ಗೋ ಹತ್ಯೆ ನಿಶೇಧಕ್ಕಾಗಿ ಒಂದು ಶಾಸನವೇ ಬಕ್ಕೋ…

ಭಾರತದ ಹಲವಾರು ವೈಶಿಷ್ಠ್ಯಂಗಳಲ್ಲಿ ಇಲ್ಯಾಣ ಗೋ ತಳಿಯೂ ಒಂದು.
ನಾಗರೀಕತೆ ಆರಂಭ ಅಪ್ಪಗಳೇ ಮನುಶ್ಯಂಗೆ ಕಂಡ ಜೀವಿ ಅದು. ವೇದ ಪುರಾಣಂಗಳಲ್ಲೂ ಇದರ ಉಲ್ಲೇಖ ಇದ್ದು.
ಗೋವುಗಳ ಸಂಖ್ಯೆಯ ಮೇಲೆಯೇ ಶ್ರೀಮಂತಿಕೆಯ ಗುರುತು ಮಾಡಿಗೊಂಡು ಇತ್ತಿದ್ದವು. ಗೋವುಗಳ ಅಪಹರಣ ಮಾಡಿದ ಕಾರಣವೇ ಅಲ್ದೋ – ಉತ್ತರನ ಪೌರುಷ ಗೊಂತಾಗಿ, ಪಾಂಡವರ ಗೊಂತಾಗಿ, ಮತ್ತೆ ಇಡೀ ಮಹಾಭಾರತ ಮುಂದುವರುದ್ದು.
~
ಈ ಗೋ ತಳಿಗಳ ಒಟ್ಟಾಗಿ ಭಾರತೀಯ ಗೋ ವಂಶ – ಹೇದು ಅದರ ಗುರುತುಸುತ್ತರೂ, ಅದರೊಳ ಹಲವಾರು ಜಾತಿಗೊ ಇದ್ದು.
ನಮ್ಮ ಕುಂಬ್ಳೆ ಸೀಮೆ, ಮಂಗ್ಳೂರು ಹೋಬಳಿಲಿ ಇಪ್ಪ ಕಾಸರಗೋಡು ತಳಿಂದ ತೊಡಗಿ, ತೆಂಕ್ಲಾಗಿಯಾಣ ವೆಚ್ಚೂರು ತಳಿ, ಗಟ್ಟದ ಮೇಗಾಣ ಮಲೆನಾಡುಗಿಡ್ಡ, ಮೈಸೂರು ಹೊಡೇಣ ಅಮೃತ ಮಹಲ್, ದಕ್ಷಿಣದ ಹೊಡೆಲಿಪ್ಪ ಬರಗೂರು ತಳಿ – ಇತ್ಯಾದಿ ಹಲವಾರು ತಳಿಗೊ ನಮ್ಮ ಕನ್ನಡ ಪ್ರದೇಶಲ್ಲಿಯೇ ಕಾಣ್ತು.
ಇನ್ನು ಆಂಧ್ರಕ್ಕೆ ಹೋದರೆ ಓಂಗೋಲು, ಗುಜರಾತಿಂಗೆ ಹೋದರೆ ಘೀರ್ – ಹೀಂಗಿಪ್ಪ ದೈತ್ಯ ಜಾತಿಗಳೂ ಇದ್ದವು.
ಇದೆಲ್ಲವೂ ಆಯಾ ಪ್ರಾದೇಶಿಕ ವಾತಾವರಣ ಮತ್ತೆ ಅಲ್ಯಾಣ ಕೆಲಸ, ಆಹಾರದ ಅಗತ್ಯಕ್ಕೆ ಅನುಗುಣವಾಗಿ ಕೆಲವೇ ಕೆಲವು ಬದಲಾವಣೆಗೊ ಮಾಡಿಗೊಮ್ಡರೂ – ಮೂಲತಃ ಇವೆಲ್ಲವೂ ಭಾರತೀಯ ಗೋ ತಳಿಗೊ.
~
ಒಂದು ಕಾಲಲ್ಲಿ – ನಮ್ಮ ಜೆನಂಗಳ ತಲೆಲಿ – ಊರದ್ದಾದರೆ ಒಂದು ಸಸಾರ – ಹೇದು ಅಭಿಪ್ರಾಯ ಇದ್ದತ್ತು.
ಊರದ್ದಾದರೆ ಪುಸ್ಕ ಹೇದು ಒಂದು ನಂಬಾಣಿಕೆ.

ಅಡಕ್ಕೆ ಮರ – ಊರದ್ದೋ, ಹೈಬ್ರೀಡೋ – ಕೇಳುಗು. ಹೈಬ್ರೀಡು ಆದರೆ ಒಳ್ಳೆದು, ಹೆಚ್ಚು ಫಲ ಬತ್ತು ಹೇದು.
ಚೆಕ್ಕರ್ಪೆ / ಬೆಂಡೆಕಾಯಿ / ತೊಂಡೆಕಾಯಿ – ಊರದ್ದೋ, ಗಟ್ಟದ್ದೋ? – ಗಟ್ಟಲ್ಲಿ ಮದಲಿಂಗೇ ಹೈಬ್ರೀಡು ನೆಟ್ಟು ಬೆಳವಲೆ ಸುರು ಮಾಡಿದ್ದವು.
ಹಾಂಗೇ – ದನಗಳೂ – ಊರದ್ದೋ / ಜೆರ್ಸಿಯೋ – ಹೇದು ಕೇಳುಗು.
ಎಂಗಳಲ್ಲಿ ಊರದ್ದೇ ಇಪ್ಪದು – ಹೇದರೆ ಜೆನ ಪುಸ್ಕ ಹೇದು ಲೆಕ್ಕ. ಎಬೆ, ಜರ್ಸಿ ಇಲ್ಲೆಯೋ- ಹೇದು.
ಜರ್ಸಿ ದನ ಒಂದಿದ್ದರೆ ಎಂಟತ್ತು ಲೀಟ್ರು ಸಿಕ್ಕುಗು. ಅದೇ ಊರದ್ದಾದರೆ ಎಂಟತ್ತು ಕುಡ್ತೆಯೂ ಸಿಕ್ಕ – ಹೇದು ಲೆಕ್ಕಾಚಾರ.
ಒಬ್ಬ ಹಾಂಗೆ ಸುರು ಆದರೆ ಮತ್ತೆ ಊರಿಡೀ ಹಬ್ಬುತ್ತಲ್ಲದೋ;
ಹಾಂಗೆ ಊರಿಡೀ ಹಬ್ಬಿತ್ತು ಈ ಜರ್ಸಿಯೂ.

ಹಾಲೆಂಡು, ಜರ್ಮನಿ ಇತ್ಯಾದಿ ದೇಶಂಗಳಲ್ಲಿ ಹಾಲಿಂಗೆ / ಮಾಂಸಕ್ಕಾಗಿ ಅಭಿವೃದ್ಧಿ ಮಾಡಿದ ತಳಿಯ ದನಗಳ ಇಲ್ಲಿಗೆ ತಂದು ತುರ್ಕಿದವಾಡ.
ಸರಿಯಾದ ಸಂಶೋಧನೆ ಮಾಡಿ, ಹಾಲು ಮಾಂತ್ರ ಜಾಸ್ತಿ ಮಾಡ್ಳೆ ಎಂತಾಯೇಕು – ಹೇದು ಅಧ್ಯಯನ ಮಾಡಿ ಅದಕ್ಕಾಗಿಯೇ ಬೆಳದ ತಳಿಗೊ ಅವೆಲ್ಲ.
ಬೇರೆ ಎಂತ ಸತ್ವವೂ ಇರ್ತಿಲ್ಲೆ, ಬರೇ – ಹಾಲು ಲೀಟ್ರುಗಟ್ಳೆ ಇರ್ತು ಅಷ್ಟೆ.
ಹಾಂಗಿರ್ತದರ ನಮ್ಮ ಊರಿಂಗೂ ತಂದು ಮಿಷ್ರ ಮಾಡಿದವು.
ಕ್ರಮೇಣ ಆಕರೆಲಿ, ಈಚಕರೆಲಿ, ಮೇಗಾಣ ಮನೆಲಿ, ಕೆಳಾಣ ಮನೆಲಿ ಎಲ್ಲೋರ ಮನೆಲಿಯೂ ಜರ್ಸಿ ದನಗೊ, ಹೋರಿಗೊ ಅಪ್ಪಗ ನಮ್ಮ ಮನೆಯ ದನಗೊಕ್ಕೂ ತಳಿ ಸಂಕರ ಅಪ್ಪಲೆ ಸುರು ಆತು.
ಗೋಡಾಗುಟ್ರ° ಬಂದು ಇಂಜೆಕ್ಷನು ಕೊಡುದು ಅದೇ ಜಾತಿಯ ಹೋರಿದು ಆತು.
ಅಂತೂ ಇಂತೂ – ಒಟ್ಟಾಗಿ, ನಮ್ಮ ಊರಿನ ದನಗೊ ಭಾರೀ ಅಪುರೂಪ ಹೇದು ಆತು.

ಅಷ್ಟಪ್ಪಗಳೇ ಸುರು ಆದ್ಸು, ಕಾಮದುಘಾ.
ಊರ ತಳಿಯ ದನಗಳ ರಕ್ಷಣೆಯ ಬಗೆಗೆ ಹೋರಾಟ, ನಮ್ಮ ಗುರುಗಳದ್ದು.
ಅದರ ಹಿರಿಮೆಯ, ಅದರ ಹಾಲಿನ ನಿಜಸತ್ವವ ಲೋಕಕ್ಕೆ ತಿಳುಸುವ ಕಾಯಕ.
ಇದರಿಂದಾಗಿ ಹಲವಾರು ಜೆನಂಗೊ ಮನಸ್ಸು ಬದಲುಸಿಗೊಂಡು, ನಮ್ಮ ಭಾರತೀಯ ತಳಿಯ ಸಾಂಕುಲೆ ಸುರು ಮಾಡಿದವು.
ಅಲ್ಲಲ್ಲಿ ಪುನಾ ಊರ ತಳಿಯ ದನಗೊಕ್ಕೆ ಭೇಡಿಕೆ ಬಂತು.
ನಮ್ಮೂರಿನ ಗೋವುಗೊ ಪೂರ್ಣ ನಾಶ ಅಪ್ಪದು ಒಳುದತ್ತು.
~
ಈಗ ಅದರ ಇನ್ನಾಣ ಹಂತ.
ಎಂತ್ಸರ?
ಮೊನ್ನೆ ಕೊಡೆಯಾಲಲ್ಲಿ ಕಾರ್ಯಕ್ರಮ ಆದ್ಸು ನಿಂಗೊಗೆ ಗೊಂತಿಕ್ಕು ಅಲ್ಲದೋ – ಆ ಕಾರ್ಯಕ್ರಮಲ್ಲಿ ನಮ್ಮ ಗುರುಗಳ ಒಟ್ಟಿಂಗೆ ಸ್ವರ ಸೇರ್ಸಿದ ಸುಬ್ರಮಣ್ಯಂ ಸ್ವಾಮಿ – ಎಂತ ಹೇಳಿದ್ದ°?
ಗೋ ರಕ್ಷಣೆಗಾಗಿ ಒಂದು ಕಾನೂನನ್ನೇ ಮಾಡುಸುತ್ತೇ – ಹೇದು.
ಆ ಪ್ರಕಾರಲ್ಲಿ ಸಂಸತ್ತಿಲಿ ಗೋ ರಕ್ಷಾ ಮಸೂದೆಯ ಬಗ್ಗೆ ಕೋರಿಕೆ ಅರ್ಜಿ ಕೊಟ್ಟಿದವಾಡ.
ಎಲ್ಲ ಸಮಗಟ್ಟು ನೆಡದರೆ, ಸದ್ಯಲ್ಲೇ ನಮ್ಮ ಭಾರತ ಸರಕಾರಂದ ಗೋ ಹತ್ಯೆ ನಿಷೇಧದ ಬಗೆಗೆ ಕೇಳುಗು.
ಹೇಳಿದಾಂಗೆ, ಈ ಕೋರಿಕೆಲಿಯೂ ದೇಸೀ ಗೋ ತಳಿಯ ಬಗ್ಗೆಯೇ ಬರದ್ಸಾಡ.
ಬಾಸ್ ಇಂಡಿಕಸ್ – ಹೇಳುವ ಜಾತಿಯ ದನಗಳ ಕೊಲ್ಲಲಾಗ, ಅದರ ಕೊಂದರೆ ಶಿಕ್ಷೆ ಆಯೇಕು – ಹೇದು ಅವರ ಕೋರಿಕೆ ಅಡ.
ಬೇಗನೆ ಆ ಅನುಶಾಸನ ಬರಳಿ.
ಭಾರತದ ಗೋವುಗೊ ಒಳಿಯಲಿ; ಜಗತ್ತಿಂಗೆ ಒಳಿತಾಗಲಿ.
ಗೋವು ವಿಶ್ವದ ಮಾತೆ ಅಡ; ಅಮ್ಮನ ಒಳಿಶಿಗೊಂಬ ಹೊಣೆ ವಿಶ್ವದ ಎಲ್ಲೋರಿಂಗೂ ಇದ್ದು.
~

ಒಂದೊಪ್ಪ: ಇಬ್ರು ಗೋರಕ್ಷಾ ಸ್ವಾಮಿಗೊ. ಒಬ್ಬರು ಆಂದೋಲನಲ್ಲಿ ಹೋರಾಡ್ತವು; ಇನ್ನೊಬ್ಬರು ಸಂಸತ್ತಿಲಿ ಹೋರಾಡ್ತವು.

ಒಪ್ಪಣ್ಣ

   

You may also like...

4 Responses

 1. S K GOPALAKRISHNA BHAT says:

  ನಮ್ಮ ಊರಿಲಿ ಊರ ಬೆಂಡೆ,ಮುಳ್ಳುಸೌತೆ ,ಪಡುವಳ ಕಾಯಿಗೆ ಕ್ರಯ ಹೆಚ್ಚು,ಗುಣವೂ ಹೆಚ್ಚು.
  ಊರದನದ ಹಾಲು ರುಚಿ ಹೆಚ್ಚು.
  ಆದರೆ ಜರ್ಸಿ ಬಾರದ್ದರೆ ಇಷ್ಟೆಲ್ಲಾ ಜನಕ್ಕೆ ಬೇಕಾದಷ್ಟು ಹಾಲು ಸಿಕ್ಕುತ್ತಿತ್ತೋ,ಎನಗೆ ಅನುಮಾನ.

 2. ಗೋಪಾಲ ಬೊಳುಂಬು says:

  ಮೇಲಿಂದಲ್ಲೇ ಶಾಸನ ಬಾರದ್ರೆ ಬರ್ಕತ್ತಾಗ. ಒಳ್ಳೆದಾಗಲಿ.

 3. ಒಳ್ಳೆ ಶುದ್ದಿ. ನಮ್ಮ ಊರಿಲ್ಲಿ ತರಕಾರಿ ಅಂಗಡಿಲಿ ಊರದ್ದಕ್ಕೆ ಕ್ರಯಜಾಸ್ತಿ ಅಪ್ಪು ಗೋಪಾಲ .ಹಾಲಿಂಗು ಹಾಂಗೆ ಹೇಳುವೋ .ಗುರುಗೊ ಹೇಳುವಾಂಗೆ ಎಲ್ಲ ಮನಗಳಲ್ಲೂ ಸಾಂಕಿರೆ ಸಾಕಕ್ಕನ್ನೆ.

 4. ಇಬ್ರು ಸ್ವಾಮಿಗಳ ಹೋರಾಟಲ್ಲಿ ನಮ್ಮ ಗೋಮಾತೆ ಸಂಕುಲ ಒಳುದು ಬೆಳೆಕು ಹೇಳ್ತ ಇರಾದೆ ನಮ್ಮೆಲ್ಲರದ್ದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *