Oppanna.com

ಶಿಷ್ಯರಿಂಗೆ ಶುಭಾಶ್ರಯ, ಸಮಾಜಕ್ಕೆ ಶುಭಾಶಯ

ಬರದೋರು :   ಒಪ್ಪಣ್ಣ    on   04/07/2014    6 ಒಪ್ಪಂಗೊ

ಸುಳ್ಯದ ಕೇಯಸ್ ಭಟ್ರು ಹೇದರೆ ಇಡೀ ಮುಳ್ಳೇರಿಯ ಮಂಡಲಕ್ಕೇ ಅರಡಿಗು.
ಶ್ರೀಮಠದ ಹಲವು ಕಾರ್ಯಂಗಳಲ್ಲಿ ತೊಡಗಿಂಡು ಎಡೆಹೊತ್ತಿಲಿ ಪುರುಸೊತ್ತಿಲಿ ಸುಳ್ಯದ ಆಪೀಸಿಲಿಯೂ ಇರ್ತವು.
ಕಾಂಬಲೆ ನಮ್ಮ ಸುಭಗಣ್ಣನ ಹಾಂಗೇ; ಆದರೆ ಸುಭಗಣ್ಣಂಗೆ ಎಲೆತಿಂಬಗ ಕುಣಿಯ (ಮಾಷ್ಟ್ರುಮಾವನ ಎಲೆತೊಟ್ಟೆಂದ) ಆಯೇಕು, ಕೇಯಸ್ಸು ಭಟ್ರಿಂಗೆ ಬೇಜವಾಡ ಆಯೇಕು. ಅಷ್ಟೇ ವಿತ್ಯಾಸ. ಇರಳಿ. ಮೊನ್ನೆ ಹೊತ್ತೋಪಗ ನಾವು ಹಾಲಿನ ಡೈರಿಂದ ಒಪಾಸು ಬಪ್ಪದ್ದೇ,  ಸಂಸ್ಕೃತ ಅರಡಿತ್ತ ಮಮ್ಮದೆಯ ಮನೆ ಕರೇಲಿ ಆಗಿಂಡು ಗುಡ್ಡೆ ಇಳ್ಕೊಂಡಿತ್ತಿದ್ದೆ. ಅಷ್ಟಪ್ಪದ್ದೇ ಹಿಂದಂದಾಗಿ ಬೈಕ್ಕು ಬಂತು; ಹತ್ತರೆ ಬಂದು ನಿಂದತ್ತು.
ಬತ್ತೆಯೋ ಒಪ್ಪಣ್ಣೋ – ಕೇಟವು. ತಲಗೆ ಮುಟ್ಟಾಳೆ ಇದ್ದಿದ್ದ ಕಾರಣ ಅಂದಾಜಿ ಆತಿಲ್ಲೆ – ಸ್ವರಲ್ಲಿ ಪಕ್ಕನೆ ಸುಭಗಣ್ಣನೋದು ಆತು, ಮತ್ತೆ ನೋಡಿರೆ ಕೇಯೆಸ್ ಭಟ್ರು!
ದೊಡ್ಡಭಾವನಲ್ಲಿಗೆ ಕಶಿಮಾಯಿನಣ್ಣು ಕೊಡ್ಳೆ ಹೋಪದಾಡ. ಬೈಕ್ಕಿನ ಕರಿ ಪೆಟ್ಟಿಗೆ ಕೆಳಾಚಿಕೆ ಬೆತ್ತದ ಹೆಡಗೆಯಷ್ಟಕೆ ಇಪ್ಪ ಗೋಣಿಚೀಲವೂ ಇದ್ದತ್ತು. ಬೈಕ್ಕಿಲಿ ಕೂದುಗೊಂಡೆ, ಅಲ್ಲಿಂದಲೇ ನಾಕು ಮಾವಿನಾಯಿ ಹಾರ್ಸುದೋ ನೋಡಿದೆ.
ಹೇಂಗೂ ನಾಳೆ ದೊಡ್ಡಳಿಯ° ಕೊಡದ್ದೆ ಒಳಿಯ°, ಹೇದು ಸುಮ್ಮನಾದೆ. ಇರಳಿ. ಕೇಯೆಸ್ ಭಟ್ರು ಇಂದು ದೊಡ್ಡಭಾವನಲ್ಲಿ ಬೈಕ್ಕು ಮಡಗಿ, ಅಲ್ಲಿಂದ ಎಡಪ್ಪಾಡಿ ಬಾವನೊಟ್ಟಿಂಗೆ ಬಡಗಲಾಗಿ ಹೋಪದಾಡ.
ಹಾಂಗೆ ಬಪ್ಪಗ ಕಾಲಿ ಕೈ ಬಪ್ಪದಕ್ಕೆ ಮನೆಂದ ಮಾವಿನಕಾಯಿ ಹಿಡ್ಕೊಂಡದಾಡ.ಎಡಪ್ಪಾಡಿ ಬಾವನೊಟ್ಟಿಂಗೆ? ಬಡಗಲಾಗಿ? ಎತ್ಲಾಗಿಂಗೆ ಅಪ್ಪಾ – ಕೇಳಿಹೋತು. ಹೋಪೋರ ಎತ್ಲಾಗಿ ಕೇಳುಲಾಗಾಡ.
ಹಾಂಗೆ, ಅಲ್ಲಿಂದ ಬಂದ ಮತ್ತೆ ನಿನ್ನೆ ಎಡಪ್ಪಾಡಿ ಭಾವನತ್ರೆ ಮಾತಾಡಿ ವಿವರ ತಿಳ್ಕೊಂಡೆ.

~

ನಿನ್ನೆ ಹೊತ್ತೋಪಗ ಚಾಯ ಕುಡಿಯಲೆ ಎಡಪ್ಪಾಡಿ ಬಾವನಲ್ಲಿಗೆ ಹೋದ್ಸು. ಅತ್ತೆ ಕೊಟ್ಟ ಏಳುಕುಡ್ತೆಯ ಸ್ವೀಟುದೇ, ಕರುಕುರು ಮುರ್ಕುದೇ ತಿಂದೊಂಡು ಚಾಯ ಕಾಲಿ ಆತು. ಚಾಯದೊಟ್ಟಿಂಗೇ ಶುಭಾಶ್ರಯದ ಶುದ್ದಿಯೂ ಮಾತಾಡಿ ಆತು.

~

ಓ ಅಲ್ಲಿ, ಸಾಗರ ತಾಲೂಕಿಲಿ ಹುಲ್ಕೋಡು ಹೇಳ್ತ ಊರು ಇದ್ದಾಡ. ಅಲ್ಲಿ ಏಳೆಂಟು ಬಡ ಕುಟುಂಬಂಗೊ. ಪೈಶೆ ಕಮ್ಮಿ ಆದ ಬಡತನ ಇತ್ತು, ಆದರೆ ಶ್ರೀಪೀಠದ ಮೇಗೆ ಅಚಲ ಭಕ್ತಿ ಇಪ್ಪ ಶ್ರೀಮಂತಿಕೆ ತುಂಬಿದ್ದತ್ತು.
ಅವರ ಮೇಗೆ ಪ್ರಕೃತಿಮಾತೆಗೆ ಎಂತ ಅನುಸಿತ್ತೋ ಗೊಂತಿಲ್ಲೆ, ಉಗ್ರರೂಪವ ತೋರ್ಸಿದ್ದತ್ತಾಡ.
ಒಂದುದಿನ ನೋಡಿಂಡು ಇದ್ದ ಹಾಂಗೇ – ಮನೆ ಕಟ್ಟಿದ ಭೂಮಿಯೇ ಧಸಕ್ಕನೆ ಕುಸ್ಕಿತ್ತು! ಅರ್ಧಮನೆ ಜಗ್ಗಿತ್ತು. ಪಾಯ, ಗೋಡೆ, ಮಾಡು – ಎಲ್ಲವುದೇ ಜಗ್ಗಿತ್ತು. ಒಟ್ಟಿಂಗೆ ಆ ಮನೆಯ ಜೆನರ ಆತ್ಮವಿಶ್ವಾಸವೂ.
ನೆಲ ಅರೆವಾಶೆ ಜಗ್ಗಿ ಕುಸುದ ಮನೆಲಿ ವಾಸ ಮಾಡುದು ಹೇಂಗೆ? ಯೇವ ಧೈರ್ಯಲ್ಲಿ? ಒಳುದ ಅರ್ಧ ಯೇವಗ ಜಗ್ಗುತ್ತು ಹೇಳ್ತ ನಿಘಂಟಿಲ್ಲೆ. ಮಜ್ಜಾನ ಉಂಡೊಂಡಿಪ್ಪಗ ಜಗ್ಗಿರೆ? ಒರಗಿಂಡಿಪ್ಪಗ ಜಗ್ಗಿರೆ? ಪೂಜೆ ಮಾಡಿಂಡಿಪ್ಪಾಗ ಜಗ್ಗಿರೆ?!
ಪ್ರಕೃತಿಗೆ ಅದರದ್ದೇ ಆದ ನಿಯಮಂಗೊ. ಅದು ನಮ್ಮ ನಿಯಮಂಗೊಕ್ಕೆ ಕೇಳ್ತಿಲ್ಲೆ ಇದಾ!

ಒಂದು ಮನೆ ಕಟ್ಟುದು ಹೇದರೆ ಒಂದು ತಲೆಮಾರಿನ ಕತೆ.
ಅದರ್ಲಿಯೂ, ಬಡಪ್ಪತ್ತಿನ ಕುಟುಂಬಂಗೊ ಇನ್ನೊಂದು ಮನೆ ಕಟ್ಟುದು ಹೇದರೆ – ಇದ್ದೋ?! ಇಲ್ಲೆಪ್ಪ.
ಆದರೆ, ವಾಸಕ್ಕೆಂತ ಮಾಡುಸ್ಸು?

ಹಗಲೊತ್ತು ಆದರೂ ಓಡಿ ಬದ್ಕಿಂಬಲಕ್ಕು, ಇರುಳಾಣ ಹೊತ್ತು ಎಂತ ಮಾಡುದು? ಒರಗಿಂಡಿಪ್ಪಾಗ ಕುಸ್ಕಿರೆ ಜೀವಕ್ಕೇ ಅಪಾಯ ಇಲ್ಲೆಯೋ!?
ಇರುಳಾಣ ಹೊತ್ತು ದೇವರೇ ಕಾಪಾಡಲಿ ಹೇದು ಊರ ದೇವಸ್ಥಾನದ ಜೆಗಿಲಿಲಿ ಕಾಲಹರಣ ಮಾಡಿಂಡು, ಜೀವನ ನೂಕಿಂಡು ಇದ್ದಿದ್ದವಾಡ. ಪಾಪ!

ಏನೂ ತಪ್ಪು ಮಾಡದ್ದರೂ ಬಂಙ ಬಪ್ಪ ಪರಿಸ್ಥಿತಿ. ಸ್ವಂತ ಮನೆ ಇದ್ದರೂ, ಅಲ್ಲಿ ಬದ್ಕಲೆಡಿಯದ್ದ ಪರಿಸ್ಥಿತಿ! ದೇವಸ್ಥಾನವೇ ಮನೆ. ದೇವರೇ ಭದ್ರತೆ!!

~

ಆಗಲೇ ಹೇಳಿದಾಂಗೆ, ಕೈಲಿ ಪೈಶೆ ಇಲ್ಲದ್ದೆ ಇಕ್ಕು, ಆದರೆ ಹೃದಯಲ್ಲಿ ಶ್ರೀಪೀಠದ ಭಕ್ತಿ ಹೇಳ್ತ ಶ್ರೀಮಂತಿಕೆ ಇದ್ದತ್ತು. ಹಾಂಗಾಗಿ, ಇಂಥಾ ಭಯಾನಕ ಸಂದರ್ಭಲ್ಲಿಯೂ ಆ ಮನೆಗಳ ಸದಸ್ಯರ ಕೈಹಿಡುದು ಒಳಿಶಿದ್ದು ನಮ್ಮ ಸಮಾಜದ ಶ್ರೀಪೀಠವೇ – ಹೇಳುವಾಗ, ಎಡಪ್ಪಾಡಿ ಬಾವನ ಮಾತಿಲಿ ಅಭಿಮಾನ ಕಂಡುಗೊಂಡಿದ್ದತ್ತು.

~
ಆ ಏಳೆಂಟು ಕುಟುಂಬಕ್ಕೆ ಹೀಂಗಾಗಿ ಬಂಙಲ್ಲಿ ಇದ್ದವು ಹೇಳ್ತ ಸಂಗತಿ ಗೊಂತಾತು ನಮ್ಮ ಗುರುಪೀಠಕ್ಕೆ.
ಶಿಷ್ಯಂದ್ರಿಂಗೆ ಒರಗಲೆ ಸಮಗಟ್ಟು ಒರಕ್ಕಿಲ್ಲೆ ಹೇದರೆ ಗುರುಗೊಕ್ಕೆ ಒರಕ್ಕು ಬಕ್ಕೋ? ಮಕ್ಕೊಗೆ ಆರೋಗ್ಯ ಇಲ್ಲದ್ದರೆ ಅಮ್ಮಂದ್ರಿಂಗೆ ನೆಮ್ಮದಿ ಇರ್ತೋ? ಇಲ್ಲೆ! ಹಾಂಗೇ, ಈ ಕುಟುಂಬಂಗೊಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಡೇಕು, ಅವು ನೆಮ್ಮದಿಲಿ ನೆಲೆ ಅಪ್ಪ ಹಾಂಗಾಯೇಕು – ಹೇಳ್ತ ಆಲೋಚನೆ ನಮ್ಮ ಗುರುಗೊಕ್ಕೆ ಬಂತಾಡ. ಅದಕ್ಕೆ ಬೇಕಾದ ವೆವಸ್ತೆಗೊ, ಏರ್ಪಾಡುಗೊ ಎಂತೆಲ್ಲ ಆಯೇಕೋ, ಅದೆಲ್ಲವನ್ನೂ ಬೇಗಬೇಗಲ್ಲೇ ಒದಗುಸಿ ಕೊಡ್ತ ಹಾಂಗೆ ಶ್ರೀರಾಮನ ಅನುಗ್ರವನ್ನೂ ಕೊಡುಸಿದವಾಡ.

ಮುಂದೆ? ಎಲ್ಲವೂ ರಾಮಬಾಣದ ಹಾಂಗೆ ಕೆಲಸ ಸಾಗಿತ್ತಾಡ.
ಮೊದಲಾಗಿ, ಕುಸ್ಕಿ ಹೋದ ಜಾಗೆಗೆ ಬದಲಾಗಿ ಹೊಸ ಭದ್ರವಾದ ಜಾಗೆಯ ಸರ್ಕಾರಂದ ತೆಗಶಿ ಕೊಡ್ತ ಕಾರ್ಯ. ಅದರಂತೆ, ರಜ್ಜ ದೂರಲ್ಲಿ ಉಚ್ಛಸ್ಥಾನಲ್ಲಿ ಒಳ್ಳೆ ಯೋಗ್ಯವಾದ ಪ್ರಶಸ್ತವಾದ ಜಾಗೆ ಸಿಕ್ಕುವ ಹಾಂಗಾತಾಡ. ಎಲ್ಲ ಕುಟುಂಬಕ್ಕೂ ಎಷ್ಟೋ ಗುಂಟೆ ಜಾಗೆ, ನೆಮ್ಮದಿಲಿ ಬದ್ಕುತ್ತಷ್ಟು.

ಜಾಗೆ ಸಿಕ್ಕಿದ ಮತ್ತೆ ಇನ್ನೆಂತರ?
ಮನೆ ಕಟ್ಟೆಕ್ಕು.

ಸರ್ಕಾರಂದ ಮನೆ ಕಟ್ಟಿಕೊಡ್ತದು ನಿಂಗೊಗೆ ಅರಡಿಗು. ಹೆಸರಿಂಗೆ ತಕ್ಕ ಒಂದು ಮನೆ.
ಒಂದೂವರೆ ಕೋಣೆ ಇರ್ಸು. ಓರೆಕೋರೆ ಗೋಡೆ. ಮಾಡು ಇಂದು ಉದುರ್ತೋ ನಾಳೆ ಉದುರ್ತೋ ಹೇಳ್ತ ಹಾಂಗೆ ಇಪ್ಪದು. ಮಳೆಗಾಲ ನೀರು ಸೋರುಗು, ಬೇಸಗೆಲಿ ಬೆಶಿಲು ಇಣ್ಕುಗು. ಅಂತೇ – ಒಂದು ಮನೆ ಹೇಳ್ತ ಲೆಕ್ಕಲ್ಲಿ ಕೊಡುಗಷ್ಟೆ.

ಶ್ರೀಗುರುಆಶೀರ್ವಾದಂದ ತುಂಬಿದ ಹವ್ಯಕ ಪರಂಪರೆಯ ಮನೆ
ಶ್ರೀಗುರುಆಶೀರ್ವಾದಂದ ತುಂಬಿದ ಹವ್ಯಕ ಪರಂಪರೆಯ ಮನೆ

ಆದರೆ, ಗುರುಗೊ ಮನೆ ಕಟ್ಟುಸುವಗ ಹೇಂಗಿಕ್ಕು?

ಆಯ ಅಡಿಪಾಯಂದ ಹಿಡುದು, ಪಂಚಾಂಗ, ಗೋಡೆ, ಉತ್ತರ, ರೀಪು ಪಕ್ಕಾಸು, ಮಾಳಿಗೆ, ತೇರೇಸು – ಎಲ್ಲವುದೇ ಅಚ್ಚುಕಟ್ಟು. ಪ್ರತಿಯೊಂದಕ್ಕೂ ಶ್ರೇಷ್ಠ ದರ್ಜೆಯ ವಸ್ತುಗೊ. ಎದುರೊಂದು ಮಾಡಿಳಿಶಿ, ಮೇಗೆ ಒಂದು ಮಾಳಿಗೆ ಆಗಿ, ಭವ್ಯತೆ, ಗಾಂಭೀರ್ಯತೆ, ನೆಮ್ಮದಿ – ಎಲ್ಲವೂ ಸೇರಿದ ಭವ್ಯ ಮನೆ!!
ಆ ಮನೆ ಕಳಕ್ಕೊಂಡ ಕುಟುಂಬಂಗೊಕ್ಕೆ “ಇದೆಲ್ಲ ನಿಜವಾ!?” ಹೇದು ಆಶ್ಚರ್ಯ ಮಾಡಿಗೊಳ್ತಷ್ಟು ಚೆಂದಕೆ!

ಚೆಪ್ಪುಡಿ ಮನೆ ಕಟ್ಟಿ ಕೊಡುದು, ಅದರ ಪಟ ತೆಗಶಿ ಮತ್ತಾಣ ಸರ್ತಿ ಓಟು ಕೇಳುದು ಕೆಲವು ರಾಜಕೀಯದೋರಿಂಗೆ ಅಕ್ಕಷ್ಟೆ. ಆದರೆ ಗುರುಪೀಠ ಮಾಡಿ ಕೊಡುವಗ ಸ್ವಂತ ಮಕ್ಕೊಗೆ ಅಬ್ಬೆ-ಅಪ್ಪ ಹೇಂಗೆ ಅನುಗ್ರಹ ಮಾಡ್ತವೋ ಹಾಂಗೆ ಇರ್ತು – ಹೇದು ಎಡಪ್ಪಾಡಿ ಬಾವನ ಅಭಿಪ್ರಾಯ.

~

ಎಲ್ಲಾ ಎಂಟು ಮನೆಗಳನ್ನೂ ಅನುರೂಪವಾಗಿ, ಸರ್ವಾಂಗ ಸುಂದರವಾಗಿ ಮಾಡುಸಿ, ಮೊನ್ನೆ ಆಯಾ ಯಜಮಾನರಿಂಗೆ ಅದರ ಹಸ್ತಾಂತರ ಮಾಡ್ತ ಕಾರ್ಯಕ್ರಮ ನೆಡೆಶಿದವಾಡ.

ಸರ್ಕಾರದ ಜಾಗೆ ಆ ಫಲಾನುಭವಿಗಳ ಹೆಸರಿಂಗೆ ಆತು.
ಚೆಂದದ ಮನೆ ಆ ಫಲಾನುಭವಿಗಳ ಹೆಸರಿಂಗೆ ಆತು.
ಅದಕ್ಕೆ ಭೇಕಾದ ಸೌಕರ್ಯಂಗೊ, ಸಲಕರಣೆಗೊ ಆಯಾ ಫಲಾನುಭವಿಗಳ ಹೆಸರಿಂಗೆ ಆತು.
ಅಂಬಗ ಇದರ್ಲಿ ಮಠಕ್ಕೆ ಎಂತ ಇದ್ದು?“ಸಾರ್ಥಕತೆ”.

ಸಮಾಜಂದಾಗಿ ಮಠ ಇಪ್ಪದು. ಸಮಾಜಕ್ಕಾಗಿ ಮಠ ಇಪ್ಪದು – ಹೇಳ್ತ ಸತ್ಯವ ನಮ್ಮ ಗುರುಗೊ ಮತ್ತೊಂದರಿ ಸಾಬೀತುಮಾಡಿ ಲೋಕಕ್ಕೇ ತೋರ್ಸಿದವಾಡ. ಯೇವ ಕುಟುಂಬಂಗೊಕ್ಕೆ ನೆಮ್ಮದಿ ಇದ್ದತ್ತಿಲ್ಲೆಯೋ, ಮನೆ ಕಳಕ್ಕೊಂಡು ಅಧೀರರಾಗಿತ್ತಿದ್ದವೋ, ನಿಂದ ನೆಲವೇ ಕೈಚೆಲ್ಲಿತ್ತೋ, ಅಂತಾ ಮಕ್ಕೊಗೆ ಅಪೂರ್ವ ಮನೆಗಳ ಯೋಗಭಾಗ್ಯ ಒದಗುಸಿ ಕೊಟ್ಟ ಗುರುಗೊ – ನಮ್ಮ ಗುರುಗೊ ಹೇದು ಅಭಿಮಾನಂದ ಹೇಳಿದ್ದು ಎಡಪ್ಪಾಡಿ ಬಾವ°.
ಈ ಅಭೂತಪೂರ್ವ ಪುಣ್ಯಕಾರ್ಯ – ಲೋಕಾರ್ಪಣೆ ಕಾರ್ಯಕ್ರಮಕ್ಕೇ ಎಡಪ್ಪಾಡಿ ಬಾವನೂ, ಕೇಯೆಸ್ ಭಟ್ರೂ ಹೋದ್ದಡ. ಎಲ್ಲಾ ಊರಿಂದ ಹಲವೂ ಜೆನಂಗೊ ಬಂದು ಸಮಾಜಸೇವೆಯ ಕಂಡು ಮನತುಂಬಿದ್ದವಾಡ.

~

ಸಮಾಜ ಹೇದರೆ ದೊಡಾ ಬೆದುರಿನ ಹಾಂಗೆ ಅಡ. ಹತ್ತು ಜೆನ ಸೇರಿ ಎತ್ತಿ ಹಿಡಿಯೆಕ್ಕು. ಅಷ್ಟಪ್ಪಗ ಒಬ್ಬ-ಇಬ್ರಿಂಗೆ ನಿಂಬ ಶೆಗ್ತಿ ಇಲ್ಲದ್ದರೆ – ಅದೇ ಬೆದುರಿಲಿ ನೇತುಗೊಂಬಲಾವುತ್ತು. ಅವನ ಕಾಲಡಿ ಗಟ್ಟಿ ಅಪ್ಪಗ ಆ ಬೆದುರಿನ ಎತ್ತಿ ಹಿಡುದರೆ ಅಷ್ಟಪ್ಪಗ ಕಾಲುಬಚ್ಚಿದೋನು ನೇತುಗೊಳ್ತ°.
ಲೋಕ ಹೀಂಗಿದ್ದರೇ ನೆಡಗಷ್ಟೇ – ಹೇದು ಎಡಪ್ಪಾಡಿ ಬಾವ° ಹೇಳುವಾಗ ಚಾಯ ಮುಗುದೇ ಹೋತು.

~

ಮಠ ಹೇದರೆ ಹೀಂಗಿರೆಕ್ಕು – ಹೇಳ್ತ ಸತ್ಯವ, ಮೇಲ್ಪಂಕ್ತಿಯ ಒಳುದ ಎಲ್ಲೋರಿಂಗೂ ತೋರ್ಸಿ ಕೊಟ್ಟ ಹಿರಿಮೆ ನಮ್ಮ ಮಠದ್ದು. ಸ್ವಹಿತಕ್ಕಾಗಿ ಆರೋ ನಾಕುಜೆನ ಮಠದ ಕಾರ್ಯಂಗಳ ದೂಷಣೆ ಮಾಡ್ತರೆ ನಾವು ಧ್ವನಿ ಸೇರ್ಸುದಲ್ಲ, ಬದಲಾಗಿ ಆ ಅರಡಿಯದ್ದೋರಿಂಗೆ ವಿಷಯ ಮುಟ್ಟುಸೇಕು. ಮಠದ ಕಾಳಜಿ, ಸಮಾಜದ ಬಗ್ಗೆ ಇಪ್ಪ ಪ್ರೀತಿ, ಎಲ್ಲೋರಿಂಗೂ ನೆಮ್ಮದಿ ಕೊಡ್ತ ತಾಳ್ಮೆ- ಇವುಗಳ ತಿಳ್ಕೊಳೇಕು. ಧನಾತ್ಮಕ ಕಾರ್ಯಂಗಳ ಎಲ್ಲ ಶಿಷ್ಯರಿಂಗೆ ಎತ್ತುಸೇಕು.
ಹಾಂಗಿದ್ದರೆ ಮಾಂತ್ರ ನಾವು ಮಾನವರಾವುತ್ತಷ್ಟೆ – ಹೇದು ಅನುಸಿತ್ತು.

ಶುಭಾಶ್ರಯ ಹೇಳ್ತ ಯೋಜನೆ ನಮ್ಮ ಇಡೀ ಸಮಾಜಕ್ಕೆ ಶುಭ ಕೊಡುವ ಒಂದು ಆಶ್ರಯ. ಅದಕ್ಕೆ ನಾವು ಪ್ರೋತ್ಸಾಹ ಮಾಡುವೊ°, ಒಳಿಶಿ ಬೆಳೆಶುವೊ° – ಹೇಳ್ತದು ಬೈಲಿನ ಆಶಯ.

ಅಲ್ಲದೋ?

~

ಒಂದೊಪ್ಪ: ಗುರುಗೊ ಮನೆ ಕಟ್ಟಿಕೊಟ್ಟವು, ಶಿಷ್ಯಂದ್ರು ಮಠ ಕಟ್ಟಿ ಕೊಡೆಡದೋ?

6 thoughts on “ಶಿಷ್ಯರಿಂಗೆ ಶುಭಾಶ್ರಯ, ಸಮಾಜಕ್ಕೆ ಶುಭಾಶಯ

  1. ಶುದ್ದಿ ಲಾಯಕಾತು. ಶುಭಾಶ್ರಯ ಹೇಳುವ ಪದವೇ ಚೆಂದ. ಮನೆಯುದೆ ಚೆಂದ. ಗುರುಗಳ ಅನುಗ್ರಹ ಇದ್ದರೆ ಬೇರೆಂತ ಬೇಕು.

  2. ಶುದ್ದಿ ಓದಿ ಮನಸ್ಸು ತು೦ಬಿ ಬಂತು . ಮಠದ ಕಾಳಜಿ, ಸಮಾಜದ ಪ್ರೀತಿ ಹೀ೦ಗೆಯೇ ಸದಾ ಸಾಗಲಿ ಹೇಳ್ತದು ಆಶಯ .

  3. ಅದೇ ಮಠದ ಶಿಷ್ಯವರ್ಗದೋರು ನಾವು, ಅಬ್ಬೆಯ ಹಾಂಗೆ ಪ್ರೀತಿ ತೋರ್ಸುತ್ತ ಗುರುಗ ನವಗೆ ಹೇಳೋದೇ ನಮ್ಮ ಅಭಿಮಾನ.
    ಹ್ಹಾಂ ..ಸುಳ್ಯದ ಕೇಯೆಸ್ಸು ಭಟ್ರ ಗುರ್ತ ಪಾರು ಅತ್ತೆಗೂ ಇದ್ದಡ. ಅಪರೂಪಕ್ಕೆ ಬಂದು ಮಾತಾಡ್ಸಿಕ್ಕಿ ಹೋಪದೋ ಇರ್ತಡ. ಹಾಂಗೆ ಬಂದರೆ ಬೆಜವಾಡು ತಟ್ಟೆಲಿ ಮಡಗಿ ಕೊಡೋದೇ ತಲೆಬೇಶಿ ಹೇದು ಪಾರು ಅತ್ತೆ ಮನ್ನೆ ಪರಂಚಿಗೊಂಡಿದ್ದತ್ತು.

  4. ಹರೇ ರಾಮ. ಗುರು ಶಿಷ್ಯರ ಅವಿನಾವಭಾವ ಸಂಬಂಧ!. ಶ್ರೀ ಪೀಠ ಏವತ್ತೂ ಹೇಳ್ವ ‘ಮಠ ಇಪ್ಪದು ಶಿಷ್ಯರಿಂಗಾಗಿ, ಗುರು ಇಪ್ಪದು ಶಿಷ್ಯರಿಂಗಾಗಿ’ ಹೇಳ್ತದು ನಿಜಾನುಭವಕ್ಕೆ ತೋರಿಸಿಕೊಟ್ಟವು. ಗುರುವನುಗ್ರಹವಾದವಂಗೆ ಅದರಷ್ಟು ಆನಂದ ಇನ್ನೊಂದಿಲ್ಲೆ. ಆದರೆ ಗುರುವನುಗ್ರಹ ಸಿಕ್ಕುತ್ತು ಹೇದು ಬಣ್ಣ ಬಡುಕ್ಕೊಂಡು ಕೊಣುದರೆ ಗುರುವನುಗ್ರಹ ಆಗ ಹೇಳ್ತ ಪ್ರಜ್ಞೆಯೂ ಏವತ್ತೂ ನವಗಿರೆಕು. ಶಿಷ್ಯನ ಪ್ರದರ್ಶನ ಅಗತ್ಯ ಇಲ್ಲೆ, ಶಿಷ್ಯ° ತಾನು ನಡಕ್ಕೊಂಬ ಕ್ರಮಂದ ಗುರುಕೃಪಾದೃಷ್ಟಿಗೆ ಪಾತ್ರನಾವ್ತ° ಹೇಳ್ತದು ಮರ್ಮ. ಮನಹೊಕ್ಕುವ ಧಾಟಿಯ ಚಿಂತನೀಯ ಒಂದೊಪ್ಪ ಹೊತ್ತು ಬಂದ ಈ ಶುದ್ದಿಗೊಂದು ಒಪ್ಪ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×