Oppanna.com

ತಂತ್ರ ತೂಗುವ ತಂತ್ರಿಗಳೂ, ತಾಳ ಬಡಿವ ಪಟಹವೂ.. !

ಬರದೋರು :   ಒಪ್ಪಣ್ಣ    on   15/05/2015    5 ಒಪ್ಪಂಗೊ

ವಾರ ಬದಲುದು ಹೇದರೆ ಕೇರೆಚೋಲಿ ಬದಲಿದಷ್ಟೇ ಮೌನಕ್ಕೆ. ಗೊಂತೇ ಆವುತ್ತಿಲ್ಲೆ; ಹಿಂದೆ ತಿರುಗಿ ನೋಡಿರೆ – ಅಪ್ಪನ್ನೇ’ದು ಕಾಣ್ತು. ಮೊನ್ನೆ ಮೊನ್ನೆ ನೆಡದ ಘಟನೆಗೊ – ಅದಾ, ಒಂದು ವಾರ ಆಗಿಯೇ ಹೋತು – ಹೇದು ಕಾಣ್ತು.
ಶುದ್ದಿ ದಿನ ಬಂತು ಹೇದು ಆದರೆ ಒಪ್ಪಣ್ಣಂಗೆ ಒಂದು ವಿಷಯ ಸಿಕ್ಕಿಯೇ ಸಿಕ್ಕುತ್ತು, ಅಪ್ಪೋ!
~

ನಿಂಗೊಗೆ ಪಟಹ – ಹೇದರೆ ಗುರ್ತ ಇದ್ದನ್ನೇ?
ಅದಾ- ಜಾತ್ರೆ ಆಯನಂಗಳಲ್ಲಿ ದೇವರ ಹೊತ್ತುಗೊಂಡು ಬಲಿ ಹೆರಟಪ್ಪದ್ದೇ, ತಂತ್ರಿಗೊ ತಂತ್ರತೂಗಲೆ ಸುರು ಮಾಡಿಪ್ಪದ್ದೇ, ಕೆಂಪುಶಾಲಿನ ಮಾರಾಯ ಒಂದು ಮದ್ದಳೆಯ ಹಾಂಗಿರ್ಸರ – ಮದ್ದಳೆಯಷ್ಟು ತೋರ ಇರ್ತಿಲ್ಲೆ, ಸಪೂ..ರದ್ಸರ ಹೆಗಲಿಂಗೆ ಕಟ್ಟಿಂಡು  –ತೋಂ, ಪಟ, ತೋಂ, ತೋಂ, ತಂಪಟತ, ತಂಪಟತ, ತೋಮ್ – ಹೇದು ಹೆಟ್ಟುತ್ತದಾ – ಗೊಂತಾತೋ, ಅದೂ..ವೆ. ಅದಕ್ಕೆ ಪಟಹ ಹೇಳುಸ್ಸು. ಉಡಿಕ್ಕೆ ಹೇಳಿಯೂ ಹೇಳ್ತವಾಡ ಕೆಲವು ದಿಕ್ಕೆ.
ತಂತ್ರಿಗೊ ಇಡೀ ತಂತ್ರ ತೂಗುವನ್ನಾರ ಆ ಪಟಹ ವಾದನ ಇರ್ತು. ನಿಯಮಿತ ಲಯಲ್ಲಿ ನಾಸಿಕ ತಾಳಂಗಳಲ್ಲಿ ಚೆಂದಕೆ ಪಟಹವ ಕೇಳಿಗೊಂಡು ಗಂಭೀರ  ಮೋರೆಯ ತಂತ್ರಿಗೊ ಪಚ್ಚೆ ಎಲೆ ಬಿಕ್ಕುಸ್ಸರ ನೋಡುದೇ ಒಂದು ಚೆಂದ!
ತಂತ್ರ ತೂಗುದರ ನೋಡಿಂಡು ನೋಡಿಂಡು, ಈ ಪಟದ ತೋಂಪಟ-ತೋಂಪಟ ಪೆಟ್ಟು ನಮ್ಮ ಮನಸ್ಸಿಂಗೆ ಮುದ.  ಮುಂದೆ ಇದೇ ಪಟಹಲ್ಲಿ, ನಾದಸ್ವರದ ಒಟ್ಟಿಂಗೆ ಒಂದು ಸುತ್ತು ಬಲಿಯೂ ಇರ್ತು ಮತ್ತೆ!
ತೋಂಪಟ ಬಾರ್ಸೆಂಡು ಹೋಪಗ ಉತ್ಸವಮೂರ್ತಿಯ ಹಿಡ್ಕೊಂಡು ಹೋವುತ್ತವಲ್ಲದೋ – ಕುಂಞಿಬಾಬೆಗಳ ಅದೇ ನಮುನೆಲಿ ಕರಕ್ಕೊಂಡು ಹೋವುತ್ತರೆ “ತೋಂಪಟ ಚಾಮಿ” – ಹೇಳ್ತವು, ಮಕ್ಕೊ ಆಗಿದ್ದವಕ್ಕೆ / ಮಕ್ಕೊ ಆದವಕ್ಕೆ ನೆಂಪಿಕ್ಕು! 😉
ಅದಿರಳಿ.

~

ಕರ್ಮಪ್ರಧಾನ ದೇವತಾರಾಧನೆಲಿ ಎರಡು ವಿಧ. ಮಂತ್ರಪೂರ್ವಕ, ತಂತ್ರಪೂರ್ವಕ ಹೇದು.
ಮಂತ್ರಪೂರ್ವಕ ಹೇದರೆ ಗೆಣಮೆಣಸಿನ ಕಷಾಯ ಕುಡುದ ಬಟ್ಟಮಾವ° ಉಚ್ಚೈರ್ಘೋಷಾಯಾಕ್ರಂದಯತೇ ಹೇದು ಜೋರು ಸ್ವರಲ್ಲಿ ಮಂತ್ರೋಚ್ಛಾರಣೆ ಮಾಡಿ, ಮಂತ್ರಮುಖೇನ ದೇವರ ಆವಾಹನೆ-ಪೂಜೆ-ಉಪಚಾರ-ಪ್ರಾರ್ಥನೆಗಳ ಮಾಡಿ, ಮಂತ್ರಪೂರ್ವಕವೇ ನೈವೇದ್ಯ ಮಾಡಿ ಮಂಗಳಾರತಿ ಕೊಟ್ಟು ದೇವರ ಖುಷಿಪಡುಸುದು. ಪ್ರತಿಯೊಂದು ಕಾರ್ಯಕ್ಕೂ ಮಂತ್ರ ಇದ್ದು. ಹಾಂಗೆ ಮಾಡು, ಹೀಂಗೆ ಮಾಡು, ಹಾಂಗೆ ಮಾಡ್ತೆ, ಇಂಥಾದ್ದರ ಮಾಡ್ತೆ, ಎಲ್ಲವುದೇ ಪ್ರಯೋಗಲ್ಲಿ ಹೇಳಿದ್ದು. ತದುಪರಿ ಶಂಖಂ ನಿಧಾಯ, ಅಥ ಉತ್ಥಾಯ, ದ್ವಿರಾಚಮ್ಯಾ – ಹೇದು ಒಂದೊಂದರಿ ಬಟ್ಟಮಾವ° ಮಾಡ್ತ ಕಾರ್ಯಂಗಳನ್ನೂ ಹೇಳಿಗೊಂಬದಿದ್ದು. ಪ್ರತಿಯೊಂದು ಕ್ರಮವನ್ನೂ ಹೀಂಗೇ ಮಾಡೇಕು ಹೇದು ಋಷಿಮುನಿಗೊ ತೋರ್ಸಿಕೊಟ್ಟಿದವು.

ಆದರೆ, ತಂತ್ರಪೂರ್ವಕ ಹೇದರೆ ಎಂತ್ಸು? ಬಟ್ಟಮಾವ° ಮಾಡ್ತ ಅದೇ ದೇವತಾರಾಧನೆಯ – ಮಂತ್ರಘೋಷ ಇಲ್ಲದ್ದೇ, ಕೇವಲ ತಂತ್ರದ ಸಹಾಯಲ್ಲಿ ಮಾಡ್ತದು. ಪ್ರಾಣಾಯ ಸ್ವಾಹಾ-ಅ, ಅಪಾನಾಯ ಸ್ವಾಹಾ-ಅ – ಹೇದು ಬಾಯಿಲಿ ಹೇಳುಲಿಲ್ಲೆ, ಬಾಳೆಣ್ಣಿನ ಚಾಮಿಯ ಬಾಯಿಗೆ ದೊಡ್ಡಬಾಯಿ ದೊಡ್ಡಬಾಯಿ- ಹಾಂ ತಿನ್ನುಸಿದ ಹಾಂಗೆ ಮಾಡಿಕೊಡ್ತದು ತಂತ್ರಿಗಳ ಕ್ರಮ. ಆವಾಹಯಾಮಿ – ಹೇಳುಲಿಲ್ಲೆ, ಎರಡೂ ಕೈಲಿ ಕೂಡಿ ಕೂರ್ಸಿದ ಹಾಂಗೆ ಮಾಡುದು. ಅದು ಇದು ಹೇಳಿ ಅಲ್ಲ, ಎಲ್ಲವುದೇ ಹಾಂಗೇ – ತಂತ್ರಲ್ಲೇ. ತಂತ್ರಸಮುಚ್ಚಯ ಹೇಳ್ತ ಬೆಲಿಯ ಕಿತಾಬಿಲಿ ಈ ಬಗ್ಗೆ ಬರದ್ದವಾಡ ಮದಲಿಂಗೆ, ದೊಡ್ಡಜ್ಜಂಗೆ ನೀಲೇಶ್ವರ ತಂತ್ರಿಗೊ ತೋರ್ಸಿತ್ತಿದ್ದವಡ ಆ ತಾಳೆಗರಿ ಪುಸ್ತಕವ. ಅದಿರಳಿ.

ಮಂತ್ರವ ಹೇಳುದು ಆದರೆ, ತಂತ್ರವ ತೂಗುದು – ಹೇದು ನಮ್ಮ ಶಬ್ದಬಳಕೆ.

~
ದೇವಸ್ಥಾನದ ಪೂಜೆಭಟ್ರು ನಿತ್ಯಪೂಜೆಯ ಮಂತ್ರಮುಖೇನವೇ ಮಾಡ್ತರೂ ಆಯನ ಜಾತ್ರೆಗೊಕ್ಕೆ ತಂತ್ರಿಗಳ ದಿನಿಗೆಳುಸ್ಸು ಕ್ರಮ. ನಿತ್ಯವೂ ಮೂರೊತ್ತು ಮಂತ್ರಪೂರ್ವಕ ಪೂಜೆ ತೆಕ್ಕೊಂಡ ದೇವರಿಂಗೆ, ಆ ದಿನ ತಂತ್ರರೂಪಲ್ಲಿ.
ಪ್ರತಿಷ್ಠಾ ಕಲಶ ಇದ್ದರೆ ಅದರ ಅಭಿಷೇಕ ಮಾಡಿ ದೇವರ ತಲಗೆ ನೀರೆರದು ಒಪ್ಪ ಮಾಡಿ, ಇರುಳು ದರ್ಶನಬಲಿ ಮಾಡ್ಸಿ ಅಂಗಣಪ್ರಸಾದ ಆಗಿ ಪುನಾ ದೇವರೊಳ ಮಾಡುಸುವನ್ನಾರ ತಂತ್ರಲ್ಲೇ ಮಾಡುಗು ತಂತ್ರಿಗೊ. ಇದರ್ಲಿಯೂ, ಅತಿ ಮುಖ್ಯವಾದ್ಸು ದರ್ಶನಬಲಿ. ಒರಿಶ ಇಡೀ ಕಲ್ಲಿನ ಮೂರ್ತಿಗೆ ಪೂಜೆ ಆದರೂ – ಜಾತ್ರೆದಿನ ಪೂಜೆ ಇಪ್ಪದು ಇನ್ನೊಂದು ಮೂರ್ತಿಗೆ. ಅದೇ – ಉತ್ಸವ ಮೂರ್ತಿ – ಹೇದು. ಗೌಜಿಗಪ್ಪಗ ಆರಾರು ಬಂದು ಮೋರೆತೋರ್ಸಿಕ್ಕಿ ಹೋದರೆ “ಉತ್ಸವಮೂರ್ತಿಯ ಹಾಂಗೆ”– ಹೇದು ರಂಗಮಾವ° ಒಂದೊಂದರಿ ಉದಾಹರಣೆ ಹೇಳುಗು. ಅದಿರಳಿ.
ಅಂತೂ, ಉತ್ಸವಮೂರ್ತಿಯ ಚೆಂದದ ಅಟ್ಟೆಲಿ ಕೂರ್ಸಿ, ಸುತ್ತವೂ ನಂಬೀಶ ಕಟ್ಟಿದ ಹೂಗಿನ ಮಾಲೆಲಿ ಅಲಂಕಾರ ಮಾಡಿದ – ತಲೆಲಿ ಮಡಿಕ್ಕೊಂಡು ಇಡೀ ಅಂಗಣಲ್ಲಿ ಪ್ರದಕ್ಷಿಣಾಕಾರವಾಗಿ ಬಲಿಬಪ್ಪದು.
ಬಲಿಬಪ್ಪದು – ಅಂತೇ ಅತ್ಲಾಗಿತ್ಲಾಗಿ ಹೋದರೆ ಪಾತಿಅತ್ತೆ ಪರಂಚುತ್ತವಲ್ಲದೋ – ಅಂತೇ ಬಲಿ ಬರೆಡ – ಹೇದು, ಅದು ಬೇರೆ ಆತೋ. ಸಾಲಂಕೃತ ಉತ್ಸವಮೂರ್ತಿ ಅಂಗಣಕ್ಕೆ ಇಳಿಯೇಕಾರೇ  ತಂತ್ರಿಗೊ ಇರೇಕು. ಗರ್ಭಗುಡಿಯ ಒಳಾಂದ ಕೆಳ ಇಳುದು ಇಡೀ ಅಂಗಣಲ್ಲಿ ಬಲಿಬಪ್ಪಲಿದ್ದು. ಅಂಗಣಲ್ಲಿ ಅಲ್ಲಲ್ಲಿ ಕಾಂಬ ಕರಿಕಲ್ಲುದೇ ಆ ದಿನ ಪಳಪಳ ಹೇಳ್ತು, ಮದಲೆ ತೊಳದು ಮನಾರ ಮಾಡಿ ಮಡಗುತ್ತವಿದಾ.  ಏಕೇದರೆ, ಈಗ ಬೇಕಾವುತ್ತು ಅದು. ಬಲಿಮೂರ್ತಿ ಬಲಿ ಬಪ್ಪಗ ದೇವಗಣಂಗೊಕ್ಕೆಲ್ಲ ಬಲಿಕೊಡ್ಳಿದ್ದು. ನೋಡಿಪ್ಪಿ ನಿಂಗೊ ಇದರ – ಗಿಂಡಿಲಿ ನೀರು ಹಿಡ್ಕೊಂಡ ತಂತ್ರಿಗೊ, ಒಟ್ಟಿಂಗಿಪ್ಪೋನು ಹಿಡುದ ಎಂಜಿರದ ಹೆಡಗೆಂದ ಪತ್ರೆಸೊಪ್ಪಿನ ತೆಗದು ತೆಗದು ತೆಗದು – ಆ ಬಲಿಕಲ್ಲಿನ ತಲಗೆ ತೋಕುತ್ತದು – ನೋಡಿಪ್ಪಿ ನಿಂಗೊ.. ತಂತ್ರ ತೂಗಲೆ ತಂತ್ರಿಗಳೇ ಆಯೇಕಟ್ಟೆ.

~

ಜಾತ್ರೆಯ ದರ್ಶನಬಲಿ ಆರಂಭ ಅಪ್ಪದೇ ಪಟಹದ ಜೆನ ಬಡಿವಲೆ ಸುರುಮಾಡಿದ ಮತ್ತೆ. ಉತ್ಸವಮೂರ್ತಿಯ ಗುಂಡದೊಳಂದ ತಪ್ಪ ಮದಲೇ ತೋಂ..ಪಟಪಟ ತೋಂ..ತಟಪಟತಟಪಟ..ತೋಂ – ಪಟಹ ಮಾತಾಡ್ಳೆ ಸುರುಮಾಡ್ತು. ಅದುದೇ ಹಾಂಗೇ, ಅದಕ್ಕೇ ಒಂದು ತಾಳ ಇದ್ದು, ಒಂದು ಗತಿ ಇದ್ದು, ಡೋಲಿನ ಸಾಥಿ ಇದ್ದು. ಮೂರ್ತದ ಹೊತ್ತಿಂಗೆ ಪಟಹ ಸುರು ಆದರೆ, ತಂತ್ರಿಗೊ ಒಳಾಂದ ಉತ್ಸವಮೂರ್ತಿಯ ಹೆರ ತತ್ತವು.
ಗುಂಡದ ಒಳಾಂದ ಅಲಂಕೃತ ಉತ್ಸವ ಮೂರ್ತಿಯ ಗರ್ಭಗುಡಿ ಬಾಗಿಲಿಂಗೆ ತಂದು, ದೇವರ ಹೊರ್ತೋನ ಕೈಗೆ ಮಡಗಿ ಅಪ್ಪಗ, ಪಟಹದ ಜೆನರ ತಾಳ ಏರುಲೆ ಸುರು ಆವುತ್ತು. ವಿಳಂಬಿತಲ್ಲಿ ಸುರು ಆಗಿ ಧ್ರುತಲ್ಲಿ ಮುಂದುವರಿತ್ತು. ಪ್ರತಿ ಹಂತಲ್ಲಿಯೂ ತಂತ್ರಿಗೊ ತಂತ್ರ ತೂಗುವಾಗ, ಅದರೊಟ್ಟಿಂಗೆ, ಒಟ್ಟೊಟ್ಟಿಂಗೇ ಆ ಪಟಹದ ತಾಳವೂ ಬೀಳ್ತು.

ದೇವರ ಹಿಡ್ಕೊಂಡು ನಿಂದೋರ ಹಿಂದೆ ಕೊಡೆ, ಅದಾಗಿ ಊರ ಮುಗ್ತೇಸರ, ಊರ ಹೆರಿಯೋರು, ಊರೋರು. ಆದರೆ ದೇವರ ಹಿಡ್ಕೊಂಡೋರ ಎದುರಾಣ ಹೊಡೆಲಿ ಆರೆಲ್ಲ ಹೇದರೆ, ತಂತ್ರ ತೂಗುವ ತಂತ್ರಿಗೊ, ಅವರ ಸಹಾಯಕ, ಅದಾಗಿ ಕೈದೀಪ ಹಿಡುದ ನಂಬೀಶಣ್ಣ, ಅದಾಗಿ ಡೋಲಿನ ಒಟ್ಟಿಂಗೆ ಪಟಹ. ಹೇದರೆ, ಆ ಸಂದರ್ಭಲ್ಲಿ ತಂತ್ರಿಗಳ ತಂತ್ರ ಎಷ್ಟು ಮುಖ್ಯವೋ, ಪಟಹದ ತಾಳವೂ ಅಷ್ಟೇ ಮುಖ್ಯ.

ತಂತ್ರಿಗೊ ಒಂದೊಂದೇ, ಆ ಗಣಕ್ಕೆ ಷೋಡಷೋಪಚಾರ ಮಾಡಿ, ಅವಕ್ಕೆ ನೈವೇದ್ಯವ ಕೊಟ್ಟು ಕ್ರಮಪ್ರಕಾರ ಪೂಜೆಯನ್ನೇ ಮಾಡ್ತವು ಆ ಸಂದರ್ಭಲ್ಲಿ. ಆದರೆ, ಆ ಗಣಂಗಳ ಅಲ್ಲಿಗೆ ಆವಾಹನೆ ಮಾಡುದು – ಪಟಹದ ವಾದನದ ಮೂಲಕ – ಹೇಳ್ತದು ನಮ್ಮ ಪ್ರತೀತಿ.

ಹಾಂಗಾಗಿ, ಪಟಹದ ತಾಳಕ್ಕೆ ಸರಿಯಾಗಿ ತಂತ್ರಿಗೊ ತಂತ್ರ ತೂಗೇಕು. ತಂತ್ರದ ವೇಗಕ್ಕೆ ಸರಿಯಾಗಿ ಪಟಹದ ತಾಳ ಬೀಳೇಕು.
ತಂತ್ರ ಬೇಗ ಅಪ್ಪಲಾಗ, ಗಣಂಗೊ ಬಂದಿರ್ತವಿಲ್ಲೆ. ಪಟಹ ಬೇಗ ಅಪ್ಪಲಾಗ, ಗಣಂಗೊಕ್ಕೆ ಸಿಕ್ಕಿರ್ತಿಲ್ಲೆ.
ಹಾಂಗಾಗಿ ಅದೆರಡೂ ಹೊಂದಿಕೆಲಿ ಇರೇಕು – ಹೇದು ನಮ್ಮ ಹೆರಿಯೋವು ಮಾಡಿ ಮಡಗಿದ್ದವು.

~

ಎಷ್ಟು ಚೆಂದ ಅಲ್ಲದೋ? ಜಾತ್ಯತೀತವಾದ ಕಲ್ಪನೆ.
ದೇವರಿಂಗೆ ಎಲ್ಲೋರುದೇ ಬೇಕು. ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ – ಹೇದು ಕಾಣ್ತ ನಮುನೆಲಿ, ಬೆಗರಿದ ಪಟಹದ ಮಾರಾಯ ತಾಳದ ಮೂಲಕ ಯೇವ ದೇವರ ಆಹ್ವಾನಿಸುತ್ತೋ, ಶುದ್ಧಲ್ಲಿಪ್ಪ ತಂತ್ರಿಗೊ ಅದೇ ದೇವರಿಂಗೆ ಪೂಜೆ ಮಾಡ್ತದು.
ಎರಡುದೇ ಒಂದೇ ತಾಳಲ್ಲಿರ್ತು. ಅದೇ ನಮ್ಮ ಸಮಾಜದ ಪ್ರಾರೂಪ. ಅದೇ ನಮ್ಮ ಸಮಾಜದ ಜಾತ್ಯತೀತತೆಯ ಲಕ್ಷಣಂಗೊ. ಜಾತಿ ವೆವಸ್ತೆ ಇದ್ದರೂ, ದೇವಕಾರ್ಯಲ್ಲಿ ಎಲ್ಲೋರನ್ನೂ ಏಕರೂಪತೆಲಿ ಕಾಂಬ ಹಿರಿಮೆ ನಮ್ಮ ಧರ್ಮಕ್ಕಿದ್ದು.

ಎಂತ ಹೇಳ್ತಿ?

~

ಒಂದೊಪ್ಪ: ದೈವಸೇವೆಯೇ ಕಾಯಕ ಆದರೆ, ಕಾಯಕವೇ ಕೈಲಾಸ.

ಸೂ: ಪಟಹ-ತಂತ್ರಿಗೊಕ್ಕೆ ಸಮ್ಮಂದ ಪಟ್ಟ ಕತೆ ಒಂದಿದ್ದು. ಬಪ್ಪವಾರ ಮಾತಾಡುವನೋ?

5 thoughts on “ತಂತ್ರ ತೂಗುವ ತಂತ್ರಿಗಳೂ, ತಾಳ ಬಡಿವ ಪಟಹವೂ.. !

  1. ತೋಂಪಟ ತೋಂಪಟ ಶಬ್ದ ಕೇಳಲೆ ಎಷ್ಟು ಚೆಂದ. ಆ ಲಯಬದ್ಧ ತಾಳ ಕೆಮಿಲಿ ಕೇಳಿದ ಹಾಂಗಾತು. ಮಧೂರು /ಪೆರಡಾಲ ಆಯನ ನೆಂಪುಮಾಡಿದ ಒಪ್ಪಣ್ಣಂಗೆ ಧನ್ಯವಾದ.

  2. ಮಂತ್ರ ಹೇಳೋದು – ತಂತ್ರ ತೂಗುದು ಲಾಯಿಕಾಯಿದು.
    ವಾರ ವಾರ ಒಪ್ಪಣ್ಣ ಬೈಲಿಂಗೆ ಬಂದು ಬರವದು ಮಂತ್ರ ಹೇದಾಂಗೆ, ಆ ಬರವಣಿಗೆ ಕ್ರಮ ತಂತ್ರ ತೂಗಿದ ಹಾಂಗೆ. ಶುಕ್ರವಾರದ ಶುದ್ದಿಲಿ ಎರಡೋ ಒಟ್ಟೊಟ್ಟಿಂಗೆ ಇರ್ತು ಅಲ್ಲದೋ..?

  3. ಲಾಯಕ ಆಯಿದು. ತಂತ್ರಿಗೋ ಕೈಲಿ ಗಿಂಡಿ ಹಿಡ್ಕೊಂಡು ಆಚೀಚೆ ಆಡಿಸುವ ಕಾರಣ ತಂತ್ರ ತೂಗುದು ಹೇಳುವ ಶಬ್ದ ಬಂದಿಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×