Oppanna.com

ಪರಿವಾರದ ಅಣ್ಣಂದ್ರೂ ನಮ್ಮವೇ ಅಲ್ಲದೋ?!

ಬರದೋರು :   ಒಪ್ಪಣ್ಣ    on   01/08/2014    6 ಒಪ್ಪಂಗೊ

ಮೊನ್ನೆ ಸೋಮವಾರ ಇರುಳು ಪೇಟೆಕರೆಂದ ನೆಡಕ್ಕೊಂಡು ಬೈಲಿಂಗೆತ್ತುವದ್ದೇ – ಮಾಷ್ಟ್ರಮನೆ ಅತ್ತೆ ಕೇಳಿದವು – ನಾಳೆ ಚಾತುರ್ಮಾಸ್ಯಕ್ಕೆ ಹೋಪಲಿದ್ದು – ಬತ್ತೆಯೋ? –ಹೇದು.
ಮರದಿನಕ್ಕೆ ಗ್ರೇಶಿದ ಕೆಲಸ ಎಂತ್ಸೂ ಇದ್ದತ್ತಿಲ್ಲೆ – ಹೇಳಿಕೆ ಬಂದದು ಹೇಂಗೂ ಇಲ್ಲೆ; ಆಳುಗೊ ಬಂದೇ ಅಪ್ಪಂಥಾದ್ದು ಎಂತ್ಸೂ ಇಲ್ಲೆ – “ಅಕ್ಕು, ಹೋಪೊ” – ಹೇದೆ.
ಪರ್ತಿಕಾರು ವೇನಿನ ವೆವಸ್ತೆ ಮಾತಾಡಿದ್ದಿದ್ದವು; ಅಕೇರಿಯಾಣ ಸೀಟಿಂಗೆ ಒಂದು ಗಟ್ಟಿ ಜೆನ ಇಲ್ಲದ್ದರೆ ವೇನು ಅದುರುತ್ತು ಒಪ್ಪಣ್ಣಾ, ಹಾಂಗೆ ನಿನ್ನತ್ರೆ ಕೇಳಿದ್ದು – ಹೇದವು ನೆಗೆಮಾಡಿಂಡು! 😉

ಚಾತುರ್ಮಾಸ್ಯಕ್ಕೆ ಹೋಗಿ ಹೊಡಾಡಿ ವ್ಯಾಸಮಂತ್ರಾಕ್ಷತೆ ಪಡಕ್ಕೊಂಬದು ತಲೆತಲಾಂತರಂದ ಬಂದ ಸಂಪ್ರದಾಯ.
ನಮ್ಮ ಬೈಲಿಂದಲೊ ಹೋಗಿ ಒಂದರಿ ಗುರುಗಳ ಭೇಟಿಮಾಡ್ತ ಕಾರ್ಯ ಇದ್ದೇ ಇದ್ದು.
ಬೈಲಿನೋರು ಒಟ್ಟಾಗಿ ಹೋಪದು ಹೇಂಗೂ ಇದ್ದನ್ನೇ, ಅದಲ್ಲದ್ದೇ ಅವರವರ ಅನುಕ್ಕೂಲ ನೋಡಿಗೊಂಡು, ಎಡಿಗಾಷ್ಟು ಸರ್ತಿಯೂ ಹೋಗಿ ಗುರುಭೇಟಿ ಮಾಡಿಬಪ್ಪದೂ ಇದ್ದು.
ನವಗೆ ಮೊನ್ನೆ ಆ ಅನುಕೂಲ ಸಿಕ್ಕಿತ್ತು.

ಐದು ಗಂಟೆಗೆ ವೇನು ಹೆರಡುಸ್ಸು ಹೇದರೆ ನಾಕೂವರೆಗೇ ಹೆರಟು ನಿಂಬದು ಮಾಷ್ಟ್ರುಮಾವನ ಕ್ರಮ. ಐದುಗಂಟೆಗೆ ಹೆರಡುದು ಮಾಷ್ಟ್ರಮನೆ ಅತ್ತೆಯ ಕ್ರಮ. ಐದುಗಂಟೆಗೆ ಏಳುಸ್ಸು ಒಪ್ಪಣ್ಣನ ಕ್ರಮ!! 🙁
ಮರದಿನ ಹೇಂಗಕ್ಕೋ-ದು ಆಲೋಚನೆ ಮಾಡಿಂಡೇ ಮನುಗುದು, ಎಷ್ಟೊತ್ತಾದರೂ ಒರಕ್ಕು ಹಿಡಿಯಲಿಲ್ಲೆ. ಎಷ್ಟೋ ಹೊತ್ತಿಂಗೆ ಹಿಡಿಸ್ಸು, ಮತ್ತೆ ಬಿಡ್ಳಿಲ್ಲೆ! 😀
ಹಾಂಗೇ ಆತು – ಐದುಗಂಟೆಗೆ ಹೆರಟು ಎಲ್ಲ ಆದ ಮತ್ತೆ ಮಾಷ್ಟ್ರಮನೆ ಅತ್ತೆ ಪೋನಿಲಿ ಕೂಕಿಲು ಹಾಕಿ ದಿನಿಗೆಳಿಅಪ್ಪಗ ರಪಕ್ಕ ಎಚ್ಚರಿಗೆ ಆತು.
ಪಕ್ಕನೆ ಹೋಗಿ ಮಿಂದು ಭಸ್ಮ ಎಳಕ್ಕೊಂಡು ಬಂದೆ. ಮಾಷ್ಟ್ರುಮಾವನ ಮನೆಜಾಲಿಂಗೆ ಎತ್ತುವಗ ಪರ್ತಿಕಾರು ವೇನು ಬಂದು ತಿರುಗಿ ನಿಂದಾಯಿದಷ್ಟೆ!

ಕಾರು ಪುತ್ತೂರಿಂದ ಹೆರಡುವಗಳೇ ಶ್ರೀಅಕ್ಕ ಸೇರಿಗೊಂಡಿದವು; ಮಾಷ್ಟ್ರುಮಾವನ ಮನೆಜಾಲಿಲಿ ಕಾರಿನೊಟ್ಟಿಂಗೇ ಅವುದೇ ತಿರುಗಿದವು!
ಆಚಮನೆ ದೊಡ್ಡಣ್ಣ, ಮಂದಾರ ಮಾವ, ಚೂರಿಬೈಲು ದೀಪಕ್ಕ ಎಲ್ಲರುದೇ ಬಯಿಂದವು. ಒಂದು ನಿಮಿಷ ತಡವಾಗಿದ್ದರೊ – ’ಒಪ್ಪಣ್ಣಂಗೆ ಕಾದು ತಡವಾದ್ಸು” – ಹೇದು ಆಚಮನೆ ದೊಡ್ಡಣ್ಣ ಕೋಂಗಿಮಾಡ್ತಿತ!
ಇರಳಿ, ಸೂರ್ಯಂಗೆ ಉದಿಆಯೇಕಾರೇ ಬೈಲು ಬಿಟ್ಟಾಯಿದು.
ಹೊಟ್ಟೆಹಶುವಿಂಗೆ ಉದಿ ಅಪ್ಪಗ ಕುಂದಾಪುರ ಎತ್ತಿ, ಐತ್ತಾಳನ ಹೋಟ್ಳಿಲಿ ಹಂತಿ ಕೂದು ಆಗಿತ್ತು.
ಹತ್ತುಗಳಿಗೆಯ ಹೊತ್ತು ಅಪ್ಪಗ ಕೆಕ್ಕಾರು!
ಆಚಮನೆ ದೊಡ್ಡಣ್ಣನ ನೆಗೆಗೊ, ಶ್ರೀಅಕ್ಕನ ಕೆಮರಲ್ಲಿ ಇದ್ದಿದ್ದ ಪಟಂಗೊ, ಚೂರಿಬೈಲು ಡಾಗುಟ್ರ ಅನುಭವಂಗೊ, ಮಾಷ್ಟ್ರುಮಾವನ ಪಾಟಂಗೊ – ಎಲ್ಲ ಕೇಳುವಾಗ ಕೆಕ್ಕಾರು ಎತ್ತಿದ್ದೇ ಗೊಂತಾಯಿದಿಲ್ಲೆ.
~

ಚಾತುರ್ಮಾಸ್ಯದ ಭವ್ಯತೆ, ಶುದ್ಧ ಭಾರತೀಯತೆ, ಮೃಣ್ಮಯೀ ಭವನಂಗೊ – ಎಲ್ಲವುದೇ ಕಣ್ತುಂಬಿತ್ತು.
ಪೂರ್ತಿ ಕೆಂಪು. ಕೆಂಪಿನ ಕಂಪು. ಕೆಂಪು ಮಣ್ಣಿನ ಚೆಂಬಣ್ಣ – ಕಸ್ತಲೆ ದೇವರಕೋಣೆಯ ಒಳ ಇಪ್ಪ ಒಂದೇ ಒಂದು ತುಪ್ಪದೀಪದ ಎಣ್ಣೆಬೆಣಚ್ಚಿನ ಹಾಂಗೆ–ಪ್ರಭೆ!
ರಘೂತ್ತಮ ಮಠಲ್ಲಿ ಎಂತೆಲ್ಲ ಕಂಡತ್ತು; ವಿದ್ಯಾಮಂದಿರ ಹೇಂಗಿತ್ತು – ಹೇಳ್ತ ವಿವರ ಹೇಳಿಂಡು ಹೋದರೆ ಈ ವಾರದ ಶುದ್ದಿ ಮುಗಿಯ ಇದಾ!
ಹಾಂಗೆ, ಚಾತುರ್ಮಾಸ್ಯದ ಜಾಗೆಗೆ ಎತ್ತಿ ಆತು.
ಶ್ರೀಗುರುಗೊ ಅದಾಗಲೇ ಉದಿಯಪ್ಪಗಾಣ ಪೂಜೆ ಆಗಿ ಭಿಕ್ಷೆ ಸ್ವೀಕಾರ ಮಾಡಿಗೊಂಡಿದವು.
ಒಂದು ಹೊಡೆಲಿ ಪಾದಪೂಜೆ ಆಗಿಂಡಿದ್ದತ್ತು. ಮತ್ತೊಂದು ಹೊಡೆಲಿ ಲೋಕದ ಒಳಿತಿಂಗಾಗಿ ಯಾಗಶಾಲೆಲಿ ಅಗ್ನಿದೇವಂಗೆ ಆಹುತಿಗೊ ಕೊಟ್ಟೊಂಡಿತ್ತಿದ್ದವು ಋತ್ವಿಜರು.
ಇನ್ನೊಂದು ಹೊಡೆಲಿ ವೃಂದಾವನ, ಮತ್ತೊಂದಿಕ್ಕೆ ಶ್ರೀಗುರುಪಾದುಕೆ – ಎಲ್ಲವೂ ಒಟ್ಟಾಗಿ ಒಂದು ಧನಾತ್ಮಕ ಸಾತ್ವಿಕ ಜಾಗೆ ಆಗಿದ್ದತ್ತು.
~
ಸಭಾಕಾರ್ಯಕ್ರಮಕ್ಕೆ ಜೆನಂಗೊ ಎಲ್ಲ ಸೇರಿದ್ದವು.
ಅದೆಂತದೋ ಕಾರಣಲ್ಲಿ ಗುರುಗೊ ಸಭೆಗೆ ಬಪ್ಪಲೆ “ರಜಾ.. ತಡವಿದ್ದಡ” – ಹೇದು ಶುದ್ದಿ ಬಂತು.
ಹಾಂಗೆ ತಡವಿಪ್ಪ ಕಾರಣವೇ – ಪರಿವಾರದ ಮಂಜಣ್ಣಂಗೂ ಪುರುಸೊತ್ತಾತು ಮಾತಾಡ್ಳೆ.
ಅವಕ್ಕೆ ನಮ್ಮ ಶ್ರೀಅಕ್ಕ ತುಂಬ ಗುರ್ತ ಇದಾ!
ಇಬ್ರಿಂಗೂ ಅಪುರೂಪಲ್ಲೇ ಪುರುಸೊತ್ತು ಇದ್ದಿದ್ದ ಕಾರಣ ಮಾತಾಡ್ಳೆ ಅವಕಾಶ ಆತು.
ಹಾಂಗೇ ಮಾತಾಡಿಗೊಂಡು ಇದ್ದಿಪ್ಪಾಗ, ಪರಿವಾರದೋರ ಕಷ್ಟಸುಖವೂ ರಜ ವಿಚಾರ್ಸಿದವು ಶ್ರೀಅಕ್ಕ.
ಅಷ್ಟಪ್ಪಗ ಮಂಜಣ್ಣನ ಮಾತುಗಳ ಕೇಳಿದ ಒಪ್ಪಣ್ಣಂಗೆ, ಈ ಪರಿವಾರದ ಅಣ್ಣಂದ್ರ ಶುದ್ದಿಯ ಬೈಲಿಲಿ ಮಾತಾಡಿರೆ ಎಂತ – ಹೇದು ಕಂಡತ್ತು.
~

ಪರಿವಾರದ ಮಂಜಣ್ಣ ಹೇದರೆ ನಿಂಗೊಗೆ ಗುರ್ತ ಇಕ್ಕು. ಅರುಶಿನ ಶಾಲು ಹಾಕಿಂಡು ನೆಗೆನೆಗೆ ಮೋರೆಲಿ ಓಡಾಡಿಂಡು, ಗುರುಪೀಠದ ಹಿಂದೆ-ಮುಂದೆ ಆಗಿ ಸದಾ ಚಲನೆಲಿ ಇರ್ತವು – ಅದಾ, ಗೊಂತಾತಾ?
ಮೈಕೈ-ಹಲ್ಲು ಎಲ್ಲವೂ ಬೆಳಿ.
ಆದರೆ ಕೈಲಿ ಒಂದು ಕರಿ ಪುಸ್ತಕ, ಅದರ ಎಡಕ್ಕಿಲಿ ಒಂದು ಕರಿಪೆನ್ನು, ಅದರ ಮೇಗೆ ಒಂದು ಕರಿಮೊಬೈಲು!
ಕೈಲಿ ಅಷ್ಟೆಲ್ಲ ಬಗೆ ಎಂತಕೆ? – ಕೇಳುಗು ಆರಾರು ಬಿಂಗಿಮಕ್ಕೊ.
ಮಂಜಣ್ಣನ ಕೆಲಸವೇ ಹಾಂಗಿಪ್ಪದು – ಆ ಕೈಲಿಪ್ಪದೆಲ್ಲವೂ ಉಪಯೋಗಕ್ಕೆ ಬತ್ತ ನಮುನೆದು.

ಮಂಜಣ್ಣನ ಕೆಲಸದ ಒತ್ತಡ ಎಂತದು – ಹೇದು ನಿಂಗೊಗೆ ಗೊಂತಾಯೇಕಾರೆ ಇದಾ –

ಒಬ್ಬ ಸೀತ ಬಂದು ಕೇಳುಗು, ಒಂದರಿ ಗುರುಭೇಟಿ ಬೇಕಾತು, ಸಿಕ್ಕುಗೋ – ಹೇದು.
ಇಲ್ಲೆ ಹೇಳುಲಾವುತ್ತೋ. ಒಂದು ವೇಳೆ ಇಲ್ಲೆ ಹೇದರೆ – ಗುರುಗಳ ಕಾಂಬಲಾಗ ಹೇಳುಲೆ ನೀ ಆರು – ಹೇದು ಜೋರು ಮಾಡ್ಳಾತು. “ಅಕ್ಕು ಕೊಡುವೊ” ಹೇಳೇಕು.

ಅಷ್ಟಪ್ಪಗ ಇನ್ನೊಬ್ಬ ಬತ್ತ, ಎನ್ನ ಮಗಂಗೆ ಕಲಿವಿಕೆ ಆಯಿದು, ಕೆಲಸ ಸಿಕ್ಕಿದ್ದಿಲ್ಲೆ – ಹಾಂಗೆ ಒಂದರಿ ಗುರುಗಳ ಕಾಣೇಕು – ಹೇದು.
ಇಲ್ಲೆ ಹೇಳ್ಳೆಡಿತ್ತೋ? ಎಡಿತ್ತಿಲ್ಲೆ. ಸಮ, ಆಗ ಇವನಿಂದ ಮೊದಲು ಒಬ್ಬ ಬಯಿಂದ, ಅವನಿಂದ ಮುಂದೆ ಇವ ಹೋದರೆ ಆಚವಂಗೆ ಸಮದಾನ ಆಗ.
ಅಂಬಗ – ಮೊದಾಲು ಬಂದದು ಆರು – ಹೇಳ್ಸರ ಬರದು ಮಡಗೇಕು.

ಅಷ್ಟಪ್ಪಗ ಮತ್ತೊಬ್ಬ ಬಂದು ಎಂಗಳ ಮನೆಲಿ ಗೋ ಸಂತತಿ ಒಳಿತ್ತಿಲ್ಲೆ – ಗುರುಗಳತ್ರೆ ಮಾತಾಡಿ ಮಂತ್ರಾಕ್ಷತೆ ತೆಕ್ಕೊಳೇಕು – ಹೇಳ್ತ.
ಸಮ, ಅವಂಗೂ ಒಂದು ಭೇಟಿ ಬರಕ್ಕೊಂಡತ್ತು.
ಇನ್ನೊಬ್ಬ ಬಂದು ಎಂಗಳ ಕೂಸಿಂಗೆ ಮದುವೆ ನಿಜ ಆಯಿದು. ಒಂದರಿ ಜಾತಕ ತೋರ್ಸಿ ಮಂತ್ರಾಕ್ಷತೆ ತೆಕ್ಕೊಳೇಕಾತು – ಹೇಳ್ತ.
ಸರಿ, ಅವಂಗುದೇ ಒಂದು ಭೇಟಿ ಬರಕ್ಕೊಳೇಕು.
ಮತ್ತೊಬ್ಬಂದು ಮತ್ತೊಂದು ತಾಪತ್ರೆ, ಇನ್ನೊಬ್ಬಂದು ಇನ್ನೊಂದು ತಾಪತ್ರೆ!
ಎಲ್ಲಾ ಜೆನರ ಭೇಟಿಗಳ ಬರಕ್ಕೊಂಡಾತು.

ಗುರುಗೊ ಪೀಠಕ್ಕೆ ಬಂದು ಆಸೀನರಾವುತ್ತವು ಮಡಿಕ್ಕೊಂಬೊ, ಸೀತ ಒಬ್ಬೊಬ್ಬನನ್ನೇ ಗುರುಗಳ ಹತ್ತರೆ ಬಿಡ್ಳಾವುತ್ತೋ – ಇಲ್ಲೆ.
ಹಲವು ಸಂಪ್ರದಾಯಂಗೊ, ವೆವಸ್ಥೆಗೊ ಇರ್ತು. ಸಭಾಕಾರ್ಯಕ್ರಮಕ್ಕೆ ಅದರದ್ದೇ ಆದ ಒಂದೊಂದೇ ಪರಿವಾಡಿಗೊ ಇರ್ತು.
ಅದನ್ನೂ ಗಮನುಸಿಗೊಳೆಕ್ಕು.
ಮದಾಲು ಗುರುವಂದನೆ, ಶಂಖನಾದ, ಧ್ವಜಾರೋಹಣ, ಹೀಂಗೆಲ್ಲ ಆಗಿ, ಬಂದೋರೆಲ್ಲ ಫಲ ಮಡಗಿ, ಮತ್ತೆ ಇತರೇ ಕೆಲಸಂಗೊ ಆಗಿ – ಆರದ್ದಾರು ಒಂದೆರಡು ದೊಡ್ಡೋರ ಭಾಷಣ ಆಗಿ, ಆಶೀರ್ವಚನ ಆಗಿ, ಮತ್ತೆ ಮಂತ್ರಾಕ್ಷತೆ ಆಗಿ – ಮತ್ತೆ ಈ ಪಟ್ಟಿಯ ಒಬ್ಬೊಬ್ಬನನ್ನೇ ಕಳುಸೆಕ್ಕಪ್ಪದು.
ಅಷ್ಟಪ್ಪಗ ಪಟ್ಟಿ ಹೇದರೆ ಹನುಮಂತನ ಬೀಲದ ಹಾಂಗಿರ್ತು; ಅದು ಬೇರೆ!!

ಗುರುಗೊ ಪೀಠಕ್ಕೆ ಬಂದಪ್ಪದ್ದೇ ಕೆಲವು ಜೆನಂಗೊ ಎಲ್ಲಿಂದಲೋ ಬಂದು ಪ್ರತ್ಯಕ್ಷ ಅಪ್ಪಲಿದ್ದು!
ಗುರುಗೊ ಒಪಾಸು ಅನುಷ್ಠಾನಕ್ಕೆ ಹೋಪಗ ಅಷ್ಟೇ ವೇಗಲ್ಲಿ ಕಾಣೆ ಅಪ್ಪೋರು.
ಅವರ ಶಾಲಿನ ಮಡಿಕ್ಕೆಯೂ ಹಂದುತ್ತಿಲ್ಲೆ, ಕಾರ್ಯಕರ್ತರಾದರೆ ಶಾಲಿಲಿ ಬೆಗರು-ನೀರು ಉದ್ದಿ ಮುದ್ದೆ ಆವುತ್ತಿದಾ!! 😉
ಮಂಜಣ್ಣಂಗೆ ಹೀಂಗಿರ್ಸೋರನ್ನೂ ನೋಡಿಗೊಳೇಕಾವುತ್ತು. ಅವು ಸಮಾಜಲ್ಲಿ ದೊಡ್ಡ ಜೆನಂಗೊ ಹೇದು ಆದರೆ ಅವರ ಮುಟ್ಳೂ ಆವುತ್ತಿಲ್ಲೆ. ಆದರೆ ಗುರುಗೊಕ್ಕೆ ಅಂತೇ ಅನಗತ್ಯ ಮೇಲೆಬಿದ್ದು ಕೀಟ್ಳೆ ಮಾಡದ್ದ ಹಾಂಗೆಯೂ ನೋಡೇಕಾವುತ್ತು.
ಭಾರೀ ಬಂಙ!

ಅಷ್ಟಪ್ಪಗ ಓ ಅಲ್ಲಿ ಬೆಂಗ್ಳೂರಿಂದ ಎಂತದೋ ವಿಷಯ ಮಾತಾಡೇಕಾಗಿರ್ತು – ಹಾಂಗೆ ಆರದ್ದೋ ತುಂಬ ಹಿರಿಯರದ್ದು ಒಂದು ಫೋನು ಬತ್ತು ಮಂಜಣ್ಣಂಗೆ.
ಗುರುಗೊ ಇದ್ದವಾ, ಒಂದರಿ ಈ ವಿಷಯ ತಿಳುಶಿಕ್ಕಿ – ಹೇದು.
ಯೇವದೋ ಗೋಶಾಲೆಗೆ ಹೊಸ ತಳಿ ಗೋವುಗೊ ಬಪ್ಪಲ್ಲಿಂದ ಹಿಡುದು, ಅಶೋಕೆಯ ಆಯ-ವಿಸ್ತೀರ್ಣ ಲೆಕ್ಕಾಚಾರದ ವರೆಗೆ ಎಲ್ಲೋರುದೇ “ಗುರುಗೊಕ್ಕೆ ತಿಳುಶಿಕ್ಕಿ” ಹೇಳುವ ತವಕದವೇ ಇಪ್ಪದು.
ಅವೆಲ್ಲರ ಫೋನುಗಳನ್ನೂ ಬರದು ಮಡಗೇಕು ಇದಾ! ಅಲ್ಲದ್ದರೆ ಮರಗು, ಮರದರೆ ಮರದಿನ ನುರಿಗು!

ಇದರೆಡಕ್ಕಿಲಿ ಸಭೆಲಿ ಹಿರಿಯರು ಆರಾರು ಇದ್ದವೋ – ಹೇದು ನೋಡಿಗೊಳೇಕಾವುತ್ತು.
ಇದ್ದರೆ ಅವರ ಗುರ್ತ ಹಿಡುದು ಸೂಚನೆ ಕೊಡೆಕ್ಕಾವುತ್ತು.
ಅದರೊಟ್ಟಿಂಗೆ ಗುರುಗಳ ಆಜ್ಞೆಗೊ, ಸೂಚನೆಗೊ ಇದ್ದರೆ ಗಮನ ಮಡಿಕ್ಕೊಳೇಕಾವುತ್ತು.
ಅದರೊಟ್ಟಿಂಗೆ ಸಭೆಲಿ ಆರು – ಎಂತ ಮಾತಾಡ್ತವು ಹೇದು ನೋಡಿಗೊಳೇಕಾವುತ್ತು!!
ಪಾದಪೂಜೆ, ಭಿಕ್ಷೆ ಇತ್ಯಾದಿ ಸೇವೆ ಮಾಡ್ಸಿದವರ ದಿನಿಗೆಳಿ ಗುರುಗಳಿಂದ ವಿಶೇಷ ಮಂತ್ರಾಕ್ಷತೆಯ ಸ್ವೀಕಾರ ಮಾಡುಸೆಕ್ಕಾವುತ್ತು.
ಆರಾರು ಶಾಲು ಹಾಕುಸಿಗೊಂಬ ತೂಕದವು ಬಂದರೆ ಅವಕ್ಕೆ ಮಡಿಕ್ಕೆ ಶಾಲು ತೆಗದು ಮಡಗೇಕಾವುತ್ತು.
ಬಂದೋರು ಮಾತಾಡುವಗ ಗಮನುಸಿಗೊಳೇಕಾವುತ್ತು.
ಅವರ ಮಾತುಗೊಕ್ಕೆ ಗುರುಗಳ ಉತ್ತರವನ್ನೂ, ಆ ಉತ್ತರಲ್ಲಿ ಎಂತಾರು ಸಕಾಯದ ಅಂಶವೂ ಇದ್ದೋ ನೋಡಿಗೊಂಡು, ಬೇಕಾದ್ಸರ ಮಾಡೇಕಾವುತ್ತು.
ಆರ್ತತ್ರಾಣರಾಗಿ ಗುರುಗೊ ಎಂತಾರು ಅಭಯ ಕೊಟ್ರೆ “ಇದಾ, ಇವಕ್ಕೆ ಆಯೇಕಾದ್ದರ ಮಾಡು” – ಹೇಳ್ತವು ಮಂಜಣ್ಣನ ನೋಡಿಗೊಂಡು.
ಆ ಜೆನಂಗಳನ್ನೂ, ಅವರ ವೇದನೆಗಳನ್ನೂ, ನೆಂಪು ಮಡಿಕ್ಕೊಳೇಕು. ಒಂದರಿಯಾಣ ಗಡಿಬಿಡಿ ಆದ ಮತ್ತೆ ಅವರ ಕೂರ್ಸಿ ವಿವರ ಕೇಳಿ ಬೇಕಾದ ವೆವಸ್ತೆ ಮಾಡೇಕಾವುತ್ತು.
~

ಇದಿಷ್ಟೇ ಅಲ್ಲಪ್ಪಾ!
ಉದಿಯಪ್ಪಗ ಐದು ಗಂಟೆಗೆ ಕೆಲಸ ಸುರು ಆವುತ್ತು.
ಬ್ರಾಹ್ಮೀ ಮೂರ್ತಲ್ಲಿ ಎದ್ದು, ಜಪಾನುಷ್ಠಾನ ಮಾಡಿ ಆ ದಿನದ ಕಾರ್ಯಕ್ರಮ ವಿವರವ ಓದಿಕ್ಕಿ, ಪೂಜೆಗೆ ತಯಾರಿ.
ಶ್ರೀಗುರು ಕರಾರ್ಚಿತ ಪೂಜೆ ಇದ್ದಲ್ಲದೋ – ಅದಕ್ಕೆ ಶುದ್ಧಲ್ಲಿ ಸಿದ್ಧತೆ ಮಾಡೇಕು.
ಹೂಗು ಕೊಯಿದು ತಂದದರ ಜೋಡುಸಿ ಮಡಗೆಕ್ಕು, ದೀಪಕ್ಕೆ ಬತ್ತಿ ಹಾಕೇಕು, ಬತ್ತಿಗೆ ಎಣ್ಣೆ ಹಾಕೇಕು, ಅಭಿಷೇಕಕ್ಕೆ ಶುದ್ಧದ ನೀರು ತರೆಕ್ಕು, ಗೋಮೂತ್ರ, ಗೋಮಯ, ಹಾಲು – ಇತ್ಯಾದಿಗಳ ರೂಢಿಮಾಡೇಕು, ನೈವೇದ್ಯಕ್ಕೆ ಮಡಗೆಕ್ಕು. ಎಡಕ್ಕಿಲಿ ಪುರುಸೊತ್ತಿದ್ದರೆ – ಆಚ ಹೊಡೆಲಿ ಶ್ರೀಗುರುಗಳ ಭಿಕ್ಷೆಗೆ ತಯಾರಿ ಆವುತ್ತಾ ಇದ್ದರೆ, ಶುದ್ಧಲ್ಲಿ ಅಲ್ಲಿ ಸೇರಿಗೊಳೆಕ್ಕು.
ಶ್ರೀಗುರುಗೊ ಸ್ನಾನ ಆಗಿ ಬಂದಪ್ಪದ್ದೇ – ಪೂಜೆಗೆ ಕೂದಪ್ಪದ್ದೇ – ಈ ಎಲ್ಲಾ ವಸ್ತುಗೊ-ವಿಷಯಂಗೊ ಒಂದೊಂದೇ ಆಗಿ ಕೈಗೆ ಸಿಕ್ಕೆಕ್ಕು.
ಅದಕ್ಕೆ ಬೇರೆ ಜೆನ ಇದ್ದರೆ ಎದುರು ಕೂದುಗೊಂಡು ಉಚ್ಛೈರ್ಘೋಷಾಯ – ಹೇದು ದೊಡ್ಡ ಸ್ವರಲ್ಲಿ ಮಂತ್ರ ಹೇಳೇಕು.
ಆ ದಿನದ ಪಾದಪೂಜೆ, ಭಿಕ್ಷಾಸೇವೆ ಇತ್ಯಾದಿಗೊ ಆರದ್ದು ಹೇಳ್ಸರ ಮಹಾಪೂಜೆಯ ಹೊತ್ತಿಂಗೆ ಓದಿ ಹೇಳೇಕು.
ದಂಡ ಹಿಡಿಯೇಕು – ಚಾಮರ ಬೀಸೇಕು – ಒಂದೋ ಎರಡೋ ಕೆಲಸಂಗೊ!?

ಗುರುಗೊ ಪೂಜೆ ಆದಪ್ಪದ್ದೇ ಸಣ್ಣ ವಿಶ್ರಾಂತಿ ಆಗಿ ಭಿಕ್ಷೆ ಸ್ವೀಕರುಸುತ್ತವು.
ಅಷ್ಟಪ್ಪಗ ಭಿಕ್ಷಾ ಸೇವೆಯ ಮಾಡಿದೋರ ದಿನಿಗೆಳೇಕು. ಅವರ ಕೈಂದ ಸೇವೆಯ ಕೊಡುಸೇಕು.
ಭಿಕ್ಷೆ ಆಗಿ ಸಭೆಯ ಮಧ್ಯಲ್ಲಿ ರಜ್ಜ ಬಿಡುವಿನ ಹೊತ್ತಿಲಿ – ಪೂರ್ವನಿರ್ಧಾರಿತ ಸಭೆಗಳ ಆಯೋಜನೆ ಮಾಡೆಕ್ಕು. ಭೇಟಿಮಾಡ್ಳೆ ಬಂದ ಮುಖ್ಯಪಟ್ಟ ಜೆನಂಗಳ ಒಬ್ಬೊಬ್ಬರಾಗಿ ಒಳ ಬಿಡೆಕ್ಕು. ಅಲ್ಲಿ ಆದ ನಿರ್ಧಾರಂಗಳ ಬರಕ್ಕೊಳೇಕು. ಇರುಳು ಎಲ್ಲವನ್ನೂ ಬರದು ಚೊಕ್ಕಕ್ಕೆ ರೂಢಿಮಾಡ್ಳೆ ಇದ್ದಲ್ಲದೋ?!
ಅಲ್ಲಿಂದ ಒಂದರಿಯಾಣ ಒತ್ತರೆ ಆದಪ್ಪದ್ದೇ – ಸಭಾಕಾರ್ಯಕ್ರಮಕ್ಕೆ ಗುರುಗಳ ಜಯಘೋಷಲ್ಲಿ ಕರಕ್ಕೊಂಡು ಬರೆಕ್ಕು. ಸಭೆಲಿ ಎಂತೆಲ್ಲ ಇದ್ದು – ಅರಡಿಗನ್ನೇ? ಅಲ್ಲಿಂದ ಮತ್ತೆ ಒಳ ಹೋದಪ್ಪದ್ದೇ – ಆಗ ಬಾಕಿ ಒಳುದ ಭೇಟಿಗೊ, ಸಭೆಗೊ, ಚಿಂತನೆಗೊ ಮುಂದುವರಿವಲಿದ್ದು – ಅದರ ಆಯೋಜನೆ ಮಾಡೇಕು.
ಅದಾಗಿ ರಾತ್ರಿಪೂಜೆಯ ವೆವಸ್ತೆ. ಉದಿಯಪ್ಪಗಾಣ ಹಾಂಗೇ – ಮಡಿಲಿ ನಿಂದು ಬೇಕಾದ ಕೆಲಸಂಗಳ ಮಾಡ್ಸಿ ಕೊಡೆಕ್ಕಾವುತ್ತು. ಶಾಸ್ತ್ರಿಗಳೊಟ್ಟಿಂಗೆ ಮಂತ್ರ ಹೇಳೇಕಾವುತ್ತು.
ದೀಪಲ್ಲಿ ಎಣ್ಣೆ ಇದ್ದೋ ನೋಡೆಕ್ಕಾವುತ್ತು. ನೈವೇದ್ಯ ಬೆಂದತ್ತೋ ನೋಡೆಕ್ಕಾವುತ್ತು.
ಮರದಿನದ ಭಿಕ್ಷಾಸೇವೆಯವು ಫಲಮಡಗಲೆ ಬಂದವೋ ನೋಡೆಕ್ಕಾವುತ್ತು.

ಇರುಳು ಮನುಗುಲಪ್ಪಗ – ಆ ದಿನ ಎಂತೆಲ್ಲ ಆತು ಹೇದು ದಿನಚರಿ ಬರೇಕು. ಆರೆಲ್ಲ ಮಾತಾಡಿದವು, ಎಂತೆಲ್ಲ ಆತು. ಗುರುಗೊ ಎಂತೆಲ್ಲ ಆಜ್ಞೆಮಾಡಿದವು, ನಾಳೇಣ ಕೆಲಸಂಗೊ ಎಂತೆಲ್ಲ – ಎಲ್ಲವನ್ನುದೇ ಪಟ್ಟಿ ಮಾಡೇಕು.
ಗುರುಗೊಕ್ಕೆ ಎಲ್ಲವುದೇ ಅಚ್ಚುಕಟ್ಟಾಗಿ ಒಂದು ಮೈಲು ಬರದರೆ ಮತ್ತೂ ಕುಶಿ ಅಪ್ಪದಾಡ.
~
ಇಷ್ಟು ಮಾಂತ್ರ ಅಲ್ಲ.
ಇದರೊಟ್ಟಿಂಗೆ ನಿರಂತರ ಪ್ರಯಾಣ.
ಇಂದು ಬೆಳ್ಳಾರೆ, ನಾಳೆ ಬಳ್ಳಾರಿ.
ಮತ್ತೆ ಕಾಸ್ರೋಡು, ಮರದಿನ ಬೀಸ್ರೋಡು.
ಒಂದು ದಿನ ಚೆನ್ನೈ, ಮತ್ತೊಂದಿನ ಬೊಂಬಾಯಿ!
ಓಡಾಟವೇ ಓಡಾಟ.
ಕೆಲವು ದಿನ ತಿಂಡಿ ಸಿಕ್ಕುತ್ತಿಲ್ಲೆ, ಮತ್ತೆ ಕೆಲವು ದಿನ ಊಟ ಸಿಕ್ಕುತ್ತಿಲ್ಲೆ, ಮತ್ತೆ ಕೆಲವು ದಿನ ಚಾಯ ಸಿಕ್ಕುತ್ತಿಲ್ಲೆ, ಕೆಲವು ದಿನ ತಣ್ಕಟೆ ಕಾಪಿ ಮಾಂತ್ರ ಸಿಕ್ಕುದು – ಹೋ!
ಸವಾರಿ ಎಲ್ಲಿಗೆ ಹೋವುತ್ತರೂ “ಗುರುಗೊ ಇದ್ದಲ್ಲೇ ಪೀಠ” ಇರೆಕ್ಕು. ಗುರುಗಳ ಒಟ್ಟಿಂಗೇ ಗುರುಗೊಕ್ಕೆ ಬೇಕಾದ ವ್ಯವಸ್ಥೆಗೊ ಬೇಕಾವುತ್ತು.
ಪೀಠದ ದೃಷ್ಟಿಲಿ ಸಮಗ್ರ ಅನುಕೂಲಕ್ಕಾಗಿ, ಸಂಘಟನೆಯ ಉದ್ದೇಶಕ್ಕಾಗಿ ಹಲವು ವ್ಯವಹಾರಂಗೊ ಪೋನಿಲೇ ಆವುತ್ತು. ಹಾಂಗಾಗಿಯೇ ದಪ್ಪದ – ದೊಡ್ಡ ಕರಿಮೊಬೈಲು ಬೇಕಪ್ಪದು ಮಂಜಣ್ಣನ ಕೈಲಿ!
~

ಹೊತ್ತಿಂಗಪ್ಪಗ ಪೂಜೆಗೆ ಬೇಕಾದ ಹೂಗು ಸಂಪಾಲುಸುದು, ಗುರ್ತು ಪರಿಚಯ ಇಲ್ಲದ್ದ ಊರಿಲಿ ದನದ ಹಾಲು – ನೈವೇದ್ಯಕ್ಕೆ – ಸಂಪಾಲುಸುದು, ಪೂಜೆಗಪ್ಪಗ ಕಾಯಿಮಡಗಲೆ ಇಪ್ಪೋರ ಪಟ್ಟಿ ಮಾಡುಸುದು, ಅವಕ್ಕೆ ಬೇಕಾಗಿ ಬಂಙ ಬಪ್ಪದು, ದೊಂಡೆ ಒಡದು ಮಂತ್ರ ಹೇಳುದು, ಆರತಿಗೆ ನೆಣೆ ಹಾಕುದು, ದೀಪಕ್ಕೆ ಎಣ್ಣೆ ಎರವದು, ಅಭ್ಯಾಸವೇ ಇಲ್ಲದ್ದ ಹವೆಲಿ ದಿನಕಳವದು, ಮನೆಲಿ ಒಸ್ತ್ರ ಒಗದು ಕೊಡ್ಳೆ ಜೆನ ಇದ್ದರೂ – ಇರುಳೋ ಮರುಳೋ ಹೇಳಿಗೊಂಡು ತನ್ನ ಒಸ್ತ್ರ ತಾನೇ ಒಗಕ್ಕೊಂಬದು, ಗುರುಗೊ ಪೀಠಕ್ಕೆ ಬಂದು ಕೂಬಗ ನೂಕುನುಗ್ಗಲು ಆಗದ್ದ ಹಾಂಗೆ ನೋಡಿಗೊಂಬದು, ಗೊಂದಲ ಆಗದ್ದ ಹಾಂಗೆ ವೆವಸ್ತೆ ಮಾಡುದು -ಹೋದ ಎಲ್ಲಾ ದಿಕ್ಕೆ ವೆವಸ್ತೆಗೆ ಜೆನ ಇರ್ತವಿಲ್ಲೆ ಇದಾ, ಗುರುಗಳ ಕಣ್ಸನ್ನೆಗೆ ಸರಿಯಾಗಿ ಸ್ಪಂದಿಸುದು, ಆಜ್ಞೆಗಳ ಸರಿಯಾಗಿ ಪಾಲುಸುದು, ಗುರುಗಳ ಸಂಜ್ಞೆಗಳ ಸೇರಿದ ಜೆನಂಗೊಕ್ಕೆ ತಿಳುಶುದು, ಆಶೀರ್ವಚನಕ್ಕಪ್ಪಗ ಮೈಕ್ಕ ತೆಯಾರು ಮಾಡುದು, – ಒಂದೋ, ಎರಡೋ ! ಪುರುಸೊತ್ತು ಸಿಕ್ಕಿರೆ ಉಂಡೊಂಬದು – ಮನೆಲಿ ಕೊಯಿಷಕ್ಕಿ ಆದರೂ ಗುರುಸೇವೆಲಿಪ್ಪಗ ಬೆಣ್ತಕ್ಕಿ ಉಂಬದು, ಒಟ್ಟಿಲಿ ಹೇಳ್ತರೆ ಗುರುಗೊಕ್ಕೆ ಬೇಕಾದ ಎಲ್ಲ ಕಾರ್ಯವನ್ನುದೇ ಮಾಡುದು ಅವರ ಕೆಲಸ. ಒಂದೇ ಶಬ್ದಲ್ಲಿ ’ಪರಿವಾರ’ದವು ಹೇಳುದು ಅವರ. ಶ್ರೀ ಗುರುಗಳ ಪರಿವಾರಲ್ಲಿ ಇಪ್ಪವು ಹೇಳಿ ಅರ್ತ.

ಮನೆ ಬಿಟ್ಟು ಒಂದೆರಡು ತಿಂಗಳಾದರೂ ಕೆಲವು ಸರ್ತಿ ಬಪ್ಪಲೆಡಿತ್ತಿಲ್ಲೆ, ಎಡಿತ್ತಿಲ್ಲೆ ಹೇಳಿರೆ, ಬಪ್ಪ ಹಾಂಗೆ ಇರ್ತಿಲ್ಲೆ ಪರಿಸ್ಥಿತಿಗೊ. ಸ್ವಂತ ಕರ್ಚಿಲಿ ಬಪ್ಪಲೆಡಿಯದ್ದಷ್ಟು ದೂರ ಇಪ್ಪಲೂ ಸಾಕು, ಅತವಾ ಕೆಲಸದ ಒತ್ತಡ ಇಪ್ಪಲೂ ಸಾಕು, ಅತವಾ ಅನಾರೋಗ್ಯ ಇಪ್ಪಲೂ ಸಾಕು – ಎಲ್ಲ ಒಟ್ಟಾಗಿ ಮನೆಯವರಿಂದ, ಅವರ ಪ್ರೀತಿಂದ ಸಂಪೂರ್ಣ ದೂರ ಇದ್ದುಗೊಂಡು, ನಾವೆಲ್ಲ ಅತ್ಯಂತ ಗೌರವಿಸುವ ನಮ್ಮ ಶ್ರೀಗುರುಗೊ ಆರಾಮಲ್ಲಿ ಇಪ್ಪಲೆ ಬೇಕಾದ ಕಾರ್ಯ ಮಾಡ್ತಾ ಇರ್ತವು – ತೆರೆಮರೆಲಿ.
ಗುರುಗಳ ಸನ್ಯಾಸಾಶ್ರಮದ ಹಾಂಗೆಯೇ ಅದೊಂದು ಸೇವಾಶ್ರಮ. ಒಂದೆರಡು ದಿನ ಅಲ್ಲ, ಯೇವತ್ತೂ ಅದೇ ಕೆಲಸ. ಅದೇ ಶ್ರಮ, ಅದೇ ಆಶ್ರಮ, ಅದೇ ಸಾರ್ಥಕತೆ.
ಆಟಿಯೂ ಇಲ್ಲೆ, ಪುಣ್ಣಮೆಯೂ ಇಲ್ಲೆ, ಆಯಿತ್ಯವಾರವೂ ಲೆಕ್ಕ ಇಲ್ಲೆ, ಕೆಂಪು ಸೋಮವಾರವೂ ಲೆಕ್ಕ ಇಲ್ಲೆ!
ನಿಂಗಳೇ ಹೇಳಿ:

ಪರಿವಾರದ ಅಣ್ಣಂದ್ರ ಕೆಲಸ ಸುಲಭವೋ?
ನಿರಂತರ ಕೆಲಸ, ಓಡಾಟ – ಎಲ್ಲವನ್ನುದೇ ಶ್ರದ್ಧೆಲಿ ಮಾಡಿಂಡು ನಮ್ಮ ಗುರುಪೀಠವ, ಗುರುಗಳ ಎಲ್ಲ ಕೆಲಸಂಗಳನ್ನೂ ಸಾಕಾರ ಗೊಳುಸಿಗೊಂಡು – ಕೆಲಸಂಗಳ ಎಲ್ಲವನ್ನುದೇ ಹೆಗಲಿಲಿ ಹೊತ್ತುಗೊಂಡು ನೆಗೆಮೋರೆಲಿ ನಿಂದಿರ್ತವಲ್ಲದೋ – ನವಗೆ ಎಡಿಗೋ?
ಅಪುರೂಪಲ್ಲಿ ಒಂದು ದಿನ ಗುರುಗಳ ಕಾಂಬಲೆ ಹೋಗಿಪ್ಪಾಗ – ಅಲ್ಯಾಣ ಊಟ ಸೇರದ್ರೆ, ಅಲ್ಯಾಣ ಹವೆ ಹಿಡಿಯದ್ರೆ, ಅಲ್ಯಾಣ ಬೊಬ್ಬೆಗೆ ತಲೆ ಸೆಳುದರೆ – ನಾವು ಕಂಗಾಲಾವುತ್ತು.
ಪಾಪ, ಈ ಪರಿವಾರದ ಅಣ್ಣಂದ್ರಿಂಗೆ ಹೇಂಗಾಗ?
ಇರುಳೋ ಮರುಳೋ – ಕಂಪ್ಲೀಟ್ರಿಲಿ ಅಂಚೆ ಬರವದೋ, ದೀಪಕ್ಕೆ ಎಣ್ಣೆ ಹಾಕುದೋ, ವೇನಿಂದ ಪೀಠ ಹೊತ್ತುಗೊಂಡು ಬಂದು ಸಭೆಲಿ ಮಡಗುದೋ, ಸಭೆಲಿ ಸಮರ್ಪಣೆ ಆದ್ಸರ ಭಂಡಾರಕ್ಕೆ ಸೇರುಸುದೋ – ಅವಿರತ, ಅವಿಶ್ರಾಂತ ಕೆಲ್ಸ!
ಒರಿಶಲ್ಲಿ ಒಂದು ದಿನ ಅವಕ್ಕೂ ಕೋಪ ಬತ್ತು, ಅವಕ್ಕೂ ಪಿಸುರು ಬತ್ತು. ಅವಕ್ಕೂ ತಾಳ್ಮೆ ತಪ್ಪುತ್ತು. ಏಕೇದರೆ, ಅವುದೇ ಮನುಷ್ಯರೇ ಅಲ್ಲದೋ?
ಎಲ್ಲರ ಹಾಂಗೆ ಅವಕ್ಕೂ ಭಾವನೆಗೊ ಇರ್ತಿಲ್ಲೆಯೋ?
ಎಲ್ಯೋ ಆರಿಂಗೋ ಬೈದವಡ, ಜೋರುಮಾಡಿದವಡ – ಹೇದು ನಾವು ಪರಿವಾರವ ದೂರಿಗೊಂಡು ಬಂದರೆ ನಾವುಬೆಳದ್ದು ಸಾಲ- ಹೇದು ಅರ್ಥ ಆವುತ್ತಷ್ಟೆ.
ಶ್ರೀ ಪರಿವಾರಲ್ಲಿ ಇಪ್ಪದು ನಮ್ಮ ಸ್ವಂತ ಅಣ್ಣನೇ ಆಗಿದ್ದರೆ, ಅಥವಾ – ನಾವೇ ಆಗಿದ್ದರೆ ಎಂತ ಮಾಡ್ತಿತು?
ಇದೆಲ್ಲ ಗ್ರೇಶುವಗ ಒಪ್ಪಣ್ಣಂಗೆ ಅನುಸಿದ್ದು – ಪರಿವಾರದ ಅಣ್ಣಂದ್ರೂ ನಮ್ಮವೇ ಅಲ್ಲದೋ?

~
ಒಂದೊಪ್ಪ: ಶ್ರೀಪೀಠದ ನಿಜವಾದ ಅನುಗ್ರಹ ಇಪ್ಪದು ಶ್ರೀ ಪರಿವಾರಕ್ಕೆ. ಹಾಂಗಾಗಿ, ಸಮಾಜವೇ ಶ್ರೀಪರಿವಾರ ಆಗಲಿ.

 

6 thoughts on “ಪರಿವಾರದ ಅಣ್ಣಂದ್ರೂ ನಮ್ಮವೇ ಅಲ್ಲದೋ?!

  1. ಒಪ್ಪಣ್ಣ, ಶುದ್ದಿ ಪಷ್ಟಾಯ್ದು ! ನಾವುದೇ ಪರಿವಾರದ ಅಣ್ಣಂದಿರ ಜಾಗೆಲಿ ನಿಂದು ನೋಡಿರೆ, ನವಗೆ ಅಷ್ಟೆಲ್ಲಾ ಮಾಡಿಗೊಂಬಲೆ ಎಡಿಗೋ ಹೇಳಿಯೂ ಆಲೋಚನೆ ಮಾಡೆಕ್ಕಾದ್ದೆ..ಎಲ್ಲಿಯೋ ಒಂದ್ಸರ್ತಿ ಪರಂಚಿರೆ ಅದನ್ನೇ ದೊಡ್ಡ ಮಾಡಿ ಹೇಳುದು ಹೇಳುವವರ ಸಣ್ಣತನವ ತೋರ್ಸುತ್ತು ಅಷ್ಟೇ!

  2. ಹರೇರಾಮ ಒಪ್ಪಣ್ಣ….
    ತುಂಬಾ ಲಾಯ್ಕ ಶುದ್ದಿ. ನಿಜವಾಗಿಯೂ ಸೇವಾಶ್ರಮವೇ ಶ್ರೀಪರಿವಾರದ್ದು!
    ಗುರುಪೀಠದ ಸೇವೆಯ ಮಾತೃಹೃದಯಲ್ಲಿ ಮಾತೃಸೇವೆ ಮಾಡಿದ ಹಾಂಗೆ ಮಾಡುವೋರು ಅವು. ಪ್ರಾಯ, ಊರು, ಮನೆತನದ ವಿಭಿನ್ನತೆ ಎಷ್ಟೇ ಇದ್ದರೂ ಒಂದೇ ದಿಕ್ಕೆ ಕೂಡುಕುಟುಂಬ ಆಗಿ ಕೆಲಸ ಮಾಡಿಗೊಂಡು ಅನ್ಯೋನ್ಯತೆಲಿ ಇಪ್ಪದರ ಕಾಂಬಗ ನಮ್ಮ ಮನಸ್ಸು ತುಂಬುತ್ತು.
    ನಮ್ಮ ಮಕ್ಕಳ, ಅಣ್ಣತಮ್ಮಂದ್ರ ಪ್ರಾಯದ ಮಕ್ಕೊ ಶ್ರೀಪರಿವಾರಲ್ಲಿ ಇಪ್ಪದು. ಪ್ರತಿಯೊಬ್ಬನ ಮೋರೆ ನೋಡುವಾಗ ನಮ್ಮ ಮನೆಮಕ್ಕಳ ಮೋರೆಯೇ ಕಾಣುತ್ತು. ನಾವು ಮಾತಾಡ್ಸಿದ ಪ್ರೀತಿಲಿ ಅವು ನಮ್ಮ ಹತ್ರೆ ಮಾತಾಡ್ತವು. ಗವುರವ ಕೊಟ್ಟು ಗೌರವ ತೆಕ್ಕೊಂಬೋರು ನಮ್ಮ ಪರಿವಾರದ ಅಣ್ಣಂದ್ರು. ಶ್ರೀಪೀಠ ಮೊಕ್ಕಾಂ ಇಪ್ಪ ಜಾಗೆ ಯಾವುದೇ ಇರಲಿ, ಆ ಜಾಗೆಗೆ ತಕ್ಕ ಹೊಂದಿಗೊಂಡು, ಆ ಜಾಗೆಯ ಅಶನ-ನೀರು ತೆಕ್ಕೊಂಡು ಮೋರೆಲಿ ನೆಗೆ ಮಡಿಕ್ಕೊಂಡು ಸಮಯದ ಪರಿವೆ ಇಲ್ಲದ್ದೆ ಕೆಲಸ ಮಾಡುವ ಪರಿವಾರದ ಅಣ್ಣಂದ್ರಿಂಗೆ ಎಷ್ಟು ಗವುರವ ಕೊಟ್ರೂ ಸಾಲ.

    ಒಪ್ಪಣ್ಣ,
    ನೀನು ಹೇಳಿದ ಹಾಂಗೆ, ಶ್ರೀಪೀಠದ ಯಾವ ಸೇವೆಯಾನ್ನಾದರೂ ಆಯಾ ಸಮಯಕ್ಕೆ ಹೊಂದಿಗೊಂಡು ಮಾಡುವ ಈ ಅಣ್ಣಂದ್ರು ಅವರ ಸ್ವಂತದ್ದರ ಮರದು ಕೆಲಸ ಮಾಡ್ತವು. ಮನೆಯೋರ ಹತ್ರೆ ಮಾತಾಡ್ತವಾ ಇಲ್ಲೆಯಾ ಹೋದೋರ ಹತ್ರೆ ಮಾತಾಡಿಯೇ ಮಾತಾಡ್ತವು. ನಮ್ಮ ಮನೆ ಯೋಚನೆಯ ತಾಂಗುಲೆ ನವಗೆ ಎಡಿತ್ತಿಲ್ಲೆ, ಅವರ ಸ್ವಂತದ ಮನೆ ಮರದು ನಮ್ಮ ಹಲವು ಮನೆಯೋರ ಕಷ್ಟವ ನಮ್ಮ ಪರವಾಗಿ ಪೀಠಕ್ಕೆ ಎತ್ತುಸುತ್ತವು. ಒಗ್ಗಟ್ಟಿಲಿ ದುಡಿವ ಈ ಅಣ್ಣಂದ್ರ ಮೇಲೆ ಶ್ರೀಗುರುಪೀಠದ ಆಶೀರ್ವಾದ ಯಾವಾಗಲೂ ಇರಲಿ..
    ನಮ್ಮ ಸುಖ ದುಃಖದ ಒಟ್ಟಿಂಗೆ ಅವರ ಸುಖ-ದುಃಖದ ಬಗ್ಗೆಯೂ ವಿಚಾರ್ಸುವ ಮನಸ್ಸಿರಲಿ…
    ಶ್ರೀಪೀಠದ ಕಣ್ಣುಗಳ ಹಾಂಗೆ ಇಪ್ಪ ನಮ್ಮ ಶ್ರೀಪರಿವಾರ ಯಾವಾಗಲೂ ನೆಮ್ಮದಿಲಿರಲಿ..

  3. ಹರೇರಾಮ,
    ಒಪ್ಪಣ್ಣ ಮಾವ ಬರದ ಶುದ್ದಿ ಒಪ್ಪ ಆಯ್ದು ಹೇಳಿ ಎನ್ನ ಮಗ ಹೇಳಿದ 
    ಪರಿವಾರದ ಅಣ್ಣಂದ್ರ ಬಗ್ಗೆ ಲಾಯ್ಕಕ್ಕೆ ಹೇಳಿದ್ದಿ. ಅವರ ಕೆಲಸ ಸುಲಭದ್ದಲ್ಲ. ಪೀಠದ ಕೆಲಸ, ಬಂದ ಜನಂಗೊ ಸಭೆ ಎಲ್ಲವನ್ನೂ ನಿಭಾಯಿಸೆಕಾರೆ ತಾಳ್ಮೆ, ಪ್ರೀತಿ, ಭಕ್ತಿ, ನಿಷ್ಠೆ ಎಲ್ಲವೂ ಬೇಕನ್ನೆ… ನಮ್ಮಂದಾರೆ ವರ್ಷ ಇಡೀ ಎಡಿಗಾ? ಆದಿತ್ಯವಾರ ರಜೆ ರಜ್ಜ ಹೆಚ್ಚು ಮನುಗಿಕ್ಕುವೊ ಹೇಳಿ ಮಾಡ್ಳೆಡಿಯಾನ್ನೆ ಅವಕ್ಕೆ. ಹಶು ಆದ ಕೂಡ್ಳೆ ಅಡಿಗೆ ಕೋಣೆಗೆ ನುಗ್ಗಿ ತಿಂದಿಕ್ಕುಲೂ ಎಡಿಯ. ರಜ್ಜ ಬಚ್ಚುತ್ತು ಹೇಳಿ ಗ್ರೇಶಿಯಪ್ಪಗ ಮನುಗಿ ಒರಗುಲೂ ಎಡಿಯ.
    ನಾವು ಮಠಕ್ಕೆ, ಗುರುಗಳ ಹತ್ತರಂಗೆ ಹೋಪವ್ವು ಇದೆಲ್ಲವನ್ನೂ ಅರ್ಥಮಾಡಿಗೊಳ್ಳೆಕು… ಗುರುಗಳೂ ಪರಿವಾರದವ್ವೂ ಇದೆಲ್ಲ ಮಾಡುದು ನವಗೆ ಬೇಕಾಗಿ..ಸಮಾಜಕ್ಕೆ ಬೇಕಾಗಿ..ಸಮಾಜದ ಒಳ್ಳೆದಕ್ಕೆ ಬೇಕಾಗಿ ಹೇಳುದು ನವಗೆ ತಿಳುದರೆ ಅಷ್ಟೇ ಸಾಕು..
    ಪರಿವಾರದ ಅಣ್ಣಂದ್ರಿಂಗೆ ಧನ್ಯವಾದ 

  4. ಪರಿವಾರದ ಅಣ್ಣಂದ್ರು (ಪಿ.ಎ. ಹೇಳಿ ಹೇಳುವನೊ) ಮಾಡೆಂಡಿಪ್ಪ ಸೇವಾಕೆಲಸ ಕಾರ್ಯಂಗೊ, ಅಬ್ಬಬ್ಬ, ಸುಧಾರಿಸ್ಯೊಂಡು ಹೋಪದರ ಮೆಚ್ಚಲೇ ಬೇಕು. ಒಪ್ಪಣ್ಣ ಆ ಕಾರ್ಯಂಗಳ ಒಂದನ್ನೂ ಬಿಡದ್ದೆ ಪಟ್ಟಿ ಮಾಡಿದ್ದು ಲಾಯಕಾಯಿದು.
    ಸಂಸಾರ ತಾಪತ್ರಯಂಗೊ, ಲಡಾಯಿಗೊ, ಹೀಂಗಿಪ್ಪ ಸಣ್ಣ ಸಣ್ಣ ವಿಷಯಂಗಳ ಗುರುಗಳ ಗಮನಕ್ಕೆ ತಪ್ಪ ಕೆಲವು ಜೆನಂಗಳ ಅವಸ್ಥೆ ಕಂಡು ಬೇಜಾರು ಆವ್ತು. ಅಂತೂ ಈ ಶುದ್ದಿ ಲಾಯಕಾಗಿತ್ತು.

  5. ಹರೇರಾಮ, ಒಪ್ಪಣ್ಣ, ಎನ ಇದರ ಓದಿಯಪ್ಪಗ ಮದಾಲು ನೆಂಪಾದ್ದು ; ಮನ್ನೆ ಹತ್ತುದಿನ ಹಿಂದೆ ಕುಂಬಳೆ ವಲಯದ ಹೆಮ್ಮಕ್ಕೊ ನಮ್ಮ ಅಡಿಗೆಯ ದಿನ ”ನಮ್ಮ ಸಕಾಯಲ್ಲಿ ಮಾಡಲಿದ್ದು ವಿಜಯಕ್ಕ ನಿಂಗೊ ಬಪ್ಪಲೆ ಬೇಕು” ಹೇಳಿತ್ತಿದ ಈ ವಲಯದ ಅಧ್ಯಕ್ಷೆ ಪದ್ಮತ್ತಿಗೆ , ಅಕೇರಿಗೆ ಒಬ್ಬ ಗಟ್ಟಿ ಗೆಂಡುಮಕ್ಕೊ ಬೇಕಾತು ಹೇಳಿಗೊಂಡು ಆರು ಸಿಕ್ಕಿದ್ದವಿಲ್ಲೆ, ಅಂಬಗ ಒಪ್ಪಣ್ಣನ ದಿನಿಗೇಳಿಕ್ಕಲಾವುತಿತು !!!? ಅದಿರಳಿ, ಪರಿವಾರದವರ ಕಾಳಜಿ ಗುರುಭಕ್ತರಿಂಗೆ ಬೇಕಾದ್ದೆ ಅಲ್ಲೋ? ಒಳ್ಳೆದಾಯಿದು ಶುದ್ದಿ

  6. ಭಾರೀ ಲಾಯಕ ಆಯಿದು. ಪರಿವಾರಲ್ಲಿ ಇಪ್ಪ ಅಣ್ಣಂದಿರು ಪಡುವ ಶ್ರಮ ದೊಡ್ಡದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×