Oppanna.com

ಹವ್ಯಕ ಗ್ರಹಣ ಕಳುದ ಮತ್ತಾಣ ಸತ್ಯ ಸೂರ್ಯೋದಯ..!

ಬರದೋರು :   ಒಪ್ಪಣ್ಣ    on   01/04/2016    12 ಒಪ್ಪಂಗೊ

ಹವ್ಯಕರ ಏಳಿಗೆಗಾಗಿ ಹೋರಾಡುವ ದೊಡ್ಡ ಮಟ್ಟದ ಎರಡು ಸಂಘಟನೆಗೊ – ಒಂದು ಹವ್ಯಕ ಮಹಾ ಮಂಡಲ, ಮತ್ತೊಂದು ಅಖಿಲ ಹವ್ಯಕ ಮಹಾಸಭಾ.

ಹವ್ಯಕ ಮಹಾಮಂಡಲ -ಹೇದರೆ, ನಮ್ಮ ಮಠದ ಆಡಳ್ತೆಗಾಗಿ ನಮ್ಮ ಗುರುಗೊ ಮಾಡಿದ ವಿಭಾಗವಾರು ಸಂಘಟನೆ.
ಪ್ರತಿ ಊರಿಲಿ ಘಟಕ ಆಗಿ, ಹಲವು ಘಟಕಂಗೊ ಒಂದು ವಲಯ ಆಗಿ, ಹಲವು ವಲಯಂಗೊ ಒಂದು ಮಂಡಲ ಆಗಿ, ಹಲವು ಮಂಡಲ ಸೇರಿದ ಒಂದು ಮಹಾಮಂಡಲ.
ಮಹಾ ಮಂಡಲ – ಹೇಳ್ತ ಕಲ್ಪನೆಯೇ ಅದ್ಭುತ.
ಅದು ಕೆಲಸ ಮಾಡ್ತ ರೀತಿ ಮತ್ತೂ ಕುಶಿ.
ನಮ್ಮ ಡಾಗುಟ್ರು ವೈ.ವೀ.ಕೆ ಮೂರ್ತಿ ಮಾವ° ಅದರ ಅಧ್ಯಕ್ಷರಾಗಿ ಗುರುಗಳಿಂದ ನಿಯೋಜಿತರಾಯಿದವು.
ಅದರೊಳ ಧರ್ಮ ಕರ್ಮಾದಿ ನಿರ್ದೇಶನಕ್ಕಾಗಿ ಧರ್ಮ ವಿಭಾಗ, ಪ್ರಸಾರಣ ವಿಭಾಗಕ್ಕಾಗಿ ಪ್ರಸಾರ ವಿಭಾಗ, ವಿದ್ಯೆಯ ಕುರಿತಾದ ವಿಚಾರಕ್ಕೆ ವಿದ್ಯಾ ವಿಭಾಗ, ಮಾತೆಯರ ಒಗ್ಗಟ್ಟಿಂಗಾಗಿ ಮಾತೃ ಶಾಖೆ, ಸಮಾಜದ ಉದ್ಧಾರಕ್ಕಾಗಿ ಸಮಾಜ ಸುಕ್ಷೇಮ ವಿಭಾಗ, ಗೋಮಾತೆಯ ಸೇವೆಗೆ ಅನುಕೂಲ ಅಪ್ಪಲೆ ಕಾಮದುಘಾ ವಿಭಾಗ, ಆರ್ತರಿಂಗೆ ಸಕಾಯ ಮಾಡ್ಲೆ ಸಹಾಯ ವಿಭಾಗ – ಹೀಂಗೆ ಹತ್ತು ಹಲವು ವಿಭಾಗಂಗೊ ಇದ್ದು.
ಊರು ಊರಿನ ಹವ್ಯಕರ ಕುಂದು ಕೊರತೆಯ ನೀಗುಸಿ, ಚೆಂದಕೆ ನೆಡೆತ್ತಾ ಇದ್ದು ಈ ಸಂಘಟನೆ.

ಅಖಿಲ ಹವ್ಯಕ ಮಹಾಸಭಾ – ಹೇದರೆ ಸರಕಾರೀ ರಿಜಿಸ್ತ್ರಿ ಆದ ಸಂಸ್ಥೆ. ಬಹು ಪುರಾತನ – ಹತ್ತೆಪ್ಪತ್ತು ಒರಿಶ ಮೊದಲೇ – ೧೯೫೩ರಲ್ಲಿ ನಮ್ಮ ಊರಿನ ಕೆಲವು ಹೆರಿಯ ಚಿಂತಕರು – ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ದಿವ್ಯಾನುಗ್ರಹಲ್ಲಿ ಸಮಸ್ತ ಹವ್ಯಕ ಸಮಾಜಕ್ಕೆ ಸರಕಾರೀ ಜೀವನಲ್ಲಿ ದಿಕ್ಕು ಕೊಡ್ಳೆಬೇಕಾಗಿ ಮಾಡಿದ ಸ್ವಾಯತ್ತ ಸಂಸ್ಥೆ.
ಬೆಂಗ್ಳೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು, ಹೊರರಾಜ್ಯ – ಹೇದು ವಿಭಾಗ ಮಾಡಿ, ಪ್ರತಿ ಊರಿಂದಲೂ ಪ್ರತಿನಿಧಿಗಳ ಮತದಾನ ಮುಖಾಂತರ ಆಯ್ಕೆ ಮಾಡಿ
ಪ್ರತಿ ದಿಕ್ಕಂದ ಆಯ್ಕೆ ಆದ ಅಭ್ಯರ್ತಿಗೊ ನಾಲ್ಕೊರಿಶ ಆಡಳ್ತೆ ಮಾಡಿ, ಮುಂದುವರುಶಿಗೊಂಡು – ಅಂದಿಂದ ಇಂದಿನ ವರೆಗೂ ಕಾಲಕಾಲಕ್ಕೆ ಹೊಸ ಮೋರೆಗೊ ಬಂದು ಹವ್ಯಕರಿಂಗೆ ಸಂಪರ್ಕ ಸೇತುವಾಗಿ ಹಲವಾರು ಕೆಲಸಂಗೊ ನೆಡೆತ್ತಾ ಇದ್ದಾಡ.

~
ಇದೆಲ್ಲ ಇಂದು ಎಂತ್ಸಕ್ಕೆ ನೆಂಪಾತು ಹೇದರೆ – ಓ ಮನ್ನೆ ಅಖಿಲ ಹವ್ಯಕ ಮಹಾಸಭೆಯ ಚುನಾವಣೆ ನೆಡದತ್ತು.
ನೆಡೆತ್ತ ಮೊದಲು ಸುಮಾರು ಜೆನಕ್ಕೆ ಹೀಂಗೊಂದು ಸಂಘಟನೆ ಇದ್ದು ಹೇಳಿಯೇ ಗೊಂತಿಲ್ಲೆ.
ಅದೇಕೆ?
ಅದೇಕೇ ಹೇದರೆ – ಹವ್ಯಕ ಸಮಾಜಕ್ಕೆ, ಅದರ ರಕ್ಷಣೆಗೆ ಬೇಕಾದ ಕೆಲಸಂಗಳ ಮಾಡಿಗೊಂಡು ಸಮಾಜದ ಒಟ್ಟಿಂಗೆ ಬೆರಕ್ಕೊಂಡು ಇದ್ದರಲ್ಲದೋ – ಜೆನಂಗೊಕ್ಕೆ ಗುರ್ತ ಇಪ್ಪದು?
ಅಲ್ಲದ್ದರೆ – ಆರೋ ದೊಡ್ಡೋರು ಹೋವುತ್ತವು, ಮಾಡ್ತವು – ಹೇದು ಗ್ರೇಶುದಿದಾ. ಊರಿಲಿಯೂ ಹಾಂಗೇ ಆಗಿದ್ದತ್ತು.
ಎಂತದೋ “ಹವ್ಯಕ” ಅಡ, ಪೈಸೆ ಕೊಟ್ರೆ ಪುಸ್ತಕ ಬತ್ತು – ಹೇದು ಅಷ್ಟೇ ಗೊಂತು.
ಆ ನಮುನೆ ಆದ್ದದು ಅದರ ಆಡಳಿತ ಯಂತ್ರಂದಾಗಿ.

ಅಷ್ಟು ಘನ ಇತಿಹಾಸ ಇದ್ದರೂ – ಸರಿಯಾದ ಕೆಲಸ ಮಾಡುವ ಚೈತನ್ಯ ಅವಕ್ಕೆ ಇದ್ದತ್ತಿಲ್ಲೆಯೋ, ಅಲ್ಲ ಅವರ ಉದ್ದೇಷ ಅದಾಗಿತ್ತಿಲ್ಲೆಯೋ ಗೊಂತಿಲ್ಲೆ, ಅಂತೂ ಜನಮಾನಸಕ್ಕೆ ಮುಟ್ಳೆ ವಿಫಲ -ಹೇಳ್ತದು ಅಂತೂ ಸ್ಪಷ್ಟ.
~

ಆ ವೈಫಲ್ಯ ಮೊನ್ನೆ ಗೊಂತಾಗಿತ್ತು.
ನಮ್ಮ ಹವ್ಯಕ ಗುರುಪೀಠವೊಂದಕ್ಕೆ ಆಪತ್ತು ಬಂದಿಪ್ಪಗ – ಒಂದೇ ಒಂದು ಕೆಲಸ, ಕೆಲಸ ಬಿಡಿ ಒಂದೇ ಒಂದು ಹೇಳಿಕೆ ಕೊಟ್ಟು ಖಂಡಿಸುಲೆ ಎಡಿಗಾಯಿದಿಲ್ಲೆ ಹವ್ಯಕಕ್ಕೆ. ಮತ್ತೆ ಅದೆಂತ ಹವ್ಯಕ?!
ಆ ಪಿಸುರು ಜೆನಂಗೊಕ್ಕೆ ಎಲ್ಲ ಇದ್ದತ್ತಿದಾ.
ಈಗ ಅದು ತಿರುಗಿ ಮೆಟ್ಟಿತ್ತು.
ಮೊನ್ನೆ ಓಟು ಆತು, ಓಟಿಲಿ ಒಂದು ಬಳಗದವು “ಎಂಗೊ ಗುರುಪೀಠಕ್ಕೆ ನಿಷ್ಠರಾಗಿ ಇರ್ತೆಯೊ°” – ಹೇದು ಮಾತು ಕೊಟ್ಟವು.
ಮಾತು ಕೊಟ್ಟ ತಂಡಕ್ಕೆ ಜೆನಂಗೊ ಮತ ಕೊಟ್ಟವು.
ಊರೂರಿಂದ ಅಪ್ಪಚ್ಚಿ ಮಾವಂದ್ರು, ಅಜ್ಜ° ದೊಡ್ಡಪ್ಪಂದ್ರು – ಎಲ್ಲೋರುದೇ ಬಂದವು.
ಅವರವರ ಆಸಕ್ತಿಲಿ, ಅವರವರ ವೆವಸ್ತೆಲಿ ಬಂದು ಬಂದು ಒತ್ತಿದವು.
“ಹರೇರಾಮ ಹೇಳಿಗೊಂಡು ಒತ್ತಿದೆ ಭಾವ” – ಹೇದು ಕುಕ್ಕಿಲ ಮಾವನ ಹತ್ರೆ ಕೆಳಬೈಲು ಅಪ್ಪಚ್ಚಿ ಹೇಳಿದವಾಡ.
~

ಅದರ ಫಲಿತಾಂಶವೂ ಕಂಡತ್ತು.
ಕೇವಲ ಒಂದು ಸರ್ತಿ ನಮ್ಮ ಗುರುಪೀಠದ ಶಿಷ್ಯರು ಎದ್ದು ನಿಂದದರ್ಲಿ – ಬಂದ ಮತಗಳಲ್ಲಿ ಶೇಖಡಾ ೭೦ ಗುರುಪೀಠ ನಿಷ್ಠರಿಂಗೆ.
ಸಾಲದೋ ಶಕ್ತಿ ಪ್ರದರ್ಶನ!

ಹವ್ಯಕ – ಸ್ವಚ್ಛ ಆತು.
~
ಇನ್ನು ಹವ್ಯಕರ ಮನಸ್ಸು ಸ್ವಚ್ಛ ಆಗೆಡದೋ?
ಅದೂ ಆವುತ್ತು.
ಗುರುವಾರದ ಶುಭದಿನ.
ನ್ಯಾಯಾಲಯಂದ ಒಂದು ಒಳ್ಳೆ ತೀರ್ಪು ಬಂದೇ ಬಿಟ್ಟತ್ತು.
~

ಶ್ರೀಗುರುಗಳ ಮೇಗೆ ಇದ್ದಿದ್ದ ಮಿಥ್ಯಾರೋಪ ’ಪೂರ ಲೊಟ್ಟೆ’ – ಹೇದು ಘನ ನ್ಯಾಯಾಲಯ ತೀರ್ಪು ಕೊಟ್ಟತ್ತು.
ಇದರಿಂದಾಗಿ ಸಾವಿರಾರು ಮನಸ್ಸುಗಳ ಹಿಂದೆ ಇದ್ದಿದ್ದ ಗ್ರಹಣ ಬಿಟ್ಟತ್ತು.
ಇಷ್ಟು ದಿನ ಗುರುಪೀಠದ ಮೇಗೆ ಆಗಿಂಡಿದ್ದ ಆಕ್ರಮಣವ ಮವುನಲ್ಲೇ ಸಹಿಸಿಗೊಂಡು ಇದ್ದಿದ್ದ ಶಿಷ್ಯರು ಇಂದು ಒಂದರಿಯೇ ಸ್ವರ ಹೆರಡುಸಿ ಕುಶಿಯ ಹಬ್ಬಿದವು.
ಇದೊಂದು ದೊಡ್ಡ ಸಂಗತಿ.
~
ಸುಳ್ಯದ ಕೇಯೆಸ್ ಭಟ್ರು ಸಿಕ್ಕಿದವು.
ಅವು ಎಕೌಂಟು, ಮಾರ್ಚು ಎಂಡು, ಲೆಕ್ಕಾಚಾರ – ಹೇದು ಅಂಬೆರ್ಪಿಲಿ ಇತ್ತಿದ್ದವು.
ಇಂದು ಒಂದು ಮಾತು ಹೇಳಿದವು.
ರಾಮ ಬಹುಷ ಒರಿಶದ ಕೊನೆಯ ಒಳ ಲೆಕ್ಕಾಚಾರ ಚುಕ್ತ ಮಾಡಿದ°.
ಒಂದು ಹವ್ಯಕ ಸಂಘಟನೆಯ ಬಲಪಡುಸಿ ಗುರುಪೀಠ ಭಕ್ತರಿಂಗೆ ಅವಕಾಶ ಕೊಟ್ಟದು.
ಇನ್ನೊಂದು ಗುರುಪೀಠಕ್ಕೆ ಬಂದಿದ್ದ ಕಳಂಕವ ತೊಳದು ಬಿಟ್ಟವು.

ಅಪ್ಪೂಳಿ ಕಂಡತ್ತು ಒಂದರಿ.
~
ಏನೇ ಆಗಲಿ, ಒಡದ ಮನೆಯ ಹಾಂಗೆ ಆಗಿದ್ದ ಹವ್ಯಕ ಸಮಾಜ ಮತ್ತೆ ಒಂದಾಗಲಿ..
ಗುರುಪೀಠದ ಮಾರ್ಗದರ್ಶನಲ್ಲಿ ಎಲ್ಲ ಒಟ್ಟಾಗಿ ಸಾಗಲಿ..
ಹಳೆಯ ಒಗ್ಗಟ್ಟು ಪುನಾ ಬರಲಿ..
ಅದರೊಟ್ಟಿಂಗೇ – ಸೂರ್ಯಂಗೆ ಗ್ರಹಣ ಕೊಟ್ಟ ರಾಹು ಕೇತುಗೊಕ್ಕೆ ತಕ್ಕ ಶಾಸ್ತಿ ಸಿಕ್ಕಲಿ – ಹೇಳ್ತದೊಂದೇ ಬೈಲಿನ ಆಶಯ.
~

ಒಂದೊಪ್ಪ: ಗ್ರಹಣ ಬಿಟ್ಟ ಮತ್ತೆ ಅಪ್ಪ ಸತ್ಯ ಸೂರ್ಯೋದಯ ಜಗಕೆಲ್ಲ ಬೆಣಚ್ಚು ಕೊಡಲಿ..

12 thoughts on “ಹವ್ಯಕ ಗ್ರಹಣ ಕಳುದ ಮತ್ತಾಣ ಸತ್ಯ ಸೂರ್ಯೋದಯ..!

  1. ಹರೇ ರಾಮ, ಚಿನ್ನ ಕಿಚ್ಚಿಲಿ ಇದ್ದ್ಪ್ಪಗ ಇನ್ನಸ್ಟು ಶುದ್ಧ ಆಗಿ ಹೊಳಪು ಹೆಚ್ಚುತ್ತು ಹಂಗೆ ಅತು ನಮ್ಮ ಗುರುಗಲಿನ್ಗೆ, ಎಷ್ಟು ಕಷ್ಟ ಕೊಟ್ಟವು, ಬೇರೆ ಯಾರಿಂದಲೂ ತದಕ್ಕೊಮ್ಬಲೇ ಎಡಿಯ, ಆದರೆ ಗುರುಗ ಎಲ್ಲವನ್ನೂ ಸಹಿಸಿ ಶಿಸ್ಯರಿನ್ಗೆ ತಮ್ಪನ್ನೇ ಕೊಟ್ಟವು, ನಮ್ಮ ಸಂಸ್ಥಾನ ಗ್ರೇಟ್ .

  2. ಲೊಟ್ಟೆ ಕೇಸ್ ಹಾಕಿದವಕ್ಕೆ ಶಿಕ್ಷೆ ಇಲ್ಲೆಯ? ಈ ಬಗ್ಗೆ ಗಮ್ಬೀರವಾಗಿ ಯೋಚ್ಸೆಕ್ಕು. ಲೊಟ್ಟೆ ಕೇಸ್ ಹಾಕಿದವಕ್ಕೆ ಸರಿ ಶಿಕ್ಷೆ ಆದರೆ ಮುಂದೆ ಹೀಂಗೆ ಆಗ

    1. ಪರಿಧಿ ಗೊಂತಿಪ್ಪವು ನಿಂದೆ ಮಾಡ್ತವಿಲ್ಲೆ

  3. ನಿಂದಕರಿರ ಬೇಕು… ಹಂದಿ ಇದ್ದರೆ ಕೆರೆ ಹ್ಯಾಂಗೆ ಶುಧ್ಧಿಯೋ ಹಾಂಗೆ…. ಪುರಂದರ ದಾಸರು ಹೇಳಿದ್ದು…

    1. ಈಗ ಇಂದು ಸಲ ಕೆರೆ ಶುಧ್ಧ ಅತೋ ಇಲ್ಲೆಯೋ?

  4. ಒಳ್ಳೆ ಶುದ್ದಿ. ಸತ್ಯಕ್ಕೆ ಏವತ್ತುದೆ ಜಯ ಖಂಡಿತಾ ಇದ್ದು. ಹರೇ ರಾಮ.
    ಕೆಲವು ಟಿವಿ ಚ್ಯಾನಲ್ಲಿನವು ಕೆಲವೊಂದರಿ ಸುಮ್ಮನೇ ಗ್ರಹಣ ಹಿಡುಶುತ್ತವಾನೆ. ಪೈಸಗೆ ಬೇಕಾಗಿ ಎಂತ ಮಾಡಲೂ ಹೇಸದ್ದ ಜೆನಂಗೊ.

  5. ಹರೇ ರಾಮ.
    ಇಂದ್ರಾಣ ಸೂರ್ಯೋದಯಕ್ಕೆ ಹೆಚ್ಚು ಬೆಣಚ್ಚು ಇದ್ದತ್ತು.
    ದೇವರಿಂಗೂ ಕೊಶಿ ಆದ ಕಾರಣ, ಇಂದು ಬ್ರಾಹ್ಮೀ ಮುಹೂರ್ತಕ್ಕೆ ಮಳೆಯೂ ಇದ್ದತ್ತು…

  6. ಹರೇರಾಮಾ ,ಒಳ್ಳೆಸುದ್ದಿ .ಅಪ್ಪು ಶ್ರೀ ಗುರುಗೊ ಹೇಳಿದಾಂಗೆ ಪ್ರಾಮಾಣಿಕತೆಯ ತಾಳ್ಮೆಯೇ ಗೆದ್ದತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×