ಬಣ್ಣವೇ ಅಲ್ಲದ್ದ ಬೂದಿಗೆ ಜೀವ ತುಂಬಿದ ‘ಕೆಲಸಗಾರ’

March 2, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಕರೆ ಮಾವಿನಮರಲ್ಲಿ ಹೂಗು ಹೋಗಿತ್ತದು ಮೆಡಿಬಿಟ್ಟಿದೋ, ಮುಗಿಲಿಂಗೆ ಕರಂಚಿದ್ದೋ ಗೊಂತಾಯಿದಿಲ್ಲೆ;
ಪಾರೆಗುಡ್ಡೆಲಿ ಮುಳಿ ಕೊಯಿದು ಮುಗಾತೋ ಗೊಂತಾಯಿದಿಲ್ಲೆ; ತರವಾಡುಮನೆ ಸುಭದ್ರೆ ಕಂಜಿಹಾಕಿತ್ತೋ ಗೊಂತಾಯಿದಿಲ್ಲೆ;
ಕಳುದವಾರ ಗುಜ್ಜೆ ಹೊತ್ತ ಅಬಾವನ ಕೈಯ ಮೇಣ ಒಣಗಿತ್ತೋ ಗೊಂತಾಯಿದಿಲ್ಲೆ; ಗುಜ್ಜೆ ಕೊರದ ಸರ್ಪಮಲೆಅತ್ತೆಯ ಕೈಲಿ ಮೇಣ ಅಂಟಿತ್ತೋ
– ಅದೂ ಗೊಂತಾಯಿದಿಲ್ಲೆ, ಯೇವಗಳೂ ಗೊಂತಾವುತ್ತ ಬೈಲ ಶುದ್ದಿಗೊ ಒಪ್ಪಣ್ಣಂಗೆ ಗೊಂತೇ ಆಯಿದಿಲ್ಲೆ;
ಎಂತಗೆ? – ಮೊನ್ನೆಂದ ನಾವು ತಲೆ ಹೆರ ಹಾಕಿದ್ದಿಲ್ಲೆ;
ಸರ್ಪಮಲೆಮಾವ ಕೊಟ್ಟ ಪುಸ್ತಕ ತಂದ ಮತ್ತೆ ಮನೆಒಳವೇ ಬಾಕಿ ನಾವು!

ದಿನ ಉದಿಆದರೆ ಹೊಸ ಪುಟ ತೆಗದು ಓದಲೆ ಸುರುಮಾಡುದು; ದಿನಇಡೀಕ ಮನೆಕೆಲಸದ ಒಟ್ಟೊಟ್ಟಿಂಗೆ ಎಡೆಲಿ ಪುರ್ಸೊತ್ತಪ್ಪಗ ಮತ್ತಾಣ ಪುಟ ಓದುದು. ಒರಗಲಪ್ಪಳೂ ಓದಿಂಡೇ ಒರಗುದು; ಮಾಷ್ಟ್ರುಮಾವನ ಮಗಳ ಹಾಂಗೆ!
ಇಷ್ಟು ದಪ್ಪದ ಪುಸ್ತಕ ಮುಗಿಯೆಡದೋ; ಇನ್ನಾಣೋನಿಂಗೆ ಪಾಸು ಮಾಡೆಡದೋ?
ಇನ್ನು ನಾಕನೇ ದಿನದ ಮಂಗ್ಳವಾರ ನಿನಗೆ ಓದಿ ಆದರೂ ಆಗದ್ದರೂ – ಎನಗೆ ಕೊಡೆಕ್ಕು – ಹೇದು ಅಭಾವ ಮೊನ್ನೆಯೇ ಜೋರಿಲಿ ನೆಂಪು ಹೇಳಿತ್ತಿದ್ದ. ಹಾಂಗೆ, ಓದುದೊಂದೇ ಬೇಲೆ!
ಓದಿಂಡಿಪ್ಪಗಳೇ ಮೊನ್ನೆ ಹೊತ್ತೋಪಗ ಒಂದರಿಯೇ ಮೂಡಹೊಡೆಲಿ ಒಂದು ಜೋರು ಬೆಣ್ಚಿಬಂದು ಮಿಣ್ಕಿದ ಹಾಂಗಾಗಿ ಜ್ಞಾನೋದಯ ಆದ ಹಾಂಗೆ ಆತು. (ಪಡು ಹೊಡೆಲಿ ಆದರೆ ಶರ್ಮಪ್ಪಚ್ಚಿಯ ವಾಚು ಆದಿಕ್ಕು; ಆದರೆ ಇದು ಮೂಡ ಹೊಡೆಲಿ!) 😉

ಅದಿರಳಿ – ಜ್ಞಾನೋದಯ ಎಂತರ?
ಒಂದೇ ಹಾಂಗೆ ಓದಿ ನಾವೆಂತ ಸರ್ಪಮಲೆ ಮಾವ ಅಪ್ಪದೋ, ಅಲ್ಲ ಮಾಷ್ಟ್ರುಮಾವ ಅಪ್ಪದೋ, ಅಲ್ಲ ವಿದ್ವಾನಣ್ಣ ಅಪ್ಪಲಿದ್ದೋ!
ಒಂದೇ ದಿನ ಓದಿ ಮುಗುಶುತ್ತೇನೆ ಹೇಳಿಗೊಂಡು ಕೂರ್ತ ಬಗೆ ನವಗಪ್ಪದಲ್ಲ – ಅದು ಗೊಂತಿಪ್ಪದೇ!
ರಜ ಹೊತ್ತು ತಲೆ ಒಳಂಗೆ ಹೋವುತ್ತು, ಬಿಡದ್ದೇ ಓದುವಗ ಮತ್ತೆ ತಲೆಂದ ಮೇಗೆಯೇ ಹೋಪಲೆ ಸುರು ಆವುತ್ತು.
ಹಾಂಗೆ ಅಭಾವ ಬಂದರೆ ಆ ಪುಸ್ತಕ ಕೊಂಡೋಗಲಿ, ಮತ್ತೆ ನಾಕರಲ್ಲಿ ಸಿಕ್ಕುತ್ತ ಶೆನಿವಾರ ತಿರುಗ ಹೊತ್ತೊಂಡು ಬಪ್ಪೆ – ಹೇಳಿಗೊಂಡು ಪುಸ್ತಕ ಮಡುಸಿ ಎದ್ದತ್ತು!
ಬೈಲಿಲೇ ಒಂದು ಹೊಸಗಾಳಿ ತಿಂಬಲೆ ನಾಕುಮಾರು ನೆಡವಲೆ ಸುರುಮಾಡಿತ್ತು – ಯೇವತ್ರಾಣಂತೇ.
ಶರ್ಮಪ್ಪಚ್ಚಿ ದಿನಾಗುಳೂ ಟ್ರಾನ್ಸುವಾರು ಪೆಟ್ಟಿಗೆಯಷ್ಟು ದೂರಕ್ಕೆ ನೆಡದು ವಾಕು ಹೋಪದು ನೆಂಪಾತು.
~
ಹಾಂಗೇ ಕಾಲೆಳಕ್ಕೊಂಡು ಬಪ್ಪಗ ಎತ್ತಿದ್ದು ಮಾಂತ್ರ ಮಾಷ್ಟ್ರುಮಾವನ ಮನಗೇ. ನಾವು ಅಂಬಗಂಬಗ ಹೋವುತ್ತಾ ಇರ್ತು; ವಿಶೇಷ ಇಲ್ಲೆ.
ಮಾಷ್ಟ್ರುಮಾವ ಚಿಟ್ಟೆಲಿ ಕೂದೊಂಡು ಎಲೆಯಿಂಬಲೆ ಅಡಕ್ಕೆ ತುಂಡುಸಿಗೊಂಡು; ಅದರ್ಲಿಯೂ ಏನೂ ವಿಶೇಷ ಕಂಡತ್ತಿಲ್ಲೆ;
ಮೊನ್ನೆ ಹುಟ್ಟಿದ ಬೂದುಬಣ್ಣದ ಕಂಜಿಯ ಮಾತಾಡ್ಸೆಂಡು ಮಾಷ್ಟ್ರಮನೆ ಅತ್ತೆ ಅಕ್ಕಿ ಕೇರಿಗೊಂಡಿತ್ತವು ಹೆರಾಣ ಜೆಗಿಲಿಲಿ; ಅದರ್ಲಿಯೂ ಏನೂ ವಿಶೇಷ ಇಲ್ಲೆ.

ಆದರೆ, ಈ ವಾರ ಅವರ ಮಗಳಿಂಗೆ ಪರೀಕ್ಷೆಯೂ ಇದ್ದತ್ತಿಲ್ಲೆ, ಲೇಬೂ ಇದ್ದತ್ತಿಲ್ಲೆ – ಅದುವೇ ವಿಶೇಷ ಇದಾ!
ಯೇವತ್ತೂ ಮನೆಹೆರದಿಕೆ ಕಾಣದ್ದ ಕೂಸು ಆ ದಿನ ಜೆಗೆಲಿಲೇ ಇದ್ದತ್ತು! ಅದುವೇ ವಿಶೇಷ.
~
ಸಾಮಾನ್ಯವಾಗಿ ಅಲ್ಲಿ ಹೋಗಿಪ್ಪಾಗ ಒಪ್ಪಣ್ಣಂಗೆ ಕಾಂಬದೇನು ಹೇದರೆ – ಮನೆಲಿ ಜೆಗಿಲಿಕರೇಲಿ ಶಾಸ್ತಾವುಗುಡಿಯಷ್ಟಕೆ ಇರ್ತ ಆ ಓದುತ್ತ ಕೋಣೆಒಳದಿಕೆ ಬಾಗಿಲು ಹಾಕಿ ಕೂದುಗೊಂಡ್ರೆ, ಲೋಕ ಮುಳುಂಗಿರೂ ಹೆರ ಬಾರ ಕೂಸು.
ನಾವು ನೋಡ್ಳೆ ಹೋದರೆ ರಪರಪನೆ ಇಂಗ್ಳೀಶಿಲಿ ಗೀಚಿಗೊಂಡು ಓದಿಬರದು ಮಾಡಿಗೊಂಡಿಕ್ಕು.
ನೀಯೆಂತರ ಮಾಡ್ತದು ಇಲ್ಲಿ – ಕೇಳಿರೆ ’ನಾಳೆ ಪರೀಕ್ಷೆ’ ಅತವಾ ’ನಾಳ್ತಿಂಗೆ ಲೇಬು’, ಅಲ್ಲದ್ದರೆ ’ಬಪ್ಪವಾರ ಲೇಬುಪರೀಕ್ಷೆ’ – ಹೀಂಗೆಂತಾರು ಉತ್ತರ ಇಕ್ಕು;
ಅದು ಹೇಳುದು ಬೇರೆಬೇರೆಯೇ ಆದರೂ – ನವಗೆ ಅದೆಲ್ಲ ಹೆಚ್ಚುಕಮ್ಮಿ ಒಂದೇ ನಮುನೆ ಕೇಳುಗಷ್ಟೆ. ಉತ್ತರ ಕೊಡುವಗಳೂ ಹಾಂಗೇ – ಬರವದೂ ನಿಲ್ಲ, ಮೋರೆಯೂ ತಿರುಗ; ತೊಡಿ ಮಾಂತ್ರ ತಿರುಗ್ಗಷ್ಟೆ! 😉
ಓದುತ್ತ ಮಕ್ಕೊಗೆ ನಾವು ಪೊದ್ರ ಕೊಡ್ಳಾಗಡ, ಬೊಳುಂಬುಮಾವ° ಹೇಳುಗು. ಓದಲಿ, ಓದಲಿ.

ಈ ಸರ್ತಿ ನಾವುದೇ ಓದಲೆ ಹೆರಟು ಬಚ್ಚಿದ್ದ ಕಾರಣ ಬಂದದಿದಾ!
ಹಾಂಗೆ.. ಯೇವತ್ತೂ ಅಂಬೆರ್ಪಿಲಿರ್ತ ಆ ಕೂಸಿಂಗೆ ಮನ್ನೆ ಅಪುರೂಪಲ್ಲಿ ರಜ ಪುರುಸೊತ್ತು ಸಿಕ್ಕಿದ್ದಕ್ಕೆ – ಕೈಲಿ ಒಂದು ಕಂಪ್ಲೀಟ್ರು ಹಿಡ್ಕೊಂಡು ಓಮೆ ಮಾಡಿಗೊಂಡಿತ್ತು.
ಅದರ್ಲಿ ಎಂತ ವಿಶೇಷ ಇದ್ದು ಗ್ರೇಶಿದಿರೋ?! ಅದೇ ಈ ವಾರದ ಶುದ್ದಿ..!!

~
ಅದು ಓಮೆಮಾಡಿಗೊಂಡಿದ್ದ ಕಂಪ್ಯೂಟ್ರು ಯೇವದು?
ಅಂದು ದೊಡ್ಡಮಗನ ಹತ್ತರೆ ಇದ್ದ ನಮುನೆದು – ಮಡುಗಲೆ ಒಂದು ಇಡೀ ಮೇಜು ಬೇಕಪ್ಪ ನಮುನೆದು ಅಲ್ಲ!
ಮಾಷ್ಟ್ರುಮನೆ ಅತ್ತೆ ಒತ್ತುತ್ತ – ಅಂಬಗಂಬಗ ಸುಚ್ಚು ನಂದುವ – ಹಳೇ ಕಂಪ್ಲೀಟ್ರು ಅಲ್ಲಲೇ ಅಲ್ಲ!
ಕೈಬೇರೆ, ಕಾಲುಬೇರೆ, ಬೀಲದ ಎಲಿ ಬೇರೆ – ಚೆದುರಿಗೊಂಡು ಇಪ್ಪ ನಮುನೆದಲ್ಲ!
ಕಾಲಿಲಿ ಮಡಿಕ್ಕೊಂಡು ಮಾತಾಡ್ಸುತ್ತ ನಮುನೆದು!

ವೋಯ್ – ಈ ಒಪ್ಪಣ್ಣಂಗೆ ಲೇಪ್ಟೋಪುದೇ ಕಂಡು ಅರಡಿಯದೋದು ಪುಸ್ಕ ಮಾಡೆಡಿ,
ಇದು ಲೇಪ್ಟೋಪುದೇ ಅಲ್ಲ; ಅದರಿಂದಲೂ ಗವುಜಿದು, ಸಣ್ಣದು!
ಚೆಲ, ಅದೆಂತರ ಅಂಬಗ – ಕುತೂಹಲದ ಸಂಶಯಲ್ಲಿ ಶೇಪುಭಾವನ ತಲೆ ಇನ್ನೂ ಬಗ್ಗಿತ್ತೊ ಏನೋ!
ಕಂಪ್ಲೀಟ್ರೋ! ಕಂಪ್ಲೀಟ್ರು ಅಲ್ಲ; ಮೊಬೈಲೋ – ಮೊಬಿಳಿಯೂ ಅಲ್ಲ, ಪದ್ಯ ಕೇಳ್ತದೋ – ಅದೂ ಅಲ್ಲ.
ಅಂಬಗ ಎಂತರಪ್ಪಾ ಇದು ಹೊಸ ಜಾತಿದು?!
~

ಬೂದಿ ಹಿಡ್ಕಟೆ ಆದರೂ ಎಷ್ಟು ಚೆಂದ ಕಾಣ್ತಪ್ಪೋ!

ಓ ಮನ್ನೆ ಮಾಷ್ಟ್ರುಮಾವನ ಮಗ – ಅಮೇರಿಕಲ್ಲಿಪ್ಪೋನು ದೊಡ್ಡರಜೆ ಮಾಡಿ ಎರಡು ವಾರ ಊರಿಂಗೆ ಬಂದಿತ್ತದು ನವಗೆ ಗೊಂತಿದ್ದು. ಅಪ್ಪೋ! ಬಂದದರ್ಲಿ ನಿಂದಲ್ಲೇ ನಿಲ್ಲದ್ದೆ ಬೆಂಗುಳೂರು, ಕೊಡೆಯಾಲ, ಮೆಡ್ರಾಸು, ಕುಂಡಡ್ಕ, ಮೂಡಬಿದ್ರೆ
– ಹೇಳಿಗೊಂಡು ಸುತ್ತಿ, ಬಂದಷ್ಟೇ ಅಂಬೆರ್ಪಿಲಿ ಒಪಾಸು ಹೋದ್ದದೂ ಗೊಂತಿಕ್ಕು.
ಅವ° ಬಪ್ಪಗ ಎರಡು ದೊ-ಡ್ಡ ಬೇಗಿಲಿ ತುಂಬ ಹಿಡಿತ್ತಷ್ಟು ಎಂತೆಂತದೋ ತಯಿಂದನಡ.
ಮಾಷ್ಟ್ರುಮಾವಂಗೆ ಹೊಗೆಸೊಪ್ಪು ತಂದಿಕ್ಕೋ; ಮಾಷ್ಟ್ರುಮನೆ ಅತ್ತೆಗೆ ಒಗ್ಗರಣೆಸವುಟು ತಂದಿಕ್ಕೋ; ಬಿದ್ರೆಮಾವಂಗೆ ಬೆದ್ರುಕೋಲು ತಂದಿಕ್ಕೋ; ಕುಂಡಡ್ಕ ಮಾವಂಗೆ ಚೆಂಡೆಕೋಲು ತಂದಿಕ್ಕೋ – ಹೀಂಗೆಲ್ಲ ಮಾತಾಡಿ ಹೊತ್ತುಕಳೇಕಾರೆ ಆಚಕರೆಮಾಣಿಯೇ ಆಯೆಕ್ಕಟ್ಟೆ; ನವಗಾಗ ಅದೆಲ್ಲ!
ಚೀಪೆಚೋಕುಲೇಟು ನವಗೂ ಎರಡು ತುಂಡು ಸಿಕ್ಕಿದ್ದತ್ತು ಓ ಮೊನ್ನೆ. ಅದರ ನಿಂಗೊಗೆ ಹೇಳಿತ್ತಿದ್ದಿಲ್ಲೆ 😉
ಗಾಯತ್ರಿಗೆ ಬೇಗು, ಅದರ ತಂಗಗೆ ಆಟಾಡ್ಳೆ ಗೊಂಬೆ ತಂದದು – ಮನ್ನೆ ಆಚಮನೆಗೆ ಹೋಗಿಪ್ಪಾಗ ನೋಡಿತ್ತಿದ್ದು ನಾವು.
ಅಷ್ಟೇ ಗೊಂತು.
ಅವ ತಂದ ಫಳಫಳ ಹೊಳವ ಕರಿಬೆಳೀ ಸಾಮಾನೇ ಇದು ಅಡ – ಈ ಕೂಸಿನ ಕೈಲಿ ಇದ್ದದು!!
~
ಕಾಂಬಗಳೇ ಎಂತಾ ಮನಾರ! ಕೈತೊಳದು ಮುಟ್ಟೇಕು – ಹೇದು ಆಚಮನೆದೊಡ್ಡಪ್ಪ ಹೇಳುಗು;
ಆದರೆ – ಕಂಪ್ಯೂಟ್ರುಗೊಕ್ಕೆ ಆ ಮಾತು ಅನ್ವಯ ಆವುತ್ತಿಲ್ಲೇಡ, ಇದನ್ನೊ ಚೆಂಡಿಕೈಲಿ ಮುಟ್ಟಿರೆ ಹೋಮಂದ ಎದ್ದ ಹಾಂಗೆ ಹೊಗೆ ಏಳುಗಿದಾ!
ಸರ್ಪಮಲೆ ಮಾವ ಕೊಟ್ಟ ಪುಸ್ತಕದಷ್ಟೇ ದೊಡ್ಡ ಅಕ್ಕೋ ಏನೋ, ಆದರೆ ಅಷ್ಟು ದಪ್ಪವೂ ಇಲ್ಲೆ.
ಮೇಜಿಲೇ ಮಡಗಿ ಆಯೆಕ್ಕೂದು ಏನಿಲ್ಲೆ, ನೆಲಕ್ಕಲ್ಲಿಯೂ ಅಕ್ಕು, ಕಾಲಿಲಿಯೂ ಅಕ್ಕು, ಕಂಕುಳಲ್ಲಿಯೂ ಅಕ್ಕು, ಇನ್ನೊಬ್ಬನ ತಲೆಲಿಯೂ ಅಕ್ಕು, ವೇನಿಲಿಯೂ ಅಕ್ಕು, ವೇನಿಟಿಲಿಯೂ ಅಕ್ಕು!
ಹಾಂಗಿರ್ತ ಹೊಸನಮುನೆದು ಇದು.

ಒತ್ತುತ್ತೆ ಹೇದರೆ ಕೀಬೋರ್ಡು ಇಲ್ಲೆ, ಅರೆತ್ತೆ ಹೇಳಿರೆ ಎಲಿಕುಂಞಿ ಇಲ್ಲೆ; ಪದ್ಯ ಕೇಳ್ತೆ ಹೇದರೆ ಹತ್ತರೆ ಮಡಿಕ್ಕೊಂಡು ಸ್ಪೀಕರು ಇಲ್ಲೆ; ವಯರು, ಕೊಳಿಕ್ಕೆ, ಕೊಕ್ಕೆ – ಅದೇವದೂ ಇಲ್ಲೆ. ಅಲ್ಲದೋ – ಕೇಳಿದೆ.
ಎಂತ ಕತೆ ಇದು? ಬರೇ ಸ್ಕ್ರೀನುಮಾಂತ್ರ ಹಿಡ್ಕೊಂಡು ಬಂದರೆ – ಒಳುದ್ದೆಲ್ಲ ಎಲ್ಲಿದ್ದು ಅಂಬಗ? ಕೇಳಿದೆ.
ಇದು ಇಷ್ಟೇ ಇಪ್ಪದು ಒಪ್ಪಣ್ಣಾ. ಇದು ಲೇಪ್ಟೋಪಿಂದಲೂ ಸಣ್ಣದು, ಇದಕ್ಕೆ ಐಪೇಡು ಹೇಳ್ತದು – ಹೇಳಿತ್ತು.

ಐಪೇಡಿನ ಬಗ್ಗೆ, ಅದರ ಮಾಡಿದ ಕಂಪೆನಿಯ ಬಗ್ಗೆ, ಆ ಕಂಪೆನಿಯ ಯಜಮಾನನ ಬಗ್ಗೆ ಒಂದೈದು ನಿಮಿಷ ಹೇಳಿಗೊಂಡು ಹೋತು. ಎಲ್ಲವೂ ತಲಗೆ ಹೊಕ್ಕಿದಿಲ್ಲೆ, ರಜರಜ ನೆಂಪಿದ್ದು. ನೆಂಪಿಪ್ಪದರ ಹೇಳ್ತೆ. ಆತೋ?!

~
ನಲುವತ್ತೊರಿಶ ಮದಲಿಂಗೆ ಇನ್ನೂ ಕಂಪ್ಯೂಟ್ರುಗೊ ಪ್ರಚಾರ ಆಯೇಕಟ್ಟೆ.
ಆ ಸಮೆಯಲ್ಲಿ ಈಗಾಣ ಕಾಲದ ಹಾಂಗೆ ಹಾಂಗೆ ಒಬ್ಬಂಗೊಂದು ಕಂಪ್ಯೂಟ್ರು ಹೇಳಿ ಬಪ್ಪಲೆ ಸುರು ಆಗಿದ್ದತ್ತಿಲ್ಲೇಡ – ಕೋಣೆಇಡೀ ತುಂಬುತ್ತ ಕಂಪ್ಯೂಟ್ರು ಹೇದರೆ ಒಂದು ಕಂಪೆನಿಗೇ ಆತದು.
ಇಂಜಿನಿಯರು ತಲೆಯ ಇಬ್ರು ಸೇರಿಗೊಂಡು ಅಂಬಗಾಣ ಅಗತ್ಯಕ್ಕೆ ಸೇರ್ತ ನಮುನೆಯ ಕಂಪ್ಯೂಟ್ರು ರೂಪುರೇಷೆ ಕೊಟ್ಟವಡ. ಕಂಪ್ಯೂಟ್ರಿಂಗೆ ಬೇಕಾದ ಕೀಬೋರ್ಡು, ಎಲಿ, ಚೆಂದದ ಟೀವಿ – ಎಲ್ಲವನ್ನೂ ತಂದು ಒಂದು ಸಣ್ಣ ಗೇರೇಜಿಲಿ ಮಡಗಿಂಡು – ಹೊಡಿಗಳ ಸೇರುಸಿ ಇಡಿ ಮಾಡಿ – ಮಾರ್ಲೆ ಸುರುಮಾಡಿದವಡ.
ಅದು ಒಳ್ಳೆತ ಪ್ರಚಾರ ಆಗಿ ಲಕ್ಷಗಟ್ಳೆ ಪೈಶೆ ಆತಡ ಅವಕ್ಕೆ. ಮುಂದೆ ಅದುವೇ ಒಂದು ಕಂಪೆನಿ ಆಗಿ ಬೆಳದತ್ತಡ.
ಆ ಕಂಪೆನಿಯ ಹೆಸರೇ ಏಪುಳು ಹೇಳಿಗೊಂಡು ಅಡ! ಹಣ್ಣಿನ ತುಂಡುಸಿದ ಅವರ ಸೀಲು ತೋರುಸಿತ್ತು – ಆ ಐಪೇಡು ನೆಗ್ಗಿ.
ಮೊನ್ನೆಷ್ಟೇ ಬೈಲಿಲಿ ಏಪುಳುವಿನ ಶುದ್ದಿ ಮಾತಾಡಿದ್ದದು ಈ ಕೂಸಿಂಗೆ ನೆಂಪಾಯಿದಿಲ್ಲೆ ಅಷ್ಟಪ್ಪಗ.
~

ಆ ಕಂಪೆನಿಯ ಮಾಡಿದ ಜೆನರ ಹೆಸರು ಸ್ಟೀವು ಜಾಬ್ಸ್ – ಹೇಳಿ ಅಡ.
ಜಾಬು ಹೇದರೆ ಇಂಗ್ಳೀಶಿಲಿ ಕೆಲಸಗಾರ ಅಲ್ಲದೋ, ಇದುದೇ ಹೆಸರಿಂಗೆ ತಕ್ಕ ದಿನಕ್ಕೆ ಹದ್ನೆಂಟು ಗಂಟೆಯ ಹಾಂಗೆ – ವಾರದ ಐದು ದಿನಲ್ಲಿ ತೊಂಬತ್ತು ಗಂಟೆ ದುಡುದು ಸುರುವಾಣ ದಿನಂಗಳಲ್ಲಿ ಕಂಪ್ಯೂಟ್ರು ಜೋಡುಸಿತ್ತಾಡ.
ಏಪುಳು ಕಂಪೆನಿಯ ಕಂಪ್ಯೂಟ್ರುಗೊಕ್ಕೆ ತುಂಬಾ ಹೆಸರುಹೋತಡ.
ಹೋದ ಹಾಂಗೆಯೇ ಈ ಕೆಲಸಗಾರಂಗೂ ಹೆಸರು ಹೋತಡ.
ಆದರೆ ಇದರೆಡಕ್ಕಿಲಿ ಯೇವದೋ ವಿಶಯಕ್ಕೆ ಜಗಳ ಆಗಿ, ಅದುವೇ ಕಟ್ಟಿದ ಯೇಪುಳು ಕಂಪೆನಿಂದ ಹೆರ ಹೋತಡ.
ಇದು ಹೆರ ಹೋದ್ದೇ ತಡ, ಕೆಲಸಗಾರ ಇಲ್ಲದ್ದೆ ಜಾಗೆ ಹಡ್ಳುಬಿದ್ದ ಹಾಂಗೆ ಕಂಪಿನಿಯೂ ಹಡ್ಳು ಬಿದ್ದತ್ತಡ.
ಈ ಕಂಪೆನಿ ಇನ್ನು ಉದ್ದಾರ ಆಯೇಕಾರೆ ಆ ಕೆಲಸಗಾರನೇ ಬರೆಕ್ಕಟ್ಟೆ – ಹೇದು ಅಂದಾಜಿ ಆಗಿ, ಪುನಾ ಕೈಕ್ಕಾಲು ಹಿಡುದು ಆ ಜೆನರ ಪುನಾ ಬರುಸಿದವಡ. ಅದುವೇ ಕಟ್ಟಿದ ಮನಗೆ ಅದುವೇ ಪುನಾ ಬಂತು!

ಮುಳುಗಿಂಡಿದ್ದಿದ್ದ ಆ ಒಟ್ಟೆದೋಣಿಯ ನಾವಿಕನಾಗಿ ಪುನಾ ಗುರಿಕ್ಕಾರ್ತಿಗೆಗೆ ನಿಂದತ್ತು.
ಆ ಸಮೆಯಲ್ಲಿ ಮತ್ತೂ ಒಂದು ಹೊಸ ಆಲೋಚನೆ ಮಾಡಿತ್ತಡ, ಕಂಪ್ಯೂಟರಿನ ಒಯಿವಾಟು ಮಾಂತ್ರ ಅಲ್ಲದ್ದೆ, ಹೊಸತ್ತು ಸಾಮಾನುಗಳ ಮಾಡಿರೆ ಹೇಂಗೆ?
ಕಂಪ್ಯೂಟರಿಲಿ ಪದ್ಯ ಕೇಳೇಕಾರೆ, ಕಂಪ್ಲೀಟರಿಲಿ ಇಂಟರ್ನೆಟ್ಟು ಬೈಲಿಂಗಿಳಿಯೇಕಾರೆ, ಕಂಪ್ಯೂಟರಿಲಿ ಆಟ ಆಡೇಕಾರೆ- ಮೇಜಿನ ಎದುರು ಕೂದೇ ಆಯೆಕ್ಕಟ್ಟೆ;
ಎಲ್ಲಿ ಬೇಕೋ ಅಲ್ಲಿಗೆ ಹೊತ್ತುಗೊಂಡು ಹೋವುತ್ತ ಹಾಂಗೆ ಇಪ್ಪ – ಸಣ್ಣ ನಮುನೆ ಕಂಪ್ಯೂಟ್ರು ಮಾಡಿರೆ ಹೇಂಗೆ? – ಹೇದು ಹೊಸ ಆಲೋಚನೆ ಹಾಕಿತ್ತಡ.
ಕಂಪ್ಯೂಟರಿನ ಕೈ, ಕಾಲು, ಬೀಲ ಎಲ್ಲ ಬಲುಗಿ ಇಡ್ಕಿ, ಒಂದು ಗೆಣಸಲೆಯಷ್ಟಕೆ ಬರೇ ಸ್ಕ್ರೀನು ತುಂಡು ಮಾಂತ್ರ – ಮುಟ್ಟಿರೆ ಕೀಬೋರ್ಡು, ಅರದರೆ ಎಲಿಕುಂಞಿ, ಕಿಸೆಲಿ ಮಡಗಿರೆ, ಕೆಮಿಗೊಂದು ವಯರು ಸಿಕ್ಕುಸಿರೆ ಎಷ್ಟು ಬೇಕಾರೂ ಪದ್ಯ ಕೇಳುಲಕ್ಕು – ಹೇಳ್ತ ನಮುನೆದರ ಮಾಡಿತ್ತಡ.
ಅದಕ್ಕೆ ಐಪೋಡು ಹೇಳಿ ಹೆಸರಡ.

ಅಂಬೆರ್ಪಿನ ಜವ್ವನಿಗರು ಅದರನ್ನೇ ಉಪಯೋಗುಸಲೆ ಸುರುಮಾಡಿದವಡ.
ಸಾವಿರಗಟ್ಳೆ, ಲಕ್ಷಗಟ್ಳೆ, ಕೋಟಿಗಟ್ಳೆ ಐಪೋಡುಗೊ ಮಾರಾಟ ಅಪ್ಪದ್ದೇ – ಮುಳುಗಿಂಡಿದ್ದ ಆ ಕಂಪೆನಿಗೆ ಜೀವ ಬಂತಡ.
ಮುಂದೆ ಅದೇ ಐಪೋಡಿನ ಅಭಿವುರ್ದಿ ಮಾಡಿ ಅದರಿಂದ ದೊಡ್ಡದು – ಐಪೇಡ್ ಹೇಳ್ತ ಸಾಧನವ ಮಾಡಿದವು.
ಅದುವೇ ಇದು – ಹೇಳಿಗೊಂಡು ತೋರುಸಿತ್ತು.
~

ಆಗಳೇ ಹೇಳಿದಾಂಗೆ, ಒಂದು ಪುಸ್ತಕದಷ್ಟೇ ದೊಡ್ಡದು. ಆದರೆ ಅದು ಮಾಡುವ ಕೆಲಸಂಗೊ ಮಾಂತ್ರ ಅಪಾರ ಅಡ!
ಕುಂಞಿಮಾಣಿ ಬಾಯಿಯ ಒಳ ವಿಶ್ವವನ್ನೇ ತೋರುಸಿದ ಹಾಂಗೆ, ಈ ಸಣ್ಣ ತುಂಡಿಲಿ ಎಂತೆಲ್ಲ ಮಾಡ್ಳೆಡಿತ್ತು ಹೇದು ಒಂದೊಂದೇ ವಿವರುಸಲೆ ಸುರುಮಾಡಿತ್ತು.
ಕೀಬೋರ್ಡೇ ಇಲ್ಲೆ ಆದಿಕ್ಕು – ಆದರೆ ಅದರ ಚೋಲಿಯ ಮುಟ್ಟಿರೆ ಸಾಕು, ಅದಕ್ಕೆ ಗೊಂತಾವುತ್ತಡ, ಯೇವದರ ಒತ್ತಿದ್ದು ಹೇದು.
ನಾವು ಮುಟ್ಟಿದ್ದದಕ್ಕೆ ಅನುಸರಿಸೆಂಡು ಕೆಲಸ ಮಾಡ್ತದಡ ಅದು.
ಬರೇಕಾರೆ ಹೇಂಗಪ್ಪಾ – ಹೇಳಿ ಆಚೋಚನೆ ಮಾಡೇಕಾದ್ಸೇನಿಲ್ಲೆ, ಎಂತಾರು ಬರೇಕು ಹೇಳ್ತಲ್ಲಿ ಅದುವೇ ಒಂದು ಕೀಬೋರ್ಡಿನ ತೋರುಸುತ್ತಡ. ಅಲ್ಲಿ ಅಕ್ಷರಂಗಳ ಒತ್ತಿರೆ ಅದಕ್ಕೆ ಅರ್ತ ಆಗಿ ಅದು ತೆಕ್ಕೊಳ್ತಡ.

ಗಂಟೆ ನೋಡುದರಿಂದ ಹಿಡುದು, ಪದ್ಯಕೇಳುದು, ರಿಕಾರ್ಡು ಮಾಡುದರಿಂದ ತೊಡಗಿ, ಆಟ ಆಡುದು, ಇಂಟರ್ನೆಟ್ಟಿಲಿ ಗುರುಟುದು, ಮೋರೆಪುಟಲ್ಲಿ ಮೋರೆನೋಡುದು, ಓರುಕುಟ್ಟಿಲಿ ಕುಟ್ಟುದು – ಎಲ್ಲವುದೇ ಮಾಡ್ಳಾವುತ್ತು – ಹೇಳಿಗೊಂಡು ಒಂದೊಂದೇ ಮಾಡಿ ತೋರುಸಿತ್ತು. ಮನೆ ಜೆಗಿಲಿಲಿ ಕೂದೊಂಡೇ ಬೈಲಿಂಗೆ ಇಳುದತ್ತು ಒಂದರಿ!
ಚೆಲಾ ಕುಟ್ಟಿಚ್ಚಾತನ ಚೋದ್ಯವೇ – ಹೇಳುಗು ಸುಭಗಣ್ಣ ಇದರ ಕಂಡ್ರೆ!

ಈ ಕೂಸಿಂಗೆ ಐಪೇಡನ್ನೂ, ಐಪೇಡಿಂಗೆ ಇದನ್ನೂ – ಪರಸ್ಪರ ಒಳ್ಳೆತ ಗುರ್ತ ಆಯಿದು; ಅವಕ್ಕಿಬ್ರಿಂಗೆ ಒಳ್ಳೆತ ಹಾಳಿತ ಸಿಕ್ಕಿದ್ದು ಹೇಳ್ತದು ಅಂದಾಜಿ ಆವುತ್ತು ಅವಿಬ್ರು ಮಾತಾಡ್ಸು ನೋಡಿರೆ. ಇದು ಹೇಳಿದ್ದೆಲ್ಲ ಅದಕ್ಕೆ ಸರೀ ಗೊಂತಾಗಿಂಡಿದ್ದತ್ತು, ಬೆರಳಿಲಿ ಮುಟ್ಟಿಮುಟ್ಟಿ ಮೇಲೆಕೆಳ ತೋರುಸಿದ ಹಾಂಗೆ ಅದರಲ್ಲಿದ್ದ ಚಿತ್ರಂಗಳುದೇ ಮೇಲೆಕೆಳ ಕೊಣ್ಕೊಂಡಿದ್ದತ್ತು.
ಇದರ್ಲಿ ಗುರುಟಿಗುರುಟಿ ಅಭ್ಯಾಸ ಆದರೆ ಮತ್ತೆ ಬೇರೆದರ ಅರವಲೆ ಮನಸ್ಸೇ ಹಿಡಿತ್ತಿಲ್ಲೆ – ಹೇಳಿತ್ತು ಅದು ಒಂದರಿ.
~
ಹಾಂಗೆ ಆಟ ತೋರುಸುವಗ ಇನ್ನೊಂದು ವಿಶೇಷ ಸಂಗತಿಯೂ ಗೊಂತಾತದಾ ನವಗೆ!
ಆ ಸಾಮಾನಿನ ಸ್ಕ್ರೀನು, ಚೋಲಿ ಇಡೀ ಬೂದು ಬಣ್ಣ!
ತಗಡಿನ ಬೆನ್ನುದೇ ಬೂದುಬಣ್ಣ, ಒಳಾಣ ಟೀವಿಯೂ ಬೂದುಬಣ್ಣ.
ಆ ಬೂದು ಬಣ್ಣದ ಮೇಗೆಯೇ ಎಲ್ಲಾ ಚಿತ್ರಂಗೊ ಬಪ್ಪದು – ಹೋಪದು.
ಮಾಷ್ಟ್ರಮನೆ ಅತ್ತೆಯ ಕಂಪ್ಯೂಟರಿನ ಹಾಂಗೆ ಕಣ್ಣುಕುತ್ತುತ್ತ ಬಣ್ಣಂಗೊ ಕಾಣ್ತಿಲ್ಲೆ!

ಕೆಲವು ಸರ್ತಿ ಕೀಜಿಯ ತುಂಡಿನ ಹಾಂಗೆ ಮಸ್ಕಾವುತ್ತು – ಕೆಲವು ಸರ್ತಿ ಬೆಳ್ಳಿ ತಗಡಿನ ಹಾಂಗೆ ಪಳಪಳ ಹೊಳೆತ್ತು. ಎಂತ ಇದ್ದರೂ ಆ ಬೂದಿಯ ಮೇಗೆಯೇ ಎಲ್ಲ ಆಟಂಗಳೂ.
ಮನುಶ್ಶನ ಕಣ್ಣಿಂಗೆ ತುಂಬ ಹೊತ್ತು ನೋಡ್ಳೆ ಯೇವ ಬಣ್ಣ ಹೆಚ್ಚು ಆಹ್ಲಾದಕರ ಹೇಳ್ತದರ ಸ್ವತಃ ಕಂಡುಗೊಂಡು ಈ ಬೂದಿ ಬಣ್ಣದ ಪುಟಂಗಳ ಮಾಡಿದ್ದಡ.
ಈ ಸಾಮಾನು ಬಂದ ಮತ್ತೆ ಬೂದುಬಣ್ಣವೇ ಪ್ರಧಾನ ಹೇದು ಅನುಸಲೆ ಸುರುಆವುತ್ತಡ – ಹೇಳಿತ್ತು ಮಾಷ್ಟ್ರುಮಾವನ ಮಗಳು.
ಅಲ್ಲದ್ದರೆ ಬೂದುಬಣ್ಣ ಹೇದರೆ ಒಂದು ಬಣ್ಣವೇ ಅಲ್ಲ ಇದಾ- ಹೇಳಿತ್ತು; ಮಾಷ್ಟ್ರಮನೆಅತ್ತೆ ಬೂದುಬಣ್ಣದ ಕಂಜಿಯ ಕೊರಳುದ್ದಿ ಅಲ್ಲಿಂದ ಎದ್ದವು.

ಬೂದಿ ಬಣ್ಣದ ಐಪೇಡು ಹಿಡುದ ’ಕೆಲಸಗಾರ’

ಇದರ ವಿವರಣೆ ಎಲ್ಲ ಮುಗಿವನ್ನಾರವೂ ಮಾಷ್ಟ್ರುಮಾವ ಮಾತೇ ಆಡಿದ್ದವಿಲ್ಲೆಪ್ಪೋ; ಹೀಂಗಿರ್ತ ಹೊಸ ನಮುನೆ ಹೇಳಿಕೊಡುವಗ ಹಳಬ್ಬರೆಲ್ಲ ವಿದ್ಯಾರ್ಥಿಗಳೇ ಆಯೇಕಟ್ಟೆ! ಇಂದು ಈ ಕೂಸು ಟೀಚರು ಆಗಿದ್ದತ್ತು!
~
ಉಪಾಯಲ್ಲಿ ಒಂದರಿ ಮೆಲ್ಲಂಗೆ ತೆಕ್ಕೊಂಡು ಬೆರಳಿಲಿ – ಗೆಣವತಿ ಮಂಡ್ಳದ  ಗ – ഗ – ಬರದ ಹಾಂಗೆ ಮಾಡಿದೆ. ಚಿತ್ರ ಎಲ್ಲ ಎಲ್ಲೆಲ್ಲಿಗೆ ಓಡ್ಳೆ ಸುರು ಆತು.
ಇನ್ನು ನಮ್ಮಂದಾಗಿ ಹಾಳಪ್ಪದು ಬೇಡ, ಇದಾ, ಲಾಯ್ಕಿದ್ದು ಆತಾ.. – ಹೇದು ಓಪಾಸು ಕೊಟ್ಟೆ. ಇನ್ನು ಪುರ್ಸೋತಿಲಿ ಇನ್ನೊಂದರಿ ಹೋಗಿ ನೋಡೇಕು.
ಆಗಲಿ, ಲಾಯ್ಕಿದ್ದು. ಇದಕ್ಕೆಲ್ಲ ದೊಡ್ಡ ಪೈಶೆ ಇಕ್ಕೋ ಏನೋ – ಹೇಳಿದೆ. ಗೊಂತಿಲ್ಲೆ; ಅಣ್ಣನ ಕೈಲಿ ಕೇಳೆಕ್ಕಟ್ಟೆ – ಹೇಳಿತ್ತು.
ಇದು ಏಪುಳು ಆತನ್ನೇ – ಇನ್ನು ಇದರಿಂದಲೂ ಸಣ್ಣದು ಕೇಪುಳು ಬೇರೆ ಇದ್ದೋ – ನಾವು ಕೇಳಿದ್ದಕ್ಕೆ ಹೊಟ್ಟೆಹಿಡೂದು ನೆಗೆಮಾಡಿತ್ತು.
ನೆಗೆಮುಗುದ ಮತ್ತೆ ಸೋರಿ – ಹೇಳಿತ್ತು.

ಅದಿರಳಿ, ಈ ಐಪೋಡಿನ ಜನ್ಮಕರ್ತನಾದ ಆ ಕೆಲಸಗಾರ ಕಳುದೊರಿಶ ತೀರಿಗೊಂಡತ್ತಾಡ.
ಅದು ತೀರಿಹೋದಮತ್ತೆಯೇ ಆರ ಕೊಡುಗೆ ಎಂತರ ಹೇದು ಜೆನಂಗೊಕ್ಕೆ ಅರ್ತ ಅಪ್ಪಲೆ ಸುರು ಆದ್ಸಡ!
~

ಕೈಲೇ ಮುಟ್ಟಿಮುಟ್ಟಿ ಸೂಚನೆಗಳ ಕೊಡ್ತ ಕಾರಣ ನಮ್ಮ ಮನಸ್ಸಿಂಗೆ ಆಪ್ತ ಆವುತ್ತಡ.
ಚೆಂದಕೆ ಪದ್ಯ ಹೇಳ್ತ ಕಾರಣ ಕೆಮಿಗೂ ಆನಂದ ಆವುತ್ತಡ.
ಕಣ್ಣು ಬಚ್ಚದ್ದ ನಮುನೆ ಈ ಬೂದಿಬಣ್ಣಲ್ಲಿ ಎಲ್ಲ ವಿಶಯಂಗೊ ಮೂಡಿ ಬಪ್ಪ ಕಾರಣ ನಯನಾನಂದಕರವೂ ಇರ್ತಡ.
ಸಾವಿರಗಟ್ಳೆ ಪುಸ್ತಕಂಗಳ ಓದಲೆ ಎಡಿತ್ತಡ, ಸುಮಾರು ಆಟಂಗಳನ್ನೂ ಆಡ್ಳೆಡಿತ್ತಡ – ಈ ಎಲ್ಲ ಕಾರಣಂದಾಗಿ, ಒಂದರಿ ಅದರ ಉಪಯೋಗುಸಲೆ ಸುರುಮಾಡಿರೆ ಮತ್ತೆ ಕೈಬಿಡ್ಳೇ ಮನಸ್ಸು ಬತ್ತಿಲ್ಲೆ – ಹೇಳಿತ್ತು.
ಪರೀಕ್ಷೆಗೆ ಓದದ್ದೆ ಇನ್ನು ಇದರ್ಲೇ ಕೂದು ಹೊತ್ತುಕಳೆತ್ತೋ ಏನೋ – ಹೇದು ಮಾಷ್ಟ್ರುಮಾವಂಗೆ ತಲೆಬೆಶಿ ಸುರುಆದ್ದು ಕಂಡುಗೊಂಡಿತ್ತು ಒಪ್ಪಣ್ಣಂಗೆ. 😉

ಭಗವಂತಾ! ಎಂತೆಲ್ಲಾ ಹುಡ್ಕಾಣಂಗೊ. ಹೇಂಗೇಂಗಿರ್ತದರ ಮಾಡ್ತವು.
ಕೆಲವೊರಿಶ ಮದಲು ಇದು ಸಾಧ್ಯವೇ ಇಲ್ಲೆ ಹೇಳ್ತಂತಹಾ ಕಲ್ಪನೆ. ಈಗ ಸಾಕಾರ ಆಗಿ ನಮ್ಮ ಕೈಲಿ ಬಂತು.
ಎಲ್ಲವೂ ಸಾಧ್ಯ ಅಪ್ಪದು ಶಕ್ತಿಮೀರಿ ದುಡುದರೆ, ತಲೆಓಡುಸಿ ಬುದ್ಧಿವಂತಿಕೆ ಕರ್ಚು ಮಾಡಿರೆ ಮಾಂತ್ರ.
ಕಂಪೆನಿಯ ಎಲ್ಲೋರುದೇ ಸೇರಿ ಒಗ್ಗಟ್ಟಿಲಿ ದುಡುದರೆ ಹೀಂಗಿರ್ಸರ ಮಾಡ್ಳೆಡಿಗು; ಅಲ್ಲದೋ?
ನಾಕು ದಿನಕ್ಕೊಂದರಿ ಹರ್ತಾಳ, ಬಂದು ಹೇಳಿಗೊಂಡು ಕೆಂಪುಕೊಡಿ ಹಿಡುದು – ದಾರಿಹೋಪೋರಿಂಗೆ ಪೀಡೆಕೊಟ್ಟುಗೊಂಡು ಕೂದರೆ ಯೇವ ಕಂಪೆನಿಯವಂಗೂ ಕೆಲಸಗಾರ ಅಪ್ಪಲೆ ಎಡಿಯ – ಹೇದು ಕಂಡತ್ತು.
ಎಂತ ಹೇಳ್ತಿ?
ಇರುಳು ಉಂಡಿಕ್ಕಿ, ಸರ್ಪಮಲೆಮಾವನ ಪುಸ್ತಕ ಬಿಡುಸುವಗಳೂ ಕೈ ಬೆರಳು ಒಂದರಿ ಮೇಲೆಕೆಳ ಮಾಡಿ ಹೋತು!
ಹು! 😉

ಒಂದೊಪ್ಪ: ಕೆಲಸ ಹಿಡುದು ಕೂದರೆ ಬೂದಿಲಿಯೂ ಚಿತ್ರ ಅರಳುಸಲೆಡಿಗು.

ಸೂ:

 • ಕಳುದ ಶುಕ್ರವಾರ (ಪೆಬ್ರವರಿ 24ಕ್ಕೆ) ಸ್ಟೀವ್ ಜಾಬ್ಸ್ ತೀರಿಹೋದ ಮತ್ತೆ ಬಂದ ಮೊದಲ ಹುಟ್ಟುಹಬ್ಬ ಅಡ.
 • ಪಟ ಇಂಟರ್ನೆಟ್ಟಿಂದ
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಕೋಳ್ಯೂರು ಕಿರಣ

  ಲಾಯ್ಕ ಆಯ್ದು.ಒಬ್ಬ ಅಸಾಧಾರಣ ಮನುಷ್ಯ ಆ ಸ್ಟೀವ್ ಜಾಬ್ಸ್ . ಲೇಖನಕ್ಕೊಂದು ಒಪ್ಪ ಒಪ್ಪಣ್ಣ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನಬೆಟ್ಟಣ್ಣ

  ನೆಗೆ ಮಾಡಿಗೊಂಡೇ ಶುದ್ದಿ ಓದಿದೆ. ಲಾಯ್ಕ ಆಯ್ದು.
  ಎನಗೂ ಒಂದರಿ ಐಪೇಡು ಮುಟ್ಟಿ ನೋಡೆಕ್ಕು ಹೇಳಿ ಆವ್ತಾ ಇದ್ದು. ಮಾಷ್ಟ್ರು ಮಾವನಲ್ಲಿಗೇ ಹೋಯೇಕ್ಕಟ್ಟೆ

  [Reply]

  VN:F [1.9.22_1171]
  Rating: 0 (from 0 votes)
 3. ಅಡಕೋಳಿ
  ಅಡಕೋಳಿ

  ಬೆರಳ ತುದಿಯ ಮಾಹಿತಿ ಲಾಯಕ್ಕಿದ್ದು.

  ಶ್ರೀಕೃಷ್ಣ ಪರಮಾತ್ಮ ಬೆರಳ ತುದಿಯಿಂದ ಗೋವರ್ಧನ ಪರ್ವತ ಎತ್ತಿದ; ಸಂರಕ್ಷಣೆಗೆ…

  ಈಗಿನ ಕಾಲ ಮಹಿಮೆ!?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಪೆರ್ಲದಣ್ಣಎರುಂಬು ಅಪ್ಪಚ್ಚಿಕೇಜಿಮಾವ°ಹಳೆಮನೆ ಅಣ್ಣಶ್ಯಾಮಣ್ಣಮಂಗ್ಳೂರ ಮಾಣಿಮಾಷ್ಟ್ರುಮಾವ°ಪುಟ್ಟಬಾವ°ಚುಬ್ಬಣ್ಣವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಶಾಂತತ್ತೆಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಬಟ್ಟಮಾವ°ದೀಪಿಕಾಬೋಸ ಬಾವನೀರ್ಕಜೆ ಮಹೇಶvreddhiಸಂಪಾದಕ°ಜಯಶ್ರೀ ನೀರಮೂಲೆವೆಂಕಟ್ ಕೋಟೂರುರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ