸುಂದರ ಶಬ್ದ.

      ಅಕ್ಕು ಗುರುಗಳೇ, ಸದ್ಯಲ್ಲೇ ಅದರ ಆರಂಭ ಮಾಡುವೊ°.
      ಶಂಬಜ್ಜನ ಕಾಲದ ಎಷ್ಟೋ ಶಬ್ದಂಗಳ ಸೇರುಸುವ ಕಾರ್ಯ ಬೈಲಿನೋರೆಲ್ಲ ಸೇರಿ ಮಾಡ್ತೆಯೊ°.

      ನಿಂಗಳ ಆಶೀರ್ವಾದ ಇದ್ದರೆ ಎಂತ ಕಾರ್ಯವುದೇ ಸಫಲ ಅಕ್ಕು.
      ಶುದ್ದಿಗೆ ಆಶೀರ್ವಾದ ಕೊಟ್ಟದು ಕೊಶೀ ಆತು ಗುರುಗಳೇ.
      | ಹರೇರಾಮ |

      1. ಒಪ್ಪಣ್ಣನ ಈ ಕಾರ್ಯಕ್ಕೆ ಕೈ ಜೋಡುಸಲೆ ತಯಾರು

        1. ಅಪ್ಪಚ್ಚೀ.. ಕೊಶಿ ಆತು.

          ಎಲ್ಲೋರು ಸೇರುವೊ°..
          ಮುಂದಂಗೆ ಒಳಿತ್ತ ಕಾರ್ಯ ಒಂದರ ಮಾಡುವೊ°.

          ಹರೇರಾಮ.

  5. ಅಬ್ಬೆಗೆ ನೀರು ಕುಡಿವಲೆ ಬಿಡದ್ದ ಮಕ್ಕಳ ಕಥೆಯೆಂತಕ್ಕು..!?

    1. ಹರೇರಾಮ ಸಂಸ್ಥಾನ.
      ಎಂಥಾ ಮಾತು..!! ಶ್ರೀ ಶಂಕರಾಚಾರ್ಯರು ಹೇಳಿದ ಹಾಂಗೆ ‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಹೇಳಿ, ಈ ಭೂಮಿ ಹೇಳುವ ಅಬ್ಬೆಯ ಮಕ್ಕಳಾದ ಎಂಗಳೇ ಕೆಟ್ಟವರಪ್ಪಲಕ್ಕು ವಿನಾ ಭೂಮಿತಾಯಿ ಯಾವತ್ತಿನ್ಗೂ ಕೆಟ್ಟವಳಪ್ಪಲಿಲ್ಲೆ. ಈ ಅಬ್ಬೆಯ ಯಾವೆಲ್ಲಾ ರೀತಿಲಿ, ಹೇನ್ಗೆಲ್ಲಾ ತಪ್ಪು ತಪ್ಪಾಗಿ, ಕೆಟ್ಟ ಕೆಟ್ಟ ದಾಗಿ ಉಪಯೋಗ ಮಾಡ್ತಾ ಇದ್ದೆಯಾ° ಎಂಗೋ, ಅದು ಬಳ್ಳಾರಿಯ ಗಣಿ ಕೊರವ ರೀತಿಲಿ ಆದಿಕ್ಕು, ನೀರಿನ ವಿಷಯಲ್ಲಿ ಆದಿಕ್ಕು, ಪ್ಲಾಸ್ಟಿಕ್ ತುಂಬುಸಿ ಆದಿಕ್ಕು ಇನ್ನೂ ಬೇರೆ ಬೇರೆ ವಿಧಾನಲ್ಲಿ ಆದಿಕ್ಕು. ಇಷ್ಟೆಲ್ಲಾ ಮಾಡುವಾಗ ಕೂಡಾ ತಾಳ್ಮೆಲಿ ಇದ್ದುಗೊಂಡು ಮಕ್ಕೊಗೆ ಎಲ್ಲವನ್ನೂ ಅನುಕೂಲ ಮಾಡಿ ಕೊಡುತ್ತಾ ಇಪ್ಪ ಈ ಅಬ್ಬೆಯ ಸಹನೆಯ ಕಟ್ಟೆ ಒಡಗಾ? ಅಬ್ಬೆ ಕೋಪುಸಿದರೆ ಎಂತಕ್ಕು? ಅಥವಾ ಅಬ್ಬೆಯ ಕೋಪವ ಸಹಿಸಿಗೊಂಬಲೆ ಎಂಗಳಿಂದ ಎಡಿಗಾ ಸಂಸ್ಥಾನ? ಹರೇರಾಮ.

    2. { ಅಬ್ಬೆಗೆ ನೀರು ಕುಡಿವಲೆ ಬಿಡದ್ದ ಮಕ್ಕಳ ಕಥೆಯೆಂತಕ್ಕು..!?}
      ಗುರುಗಳೇ,
      – ಒಂದೊಪ್ಪಂದಲೂ ಚೆಂದದ ಒಂದೊಪ್ಪ!

  6. ಮನೆ ಜಾಲಿಂಗೆ ಸಿಮೆಂಟ್ ಹಾಕಿ ಚೆಂದ ಮಾಡಿ ಅಪ್ಪಗ ರಜ ಇಂಗುವ ನೀರೂ ಸೀತಾ ಸಮುದ್ರಕ್ಕೆ ಹೋಕು.ಪೇಟೇಲಿ ಮನೆ ಕಟ್ಟುವಾಗ ಇಪ್ಪ ಖಾಲಿ ಜಾಗಗೆ ಸಿಮೆಂಟ್ ಹಾಕುದು ಸರಿ ಅಲ್ಲ.

    1. { ಪೇಟೇಲಿ ಮನೆ ಕಟ್ಟುವಾಗ ಇಪ್ಪ ಖಾಲಿ ಜಾಗಗೆ ಸಿಮೆಂಟ್ ಹಾಕುದು ಸರಿ ಅಲ್ಲ }
      ಈಗೀಗ ನಮ್ಮ ಹಳ್ಳಿ ಮನೆಗಳಲ್ಲೂ ಮಾಡಿದ್ದವಲ್ಲದೋ ಕೇಜಿಮಾವ°..?

      ಮೊನ್ನೆ ರೂಪತ್ತೆ ಮನಗೆ ಹೋಗಿಬಂದ ಅಜ್ಜಕಾನಬಾವ° ಹೇಳಿದ°.

  7. ಒಪ್ಪಣ್ಣ ನೀರಿಂಗಿಸುವ ಬಗ್ಗೆ ಬರದ ಮಾಹಿತಿ ಕೊಡುವ ಸಕಾಲಿಕ ಲೇಖನ. ಇದಕ್ಕೆ ಕೊಟ್ಟ “ತಲೆ ಬರಹ” ಮತ್ತೆ ಒಂದೊಪ್ಪ ಅಂತೂ ಸೂಪರ್. “ಭೂಮಿಲಿ ನೀರು ಒಳುದರೆ ನಾವು ಒಳಿಗು” ಎಂಥಾ ಮಾತು.
    ನೀರಿನ ಇಂಗುಸಿ ಭೂಮಿಗೆ ಸೇರುಸುವದು ಒಂದು ಕ್ರಮ. ಆದರೆ ಇದರ ವ್ಯವಸ್ಥೆ ಮಾಡ್ಲೆ ಎಡಿಯದ್ದ ಪೇಟೆಯವು ಇಪ್ಪ ನೀರಿನ ಸರಿಯಾದ ಬಳಕೆ ಮಾಡ್ಲೆ ಕಲಿಯೆಕ್ಕು. ಯಾವ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟೇ ಉಪಯೋಗಿಸೆಕ್ಕು.
    ಒಂದು ಮಾತು ಇದ್ದು: “ಈ ಭೂಮಿಯ ನಾವು ನಮ್ಮ ಮುಂದಾಣ ಪೀಳಿಗೆಯವರಿಂದ ಸಾಲ ತೆಕ್ಕೊಂಡದು”. ನಾವು ಬಿಟ್ಟು ಹೋಪಗ ಮುಂದಾಣ ಜನಾಂಗಕ್ಕೆ ಇದರ ಸರಿಯಾದ ರೀತಿಲಿ ವಾಪಾಸು ಕೊಡೆಕ್ಕಾದ್ದು ನಮ್ಮ ಕರ್ತವ್ಯ . ಪ್ರಕೃತಿಲಿ ಬೇಕಾಷ್ಟು ಸಿಕ್ಕುತ್ತು ಹೇಳಿ ಒಟ್ಟಾರೆ ಖರ್ಚು ಮಾಡಿ ಮುಂದಾಣವಕ್ಕೆ ಎಂತೂ ಇಲ್ಲದ್ದ ಹಾಂಗೆ ಮಾಡುವದು ಎಷ್ಟು ಮಾತ್ರಕ್ಕೂ ಸರಿ ಅಲ್ಲ. ಇದು ನೀರಿಂಗೂ ಅನ್ವಯ ಆವುತ್ತು. ಸಾಲ ತೆಕ್ಕೊಂಡರ ವಾಪಾಸು ಕೊಡುವಗ ಬಡ್ಡಿ ಸೇರಿಸಿ ಕೊಡೆಕು. ನವಗೆ ಸಿಕ್ಕಿದ್ದರಿಂದ ಕಮ್ಮಿ ಮಾಡಿ ಕೊಡುವದಲ್ಲ
    ಆನು ಸಣ್ಣ ಇಪ್ಪಗ ಜೊಟ್ಟೆಲಿ ನೀರು ಮೊಗದು ಕೃಷಿ ಮಾಡಿಗೊಂಡು ಇತ್ತಿದ್ದವು. ಮನೆ ಮೇಲ್ಕಟೆ ಇಪ್ಪ ಸೊರಂಗದ ನೀರು ಜಾಲಿಲ್ಲಿ ಇಪ್ಪ ಟಾಂಕಿಗೆ ಬಂದು ಬಿದ್ದೊಂಡು ಇತ್ತಿದ್ದು. ಈಗ ಅದೇ ಜಾಗೆಲಿ ಬೋರೆ ತೆಗದರೂ ನೀರು ಸಿಕ್ಕುವದು ತುಂಬಾ ಹೊಂಡಕ್ಕೆ ಹೋದರೆ ಮಾತ್ರ. ಅಂತರ್ಜಲ ವರ್ಷ ವರ್ಷ ಹೋದ ಹಾಂಗೆ ಅದರ ಮಟ್ಟ ತಗ್ಗುತ್ತಾ ಇದ್ದು. ಇದರ ಸರಿ ಮಾಡೆಕ್ಕಾರೆ ಒಂದೇ ಮಾರ್ಗ ಹೇಳಿರೆ ಹರಿತ್ತ ನೀರಿನ ತಡದು ಭೂಮಿಗೆ ಇಂಗುಸುವದು.
    ಪೇಟೆಯವಕ್ಕೂ ನೀರಿನ ಬಿಸಿ ಈಗಾಗಲೇ ಮುಟ್ಟಿದ್ದು. ದಿನ ನಿತ್ಯ ನೀರು ಬತ್ತಲ್ಲಿ ಈಗ ವಾರಕ್ಕೆ ಒಂದರಿಯೋ ಎರಡು ಸರ್ತಿಯೋ ಬಿಡುತ್ತ ವ್ಯವಸ್ತೆ ಇಪ್ಪದು. ಕುಡಿತ್ತ ನೀರು , ಪ್ಲಾಸ್ಟಿಕ್ ಬಾಟ್ಲಿಲಿ ಬಂದು ಆಯೆಕ್ಕಷ್ಟೆ. ಇಪ್ಪ ನೀರಿನ ಶುದ್ಧತೆ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲೆ. ನೀರು ಕಲುಶಿತ ಅಪ್ಪಲೆ ನಾವೇ ಕಾರಣ ಅಲ್ಲದೋ? ಇದರ ಬಗ್ಗೆ ಅಲೋಚನೆ ಇಂದ್ರಾಣ ಅಗತ್ಯ ಕೂಡಾ.
    ತಮಿಳ್ನಾಡಿಲ್ಲಿ ಹೊಸತ್ತಾಗಿ ಮನೆ ಕಟ್ಟುಸುವವು ನೀರು ಇಂಗಿಸುವ ವ್ಯವಸ್ಥೆ ಮಾಡದ್ದರೆ ಲೈಸೆನ್ಸ್ ಕೊಡ್ತವಿಲ್ಲೆ. ನಮ್ಮಲ್ಲಿ ಇನ್ನೂ ಈ ಕಾನೂನು ಬಯಿಂದಿಲ್ಲೆ. ಕೇರಳಲ್ಲಿ ಮಾಡಿನ ನೀರಿನ ಸಂಗಹಿಸುವ ಒಂದು ಕಾರ್ಯಕ್ರಮ ಈಗ ಜ್ಯಾರಿಲಿ ಇದ್ದು. ಮನೆಗಳ ಜಾಲಿಂಗೆ ಕೋಂಕ್ರೀಟ್ ಹಾಕುವ ಬದಲು ಇಂಟರ್ ಲಾಕ್ ಹಾಕಿಸಿರೆ ನೀರು ಇಂಗುವದು ರೆಜಾ ಜಾಸ್ತಿ ಅಕ್ಕು.
    [ಮೇಗೆ ಇಪ್ಪ ನೀರಿಲಿ – ಮಣ್ಣಿಲಿಪ್ಪ ಸುಣ್ಣದಂಶ, ಕಬ್ಬಿಣದಂಶ (ಖನಿಜ, ಲವಣಂಗೊ) ಎಲ್ಲ ಕರಗಿರ್ತಡ ರಜರಜ. ಆದರೆ ಕಲ್ಲಿನ ಅಡಿಯಾಣ ನೀರಿಂಗೆ ಹಾಂಗಿರ್ತದು ಕಮ್ಮಿ ಅಡ! ಅದಕ್ಕೇ ಬಾವಿನೀರು ಸೀವು, ಬೋರುವೆಲ್ಲು ನೀರು ಚಪ್ಪೆಡ]. ಒಪ್ಪಣ್ಣ ಇದು ಸರಿ ಅಲ್ಲ ಹೇಳಿ ಎನ್ನ ಅಭಿಪ್ರಾಯ. ಅಡೀಂಗೆ ಹೋದ ಹಾಂಗೇ ನೀರಿನ ಗಡಸುತನ (hardness) ಜಾಸ್ತಿ ಆವುತ್ತು. ನೀರಿಲ್ಲಿ ಕಬ್ಬಿಣದ ಅಂಶವೂ ಜಾಸ್ತಿ ಇರ್ತು. ಲವಣದ ಅಂಶ ಜಾಸ್ತಿ ಆದರೆ ಕೂಡಾ, ಚಪ್ಪೆ ಅನುಭವ ಆವುತ್ತು. ಬಾವಿ ನೀರಿಲ್ಲಿ ಇಪ್ಪದಕ್ಕಿಂತ ಹೆಚ್ಚು ಲವಣಂಗೊ ಬೋರ್ ನೀರಿಲ್ಲಿ ಇರ್ತು. ನೀರು ಚಪ್ಪೆ ಅಪ್ಪಲೆ ಇನ್ನೊಂದು ಕಾರಣ ಹೇಳಿರೆ ಅಡೀಂದ ಸಿಕ್ಕುತ್ತ ನೀರಿಲ್ಲಿ ಆಮ್ಲಜನಕದ (dissolve oxygen) ಕೊರತೆ ಇರ್ತು. ನಾವು ಕೊದಿಶಿ ಕುಡುವ ನೀರು ಅದೇ ಹಸಿ ನೀರಿಗಿಂತ ಚಪ್ಪೆ ಅಪ್ಪ ಕಾರಣ ಕೂಡಾ ಇದುವೇ.
    ಇನ್ನೊಂದು ಯುದ್ಧ ಅಪ್ಪದಿದ್ದರೆ ಅದು ನೀರಿಂಗೆ ಹೇಳುವದು ಈಗ ಸಾರ್ವತ್ರಿಕ ಮಾತು. ಹಾಂಗೆ ಅಪ್ಪದು ಬೇಡ. ಸಣ್ಣ ಮಟ್ಟಿಂಗಾದರೂ ಅವಕ್ಕವಕ್ಕೆ ಎಡಿಗಾದ ರೀತಿಲಿ ಎಲ್ಲರೂ ನೀರಿನ ಸದ್ಬಳಕೆ ಮಾಡುವೊ.

    1. ಅಪ್ಪಚ್ಚೀ,
      ವೈಜ್ಞಾನಿಕ ರೀತಿಲಿ ವಿಶ್ಲೇಷಣೆ ಮಾಡಿ ವಿಚಾರಂಗಳ ಕೊಟ್ಟದು ಕೊಶೀ ಆತು.

      { ಒಪ್ಪಣ್ಣ ಇದು ಸರಿ ಅಲ್ಲ ಹೇಳಿ ಎನ್ನ ಅಭಿಪ್ರಾಯ}
      – ಆಯಿಕ್ಕು, ನಿಂಗೊ ಹೇಳಿದ್ದು ಸರಿ ಇಕ್ಕು.
      ಎನಗೆ ಮರೆತ್ತು ನೋಡಿ – ಮಾಷ್ಟ್ರುಮಾವ° ಒಂದು ಹೇಳಿರೆ ಎನಗೆ ಇನ್ನೊಂದು ನೆಂಪೊಳಿವದು. 🙁
      ಬಂಡಾಡಿ ಅಜ್ಜಿಯತ್ರೆ ಉರಗೆ ತಂಬುಳಿಮಾಡಿ ಕೊಡ್ತಿರೋ ಕೇಳಿದ್ದಕ್ಕೆ ಉಂಡ್ಳಕಾಳುಮಾಡಿಗೊಂಡು ಕೂಯಿದವು! 🙁

      ಅವಕ್ಕೆ ಉರಗೆದು ಮಾಡ್ಳೇ ಮರದ್ದೋ ತೋರ್ತು! 😉

  8. ಮೇಲೆ ಆದರ್ಶಣ್ಣ ಹೇಳಿದ ಹಾಂಗೆ ಅನ್ದೊಂದರಿ ಬೇಕಾದೊರ ಮನಗೆ ಮಳೆಕಾಲಲ್ಲಿ ಹೊದಿಪ್ಪಾಗ ಒಂದು ವ್ಯವಸ್ತೆ ನೋಡಿತ್ತಿದೆ. ಅವು ಎಂತ ಮಾಡಿತ್ತಿದವು ಹೇಳಿದರೆ ಮನೆ ಮೇಲಂತಾಗಿ ಹೋಪ ತೂಡಿಂದ ಮನೆ ಜಾಲಿಲಿ ಇಪ್ಪ ಬೋರ್ವೆಲ್ಲಿನ್ಗೆ ಒಂದು ಪೈಪ್ ಹಾಕಿ siphon ಸಿಸ್ಟಮ್ ಲಿ ತೊಡಿಲಿ ಹೋಪ ನೀರಿನ ಒಂದಮ್ಶವ ಬೋರ್ವೆಲ್ಲಿನ್ಗೆ ಓಡ್ದುಸುದು. ೨೪ ಗಂಟೆದೆ ನೀರು ಹೋಪದು ಹೇಳಿಯೇ ಲೆಕ್ಕ. ಸುರುವಿನ್ಗೆ ಕ್ರಮ ನೋಡಿ ಖುಷಿ ಆತು ಭಾರಿ ಸುಲಾಬಲ್ಲಿ ಬೇಸಗೆಲಿ ಎಳದ ನೀರಿನ ತುಮ್ಬುಸುತ್ತಾ ಇದ್ದವು ಹೇಳಿ….!!ಆದರೆ ಹೀಂಗೆ ಮಾಡುದು ಸರಿಯೋ ? ಅಂತರ್ಜಲವೇ ಕಲ್ಮಶ ಆಗದೋ…..? ನಿಂಗ ಎಲ್ಲ ಎಂತ ಹೇಳ್ತಿ……?? ಅದರ ನೋಡಿ ಅವರಂದ ಸ್ಪೂರ್ತಿ ಪಡದು ಸುಮಾರು ಜನ ಹಾಂಗೆ ಮಾಡಲೇ ಸುರು ಮಾಡಿದ್ದವು…….ಹೇಳಿ ಸುದ್ದಿ ಇದ್ದು.ಹೇಂಗೆ ಈ ವೈವಾಟು….!!!

    1. ನೀರಿನ ಹಾಂಗೇ ತುಂಬುಸುವ ಕ್ರಮ ಸರಿ ಅಲ್ಲ. ಅದರ ಫಿಲ್ಟರ್ ಮಾಡಿ ತುಂಬುಸಲೆ ಅಕ್ಕು. ಇದಕ್ಕೆ ಪ್ರತ್ಯೇಕ ವ್ಯವಸ್ತೆ ಹೇಳಿರೆ ಜಲ್ಲಿ ಕಲ್ಲು, ಹೊಯಿಗೆ, ಕರಟದ ಮಸಿ ಇದರ ಒಂದು ಕ್ರಮಲ್ಲಿ ತುಂಬಿಸಿದ ಚೇಂಬರ್ ಮೂಲಕ ಕಳುಸಿ ಅದರ ಬೋರೆವೆಲ್ಲಿಂಗೆ ತುಂಬುಸಿರೆ ಒಳ್ಳೆದು. ಮಳೆಗಾಲದ ಕೆಸರು ನೀರು ತುಂಬಿರೆ ಮತ್ತೆ ಬೋರ್ ಲ್ಲಿ ಇಪ್ಪ ಸಬ್ ಮರ್ಸಿಬ್ಲ್ ಪಂಪಿಂಗೂ ತೊಂದರೆ ಅಕ್ಕು.
      ಓಳಿಲಿ ಹರಿತ್ತ ಶುಭ್ರ ನೀರು ಹಾಕಿರೆ ತೊಂದರೆ ಆಗ ಹೇಳಿ ಎನ್ನ ಅಭಿಪ್ರಾಯ

      1. ಶರ್ಮಪ್ಪಚ್ಚಿ ಹೇಳಿದ್ದು ಸರಿ, ನೀರು ಫಿಲ್ಟರ್ ಮಾಡದ್ರೆ ಬೋರ್ ವೆಲಿಂಗೆ ತುಂಬ್ಸಿರೆ ತೊಂದರೆ ಅಪ್ಪಲು ಸಾಕು. ಆನು ಮೇಲೆ ಹೇಳಿದ ಮರುಪೂರಣ ವಿಧಾನಲ್ಲಿ ಫಿಲ್ಟರ್ ಮಾಡಿಯೇ ನೀರು ಇಂಗ್ಸುವ ವ್ಯವಸ್ತೆ ಇಪ್ಪದು.. ಅದು ಕೂಡ ಸೀದ ಬೋರ್ ವೆಲಿಂಗೆ ಅಲ್ಲ, ಅದರ ನೀರಿನ ಹರಿವಿನ ಜಾಡು ಹಿಡಿದು (ಕಲವು ವೈಜ್ಞಾನಿಕ ವಿಧಾನಗಳ ಮೂಲಕ) ಅದಕ್ಕೆ ನೀರಿಂಗಿಸೆಕ್ಕಾದ ಸ್ಥಳದ ಗುರ್ತ ಮಾಡ್ತವು. ಅದು ಬೋರ್ ವೆಲಿಂದ ರಜ ದೂರಲ್ಲಿಪ್ಪಲು ಸಾಕು, ನೀರಿನ ಸೆಲೆಯ ಮೇಲೆ, ಮತ್ತೆ ಅದು ಯಾವ ದಿಕ್ಕಿಂಗೆ ಹರಿತ್ತಾ ಇದ್ದು ಹೇಳುದರ ಮೇಲೆ ನೀರಿಂಗಿಸೆಕ್ಕಾದ ಜಾಗೆಯ ನಿರ್ಧರಿಸೆಕ್ಕಾವುತ್ತು. ಆದರೆ ಈ ವಿಧಾನ ಈಗ ಒಳ್ಳೆ ರೀತಿಲಿ ಪ್ರಯೋಜನ ಆವುತ್ತಾ ಇದ್ದು, ಅಲ್ಲದ್ದೆ ಸುಮಾರು ಬತ್ತುಲೆ ತಯಾರಾದ ಬೋರ್ ವೆಲ್‍ಗೊಕ್ಕೆ ಜೀವದಾನ ಮಾಡಿದ್ದು ಹೇಳಿ ಆನು ಕೇಳ್ಪಟ್ಟಿದೆ..
        ಆಸಕ್ತಿ ಇಪ್ಪೋರು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವಾಷೆ ಉತ್ತಮಮಾವನ ಹತ್ರೆ ಮಾತಾಡಲಕ್ಕು , ಅವರ ಕರ್ಣಪಿಶಾಚಿಯ (ಮೊಬೈಲು) ಸಂಕೆ: +919538468661 , +919446681086.

    2. ರಾಜಣ್ಣಾ..
      ನಿಂಗಳ ಒಪ್ಪ ನೋಡಿ ಕೊಶಿ ಆತು.

      ನೀರು ಇಂಗುಸುದು ಕೊಶಿಯ ವಿಚಾರವೇ. ಆದರೆ ಅದರ ಮೊದಲು ಶರ್ಮಪ್ಪಚ್ಚಿ ಹೇಳಿದ ನಮುನಗೆ ರಜಾ ಚಿಂತನೆ ಮಾಡಿರೆ ಇನ್ನೂ ಒಳ್ಳೆದು.

      ಶುಭ್ರನೀರು ಭೂಮಿಯೊಳ ತುಂಬುಸುವೊ°, ಜಾಸ್ತಿ ಸಮೆಯ ಮಡಗೆಕ್ಕಲ್ಲದೋ – ಹಾಂಗೆ.

  9. ಲೇಖನ ಲಾಯಕ ಆಯಿದು ಒಪ್ಪಣ್ಣ. ಒಳ್ಳೆ ವಿಚಾರ.
    ದೊಡ್ಡ ಭಾವನ ತಲೆಂಬಾಡಿ ಹಲಸು ಆನುದೇ ತಿಂದಿದೆ,ಒಳ್ಳೆ ರುಚಿ ಇರ್ತು.ದೊಡ್ಡತ್ತೆ ಕೊಡ್ತವು ಅಂಬಗಂಬಗ.

    1. ಶಾಂಬಾವಾ..
      ನಿಂಗೊ ಇನ್ನಾಣ ಸರ್ತಿ ಬೈಲಿಂಗೆ ಎಂತ ತತ್ತೀ?
      ಶುದ್ದಿ ತಂದು ಕೊಡ್ತಿರೋ, ಎಂಗೊಗೆಲ್ಲ…?

  10. ಎನಗೊಂತಿಲ್ಲೆ. ಆನು ಹೇಳ್ತೆ ಅಜ್ಜಿಯತ್ರ, ಹೀಂಗೀಂಗೆ ಬೈಲಿಲಿ ಬೋರುವೆಲ್ಲು ಸಮಲಿದ್ದರ ಎಲ್ಲ ಹೇಳಿದ್ದವು ಹೇಳಿ. ಅಷ್ಟಪ್ಪಗ ಆ ಚೆಂಡಿ ಆದ ಹಪ್ಪಳವನ್ನೇ ಕೊಡುಗು ಒಪ್ಪಣ್ಣಂಗೆ. ಎಂಗೊಗೆಲ್ಲ ಒಳ್ಳೆ ಒಣಗಿದ ಹಪ್ಪಳ. 🙂

    1. {ಎಂಗೊಗೆಲ್ಲ ಒಳ್ಳೆ ಒಣಗಿದ ಹಪ್ಪಳ}
      – ಅಕ್ಕಕ್ಕು, ಎನಗುದೇ ಒಣಗಿದ ಹಪ್ಪಳವೇ ಆಯೆಕ್ಕು..!

  11. ಸೋಣೆ ತಿಂಗಳಿಲೊಂದು ಸಕಾಲಿಕ ಸಾರ್ಥಕ ಸುದೀರ್ಘ ಶುದ್ದಿ. ಅಂತರ್ಜಲ, ಇಂಗುಗುಂಡಿಗಳ ಬಗ್ಗೆ ಸವಿಸ್ತಾರ ಮಾಹಿತಿ ಓದಿ ತುಂಬ ಖುಷಿ ಆತು.
    ಪೈಸೆಗೆ ಬೇಕಾಗಿ ಜಾಗೆಲಿಪ್ಪ ಮರಂಗಳ ಎಲ್ಲ ಮಾರುವವಕ್ಕೆ ಇನ್ನಾದರೂ ಒಪ್ಪಬುದ್ಧಿ ಬರಲಿ.
    ಒಪ್ಪಣ್ಣನ ಆಶಯವ ನಿಜ ಮಾಡ್ಲೆ ನಾವೆಲ್ಲ ಕೈಜೋಡ್ಸುವ.
    ಒಂದೊಪ್ಪ ತುಂಬಾ ಲಾಯ್ಕಾಯಿದು.

  12. ಒಪ್ಪಣ್ಣ, ಲೇಖನ ಲಾಯ್ಕ ಇದ್ದು. ಊರಿಲ್ಲಿ ಮಳೆ ಕಮ್ಮಿ ಆದರೆ ಹೇಳು,ಇಂಗು ಗುಂಡಿಗೆ ಒಂದು ಚೆಂಬು ನೀರು ಹಾಕುಲೆ ಬತ್ತೆ. ನೀನು ದಾಕ್ಷಿಣ್ಯ ಮಾಡೆಡ. ಹನಿ ಹನಿ ಗೂಡಿದರೆ ಹಳ್ಳ ಆವುತ್ತಡ.

    1. {ಒಂದು ಚೆಂಬು ನೀರು ಹಾಕುಲೆ ಬತ್ತೆ. ನೀನು ದಾಕ್ಷಿಣ್ಯ ಮಾಡೆಡ}
      – ಒಂದು ಚೆಂಬು ನೀರು ಎಂತಕಾರು ಬೇಕಾರೆ ತೆಕ್ಕೊಂಡೋಪಲೂ ಬಪ್ಪಲಕ್ಕು, ನೀನುದೇ ಏನೂ ದಾಕ್ಷಿಣ್ಯಮಾಡೆಡ ಮಿನಿಯಾ… 😉

  13. Monne aaro helyondittiddavu oppanno… yenankudlannana tota besageli kaadu kempavtu neerilladde heli……..hange nodire shedigumme totada katheyu ashte….idakkella ondu parihara sikkekare ingugundi nammalliyu aayekku allado…..Olledathu oppanna heengondu vichara heliddu…..

  14. ಒಪ್ಪಣ್ಣ, ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಕೊಟ್ಟ ಲೇಖನ ನಿನ್ನದು. ನೀರಿಂಗಿಸುವ ಬಗ್ಗೆ ನಾವು ಇನ್ನುದೆ ಪ್ರಯತ್ನ ಮಾಡದ್ದೆ ಬರೇ ಬೋರಿಂದ ನೀರೆಳವದು ಮಾತ್ರಾ ಹೇಳಿ ಆದರೆ ಮುಂದೆ ಬಾವಿನೀರಿನ ರುಚಿ ನಮ್ಮ ಮಕ್ಕೋಗೆ ಗೊಂತೇ ಇರ! ಇಂಗುಗುಂಡಿಯ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದೆ. ಸರಿಯಾಗಿ ನೀರಿನ ಹರಿವಿನ ಇಂಗುಗುಂಡಿಗೊಕ್ಕೆ ತಿರುಗಿಸಿದರೆ ಒಂದು ವರ್ಷದೊಳ ಅಂತರ್ಜಲ ಮಟ್ಟ ಏರಿದ ಉದಾಹರಣೆ ಎಷ್ಟೂ ಇದ್ದು.. ಇಂಗುಗುಂಡಿಯ ಹಾಂಗೆಯೆ ಬೋರ್ ವೆಲ್ ನ ಅಂತರ್ಜಲದ ಸೆಲೆಗೆ ನೀರೂಡಿಸುವ ಪ್ರಯೋಗವ ವಾಷೆ ಪುರುಷೋತ್ತಮಣ್ಣ ಮಾಡಿದ್ದವು, ಹಲವಾರು ದಿಕ್ಕೆ ಯಶಸ್ವಿಯಾಗಿ ಬೋರ್‌ವೆಲ್ ನೀರಿನ ಮಟ್ಟಲ್ಲ್ಲಿ ಏರಿಕೆ ಆದ್ದದರ ಆನು ಕಂಡಿದೆ.. ಎಂಗಳ ತೋಟಲ್ಲಿಪ್ಪ ಬೋರ್ ವೆಲಿಂಗುದೆ ಈ ಪ್ರಯೋಗವ ಮಾಡಿ ನೋಡುವ ಅಂದಾಜಿಲಿದ್ದೆ. ಇಂಗುಗುಂಡಿಯ ಬಗ್ಗೆಯೂ ಕೂಡ. 🙂

    @ {ಅದು ಕಳುದು ಇರುವಾರ (ಪುನಾ) ನೀರು ಇದ್ದಡ!}

    ಇರುವಾರ ಹೇಳುವ ಪದವ ಎನ್ನ ಅಜ್ಜಿ ಹೇಳುದರ ಕೇಳಿತ್ತಿದ್ದೆ. ಮತ್ತೆ ನಿನ್ನ ಲೇಖನಲ್ಲಿಯೆ ಕಂಡದು…

    @ {ಪೋಡಿಗೆ ಇಂಗು ರಜಾ ಹಾಕಿರೆ ಲಾಯಿಕಪ್ಪದು – ಹೇಳಿದ ಅಜ್ಜಕಾನಬಾವ°.}
    ಗುಂಡಿಲಿ ಹಿಡೀವಷ್ಟೂ ಇಂಗು ಪೋಡಿಗೆ ಬಿದ್ದರೆ ಒಳ್ಳೆದು ಹೇಳಿಯ ಭಾವ ಹೇಳಿದ್ದು!? ಪಡ್ಚ ಆತು, ಪರಿಮ್ಮಳಲ್ಲಿ ಅವನ ಹತ್ತರೆ ಹೋತಿಕ್ಕಲೆಡಿಯ ಮತ್ತೆ. !! 😉

  15. ಒಪ್ಪಣ್ಣ ಭಾವಾ,
    ಇಂಗುಗುಂಡಿಯ ಲೇಖನ ತುಂಬಾ ಮಾಹಿತಿಪೂರ್ಣವಾಗಿದ್ದು. ನಮ್ಮ ಊರಿನ ಸುಮಾರು ತೋಟಂಗಳಲ್ಲಿ ಇನ್ನೂ ಕೆರೆಗೊ ತಕ್ಕ ಮಟ್ಟಿ೦ಗೆ ಒಳುಕ್ಕೊಂಡಿದವು. ಎಲ್ಲಾ ವಸ್ತುಗಳ ಹಾಂಗೆ ನೀರುದೆ ಬೇಡಿಕೆ ಮತ್ತೆ ಪೂರೈಕೆಯ ಅವಲಂಬಿಸಿಗೊಂದಿದ್ದು.ಇಲ್ಲಿ ವಿಶೇಷ ಹೇಳಿದರೆ ಎರಡು ಕೆಲಸಂಗಳನ್ನೂ ನಾವು ನಾವೇ ಮಾಡಿಗೊಳೆಕ್ಕು.ಪೇಟೆಗಳಲ್ಲಿ ಸರಕಾರ ಪೂರೈಕೆಯ ಕೆಲಸವ ಮಾಡೊದು.ಆದರೆ ಊರಿನ ಸ್ವಾವಲಂಬಿ ಕೃಷಿಕರು ಎರಡನ್ನೂ ತಾವೇ ಮಾಡಿಗೊಳೆಕ್ಕು.ನೀನು ಹೇಳಿದ ಹಾಂಗೆ,ನಮ್ಮ ಹಳಬರ ಕೃಷಿ,ಕಾಡು,ಗುಡ್ಡೆ,ಪರಿಸರ ಪ್ರೇಮ ಈ ಎಲ್ಲಾ ವಿಷಯಂಗಳೂ ಮಳೆಕೊಯ್ಲಿಂಗೆ ಸಹಕಾರಿಯಾಗಿತ್ತು,ಭೂಮಿಯ ಅಂತರ್ಜಲದ ಮಟ್ಟ ನಮ್ಮ ಬೇಡಿಕೆಯ ಮಟ್ಟ೦ದ ಕಮ್ಮಿಯೇ ಇದ್ದ ಕಾರಣ ಕೆರೆ ತೋಡುಗೋ ತುಮ್ಬಿಗೊಂಡಿತ್ತಿದ್ದವು.ಕೃಷಿ ಮುಂದುವರಿದ ಹಾಂಗೆ ಒಂದು ಹೊಡೆಲಿ ಕಾಡುಗಳ ಕಡುದಾತು,ಗೆದ್ದೆಕ್ರಷಿ ನಿಂದತ್ತು ,ಗುಡ್ದೆಗೋ ಬೋಳಾದವು.ಆದರೆ ನೀರಿನ ಅವಶ್ಯಕತೆ ಹೆಚ್ಚಾತು,ಕೆರೆಗೊ ಎಲ್ಲಾ ಖಾಲಿ ಆದವು ,ಮಂತ್ರಿಗಳ ತಲೆಗಳ ಹಾಂಗೆ.ನೀರಿನ ಮಟ್ಟ ಕಮ್ಮಿ ಆಗಿ ಅಪ್ಪಗ ಭೂಮಿ ಕೊರವಲೆ ಶುರು ಆತದಾ. ಉಕ್ಕಿ ಹರುಕ್ಕೊಂಡಿದ್ದ ಬೋರುವೆಲ್ಲುಗೋ ಈಗ ತೋಡಿ ತೋಡಿ ಇನ್ನು ಆಚ ಹೊಡೆ ಅಮೆರಿಕಾಕ್ಕೆ ಎತ್ತದ್ದರೆ ಸಾಕು ಹೇಳ್ತ ಪರಿಸ್ಥಿತಿ.(ಇನ್ನು ಏಳು ಸಾಗರ ದಾಂಟುಲೆ ವಿಮಾನ ಬೇಕಾಗ ಭಾವ,ಬೋರಿನ ಗುಂಡಿಗೆ ಹಾರಿರೆ ಎತ್ತುಗು !!). ಈ ಬೋರು ಹೇಳ್ತದೂ ಒಂದು ತಾತ್ಕಾಲಿಕ ಪರಿಹಾರಅಷ್ಟೇ.

    ನೀ ಹೇಳುತ್ತಾ ಹಾಂಗೆ ನಾವೆಲ್ಲಾ ನೀರಿನ ಹಿತಮಿತವಾಗಿ ಬಳಸೆಕ್ಕು,ನೀರಿನ ಮಟ್ಟವ ಒಳುಸೆಕ್ಕು.ಪೇಟೆಗಳಲ್ಲಿ ಇಪ್ಪ ತುಂಡು ಭೂಮಿಗಳಲ್ಲಿ ಇಂಗುಗುಂಡಿ ತೋಡಿರೆ ಮನೆ ಕಟ್ತೊದೆಲ್ಲಿ? ಹೇಳ್ತ ಪ್ರಶ್ನೆ ಬಕ್ಕು.ಆದರೆ ಬೆಂಗಳೂರಿನ ಹಾಂಗಿಪ್ಪ ಪೇಟೇಲಿ ತುಂಬಾ ಜೆನ (ನಮ್ಮೋರು ಇದ್ದವು) ಮಳೆಕೊಯ್ಲಿನ ಚೆಂದಕ್ಕೆ ಮಾಡುತ್ತಾ ಇದ್ದವು.
    ಮನಸ್ಸಿದ್ದರೆ ಮಾರ್ಗ ಅಲ್ಲದೋ? ಮಾರ್ಗ ಕಾಮ್ಬಲೆ ಹೀಂಗೆ ದೀಪದ ಬೆಣಚ್ಚಿ ತೋರುಸುತ್ತಾ ಇರು.

    1. ಮುಳಿಯಭಾವಾ!
      ನಿಂಗಳ ಒಪ್ಪ ವಿಶೇಷವಾಗಿ ಇರ್ತು, ಯೇವತೂ..
      { ಇನ್ನು ಏಳು ಸಾಗರ ದಾಂಟುಲೆ ವಿಮಾನ ಬೇಕಾಗ ಭಾವ,ಬೋರಿನ ಗುಂಡಿಗೆ ಹಾರಿರೆ ಎತ್ತುಗು !! }
      – ಹೇಂಗೆ ಎತ್ತುದು ಭಾವಾ – ಆಚ ಹೊಡೆಲಿ ಸಾಗರವೇ ಇಲ್ಲೆ, ಪೂರ ಪೆಟ್ರೋಲಿಯಂ ಎರ್ಕಿದ ನೀರು ಮಾಂತ್ರ ಇಪ್ಪದಲ್ಲದೋ?
      ಅದ, ಓ ಮೊನ್ನೆ ಕೆಪ್ಪಣ್ಣ ಒಂದು ಶುದ್ದಿ ಹೇಳಿತ್ತಿದ್ದ°..

  16. Nirkaje appachi helida hange Shre Padreya nela jala pustaka niru bhoomi ulisigomba bagye aasakti eddavella oodale bekaada pustaka adu Banglurinavakku aavuttu Bombayiyavaku aavuttu.Bare kaidambali chepi kolakke madiyondiddidda geddago(eega ella toota aayidu) bore haakiru niru sikkadda stiti bandadakke aaru kaarana ojndastu aalochane maaduvon.Shree Padreyavara hangiddavara saahasakke bare dooranda kai mugudare saala kai serusuvon nammottinge ondastu jenangokku adara manadattu madle prayanta paduvon.Oppannana Prayatnakke Jai.enu oppa kodle maraduhoto heli grahisedi haangella oppannana oppango baaki aaga.Oppannange Jaiyottinge ondu oppa oppa.

  17. ಈ ಲೇಖನಕ್ಕೆ ಪೂರಕವಾಗಿ ಎನ್ನದೊಂದು ಲೇಖನ ಬರದ್ದೆ. ಎಲ್ಲರೂ ಓದಿ ಅಭಿಪ್ರಾಯ ತಿಳುಸಿ. ಹಾಂಗೆಯೇ ಈ ಬಗ್ಗೆ ಚರ್ಚೆ ಆದರೆ ಇನ್ನುದೆ ಒಳ್ಳೆದು. ಬೇರೆ ಬೇರೆ ಕಡೆಂದ ಅನಿಸಿಕೆಗೊ ಬಂದಪ್ಪಗ ವಿಷಯ ಇನ್ನುದೆ ಮನದಟ್ಟು ಆವುತ್ತು ಅಲ್ಲದೋ?

  18. ಒಪ್ಪಣ್ಣನ ಹಾಂಗೇ ದೊಡ್ಡ ಬಾವನ ಸಾಮಾಜಿಕ ಕಳಕಳಿಯ ಮೆಚ್ಚೆಕಾದ್ದೆ. ಹಲಸಿನ ಹಣ್ಣು ಜೇನದ ಒಟ್ಟಿಂಗೆ, ಅಂತರ್ಜಲ, ನೀರಿಂಗಿಸುವ ವಿಚಾರಂಗಳ ತಿಳುಸಿ ಕೊಟ್ಟದು ಮನಸ್ಸಿಂಗೆ ಒಳ್ಳೆ ಇಂಗಿತ್ತು. ಮಳೆಕೊಯಿಲು, ನೀರು ಒಳುಸುವುದರ ಬಗ್ಗೆ ಪಡ್ರೆ ಅಣ್ಣನ ಮಾತುಗಳ, ಅವರ ಸ್ಲೈಡು ಪ್ರದರ್ಶನದ ಒಟ್ಟಿಂಗೆ ಕೇಳೆಕು. ಆ ವಿಚಾರಂಗಳ ನಮ್ಮ ಜಾಗೆಲಿ, ಮನೆಲಿ ಅಳವಡಿಸೆಳೆಕು. ಅವು ಹೇಳ್ತ ಕೆಲವು ವಿಚಾರಂಗಳ ನೋಡುವಗ/ ಆಲೋಚನೆ ಮಾಡುವಗ, ನಮ್ಮ ಈಗಾಣ ಅವಸ್ಥೆ,ಅವ್ಯವಸ್ಥೆಗಳ ಕಂಡಪ್ಪಗ ಬೇಜಾರು ಆವ್ತು. ನಾವು ನೀರಿಂಗಿಸಿದರೆ, ನಮ್ಮ ಬೋರ್ ವೆಲ್ಲಿಂಗೆ ಅದು ಸಿಕ್ಕುಗೋ ಹೇಳಿ ಕೇಳ್ತವಕ್ಕೆ, ನಾವು ನೀರಿಂಗುಸಿದ್ದು, ನವಗೆ ಮಾಂತ್ರ ಸಿಕ್ಕೆಕು ಹೇಳ್ತವಕ್ಕೆ, ನಾವೆಂತರ ಹೇಳಲೆ ಎಡಿಗು ? ಇಡಿ ಭೂಮಿಯ ವ್ಯವಸ್ಥೆ, ಅದರ ಕಾಪಾಡುತ್ತ ಹೊಣೆ ನಮ್ಮೆಲ್ಲರದ್ದು ಹೇಳ್ತ ಭಾವನೆ ಎಲ್ಲೋರಿಂಗು ಬಂದರೆ ಮಾಂತ್ರ ಲೋಕ ಉದ್ದಾರ ಅಕ್ಕಷ್ಟೆ.

    1. ಅಪ್ಪು ಮಾವ°..
      ನಾವು ಇಂಗುಸಿದ ನೀರು ನವಗೆ ಸಿಕ್ಕುತ್ತಿಲ್ಲೆ, ಆರಾರಿಂಗೆ ಹೇಳ್ತ ಯೋಚನೆ ಬಂದೇ ಈ ಒಯಿವಾಟು ಕೆಟ್ಟದು! 🙁

      ನೋಡೊ°, ಕ್ರಮೇಣ ಆದರೂ ಜೆನಂಗೊಕ್ಕೆ ಮತ್ತೊಂದರಿ ನೆಂಪಕ್ಕು, ’ವಸುಧೈವ ಕುಟುಂಬಕಂ’ ಹೇಳಿಗೊಂಡು!
      ಅಲ್ಲದೋ ಮಾವ? ಎಂತ ಹೇಳ್ತಿ?

      1. ಪೇಟೇಲಿ ಮಾಡಿದ್ದು ನಾವು ಹಳ್ಳಿಲಿ ಮಾಡಿದರೆ ನಾವು ಪೇಟೆಯೋರಿಂದ ಕಮ್ಮಿ ಅಲ್ಲ ಹೆಳುತ್ತ ಮನೋಭಾವ,ಎಂತ ಮಾಡುದು,ಹಳ್ಳಿ ಹೇಳಿ ತಾಪು ಮಾಡುಲಾಗ ಹೇಳಿ ಗ್ರೆಶುದೋ ಏನೋ?ಅಂತೂ ನಾವು ಕುಡಿವಲೆ ಕೂಡಾ ನೀರಿಲ್ಲೇ ಹೇಳುವಲ್ಲಿಗೆ ಬತ್ತಾ ಇದ್ದು

  19. ಒಪ್ಪಣ್ಣ,

    ಲೇಖನ ಲಾಇಕ ಆಯಿದು. ಸರಿಯಾದ ಸಮಯಕ್ಕೇ ಬಯಿಂದು.

    ಆದರೆ ನಿಂಗ ಹೇಳಿದ ಹೆಚ್ಚಿನ ವಿಷಯಂಗೊ ಬೈಲಿಂಗೆ ಮಾತ್ರ ಅನ್ವಯ ಅಪ್ಪಂಥದ್ದು. ಹೇಳಿರೆ ನಮ್ಮ ಬೆಂಗೂರಿನಂಥ ಜಾಗೆಗೊಕ್ಕೆ. ಊರಿಲಿದೆ ದೊಡ್ಡ ದೊಡ್ಡ ಬೈಲಿಲಿ ಇದು ಅನ್ವಯ ಅಕ್ಕು. ಆದರೆ ಒಳುದ ಬೆಟ್ಟ ಗುಡ್ಡೆಂಗೊ ಇಪ್ಪ ಕಡೆ ಬೇರೇ ರೀತಿಯ ಕ್ರಮಂಗೊ ಬೇಕಾವುತ್ತು. ಶ್ರೀ ಪಡ್ರೆ ಬರದ ನೆಲ ಜಲ ಪುಸ್ತಕಲ್ಲಿ ಈ ಬಗ್ಗೆ ವಿವರಂಗೊ ಇದ್ದು.

    1. ಅಪ್ಪಚ್ಚಿ, ಈ ಲೇಖನಕ್ಕೆ ಪೂರಕವಾಗಿ ನಿಂಗೊ ಬರದ ಶುದ್ದಿಯೂ ಲಾಇಕ ಆಯಿದು!
      ತುಂಬಾ ಮಾಹಿತಿ ತುಂಬುಸಿದ್ದಿ ಅದರ್ಲಿ.

      ಇನ್ನುದೇ ಶುದ್ದಿಗೊ ಬರಳಿ.

  20. ಬೈಲಿಂಗೆ ತೋಡು, ಕೆರೆಗಳ ಚಿತ್ರವನ್ನೂ ಕೂಡ ಆನು ಇಂಟರ್ನೆಟ್ಟಿಂದ ಕಳಿಸೆಕ್ಕಾದ ಸ್ಥಿತಿ ನೋಡಿ ಬೇಜಾರಾತು. ಮಳೆ ಹೀಂಗೇ ಕಮ್ಮಿ ಆದರೆ ತುಂಬಾ ಕಷ್ಟ ಇದ್ದು.
    ಬಳ್ಳಾರಿಲ್ಲಿ ರೆಡ್ಡಿಗೊ ಇಂಗು ಗುಂಡಿ ಮಾಡಿದ್ದವಡ, ಆದರೆ ಅಲ್ಲಿ ಮಳೆಯೇ ಬತ್ತಿಲ್ಲಡ.

    1. ಸರಿಯಾದ ಮಾತು ಹೇಳಿದೆ ಪೆರ್ಲದಣ್ಣ.
      ತೋಡಿನ ಪಟ ಇಂಟರುನೆಟ್ಟಿಲೇ ಸಿಕ್ಕೆಕ್ಕಷ್ಟೆ, ಹಳೆಕಾಲಲ್ಲಿ ತೆಗದ್ದು.

      ಈಗ ತೆಗವಲೆ ಬರ್ಕತ್ತಿನ ತೋಡೇ ಇಲ್ಲೆ.
      – ಒಂದೋ ತೋಡಿನಾಂಗೆ ಕಾಂಬ ರೋಡು, ಅಲ್ಲದ್ರೆ ರೋಡಿನಾಂಗೆ ಕಾಂಬ ತೋಡು!

  21. ಅಂತರ್ಜಲ ಮಾಂತ ಬೆಂಗಳೂರುಡು ಮಲ್ಪೆರುಗೆ. ದಾಯೆ ಪೋಡಿಪಾರ್? ಪೇಪರುಡ್ ಕೋಡೆ ಬತ್ತಿತ್ತಿಂಡು “ಅಂತರ್ಜಲ ತಾಣವನ್ನು ಉದ್ಘಾಟಿಸಿದರು” ಪಂಡ್

        1. ಓ ಬಟ್ಯ, ಇತ್ತೆ ಪೂತ್ತೂರ್ಡ್‍ಲ ಉಂಡು ಅಂತರ್ಜಲ ತಾಣ, ಪೇಂಟೇಡ್ ಸುಮಾರ್ ಉಂಡೂ. ನಮ್ಮ ಬೈಲ್‍ಡ್ ಯಾನ್ ಒಂಜಿ ಅಂತರ್ಜಲ (!) ತಾಣ ಪಾಡೊಡಾಂದ್ ಉಲ್ಲೆ, ಏಂಚ? ಆವಾ? 😉

          1. ಓ ಅಣ್ಣೆರೆ, ಈರನ ನಗರೊದು ಒ೦ಜಿ ಅ೦ತರ್ಜಲ ಉ೦ಡು೦ದು ಕೇ೦ನ್ದೆ… ಎ೦ಚ ಪಾಕ ನೀರು ಉ೦ಡಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×